ಕಾಲಗಳು ಕನ್ನಡ ವ್ಯಾಕರಣ – Kaalagalu

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಕಾಲಗಳು (Kannada kaalagalu ) ಬಗ್ಗೆ ತಿಳಿದುಕೊಳ್ಳೋಣ.
ಕನ್ನಡ ವ್ಯಾಕರಣ ಮಹತ್ವ:
ಯಾವ ಭಾಷೆಯನ್ನಾದರೂ ಶುದ್ಧವಾಗಿ ಪ್ರಯೋಗ ಮಾಡಬೇಕಾದರೆ ಆ ಭಾಷೆಯ ವ್ಯಾಕರಣ ಪರಿಚಯ ಅತ್ಯಾವಶ್ಯಕ. ವ್ಯಾಕರಣ ಜ್ಞಾನವಿಲ್ಲದೆ ಭಾಷೆಯ ಅಧ್ಯಯನ ಪೂರ್ಣವಾಗದು. ಭಾಷೆಯ ಅಧ್ಯಯನದ ಆರಂಭದಲ್ಲಿ ಪ್ರಯೋಗಗಳ ಮೂಲಕ ವ್ಯಾಕರಣದ ಅರಿವನ್ನುಂಟುಮಾಡಿದರೂ ಮುಂದೆ ಸಕ್ರಮವಾಗಿ ವ್ಯಾಕರಣ ಶಾಸ್ತ್ರದ ಪರಿಚವನ್ನು ಮಾಡಿಸುವ ಅವಶ್ಯಕತೆಯಿದೆ.
ಕಾಲಗಳು ಎಂದರೇನು ?
ವರ್ತಮಾನ , ಭೂತ , ಮತ್ತು ಭವಿಷ್ಯತ್ ಕಾಲಗಳಲ್ಲಿ ಕಂಡುಬರುವ ಕ್ರಿಯೆಗಳ ಸನ್ನಿವೇಶಗಳನ್ನು ತಿಳಿಸುವ ರೂಪಗಳಿಗೆ ಕಾಲಗಳು ಎನ್ನಲಾಗಿದೆ.ಪ್ರತಿಯೊಂದು ಕಾಲಗಳಲ್ಲಿ ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿ ಕಾರ್ಯರೂಪಗಳಾಗುತ್ತವೆ.
ಕಾಲಗಳು :
- ವರ್ತಮಾನ ಕಾಲ.
- ಭೂತ ಕಾಲ.
- ಭವಿಷ್ಯತ್ ಕಾಲ
ವರ್ತಮಾನ ಕಾಲ:
ವರ್ತಮಾನ ಕಾಲದ ಕ್ರಿಯಾರೂಪ “ಕ್ರಿಯೆಯು ಈಗ ನಡೆಯುತ್ತಿದೆ ಎಂಬುದನ್ನು ಸೂಚುಸುವ ಕ್ರಿಯಾಪದವು ವರ್ತಮಾನ ಕಾಲದ ಕ್ರಿಯಾಪದವೆನಿಸುವುದು.” ವರ್ತಕಾಲದಲ್ಲಿ ಧಾತುವಿಗೂ , ಅಖ್ಯಾತ ಪ್ರತ್ಯಯಕ್ಕೂ ನಡುವೆ “ಉತ್ತ” ಎಂಬ ಕಾಲ ಸೂಚಕ ಪ್ರತ್ಯಯವೂ ಉರುವುದು.
ಉದಾಹರಣೆ : ಧಾತು + ಕಾ.ಸೂ + ಅಖ್ಯಾತ =ಕ್ರಿಯಾಪದ ಪ್ರತ್ಯಯ ಪ್ರತ್ಯಯ ಏ. ವಚನ ಬ. ವಚನ
- ಹೊಗು +ಉತ್ತ + ಆನೆ =ಹೋಗುತ್ತಾನೆ – ತ್ತಾರೆ
- ಹೊಗು + ಉತ್ತ + ಆಳೆ = ಹೋಗುತ್ತಾಳೆ – ತ್ತಾರೆ
- ಹೋಗು + ಉತ್ತ + ಆದೆ = ಹೋಗುತ್ತದೆ – ತ್ತವೆ
- ಹೋಗು +ಉತ್ತ + ಈಯ = ಹೋಗುತ್ತೀಯೆ – ತ್ತೀರಿ
- ಹೋಗು + ಉತ್ತ + ಏನೆ = ಹೋಗುತ್ತೇನೆ – ತ್ತೇವೆ
ಪುರುಷ ವಾಚಕ | ಲಿಂಗ | ಧಾತು | ಕಾಲ ಸೂಚಕ ಪ್ರತ್ಯಯ | ಆಖ್ಯಾತ ಪ್ರತ್ಯಯ ಏಕ/ಬಹು | ಏಕ ವಚನ | ಬಹು ವಚನ |
ಉತ್ತಮ ಪುರುಷ | ಪು /ಸ್ತ್ರೀ | ತಿನ್ನು | ಉತ್ತ | -ಏನೆ/ಏವೆ | ತಿನ್ನುತ್ತೇನೆ | ತಿನ್ನುತ್ತೇವೆ |
ಮಧ್ಯಮ ಪುರುಷ | ಪು /ಸ್ತ್ರೀ | ತಿನ್ನು | ಉತ್ತ | -ಇ / ಈರಿ | ತಿನ್ನುತ್ತಿ | ತಿನ್ನುತ್ತೀರಿ |
ಪ್ರಥಮ ಪುರುಷ | ಪುಲ್ಲಿಂಗ | ತಿನ್ನು | ಉತ್ತ | ಆನೆ / ಆರೆ | ತಿನ್ನುತ್ತಾನೆ | ತಿನ್ನುತ್ತಾರೆ |
ಪ್ರಥಮ ಪುರುಷ | ಸ್ತ್ರೀಲಿಂಗ | ತಿನ್ನು | ಉತ್ತ | ಆಳೆ / ಆರೆ | ತಿನ್ನುತ್ತಾಳೆ | ತಿನ್ನುತ್ತಾರೆ |
ಪ್ರಥಮ ಪುರುಷ | ನಪುಂಸಕ ಲಿಂಗ | ತಿನ್ನು | ಉತ್ತ | ಅದೆ/ ಅವೆ | ತಿನ್ನುತ್ತದೆ | ತಿನ್ನುತ್ತವೆ |
ಭೂತ ಕಾಲ :
ಭೂತ ಕಾಲ ಕ್ರಿಯಾರೂಪ ಕ್ರಿಯೆಯ ಹಿಂದೆ ನೆಡೆದಿದೆ ಎಂಬುದನ್ನು ಸೂಚಿಸುವುದೇ ಭೂತಕಾಲ- ಭೂತಕಾಲದಲ್ಲಿ ಧಾತುವಿಗೂ, ಅಖ್ಯಾತ ಪ್ರತ್ಯಯಗಳ ನಡುವೆ “ದ” ಎಂಬ ಕಾಲ ಸೂಚಕ.ಪ್ರತ್ಯಯವು ಬರುವುದು”
ಉದಾಹರಣೆ : ತಿಳಿ – ಇದು ಒಂದು ಧಾತು ಶಬ್ಧಧಾತು + ಕಾ . ಸೂ ಪ್ರ + ಅಖ್ಯಾತ ಪ್ರ = ಕ್ರಿಯಾಪದ ಏ. ವ ಬಹುವಚನ
- ತಿಳಿ + ದ + ಅನು = ತಿಳಿದನು ತಿಳಿದರು
- ತಿಳಿ + ದ + ಅಳು = ತಿಳಿದಳು ತಿಳಿದರು
- ತಿಳಿ + ದ + ಇತು = ತಿಳಿಯಿತು ತಿಳಿದವು
- ತಿಳಿ + ದ + ಎ = ತಿಳಿದೆ ತಿಳಿದಿರಿ
- ತಿಳಿ + ದ + ಎನು = ತಿಳಿದೆನು ತಿಳಿದೆವು
ಪುರುಷ ವಾಚಕ | ಲಿಂಗ | ಧಾತು | ಕಾಲ ಸೂಚಕ ಪ್ರತ್ಯಯ | ಆಖ್ಯಾತ ಪ್ರತ್ಯಯ ಏಕ/ಬಹು | ಏಕ ವಚನ | ಬಹು ವಚನ |
ಉತ್ತಮ ಪುರುಷ | ಪು /ಸ್ತ್ರೀ | ತಿನ್ನು | -ದ | -ಎನು / ಎವು | ತಿಂದೆನು | ತಿಂದೆವು |
ಮಧ್ಯಮ ಪುರುಷ | ಪು /ಸ್ತ್ರೀ | ತಿನ್ನು | -ದ | -ಎ/ಇರಿ | ತಿಂದೆ | ತಿoదిరి |
ಪ್ರಥಮ ಪುರುಷ | ಪುಲ್ಲಿಂಗ | ತಿನ್ನು | -ದ | -ಅನು/ಅರು | ತಿಂದನು | ತಿಂದರು |
ಪ್ರಥಮ ಪುರುಷ | ಸ್ತ್ರೀಲಿಂಗ | ತಿನ್ನು | -ದ | -ಅಳು/ಅರು | ತಿಂದಳು | ತಿಂದರು |
ಪ್ರಥಮ ಪುರುಷ | ನಪುಂಸಕ ಲಿಂಗ | ತಿನ್ನು | -ದ | ಉದು ಅವು/ಇತು | ತಿಂದುದು/ತಿಂದಿತು | ತಿಂದವು |
ಭವಿಷ್ಯತ್ ಕಾಲ :
ಭವಿಷ್ಯತ್ ಕಾಲದ ಕ್ರಿಯಾರೂಪ ಕ್ರಿಯೆಯು ಮುಂದೆ ನಡೆಯುವುದೆಂಬುದನ್ನು ಸೂಚಿಸುವುದೆ ಭವಿಷ್ಯತ್ ಕಾಲ .ಭವಿಷ್ಯತ್ ಕಾಲದಲ್ಲಿ ಧಾತುವಿಗೂ ಹಾಗೂ ಅಖ್ಯಾತ ಪ್ರತ್ಯಯಗಳ ನಡುವೆ “ವ” ಅಥವ “ಉವ” ಎಂಬ ಕಾಲಸೂಚಕ ಪ್ರತ್ಯಯಗಳು ಬರುವುದು.
ಉದಾಹರಣೆ : ಕೊಡು – ಇದು ಒಂದು ಧಾತು ಶಬ್ಧಧಾತು + ಕಾ .ಸೂ + ಅಖ್ಯಾತ = ಕ್ರಿಯಾಪದ ಪ್ರತ್ಯಯ ಪ್ರತ್ಯಯ ಏ.ವಚನ ಬಹುವಚನ
- ಕೊಡು + ವ + ಅನು = ಕೊಡುವನು ಕೊಡುವರು
- ಕೊಟು + ವ + ಅಳು = ಕೊಡುವಳು ಕೊಡುವರು
- ಕೊಡು + ವ + ಅದು = ಕೊಡುವುದು ಕಡುವುದು
- ಕೊಡು + ವ + ಎ = ಕೊಡುವೆ ಕೊಡುವಿರಿ
- ಕೊಡು + ವ + ಎನು = ಕೊಡುವೆನು ಕೊಡುವೆವು
ಪುರುಷ ವಾಚಕ | ಲಿಂಗ | ಧಾತು | ಕಾಲ ಸೂಚಕ ಪ್ರತ್ಯಯ | ಆಖ್ಯಾತ ಪ್ರತ್ಯಯ ಏಕ/ಬಹು | ಏಕ ವಚನ | ಬಹು ವಚನ |
ಉತ್ತಮ ಪುರುಷ | ಪು /ಸ್ತ್ರೀ | ತಿನ್ನು | -ವ | -ಎನು / ಎವು | ತಿನ್ನುವೆನು | ತಿನ್ನುವೆವು |
ಮಧ್ಯಮ ಪುರುಷ | ಪು /ಸ್ತ್ರೀ | ತಿನ್ನು | -ವ | -ಎ/ಇರಿ | ತಿನ್ನುವೆ | ತಿನ್ನುವಿರಿ |
ಪ್ರಥಮ ಪುರುಷ | ಪುಲ್ಲಿಂಗ | ತಿನ್ನು | -ವ | -ಅನು/ಅರು | ತಿನ್ನುವನು | ತಿನ್ನುವರು |
ಪ್ರಥಮ ಪುರುಷ | ಸ್ತ್ರೀಲಿಂಗ | ತಿನ್ನು | -ವ | -ಅಳು/ಅರು | ತಿನ್ನುವಳು | ತಿನ್ನುವರು |
ಪ್ರಥಮ ಪುರುಷ | ನಪುಂಸಕ ಲಿಂಗ | ತಿನ್ನು | -ವ | – ಉದು /ಉವು | ತಿನ್ನುವುದು | ತಿನ್ನುವುವು |
ಕಾಲಗಳು ಉದಾಹರಣೆ :
ವರ್ತಮಾನ ಕಾಲದ ಉದಾಹರಣೆಗಳು
ನಾನು ಪಾಠವನ್ನು ಓದುತ್ತೇನೆ.
ನಾವು ಪಾಠವನ್ನು ಓದುತ್ತೇವೆ.
ನೀನು ಪಾಠವನ್ನು ಓದುತ್ತಿಯಾ.
ನೀವು ಪಾಠವನ್ನು ಓದುತ್ತೀರಿ.
ಅವನು ಪಾಠವನ್ನು ಓದುತ್ತಾನೆ.
ಅವಳು ಪಾಠವನ್ನು ಓದುತ್ತಾಳೆ.
ಅದು ಪಾಠವನ್ನು ಓದುತ್ತದೆ.
ಅವರು ಪಾಠವನ್ನು ಓದುತ್ತಾರೆ.
ನಾನು ಹಾಡುತ್ತೇನೆ .
ನಾವು ಹಾಡುತ್ತೇವೆ.
ನೀನು ಹಾಡುತ್ತೀಯ.
ನೀವು ಹಾಡುತ್ತೀರಿ.
ಅವನು ಹಾಡುತ್ತಾನೆ.
ಅವಳು ಹಾಡುತ್ತಾಳೆ.
ಅದು ಹಾಡುತ್ತದೆ .
ಅವರು ಹಾಡುತ್ತಾರೆ.
ನಾನು ದುಡ್ಡು ಕೊಡುತ್ತೇನೆ.
ನಾವು ದುಡ್ಡು ಕೊಡುತ್ತೇವೆ.
ನೀನು ದುಡ್ಡು ಕೊಡುತ್ತೀಯ.
ನೀವು ದುಡ್ಡು ಕೊಡುತ್ತೀರಿ.
ಅವನು ದುಡ್ಡು ಕೊಡುತ್ತಾನೆ.
ಅವಳು ದುಡ್ಡು ಕೊಡುತ್ತಾಳೆ.
ಅದು ದುಡ್ಡು ಕೊಡುತ್ತದೆ.
ಅವರು ದುಡ್ಡು ಕೊಡುತ್ತಾರೆ.
ನಾನು ಊರಿನಿಂದ ಬರುತ್ತೇನೆ.
ನಾವು ಊರಿನಿಂದ ಬರುತ್ತೇವೆ.
ನೀನು ಊರಿನಿಂದ ಬರುತ್ತೀಯ.
ನೀವು ಊರಿನಿಂದ ಬರುತ್ತೀರಿ.
ಅವನು ಊರಿನಿಂದ ಬರುತ್ತಾನೆ.
ಅವಳು ಊರಿನಿಂದ ಬರುತ್ತಾಳೆ.
ಅದು ಊರಿನಿಂದ ಬರುತ್ತದೆ.
ಅವರು ಊರಿನಿಂದ ಬರುತ್ತಾರೆ.
ಭೂತ ಕಾಲದ ಉದಾಹರಣೆಗಳು
ನಾನು ಪಾಠವನ್ನು ಓದಿದೆನು.
ನಾವು ಪಾಠವನ್ನು ಓದಿದೆವು.
ನೀನು ಪಾಠವನ್ನು ಓದಿದ್ದೀಯಾ.
ನೀವು ಪಾಠವನ್ನು ಓದಿದ್ದೀರಿ.
ಅವನು ಪಾಠವನ್ನು ಓದಿದನು.
ಅವಳು ಪಾಠವನ್ನು ಓದಿದಳು.
ಅದು ಪಾಠವನ್ನು ಓದಿತು.
ಅವರು ಪಾಠವನ್ನು ಓದಿದರು.
ನಾನು ಹಾಡಿದೆನು.
ನಾವು ಹಾಡಿದೆವು.
ನೀನು ಹಾಡಿದ್ದೀಯ.
ನೀವು ಹಾಡಿದ್ದೀರಿ.
ಅವನು ಹಾಡಿದನು.
ಅವಳು ಹಾಡಿದಳು.
ಅದು ಹಾಡಿತು.
ಅವರು ಹಾಡಿದರು.
ನಾನು ದುಡ್ಡು ಕೊಟ್ಟಿದ್ದೇನು.
ನಾವು ದುಡ್ಡು ಕೊಟ್ಟಿದ್ದೇವು.
ನೀನು ದುಡ್ಡು ಕೊಟ್ಟಿದ್ದಿಯಾ.
ನೀವು ದುಡ್ಡು ಕೊಟ್ಟಿದ್ದೀರಾ.
ಅವನು ದುಡ್ಡು ಕೊಟ್ಟಿದ್ದಾನೆ.
ಅವಳು ದುಡ್ಡು ಕೊಟ್ಟಿದ್ದಾಳೆ.
ಅದು ದುಡ್ಡು ಕೊಟ್ಟಿದೆ.
ಅವರು ದುಡ್ಡು ಕೊಟ್ಟಿದ್ದಾರೆ.
ನಾನು ಊರಿನಿಂದ ಬಂದೆನು.
ನಾವು ಊರಿನಿಂದ ಬಂದೆವು.
ನೀನು ಊರಿನಿಂದ ಬಂದಿದ್ದೀಯಾ.
ನೀವು ಊರಿನಿಂದ ಬಂದಿದ್ದೀರಾ.
ಅವನು ಊರಿನಿಂದ ಬಂದಿದ್ದಾನೆ.
ಅವಳು ಊರಿನಿಂದ ಬಂದಿದ್ದಾಳೆ.
ಅದು ಊರಿನಿಂದ ಬಂದಿದೆ.
ಅವರು ಊರಿನಿಂದ ಬಂದಿದ್ದಾರೆ.
ಭವಿಷ್ಯತ್ ಕಾಲದ ಉದಾಹರಣೆಗಳು
ನಾನು ಪಾಠವನ್ನು ಓದುವೆನು.
ನಾವು ಪಾಠವನ್ನು ಓದುವೆವು.
ನೀನು ಪಾಠವನ್ನು ಓದುವಿ.
ನೀವು ಪಾಠವನ್ನು ಓದುವಿರಿ.
ಅವನು ಪಾಠವನ್ನು ಓದುವನು.
ಅವಳು ಪಾಠವನ್ನು ಓದುವಳು.
ಅದು ಪಾಠವನ್ನು ಓದುವುದು.
ಅವರು ಪಾಠವನ್ನು ಓದುವರು.
ನಾನು ಹಾಡುವೆನು.
ನಾವು ಹಾಡುವೆವು.
ನೀನು ಹಾಡುವೆ.
ನೀವು ಹಾಡುವಿರಿ.
ಅವನು ಹಾಡುವನು.
ಅವಳು ಹಾಡುವಳು.
ಅದು ಹಾಡುವುದು.
ಅವರು ಹಾಡುವರು.
ನಾನು ದುಡ್ಡು ಕೊಡುವೆನು.
ನಾವು ದುಡ್ಡು ಕೊಡುವೆವು.
ನೀನು ದುಡ್ಡು ಕೊಡುವೆ.
ನೀವು ದುಡ್ಡು ಕೊಡುವಿರಿ.
ಅವನು ದುಡ್ಡು ಕೊಡುವನು.
ಅವಳು ದುಡ್ಡು ಕೊಡುವಳು.
ಅದು ದುಡ್ಡು ಕೊಡುವುದು.
ಅವರು ದುಡ್ಡು ಕೊಡುವರು.
ನಾನು ಊರಿನಿಂದ ಬರುವೆನು.
ನಾವು ಊರಿನಿಂದ ಬರುವೆವು.
ನೀನು ಊರಿನಿಂದ ಬರುವೆ.
ನೀವು ಊರಿನಿಂದ ಬರುವಿರಿ.
ಅವನು ಊರಿನಿಂದ ಬರುವನು.
ಅವಳು ಊರಿನಿಂದ ಬರುವಳು.
ಅದು ಊರಿನಿಂದ ಬರುವುದು.
ಅವರು ಊರಿನಿಂದ ಬರುವರು.
ವರ್ತಮಾನ ಕಾಲದ ಉದಾಹರಣೆಗಳು :
ವರ್ತಮಾನ , ಭೂತ , ಮತ್ತು ಭವಿಷ್ಯತ್ ಕಾಲಗಳಲ್ಲಿ ಕಂಡುಬರುವ ಕ್ರಿಯೆಗಳ ಸನ್ನಿವೇಶಗಳನ್ನು ತಿಳಿಸುವ ರೂಪಗಳಿಗೆ ಕಾಲಗಳು ಎನ್ನಲಾಗಿದೆ.ಪ್ರತಿಯೊಂದು ಕಾಲಗಳಲ್ಲಿ ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿ ಕಾರ್ಯರೂಪಗಳಾಗುತ್ತವೆ
ಭೂತ ಕಾಲ ಕ್ರಿಯಾರೂಪ ಕ್ರಿಯೆಯ ಹಿಂದೆ ನೆಡೆದಿದೆ ಎಂಬುದನ್ನು ಸೂಚಿಸುವುದೇ ಭೂತಕಾಲ- ಭೂತಕಾಲದಲ್ಲಿ ಧಾತುವಿಗೂ, ಅಖ್ಯಾತ ಪ್ರತ್ಯಯಗಳ ನಡುವೆ “ದ” ಎಂಬ ಕಾಲ ಸೂಚಕ.ಪ್ರತ್ಯಯವು ಬರುವುದು
ವರ್ತಮಾನ ಕಾಲದ ಕ್ರಿಯಾರೂಪ “ಕ್ರಿಯೆಯು ಈಗ ನಡೆಯುತ್ತಿದೆ ಎಂಬುದನ್ನು ಸೂಚುಸುವ ಕ್ರಿಯಾಪದವು ವರ್ತಮಾನ ಕಾಲದ ಕ್ರಿಯಾಪದವೆನಿಸುವುದು.” ವರ್ತಕಾಲದಲ್ಲಿ ಧಾತುವಿಗೂ , ಅಖ್ಯಾತ ಪ್ರತ್ಯಯಕ್ಕೂ ನಡುವೆ “ಉತ್ತ” ಎಂಬ ಕಾಲ ಸೂಚಕ ಪ್ರತ್ಯಯವೂ ಉರುವುದು
ಭವಿಷ್ಯತ್ ಕಾಲದ ಕ್ರಿಯಾರೂಪ ಕ್ರಿಯೆಯು ಮುಂದೆ ನಡೆಯುವುದೆಂಬುದನ್ನು ಸೂಚಿಸುವುದೆ ಭವಿಷ್ಯತ್ ಕಾಲ .ಭವಿಷ್ಯತ್ ಕಾಲದಲ್ಲಿ ಧಾತುವಿಗೂ ಹಾಗೂ ಅಖ್ಯಾತ ಪ್ರತ್ಯಯಗಳ ನಡುವೆ “ವ” ಅಥವ “ಉವ” ಎಂಬ ಕಾಲಸೂಚಕ ಪ್ರತ್ಯಯಗಳು ಬರುವುದು.
ಕಾಲಗಳಲ್ಲಿ 3 ಎಷ್ಟು ವಿಧ
1. ವರ್ತಮಾನ ಕಾಲ.
2. ಭೂತ ಕಾಲ.
3. ಭವಿಷ್ಯತ್ ಕಾಲ
ಕಾಲಗಳಲ್ಲಿ 3 ಅವುಗಳೆಂದರೆ
1. ವರ್ತಮಾನ ಕಾಲ.
2. ಭೂತ ಕಾಲ.
3. ಭವಿಷ್ಯತ್ ಕಾಲ
ಚನ್ನಾಗಿದೆ