ಕನ್ನಡ ಅವ್ಯಯಗಳು – Kannada Avyayagalu

ನಾಮಪದ ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ, ಏಕರೂಪವಾಗಿರುವ ಶಬ್ದಗಳು ಅವ್ಯಯಗಳೆನಿಸುವುವು. (1) ಅವನು ಚೆನ್ನಾಗಿ ಓದಿದನು.(2) ಅವಳು ಚೆನ್ನಾಗಿ ಓದಿದಳು.(3) ಅವರು ಚೆನ್ನಾಗಿ ಓದಿದರು.(4) ಅದು ಚೆನ್ನಾಗಿ ಓದುತ್ತದೆ. ಮೇಲಿನ ವಾಕ್ಯಗಳಲ್ಲೆಲ್ಲಾ ಬಂದಿರುವ ‘ಚೆನ್ನಾಗಿ’ ಎಂಬ ಪದವನ್ನು ವಿಚಾರಿಸಿರಿ. ಅದುಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲೂ, ಏಕವಚನ, ಬಹುವಚನಗಳಲ್ಲೂ ಯಾವವ್ಯತ್ಯಾಸವನ್ನೂ ಹೊಂದದೆ ಒಂದೇ ರೀತಿಯಾಗಿದೆ. ‘ಚೆನ್ನಾಗಿ’ ಎಂಬುದರ ಮೇಲೆ ಯಾವವಿಧವಾದ ಪ್ರತ್ಯಯಗಳನ್ನೂ ಹಚ್ಚಲಾಗುವುದಿಲ್ಲ. ಇದು ನಾಮಪದ ಹಾಗು ಕ್ರಿಯಾಪದಗಳ ಹಾಗೆ ರೂಪದಲ್ಲಿ ಯಾವ ಭೇದವನ್ನೂ ಹೊಂದುವುದಿಲ್ಲ; ಇದ್ದ…