ಕನ್ನಡ ಒತ್ತಕ್ಷರದ ಪದಗಳು (ಅ to ಳ )-kannada ottaksharagalu
Check out Kannada ottakshara padagalu , ಕನ್ನಡ ಒತ್ತಕ್ಷರದ ಪದಗಳು (ಅ to ಳ ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಒತ್ತಕ್ಷರದ ಪದಗಳು (ಅ to ಳ )ದಿಂದ ಪ್ರಾರಂಭವಾಗುವ ಹಲವು ಒತ್ತಕ್ಷರದ ಪದಗಳನ್ನು ( ottakshara Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಒತ್ತಕ್ಷರದ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಒತ್ತಕ್ಷರದ ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಒತ್ತಕ್ಷರದ ಪದಗಳ ಸಮೂಹವಿದೆ.ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ
ಸಂಯುಕ್ತಾಕ್ಷರಗಳು (ಒತ್ತಕ್ಷರಗಳು) :
ಅಪ್ಪ, ಅಮ್ಮ, ಅಕ್ಷರ, ಸ್ತ್ರೀ ಮುಂತಾದ ಪದಗಳನ್ನು ಬಳಸುತ್ತೇವೆ. ‘ಅಪ’್ಪ ಪದದಲಿ ್ಲ ಅ ಪ್ ಪ್ ಅ ಎಂಬ ನಾಲ್ಕು ಅಕ್ಷರಗಳಿವೆ. ಮೇಲ್ನೋಟಕ್ಕೆ ಎರಡೇ ಅಕ್ಷರಗಳು ಕಾಣುತ್ತವೆ.
ಮೊದಲ ಅಕ್ಷರ ಸ್ವರಾಕ್ಷರ ಎರಡನೇ ಅಕ್ಷರದಲಿ ್ಲ ಪ್ ಪ್ ಅ ಎಂಬ ಮೂರು ಅಕ್ಷರಗಳಿವೆ. ಅವುಗಳಲಿ ್ಲ ಎರಡು
ವ್ಯಂಜನ ಒಂದು ಸ್ವರಾಕ್ಷರ.
ಹೀಗೆ ಎರಡು ಮತು ್ತ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವೇ ಸಂಯುಕ್ತಾಕ್ಷರ. ಇದನ್ನು ದ್ವಿತ್ವಾಕ್ಷರ/ಒತ್ತಕ್ಷರ ಎಂತಲೂ ಕರೆಯುವರು
ಒತ್ತಕ್ಷರಗಳಲ್ಲಿ ಎರಡು ವಿಧಗಳು:
- ಸಜಾತೀಯ ಸಂಯುಕ್ತಾಕ್ಷರಗಳು
- ವಿಜಾತೀಯ ಸಂಯುಕ್ತಾಕ್ಷರಗಳು
ಸಜಾತೀಯ ಸಂಯುಕ್ತಾಕ್ಷರಗಳು:
ಒಂದೇ ಜಾತಿಯ (ಸಜಾತೀಯ) ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರವು ಸಜಾತೀಯ ಸಂಯುಕ್ತಾಕ್ಷರವೆನಿಸುವುದು. ಇದಕ್ಕೆ ದ್ವಿತ್ವವೆಂದೂ ಹೆಸರು.
ಉದಾಹರಣೆಗೆ:-
- ಅಕ್ಕ (ಕ್ + ಕ್)
- ಅಣ್ಣ (ಣ್ + ಣ್)
- ಅಜ್ಜ (ಜ್ + ಜ್)
- ಕೆಟ್ಟು (ಟ್ + ಟ್)
- ಹುತ್ತ (ತ್ + ತ್)
‘ಅಕ್ಕ’ ಎಂಬ ಶಬ್ದದಲ್ಲಿ ಯಾವ ಯಾವ ಅಕ್ಷರಗಳಿವೆ ಎಂಬುದನ್ನು ನೋಡಿರಿ. ಅ +ಕ್ + ಕ್ + ಅ – ಹೀಗೆ ನಾಲ್ಕು ಅಕ್ಷರಗಳು ಕೂಡಿ ‘ಅಕ್ಕ’ ಶಬ್ದವಾಗಿದೆಯಲ್ಲವೆ?
ಇದರ ಹಾಗೆಯೇ ‘ಅಣ್ಣ’ ಎಂಬಲ್ಲಿ, ಅ + ಣ್ + ಣ್ + ಅ ಎಂಬ ನಾಲ್ಕಕ್ಷರಗಳು ಸೇರಿ ಅಣ್ಣ ಶಬ್ದವಾಗಿದೆ. ‘ಕ್ಕ’ ಎಂದರೆ = ಕ್ + ಕ್ + ಅ; ‘ಣ್ಣ’ ಎಂದರೆ = ಣ್ + ಣ್ + ಅ.
ಇಲ್ಲಿ ಎರಡೆರಡು ವ್ಯಂಜನ ಸೇರಿಕೊಂಡು ಒಂದಕ್ಷರವಾಗಿದೆ. ಈ ಎರಡೂ ವ್ಯಂಜನಗಳು ಒಂದೇ ಜಾತಿಯವು ಎಂದರೆ ಸಜಾತೀಯ ವ್ಯಂಜನಗಳು.
ವಿಜಾತೀಯ ಸಂಯುಕ್ತಾಕ್ಷರಗಳು:
ಬೇರೆಬೇರೆ ಜಾತಿಯ ಎರಡು ಅಥವಾ ಹೆಚ್ಚು ವ್ಯಂಜನಗಳು ಸೇರಿ ಆಗುವ ಅಕ್ಷರಕ್ಕೆ ವಿಜಾತೀಯ ಸಂಯುಕ್ತಾಕ್ಷರ ಎನ್ನುತ್ತಾರೆ.
ಉದಾಹರಣೆಗೆ:-
- ಸ್ತ್ರ (ಸ್ + ತ್ + ರ್)
- ಕ್ಷ (ಕ್ + ಷ್)
- ಜ್ಞಾ (ಜ್ + ಞ)
- ಸ್ವಾರ್ಥ (ಸ್ + ವ್; ರ್ + ಥ್)
- ಕ್ತಿ (ಕ್ + ತ್)
‘ಭಕ್ತ’ ಎಂಬ ಶಬ್ದದಲ್ಲಿ ಭ್+ಅ+ಕ್+ತ್+ಅ ಎಂಬ ಐದು ಅಕ್ಷರಗಳಿವೆ. ‘ಅಷ್ಟು’ ಎಂಬ ಶಬ್ದದಲ್ಲಿ ಅ+ಷ್+ಟ್+ಉ ಎಂಬ ನಾಲ್ಕು ಅಕ್ಷರಗಳಿವೆ.
‘ಸ್ತ್ರೀ’ ಎಂಬ ಶಬ್ದದಲ್ಲಿ ‘ಸ್+ತ್+ರ್+ಈ’ ಎಂಬ ನಾಲ್ಕು ಅಕ್ಷರಗಳಿವೆ.
ಮೇಲಿನ ಈ ಉದಾಹರಣೆಗಳಲ್ಲಿ ಎರಡೆರಡು ಮೂರುಮೂರು ವ್ಯಂಜನಗಳು ಸೇರಿ ಒಂದೊಂದು ಅಕ್ಷರಗಳಾಗಿವೆ. ಆದರೆ ಹೀಗೆ ಇಲ್ಲಿ ಸೇರಿರುವ ವ್ಯಂಜನಗಳು ಬೇರೆಬೇರೆ ಜಾತಿಯವು, ಎಂದರೆ ವಿಜಾತೀಯ ವ್ಯಂಜನಗಳು.
‘ಷ್ಟು’ ಎಂಬುದು ಷ್+ಟ್ ಎಂಬ ವ್ಯಂಜನಗಳಿಂದಲೂ, ‘ಕ್ತ’ ಎಂಬುದು ಕ್+ತ್ ಎಂಬ ವ್ಯಂಜನಗಳಿಂದಲೂ, ‘ಸ್ತ್ರೀ’ ಎಂಬುದು ಸ್+ತ್+ರ್ ಎಂಬ ವ್ಯಂಜನಗಳಿಂದಲೂ ಸೇರಿ ಆಗಿರುವ ಸಂಯುಕ್ತಾಕ್ಷರ (ಒತ್ತಕ್ಷರ)ವಾಗಿದೆ.
ಕನ್ನಡ ಒತ್ತಕ್ಷರದ ಪದಗಳು (ಅ to ಳ )-kannada ottaksharagalu:
Conclusion:
ಕನ್ನಡ (ಅ to ಳ ) ಅಕ್ಷರದ ಒತ್ತಕ್ಷರದ ಪದಗಳು ( Kannada ottaksharada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.