ಕನ್ನಡ ವರ್ಣಮಾಲೆ ( Kannada Alphabets )

ಕನ್ನಡ ವರ್ಣಮಾಲೆ ( Kannada Alphabets ) – Kannada Varnamale

Hello Friends ಪ್ರಿಯ ಓದುಗರೇ, Kannadagrammar.in ಕನ್ನಡ ವ್ಯಾಕರಣ website ಗೆ ನಿಮ್ಮೆಲ್ಲರಿಗೂ ಸುಸ್ವಾಗತ. ಈ post ನಲ್ಲಿ ನಾವು ಕನ್ನಡ ವರ್ಣಮಾಲೆ ಅಥವಾ Kannada Varnamale (ಕನ್ನಡ ವರ್ಣಮಾಲೆ ) ಸOಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕನ್ನಡ ವರ್ಣಮಾಲೆಯಲ್ಲಿ ನಿಮಗೆ ಬೇಕಾದ ವಿಷಯಗಳನ್ನು ಪರಿವಿಡಿಯ ಮೂಲಕ ನೀವು direct ಆಗಿ ಪಡೆಯಬಹುದು.

ಕನ್ನಡ ವರ್ಣಮಾಲೆ

ಭಾಷೆಗೆ ಸಂಸ್ಕಾರವನ್ನುಂಟು ಮಾಡುವ ನಿಯಮಾವಳಿಗಳಿಗೆ ವ್ಯಾಕರಣ ಎಂದು ಕರೆಯುವರು ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗಿಸಬೇಕಾದರೆ ಆ ಭಾಷೆಯ ವ್ಯಾಕರಣದ ಪರಿಚಯ ಅತ್ಯಾವಶ್ಯಕ.ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು.

What is Kannada ಕನ್ನಡ ವರ್ಣಮಾಲೆ (  Kannada Alphabets ) or  Kannada Varnamale?

Kannada varnamale is the list of Kannada alphabets or letters or words.  

ಕನ್ನಡ ಭಾಷೆಯಲ್ಲಿರುವ ಮೂಲಾಕ್ಷರಗಳನ್ನು ಕನ್ನಡ ವರ್ಣಮಾಲೆ ಎಂದು ಕರೆಯುತ್ತಾರೆ.

How many letters are there in Kannada?

In ಕನ್ನಡ ವರ್ಣಮಾಲೆ ( Kannada Alphabets ) Kannada Varnamale Consists of 49 letters or words. 

 • ಸ್ವರಗಳು – 13
 • ಯೋಗವಾಹಗಳು – 2
 • ವ್ಯಂಜನಗಳು – 34

The Kannada alphabet has 49 or 50 or 51 letters, depending on who you ask, and which rules you follow. All these counts are correct, because none of the omitted letters causes any loss of expression.


Kannada Varnamale (ಕನ್ನಡ ವರ್ಣಮಾಲೆ) :

ಕನ್ನಡ ವರ್ಣಮಾಲೆಯಲ್ಲಿ ಅ ದಿಂದ ಳ ತನಕ ಒಟ್ಟು ೪೯ (49 ) ಅಕ್ಷರಗಳಿವೆ.

Kannada ಅ to ಳ ಅಕ್ಷರಗಳು :

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ

ಕ ಖ ಗ ಘ ಙ

ಚ ಛ ಜ ಝ ಞ

ಟ ಠ ಡ ಢ ಣ

ತ ಥ ದ ಧ ನ

ಪ ಫ ಬ ಭ ಮ

ಯ ರ ಲ ವ ಶ ಷ ಸ ಹ ಳ

ಸ್ವರಗಳು (Vowels) :

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬರುವ ವರ್ಣಮಾಲೆಯ ಮೊದಲ ಹದಿಮೂರು ಅಕ್ಷರಗಳನ್ನು ಸ್ವರ ಎಂದು ಕರೆಯುತ್ತಾರೆ.

ಅವು ಯಾವುವೆಂದರೆ,

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಆಃ

ಸ್ವರಗಳಲ್ಲಿ ಎರಡು ವಿಧ :

 1. ಹೃಸ್ವ ಸ್ವರಗಳು – 6
 2. ದೀರ್ಘ ಸ್ವರಗಳು. – 7
 3. ಪ್ಲುತ ಸ್ವರ
ಹೃಸ್ವ ಸ್ವರ :

ಹೃಸ್ವ ಸ್ವರಗಳು ಆರು. 6

ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ  ಅಕ್ಷರಗಳನ್ನು ಹೃಸ್ವ ಸ್ವರಗಳೆಂದು ಕರೆಯುವರು.

ಅ,ಇ ಉ,ಋ,ಎ,ಒ

ದೀರ್ಘ ಸ್ವರ :

ದೀರ್ಘ ಸ್ವರಗಳು 7 

ಎರಡು ಮಾತ್ರೆಯ ಕಾಲದಲ್ಲಿ ಉಚ್ಛರಿಸಲ್ಪಡುವ ವರ್ಣಮಾಲೆಯ ಅಕ್ಷರಗಳನ್ನು  ದೀರ್ಘ ಸ್ವರಗಳೆಂದು ಕರೆಯುವರು.

ಆ,ಈ,ಊ,ಏ.ಐ.ಓ,ಔ

ಪ್ಲುತ ಸ್ವರ:

ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲುತ ಸ್ವರ ಎನ್ನಲಾಗಿದೆ.

ಉದಾ: ಅಕ್ಕಾ, ಅಮ್ಮಾ

ಕ್+ಅ=ಕ
ಮ್+ಅ=ಮ
ಯ್+ಅ=ಯ

ಸಂಧ್ಯಾಕ್ಷರಗಳು:

ಕೇಶಿರಾಜ ಕನ್ನಡದಲ್ಲಿ ನಾಲ್ಕು ಸಂಧ್ಯಾಕ್ಷರಗಳಿವೆ ಎಂದು ಹೇಳಿದ್ದಾನೆ .

ಸಂಧ್ಯಾಕ್ಷರಗಳು : ಏ, ಐ, ಓ, ಔ

ಅರ್ಥ : ಅಗೋಚರವಾಗಿ ಗೂಢವಾಗಿ ಸಂಧಿಯಾಗಿ ನಿರ್ಮಾಣಗೊಳ್ಳುವ ಅಕ್ಷರಗಳೇ ‘ ಸಂಧ್ಯಾಕ್ಷರಗಳು ‘ ಎಂದು ಕರೆಯಲಾಗಿದೆ .

ಉದಾ:

ಸಂಧಿಸಂಧ್ಯಾಕ್ಷರಗಳುಪದಗಳು
ಅ + ಇಏ – ನಿಜ + ಇಷ್ಟನಿಜೇಷ್ಠ
ಅ + ಏಐ – ಸಮಸ್ತ + ಏಕಸಮಸ್ತ್ಯೆಕ
ಅ + ಉಓ – ವಿಧಿತ + ಉಭಯವಿಧಿತೋಭಯ
ಅ + ಒಔ – ವಿಧಿತ + ಓಕಾರವಿಧಿತೌಕಾರ

ಆಧುನಿಕ ಭಾಷಾ ಶಾಸ್ತ್ರಜ್ಞರು ‘ ಐ ‘ ಮತ್ತು ‘ ಔ ‘ ಎರಡು ಸಂಧ್ಯಾಕ್ಷರಗಳಿಲ್ಲದ ಕನ್ನಡ ವ್ಯವಹಾರ ನಡೆಯುತ್ತದೆ ಎಂಬುದು ಅವರ ವಾದವಾಗಿದೆ .

ಉದಾ :

 • ಐ = ಅಯ್ – ಮೈ = ಮೆಯ್
 • ಔ = ಅವ್ – ಔಷಧ = ಅವುಷದ 

ಈ ರೀತಿ ಉದಾಹರಣೆ ಕೊಟ್ಟಿದ್ದಾರೆ . ಆದರೆ ಇದು ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಅಷ್ಟು ಸಮಂಜಸವಲ್ಲವೆಂದು ತೋರುತ್ತದೆ .


ಯೋಗವಾಹಗಳು :

ಬೇರೆ ಅಕ್ಷರಗಳ ಸಹಯೋಗದೊಂದಿಗೆ ಉಚ್ಛರಿಸಲ್ಪಡುವ ಅಕ್ಷರ ಅಥವಾ ವರ್ಣಗಳನ್ನು ಯೋಗವಾಹಗಳು ಎಂದು ಕರೆಯುತ್ತಾರೆ.

 •  ಅಂ(ಅನುಸ್ವಾರ)
 •  ಅಃ(ವಿಸರ್ಗ)

ಅನುಸ್ವಾರ:

ಯಾವುದೇ ಒಂದು ಅಕ್ಷರ ತನ್ನ ಜೊತೆ ಒಂದು ಬಿಂದುವಿನನ್ನು ಹೊಂದಿದ್ದರೇ ಅದನ್ನು ಅನುಸ್ವಾರ ಎಂದು ಕರೆಯುವರು. 

ಉದಾಹರಣೆಗೆ : ಅಂಗ, ಒಂಟೆ, ಅಂಬ, ಅಂದ, ತಂಗಿ ಹಾಗೂ ಇತ್ಯಾದಿ.

ವಿಸರ್ಗ:

ಒಂದು ಅಕ್ಷರವು ಒಂದರ ಮೇಲೊಂದು ಎರಡು ಬಿಂದುಗಳನ್ನು ಹೊಂದಿದ್ದರೇ ಅದನ್ನು ವಿಸರ್ಗ ಎನ್ನುವರು. 

ಉದಾಹರಣೆ: ಬಹುಶಃ, ದುಃಖ, ಅಂತಃಕರಣ, ಇತ್ಯಾದಿ.


ವ್ಯಂಜನಗಳು :

ಬೇರೊಂದು ಅಕ್ಷರದ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಛರಿಸಲು ಬಾರದ ವರ್ಣಮಾಲೆಯ(೩೪) 34 ಮುವತ್ತು ನಾಲ್ಕು ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುವರು. 

ಕ ಖ ಗ ಘ ಙ
ಚ ಛ ಜ ಝ ಞ
ಟ ಠ ಡ ಢ ಣ
ತ ಥ ದ ಧ ನ
ಪ ಫ ಬ ಭ ಮ
ಯ ರ ಲ ವ ಶ ಷ ಸ ಹ ಳ

ವ್ಯಂಜನಗಳಲ್ಲಿ ಎರಡು ವಿಧ :

 1. ವರ್ಗೀಯ ವ್ಯಂಜನಗಳು – 25
 2. ಅವರ್ಗೀಯ ವ್ಯಂಜನಗಳು – 9

ವರ್ಗೀಯ ವ್ಯಂಜನಗಳು (Grouped Consonants) :

ಒಂದು ವರ್ಗ ಅಥವಾ ಗುಂಪಿಗೆ ಸೇರಿಸಬಹುದಾದ ವರ್ಣಮಾಲೆಯ ಇಪ್ಪತ್ತೈದು(೨೫) 25 ಅಕ್ಷರಗಳನ್ನು ವರ್ಗೀಯ ವ್ಯಂಜನ ಎಂದು ಕರೆಯುವರು. ಅವು ಯಾವುವೆಂದರೆ,

ಕ-ವರ್ಗ = ಕ, ಖ, ಗ, ಘ, ಙ.
ಚ-ವರ್ಗ = ಚ, ಛ, ಜ, ಝ, ಞ.
ಟ-ವರ್ಗ = ಟ, ಠ, ಡ, ಢ, ಣ.
ತ-ವರ್ಗ = ತ, ಥ, ದ, ಧ, ನ.
ಪ-ವರ್ಗ= ಪ, ಫ, ಬ, ಭ, ಮ.

ವರ್ಗೀಯ ವ್ಯಂಜನದ ವಿಧಗಳು :
 • ಅಲ್ಪ ಪ್ರಾಣಗಳು – 10
 •  ಮಹಾಪ್ರಾಣಗಳು – 10
 •  ಅನುನಾಸಿಕಗಳು – 5
ಅಲ್ಪ ಪ್ರಾಣಗಳು:

ಕಡಿಮೆ ಉಸಿರಿನಿಂದ ಉಚ್ಛರಿಸಲ್ಪಡುವ ವ್ಯಂಜನಗಳಿಗೆ ಅಲ್ಪ ಪ್ರಾಣಗಳು ಎಂದು ಕರೆಯುತ್ತಾರೆ.

ಇವು ಒಟ್ಟು ಸಂಖ್ಯೆಯಲ್ಲಿ ೧೦ (10 ) ಇವೆ.

ಕ,ಚ,ಟ,ತ,ಪ
ಗ,ಜ,ಡ,ದ,ಬ

ಮಹಾಪ್ರಾಣಗಳು:

ಹೆಚ್ಚು ಉಸಿರಿನಿಂದ ಉಚ್ಛರಿಸಲ್ಪಡುವ ವರ್ಗೀಯ ವ್ಯಂಜನಾಕ್ಷರಗಳಿಗೆ ಮಹಾಪ್ರಾಣಗಳು ಎಂದು ಕರೆಯುತ್ತಾರೆ. ಇವು ಸಂಖ್ಯೆಯಲ್ಲಿ ೧೦ (10 ) ಇವೆ,

ಖ,ಛ,ಠ,ಥ,ಫ
ಘ,ಝ,ಢ,ಧ,ಭ

ಅನುನಾಸಿಕಗಳು:

ಇವು ಕನ್ನಡದಲ್ಲಿ ಒಟ್ಟು ೫ (5)  ಇದ್ದು, ಮೂಗಿನ ಸಹಾಯದಿಂದ ಉಚ್ಛರಿಸಲ್ಪಡುತ್ತವೆ.

 ಙ, ಞ, ಣ, ನ, ಮ

ಅವರ್ಗೀಯ ವ್ಯಂಜನಗಳು (Miscellaneous Consonants) :

ಒಂದು ಗುಂಪು ಅಥವಾ ಒಂದು ವರ್ಗಕ್ಕೆ ಸೇರಿಸಲು ಬಾರದ ವರ್ಣಮಾಲೆಯ ಕೊನೆಯ ಒಂಬತ್ತು (9) ಅಕ್ಷರಗಳನ್ನು ಅವರ್ಗೀಯ ವ್ಯಂಜನಗಳೆಂದು ಕರೆಯುತ್ತಾರೆ. ಅವು ಯಾವುವೆಂದರೆ, 

ಯ ರ ಲ ವ ಶ ಷ ಸ ಹ ಳ


ಸಂಯುಕ್ತಾಕ್ಷರ:

ಯಾವುದಾದರೂ ಒಂದು ಪದದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಒಂದರ ನಂತರ ಒಂದು ಬಂದು ಅವುಗಳಾದ ಮೇಲೆ ಒಂದು ಸ್ವರ ಬಂದರೆ ಅಂತಹ ಅಕ್ಷರಗಳನ್ನು ಸಂಯುಕ್ತಾಕ್ಷರ/ಒತ್ತಕ್ಷರ ಎಂದು ಕರೆಯುತ್ತೇವೆ.

ಉದಾ:

ಕ್ + ತ್ + ಅ = ಕ್ತ
ಪ್ + ರ್ + ಅ = ಪ್ರ
ಗ್ + ಗ್ + ಅ = ಗ್ಗ
ಸ್ + ತ್ + ರ್ + ಅ = ಸ್ತ್ರ

ಸಂಯುಕ್ತಾಕ್ಷರಗಳ ವಿಧಗಳು

 1. ಸಜಾತಿಯ ಸಂಯುಕ್ತಾಕ್ಷರಗಳು
 2. ವಿಜಾತೀಯ ಸಂಯುಕ್ತಾಕ್ಷರಗಳು
ಸಜಾತಿಯ ಸಂಯುಕ್ತಾಕ್ಷರಗಳು:

ಯಾವುದೇ ಪದದಲ್ಲಿ ಒಂದೇ ವ್ಯಂಜನವು ಎರಡು ಬಾರಿ ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ಸಜಾತೀಯ ವ್ಯಂಜನಾಕ್ಷರಗಳು ಎನ್ನುತ್ತೇವೆ.

ಉದಾ:

ಕತ್ತೆ – ಕ್ + ತ್ + ತ್ + ಎ
ಅಕ್ಕ – ಅ + ಕ್ + ಕ್ + ಅ

ಹಗ್ಗ , ಅಜ್ಜ , ತಮ್ಮ , ಅಪ್ಪ

ವಿಜಾತಿಯ ಸಂಯುಕ್ತಾಕ್ಷರಗಳು:

ಯಾವುದೇ ಪದದಲ್ಲಿ ಎರಡು ಬೇರೆ ಬೇರೆ ವ್ಯಂಜನಗಳು ಬಂದು ನಂತರ ಸ್ವರವೊಂದು ಬಂದರೆ ಅಂತಹ ಅಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳು ಎನ್ನುತ್ತೇವೆ.

ಉದಾ:

1. ಅಗ್ನಿ- ಆ + ಗ್ + ನ್ + ಇ
2. ಆಪ್ತ – ಆ + ಪ್ + ತ್ + ಅ

ಸೂರ್ಯ, ಮಗ್ನ , ಸ್ವರ, ಪ್ರಾಣ


Kannada Varnanamale Chart in Kannada with Examples :

Download Kannada Varnamale PDF :

Kannada Varnamale Chart PDF

Kannada varnamale FuLl PDF

ಕನ್ನಡ ವರ್ಣಮಾಲೆ ( Kannada Alphabets) Video :

FAQ on Kannada Varnamale :

1. ಕನ್ನಡ ವರ್ಣಮಾಲೆಯ ಸ್ವರಗಳು ಎಷ್ಟು?

ಕನ್ನಡ ವರ್ಣಮಾಲೆಯಲ್ಲಿ ಒಟ್ಟು 13 ಸ್ವರಗಳಿವೆ.

2. ಕನ್ನಡ ವರ್ಣಮಾಲೆಯ ಹೃಸ್ವ ಸ್ವರಗಳು ಎಷ್ಟು?

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  6 ಹೃಸ್ವ ಸ್ವರಗಳಿವೆ.

3. ಕನ್ನಡ ವರ್ಣಮಾಲೆಯ ದೀರ್ಘ ಸ್ವರಗಳು ಎಷ್ಟು?

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  7 ದೀರ್ಘ ಸ್ವರಗಳಿವೆ.

4. ಕನ್ನಡ ವರ್ಣಮಾಲೆಯ ಯೋಗವಾಹಗಳು ಎಷ್ಟು?

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  2 ಯೋಗವಾಹಗಳಿವೆ.

5. ವ್ಯಂಜನಗಳು ಎಷ್ಟು?

ಕನ್ನಡದಲ್ಲಿ ಒಟ್ಟು 34 ವ್ಯಂಜನಗಳಿವೆ.

6. ಕನ್ನಡ ವರ್ಣಮಾಲೆಯ ವರ್ಗೀಯ ವ್ಯಂಜನಗಳು ಎಷ್ಟು?

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  25 ವರ್ಗೀಯ ವ್ಯಂಜನಗಳಿವೆ.

7. ಕನ್ನಡ ವರ್ಣಮಾಲೆಯ ಅವರ್ಗೀಯ ವ್ಯಂಜನಗಳು ಎಷ್ಟು?

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  9 ಅವರ್ಗೀಯ ವ್ಯಂಜನಗಳಿವೆ.

8. ಕನ್ನಡ ವರ್ಣಮಾಲೆಯ ಅಲ್ಪ ಪ್ರಾಣಗಳು ಎಷ್ಟು?

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  10 ಅಲ್ಪ ಪ್ರಾಣಗಳಿವೆ.

9. ಕನ್ನಡ ವರ್ಣಮಾಲೆಯ ಮಹಾಪ್ರಾಣಗಳು ಎಷ್ಟು?

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  10 ಮಹಾಪ್ರಾಣಗಳಿವೆ.

10. ಕನ್ನಡ ವರ್ಣಮಾಲೆಯ ಅನುನಾಸಿಕಗಳು ಎಷ್ಟು?

ಕನ್ನಡ ವರ್ಣಮಾಲೆಯಲ್ಲಿ ಒಟ್ಟು  5 ಅನುನಾಸಿಕಗಳಿವೆ.

11. ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ?

ಕನ್ನಡ ವರ್ಣಮಾಲೆಯಲ್ಲಿ, ಸ್ವರಗಳು, ಯೋಗವಾಹಗಳು ಮತ್ತು ವ್ಯಂಜನಗಳೆಂದು 3 ವಿಧಗಳಿವೆ.

12. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ?

ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.

4 2 votes
Article Rating
Subscribe
Notify of
guest

0 Comments
Inline Feedbacks
View all comments