Skip to content
KannadaGrammar.in
  • ಪ್ರಬಂಧ (Essay)
  • Kannada Varnamale
  • Kannada Words
KannadaGrammar.in
ಕನ್ನಡ ವ್ಯಾಕರಣ

ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.

ನಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ಇತರರಿಗೆ ವ್ಯಕ್ತಪಡಿಸುವುದಕ್ಕೆ ಮತ್ತು ಅವರ ಅಭಿಪ್ರಾಯಗಳನ್ನು ಮತ್ತು ಭಾವನೆಗಳನ್ನು ನಾವು ತಿಳಿಯುವ ಮಾಧ್ಯಮಕ್ಕೆ ಭಾಷೆ ಎಂದು ಹೆಸರು.

ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು ಹಾಗೂ ಸಾರ್ವತ್ರೀಕರಣಗೊಳಿಸಲು ಇರುವ ಮಾರ್ಗದರ್ಶಿಯನ್ನು ವ್ಯಾಕರಣ ಎನ್ನುತ್ತಾರೆ.ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ.ಹಲವು ಭಾಷೆಗಳಲ್ಲಿ ನಾವು ಮಾತಾನಾಡುವ ಕನ್ನಡವೂ ಒಂದು ಪ್ರಮುಖ ಭಾಷೆಯಾಗಿದ್ದು ತನ್ನದೇ ಲಿಪಿಯನ್ನು ಹೊಂದಿರುವ ವಿಶೇಷ ಭಾಷೆ ಇದಾಗಿದೆ.

ಕನ್ನಡ ಭಾಷೆಯಲ್ಲಿ ಎರಡು ರೂಪಗಳಿವೆ.ಅವುಗಳೆಂದರೆ ಶ್ರಾವಣ ಮತ್ತು ಚಾಕ್ಷುಷ. ಶ್ರಾವಣ ರೂಪ ಎಂದರೆ ಧ್ವನಿಯ ಮೂಲಕ ಕಿವಿಗೆ ಕೇಳಿಸುವುದು. ಚಾಕ್ಷುಷ ರೂಪ ಎಂದರೆ ಬರಹದ ಮೂಲಕ ಕಣ್ಣಿಗೆ ಕಾಣಿಸುವುದು.



ಕನ್ನಡ ವ್ಯಾಕರಣ
ಕನ್ನಡ ವರ್ಣಮಾಲೆ
ಸಂಧಿಗಳು
ನಾಮಪದ ಪ್ರಕರಣ
ಲಿಂಗಗಳು
ವಚನಗಳು
ವಿಭಕ್ತಿಪ್ರತ್ಯಯಗಳು
ವಿಭಕ್ತಿಪಲ್ಲಟ
ಕಾಲಗಳು :
ಕ್ರಿಯಾಪದ ಪ್ರಕರಣ
ಸಮಾಸ ಪ್ರಕರಣ
ಅವ್ಯಯ ಪ್ರಕರಣ
ವಾಕ್ಯಗಳು
ಲೇಖನ ಚಿಹ್ನೆಗಳು
ಅಲಂಕಾರಗಳು
ಛಂದಸ್ಸು
ಕೃದಂತ, ತದ್ಧಿತಾಂತ ಪ್ರಕರಣ
ದೇಶ್ಯ-ಅನ್ಯದೇಶ್ಯ-ತತ್ಸಮ-ತದ್ಭವ ಪ್ರಕರಣ




ಕನ್ನಡ ಪದಗಳು
ವಿರುದ್ಧಾರ್ಥಕ ಪದಗಳು
ಹಳೆಗನ್ನಡ ಪದಗಳು (ಅ to ಳ )
ಕನ್ನಡ ಗುಣಿತಾಕ್ಷರದ ಪದಗಳು
ಕನ್ನಡ (ಅ to ಳ ) ಪದಗಳು
ಕನ್ನಡ (ಅ to  ಳ ) ಒತ್ತಕ್ಷರದ ಪದಗಳು




ಕನ್ನಡ
ಕನ್ನಡ ಪ್ರಬಂಧಗಳು
ಕನ್ನಡ ಗಾದೆಗಳು
ಕನ್ನಡ ಗುಣಿತಾಕ್ಷರಗಳು




ಕನ್ನಡ ವ್ಯಾಕರಣದ ಪ್ರಯೋಜನ:

ಭಾಷೆಯ ಸ್ವರೂಪದ ಸಾಮಾನ್ಯ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ನಮಗಿರುವ ಪ್ರಮುಖ ಸಾಧನವೆಂದರೆ ವ್ಯಾಕರಣವೇ ಆಗಿದೆ. ಶಬ್ದಗಳ, ಶಬ್ದಗಳಿಂದ ರೂಪಿತವಾಗಿರುವ ವಾಕ್ಯಗಳ ರಚನೆ, ಸ್ಥಾನ ಮತ್ತು ಪ್ರಯೋಜನಗಳನ್ನು ಕುರಿತು ಇಲ್ಲಿ ವಿಶದವೂ ವ್ಯಾಪಕವೂ ಆದ ವಿವರಣೆಯಿರುತ್ತದೆ.

ವ್ಯಾಕರಣವನ್ನು, ತಪ್ಪಿಲ್ಲದೆ ಮಾತಾಡುವುದಕ್ಕೂ ಬರೆಯುವುದಕ್ಕೂ ಅನುಸರಿಸಬೇಕಾದ ನಿಯಮಗಳನ್ನು ವ್ಯವಸ್ಥಿತವಾಗಿ ನಿರೂಪಿಸಿರುವ ಕೈಪಿಡಿಯೆಂದು ಬೇಕಾದರೆ ತಿಳಿಯಬಹುದು ; ಅಲ್ಲದೆ ಭಾಷೆಯ ಸ್ವರೂಪವನ್ನು ತಿಳಿಯಲೂ ವಿವರಿಸಲೂ ಬೇಕಾಗಿರುವ ಪರಿಭಾಷೆಯನ್ನು ಇದರಲ್ಲಿ ಒಂದು ಗೊತ್ತಾದ ಕ್ರಮದಲ್ಲಿ ನಿರೂಪಿಸಿರುತ್ತದೆ.

ಈ ಪರಿಭಾಷೆಯನ್ನು ಉಪಯೋಗಿಸಿಕೊಂಡು ನಾವು ನಮ್ಮ ಮಾತು ಬರೆವಣಿಗೆಗಳ ಉತ್ಕೃಷ್ಟವಾದ ಮಾದರಿಗಳನ್ನೂ ಕುಂದು ಕೊರತೆಗಳನ್ನೂ ಗುರುತಿಸಬಹುದಾಗಿದೆ. ಸಮೂಹ, ಸ್ಥಳ ಮೊದಲಾದುವು ಕಾರಣವಾಗಿ ಪ್ರಚಲಿತ ಭಾಷೆಯಲ್ಲಿ ನಾಂಶಗಳನ್ನೂ ಭಿನ್ನತೆಗಳನ್ನೂ ಗಮನಿಸಿ, ನಮ್ಮ ಭಾಷೆಯ ವ್ಯಾಪ್ತಿ ಸತ್ತ್ವ ಸಾಮರ್ಥ್ಯಗಳನ್ನೂ ಪರಿಚಯ ಮಾಡಿಕೊಳ್ಳುವುದು ಸಹ ಸಾಧ್ಯವಿದೆ.

ಕನ್ನಡ ವ್ಯಾಕರಣ ಎಂದರೇನು?

“ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಹೆಸರು”

ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗ ಮಾಡಬೇಕಾದರೆ ಆ ಭಾಷೆಯ ವ್ಯಾಕರಣ ಪರಿಚಯ ಅತ್ಯಾವಶ್ಯಕ. ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು. ಭಾಷೆಯ ಅಧ್ಯಯನದ ಆರಂಭದಲ್ಲಿ ಪ್ರಯೋಗಗಳ ಮೂಲಕ ವ್ಯಾಕರಣದ ಅರಿವನ್ನುಂಟುಮಾಡಿದರೂ ಮುಂದೆ ಸಕ್ರಮವಾಗಿ ವ್ಯಾಕರಣ ಶಾಸ್ತ್ರದ ಪರಿಚವನ್ನು ಮಾಡಿಸುವ ಅವಶ್ಯಕತೆಯಿದೆ.

ಈ ದೃಷ್ಟಿಯಿಂದ ನಮ್ಮ Website: Kannadagrammar.in ವ್ಯಾಕರಣ ಶಾಸ್ತ್ರದ ಮುಖ್ಯ ವಿಷಯಗಳನ್ನು ಅಳವಡಿಸಲಾಗಿದೆ. ಈ ನಿಟ್ಟಿನಲ್ಲಿ ಕನ್ನಡ ವ್ಯಾಕರಣವು ಹೊಂದಿರುವ ಹಲವು ಅಂಶಗಳನ್ನು ಇಲ್ಲಿ ಸವಿವರವಾಗಿ ನೋಡಬಹುದು.

ಕನ್ನಡ ಬೆಳೆಸಿ, ಕನ್ನಡ ಉಳಿಸಿ. 
ಕನ್ನಡಾಂಬೆಯ ಚರಣಗಳಿಗೆ ಸಾಷ್ಟಾಂಗ ಸಮನಗಳು

WWW.KANNADAGRAMMAR.IN




  • Contact Us
  • About Us
  • Disclaimer
  • privacy policy

© 2025 KannadaGrammar.in

Scroll to top
  • ಪ್ರಬಂಧ (Essay)
  • Kannada Varnamale
  • Kannada Words
Search