ಕನ್ನಡ ಸಮಾಸಗಳು – Kannada Samasagalu

ಸಮಾಸ-ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವುದೇಸಮಾಸವೆನಿಸುವುದು.ಸಮಾಸದಲ್ಲಿ ಬರುವ ಮೊದಲನೆಯ ಪದವು ಪೂರ್ವಪದವೆಂದೂ, ಎರಡನೆಯಪದವು ಉತ್ತರಪದವೆಂದೂ ಕರೆಯಿಸಿಕೊಳ್ಳುವುದು. ಸಮಸ್ತ ಪದವನ್ನು ಬಿಡಿಸಿ ಬರೆಯುವುದಕ್ಕೆ ವಿಗ್ರಹವಾಕ್ಯವೆನ್ನುವರು. ಉದಾಹರಣೆಗೆ:- ಹೀಗೆ ನಾವು ಸಮಾಸ ಮಾಡುವುದಕ್ಕೂ ಕೆಲವು ನಿಬಂಧನೆಗಳಿವೆ. ನಾವಾಡುವ ಕನ್ನಡಭಾಷೆಯಲ್ಲಿ ‘ಅನ್ಯದೇಶ್ಯ’ ಶಬ್ದಗಳೆಷ್ಟೋ ಇವೆ.ಸಂಸ್ಕೃತ ಶಬ್ದಗಳು ನಮ್ಮ ಭಾಷೆಯಲ್ಲಿ ವಿಶೇಷವಾಗಿ ಸೇರಿಹೋಗಿವೆ. ಅರಿಸಮಾಸ ಸಂಸ್ಕೃತ-ಸಂಸ್ಕೃತ ಶಬ್ದಗಳೇ ಸೇರಿ ಸಮಾಸವಾಗಬಹುದು ಅಥವಾ ಕನ್ನಡ-ಕನ್ನಡಶಬ್ದಗಳು ಸೇರಿ ಸಮಾಸವಾಗಬಹುದು. ತದ್ಭವ-ತದ್ಭವ ಶಬ್ದಗಳು ಸೇರಿ ಸಮಾಸವಾಗಬಹುದು. ಅಥವಾ…