ದ್ವಿರುಕ್ತಿ ಮತ್ತು ಜೋಡುನುಡಿಗಳು – kannada Dvirukti Padagalu

ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದುಪದವನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆದ್ವಿರುಕ್ತಿ ಅನ್ನುವರು. ದ್ವಿರುಕ್ತಿ ಸಾಮಾನ್ಯವಾಗಿ ಉತ್ಸಾಹ, ಹೆಚ್ಚು (ಆಧಿಕ್ಯ) ಎಂಬರ್ಥದಲ್ಲಿ, ಪ್ರತಿಯೊಂದು(ವೀಪ್ಸಾ) ಎಂಬರ್ಥದಲ್ಲಿ, ಕೋಪ, ಸಂಭ್ರಮ, ಆಶ್ಚರ್ಯ, ಆಕ್ಷೇಪ, ಹರ್ಷ, ಒಪ್ಪಿಗೆ (ಸಮ್ಮತಿ), ಅವಸರ (ತ್ವರೆ), ಅನುಕ್ರಮ, ಆದರ, ಅನೇಕ ವಸ್ತುಗಳಲ್ಲಿ ಒಂದನ್ನೇ ಗುರುತಿಸಿ ಹೇಳುವಾಗ- ಹೀಗೆ ಅನೇಕ ಅರ್ಥಗಳಲ್ಲಿ ಬರುತ್ತದೆ ಎಂಬುದನ್ನು ಈ ಕೆಳಗಿನ ಉದಾಹರಣೆಗಳಿಂದ ತಿಳಿಯಬಹುದು. (ದ್ವಿಃ ಉಕ್ತಿ = ದ್ವಿರುಕ್ತಿ)ದ್ವಿರುಕ್ತಿ ಅದರೆ ಒಂದು ಶಬ್ದವನ್ನು ಎರಡು ಸಲ ಉಚ್ಚರಿಸುವುದೆಂದು ಅರ್ಥ….