ಕನ್ನಡ ಐ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada i aksharada halegannadada padagalu , ಕನ್ನಡ ಐ ಅಕ್ಷರದ ಹಳೆಗನ್ನಡ ಪದಗಳು ( i halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಐ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( i halegannada Words in kannada ) ತಿಳಿದುಕೊಳ್ಳೋಣ.
ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಐ ಅಕ್ಷರ ಎಂದರೇನು?
ಐ ಕನ್ನಡ ವರ್ಣಮಾಲೆಯ ಹತ್ತನೇ ಅಕ್ಷರವಾಗಿದೆ. ಇದು ಒಂದು ಸ್ವರಾಕ್ಷರ. ಐ ಕನ್ನಡದ ಸ್ವರಾಕ್ಷ್ರವೆಂದು ಗುರುತಿಸಿಕೊಂಡರೂ ಇದು ಕನ್ನಡ ಸಂಧ್ಯಕ್ಷರಗಳಲ್ಲಿ ಒಂದಾಗಿದೆ. ಅ+ಏ=ಐ, ಅ+ಐ=ಐ ಹೀಗೆ ಎರಡು ಸ್ವರಗಳು ಸಂಧಿಸುವುದರಿಂದ ಸಂಧ್ಯಕ್ಷರವೆಂದು ಗುರುತಿಸಬಹುದು.
ಕನ್ನಡ ವರ್ಣಮಾಲೆಯ ಹನ್ನೊಂದನೆಯ ಅಕ್ಷರ. ದೀರ್ಘ ಸ್ವರ. ಸಾಮಾನ್ಯವಾಗಿ ಸ್ವತಂತ್ರವಾಗಿ ದೊರಕುವುದು ಕಷ್ಟ. ವ್ಯಂಜನಗಳ ಜೊತೆಯಲ್ಲಿ ಮಾತ್ರ ದೊರೆಯುತ್ತದೆ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿ ವ್ಯಂಜನದ ಬಲಗಡೆ ಎರಡು ಸಣ್ಣ ಗೆರೆಗಳ ಮೂಲಕ ಬರೆಯುತ್ತಿದ್ದುದು ಕಾಣಬರುತ್ತದೆ.
ಕಾಲಕ್ರಮೇಣ ಈ ಎರಡೂ ರೇಖೆಗಳು ಕೊಂಡಿಯ ರೂಪವನ್ನು ತಾಳಿ, ಅಕ್ಷರದ ಕೆಳಭಾಗದಲ್ಲಿ ಬರೆಯುವ ಕ್ರಮ ರೂಢಿಗೆ ಬಂತು. ಶಾಸನಗಳಲ್ಲಿ ಐದು ಎಂಬುದನ್ನು ಅಯಿದು ಎಂದೂ ಐವತ್ತು ಎಂಬುದನ್ನು ಅಯವತ್ತು ಎಂದೂ ಬರೆದಿರುವುದನ್ನು ಗಮನಿಸಿದಲ್ಲಿ ಈ ಅಕ್ಷರದ ಉಚ್ಚಾರಣಾ ವೈವಿಧ್ಯ ಗೊತ್ತಾಗುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಐ ಅಕ್ಷರದ ಹಳೆಗನ್ನಡ ಪದಗಳು – Kannada Words
- ಐಂದವ – ಇಂದು ಅಥವಾ ಚಂದ್ರನಿಗೆ
- ಸಂಬಂಧಿಸಿದ; ಬೆಳುದಿಂಗಳು; ಚಂದ್ರನಮಗ, ಬುಧ
- ಐಂದವಬಿಂಬ – ಚಂದ್ರಬಿಂಬ
- ಐಂದವಕಲೆ – ಚಂದ್ರನ ಕಲೆ
- ಐಂದ್ರ – ಇಂದ್ರನಿಗೆ ಸಂಬಂಧಿಸಿದ
- ಐಂದ್ರದಿಶೆ – ಇಂದ್ರದಿಕ್ಕು, ಪೂರ್ವ
- ಐಂದ್ರಧ್ವಜ – ಇಂದ್ರನ ಧ್ವಜ; (ಜೈನ) ಇಂದ್ರ
- ಮಾಡುವ ಜಿನಪೂಜೆ
- ಐಂದ್ರಿ – ಇಂದ್ರನ ಮಡದಿ, ಶಚೀದೇವಿ
- ಐಕಿಲ್ – ಚಳಿ
- ಐನಸ – ಪಾಪ
- ಐರಣಿ – ಮಂಗಳಸೂಚಕ ಚಿತ್ರ ಬರೆದ ಗಡಿಗೆ
- ಐರಾವಣ(ತ) – ಇಂದ್ರನ ಆನೆ
- ಐಶ್ವರ್ಯ – ಅಧಿಕಾರ; ಶಕ್ತಿ; ಭಾಗ್ಯ
- ಐಷೀಕ – ದಭೇಯ ಅಸ್ತ್ರ
- ಐಹಿಕ – ಇಹಲೋಕ್ಕೆ ಸಂಬಂಧಿಸಿದ
- ಐಳಬಿಳ – ಕುಬೇರ
Conclusion:
ಕನ್ನಡ ಐ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.