ಕನ್ನಡ ಆ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada aa aksharada halegannadada padagalu , ಕನ್ನಡ ಆ ಅಕ್ಷರದ ಹಳೆಗನ್ನಡ ಪದಗಳು ( Aa halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಆ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( Aa halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಆ ಅಕ್ಷರ ಎಂದರೇನು?
ಆ ಕನ್ನಡ ವರ್ಣಮಾಲೆಯ ಎರಡನೇ ಅಕ್ಷರವಾಗಿದೆ. ಇದು ಒಂದು ಸ್ವರಾಕ್ಷರ. ಇದು ಕನ್ನಡದ ವರ್ಣಮಾಲೆಯಲ್ಲಿ ಗುತಿಸಬಹುದಾದ ದೀರ್ಘಸ್ವರ.
ಎರಡು ಅ ಗಳು ಸೇರಿದಾಗ ಆ ಆಗುತ್ತದೆ. ಎಂದರೆ ಅ+ಅ=ಆ ಇದನ್ನು ಸವರ್ಣದೀರ್ಘ ಸಂಧಿ ಎಂದು ಕರೆಯುತ್ತಾರೆ. ಅ ಮತ್ತು ಆ ಈ ಎರಡು ಸ್ವರಗಳನ್ನು ನಾಮಿಸ್ವರಗಳು ಎಂದು ಕರೆಯುತ್ತಾರೆ..
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಆ ಅಕ್ಷರದ ಇತಿಹಾಸ :
ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರವಾದ ಅಕಾರದ ಅತ್ಯಂತ ಹಳೆಯ ರೂಪವನ್ನು ಪ್ರ. ಶ.ಪೂ. 3 ನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಬಹುದು.
ಆ ಕಾಲದ ಬ್ರಾಹ್ಮೀಲಿಪಿಯಿಂದ ಅಕಾರವು ವಿಕಾಸಹೊಂದಿ ಇಂದಿನ ರೂಪವನ್ನು ತಾಳಿತೆಂಬುದನ್ನು ಗಮನಿಸಬೇಕು.
ಅಶೋಕನ ಬ್ರಾಹ್ಮೀಕನ್ನಡ ವರ್ಣಮಾಲೆಯಲ್ಲಿ ಎರಡನೆಯ ಅಕ್ಷರವಾದ ಆಕಾರ ಕ್ರಿ,ಪೂ. ಮೂರನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯಲ್ಲಿ ಪ್ರತ್ಯೇಕ ರೂಪವನ್ನು ತಾಳದೆ, ಆಕಾರಕ್ಕೆ ದೀರ್ಘವನ್ನು ಸೂಚಿಸುವ ಒಂದು ಸಣ್ಣ ರೇಖೆಯನ್ನು ಮಾತ್ರ ಒಳಗೊಂಡಿದೆ. ಈ ರೂಪವೇ ಶಾತವಾಹನ, ಕದಂಬ, ಗಂಗ. ಬಾದಾಮಿ ಚಾಲುಕ್ಯರ ಕಾಲಗಳಲ್ಲೂ ಮುಂದುವರಿದಿದೆ.
ಈ ಕಾಲದ ರೂಪಗಳಲ್ಲಿ ದೀರ್ಘಸೂಚಕ ರೇಖೆ ಡೊಂಕಾಗುತ್ತ ಹೋಗಿ, ಕೊನೆಗೆ ಹೊಯ್ಸಳರ ಕಾಲದಲ್ಲಿ ಒಂದು ಸಣ್ಣ ಕೊಂಡಿಯ ಆಕಾರವನ್ನು ಪಡೆದಿದೆ.
ಆ ಅಕ್ಷರದ ಹಳೆಗನ್ನಡ ಪದಗಳು- Kannada Words
- ಆಂಕೆ – ಹಿಡಿತ; ಪ್ರತಿಭಟನೆ
- ಆಂಕೆಗೊಡು – ಆಸರೆ ನೀಡು
- ಆಂಕೆಗೊಳ್ – ಪ್ರತಿಭಟಿಸು, ಎದುರಿಸು
- ಆಂಕೆಯಾಳ್ – ಪ್ರತಿಭಟಿಸುವ ಭಟ
- ಆಂಗಿಕ – ದೇಹಕ್ಕೆ ಸಂಬಂಧಿಸಿದ; ಒಂದು
- ಅಭಿನಯ ಪ್ರಭೇದ
- ಆಂಗೊಳಗು – ಹಸುವಿನ ಗೊರಸು
- ಆಂದೆ(ಗ) – ಒಂದು ಹಕ್ಕಿ, ಗೂಬೆ
- ಆಂದೆಗೀರ – ಆಂದೆ(ಗ)
- ಆಂದೋಲ(ನ) – ಉಯ್ಯಾಲೆ; ತೂಗಾಟ; ಮೇನೆ
- ಆಂದೋಲಾಯಮಾನ – ಉಯ್ಯಾಲೆಯಂತಹ ತೂಗಾಟ
- ಆಂದೋಲ(ಳ)ನಂಗೆಯ್ – ತೂಗಾಡಿಸು
- ಆಂದೋಲಾ(ಳಾ)ಯಿತ – ತೂಗಾಡುವ
- ಆಂಧ್ರಿ – ಆಂಧ್ರದೇಶದ ಹೆಂಗಸು
- ಆಂಬರಂ – ಆನ್+ವರಂ, ನನ್ನವರೆಗೂ
- ಆಕಂಠಪ್ರಮಾಣ – ಕಂಠದವರೆಗೂ
- ಆಕಂಠೋಷ್ಠಂಬರಂ – ಗಂಟಲು ಮತ್ತು ತುಟಿಯವರೆಗೆ
- ಆಕಂಪನಗೊಳ್ – ನಡುಗು
- ಆಕಂಪಿಸು – ನಡುಗು
- ಆಕಪ್ಪು – ಗುಳಿ, ಖೆಡ್ಡ
- ಆಕರಿಸು – ಸ್ವೀಕರಿಸು; ಹೊಂದು; ಭಯಗೊಳ್ಳು
- ಆಕರ್ಣಕೃಷ್ಟ – ಕಿವಿಯವರೆಗೆ ಸೆಳೆಯಲ್ಪಟ್ಟ
- ಆಕರ್ಣನ – ಆಲಿಸುವುದು
- ಆಕರ್ಣನೀಯ – ಆಲಿಸಲು ಯೋಗ್ಯವಾದ
- ಆಕರ್ಣಾಂತ – ಬಿಲ್ಲಿನ ಹೆದೆಯನ್ನು ಕಿವಿಯವರೆಗೂ ಎಳೆಯುವುದು
- ಆಕರ್ಣಾಂತಂಬರಂ – ಆಕರ್ಣಾಂತಂ
- ಆಕರ್ಣಿಸು – ಆಲಿಸು
- ಆಕಲಿ(ಳಿ)ತ – ಕೂಡಿದ, ಸೇರಿದ
- ಆಕಲಿ(ಳಿ)ಸು – ಗ್ರಹಿಸು; ಹಿಡಿ
- ಆಕಲ್ಪ – ಕಲ್ಪದವರೆಗೆ; ಒಡವೆ; ಅಲಂಕಾರ
- ಆಕಸ್ಮಿಕ – ಅನಿರೀಕ್ಷಿತ
- ಆಕಳ್ – ಹಸು
- ಆಕಳಿಸು – ಆವರಿಸು; ಹಿಡಿದುಕೊ
- ಆಕಾರವಂತ – ರೂಪವಂತ, ಸುಂದರ
- ಆಕಾರಂಗಿಡು – ರೂಪಗೆಡು
- ಆಕಾರಸಂವರಣೆ – ಆಕಾರಗುಪ್ತಿ, ರೂಪವನ್ನು ಮರೆಮಾಚಿಕೊಳ್ಳುವುದು
- ಆಕಾಲಿ(ಳಿ)ಕಿ – ಕ್ಷಣಿಕವಾದದ್ದು; ಮಿಂಚು
- ಆಕಾಶಗಾಮಿ – ಅಂತರಿಕ್ಷದಲ್ಲಿ ಸಂಚರಿಸುವವನು
- ಆಕಾಶಗಾಮಿನಿ(ವಿದ್ಯೆ) – ಅಂತರಿಕ್ಷದಲ್ಲಿ ಸಂಚರಿಸುವ ವಿದ್ಯೆ
- ಆಕಾಶದ್ರವ್ಯ – (ಜೈನ) ಷಡ್ದ್ರವ್ಯಗಳಲ್ಲಿ ಒಂದು
- ಆಕಾಶಾಸ್ತಿಕಾಯ – (ಜೈನ) ಐದು ಬಗೆಯ ಅಸ್ತಿಕಾಯಗಳಲ್ಲಿ ಒಂದು
- ಆಕಿಂಚನ್ಯ – ತನ್ನದೆಮದು ಏನೂ ಹೊಂದದಿರುವುದು
- ಆಕೀರ್ಣ – ತುಂಬಿದ, ವ್ಯಾಪಿಸಿದ
- ಆಕುಂಚಿತ – ಕುಗ್ಗಿದ; ಗದಾಯುದ್ಧದಲ್ಲಿನ ಒಂದು ಹೊಡೆತದ ಬಗೆ
- ಆಕುಲ – ಕದಡಿದ; ಕ್ಷೋಭೆಗೊಂಡ; ಕಳವಳ
- ಆಕುಲಿತ – ತುಂಬಿದ; ಕಲಕಿದ; ಕಳವಳದಿಂದ ಕೂಡಿದ
- ಆಕುಲೆ – ಚಿಂತೆಗೊಳಗಾದವಳು
- ಆಕುಳೀ(ಲೀ)ಕೃತ – ಕದಡುವಂತೆ ಆದ
- ಆಕೂತ – ಇಂಗಿತ
- ಆಕೂರ್ಪರ – ಮೊಳಕೈವರೆಗೆ
- ಆಕೃತಿಗಿಡು – ಆಕಾರಗೆಡು
- ಆಕೃತಿದಾಳ್ – ಆಕಾರವನ್ನು ಹೊಂದು
- ಆಕೃತಿವಂತ – ರೂಪವಂತ
- ಆಕೃತಿಸಂವೃತಿ – ರೂಪು ಅಡಗಿಸುವಿಕೆ
- ಆಕೃಷ್ಟ – ಜಗ್ಗಿದ, ಸೆಳೆದ
- ಆಕೃಷ್ಟಿ – ಆಹರ್ಷಣೆ, ಸೆಳೆಯುವಿಕೆ
- ಆಕೃಷ್ಟಿಮಂತ್ರ – ವಶೀಕರಣ ಮಂತ್ರ
- ಆಕೆವಾಳ – ಶೂರ
- ಆಕೆವಾಳತನ – ಶೌರ್ಯ
- ಆಕೇಕರ – ಅರೆತೆರೆದ ಕಣ್ಣು
- ಆಕೇಕರಾಲೋಕ – ಓರೆನೋಟ
- ಆಕೇಶಗ್ರಹಣಾಂತಂ – ಜುಟ್ಟು ಹಿಡಿದು, ಬಲಾತ್ಕಾರವಾಗಿ
- ಆಕ್ರಂದತ್ಸ್ವರ – ಅಳುವಿನ ಧ್ವನಿ
- ಆಕ್ರಂದಿಸು – ಅಳು
- ಆಕ್ರಮಣಧ್ವನಿ – ಗದರಿಕೆ
- ಆಕ್ರಾಂತ – ಆವರಿಸಲ್ಪಟ್ಟ
- ಆಕ್ರಾಂತಿ – ಆಕ್ರಮಣ
- ಆಕ್ರೋಶ – ದುಃಖದಿಂದ ಕೂಗಿಕೊಳ್ಳುವುದು; ಶಾಪದ ಬೈಗುಳು
- ಆಕ್ರೋಶ(ಧ್ವನಿ) – ದುಃಖದ ಕೂಗಾಟ; ರೇಗಾಟದ ಧ್ವನಿ
- ಆಕ್ಷಿಪ್ತ – ಎಸೆಯಲ್ಪಟ್ಟ; ಗದಾಯುದ್ಧದಲ್ಲಿನ ಒಂದು ಬಗೆಯ ಹೊಡೆತ
- ಆಕ್ಷೇಪ – ಎಸೆತ; ನಡುಕ; ಬೈಯುವುದು
- ಆಕ್ಷೇಪಣೀಯ – ಬೈಗುಳಕ್ಕೆ ತಕ್ಕುದಾದ; (ಜೈನ) ನಾಲ್ಕು ಬಗೆಯ ಧರ್ಮಕಥೆಗಳಲ್ಲಿ ಒಂದು
- ಆಕ್ಷೇಪವಾಚಕ – ಪರಿಹಾಸಕ್ಕೆ ಎಡಗೊಡುವ ಮಾತು
- ಆಖಂಡ(ಲ)ಳ – ಇಂದ್ರ
- ಅಖಂಡಳತನಯ – ಇಂದ್ರನ ಮಗ; ಅರ್ಜುನ, ವಾಲಿ
- ಆಖು(ಶಾಬ) – ಇಲಿ(ಮರಿ)
- ಆಖೇಟ(ಕ) – ಬೇಟೆ
- ಆಖ್ಯಾತ – ತಿಳಿಸಲ್ಪಟ್ಟ
- ಆಖ್ಯಾನ – ನಿರೂಪಣೆ; ಕಥಾನಕ
- ಆಖ್ಯಾನಕ – ಕಥೆ
- ಆಖ್ಯೆ – ಹೆಸರು
- ಆಗ – ಆಗದು; ಪಾಪ; ಅಪರಾಧ
- ಆಗಂತು(ಕ) – ಅನಿರೀಕ್ಷಿತವಾಗಿ ಬಂದವನು
- ಆಗಡು – ಯಾವಾಗಲೂ; ಆ ಸಮಯದಲ್ಲಿ
- ಆಗಮ – ಬರುವುದು; ಶಾಸ್ತ್ರಗಳು
- ಆಗಮಜ್ಞ – ಶಾಸ್ತ್ರಗಳನ್ನು ಬಲ್ಲವನು
- ಆಗಮಭಾಷೆ – ಶಾಸ್ತ್ರಗಳಲ್ಲಿನ ನುಡಿ
- ಆಗಮವಿತ್ತ್ವ – ಆಗಮಜ್ಞಾನ
- ಆಗಮವೇದಿ – ಶಾಸ್ತ್ರಜ್ಞ
- ಆಗಮಸಮಯ – ಆಗಮಗಳ ಸಂಪ್ರದಾಯ
- ಆಗಮಿಕ – ಶಾಸ್ತ್ರಜ್ಞ
- ಆಗರ – ಮೂಲನೆಲೆ; ಆಶ್ರಯ; ಗಣಿ; ಮನೆ
- ಆಗಸ್ – ಅಪರಾಧ
- ಆಗಸ – (ಆಕಾಶ), ಬಾನು
- ಆಗಸವಕ್ಕಿ – ಒಂದು ಹಕ್ಕಿ, ಖಂಜರೀಟ
- ಆಗಸವಳಯ – ಆಕಾಶಮಂಡಲ
- ಆಗಳಾಗಡೆ(ಳೆ) – ಆ ಕ್ಷಣವೆ
- ಆಗಳಂತೆ – ತತ್ಕ್ಷಣ
- ಆಗಾಮಿ – ಬರಲಿರುವ
- ಆಗಾಮಿಕ – ಭವಿಷ್ಯತ್ತಿಗೆ ಸಂಬಂಧಿಸಿದ
- ಆಗಾಮಿಕಾರ್ಯ – ಮುಂದಿನ ಕೆಲಸ
- ಆಗಾರ – ನೆಲೆ, ಮನೆ
- ಆಗಿಸು – ಆಗುವಂತೆ ಮಾಡು
- ಆಗುಹ – ಆಗುವಿಕೆ
- ಆಗುಳ್ – ಆಕಳಿಕೆ
- ಆಗು(ಕ)ಳಿಕೆ – ಆಗುಳ್
- ಆಗುಳಿಸು – ಆಕಳಿಸು
- ಆಗ್ನೀಧ್ರ – ಯಜ್ಞಾಗ್ನಿಯನ್ನು ಪುಟಗೊಳಿಸುವವನು
- ಆಗ್ರ – ಮನೆ, ಸುತ್ತಲ ಪ್ರದೇಶ
- ಆಗ್ರಹ – ಹಿಡಿಯುವುದು; ಆಕ್ರಮಣ; ಒತ್ತಾಯ
- ಆಗ್ರಹಂಗೆಯ್ – ಒತ್ತಾಯ ಮಾಡು
- ಆಗ್ರಹಿಸು – ಒತ್ತಾಯಿಸು
- ಆಘಾಟಿ – ಮೇರೆ, ತುದಿ
- ಆಘಾಟಶುದ್ಧಿ – ಮೇರೆಯನ್ನು ನಿಶ್ಚಯಿಸುವುದು
- ಆಘಾತ – ಹೊಡೆತ, ಏಟು
- ಆಘ್ರಾಣ – ವಾಸನೆ ನೋಡಿವುದು
- ಆಘ್ರಾಣಿಸು – ಮೂಸಿನೋಡಿ
- ಆಘ್ರಾಯಿಸು – ಆಘ್ರಾಣಿಸು
- ಆಘಾಳಿ – ಪಾಪ, ದುರಿತ
- ಆಚ – ಸಾಲವೃಕ್ಷ
- ಆಚಂದ್ರತಾರಂ – ಚಂದ್ರತಾರೆಯರಿರುವವರೆಗೆ
- ಆಚಕ್ಷತೇ – ಹೇಳುತ್ತೇವೆ
- ಆಚಮಿಸು – ಆಚಮನ ಮಾಡು
- ಆಚರಣೆ – ಅನುಸರಣೆ
- ಆಚರಿಸು – ನೆರವೇರಿಸು
- ಆಚಾಮ್ಲವರ್ಧನ(ತಪ) – (ಜೈನ) ಒಂದು ಬಗೆಯ ಉಪಪವಾಸವ್ರತ
- ಆಚಾರ್ಯ – ಗುರು
- ಆಚಾರ್ಯಷಟ್ಕರ್ಮ – (ಜೈನ) ಆಚಾರ್ಯರೂ ಶ್ರಾವಕರೂ ಮಾಡಬೇಕಾದ ಇಜ್ಯೆ, ವಾರ್ತೆ, ದತ್ತಿ, ಸ್ವಾಧ್ಯಾಯ, ಸಂಯಮ, ತಪ ಎಂಬ ಆರು ಕರ್ಮಗಳು
- ಆಚ್ಛಾದಿಸು – ಮುಚ್ಚು
- ಆಚ್ಛಾದ್ಯ – ಮುಚ್ಚಲ್ಪಟ್ಟ
- ಆಚ್ಛಾದ್ಯಮಾನ – ಮುಚ್ಚಲಾಗುತ್ತಿರುವ
- ಆಜವಂಜವ – ಸಂಸಾರ
- ಆಜಸ್ರಂ – ಸದಾಕಾಲ
- ಆಜಾನೇಯ – ಉತ್ತಮ ಜಾತಿಯ ಕುದುರೆ
- ಆಜಿ – ಯುದ್ಧ
- ಆಜಿರಂಗ – ಯುದ್ಧರಂಗ
- ಆಜಿಲಂಪಟ – ಯುದ್ಧದಲ್ಲಿ ಅತ್ಯಾಸಕ್ತ
- ಆಜಿಶ್ರಾಂತ – ಯುದ್ಧಮಾಡಿ ಆಯಾಸಗೊಂಡ
- ಅಜೀವ – ವೃತ್ತಿ; (ಜೈನ) ಸಾಧು, ಶ್ರಮಣ
- ಆಜೀವಕ – ಭಿಕ್ಷುಕ; ಪರಿವ್ರಾಜಕ
- ಆಜ್ಞಾಕ್ಷರ – ಆಜ್ಞೆಯ ಮಾತು
- ಆಜ್ಞಾನಿಧಿ – ಆಜ್ಞೆಗಳಿಗೆ ಮೂಲವಾಗಿರುವವನು
- ಅಜ್ಞಾಪರಿಸ್ಫುರಣೆ – ಅಪ್ಪಣೆಯ ಪ್ರಕಟಣೆ
- ಆಜ್ಞಾಲಂಘನ – ಆಜ್ಞೆಯನ್ನು ಮೀರುವುದು
- ಅಜ್ಞಾವಿಚಯ – (ಜೈನ) ನಾಲ್ಕು ಬಗೆಯ
- ಧರ್ಮಧ್ಯಾನಗಳಲ್ಲಿ ಒಂದು;
- ಆಗಮಗುಣಗಳ ಕುರಿತಾದ ಚಿಂತನೆ
- ಆಜ್ಞಾವಿಧೇಯ – ಆಜ್ಞಾನುಸಾರ ನಡೆಯುವವನು
- ಆಜ್ಞಾಸಮುತ್ಪನ್ನೆ – ಆಜ್ಞೆಗನುಸಾರವಾಗಿ ಹುಟ್ಟಿದವಳು
- ಆಜ್ಯ – ತುಪ್ಪ
- ಆಜ್ಯಾಹುತಿ – ಹೋಮದಲ್ಲಿ ಅಗ್ನಿಗೆ ತುಪ್ಪ ಆಹುತಿಯಾಗಿ ನೀಡುವುದು
- ಆಟ – ಕ್ರೀಡೆ; ಕುಣಿತ,ನಾಟಕ ಮುಂತಾದವುಗಳ ಪ್ರದರ್ಶನ
- ಆಟಂಗುಳಿ – ಆಟದಲ್ಲಿ ನಿರತನಾದವನು
- ಆಟಂದು – ಬಯಸು
- ಆಟಕಾ(ರ್ತಿ) – ನಟ(ಟಿ); ಆಟ ಆಡುವವನು(ಳು)
- ಆಟಪಾಟ – ವಿನೋದ; ಆಡು ಹಡು
- ಆಟರ್ – ಮೇಲೆ ಬೀಳು
- ಆಟಲೆ – ಅಟ್ಟಿಸಿಕೊಂಡು ಹೋಗಿ ಹಿಂಸೆಗೈ; ಕಾಟ
- ಆಟವಿಕ – ಕಾಡಿನಲ್ಲಿ ವಾಸಿಸುವವನು; ಕಿರಾತ
- ಆಟವಿಟಂಬರಿಸು – ಮೋಸಗೊಳಿಸು; ಗಾಯಗೊಳಿಸು
- ಆಟಿಸು – ಬಯಸು; ಅತ್ತಿತ್ತ ಚಲಿಸು
- ಆಟೋಪ – ಆಟಂಬರ ; ಅಬ್ಬರ; ದರ್ಪಪ್ರದರ್ಶನ
- ಆಟೋಪಂಬೆ – ಆಟೋಪವನ್ನು ಹೊಂದು
- ಆಡಿಸು – ಅಲುಗಾಡಿಸು; ಆಟವಾಡಿಸು;
- ನರ್ತಿಸುವಂತೆ ಮಾಡು
- ಆಡು – ನುಡಿ; ಚಲಿಸು; ವಾಗ್ದಾನ ಮಾಡು; ಪಗಡೆ ಮುಂತಾದ ಆಟಗಳಲ್ಲಿ ಕಾಯಿ ನಡೆಸು; ಮೇಕೆ
- ಆಡುಂಗುಳಿ – ಆಟದಲ್ಲಿ ಅತ್ಯಾಸಕ್ತ
- ಆಡುಂದೊಲೆ – ತೂಗಾಡುವ ತೊಲೆ
- ಆಡುಂಬೊಲ – ಆಟದ ಸ್ಥಳ; ಕ್ರೀಡಾಂಗಣ
- ಆಢಕೀ – ಅವರೆ
- ಆಣತಿ – ಆಜ್ಞಪ್ತಿ
- ಆಣತಿಮಾಡು – ಹಾಡು ಹೇಳು
- ಆಣತಿಯಿಡು – ಆಜ್ಞೆಮಾಡು
- ಆಣೆ – (ಆಜ್ಞಾ) ಅಪ್ಪಣೆ; ಪ್ರತಿಜ್ಞೆ
- ಆಣೆಗೋಸಣೆ – ಅಪ್ಪಣೆಯನ್ನು ಘೋಷಿಸುವುದು
- ಆಣೆಯಿಡು – ಆಜ್ಞೆಮಾಡು; ಪ್ರತಿಜ್ಞೆಮಾಡು
- ಆಣ್ಮ – ಒಡೆಯ; ಗಂಡ
- ಆತಂಕ – ಹೆದರಿಕೆ; ತಲ್ಲಣ
- ಆತಂಕಕಳಂಕ – ಅತಂಕ ಮುಂತಾದವುಗಳ ತೊಡಕು
- ಆತಂಕಿತಹೃದಯ – ಭಯಗೊಂಡ ಹೃದಯದವನು
- ಆತತಜ್ಯಂಮಾಡು – ಬಿಲ್ಲಿಗೆ ಹೆದೆಯೇರಿಸು
- ಆತಪ – ಬಿಸಿಲು
- ಆತಪತ್ರ – ಕೊಡೆ, ಛತ್ರಿ
- ಆತಪಯೋಗ – ಬಿಸಿಲಿನಲ್ಲಿ ನಿಂತು ತಪಸ್ಸು ಮಾಡುವುದು
- ಆತಪವಾರಣ – ಕೊಡೆ, ಛತ್ರಿ
- ಆತರ – ನದಿಯನ್ನು ದಾಟುವುದು; ದೋಣಿ
- ಆತಾಮ್ರ – ಚೆನ್ನಾಗಿ ಕೆಂಪಾಗಿರುವ
- ಆತಿಥ್ಯ – ಅತಿಥಿಸೇವೆ
- ಆತುರ – ಉತ್ಕಟ ಬಯಕೆ; ಯಾತನಾಪೀಡಿತ
- ಆತುರಿಸು – ಆತುರಪಡು
- ಆತೋದ್ಯ – ಬಾಜಿಸುವ, ವಾದ್ಯ
- ಆತೋದ್ಯಘೋಷ – ವಾದ್ಯಧ್ವನಿ
- ಆತೋದ್ಯನಾದ – ಆತೋದ್ಯಘೋಷ
- ಆತೋದ್ಯರವ – ಆತೋದ್ಯಘೋಷ
- ಆತೋದ್ಯಸ್ವನ – ಆತೋದ್ಯಘೋಷ
- ಆತೋದ್ಯಾಂಗ – (ಜೈನ) ಹತ್ತು ಬಗೆಯ ಕಲ್ಪವೃಕ್ಷಗಳಲ್ಲಿ ಒಂದು; ಬೇಡಿದ ವಾದ್ಯವನ್ನು ನೀಡುವ ವೃಕ್ಷ
- ಆತ್ತ – ಪಡೆದ; ಹಿಡಿದ; ಆವರಿಸಿದ
- ಆತ್ತಚಿತ್ತ – ಮನಸ್ಸುಳ್ಳವನು
- ಆತ್ತರಕ್ತರುಚಿ – ಉಂಟಾದ ಕೆಂಪು ಕಾಂತಿ
- ಆತ್ತಸಂಗರ – ಆರಂಭಗೊಂಡ ಯುದ್ಧ
- ಆತ್ತೋದಯ – ಜನನ
- ಆತ್ಮಂಭರಿ – ತನ್ನ ತಾನು ಸಾಕಿಕೊಳ್ಳುವವನು
- ಆತ್ಮಕೃತ – ತಾನೇ ಮಾಡಿದ
- ಆತ್ಮಕೃತ್ಯ – ತನ್ನದೇ ಕೆಲಸ
- ಆತ್ಮಗತ – ಆತ್ಮಕ್ಕೆ ಸಂಬಂಧಿಸಿದ; ಸ್ವಗತ
- ಆತ್ಮಗುಣ – ಆತ್ಮದ ಸ್ವಭಾವ
- ಆತ್ಮಗುಪ್ತಿ – ನಸುಗುನ್ನಿ
- ಆತ್ಮಘಾತ – ಆತ್ಮಹತ್ಯೆ
- ಆತ್ಮಜ(ನ್ಮ) – ಮಗ
- ಆತ್ಮಜಾತ – ಮಗ
- ಆತ್ಮಜ್ಞತೆ – ಆತ್ಮದ ಸ್ವರೂಪ ತಿಳಿದಿರುವುದು
- ಆತ್ಮತತ್ತ್ವ – ಆತ್ಮದ ಸ್ವರೂಪ
- ಆತ್ಮನಾಥ – ತನ್ನ ಒಡೆಯ
- ಆತ್ಮನಿವಾಸ – ತನ್ನದೇ ಮನೆ
- ಆತ್ಮಪರಾಭವ – ತನ್ನದೇ ಸೋಲು
- ಆತ್ಮಪಾಲನ – ತನ್ನನ್ನೇ ಕಾಪಾಡಿಕೊಳ್ಳುವುದು
- ಆತ್ಮಬಲ – ಆತ್ನ ಶಕ್ತಿ; ತನ್ನ ಶಕ್ತಿ
- ಆತ್ಮಭವ(ವೆ) – ಮಗ(ಳು)
- ಆತ್ಮಭಾವಿ – ಆತ್ಮಜ್ಞಾನದ ಫಲ
- ಆತ್ಮರಕ್ಷಕ – (ಜೈನ) ಸ್ವರ್ಗದಲ್ಲಿ ಹುಟ್ಟಿದ ಜೀವಕ್ಕೆ ಅಂಗರಕ್ಷಕರಾಗಿರುವ ದೇವತೆಗಳು
- ಆತ್ಮರಕ್ಷೆಗೆಯ್ – ಸ್ವಂತ ರಕ್ಷಣೆಮಾಡಿಕೊ
- ಆತ್ಮರಾಗ – ಮನಸ್ಸಿನ ಅನುರಾಗ
- ಆತ್ಮವಲ್ಲಭ – ತನ್ನ ಒಡೆಯ, ಗಂಡ
- ಆತ್ಮವಿದ್ಧ – ತನ್ನ ರೂಪವನ್ನು ತಾನೇ ಚಿತ್ರಿಸುವುದು
- ಆತ್ಮವಿಲಾಸ – ತನ್ನ ವೈಭವ
- ಆತ್ಮಸುಖ – ತನ್ನ ಸುಖ
- ಆತ್ಮಸ್ವಾಮಿ – ತನ್ನ ಸ್ವಾಮಿ
- ಆತ್ಮಸ್ವೀಕೃತ – ತಾನು ಸ್ವೀಕರಿಸಿದ
- ಆತ್ಮಹಿತ – ಆತ್ಮನ ಹಿತ; ತನ್ನ ಹಿತ
- ಆತ್ಮಾನುಗತಾರ್ಥ – ಮನಸ್ಸಿನಲ್ಲಿರುವ ಆಸೆ
- ಆತ್ಮಾನುಭೂತ – ತನಗೇ ಅನುಭವಕ್ಕೆ ಬಂದ
- ಆತ್ಮಾಮಿಷ – ತನ್ನ ಮಾಂಸ; ರಾಜ ಮಾಡಿಕೊಳ್ಳುವ ಹದಿನಾರು ಬಗೆಯ ಸಂಧಿಗಳಲ್ಲಿ ಒಂದು; ಶತ್ರು ಸಮಸ್ತಬಲದೊಡನೆ ವಿಜಿಗೀಷುವನ್ನು ಕಾಣುವುದು
- ಆತ್ಮಾಯತ್ತ – ತನ್ನ ಅಧೀನ
- ಆತ್ಮಾಸ್ತಿತ್ವ – ಆತ್ಮನ ಇರುವಿಕೆ
- ಆತ್ಮೀಕರಿಸು – ಪರಿಗ್ರಹಿಸು
- ಆತ್ಮೀಕೃತ – ಸ್ವೀಕರಿಸಿದ
- ಆತ್ಮೀಯ – ತನಗೆ ಸೇರಿದ; ತನಗೆ ಪ್ರಿಯವಾದ
- ಆತ್ಮೀಯಬಲ – ತನ್ನ ಸೈನ್ಯ
- ಆತ್ಮೇಶ – ತನ್ನ ಒಡೆಯ
- ಆತ್ಮೈಶ್ವರ್ಯ – ತನ್ನ ಐಶ್ವರ್ಯ
- ಆತ್ಮೋದ್ಯೋಗ – ತನ್ನ ಕಾರ್ಯ
- ಆತ್ಯಂತಿಕ – ಕೊಟ್ಟ ಕೊನೆಯ
- ಆತ್ಯಂತಿಕಸುಖ – ಪರಮಸುಖ; ಮೋಕ್ಷ
- ಆತ್ಯಯ – ನಾಶಮಾಡುವ
- ಆತ್ರೇಯ – ಚಂದ್ರ
- ಆತ್ರೇಯದ್ಯುತಿ – ಚಂದ್ರನ ಕಾಂತಿ
- ಆತ್ರೇಯಬಿಂಬ – ಚಂದ್ರಮಂಡಲ
- ಆದಂ – ವಿಶೇಷವಾಗಿ; ಸಂಪೂರ್ಣವಾಗಿ
- ಆದಮಾನುಂ – ವಿಶೇಷವಾಗಿ
- ಆದಮೆ – ವಿಶೇಷವಾಗಿಯೇ
- ಆದರ – ಗೌರವ; ಉಪಚಾರ; ಆಸೆ
- ಆದರಂಗೆಯ್ – ಆದರಿಸು
- ಆದರಂಗೊಳ್ – ಆಸಕ್ತಿ ಹೊಂದು
- ಆದರಿಸು – ಗೌರವ ತೋರಿಸು; ಉಪಚಾರಮಾಡು
- ಆದರ್ಪಿಸು – ಕಡೆಗಣಿಸು; ಪ್ರತಿಭಟಿಸು
- ಆದರ್ಶ(ನ) – ಕನ್ನಡಿ
- ಆದಲೆ – ಅಗ್ರಭಾಗ; ಅತ್ತ ಕಡೆ; ಉಂಟಾಗುವಿಕೆ
- ಆದಾನ – ಪಡೆಯುವುದು; (ಜೈನ) ಐವತ್ತಮೂರು ಗರ್ಭಾನ್ವಯ ಕ್ರಿಯೆಗಳಲ್ಲಿ ಒಂದು
- ಆದಿ – ಮೊದಲು; ಕಾರಣ
- ಆದಿಕಮಠ – ಮೊದಲನೆಯ ಆಮೆ; ಭೂಮಿ ಹೊತ್ತ ವಿಷ್ಣುವಿನ ಕೂರ್ಮಾವತಾರ
- ಆದಿಕಲ್ಯಾಣ – (ಜೈನ) ತೀರ್ಥಂಕರನಿಗೆ ಮಾಡುವ ಮೊದಲ ಕಲ್ಯಾಣ, ಗರ್ಭಾವತರಣ
- ಆದಿಗರ್ಭೇಶ್ವರ – ಹುಟ್ಟಿನಿಂದ ರಾಜವಂಶಕ್ಕೆ ಸೇರಿದ; ಆಗರ್ಭ ಶ್ರೀಮಂತ
- ಆದಿಜಿನ – (ಜೈನ) ಮೊದಲ ತೀರ್ಥಂಕರ; ವೃಷಭನಾಥ
- ಅದಿಜಿನೇಂದ್ರ – ಆದಿಜಿನ
- ಆದಿಜಿನೇಶ್ವರ – ಆದಿಜಿನ
- ಆದಿತೀರ್ಥಪ್ರವರ್ತಕ – ಆದಿಜಿನ
- ಆದಿತೀರ್ಥೇಶ್ವರ – ಆದಿಜಿನ
- ಆದಿತ್ಯ – ಸೂರ್ಯ; (ಜೈನ) ಎಂಟು ಮಂದಿ ಲೋಕಾಂತಿಕ ದೇವರಲ್ಲಿ ಒಬ್ಬ
- ಆದಿತ್ಯನದೀಜ – ದೇವಗಂಗೆಯ ಮಗ, ಭೀಷ್ಮ
- ಆದಿತ್ಯಪ್ರಭ – ಸೂರ್ಯನಂತೆ ಪ್ರಭೆಯುಳ್ಳವನು
- ಆದಿತ್ಯಸುತ – ಯಮ
- ಆದಿದೇವ – ಮೊಟ್ಟ ಮೊದಲ ದೇವ; ಜಿನ
- ಆದಿನಾಥ – ಆದಿದೇವ
- ಆದಿಪುರಾಣ – (ಜೈನ) ಮೊದಲ ತೀರ್ಥಂಕರನನ್ನು ಕುರಿತ ಪುರಾಣ
- ಆದಿಪುರುಷ – ಮೊದಲ ವ್ಯಕ್ತಿ; ಆದಿಜಿನ; ಆದಿನಾರಾಯಣ; ಶಿವ
- ಆದಿಬ್ರಹ್ಮ – ಆದಿಜಿನ
- ಆದಿಭಟ್ಟಾರಕ – ಆದಿಜಿನ
- ಆದಿಮಾರ್ಗ – ಹಿಂದಿನಿಂದ ಬಂದ ರೀತಿ
- ಆದಿಮುನಿಪತಿ – ಆದಿಜಿನ
- ಆದಿರಾಜ – ಮೊದಲ ರಾಜ; ಮನು; (ಜೈನ) ಭರತಚಕ್ರವರ್ತಿಯ ಒಬ್ಬ ಮಗನ ಹೆಸರು
- ಆದಿವಾಸರ – ಭಾನುವಾರ
- ಆದೃಪ್ತ – ಸೊಕ್ಕಿದ
- ಆದೇಯ – ತೆಗೆದುಕೊಳ್ಳಬಹುದಾದ; ದಾನ; (ಜೈನ) ಒಂದು ಬಗೆಯ ನಾಮಕರ್ಮ
- ಆದೇಯನಾಮಕರ್ಮ – (ಜೈನ) ತೊಂಬತ್ತುಮೂರು ಬಗೆಯ ಕರ್ಮಗಳಲ್ಲಿ ಒಂದು
- ಆದೇಯರೂಪ – ಮೆಚ್ಚಿಕೊಳ್ಳಬಹುದಾದ ರೂಪ
- ಆದೇಶ – ಆಜ್ಞೆ; ಉಪದೇಶ; ವಿಧಿ, ನಿಯಮ; ಭವಿಷ್ಯವಾಣಿ
- ಆದೇಶಂಗೆಯ್ – ಆಜ್ಞೆಮಾಡು; ಭವಿಷ್ಯ ನುಡಿ
- ಆದೇಶಪುರುಷ – ಭವಿಷ್ಯವಾಣಿಯಲ್ಲಿ ಹೇಳಲಾದ ವ್ಯಕ್ತಿ
- ಆದೇಶವಚನ – ಭವಿಷ್ಯವನ್ನು ಹೇಳುವ ನುಡಿ
- ಆದೊ(ದ)ಡೆ – ಆದರೆ
- ಆದೊರೆತು – ಅದಕ್ಕೆ ಸಮನಾದ; ಅಂತಹ
- ಆದೊರೆಯ – ಅಂತಹ
- ಆದ್ಯ – ಮೊದಲ; ಹಿರಿಯ
- ಆದ್ಯಕಾವ್ಯ – ಮೊದಲ ಕಾವ್ಯ; ಶ್ರೇಷ್ಠ ಕಾವ್ಯ
- ಆಧಾನ – ಇಡುವುದು; ತೆಗೆದುಕೊಳ್ಳುವುದು
- ಆಧಾರ – ನೆಲೆ; ತಳಹದಿ; ಸೃಷ್ಟಿಮೂಲ
- ಆಧಾರರಹಿತ – ಆಧಾರವಿಲ್ಲದ; ಪ್ರಮಾಣರಹಿತ
- ಆಧಿ – ದುಃಖ; ವಿಪತ್ತು
- ಆಧಿಕ್ಯ – ಅಧಿಕತೆ; ಹಿರಿಮೆ
- ಆಧಿರಾಜ್ಯ – ಅಧಿರಾಜ ಪದವಿ
- ಆಧಿವ್ಯಾಧಿಪ್ರದ – ವ್ಯಥೆ ಹಾಗೂ ರೋಗಗಳನ್ನುಂಟುಮಾಡುವ
- ಆಧೇಯ – ಆಧಾರವಾಗಿರುವ; ಆಶ್ರಯ; ನ್ಯಾಸ
- ಆಧೇಯವಚನ – ಮಾತಿನಲ್ಲಿ ಚತುರ
- ಆಧೋರಣ – ಆನೆಯ ಸವಾರ; ಮಾವುತ
- ಆನ್ – ಎದುರಾಗು; ಎದುರಿಸು; ಧರಿಸು; ಒಡ್ಡು
- ಆನಂದಂಗಿಡು – ಸಂತೋಷ ಇಲ್ಲವಾಗು
- ಆನಂದನ – ಆನಂದ ತರುವ
- ಆನಂದನಾಟಕ – ಹರ್ಷ ತರುವ ನಾಟಕ
- ಆನಂದನೃತ್ಯ – ಆನಂದದಿಂದ ಮಾಡುವ ನೃತ್ಯ
- ಆನಂದಭೇರಿ – ಸಂತೋಷಸೂಚಕವಾಗಿ ಹೊಡೆಸುವ ಭೇರಿ
- ಆನಂದಮೂರ್ತಿ – ಆನಂದಸ್ವರೂಪಿ
- ಆನಂದವಸನ – ಮುಟ್ಟಿನಿಂದ ಕೆಂಪಾದ ಬಟ್ಟೆ
- ಆನಂದವಸ್ತ್ರ – ಆನಂದವಸನ
- ಅನಂದಾಶ್ರು(ಜಲ) – ಆನಂದದ ಕಣ್ಣೀರು
- ಆನಕ – ಭೇರಿ; ಗುಡುಗು
- ಆನಕದುಂದುಭಿ – ಶ್ರೀಕೃಷ್ಣನ ತಂದೆ ವಸುದೇವ
- ಆನಕಧ್ವನಿ – ಭೇರಿ, ತಮಟೆ ಮುಂತಾದವುಗಳ ನಿನಾದ
- ಆನಕಧ್ವಾನ – ಆನಕಧ್ವನಿ
- ಆನಕರವ – ಆನಕಧ್ವನಿ
- ಆನತಜನ – ನಮಸ್ಕರಿಸಿದ, ಶರಣಾದ ಜನ
- ಆನತಭುವನ – ಎಲ್ಲರಿಂದಲೂ, ಇಡೀ ಲೋಕದಿಂದ ಗೌರವಕ್ಕೊಳಗಾದವನು
- ಆನತಮಸ್ತಕ – ತಲೆಬಾಗಿದ
- ಆನತಮುಖಿ – ಮುಖ ತಗ್ಗಿಸಿದ
- ಆನತಮೂರ್ಧ – ಆನತಮಸ್ತಕ
- ಆನತವದನೆ – ಮುಖ ತಗ್ಗಿಸಿದವಳು
- ಆನನ – ಬಾಯಿ; ಮುಖ
- ಅನಮ್ರಾಮರ – ದೇವತೆಗಳಿಂದ ನಮಸ್ಕøತನಾದವನು
- ಆನಿಸು – ಜೋಡಿಸು; ಒರಗಿಸು
- ಆನೀಕ – ಸಂಕುಲ
- ಆನೀಕಿನಿ – ಅಕ್ಷೌಹಿಣಿಯ ಹತ್ತನೇ ಒಂದು ಭಾಗ
- ಆನುಕೂಲಿಕ – ಅನುಕೂಲಕರ
- ಆನುವಂಶ – ವಂಶಪರಂಪರೆಯಿಂದ ಬಂದ
- ಆನುಷಂಗಿಕ(ಫಲ) – ಮುಖ್ಯ ವಿಷಯಕ್ಕೆ ಅಂಟಿಕೊಂಡು ಬರುವ; ಪ್ರಾಸಂಗಿಕವಾದ (ಫಲ)
- ಆನೂಪಕ್ಷೇತ್ರ – ಸುತ್ತ ಸಮೃದ್ಧವಾಗಿ ನೀರಿರುವ ಸ್ಥಳ
- ಆನೆಗಂಬ – ಆನೆಯನ್ನು ಕಟ್ಟುವ ಕಂಬ
- ಆನೆಗದುಪು – ಆನೆಗಳ ಸಮೂಹ
- ಆನೆಗೊಲೆ – ಆನೆಗಳನ್ನು ಕೊಲ್ಲುವುದು; ದೊಡ್ಡ ಕೊಲೆ
- ಆನೆಯಾಳ್ – ಆನೆಬಲದ ವ್ಯಕ್ತಿ
- ಆನೆವಸದನಂಗೊಳ್ – ಆನೆಯಂತೆ ಸಿಂಗರಿಸಿಕೊ
- ಆನೆವಾಂಗು – ಆನೆಯನ್ನು ಪಳಗಿಸುವ ವಿದ್ಯೆ
- ಆನೆವಿನ್ನಾಣಿ – ಗಜಶಾಸ್ತ್ರ ಬಲ್ಲವನು
- ಆನೆವೆಣ – ಆನೆಯ ಹೆಣ
- ಆನೆಸಾಲೆ – ಗಜಶಾಲೆ
- ಆಪಗಾ – ನದಿ
- ಆಪಣ – ಅಂಗಡಿ
- ಆಪತ್ತುವಡು – ಕಷ್ಟಪಡು
- ಆಪತ್ಪ್ರತೀಕಾರ – ಆಪತ್ತಿಗೆ ಪರಿಹಾರ
- ಆಪದ್ವಿನೀತ – ಕಷ್ಟಕಾಲದಲ್ಲಿ ವಿನೀತನಾಗುವ
- ಆಪನ್ನ – ಆಪತ್ತಿಗೆ ಗುರಿಯಾದ
- ಆಪರಾಹ್ಣಿಕಕ್ರಿಯೆ – ಅಪರಾಹ್ನಕರ್ಮ
- ಆಪಾಂಡು – ನಸುಬಿಳುಪಿನ
- ಆಪೀಡ – ಒತ್ತುವುದು; ತಲೆಯ ಆಭರಣ
- ಆಪೂರ – ಚೆನ್ನಾಗಿ ತುಂಬಿದ
- ಆಪೋಶನ – ಊಟದ ಮೊದಲು ಮತ್ತು ಕೊನೆಗೆ ಮಂತ್ರಪೂರ್ವಕವಾಗಿ ಕುಡಿಯುವ ನೀರು
- ಆಪೋಶಿಸು – ಹೀರಿಬಿಡು
- ಆಪ್ತ – ಅಷ್ಟಾದಶದೋಷರಹಿತನಾದವನು
- ಆಪ್ತಚರ – ನಂಬಿಕಸ್ಥ ಸೇವಕ
- ಆಪ್ತವರ್ತಿ – ಆತ್ಮೀಯ
- ಆಪ್ತಾಗಮ – ವೇದ, ಶಾಸ್ತ್ರ
- ಆಪ್ಯಾಯನ – ಸುಖ; ತೃಪ್ತಿ
- ಆಪ್ಯಾಯನಕಾರಿ – ಸುಖ ತರುವ; ಹಿತಕಾರಿ
- ಆಪ್ಯಾಯಮಾನ – ಹಿತಕರವಾದ
- ಆಬಾಲಗೋಪಾಲ – ಮಕ್ಕಳಿಂದ ಹಿಡಿದು ಗೋಪಾಲಕರವರೆಗೆ; ಸಮಸ್ತ
- ಆಭ – ಸಮಾನ; ಹೋಲುವ; ಕಾಂತಿ
- ಆಭಾಸ – ಕಾಂತಿ; ಭ್ರಾಂತಿ
- ಆಭಿಚಾರ – ಶೂನ್ಯ ಮಾಟ
- ಆಭಿಜಾತ್ಯ – ಸತ್ಕುಲದ; ಕುಲೀನತೆ
- ಆಭಿಯೋಗ್ಯ – (ಜೈನ) ದೇವತೆಗಳಲ್ಲಿ ಒಂದು ಪಂಗಡ
- ಆಭೀಲ(ಳ) – ಭಯಂಕರವಾದ
- ಆಭೀಲ(ಳ)ತೆ – ಭಯಂಕರತೆ
- ಆಭೋಗ – ಸುಖ; ಪರಿಪೂರ್ಣತೆ; ಹರಹು; ಹಾವಿನ ಹೆಡೆ
- ಆಮಂತ್ರಣಂಗೆಯ್ – ಆಹ್ವಾನಿಸು
- ಆಮಂತ್ರಿಸು – ಆಹ್ವಾನಿಸು
- ಆಮಯ – ರೋಗ
- ಆಮಯಮಂದಿರ – ರೋಗಗೃಹ; ರೋಗದ ನೆಲೆ
- ಆಮಲ(ಳ)ಕ – ನೆಲ್ಲಿಗಿಡ, ಕಾಯಿ
- ಆಮಲ(ಳ)ಕಪ್ರಮಾಣ – ನೆಲ್ಲಿಕಾಯಿ ಗಾತ್ರ
- ಆಮಿಷ – ಮಾಂಸ; ಲಂಚ; ಭೋಗಸಾಮಗ್ರಿ
- ಆಮೀಲನ – ಮುಚ್ಚುವುದು
- ಆಮುತ್ರಿಕ – ಆಮುಷ್ಮಿಕ; ಬೇರೆ ಲೋಕದ
- ಆಮೂಲಚೂಲ – ಬೇರಿನಿಂದ ಹಿಡಿದು ತುದಿಯವರೆಗೆ
- ಆಮೋದ – ಸಂತೋಷಕರ; ಪರಿಮಳ
- ಆಮೋದಚಿತ್ತ – ಸಂತಸಗೊಂಡ ಮನಸ್ಸು
- ಆಮೋದಿತ – ಸಂತಸಗೊಂಡ; ಸುವಾಸಿತ
- ಆಮ್ನಾಯ – ಸಂಪ್ರದಾಯ; ಪರಂಪರಾನುಗತ; ವಂಶ
- ಆಮ್ರ – ಮಾವು, ಮರ ಮತ್ತು ಹಣ್ಣು
- ಆಮ್ರರಸ – ಮಾವಿನ ಹಣ್ಣಿನ ರಸ
- ಆಮ್ರವನ – ಮಾವಿನ ತೋಪು
- ಆಮ್ರಾಯ – ಒಂದು ಬಗೆಯ ಹೂ
- ಆಮ್ರೇಡಿತ – ಪುನರುಕ್ತಿ
- ಆಯ್ – ಆರಿಸು; ಮನಸ್ಸಿಗೆ ಬಂದದ್ದನ್ನು ಮಾತ್ರ ತೆಗದುಕೊ
- ಆಯ – ಪರಾಕ್ರಮ; ಐಶ್ವರ್ಯ; ಪರಿಮಿತಿ; ಕ್ರಮ; ಸೌಕರ್ಯ; ಸಾಮಥ್ರ್ಯ; ಆಳ; ಏಳಿಗೆ; ವಿಶಾಲ
- ಆಯಕಾರ – ಕೆಲಸದ ಮರ್ಮ ತಿಳಿದವನು
- ಆಯತ – ಅಗಲವಾದ; ಉದ್ದವಾದ; ಆಧಿಕ್ಯ
- ಆಯತಕರ – ನೀಳ ತೋಳಿನವನು
- ಆಯತಕೀರ್ತಿ – ಹರಡಿದ ಕೀರ್ತಿ
- ಆಯತನ – ಮನೆ; ದೇವಾಲಯ
- ಆಯತಬಾಹು – ಆಯತಕರ
- ಆಯತವೃತ್ತ – ದೀರ್ಘವೃತ್ತ
- ಆಯತಿ – ಸಂಯಮ; ಸಾಮಥ್ರ್ಯ; ಮಹಿಮೆ
- ಆಯತಿಕೆಗೆಡು – ಗೌರವ, ಯೋಗ್ಯತೆ ಕೆಡಿಸಿಕೊ
- ಆಯತಿಕ್ಕೆ – ಆಯತಿಕೆ, ಪ್ರಭಾವ, ಗೌರವ
- ಆಯತ್ತ – ಅಧೀನ; ಸನ್ನದ್ಧ
- ಆಯಸ – ಬಳಲಿಕೆ; ಕಬ್ಬಿಣಕ್ಕೆ ಸಂಬಂಧಿಸಿದ; ಕಬ್ಬಿಣದ ಆಯುಧ
- ಆಯಸಪಿಂಡ – ಕಬ್ಬಿಣದ ಗುಂಡು
- ಆಯಾತಪ್ರಯಾತ – ಬರುವ ಮತ್ತು ಹೋಗುವ
- ಆಯಾಮ – ಉದ್ದ; ನೀಳತೆ
- ಆಯಾಸಂಬಡು – ಕಷ್ಟಪಡು
- ಆಯಾಸಿ – ದಣಿದವನು
- ಆಯಿಲ – ಕೊಳ್ಳೆ; ರೋಗ
- ಆಯಿಲಂಗೊಳ್ – ಕೊಳ್ಳೆಹೊಡೆ
- ಆಯಿಸ – ಜೀವಿತಾವಧಿ
- ಆಯು – ಜೀವಿತಾವಧಿ
- ಆಯುಧಶಾಲೆ – ಶಸ್ತ್ರಾಸû್ರಗಳನ್ನಿಡುವ ಕಟ್ಟಡ
- ಆಯುರವಧಿ – ಜೀವಿತಾವಧಿ
- ಆಯುರ್ದಶೆ – ಆಯುಸ್ಸಿನ ಸ್ಥಿತಿ
- ಆಯುರ್ಮಿತಿ – ಆಯುಸ್ಸಿನ ಮಿತಿ
- ಆಯುವೊಯ್ – ಜೀವತುಂಬು
- ಆಯುಶ್ಚ್ಯುತಿ – ಆಯುಸ್ಸಿನ ನಾಶ
- ಆಯುಃಕರ್ಮ – (ಜೈನ) ಆಯುಸ್ಸಿಗೆ ಕಾರಣವಾದ ಒಂದು ಕರ್ಮ
- ಆಯುಷ್ಯ – ದೀರ್ಘಾಯುಸ್ಸು ಕೊಡತಕ್ಕ
- ಆಯುಷ್ಯಂಗಟ್ಟು – ಆಯುಸ್ಸನ್ನು ಕಟ್ಟಿಕೊ
- ಆಯುಷ್ಯಾಂತ – ಆಯುಸ್ಸಿನ ಕೊನೆ
- ಅಯೋಗ – ಸೇರುವೆ, ಜೋಡಣೆ; ನೊಗಕ್ಕೆ ಹೂಡಿದ ಎತ್ತು
- ಆಯೋಗಂಗೊಳ್ – ಸೇರ್ಪಡೆಯಾಗು
- ಆಯೋಧನ – ಯುದ್ಧ
- ಆಯ್ಕನೆ – ಗಾಢವಾಗಿ ಎಂಬರ್ಥದ ಒಂದು ಅವ್ಯಯ
- ಆಯ್ಕುಳಿ – ಆರಿಸಿಕೊಳ್ಳುವ ಸ್ವಭಾವದವನು
- ಆಯ್ಕುಳಿಗೊಳ್ – ಆರಿಸಿಕೊ
- ಆರ್ – ಗಟ್ಟಿಯಾಗಿ ಕೂಗು; ಅರಚು; ತೃಪ್ತಿಪಡು; ತುಂಬು; ನೊಗ ಎತ್ತುಗಳನ್ನು ಹೂಡಿದ ನೇಗಿಲು
- ಆರಂಬ – ಬೇಸಾಯ
- ಆರಂಬಂಗೆಯ್ – ಆರಂಬಗೈ; ಬೇಸಾಯ ಮಾಡು
- ಆರಂಭ – ಮೊದಲು; ಬೇಸಾಯ; ಹಿಂಸೆ
- ಆರಂಭಕ – ಮೊದಲು ಮಾಡುವವನು; (ಜೈನ) ಹನ್ನೊಂದು ಬಗೆಯ ಶ್ರಾವಕರಲ್ಲಿ ಒಬ್ಬ
- ಆರಕ್ತ – ಕೆಂಪಗಿರುವ
- ಆರಡಿ – ವೈರ; ಹಿಂಸೆ
- ಆರಡಿಗೊಳ್ – ಸೂರೆಗೊಳಗಾಗು
- ಆರಣವಿಮಾನ – (ಜೈನ) ಆರಣವೆಂಬ ಕಲ್ಪದ ಇಂದ್ರನ ವಿಮಾನ
- ಆರಣೀಂದ್ರ – (ಜೈನ) ಆರಣವೆಂಬ ಸ್ವರ್ಗದ ಇಚಿದ್ರ
- ಆರತ – ಮೃದುಸ್ವಭಾವದ
- ಆರಭಟೀ – ಪರಿಶೀಲಿಸು; ಮಾಯೆ; ಇಂದ್ರಜಾಲ; ವಿವಿಧ ಭಾವಗಳನ್ನು ಅಭಿನಯಿಸುವ ಕ್ರಮ
- ಆರನಾಲ(ಕ) – ಅಂಬಲಿ
- ಆರಮೆ(ವೆ) – ಉದ್ಯಾನ
- ಆರಯ್ – ಹುಡುಕು; ವಿಚಾರಿಸು; ವಿಮರ್ಶಿಸು
- ಆರಯ್ಕೆ – ವಿಚಾರಮಾಡುವುದು; ವಿಮರ್ಶೆ
- ಆರಾಜಿತೆ – ಅಲಂಕೃತಗೊಂಡವಳು
- ಆರಾತಿ – ಹತ್ತಿರದ
- ಆರಾತೀಯ – ಹಿಂದಿನ; ದೂರದ
- ಆರಾಧನೆ – ಪ್ರಜೆ; (ಜೈನ) ಅವ್ಮ್ಯಜ್ಞಾನ ದರ್ಶನ,
- ಚಾರಿತ್ರ, ತಪಸ್ಸುಗಳ ಸಾಧನೆ
- ಆರಾಧಿಸು – ಪ್ರಜೆಸು; ಓಲಯಸು
- ಆರಾಧ್ಯ – ಪೂಜನೀಚಿiÀು
- ಆರಾಮ – ಸುಖಕರವಾದ; ಆರವೆ
- ಆರಾವ – ಶಬ್ದ, ಧ್ವನಿ
- ಆರುಷ್ಕರ – ಗೇರುಬೀಜ
- ಆರುರುಕ್ಷು – ಮೇಲೇರುವ ಆಸೆಯುಳ್ಳವನು
- ಆರುಹತ – ಜೈನಮತೀಯ
- ಆರೂಢ – ಕೈಕೊಂಡ; ಹತ್ತಿದ
- ಆರೂಢತಪ – ತಪಸ್ಸನ್ನು ಕೈಗೊಂಡವನು; ಮಾಘಮಾಸವನ್ನು ಹಿಡಿದವನು
- ಆರೂಢಪ್ರತಿಜ್ಞ – ಪ್ರತಿಜ್ಞೆಯನ್ನು ಕೈಗೊಂಡವನು
- ಆರೂಢವಿದ್ಯೆ – ಪ್ರಾಣಿಗನ್ನು ಪಳಗಿಸಿ ಸವಾರಿ ಮಾಡುವ ವಿದ್ಯೆ
- ಆರೂಢಸರ್ವಜ್ಞ – ಆರೂಢವಿದ್ಯೆಯಲ್ಲಿ ಪರಿಣತ
- ಆರೂಢೆ – ಮೇಲೇರಿದವಳು
- ಆರೆ – ಗೊರಸಿನ ಹಿಂಭಾಗ; ಅಂಕುಶ
- ಆರೆಕಾ(ಗಾ) – ಆರೆಯನ್ನು ಹಿಡಿದ ಮಾವತಿಗ
- ಆರೆಗೊಂಬು – ಭಲ್ಲೆ; ಈಟಿ
- ಆರೋಗಣೆಗೆಯ್ – ಊಟಮಾಡು
- ಆರೋಗಿಸು – ಆರೈಸು; ಊಟಮಾಡು
- ಆರೋಪ – ಏರಿಸು
- ಆರೋಪಿತ – ಹೆದೆಯೇರಿಸಿದ
- ಆರೋಹಕ – ಸವಾರ
- ಆರೋಹಕತನ – ಸವಾರಿ
- ಆರೋಹಕೌಶಲ – ಆರೋಹಕನ ಕುಶಲತೆ
- ಆರೋಹಣ – ಹತ್ತುವುದು; ಮೆಟ್ಟಿಲು; ಏಣಿ
- ಆರೋಹಿಸು – ಹತ್ತು, ಏರು
- ಆರ್ಕಿ – ಸೂರ್ಯನ ಮಗ; ಶನಿ
- ಆರ್ಗೆ – ಯಾರಿಗೆ (ಹುಟ್ಟಿದವನು/ಳು), ಯಾರ ಮಗ(ಳು)
- ಆರ್ಜವ – ಪ್ರಾಮಾಣಿಕತೆ; ಸಮಚಿತ್ತತೆ; ವಿನಮ್ರಸ್ವಭಾವದ
- ಆರ್ಜಿಕೆ – ಕಂತಿ
- ಆರ್ಜಿಸು – ಸಂಪಾದನೆ ಮಾಡು
- ಆರ್ತ – ಸಮರ್ಥ; ದುಃಖಿತ; ವಿಪತ್ತು
- ಆರ್ತಧ್ಯಾನ – (ಜೈನ) ಇಷ್ಟವಾದದ್ದು ದೂರವಾದೀತೆಂಬ ಮತ್ತು ಅದರ ಬಗೆಗಿನ ಆಕಾಂಕ್ಷೆಯಿಂದ ಕೂಡಿದ ಚಿಂತೆ
- ಆರ್ತರೌದ್ರ – (ಜೈನ) ಕಷ್ಟಕ್ಕೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳುವ ಚಿಂತೆ
- ಆದ್ರ್ರ – ಒದ್ದೆಯಾದ
- ಆದ್ರ್ರಕ – ಹಸಿ ಶುಂಠಿ
- ಆದ್ರ್ರಭಾವ – ತೇವವಾಗಿರುವಿಕೆ
- ಆದ್ರ್ರಮತಿ – ಮೃದುಹೃದಯ
- ಆದ್ರ್ರಹೃದಯ – ಆದ್ರ್ರಮತಿ
- ಆದ್ರ್ರಾಂತರಂಗ – ಆದ್ರ್ರಹೃದಯ
- ಆದ್ರ್ರಾಶಯ – ಆದ್ರ್ರಹೃದಯ
- ಆದ್ರ್ರೀಕರಣ – ನೆನೆಸುವುದು
- ಆರ್ಪಳಿ – ಆರ್ಪು ಅಳಿ, ಶಕ್ತಿಗುಂದು
- ಆರ್ಪು – ಸಾಮಥ್ರ್ಯ; ಪರಾಕ್ರಮ; ಗಟ್ಟಿಯಾದ ಕೂಗು; ಗರ್ಜನೆ
- ಆರ್ಪುಗುಂದು – ಆರ್ಪಳಿ
- ಆರ್ಪುಗೆಯ್ತ – ಸಾಹಸಕೃತ್ಯ
- ಆರ್ಭಟೆ – ಗರ್ಜನೆ; ಗಟ್ಟಿಯಾದ ಕೂಗು
- ಆರ್ಮ – ನೆಲೆ; ರಕ್ಷಣೆ
- ಆರ್ಯ(ಷಟ್)ಕರ್ಮ – ಉತ್ತಮನಾದವನ ಕಾರ್ಯ; (ಜೈನ) ಶ್ರಾವಕರು ಅನುಸರಿಸಬೇಕಾದ
- ಆರು ಕರ್ಮಗಳು: ಸ್ವಾಧ್ಯಾಯ, ಸಂಯಮ, ತಪ, ಇಜ್ಯಾ, ವಾರ್ತಾ, ದತ್ತಿ; ಜೀವನೋಪಾಯದ ಕರ್ಮಗಳು: ಅಸಿ, ಮಸಿ, ವಿದ್ಯೆ, ವಾಣಿಜ್ಯ, ಶಿಲ್ಪ, ಕೃಷಿ
- ಆರ್ಯಕೆ – ಕಂತಿ
- ಆರ್ಯಚರಿತ – ಉತ್ತಮ ನಡವಳಿಕೆಯವನು
- ಆರ್ಯಪ್ರಣುತ – ಆರ್ಯರಿಂದ ಅಥವಾ ಹಿರಿಯರಿಂದ ಹೊಗಳಲ್ಪಟ್ಟ
- ಆರ್ಯವಿಮುಖ – ಹಿರಿಯರನ್ನು ಕಡೆಗಣಿಸುವವನು
- ಆಯೇವೇಷ – ಒಳ್ಳೆಯ ಉಡುಪು ಧರಿಸಿದವನು
- ಆರ್ಯಷಟ್ಕರ್ಮ – ನೋಡಿ, ಆರ್ಯಕರ್ಮ
- ಆರ್ಯಾವೃತ್ತ- ಆಯೇ ಎಂಬ ಛಂದಸ್ಸು
- ಆರ್ಯಿಕೆ – ಗೌರವಾರ್ಹಳು, ಕಂತಿ
- ಆರ್ಯೆ – ಒಂದು ಪದ್ಯಜಾತಿ
- ಆರ್ಯೋತ್ತಮ – ಆರ್ಯರಲ್ಲಿ ಶ್ರೇಷ್ಠನಾದವನು
- ಆರ್ಷ – ಋಷಿಸಂಬಂಧಿ; ಪ್ರಾಚೀನವಾದ
- ಆರ್ಹಂತ್ಯ – ಅರ್ಹಂತನಿಗೆ ಸಂಬಂಧಪಟ್ಟ; (ಜೈನ) ಮೋಕ್ಷ; ಅರ್ಹನಾದ ಪದವಿ
- ಆರ್ಹಂತ್ಯಕ್ರಿಯೆ – (ಜೈನ) ತೀರ್ಥಂಕರತ್ವ
- ಆರ್ಹಂತ್ಯಧರ್ಮ – ಜೈನಧರ್ಮ
- ಆರ್ಹಂತ್ಯಲಕ್ಷ್ಮಿ – ಮೋಕ್ಷಲಕ್ಷಮಿ
- ಆಲ್ – ಆಲು, ಗಟ್ಟಿಯಾಗಿ ಕೂಗು
- ಆಲ -ಸುಳ್ಳು
- ಆಲ(ಳ)ಂಬ(ನ) – ಆಶ್ರಯ; ಆಧಾರ
- ಆಲಜಾಲ – ಸುಳ್ಳಿನ ಕಂತೆ
- ಆಲ(ಲಾ)ಪಿಸು – ಮತಾಡು; ಸಂಭಾಷಣೆಗೈ
- ಆಲಯ್ಸು – ಕಿವಿಗೊಟ್ಟು ಕೇಳು
- ಆಲವಟ್ಟ – ಬೀಸಣಿಗೆ
- ಆಲವಾಲ – ಮರದ ಸುತ್ತಣ ಪಾತಿ
- ಆಲವಾಲಜಲ – ಪಾತಿಯ ನೀರು
- ಆಲಾ(ಳಾ)ನ (ಸ್ತಂಭ) – ಆನೆಯನ್ನು ಕಟ್ಟುವ ಕಂಬ
- ಆಲಾ(ಳಾ)ಪ – ಮಾತು
- ಆಲಿ – ಕಣ್ಗುಡ್ಡೆ; ಕಣ್ಣು; ಆಲಿಕಲ್ಲು; ಗೆಳತಿ; ಗುಂಪು
- ಆಲಿಂಗನಗೆಯ್ – ತಬ್ಬಿಕೊ
- ಆಲಿಂಗಿಸು – ಆಲಂಗಿಸು, ಅಪ್ಪಕೊ
- ಆಲಿಕಲ್ – ಗಟ್ಟಿಯಾದ ಮಳೆಯ ಹನಿ
- ಆಲಿಕೋ(ಗೋ)ಡು – ಆಲಿಕಲ್ಲಿನಂತೆ ತಣ್ಣಗಾಗು
- ಆಲಿನೀರ್ – ತಣ್ಣನೆಯ ನೀರು; ಮಂಜಿನ ನೀರು; ಕಣ್ಣೀರು
- ಆಲಿನೀರ್ವನಿ – ತನ್ಣನೆಯ ನೀರ ಹನಿ; ಕಂಬನಿ
- ಆಲಿವರಲ್ – ಆಲಿಕಲ್ಲು
- ಆಲಿವೆಳಗ – ತಂಪು ಕಾಂತಿಯುಳ್ಳವನು, ಚಂದ್ರ
- ಆಲಿಸು – ಗಮನವಿರಿಸಿ ಕೇಳು; ನಿರೀಕ್ಷಿಸು; ಯುದ್ಧಮಾಡಲು ನಿಲ್ಲುವ ಕ್ರಮ
- ಆಲೀಢ – ರುಚಿ ನೋಡಿದ, ತಿಂದ; ಬಲ ಮೊಳಕಾಲನ್ನು ಮುಂದೆ ಚಾಚಿ ಎಡಗಾಲನ್ನು ಹಿಂದಿಟ್ಟು ನಿಲ್ಲುವುದು
- ಆಲೇಖ್ಯಗತೆ – ಚಿತ್ರಿತಳಾದವಳು
- ಆಲೇಪನ – ಬಳಿಯುವಿಕೆ
- ಅಲೋಕ – ನೋಡಿವುದು; ಕಾಂತಿ; ಜ್ಞಾನ
- ಆಲೋಕಿಸು – ನೋಡಿ
- ಆಲೋಚನೆ – ನೋಡಿವುದು; ವಿಚಾರ ಮಾಡುವುದು
- ಆಲೋಡನೆ – ಕಲಕುವುದು
- ಆಲೋಡಿಸು – ಕಲಕು
- ಆಲೋಲ – ಅಲುಗಾಡುವ
- ಆವಗಂ – ಯಾವಾಗಲೂ; ಬಹಳವಾಗಿ
- ಆವ(ವಿ)(ವು)ಗೆ – ಮಡಕೆ ಸುಡುವ ಕುಂಬಾರನ ಒಲೆ
- ಆವಗೆಗಿಚ್ಚು – ಆವಿಗೆಯ ಬೆಂಕಿ
- ಆವಗೆಯುರಿ – ಆವಗೆಗಿಚ್ಚು
- ಆವಡಿ – ತೊಂದರೆ, ಕಷ್ಟ
- ಆವಣ – ಅಂಗಡಿ
- ಆವರಿಸು – ಸುತ್ತುವರಿ; ವ್ಯಾಪಿಸು; ಮುಚ್ಚು; ದೇರು; ವಿಮರ್ಶಿಸು
- ಆವರ್ಜ – ಬಾಗುವುದು
- ಆವರ್ಜಿಸು – ಸೆಳೆದುಕೋ; ಬಗು
- ಆವರ್ತಗರ್ತ – ಸುಳಿಯ ಮಡು
- ಆವರ್ತನ – ಸುಳಿ; ಸುತ್ತುವುದು
- ಆವರ್ತನಸಿದ್ಧಿ – ಸುಳಿಯಂತಿರುವುದು; ಸುಳುಗಳನ್ನು ಹೊಂದಿರುವುದು
- ಆವರ್ತನಾಭಿ – ಸುರುಳಿಯಾದ ಹೊಕ್ಕುಳು
- ಆವರ್ತಮಾನ – ಸುತ್ತುತ್ತಿರುವ
- ಆವರ್ತಯುಕ್ತ – ಸುಳಿಯಿಂದ ಕೂಡಿದ
- ಆವರ್ತಿನಿ – (ಜೈನ) ಒಂದು ವಿದ್ಯೆ
- ಆವರ್ತಿಸು – ವ್ಯಾಪಿಸು; ಮರಳಿ ಬರುವಂತೆ ಮಾಡು
- ಆವಲ್(ಲು) – ಕೆಂದಾವರೆ
- ಆವಲಲರ್ – ಆವಲು ಹೂವು
- ಆವಲಿ(ಳಿ) – ಗುಂಪು; ಸಾಲು; ಕುಲ; (ಜೈನ) ಕಾಲದ ಸೂಕ್ಷ್ಮವಾದ ಒಂದು ಪ್ರಮಾಣ
- ಆವಲಿ(ಳಿ)ಕ – ಆವಲಿ
- ಆವಲಿತ – ಹೊರಳಿದ; ತಿರುಗಿದ
- ಆವಲ್ಗೊಳ – ಕೆಂದಾವರೆಯ ಕೊಳ
- ಆವಸಥ – ವಾಸಸ್ಥಾನ; ಮನೆ
- ಆವಹ – ಒದಗಿಸುವ; ಉಂಟುಮಾಡುವ; ಕೂಡಿದ
- ಆವಹನವಿಧಾನ – ಬರಮಾಡಿಕೊಳ್ಳು ಕ್ರಮ; ಆವಾಹನೆಯ ಕ್ರಮ
- ಆವಾಪ – ಬಿತ್ತುವುದು; ಪಾತಿ; ಕಂಕಣ
- ಆವಾಪ್ತಿ – ಸಿದ್ಧಿ
- ಆವಾಲ(ಳ) – ಮರದ ಸುತ್ತಲಿನ ಪಾತಿ
- ಆವಾಸ – ಮನೆ
- ಆವಾಹನೆಗೆಯ್ – ಆವಾಹನೆಗೈ; ಆವಾಹಿಸು
- ಆವಿದ್ಧ – ತೂತುಮಾಡಿದ; ವಕ್ರವಾದ
- ಆವಿರ್ಭಾವ – ಉಂಟಾಗುವುದು
- ಆವಿರ್ಭಾವಿತ – ಉಂಟಾದ
- ಆವಿಲ(ಳ) – ಕದಡಿದ; ಒಂಡು; ಮಲಿನ
- ಆವಿಲೆ – ಕೂಡಿದವಳು
- ಆವಿಷ್ಕರಣ – ಪ್ರತ್ಯಕ್ಷವಾಗುವುದು; ಸ್ಪಷ್ಟಪಡಿಸುವುದು
- ಆವಿಷ್ಕøತ – ಪರಿಷ್ಕರಣೆಗೊಂಡ; ಸ್ಪಷ್ಟಗೊಂಡ
- ಆವಿಷ್ಟೆ – ಭೂತಪೀಡಿತೆ
- ಆವಿಳ – ಕಲುಷಿತವಾದ
- ಆವೀಕ್ಷಿತ – ನೋಡಿದ
- ಆವು – ಹಸು
- ಅವುಕ – ತಂದೆ
- ಆವುಜ(ಜೆ) – ಒಂದು ಚರ್ಮವಾದ್ಯ
- ಆವುಜಿಗ – ಆವುಜೆ ಬಾಜಿಸುವವನು
- ಆವುತಿ – ಒಂದು ಬಗೆಯ ಅಯುಧ
- ಆವುದು – ಯಾವುದು, ಏನು, ಎಲ್ಲಿಯದು
- ಆವೃತ – ಸುತ್ತುವರಿಯಲ್ಪಟ್ಟ; ಹೊದಿಸಲ್ಪಟ್ಟ
- ಆವೆ – ಆಮೆ, ಕೂರ್ಮ
- ಆವೇಗ – ತ್ವರೆ; ಸಂಭ್ರಮ; ಉದ್ವೇಗ
- ಆವೇಶ – ರೋಷ; ಉಂಟಾಗುವಿಕೆ
- ಆವೇಷ್ಟಿಸು – ಸುತ್ತುವರಿ; ಆವರಿಸು
- ಆವ್ಯಾನ – ಮುಚ್ಚಿದ; ಆವೃತ
- ಆಶಂಕಿತಹೃದಯ – ಶಂಕೆಗೊಳಗಾದವನು
- ಆಶಂಕೆ – ಸಂದೇಹ
- ಆಶಂಕೆಗೊಳ್ – ಸಂದೇಹಗೊಳ್ಳು; ಗಾಬರಿಯಾಗು
- ಆಶಯ – ಅಭಿಪ್ರಾಯ; ಭಾವನೆ
- ಆಶಾ – ದಿಕ್ಕು
- ಆಶಾಂತರಾಲ(ಳ) – ದಿಕ್ಕುಗಳ ಮಧ್ಯಭಾಗ
- ಆಶಾಂಬರ – ದಿಕ್ಕುಗಳು ಮತ್ತು ಆಕಾಶ; ದಿಗಂಬರ
- ಆಶಾಕರಟಿ – ದಿಗ್ಗಜ
- ಆಶಾಕರಿಕಲಭ – ದಿಕ್ಕರಿಮರಿ
- ಆಶಾಗಜ – ಆಶಾಕರಟಿ
- ಆಶಾಚಕ್ರ – ದಿಙ್ಮಂಡಲ
- ಆಶಾದಂತಿ – ದಿಕ್ಕರಿ
- ಆಶಾದೇಶ – ದಿಕ್ಪ್ರದೇಶ
- ಆಶಾಧೀನ – ಆಸೆಗೆ ಅಧೀನವಾದ; ದಿಕ್ಕುಗಳಿಗೆ ಒಳಪಟ್ಟ
- ಆಶಾರುಚಿ – ದಿಕ್ಕುಗಳ ಕಾಂತಿ; ಆಸೆಗಳನ್ನು ಹೊಂದಿದವನು
- ಆಶಾವಸನ – ದಿಕ್ಕನ್ನೇ ಬಟ್ಟೆಯಾಗುಳ್ಳವನು; ದಿಗಂಬರ; ಜಿನ
- ಆಶಾವಳಯಿತ – ದಿಕ್ಕುಗಳಿಂದ ಸುತ್ತುವರಿದ
- ಆಶಿ – ಹಾವಿನ ಹಲ್ಲು
- ಆಶೀರ್ನಿನಾದ – ಆಶೀರ್ವಾದದ ಧ್ವನಿ
- ಆಶೀರ್ವಾದಂಗೊಡು – ಹರಸು
- ಆಶೀರ್ವಾದಪರ – ಆಶೀರ್ವಾದದಲ್ಲಿ ಆಸಕ್ತ
- ಆಶೀರ್ವಾದಪ್ರಿಯ – ಆಶೀರ್ವಾದಪರ
- ಆಶೀವಿಷ – ಹಾವು
- ಆಶೀಸ್ತವ – ಮಂಗಳಸ್ತೋತ್ರ
- ಆಶು – ಬೇಗನೆ; ಜಾಗ್ರತೆ; ವೇಗ
- ಆಶುಗ – ವಾಯು, ಬಾಣ
- ಆಶುಗತ್ವ – ಶೀಘ್ರತೆ
- ಆಶುಗಮನ – ಬೇಗ ಸಾಗುವುದು, ಬಾಣ
- ಆಶುಗಮಿತ್ರ – ಬೆಂಕಿ
- ಆಶುಗಾಶನ – ಗಾಳಿಯನ್ನೇ ಆಹಾರವಾಗಿ ಉಳ್ಳದ್ದು, ಹಾವು
- ಆಶುಗಾಸನ – ಬಾಣಾಸನ, ಬಿಲ್ಲು
- ಆಶುಶುಕ್ಷಣಿ – ಬೆಂಕಿ, ಅಗ್ನಿ
- ಆಶೆವಡು – ಬಯಸು, ಇಚ್ಛಿಸು
- ಆಶೇಭ – ಆಶಾ+ಇಭ, ದಿಕ್ಕರಿ
- ಆಶ್ಚರ್ಯ – ಸೋಜಿಗ
- ಆಶ್ಚರ್ಯಭೂತ – ವಿಸ್ಮಯವುಂಟುಮಾಡುವ
- ಆಶ್ರಯಣ – ಆಶ್ರಯ, ಆಸರೆ
- ಆಶ್ರಯಾಶ – ಆಶ್ರಯದಾತನನ್ನೇ ನುಂಗುವುದು, ಅಗ್ನಿ
- ಆಶ್ರ(ಸ್ರ)ವ – ವಿಧೇಯ; ಪ್ರವಾಹ; (ಜೈನ) ಸಪ್ತತತ್ವಗಳಲ್ಲಿ ಒಂದು; ಪುಣ್ಯಪಾಪರೂಪವಾದ ಕರ್ಮವು ಜೀವನಲ್ಲಿ ಹರಿಯುವುದು; ನೋಡಿ `ಪಂಚಾಸ್ರವ’
- ಆಶ್ರಿತ – ಆಶ್ರಯದಲ್ಲಿರುವ
- ಆಶ್ಲಿಷ್ಟ – ಆಲಿಂಗನಕ್ಕೊಳಗಾದ; ಒಡಗೂಡಿದ
- ಆಶ್ಲೇಷ – ಆಲಿಂಗನ
- ಆಶ್ವಾಸ – ಉಸಿರನ್ನು ತೆಗೆದುಕೊಳ್ಳುವುದು; ಭರವಸೆ
- ಆಶ್ವಾಸನಪರ – ಸಮಾಧಾನಗೊಳಿಸುವುದರಲ್ಲಿ
- ಆಶ್ವಾಸಿಸು – ಆಶ್ವಾಸನೆ ನೀಡು
- ಆಶ್ವಿಕಬಲ – ಕುದುರೆ ಸೈನ್ಯ
- ಆಶ್ವಿನೇಯ – ಅಶ್ವಿನೀದೇವತೆಗಳು; ನಕುಲಸಹದೇವರು
- ಆಷಾಢ – ಒಂದು ಚಾಂದ್ರಮಾನ ತಿಂಗಳು; ನಕ್ಷತ್ರ; ಋಷಿಗಳು ಹಿಡಿಯುವ ಮುತ್ತುಗದ ದಂಡ
- ಆಷಾಢಕಿ – ತೊಗರಿ
- ಆಸಂದಿ – ಪೀಠ
- ಆಸನ – ಪೀಠ; ಷೋಡಶೋಪಚಾರಗಳಲ್ಲಿ ಒಂದು;ರಾಜನ ಷಾಡ್ಗುಣ್ಯಗಳಲ್ಲಿ ಒಂದು –
- ಆಸನಕಂಪ – (ಜೈನ) ತೀರ್ಥಂಕರನ ಜೀವಿತದ ವಿಶೇಷ ಪ್ರಸಂಗಗಳಲ್ಲಿÁಗುವ ದೇವೇಂದ್ರನ ಪೀಠದ ಅಲುಗಾಟ
- ಆಸನೋಚಿತ – ತಕ್ಕುದಾದ ಪೀಠ ಹಾಕುವುದು
- ಆಸನ್ನ – ಹತ್ತಿರ, ಸಮೀಪ
- ಆಸನ್ನಕಾಲ – ಸಾವು ಸಮೀಪಿಸಿರುವುದು
- ಆಸನ್ನಗತ – ಹತ್ತಿರ ಬಂದವನು
- ಆಸನ್ನಗಮನ – ಹತ್ತಿರ ಹೋಗುವುದು
- ಆಸನ್ನತೆ – ಹತ್ತಿರವಾಗುವುದು
- ಆಸನ್ನಪೀಡನ – ಹತ್ತಿರ ಬಂದು ಹಿಂಸೆ ಕೊಡುವುದು
- ಆಸನ್ನಪ್ರದೇಶ – ಹತ್ತಿರದ ಪ್ರದೇಶ
- ಆಸನ್ನಭವ್ಯ(ವ್ಯೆ) – (ಜೈನ) ಶೀಘ್ರದಲ್ಲಿಯೇ ಮನಃಪರಿಪಾಕವನ್ನು ಹೊಂದುವವನು(ಳು)
- ಆಸನ್ನಮೃತ್ಯು – ಮೃತ್ಯು ಸಮೀಪವಾಗಿರುವುದು
- ಆಸನ್ನವರ್ತಿ – ಹತ್ತಿರದಲ್ಲಿರುವ
- ಆಸನ್ನ ವಿನಿಪಾತ – ಸದ್ಯದಲ್ಲಿಯೇ ನಾಶವಾಗಲಿರುವ
- ಆಸರ್ – ದಣಿ
- ಆಸವ – ಮದ್ಯ; ಔಷಧಿ
- ಆಸವಾರಿ – ಕುದುರೆಸವಾರಿ
- ಆಸವಾಸಕ್ತಿ – ಮಕರಂದದಲ್ಲಿ ಆಸಕ್ತಿ; ಮದ್ಯಾಸಕ್ತಿ
- ಆಸ¾ು – ಬಳಲಿಕೆ; ಆಯಾಸಗೊಳ್ಳು
- ಆಸಾಧಿತ – ಸಾಧಿಸಲ್ಪಟ್ಟ
- ಆಸಾರ – ಸುರಿಮಳೆ, ಜಡಿಮಳೆ
- ಆಸಾರಚಾರಿ – ಜಡಿಮಳೆಯ ನಡುವೆ ನಡೆಯುವವನು
- ಆಸೀನ – ಕುಳಿತುಕೊಂಡ
- ಆಸು – ಸಾಲವೃಕ್ಷ; ಮೇಲಿನಿಂದ ಎಸೆ; ಶೀಘ್ರ
- ಆಸುಕರ – ತೀವ್ರತೆ; ಆಧಿಕ್ಯ
- ಆಸುಕರಂ – ಅತಿಶಯವಾಗಿ
- ಆಸುಕಾರ – ಹಿಂಸೆ; ಹೊಡೆಯುವುದು
- ಆಸುರ – ಭಯಂಕರವಾದ
- ಆಸುರಂ – ಘೋರ
- ಆಸುರಕರ್ಮಂಗಾಯ್ – ಕ್ರೂರಕೆಲಸವನ್ನು ಮಾಡು
- ಆಸುರತರ – ಅತಿ ಭಯಂಕರವಾದ
- ಆಸೆ – ದಿಕ್ಕು
- ಆಸೆಕಾ¾ – ಆಸೆಗಾರ; ಭರವಸೆಯುಳ್ಳವನು
- ಆಸೆಗಾಣ್ – ಭರವಸೆ ಹೊಂದು
- ಆಸೆಗೆಯ್ – ಬಯಸು, ಅಪೇಕ್ಷಿಸು
- ಆಸೆವಡು – ಆಸೆ ಪಡು
- ಆಸೆವಾತು – ಆಸೆಯನ್ನುಂಟುಮಾಡುವ ನುಡಿ
- ಆಸ್ತರಣ – ಕುಳಿತುಕೊಳ್ಳಲು ಹರಡುವ ಚಾಪೆ ಮುಂತಾದ ಸಾಧನ; ಹರಡುವುದು
- ಆಸ್ತರಣಕ್ರಿಯೆ – ಹರಡುವ ಕ್ರಿಯೆ
- ಆಸ್ಥಾನ – ರಾಜಸಭೆ
- ಆಸ್ಥಾನಗೇಹ – ಆಸ್ಥಾನ ಮಂಟಪ
- ಆಸ್ಥಾನಮಂಟಪ – ಆಸ್ಥಾನಗೇಹ
- ಆಸ್ಥಾಯಿ – ಸ್ಥಿರವಾದ
- ಆಸ್ಥಾಯಿಕಾಜನ – ರಾಜಸಭೆಯ ಜನರು
- ಅಸ್ಥಾಯಿಕೆ – ರಾಜಸಭೆ
- ಆಸ್ಥೆ – ಅಕ್ಕರೆ, ಅಸಕ್ತಿ
- ಆಸ್ಥೌಲ್ಯ – ಸೆಡೆತುಕೊಳ್ಳುವುದು
- ಆಸ್ಫಾಲ(ಳ)ನ – ತಟ್ಟುವುದು
- ಆಸ್ಫಾಲ(ಳ)ನಂಗೆಯ್ – ಅಪ್ಪಳಿಸು
- ಆಸ್ಫೋಟಕ – ಬಾವು, ಕುರು
- ಆಸ್ಫೋಟನ – ಸಿಡಿತ
- ಆಸ್ಫೋಟಿತ – ಸಿಡಿದ
- ಆಸ್ಫೋಟಿಸು – (ತೋಳನ್ನು) ತಟ್ಟಿ ಶಬ್ದಮಾಡು
- ಆಸ್ಯ – ಮುಖ
- ಆಸ್ಯವಿಲಸಿತ – ಮುಖದಲ್ಲಿ ಭಾವಪ್ರದರ್ಶನ
- ಆಸ್ಯಾನಿಲ(ಳ) – ಉಸಿರು
- ಆಸ್ರವ – ಕಷ್ಟ; ಹರಿಯುವಿಕೆ; (ಜೈನ) ಸಪ್ತತತ್ವಗಳಲ್ಲಿ ಒಂದು; ಪ್ಮಣ್ಯಪಾಪರೂಪವಾದ ಕರ್ಮವು ಜೀವದೊಳಕ್ಕೆ ಹರಿಯುವದು
- ಆಸ್ರವತತ್ವ – ಆಸ್ರವ
- ಆಸ್ರವಪದಾರ್ಥ – ಆಸ್ರವ
- ಆಸ್ವಾದನಂಗೆಯ್ – ಆಸಾದನೆ ಮಾಡು, ತಿನ್ನು
- ಆಹತ – ಹೊಡೆಯಲ್ಪಟ್ಟ
- ಆಹತಿ – ಹೊಡೆತ
- ಆಹವ – ಯುದ್ಧ
- ಅಹವಕ್ಷಮ – ಯುದ್ಧಸಮರ್ಥ
- ಆಹವದುರ್ಜಯ – ಯುದ್ಧದಲ್ಲಿ ಗೆಲ್ಲಲು ಅಸಾಧ್ಯನಾದವನು
- ಆಹವನೀಯ – ಯಜ್ಞದಲ್ಲಿ ಅರ್ಪಿಸಲು ಯೋಗ್ಯವಾದ; ತ್ರೇತಾಗ್ನಿಗಳಲ್ಲಿ ಒಂದು; ಕ್ರಿಯಾಸಮಾಪ್ತಿಪರ್ಯಂತವೂ ಹೋಮ ಮಾಡತಕ್ಕ ಅಗ್ನಿ
- ಆಹವಭೀಮ – ಯುದ್ಧದಲ್ಲಿ ಭಯಂಕರನಾದ
- ಆಹವಭೀಷ್ಮ – ಆಹವಭೀಮ
- ಆಹವಮಲ್ಲ – ಯುದ್ಧವೀರ; ಚಾಲುಕ್ಯ ಅರಸರ ಒಂದು ಬಿರುದು
- ಆಹವಲಂಪಟ – ಯುದ್ಧದಲ್ಲಿ ಅತ್ಯಾಸಕ್ತ
- ಆಹವಶೌಂಡ – ರಣಧೀರ
- ಆಹವಸಿಂಹ – ಯುದ್ಧದಲ್ಲಿ ಸಿಂಹದಂತೆ ಪರಾಕ್ರಮ ತೋರಿಸುವವನು
- ಆಹಾರದಾನ – ಆಹಾರವನ್ನು ನೀಡುವುದು
- ಆಹಾರ್ಯ – (ವೇಷಭೂಷಣಗಳಿಂದ ಕೂಡಿದ) ಅಭಿನಯದ ಒಂದು ಬಗೆ
- ಆಹಾರ್ಯಕ – ಆಹಾರ್ಯ
- ಆಹಿತಾಗ್ನಿ – ಅಗ್ನಿಹೋತ್ರ ಮಾಡುವ ಬ್ರಾಹ್ಮಣ
- ಆಹುತ – ಹೋಮಮಾಡಲ್ಪಟ್ಟ; ಹೋಮಕ್ಕೆ ಅರ್ಪಿತವಾದ
- ಆಹುತಿ – ಹವಿಸ್ಸು
- ಆಹುತಿಗೆಯ್ – ಆಹುತಿಯನ್ನು ಅರ್ಪಿಸು
- ಆಹೂತ – ಆಹ್ವಾನಿತನಾದ
- ಆಹೂತಿ – ಆಹ್ವಾನಿಸುವುದು
- ಆಹೂತಿಗೆಯ್ – ಬರಮಾಡಿಕೊ
- ಆಹೃತಿ – ತರುವುದು
- ಆಹ್ಲಾದ – ಸಂತೋಷ
- ಆಹ್ಲಾದನ – ಸಂತೋಷಗೊಳಿಸುವ
- ಆಹ್ವಯ – ಹೆಸರು
- ಆಹ್ವಾನ – ಕರೆಯುವಿಕೆ
- ಆಹ್ವಾನಂಗೆಯ್ – ಆಹ್ವಾನಿಸು
- ಆಹ್ವಾನಪುರುಷ – ಆಹ್ವಾನಿಸಲು ಹೋಗುವವನು; ದೂತ
- ಆಳ್ – ಪಡೆ; ಅಧಿಕಾರ ನಡೆಸು; ಅನುಭವಿಸು
- ಆಳಂ – ವ್ಯರ್ಥ
- ಆಳಂಬೆ – ಅಣಬೆ, ನಾಯಿಕೊಡೆ
- ಆಳಜಾಳ – ಆಲಜಾಲ
- ಆಳಣಿ – ಪದಾತಿಸೈನ್ಯ
- ಆಳಣೆ – ಆನೆಯನ್ನು ಕಟ್ಟುವ ಕಂಬ
- ಆಳ(ಣ)ತಿ – ಹಾಡುವಿಕೆ
- ಆಳಮಾಳ – ಮೋಸ, ವಂಚನೆ
- ಆಳರ್ಪಿಸು – ಆಳಾಗಿ ಅರ್ಪಿಸು; ಕಡೆಗಣಿಸು
- ಆಳವಾಡು – ಮರುಳುಗೊಳಿಸು; ವಂಚಿಸು
- ಆಳವಾಳ – ಪಾತಿ
- ಆಳವಿಣೆ – ಒಂದು ಬಗೆಯ ವೀಣೆ
- ಆಳವಿಸು – ಆಲಾಪಿಸು
- ಆಳಾಪ -ಸಂಭಾಷಣೆ
- ಆಳಾಪಂಗೆಯ್ – ಹರಟು, ಗಳಹು
- ಆಳಿಗೊಳ್ – ಜೊತೆಗೂಡು; ಸ್ನೇಹಮಾಡಿಕೊ
- ಆಳೀಜನ – ಸಖಿಯರು
- ಆಳಿಸು – ಜೋಡಿಸು; ಉಂಟುಮಾಡು; ಆಳಿಕೆಯನ್ನು ನಡೆಸು
- ಆಳುಮಿರು – ಆಳಾಗಿರು, ಸೇವಕನಾಗಿರು
- ಆಳೋಚಂಬೆರಸು – ಆಲೋಚಿಸು
- ಆಳೋಚನಂಗೆಯ್ – ಆಲೋಚಿಸು
- ಆಳೋಳಿ – ಆಳುಗಳ ಸಾಲು
- ಆಳ್ಗೆಯ್ತ – ಆಳಿನ ಕೆಲಸ; ಶೂರನ ಕೆಲಸ
- ಆಳ್ತನ – ಆಳಿನ ಸೇವೆ; ಪೌರುಷ
- ಆಳ್ದಟ್ಟು – ಶೂರಸಮೂಹ
- ಆಳ್ದ – ಒಡೆಯ; ಪ್ರಭು
- ಆಳ್ದಿತಿ – ಆಳುವವಳು; ಒಡತಿ
- ಆಳ್ಮಾಡು – ಆಳಾಗಿ ಮಾಡು
- ಆಳ್ವಲ – ಸೈನಿಕರ ಸಮೂಹ
- ಆಳ್ವೆಸಂಗೆಯ್ – ಸೇವೆಮಾಡು
- ಆಳ್ವೆಸ – ಸೇವಾವೃತ್ತಿ
- ಆಳ್ವೆಸಗೆಯ್ಸು – ಆಳಾಗಿ ಮಾಡಿಕೊ; ಸೇವೆ ಮಾಡಿಸಿಕೊ
- ಆಳ್ವೇಲಿ – ಮನುಷ್ಯರ ಬೇಲಿ
Conclusion:
ಕನ್ನಡ ಆ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.