ಕನ್ನಡ ಅ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada a aksharada halegannadada padagalu , ಕನ್ನಡ ಅ ಅಕ್ಷರದ ಹಳೆಗನ್ನಡ ಪದಗಳು ( A halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಅ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( A halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಅ ಅಕ್ಷರ ಎಂದರೇನು?
ಅ ಕನ್ನಡ ವರ್ಣಮಾಲೆಯ ಮೊದಲ ಅಕ್ಷರವಾಗಿದೆ. ಅ ಕನ್ನಡದ ಸ್ವರಾಕ್ಷರ. ನಾಮಿ ಸ್ವರಗಳಲ್ಲಿ ಅ ಮತ್ತು ಆ ಸೇರುತ್ತವೆ. ಹಾಗಾಗಿ ಸವರ್ಣದೀರ್ಘ ಸಂಧಿಗಳಲ್ಲಿ ಅ ಅಕ್ಷರದ ಪಾತ್ರವೂ ಇದೆ. ಸಂಧಿಕಾರ್ಯ ಲೋಪಸಂಧಿಯಲ್ಲಿ ಅಕಾರ ಲೋಪಸಂಧಿ ಬರುತ್ತದೆ.
ಉದಾಹರಣೆಗೆ: ಅವನ+ಊರು=ಅವನೂರು ಎಂದಾಗುತ್ತದೆ. ಎಂದರೆ ಸಂಧಿ ಕಾರ್ಯದಲ್ಲಿ ಅ+ಊ=ಊ ಎಂದಾಗುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಅ ಅಕ್ಷರದ ಇತಿಹಾಸ :
ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರವಾದ ಅಕಾರದ ಅತ್ಯಂತ ಹಳೆಯ ರೂಪವನ್ನು ಪ್ರ. ಶ.ಪೂ. 3 ನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಬಹುದು. ಆ ಕಾಲದ ಬ್ರಾಹ್ಮೀಲಿಪಿಯಿಂದ ಅಕಾರವು ವಿಕಾಸಹೊಂದಿ ಇಂದಿನ ರೂಪವನ್ನು ತಾಳಿತೆಂಬುದನ್ನು ಗಮನಿಸಬೇಕು.
ಅಶೋಕನ ಬ್ರಾಹ್ಮೀಲಿಪಿಯಲ್ಲಿ ಇದು ಮೂರು ರೇಖೆಗಳಿಂದ ಕೂಡಿದ್ದು ಈಗಿನ ರೂಪಕ್ಕಿಂತ ಭಿನ್ನವಾಗಿ ಕಾಣುತ್ತದೆ. ಪ್ರ. ಶ . 2ನೇ ಶತಮಾನದ ಸಾತವಾಹನರ ಬ್ರಾಹ್ಮೀಲಿಪಿಯಲ್ಲಿ ಕಂಡುಬರುವ ಕೆಲವು ಬದಲಾವಣೆಗಳು ಗಮನಾರ್ಹ. ಅಕ್ಷರದ ಕೆಳತುದಿಗಳು ಬಾಗುತ್ತವೆ.
ಮೇಲ್ಭಾಗದಲ್ಲಿ ಕದಂಬ ತ್ರಿಕೋನಾಕಾರದ ತುದಿಗಳು ಕಾಣಬರುತ್ತವೆ. 5ನೆಯ ಶತಮಾನ ಪ್ರ. ಶ 5ನೆಯ ಶತಮಾನದ ಕದಂಬರ ಲಿಪಿಯಲ್ಲಿ ಚೌಕಾಕಾರದ ತಲೆಕಟ್ಟನ್ನು ಗಮನಿಸಬಹುದು. ಮುಂದಿನ ಶತಮಾನದ ಬಾದಾಮಿಚಾಳುಕ್ಯರ 6ನೆಯ ಶತಮಾನ ಶಾಸನಗಳಲ್ಲಿ ಇದು ಅಗಲವಾಗಿ ಈಗಿನ ರೂಪಕ್ಕೆ ದಾರಿಮಾಡಿಕೊಡುತ್ತದೆ.
ಪ್ರ. ಶ.9ನೆಯ ಶತಮಾನದ ರಾಷ್ರ್ಟಕೂಟರ ಶಾಸನಗಳಲ್ಲಿ ಪ್ರತ್ಯೇಕ ರೇಖೆಗಳು ಮಾಯವಾಗಿ ತುದಿಯಿಂದ ಕೊನೆಯವರೆಗೂ ವೃತ್ತಾಕಾರದ ಒಂದೇ ರೇಖೆಯು ಉಂಟಾಗುತ್ತದೆ.ಇದು ಈಗಿನ ರೂಪಕ್ಕೆ ಅತ್ಯಂತ ಸಮೀಪದ್ದಾಗಿ ಕಾಣುತ್ತದೆ. ಇದೇ ರೂಪ ಸ್ಥಿರಗೊಂಡು ಮುಂದಿನ ಶತಮಾನಗಳಲ್ಲಿ ಇನ್ನೂ ಗುಂಡಗಾಗಿ ಈಗಿನ ರೂಪವನ್ನು ಪ್ರ.ಶ 18ನೆಯ ಶತಮಾನದಲ್ಲಿ ತಾಳುತ್ತದೆ.
ಕನ್ನಡ ವರ್ಣಮಾಲೆಯ ಈ ಮೊದಲನೆಯ ಅಕ್ಷರ ಎರಡು ಹ್ರಸ್ವಸ್ವರಧ್ವನಿಗಳನ್ನು ಸೂಚಿಸುತ್ತದೆ. ಒಂದು, ಸಾಮಾನ್ಯವಾದ ವಿವೃತ ಮಧ್ಯ ಅಗೋಲ ಸ್ವರ; ಇನ್ನೊಂದು, ಕೆಲವರ ಉಚ್ಚಾರದಲ್ಲಿ ಕಂಡುಬರುವ ಮಧ್ಯ – ಮಧ್ಯ ಅಗೋಲ ಸ್ವರ.
ಇವು ಎರಡಕ್ಕೂ ಇರುವ ವ್ಯತ್ಯಾಸವನ್ನು ಅತ್ತೆ(ಅವಳು ನನ್ನ ಅತ್ತೆ’; ದುಃಖದಿಂದ ನಾನು ‘ಅತ್ತೆ’), ತಂದೆ (ಅವರು ನನ್ನ ‘ತಂದೆ’; ಅಂಗಡಿಯಿಂದ ‘ತಂದೆ’) ಮೊದಲಾದ ಪದಗಳ ಉಚ್ಚಾರದಲ್ಲಿ ಗಮನಿಸಬಹುದು.
ಅ ಅಕ್ಷರದ ಹಳೆಗನ್ನಡ ಪದಗಳು- Kannada Words
- ಅಂಕ – ಗುರುತು; ಪ್ರಸಿದ್ಧ; ತೊಡೆ; ಸನ್ನೆಕೋಲು; ಯುದ್ಧ
- ಅಂಕಂಗುಡು – ಓಡಲು ಕುದುರೆಗೆ ಸೂಚನೆ ಕೊಡು
- ಅಂಕಂಗೊಳ್ – ಅಂಕಂಗುಡು
- ಅಂಕಕಾರ್ತಿ – ಅಂಕಕಾತಿ, ವೀರನಾರಿ
- ಅಂಕಕಾ(ಗಾ) – ಅಂಕವೆಂಬ ದ್ವಂದ್ವಯುದ್ಧ ಮಾಡುವವನು; ವೃತ್ತಿ ವೀರ
- ಅಂಕಣಿ – ಸಂಜ್ಞೆ
- ಅಂಕತಳ- ತೊಡೆಯ ಮೇಲ್ಭಾಗ
- ಅಂಕತ್ರಿಣೇತ್ರ – ರುದ್ರನಂತೆ ಯುದ್ಧ ಮಾಡುವವನು
- ಅಂಕದಂಬು – ಹೆಸರುವಾಸಿಯಾದ ಬಾಣ
- ಅಂಕದೌಷಧ – ಬಳಮರ್ದು, ಪ್ರಸಿದ್ಧವಾದ ಔಷಧ
- ಅಂಕಮಾಲೆ – ಬಿರುದಾವಳಿ
- ಅಂಕವಣಿ(ಣೆ) – ಕುದುರೆಯ ರಿಕಾಪು; ರಣಹಲಗೆ
- ಅಂಕವಾತು – ಯುದ್ಧದ ಮಾತು
- ಅಂಕಿತ – ಕುದುರೆಯ ಓಟದ ಒಂದು ಬಗೆ; ಗುರುತು
- ಅಂಕಿಸು – ಅಧೀನ ಮಾಡಿಕೊ
- ಅಂಕು – ಸೊಟ್ಟಗಿರುವುದು; ಸೊಟ್ಟಾಗು
- ಅಂಕುರ – ಮೊಳಕೆ, ಚಿಗುರು; ರೋಮ; ರಕ್ತ
- ಅಂಕುರಿಸು – ಮೊಳಕೆಯೊಡೆ; ಉಂಟಾಗು; ನವಿರೇಳಿಸು
- ಅಂಕುಶ – ಆನೆಯನ್ನು ನಿಯಂತ್ರಿಸುವ ಆಯುಧ, ಸೃಣಿ
- ಅಂಕುಸ – ಅಂಕುಶ; ನಿಯಾಮಕ
- ಅಂಕುಶಚಾರಣ – ಅಂಕುಶದಿಂದ ಆನೆಯನ್ನು ನಡೆಸು
- ಅಂಕುಸವಿಡು – ಅಡ್ಡಿಮಾಡು
- ಅಂಕುಸಸಾರಣೆ – ಅಂಕುಶಚಾರಣ
- ಅಂಕೆಗೆಯ್ – ಗುರುತುಮಾಡು; ಲೇಪಿಸು
- ಅಂಕೆಗೊಳ್ – ಕೈವಶವಾಗು, ಹತೋಟಿಗೆ ಬರು
- ಅಂಗ – ಅವಯವ; ಪ್ರಕಾರ; ಯೋಗ್ಯ; ಒಂದು ದೇಶದ ಹೆಸರು; (ಜೈನ) ಜೈನಾಗಮದ ಒಂದು ವಿಭಾಗ
- ಅಂಗಂಬಡೆ – ಆಕಾರ ಧರಿಸು
- ಅಂಗಕಲ್ಪಕುಜ – (ಜೈನ) ಕೇಳಿದ್ದನ್ನು ಕೊಡುವ ಹತ್ತು ಬಗೆಯ ಕಲ್ಪವೃಕ್ಷಗಳು; ಮದ್ಯ, ಭೂಷಣ, ವಸ್ತ್ರ, ತೂರ್ಯ, ಮಾಲ್ಯ, ಗೃಹ, ಭಾಜನ, ಭೋಜನ, ದೀಪ, ಜ್ಯೋತಿ
- ಅಂಗಘಟನ – ಮೈಕಟ್ಟು
- ಅಂಗಚಿತ್ತ – ಪಾರಿತೋಷಕ
- ಅಂಗಜ – ಮನ್ಮಥ
- ಅಂಗಜನ್ಮ – ಅಂಗಜ
- ಅಂಗಜ ಮಹೀಷ – ಮನ್ಮಥ ರಾಜ
- ಅಂಗಜಾಗಮ – ಕಾಮಶಾಸ್ತ್ರ
- ಅಂಗಜಾತ – ಮನ್ಮಥ
- ಅಂಗಜಾವ – ಪಹರೆ; ಸರದಿ ಕಾವಲು
- ಅಂಗಡಿ – ವ್ಯಾಪಾರದ ಸ್ಥಳ
- ಅಂಗಡಿಯಲವಡ – ಅಂಗಡಿಬೀದಿಯಲ್ಲಿ ಅಲೆಯುವವನು
- ಅಂಗಡಿಸೂ¾õÉ – ಅಂಗಡಿಯನ್ನು ಸೂರೆಮಾಡುವುದು
- ಅಂಗಣ – ಅಂಗಳ, ಮನೆಗೆ ಸೇರಿದ ಬಯಲು
- ಅಂಗಣವಲಯ – ಅಂಗಳದ ಸುತ್ತು, ಆವರಣ
- ಅಂಗಣವಾವಿ – ಅಂಗಣದಲ್ಲಿನ ಬಾವಿ
- ಅಂಗಣವೆಟ್ಟು – ಅಂಗಳದಲ್ಲಿನ ಆಟದ ಬೆಟ್ಟ
- ಅಂಗದ – ಭುಜಕೀರ್ತಿ; ತೋಳುಬಳೆ
- ಅಂಗಪತಿ – ಅಂಗರಾಜ್ಯದ ಒಡೆಯ, ಕರ್ಣ
- ಅಂಗಯಷ್ಟಿ – ಯಷ್ಟಿ(ಹಾರ)ಯಂತೆ ತೆಳ್ಳಗಿರುವ ದೇಹ
- ಅಂಗಯ್ಸು – ಘೋಷಿಸು; ಒಪ್ಪುವಂತೆ ಮಾಡು
- ಅಂಗರ – ಕೆಂಡ
- ಅಂಗರಕ್ಕೆ – (ಅಂಗರಕ್ಷಾ) ಮೈಗಾವಲ ಭಟ; ಮೈಯ ರಕ್ಷಣೆಯ ವಸ್ತು; ಕವಚ
- ಅಂಗರವೋಳಿಗೆ – (ಅಂಗಾರಸ್ಫೋಟಿಕೆ) ಕೆಂಡದ ಮೇಲೆ ಸುಟ್ಟ ರೊಟ್ಟಿ
- ಅಂಗರಾಗ – ಮೈಗೆ ಹಚ್ಚಿಕೊಳ್ಳುವ ಪರಿಮಳದ್ರವ್ಯ
- ಅಂಗಹಾರ – ನೃತ್ಯ, ನಟನೆ
- ಅಂಗಾರ – ಕೆಂಡ
- ಅಂಗಾಲ್(ಲು) – ಕಾಲ ಅಡಿ, ಪಾದದ ಕೆಳಭಾಗ
- ಅಂಗಿ – ಅಂಗಗಳುಳ್ಳುದು, ದೇಹ; ಶರೀರ
- ಅಂಗಿ(ಕೆ)ಗೆ – ಅಂಗಿ, ಕವಚ
- ಅಂಗೀಕರಿಸು – ತನ್ನದಾಗಿ ಮಾಡಿಕೊ
- ಅಂಗುಟ – ಕಾಲಿನ ಹೆಬ್ಬೆರಳು
- ಅಂಗುಲಿಕ್ರಿಯೆ – ಬೆರಳಿನಿಂದ ಮಾಡುವ ಕೆಲಸ
- ಅಂಗುಲಿತ್ರಾಣ – ಬಿಲ್ಲಾಳು ಬೆರಳಿಗೆ ಕಟ್ಟುವ ರಕ್ಷೆ
- ಅಂಗುಲಿಪ್ರಹರಣ – ಬೆರಳಿಂದ ಹೊಡೆಯುವುದು
- ಅಂಗುಲಿ(ೀಯ)(ಕ) – ಉಂಗುರ
- ಅಂಗುಳ್ – ಕಿರುನಾಲಗೆಯ ಪ್ರದೇಶ
- ಅಂಗೆಯ್ – ಅಂಗೈ, ಕರತಲ
- ಅಂಗೋದ್ಭೂತ – ಮನ್ಮಥ
- ಅಂಘ್ರಿಪ – ಮರ
- ಅಂಚಲ(ಳ) – ಅಂಚು, ಸೆರಗು
- ಅಂಚಿತ – ಅಲಂಕೃತ
- ಅಂಚಿರ – ಅಸ್ಥಿರ, ಚಂಚಲ
- ಅಂಚೆ – ವಸ್ತ್ರ; ಹಂಸ; ಕೊನೆಯ ಭಾಗ
- ಅಂಚೆದೇರ – ಹಂಸವಾಹನ, ಬ್ರಹ್ಮ
- ಅಂಚೆವ¾Â – ಹಂಸದ ಮರಿ
- ಅಂಚೆವಾಳತಿ – ಬಾಣಂತಿ ಹಂಸ
- ಅಂಚೆವಿಂಡು – ಹಂಸದ ಹಿಂಡು
- ಅಂಜನ – ಕಾಡಿಗೆ; ಲೇಪನ
- ಅಂಜನಚೋರ – ಅಂಜನ ಹಚ್ಚಿಕೊಂಡು ಕಳ್ಳತನ ಮಾಡುವವನು
- ಅಂಜನದಿಕ್ – ಪಶ್ಚಿಮ
- ಅಂಜನವಣ್ಣ – ಕಾಡಿಗೆಯ ಬಣ್ಣ; ಕಪ್ಪು ಬಣ್ಣ
- ಅಂಜನಸಿದ್ಧ – ಅಂಜನ ಹಚ್ಚಿಕೊಂಡು ಅದ್ಭುತ ಕೆಲಸ ಮಾಡುವವನು
- ಅಂಜನಿಸು – ತಿರಸ್ಕರಿಸು
- ಅಂಜನೆ – ಹನುಮಂತನ ತಾಯಿ; (ಜೈನ) ಒಂದು ನರಕದ ಹೆಸರು
- ಅಂಜಮೆ – ಅಂಜಿಕೆ
- ಅಂಜಮೆಗುಡು – ಹೆದರಿಕೆಯನ್ನು ಹೋಗಲಾಡಿಸು
- ಅಂಜಲಿ – ಬೊಗಸೆ
- ಅಂಜಿಕೆ – ಹೆದರಿಕೆ
- ಅಂಜಿಸು – ಹೆದರಿಸು
- ಅಂಜು – ಹೆದರು, ಭಯಪಡು
- ಅಂಜುಳಿ – (ಅಂಜಲಿ) ಬೊಗಸೆ
- ಅಂಟಿಸುಂಟಿ – ಒಂದು ಬೈಗುಳ
- ಅಂಟಿಸು – ಸೇರಿಸು
- ಅಂಟು – ಮುಟ್ಟು; ಜತೆಗೂಡು
- ಅಂಟುಗೊಳ್ – ಅಂಟಿಕೊ; ನಾಟು
- ಅಂಡಜ – ಮೊಟ್ಟೆಯಿಂದ ಹುಟ್ಟಿದ್ದು, ಹಕ್ಕಿ
- ಅಂಡಲೆ – ಪೀಡಿಸು; ಆಸನ್ನಪೀಡನ; ಕೋಟಲೆ
- ಅಂಡಲೆವಡೆ – ತೊಂದರೆಗೆ ಗುರಿಯಾಗು
- ಅಂಡುಗೊಳ್ – ಹತ್ತಿರ ಹೋಗು; ಆಶ್ರಯಿಸು
- ಅಂತಂಬರಂ – ಅಂತಂ+ವರಂ, ಕೊನೆಯವರೆಗೆ
- ಅಂತಃಕಳಂಕ – ಒಳಗಿನ ಕಳಂಕ
- ಅಂತಃಕ್ರಿಯೆ – ಒಳಗಿನ ಕೆಲಸ
- ಅಂತಃಪಾತಿ – ಒಳಗೆ ಬೀಳುವ
- ಅಂತಃಸ್ಫಾರಿತ – ಒಳಗೇ ವಿಕಾಸಗೊಂಡ
- ಅಂತಕ – ಯಮ
- ಅಂತಕವೈರಿ – ಯಮನ ಶತ್ರು, ಶಿವ
- ಅಂತಪ್ಪ – ಅಂತಹ; ಹಾಗಿರುವ
- ಅಂತರ – ವ್ಯತ್ಯಾಸ, ಭೇದ; ನಡುವಣ ರಂಧ್ರ;
- ಮೇರೆ, ಎಲ್ಲೆ; (ಜೈನ) ಮುಕ್ತಿಗೆ ಯಾರೂ ಸಲ್ಲದ ಕಾಲ
- ಅಂತರಂಗ – ಮನಸ್ಸು
- ಅಂತರಂಗುಡು – ಗುಟ್ಟು ತಿಳಿಸು
- ಅಂತರಸ್ಥ – ಒಳಗಿರುವ
- ಅಂತರಾಂತರ – ನಡುನಡುವೆ
- ಅಂತರಾಯ – ಅಡ್ಡಿ
- ಅಂತರಾಯಪಂಚಕ – (ಜೈನ) ದಾನಾಂತರಾಯ, ಲಾಭಾಂತಋಯ, ಭೋಗಾಂತರಾಯ. ಉಪಭೋಗಾಂತರಾಯ, ವೀರ್ಯಾಂತರಾಯ ಎಂಬ ಐದು ವಿಘ್ನಗಳು
- ಅಂತರಾಳ – ಒಳಭಾಗ
- ಅಂತರಿಕ್ಷ – ಆಕಾಶ
- ಅಂತರಿತ – ಬೇರ್ಪಡಿಸಲ್ಪಟ್ಟ
- ಅಂತರಿತೆ – ದೂರಗೊಂಡವಳು
- ಅಂತರಿಸು – ತಡಮಾಡು
- ಅಂತರೀಪ – ದ್ವೀಪ, ನಡುಗಡ್ಡೆ
- ಅಂತರೀಯ – ಉಡುಪು, ಸೊಂಟದ ಕೆಳಗೆ ಉಡುವ ವಸ್ತ್ರ
- ಅಂತರ್ಗತ – ಒಳಕ್ಕೆ ಹೋದ
- ಅಂತರ್ಗತಭೇದ – ಒಳಗಣ ವ್ಯತ್ಯಾಸ
- ಅಂತರ್ಗತಸ್ವನ – ಒಳಗೇ ಹುದುಗಿದ ಧ್ವನಿ
- ಅಂತಜ್ರ್ಯೋತಿ – ಒಳಗಿನ ಬೆಳಕು
- ಅಂತರ್ದೃಷ್ಟಿ – ತನ್ನ ಒಳಗನ್ನು ಪರಿಶೀಲಿಸಿಕೊಳ್ಳುವ ದೃಷ್ಟಿ
- ಅಂತದ್ರ್ವೀಪ – ದ್ವೀಪದ ಒಳಭಾಗ
- ಅಂತರ್ಧಿ – ಅಡಗಿಕೊಳ್ಳುವುದು, ಅಂತರ್ಧಾನ
- ಅಂತರ್ಬಹಿರೂಪ – ಒಳಗಿನ ಮತ್ತು ಹೊರಗಿನ ಆಕಾರ
- ಅಂತರ್ಭೇದ – ಒಳಗಿನ ಭೇದ; ಭಿನ್ನಾಭಿಪ್ರಾಯ; ಅಂತಃಕಲಹ
- ಅಂತಭ್ರ್ರಮ – ತೊಳಲಾಟ
- ಅಂತರ್ಮಂಡಲಸಾಧನ – ಒಳದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯ
- ಅಂತರ್ಮಲ – ಒಳಗಿನ ಕೊಳೆ
- ಅಂತರ್ಮಲಿನ – ಒಳಗೆ ಕಲ್ಮಶವುಳ್ಳ
- ಅಂತರ್ಮುಖ – ಒಳಮುಖವಾದ ಮನಸ್ಸು
- ಅಂತರ್ಮುಖತೆ – ಆತ್ಮಚಿಂತನೆ ಮಾಡುವುದು
- ಅಂತರ್ಮುಹೂರ್ತ – (ಜೈನ) ಒಂದು
- ಮುಹೂರ್ತಕ್ಕಿಂತ ಕಡಿಮೆಯಾದ ಕಾಲ
- ಅಂತರ್ಲೀನ – ಒಳಗೆ ಲೀನವಾದ
- ಅತರ್ಲೇಪ – ಅಂತರಂಗಕ್ಕೆ ಅಂಟಿಕೊಂಡಿರುವುದು
- ಅಂತರ್ವಂಶಿಕ – ಬಂಧುಜನ; ರಾಣಿವಾಸದ ಮೇಲ್ವಿಚಾರಕ
- ಅಂತರ್ವಣ – ಕಾಡಿನ ಮಧ್ಯದಲ್ಲಿರುವ
- ಅಂತರ್ವತ್ನಿ – ಬಸುರಿ ಹೆಂಗಸು
- ಅಂತರ್ವರ್ತಿ – ಒಳಗೆ ನೆಲಸಿರುವ
- ಅಂತರ್ವಂಶಿಕ – ಬಂಧುಜನ
- ಅಂತರ್ವಾಂಶಿಕ – ವ್ಯಾಯಾಮಶಾಲೆಯ ಮುಖ್ಯಸ್ಥ
- ಅಂತವಾಸ – ಊರಿನ ಹತ್ತಿರದ ಶಿಬಿರ
- ಅಂತವುರ – ಆಂತಃಪುರ
- ಅಂತಶ್ಶೂನ್ಯ – ಮನಸ್ಸು ಶೂನ್ಯವಾಗಿರುವ
- ಅಂತಸ್ತಮಃಪಟ – ಒಳಗಿನ ಕತ್ತಲೆಯ ತೆರೆ
- ಅಂತಿಕ – ಸಮೀಪ, ನೆರೆಹೊರೆ
- ಅಂತಿರೆ – ಆ ಪ್ರಕಾರವಾಗಿ
- ಅಂತು – ಹಾಗೆ; ಅಲ್ಲದೆ; ಕೊನೆ
- ಅಂತುಟು – ಅಷ್ಟು; ಹಾಗೆ
- ಅಂತೆ – ಹಾಗೆ, ಆ ರೀತಿಯಲ್ಲಿ
- ಅಂತೆಗೆಯ್ – ಹಾಗೆ ಮಾಡು
- ಅಂತೆವೋಲ್ – ಹಾಗೆ
- ಅಂತೇವಾಸಿ – ಶಿಷ್ಯ; ಚಂಡಾಲ
- ಅಂತ್ಯೇಷ್ಟಿ – ಉತ್ತರಕ್ರಿಯೆ
- ಅಂತ್ರ – ಕರುಳು
- ಅಂದ – ಚೆಲುವು; ರೀತಿ
- ಅಂದಂಗೊಳಿಸು – ಅಂದವಾಗಿ ಕಾಣುವಂತೆ ಮಾಡು
- ಅಂದಂಬಡೆ – ಸುಂದರವಾಗು
- ಅಂದಂಬೆ¾ು – ಅಂದಂಬಡೆ
- ಅಂದಣ – ಕಣ್ಣಿನ ಪೊರೆ
- ಅಂದಳ(ಣ) – ಪಲ್ಲಕ್ಕಿ, ಮೇನೆ
- ಅಂದಳಸತ್ತಿಗೆ – ಪಲ್ಲಕ್ಕಿ ಮತ್ತು ಛತ್ರಿ
- ಅಂದು – ಆ ಸಂದರ್ಭದಲ್ಲಿ
- ಅಂದುಗೆ – ಅಂದಿಗೆ, ನೂಪುರ; ಕಾಲ್ಗಡಗ
- ಅಂಧಕದ್ವಿಷ – ಅಂಧಕನ ಶತ್ರು, ಈಶ್ವರ
- ಅಂಧತಮಸ – ದಟ್ಟ ಕತ್ತಲೆ
- ಅಂಧಪಾಷಾಣ – ಲೋಹಾಂಶರಹಿತ ಶಿಲೆ
- ಅಂಧಯಷ್ಟಿ – ಕುರುಡನ ಊರೆಗೋಲು
- ಅಂಧರಾಣ್ನಂದನ – (ಅಂಧರಾಜ್+ನಂದನ) ಅಂಧನ ಮಗ, ದುರ್ಯೋಧನ
- ಅಂಧಲಾವುಕನ್ಯಾಯ – ಕುರುಡನಿಗೆ ಲಾವಿಗೆ ಸಿಕ್ಕಿದಂತಹ ಆಕಸ್ಮಿಕ ಘಟನೆ
- ಅಂಬಕ – ಕಣ್ಣು
- ಅಂಬರ – ಆಕಾಶ
- ಅಂಬರಧುನಿ – ಆಖಾಶಗಂಗೆ
- ಅಂಬರಮಣಿ – ಸೂರ್ಯ
- ಅಂಬರಶಿರೋರುಹ – ವ್ಯೋಮಕೇಶ, ಶಿವ
- ಅಂಬರಾಂಬರವಿಲಾಸ – ದಿಗಂಬರ ಸನ್ಯಾಸ
- ಅಂಬಲಿ – ಹಿಟ್ಟಿನಿಂದ ಮಾಡಿದ ಗಂಜಿ
- ಅಂಬರೀಷ – ಬಾಂಡಲಿ
- ಅಂಬಳಿಕ್ಕು – ಅಂಬೆಗಾಲಿಡು
- ಅಂಬಾಚರಿ – (ಜೈನ) ಹಿಂದಿನ ಜನ್ಮದಲ್ಲಿ ಒಬ್ಬ ವ್ಯಕ್ತಿಯ ತಾಯಾಗಿದ್ದು, ಈಗ ಬೇರೊಂದು ಪ್ರಾಣಿಯಾಗಿ ಹುಟ್ಟಿರುವ ಹೆಣ್ಣುಜೀವಿ
- ಅಂಬಿಗ – ಬೆಸ್ತ; ದೋಣಿ ನಡೆಸುವವನು
- ಅಂಬಿಯ – ಅಂಬಿಗ
- ಅಂಬಿರಿವಿಟ್ಟು ಪಾಯ್ – ಪ್ರವಾಹವಾಗಿ ಹರಿ
- ಅಂಬಿರಿವಿಡು – ಧಾರೆಯಾಗಿ ಸುರಿ
- ಅಂಬು – ನೀರು; ಬಾಣ; ಒಣಗು
- ಅಂಬುಕುಕ್ಕುಟ – ನೀರ್ಕೋಳಿ
- ಅಂಬುಖಾತಿಕೆ – ನೀರು ತುಂಬಿದ ಕಂದಕ
- ಅಂಬುಗಂ(ಕಂ)ಡಿ – ಶತ್ರುಗಳಿಗೆ ಕಾಣದಂತೆ ಕೋಟೆಯ ಮೇಲಿಂದ ಬಾಣ ಬಿಡುವ ಕಂಡಿ
- ಅಂಬುಗಾಣಿಸು – ಬಾಣಕ್ಕೆ ಗುರಿಮಾಡು
- ಅಂಬುಚರ – ಮೀನು
- ಅಂಬುಜಮಿತ್ರಜೆ – ಯಮುನಾ ನದಿ
- ಅಂಬುಜವಿಷ್ಟರ – ಬ್ರಹ್ಮ
- ಅಂಬುಣ್ – ನೀರ ಹುಣ್ಣು
- ಅಂಬುದ – ಮೋಡ
- ಅಂಬುದಧ್ವನಿ – ಮೋಡದ ಸದ್ದು, ಗುಡುಗು
- ಅಂಬುದನಿನದ – ಅಂಬುದಧ್ವನಿ
- ಅಂಬುದನಿವಹ – ಮೋಡಗಳ ಸಮೂಹ
- ಅಂಬುದಫಲ – ಆಲಿಕಲ್ಲು
- ಅಂಬುದಮಾರ್ಗ – ಮೋಡಗಳ ದಾರಿ, ಆಕಾಸ
- ಅಂಬುದರಥ – ಮೋಡವನ್ನು ರಥವಾಗಿ ಉಳ್ಳವನು, ಇಂದ್ರ
- ಅಂಬುದರವ – ಗುಡುಗು
- ಅಂಬುದರ್ತು – (ಅಂಬುದ+ಋತು) ಮಳೆಗಾಲ
- ಅಂಬುದಸಮಯ – ಅಂಬುದರ್ತು
- ಅಂಬುದಾಗಮ – ಮೋಡಗಳು ಆಗಮಿಸುವ ಕಾಲ, ಮಳೆಗಾಲ
- ಅಂಬುದಾಭ – ಮೋಡಕ್ಕೆ ಸಮನಾದ
- ಅಂಬುದುಡು – ಬಾಣ ಹೂಡು
- ಅಂಬುಧರ – ಮೋಡ
- ಅಂಬುಧರಕಾಲ – ಮಳೆಗಾಲ
- ಅಂಬುಪಾಯಿ – ನೀರನ್ನು ಕುಡಿಯುವ
- ಅಂಬುರುಟ್ಪೀಕ – ಕಮಲದ ಪೀಠ
- ಅಂಬುರುಹ – ನೀÂರಿನಲ್ಲಿ ಹುಟ್ಟಿದ್ದು, ಕಮಲ
- ಅಂಬುರುಹಗರ್ಭ – ಬ್ರಹ್ಮ
- ಅಂಬುರುಹಸಖ – ಸೂರ್ಯ
- ಅಂಬುರುಹೇಕ್ಷಣೆ – ಕಮಲನಯನೆ
- ಅಂಬುವೀಡು – ಬಾಣಪ್ರಯೋಗ; ಬಾಣ ಹೋಗುವಷ್ಟು ದೂರ
- ಅಂಬುವೀಡಿನೆಡೆ – ಒಂದು ಬಾಣ ಹೋಗುವಷ್ಟು ದೂರ
- ಅಂಬೂದ್ಭೂತ – ಅಂಬುಜ, ಕಮಲ
- ಅಂಬೆಗಲಿಸು – ಅಂಬೆಗಾಲಿಡು
- ಅಂಬೇ¾ು – ಬಾಣದ ಹೊಡೆತ
- ಅಂಬೋಧಕಾಲ – ಮಳೆಗಾಲ
- ಅಂಭಃ – ನೀರು
- ಅಂಭಃಕಣ – ನೀರಿನ ಹನಿ
- ಅಂಭಃಕರಿ – ನೀರಾನೆ
- ಅಂಭಃಕುಂಭಿ(ೀನ) – ನೀರಾನೆ
- ಅಂಭಃಪೂರ – ನೀರಿನ ಪ್ರವಾಹ
- ಅಂಭಃಪ್ಲವ – ಅಂಭಃಪೂರ
- ಅಂಭಶ್ಚರ – ಮೊಸಳೆ
- ಅಂಭೋಜಷಂಡ – ಕಮಲದ ಗುಂಪು; ಕೊಳ
- ಅಂಭೋದಕಾಲ – ಮಳೆಗಾಲ
- ಅಂಭೋದಪಥ – ಆಕಾಶ
- ಅಂಭೋದಸ್ವನ – ಗುಡುಗು
- ಅಂಭೋದಾಧ್ವ – ಆಕಾಶ
- ಅಂಭೋಧಿಪಥ – ಸಮುದ್ರಮಾರ್ಗ
- ಅಂಭೋನಿ(ಧಿ) – ಸಮುದ್ರ
- ಅಂಭೋರಾಶಿ – ಸಮುದ್ರ
- ಅಂಭೋರುಹ – ಕಮಲ
- ಅಂಭೋಲವ – ನೀರನ ಕಣ
- ಅಂಶ – ಭಾಗ
- ಅಂಶಜ – (ದೇವತೆಯ) ಅಂಶದಿಂದ ಹುಟ್ಟಿದವನು
- ಅಂಶಪುರುಷ – ದೇವಾಂಶಸಂಭೂತ
- ಅಂಶು – ಕಿರಣ; ಮೊನೆ; ತುದಿ; ಅಲಂಕಾರ; ಉಡುಪು;ವೇಗ
- ಅಂಶುಕ – ಬಿಳಿಯ ಬಟ್ಟೆ; ಎಲೆ; ಕಿರಣ
- ಅಂಶುಧರ – ಸೂರ್ಯ
- ಅಂಶುಪತಿ – ಸೂರ್ಯ
- ಅಂಶುಮತ್ತನಯ – ಸೂರ್ಯನ ಮಗ, ಕರ್ಣ
- ಅಂಶುಮಾಲಿ – ಅಂಶುಧರ
- ಅಂಶುಶೂತ – ತಂಪಾದ ಕಿರಣ
- ಅಂಸ – ಹೆಗಲು, ಭುಜ, ಶಿರಸ್ಸು
- ಅಂಹಃ – ಪಾಪ; ಕೊರತೆ; ಕಷ್ಟ
- ಅಕಂಪಿತಶರೀರ – ನಡುಗದ ಮೈಯುಳ್ಳ
- ಅಕರ್ಣಹೃದಯ – ಕಿವಿ ಮತ್ತು ಹೃದಯಗಳಿಲ್ಲದ; ಹಾವಿನ ಹೃದಯವುಳ್ಳ
- ಅಕರ್ತೃಕ – ಕರ್ತೃವಿಲ್ಲದ, ಸೃಷ್ಟಿಸಿದವನಿಲ್ಲದ
- ಅಕರಣ – ಗಣಕ, ಲೆಕ್ಕಪತ್ರದ ಅಧಿಕಾರಿ
- ಅಕಾಂಡ – ಅಕಾಲ
- ಅಕಾಂಡಜಳದ – ಅನಿರೀಕ್ಷಿತ ಮೋಡ
- ಅಕಾಂಡತಾಂಡವ – ಪಾಂಡಿತ್ಯದ ಅನವಶ್ಯಕ ಪ್ರದರ್ಶನ
- ಅಕಾಮಿಕ – ಇಚ್ಛೆಯಿಲ್ಲದ ವ್ಯಕ್ತಿ
- ಅಕಾರಣಂ – ಕಾರಣವಿಲ್ಲದೆ
- ಅಕಿಂಚನ – ಬಡವ
- ಅಕಿಂಚಿತ್ಕರ – ಏನನ್ನೂ ಮಾಡದ
- ಅಕೀರ್ತಿ – ಕೆಟ್ಟ ಹೆಸರು
- ಅಕುಂಠತರ – ಅತ್ಯಧಿಕವಾದ
- ಅಕುಲ – ಹೀನವಂಶ
- ಅಕುಲೀನೆ – ಹೀನಕುಲದಲ್ಲಿ ಜನಿಸಿದವಳು
- ಅಕೂಪಾ(ಬಾ)ರ – ಸಮುದ್ರ; ದೊಡ್ಡ ಆಮೆ; ಸೂರ್ಯ; ಬಂಡೆ
- ಅಕೃತಕ – ಸಹಜ
- ಅಕೃತ್ಯ – ಕೆಟ್ಟ ಕೆಲಸ
- ಅಕೃಷ್ಟಪಚ್ಯ – ಬೇಸಾಯವಿಲ್ಲದೆ ಬೆಳೆ
- ಕೊಡುವ ಭೂಮಿ
- ಅಕೃಷ್ಟಕರ್ಮ – ಕಳಂಕವಿಲ್ಲದ ಕೆಲಸ; ಕೆಟ್ಟ
- ಕೆಲಸವನ್ನು ಮಾಡದವನು
- ಅಕ್ಕ – ಹಿರಿಯ ಸಹೋದರಿ; ಒಂದು ಮರ
- ಅಕ್ಕಜ – ಬೆರಗು, ವಿಸ್ಮಯ; ಪ್ರೀತಿ
- ಅಕ್ಕಜಂಬೊರೆ – ಆಶ್ಚರ್ಯದಿಂದ ಕೂಡು
- ಅಕ್ಕಟಿಕೆ – ಉತ್ಕಟವಾದ ಆಸೆ
- ಅಕ್ಕರ – ವಿದ್ಯೆ; ಬರವಣಿಗೆ
- ಅಕ್ಕರಗೊಟ್ಟಿ – ವಿದ್ವಾಂಸರ ಮೇಳ
- ಅಕ್ಕರಜಾಣ – ವಿದ್ವಾಂಸ
- ಅಕ್ಕರಿಗ – ವಿದ್ವಾಂಸ; ಸಾಕ್ಷರ
- ಅಕ್ಕಸಾಲೆ – ಚಿನ್ನ ಬೆಳ್ಳಿ ಕೆಲಸ ಮಾಡುವವನು
- ಅಕ್ಕ¾ುಗಂಪು – ಹಿತಕರವಾದ ಸುಗಂಧ
- ಅಕ್ಕಿಸು – ಜೀರ್ಣಿಸು
- ಅಕ್ಕು – ಲಾಭ; ಸಂಪತ್ತು
- ಅಕ್ಕುಳಿಸು – ಒಳಕ್ಕೆ ಎಳೆದುಕೊ
- ಅಕ್ಕೆ – ಅ¿õÉ್ಕ, ದುಃಖ
- ಅಕ್ಕು(ಲಿ)ಳಿಸು – ಹೊಟ್ಟೆಯನ್ನು ಕುಗ್ಗಿಸು; ಹೆದರು
- ಅಕ್ಖಡ – ಕುಸ್ತಿ ಮಾಡುವ ಸ್ಥಳ, ಅಖಾಡ
- ಅಕ್ಷ – ಪಗಡೆ ಆಟದ ದಾಳ; ರಥದ ಅಚ್ಚು;
- ಜೂಜು; ರಥ; ಜಪಮಣಿ; ಇಂದ್ರಿಯ
- ಅಕ್ಷಕ್ರೀಡೆ – ಪಗಡೆ ಆಟ
- ಅಕ್ಷಜ – ಸಿಡಿಲು; ವಜ್ರ; ವಿಷ್ಣು
- ಅಕ್ಷತ – ಕೊರತೆಯಿಲ್ಲದ
- ಅಕ್ಷತರೂಸಂಪನ್ನೆ – ಕುಂದಿಲ್ಲದ ರೂಪವಂತೆ
- ಅಕ್ಷದ್ಯೂತಕೇಳಿ – ಪಗಡೆ ಜೂಜಿನಾಟ
- ಅಕ್ಷಧೂರ್ತ – ಜೂಜಿನಲ್ಲಿ ಮೋಸಮಾಡುವವನು
- ಅಕ್ಷಫಲ – ತಾರೆಯ ಕಾಯಿ
- ಅಕ್ಷಮ – ಕ್ಷಮೆಯಿಲ್ಲದ; ಅಸಮರ್ಥ
- ಅಕ್ಷಮಣಿ – ಜಪಸರದ ಮಣಿ
- ಅಕ್ಷಮಾಲಿಕೆ – ಜಪಸರ
- ಅಕ್ಷಮಾಲೆ – ಜಪಸರ
- ಅಕ್ಷಯತೃತೀಯೆ – ಅಕ್ಕತದಿಗೆ; (ಜೈನ) ಶ್ರೇಯಾಂಸನು ಆದಿ ತೀರ್ಥಂಕರನಿಗೆ ಅಹಾರದಾನ ಮಾಡಿದ ಪುಣ್ಯದಿನ
- ಅಕ್ಷಯಬೋಧ – ನಾಶವಿಲ್ಲದ ಜ್ಞಾನ; ತೀರ್ಥಂಕರ
- ಅಕ್ಷಯಸಮಯ – ನಿರಂತರ ಕಾಲ
- ಅಕ್ಷಯಸೌಖ್ಯ – ನಿರಂತರ ಸುಖ
- ಅಕ್ಷರ – ನಾಶವಿಲ್ಲದ
- ಅಕ್ಷರಕೇವ(ಲಿ)ಳಿ – ಒಂದು ವಿದ್ಯೆ
- ಅಕ್ಷರರೇಖೆ – ಬರಹ
- ಅಕ್ಷರವೃತ್ತಿ – ಪದದಲ್ಲಿರುವ ಅಕ್ಷರಗಳ ಸಂಖ್ಯೆ
- ಅಕ್ಷರಾತ್ಮಕ – ಅಕ್ಷರಗಳಿಂದ ಕೂಡಿದ
- ಅಕ್ಷವಲ(ಳ)ಯ – ಜಪಸರ
- ಅಕ್ಷಸೂತ್ರ – ಜಪಸರ
- ಅಕ್ಷಾವಲಿ(ಳಿ) – ಜಪಸರ
- ಅಕ್ಷಿಕರ್ಣ – ಕಣ್ಣೇ ಕಿವಿಯಾಗಿರುವ ಪ್ರಾಣಿ, ಹಾವು
- ಅಕ್ಷಿತಾರಕ – ಕಣ್ಣಿನ ಪಾಪೆ
- ಅಕ್ಷಿಪಕ್ಷ್ಮ – ಕಣ್ಣ ರೆಪ್ಪೆ
- ಅಕ್ಷಿಶ್ರುತಿ – ಹಾವು
- ಅಕ್ಷೀಣ – ಶುಭ
- ಅಕ್ಷುಣ್ಣ – ತುಳಿಯದ; ಮುರಿಯದ
- ಅಕ್ಷೂಣ – ಕಡಿಮೆಯಿಲ್ಲದ; ಬಲಿಷ್ಠ
- ಅಕ್ಷೋಹಿಣಿ – ಅಕ್ಷೌಹಿಣಿ; 21870 ಆನೆ, 21870 ರಥ, 65610 ಕುದುರೆ ಮತ್ತು 109350 ಪದಾತಿಯಿರುವ ಸೈನ್ಯ; ಪಂಪಭಾರತದಲ್ಲಿ ಹೇಳಿರುವ ಸಂಖ್ಯೆ ಹೀಗಿದೆ: 9000 ಆನೆ, 9000100 ರಥ, 9000100100 ಕುದುರೆ ಮತ್ತು 9000100100100 ಕಾಲಾಳುಗಳ ಸೈನ್ಯ
- ಅಖಂಡಸುಖ – ನಿರಂತರ ಸುಖ
- ಅಖಂಡಿತಂ – ಕತ್ತರಿಸದ, ಪೂರ್ಣವಾದ
- ಅಖರ್ವ – ಕುಳ್ಳಲ್ಲದ; ಮಹತ್ತಾದ
- ಅಖಲ್ಯ – ಹೇಡಿ; ಅಪ್ರಯೋಜಕ
- ಅಖ್ಖ(ಕ್ಖ)ಡ – ಮುಕ್ಕಾಗದ, ಪೂರ್ಣ
- ಅಗ – ಬೆಟ್ಟ
- ಅಗಚೂಡ – ಬೆಟ್ಟದ ಶಿಖರ
- ಅಗಡು – ತುಂಟತನ; ದುಷ್ಟತನ
- ಅಗಧರ – ಬೆಟ್ಟವನ್ನು ಎತ್ತಿದವನು, ಕೃಷ್ಣ, ವಿಷ್ಣು
- ಅಗಪಡು – ಒಳಗೆ ಸಿಗು; ಸಿಕ್ಕಿಹಾಕಿಕೊ
- ಅಗರು – ಸುಗಂಧದ ಮರ
- ಅಗರ್ಹಿತ – ನಿಂದ್ಯವಲ್ಲದ
- ಅಗಲ್ – ಬಿಟ್ಟು ಹೋಗು, ತೊರೆದುಹೋಗು;
- ಊಟದ ತಟ್ಟೆ; ತಳಿಗೆ
- ಅಗಲ – ಒಂದು ವಸ್ತುವಿನ ಅಡ್ಡಳತೆ
- ಅಗಲು – ಹರವಾಗಿ
- ಅಗಲಂಬೆ¾ು – ಹರಹನ್ನು ಪಡೆ, ವಿಶಾಲವಾಗು
- ಅಗಲಿ(ತು)ತ್ತು – ಅಗಲವಾದ
- ಅಗಲಿಸು – ಬೇರೆ ಮಾಡು
- ಅಗಲುರ – ಹರವಾದ ಎದೆ
- ಅಗಲೆ – ಅಗಲವಾಗುವಂತೆ; ದೂರಾಗುವಂತೆ
- ಅಗಲೆತ್ತು – ಊಟದ ತಟ್ಟೆಯನ್ನು ಎತ್ತಿಕೊ
- ಅಗಲೊಗೆ – ಹರಡಿಕೊಳ್ಳುವಂತೆ ಎಸೆ
- ಅಗಲೊತ್ತು – ಹರವಾಗಿ ಒತ್ತು
- ಅಗಲ್ಕೆ – ಅಗಲಿಕೆ, ಬೇರ್ಪಡುವಿಕೆ, ವಿಯೋಗ
- ಅಗಲ್ಕೆಗಿಚ್ಚು – ವಿಯೋಗದ ಬೆಂಕಿ; ವಿರಹಜ್ವಾಲೆ
- ಅಗಲ್ಕೆವೆ¾ು – ವಿಯೋಗ ಹೊಂದು
- ಅಗಲ್ಚು – ಅಗಲಿಸು, ನಿವಾರಿಸು; ಅಗಲಗೊಳಿಸು; ಅಗಲಿಕೆ
- ಅಗಲ್ತರ್ – ದೂರ ಹೋಗು, ಅಗಲು
- ಅಗವಡು – (ಅಗಂ+ಪಡು) ಒಳಗೆ ಬೀಳು, ಸೆರೆಸಿಕ್ಕು; ನೋವನ್ನು ಪಡೆ
- ಅಗಸೆ – ಒಂದು ಮರ; ಒಂದು ಬಗೆಯ ಗಿಡ
- ಅಗಸೆವೂಗೊಂಬು – ಅಗಸೆಯ ಹೂವಿನಂತಹ ಕೊಂಬು
- ಅಗಾಹಿತರತ್ನ – (ಅಗ+ಅಹಿತ=ಇಂದ್ರ) ಇಂದ್ರನೀಲಮಣಿ
- ಅಗಿ – ಹೆದರು; ಕುಗ್ಗು; ಹಲ್ಲಿನಿಂದ ಅರೆ; ಅಲುಗಾಡು; ನಡುಕ
- ಅಗಿನಿ – (ಅಗ್ನಿ) ಕಿಚ್ಚು
- ಅಗಿಬಿಗಿ – ಸಡಗರ, ಸಂಭ್ರಮ
- ಅಗಿಲ್ – ಸುಗಂಧದ ಮರ; ಸುಗಂಧದ್ರವ್ಯ
- ಅಗುಂತಿ – ಆಧಿಕ್ಯ, ಅತಿಶಯತೆ
- ಅಗುಂದಲೆ – ಅತಿಶಯ; ಶ್ರೇಷ್ಠ
- ಅಗುಂದಲೆಮಾಡು – ಹೆಚ್ಚಿಸು
- ಅಗುಂದಲೆವಡೆ – ಅಧಿಕವಾಗು
- ಅಗುಂದಲೆವೋಗು – ಅಧಿಕವಾಗಿ ಹೋಗು
- ಅಗುಂಬಿಸು – ರಾಶಿ ಮಾಡು
- ಅಗುರ್ – ಸಾಹಸ ತೋರು; ಆಕ್ರಮಣ ಮಾಡು
- ಅಗುರು – ಅಗೆಲ್; ಹಗುರವಾದ
- ಅಗುರ್ಚು – ಸೇರಿಸು, ಒತ್ತು
- ಅಗುರ್ವಿಸು – ಭಯಪಡಿಸು; ಹೆದರು; ನಡುಗು; ಅತಿಶಯವಾಗು
- ಅಗುರ್ಬು(ರ್ವು) – ಭಯ; ಉಗ್ರತೆ; ಅದ್ಭುತ; ಬೆರಗು
- ಅಗುರ್ವುಗಿಡು – ಸತ್ವಗುಂದು
- ಅಗುರ್ವುಗೊಳ್ – ಹೆದರು
- ಅಗುರ್ವುವಡೆ – ಅತಿಶಯಗೊಳ್ಳು
- ಅಗೆ – ಮೊಳಕೆ, ಅಂಕುರ; ತೋಡು
- ಅಗೆಯೆತ್ತು – ಮೊಳಕೆ ಕೀಳು; ಮೂಲೋತ್ಪಾಟನೆ ಮಾಡು
- ಅಗೆಯೇ¿õï – ಮೊಳಕೆಯಾಗು
- ಅಗೆವೊಯ್ – (ನಾಟಿಗಾಗಿ) ಬೀಜ ಬಿತ್ತು
- ಅಗೆವೋಗು – ಮೊಳಕೆ ಒಡೆ
- ಅಗೇಂದ್ರ – ಬೆಟ್ಟಗಳ ರಾಜ, ಹಿಮವತ್ಪರ್ವತ
- ಅಗೌಕಸ – ಮರವೇ ಮನೆಯಾಗಿ ಉಳ್ಳದ್ದು, ಕೋತಿ
- ಅಗ್ಗ – ಶ್ರೇಷ್ಠ; ಕಸುವು; ತುದಿ
- ಅಗ್ಗಂಬೆ¾ು – ಶ್ರೇಷ್ಠವಾಗು
- ಅಗ್ಗಂಮಾಡು – ದೊಡ್ಡದು ಮಾಡು
- ಅಗ್ಗ(ಗ್ಗಾ)ಯಿಲೆ -ಹೆಚ್ಚು ಹಣ ತೆಗೆದುಕೊಳ್ಳುವ ಸೂಳೆ
- ಅಗ್ಗರಣೆ – ಒಗ್ಗರಣೆ; ಹಗ್ಗ
- ಅಗ್ಗರಿಸು – ಸಿದ್ಧವಾಗು
- ಅಗ್ಗಲಂ – ಹೆಚ್ಚಾಗಿ
- ಅಗ್ಗಲಿ(ಳಿ)ಸು – ಹೆಚ್ಚಿಸು; ಹೆಚ್ಚಾಗು; ಪ್ರಬಲವಾಗು; ಸಂತಸಪಡು; ವ್ಯಾಪಿಸು; ಒದಗು; ಅತಿಕ್ರಮಿಸು
- ಅಗ್ಗವಣಿ – ಮೀಸಲು ನೀರು
- ಅಗ್ಗವಳ – ಒಬ್ಬ ಅಧಿಕಾರಿ
- ಅಗ್ಗಳ – ಶ್ರೇಷ್ಠ
- ಅಗ್ಗಳಗಣ್ – ಹೆಚ್ಚಾದ (ಮೂರನೆಯ) ಕಣ್ಣು; ವಿಶೇಷ ದೃಷ್ಟಿ
- ಅಗ್ಗಳಗಣ್ಣ – ಅಗ್ಗಳಗಣ್ಣುಳ್ಳವನು, ಶಿವ
- ಅಗ್ಗಳವಸ್ತು – ಶ್ರೇಷ್ಠ ವಸ್ತು
- ಅಗ್ಗಳಿ(ಕೆ)ಕ್ಕೆ – ಅತಿಶಯತೆ; ಮಹಿಮೆ
- ಅಗ್ಗಳಿಕೆವಡೆ – ಅತಿಶಯಗೊಳ್ಳು
- ಅಗ್ಗಳಿಸು – ಹೆಚ್ಚಾಗು
- ಅಗ್ಗ(ಗು)¿Â – ತಡೆಗೂಟ, ಲಾಳವಿಂಡಿಗೆ
- ಅಗ್ಗ¿Â – ಅತಿಶಯ
- ಅಗ್ಗ¿Âಕೆ – ಅಗ್ಗ¿Â
- ಅಗ್ಗಾಯಿಲೆ(ತಿ) – ಹೆಚ್ಚು ಹಣ ತೆಗೆದುಕೊಳ್ಳುವ ಸೂಳೆ
- ಅಗ್ಗಿ – (ಅಗ್ನಿ) ಬೆಂಕಿ
- ಅಗ್ಗಿಕೊಂಡ – ಕೆಂಡದ ಗುಂಡಿ
- ಅಗ್ಗಿಗಣ್ಣು – ಉರಿಗಣ್ಣು
- ಅಗ್ಗಿಮೊಗ – (ಅಗ್ನಿಮುಖ) ದೇವತೆ
- ಅಗ್ಗವಳೆದೆಣ್ಣೆ – ಕಾದ ಎಣ್ಣೆ
- ಅಗ್ಗಿವೆಗಡು – ಬೆಂಕಿಯ ಭಯ
- ಅಗ್ಗಿಸು – ನಾಶಪಡಿಸು
- ಅಗ್ಗು – ನಾಶವಾಗು
- ಅಗ್ನಿಜೆ – ಬೆಂಕಿಯ ಮಗಳು, ದ್ರೌಪದಿ
- ಅಗ್ನಿನೇತ್ರ – ಈಶ್ವರ
- ಅಗ್ನಿಪುತ್ರಿ – ಬೆಂಕಿಯ ಮಗಳು, ದ್ರೌಪದಿ
- ಅಗ್ನಿಮಂಥ – ಆರಣಿಯನ್ನುಜ್ಜಿ ಬೆಂಕಿ ಮಾಡುವುದು
- ಅಗ್ನಿಮಿತ್ರ – ಗಾಳಿ
- ಅಗ್ನಿವೀರ್ಯ – ಈಶ್ವರ
- ಅಗ್ನಿಶೌಚವಸ್ತ್ರ – ಉಬ್ಬೆಗೆ ಹಾಕಿ ಶುಚಿಮಾಡಿದ ಬಟ್ಟೆ
- ಅಗ್ನಿಸಾಕ್ಷಿ – ಅಗ್ನಿಯನ್ನು
- ಸಾಕ್ಷಿಯಾಗಿರಿಸಿಕೊಳ್ಳುವುದು
- ಅಗ್ನಿಸ್ಥಂಭ – ಬೆಂಕಿಯು ಸುಡದಂತೆ ಮಾಡುವ ವಿದ್ಯೆ, ಮಂತ್ರ
- ಅಗ್ನಿಸ್ತಂಭಿನಿ – ಅಗ್ನಿಸ್ತಂಭ
- ಅಗ್ನೀಧ್ರ – ಯಜ್ಞಾಗ್ನಿಯನ್ನು ಪ್ರಜ್ವಲನ
- ಮಾಡುವವನು; ಬ್ರಹ್ಮ ಎಂಬ ಋತ್ವಿಕ್ಕು, ಯಜ್ಞಕಾರ್ಯ
- ಅಗ್ರ – ಮುಖ್ಯವಾದ; ಅಧಿಕವಾದ; ಮುಂಭಾ; ತುದಿ; ಆರಂಭ
- ಅಗ್ರಕಾರ್ಯ – ಮೊದಲ ಕೆಲಸ; ಮುಖ್ಯ ಕೆಲಸ
- ಅಗ್ರಜನ್ಮ – ಬ್ರಾಹ್ಮಣ
- ಅಗ್ರಣಿ – ಮುಂದಾಳು
- ಅಗ್ರಪದಾತಿ – ಮುಂಗಡೆಯ ಕಾಲಾಳುಪಡೆ
- ಅಗ್ರಪುತ್ರ – ಹಿರಿಯ ಮಗ
- ಅಗ್ರಪೂಜೆ – ಮೊದಲ ಗೌರವ
- ಅಗ್ರಭವ – ಅಗ್ರಜ, ಅಣ್ಣ
- ಅಗ್ರಮಹಿಷಿ – ಪಟ್ಟದ ರಾಣಿ
- ಅಗ್ರಸುತ – ಹಿರಿಯ ಮಗ
- ಅಗ್ರಹಸ್ತ – ಕೈಯ ತುದಿ
- ಅಗ್ರಾಮ್ಯತೆ – ಗ್ರಾಮ್ಯವಲ್ಲದ್ದು, ಸುಸಂಸ್ಕøತತೆ
- ಅಗ್ರಾಸನ – ಅಗ್ರಹಾರ, ಬ್ರಾಹ್ಮಣರಿಗೆ ದಾನ ಕೊಟ್ಟ ಭೂಮಿ; ಬ್ರಾಹ್ಮಣರ ಊಟದ ಶಾಲೆ
- ಅಜ್ಜಗೆ – ಇರವಂತಿಗೆ
- ಅಘ – ಪಾಪ; ನೋವು
- ಅಘಚ್ಛಿದ – ಪಾಪವನ್ನು ನಾಶಗೈಯುವ
- ಅಘಜನ – ಪಾಪಿಗಳು
- ಅಘಜಾಲ(ಳ) – ಪಾಪರಾಶಿ
- ಅಘಟಮಾನ – ನಡೆಯದ; ಹೊಂದಿಕೊಳ್ಳದ
- ಅಘಪ(ವ)ಡು – ಸೆರೆಸಿಕ್ಕು
- ಅಘವಿಘಟನ – ಪಾಪಕ್ಷಯ
- ಅಘವಿಘಾತ – ಪಾಪನಾಶ
- ಅಘಮರ್ಷಣ – ಪಾಪನಿವಾರಕ ಮಂತ್ರ
- ಅಘವಟ್ಟಂ – ಪಾಪಮಾಡಿದವನು
- ಅಘಾತಿ – ಕೊಲ್ಲದ
- ಅಘಾತಿಕರ್ಮ – (ಜೈನ) ಜೀವದ
- ಅನಂತಜ್ಞಾನಾದಿ ಗುಣಗಳನ್ನು
- ನಾಶಮಾಡದ ವೇದನೀಯ, ಆಯು,
- ನಾಮ, ಗೋತ್ರ ಎಂಬ ನಾಲ್ಕು ಕರ್ಮಗಳು
- ಅಘಾರಿ – ಪಾಪದ ಶತ್ರು
- ಅಚರ – ಚಲನವಿಲ್ಲದ
- ಅಚಲ – ಬೆಟ್ಟ
- ಅಚಲ(ಳ)ನಿತಂಬ – ಬೆಟ್ಟದ ತಪ್ಪಲು
- ಅಚಲರಿಪು – ಬೆಟ್ಟದ ಶತ್ರು, ಇಂದ್ರ
- ಅಚಿರಂ – ಕೂಡಲೆ
- ಅಚಿರಪ್ರಭೆ – ಕ್ಷಣಿಕವಾದ ಬೆಳಕು
- ಅಚಿರಾಂಶು – ಅಚಿರಪ್ರಭೆ
- ಅಚೇಲಕ – ವಸ್ತ್ರವಿಲ್ಲದ; ದಿಗಂಬರ
- ಅಚ್ಚ – ಶುದ್ಧ; ಇಂದ್ರಿಯ; ಜಪಮಣಿ
- ಅಚ್ಚಂಬೊಯ್ – ಪುಟವಿಡು; ಶುದ್ಧಿಗೊಳಿಸು
- ಅಚ್ಚಗಡೆ – ಸುಂದರವಾದ ರಂಗೋಲಿ
- ಅಚ್ಚಗನ್ನಡ – ಶುದ್ಧಗನ್ನಡ
- ಅಚ್ಚಗ¾ುಂಕೆ – ಕೋಮಲವಾದ ಗರಿಕೆ, ದೂರ್ವೆ
- ಅಚ್ಚಗೆಂಡ – ನಿಗಿನಿಗಿ ಕೆಂಡ
- ಅಚ್ಚಗೊಂಡ – ನಿಗಿನಿಗಿಸುವ ಕೆಂಡದ ಕೊಂಡ
- ಅಚ್ಚಜೌವನೆ – ಹೊಸ ಹರಯದವಳು
- ಅಚ್ಚದಾವರೆ – ಸುಂದರವಾದ ತಾವರೆ
- ಅಚ್ಚದಿಂಗಳ್ – ನಿರ್ಮಲವಾದ ಚಂದ್ರ
- ಅಚ್ಚದುಗುಲ – ನಿರ್ಮಲವಾದ ರೇಷ್ಮೆ ಬಟ್ಟೆ
- ಅಚ್ಚದೊವರಿ – ಶುದ್ಧವಾದ ತೊಗರಿ
- ಅಚ್ಚನನೆ – ಶುದ್ಧವಾದ ಹೂ
- ಅಚ್ಚನೆ – ಚೆನ್ನಾಗಿ, ಸುಂದರವಾಗಿ
- ಅಚ್ಚಬಿಳಿದು – ಅಪ್ಪಟ ಬಿಳಿಯ ಬಣ್ಣವುಳ್ಳ
- ಅಚ್ಚಬೆಳಂತಿಗೆ – ಪೂರ್ಣ ಬಿಳಿಪು
- ಅಚ್ಚಬೆಳ್ದಿಂಗಳ್ – ನಿರ್ಮಲವಾದ ಬೇಳುದಿಂಗಳು
- ಅಚ್ಚಮಲ್ಲಿಗೆ – ಬಿಳಿಯ ಮಲ್ಲಿಗೆ ಹೂ
- ಅಚ್ಚಮಿಂಚು – ಶುಭ್ರ ಹೊಳಪು
- ಅಚ್ಚಮುತ್ತು – ಶುಭ್ರಕಾಂತಿಯುಳ್ಳ ಮುತ್ತು
- ಅಚ್ಚರ – ದೇವತೆ
- ಅಚ್ಚರ(ಸಿ)ಸೆ – (ಅಪ್ಸರಸಿ) ಅಪ್ಸರೆ
- ಅಚ್ಚರಿ – ಆಶ್ಚರ್ಯ
- ಅಚ್ಚರಿವಡು – ಆಶ್ಚರ್ಯಹೊಂದು
- ಅಚ್ಚರಿವಡೆ – ಆಶ್ಚರ್ಯಪಡು; ಆಶ್ಚರ್ಯಪಡಿಸು
- ಅಚ್ಚರಿವೀ¾ು – ಅಚ್ಚರಿಯುಂಟುಮಾಡು
- ಅಚ್ಚರಿವೆ¾ು – ಬೆರಗುಗೊಳಿಸು
- ಅಚ್ಚಲರ್ – ಹೊಸ ಹೂ
- ಅಚ್ಚವಳಿಕು – ಶುಭ್ರ ಸ್ಫಟಿಕ
- ಅಚ್ಚವೂ – ಹೊಸ ಹೂ
- ಅಚ್ಚವೆಳ್ದಿಂಗಳ್ – ಶುಭ್ರ ಬೆಳುದಿಂಗಳು
- ಅಚ್ಚಸೊಗ – ಶುದ್ಧ ಸುಖ
- ಅಚ್ಚ¿Â – ಅಂದಗೆಡು
- ಅಚ್ಚಾಡಿಸು – ಸುತ್ತಾಡಿಸು
- ಅಚ್ಚಾನೆ – ಸೊಗಸಾದ ಆನೆ
- ಅಚ್ಚಿ – (ಅಕ್ಷಿ) ಕಣ್ಣು
- ಅಚ್ಚಿಗ – ದುಃಖ; ಕ್ಲೇಶ; ಕೇಡು; ಉತ್ಸಾಹ; ರೀತಿ
- ಅಚ್ಚಿಗಂಗೊಳ್ – ತುಂಬ ದುಃಖಪಡು
- ಅಚ್ಚಿಗಂಗೊಳಿಸು – ಕಷ್ಟಕ್ಕೀಡುಮಾಡು
- ಅಚ್ಚಿಗಂಬಡಿಸು – ತುಂಬ ವ್ಯಥೆಪಡು
- ಅಚ್ಚಿಗೊಳಿಸು – ದೃಷ್ಟಿಯನ್ನು ಸೆಳೆ
- ಅಚ್ಚಿಮುಗುಳ್ಚು – ಕಣ್ಣುಮುಚ್ಚು
- ಅಚ್ಚಿ¾Â – ಮುದ್ರೆಯೊತ್ತು; ಎರಕಹೊಯ್; ಒಂದುಗೂಡು
- ಅಚ್ಚು – (ಅಕ್ಷ) ಎರಕ ಹೊಯ್ದು ತಯಾರಿಸಿದ ವಸ್ತು; ಒತ್ತಿದ ಮುದ್ರೆ; ಬಂಡಿಯ ಇರಚಿ
- ಅಚ್ಚುಕತನ – ಉತ್ಸಾಹ; ಸಂಭ್ರಮ
- ಅಚ್ಚುಡಿ – ಎರಕದ ರೀತಿ ಒಂದಾಗು; ಬಂಡಿಯ ಅಚ್ಚು ಮುರಿದುಹೋಗು
- ಅಚ್ಚುಳ – ಚರ್ಮದ ಕೆಲಸ
- ಅಚ್ಚುಳಕೋಲ್ – ಬಾರುಕೋಲು
- ಅಚ್ಚುಳಾಯ್ತ – ಸೇವಕ
- ಅಚ್ಚುಲಾಯ್ಲ – ಸೇವಕ
- ಅಚ್ಚೆ – ಒಂದು ಬಗೆಯ ಮೀನು
- ಅಚ್ಚೊತ್ತು – ಅಚ್ಚಿನಲ್ಲಿ ಒತ್ತು; ಮುದ್ರೆಯೊತ್ತು
- ಅಚ್ಛಂದ – ಛಂದಸ್ಸು ಕೆಟ್ಟಿರುವ
- ಅಚ್ಛಾಂಬು – ಶುದ್ಧವಾದ ನೀರು
- ಅಚ್ಛಾಯ – ನೆರಳಿಲ್ಲದ್ದು
- ಅಚ್ಛೋದ – ನಿರ್ಮಲವಾದ ನೀರು; ತಿಳಿನೀರು; ಒಂದು ಸರೋವರದ ಹೆಸರು
- ಅಚ್ಛೋದಕ – ನಿರ್ಮಲವಾದ ನೀರು
- ಅಚ್ಯುತ – ನಾಶವಿಲ್ಲದ; ವಿಷ್ಣು
- ಅಚ್ಯುತಕಲ್ಪ – (ಜೈನ) ಆ ಹೆಸರಿನ ಹದಿನಾರನೆಯ ಸ್ವರ್ಗ
- ಅಚ್ಯುತಸೌಖ್ಯ – ಶಾಶ್ವತಸುಖ
- ಅಚ್ಯುತೇಂದ್ರ – (ಜೈನ) ಅಚ್ಯುತಕಲ್ಪದ ಇಂದ್ರ
- ಅಛ್ಯ – ಅಚ್ಚ
- ಅಜ – ಹುಟ್ಟು ಇಲ್ಲದ; ದೇವರು; ಬ್ರಹ್ಮ; ಸೂರ್ಯ; ಜಿನ; ಸಮುದ್ರ
- ಅಜಂಡ – ಹೊಲಿದು ಸೇರಿಸದ, ಬ್ರಹ್ಮಾಂಡ
- ಅಜಕುಕ್ಷಿ – ಆಡಿನ ಹೊಟ್ಟೆಯಂತೆ ತೆಳ್ಳಗಿನ ಹೊಟ್ಟೆಯಿರುವ
- ಅಜಗರ – ಹೋತವನ್ನು ನುಂಗುವಂಥದು; ಹೆಬ್ಬಾವು
- ಅಜಗರ್ಭಿಣಿ – ಗಬ್ಬವಾದ ಆಡು
- ಅಜನ್ಮೆ – ಜನ್ಮರಹಿತಳು
- ಅಜಪೋತ – ಆಡಿನ ಮರಿ
- ಅಜರ – ಮುಪ್ಪಿಲ್ಲದ; ದೇವತೆ ; ಜಿನ
- ಅಜಸ್ರಂ – ಯಾವಾಗಲೂ
- ಅಜಾಂಡ – ಬ್ರಹ್ಮಾಂಡ
- ಅಜಾಕೃಪಾಣೀಯ – ಮೇಕೆ ಬರುವುದೂ, ಕತ್ತಿ ಬೀಳುವುದೂ ಒಂದಾಗಿ ಮೇಕೆ ಸಾಯುವುದು; ಆಕಸ್ಮಿಕ
- ಅಜಾತ – ಜನ್ಮರಹಿತ; ವಿಷ್ಣು; ಶಿವ; ಜಿನ
- ಅಜಾತಪೂರ್ವ – ಹಿಂದೆಂದೂ ಜನಿಸದ
- ಅಜಾತಶತ್ರು – ಶತ್ರುವೇ ಹುಟ್ಟದವನು, ಧರ್ಮರಾಯ
- ಅಜಾನೇಯ – ಒಳ್ಳೆಯ ತಳಿಯ ಕುದುರೆ
- ಅಜಿತ – ಜಯಿಸಲಸಾಧ್ಯನಾದವನು; ವಿಷ್ಣು; (ಜೈನ) ಎರಡನೆಯ ತೀರ್ಥಂಕರನಾದ ಅಜಿತನಾಥ
- ಅಜಿನ – ಚರ್ಮ
- ಅಜಿನಾಂಬರ – ಅಜಿನವನ್ನೇ ಉಟ್ಟವನು; ಶಿವ
- ಅಜಿರ – ಚುರುಕಾದ; ಅಂಗಳ; ಶರೀರ
- ಅಜಿಹ್ಮ – ವಕ್ರವಲ್ಲದ; ನೇರಸ್ವಭಾವದ
- ಅಜೀವ – ಜೀವರಹಿತ; ಜಡವಾದ; (ಜೈನ) ಏಳು ತತ್ವಗಳಲ್ಲಿ ಎರಡನೆಯದು
- ಅಜೀವತತ್ವ – ಅಜೀವ
- ಅಜೀವರತ್ನ – (ಜೈನ) ಚಕ್ರವರ್ತಿಗಳಿಗೆ ಸಹಜವಾಗಿ ಒದಗುವ ಹದಿನಾಲ್ಕು ರತ್ನಗಳಲ್ಲಿ ಒಂದು
- ಅಜೆ – ಆಡು, ಹೆಣ್ಣು ಮೇಕೆ; ಭೂಮಿ
- ಅಜೇಯ – ಗೆಲ್ಲಲಾಗದ
- ಅಜ್ಜ – (ಆರ್ಯ) ತಾತ; ಹಿರಿಯ; ವೃದ್ಧ
- ಅಜ್ಜಗಾಪು – ನಂಬಿಕೆಗೆ ಪಾತ್ರರಾದವರ ಕಾವಲು
- ಅಜ್ಜಪಜ್ಜರ್ – (ಆರ್ಯಪ್ರಾರ್ಯರ್) ಪೂರ್ವಿಕರು
- ಅಜ್ಜಿ – ತಂದೆ ಅಥವಾ ತಾಯಿಯ ತಾಯಿ
- ಅಜ್ಜಿಕೆ – ಜೈನ ಸನ್ಯಾಸಿನಿ, ಕಂತಿ
- ಅಜ್ಜಿ(ಜ್ಜು)ಗೆ – ಇರವಂತಿ; ಮರುಗ
- ಅಜ್ಞ – ತಿಳಿಯದವನು; ಮೂರ್ಖ
- ಅಜ್ಞತ್ವ – ತಿಳಿಯದಿರುವಿಕೆ
- ಅಜ್ಞಾನ – ಜ್ಞಾನರಾಹಿತ್ಯ
- ಅಜ್ಞಾನತ್ರಯ – (ಜೈನ) ಕುಮತಿ, ಕುಶ್ರುತ, ವಿಭಂಗ ಎಂಬ ಮೂರು ಬಗೆಯ ಅಜ್ಞಾನಗಳು
- ಅಟನ – ತಿರುಗಾಟ
- ಅಟನಿ – ಬಿಲ್ಲಿನ ತುದಿ
- ಅಟಮಟಿಗ – ಸುಳ್ಳುಗಾರ
- ಅಟರ್ – ಮೇಲೆ ಬೀಳು
- ಅಟಳ – ಅತಳವೆಂಬ ಪಾತಾಳ
- ಅಟವಿ – ಅಡವಿ, ಕಾಡು
- ಅಟವ್ಯ – ಅರಣ್ಯ ಪ್ರದೇಶ
- ಅಟಳಪಟಳ – ಅತಳದ ಮೇಲ್ಭಾಗ
- ಅಟ್ಟಕ¿Â – ಸ್ನಾನದಲ್ಲಿ ಕೊಳೆ ಹೋಗಲು ಹಾಕಿಕೊಳ್ಳುವ ಗಂಜಿ
- ಅಟ್ಟಗವಲ್ – ಮರದ ಎತ್ತರವಾದ ಕವಲುಕೊಂಬೆ
- ಅಟ್ಟಟ್ಟಿ – ನಿಯೋಗ; ದೂತ
- ಅಟ್ಟಟ್ಟಿಯಟ್ಟು – ದೂತನನ್ನು ಕಳುಹಿಸು
- ಅಟ್ಟಳೆ – ಕೋಟೆಯ ಬುರುಜು
- ಅಟ್ಟಾಲ(ಳ) – ಅಟ್ಟಳೆ
- ಅಟ್ಟಿಮುಟ್ಟು – ಅಟ್ಟಿಸಿಕೊಂಡು ಹೋಗಿ ಮುಟ್ಟು
- ಅಟ್ಟವಣೆ – ಪುಸ್ತಕವಿಡುವ ಪೀಠ
- ಅಟ್ಟೆವಣೆಕೋಲ್ – ಪುಸ್ತಕವಿರಿಸುವ ಪೀಠ; ವ್ಯಾಸಪೀಠ
- ಅಟ್ಟಹಾಸ – ಗಟ್ಟಿಯಾದ ನಗು
- ಅಟ್ಟೆಲೆ(ಳೆ) -ಅಟ್ಟಣೆ, ಕೊತ್ತಳ, ಬುರುಜು,
- ಕೋಟೆಯ ಮೇಲಿನ ಕಾವಲುಗಾರನ ಕೊಠಡಿ
- ಅಟ್ಟಾಲ(ಳ) – ಅಟ್ಟಲೆ
- ಅಟ್ಟಾಲ(ಳ)ಕ – ಅಟ್ಟಾಲ
- ಅಟ್ಟಾಲಿಕೆ – ಅಟ್ಟಾಲ
- ಅಟ್ಟಾಸುರ – ತುಂಬ ಭಯಂಕರವಾದ
- ಅಟ್ಟಿಸು – ಕಳಿಸಿಕೊಡು; ಒಣಗಿಹೋಗು
- ಅಟ್ಟು – ಅಂಟು; ಬೆನ್ನುಹತ್ತಿ ಹೋಗು, ಅನುಧಾವನ; ಅಡಿಗೆ ಮಾಡು; ಮೇಲ್ಭಾಗದ ಬದು
- ಅಟ್ಟುಂಬರಿ – ಬೆನ್ನಟ್ಟಿ ಹೋಗು; ಅಭೇದ್ಯ ಸಂಬಂಧ
- ಅಟ್ಟುಂಬರಿಗೊಳ್ – ಅಟ್ಟಿಸಿಕೊಂಡು ಹೋಗು
- ಅಟ್ಟುಂಬೆಸ – ಹೇಳಿಕಳಿಸಿ ಮಾಡುವ ಕೆಲಸ
- ಅಟ್ಟುಪಡು – ಬೆನ್ನಟ್ಟುವಿಕೆಗೆ ಒಳಗಾಗು
- ಅಟ್ಟುಪೆ(ವೆ)¾ು – ಅಟ್ಟುಪೆಡು
- ಅಟ್ಟೆ – ಮುಂಡ; ಚಪ್ಪಲಿಯ ತಳಭಾಗದ ಹಲ್ಲೆ
- ಅಟ್ಟೆಯಾಟ – ತಲೆ ಕತ್ತರಿಸಿದ ಮೇಲೆ ಮುಂಡದ ಕುಣಿದಾಟ
- ಅಟ್ಟೆಯಿಡು – ದೇಹವನ್ನು ಚಾಚು
- ಅಡಂಗಾಯ್ತ – ಕೋಟೆ ರಕ್ಷಿಸುವವನು
- ಅಡಂಗಿಸು – ಮರೆಮಾಚು; ಬಚ್ಚಿಡು
- ಅಡಂಗು – ಬಚ್ಚಿಟ್ಟುಕೋ; ಹಿಂದಕ್ಕೆ ಸರಿ;
- ಶಮನವಾಗು; ಸೇರಿಹೋಗು; ಪರಿಮಿತಿಗೆ ಒಳಪಡು
- ಅಡಂಗು¾ುಚಾಟ – ಕಣ್ಣುಮುಚ್ಚಾಲೆಯಾಟ
- ಅಡಂಗು¾ುಚಾಡು – ಕಣ್ಣುಮುಚ್ಚಾಲೆ ಅಟವಾಡು
- ಅಡಂಗೊತ್ತು – ತಿರಿಚು
- ಅಡಕ – ಹಿಡಿತದಲ್ಲಿಟ್ಟುಕೊ; ಸಂಯಮ; ವಿಧೇಯತೆ
- ಅಡಕಿಲ್ – ಪೇರಿಸಿಡುವುದು
- ಅಡಕಿಲಿಡು – ಪೇರಿಸು
- ಅಡಕಿಲ್ಗಿರಿ – ಪೇರಿಸಿದ ಬೆಟ್ಟಗಳು
- ಅಡಕಿಲ್ಗೊಳ್ – ಪೇರಿಸಿರು; ದಟ್ಟವಾಗು
- ಅಡಕಿಲ್ಜವನ – ಏರಿಸಿದ ಯೌವನ
- ಅಡಕಿಲ್ವಾಸು – ಪೇರಿಸಿದ ಹಾಸಿಗೆ
- ಅಡಕಿಲ್ವುಣ್ – ಹುಣ್ಣ ಮೇಲೆ ಹುಣ್ಣು
- ಅಡಕಿಲ್ವೆಸರ್ – ಒಂದರ ಮೇಲೆ ಒಂದು ಪೇರಿಸಿಕೊಂಡ ಹೆಸರು
- ಅಡಕಿಲ್ವೊಂದು – ಒಂದರ ಮೇಲೊಂದು ಇರಿಸು
- ಅಡಕು – ತುಂಬು; ನಿಯಮ; ಸಂಯಮ
- ಅಡಗಿಂಡೆ – ಮಾಂಸದ ಮುದ್ದೆ
- ಅಡಗಿಂಡೆಯಾಡು – ಮಾಂಸದ ಮುದ್ದೆಗಳನ್ನು ಚೆಲ್ಲಾಡು
- ಅಡ(ಂ)ಗು – ಮಾಂಸ; ಜೋಡಣೆ
- ಅಡಗುತಿನ್ – ಅಡಗನ್ನು ತಿನ್ನು
- ಅಡದಿನ್ – ಅಡಗನ್ನು ತಿನ್ನು
- ಅಡಪ – ಎಲೆಯಡಕೆಯ ಚೀಲ
- ಅಡಪಂಬಿಡಿ – ಎಲೆಯಡಿಕೆ ಚೀಲವನ್ನು ಹಿಡಿದುಕೊ
- ಅಡಪಗಿತ್ತಿ – ಒಡೆಯನ ಎಲೆಯಡಿಕೆ ಚೀಲ ಹಿಡಿಯುವವಳು
- ಅಡಪ(ಹ)ಡಿಸು – ತವಕಿಸು
- ಅಡಪವಳ – ಒಡೆಯನ ಎಲೆಯಡಿಕೆ ಚೀಲ ಹಿಡಿಯುವವನು
- ಅಡಪವಳಿತಿ – ಅಡಪಗಿತ್ತಿ
- ಅಡಪಿಗ – ಅಡಪವಳ
- ಅಡಪು – ನಾಟ್ಯದ ಒಂದು ಭಂಗಿ
- ಅಡರ್ – ಮೇಲಕ್ಕೆ ಹತ್ತು; ವ್ಯಾಪಿಸು; ಸೇರು
- ಅಡಬಳ – ಅಡಿಗೆಯವನು, ಬಾಸಿಗ
- ಅಡರಿಸು – ಹತ್ತಿಸು
- ಅಡರ್ಪು – ಆಧಾರ; ಆಶ್ರಯ; ಔನ್ನತ್ಯ
- ಅಡರ್ಪುಗುಡು – ಆಶ್ರಯ ನೀಡು
- ಅಡರ್ಪುಮಾಡು – ಆಶ್ರಯವಾಗಿ ಮಾಡು
- ಅಡವಡಿಸು – ಆತಂಕಪಡು
- ಅಡವಿ – ಕಾಡು
- ಅಡವಿಗಿರ್ಚು – ಕಾಡುಗಿಚ್ಚು
- ಅಡವಿಮೃಗ – ಕಾಡುಮೃಗ
- ಅಡವು – ರೀತಿ; ಹದ
- ಅಡಸು – ಒತ್ತಾಗಿ ಸೇರಿಸು, ತುರುಕು; ಮೆತ್ತು; ಮೇಲೆ ಬೀಳು; ಸಂಭವಿಸು; ನುಗ್ಗು; ಸೇರು
- ಅಡಹಡಿಸು – ತ್ವರೆಮಾಡು; ಮುನ್ನುಗ್ಗು
- ಅಡಾಯುಧ – ಒಂದು ಬಗೆಯ ಕತ್ತಿ
- ಅಡಿ – ಪಾದ; ವಿರೋಧ
- ಅಡಿಗಡಿಗೆ – ಹೆಜ್ಜೆಹೆಜ್ಜೆಗೆ; ಮತ್ತೆ ಮತ್ತೆ
- ಅಡಿಗರ್ದು – ತಳಕ್ಕೆ ಮುಳುಗಿಸು
- ಅಡಿಗಲ್ – ತಳಹದಿ; ಆಧಾರ
- ಅಡಿಗಲ್ಲಿಕ್ಕು – ತಳಹದಿ ಹಾಕು
- ಅಡಿಗಾಣ್ – ತಳ ಕಾಣು
- ಅಡಿಗಿಕ್ಕು – ಕೆಳಕ್ಕೆ ಹಾಕು
- ಅಡಿಗಿ(ಗೆ)ಡು – ನಡಿಗೆ ಕೆಡು; ನೆಲೆ ತಪ್ಪು
- ಅಡಿಗುಟ್ಟು – ಕಾಲನ್ನು ಒತ್ತು; ಕುಣಿ
- ಅಡಿಗೊಳ್ – ಓಡು
- ಅಡಿಗೊಳಂಗು – ಗೊರಸಿನ ಕೆಳಭಾಗ
- ಅಡಿದಳಿರ್ – ಚಿಗುರಿನಂತೆ ಕೋಮಲವಾದ ಪಾದ
- ಅಡಿಮಂಚಿಕೆ – ಕೆಳಮಂಚ
- ಅಡಿಮಾಡು – ಕೀಳಾಗಿ ಮಾಡು
- ಅಡಿಮಿಡುಕು – ಹೆಜ್ಜೆಯನ್ನು ಅಲುಗಿಸು
- ಅಡಿಮೊದಲ್ – ಅಡಿಯ ತಳಭಾಗ
- ಅಡಿಯಿಡು – ಹೆಜ್ಜೆಯಿಡು; ಮುಂದುವರಿ
- ಅಡಿಯೂಡು – ಪಾದಕ್ಕೆ ಲೇಪನ ಮಾಡು; ಅಂಗಾಲು ತಿಕ್ಕು
- ಅಡಿಯೆತ್ತು – ಹೆಜ್ಜೆ ಎತ್ತು; ಹೊರಡು
- ಅಡಿರುಚಿ – ಪಾದದ ಕಾಂತಿ
- ಅಡಿವಜ್ಜೆ – ಹೆಜ್ಜೆಯ ಗುರುತು
- ಅಡಿವಣಿಗೆ – ಕೆಸರಿನ ಹೆಜ್ಜೆಯ ಗುರುತು
- ಅಡಿವಿಡಿ – ಅನುಸರಿಸು
- ಅಡಿವೊಣರ್ – ಪಾದಯುಗಳ
- ಅಡು -ಬೇಯಿಸು; ಆ ಕಾಡು
- ಅಡುಕು – ಸ್ಥಾನಾಂತರ ಮಾಡು
- ಅಡುಗರ್ಬು – ಸೌದೆ
- ಅಡು(ಡಿ)ಗೆ – ಬೇಯಿಸುವುದು; ಪಾಕಕ್ರಿಯೆ
- ಅಡುರ್ಕೆ – ಹಬ್ಬುವಿಕೆ; ಆಕ್ರಮಣ
- ಅಡೆ – ಬೆರಳಿನಿಂದ ಹೊಡೆ; ಅಂಗುಲಿಪ್ರಹರಣ;
- ಬಡಗಿಯ ಆಧಾರದ ಕೊರಡು; ತಿಪ್ಪೆ
- ಅಡೆಗೆಡೆ – ಅಡ್ಡವಾಗಿ ಬೀಳು
- ಅಡೆಮಂಚಿಕೆ – ವಸ್ತುಗಳನ್ನು ಕತ್ತರಿಸಲು
- ಆಧಾರವಾದ ಅಡಿಯ ಮಣೆ
- ಅಡೆಯೊಡ್ಡು – ಅಡೆಯನ್ನು ಒಡ್ಡು
- ಅಡೆಯೊತ್ತು – ಜೋರಾಗಿ ಅಮುಕು
- ಅಡೆವೊತ್ತು – ಸುತ್ತಲೂ ಹೊತ್ತಿಕೊ
- ಅಡ್ಡ – (ಅರ್ಧ) ಹಣದ ಅರ್ಧಬೆಲೆಯ ಒಂದು ನಾಣ್ಯ
- ಅಡ್ಡಂ- ಅಡ್ಡಲಾಗಿ
- ಅಡ್ಡಂಬರ್ – ಅಡ್ಡಲಾಗಿ ಬರು
- ಅಡ್ಡಂಬರಿ – ಅಡ್ಡಲಾಗಿ ಹರಿ; ನುಗ್ಗು
- ಅಡ್ಡಂಬರಿಯಿಸು – ಅಡ್ಡಲಾಗಿ ಹೋಗುವಂತೆ ಮಾಡು
- ಅಡ್ಡಗೊಂಬು – ಅಡ್ಡಲಾಗಿ ಚಾಚಿಕೊಂಡಿರವ ಕೊಂಬೆ
- ಅಡ್ಡಣ – ಢಾಲು, ಗುರಾಣಿ
- ಅಡ್ಡಣಾಯತವಡೆ – ಗುರಾಣಿ ಹಿಡಿದವರ ಸೈನ್ಯ
- ಅಡ್ಡಣಿಗೆ – ತಳಿಗೆಯಿಡುವ ಪೀಠ
- ಅಡ್ಡತರ – ಅಡ್ಡಲಾಗಿ ನಿಲ್ಲುವ ಅಥವಾ ಚಲಿಸುವ ರೀತಿ
- ಅಡ್ಡಪುರಿ – ನೃತ್ಯದ ಒಂದು ಭಂಗಿ
- ಅಡ್ಡಬೊಟ್ಟು – ಹಣೆಯ ಮೇಲಿನ ಅಡ್ಡ ಗೆರೆ
- ಅಡ್ಡಮಿರ್ – ಅಡ್ಡಲಾಗಿರು
- ಅಡ್ಡಮುಂ ತಿಗಟಮುಂ – ಅಡ್ಡಡ್ಡಲಾಗಿ
- ಅಡ್ಡಯಿಸು – ಅಡ್ಡಿಮಾಡು
- ಅಡಟ್ಡವಣೆ – ಕಂಬಗಳ ಮೇಲೆ ಜೋಡಿಸಲಾದ ಮಣೆ
- ಅಡ್ಡವಿಸು – ಅಡ್ಡಿಮಾಡು
- ಅಡ್ಡವೊಡ್ಡು – ಅಡ್ಡಲಾಗಿ ಒಡ್ಡು
- ಅಡ್ಡಸಾರ್ಚು – ಪಕ್ಕದಲ್ಲಿ ನಿಲ್ಲಿಸು
- ಅಣ್ – ಅಂಟು; ಸೋಕು
- ಅಣಂ – ಸ್ವಲ್ಪವೂ; ಹೆಚ್ಚಾಗಿ
- ಅಣಂಬೆ – ನಾಯಿಕೊಡೆ
- ಅಣಕ – ಆಶ್ಚರ್ಯ; ಪೀಡೆ, ಹಿಂಸೆ; ಕುಚೋದ್ಯ; ಹುಡುಗಾಟಿಕೆ; ನಟನೆ; ಸೋಗು; ಅನುಕರಣೆ; ಅನುಚಿತ; ಒತ್ತಾಗಿರುವುದು
- ಅಣಕಂ – ಅತಿಶಯವಾಗಿ
- ಅಣಕಚಣಕಂಗೆಡೆ – ಕುಚೋದ್ಯಮಾಡು
- ಅಣಕವಾತು – ಕುಚೋದ್ಯದ ಮಾತು
- ಅಣಕಿಸು – ಅಪಹಾಸ್ಯ ಮಾಡು; ಅನುಕರಿಸು
- ಅಣಚಿ – ಮುತ್ತೈದೆ
- ಅಣಚಿತನ – ಮುತ್ತೈದೆತನ
- ಅಣಲ್ – ಬಾಯಿಯ ಅಂಗುಳು; ದವಡೆ; ಗಂಟಲು
- ಅಣಸು – ಆಯುಧದ ಹಿಡಿ; ಬಾಣದ ಹಿಳುಕು
- ಅಣಿ – ಸೈನ್ಯದ ಒಂದು ಅಂಗ; ಪದಾತಿ; ಸೈನ್ಯದ ವ್ಯೂಹ; ಕಡಾಣಿ; ಸಿದ್ಧನಾಗು
- ಅಣಿಮಾ – ಅಷ್ಟಸಿದ್ಧಿಗಳಲ್ಲಿ ಒಂದು, ಅತ್ಯಂತ ಸೂಕ್ಷ್ಮರೂಪವನ್ನು ಪಡೆಯಬಲ್ಲ ಶಕ್ತಿ, ನೋಡಿ, `ಅಷ್ಟಸಿದ್ಧಿ’
- ಅಣಿಯರ – ಅತಿಶಯ; ಹಿರಿಮೆ; ರಭಸ
- ಅಣಿಯರಂ – ಅತಿಶಯವಾಗಿ
- ಅಣಿಲ್ – ಅಳಿಲಿನಂತಹ ಸಣ್ಣ ಪ್ರಾಣಿ
- ಅಣಿವಿಣಿ – ಬಿಕ್ಕಟ್ಟು; ತಡೆ
- ಅಣುಂಗ – ಪ್ರೀತಿಪಾತ್ರ ವ್ಯಕ್ತಿ; ಮಗ
- ಅಣು(ಂ)ಗು – ಪ್ರೀತಿ
- ಅಣುಗಗಲಹ – ಪ್ರಣಯಕಲಹ
- ಅಣುಗದಮ್ಮ – ಪ್ರೀತಿಯ ತಮ್ಮ
- ಅಣುಗಮಗ – ಪ್ರೀತಿಯ ಮಗ
- ಅಣುಗಮೆಯ್ದುನ – ಪ್ರೀತಿಯ ಮೈದುನ
- ಅಣುಗಾಳ್ – ಪ್ರೀತಿಯ, ನಚ್ಚಿನ ಬಂಟ
- ಅಣುವ – ಹನುಮಂತ
- ಅಣುವ(ಬ್ರ)್ರತ – (ಜೈನ) ಜೈನ ಗೃಹಸ್ಥರು ಪಾಲಿಸಬೇಕಾದ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ಐದು ವ್ರತಗಳಲ್ಲಿ ಒಂದು
- ಅಣೂತ್ತರೆ – (ಜೈನ) ಲೋಕಾಕಾಶದ ತುದಿಯ ನೆಲೆಯಲ್ಲಿರು ಐದು ವಿಮಾನಗಳಲ್ಲಿ ಒಂದು, ನೋಡಿ, “ಪಂಚಾಣೂತ್ತರೆ”
- ಅಣೆ – ತಿವಿ, ಇರಿ; ಹೊಡೆ, ಅಪ್ಪಳಿಸು; ಮುಟ್ಟು, ಸೇರು; ನದಿಗೆ ಹಾಕುವ ಅಡ್ಡಗಟ್ಟೆ; ಬೆಟ್ಟದ ತಪ್ಪಲು
- ಅಣೆಯಿಸು – ಅಣಿಸು, ಹೊಡೆಯಿಸು
- ಅಣ್ಕು – ಮುಳುಗು
- ಅಣ್ಕೆ – ಲೇಪನ; ಬಣ್ಣಹಾಕುವುದು
- ಅಣ್ಕೆಗೆಯ್ – ಲೇಪಿಸು, ಬಣ್ಣಹಾಕು
- ಅಣ್ಣ – ಅಗ್ರಜ; ಹಿರಿಯ ಮಗ
- ಅಣ್ಣನೆ – ಹಿತವಾಗಿ
- ಅಣ್ಣವಳಿ – ಅಂದಗೆಡು(?)
- ಅಣ್ಣೆಕಲ್ – ಮೇಲಕ್ಕೆಸೆದು ಹಿಡಿಯುವ ಆಟದ ಸಣ್ಣಕಲ್ಲು
- ಅಣ್ಣೆಕಲ್ಲಾಟ – ಅಣ್ಣೆಕಲ್ಲಿನ ಆಟ
- ಅಣ್ಣೆವಾಲ್ – ಶುದ್ಧವಾದ ಹಾಲು
- ಅಣ್ಪು – ಬಳಿಯುವುದು; ಸವರುವುದು; ಲೇಪನ; ಲೇಪನವಸ್ತು; ನಂಟತನ
- ಅಣ್ಪುಗೆಯ್ – ಲೇಪಿಸು
- ಅಣ್ಮು – ಪರಾಕ್ರಮ; ಸಾಮಥ್ರ್ಯ; ಪೌರುಷ ತೋರು
- ಅಣ್ಮುಕಾ – ಸಮರ್ಥ
- ಅಣ್ಮುಗಿಡು – ಸಾಮಥ್ರ್ಯ ನಾಶವಾಗು
- ಅಣ್ಮುಗುಂದು – ಪೌರುಷ ಕುಗ್ಗು
- ಅತಂದ್ರ – ತೂಕಡಿಕೆಯಿಲ್ಲದ; ಎಚ್ಚರಿಕೆಯಿಂದ ಕೂಡಿದ
- ಅತನು – ಕೃಶವಲ್ಲದ; ದೇಹವಿಲ್ಲದವನು, ಮನ್ಮಥ
- ಅತನುಹರ – ಮನ್ಮಥನನ್ನು ಕೊಂದವನು, ಶಿವ
- ಅತನೂದರ – ಕೃಶವಲ್ಲದ ಹೊಟ್ಟೆ
- ಅತಕ್ರ್ಯ – ಊಹಿಸಲಾಗದ
- ಅತಕ್ರ್ಯಗೋಚರ – ಊಹೆಗೆ ಮೋರಿದ
- ಅತಸೀ(ಪುಷ್ಪ) – ಅಗಸೆ (ಹೂ)
- ಅತಾಂತಂ – ಶ್ರಮವಿಲ್ಲದೆ
- ಅತಾತ್ವಿಕ – ಕೃತ್ರಿಮ
- ಅತಿಕ್ರಮ – ಕ್ರಮವನ್ನು ಮೀರುವುದು; ಮರ್ಯಾದೆ ಮೀರುವುದು
- ಅತಿಕ್ರಮಿಸು – ಮೀರು; ಉಲ್ಲಂಘಿಸು; ಹೊರಹೊಮ್ಮು
- ಅತಿಕ್ರಾಂತ – ಮೀರಿದ; ಮುಗಿದುಹೋದ
- ಅತಿದ್ರುತ ಪ್ರವಾಹಮಾನ – ಅತ್ಯಂತ ವೇಗವಾಗಿ ಹರಿಯುವ
- ಅತಿಚದುರ – ಬಹಳ ಜಾಣ
- ಅತಿತೃಷ್ಣೆ – ಬಹಳವಾದ ಬಾಯಾರಿಕೆ
- ಅತಿದುಷ್ಷಮ – (ಜೈನ) ಜ್ಞಾನ, ಆಯುಷ್ಯ
- ಮುಂತಾದವು ಕಡಿಮೆಯಾಗುತ್ತ
- ಹೋಗುವ ಅವಸರ್ಪಿಣಿ ಎಂಬ ಕಾಲದ
- ಕಡೆಯ ಭಾಗ; “ದುಷ್ಷಮದುಷ್ಷಮ ಕಾಲ”
- ಅತಿಧವಳ – ಬಹಳ ಬೆಳ್ಳಗಿರುವ
- ಅತಿಬಲ(ಳ) – ಹೆಚ್ಚು ಶಕ್ತಿಯಿರುವ
- ಅತಿಭವ – ಕಳೆದ ಜನ್ಮ
- ಅತಿಮುಕ್ತ – ಪೂರ್ಣವಾಗಿ ಬಿಡುಗಡೆ ಹೊಂದಿದ;
- ಬೀಜರಹಿತವಾದ; ಇರುವಂತಿಗೆ
- ಅತಿಮೋಹ – ಹೆಚ್ಚಾದ ಮೋಹ
- ಅತಿರಥ – ನಾಲ್ಕು ಬಗೆಯ ರಥಿಕರಲ್ಲಿ ಅತ್ಯಂತ ಶ್ರೇಷ್ಠ
- ಅತಿರೇಕ – ರೂಢಿಗೆ ವಿರುದ್ಧವಾದ ನಡೆ; ಅಳತೆಗೆ ಮೀರಿದ
- ಅತಿವರ್ತಿ – ಬಹಳ ಹೆಚ್ಚಿನ; ಮೊಟ್ಟ ಮೊದಲನೆಯ; ಕ್ರಮಮೀರಿ ನಡೆಯುವ
- ಅತಿವರ್ತಿತ – ಆನೆಯ ಸಪ್ತಮದಗಳಲ್ಲಿ ಒಂದು
- ಅತಿವೃತ್ತ – ತುಂಬ ಗುಂಡಗಿನ; ಅನಾಚಾರಿ
- ಅತಿವ್ಯಕ್ತ – ತುಂಬ ಸ್ಪಷ್ಟವಾದ
- ಅತಿಶಯ – ಮೇಲ್ಮೆ, ಹೆಚ್ಚಳ
- ಅತಿಶಯಧವಳ – ತುಂಬ ಬಿಳುಪಾದ; ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಒಂದು ಬಿರುದು
- ಅತಿಶಯಿತ – ಶ್ರೇಷ್ಠ
- ಅತಿಸಂಧಿತೆ – ವಂಚಿತೆ
- ಅತೀಂದ್ರಿಯಸೌಖ್ಯ – ಇಂದ್ರಿಯಗಳಿಗೆ ಸಂಬಂಧಿಸದ, ಆತ್ಮಕ್ಕೆ ಸಂಬಂಧಿಸಿದ ಸುಖ
- ಅತೀತ – ಮೀರಿದ; ದಾಟಿದ; ಗತಿಸಿಹೋದ; ಕಳೆದುಹೋದ
- ಅತೀತಜನ್ಮ – ಕಳೆದುಹೋದ ಜನ್ಮ
- ಅತೀತಭವ – ಅತೀತಜನ್ಮ
- ಅತುಚ್ಛ – ತುಚ್ಛವಲ್ಲದ, ಶ್ರೇಷ್ಠ
- ಅತುಚ್ಛಬಾಣ – ಹೆಚ್ಚು ಶಕ್ತಿಯ ಬಾಣ
- ಅತ್ತ – ಆ ಕಡೆ; ಹೊರಗೆ; ಬೇರೊಂದೆಡೆ; ಆಮೇಲೆ
- ಅತ್ತಂ – ಆ ಕಡೆಗೆ; ಅತ್ತಲಾಗಿ
- ಅತ್ತಣಿಂ – ದೆಸೆಯಿಂದ, ಆ ಕಡೆಯಿಂದ
- ಅತ್ತಪರ – ಗುರಾಣಿ
- ಅತ್ತರಣ – ಕುಳಿತುಕೊಳ್ಳು ಅಥವಾ ಮಲಗುವ
- ಮೆತ್ತನೆಯ ಆಸನ
- ಅತ್ತರಿಸು – ಪರಿಮಳಗೊಳಿಸು
- ಅತ್ತಲಗ್ಗ – ಅತಿಶಯದ
- ಅತ್ತಳ – ಅತಿಶಯ
- ಅತ್ತಳಗ – ತಾಳಲು ಅಶಕ್ಯವಾದ; ವ್ಯಥೆ
- ಅತ್ತಳಗಂ – ಹೆಚ್ಚಾಗಿ; ಅತ್ಯಧಿಕವಾಗಿ
- ಅತ್ತಿಗೆ – ಅಣ್ಣನ ಹೆಂಡತಿ; ಪ್ರೀತಿಸಿದವಳು, ನಲ್ಲೆ
- ಅತ್ಯಂತ – ಎಲ್ಲೆಮಿರಿದ; ಎಲ್ಲಕ್ಕೂ ಮಿಗಿಲಾದ
- ಅತ್ಯಂತಾಭಾವ – ಸಂಪೂರ್ಣವಾಗಿ ಇಲ್ಲದಿರುವುದು
- ಅತ್ಯಯ – ಅತಿಕ್ರಮ; ಹದ್ದು ಮೀರುವುದು; ಸಾವು
- ಅತ್ಯಾಯತ – ಬಹಳ ವಿಸ್ತಾರವಾದ
- ಅತ್ಯಾಯಾಮ – ಅತ್ಯಾಯತ
- ಅತ್ಯಾಸನ್ನ – ಬಹು ಸಮೀಪವಿರುವ
- ಅತ್ಯಾಸುರ – ಬಹು ಭಯಂಕರವಾದ
- ಅತ್ಯುಜ್ವಲ – ತುಂಬ ಪ್ರಕಾಶಮಾನವಾದ
- ಅತ್ಯುದ್ಗಾರಿಸು – ಬಲವಾಗಿ ಹೊರಚೆಲ್ಲು; ಕಾರಿಕೊಳ್ಳು
- ಅತ್ಯುತ್ಸುಕ – ತುಂಬ ತವಕವುಳ್ಳ
- ಅತ್ಯೂರ್ಜಿತ – ಬಹಳ ಏಳಿಗೆ ಹೊಂದಿದ
- ಅತ್ರಸ್ತ – ಹೆದರದ
- ಅತ್ರಪಾತ್ಮಿಕೆ – ನಾಚಿಕೆಯಿಲ್ಲದವಳು
- ಅತ್ರಿಪುತ್ರ – ಅತ್ರಿಯ ಮಗ, ಚಂದ್ರ
- ಅತ್ಯಯ – ಅಂತ್ಯ, ಕೊನೆ
- ಅಥರ್ವಕುಶಲ – ಅಥರ್ವವೇದ ಪಂಡಿತ
- ಅದಂಡ್ಯ – ದಂಡಿಸಬಾರದ; ದಂಡನಾರ್ಹವಲ್ಲದ
- ಅದಗುಂತಿ – ಆಶ್ವರ್ಯ
- ಅದಟ – (ಅಧಟ) ಶೂರ
- ಅದಟತೆ – ಪರಾಕ್ರಮ
- ಅದಟಲೆ – ಧಿಕ್ಕರಿಸು
- ಅದಟು – ಪರಾಕ್ರಮ; ಸತ್ವ; ದರ್ಪ
- ಅದಭ್ರ – ಅಧಿಕ; ಸಮೃದ್ಧಿಯಾದ
- ಅದಯ – ದಯೆಯಿಲ್ಲದ; ಕ್ರೂರ
- ಅದರಟ್ಟು – ಬೆದರಿಸಿ ಅಟ್ಟು
- ಅದವ¿ಲ್ – ದುಃಖ, ಬೇಗುದಿ
- ಅದಿತಿ – ದೇವತೆಗಳ ಜನನಿ; ಹಸು; ಭೂಮಿ
- ಅದಿತಿಜಪುರ – ಅಮರಾವತಿ
- ಅದಿತಿಪ್ರಿಯ ಪುತ್ರ – ಸೂರ್ಯ
- ಅದಿರ್ – ನಡುಗು; ಕಂಪಿಸು; ಹೆದರು; ಕಂಪನ
- ಅದಿರ್ಗಂತಿ – ಮಾಧವಿ ಹೂ
- ಅದಿರ್ಪು – ನಡುಗಿಸು; ಅಡಗಿಸು; ಧಿಕ್ಕರಿಸು; ನಿವಾರಿಸು; ಕಂಪನ
- ಅದಿರ್ಪುಗೆಯ್ – ಅದುರಿಸು
- ಅದಿರ್ಮುತ್ತೆ – ಮಾಧವೀಲತೆ, ಇರುವಂತಿಗೆ
- ಅದುಕಾರಣ – ಆ ಕಾರಣದಿಂದ
- ಅದುಗಾಣ್ -ಅದನ್ನು ನೋಡಿ
- ಅದುಗಿಡು – `ಅದು ತಪ್ಪಿಹೋಗು’
- ಅದುವದು – ವಿಚಾರಮಾಡುವುದು; ವಿಮರ್ಶಿಸುವುದು
- ಅದೂಷ್ಯ – ದೂಷ್ಯವಲ್ಲದ
- ಅದೃಢ – ದೃಢವಲ್ಲದ, ಸಡಿಲವಾದ
- ಅದೃಶ್ಯರೂಪ – ಇತರರಿಗೆ ಕಾಣಿಸದ ರೂಪ
- ಅದೃಷ್ಟಪುರುಷಸಂಧಿ – ರಾಜನೀತಿಯ ಹದಿನಾರು ಬಗೆಯ ಸಂಧಿಗಳಲ್ಲಿ ಒಂದು
- ಅದೃಷ್ಟಪೂರ್ವ – ಹಿಂದೆ ಕಂಡಿರದ
- ಅದೃಷ್ಟಸಂಧಿ – ಅದೃಷ್ಟಪುರುಷಸಂಧಿ
- ಅದೆ – ಅದೇ, ಅಗೋ ಎಂಬಂತೆ ಗಮನ ಸೆಳೆಯುವ ಮಾತು
- ಅದೇಯ – ಕೊಡಬಾರದ
- ಅದೈವೆ – ದೈವಬಲವಿಲ್ಲದವಳು
- ಅದೊ – ಅಗೋ
- ಅದ್ಗ – ಎರಡರಲ್ಲಿ ಒಂದು ಪಾಲು; ಅರ್ಧ
- ಅದ್ದರ – ಹೋಮಪೂಜೆ
- ಅದ್ದಿಕ – ಅಧ್ಯಕ್ಷ; ಮುಖ್ಯಾಧಿಕಾರಿ
- ಅದ್ಭುತಾಕೃತಿ – ಬಹು ದೊಡ್ಡದೂ
- ಆಶ್ಚರ್ಯದಾಯಕವೂ ಆದ ಆಕಾರ
- ಅದ್ಯತನ – ಈಚಿನ; ಈಚಿನವನು
- ಅದ್ರಿ – ಬೆಟ್ಟ; ಮರ
- ಅದ್ರಿಕನ್ಯೆ – (ಹಿಮಾಲಯ0) ಪರ್ವತದ ಮಗಳು, ಪಾರ್ವತಿ
- ಅದ್ವಂದ್ವ – ದ್ವಂದ್ವಗಳಿಲ್ಲದ; ಅದ್ವಿತೀಯ
- ಅದ್ವಯ – ಎರಡಿಲ್ಲದ, ಅದ್ವಿತೀಯ
- ಅದ್ವಿತೀಯ – ಎರಡಾಗಿಲ್ಲದ; ಸಮಾನವಿಲ್ಲದ
- ಅಧಃಕರಿ(ಯಿ)ಸು – ಕೀಳುಮಾಡು; ಧಿಕ್ಕರಿಸು
- ಅಧಃಕೃತ – ಕೀಳುಮಾಡಲ್ಪಟ್ಟ
- ಅಧಃಪತನ – ಕೆಳಕ್ಕೆ ಬೀಳುವುದು;
- ದುರ್ಗತಿಗಿಳಿಯುವುದು
- ಅಧಃಪಾತ – ಅಧಃಪತನ
- ಅಧಃಪ್ರಭಾವ – ಕಡಿಮೆಯಾದ ಪ್ರಭಾವ
- ಅಧಃಪ್ರವೃತ್ತಕರಣ – ನಾನಾ ಜೀವಾಪೇಕ್ಷೆಯಿಂದ ಉತ್ತರ ಕರಣ (ಪರಿಣಾಮ)ಗಳು ಪೂರ್ವಪರಿಣಾಮಗಳೊಡನೆ ಸಾದೃಶ್ಯವನ್ನು ಹೊಂದುವುದು
- ಅಧಃಸ್ಥಳಂಬಿಡಿ – ತಳಭಾಗವನ್ನು ಅವಲಂ
- ಅಧನದ – ಹಣವಿಲ್ಲದವನು, ಬಡವ; ಧನವನ್ನು ಕೊಡದವನು; ಜಿಪುಣ
- ಅಧಮವರ್ಣ – ಶೂದ್ರ
- ಅಧರ – ತುಟಿ, ಕೆಳದುಟಿ
- ಅಧರಂಮಾಡು – ಕೀಳುಮಾಡು
- ಅಧರತಾವಾಪ್ತಿ – ಕೀಳುತನವನ್ನು ಹೊಂದುವುದು
- ಅಧರತೆ – ಕೆಳಗಡೆ ಇರುವಿಕೆ
- ಅಧರರ್ – ಕೀಳಾದವರು
- ಅಧರಿತ – ಕೀಳುಮಾಡಲ್ಪಟ್ಟ
- ಅಧರಿಸು – ಕೀಳುಮಾಡು
- ಅಧಸ್ಸ್ಥಲ(ಳ) – ಕೆಳಗಿನ ಪ್ರದೇಶ
- ಅಧಿಕರಣ – ಅಧಿಕಾರ
- ಅಧಿಕಾಕ್ಷ – ಹೆಚ್ಚು ಕಣ್ಣಿರುವವನು, ಶಿವ
- ಅಧಿಕಾರ – (ಜೈನ) ಅತಿಬಾಲವಿದ್ಯಾ ಕುಲಾವಧಿ ವರ್ಣೋತ್ತಮತ್ವ, ಪಾತ್ರತ್ವ, ಸೃಷ್ಟ್ಯಧಿಕಾರ, ವ್ಯವಹಾರ, ಈಶಿತ್ವ, ಅವಧ್ಯತ್ವ, ಅದಂಡ್ಯತ್ವ, ಮಾನಾರ್ಹತ್ವ, ಪ್ರಜಾಸಂಬಂಧಾಂತರ ಎಂಬ ಹತ್ತು ಅಧಿಕಾರಗಳು
- ಅಧಿಕಾರಿ – ಅಧಿಕಾರದಲ್ಲಿ ನಿಯೋಜಿಸಲ್ಪಟ್ಟವನು
- ಅಧಿಗತ – ಪಡೆದ; ಪ್ರಾಪ್ತವಾದ; ಅಭ್ಯಾಸಮಾಡಿದ
- ಅಧಿಗಮನ – ಕಲಿಯುವಿಕೆ
- ಅಧಿಜ್ಯಧನು – ಹೆದಯೇರಿಸಿದ ಬಿಲ್ಲು; ಅಂಥ ಬಿಲ್ಲುಳ್ಲ
- ಅಧಿತ್ಯಕ – ಬೆಟ್ಟದ ಮೇಲಿನ ಕಾಡು ಪ್ರದೇಶ
- ಅಧಿದೇವತೆ – ಅಭಿಮಾನಿ ದೇವತೆ; ಒಂದು ಸ್ಥಳದ ದೇವತೆ; ಎಲ್ಲಕ್ಕಿಂತ ಮುಖ್ಯವಾದ ದೇವತೆ
- ಅಧಿನಾಥ – ಪ್ರಧಾನ ಅಧಿಕಾರಿ; ಒಡೆಯ
- ಅಧಿಪ – ಅಧಿನಾಥ
- ಅಧಿಪತಿ – ಅಧಿನಾಥ
- ಅಧಿಪಾಲ – ಅಧಿನಾಥ
- ಅಧಿರೂಢ – ಮೇಲೇರಿದ
- ಅಧಿರೋಹಣ – ಮೇಲೇ ಹತ್ತುವುದು
- ಅಧಿರೋಹಿಣಿ – ಏಣಿ
- ಅಧಿವಾಸ – ಹೊದಿಕೆ
- ಅಧಿವಾಸಿತ – ಪ್ರತಿಷ್ಠಾನೆಗೊಂಡ; ಸುಗಂಧಯುಕ್ತವಾದ
- ಅಧಿವಾಸಿಸು – ನೆಲಸು; ಪೂಜಿಸು; ಸುಗಂಧಭರಿತವಾಗಿಸು
- ಅಧಿಶ್ರಯಣಿ – ಅಡಿಗೆಯ ಒಲೆ
- ಅಧಿಶ್ರಾವಕ – ಪ್ರಮುಖ ಶ್ರಾವಕ
- ಅಧಿಷ್ಠಾನ – ನೆಲೆಸಿರುವುದು; ಆಧಾರ, ನೆಲೆ; ತಳಹದಿ
- ಅಧಿಷಾನಂಗಟ್ಟು – ತಳಹದಿ ಹಾಕು
- ಅಧಿಷ್ಠಿತ – ಪ್ರಭುತ್ವ ನಡೆಸುವ, ಮೇಲಧಿಕಾರವನ್ನು ಪಡೆದವನು
- ಅಧಿಷ್ಠಿಸು – ನೆಲೆಗೊಳಿಸು; ನೆಲಸು
- ಅಧೀಶ – ಒಡೆಯ
- ಅಧೀಶ್ವರ – ಅಧಿರಾಜ; ಇತರ ರಾಜರ ಮೇಲೆ ಅಧಿಕಾರವುಳ್ಳವನು
- ಅಧೋಕ್ಷಜ – ವಿಷ್ಣು; ವಾಸುದೇವ
- ಅಧೋಘ – ಕೆಳಮುಖವಾದ; ಇಳಿಯುವ
- ಅಧೋಗತಿ – ಕೆಳಕ್ಕಿಳಿಯುವುದು; ಅವನತಿ
- ಅಧೋಗ್ರೈವೇಯಕ – (ಜೈನ) ಒಂಬತ್ತು ಗ್ರೈವೇಯಕಗಳೆಂಬ ಕಲ್ಪಾತೀತ ಸ್ವರ್ಗಗಳಲ್ಲಿ ಕೆಳಗಿನದು; ನೋಡಿ `ಗ್ರೈವೇಯಕ’
- ಅಧೋಭೂಮಿ – ಕೆಳಗಿನ ಲೋಕ
- ಅಧೋಲೋಕ – ಅಧೋಭೂಮಿ
- ಆಧ್ಯಯನ – ಬ್ರಾಹ್ಮಣನ ಷಟ್ಕರ್ಮಗಳಲ್ಲಿ ಒಂದಾದ ವೇದಾಧ್ಯಯನ
- ಅಧ್ಯಯನಾಂತರಾಯ – ಶಾಸ್ತ್ರವ್ಯಾಸಂಗಕ್ಕೆ ಆಗುವ ಅಡ್ಡಿ; ಪಾಠವಿಘ್ನ
- ಅಧ್ಯವಸಾಯ – ನಿಶ್ಚಿತಜ್ಞಾನ
- ಅಧ್ಯಾತ್ಮ – ಆತ್ಮಕ್ಕೆ ಸಂಬಂಧಪಟ್ಟ; ಬ್ರಹ್ಮಜ್ಞಾನ
- ಅಧ್ಯಾತ್ಮಧ್ಯಾನ – ಅತ್ಮತತ್ವವನ್ನು ನೆನೆಯುತ್ತಿರುವುದು
- ಅಧ್ಯಾತ್ಮವಿಶಾರದ – ತತ್ವಶಾಸ್ತ್ರದಲ್ಲಿ ನಿಪುಣ
- ಅಧ್ಯಾಪನ – ವೇದವನ್ನು ಪಾಠ ಹೇಳುವುದು; ಬ್ರಾಹ್ಮಣನ ಷಟ್ಕರ್ಮಗಳಲ್ಲಿ ಒಂದು
- ಅಧ್ಯಾರೋಪನಂಗೆಯ್ – ಇಲ್ಲದ ಗುಣಗಳನ್ನು ಆರೋಪಿಸು
- ಅಧ್ಯಾರೋಪಿಸು – ಬೇರೆ ಗುಣಗಳನ್ನು ಮೇಲೆ ತೋರಿಸು
- ಅಧ್ಯಾಸನ – ಮೇಲೆ ಕುಳಿತುಕೊಳ್ಳುವುದು
- ಅಧ್ಯಾಸಿತ – ಇಡಲ್ಪಟ್ಟ
- ಅಧ್ಯಾಷಿತ – ಮೇಲೆ ನಿಂತ; ನೆಲೆಸಿದ
- ಅಧ್ರುವ – ಅಸ್ಥಿರ
- ಅಧ್ವ – ದಾರಿ; ರೀತಿ; ಕ್ರಮ
- ಅಧ್ವಗ – ಪ್ರಯಾಣಿಕ
- ಅಧ್ವಗಜನ – ಪ್ರಯಾಣಿಕರು
- ಅಧ್ವಗಮನ – ಪ್ರಯಾಣ
- ಅಧ್ವಜಕ್ಲೇಶ – ದಾರಿಯಲ್ಲಿ ಆಗುವ ತೊಂದರೆ; ಪ್ರಯಾಣವಿಘ್ನ
- ಅಧ್ವನೀನ – ಪ್ರಯಾಣಿಸಲು ಸಮರ್ಥವಾದ
- ಅಧ್ವನ್ಯ – ಪ್ರಯಾಣಿಸಲು ಸಮರ್ಥವಾದ; ಸಿದ್ಧವಾದ ರಥ
- ಅಧ್ವರ – ಸೋಮಪಾನಪ್ರಧಾನವಾದ ಯಜ್ಞ
- ಅಧ್ವರಿ – ಯಜ್ಞಮಾಡುವವನು, ಯಾಗದೀಕ್ಷಿತ
- ಅಧ್ವರ್ಯು – ಯಜ್ಞಕ್ಕೆ ಬೇಕಾದ ಕೆಲಸವನ್ನು ಮಾಡುವುದರ ಜೊತೆಗೆ ಯಜುರ್ವೇದವನ್ನು ಪಠಿಸುವ ವ್ಯಕ್ತಿಅಧ್ವಶ್ರಮ – ಪ್ರಯಾಣದ ಆಯಾಸ
- ಅಧ್ವಾನ – ಮಾರ್ಗ; ಕಷ್ಟ; ಕಾಡು; ಧ್ವನಿಯಿಲ್ಲ
- ಅನಂಗ – ದೇಹವಿಲ್ಲದ, ಮನ್ಮಥ
- ಅನಂಗಪರವಶೆ – ಕಾಮಕ್ಕೆ ಒಳಗಾದವಳು
- ಅನಂಗಪಾಶ – ಮನ್ಮಥನ ಹಗ್ಗ
- ಅನಂಗಮುದ್ರೆ – ಮನ್ಮಥನ ಮುದ್ರಿಕೆ; ಅನಂಗಪರವಶತೆಯ ಭಂಗಿ
- ಅನಂಗರಾಗ – ಮೋಹ; ಕಾಮಾಸಕ್ತಿ
- ಅನಂಗರಾಜ – ಕಾಮ, ಮನ್ಮಥ
- ಅನಂಗರಾಜ್ಯ – ಕಾಮನ ರಾಜ್ಯ
- ಅನಂಗಲೋಕ – ಮನ್ಮಥಲೋಕ
- ಅನಂಗಸುಭಗ – ಮನ್ಮಥನಂತೆ ಚೆಲುವ;
- ದೇಹವಿಲ್ಲದೆ ಸುಂದರನಾದವನು
- ಅನಂಗಾಗ್ನಿ – ಕಾಮವೆಂಬ ಬೆಂಕಿ
- ಅನಂಗೇಭ – ಮನ್ಮಥನ ಆನೆ; ಮನ್ಮಥನೆಂಬ ಆನೆ
- ಅನಂಗೋತ್ಸವ – ಕಾಮಕ್ರೀಡೆ
- ಅನಂತ – ಮಿತಿಯಿಲ್ಲದ; ಗುಂಪು; ಕೃಷ್ಣ; ಆದಿಶೇಷ; (ಜೈನ) ಹದಿನಾಲ್ಕನೆಯ ತೀರ್ಥಂಕರ
- ಅನಂತಕಾಯ – (ಜೈನ) ಅನಂತ ಜೀವಗಳಿರುವ ವನಸ್ಪತಿ
- ಅನಂತಗಣನೆ – ಮೇರೆಮಿರಿದ ಲೆಕ್ಕ
- ಅನಂತಗುಣ – ಅಸಂಖ್ಯಾತ ಗುಣ
- ಅನಂತಚತುಷ್ಟಯ – (ಜೈನ) ತೀರ್ಥಂಕರರಾಗುವವರಿಗೆ ಕರ್ಮಪರಿಣಾಮಗಳು ನಷ್ಟವಾದ ಬಳಿಕ ಪ್ರಾಪ್ತವಾಗುವ ಅನಂತಜ್ಞಾನ, ಅನಂತದರ್ಶನ, ಅನಂತಸುಖ, ಅನಂತವೀರ್ಯಗಳೆಂಬ ನಾಲ್ಕು ಗುಣಗಳು
- ಅನಂತಜ್ಞಾನ – ಮಿತಿಯಿಲ್ಲದ ಜ್ಞಾನ ; (ಜೈನ)
- ಅನಂತಚತುಷ್ಟಯದಲ್ಲಿ ಒಂದು
- ಅನಂತದರ್ಶನ – ಮಿತಿಯಿಲ್ಲದ ನೋಟ; (ಜೈನ) ಅನಂತಚತುಷ್ಟಯದಲ್ಲಿ ಒಂದು
- ಅನಂತಪ್ರಬೋಧ – ಅನಂತಜ್ಞಾನ
- ಅನಂತಭೋಗ – ಅಪರಿಮಿತ ಸುಖ; ಅನಂತಸುಖ; ಆದಿಶೇಷನ ಶರೀರ
- ಅನಂತಭೋಗನಿಲಯ – ಅಪರಿಮಿತ ಸುಖಕ್ಕೆ ನೆಲೆಯಾದವನು; ಆದಿಶೇಷನ ಶರೀರವೇ ನೆಲೆಯಾಗಿರುವವನು
- ಅನಂತಭೋಗೀಶ್ವರ – ಆದಿಶೇಷ
- ಅನಂತರತ್ನ – ಅಪರಿಮಿತ ರತ್ನ; (ಅನಂತ=ಆಕಾಶ) ಸೂರ್ಯ
- ಅನಂತವಸ್ತುಪ್ರಕಾಶಿ – ಎಲ್ಲ ವಸ್ತುಗಳಿಗೂ ಕಾಣುವಂತೆ ಮಾಡುವ
- ಅನಂತವಿಧ – ನಾನಾ ಬಗೆ; ವಿವಿಧ ರೀತಿ
- ಅನಂತವೀರ್ಯ – ಅಪರಿಮಿತ ಶಕ್ತಿ; (ಜೈನ) ಅನಂತಚತುಷ್ಟಯಗಳಲ್ಲಿ ಒಂದು
- ಅನಂತಶಯನ – ಆದಿಶೇಷನ ಮೇಲೆ ಮಲಗಿರುವವನು, ವಿಷ್ಣು
- ಅನಂತಸಂಜ್ಞ – `ಅನಂತ` ಎಂಬ ಹೆಸರಿನವನು
- ಅನಂತಸೌಖ್ಯ – ಅನಂತಸುಖ
- ಅನಂತಾಂಶ – ಅನಂತನ ಒಂದು ಅಂಶ
- ಅನಂತಾಖ್ಯ – ಲೆಕ್ಕವಿಲ್ಲದಷ್ಟು ಹೆಸರುಳ್ಳ; ಅನಂತಸಂಜ್ಞ
- ಅನಂತಾತ್ಮಕ – ಲೆಕ್ಕವಿಲ್ಲದಷ್ಟು ಬಗೆಯುಳ್ಳದ್ದು
- ಅನಂತಾಧಾರ – ಕೊನೆಯಿರದ ಆಧಾರ; ವಿಷ್ಣುವಿನ ಆಶ್ರಯಸ್ಥಾನ; ಆದಿಶೇಷನ ಆಧಾರ
- ಅನಂತಾನುಬಂಧಿ – (ಜೈನ) ಅನಂತಕಾಲದವರೆಗೆ ಜೀವನನ್ನು ಹುಟ್ಟುಸಾವುಗಳ ಸಂಸಾರದಲ್ಲಿ ತಿರುಗಿಸುವ ಕ್ರೋಧ, ಮಾಯ, ಮಾನ ಲೋಭಗಳೆಂಬ ನಾಲ್ಕು ಬಗೆಯ ಕಷಾಯಗಳು
- ಅನಕ – ಕೀಳು, ನೀಚ
- ಅನಕ್ಷರಜಠರ – ನಿರಕ್ಷರಕುಕ್ಷಿ; ವಿದ್ಯೆಯಿಲ್ಲದವನು
- ಅನಕ್ಷರಾಳಾಪ – ಅಸ್ಪಷ್ಟ ನುಡಿ
- ಅನಗಾರ – (ಜೈನ) ಮನೆಯಿಲ್ಲದವನು
- ಅನಗಾರಕೇವಲಿ(ಳಿ) – (ಜೈನ) ಮನೆಯಲ್ಲಿ
- ವಾಸಿಸದ ಮುನಿ; ಕೇವಲಜ್ಞಾನಿ
- ಅನಗಾರವೇಳೆ – (ಜೈನ) ಜೈನಮುನಿಗಳ ಚರಿಗೆಯ ಸಮಯ
- ಅನಗಾರಸಮಯ – ಅನಗಾರವೇಳೆ
- ಅನಘ – ಪಾಪವಿಲ್ಲದ
- ಅನಘಸ್ಥಾನ – ಪಾಪವಿಲ್ಲದ ಜಾಗ
- ಅನಡ್ವ -ಗೂಳಿ
- ಅನತಿಜರಠ – ಹೆಚ್ಚು ಮುದಿಯಾಗದ
- ಅನತಿದೂರ – ಹೆಚ್ಚು ದುರವಿರದ; ಸಮೀಪ
- ಅನಧ್ಯಾಯ – ವ್ಯಾಂಗದ ನಡುವಣ ಬಿಡುವು; ರಜೆ
- ಅನನೃತವಚನ – ಸುಳ್ಳಲ್ಲದ ನುಡಿ; ಸತ್ಯ
- ಅನನ್ಯಜ – ಮನ್ಮಥ
- ಅನನ್ಯಮನಸ್ಕ – ಬೇರೆಡೆ ಗಮನವಿರಿಸಿದವನು
- ಅನನ್ಯಸಾಮಾನ್ಯ – ಬೇರೆಡೆ ಸಾಮಾನ್ಯವಲ್ಲದ; ವಿಶಿಷ್ಟವಾದ
- ಅನಪತ್ಯ – ಮಕ್ಕಳಿಲ್ಲದವನು
- ಅನಪತ್ಯೆ – ಮಕ್ಕಳಿಲ್ಲದವಳು; ಬಂಜೆ
- ಅನಪರಾಧೆ – ತಪ್ಪು ಮಾಡದಿರುವವಳು
- ಅನಪವರ್ತಿ – ಕುಗ್ಗದ; ಕಡಿಮೆಯಾಗದ
- ಅನಪವರ್ತಿತ – ಅನಪವರ್ತಿ
- ಅನಪವತ್ರ್ಯ – ಅನಪವರ್ತಿ
- ಅನಪಾಯಕ – ಅಫಯದಿಂದ ದೂರಗೈಯುವವನು
- ಅನಪಾಯಿನಿ – ನಾಶವಿಲ್ಲದವಳು, ಲಕ್ಷ್ಮಿ
- ಅನಪೇಕ್ಷ್ಕ – ಆಸೆಯಿಲ್ಲದವನು
- ಅನಭಿಜ್ಞಾತ – ಗೊತ್ತಿರದ; ಪ್ರಸಿದ್ಧವಲ್ಲದ
- ಅನಭ್ಯುದಯ – ಏಳಿಗೆಯಿಲ್ಲದ; ಅಭ್ಯುದಯವಿಲ್ಲದ
- ಅನಯ – ತಪ್ಪು ನಡೆ; ದುರ್ವಿಧಿ
- ಅನರೇಂದ್ರಜ್ಯ – ದೇವತೆಗಳ ಗುರು, ಬೃಹಸ್ಪತಿ
- ಅನರ್ಘರತ್ನ – ಅಮೂಲ್ಯರತ್ನ ; ಬೆಲೆಯಿಲ್ಲದ ವಸ್ತು
- ಅನರ್ಘಾಕಾರ – ಶ್ರೇಷ್ಠ ಆಕಾರ
- ಅನಘ್ರ್ಯರತ್ನ – ಅನರ್ಘರತ್ನ
- ಅನರ್ಥಕ – ಅರ್ಥವಿರದ; ಪ್ರಯೋಜನರಹಿತ
- ಅನರ್ಥಕ್ಯ – ನಿರರ್ಥಕ ಕಾರ್ಯ
- ಅನರ್ಥದಂಡವಿರತಿ – (ಜೈನ) ನಿರರ್ಥಕ ಹಿಂಸೆಯನ್ನು ಮಾಡದಿರುವುದು; `ಗುಣವ್ರತ’ಗಳಲ್ಲಿ ಒಂದು
- ಅನರ್ಥವಚನ – ಅರ್ಥವಿಲ್ಲದ ಮಾತು
- ಅನಲ – ಬೆಂಕಿ; ಅಗ್ನಿ
- ಅನಲಜೆ – ಬೆಂಕಿಯ ಮಗಳು, ದ್ರೌಪದಿ
- ಅನಲಮರೀಚಿ – ಬೆಂಕಿಯ ಕಿರಣ; ಸೂರ್ಯ
- ಅನಲವನಿತೆ – ಅಗ್ನಿಯ ಹೆಂಡತಿ, ಸ್ವಾಹಾದೇವಿ
- ಅನಲಾಕ್ಷ – ಬೆಂಕಿಯ ಕಣ್ಣಿನವನು, ಶಿವ, ಈಶಾನ
- ಅನಲಾರ್ಚಿ – ಬೆಂಕಿಯ ನಾಲಗೆ
- ಅನಲಾಸ್ತ್ರ – ಅಗ್ನಿಶರ, ಬೆಂಕಿಯುಗುಳುವ ಬಾಣ
- ಅನಲೋಷ್ಮ – ಬೆಂಕಿಯ ಝಳ
- ಅನಲ್ಪ – ಅಲ್ಪವಲ್ಲದ; ದೊಡ್ಡದಾದ
- ಅನಲ್ಪವಿಕಲ್ಪ – ನಾನಾ ಬಗೆಯ ರೂಪರೇಖೆಯಿರುವ
- ಅನವಕಾರ್ಯ – ಅವಜ್ಞೆ ಮಾಡಲಾಗದ
- ಅನವದ್ಯ – ದೋಷರಹಿತ, ನಿರ್ಮಲವಾದ
- ಅನವದ್ಯಚರಿತ – ಶುದ್ಧಚಾರಿತ್ರ್ಯವುಳ್ಳವನು
- ಅನವದ್ಯತ್ವ – (ಜೈನ) ಹತ್ತು ಅಧಿಕಾರಗಳಲ್ಲಿ ಒಂದು
- ಅನವದ್ಯಾಚರಣ – ನಿರ್ದುಷ್ಟ ಆಚಾರ
- ಅನವದ್ಯಾಚಾರ – ಅನವದ್ಯಾಚರಣ
- ಅನವದ್ಯೆ – ದೋಷರಹಿತೆ
- ಅನವಧಾನ – ಎಚ್ಚರಿಕೆಯಿಲ್ಲದಿರುವಿಕೆ
- ಅನವಧಿ – ಕೊನೆಯಿಲ್ಲದ
- ಅನವಧಿತ್ಯಾಗ – ಅಪಾರ ತ್ಯಾಗ
- ಅನವಧಿಬೋಧ – ಕೊನೆಯಿಲ್ಲದ ಜ್ಞಾನ ಪಡೆದವನು
- ಅನವರತ – ನಿರಂತರವಾದ
- ಅನವರತಂ – ಒಂದೇ ಸಮನೆ, ಸದಾಕಾಲ
- ಅನವಸ್ಥಿತ – ಅಸ್ಥಿರವಾದ
- ಅನವ್ಯ – ಹೊಸದಲ್ಲದ, ಹಳೆಯ
- ಅನಶನ – ಆಹಾರರಹಿತ; ಉಪವಾಸ
- ಅನಶನವ್ರತ – ಉಪವಾಸವ್ರತ
- ಅನಶನದೀಕ್ಷೆ – ಆಹಾರ ತೆಗೆದುಕೊಳ್ಳದ ವ್ರತ
- ಅನಶನವೃತ್ತಿ – ಅನಶನವ್ರತ
- ಅನಶ್ವರ – ಶಾಶ್ವತ
- ಅನಶ್ವರಶ್ರೀ – ಮೋಕ್ಷಪದವಿ
- ಅನಶ್ವರಾಸ್ಪದ – ಮೋಕ್ಷಸ್ಥಾನ
- ಅನಾಕಾರ – ರೂಪವಿಲ್ಲದ
- ಅನಾಕುಲ – ಪ್ರಶಾಂತವಾದ
- ಅನಾಕುಲ(ಳ)ಂ – ಪ್ರಶಾಂತವಾಗಿ; ಅನಾಯಾಸವಾಗಿ
- ಅನಾಗತ – ಮುಂದೆ ಸಂಭವಿಸುವ; ಭವಿಷ್ಯದ; ತಿಳಿಯದ
- ಅನಾಗತಂ – ಭವಿಷ್ಯಜ್ಞಾನದ ಮೂಲಕ
- ಅನಾಗತಕರ್ತೃ – ಭವಿಷ್ಯವನ್ನು ರೂಪಿಸುವವನು
- ಅನಾಗತಜ್ಞ – ಭವಿಷ್ಯವನ್ನು ಬಲ್ಲವನು
- ಅನಾಗತಮತಿ – ಭವಿಷ್ಯವನ್ನು ತಿಳಿದವನು
- ಅನಾಗತವೇದಿ – ಅನಾಗತಮತಿ
- ಅನಾಗಾರತೆ – ಸನ್ಯಾಸಧರ್ಮ
- ಅನಾಘ್ರಾತ – ಮೂಸಿ ನೋಡದ, ಮೀಸಲಾದ
- ಅನಾತ್ಮಜ್ಞತ್ವ – ಆತ್ಮದ ಸ್ವರೂಪವನ್ನು ತಿಳಿಯದಿರುವಿಕೆ
- ಅನಾದಿಪ್ರಭವ – ಅನಾದಿಕಾಲದಲ್ಲಿ ಹುಟ್ಟಿದ್ದು
- ಅನಾದಿಮಿಥ್ಯಾತ್ವ – (ಜೈನ) ಹಿಂದಿನಿಂದ ಬಂದ ತಪ್ಪು ತಿಳಿವಳಿಕೆ
- ಅನಾದೇಯ – ಸ್ವೀಕರಿಸಬಾರದ; (ಜೈನ) ನಾಮಕರ್ಮಗಳಲ್ಲಿ ಒಂದು; ಇದರಿಂದ ಜೀವನಿಗೆ ಕಾಂತಿರಹಿತ ಶರೀರ ಪ್ರಾಪ್ತವಾಗುವುದು
- ಅನಾದ್ಯನಿಧನ – ಹುಟ್ಟುಸಾವಿಲ್ಲದ್ದು; ಅನಾದಿ ಅನಂತವಾದುದು
- ಅನಾದ್ಯಪರ್ಯವಸಾನ – ಆರಂಭ ಅಂತ್ಯ ಇಲ್ಲದ; (ಜೈನ) ಮಿಥ್ಯಾತ್ವಕಾಲದ ಒಂದು ವಿಭಾಗ
- ಅನಾಧಾರತೆ – ಆಧಾರರಾಹಿತ್ಯ; ಆಶ್ರಯರಾಹಿತ್ಯ
- ಅನಾಧೇಯ – ಆಧಾರವನ್ನು ತಿರಸ್ಕರಿಸುವ, ಯಾವುದೇ ಆಶ್ರಯವಿರದ
- ಅನಾಪ್ತ – ಸಿಕ್ಕದ; ಪಡೆಯದ
- ಅನಾಪ್ತಾಗಮ – ಆಪ್ತರಲ್ಲದವರು ರಚಿಸಿದ ಶಾಸ್ತ್ರ
- ಅನಾಭಿಲಾಷೆ – ಆಸೆಯಿಲ್ಲದ್ದು
- ಅನಾಮಯ – ರೋಗರಹಿತ
- ಅನಾಯತನಸೇವೆ – (ಜೈನ) ಆರು ಬಗೆಯ ಮಿಥ್ಯೆಗಳ ಸೇವೆ
- ಅನಾಯುಧ – ಆಯುಧರಹಿತ
- ಅನಾರಂಭ – ಆರಂಭವಿಲ್ಲದ
- ಅನಾರತಂ – ಬಿಡುವಿಲ್ಲದೆ; ನಿರಂತರವಾಗಿ
- ಅನಾರ್ಷ – ಪ್ರಾಚೀನವಲ್ಲದ
- ಅನಾಲಸ್ಯ – ಆಲಸ್ಯವಿರದ; ಆಲಸ್ಯರಹಿತ ವ್ಯಕ್ತಿ ಅನಾವಿ(ಳ) ಕದಡದಿರುವ, ನಿರ್ಮಲವಾದಅನಾಹತಂ – ಏಟು ಬೀಳದೆ
- ಅನಾಹತಲೀಲೆ – ಕುಗ್ಗದ ಲೀಲೆ
- ಅನಿ(ತು) – ಅಷ್ಟು
- ಅನಿತರಸಾಧಾರಣ – ಬೇರೆಡೆ ಕಾಣಲಾಗದ
- ಅನಿತು(ತ್ತು) – ಅಷ್ಟು
- ಅನಿಧನ – ಸಾವಿಲ್ಲದ; ನಾಶವಿಲ್ಲದ
- ಅನಿಮಿತ್ತಂ – ಕಾರಣವಿಲ್ಲದೆ
- ಅನಿಮಿ(ಮೇ)ಷ; ಕಣ್ಣು ಮಿಟುಕಿಸದ; ದೇವತೆ; ಮೀನು; ಮತ್ಸ್ಯಾವತಾರ
- ಅನಿಮಿ(ಮೇ)ಷಚಾಪ – ಕಾಮನ ಬಿಲ್ಲು, ಇಂದ್ರಚಾಪ
- ಅನಿಮಿ(ಮೇ)ಷಜಾತ – ದೇವತಾ ಸಮೂಹ
- ಅನಿಮಿ(ಮೇ)ಷದ್ರೋಹ – ದೇವತಾದ್ರೋಹಿ; ರಾಕ್ಷಸ
- ಅನಿಮಿ(ಮೇ)ಷಧ್ವಜ – ಮೀನಿನ ಗುರುತಿನ ಧ್ವಜವುಳ್ಳವನು, ಮನ್ಮಥ
- ಅನಿಮಿ(ಮೇ)ಷಪತಿ – ದೇವತೆಗಳ ಒಡೆಯ, ಇಂದ್ರ
- ಅನಿಮಿ(ಮೇ)ಷಪ್ರಕೀರ್ಣಕ – ಮೀನುಗಳ ಹಿಂಡು; ದೇವತಾಸಮುಹ
- ಅನಿಮಿ(ಮೇ)ಷಮಂತ್ರಿ – ಬೃಹಸ್ಪತಿ
- ಅನಿಮಿ(ಮೇ)ಷಮಾರ್ಗ – ಆಕಾಶ
- ಅನಿಮಿ(ಮೇ)ಷಲೋಚನ – ದೇವತೆ
- ಅನಿಮೇಷಾವಳಿ – ದೇವತೆಗಳ ಗುಂಪು
- ಅನಿಮೇಷಾರಿ – ದೇವತೆಗಳ ಶತ್ರು, ರಾಕ್ಷಸ
- ಅನಿಮ್ನನಾಭಿ – ಆಳವಿಲ್ಲದ ಹೊಕ್ಕಳುಳ್ಳ
- ಅನಿಯತಿಕೆ – ನಿಯಮರಾಹಿತ್ಯ
- ಅನಿರುದ್ಧ – ತಡೆಯಿಲ್ಲದ; ಪ್ರದ್ಯುಮ್ನನ ಮಗ
- ಅನಿಲಕ – ಚಿತ್ರಗಳಿಗೆ ಬಣ್ಣ ಹಾಕುವ ಒಂದು ಬಗೆ
- ಅನಲತನಯ – ವಾಯುಪುತ್ರ; ಭೀಮ; ಆಂಜನೇಯ
- ಅನಿಲಪಥ – ಆಕಾಶ
- ಅನಿಲಾ(ಳಾ)ಧ್ವ – ಆಕಾಶ
- ಅನಿಲಾಪ್ತ – ಗಾಳಿಗೆ ಪ್ರೀತಿಪಾತ್ರನಾದವನು, ಅಗ್ನಿ
- ಅನಿಲಾಮರ – (ಜೈನ) ತೀರ್ಥಂಕರನ ವಿಹಾರ ಮಾರ್ಗವನ್ನು ಶುದ್ಧಿಕರಿಸುವ ದೇವತೆಗಳ ಗುಂಪು
- ಅನಿಲಾಹತ – ಗಾಳಿಯಿಂದ ಹೊಡೆಯಲ್ಪಟ್ಟ
- ಅನಿವ – ನಿರ್ಬಂಧ; ಆಗ್ರಹ
- ಅನಿ(ನು)ವಂಗೆಯ್ – ಬಲಾತ್ಕರಿಸು
- ಅನಿವಾರಣ – ನಿವಾರಿಸಲಸಾಧ್ಯವಾದ
- ಅನಿವಾರಿತ – ತಡೆಯಿಲ್ಲದ
- ಅನಿವಾರಿತದಾನ – ತಡೆಯಿಲ್ಲದೆ, ನಿರಂತರವಾಗಿ ನೀಡುವ ದಾನ
- ಅನಿ(ನು)ವಿರಿದು – ಅಷ್ಟು ದೊಡ್ಡದು
- ಅನಿ(ನು)ವಿಸು – ಬಲಾತ್ಕರಿಸು
- ಅನಿವೃತ್ತಿಕರಣ – (ಜೈನ) ಮೂರು ಬಗೆಯ ಕರಣಲಬ್ಧಿಗಳಲ್ಲಿ ಒಂದು; ಒಂಬತ್ತನೆಯ ಗುಣಸ್ಥಾನದಲ್ಲಿ ಜೀವನಿಗೆ ಧ್ಯಾನದಿಂದ ಉಂಟಾಗುವ ಪರಿಶುದ್ಧ ಭಾವಗಳು
- ಅನಿಶಂ – ನಿರಂತರವವಾಗಿ
- ಅನಿಸಂ – ಅನಿಶಂ
- ಅನಿಸು – ಅಷ್ಟು
- ಅನೀಕ – ಸೈನ್ಯ; ಗುಂಪು; ಸಾಲು
- ಅನೀಕಸ್ಥ – ಸೈನಿಕ
- ಅನೀಕಿನಿ – ಗುಂಪು; ಅಕ್ಷೌಹಿಣಿಯ ಹತ್ತನೆಯ ಒಂದು ಭಾಗ
- ಅನೀಪ್ಸಿತ – ಬಯಕೆಯಿಲ್ಲದ
- ಅನುಕಂಪಮಾನ – ನಡುಗುತ್ತಿರುವ
- ಅನುಕರ್ಷ – ಆಕರ್ಷಣೆ; ರಥದ ಅಚ್ಚಿನ ಮರ; ದೇವತೆಗಳ ಆವಾಹನೆ
- ಅನುಕೂಲಪವನ – ಹಿತಕರವಾದ ಗಾಳಿ
- ಅನಿಕ್ತಸಿದ್ಧ – ಹೇಳದೆಯೇ ಸಿದ್ಧವಾದುದು
- ಅನುಕ್ರಮ – ಕ್ರಮಕ್ಕೆ ಅನುಗುಣವಾದ
- ಅನುಕ್ರಮಂದಪ್ಪು – ಕ್ರಮವನ್ನು ಬಿಡು
- ಅನುಕ್ರಮಾಗತ – ಸಹಜ ಕ್ರಮದಲ್ಲಿ ಬಂದ
- ಅನುಕೃತ – ಅನುಕರಿಸಿದ
- ಅನುಕೃತಿ -ಅನುಕರಣ
- ಅನುಗತ – ಅನುಸರಿಸಿ ಬಂದ
- ಅನುಗತಿವೆ¾ು – ಕ್ರಮವನ್ನು ಪಡೆ
- ಅನುಗಮಿಸು – ಅನುಸರಿಸಿ ನಡೆ
- ಅನುಗಾಮಿ – ಅನುಸರಿಸುವ; (ಜೈನ) ಕ್ಷಯೋಪಶಮನನಿಮಿತ್ತಿಕವಾದ ಆರು ಅವಧಿಜ್ಞಾನಗಳಲ್ಲಿ ಒಂದು
- ಅನುಗೆಡಿಸು – ಮೀರು; ಸ್ಥಿತಿಯನ್ನು ಕೆಡಿಸು
- ಅನುಗೆಯ್ – ಅಣಿಯಾಗು; ಸಿದ್ಧವಾಗು
- ಅನುಗ್ರಾಹಿಸು – ಉಪದೇಶಮಾಡು
- ಅನುಗ್ರಾಹ್ಯ – ಅನುಗ್ರಹಕ್ಕೆ ಯೋಗ್ಯವಾದ
- ಅನುಚರ – ಜೊತೆಯಲ್ಲಿ ನಡೆಯುವವನು; ಸೇವಕ
- ಅನುಜ – ತಮ್ಮ
- ಅನುಜಾತೆ – ತಂಗಿ
- ಅನುಜೀವ – ಬೇರೊಬ್ಬರ ಆಸ್ರಯದಲ್ಲಿರುವವನು; ಸೇವಕ
- ಅನುಜಾತೆ – ಅನುಜೆ
- ಅನುತ್ತರ – (ಜೈನ) ನೋಡಿ, ಅಣೂತ್ತರೆ
- ಅನುತ್ತರೀಯ – ದಾಟಲಾಗದ
- ಅನುದಿನಂ – ಪ್ರತಿದಿನವೂ
- ಅನುದಿಶೆ – ಪ್ರತಿ ದಿಕ್ಕನ್ನೂ ಅನುಸರಿಸಿದುದು; (ಜೈನ) ನವಗ್ರೈವೇಯಕಗಳ ಮತ್ತು ಐದು ಅಣೂತ್ತರೆಗಳ ಮಧ್ಯೆ ಇರುವ ಒಂಬತ್ತು ಅಹಮಿಂದ್ರಸ್ವರ್ಗಗಳಲ್ಲಿ ಒಂದು
- ಅನುದ್ಗತಕ್ರಮ – ತಾಳಲಯವಿನ್ಯಾಸದ ಒಂದು ಕ್ರಮ
- ಅನುದ್ಧತ – ಉದ್ಧತನಲ್ಲದ; (ಜೈನ) ಒಂದು ವಿಮಾನದ ಹೆಸರು
- ಅನುದ್ಧತವೇಷ – ನಮ್ರ ವೇಷ; ನಮ್ರ ವ್ಯಕ್ತಿ
- ಅನುದ್ವ್ಯಂಜ್ಯ – ಉದ್ವೇಗವುಂಟುಮಾಡದ
- ಅನುನಯ – ಪ್ರೀತಿ; ಮನವೊಲಿಸುವಿಕೆ
- ಅನುನೀತ – ಸಮೀಪಕ್ಕೆ ಒಯ್ಯಲ್ಪಟ್ಟ
- ಅನುಪದೀನ – ಹಾವುಗೆ, ಪಾದರಕ್ಷೆ
- ಅನುಪಮಮಂಗಳ – ಉತ್ಕøಷ್ಟ ಮಂಗಳ; (ಜೈನ)
- ಚಕ್ರವರ್ತಿಗೆ ಒದಗುವ ಚಾಮರದ ಹೆಸರು
- ಅನುಪಮಾನ – ಹೋಲಿಕೆಯಿಲ್ಲದ
- ಅನುಪಲಕ್ಷಿತ – ಗಮನಕ್ಕೆ ಬಾರದ
- ಅನುಪಲಬ್ಧ – ದೊರೆಯದಿರುವ
- ಅನುಪಾತ – ಹಿಂಬಾಲಿಸುವುದು
- ಅನುಪ್ರಭಾವಿತ – ಅನುಸರಿಸಿ ಓಡಿದ
- ಅನುಪ್ರವೇಶ – ಕೂಡಿ ಬಾಳುವುದು
- ಅನುಪ್ರೇಕ್ಷೆ – (ಜೈನ) ಯತಿಗಳು ಧ್ಯಾನಮಾಡಬೇಕಾದ ಅನಿತ್ಯತ್ವ, ಅಶರಣತ್ವ, ಸಂಸಾರ, ಏಕತ್ವ, ಅನ್ಯತ್ವ, ಅಶುಚಿ, ಆಸ್ರವ, ಸಂವರ, ನಿರ್ಜರೆ, ಲೋಕ, ಬೋಧಿದುರ್ಲಭತ್ವ, ಧರ್ಮ ಎಂಬ ಹನ್ನೆರಡು ತತ್ವಗಳ ಚಿಂತನೆ
- ಅನುಬಂಧ – ಸಂಬಂಧ; ಜೋಡಣೆ
- ಅನುಬಂಧಂಗಿಡು – ಸಂಬಂಧ ತಪ್ಪು
- ಅನುಬಂಧಿ – ಕಟ್ಟಲ್ಪಟ್ಟ; ಸಂಬಂಧ ಪಡೆದ
- ಅನುಬದ್ಧಕೇವಲ(ಲಿ)(ಳಿ) – (ಜೈನ) ವರ್ಧಮಾನ ಜಿನನ ಅನಂತರ ಬಂದ ಗೌತಮ, ಸುಧರ್ಮಸ್ವಾಮಿ, ಜಂಬೂಸ್ವಾಮಿ ಎಂಬ ಮೂವರು ಕೇವಲಜ್ಞಾನಿಗಳು
- ಅನುಬಲ – ಒತ್ತಾಸೆ; ಸಹಾಯಕ ಸೈನ್ಯ
- ಅನುಭಾಗ – (ಜೈನ) ಕರ್ಮಪುದ್ಗಲಗಳಿಗಿರುವ ಸ್ವಗತ ಸಾಮಥ್ರ್ಯವಿಶೇಷ; ಆತ್ಮನಿಗೆ ಕರ್ಮಗಳ ಫಲಕೊಡುವ ಶಕ್ತಿ
- ಅನುಭಾಷಿಗ – ವಿಷಯಕ್ಕೆ ಅನುಗುಣವಾಗಿ ಮಾತಾಡುವವನು
- ಅನುಭುಕ್ತ – ಅನುಭವಿಸಿದ
- ಅನುಭೂತ – ಈ ಹಿಂದಿನ
- ಅನುಮತ – ಸಮ್ಮತಿ
- ಅನುಮತಿವಿರತ – (ಜೈನ) ಮನೆ ಸಂಸಾರಗಳು ಇದ್ದರೂ ಎಲ್ಲ ವಿಷಯಗಳಲ್ಲಿಯೂ ಕೇವಲ ಅತಿಥಿಯಂತೆ ನಡೆದುಕೊಳ್ಳುವವನು
- ಅನುಮಾರ್ಗಕ್ರಮ – ಸಂಪ್ರದಾಯಾನುಸಾರಿಯಾದ
- ರೀತಿಅನುಮೋದ – ಸಂತೋಷ; ಒಪ್ಪಿಗೆ
- ಅನುಮೋದ(ನ)ಪುಣ್ಯ – ಒಳ್ಳೆಯ ಕೆಲಸಕ್ಕೆ ಒಪ್ಪಿಗೆ ಕೊಡುವುದರಿಂದ ಪಡೆಯುವ ಫಲ
- ಅನುಯೋಗ(ಚತುಷ್ಟಯ) – ಪ್ರಶ್ನೆ; ದೋಷಾರೋಪಣೆ;
- ಅನುಯೋಗಚತುಷ್ಟಯ – (ಜೈನ) ತೀರ್ಥಂಕರರು ಉಪದೇಶಿಸಿದ ಶಾಸ್ತ್ರಸಮೂಹ; ನಾಲ್ಕು: ಪ್ರಥಮ, ಕರಣ, ಚರಣ, ದ್ರವ್ಯ ಎಂಬ ಅನುಯೋಗಗಳು
- ಅನುರಕ್ತಂಮಾಡು – ಒಲಿಯುವಂತೆ ಮಾಡು
- ಅನುರಾಗ – ಗಾಢ ಪ್ರೀತಿ
- ಅನುರೂಪ – ಅನುಗುಣವಾದ; ತಕ್ಕ
- ಅನುರೂಪಕ್ರಮ – ಆಕಾರಾನುಗುಣವಾದ ಕ್ರಮ; ಯುಕ್ತ ಕ್ರಮ
- ಅನುರೋಧ – ಹೊಂದಿಕೊಳ್ಳುವುದು; ಒತ್ತಾಯ
- ಅನುಲೇಪ – ಬಳಿ, ಸವರು; ಸುಗಂಧದ್ರವ್ಯ
- ಅನುಲೇಪಂಗೆಯ್ – ಬಳಿಯುವುದು
- ಅನುಲೋಪ – ರೂಢಿಯ ಕ್ರಮ
- ಅನುವದಿಸು – ಹೇಳಿಕೊಟ್ಟಂತೆ ಹೇಳು
- ಅನುವರ – ಯುದ್ಧ; ಸಂಕಟ
- ಅನುವರಭೂಮಿ – ಯುದ್ಧಭೂಮಿ
- ಅನುವರ್ಣನ – ನಿರೂಪಣೆ
- ಅನುವರ್ಣಿಸು – ವಿವರಿಸು, ನಿರೂಪಿಸು
- ಅನುವಶ – ಅಧೀನನಾದ
- ಅನುವಶೆ – ಅಧೀನಳಾದವಳು
- ಅನುವಸಥ – ವಾಸಸ್ಥಳ, ಮನೆ
- ಅನುವ¾Â – ಕ್ರಮವನ್ನು ಅರಿ; ಔಚಿತ್ಯ ತಿಳಿ
- ಅನುವಾದಿ – ಅನುಸರಿಸುವಂತಹುದು; ಅನುಗುಣ
- ಅನುವಾಸರಂ – ಪ್ರತಿನಿತ್ಯವೂ
- ಅನುವಿದ್ಧ – ಚುಚ್ಚಲ್ಪಟ್ಟ; ಸೇರಿಕೊಂಡ; ಕುಂದಣಗೊಂಡ
- ಅನು(ನಿ)ವಿಸು – ಅನುನಯ ಮಾಡು; ಅಪೇಕ್ಷಿಸು; ನಿರೋಧಿಸು; ಹರಡು; ಸಿದ್ಧಪಡಿಸು; ಹೋಲು; ಹೊಂದಿಕೊ
- ಅನುವೃತ್ತ – ವಿಧೇಯ; ಅನುಗುಣವಾದ; ವಿಧೇಯತೆ
- ಅನುವ್ಯಾಯಮಿತ – ಅನುಕೂಲವಾದ ಮತ್ತು ಕ್ರಮಬದ್ಧ ರೀತಿಯ
- ಅನುಶಯ – ಸಮೀಪ ಸಂಬಂಧ; ಪಶ್ಚಾತ್ತಾಪ; ಕಳವಳ
- ಅನುಶಾಸಿಸು – ಹೇಳಿದಂತೆ ಕೇಳುವ ಹಾಗೆ ಮಾಡು
- ಅನುಶಾಸ್ಯ -ದಂಡನಾರ್ಹ
- ಅನುಶೋಣಿತ – ಅನುಸರಣೆಯಿಂದ ಕೆಂಪಾದ
- ಅನುಷಂಗ – ಸಂಬಂಧ; ದಯೆ
- ಅನುಷ್ಠಿತ – ನೆರವೇರಿಸಿದ
- ಅನುಷ್ಠಿಸು – ಮಾಡು; ಆಚರಿಸು
- ಅನುಸಂಜಾತೆ – ತಂಗಿ
- ಅನುಸಂಧಾನಂಗಿಡು – ಕ್ರಮ ವಿಪರ್ಯಯವಾಗು
- ಅನುಸಂಧಿಸು – ಜೋಡಿಸು; ಕೂಡು
- ಅನುಸಮ – ಅನುಗುಣ, ಸಮಾನ
- ಅನುಸಾರಿ – ಅನುಸರಿಸುವ; ಅನುರೂಪವಾದ
- ಅನುಸ್ಮರಣ – ಒಂದೇ ಸಮನೆ ನೆಪಿಸಿಕೊಳ್ಳುವುದು; ನೆನಪು
- ಅನೂನ – ಊನವಿಲ್ಲದ
- ಅನೂನಗುಣ – ಅಧಿಕ ಗುಣವುಳ್ಳವನು
- ಅನೂನಪುಣ್ಯ – ಅಧಿಕ ಪುಣ್ಯಶಾಲಿ
- ಅನೂಪ – ಜೌಗುನೆಲ
- ಅನೂಪವಿಷಯ – ಐವತ್ತಾರು ದೇಶಗಳಲ್ಲಿ ಒಂದು
- ಅನೂರು – ತೊಡೆಯಿಲ್ಲದವನು; ಸೂರ್ಯನ ಸಾರಥಿ
- ಅನೃತ – ಸುಳ್ಳು
- ಅನೃತಧನ – ಸುಳ್ಳುಗಾರ
- ಅನೇಕಪ – ಆನೆ
- ಅನೇಕಭವ – ನಾನ ಹುಟ್ಟುಗಳು
- ಅನೇಕಮುಖ – ಹಲವು ಮುಖ; ನಾನಾ ರೀತಿ
- ಅನೇಕವಾರಂ – ನಾನಾ ಬಾರಿ
- ಅನೇಕಾಂತ – ಏಕಾಂತವಲ್ಲದ್ದು; (ಜೈನ) ಸರ್ವದೃಷ್ಟಿಗಳನ್ನುಳ್ಳ ತರ್ಕ
- ಅನೇಕಾಂತವಾದ – (ಜೈನ) ವಸ್ತುವಿನ ಅನೇಕ ಧರ್ಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರತಿಪಾದಿಸುವ ತರ್ಕ
- ಅನೇಕಾತ್ಮಕ – ಅನೇಕ ವಿಷಯಘಲನ್ನೊಳಗೊಂಡ
- ಅನೇಡಮೂಕ – ಕಿವುಡ ಮತ್ತು ಮೂಗ
- ಅನೈಕಾಂತಿಕ – ಒಂದೇ ಗುರಿಯಿಲ್ಲದ
- ಅನೈಪುಣ್ಯೋಕ್ತಿ – ನಿಪುಣತೆಯಿಲ್ಲದ ಮಾತು
- ಅನೋಕಹ – ಮರಗಿಡ
- ಅನೋಜೆ – ಓಜಸ್ಸಿಲ್ಲದಿರುವುದು ಅನೋಸಂಸಾರ – (ಜೈನ) ಸಂಸಾರ, ಅಸಂಸಾರ, ನೋಸಂಸಾರ, ಅನೋಸಂಸಾರ ಎಂಬ ನಾಲ್ಕು ಬಗೆಯ ಸಂಸಾರಗಳಲ್ಲಿ ಒಂದು
- ಅನ್ನ – ಅಂಥವನು
- ಅನ್ನಂ – ಅಷ್ಟರಲ್ಲಿ; ಆ ತನಕ; ಹಾಗೆ
- ಅನ್ನಂಬಡೆ – ಆಹಾರವನ್ನು ಪಡೆ
- ಅನ್ನದಾನ – ಧರ್ಮಕ್ಕಾಗಿ ಆಹಾರ ನೀಡುವುದು
- ಅನ್ನಪ್ರಾಶನ – ಮಗುವಿಗೆ ಮೊದಲ ಬಾರಿಗೆ ಅನ್ನ
- ತಿನ್ನಿಸುವುದು; ಷೋಡಶ ಸಂಸ್ಕಾರಗಳಲ್ಲಿ ಒಂದು
- ಅನ್ನವಾಸ – ಊಟದ ಮನೆ
- ಅನ್ನಾಂಗ – (ಜೈನ) ಆಹಾರವನ್ನು ನೀಡುವ
- ಕಲ್ಪವಕ್ಷ; ಹತ್ತು ಕಲ್ಪವೃಕ್ಷಗಳಲ್ಲಿ ಒಂದು
- ಅನ್ನಿಗೆ – ಹೊದೆಯುವ ವಸ್ತ್ರ
- ಅನ್ನೆಗಂ – ಅಷ್ಟರವರೆಗೆ, ಆ ತನಕ
- ಅನ್ನೆಯ – ಅನ್ಯಾಯ
- ಅನ್ನೆವರಂ – ಅಲ್ಲಿಯವರೆಗೆ; ಅಷ್ಟು ಮಟ್ಟಿಗೆ
- ಅನ್ನೆವರೆಗಂ – ಅನ್ನೆಗಂ
- ಅನ್ಯತರವೇದನೀಯ – (ಜೈನ) ಸಾತಾವೇದನೀಯ ಅಸಾತಾವೇದನೀಯ ಎಂಬ ಎರಡು ಕರ್ಮಪ್ರಕೃತಿಗಳಲ್ಲಿ ಒಂದು
- ಅನ್ಯಥಾನುಪತ್ತಿ – ಬೇರೆ ರೀತಿಯಲ್ಲಿ ಸಾಧಿಸಲಾಗದ ಸ್ತಿತಿ
- ಅನ್ಯಥಾವಾಸ – ಬೇರೆ ಬಗೆಯಾದ ವಾಸ (ಅಜ್ಞಾತವಾಸ)
- ಅನ್ಯದಾರವಿದೂರ – ಪರಸ್ತ್ರೀಯರಿಂದ ದೂರವಾಗಿರುವವನು
- ಅನ್ಯದೃಷ್ಟಿ – ಬೇರೆಯ ದೃಷ್ಟಿ; ಇತರರ ದೃಷ್ಟಿ
- ಅನ್ಯಪರಿಭಂಗ – ಇತರರನ್ನು ಅವಮಾನಿಸುವುದು, ಸೋಲಿಸುವುದು
- ಅನ್ಯಪುಷ್ಟ – ಪರಪುಷ್ಟ, ಕೋಗಿಲೆ
- ಅನ್ಯಭವ – ಬೇರೆಯ ಹುಟ್ಟು
- ಅನ್ಯಭೃತ – ಅನ್ಯಪುಷ್ಟ
- ಅನ್ಯಲಿಂಗಿ – ಬೇರೆಯ ಲಾಂಛನದವನು; ಪರಮತದವನು
- ಅನ್ಯಸಮಯ – ಬೇರೆಯ ಮತ
- ಅನ್ಯಸ್ವ – ಇತರರ ಆಸ್ತಿ
- ಅನ್ಯಾಂಗನಾಸ್ಪøಹೆ – ಇತರರ ಹೆಣ್ಣುಗಳಲ್ಲಿ ಮೋಹ
- ಅನ್ಯಾಂಗಪ್ರವೇಶ – ಇತರರ ದೇಹವನ್ನು ಹೊಗುವುದು; ಪರಕಾಯಪ್ರವೇಶ
- ಅನ್ಯಾಯವೃತ್ತಿ – ನ್ಯಾಯವನ್ನು ಬಿಟ್ಟ ನಡತೆ
- ಅನ್ಯಾಯೋಪಾರ್ಜಿತ – ಅನ್ಯಾಯದ ರೀತಿಯಲ್ಲಿ ಗಳಿಸಿದ
- ಅನ್ಯೇಶ್ವರ – ಬೇರೆಯ ಪ್ರಭು
- ಅನ್ಯೋನ್ಯಪ್ರೀತಿ – ಪರಸ್ಪರ ಪ್ರೀತಿ
- ಅನ್ಯೋನ್ಯವಿಸಾರಿ – ಪರಸ್ಪರ ಹರಡುವ
- ಅನ್ಯೋಪಗಮ – ಇತರರ ಬಳಿ ಸೇರುವುದು
- ಅನ್ಯೋರ್ವೀಶ್ವರ – ಬೇರೆಯ (ದೇಶದ) ರಾಜ
- ಅನ್ವಯ – ವಂಶ; ಹೊಂದಾಣಿಕೆ
- ಅನ್ವಯಕ್ಷಯ – ಕುಲಹಾನಿ, ವಂಶನಾಶ
- ಅನ್ವಯದತ್ತಿ – (ಜೈನ) ತನ್ನ ವಂಶವನ್ನು ಸ್ಥಿರವಾಗಿ ನೆಲೆಗೊಳಿಸಲು ವಂಶದ ಬೇರೆಯವನಿಗೆ ಧರ್ಮವನ್ನೂ ಸರ್ವಸ್ವವನ್ನೂ ಒಪ್ಪಿಸುವುದು
- ಅನ್ವಯವೃದ್ಧಿ – ವಂಶಾಭಿವೃದ್ಧಿ
- ಅನ್ವರ್ಥ – ಅರ್ಥಕ್ಕೆ ಅನುಗುಣವಾದ; ಸಾರ್ಥಕವಾದ
- ಅನ್ವರ್ಥತೆ – ಅಥ್ಕೆಕೆ ಅನುಗುಣವಾಗಿರುವುದು
- ಅನ್ವವಾಯ – ವಂಶ, ಕುಲ
- ಅನ್ವಿತ – ಅನುಸರಿಸಲ್ಪಟ್ಟ
- ಅನ್ವಿತಾರ್ಥ ಸ್ಪಷ್ಟವಾದ ಅರ್ಥವಿರುವುದುಅನ್ವಿತೆ – ಹೊಂದಿದವಳು; ಯುಕ್ತಳು
- ಅಪಕಪಟ – ಕಪಟವಿಲ್ಲದುದು
- ಅಪಕರ್ಷ – ಗಮನವನ್ನು ಬೇರೆಡೆ ಸೆಳೆಯುವುದು; ಕುಗ್ಗಿಸುವುದು
- ಅಪಕೃತಿ – ಅಪಕಾರ
- ಅಪಕ್ರಮ – ದೂರ ಸರಿಯುವುದು
- ಅಪಕ್ಷಸ್ಥಿತಿ – ಪಕ್ಷಪಾತರಹಿತ
- ಅಪಕ್ಷ್ಮತೆ – ರೆಪ್ಪೆ ಬಡಿಯದವನು, ದೇವತೆ
- ಅಪಕ್ಷ್ಮಸ್ಪಂದತ್ವ – ಎವೆ ಮಿಟುಕಿಸದ ಸ್ಥಿತಿ
- ಅಪಗಂಟು – ಬಿಡಿಸಲಾಗದ ಗಂಟು
- ಅಪಗತಕಪಟ – ವಂಚನೆಯಿರದ ಸ್ಥಿತಿ
- ಅಪಗತತಂದ್ರ – ಆಲಸ್ಯವಿಲ್ಲದವನು
- ಅಪಗತಮತಿ – ಬುದ್ಧಿಯಿಲ್ಲದ ಸ್ಥಿತಿ
- ಅಪಗತಮೋಹ – ಮೋಹರಹಿತ
- ಅಪಗತರಜ – ಧೂಳಿರದ; ರಜೋಗುಣರಹಿತ
- ಅಪಗತವಿಗ್ರಹ – ದೇಹವಿಲ್ಲದವನು; ಯುದ್ಧದ ಚಿಂತೆಯಿಲ್ಲದವನು
- ಅಪಗತಸುಖೆ – ಸುಖವಿಲ್ಲದವಳು
- ಅಪಘನ – ಶರೀರ; ಅವಯವ; ಮೋಡ
- ಅಪಚಯ – ಸಂಗ್ರಹಣೆ; ಕುಂದುವುದು
- ಅಪಚಾರಣ – ಕೆಟ್ಟ ದಾರಿ
- ಅಪಜಿಹ್ಮ – ಬಾಗಿಲ್ಲದ; ಮೋಸವಿಲ್ಲದ
- ಅಪನೋದ – ನಿವಾರಣೆ
- ಅಪಟಿ – ಪರದೆ
- ಅಪಟುತೆ – ಸತ್ವಹೀನತೆ
- ಅಪತೃಷ್ಣೆ – ದುರಾಶೆ
- ಅಪತ್ಯ – ಮಗ
- ಅಪತ್ಯೋದಯ – ಮಗನ ಜನನ
- ಅಪಥ್ಯ – ಅಹಿತಕರ
- ಅಪದಸ್ಥ – ಅಧಿಕಾರರಹಿತ
- ಅಪದಾಂತರ – ನೆರೆಹೊರೆ
- ಅಪದಾನ – ದೊಡ್ಡ ಕೆಲಸ; ಉದಾತ್ತ ಕಾರ್ಯ
- ಅಪದೃಕ್ಸಾರ – ದೃಷ್ಟಿಪಟುತ್ವವನ್ನು ಹಾಳುಮಾಡುವುದು
- ಅಪದೋಷ – ದೋಷವಿಲ್ಲದವನು
- ಅಪಧ್ಯಾನ – ದುಷ್ಟ ಆಲೋಚನೆ; (ಜೈನ) ಅನ್ಯಧರ್ಮದ ಕಾವ್ಯಗಳ ಬಗ್ಗೆ ಚಿಂತಿಸುವುದು
- ಅಪನಯ – ಅನೀತಿ
- ಅಪನಯನ – ದೂರಕ್ಕೊಯ್ಯುವುದು; ದೂರ ಮಾಡುವುದು
- ಅಪನಿಂದೆ – ಅನ್ಯಾಯವಾದ ಬೈಗುಳು
- ಅಪನೀತ – ತೆಗೆದುಕಾಕಲಾದ
- ಅಪನೋದ(ನ) – ನಿವಾರಿಸುವುದು
- ಅಪನೋದಿತ – ನಿವಾರಿಸಲ್ಪಟ್ಟ
- ಅಪಭ್ರಂಶ – ಜಾರುವುದು; ವ್ಯತ್ಯಾಸಗೊಂಡ ಶಬ್ದರೂಪ; ತದ್ಭವ ಶಬ್ದ
- ಅಪಮತಿ – ಬುದ್ಧಿಗೆಟ್ಟ
- ಅಪಮಾನಂಬಡು – ಅವಮಾನ ಹೊಂದು
- ಅಪಮಿತ – ಅವಮಾನಕ್ಕೆ ಗುರಿಯಾದ
- ಅಪಮೃತ್ಯು – ಅಕಾಲ ಮರಣ
- ಅಪರ – ಅನ್ಯ; ಆನಂತರದ; ಕೀಳಾದ; ಅತ್ಯುತ್ತಮವಾದ; ಪಶ್ಚಿಮ ದಿಕ್ಕು; ಶತ್ರು
- ಅಪರಂಜಿ – ಚೊಕ್ಕ ಚಿನ್ನ
- ಅಪರಗಿರಿ – ಪಶ್ಚಿಮ ಬೆಟ್ಟ
- ಅಪರಜ – ದೂಳಿಲ್ಲದ; ರಜೋಗುಣರಹಿತ
- ಅಪರದಿಕ್ – ಪಶ್ಚಿಮ ದಿಕ್ಕು
- ಅಪರದಿಗ್ಭಾಗ – ಅಪರದಿಕ್
- ಅಪರನಾಮಧೇಯ – ಇನ್ನೊಂದು ಹೆಸರು
- ಅಪರವಾರಿಧಿ – ಪಶ್ಚಿಮ ಸಮುದ್ರ
- ಅಪರಸಂಧ್ಯೆ – ಸಾಯಂಕಾಲ
- ಅಪರಾಂಬುಧಿ – ಅಪರವಾರಿಧಿ
- ಅಪರಾಂಬುರಾಶಿ – ಅಪರವಾರಿಧಿ
- ಅಪರಾಂಭೋಧಿ – ಅಪರವಾರಿಧಿ
- ಅಪರಾಂಭೋರಾಶಿ – ಅಪರವಾರಿಧಿ
- ಅಪರಾಗ – ಬಣ್ಣರಹಿತ; ಅನುರಾಗವಿಲ್ಲದ; (ಅಪರ+ಅಗ) ಪಶ್ಚಿಮ ಬೆಟ್ಟ
- ಅಪರಾಜಿತೆ – ಸೋಲದವಳು; ದುರ್ಗೆ; (ಜೈನ) ದಿಗ್ವನಿತೆಯರಲ್ಲಿ ಒಬ್ಬಳು
- ಅಪರಾದಿತ್ಯ – ಪಶ್ಚಿಮದ ಸುರ್ಯ – ಮುಳುಗುವ
- ಸೂರ್ಯಅಪರಾದ್ರಿ – ಪಶ್ಚಿಮ ಬೆಟ್ಟ
- ಅಪರಾರ್ಧ – ಉತ್ತರಾರ್ಧ
- ಅಪರಾಶಾಕುಂಭಿ – ಪಶ್ಚಿಮದ ಆನೆ; ಅಂಜನವೆಂಬ ದಿಗ್ಗಜ
- ಅಪರಾಶಾಚಲ – ಪಶ್ಚಿಮದಿಕ್ಕಿನ ಬೆಟ್ಟ
- ಅಪರಾಶೆ – ಪಶ್ಚಿಮ ದಿಕ್ಕು
- ಅಪರಿಣಾಮವಿಹಾರ – ಕೆಟ್ಟ ಪರಿಣಾಮುವುಳ್ಳ ವಿಹಾರ
- ಅಪರಿಭಿನ್ನ – ಒಡೆಯದ
- ಅಪರಿಮೇಯ – ಅಳೆಯಲಾಗದ
- ಅಪರುದ್ಧ – ನಿವಾರಿಸಿದ
- ಅಪರ್ಣೆ – ಆಹಾರವಾಗಿ ಎಲೆಗಳನ್ನೂ ಬಿಟ್ಟವಳು, ಪಾರ್ವತಿ
- ಅಪರ್ಯಂತ – ಮೇರೆಯಿಲ್ಲದ, ಸೀಮಾತೀತ
- ಅಪರ್ಯಾಪ್ತಿ – (ಜೈನ) ಆಹಾರ ತೆಗೆದುಕೊಳ್ಳಲೂ ಅಶಕ್ತಿ
- ಅಪವರಕ – ಕೊಠಡಿ
- ಅಪವರ್ಗ – ಬಿಡುವುದು; ಮೋಕ್ಷ
- ಅಪವರ್ಗಪದ – ಮೋಕ್ಷಪದವಿ
- ಅಪವರ್ಗಮಾರ್ಗ – ಮೋಕ್ಷಮಾರ್ಗ
- ಅಪವರ್ಗಲಕ್ಷ್ಮಿ – ಮೋಕ್ಷಲಕ್ಷ್ಮಿ
- ಅಪವರ್ಗಸಂಪತ್ತು – ಅಪವರ್ಗಲಕ್ಷ್ಮಿ
- ಅಪವರ್ತಿಸು – ದೂರಮಾಡು, ನಿವಾರಿಸು
- ಅಪವತ್ರ್ಯ – (ಜೈನ) ಬಾಹ್ಯ ಕಾರಣಗಳಿಂದ ಕುಗ್ಗಿರುವುದು
- ಅಪವಾದ – ನಿಂದೆ; ಅಪಕೀರ್ತಿ
- ಅಪವೃಜಿನ – ಪಾಪರಹಿತ
- ಅಪಸತ್ – ಇಲ್ಲದ
- ಅಪಸನ್ಮುಗ್ಧ – ಅಪಸತ್+ಮುಗ್ಧ, ಮುಗ್ಧತೆಯಿಲ್ಲದ
- ಅಪಸರಣ(ಣೆ) – ಪಲಾಯನ
- ಅಪಸರಣಂಗೆಯ್ – ಪಲಾಯನ ಮಾಡು
- ಅಪಸವ್ಯ – ಎಡವಲ್ಲದ್ದು, ಬಲ
- ಅಪಸಾರಿತ – ಹಿಂದೆ ಹೋದ
- ಅಪಸಿದ್ಧಾಂತ – ತಪ್ಪು ನಿರ್ಣಯ
- ಅಪಸೌಖ್ಯ – ಸುಖವನ್ನು ಕಳೆದುಕೊಂಡವನು
- ಅಪಸ್ಮಾರ – ಮರೆವು; ಮರೆವಿನ ರೋಗ
- ಅಪಸ್ಮಾರಗ್ರಹ – ಅಪಸ್ಮಾರರೋಗ ತರುವ ಗ್ರಹ
- ಅಪಹತ – ಬಿಟ್ಟುಬಿಟ್ಟ; ನಾಶವಾದ
- ಅಪಹತಕದನ – ಯುದ್ಧ ನಿಲ್ಲಿಸಿದವನು
- ಅಪಹರ – ಕದಿಯುವುದು
- ಅಪಹರಿಸು – ಕದಿ; ಹೋಗಲಾಡಿಸು; ನಿವಾರಿಸು
- ಅಪಹಸಿತ – ಹಾಸ್ಯಕ್ಕೊಳಗಾದ
- ಅಪಹ್ಸತಮಿ¾Â – ತಳ್ಳು, ನೂಕು
- ಅಪಹಾರ – ಕದಿಯುವುದು; ಹಾನಿ; ಯುದ್ಧ ನಿಲುಗಡೆ
- ಅಪಹಾರ ತೂರ್ಯ – ಯುದ್ಧವನ್ನು ನಿಲ್ಲಿಸಲು
- ಮಾಡುವ ತುತ್ತೂರಿಯ ಸದ್ದು
- ಅಪಹಾಸಿ – ಹಾಸ್ಯಮಾಡುವ
- ಅಪಹಿಂಸ – ಹಿಂಸೆಯಿಂದ ದೂರಾದ
- ಅಪಹಿಂಸೆ – ಹಿಂಸೆಯಿಂದ ದೂರಾಗುವುದು
- ಅಪಹ್ನವ – ಮರೆಮಾಚುವುದು
- ಅಪಾಂಗ – ಅಂಗಹೀನ; ಕಡೆಗಣ್ಣು
- ಅಪಾಂಗದರ್ಶನ – ಕಡೆಗಣ್ಣ ನೋಟ
- ಅಪಾಂಗದ್ಯು(ದ್ಯೋ)ತಿ – ಕಡೆಗಣ್ಣ ಹೊಳಪು
- ಅಪಾಂಗಪ್ರಸನ್ನತೆ – ಕಡೆಗಣ್ಣ ಪ್ರಸನ್ನತೆ
- ಅಪಾಂಗಪ್ರೇರಣೆ – ಕಡೆಗಣ್ಣಿನ ಸೂಚನೆ
- ಅಪಾಂಗಮರೀಚಿ – ಕಡೆಗಣ್ಣ ಹೊಳಪು
- ಅಪಾಂಗರೋಚಿ – ಕಡೆಗಣ್ಣ ಹೊಳಪು
- ಅಪಾಂಗವಿಕ್ಷೇಪ – ಕಡೆಗಣ್ಣ ನೋಟ ಬೀರುವುದು
- ಅಪಾಂಗವೀಕ್ಷಣ – ಕಡೆಗಣ್ಣ ನೋಟ
- ಅಪಾಂಗಾಂಶು – ಕಡೆಗಣ್ಣ ಹೊಳಪು
- ಅಪಾಂಗಾ(ವ)ಲೋ(ಳೋ)ಕನ – ಕಡೆಗಣ್ಣ ನೋಟ
- ಅಪಾಕೃತ – ಹೊರದೂಡಿದ
- ಅಪಾಚಿ – ಪಶ್ಚಿಮ ದಿಕ್ಕು; ದಕ್ಷಿಣ ದಿಕ್ಕು
- ಅಪಾತ್ರ – ಅನರ್ಹ
- ಅಪಾದಾನ – ದೂರಕ್ಕೊಯ್ಯುವುದು
- ಅಪಾಮಾರ್ಗ – ತಪ್ಪು ದಾರಿ; ಉತ್ತರಣೆ ಗಿಡ
- ಅಪಾಯವಿಚಯ – (ಜೈನ) ನಾಲ್ಕು ಬಗೆಯ ಧರ್ಮಧ್ಯಾನಗಳಲ್ಲಿ ಎರಡನೆಯದು;
- ಲೋಕದ ಅಜ್ಞಾನ-ದುಃಖಗಳನ್ನು
- ಹೋಗಲಾಡಿಸುವ ಚಿಂತನೆಅಪಾರಭುಜಾಯಮಾನ – ಅತೀವ ಪರಾಕ್ರಮಿ
- ಅಪಾರವಿಸ್ತಾರಿ – ಕೊನೆಯಿಲ್ಲದ ವಿಸ್ತಾರ ಪಡೆದ
- ಅಪಾರವೀರ್ಯ – ಅತಿಶಯ ಪರಾಕ್ರಮಿ
- ಅಪಾರ್ಥ – ಅರ್ಥರಹಿತ; ತಪ್ಪು ಅರ್ಥ; ವ್ಯರ್ಥ
- ಅಪಾಸ್ತ – ದೂರಮಾಡಲ್ಪಟ್ಟ
- ಅಪಿಂಡ – (ಜೈನ) ಕರ್ಮದ ನಾನಾ ಬಗೆಗಳಲ್ಲಿ ಎರಡನೆಯ ವಿಭಾಗ
- ಅಪೂರ್ವ – ಪೂರ್ವವಲ್ಲದ; ಹಿಂದೆ ಇರದಿದ್ದ; (ಜೈನ) ಸಂಸಾರಿ ಜೀವನು ಮೋಕ್ಷ ಪಡೆಯಲು ಏರಬೇಕಾದ ಹದಿನಾಲ್ಕು ಗುಣಸ್ಥಾನಗಳಲ್ಲಿ ಎಂಟನೆಯದು
- ಅಪೂರ್ವಕರಣ – (ಜೈನ) ಮೂರು ಬಗೆಯ ಕರಣಲಬ್ಧಿಗಳಲ್ಲಿ ಒಂದು
- ಅಪೂರ್ವಭಿತ್ತಿ – ಅಪೂರ್ವವಾದ ಹಿನ್ನೆಲೆ
- ಅಪೂರ್ವರೂಪ – ಅಪರಿಚಿತ ರೂಪವುಳ್ಳವನು
- ಅಪೂರ್ವರೂಪೆ – ಅಸಾಮಾನ್ಯ ಸುಂದರಿ
- ಅಪೂರ್ವಾರ್ಥಲಬ್ಧಿ – ಅಪರೂಪವಾದ ಆರ್ಥಿಕ ಲಾಭ
- ಅಪೇಕ್ಷೆಗೆಯ್ – ಆಸೆಪಡು
- ಅಪೇತ – ಬಿಟ್ಟು ಹೋದ
- ಅಪೇತದೋಷ – ದೋಷದೂರವಾದ
- ಅಪೇಯ – ಕುಡಿಯಬಾರದ
- ಅಪೋಹ(ನ) – ನೂಕುವುದು; ಸಂಶಯನಿವಾರಣೆ
- ಅಪ್ಪ – ಆದ
- ಅಪ್ಪಯಿಸು – ಒಪ್ಪಿಸು; ಒಪ್ಪುವಂತೆ ಮಾಡು
- ಅಪ್ಪಳಿಸು – ತಾಗು
- ಅಪ್ಪಿಸು – ತಬ್ಬುವಂತೆ ಮಾಡು
- ಅಪ್ಪು – ತಬ್ಬಿಕೊ; ಆಲಿಂಗನ; ನೀರು
- ಅಪ್ಪು – ಆಲಂಗಿಸು
- ಅಪ್ಪುಕಣಿಸು – ನೀರನ್ನು ಸುರಿ
- ಅಪ್ಪುಗಾಣಿಸು – ಅಭಿಷೇಕ ಮಾಡು
- ಅಪ್ಪುಕೆಯ್ – ಅಂಗೀಕರಿಸು; ತಬ್ಬು
- ಅಪ್ಪುರಿತ – ಚಲಿಸದ, ನಿಶ್ಚಲ
- ಅಪ್ಪೈಸು – ಒಪ್ಪಿಸು
- ಅಪ್ರಕಟ(ಂ) – ಗುಟ್ಟಾಗಿ
- ಅಪ್ರಗಲ್ಭತೆ – ಜಾಣತನವಿರದ
- ಅಪ್ರಗಲ್ಭವಚನ – ಪ್ರೌಢಿಮೆಯಿಲ್ಲದ ನುಡಿ
- ಅಪ್ರಣಾಶ – ನಾಶರಹಿತವಾದ
- ಅಪ್ರತಿಘಾತಗಾಮಿನಿ – ಎಲ್ಲಿಗಾದರೂ ಅಡ್ಡಿಯಿಲ್ಲದೆ
- ಹೋಗಬಹುದಾದ ವಿದ್ಯೆ; ಎಲ್ಲಾದರೂ ಹೋಗಬಲ್ಲವಳು
- ಅಪ್ರತಿಬದ್ಧ – ತಡೆಯಿಲ್ಲದ
- ಅಪ್ರತಿಮ – ಅಸಮಾನ; ಎಣೆಯಿಲ್ಲದ
- ಅಪ್ರತಿಮಲ್ಲ – ಸಮಾನರಿಲ್ಲದ ಮಲ್ಲ
- ಅಪ್ರತಿರಥ – ಸಮಾನರಿಲ್ಲದ ರಥಿಕ
- ಅಪ್ರತಿಷಿದ್ಧ – ನಿಷೇಧಿತವಲ್ಲದ
- ಅಪ್ರತಿಷ್ಠ – ಸ್ಥಿರವಾಗಿ ನೆಲೆಯಿಲ್ಲದ
- ಅಪ್ರತಿಹತ – ತಡೆಯಿಲ್ಲದ
- ಅಪ್ರತೀತ – ಅರ್ಥ ಗೊತ್ತಿಲ್ಲದ; ತಡೆಯಿಲ್ಲದ
- ಅಪ್ರತ್ಯಾಖ್ಯಾನ – (ಜೈನ) ಅಹಿಂಸೆ ಮುಂತಾದ ವ್ರತಗಳ ಆಚರಣೆಯಲ್ಲಿ ಅಡ್ಡಿಯಾಗುವ ಒಂದು ಕರ್ಮಾವರಣ; ಮೋಹನೀಯ ಕರ್ಮಗಳಲ್ಲಿ ಒಂದು
- ಅಪ್ರತ್ಯೂಹಮೈತ್ರಿ – ಅಡ್ಡಿಯಿಲ್ಲದ ಮೈತ್ರಿ
- ಅಪ್ರಮತ್ತ – ಸುಖಗಳಲ್ಲಿ ಮೈಮರೆಯದ; (ಜೈನ) ಹದಿನಾಲ್ಕು ಗುಣಸ್ಥಾನಗಳಲ್ಲಿ ಏಳನೆಯದರಿಂದ ಮೇಲಿರುವ ಆತ್ಮ
- ಅಪ್ರಮತ್ತಗುಣಸ್ಥಾನ – (ಜೈನ) ಹದಿನಾಲ್ಕು ಗುಣಸ್ಥಾನಗಳಲ್ಲಿ ಏಳನೆಯದು; ಕಷಾಯಗಳ ತಿವ್ರತೆ ಕಡಿಮೆಯಾಗುವುದು
- ಅಪ್ರಮತ್ತತೆ – ಮೈಮರೆಯುವುದು
- ಅಪ್ರಮತ್ತತೆ – ಮೈಮರೆಯದ ನಡವಳಿಕೆ
- ಅಪ್ರಮಿತ – ಅಳತೆಗೆ ಮೀರಿದ
- ಅಪ್ರಮೇಯಕ – ಅಳತೆಗೆ ಸಿಕ್ಕದ
- ಅಪ್ರಮೇಯಬಲ – ಅಳತೆಗೆ ಮೀರಿದ ಬಲ
- ಅಪ್ರವಿಲಕ್ಷ್ಯ – ಕಾಣಿಸದಿರುವ
- ಅಪ್ರಶಸ್ತ – ಒಳ್ಳೆಯದಲ್ಲದ
- ಅಪ್ರಸನ್ನ – ಪ್ರಸನ್ನವಲ್ಲದ; ಅಶುಭ್ರ
- ಅಪ್ರಸವ – ಹೂವಿಲ್ಲದ; ಹೆರಿಗೆಯಿಲ್ಲದ
- ಅಪ್ರಹತ – ಏಟಿಗೆ ಸಿಕ್ಕದ
- ಅಪ್ರಾಕೃತ – ಒರಟಲ್ಲದ; ವಿಶೇಷವಾದ
- ಅಪ್ರಾಪ್ತಪೂರ್ವ – ಈ ಮೊದಲು ದೊರೆಯದ
- ಅಪ್ರಾಪ್ತಿ – ದೊರೆಯದಿರುವುದು
- ಅಪ್ರಾಸುಕ – (ಜೈನ) ಜೀವಂತ ವಸ್ತುಗಳಿಂದ ಕೂಡಿರುವ
- ಅಪ್ರಿಯ – ಪ್ರಿಯವಲ್ಲದ; ಶತ್ರು
- ಅಪ್ಸರಃಪ್ರತಾನ – ಅಪ್ಸರರ ಗುಂಪು; ಸುರವೇಶ್ಯೆಯರ ಗುಂಪು; ಕೊಳಗಳ ಸಮೂಹ
- ಅಪ್ಸರೋಗಣ – ಅಪ್ಸರಃಪ್ರತಾನ
- ಅಫಲ – ಫಲವಿಲ್ಲದ ಬಂಜೆ ಗಿಡ
- ಅಫಳಾಧ್ಯವಸಾಯ – ವ್ಯರ್ಥಪ್ರಯತ್ನದವನು
- ಅಫಳಿಯ – ಉನ್ನತವಾದ
- ಅಬಂಧುರ – ಮನೋಹರವಲ್ಲದ
- ಅಬದ್ಧ – ಅಸಂಬದ್ಧ; ನಿಯಮರಹಿತ
- ಅಬಲ(ಳ) – ಬಲವಿಲ್ಲದ
- ಅಬಾಧಿತ್ವ – ತಡೆಯಿಲ್ಲದ; ಹಿಂಸೆಗೊಳಗಾಗದ
- ಅಬಾಲ – ಬಾಲಕನಲ್ಲದ; ಬಲಿತ
- ಅಬುಜ – ತಾವರೆ
- ಅಬ್ಜ – ತಾವರೆ; ಶಂಖ; ರತ್ನ; ಐರಾವತ; ಚಂದ್ರ; ಲಕ್ಷ್ಮಿ
- ಅಬ್ಜಗರ್ಭ – ಬ್ರಹ್ಮ
- ಅಬ್ಜಚ್ಛದ – ತಾವರೆಯ ಎಲೆ
- ಅಬ್ಜಜಠರ – ವಿಷ್ಣು
- ಅಬ್ಜಪತ್ರಮಣಿ – ತಾವರೆ ಬೀಜ
- ಅಬ್ಜಪ್ರಸರ – ತಾವರೆಗಳ ಗುಂಪು
- ಅಬಜ್ಭವಾಂಡ – ಬ್ರಹ್ಮಾಂಡ
- ಅಬ್ಜಮಿತ್ರ – ಸೂರ್ಯ
- ಅಬ್ಜರಜ – ಕಮಲದ ದೂಳು; ಪರಾಗ
- ಅಬ್ಜವದನೆ – ಕಮಲಮುಖಿ
- ಅಬ್ಜವಾಸಿನಿ – ಲಕ್ಷ್ಮಿ
- ಅಬ್ಜವಾಹನ – ಚಂದ್ರನನ್ನು ಧರಿಸಿದವನು, ಚಂದ್ರ
- ಅಬ್ಜವಿರೋಧಿ – ಅಬ್ಜಾರಿ, ಚಂದ್ರ
- ಅಬ್ಜವಿಷ್ಟರ – ಕಮಲಾಸನ, ಬ್ರಹ್ಮ
- ಅಬ್ಜಾಕರ – ಕೊಳ, ಸರೋವರ
- ಅಬ್ಜಾಕ್ಷ – ವಿಷ್ಣು
- ಅಬ್ಜಾಯತನೇತ್ರೆ – ಕಮಲದಂತೆ ವಿಶಾಲವಾದ ಕಣ್ಣುಳ್ಳವಳು
- ಅಬ್ಜಾಸನ – ಅಬ್ಜವಿಷ್ಟರ
- ಅಬ್ಜಾಸನೆ – ಲಕ್ಷ್ಮಿ
- ಅಬ್ಜಾಹಿತ – ತಾವರೆಯ ಶತ್ರು, ಚಂದ್ರ
- ಅಬ್ಜೋದರ – ವಿಷ್ಣು
- ಅಬ್ಜೋದ್ಭವ – ಬ್ರಹ್ಮ
- ಅಬ್ದ – ನೀರನ್ನು ಕೊಡುವುದು, ಮೋಡ; ವರ್ಷ
- ಅಬ್ದಕಾಲ – ಮಳೆಗಾಲ
- ಅಬ್ದೌಘ – ಮೋಡಗಳ ಗುಂಪು
- ಅಬ್ಧಿ – ಸಮುದ್ರ
- ಅಬ್ಧಿಪ – ಜಲರಾಶಿಯ ಒಡೆಯ, ವರುಣ
- ಅಬ್ಧಿಪರೀತ – ಸಮುದ್ರದಿದ ಸುತ್ತುವರಿಯಲ್ಪಟ್ಟ
- ಅಬ್ಧಿಶಯನ – ವಿಷ್ಣು
- ಅಬ್ಬ – ಜನಕ, ತಂದೆ
- ಅಬ್ಬರ – ಆರ್ಭಟ
- ಅಬ್ಬರಂಗೆಯ್ – ಆರ್ಭಟಿಸು
- ಅಬ್ಬರಣೆ – ಆರ್ಭಟ, ಗದ್ದಲ
- ಅಬ್ಬರಿಸು – ಆರ್ಭಟಿಸು
- ಅ(ಬ್ಬಾ)ಬ್ಬೆ – (ಅಂಬಾ) ತಾಯಿ
- ಅಬ್ರಹ್ಮಣ್ಯ – ಬ್ರಾಹ್ಮಣನಿಗೆ ಆಗುವ ಅನ್ಯಾಯ; “ಹಿಂಸೆ ಮಾಡಬಾರದು” ಎಂಬ ಘೋಷಣೆ; “ಬ್ರಾಹ್ಮಣನನ್ನು ಅನ್ಯಾಯದಿಂದ ಪಾರುಮಾಡಿ” ಎಂಬ ಉದ್ಗಾರ
- ಅಭಂಗ – ನಿರಂತರ
- ಅಭಂಘಾನುಷಂಗ – ಸೋಲಿಲ್ಲದವನು; ತೆರೆಗಳ ಸಂಬಂಧವಿಲ್ಲದವನು
- ಅಭಂಗುರ – ಭಂಗವಾಗದ, ಶಾಶ್ವತವಾದ
- ಅಭಯಂಗುಡು – ಭಯವನ್ನು ಹೋಗಲಾಡಿಸು
- ಅಭಯಘೋಷಣೆ – ಅಭಯವನ್ನು ಸಾರುವುದು
- ಅಭಯದಾನ – ಅಭಯವನ್ನು ಕೊಡುವುದು
- ಅಭಯಮನ – ಭಯವಿಲ್ಲದ ಮನಸ್ಸು; ನಿರ್ಭಯಿ
- ಅಭವ – ಜನ್ಮರಹಿತ; ಶಿವ; ವಿಷ್ಣು; ಜಿನ
- ಅಭವಭವನ – ಶಿವದೇವಾಲಯ
- ಅಭವ್ಯ – (ಜೈನ) ಭವ್ಯನಲ್ಲದ, ಮುಕ್ತಿ ಹೊಂದಲಾರದ ಜೀವ
- ಅಭಾಷಣ – ಮೌನ
- ಅಭಿಕ – ಪ್ರಿಯತಮ
- ಅಭಿಗಮನ – ಎದುರಾಗಿ ಹೋಗುವುದು
- ಅಭಿಘಾತ – ಹೊಡೆತ; ಗಾಯ; ನಷ್ಟ
- ಅಭಿಘಾತಜ್ವರ – ಹೊಡೆತದಿಂದಾದ ಜ್ವರ
- ಅಭಿಚಾರ – ಶೂನ್ಯ ಮಾಟ; ವಿರುದ್ಧ ನಡವಳಿಕೆ
- ಅಭಿಚಾರಕ್ರಿಯೆ – ಮಾಟಮಾಡುವುದು
- ಅಭಿಜನ – ಸತ್ಕುಲಜ
- ಅಭಿಜನವತ್ಸಲ(ಳ) – ಸದ್ವ್ಯಕ್ತಿಗಳಲ್ಲಿ ಪ್ರೀತಿಯುಳ್ಳವನು
- ಅಭಿಜಾತ – ಉತ್ತಮ ವಂಶದಲ್ಲಿ ಹುಟ್ಟಿದವನು
- ಅಭಿಜಾತತೆ – ಕುಲೀನತೆ
- ಅಭಿಜಾತರೂಪ – ಉತ್ತಮ ರೂಪ
- ಅಭಿಜಿನ್ಮುಹೂರ್ತ – ದಿನದ ಎಂಟನೆಯ ಮುಹೂರ್ತ; ಕುತುಪಕಾಲ
- ಅಭಿಜ್ಞತೆ – ಉತ್ತಮ ತಿಳಿವಳಿಕೆ
- ಅಭಿಜ್ಞಾನ – ತಿಳಿವು; ನೆನಪು; ಸಾಕ್ಷಿ
- ಅಭಿಜ್ಞಾರೇಖೆ – ಗುರುತಿನ ಗೆರೆ
- ಅಭಿತಾಪ – ಬೇಗೆ; ಸಂಕಟ
- ಅಭಿಧಾನ – ಹೆಸರು; ಹೆಸರಿಡುವುದು; ನಿಘಂಟು
- ಅಭಿಧಾನಪರಂಪರೆ – ನಿಘಂಟು
- ಅಭಿದೇಯ – ಹೆಸರುಳ್ಳ; ಗುರುತುಳ್ಲ
- ಅಭಿನಯಚತುಷ್ಟಕ – ಅಂಗಿಕ, ವಾಚಿಕ, ಸಾತ್ವಿಕ,
- ಆಹಾರ್ಯ ಎಂಬ ನಾಲ್ಕು ಬಗೆಯ ಅಭಿನಯ
- ಅಭಿನವ – ಹೊಸದಾದ
- ಅಭಿನಿವೇಶ – ಆಸಕ್ತಿ; ಆದರ; ನಂಬಿಕೆ
- ಅಭಿನಿಷಾಧಿ – ಎದುರಿಗಿರುವ ಮಾವತಿಗ
- ಅಭಿನುತ – ಹೊಗಳಲ್ಪಟ್ಟ; ಸ್ತುತವಾದ
- ಅಭಿನುತಿಸು – ಹೊಗಳು; ಸ್ತೋತ್ರಮಾಡು
- ಅಭಿನೂತೆ – ಹೊಗಳಲ್ಪಟ್ಟವಳು
- ಅಭಿನ್ನಾಂಗಿ – ಏಕರೂಪವುಳ್ಳವಳು
- ಅಭಿಪ್ರೇತ – ಅಭಿಪ್ರಾಯಪಟ್ಟ; ಅಭಿಪ್ರಾಯ
- ಅಭಿಭವ – ಸೋಲು; ಕಷ್ಟ; ತಿರಸ್ಕಾರ ಹೊಂದು
- ಅಭಿಭವಿಸು – ಆಕ್ರಮಿಸು; ತಿರಸ್ಕರಿಸು
- ಅಭಿಭವಮೆಯ್ದು – ಸೋಲನ್ನು ಪಡೆ
- ಅಭಿಭವಿಸು – ಸೋಲಿಸು
- ಅಭಿಭೂತ – ಸೋತುಹೋದ; ಅವಮಾನಿತನಾದ
- ಅಭಿಮಂತ್ರಿಸು – ಮಂತ್ರ ಜಪಿಸಿ ಶಕ್ತಿಯುತವಾಗಿಸು
- ಅಭಿಮತ – ಅಭಿಪ್ರಾಯ; ಪ್ರಿಯವಾದ
- ಅಭಿಮತಾರ್ಥ – ಬಯಸಿದ; ಇಷ್ಟಾರ್ಥ
- ಅಭಿಮಾನ – ಆತ್ಮಗೌರವ; ಅಹಂಕಾರ
- ಅಭಿಮಾನಂಗಿಡು – ಅಭಿಮಾನಕ್ಕೆ ಧಕ್ಕೆಯೊದಗು
- ಅಭಿಮಾನಕ್ಷತಿ – ಅಭಿಮಾನಭಂಗ
- ಅಭಿಮಾನಧನ – ಸ್ವಾಭಿಮಾನವನ್ನೇ ಧನವನ್ನಾಗಿ
- ಉಳ್ಳವನು; ದುರ್ಯೋಧನ
- ಅಭಿಮಾನಮೂರ್ತಿ – ಅಭಿಮಾನದ ಸಾಕಾರ
- ಅಭಿಮಾನಹಾನಿ – ಅಭಿಮಾನಕ್ಷತಿ
- ಅಭಿಮುಖೀಕೃತ – ಎದುರಾಗುವಂತೆ ಮಾಡಿಕೊಂಡ
- ಅಭಿಯಾತಿ – ಶತ್ರು
- ಅಭಿಯೋಗ – ಆಸಕ್ತಿ; ಒತ್ತಾಯ; ಯುದ್ಧ; ದೂರು
- ಅಭಿಯೋಗ್ಯ – (ಜೈನ) ಇಂದ್ರ ಮುಂತಾದವರಿಗೆ
- ವಾಹನಸೇವೆ ಮಾಡುವವರು
- ಅಭಿರತ – ಆಸಕ್ತಿಯಿರುವವನು
- ಅಭಿರಾಮ – ಸುಂದರವಾದ
- ಅಭಿರೂಪ – ತಕ್ಕವನು; ವಿದ್ವಾಂಸ
- ಅಭಿಲಷಿತ – ಬಯಸಿದ
- ಅಭಿವಂದನ – ಗೌರವಪೂರ್ವಕ ವಂದನೆ
- ಅಭಿವಂದಿತಾರ್ಥ – ಮಾನ್ಯನಾದವನು
- ಅಭಿವಂದಿಸು – ಗೌರವದಿಂದ ವಂದಿಸು
- ಅಭಿವಂದ್ಯ – ಅಭಿವಂದನಾರ್ಹ
- ಅಭಿವರ್ಣನ – ಸುಂದರ ವರ್ಣನೆ
- ಅಭಿವರ್ಣಿಸು – ಚೆನ್ನಾಗಿ ವರ್ಣನೆ ಮಾಡು
- ಅಭಿವರ್ಧನ – ಏಳಿಗೆ
- ಅಭಿವಾಂಛಿತ – ಅಪೇಕ್ಷೆಪಟ್ಟ
- ಅಭಿವಾದಯೇ – ನಮಸ್ಕರಿಸುತ್ತೇನೆ
- ಅಭಿವಿನುತ – ಸ್ತೋತ್ರಪಾತ್ರ
- ಅಭಿವೀಕ್ಷಣ – ಆಸಕ್ತಿಯಿಂದ ನೋಡಿವುದು
- ಅಭಿವೇಷ್ಟಿತ – ಸುತ್ತುವರಿಯಲ್ಪಟ್ಟ
- ಅಭಿವ್ಯಂಜಿಸು – ಸ್ಪಷ್ಟಗೊಳಿಸು
- ಅಭಿವ್ಯಕ್ತಿ – ಪ್ರಕಟಗೊಳ್ಳುವುದು
- ಅಭಿಶಂಕೆ – ಆಳವಾದ ಸಂದೇಹ
- ಅಭಿಷಂಗ – ಬೈಗುಳು
- ಅಭಿಷವ(ಣ) – ಅಭಿಷೇಕ; ಸ್ನಾನ
- ಅಭಿಷವ(ಣ)ವಿಧಿ – ಅಭಿಷೇಕಕ್ರಿಯೆ, ಕ್ರಮ
- ಅಭಿಷವಾಂಬು – ಅಭಿಷೇಕದ ನೀರು
- ಅಭಿಷವೋತ್ಸವ – ಅಭಿಷೇಕ ಮಹೋತ್ಸವ
- ಅಭಿಷೇಣ(ನ) – ದಂಡೆತ್ತಿ ಹೋಗುವುದು
- ಅಭಿಷ್ಟುತ – ಸ್ತುತವಾದ; ಶ್ರೇಷ್ಠ
- ಅಭಿಷ್ಟುತಿ(ಗೈ) – ಸ್ತೋತ್ರ(ಮಾಡು)
- ಅಭಿಸಾರಣ – ಪ್ರಿಯರ ಭೇಟಿಗಾಗಿ ಸಂಕೇತಸ್ಥಳಕ್ಕೆ
- ಹೋಗುವುದುಅಭಿಸಾರಿಕೆ – ಸಂಕೇತಸ್ಥಾನದಲ್ಲಿ ಪ್ರಿಯನನ್ನು ನಿರೀಕ್ಷಿಸುವವಳು
- ಅಭಿಹತಮರ್ಮ – ಮರ್ಮಕ್ಕೆ ಪೆಟ್ಟು ತಾಗಿದವನು
- ಅಭೀಕ್ಷಣ – ಎದುರಾಗಿ (ಚೆನ್ನಾಗಿ) ನೋಡಿವುದು
- ಅಭೀಕ್ಷಿಸು – ಚೆನ್ನಾಗಿ ನೋಡಿ
- ಅಭೀತಚೇತ – ಭಯಗೊಳ್ಳದವನು
- ಅಭೀತಮನ – ಹೆದರದ ಮನಸ್ಸಿನವನು
- ಅಭೀತಾತ್ಮಕ – ಹೆದರದ ಮನಸ್ಸಿನವನು
- ಅಭೀತೆ – ಹೆದರದ ಮನಸ್ಸಿನವಳು
- ಅಭೀಪ್ಸೆ – ಬಯಕೆ
- ಅಭೀಷ್ಟಫಲ – ಬಯಸಿದ ಫಲ
- ಅಭೇದ್ಯ – ಭೇದಿಸಲಾಗದ; ಭೇದಿಸಲಾಗದ್ದು
- ಅಭೋಗಿ – (ಜೈನ) ಒಂದು ವಿದ್ಯೆ
- ಅಭೋಜ್ಯ – ತಿನ್ನಬಾರದ್ದು
- ಅಭ್ಯಂತರ – ಒಳಗೆ; ನಡುವೆ; ಅಂತರಂಗ; ಮಧ್ಯದ ಸ್ಥಳಾವಕಾಶ
- ಅಭ್ಯಂತರತಪಸ್ಸು – (ಜೈನ) ಪ್ರಾಯಶ್ಚಿತ್ತ, ವಿನಯ, ವೈಯಾಪೃತ್ಯ, ಸ್ವಾಧ್ಯಾಯ, ವ್ಯುತ್ಸರ್ಗ, ಧ್ಯಾನ ಎಂಬ ಆರು ಬಗೆಯ ಅಂತರಂಗ ತಪಸ್ಸು
- ಅಭ್ಯಂತರಮಂಟಪ – ಒಳಗಿನ ಮಂಟಪ
- ಅಭ್ಯಕ್ಷಣ – ಸಂಪ್ರೋಕ್ಷಣೆ; ಚಿಮುಕಿಸುವುದು
- ಅಭ್ಯಮಿತ್ರೀಣ – ಶತ್ರುಗಳನ್ನು ಧೈರ್ಯವಾಗಿ ಎದುರಿಸುವ
- ಅಭ್ಯರ್ಚನ(ನೆ) – ಪೂಜೆ, ಸತ್ಕಾರ
- ಅಭ್ಯರ್ಚಿಸು – ಪೂಜಿಸು, ಸತ್ಕರಿಸು
- ಅಭ್ಯಚ್ರ್ಯ – ಪೂಜಾರ್ಹವಾದ
- ಅಭ್ಯರ್ಣ – ಪಕ್ಕ, ಸಮೀಪ
- ಅಭ್ಯರ್ಥನ(ನೆ) – ಪ್ರಾರ್ಥನೆ
- ಅಭ್ಯರ್ಹಿತ – ಯೋಗ್ಯವಾದ; ಪೂಜ್ಯ
- ಅಭ್ಯರ್ಹಿತವೃತ್ತಿ – ಪೂಜನೀಯ ನಡವಳಿಕೆ
- ಅಭ್ಯವಹಾರ – ತಿನ್ನುವುದು; ಊಟ
- ಅಭ್ಯವಹೃತಿ – ಊಟ
- ಅಭ್ಯಸನ – ಅಭ್ಯಾಸ
- ಅಭ್ಯಸ್ತ – ಕಲಿಯಲಾದ
- ಅಭ್ಯಾರೂಢ – ಮೇಲೇರಿದವನು
- ಅಭ್ಯಾಗತ – ಮನೆಗೆ ಬಂದು ಆತಿಥ್ಯ ಸ್ವೀಕರಿಸುವವನು
- ಅಭ್ಯಾಸ – ಬಳಕೆ; ಕಲಿಕೆ
- ಅಭ್ಯುದಯ – ಉದಯ; ಏಳಿಗೆ
- ಅಭ್ಯುಪಗಮ – ಒಪ್ಪಿಗೆ
- ಅಭ್ಯಗಮೋಕ್ತಿ – ಬಲ್ಲವರು ಒಪ್ಪು ಮಾತು
- ಅಭ್ರ(ಕ) – ಮೋಡ; ಆಕಾಶ
- ಅಭ್ರಕ – ಕಾಗೆಬಂಗಾರ
- ಅಭ್ರಂಕಷ – ಆಕಾಶವನ್ನು ಮುಟ್ಟುವ
- ಅಭ್ರಕಾಯ – ಮೋಡದಂತೆ ಕಪ್ಪಾದ ದೇಹವುಳ್ಳವನು
- ಅಭ್ರಕುಲ(ಳ) – ಮೋಡಗಳ ಸಮೂಹ
- ಅಭ್ರಗಂಗೆ – ದೇವಗಂಗೆ
- ಅಭ್ರಗಜ – ಆಕಾಶದಲ್ಲಿ ಸಂಚರಿಸುವ ಆನೆ, ಐರಾವತ
- ಅಭ್ರಗಮನೆ – ಆಕಾಶದಲ್ಲಿ ಸಂಚರಿಸುವವಳು, ಖೇಚರಿ
- ಅಭ್ರಗರ್ಜನೆ – ಗುಡುಗು
- ಅಭ್ರಗರ್ಜಿತ – ಅಭ್ರಗರ್ಜನೆ
- ಅಭ್ರಗಾಮಿ – ಆಕಾಶದಲ್ಲಿ ಸಂಚರಿಸುವವನು
- ಅಭ್ರಘಟೆ – ಮೋಡಗಳ ಸಮೂಹ
- ಅಭ್ರಚರ – ಆಕಾಶದಲ್ಲಿ ಸಂಚರಿಸುವವನು
- ಅಭ್ರಚ್ಛವಿ – ಮೋಡದ ಬಣ್ಣದ ಮೈಯವನು
- ಅಭ್ರಜ – ಮೋಡದಲ್ಲಿ ಹುಟ್ಟಿದ; ಗುಡುಗು
- ಅಭ್ರನಿಭಾಂಗ – ಮೋಡದ ಬಣ್ಣದ ಮೈಯವನು
- ಅಭ್ರಪಥ – ಆಕಾಶಮಾರ್ಗ
- ಅಭ್ರಮಾರ್ಗ – ಅಭ್ರಪಥ
- ಅಭ್ರಮು – ಐರಾವತದ ಹೆಂಡತಿಯ ಹೆಸರು
- ಅಭ್ರಮೂರಮಣ – ಅಭ್ರಮು(ಮೂ)ವಲ್ಲಭ
- ಅಭ್ರಮು(ಮೂ)ವಲ್ಲಭ – ಐರಾವತ
- ಅಭ್ರವಜ್ರ – ಸಿಡಿಲು
- ಅಭ್ರಶ್ರವ – ನಿಮಿರಿದ ಕಿವಿ
- ಅಭ್ರಾಯನ – ಆಕಾಶ
- ಅಮಂದ – ಗಟ್ಟಿಯಾದ, ಬಲವಾದ
- ಅಮಂದಧ್ವನಿ – ಗಟ್ಟಿಯಾದ ಕೂಗು; ಗರ್ಜನೆ
- ಅಮಂದರಾಗ – ಅತಿಶಯ ಸಂತೋಷ, ಕಾಂತಿ
- ಅಮಂದರುಚಿ – ಅತಿಶಯ ಕಾಂತಿ, ಸಂತೋಷ
- ಅಮಂದಸೌಂದರ್ಯ – ಅತಿಶಯ ರೂಪು
- ಅಮಂದಸ್ನೇಹ – ಅತಿಸಯ ಸ್ನೆಹ
- ಅಮಂದಾನಂದ – ಅತಿಶಯ ಸಂತೋಷ
- ಅಮತ್ರ – ಪಾತ್ರೆ
- ಅಮತ್ಸರ – ಅಸೂಯೆಯಿಲ್ಲದ
- ಅಮತ್ಸರತ್ವ – ಮತ್ಸರವಿಲ್ಲದ ಗುಣ
- ಅಮತ್ಸರಮತಿ – ಮತ್ಸರರಹಿತ ಬುದ್ಧಿ
- ಅಮದವೃತ್ತಿ – ಮದರಹಿತ ಸ್ವಭಾವ
- ಅಮದಾಲಸ – ಮದದಿಂದ ಜಡವಾಗದ
- ಅಮರ್ – ಸೇರು, ಸರಿಹೊಂದು; ವ್ಯಾಪಿಸು; ಸಂಭವಿಸು; ಕೂಡಿಸು
- ಅಮರ – ದೇವತೆ
- ಅಮರಕರಿ – ಐರಾವತ
- ಅಮರಕಾಮಿನಿ – ದೇವತಾಸ್ತ್ರೀ
- ಅಮರಗಣ – ದೇವತೆಗಳ ಸಮೂಹ
- ಅಮರಗಿರಿ – ಮೇರುಗಿರಿ
- ಅಮರಗುರು – ಬೃಹಸ್ಪತಿ
- ಅಮರಧನು – ಕಾಮನ ಬಿಲ್ಲು
- ಅಮರನಗ – ಮೇರುಗಿರಿ
- ಅಮರನಗರಿ – ಅಮರಾವತಿ
- ಅಮರನದಿ – ದೇವಗಂಗೆ
- ಅಮರಪಟಹ – ದೇವದುಂದುಭಿ
- ಅಮರಪತಿ – ದೇವೇಂದ್ರ
- ಅಮರಪ್ರಸ್ಪರ್ಧಿ – ದೇವತೆಗಳ ಜೊತೆ ಸ್ಪರ್ಧಿಸುವ
- ಅಮರಭೂಜ – ಕಲ್ಪವೃಕ್ಷ
- ಅಮರಭೂರುಹ – ಅಮರಭೂಜ
- ಅಮರಮಣಿ – ಚಿಂತಾಮಣಿ
- ಅಮರಮಹತ್ತರಿಕೆ – ದೇವಸೇವಕಿ
- ಅಮರವಧು – ದೇವಕನ್ನಿಕೆ
- ಅಮರವಧೂಟಿ – ಅಮರವಧು
- ಅಮರವಾಹಿನಿ – ದೇವನದಿ
- ಅಮರಸಂಹತಿ – ದೇವತೆಗಳ ಸಮೂಹ
- ಅಮರಸಮಾಜ – ಅಮರಸಂಹತಿ
- ಅಮರಸಮಿತಿ – ಅಮರಸಂಹತಿ
- ಅಮರಸಿಂಧು – ದೇವನದಿ
- ಅಮರಸಿಂಧೂದ್ಭವ – ಭೀಷ್ಮ
- ಅಮರಸುತ – ದೇವಪುತ್ರ; ಅರ್ಜುನ
- ಅಮರಸ್ತ್ರೀ – ದೇವತಾಸ್ತ್ರೀ
- ಅಮರಾಧ್ವ – ದೇವತೆಗಳ ಮಾರ್ಗ, ಆಕಾಶ
- ಅಮರಾಪಗಾನಂದನ – ದೇವಗಂಗೆಯ ಮಗ, ಭೀಷ್ಮ
- ಅಮರಿ – ದೇವತಾಸ್ತ್ರೀ; ತಂಗಡಿ ಗಿಡ
- ಅಮರೇಂದ್ರ – ದೇವೇಂದ್ರ
- ಅಮರೇಶ – ದೇವೇಂದ್ರ
- ಅಮರ್ಕೆ – ಬೆಸುಗೆ; ಬಲವಾಗಿ ಸೇರಿಸುವುದು; ಜೋಡಣೆ
- ಅಮರ್ಕೆಗಿಡು – ಹೊಂದಿಕೆ ಬಿಟ್ಟುಹೋಗು
- ಅಮರ್ಕೆವಡೆ – ಹೊಂದಿಕೆಯಾಗು
- ಅಮರ್ಕೆವೆ¾ು – ಜೊತೆಯಾಗು; ಹೊಂದಿಕೆಯಾಗು
- ಅಮರ್ಚಿಸು – ಸೇರುವಂತೆ ಮಾಡು
- ಅಮರ್ಚು – ಸೇರಿಸು; ಒದಗಿಸು; ತೊಡಿಸು; ಲೇಪಿಸು; ಆಲಂಗಿಸು; ಏರ್ಪಡಿಸು; ಜೋಡಿಸು
- ಅಮತ್ರ್ಯ – ದೇವತೆ
- ಅಮತ್ರ್ಯಚಿತ್ರಕ – ದೇವತೆಗಳ ಚಿತ್ರಕಾರ
- ಅಮತ್ರ್ಯನಾಯಕ – ದೇವೇಂದ್ರ
- ಅಮತ್ರ್ಯಮಾರ್ಗ – ಆಕಾಶ
- ಅಮರ್ದು – (ಅಮೃತ) ಪೀಯೂಷ
- ಅಮರ್ದುಗೂಳ್ – ಅಮರತಾನ್ನ
- ಅಮರ್ದುಗೆಯ್ಯ – (ಅಮೃತಕರ) ಚಂದ್ರ
- ಅಮರ್ದುಣಿ – ದೇವತೆ
- ಅಮರ್ದುವಳ್ಳಿ – ಅಮೃತಬಳ್ಳಿ
- ಅಮರ್ದುವೆಣ್ – ದೇವತಾಸ್ತ್ರೀ; ಮೋಕ್ಷಲಕ್ಷ್ಮೀ
- ಅಮರ್ದುವೆಣ್ಣೋಪ – ಈಶ್ವರ
- ಅಮರ್ಷಣ – ಕೋಪಿಷ್ಠ; ಕೋಪ
- ಅಮಲ – ನಿರ್ಮಲವಾದ
- ಅಮಳ್ – ಜೋಡಿ
- ಅಮಳಸ್ವಾಂತ – ಪರಿಶುದ್ಧ ಮನಸ್ಸಿನವನು
- ಅಮಳರ್ – ಅವಳಿಗಳು
- ಅಮಳ್ಗಳ್ – ಅವಳಿಜವಳಿ; ಒಡನಾಡಿ
- ಅಮಳಾವರ್ತವಿಮಾನ – (ಜೈನ) ಸ್ವರ್ಗದ ಒಂದು ವಿಮಾನದ ಹೆಸರು
- ಅಮಳಿನಚರಿತ – ಪರಿಶುದ್ಧ ನಡತೆಯವನು
- ಅಮಳ್ಗಂಬ – ಜೋಡಿ ಕಂಬ
- ಅಮಳ್ಗಳ್ – (ಯಮಲ) ಅವಳಿಜವಳಿ
- ಅಮಳ್ಗೊಡೆ – ಜೋಡಿ ಕೊಡೆ
- ಅಮಳ್ಜಂತ್ರ – ಜೋಡಿಯಂತ್ರ
- ಅಮಳ್ದಲೆವಕ್ಕಿ – ಗಂಡಭೇರುಂಡ
- ಅಮಳ್ದೊಂಗಲ್ – ಎರಡು ಗೊಂಚಲುಗಳು
- ಅಮಳ್ವಕ್ಕಿ – ಚಕ್ರವಾಕ
- ಅಮಳ್ವಾಸು – ಜೊಡಿ ಹಾಸಿಗೆ
- ಅಮಳ್ವೆಸ್ – ಜೋಡಿ ಹೆಸರು
- ಅಮಳ್ವೆ¾ು – ಅವಳಿಗಳನ್ನು ಹೆರು
- ಅಮಾತ್ಯ – ಮಂತ್ರಿ
- ಅಮಾನ – ಮಾನಗೇಡಿ
- ಅಮಾನಿತ – ಗೌರವವಿಲ್ಲದ; ಹೊರಟುಹೋದ
- ಅಮಾನುಷ – ಮನುಷ್ಯರಿಗೆ ಸಹಜವಲ್ಲದ
- ಅಮಾನುಷಖೇಳ – ಮನುಷ್ಯ ಸಹಜತೆಗೆ ಮೀರಿದ ಲೀಲೆಯವನು
- ಅಮಾನುಷಚರಿತ್ರ – ಮನುಷ್ಯಸಹಜತೆಗೆ ಮೀರಿದ ನಡತೆ
- ಅಮಿತಾಳಾಪ – ಮಿತವಲ್ಲದ ಮಾತು
- ಅಮುಂ(ವುಂ)ಕು – ಅದುಮು; ಹಿಸುಕು
- ಅಮೂಢದೃಷ್ಟಿ – (ಜೈನ) ಸಮ್ಯಗ್ದರ್ಶನದ ಎಂಟು ಅಂಗಗಲ್ಲಿ ಒಂದು
- ಅಮೂಢದೃಷ್ಟಿತ್ವ – ಅಮೂಢದೃಷ್ಟಿಯನ್ನು ಹೊಂದಿರುವುದು
- ಅಮೂರ್ತ – ರೂಪರಹಿತ
- ಅಮೂಲ್ಯತ್ವ – ಬೆಲೆಯಿಲ್ಲದಿರುವಿಕೆ; ಬೆಲೆಗಟ್ಟಲಾಗದ ಸ್ಥಿತಿ
- ಅಮೃತಂಬಡೆ – ಅಮೃತವನ್ನು ಹೊಂದು
- ಅಮೃತಕರ – ಚಂದ್ರ
- ಅಮೃತಕಲ್ಪ – ಅಮೃತಸಮಾನ
- ಅಮೃತಕಿರಣ – ಚಂದ್ರ
- ಅಮೃತಗರ್ಭ – ಅಮೃತವನ್ನೊಳಗೊಂಡ
- ಅಮೃತಜಲ(ಳ)ಧಿ – ಹಾಲ್ಗಡಲು
- ಅಮೃತದ್ಯುತಿ – ಚಂದ್ರ
- ಅಮೃತಪದ – ಮೋಕ್ಷಪದವಿ
- ಅಮೃತಪಯೋಧಿ – ಹಾಲ್ಗಡಲು
- ಅಮೃತಪಿಂಡ – ಅಮೃತದ ಉಂಡೆ
- ಅಮೃತಭಕ್ಷ್ಯ – ಅಮೃತದಂತಹ ತಿನಿಸು
- ಅಮೃತಭವ – ಹಾಲ್ಗಡಲಲ್ಲಿ ಹುಟ್ಟಿದ; ಚಂದ್ರ
- ಅಮೃತಮರೀಚಿ – ಚಂದ್ರ
- ಅಮೃತರಸಾಯನ – ಒಂದು ಬಗೆಯ ಪಾನಕ
- ಅಮೃತವರ್ಷ – ಅಮೃತದ ಮಳೆ
- ಅಮೃತವಾರ್ಧಿ – ಹಾಲ್ಗಡಲು
- ಅಮೃತಸಾನ್ನಾಯ್ಯ – ರುಚಿಕರವೂ ಶ್ರೇಷ್ಠವೂ ಆದ ಹವಿಸ್ಸು
- ಅಮೃತಸ್ಯಂದಿ – ಅಮೃತವನ್ನು ಸೂಸುವುದು
- ಅಮೃತಾಂಶು – ಚಂದ್ರ
- ಅಮೃತಾಂಶುರಶ್ಮಿ – ಬೆಳುದಿಂಗಳು
- ಅಮೃತಾಕರ – ಹಾಲ್ಗಡಲು
- ಅಮೃತಾಕ್ಷರ – ಅಮೃತದಂತೆ ಮಧುರವಾದ ಅಕ್ಷರ
- ಅಮೃತಾಧರೆ – ಅಮೃತದಂತೆ ಮಧುರವಾದ ತುಟಿಯುಳ್ಳವಳು
- ಅಮೃತಾಬ್ಜ – ಕೆಂದಾವರೆ
- ಅಮೃತಾಬ್ಧಿ – ಹಾಲ್ಗಡಲು
- ಅಮೃತಾಯತ – ಅಮೃತದಂತಹ
- ಅಮೃತಾವಾಸ – ಶಾಶ್ವತ ನೆಲೆ; ಮೋಕ್ಷ
- ಅಮೃತಾಶನ – ಅಮೃತವನ್ನೇ ಆಹಾರವಾಗಿ ಪಡೆದವನು, ದೇವತೆ
- ಅಮೃತಾಸಾರ – ಅಮೃತದ ಮಳೆ
- ಅಮೃತಾಹಾರ – ಅಮೃತಾಶನ
- ಅಮೇಧ್ಯ – ಯಜ್ಞಕ್ಕೆ ಯೋಗ್ಯವಲ್ಲದ; ಕೊಳಕಾದ
- ಅಮೇಯ – ಅಳತೆಗೆ ಸಿಕ್ಕದ
- ಅಮೋಘ – ವ್ಯರ್ಥವಾಗದ; ಸಾರ್ಥಕವಾದ
- ಅಮೋಘಂ – ವ್ಯರ್ಥವಾಗದ ಹಾಗೆ
- ಅಮೋಘವರ್ಷ – ನೃಪತುಂಗನ ಬಿರುದು
- ಅಮ್ಮ – ತಂದೆ
- ಅಮ್ಮಂಗೊಡಲಿ – ಶಂಖಪುಷ್ಪಿ ಎಂಬ ಗಿಡ
- ಅಮ್ಮಾವು – ಕಾಡ ಹಸು
- ಅಯ – ಚಲಿಸುವುದು; ಶುಭವಿಧಿ; ಶ್ರೇಯಸ್ಸು
- ಅಯಃಪುತ್ರಿಕೆ – ಕಬ್ಬಿಣದಿಂದ ಮಾಡಿದ ಹೆಣ್ಣಿನ ಪ್ರತಿಮೆ
- ಅಯಕರಣ – ಶುಭವಿಧಿ
- ಅಯತ್ನಕೃತ – ತನಗೆ ತಾನೇ ಆದ
- ಅಯತ್ನಸುಖ – ತನಗೆ ತಾನೇ ದೊರೆತ ಸುಖ
- ಅಯನ – ಚಲಿಸುವುದು; ಮೂರು ಋತುಗಳ
- ಅಥವಾ ಆರು ತಿಂಗಳ ಕಾಲ
- ಅಯನಯ – ಶುಭಕಾರ್ಯ; ನೀತಿಮಾರ್ಗ
- ಅಯನಶೀಲ – ಗತಿಶೀಲ
- ಅಯಮಾರ್ಗ – ಒಳ್ಳೆಯ ದರಿ
- ಅಯಲತಾ – ಸೌಭಾಗ್ಯವೆಂಬ ಬಳ್ಳಿ
- ಅಯಶ – ಕೆಟ್ಟ ಹೆಸರು
- ಅಯಶಸ್ಕೀರ್ತಿ – (ಜೈನ) ಎಪ್ಪತ್ತೆರಡು
- ಪ್ರಕೃತಿಗಳಲ್ಲಿ ಅಪಕೀರ್ತಿ ಎಂಬ ಪ್ರಕೃತಿ ಅಥವಾ ಕರ್ಮ
- ಅಯಶ್ಶಲಾಕೆ – ಕಬ್ಬಿಣದ ಸರಳು
- ಅಯಸ – ಆಯಾಸ; (ಅಯಶ) ಅಪಯಶಸ್ಸು
- ಅಯಸ್ಕಾಂತ – ಸೂಜಿಗಲ್ಲು
- ಅಯುಕ್ತ – ನೊಗಕ್ಕೆ ಹೂಡದ; ಹೊಂದಿಕೆಯಿಲ್ಲದ; ಅಗಲಿದ
- ಅಯುತ – ಹತ್ತು ಸಾವಿರ
- ಅಯೋಗ – ಒನಕೆ; ಯೋಗರಾಹಿತ್ಯ
- ಅಯೋಗಕೇವಲಿ – (ಜೈನ) ಮನೋವಾಕ್ಕಾಯಗಳ ಚಾಂಚಲ್ಯವಿಲ್ಲದವನು; ಹದಿನಾಲ್ಕನೆಯ ಗುಣಸ್ಥಾನವನ್ನು ಸೇರಿದವನು
- ಅಯೋಗಗುಣಸ್ಥಾನ – (ಜೈನ) ಹದಿನಾಲ್ಕನೆಯ ಗುಣಸ್ಥಾನ
- ಅಯೋಗಿ – ಅಯೋಗಕೇವಲಿ
- ಅಯೋಗ್ರಾಹ್ಯತೆ – ಕಬ್ಬಿಣವನ್ನು ಆಕರ್ಷಿಸುವ ಗುಣ
- ಅಯೋಘನ – ಸುತ್ತಿಗೆ
- ಅಯೋಧ್ಯ – ಯುದ್ಧ ಮಾಡಬಾರದ; (ಜೈನ) ಚಕ್ರವರ್ತಿಯ ಏಳು ಜೀವರತ್ನಗಳಲ್ಲಿ ಒಬ್ಬನಾದ ಸೇನಾಪತಿಯ ಹೆಸರು
- ಅಯೋನಿಸಂಭವ – ಅಯೋನಿಜ, ದ್ರೋಣ
- ಅಯೋಲಲನೆ – ಅಯಃಪುತ್ರಿಕೆ
- ಅಯ್ಕಿಲ್ – ಐಕಿಲ್, ಚಳಿ; ಹಿಮ
- ಅಯ್ಕಿಲೆಲರ್ – ತಂಪು ಗಾಳಿ
- ಅಯ್ಕಿಲ್ಗದಿರ – ತಂಪು ಕಿರಣದವನು, ಚಂದ್ರ
- ಅಯ್ಕಿಲ್ವೆಟ್ಟು – ಹಿಮದ ಬೆಟ್ಟ
- ಅಯ್ಕಿಲ್ವೆಳಗ – ಅಯ್ಕಿಲ್ಗದಿರ
- ಅಯ್ಗಣೆಯ – ಐದು ಬಾಣಗಳುಳ್ಳವನು; ಮನ್ಮಥ
- ಅಯ್ಗೋಲ – ಅಯ್ಗಣೆಯ
- ಅಯ್ದುಗುಂದು – ಐದು ಸಾಲದೆ ಹೋಗು
- ಅಯ್ದೆ – ಅಯಿದೆ, ಐದೆ, ಮುತ್ತೈದೆ
- ಅಯ್ದೆತನ – ಸುಮಂಗಲಿತನ
- ಅಯ್ದೆದಾಳಿ – ತಾಳಿ, ಮಾಂಗಲ್ಯ
- ಅಯ್ದೆಮಿನುಗು – ತಾಳಿಬೊಟ್ಟು, ಮಾಂಗಲ್ಯ
- ಅಯ್ದೆವಸ – ಐದು ದಿವಸ
- ಅಯ್ಮೊಗ – ಐದು ಮುಖದವನು, ಶಿವ
- ಅಯ್ಯ – ತಂದೆ, ತಾತ
- ಅಯ್ಯಗೊಡೆ – ಎರಡು ಕೊಡೆಗಳು
- ಅಯ್ರದಾಳಿ – ಅಯ್ದೆದಾಳಿ
- ಅಯ್ವಡಿ – ಐದು ಪಟ್ಟು
- ಅಯ್ಸರಳ – ಐದು ಬಾಣಗಳವನು, ಕಾಮ
- ಅಯ್ಸಾಸಿರ – ಐಸಾಸಿರ, ಐದು ಸಾವಿರ
- ಅಯ್ಸಾಸಿರ್ವರ್ – ಐದು ಸಾವಿರ ಜನ
- ಅಯ್ನೂರ್ವರ್ – ಐನೂರು ಮಂದಿ
- ಅರ – ವೇಗವುಳ್ಳ; (ಜೈನ) ಹದಿನೆಂಟನೆಯ ತೀರ್ಥಂಕರ
- ಅರಗಿಳಿ – ಅರಗಿಣಿ, ಶ್ರೇಷ್ಠವಾದ ಗಿಳಿ
- ಅರಗೀಲ್ – ಚಕ್ರದ ಅರೆಕಾಲು
- ಅರಗು – ಮರದ ಮೇಲಿನ ಮೇಣ
- ಅರಘಟ್ಟ – ನೀರೆತ್ತುವ ರಾಟೆ
- ಅರಣ – ಸಗಣಿ
- ಅರಣಿ – ಯಾಗದ ಬೆಂಕಿಯನ್ನು ಕಡೆಯುವ
- ಒಣಬನ್ನಿ ಮರದ ತುಂಡು
- ಅರಣ್ಯಕಮಲಿನಿ – ಕಾಡಿನ ತಾವರೆ ಬಳ್ಳಿ
- ಅರಣ್ಯಪ್ರಕರ – ಕಾಡುಗಳ ಗುಂಪು
- ಅರಣ್ಯರುದಿತ – ಅರಣ್ಯರೋದನ
- ಅರಣ್ಯಾಂತರ – ಕಾಡಿನ ನಡುವೆ
- ಅರಣ್ಯಾನೀಚರ – ಅರಣ್ಯಸಂಚಾರಿ, ಬೇಡ
- ಅರತಿ – ಅನಾಸಕ್ತಿ; ಪ್ರೀತಿರಾಹಿತ್ಯ
- ಅರದ – ತೇರು, ರಥ
- ಅರದೇಗು – ತೇಗದ ಮರದ ಒಂದು ಭೇದ
- ಅರಬೊಜಂಗ – ರಾಜವಿಟ
- ಅರಮಗ – ರಾಜನ ಮಗ
- ಅರಮೆ – ಸ್ವಲ್ಪಮಟ್ಟಿಗೆ; ಕ್ವಚಿತ್; ಬಹಳವಾಗಿ
- ಅರರೀಪುಟ – ಬಾಗಿಲ ರೆಕ್ಕೆ, ಕದ
- ಅರಲ್ – ಹೂ
- ಅರಲಸರಲ – ಹೂಬಾಣ, ಮನ್ಮಥ
- ಅರಲಿಚ – ಬ್ರಹ್ಮ
- ಅರವರಿಸು – ವಿಚಾರ ಮಾಡು; ಉಪೇಕ್ಷೆ ಮಾಡು
- ಅರವಾವು – (ಅರಸು+ಪಾವು) ಹೆಬ್ಬಾವು
- ಅರವಿಂದ – ತಾವರೆ
- ಅರವಿಂದವನ – ತಾವರೆಯ ಸಮೂಹ; ಕೊಳ
- ಅರವಿಂದಸಖ – ಸೂರ್ಯ
- ಅರವಿಂದಾಕರ – ಕೊಳ
- ಅರವಿಂದಾಸ್ಯ – ತಾವರೆಮೊಗ, ವಿಷ್ಣು
- ಅರವಿಂದಿನಿ – ತಾವರೆಯ ಕೊಳ
- ಅರವುರನೆ – ತ್ವರಿತವಾಗಿ
- ಅರವೊ¾ಸು – ಒಂದು ಬಗೆಯ ಪಾರಿವಾಳ
- ಅರಸ – ಅರಸುತನ
- ಅರಸಂಚೆ – ರಾಜಹಂಸ
- ಅರಸಾಳ್ – ದೊರೆಯ ಆಳು
- ಅರಸಾಳ್ತನ – ಅರಸಾಳಿನ ಕರ್ತವ್ಯ, ಅಧಿಕಾರ
- ಅರಸಿ – ರಾಣಿ
- ಅರಸಿಕೆ – ರಾಜತನ
- ಅರಸಿತಿ – ಅರಸಿ
- ಅರಸು – ಅರಸುತನ
- ಅರಸುಕುಮಾರ – ದೊರೆಗುವರ
- ಅರಸುಗಾಣ್ – ರಾಜಪದವಿಯನ್ನು ಪಡೆ
- ಅರಸುಗಿಡು – ರಾಜತ್ವ ಕೈತಪ್ಪು
- ಅರಸುತನಂಗೆಯ್ – ಆಳುವುದು
- ಅರಸುಪೊ¾ಸು – ರಾಜಕಪೋತ, ಇದು
- ಮನೆಹೊಕ್ಕರೆ ಕೇಡು ಎಂಬ ನಂಬಿಕೆ
- ಅರಸುಮಗ – ದೊರೆಗುವರ
- ಅರಸುವಡೆ – ದೊರೆಯನ್ನು ಹೊಂದು
- ಅರಸೊಡವೆ – ರಾಜನ ಒಡವೆ
- ಅರಳ್ – ಹುರಿದ ಏಕದಳ ಧಾನ್ಯ; ಲಾಜೆ
- ಅರಳಿ – ಅಶ್ವತ್ಥದ ಮರ
- ಅರಳೆ – ಬೀಜ ತೆಗೆದ ಹತ್ತಿ
- ಅರಳೆಲೆ – ಅರಳಿ ಎಲೆಯಾಕಾರದ ಮಕ್ಕಳ ಒಂದು ಆಭರಣ
- ಅರಳೆಲೆಮಾಲೆ – ಅರಳಿ ಎಲೆಯಾಕಾರದ ಬಟ್ಟುಗಳ ಸರ
- ಅರಳೇಳ್ – ಧಾನ್ಯದಂತೆ ಅರಳಾಗು, ಚಿಮ್ಮು
- ಅರಾತಿ – ಶತ್ರು
- ಅರಾತಿಕಾಂತೆ – ಶತ್ರುವಿನ ಹೆಮಡತಿ
- ಅರಾತಿನಿಕರ – ಶತ್ರುಸಮೂಹ
- ಅರಿ – ಕತ್ತರಿಸು
- ಅರಿಂಜಯ – ಶತ್ರುವನ್ನು ಗೆಲ್ಲುವವನು
- ಅರಿಂದಮ – ಶತ್ರುಗಳನ್ನು ಅಡಗಿಸುವವನು
- ಅರಿಕಾಮಧ್ವಂಸಿ – ಹಗೆಯಾದ ಕಾಮನನ್ನು
- ಕೊಂದವನು, ಶಿವ
- ಅರಿಕುಠಾರ – ಶತ್ರುವಿಗೆ ಕೊಡಲಿಯಂತಿರುವವನು
- ಅರಿಕೇಸರಿ – ಶತ್ರುಗಳಿಗೆ ಸಿಂಹದಂತಿರುವವನು; ಪಂಪನ ಆಶ್ರಯದಾತ
- ಅರಿಗ – ಅರಿಕೆಸರಿ ಎಂಬ ರಾಜ
- ಅರಿದಾಳ – ಶಂಖಪಾಷಾಣ ಮತ್ತು ಗಂಧಕಗಳ ಮಿಶ್ರಣ; ಹರಿತಾಲ
- ಅರಿದು – ಅಸಾಧ್ಯ
- ಅರಿಧ್ವಜಿನಿ – ಶತ್ರುಸೈನ್ಯ
- ಅರಿನಿರ್ದಾರಣ – ಶತ್ರುಗಳನ್ನು ಸೀಳಿ ಹಾಕುವವನು
- ಅರಿಪರದೂಷಣಸಂಧಿ – ರಾಜನು ಶತ್ರುವಿನೊಡನೆ ಮಾಡಿಕೊಳ್ಳಬಹುದಾದ ಹದಿನಾರು ಬಗೆಯ ಸಂಧಿಗಳಲ್ಲಿ ಒಂದು; ಉತ್ತಮ ಭೂಪ್ರದೇಶವನ್ನು ಶತ್ರುವಿಗೆ ಕೊಟ್ಟು ಮಾಡಿಕೊಳ್ಳುವ ಸಂಧಿ
- ಅರಿಪ್ರಧ್ವಂಸನ – ಶತ್ರುವನ್ನು ಧ್ವಂಸಮಾಡುವವನು
- ಅರಿಬಳಜೈತ್ರ – ಶತ್ರುಸೈನ್ಯವನ್ನು ಗೆಲ್ಲುವವನು
- ಅರಿಯನ್ – ಅಸಾಧ್ಯನಾದವನು
- ಅರಿಯಮೆ – ಅಜ್ಞಾನ
- ಅರಿಯಿಸು – ಕತ್ತರಿಸು
- ಅರಿಯುವತಿ – ಶತ್ರುಸ್ತ್ರೀ
- ಅರಿವಾಹಿನಿ – ಶತ್ರುಸೈನ್ಯ
- ಅರಿಷ್ಟ – ದುರದೃಷ್ಟ; ರಾಕ್ಷಸ; (ಜೈನ) ಲೋಕಾಂತಿಕ ದೇವರಲ್ಲಿನ ಒಂದು ಪ್ರಭೇದ
- ಅರಿಷ್ಟಘರಟ್ಟ – ದುಷ್ಟರಿಗೆ ಬೀಸು ಕಲ್ಲಿನಂತಿರುವವನು
- ಅರಿಷ್ಟನೇಮಿ – ಗರುಡನ ಸೋದರ; (ಜೈನ) ಇಪ್ಪತ್ತೆರಡನೆಯ ತೀರ್ಥಂಕರ
- ಅರಿಷ್ಟಸದ್ಮ – ಹೆರಿಗೆಯ ಮನೆ
- ಅರಿಷ್ಟೆ – (ಜೈನ) ಒಂದು ನರಕದ ಹೆಸರು
- ಅರಿಸ್ಮಯ – ಶತ್ರುಗಳಿಗೆ ಅಚ್ಚರಿಯುಂಟುಮಾಡುವ
- ಅರುಚಿ – ರುಚಿಯಿಲ್ಲದಿರುವುದು; ಅಪೇಕ್ಷೆಯಿಲ್ಲದಿರುವುದು
- ಅರುಣ – ಕೆಂಪು ಬಣ್ಣ; (ಜೈನ) ಲೋಕಾಂತಿಕ
- ದೇವರಲ್ಲಿ ಒಂದು ಬಗೆ
- ಅರುಣಜಲ – ಕೆಂಪು ನೀರು; ರಕ್ತ
- ಅರುಣಶಾಲಿ – ಕೆಂಪು ಬತ್ತ
- ಅರುಣಾಂಬು – ರಕ್ತ
- ಅರುಣಾಬ್ಜ – ಕೆಂಪು ತಾವರೆ
- ಅರುಣಾಶ್ಮ – ಕೆಂಪು ಕಲ್ಲು, ಮಾಣಿಕ್ಯ
- ಅರುನಿತ – ಕೆಂಪು ಮಾಡಲ್ಪಟ್ಟ
- ಅರುಣೀಭೂತ – ಕೆಂಪಾದ
- ಅರುಣೋಪಲ(ಳ) – ಕೆಂಪು ಕಲ್ಲು, ಮಾಣಿಕ
- ಅರುಷ್ಕರ – ಗೇರುಮರ
- ಅರುಹಂತ – ತೀರ್ಥಂಕರ
- ಅರೆ – ನುಣ್ಣಿಸು; ತೇಯು; ಅರ್ಧಭಾಗ; ಕೊರತೆ; ಕೆಲಮಟ್ಟಿಗೆ; ಒಂದು ಭಾವಸೂಚಕಾವ್ಯಯ
- ಅರೆಗಟ್ಟು – ಅರ್ಧ ಕಟ್ಟು, ಸಡಿಲವಾಗಿ ಕಟ್ಟು
- ಅರೆಗಣ್ಬೀಡು – ಅರ್ಧಕಣ್ಣನ್ನು ತೆರೆದಿರುವುದು
- ಅರೆಗಣ್ಮುಗಿ – ಅರ್ಧಕಣ್ಣು ಮುಚ್ಚು
- ಅರೆಗರಿ – ಅರ್ಧ ಸುಡು
- ಅರೆಗರಿಂಕುವೋಗು – ಅರ್ಧ ಸೀದು ಕರಿಕಾಗು
- ಅರೆಗಲ್ – ಅರೆಯುವ ಕಲ್ಲು, ಮಸೆಗಲ್ಲು
- ಅರೆಗವಡಿಕೆ – ಕವಡೆಯ ಆರ್ಧಭಾಗ
- ಅರೆಗ¿್ತಲೆ – ಅರ್ಧ ಕತ್ತಲೆ
- ಅರೆಗ¿Âಗೆ – ಅರ್ಧ ಗಳಿಗೆ ; ಸ್ವಲ್ಪ ಹೊತ್ತು
- ಅರೆಗಾವುದ – ಅರ್ಧ ಗಾವುದ; ಆರು ಮೈಲಿ
- ಅರೆಗೆ¾õÉ – ಶ್ರೇಷ್ಠವಾದ ಕೆರೆ
- ಅರೆಗೇಣ್ – ಅರ್ಧ ಗೇಣು
- ಅರೆಗೊಯ್ – ಅರ್ಧ ಕೊಯ್ಯಿ
- ಅರೆಜಾವ – ಅರ್ಧ ಜಾವದಷ್ಟು ಕಾಲ; ಒಂದೂವರೆ ಗಂಟೆ
- ಅರೆಪುರುಷ – ಅರ್ಧ ಆಳಿತ ಎತ್ತರ ಅಥವಾ ಆಳ
- ಅರೆಪೊರೆಕ – ಅರ್ಧವ್ಯಾಪಿಸಿದ
- ಅರೆಮುಗಿ – ಅರ್ಧ ಮುಚ್ಚಿಕೊ
- ಅರೆಮುಗುಳ್ – ಅರ್ಧ ಮುಚ್ಚಿಕೊ; ಆರ್ಧ ಬಿರಿದ ಮೊಗ್ಗು
- ಅರೆವಣ್ – ಅರ್ಧ ಹಣ್ಣಾದ; ದೋರೆ ಹಣ್ಣು
- ಅರೆವರಿ – ಉಪೆಕ್ಷೆ, ಕಡೆಗಣಿಸುವಿಕೆ
- ಅರೆವಳ – ಅರೆಯುವ ಕೆಲಸದಲ್ಲಿ ತೊಡಗಿರುವವನು
- ಅರೆವಾತು – ಅಸ್ಪಷ್ಟ ನುಡಿ
- ಅರೆವಾನಿಸಿಕೆ – ಅರ್ಧ ಮನುಷ್ಯತ್ವ
- ಅರೆವಿರಿ – ಅರ್ಧ ಬಿರಿ
- ಅರೆವೀ¾ು – ಹೂಮಳೆ
- ಅರೆವೆಣ್ಣ – ಅರ್ಧ ಹೆಣ್ಣಾದವನು, ಶಿವ
- ಅರೆವೆಣ್ತನ – ಅರ್ಧ ಹೆಣ್ಣಾಗಿರುವ ಸ್ಥಿತಿ
- ಅರೆವೆಸ – ಅರ್ಧ ಕೆಲಸ
- ಅರೆವೆ¾õÉ – ಅರ್ಧಚಂದ್ರ
- ಅರೆವೆ¾õÉಯ – ಅರ್ಧಚಂದ್ರಧರ, ಶಿವ
- ಅರೆವೊತ್ತು – ಸ್ವಲ್ಪ ಹೊತ್ತಿಕೊ, ಉರಿ
- ಅರೆವೊರಕ – ಅರೆಬರೆಯಾದ
- ಅರೋಚಿ – ಅವಿವೇಕಿ
- ಅರ್ಕ – ಸೂರ್ಯ; ಎಕ್ಕೆ
- ಅರ್ಕಕರ – ಸೂರ್ಯನ ಕಿರಣ, ಕಾಂತಿ
- ಅರ್ಕಗ್ರಾವ – ಸೂರ್ಯಕಾಂತಶಿಲೆ
- ಅರ್ಕಜಾಂಬು – ಸೂರ್ಯನ ಮಗಳಾದ ಯುಮುನಾ ನದಿಯ ನೀರು
- ಅರ್ಕಮಂಡಲ – ಸೂರ್ಯಮಂಡಲ
- ಅರ್ಕರೋಚಿ – ಸೂರ್ಯನ ಕಾಂತಿ
- ಅರ್ಕಸುತಾ – ಯಮುನಾ ನದಿ
- ಅರ್ಕಾಡು – ಅ¿õÁ್ಕಡು, ನಿಶ್ಶೇಷವಾಗು
- ಅರ್ಗಳ – ಅಗುಳಿ
- ಅರ್ಘ – ಬೆಲೆ
- ಅರ್ಘಕ್ಷಯ – ಬೆಲೆಯಿಳಿಯುವಿಕೆ
- ಅರ್ಘಿಸು – ಅರ್ಘೈವನ್ನು ಕೊಡು
- ಅಘ್ರ್ಯ – ಕೈ ತೊಳೆಯುವ ನೀರು; ಶ್ರೇಷ್ಠ; ಪೂಜ್ಯ
- ಅಘ್ರ್ಯೋದ್ಧರಣ – ಅಘ್ರ್ಯವೆತ್ತುವ ಕ್ರಿಯೆ
- ಅಘ್ರ್ಯಕರ – ಪೂಜಾಸಾಮಗ್ರಿಗಳನ್ನು ಕೈಯಲ್ಲಿಟ್ಟುಕೊಂಡವನು
- ಅಘ್ರ್ಯಕ್ರಿಯಾತಂಡುಲ – ಅಕ್ಷತೆ
- ಅಘ್ರ್ಯಲಾಜ – ಪೂಜೆಗಾಗಿ ಅರ್ಪಿಸುವ ಬತ್ತದ ಅರಳು
- ಅಘ್ರ್ಯಹಸ್ತ – ಅಘ್ರ್ಯಕರ
- ಅರ್ಚನಾವಿಧಿ – ಪೂಜಾಕ್ರಮ
- ಅರ್ಚನೋಪಕರಣ – ಪೂಜಾಸಾಮಗ್ರಿಗಳು (ಹೂ, ಗಂಧ, ಹಣ್ಣು, ಶಾಲಿ, ಅಕ್ಷತೆ, ಧೂಪ, ದೀಪ, ಚರು)
- ಅರ್ಚಾಕ್ರೀಡನ – ಪೂಜೆಯ ಆಟ
- ಅರ್ಚಿ – ಜ್ವಾಲೆ; ಕಾಂತಿ
- ಅರ್ಚಿಃಕಣ – ಕಿಡಿ
- ಅರ್ಚಿತ – ಪೂಜೆಗೊಂಡ
- ಅರ್ಚಿಸು – ಪೂಜೆ ಮಾಡು
- ಅರ್ಜುನ – ಮತ್ತಿಯ ಗಿಡ ; ಬಿಳಿಪು; ಪಾಂಡವರಲ್ಲಿ ಒಬ್ಬ
- ಅರ್ಜುನಕುಜ – ಬಿಳಿಯ ಮರ, ಮತ್ತಿ ಮರ
- ಅರ್ಜುನೋರ್ಜಿತ – ಮತ್ತಿಯ ಮರದಿಂದ ಮೇಲ್ಮೆಯನ್ನು ಪಡೆದ; ಅರ್ಜುನನಿಂದ ಉನ್ನತಿಯನ್ನು ಹೊಂದಿದ
- ಅರ್ಣವ – ಸಮುದ್ರ
- ಅರ್ಣವಜಾತ – ಸಮುದ್ರದಲ್ಲಿ ಹುಟ್ಟಿದ, ಚಂದ್ರ
- ಅರ್ಣವತೀರ್ಣ – ಸಮುದ್ರವನ್ನು ದಾಟಿದವನು
- ಅರ್ತಿ – ಪ್ರೀತಿ
- ಅರ್ತಿಗೆಡು – ಪ್ರೀತಿ ಕೆಟ್ಟುಹೋಗು
- ಅರ್ಥಕೃತಿ – ಹಣಕ್ಕಾಗಿ ಬರೆದ ಕಾವ್ಯ; ಅರ್ಥವಂತಿಕೆಯಿಂದ ಕೂಡಿದ ಕಾವ್ಯ
- ಅರ್ಥ – ಶಬ್ದದ ಅಭಿಪ್ರಾಯ
- ಅರ್ಥಖಂಡನ – ಇತರ ಅರ್ಥವನ್ನು ನಿರಾಕರಿಸುವುದು
- ಅರ್ಥಗ್ರಾಹಿ – ಹಣ ಅಥವಾ ಪ್ರಯೋಜನವನ್ನು ಪಡೆಯುವವನು
- ಅರ್ಥಘಟನೆ – ಅರ್ಥ, ಅಭಿಪ್ರಾಯದ ಹೊಂದಿಕೆ
- ಅರ್ಥದ(ಪ) – ಕುಬೇರ
- ಅರ್ಥದೂಷಕ – ಹಣದುರುಪಯೊಗ ಮಾಡುವವನು
- ಅರ್ಥದೃಷ್ಟಿ – ಹಣದ ಕಡೆಗಿನ ಗಮನ; ಅರ್ಥದ ಕಡೆಗಿನ ಗಮನ
- ಅರ್ಥದೃಷ್ಟøತ್ವ – ಅರ್ಥದ ಸ್ವಾರಸ್ಯವನ್ನು ಕಾಣುವುದು
- ಅರ್ಥನೀಯ – ಬೇಡಲು ಯೋಗ್ಯವಾದ
- ಅರ್ಥಪೋಷ – ಅರ್ಥ ಸಾರ್ಥಕವಾಗುವಿಕೆ; ಅನ್ವರ್ಥವಾಗುವಿಕೆ
- ಅರ್ಥಪ್ರತೀತಿ – ಅರ್ಥಸ್ಪಷ್ಟತೆ
- ಅರ್ಥಪ್ರವರ್ತನ – ಆರ್ಥಿಕ ವ್ಯವಹಾರ
- ಅರ್ಥರಹಿತ – ಅರ್ಥವಿಲ್ಲದ್ದು; ಹಣವಿಲ್ಲದ್ದು
- ಅರ್ಥಲ(ಳ)ಂಬಿ – ಅಥ್ವನ್ನು ಅವಲಂಬಿಸಿರುವ
- ಅರ್ಥವಿಜಯಿ – ದೊರೆಗಳ ಮೂರು ಬಗೆಗಳಲ್ಲಿ ಒಂದು; ಉಳಿದೆರಡು: ಅಸುರವಿಜಯಿ ಮತ್ತು ಧರ್ಮವಿಜಯಿ
- ಅರ್ಥವೃತ್ತಿ – ಅರ್ಥವಿವರಣೆ
- ಅರ್ಥವ್ಯಕ್ತಿ – ಅರ್ಥ ಸ್ಪಷ್ಟವಾಗಿರುವುದು
- ಅರ್ಥಶಾಸ್ತ್ರ – ರಾಜನೀತಿ; ಕೌಟಿಲ್ಯದ ರಾಜನೀತಿಯ ಗ್ರಂಥ
- ಅರ್ಥಸಂಚಯ – ಹಣಶೇಖರಣೆ
- ಅರ್ಥಸಂವರಣೆ – ಹಣವನ್ನು ಬಚ್ಚಿಡುವುದು
- ಅರ್ಥಾನುರೂಪ – ಅರ್ಥಕ್ಕೆ ಅನುಗುಣವಾದ
- ಆರ್ಥಾಭಾಸ – ಅರ್ಥವಿರುವಂತಿದ್ದರೂ ಅರ್ಥರಹಿತವಾದುದು
- ಅರ್ಥಾರ್ಥಿ – ಹಣವನ್ನು ಬೇಡುವವನು
- ಅರ್ಥಿ – ಯಾಚಕ; ಸೇವಕ; ಸಂತೋಷ
- ಅರ್ಥಿಗಣ – ಯಾಚಕರ ಗುಂಪು
- ಅರ್ಥಿತ – ಬೇಡಿದ
- ಅರ್ಥಿನಿಚಯ – ಅರ್ಥಿಗಣ
- ಅರ್ಥೇಶ – ಅರ್ಥಪತಿ, ಕುಬೇರ
- ಅರ್ಥೋಕ್ತಿ – ಅರ್ಥಸ್ಪಷ್ಟವಾದ ಮಾತು
- ಅರ್ಥೋತ್ಕರ – ಅರ್ಥಸಮೂಹ
- ಅರ್ಥೋಪಾರ್ಜನ – ಹಣಸಂಪಾದನೆ
- ಅಥ್ರ್ಯೋಕ್ತಿ – ಅಥ್ರ್ಯ+ಉಕ್ತಿ, ತಿಳಿವಳಿಕೆಯ ಮಾತು; ಅರ್ಥಚಮತ್ಕಾರ
- ಅರ್ದಿಡು – ಬಲವಾಗಿ ಚುಚ್ಚು
- ಅರ್ದಿ(ದ್ದಿ)ಸು – ಮುಳುಗಿಸು; ಅಡಗಿಸು
- ಅರ್ದುಗಂಚಿ – ಅದಿರ್ಗಂಚಿ, ಮಾಧವೀ ಹೂ
- ಅರ್ಧಕಪ್ಪಟೆ – ಸ್ವಲ್ಪ ಬಟ್ಟೆ, ಅರೆವಸ್ತ್ರ(ಧಾರಣೆ)
- ಅರ್ಧಗಪ್ಪಡ – ಅರ್ಧಕಪ್ಪಟೆ
- ಅರ್ಧಗಪ್ಪಡ ತೀರ್ಥ – ಅರ್ಧಗಪ್ಪಡದ ಸಂಪ್ರದಾಯ
- ಅರ್ಧಗಪ್ಪಡ ಯತಿ – ಅರ್ಧಗಪ್ಪಡ ಸಂಪ್ರದಾಯದ ಮುನಿ
- ಅರ್ಧಗಪ್ಪಡ ಸಂಘ – ಅರ್ಧಗಪ್ಪಡ ಸಂಪ್ರದಾಯದ ಮುನಿಗಳ ಸಮುದಾಯ
- ಅರ್ಧಗುಚ್ಛ – ಇಪ್ಪತ್ತನಾಲ್ಕು ಎಳೆಗಳ ಹಾರ
- ಅರ್ಧಚಕ್ರವರ್ತಿ – (ಜೈನ) ಭರತಖಂಡದ ಮೂರು ಖಂಡಗಳಿಗೆ ಅಧಿಪತಿಯಾದ ಸಾಮ್ರಾಟ
- ಅರ್ಧನಾರಿ – ಅರ್ಧ ಕಪ್ಪು, ಅರ್ಧ ಕೆಂಪು ಬಣ್ಣವುಳ್ಳ; ಪಾಶ್ರ್ವವಾಯು; ದೇಹದ ಅರ್ಧ ಗಂಡು ಅರ್ಧ ಹೆಣ್ಣಾಗಿರುವುದು
- ಅರ್ಧಮಂಡಳಿಕ – ಅಧ್ ಮಂಡಲದ ಒಡೆಯ
- ಅರ್ಧಮಾಣವಕ – ಹನ್ನೆರಡು ಎಳೆಗಳ ಮುತ್ತಿನ ಹಾರ
- ಅರ್ಧರಥ – ಕೆಲವೊಮ್ಮೆ ಧೈರ್ಯದಿಂದ, ಮತ್ತೆ ಕೆಲವು ವೇಳೆ ಅಧೈರ್ಯದಿಂದ ಯುದ್ಧಮಾಡುವ ರಥಿಕ; ಮತ್ತೊಬ್ಬನ ಸಹಾಯ ಪಡೆಯುವ ರಥಿಕ
- ಅರ್ಧಹಾರ – ಅರವತ್ತುನಾಲ್ಕು ಎಳೆಗಳ ಮುತ್ತಿನ ಹಾರ
- ಅರ್ಧಾಂಗಿ – ಹೆಂಡತಿ
- ಅರ್ಧಾವಲಿಕ (ಅರ್ಧಾವಳೀಕ) – ಒಂದು ಬಗೆಯ ಅಸ್ತ್ರ; ಅರ್ಧಚಂದ್ರಾಕೃತಿಯ ಬಾಣ
- ಅರ್ಧಾಸನ – ಪೀಠದಲ್ಲಿ ಪಾಲು
- ಅರ್ಧಾಹಾರ – ಆಹಾರದಲ್ಲಿ ಅರ್ಧಭಾಗ
- ಅರ್ಧಿಸು – ಅರ್ಧಕ್ಕೆ ಕತ್ತರಿಸು
- ಅರ್ಧೇಂದು – ಅರ್ಧಚಂದ್ರ
- ಅಬಿ(ವಿರ್) – ಝರಿ, ಗಿರಿನದಿ
- ಅಬಿ(ವಿರ್)ಸು – ಸುಡು; ಅತಿಕ್ರಮಿಸು; ಹೆದರಿಸು
- ಅರ್ಭಕ – ಮಗು
- ಅರ್ಭಕೋದರೆ – ಬಸರಿಮರ
- ಅರ್ವುವಡೆ – ಹೆಚ್ಚಿಗೆಯಾಗು
- ಅರ್ಹ – (ಜೈನ) ತೀರ್ಥಂಕರ; ಜೈನಮುನಿ
- ಅರ್ಹಚ್ಛಾಸನ – (ಜೈನ) ಜಿನನ ಆಜ್ಞೆ; ಜೈನಧರ್ಮ
- ಅರ್ಹತ್ಪದ – ತೀರ್ಥಂಕರ ಪದವಿ; ತೀರ್ಥಂಕರನ ಪಾದ
- ಅರ್ಹತ್ಪರಮೇಶ್ವರ – ತೀರ್ಥಂಕರಸ್ವಾಮಿ
- ಅರ್ಹತ್ಪ್ರತಿಬಿಂಬ – ತೀರ್ಥಂಕರನ ಮೂರ್ತಿ
- ಅರ್ಹತ್ಪ್ರತಿಮೆ – ಅರ್ಹತ್ಪ್ರತಿಬಿಂಬ
- ಅರ್ಹತ್ಪ್ರವಚನ – ತೀರ್ಥಂಕರನ ಉಪದೇಶ
- ಅರ್ಹದಾಲಯ – ಬಸದಿ
- ಅರ್ಹದ್ದೀಕ್ಷೆ – ಜೈನದೀಕ್ಷೆ
- ಅರ್ಹದ್ದೇವ – ಪೂಜ್ಯನಾದ ಜಿನ
- ಅರ್ಹದ್ರೂಪ – ಜಿನರೂಪ
- ಅರ್ಹನ್ಮತ – ಜೈನಮತ
- ಅರ್ಹನ್ಮಾರ್ಗ – ಜೈನಮಾರ್ಗ, ಜೈನಮತ
- ಅರ್ಹಲ್ಲಕ್ಷ್ಮಿ – (ಜೈನ) ಮೋಕ್ಷಲಕ್ಷ್ಮಿ
- ಅಲ್ – ಬೇಡ ಎಂಬರ್ಥ (ಉದಾ: ಮುನಿಯಲ್ ಎಂದರೆ ಮುನಿಯಬೇಡ)
- ಅಲ(ಳ)ಕ – ಮುಂಗುರುಳು
- ಅಲಂ(ಳಂ)ಕರಣ – ಅಲಂಕಾರ ಮಾಡುವುದು
- ಅಲಂಕರಿಷ್ಣು – ಅಲಂಕರಿಸುವವನು
- ಅಲಂ(ಳಂ)ಕೃತಿ – ಅಲಂಕಾರ
- ಅಲಂಕೃತಿವೆ¾ು – ಅಲಂಕಾರವನ್ನು ಪಡೆ
- ಅಲಂಕೃತೆ – ಅಲಂಕಾರಗೊಂಡವಳು
- ಅಲಂಕ್ರಿಯಾರಚನೆ – ಅಲಂಕಾರ ಸೃಷ್ಟಿ
- ಅಲಂ(ಳಂ)ಕ್ರಿಯೆ – ಅಲಂಕಾರ ಮಾಡುವುದು
- ಅಲಂಘನೀಯ – ದಾಟಬಾರದ
- ಅಲಂಘ್ಯ – ಅಲಂಘನೀಯ
- ಅಲಂಘ್ಯತೇಜ – ಮೀರಲಾಗದ ತೇಜಸ್ಸುಳ್ಳವನು
- ಅಲಂಘ್ಯತ್ವ – ದಾಟಲಾಗದ್ದು
- ಅಲಂಘ್ಯಬಲ – ಮೀರಲಾಗದ ಶಕ್ತಿಯವನು
- ಅಲಂಪ¿Âಯಾಗು – ಸಂತೋಷ ಹೆಚ್ಚು
- ಅಲಂಪಿಕ್ಕು – ಲೇಪನ ಮಾಡು, ಬಳಿ
- ಅಲಂಪು – ಪ್ರೀತಿ; ಸೊಗಸು; ಆಳವಾದ ಬಯಕೆ; ಅತಿಶಯ; ಮೇಲ್ಮೆ
- ಅಲಂಪುಗೊಳ್ – ಅಲಂಕಾರ ಮಾಡಿಕೊ
- ಅಲಂಪುವಡೆ – ಸಂತೋಷ ಹೊಂದು
- ಅಲಂಪುವೆರಸು – ಪ್ರೀತಿಯಿಂದ ಕೂಡು
- ಅಲಂಪುವೋಗು – ತೃಪ್ತಿ ಹೊಂದು; ಸಂತೋಷಗೊಳ್ಳು
- ಅಲಂಪೋಡು – ಸಂತೋಷವಾಗು
- ಅಲ(ಳ)ಕ – ಮುಂಗುರುಳು
- ಅಲ(ಳ)ಕೆ – ಕುಬೇರನ ರಾಜಧಾನಿ
- ಅಲಕ್ತ(ಕ) – ಅರಗು
- ಅಲಕ್ತ(ಕ)ಚ್ಛವಿ – ಅರಗಿನ ಕೆಂಪು ಬಣ್ಣದ ಹೊಳಪು
- ಅಲಕ್ತ(ಕ)ದ್ರವ – ಅರಗಿನ ರಸ
- ಅಲಕ್ತ(ಕ)ರಸ – ಅಲಕ್ತ(ಕ)ದ್ರವ
- ಅಲಕ್ಷ್ಮಿ – ಬಡತನ
- ಅಲಗಣಸು – ಪ್ರತಿಸ್ಪರ್ಧಿ; ಅಸಮಾಧಾನ
- ಅಲಗಂಬು – ಹರಿತವಾದ ಅಲಗಿನ ಬಾಣ
- ಅಲಗು – ಆಯುಧಗಳ ಹರಿತವಾದ ಮಗ್ಗುಲು; ಕತ್ತಿ; ಬಾಣ
- ಅಲಗೆ – ಒಂದು ಬಗೆಯ ಹುಲ್ಲು; ಅದರ ಹಗ್ಗ
- ಅಲಗೆಗಟ್ಟು – ಹುಲ್ಲನ್ನು ತಲೆಗೆ ಕಟ್ಟು; ಪಣ ತೊಡು
- ಅಲಘುತರ – ತುಂಬ ತೂಕವುಳ್ಳ; ಮಹತ್ತರವಾದ
- ಅಲಘುಭುಜ – ಉದ್ದ ತೋಳು
- ಅಲತ(ತಿ)ಗೆ – ಅರಗು
- ಅಲಪು – ತೊಂದರೆ
- ಅಲರ್ – ಬಿರಿ; ಅರಳು; ಹೂವು
- ಅಲರಂಬ – ಕಾಮ
- ಅಲರಂಬು – ಹೂಬಾಣ
- ಅಲರಾಯ್ – ಹೂ ತಿರಿ
- ಅಲರೆಸ¿õï – ಹೂವಿನ ಪಕಳೆ
- ಅಲರೊದ್ದೆ – ಹೂ ರಾಶಿ
- ಅಲರೋಳಿ – ಹೂಸಾಲು, ರಾಶಿ
- ಅಲವರು – ಆಸೆಪಡು
- ಅಲರ್ಕೆ – ಅಲರಿಕೆ, ಬಿರಿಯುವುದು
- ಅಲರ್ಗಂಪು – ಹೂವಿನ ಪರಿಮಳ
- ಅಲರ್ಗಟ್ಟು – ಹೂವನ್ನು ಪೋಣಿಸು
- ಅಲರ್ಗಣ್ – ಹೂವಿನಂತಹ ಕಣ್ಣು
- ಅಲರ್ಗಣೆ – ಹೂಬಾಣ
- ಅಲರ್ಗಣೆಯ – ಹೂಬಾಣವುಳ್ಳವನು, ಮನ್ಮಥ
- ಅಲರ್ಗಣ್ಣ – ಹೂವಿನಂತಹ ಕಣ್ಣುಳ್ಳವನು, ವಿಷ್ಣು
- ಅಲರ್ಗಳಂ- ಅಡೆತಡೆಯಿಲ್ಲದೆ
- ಅಲರ್ಗುಡಿ – ಹೂವಿನ ತುದಿ; ಹೂಗೊಂಚಲು
- ಅಲರ್ಗೊಂಚಲ್ – ಹೂಗೊಂಚಲು
- ಅಲರ್ಚು – ಅರಳಿಸು
- ಅಲರ್ಜೊಂಪ – ಹೂಗೊಂಚಲು
- ಅಲರ್ವಂಡು – ಹೂವಿನ ಬಂಡು, ರಸ
- ಅಲರ್ವಕ್ಕಿ – ದುಂಬಿ
- ಅಲರ್ವಚ್ಚ – ಹೂವಿನ ತೊಡಿಗೆ
- ಅಲರ್ವಡಿಗ – ಹೂವಾಡಿಗ
- ಅಲರ್ವಡೆ – ಹೂವನ್ನು ಪಡೆ
- ಅಲರ್ವಸೆ – ಹೂವಿನ ಹಸೆ(ಮಣೆ), ಹೂ ಹಾಸಿಗೆ
- ಅಲರ್ವಾಸು – ಹೂ ಹಾಸಿಗೆ
- ಅಲರ್ವಿಲ್ – ಹೂವಿನ ಬಿಲ್ಲು
- ಅಲರ್ವಿಲ್ಲ – ಮನ್ಮಥ
- ಅಲರ್ವಿಲ್ಲರಸ – ಅಲರ್ವಿಲ್ಲ
- ಅಲರ್ವುಡಿ – ಹೂವಿನ ಪರಾಗ
- ಅಲರ್ವೋಗು – ಹೂ ಬಿಡು
- ಅಲವರಲ್ – ಚಿಂತಿಸು
- ಅಲವರಿಕೆ – ಹಟ, ಪಟ್ಟು
- ಅಲವರಿಸು – ಆಸೆಪಡು; ಹಂಬಲಿಸು
- ಅಲಸ – ಸೋಮಾರಿ
- ಅಲಸಗಮನೆ – ಮಂದಗಮನೆ
- ಅಲಸಗಾಮಿನಿ – ಮಂದಗಮನೆ
- ಅಲಸಯಾನ – ಮಂದಗಮನ
- ಅಲಸಿಕೆ – ದಣಿವು; ನಿಧಾನ; ಅಲಕ್ಷ್ಯ
- ಅಲಸಿಸು – ದಣಿವುಗೊಳಿಸು
- ಅಲಸು – ಬಳಲು, ದಣಿ; ಬಳಲಿಕೆ
- ಅಲಾತಚಕ್ರ – ಪಂಜನ್ನು ವೇಗವಾಗಿ ತಿರುಗಿಸಿದಾಗ ಉಂಟಾಗುವ ವೃತ್ತ
- ಅಲಾಬು – ಸೋರೆ ಗಿಡ, ಕಾಯಿ, ಬುರುಡೆ
- ಅಲಾಭ – ಲಾಭ ಸಿಕ್ಕದಿರುವುದು; (ಜೈನ) ಮುನಿಗೆ
- ಚರಿಗೆಯಲ್ಲಿ ಭಿಕ್ಷೆ ದೊರೆಯದಿರುವುದು
- ಅಲಿ(ಳಿ)ನಿ – ಹೆಣ್ಣು ದುಂಬಿ
- ಅಲು(ಂ)ಬು – ನೀರಿನಿಂದ ಶುದ್ಧಿ ಮಾಡು; ಕಾಲು ತೊಳೆದ ನೀರು
- ಅಲುಗು – ಅಲ್ಲಾಡು; ಅಲ್ಲಾಡಿಸು
- ಅಲುಪ – (ಅಲ್ಪ) ಸಣ್ಣದಾದ; ಕ್ಷುದ್ರ
- ಅಲೆ – ಸಂಚರಿಸು; ಸೋಲಿಸು; ನಿವಾರಿಸು; ತಾಗು; ತೊಳೆ; ತರಂಗ; ತೊಂದರೆಪಡಿಸು
- ಅಲೆಪ – ಬೀಸುವಿಕೆ; ಸಂಚಾರ
- ಅಲೆ(ಲ)ಪು – ಬೀಸುವಿಕೆ; ಕಾಟ; ಸಂಚಾರ
- ಅಲೋಕನವಿದ್ಯೆ – ಅದೃಶ್ಯವಾಗುವ ವಿದ್ಯೆ
- ಅಲೋಕಾಕಾಶ – (ಜೈನ) ಲೋಕದ ಹೊರಗಿನ
- ಆಕಾಶ; ಸಿದ್ಧರು ಇರುವ ಸ್ಥಳ
- ಅಲ್ಗು – ಅಳ್ಳಾಡು
- ಅಲ್ಪ – ಚಿಕ್ಕದಾದ; ನೀಚ
- ಅಲ್ಪದಶನದಂಶ – ಹಲ್ಲಿನಿಂದ ಸ್ವಲ್ಪ ಕಚ್ಚುವುದು
- ಅಲ್ಪವೃಷ್ಟಿ – ಸ್ವಲ್ಪ ಮಳೆ
- ಅಲ್ಪವ್ಯಾಹಾರಿ – ಮಿತಭಾಷಿ
- ಅಲ್ಪಶ್ರುತ – ಕಡಿಮೆ ತಿಳಿದವನು
- ಅಲ್ಪಸುಖ – ಸ್ವಲ್ಪ ಸುಖ
- ಅಲ್ಪಸುಖಾಶಿ – ಸ್ವಲ್ಪ ಸುಖಕ್ಕೆ ಆಸೆ ಪಡುವವನು
- ಅಲ್ಪಾಯು(ಷ) – ಕಡಿಮೆ ಆಯುಸ್ಸುಳ್ಲವನು
- ಅಲ್ಪೋಪಜಲ್ಪ – ಮಿತ ನುಡಿ; ಮಿತಭಾಷಿ
- ಅಲ್ಲ – ಹಸಿ ಶುಂಠಿ
- ಅಲ್ಲಕಲ್ಲೋಲ – ಅಲ್ಲೋಲಕಲ್ಲೋಲ; ಕ್ಷೋಭೆ
- ಅಲ್ಲಣಿಗೆ – ಮೇಳ, ವಿನೋದ
- ಅಲ್ಲಣಿಗೆಗಾಳಗ – ವಿನೋದ ಯುದ್ಧ
- ಅಲ್ಲಣಿಗೆಮುಳಿಸು – ಹುಸಿಮುನಿಸು
- ಅಲ್ಲದ(ವ)ಲ್ಲಣಿಗೆ – ಹಸಿ ಶುಂಠಿಯ ಮಿಶ್ರಣ
- ಅಲ್ಲಳಿ – ಅಲ್ಲಣಿಗೆ
- ಅಲ್ಲಳಿಗಾಳಗ – ಅಲ್ಲಣಿಗೆಗಾಳಗ
- ಅಲ್ಲಾಟ – ಅಲುಗಾಡು; ಚಾಂಚಲ್ಯ
- ಅಲ್ಲಾ(ಳ್ಳಾ)ಡಿಸು – ಅಲುಗಾಡಿಸು; ಹೆದರಿಸು
- ಅಲ್ಲಾ(ಳ್ಳಾ)ಡು – ಅಲುಗಾಡು; ನಡುಗು
- ಅಲ್ಲಿ – ಆ ಸ್ಥಳ, ಆ ಜಾಗ
- ಅಲ್ಲಿಂ – ಅಲ್ಲಿಂದ, ಅದಕ್ಕಿಂತ
- ಅಲ್ಲಿದ – ಅಲ್ಲಿ ಹುಟ್ಟಿದವನು
- ಅಲ್ಲೋಲಕಲ್ಲೋಲ – ಕ್ಷೋಭೆ
- ಅವಕರ್ಣಿಸು – ಕೇಳು; ಕಡೆಗಣಿಸು
- ಅವಕಾಶಂಗುಡು – ಎಡೆಮಾಡಿಕೊಡು
- ಅವಕೀರ್ಣ – ಕೆದರಿದ; ಆವರಿಸಿದ
- ಅವಕುಂಠಿತ – ಮರೆಮಾಚಲ್ಪಟ್ಟ
- ಅವಕುಟ್ಟು – ಕಿರಿಕಿರಿಯಾಗು
- ಅವಕೇಶಿ – ಬಂಜೆ
- ಅವಕ್ಕನೆ – ತಟಕ್ಕನೆ
- ಅವಕ್ರಿಯೆ – ನಿರರ್ಥಕ ಕೆಲಸ
- ಅವಗಂಧ – ಕೆಟ್ಟ ವಾಸನೆ
- ಅವಗಡ – ಸಾಹಸ; ತೊಂದರೆ; ಅಶಕ್ಯವಾದ
- ಅವಗಡಿಸು – ಕಡೆಗಣಿಸು; ಸೋಲಿಸು; ವಿರೋಧಿಸು; ಹರಡಿಕೊ
- ಅವಗತ – ಕಳೆದುಹೋದ
- ಅವಗಮ(ನ) – ಅರಿವು, ತಿಳಿವಳಿಕೆ
- ಅವಗಮ್ಯ – ತಿಳಿಯಬಹುದಾದ
- ಅವಗಯಿಸು – ತಿಳಿದುಕೊ; ತೋರಿಸು; ತಿರಸ್ಕರಿಸು
- ಅವಗಹನ – ಮುಳುಗಿ ಸ್ನಾನಮಡು; (ಜೈನ) ಮುಕ್ತ್ಯಾತ್ಮದ ಎಂಟು ಗುಣಗಳಲ್ಲಿ ಒಂದು; ಮುಕ್ತಜೀವನದಲ್ಲಿ ಅನೇಕ ಸಿದ್ಧಜೀವಿಗಳು ಸೇರುವ ಅವಕಾಶ
- ಅವಗಾಢ – ಮುಳುಗಿದ; ತನ್ಮಯಗೊಂಡ
- ಅವಗಾಹ – ಉದ್ದಳತೆ
- ಅವಗಾಹ(ನ) – ಮುಳುಗುವಿಕೆ; ಸ್ನಾನ; ಧಾರಣಶಕ್ತಿ
- ಅವಗಾಹನಮಿರ್ – ಮುಳುಗಿರು; ಮಗ್ನವಾಗಿರು
- ಅವಗಾಹಪ್ರದ – ಮುಳುಗಿಸತಕ್ಕ
- ಅವಗಾಹಿತ – ಒಳಗೊಂಡ; ಮನನ ಮಾಡಿದ
- ಅವಗಾಹಿಸು – ಮುಳುಗಿ ಸ್ನಾನಮಾಡು
- ಅವಗುಣ – ಕೆಟ್ಟ ಗುಣ
- ಅವಗುಣಿ – ದುರ್ಗುಣಿ
- ಅವಗೂಹನ – ಮರೆಮಾಡುವುದು
- ಅವಗೂಹಿತ – ಮರೆಮಾಚಲ್ಪಟ್ಟ
- ಅವಗೈಸು – ಹೊಂದಿರು
- ಅವಗೃಹ್ಯಮಾಣ – ಹಿಡಿಯಲ್ಪಟ್ಟ
- ಅವಗ್ರಹ – (ಜೈನ) ಅವಗ್ರಹ, ಈಹಾ, ಅವಾಯ
- ಮತ್ತು ಧಾರಣ ಎಂಬ ನಾಲ್ಕು ಪ್ರತ್ಯಕ್ಷ
- ಪ್ರಮಾಣಗಳಲ್ಲಿ ಮೊದಲನೆಯದು
- ಅವಘಾಟಕ – ಮಧ್ಯೆ ಮಧ್ಯೆ ಮುತ್ತುಗಳಿರುವ ಹಾರ
- ಅವಚಂಬಡು – ಅವರ್ಣನೀಯವಾಗು
- ಅವಚವಿಸು – ಕಾಂತಿ ಕಳೆದುಕೊ
- ಅವಚೂಲ – ಬಾವುಟದ ತುದಿಗೆ ಕಟ್ಟಿರುವ ಅಲಂಕಾರದ ಕುಚ್ಚು
- ಅವಚ್ಛನ್ನ – ಮುಚ್ಚಲಾದ
- ಅವಚ್ಛಿನ್ನ – ಕತ್ತರಿಸುವುದು
- ಅವಜ್ಞೆ(ಗೆಯ್) – ಅಲಕ್ಷ್ಯ(ಮಾಡು)
- ಅವಟಯ್ಸು – ಒಪ್ಪಿಸು, ಉಂಟುಮಾಡು; ಒಟ್ಟಾಗು; ಹರಡುವಂತೆ ಮಾಡು; ಯತ್ನಿಸು
- ಅವಡೀನ – ಹಾರುತ್ತ ಕೇಳಗಿಳಿಯುವುದು
- ಅವತಂಸ – ಆಭರಣ; ಅಲಂಕಾರಪ್ರಾಯ
- ಅವತರಣ – ಇಳಿಯುವುದು
- ಅವತರಿಸು – ಇಳಿದು ಬಾ; ಉಂಟಾಗು; ನೆಲೆಗೊಳಿಸು
- ಅವತಾರ – ಇಳಿಸುವಿಕೆ; ದೇವರು ಭೂಮಿಯಲ್ಲಿ ಜನ್ಮ ತಾಳುವುದು; ನಿರೂಪಣೆ; (ಜೈನ) ಎಂಟು ಬಗೆಯ ಗರ್ಭಾನ್ವಿತಕ್ರಿಯೆಗಳಲ್ಲಿ ಒಂದು
- ಅವತಾರಕ್ರಿಯೆ – (ಜೈನ) ತೀರ್ಥಂಕರನಾಗುವವನ ಜೀವ ತಾಯ ಗರ್ಭವನ್ನು ಹೊಗುವುದು
- ಅವತಾರಲೇಖಪತ್ರ – ಜನ್ಮವೃತ್ತಾಂತವಿರುವ ಬರವಣಿಗೆ
- ಅವತಾರಾಕೃತಿ – ದೇವರು ಅವತಾರ ಮಾಡಿದಾಗ ಹೊಂದುವ ಆಕೃತಿ
- ಅವತೀರ್ಣ – ಇಳಿಸಲ್ಪಟ್ಟ; ಇಳಿದ; ದಾಟಿದ; ಬಂದು ಸೇರಿದ
- ಅವತೆ – ಅವಸ್ಥೆ, ಹೀನಸ್ಥಿತಿ
- ಅವದಂಶ – ಚಾಕಣ; ಮದ್ಯದ ಜೊತೆ ನಂಜಿಕೊಳ್ಳುವ ತಿಂಡಿ
- ಅವದಾತ – ಬೆಳ್ಳಗಿರುವ; ಸುಂದರವಾದ
- ಅವದಾತಕೀರ್ತಿ – ಪರಿಶುದ್ಧ ಕೀರ್ತಿವಂತ
- ಅವದಾತಯಶ – ಅವದಾತಕೀರ್ತಿ
- ಅವದ್ಯ – ನಿಕೃಷ್ಟ, ಅಧಮ
- ಅವಧರಿಸು – ಕೇಳು; ಮನಸ್ಸಿಗೆ ತಂದುಕೊ
- ಅವಧಾತೃ – ಏಕಚಿತ್ತತೆಯಿರುವವನು
- ಅವಧಾನ – ಏಕಚಿತ್ತತೆ; ಎಚ್ಚರಿಕೆ
- ಅವಧಾರಣ(ಣೆ) – ಒತ್ತು; ನಿರ್ಣಯ
- ಅವಧಾರಿಸು – ಸೈರಿಸು; ಲಕ್ಷ್ಯದಲ್ಲಿರಿಸಿಕೊ
- ಅವಧಾರು – ಹಿರಿಯರ ಗಮನ ಸೆಳೆಯುವ ಮಾತು
- ಅವಧಿಜ್ಞಾನ – (ಜೈನ) ಎಂಟು ಬಗೆಯ ಜ್ಞಾನಗಳಲ್ಲಿ ಒಂದು; ಇದರಲ್ಲಿ ಮೂರು ಬಗೆ: ದೇಶಾವಧಿ, ಪರಮಾವಧಿ, ಸರ್ವಾವಧಿ
- ಅವಧಿಜ್ಞಾನಾವರಣೀಯ – (ಜೈನ)
- ಅವಧಿಜ್ಞಾನವನ್ನು ಮುಚ್ಚುವ ಕರ್ಮ
- ಅವಧಿಜ್ಞಾನಿ – ಅವಧಿಜ್ಞಾನವಿರುವವನು
- ಅವಧಿದಿವಸ – ಗಡುವಿನ ದಿವಸ
- ಅವಧಿಬೋಧ – ಅವಧಿಜ್ಞಾನ
- ಅವಧಿವಿಬೋಧ – ಅವಧಿಜ್ಞಾನ
- ಅವಧೀರಿತ – ತಿರಸ್ಕøತಗೊಂಡ
- ಅವಧೀರಿಸು – ಕಡೆಗಣಿಸು; ತಿರಸ್ಕರಿಸು
- ಅವಧೂತ – ತಳ್ಳಲ್ಪಟ್ಟ
- ಅವನ – ರಕ್ಷಣೆ
- ಅವನತ – ಬಗ್ಗಿದ, ನಮ್ರವಾದ; ಕೆಳಸ್ಥಿತಿಯಲ್ಲಿರುವ
- ಅವನದ್ಧ – ಕಟ್ಟಲ್ಪಟ್ಟ; ಆವೃತಗೊಂಡ
- ಅವನಿಚಕ್ರ – ಭೂಮಂಡಲ
- ಅವನಿಜ – ಮರಗಿಡ
- ಅವನಿಪ – ಭೂಮಿಯ ರಕ್ಷಕ, ರಾಜ
- ಅವನಿಭೃತ್ – ರಾಜ
- ಅವನಿಸು – ಕಾಪಾಡು
- ಅವನೀಜಾತ – ಮರಗಿಡ
- ಅವನೀತಳಪತಿ – ಅವನಿಪತಿ
- ಅವಬೋಧ – ಜಾಗ್ರತಗೊಳ್ಳುವುದು; ಜ್ಞಾನ
- ಅವಭಾಸ – ಕಾಂತಿ, ಹೊಳಪು
- ಅವಭಾಸಮಾನ – ಕಾಂತಿಯಕ್ತ
- ಅವಭೃತಸವನ – ಯಾಗದಂತಹ ಮಹತ್ಕಾರ್ಯ
- ಮುಗಿದ ಬಳಿಕ ಮಾಡುವ ಮಂಗಳಸ್ನಾನ
- ಅವಭೃತಸ್ನಾನ – ಅವಭೃತಸವನ
- ಅವಮೆ – ಅಮಾವಾಸ್ಯೆ
- ಅವಮೋದರ್ಯ – (ಜೈನ) ಒಂದು ಬಗೆಯ ತಪಸ್ಸು; ಆಹಾರದಲ್ಲಿ ಒಂದೊಂದು ತುತ್ತು ಕಡಿಮೆ ಮಾಡುತ್ತ, ಕೊನೆಗೆ ಒಂದು ತುತ್ತಿಗೆ ಸೀಮಿತಗೊಳಿಸುವ ಕ್ರಮ
- ಅವಯವ – (ದೇಹದ) ಅಂಗ; ಶ್ರಮರಹಿತ, ಸುಲಭ; ಅಲಕ್ಷ್ಯ
- ಅವರಜ – ತಮ್ಮ
- ಅವರಜೆ – ತಂಗಿ
- ಅವರಿ(ರೆ) – ಅಪ್ಸರೆ
- ಅವರುದ್ಧ – ತಡೆಗಟ್ಟಲ್ಪಟ್ಟ
- ಅವರೋಧ – ಪ್ರತಿಬಂಧ; ಅಂತಃಪುರ
- ಅವರೋಧಜನ – ಅಂತಃಪುರಸ್ತ್ರೀಯರಂ
- ಅವಲ್ – ಕುಟ್ಟುವಿಕೆ; ಅವಲಕ್ಕಿ
- ಅವಲಂಬಿ – ಆಶ್ರಯ ಪಡೆದ
- ಅವಲಂಬಿಸು – ಆಶ್ರಯ ಪಡೆ
- ಅವಲಿಪ್ತ – ಲೇಪಿಸಿದ; ಅಹಂಕಾರಿ
- ಅವಲೀಢ – ನೆಕ್ಕಲ್ಪಟ್ಟ; ವ್ಯಾಪಿಸಿದ
- ಅವವಲೇಪ – ಸೊಕ್ಕು, ಮದ
- ಅವಲುಪ್ತ – ಲೋಪಗೊಳಿಸಿದ
- ಅವಲುಪ್ತಫಲ – ಫಲವನ್ನು ಕಳೆದುಕೊಂಡ
- ಅವಲೋ(ಳೋ)ಕಿನಿ(ೀ)ವಿದ್ಯೆ – (ಜೈನ) ದೂರದಲ್ಲಾಗುವುದನ್ನು ತಿಳಿಯಲು ಸಹಾಯಕವಾದ ವಿದ್ಯೆ
- ಅವಲೋ(ಳೋ)ಕಿಸು – ನೋಡಿ
- ಅವಲ್ಮಾಡು – (ಅವಲಕ್ಕಿಯಂತೆ) ಕುಟ್ಟು
- ಅವಶಿಷ್ಟ – ಉಳಿದ
- ಅವಶೀರ್ಣ – ನಾಶವಾದ
- ಅವಶೀರ್ಯಮಾಣ – ಅರಳುತ್ತಿರುವ
- ಅವಶೇಷ – ಉಳಿದ; ಶೇಷ
- ಅವಶ್ಯಾಯ – ಹಿಮ
- ಅವಷ್ಟಂಭ – ಆಶ್ರಯ; ಸ್ಥೈರ್ಯ; ಗರ್ವ
- ಅವಷ್ಟಂಭಿಸು – ಆಸ್ರಯಿಸು; ಹೆಮ್ಮೆಪಡು
- ಅವಸಕ್ತ – ತನ್ಮಯವಾದ
- ಅವಸರ – ಅವಕಾಶ; ಸಂದರ್ಭ
- ಅವಸರಂಗುಡಿಸು – ಅವಕಾಶಕೊಡಿಸು
- ಅವಸರಂಬಡೆ – ಅವಕಾಶ ಪಡೆ
- ಅವಸರಂಬಾರ್ – ಸಮಯ ನಿರೀಕ್ಷಿಸು
- ಅವಸರೋಚಿತ – ಸಮಯೋಚಿತ
- ಅವಸರ್ಪಣ – ಇಳಿಕೆ; (ಜೈನ) ಮನುಷ್ಯರ ಆಯುಸ್ಸು, ಸುಖ ಮುಂತಾದುವು ಕ್ರಮವಾಗಿ ಇಳಿಕೆಗೊಳ್ಳುವ ಕಾಲ
- ಅವಸರ್ಪಿಣಿ – ಅವಸರ್ಪಣ; ಇದರಲ್ಲಿನ ಆರು ಕಾಲಭೇದಗಳು: ಸುಷಮಸುಷಮ, ಸುಷಮ, ಸುಷಮದುಷ್ಷಮ, ದುಷ್ಷಮಸುಷಮ, ದುಷ್ಷಮ, ಅತಿದುಷ್ಷಮ
- ಅವಸಾನ – ಕೊನೆ; ಸಾವು
- ಅವಸಾನಕಾಲ – ಕೊನೆಗಾಲ
- ಅವಸ್ಕಂದ(ನ) – ಮುತ್ತಿಗೆ
- ಅವಸ್ತು – ಕಃಪದಾರ್ಥ
- ಅವಸ್ತುಭೂತ – ನಿಷ್ಪ್ರಯೋಜಕ; ಏನೂ
- ಆಸ್ತಿಯಿಲ್ಲದವನು; ಅಲ್ಪ
- ಅವಸ್ಥಾಂತರ – ಮತ್ತೊಂದು ಅವಸ್ಥೆ; ಕಷ್ಟಕಾಲ
- ಅವಸ್ಥಾನ – ನೆಲೆ; ಸನ್ನಿವೇಶ; ಮಲ್ಲಯುದ್ಧದ ಒಂದು ವರಸೆ
- ಅವಸ್ಪಂದ – ಪ್ರತಿಕ್ರಿಯಾರಹಿತ
- ಅವಹಿತ – ಗಮನವಿತ್ತ
- ಅವಹಿತಧ್ಯಾನ – ಧ್ಯಾನಮಮಗ್ನನಾದ
- ಅವಹಿತಭಾವ – ಭಾವವನ್ನು ಅಡಗಿಸಿಕೊಳ್ಳುವುದು
- ಅವಾಗ್ಗೋಚರ – ವರ್ಣನೆಗೆ ಸಿಕ್ಕದ
- ಅವಾಗ್ವಿಷಯ – ಮಾತಲ್ಲಿ ಹೇಳಲಾಗದ
- ಅವಾಚ್ಯ – ಹೇಳಲಾಗದ
- ಅವಾಪ್ತ – ಪಡೆಯಬಹುದಾದ
- ಅವಾಮ – ಬಲಗಡೆಯ
- ಅವಾಮವೃತ್ತಿವರ್ತನ – ಋಜುಮಾರ್ಗಾನುಸಾರಿ;
- ಎಡದಿಂದ ಬಲಕ್ಕೆ ಸುತ್ತುವ
- ಅವಾರಪಾರ – ಕೊನೆಯಿಲ್ಲದ
- ಅವಾರ್ಯವೀರ್ಯ – ತಡೆಯಲಾದ ಸಾಮಥ್ರ್ಯವಿರುವ
- ಅವಿ – ಅವಿತುಕೊ; ಕುರಿ
- ಅವಿಕಲ(ಳ) – ಕೊರತೆಯಿಲ್ಲದ, ನ್ಯೂನತೆಯಿಲ್ಲದ
- ಅವಿನ್ನಾ(ನಾ)ಣ – (ಅಭಿಜ್ಞಾನ) ಗುರುತು, ಕುರುಹು
- ಅವಿಕಲ್ಪ – ವಿಕಾರವಿಲ್ಲದ
- ಅವಿಕಾರಿ – ವಿಕಾರವಿಲ್ಲದವನು
- ಅವಿಚಲಿ(ಳಿ)ತ – ನಿಶ್ಚಲವಾದ
- ಅವಿಚಾರ – ಯೋಚನೆ ಮಾಡದಿರುವುದು
- ಅವಿಚಾರಿತರಮಣೀಯ – ವಿಚಾರ ಮಾಡದಿದ್ದಾಗ
- ಸುಂದರವಾಗಿ ಕಾಣುವ; ತೋರಿಕೆಯ ಸೌಂದರ್ಯವುಳ್ಳ
- ಅವಿಚ್ಛಿನ್ನ – ನಿರಂತರವಾದ
- ಅವಿಜ್ಞೇಯ – ತಿಳಿಯಲಾಗದ
- ಅವಿತಥ – ಸುಳ್ಳಲ್ಲದ, ನಿಶ್ಚಯ
- ಅವಿದಿಡು – ಮೊರೆಯಿಡು; ಹಬ್ಬು
- ಅವಿದಿತ – ತಿಳಿಯದ
- ಅವಿಧಾ – “ಕಾಪಾಡಿ” ಎಂಬ ಮೊರೆಯ ಕೂಗು
- ಅವಿಧೃತೋದ್ರೇಕ – ಉದ್ವೇಗರಹಿತವಾದ;
- ವೇಗವನ್ನು ಕಳೆದುಕೊಳ್ಳುವ
- ಅವಿಧೋ – ಅವಿಧಾ
- ಅವಿನಯ – ಕೆಟ್ಟ ನಡವಳಿಕೆ
- ಅವಿನಾ(್ನ)ಣ – (ಅಭಿಜ್ಞಾನ) ಗುರುತು
- ಅವಿನಾಭಾವಿ – ಸದಾ ಕೂಡಿರುವ, ಜೊತೆಗಿರುವ
- ಅವಿನಾಭಾವಿ – ಸದಾ ಕೂಡಿರುವ, ಜೊತೆಗಿರುವ
- ಅವಿಪಾಕನಿರ್ಜರೆ – (ಜೈನ) ಕರ್ಮವು ಉದಯವಾಗಿ ಫಲ ಕೊಡುತ್ತಿದ್ದರೂ ರಾಗದ್ವೇಷರಹಿತವಾದ ಆತ್ಮನಿಗೆ ಹೊಸ ಕರ್ಮಗಳ ಬಂಧವಾಗದು ಹಾಗೂ ಹಿಂದಿನ ಕರ್ಮಗಳು ಉದುರಿ ಹೋಗುತ್ತವೆ ಎಂಬ ತತ್ವ
- ಅವಿಭಕ್ತಸ್ನೇಹೆ – ಅಖಂಡಪ್ರೀತಿಯುಳ್ಳವಳು
- ಅವಿಭಾವ್ಯ – ಯೋಚಿಸಿ ತಿಳಿಯಲಾರದ; ಗುರುತು ಹಚ್ಚಲಾಗದ
- ಅವಿಮಧೂತ – (ಜೈನ) ದರ್ಶನ ಮೋಹನೀಯಗಳಲ್ಲಿ ಒಂದು
- ಅವಿರತಂ – ನಿರಂತರವಾಗಿ
- ಅವಿರಲ(ಳ) – ದಟ್ಟವಾದ, ಬಿಡುವಿಲ್ಲದ
- ಅವಿರಳಗೊಳ್ – ಒತ್ತಾಗಿ ಸೇರು
- ಅವಿರಳವಿಸಾರಿ – ನಿರಂತರವಾಗಿ ಹರಡುವ
- ಅವಿಲ(ಳ)ಂಬಂ – ವಿಳಂಬವಿಲ್ಲದೆ
- ಅವಿವೇಕಾತ್ಮತೆ – ವಿವೇಕರಹಿತವಾದ ಮನಸ್ಸುಳ್ಳುದು
- ಅವಿವೇಕಿ – ವಿವೇಕರಹಿತ
- ಅವಿಶಾಲಪರಿಧಿ – ವಿಶಾಲವಲ್ಲದ ಆವರಣ
- ಅವಿಶ್ರಾಂತ – ಸಂತತವಾದ
- ಅವಿಷಯ – ತಿಳಿಯಲು ಸಾಧ್ಯವಿಲ್ಲದ
- ಅವಿಷಾದ – ಸಂತೋಷ
- ಅವಿಸಂವಾದ – ವಿರೋಧವಲ್ಲದ
- ಅವು – ಒನಕೆಯಿಂದ ಕುಟ್ಟು
- ಅವುಂಕು – ಒತ್ತರಿಸು
- ಅವುಂಕಿಸು – ಅಮುಕಿಸು
- ಅವ್ಯಗ್ರ – ಏಕಾಗ್ರ ಮನಸ್ಸಿನ
- ಅವ್ಯಗ್ರತೆ – ಅವ್ಯಗ್ರ ಮನಸ್ಸನ್ನು ಪಡೆದಿರುವುದು
- ಅವ್ಯಗ್ರಮನ – ಏಕಾಗ್ರ ಮನಸ್ಸು(ಳ್ಳವನು)
- ಅವ್ಯತಿರಿಕ್ತೆ – ಬೇರೆಯಲ್ಲದವಳು
- ಅವ್ಯಭಿಚಾರ – ತಪ್ಪು ನಡವಳಿಕೆಯಿರದ; ಪಾತಿವ್ರತ್ಯ
- ಅವ್ಯಭಿಚಾರಿಮಿತ್ರ – ಸ್ಥಿರನಾದ ಗೆಲೆಯ
- ಅವ್ಯಯ – ನಷ್ಟವಿಲ್ಲದ; ಒಂದೆ ಪ್ರಕಾರದ
- ಅವ್ಯವಚ್ಛಿನ್ನ – ಎಡೆಬಿಡದ; ನಿರಂತರವಾದ
- ಅವ್ಯವಧಾನ – ಮಸುಕಿರದ; ಸಂತತವಾದ
- ಅವ್ಯಾಕುಲಂ – ತಡೆಯಿಲ್ಲದೆ
- ಅವ್ಯಾಕುಲಾತ್ಮಕ – ವ್ಯಾಕುಲಗೊಳ್ಳದ ಮನಸ್ಸುಳ್ಳ
- ಅವ್ಯಾಜ – ಸಹಜವಾದ
- ಅವ್ಯಾಹತ – ತಡೆಯಿಲ್ಲದ
- ಅವ್ಯುತ್ಪನ್ನ – ಪಾಂಡಿತ್ಯವಿಲ್ಲದವನು
- ಅವ್ರತಯೋಗ – ವ್ರತಾಚರಣೆಯಿಲ್ಲದ; ಆಮೆಯಂತೆ
- ನೀರಿನಲ್ಲಿ ವಾಸಮಾಡುವ
- ಅವ್ವಳಿಸು – ವ್ಯಾಪಿಸು; ಮೇಲೆ ಬೀಳು
- ಅಶಂಕಿತ – ಶಂಕೆಯಿರದ; ಹೆದರದ
- ಅಶನ – ಆಹಾರ; ತಿನ್ನುವುದು
- ಅಶನಿ – ಸಿಡಿಲು; ವಜ್ರಾಯುಧ
- ಅಶರೀರಧ್ವನಿ – ಶರೀರ ಕಾಣಿಸದೆ ಕೇಳುವ ಧ್ವನಿ
- ಅಶರೀರವಾಕ್ಯ – ಅಶರೀರಧ್ವನಿ
- ಅಶಲ್ಯ – ಆಯುಧವಿಲ್ಲದ; ನಿರಾಯುಧ
- ಅಶಲ್ಯಭಾವೆ – (ಜೈನ) ರಾಗದ್ವೇಷರಹಿತಳಾದವಳು
- ಅಶಾಂತಮತಿ – ಕದಡಿದ ಮನಸ್ಸಿನವಳು
- ಅಶಿವ – ಅಮಂಗಳ
- ಅಶಿಶಿರಕರ – ಸೂರ್ಯ
- ಅಶಿಷ್ಟ – ಒರಟಾದ
- ಅಶೀತಿಯೋಜನ – ಎಂಬತ್ತು ಯೋಜನ
- ಅಶೇಷಭರಣಕರ – ಎಲ್ಲರನ್ನೂ ಪೋಷಿಸುವ; ಶೇಷನೆಂಬ ಸರ್ಪರಾಜನೆಂಬ ಕೈಗೆ ಭೂಷಣವಾಗಿ ಹೊಂದದ
- ಅಶೋಕ – ಶೋಕರಹಿತ; ದೇವತೆ; ಒಂದು ಮರ
- ಅಶೋಕಪಾದಪ – ಅಶೋಕವೃಕ್ಷ
- ಅಶೋಕಲತಿಕೆ – ಅಶೋಕದ ಬಳ್ಳಿ
- ಅಶೋಕವಲ್ಲರಿ – ಅಶೋಕಲತಿಕೆ
- ಅಶೋಕವೃತ್ತ – ಶೋಕ್ಕೆ ಒಳಗಾಗದ ನಡತೆಯವನು
- ಅಶೋಕಸಂಗತ – ಅಶೋಕವೃಕ್ಷದಿಂದ ಕೂಡಿದ;
- ಶೋಕದ ಸೋಕಿಲ್ಲದ
- ಅಶೋಕೆ – ಅಶೋಕಲತಿಕೆ
- ಅಶ್ಮ – ಕಲ್ಲು
- ಅಶ್ಮಕಾರ – ಕಲ್ಲುಕುಟಿಗ
- ಅಶ್ಮಸಾರ – ಕಬ್ಬಿಣ
- ಆಶ್ರಮ – ಆಯಾಸವಿಲ್ಲದ; ನಿರಾಯಾಸ
- ಅಶ್ರಾಂತ – ಶ್ರಮರಹಿತವಾದ
- ಅಶ್ರಾಂತಂ – ದಣಿವಿಲ್ಲದೆ
- ಅಶ್ರೀಕ – ಸಂಪತ್ತು ಸೌಭಾಗ್ಯಗಳಿಲ್ಲದ
- ಅಶ್ರು – ಕಂಬನಿ
- ಅಶ್ರುಕಣ – ಕಣ್ಣೀರ ಹನಿ
- ಅಶ್ರುತ – ಕೇಳಿಸದ; ವೇದವಿರುದ್ಧವಾದ
- ಅಶ್ರುತಪೂರ್ವ – ಹಿಂದೆಂದೂ ಕೇಳದ
- ಅಶ್ರುತಪ್ರಕೃತಿಜನ – ಶಾಸ್ತ್ರಜ್ಞಾನವಿಲ್ಲದ ಸಾಮಾನ್ಯರು
- ಅಶ್ರುವಾರಿ – ಕಣ್ಣೀರು
- ಅಶ್ರುಸ್ನಾತ – ಕಣ್ಣೀರಿನಿಂದ ತೋಯಲ್ಪಟ್ಟ
- ಅಶ್ರುಸ್ನವೆ – ಕಣ್ಣೀರು ಸುರಿಸುವವಳು
- ಅಶ್ಲಕ್ಷ್ಣ – ಮೃದುವಲ್ಲದ
- ಅಶ್ಲೌಘ – ತೆಗಳಿಕೆ
- ಅಶ್ಲೌಘ್ಯ – ಪ್ರಶಂಸಾಯೋಗ್ಯವಲ್ಲದ
- ಅಶ್ಲಿಷ್ಟ – ಜೊತೆಗೂಡದ
- ಅಶ್ವಗ್ರೀವ – ಕುದುರೆಯ ಕೊರಳು; ವಿಷ್ಣವಿನ
- ಹಯಗ್ರೀವರೂಪ; ಒಬ್ಬ ರಾಕ್ಷಸ; (ಜೈನ) ಒಬ್ಬ ವಿದ್ಯಾಧರ
- ಅಶ್ವತ್ಥಾಮ – ಕುದುರೆಯ ಶಕ್ತಿ, ವೇಗ; ದ್ರೋಣನ ಮಗ; ಮಹಾಭಾರತದಲ್ಲಿನ ಒಂದು ಆನೆಯ ಹೆಸರು
- ಅಶ್ವಮಹಿಷನ್ಯಾಯ – ಕುದುರೆ-ಕೋಣಗಳ ನಡುವೆಯಿರುವಂತಹ ಸಹಜವೈರಅಶ್ವೀಯ – ಕುದುರೆಗಳ ಸಮೂಹ
- ಅಷಾಢ – ಆಷಾಢಮಾಸ; ಬ್ರಹ್ಮಚಾರಿ ಅಥವಾ ಯತಿ ಕೈಯಲ್ಲಿ ಹಿಡಿಯುವ ಮುತ್ತುಗದ ದಂಡ; ಮಲಯಪರ್ವತ
- ಅಷ್ಟಋದ್ಧಿ – ಬುದ್ಧಿ, ಕ್ರಿಯಾ, ವಿಕ್ರಿಯಾ, ತಪ, ಬಲ, ಔಷಧ, ರಸ, ಅಕ್ಷೀಣ ಎಂಬ ಎಂಟು ಬಗೆಯ ಋದ್ಧಿಗಳು
- ಅಷ್ಟಕರ್ಮ – (ಜೈನ) ಜ್ಞಾನಾವರಣೀಯ, ದರ್ಶನಾವರಣೀಯ, ಅಂತರಾಯ, ಮೋಹನೀಯ, ಆಯುಃ, ನಾಮ, ಗೋತ್ರ, ವೇದನೀಯ ಎಂಬ ಎಂಟು ಕರ್ಮಗಳು
- ಅಷ್ಟಗುಣ – ಎಂಟರಷ್ಟು ಹೆಚ್ಚು; ಅಷ್ಟಸಿದ್ಧಿ; (ಜೈನ) ಸಮ್ಯಕ್ತ್ವ, ಜ್ಞಾನ, ದರ್ಶನ, ವೀರ್ಯ, ಸೂಕ್ಷ್ಮ, ಅವಗಾಹನ, ಅಗುರುಲಘು, ಅವ್ಯಾಬಾಧ ಎಂಬ ಮುಕ್ತಿ ಪಡೆದ ಜೀವನ ಎಂಟು ಗುಣಗಳು
- ಅಷ್ಟಚಾಪೋತ್ಸೇಧ – ಎಂಟು ಬಿಲ್ಲಗಳಷ್ಟು ಎತ್ತರವಾದ
- ಅಷ್ಟತೂರ್ಯರವ – ಭೇರಿ, ಮದ್ದಳೆ, ಝಲ್ಲರಿ, ಕಹಳೆ, ಶಂಖ, ಕೊಳಲು, ವೀಣೆ, ತುಣವ ಎಂಬ ಎಂಟು ವಾದ್ಯಗಳ ಧ್ವನಿ
- ಅಷ್ಟದಿಕ್ಪಾಲ(ಳ) – ಇಂದ್ರ, ಯಮ, ಅಗ್ನಿ, ವಾಯು, ನಿರುತಿ, ವರುಣ, ಕುಬೇರ,
- ಅಷ್ಟದಿಗ್ಜಯ – ಎಂಟು ದಿಕ್ಕುಗಳನ್ನು ಗೆಲ್ಲುವುದು
- ಅಷ್ಟದ್ವೀಪ – (ಜೈನ) ಮುಖ್ಯವಾದ ಎಂಟು ದ್ವೀಪಗಳು: ಜಂಬೂ, ಧಾತಕೀ, ಪುಷ್ಕರ, ವಾರುಣೀವರ, ಕ್ಷೀರವರ, ಘೃತವರ, ಇಕ್ಷುವರ, ನಂದೀಶ್ವರ
- ಅಷ್ಟಪ್ರಕಾರಾರ್ಚನೆ – ನೀರು, ಗಂಧ, ಸದಕ, ಪುಷ್ಪ, ಅನ್ನ, ದೀಪ, ಧೂಪ, ಫಲ ಎಂಬ ಎಂಟರಿಂದ ಮಾಡುವ ಪೂಜೆ
- ಅಷ್ಟಮಚಂದ್ರ – ಜನ್ಮಲಗ್ನದಿಂದ ಚಂದ್ರನು ಅಷ್ಟಮಸ್ಥಾನದಲ್ಲಿರುವುದು
- ಅಷ್ಟಮತೀರ್ಥನಾಥ – ಎಂಟನೆಯ ತೀರ್ಥಂಕರ, ಚಂದ್ರಪ್ರಭ
- ಅಷ್ಟಮಭೂಮಿ – (ಜೈನ) ಸಿದ್ದರು ವಾಸಮಾಡುವ ಲೋಕಭಾಗ
- ಅಷ್ಟಮಲ – ಶಂಕೆ, ಘೃಣಿ, ಭಯ, ಲಜ್ಜೆ, ಜುಗುಪ್ಸೆ, ಕುಲ, ಶೀಲ, ಜಾತಿ ಇವುಗಳ ಭಾವನೆಯಿಂದ ಬರುವ ದೋಷಗಳು
- ಅಷ್ಟಮಹಾಪ್ರಾತಿಹಾರ್ಯ – (ಜೈನ) ಜಿನನ ಎಂಟು ಮಂಗಳ ಲಾಂಛನಗಳು: ಅಶೋಕವೃಕ್ಷ, ಸುರಪುಷ್ಪವೃಷ್ಟಿ, ದಿವ್ಯಧ್ವನಿ, ಚತುಷ್ಷಷ್ಟಿಚಾಮರ, ರತ್ನಖಚಿತ ಸುವರ್ಣ ಸಿಂಹಾಸನ, ಪ್ರಭಾವಲಯ, ದೇವದುಂದುಭಿ, ಛತ್ರತ್ರಯ
- ಅಷ್ಟಮೀಂದು – ಅಷ್ಟಮಿಯ ಚಂದ್ರ
- ಅಷ್ಟಲೋಕಪಾಲ – ಎಂಟು ಲೋಕಗಳ ಒಡೆಯರು
- ಅಷ್ಟವರ್ಗಿ – ಎಂಟು ವರ್ಗಗಳಿಗೆ ಸೇರಿದವರು
- ಅಷ್ಟವಿಂಶತಿ – ಇಪ್ಪತ್ತೆಂಟು
- ಅಷ್ಟವಿಧರ್ಧಿ – ಅಷ್ಟಋದ್ಧಿ
- ಅಷ್ಟವಿಧಶುದ್ಧಿ – (ಜೈನ) ಕಾರ್ಯ, ಭಾವ. ಈರ್ಯಾಪಥ, ಭಿಕ್ಷಾ, ಪ್ರತಿಷ್ಠಾಪನಾ, ಶಯನ, ಆಸನ, ವಾಕ್ಯ – ಇವುಗಳಿಗೆ
- ಸಂಬಂಧಿಸಿದ ಶುದ್ಧಿಅಷ್ಟವಿಧಾರ್ಚನೆ – ಅಷ್ಟಪ್ರಕಾರಾರ್ಚನೆ
- ಅಷ್ಟವೆ – ಅಷ್ಟಮೀ ತಿಥಿ
- ಅಷ್ಟಶೋಭೆ – ಕಳಶ, ಕನ್ನಡಿ, ಬಾವುಟ, ತೋರಣ, ಧೂಪ, ದೀಪ, ಭೇರಿ, ಬೀಸಣಿಗೆ ಎಂಬ ಎಂಟು ಬಗೆಯ ಅಲಂಕಾರಗಳು
- ಅಷ್ಟಸಿದ್ಧಿ – ಯೋಗದಿಂದ ದೊರಕುವ ಅಣಿಮಾ, ಮಹಿಮಾ, ಲಘಿಮಾ, ಗರಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ
- ಅಷ್ಟಾದಶತೀರ್ಥ – ರಾಜನಿಗೆ ಸಕಾಯಕವಾದ ಹದಿನೆಂಟು ಅಧಿಕಾರಿಗಳು: ಮಂತ್ರಿ,
- ಅಷ್ಟಾದಶದೋಷ – (ಜೈನ) ಜೀವಿಗೆ ಅಂಟುವ ಹದಿನೆಂಟು ದೋಷಗಳು:
- ಅಷ್ಟಾಪದ – ಎಂಟು ಕಾಲುಗಳುಳ್ಳ ಪ್ರಾಣಿ; ಗಂಡಭೇರುಂಡ ಜೇಡರಹುಳು; ಚಿನ್ನ
- ಅಷ್ಟಾಪದರಿಪುಪೀಠ – ಸಿಂಹಾಸನ; ಅದರ ಮೇಲೆ ಕುಳಿತವನು
- ಅಷ್ಟಾಪದವಿಷ್ಟರ – ಸುವರ್ಣಪೀಠ
- ಅಷ್ಟಾಘ್ರ್ಯ – (ಜೈನ) ಜಲ, ಅಕ್ಷತೆ, ಗಂಧ, ಪುಷ್ಪ, ಧೂಪ, ಧೂಪ, ಚರು, ಫಲ ಇವುಗಳ ಅರ್ಪಣೆ
- ಅಷ್ಟಾವಂಕ- ಅಷ್ಟಾವಕ್ರ; ಮಹಾ ಕುರೂಪಿ
- ಅಷ್ಟಾಹ್ನಿಕ(ಪೂಜೆ) – (ಜೈನ) ಶ್ರಾವಕರು ಎಂಟು ದಿನಗಳು ಆಚರಿಸುವ ಜಿನಪೂಜೆ
- ಅಷ್ಟೋತ್ತರಶತಕ – ನೂರೆಂಟು
- ಅಷ್ಟೋತ್ತರಸಹಸ್ರ – ಸಾವಿರದೆಂಟು
- ಅಸಂಖ್ಯಾತ – ಲೆಕ್ಕವಿಲ್ಲದ
- ಅಸಂಖ್ಯೇಯ – ಎಣಿಸಲಾಗದ
- ಅಸಂಚಿತ – ಕೂಡಿಡದ
- ಅಸಂಜ್ಞಿ – (ಜೈನ) ಆಹಾರ, ಮೈಥುನ, ಭಯ, ಪರಿಗ್ರಹ ಎಂಬ ನಾಲ್ಕು ಸಂಜ್ಞೆಗಳಿಲ್ಲದ ಜೀವಿ
- ಅಸಂತುಷ್ಟಚಿತ್ತ – ತೃಪ್ತಿ ಹೊಂದದ ಮನಸ್ಸಿನವನು
- ಅಸಂದಿಗ್ಧ – ಸಂದೇಹವಿಲ್ಲದ
- ಅಸಂಧೇಯ – ಸಂಧಾನ ಮಾಡಲು ಸಾಧ್ಯವಿಲ್ಲದ
- ಅಸಂಭವ – ಸಂಭವಿಸಲಾಗದ
- ಅಸಂಭಾವಿತ – ಯೋಚಿಸಲು ಸಾಧ್ಯವಿಲ್ಲದ
- ಅಸಂಯತ – (ಜೈನ) ಸಂಯಮರಹಿತ
- ಅಸಕೃತ್ – ಅನೇಕ ಬಾರಿ
- ಅಸಗ – ಅಗಸ
- ಅಸಗವೊಯ್ಲು – ಅಗಸನ ಒಗೆತ
- ಅಸಗವೊಯಲ್ವೊಯ್ – ಅಗಸನ ಹೊಡೆತ ಹೊಡೆ
- ಅಸತಿ – ಜಾರೆ
- ಅಸತೀಕೇಳಿ – ಜಾರೆಯರೊಡನೆ ಸೇರುವುದು
- ಅಸತ್ಕರ್ಮ – ಕೆಟ್ಟ ಕೆಲಸ
- ಅಸತ್ಕಾರ – ಸತ್ಕರಿಸದಿರುವುದು
- ಅಸದನುಶಾಸನ – ಸರಿಯಲ್ಲದ ವಿವರಣೆ; ಅನ್ಯಾಯದ ಸಂಪಾದನೆ
- ಅಸದಳ – ಅಸಾಧ್ಯ
- ಅಸದಳಂ – ಅತಿಶಯವಾಗಿ
- ಅಸದಾಗ್ರಹ – ಸಲ್ಲದ ಹಟ; ಕೆಟ್ಟುದರಲ್ಲಿ ಆಸಕ್ತಿ
- ಅಸದ್ವ್ಯಯ – ದುಂದು ವೆಚ್ಚ
- ಅಸದ್ವಿಷಯ – ಅಯೋಗ್ಯ ವಿಷಯ
- ಅಸನಿ – (ಅಶನಿ) ಸಿಡಿಲು, ವಜ್ರಾಯುಧ
- ಅಸಮಬಲ – ಬೇರಾರೂ ಸಮಕ್ಕೆ ಬಾರದ ಶಕ್ತಿಯುಳ್ಳವನು
- ಅಸಮಯಕೃತ – ಸರಿಯಲ್ಲದ ಸಮಯದಲ್ಲಿ ಮಾಡಿದ
- ಅಸಮವಿಭೂತಿ – ಅಸಮವಾದ ಸಿರಿ
- ಅಸಮಶರ – ಬೆಸಸಂಖ್ಯೆಯ ಬಾಣಗಳುಳ್ಳವನು, ಮನ್ಮಥ
- ಅಸಮಾಯುಧ – ಅಸಮಶರ
- ಅಸಮಾಸ್ತ್ರ – ಅಸಮಶರ
- ಅಸಮಾಸ್ತ್ರತೆ – ಬೆಸ ಸಂಖ್ಯೆಯ ಬಾಣಗಳಿರುವುದು
- ಅಸರಪಸರ – ಸಲಿಗೆ, ಸದರ
- ಅಸವಸ – ಆತುರ; ಸಂಭ್ರಮ; ದುಡುಕು
- ಅಸಹ್ಯ – ಸಹಿಸಲಸಾಧ್ಯವಾದ
- ಅಸಹ್ಯಮಾನ – ಅಸಹ್ಯ
- ಅಸಹ್ಯವೃತ್ತಿ – ಸಹಿಸಲಾಗದ ನಡತೆ
- ಅಸಹ್ಯೋಕ್ತಿ – ಜುಗುಪ್ಸೆ ತರುವ ಮಾತು
- ಅಸಾಧಾರಣ – ಸಾಮಾನ್ಯವಲ್ಲದ
- ಅಸಾಧುಜನ – ಕೆಟ್ಟ ಜನ
- ಅಸಾರಚೇತನ – ಸತ್ವಹೀನ ಮನಸ್ಸಿನವನು
- ಅಸಾರತಿಕೆ – ನಿಸ್ಸಾರತೆ
- ಅಸಾದ್ರ್ರತೆ – ಒಣಗಿದ, ನೀರಸ
- ಅಸಿ – ಚೆಲ್ಲು, ಈಡಾಡು; ನವಿರಾದ; ಸಣ್ಣಗಾಗು; ಕತ್ತಿ; ಸ್ತ್ರೀ
- ಅಸಿತ – ಕಪ್ಪು
- ಅಸಿತಪದ – ಅಗ್ನಿ
- ಅಸಿತಮಣಿ – ಇಂದ್ರನೀಲರತ್ನ
- ಅಸಿಕ – ಸಣ್ಣ ಕತ್ತಿ, ಕಠಾರಿ; ತೆಳ್ಳಗಿರುವವನು
- ಅಸಿಖೇಟಕಹಸ್ತೆ – ಕತ್ತಿಗುರಾಣಿಗಳನ್ನು ಹಿಡಿದವಳು
- ಅಸಿತ – ಕಪ್ಪಾದ; ಆಹಾರ
- ಅಸಿತಪಯೋಜ – ಕನ್ನೈದಿಲೆ
- ಅಸಿತಾಹಿ – ಕಾಳಸರ್ಪ
- ಅಸಿತಾಹಿದಂಶ – ಕಾಳನಾಗರದ ಕಡಿತ
- ಅಸಿತೇಂದೀವರ – ಕನ್ನೈದಿಲೆ
- ಅಸಿತೋತ್ಪಲಿನಿ – ಕನ್ನೈದಿಲೆಗಳ ಗುಂಪು
- ಅಸಿತೋರಗ – ಅಸಿತಾಹಿ
- ಅಸಿದು – ಕೃಶವಾದ; ಸೂಕ್ಷ್ಮವಾದ
- ಅಸಿದುಗೊಳ್ – ಸಣ್ಣಗಾಗು
- ಅಸಿಧಾರಾವ್ರತ – ಕತ್ತಿಯ ಅಲಗಿನ ಮೇಲೆ
- ನಡೆಯುವಂತಹ ಕಷ್ಟಕರ ವ್ರತ
- ಅಸಿಧೇನು(ಕೆ) – ಸಣ್ಣ ಕತ್ತಿ
- ಅಸಿಪತ್ರ – ಕತ್ತಿಯ ಅಲಗು; ಕತ್ತಿಯ ಒರೆ
- ಅಸಿಪತ್ರನಂದನ – ಚೂಪಾದ ಎಲೆಗಳ ಮರಗಳುಳ್ಳ ತೋಟ
- ಅಸಿಪತ್ರವನ – ಅಸಿಪತ್ರನಂದನ
- ಅಸಿಯ ಬಾಸೆ – ಸೂಕ್ಷ್ಮ ರೋಮರಾಜಿ
- ಅಸಿಯನ್(ಳ್) – ಕೃಶವಾದವನು(ಳು)
- ಅಸಿಯರ್ – ಕೃಶರು
- ಅಸಿಯುಗುರ್ – ಹರಿತವಾದ ಉಗುರು
- ಅಸಿಯೇ¾ು – ಕತ್ತಿಯ ಗಾಯ
- ಅಸಿರತ್ನ – ಶ್ರೇಷ್ಠವಾದ ಖಡ್ಗ
- ಅಸಿಲತಾಧಾರೆ – ಬಳ್ಳಿಯಂತೆ ಬಳುಕುವ ಕತ್ತಿಯ ಅಲಗು
- ಅಸು – ಆಕ್ರಮಿಸಿಕೊಂಡದ್ದು; ಬೇಗ; ಪ್ರಾಣ
- ಅಸುಂಗೊಳ್ – ಕೊಲ್ಲು; ಹೆದರು; ಬೆರಗಾಗು
- ಅಸುಂಗೊಳಿಸು – ಕೊಲ್ಲಿಸು; ನಡುಗಿಸು; ಅಚ್ಚರಿಪಡಿಸು
- ಅಸುಂಬು – ಅಲ್ಲಾಡಿಸು
- ಅಸುಗೆ – ಅಶೋಕೆ
- ಅಸುಗೆದಳಿರ್ – ಅಶೋಕದ ಚಿಗುರು
- ಅಸುನೆ¾ – ಕೋಮಲ
- ಅಸುಮೋಕ್ಷ – ಅಸು+ಮೋಕ್ಷ, ಪ್ರಾಣವಿಯೋಗ;
- ಅಸುಭೃತ್ – ಜೀವಿ
- ಅಸುರ್ – ಅಸಹ್ಯಪಡು
- ಅಸುರ – ರಾಕ್ಷಸ
- ಅಸುರವಿಜಯಿ – ವಿಷ್ಣು; (ಜೈನ) ಮೂರು ಬಗೆಯ ರಾಜರಲ್ಲಿ ಒಬ್ಬ, ನೀಚ
- ಅಸುರವೈರಿ – ಅಸುರರಿಪು, ವಿಷ್ಣು
- ಅಸುರೇಂದ್ರ – ರಾಕ್ಷಸರಾಜ
- ಅಸುವೊಸರ್ – ಜೀವಹೋಗು
- ಅಸುಹೃತ್ – ಶತ್ರು
- ಅಸುಹೃತ್ಸೇನೆ – ಶತ್ರುಸೈನ್ಯ
- ಅಸುಹೃದ್ದಮ – ಅರಿಂದಮ, ಶತ್ರುಗಳನ್ನು ಗೆಲ್ಲುವವನು
- ಅಸುಹೃದ್ಧ್ವಜಿನಿ – ಶತ್ರುಸೇನೆ
- ಅಸೃಕ್ – ರಕ್ತ
- ಅಸೃಕ್ಕಣ – ರಕ್ತದ ತೊಟ್ಟು
- ಅಸೃಙ್ನದಿ -ರಕ್ತದ ನದಿ
- ಅಸೃಕ್ತೋಯಧಿ – ರಕ್ತಸಮುದ್ರ
- ಅಸೃಕ್ಪಂಕ – ರಕ್ತದ ಕೆಸರು
- ಅಸೃಗ್ಜಲ(ಳ) – ರಕ್ತದ ನೀರು; ರಕ್ತ
- ಅಸೆಯಿ¾Â – ಮುಖವನ್ನು ಚುಚ್ಚು
- ಅಸೆವಿರಿ – ಮುಖ ಬಿರಿ
- ಅಸೇವ್ಯ – ಸೇವಿಸಬಾರದ
- ಅಸೇವ್ಯವರ್ಣನ – ಸಹಿಸಲಸಾಧ್ಯ ವರ್ಣನೆ
- ಅಸೌಮ್ಯ – ಭಯಂಕರವಾದ
- ಅಸ್ಖಲಿ(ಳಿ)ತಂ – ತಪ್ಪದಂತೆ
- ಅಸ್ಖಲಿತಗತಿ – ದೃಢವಾದ, ತಡೆಯಿಲ್ಲದ ನಡಿಗೆ
- ಅಸ್ತಂಗತ – ಮುಳುಗಿದವನು
- ಅಸ್ತಗತಿ – ಮುಳುಗುವ ಪರಿಸ್ಥಿತಿ
- ಅಸ್ತದವ – ನಂದಿಹೋದ ಕಾಡುಗಿಚ್ಚು
- ಅಸ್ತಪ್ರಾಪ್ತಿ – ಮುಳುಗುವುದು
- ಅಸ್ತಮಿತ – ಮುಳುಗಿದ
- ಅಸ್ತಮಿಸು – ಮುಳುಗು, ಮರೆಯಾಗು
- ಅಸ್ತವಿಳಾಸ – ಸಂತೋಷ ಮರೆಯಾದವನು
- ಅಸ್ತವ್ಯಸ್ತ – ಕ್ರಮವಾಗಿಲ್ಲದಿರುವುದು
- ಅಸ್ತಶೈಲ – ಪಶ್ಚಿಮ
- ಅಸ್ತಸಮಯ – ಮುಳುಗುವ ಹೊತ್ತು
- ಅಸ್ತಾದ್ರಿ – ಸೂರ್ಯ ಮುಳುಗುವ ಬೆಟ್ಟ
- ಅಸ್ತಾಬ್ಧಿ – ಸೂರ್ಯ ಮುಳುಗುವ ಸಮುದ್ರ
- ಅಸ್ತಿಕಾಯ – (ಜೈನ) ಜೀವ, ಪುದ್ಗಲ, ಧರ್ಮ,
- ಅಧರ್ಮ, ಆಕಾಶಗಳೆಂಬ ಐದು ಬಗೆ
- ಅಸ್ತೇಯ – ಕದಿಯದಿರುವುದು; (ಜೈನ) ಪಂಚಾಣುವ್ರತಗಳಲ್ಲಿ ಒಂದು
- ಅಸ್ತ್ರ – ಆಯುಧ; ಬಾಣ
- ಅಸ್ತ್ರಕದಂಬಕ – ಆಯುಧಸಮೂಹ
- ಅಸ್ತ್ರಜಾಳ – ಅಸ್ತ್ರಕದಂಬಕ
- ಅಸ್ತ್ರತತಿ – ಅಸ್ತ್ರಕದಂಬಕ
- ಅಸ್ತ್ರರುಚಿ – ಆಯುಧದ ಕಾಂತಿ
- ಅಸ್ತ್ರಶಾಲೆ – ಆಯುಧಾಗಾರ
- ಅಸ್ತ್ರಾಲಿ – ಬಾಣಸಮೂಹ
- ಅಸ್ತ್ರಿ – ಅಸ್ತ್ರಧಾರಿ
- ಅಸ್ಥಾನ – ಸ್ಥಾನವಲ್ಲದ್ದು; ಸೂಕ್ತವಲ್ಲದ ಸ್ಥಾನ
- ಅಸ್ಪಂದತೆ – ಅಲುಗದಿರುವಿಕೆ
- ಅಸ್ಪøಷ್ಟಪಾಂಶು – ಧೂಳು ಸೋಕದವನು
- ಅಸ್ಫುಟವಚನ – ಅಸ್ಪಷ್ಟವಾಗಿ ಮತಾಡುವವನು
- ಅಸ್ಫುರಿತ – ಹೊಳೆಯದಿರುವ
- ಅಸ್ಮತ್ಪಿತೃ – (ನನ್ನ) ನಮ್ಮ ತಂದೆ
- ಅಸ್ಮತ್ಪುತ್ರ – (ನನ್ನ) ನಮ್ಮ ಮಗ
- ಅಸ್ಮತ್ಪ್ರಭು – (ನನ್ನ) ನಮ್ಮ ಒಡೆಯ
- ಅಸ್ಮತ್ಪ್ರಿಯೆ – (ನನ್ನ) ನಮ್ಮ ಪ್ರಿಯೆ
- ಅಸ್ಮದರಾಧನ – (ನನ್ನ) ನಮ್ಮ ಪೂಜೆ
- ಅಸ್ಮದೀಯ – (ನನಗೆ) ನಮಗೆ ಸೇರಿದ
- ಅಸ್ಮದ್ಗುಣ – (ನನ್ನ) ನಮ್ಮ ಗುಣ
- ಅಸ್ಮದ್ಗುರು – (ನನ್ನ) ನಮ್ಮ ಗುರು
- ಅಸ್ಮದ್ಧರಣೀಶ – (ನನ್ನ) ನಮ್ಮ ರಾಜ
- ಅಸ್ಮರಣ – ನೆನೆಪಿಲ್ಲದಿರುವುದು
- ಅಸ್ಮೇರ – ಮುಗುಳುನಗೆಯಿಲ್ಲದ
- ಅಸ್ರ(ವಾರಿ) – ರಕ್ತ; ಕಣ್ಣೀರು
- ಅಸ್ವಪ್ನ – ನಿದ್ದೆಯಿಲ್ಲದ; ದೇವತೆ
- ಅಸ್ವಪ್ನಾನಕ – ದೇವದುಂದುಭಿ
- ಅಸ್ವಸ್ಥೆ- ಆರೋಗ್ಯವಿಲ್ಲದವಳು
- ಅಹ – ದಿನ
- ಅಹಂ – ನಾನು ಎಂಬ ಭಾವ
- ಅಹಂಕಾರಭಾವ – ಹೆಮ್ಮೆಯಿಂದ ಕೂಡಿರುವುದು
- ಅಹಃಪತಿ – ಹಗಲಿನ ಒಡೆಯ, ಸೂರ್ಯ
- ಅಹಃಪತಿಸುತ – ಸೂರ್ಯನ ಮಗ; ಶನಿ, ಯಮ, ಯಮ, ಸುಗ್ರೀವ, ಕರ್ಣ
- ಅಹಮಹಮಿಕೆ – ಅಹಂಭಾವ
- ಅಹಮಿಂದ್ರ – (ಜೈನ) ಹದಿನಾರು ಸ್ವರ್ಗಗಳೂ ಅಣೂತ್ತರಗಳೂ ಆದ ಮೇಲೆ ಬರುವ ಗ್ರೈವೇಯಕದಲ್ಲಿ ಹುಟ್ಟಿದ ಜೀವ
- ಅಹಮಿಂದ್ರತ್ವ – ಅಹಮಿಂದ್ರತನ
- ಅಹಮಿಕೆ – ತಾನು ಮುಂದು ಎಂದು ಎಲ್ಲದಕ್ಕೂ ಮುನ್ನುಗ್ಗುವುದು
- ಅಹರಹ – ಅನುದಿನ
- ಅಹರ್ನಿಶ(ಂ) – ಹಗಲೂ ರಾತ್ರಿ
- ಅಹರ್ಪತಿ – ಸೂರ್ಯ
- ಅಹರ್ಮುಖ – ಬೆಳಗಿನ ಜಾವ
- ಅಹಸ್ಸು – ಹಗಲು
- ಅಹಹ – ಒಂದು ಭಾವಸೂಚಕಾವ್ಯಯ
- ಅಹಿ – ಹಾವು
- ಅಹಿಂಸಾವ್ರತ – (ಜೈನ) ಶ್ರೋತೃವಿನಲ್ಲಿರಬೇಕಾದ ಎಂಟು ಗುಣಗಳಲ್ಲಿ ಒಂದು
- ಅಹಿಂಸಾಶುದ್ಧಿ – (ಜೈನ) ದೀಕ್ಷಾನ್ವಯಕ್ರಿಯೆಗಳಲ್ಲಿ ಹತ್ತನೆಯದು
- ಅಹಿಕಟಕ – ಸರ್ಪವನ್ನೇ
- ಬಳೆ(ಕಟಕ)ಯಾಗುಳ್ಳವನು (ಶಿವ)
- ಅಹಿಕೇತನ – ಸರ್ಪಧ್ವಜ; ದುರ್ಯೋಧನ
- ಅಹಿಗರಳಹರ – ಹಾವಿನ ವಿಷವನ್ನು ಹೋಗಲಾಡಿಸುವವನು, ಗರುಡ
- ಅಹಿಗೃಹ – ಹುತ್ತ
- ಅಹಿತನಿಷೂದನ – ಶತ್ರುಗಳನ್ನು ನಾಶಮಾಡುವವನು
- ಅಹಿತಶಕ್ತಿ – ಹಗೆಯ ಬಲ
- ಅಹಿಧ್ವಜ – ದುರ್ಯೋಧನ
- ಅಹಿನಾಯಕ – ಆದಿಶೇಷ
- ಅಹಿಪತಲ್ಪ – ಹಾವಿನ ಹಾಸಿಗೆಯವನು, ವಿಷ್ಣು
- ಅಹಿಪತಿ – ಆದಿಶೇಷ
- ಅಹಿಮಕಿರಣ – ಶೀತಲವಲ್ಲದ ಕಿರಣದವನು, ಸೂರ್ಯ
- ಅಹಿಮಕೃತ್ – ಅಹಿಮಕಿರಣ
- ಅಹಿಮರುಚಿ – ಸೂರ್ಯ
- ಅಹಿರಾಜ – ಅಹಿಪತಿ
- ಅಹಿಶೀರ್ಷ – ಹಾವಿನ ತಲೆ, ಹೆಡೆ
- ಅಹೀಂದ್ರ – ಆದಿಶೇಷ; (ಜೈನ) ನಾಗರಾಜ
- ಅಹೀಂದ್ರಕೇತನ – ಸರ್ಪಧ್ವಜ
- ಅಹೀಂದ್ರಲೋಕ – ನಾಗಲೋಕ
- ಅಹೀನತಾನ್ವಿತ – ಸರ್ಪರಾಜನೆಂಬ ಬಿರುದಿನವನು; ಹೀನತೆಯಿಲ್ಲದವನು
- ಅಹೀಶ್ವರ – ಅಹೀಂದ್ರ
- ಅಹುದು – ಹೌದು
- ಅಹೋ – ಒಂದು ಭಾವಸೂಚಕಾವ್ಯಯ
- ಅಹೋಧ್ವಾನ – ಅಹೋ ಎಂಬ ಕೂಗು
- ಅಹೋರಾತ್ರಂ – ಹಗಲೂ ರಾತ್ರಿ
- ಅಳಂಕು – ಬಣ್ಣ ಲೇಪನ ಮಾಡು
- ಅಳಂಕೆ – ತಲೆಯ ಕೂದಲು
- ಅಳಂಕೆಗೆಯ್ – ಜೋಡಿಸು, ಸೇರಿಸು
- ಅಳಂಕೆಗೊಳ್ – ಸೇರಿಕೊ; ಉದ್ಭವಿಸು
- ಅಳಂಕೆಗೊಳಿಸು – ಸೇರಿಸು; ದೊರೆಯುವಂತೆ ಮಾಡು
- ಅಳಂಬೆ – ಅಣಬೆ, ನಾಯಿಕೊಡೆ
- ಅಳಕ – ಬರೆಯುವ ಓಲೆ; ಮುಂಗುರುಳು
- ಅಳಕಾನೀಕ – ಮುಂಗುರುಳ ರಾಶಿ
- ಅಳಕಾಳಿ – ಅಳಕಾನೀಕ
- ಅಳಕೋದ್ಭಾಸಿ – ಮುಂಗುರುಳಿನಿಂದ ಶೋಭಿಸುವ
- ಅಳಗ – ಹವಳ; ಹವಳದ ಬಣ್ಣದ ಹಸು, ಕುದುರೆ ಮುಂತಾದ ಪ್ರಾಣಿ
- ಅಳರು – ವ್ಯಾಪಿಸು
- ಅಳಲ್ಕೆ – ಅಳಲಿಕೆ, ವ್ಯಸನ
- ಅಳವಡಿಕೆ – ಹೊಂದಿಕೆ
- ಅಳವಡಿಸು – ಹೊಂದಿಸು
- ಅಳವಡು – ಹೊಂದಿಕೊ; ಸಾಧ್ಯವಾಗು; ಸೇರಿಸು, ಕೂಡಿಸು
- ಅಳವಳ – ವ್ಯಥೆ
- ಅಳವಳಿಸು – ಶಬ್ದಮಾಡು
- ಅಳವಿ – ಪ್ರಮಾಣ; ಶಕ್ತಿ; ಯೋಗ್ಯತೆ; ಸಾಧ್ಯ
- ಅಳವಿಗಾಣ್ – ಅಳತೆಯನ್ನು ಕಾಣು
- ಅಳವಿದಪ್ಪು – ಅಳತೆ ಮೀರು
- ಅಳವು – ಶಕ್ತಿ; ಅಳತೆ; ಶಕ್ಯತೆ
- ಅಳವುಗೆಡಿಸು – ವಿವೇಕ ನಾಶಮಾಡು
- ಅಳವೆ – ನೀರು ಹೋಗುವ ತೂಬು
- ಅಳಸಗಾಮಿನಿ – ಮಂದಗಾಮಿನಿ
- ಅಳಸು – ಸುರತಧ್ವನಿಮಾಡು; ಪ್ರಣಯದ ನುಡಿಯಾಡು; ಸುರತಧ್ವನಿ
- ಅಳಿ – ದುಂಬಿ
- ಅಳಿಕ – ಅಲಿಕ, ಹಣೆ; ಹೇಡಿ
- ಅಳಿಕಮನ – ಕಪಟ ಮನಸ್ಸು
- ಅಳಿಕಲಭ – ಮರಿದುಂಬಿ
- ಅಳಿಕಾಬಂಧ – ಬಾಸಿಂಗ
- ಅಳಿಕುಲ – ದುಂಬಿಗಳ ಸಮೂಹ
- ಅಳಿನೀ – ಹೆಣ್ಣು ದುಂಬಿ
- ಅಳಿನೀನಿನದ – ಹೆಣ್ಣುದುಂಬಿಗಳ ಝೇಂಕಾರ
- ಅಳಿನೀಮಾಲೆ – ಹೆಣ್ಣು ದುಂಬಿಗಳ ಸಾಲು
- ಅಳಿನೀರುತಿ – ಅಳಿನೀನಿನದ
- ಅಳಿನೀ(ಸಂಕುಳ) – ಹೆಣ್ಣು ದುಂಬಿಗಳ (ಸಮೂಹ)
- ಅಳಿ(ಳು)ಪು – ಆಸೆ; ಆಸೆಪಡು; ಬಯಕೆ; ಕಾಮಿಸು; ಸ್ಮರಕೇಳಿಶಬ್ದನಿಚಯ
- ಅಳಿಮಾಲೆ – ದುಂಬಿಯ ಸಾಲು
- ಅಳಿಯಕ್ಕರ – ಹೀನ ಬರಹ
- ಅಳಿಲುಳಿ – ಕುದುರೆಯ ಒಂಬತ್ತು ಗತಿಗಳಲ್ಲಿ ಒಂದು
- ಅಳಿವಿಂಡು – ದುಂಬಿಗಳ ಸಮೂಹ
- ಅಳಿವೆದೆ – ದುಂಬಿಗಳ ಸಾಲಿನ ಬಿಲ್ಲಿನ ಹಗ್ಗ
- ಅಳೀಕ – ಕಪಟ
- ಅಳೀಕಭಕ್ತ – ಕಪಟಭಕ್ತಿಯುಳ್ಳವನು
- ಅಳೀಕಭ್ರುಕುಟಿ – ಹುಸಿ ಹುಬ್ಬುಗಂಟು; ತೋರಿಕೆ ಕೋಪ
- ಅಳೀಕಮಿತ್ರ – ಕಪಟ ಸ್ನೇಹಿತ
- ಅಳೀಕಸೊಬಗು – ಹುಸಿ ಸೊಬಗು
- ಅಳುಂಕು – ಅಲುಗಡು; ಹಿಂಜರಿ
- ಅಳುಂಬ(ಬು) – ಅತಿಶಯ, ವೆಗ್ಗಳ;
- ಮನೋಹರವಾದ; ಆಶ್ರಯ
- ಅಳುಂಬಂ – ಅತಿಶಯವಾಗಿ
- ಅಳುಪು – ಪ್ರೀತಿ
- ಅಳುರ್ – ಆವರಿಸು; ಸುಡು; ಚದುರಿಹೋಗು
- ಅಳುರ್ಕೆ – ವ್ಯಾಪಿಸುವುದು; ಆಧಿಕ್ಯ; ಸಾಮಥ್ರ್ಯ
- ಅಳುರ್ಕೆಗಿಡಿಸು – ಸಾಮಥ್ರ್ಯಗುಂದುವಂತೆ ಮಾಡು
- ಅಳುರ್ಕೆಗುಂದು – ಸಾಮಥ್ರ್ಯಗುಂದು
- ಅಳುರ್ಕೆಗೊಳ್ – ಆವರಿಸು; ಅಧಿಕವಾಗು
- ಅಳುರ್ಚು – ಹರಡು
- ಅಳೆ – ಮಜ್ಜಿಗೆ; ಅಳತೆ ಮಾಡು
- ಅಳ್ಕಾಟ – ನಡುಕ
- ಅಳ್ಕಾಡು – ಹೆದರಿಕೆಯಿಂದ ನಡುಗು; ಶಿಥಿಲವಾಗು
- ಅಳ್ಕಿಮೆಳ್ಕು – ನಾಶವಾಗಿ ಸಾರಿಸಿದಂತಾಗು
- ಅಳ್ಕು – ಅಳುಕು, ಹೆದರು; ಹಿಂಜರಿ; ದುರ್ಬಲಗೊಳ್ಳು; ಚಂಚಲಗೊಳ್ಳು; ಹೆದರಿಕೆ
- ಅಳ್ಕೆ – ದಟ್ಟವಾಗುವುದು; ಅಳುವಿಕೆ
- ಅಳ್ಗಿಡಿ – ಸಣ್ಣ ಕಿಡಿ
- ಅಳ್ಗುಡಿ – ಕೋಮಲವಾದ ಕುಡಿ
- ಅಳ್ಗುರುಳ್ – ಬಾಚಿದ ಕೂದಲು
- ಅಳ್ವು – ಸುಡು
- ಅಳ್ದರಿ – ಕಣಿವೆ
- ಅಳ್ಮಿದುಳ್ – ಮೃದುವಾದ ಮಿದುಳು
- ಅಳ್ಳೆ – ಪಕ್ಕೆ
- ಅಳ್ಳೆಗೊಂಬು – ಸಣ್ಣ ರೆಂಬೆ
- ಅಳ್ಳೆಜೊಳ್ಳೆತನ – ನಿಸ್ಸಾರವಾಗಿರುವುದು
- ಅಳ್ಳೆಜೊಳ್ಳೆಯ – ಶಕ್ತಿಹೀನ
- ಅಳ್ಳೆರ್ದೆ – ನಡುಗುವ ಎದೆ; ಅಸ್ಥಿರ ಮನಸ್ಸು
- ಅಳ್ಳೆವಿಳ್ಳೆ – ಚದುರಿ ಹೋಗು; ತುಂಬ ದಣಿ
- ಅಳ್ಳೆವೊಯ್ – ಪಕ್ಕೆ ಬಡಿದುಕೊ
Conclusion:
ಕನ್ನಡ ಅ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.