ಕನ್ನಡ ವ್ಯಾಕರಣ – Kannada vyakarana
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ. ೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ನಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ಇತರರಿಗೆ ವ್ಯಕ್ತಪಡಿಸುವುದಕ್ಕೆ ಮತ್ತು ಅವರ ಅಭಿಪ್ರಾಯಗಳನ್ನು ಮತ್ತು ಭಾವನೆಗಳನ್ನು ನಾವು ತಿಳಿಯುವ ಮಾಧ್ಯಮಕ್ಕೆ ಭಾಷೆ ಎಂದು ಹೆಸರು.
ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು ಹಾಗೂ ಸಾರ್ವತ್ರೀಕರಣಗೊಳಿಸಲು ಇರುವ ಮಾರ್ಗದರ್ಶಿಯನ್ನು ವ್ಯಾಕರಣ ಎನ್ನುತ್ತಾರೆ.
ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ.ಹಲವು ಭಾಷೆಗಳಲ್ಲಿ ನಾವು ಮಾತಾನಾಡುವ ಕನ್ನಡವೂ ಒಂದು ಪ್ರಮುಖ ಭಾಷೆಯಾಗಿದ್ದು ತನ್ನದೇ ಲಿಪಿಯನ್ನು ಹೊಂದಿರುವ ವಿಶೇಷ ಭಾಷೆ ಇದಾಗಿದೆ.
ಕನ್ನಡ ವ್ಯಾಕರಣ:
- ಕನ್ನಡ ವರ್ಣಮಾಲೆ
- ಸಂಧಿಗಳು
- ದೇಶ್ಯ-ಅನ್ಯದೇಶ್ಯ-ತತ್ಸಮ-ತದ್ಭವ ಪ್ರಕರಣ
- ದೇಶ್ಯ ಅಚ್ಚಗನ್ನಡ ಶಬ್ದಗಳು
- ಅನ್ಯದೇಶ್ಯ ಶಬ್ದಗಳು
- ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು
- ಹಿಂದೂಸ್ಥಾನೀ ಭಾಷೆಯಿಂದ ಬಂದ ಶಬ್ದಗಳು
- ಇಂಗ್ಲೀಷಿನಿಂದ ಕನ್ನಡಕ್ಕೆ ಬಂದು ಬಳಕೆಯಾಗುತ್ತಿರುವ ಶಬ್ದಗಳು
- ಪೆÇೀರ್ಚುಗೀಸ್ ಭಾಷೆಯಿಂದ ಬಂದ ಶಬ್ದಗಳು
- ಸಂಸ್ಕೃತದಿಂದ ತಮ್ಮ ಮೂಲರೂಪವನ್ನು ವ್ಯತ್ಯಾಸಮಾಡಿಕೊಂಡು ಕನ್ನಡಕ್ಕೆ ಬಂದ ಶಬ್ದಗಳು
- ತತ್ಸಮ ತದ್ಭವ ರೂಪಗಳು
- ನಾಮಪದ ಪ್ರಕರಣ
- ಕಾಲಗಳು :
- ಕ್ರಿಯಾಪದ ಪ್ರಕರಣ
- ಕ್ರಿಯಾಪ್ರಕೃತಿ (ಧಾತು)
- ಮೂಲಧಾತು (ಸಹಜಧಾತು)
- ಪ್ರತ್ಯಯಾಂತಧಾತು (ಸಾಧಿತಧಾತು)
- ಸಕರ್ಮಕಧಾತು, ಅಕರ್ಮಕಧಾತು
- ಕ್ರಿಯಾಪದ
- ಕ್ರಿಯಾಪದ ರೂಪಗಳು ಉಂಟಾಗುವಿಕೆ
- ವರ್ತಮಾನಕಾಲದ ಕ್ರಿಯಾಪದಗಳು
- ಭೂತಕಾಲದ ಕ್ರಿಯಾಪದಗಳು
- ಭವಿಷ್ಯತ್ಕಾಲದ ಕ್ರಿಯಾಪದಗಳು
- ವಿಧ್ಯರ್ಥ (ವಿಧಿ+ಅರ್ಥ) ರೂಪಗಳು
- ನಿಷೇಧಾರ್ಥಕ ರೂಪಗಳು
- ಸಂಭಾವನಾರ್ಥಕ ರೂಪಗಳು
- ಕ್ರಿಯಾಪದ ರೂಪಗಳ ಕೆಲವು ವಿಶೇಷ ರೂಪಗಳು
- ವರ್ತಮಾನಕಾಲದ ಕೆಲವು ವಿಶೇಷ ಪ್ರಯೋಗಗಳು
- ಭೂತಕಾಲದ ಕೆಲವು ವಿಶೇಷ ರೂಪಗಳು
- ಭವಿಷ್ಯತ್ಕಾಲದ ಕೆಲವು ವಿಶೇಷ ರೂಪಗಳು
- ಕ್ರಿಯಾಪದಗಳ ಕಾಲಪಲ್ಲಟಗೊಳ್ಳುವಿಕೆ
- ವಿಧ್ಯರ್ಥದಲ್ಲಿ ಬರುವ ಕೆಲವು ವಿಶೇಷ ರೂಪಗಳು
- ನಿಷೇಧಾರ್ಥದಲ್ಲಿ ಬರುವ ಕೆಲವು ವಿಶೇಷ ರೂಪಗಳು
- ಸಂಭಾವನಾರ್ಥದಲ್ಲಿ ಬರುವ ಕೆಲವು ವಿಶೇಷ ರೂಪಗಳು
- ಕರ್ಮಣಿಪ್ರಯೋಗಗಳು
- ಕರ್ಮಣಿಪ್ರಯೋಗದಲ್ಲಿ ಕ್ರಿಯಾಪದದ ಲಿಂಗವ್ಯವಸ್ಥೆ
- ಕ್ರಿಯಾಪ್ರಕೃತಿ (ಧಾತು)
- ಸಮಾಸ ಪ್ರಕರಣ
- ಕೃದಂತ, ತದ್ಧಿತಾಂತ ಪ್ರಕರಣ
- ಕೃದಂತಪ್ರಕರಣ (ಕೃನ್ನಾಮಪ್ರಕರಣ)
- ಕೃದಂತ ನಾಮಗಳು
- ಕೃದಂತ ಭಾವನಾಮಗಳು (ಭಾವಕೃದಂತ)
- ಕೃದಂತಾವ್ಯಯಗಳು (ಅವ್ಯಯಕೃದಂತ)
- ತದ್ಧಿತಾಂತಗಳು
- ತದ್ಧಿತಾಂತ ನಾಮಗಳು
- ತದ್ಧಿತಾಂತ ಭಾವನಾಮಗಳು
- ತದ್ಧಿತಾಂತಾವ್ಯಯಗಳು
- ಕೃದಂತಪ್ರಕರಣ (ಕೃನ್ನಾಮಪ್ರಕರಣ)
- ಅವ್ಯಯ ಪ್ರಕರಣ
- ವಾಕ್ಯಗಳು
- ಛಂದಸ್ಸು
- ಛಂದೋಂಬುದಿ ಗ್ರಂಥ ಕರ್ತೃವಿನ ವಿಚಾರ
- ಕನ್ನಡ ಕಾವ್ಯಗಳು
- ಪದ್ಯ
- ಪ್ರಾಸ
- ಯತಿ
- ಗಣಗಳು
- ಮಾತ್ರೆ, ಗುರು, ಲಘುಗಳು
- ಮಾತ್ರಾಗಣದ ಛಂದಸ್ಸಿನ ಪದ್ಯಗಳು
- ಕಂದ ಪದ್ಯದ ಲಕ್ಷಣ
- ಷಟ್ಪದಿಗಳ ಲಕ್ಷಣಗಳು
- ಶರಷಟ್ಪಪದಿ
- ಕುಸುಮಷಟ್ಪದಿ
- ಭೋಗಷಟ್ಪದಿ
- ಭಾಮಿನೀಷಟ್ಪದಿ
- ಪರಿವರ್ಧಿನೀಷಟ್ಪದಿ
- ವಾರ್ಧಕಷಟ್ಪದಿ
- ರಗಳೆ ಜಾತಿಯ ಪದ್ಯ ಲಕ್ಷಣಗಳು
- ಉತ್ಸಾಹರಗಳೆಯ ಲಕ್ಷಣ
- ಮಂದಾನಿಲರಗಳೆಯ ಲಕ್ಷಣ
- ಲಲಿತರಗಳೆಯ ಲಕ್ಷಣ
- ಅಕ್ಷರಗಣಗಳು
- ವೃತ್ತಜಾತಿಯ ಛಂದಸ್ಸಿನ ಲಕ್ಷಣಗಳು
- ಉತ್ಪಲಮಾಲಾವೃತ್ತದ ಲಕ್ಷಣ
- ಚಂಪಕಮಾಲಾವೃತ್ತದ ಲಕ್ಷಣ
- ಶಾರ್ದೂಲವಿಕ್ರೀಡಿತವೃತ್ತದ ಲಕ್ಷಣ
- ಮತ್ತೇಭವಿಕ್ರೀಡಿತವೃತ್ತದ ಲಕ್ಷಣ
- ಸ್ರಗ್ಧರಾವೃತ್ತದ ಲಕ್ಷಣ
- ಮಹಾಸ್ರಗ್ಧರಾವೃತ್ತದ ಲಕ್ಷಣ
- ವೃತ್ತಜಾತಿಯ ಛಂದಸ್ಸಿನ ಲಕ್ಷಣಗಳು
- ಅಂಶಗಣಗಳು
- ಅಲಂಕಾರಗಳು
- ಅರ್ಥಾಲಂಕಾರ
- ಉಪಮಾಲಂಕಾರ
- ರೂಪಕಾಲಂಕಾರ
- ಉತ್ಪ್ರೇಕ್ಷಾಲಂಕಾರ
- ದೃಷ್ಟಾಂತಾಲಂಕಾರ
- ಅರ್ಥಾಂತರನ್ಯಾಸಾಲಂಕಾರ
- ಶ್ಲೇಷಾಲಂಕಾರ
- ಶಬ್ದಾಲಂಕಾರಗಳು
- ಅನುಪ್ರಾಸ
- ವೃತ್ತ್ಯನುಪ್ರಾಸ
- ಛೇಕಾನುಪ್ರಾಸ
- ಅನುಪ್ರಾಸ
- ಯಮಕಾಲಂಕಾರ
- ಅರ್ಥಾಲಂಕಾರ
- ಲೇಖನ ಚಿಹ್ನೆಗಳು
- ಕನ್ನಡ ಗಾದೆಗಳು
- ಕನ್ನಡ ವಿರುದ್ಧಾರ್ಥಕ ಪದಗಳು
ಲೋಕದಲ್ಲಿ ನಡೆಯುವ ಎಲ್ಲಾ ವ್ಯವಹಾರಗಳೂ ಪರಸ್ಪರ ಮಾತನಾಡುವುದರಿಂದ, ಬರೆಯುವುದರಿಂದ ನಡೆಯುತ್ತವೆ. ತಮ್ಮ ತಮ್ಮ ಮನಸ್ಸಿನ ವಿಚಾರಗಳನ್ನು ಎಲ್ಲರೂ ಮಾತಿನ ಮೂಲಕವೇ ಇನ್ನೊಬ್ಬರಿಗೆ ತಿಳಿಯಪಡಿಸುತ್ತಾರೆ. ಆಡಿದ ಮಾತುಗಳನ್ನು, ಆಡಬೇಕಾದ ಮಾತುಗಳನ್ನು ಗೊತ್ತಾದ ಲಿಪಿಯ ಮೂಲಕ ಬರೆಯುವುದೇ ಬರವಣಿಗೆ.
ಬರೆಯುವುದೂ, ಮಾತನಾಡುವುದೂ ಮುಖ್ಯವಾಗಿ ಶಬ್ದಗಳ ಮೂಲಕವೇ ಆಗಿದೆ. ಒಂದೊಂದು ಶಬ್ದಕ್ಕೂ ಒಂದೊಂದು ಅರ್ಥವಿದೆ. ಶಬ್ದಗಳ ಉಚ್ಚಾರವಾಗಲಿ ಬರವಣಿಗೆಯಾಗಲಿ ಅರ್ಥಪೂರ್ಣವಾಗಿರಬೇಕು. ಶುದ್ಧವಾಗಿ ಮಾತನಾಡುವುದೂ, ಬರೆಯುವುದೂ ಉತ್ತಮ ವಿದ್ಯಾವಂತನ ಲಕ್ಷಣವಾಗಿದೆ.
ವಿದ್ಯಾವಂತನೆನ್ನಿಸಿಕೊಳ್ಳಬೇಕಾದವನು ತಾನು ಬರೆಯುವ ಬರವಣಿಗೆಯನ್ನು ಪೂರ್ಣ ವಿಚಾರಿಸಿ, ಶುದ್ಧವಾಗಿ ಬರೆಯಬೇಕಾಗುವುದು; ಅಲ್ಲದೆ ಅವನು ಮಾತನಾಡುವುದೂ ಅರ್ಥಪೂರ್ಣವಾಗಿರಬೇಕು. ಶಬ್ದ ಮತ್ತು ಶಬ್ದಗಳ ಸಂಬಂಧ ಹೀಗೆ ಇರಬೇಕೆಂಬುದನ್ನು ವ್ಯಾಕರಣ ಶಾಸ್ತ್ರವು ಗೊತ್ತುಪಡಿಸುವುದು. ಆದುದರಿಂದ ಶುದ್ಧವಾಗಿ, ಅರ್ಥಪೂರ್ಣವಾಗಿ ಮಾತನಾಡುವ ಮತ್ತು ಬರೆಯುವ ಶಕ್ತಿಯನ್ನು ಪಡೆಯಬೇಕಾದರೆ ಅವಶ್ಯವಾಗಿ ವ್ಯಾಕರಣಶಾಸ್ತ್ರವನ್ನು ಅಭ್ಯಾಸ ಮಾಡಲೇ ಬೇಕಾಗುವುದು.
ಜಗತ್ತಿನ ಎಲ್ಲಾ ಭಾಷೆಗಳಲ್ಲೂ ಆಯಾಯ ಭಾಷೆಗಳ ಸ್ವರೂಪವನ್ನು ಅವುಗಳ ವ್ಯಾಕರಣಶಾಸ್ತ್ರವನ್ನು ಅಭ್ಯಾಸ ಮಾಡಬೇಕು. ಕನ್ನಡ ಭಾಷೆಯನ್ನು ಕಲಿಯುವವರು ಕನ್ನಡ ವ್ಯಾಕರಣವನ್ನು ಅವಶ್ಯವಾಗಿ ಓದಿ, ಅದರ ಶಬ್ದಗಳ ಶುದ್ಧ ರೂಪಗಳನ್ನೂ, ಅವುಗಳ ಸಂಬಂಧವನ್ನೂ ಸ್ಪಷ್ಟವಾಗಿ ತಿಳಿಯಬೇಕಾಗುವುದು.
ಸರ್ವ ವ್ಯವಹಾರಗಳಿಗೆ ಮೂಲವಾದುದು ಶಬ್ದಾರ್ಥಗಳ ನಿರ್ಣಯವೇ ಆಗಿದೆ ಈ ಹಿಂದೆ ತಿಳಿಸಿದೆ. ವ್ಯಾಕರಣದಿಂದ ಪದ, ಪದದಿಂದ ಅರ್ಥ, ಅರ್ಥದಿಂದ ಜ್ಞಾನವು ಉಂಟಾಗುತ್ತದೆ∗. ಭಾಷೆಯಲ್ಲಿ ಬಲ್ಲವನೆನ್ನಿಸಿಕೊಳ್ಳಬೇಕಾದರೆ, ಕೂಲಂಕುಷವಾಗಿ ವ್ಯಾಕರಣಶಾಸ್ತ್ರವನ್ನು ಓದಲೇ ಬೇಕು. ಭಾಷೆಯ ನಿಯಮಗಳನ್ನು ತಿಳಿಯಲೇ ಬೇಕು. ಮನಸ್ಸಿಗೆ ಬಂದ ಹಾಗೆ ಭಾಷೆಯ ಬಳಕೆಯನ್ನು ಮಾಡುತ್ತ ಹೋದರೆ ಕಾಲಾನಂತರದಲ್ಲಿ ಶದ್ಧವಾದ ಭಾಷೆಯ ಸ್ವರೂಪವೇ ಹಾಳಾಗಿ ಹೋಗಬಹುದು.
ಶುದ್ಧವಾದ ಭಾಷೆಯನ್ನು ಬೆಳೆಸಿ, ಉಳಿಸಿಕೊಂಡು ಬರುವ ಸತ್ಸಂಪ್ರದಾಯವನ್ನು ಕನ್ನಡ ನಾಡಿನ ಮಕ್ಕಳು ಅನುಸರಿಸಬೇಕು. ನಮ್ಮ ಮಕ್ಕಳು ಶುದ್ಧವಾಗಿ ಬರೆಯುವುದನ್ನೂ, ಮಾತನಾಡುವುದನ್ನೂ ಅಭ್ಯಾಸ ಮಾಡಿ, ಸುಸಂಸ್ಕೃತ ಜನಾಂಗವೆಂದೆನಿಸಿಕೊಳ್ಳಬೇಕು. ಪ್ರೌಢಶಾಲೆಗಳಲ್ಲಿ ಓದುವ ಮಕ್ಕಳು ಈ ವ್ಯಾಕರಣದಲ್ಲಿರುವ ಎಲ್ಲ ನಿಬಂಧನೆಗಳನ್ನೂ
ಚೆನ್ನಾಗಿ ಅರಿಯಬೇಕೆಂಬ ಮುಖ್ಯೋದ್ಧೇಶದಿಂದ ಈ ಪುಸ್ತಕವನ್ನು ರಚಿಸಲಾಗಿದೆ.
ಕನ್ನಡ ವ್ಯಾಕರಣಕಾರರು ಮತ್ತು ಅವರ ಗ್ರಂಥಗಳು
ಕನ್ನಡ ಭಾಷೆ ಪ್ರಾಚೀನವಾದುದು. ಇದು ದಕ್ಷಿಣಭಾರತದಲ್ಲಿ ಪ್ರಸಿದ್ಧವಾಗಿರುವ ದ್ರಾವಿಡ ಭಾಷೆಗಳ ವರ್ಗಕ್ಕೆ ಸೇರಿದುದು. ತಮಿಳು, ತೆಲುಗು, ಮಲಯಾಳ, ತುಳುಗಳೂ ಆ ವರ್ಗಕ್ಕೇ ಸೇರಿದವುಗಳು. ಈ ಐದೂ ಭಾಷೆಗಳು ಒಬ್ಬಳೇ ತಾಯಿಯಿಂದ ಜನ್ಮವೆತ್ತಿದ ಅಕ್ಕತಂಗಿಯರಿದ್ದ ಹಾಗೆ.
ಸುಮಾರು 2 ಸಾವಿರ ವರ್ಷಗಳಿಂದಲೂ ‘ಕನ್ನಡ’ ಎಂಬ ನಾವು ಮಾತನಾಡುವ ಭಾಷೆ ಬಳಕೆಯಲ್ಲಿದೆ. ಪ್ರಾಚೀನಕಾಲದ ಈ ಕನ್ನಡಭಾಷೆಯನ್ನು ನಾವು ‘ಹಳಗನ್ನಡ’ ಎಂದು ಕರೆಯುತ್ತೇವೆ. ಹಳಗನ್ನಡದ ಈ ಭಾಷೆಯ ಸ್ವರೂಪವನ್ನು ತಿಳಿಯಪಡಿಸಲೋಸುಗ ಅನೇಕ ವ್ಯಾಕರಣ ಗ್ರಂಥಗಳನ್ನು ಪ್ರಸಿದ್ಧ ವಿದ್ವಾಂಸರನೇಕರು ಬರೆದಿದ್ದಾರೆ. ಅವರ ಸಂಕ್ಷೇಪ ಪರಿಚಯವನ್ನು ಈ ಕೆಳಗೆ ಕೊಡಲಾಗಿದೆ.
2ನೆಯ ನಾಗವರ್ಮ
ಕ್ರಿ.ಶ.ಸು. 1145 ರಲ್ಲಿದ್ದ ನಾಗವರ್ಮನೆಂಬುವನು ‘ಕರ್ನಾಟಕ ಭಾಷಾ ಭೂಷಣ’, ‘ಕಾವ್ಯಾವಲೋಕನ’ಗಳೆಂಬೆರಡು ಗ್ರಂಥಗಳನ್ನು ಬರೆದನು. ಕವ್ಯಾವಲೋಕನದಲ್ಲಿರುವ 1ನೆಯ ಭಾಗದಲ್ಲಿ ‘ಶಬ್ದಸ್ಮೃತಿ’ ಎಂಬ ಹೆಸರಿನಿಂದ ಬರೆದ ವಿಚಾರವೇ ವ್ಯಾಕರಣಶಾಸ್ತ್ರಕ್ಕೆ ಸಂಬಂಧಿಸಿ ದುದಾಗಿದೆ.
ಈ ‘ಶಬ್ದಸ್ಮೃತಿ’ಯಲ್ಲಿ ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ-ಎಂಬ 5 ಭಾಗಗಳಿದ್ದು, ಬಹು ಸಂಕ್ಷೇಪವಾಗಿ ಹಳಗನ್ನಡ ವ್ಯಾಕರಣ ವಿಷಯಗಳನ್ನು ಅದರಲ್ಲಿ ವಿವರಿಸಲಾಗಿದೆ. ‘ಕರ್ನಾಟಕಭಾಷಾಭೂಷಣ’ ಎಂಬ ಗ್ರಂಥವು ಕನ್ನಡ ವ್ಯಾಕರಣಗ್ರಂಥ ವಾದರೂ ಸಂಸ್ಕೃತಭಾಷೆಯಲ್ಲಿ ಬರೆಯಲ್ಪಟ್ಟಿದೆ. ಈ ಪುಸ್ತಕದಿಂದ ಸಂಸ್ಕೃತವನ್ನು ಬಲ್ಲವರೂ ಕನ್ನಡ ವ್ಯಾಕರಣ ತಿಳಿಯಲು ಹೆಚ್ಚು ಅನುಕೂಲವಾಗಿದೆ. ಅಲ್ಲದೆ ಕನ್ನಡವೂ ಸಂಸ್ಕೃತದಷ್ಟೇ ಮಹತ್ವದ ಭಾಷೆ0iÉುಂಬುದನ್ನು ತೋರಿಸಿಕೊಡಲು ಸಾಧ್ಯವಾಗಿದೆ.
ಕೇಶಿರಾಜ
ಕ್ರಿ.ಶ.ಸು. 1260 ರಲ್ಲಿದ್ದ ‘ಕೇಶಿರಾಜ’ ಎಂಬುವನು ‘ಶಬ್ದಮಣಿದರ್ಪಣ’ ಎಂಬ ಹೆಸರಿನ ಕನ್ನಡ ವ್ಯಾಕರಣಗ್ರಂಥವನ್ನು ರಚಿಸಿದನು. ಇದು ಸಮಗ್ರ ಹಳಗನ್ನಡ ಭಾಷೆಯ ಸ್ವರೂಪವನ್ನು ತಿಳಿಯಬೇಕೆನ್ನುವವರಿಗೆ ಉತ್ತಮ ಕೈಗನ್ನಡಿಯಂತಿದೆ. ಇವನ ತಂದೆಯಾದ ‘ಮಲ್ಲಿಕಾರ್ಜುನ’ ಎಂಬುವನೂ, ಸೋದರಮಾವನಾದ ‘ಜನ್ನ’ ಎಂಬುವನೂ ದೊಡ್ಡ ಕವಿಗಳು.
ತಾತನಾದ (ತಾಯಿಯ ತಂದೆ) ‘ಕವಿಸುಮನೋಬಾಣ’ ಎಂಬುವನೂ ಮಹಾವಿದ್ವಾಂಸ.
ಇಂಥ ಮಹಾ ವಿದ್ವಾಂಸರ ಪರಂಪರೆಯಲ್ಲಿ ಹುಟ್ಟಿದ ಕೇಶಿರಾಜನೂ ಮಹಾವಿದ್ವಾಂಸನೇ ಆಗಿದ್ದನೆಂಬುದು ಅವನು ಬರೆದ ಶಬ್ದಮಣಿದರ್ಪಣವೆಂಬ ವ್ಯಾಕರಣ ಗ್ರಂಥದಿಂದ ಗೊತ್ತಾಗುವುದು. ಈ ವ್ಯಾಕರಣ ಗ್ರಂಥದಲ್ಲಿ ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ, ಧಾತು, ಅಪಭ್ರಂಶ, ಅವ್ಯಯ ಎಂಬ ಎಂಟು ಅಧ್ಯಾಯಗಳಿವೆ. ಗ್ರಂಥದ ಕೊನೆಯಲ್ಲಿರುವ ಪ್ರಯೋಗಸಾರವೆಂಬ ಅಧ್ಯಾಯವು ಶಬ್ದಾರ್ಥನಿರ್ಣಯವನ್ನು ತಿಳಿಯಲು ಉಪಯುಕ್ತವಾಗಿದೆ. ವ್ಯಾಕರಣದ ಸೂತ್ರಗಳೆಲ್ಲ ಕಂದಪದ್ಯದಲ್ಲಿವೆ. ಒಟ್ಟು 322 ಸೂತ್ರಗಳಿವೆ.
ಭಟ್ಟಾಕಳಂಕದೇವ:
ಕ್ರಿ.ಶ. 1604ರ ಸುಮಾರಿನಲ್ಲಿದ್ದ ‘ಭಟ್ಟಾಕಳಂಕದೇವ’ನೆಂಬುವನು ‘ಶಬ್ದಾನುಶಾಸನ’ ಎಂಬ ಹೆಸರಿನ ಬಹುಪ್ರೌಢವಾದ ಕನ್ನಡ ವ್ಯಾಕರಣಗ್ರಂಥವನ್ನು ಬರೆದನು. ಆದರೆ ಇದು ಸಂಸ್ಕೃತದಲ್ಲಿದೆ. ಈಗಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಹಾಡುವಳ್ಳಿ (ಸಂಗೀತಪುರ) ಎಂಬ ಊರಿನಲ್ಲಿರುವ ಜೈನರ ಮಠದ ಗುರುವಾಗಿದ್ದ ‘ಅಕಳಂಕದೇವ’ ಎಂಬುವರು ಭಟ್ಟಾಕಳಂಕನ ಗುರುಗಳು
ಭಟ್ಟಾಕಳಂಕನು ಸಂಸ್ಕೃತ, ಕನ್ನಡ ಈ ಎರಡೂ ಭಾಷೆಗಳಲ್ಲಿ ಮಹಾವಿದ್ವಾಂಸ ನಾಗಿದ್ದನು. ಕನ್ನಡಭಾಷೆಯೂ ಸಂಸ್ಕೃತದಂತೆ ಯೋಗ್ಯ ಪುರಸ್ಕಾರ ಪಡೆಯತಕ್ಕ ಭಾಷೆ0iÉುಂಬುದನ್ನು ಆಗಿನ ಸಂಸ್ಕೃತಭಾಷಾವಿದ್ವಾಂಸರಿಗೆ ತೋರಿಸಿಕೊಡುವ ಉದ್ದೇಶದಿಂದ ಈ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿದುದು ಕನ್ನಡ ಭಾಷೆಗೊಂದು ದೊಡ್ಡ ಹೆಮ್ಮೆಯ ವಿಷಯ.
ಹಿಂದೆ ಪಾಣಿನಿ ಮತ್ತು ಪತಂಜಲಿ ಮಹರ್ಷಿಗಳು ಸಂಸ್ಕೃತಭಾಷೆಯ ಸಲುವಾಗಿ ‘ಅಷ್ಟಾಧ್ಯಾಯೀ’ ಮತ್ತು ‘ಮಹಾಭಾಷ್ಯ’ ಎಂಬ ವ್ಯಾಕರಣಗ್ರಂಥಗಳನ್ನು ಕ್ರಮವಾಗಿ ರಚಿಸಿದ್ದಾರೆ. ಅವುಗಳ ಹಾಗೆ0iÉುೀ ಒಂದು ವ್ಯವಸ್ಥಾಬದ್ಧ ಕ್ರಮದಲ್ಲಿ ಭಟ್ಟಾಕಳಂಕದೇವನು ಕನ್ನಡದ ಈ ಶಬ್ದಾನುಶಾಸನ ವ್ಯಾಕರಣದ ಸೂತ್ರಗಳನ್ನೂ, ಅವುಗಳಿಗೆ ಭಾಷ್ಯವನ್ನೂ ರಚಿಸಿದನು.
ಈ ಪೂರ್ವದಲ್ಲಿ ಹೇಳಲ್ಪಟ್ಟ ನಾಗವರ್ಮನ ಶಬ್ದಸ್ಮೃತಿ, ಕರ್ನಾಟಕಭಾಷಾಭೂಷಣ ಗಳೂ, ಕೇಶಿರಾಜನ ಶಬ್ದಮಣಿದರ್ಪಣವೂ, ಭಟ್ಟಾಕಳಂಕದೇವನ ಶಬ್ದಾನುಶಾಸನವೂ ಕನ್ನಡ ಭಾಷೆಯ ಸ್ವರೂಪವನ್ನು ತಿಳಿಸತಕ್ಕ ವ್ಯಾಕರಣ ಗ್ರಂಥಗಳು. ಇಂದಿನ ಕಾಲದಲ್ಲಿ ಬಳಕೆಯಲ್ಲಿರುವ ಕನ್ನಡ ಭಾಷೆಯು ಹಿಂದಿನ ಕಾಲದ ಕನ್ನಡ ಭಾಷೆಗಿಂತ ಬಹಳ ಮಟ್ಟಿಗೆ
ಮಾರ್ಪಾಟುಗೊಂಡಿದೆ.
ಈ ಕಾಲದ ಭಾಷೆಯನ್ನು ‘ಹೊಸಗನ್ನಡ’ ಎಂದು ಕರೆಯುತ್ತೇವೆ. ನಮ್ಮ ಮಕ್ಕಳು ಮುಖ್ಯವಾಗಿ ಹೊಸಗನ್ನಡ ಭಾಷೆಯನ್ನು ಕ್ರಮವಾಗಿ ಅಭ್ಯಾಸ ಮಾಡುವುದರ ಜೊತೆಗೆ ಹಳಗನ್ನಡ ಭಾಷೆಯ ಸ್ಥೂಲವಾದ ಪರಿಚಯವನ್ನೂ ಮಾಡಿಕೊಳ್ಳಬೇಕಾಗುತ್ತದೆ. ಆದುದರಿಂದ ಮುಖ್ಯವಾಗಿ ಹೊಸಗನ್ನಡ ವ್ಯಾಕರಣವನ್ನು ಓದುವುದರ ಜೊತೆಗೆ ಹಳಗನ್ನಡವನ್ನು ಪರಿಚಯ ಮಾಡಿಕೊಳ್ಳಲು ಬೇಕಾಗುವ ಕೆಲವು ವ್ಯಾಕರಣದ ಅಂಶಗಳ ಕಡೆಗೆ ಗಮನ ಕೊಡಬೇಕಾಗುವುದು.
ಆದರೆ ಹಳಗನ್ನಡ ವ್ಯಾಕರಣವನ್ನೇ ಪ್ರಧಾನವಾಗಿ ತಿಳಿಯಬೇಕಾಗಿಲ್ಲ. ಹಳಗನ್ನಡ ಕಾವ್ಯಗಳನ್ನು ಸ್ವಲ್ಪ ಸ್ವಲ್ಪವಾಗಿ ಓದುತ್ತಿರುವ ನಮ್ಮ ಮಕ್ಕಳು ಆ ಬಗೆಗೆ ಅಲ್ಪಸ್ವಲ್ಪ ತಿಳಿದರೆ ಸಾಕು.
FAQ:
ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು ಹಾಗೂ ಸಾರ್ವತ್ರೀಕರಣಗೊಳಿಸಲು ಇರುವ ಮಾರ್ಗದರ್ಶಿಯನ್ನು ವ್ಯಾಕರಣ ಎನ್ನುತ್ತಾರೆ.