ಕನ್ನಡ ನ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada na aksharada halegannadada padagalu , ಕನ್ನಡ ನ ಅಕ್ಷರದ ಹಳೆಗನ್ನಡ ಪದಗಳು (nA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ನ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು (Na halegannada Words in kannada ) ತಿಳಿದುಕೊಳ್ಳೋಣ
ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ನ ಅಕ್ಷರ ಎಂದರೇನು?
ನ, ಕನ್ನಡ ವರ್ಣಮಾಲೆಯ ತ-ವರ್ಗದ ಐದನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ, ಅನುನಾಸಿಕ. ಒಂದು ಸರಳರೇಖೆಯ ಮೇಲೆ ಅದರ ಮಧ್ಯದಲ್ಲಿ ಮತ್ತೊಂದು ಸರಳರೇಖೆ ಸುಮಾರು ಸಮಕೋನವಾಗಿ ನಿಂತಿರುವುದೇ
ಈ ಅಕ್ಷರದ ಮೌರ್ಯರ ಕಾಲದ ರೂಪ. ಸಾತವಾಹನ ಕಾಲದಲ್ಲಿ ಸುಮಾರಾಗಿ ಇದೇ ರೂಪವೇ ಮುಂದುವರಿಯುತ್ತದೆ. ಆದರೆ ಕದಂಬ ಕಾಲದಲ್ಲಿ ಕೆಳಗಿನ ರೇಖೆ ಎರಡು ಭಾಗಗಳಾಗುತ್ತದೆ. ಬಾದಾಮಿ ಚಾಳುಕ್ಯರ ಕಾಲದ ಈ ಅಕ್ಷರ ಸಂಸ್ಕøತದ `ತ ಎಂಬ ಅಕ್ಷರವನ್ನು ಬಹಳವಾಗಿ ಹೋಲುತ್ತದೆ ಎನ್ನಬಹುದು. ರಾಷ್ಟ್ರಕೂಟ ಕಾಲದಲ್ಲಿ ಇದೇ ಸ್ವರೂಪವೇ ಮುಂದುವರಿದರೂ ಅಕ್ಷರ ಸ್ವಲ್ಪ ಅಗಲವಾಗುತ್ತದೆ. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಕೆಳಗಿನ ಭಾಗಕ್ಕೂ ಮತ್ತು ಬಲಭಾಗದ ಪಾಶ್ರ್ವಕ್ಕೂ ಹೆಚ್ಚು ಅಂತರವೇರ್ಪಟ್ಟು ಅಕ್ಷರ ಈಗಿನ ಸ್ವರೂಪವನ್ನು ಪಡೆಯುತ್ತದೆಯಲ್ಲದೆ ಅದೇ ರೂಪ ಮುಂದುವರೆಯುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ನ ಅಕ್ಷರದ ಹಳೆಗನ್ನಡ ಪದಗಳು – Kannada Words
- ನಂಜಿನುರುಳಿ – ವಿಷದ ಉಂಡೆ
- ನಂಜು – ವಿಷ
- ನಂಜುಗೊರಲ – ಕೊರಳಲ್ಲಿ ನಂಜುಳ್ಳವನು, ಶಿವ
- ನಂಜುದಿನ್ – ನಂಜನ್ನು ತಿನ್ನು,
- ನಂಜುನೀರ್ – ವಿಷಯುಕ್ತ ನೀರು
- ನಂಜುರುಳಿ – ನಂಜಿನ ಉಂಡೆ, ವಿಷದ ಗುಳಿಗೆ
- ನಂಜೂಡು – ವಿಷ ಲೇಪಿಸು
- ನಂಟ – ಬಂಧು
- ನಂಟರ್ತನ – ನಂಟಸ್ತಿಕೆ
- ನಂಟು – ಬಾಂಧವ್ಯ; ಸೇರು
- ನಂದ – ಸಂತೋಷ; ನಂದಗೋಪ; ನಂದ ಎಂಬ ರಾಜವಂಶ
- ನಂದಕ – ಸಂತಸಗೊಳ್ಳುವಿಕೆ; ವಿಷ್ಣುವಿನ ಕತ್ತಿ
- ನಂದನ – ಸಂತೋಷಕರ; ಉದ್ಯಾನವನ; ಇಂದ್ರನ ವನ
- ನಂದನಂದನ – ನಂದಗೋಪನ ಮಗ, ಕೃಷ್ಣ
- ನಂದನಚರ – (ಜೈನ) ಹಿಂದಿನ ಜನ್ಮದಲ್ಲಿ
- ಮಗನಾಗಿದ್ದು ಸಂಸಾರಚಕ್ರದಲ್ಲಿ ಸುತ್ತುತ್ತಿರುವವನು
- ನಂದನವನ – ಇಂದ್ರನ ಉದ್ಯಾನ; ಚೆಲುವಾದ ಉದ್ಯಾನ
- ನಂದನವಿಮಾನ – (ಜೈನ) ಸ್ವರ್ಗದಲ್ಲಿನ ಒಂದು ಸ್ಥಳದ ಹೆಸರು
- ನಂದನಾವಲಿ – ವನಗಳ ಸಾಲು
- ನಂದನೋತ್ಕರ – ನಂದನಾವಲಿ
- ನಂದಿದ್ರುಮ – ನಂದಿ ಮರ
- ನಂದಿಸು – ಆರಿಸು
- ನಂದು – ಆರಿಹೋಗು
- ನಂದ್ಯಾವರ್ತ – ನಂದಿಬಟ್ಟಲು ಹೂ
- ನಂದ್ಯಾವರ್ತವಿಮಾನ – (ಜೈನ) ಒಂದು ಸ್ವರ್ಗದ ಹೆಸರು
- ನಂಬಿಸು – ನಂಬಿಕೆಯುಂಟುಮಾಡು
- ನಂಬು – ವಿಶ್ವಾಸವಿಡು
- ನಂಬೆನುಡಿ – ನಂಬುವಂತೆ ಮಾತಾಡು
- ನಂಬುಗೆ – ನಂಬಿಕೆ
- ನಂಬುಗೆಗೆಡು – ನಂಬಿಕೆ ಕಳೆದುಕೊ
- ನಃ – ನಮ್ಮನ್ನು
- ನಕುಲ – ಮುಂಗುಸಿ; ಪಂಚಪಾಂಡವರಲ್ಲೊಬ್ಬ
- ನಕ್ಕು – ಹೀರು, ಕುಡಿ
- ನಕ್ತಂಚರ(ರಿ) – ರಾತ್ರಿಯಲ್ಲಿ ಚರಿಸುವುದು, ರಾಕ್ಷಸ(ಸಿ)
- ನಕ್ರ – ಮೊಸಳೆ
- ನಕ್ಷತ್ರ- ತಾರೆ
- ನಕ್ಷತ್ರಜ್ಯೋತಿ – ನಕ್ಷತ್ರದ ಬೆಳಕು
- ನಕ್ಷತ್ರಪಾಠಕ – ಜ್ಯೋತಿಷಿ
- ನಕ್ಷತ್ರಮಾಲೆ – ನಕ್ಷತ್ರಸಮೂಹ; ಇಪ್ಪತ್ತೇಳು
- ಎಳೆಗಳ ಮುತ್ತಿನ ಕಂಠೀಹಾರ
- ನಕ್ಷತ್ರವೀಧಿ – ಆಕಾಶ
- ನಕ್ಷತ್ರೋದಯ – ನಕ್ಷತ್ರ ಕಾಣಿಸಿಕೊಳ್ಳುವುದು
- ನಖ – ಉಗುರು
- ನಖಂಪಚ- ಉಗುರು ಬೆಚ್ಚಗಿನ
- ನಖದೀಪ್ತಿ – ಉಗುರಿನ ಕಾಂತಿ
- ನಖನಿಕಾಯ – ಉಗುರುಗಳ ಪಂಕ್ತಿ
- ನಖಪುಟ – ಗೊರಸು
- ನಖಪ್ರಹಾರ – ಉಗುರು ಅಥವಾ ಪಂಜದಿಂದಾದ ಪೆಟ್ಟು
- ನಖಮಯೂಖ – ನಖದೀಪ್ತಿ
- ನಖರ – ಪ್ರಾಣಿಗಳ ಪಂಜ
- ನಖರಚ್ಛಾಯೆ – ನಖದೀಧಿತಿ
- ನಖರಾಯುಧ – ಪಂಜವೇ ಆಯುಧವಾಗಿರುವ, ಸಿಂಹ, ಹುಂಜ
- ನಖರುಚಿ – ನಖರದೀಪ್ತಿ
- ನಖವ್ರಣ – ಚಿವುಟುವುದರಿಂದಾದ ಗಾಯ
- ನಖಹತಿ – ನಖವ್ರಣ
- ನಖಾಂಕ – ಉಗುರಿನಿಂದಾದ ಗುರುತು
- ನಖಾಂಶು – ನಖರದೀಪ್ತಿ
- ನಖಾಕ್ಷಿಪ್ತ – ಉಗುರಿನಿಂದ ಮಿಡಿದ
- ನಖಾನಖಿ – ಉಗುರುಗಳಿಂದ ಮಾಡುವ ಕಾದಾಟ
- ನಗ – ಚಲಿಸದಿರುವುದು, ಬೆಟ್ಟ; ಮರ
- ನಗಕುಳ – ಬೆಟ್ಟಗಳ ಗುಂಪು
- ನಗಚೂಳ – ಬೆಟ್ಟದ ಶಿಖರ
- ನಗಜೆ – ಪರ್ವತಪುತ್ರಿ, ಗಿರಿಜೆ
- ನಗಧರ – ಬೆಟ್ಟವನ್ನು ಎತ್ತಿದವನು, ಕರಷ್ಣ
- ನಗದನಿ – ಬೆಟ್ಟದ ಮಾರ್ದನಿ
- ನಗನಂದನ – ಬೆಟ್ಟದ ಮೇಲಣ ಉದ್ಯಾನ
- ನಗಪ – ಪರ್ವತರಾಜ, ಹಿಮವಂತ
- ನಗಪತಿ – ನಗಪ
- ನಗಯಜ್ಞ – ಪರ್ವತಪೂಜೆ
- ನಗರ – ಪಟ್ಟಣ
- ನಗರಿಪು – ಪರ್ವತಗಳ ಶತ್ರು, ಇಂದ್ರ
- ನಗವೃಂದಾಧಿಪ – ನಗಪ
- ನಗವೈರಿ – ನಗರಿಪು
- ನಗಶಿಖರ – ಬೆಟ್ಟದ ತುದಿ
- ನಗಸಾನು – ಬೆಟ್ಟದ ತಪ್ಪಲು
- ನಗಾಗ್ರ – ಬೆಟ್ಟದ ತುದಿ
- ನಗಾಗ್ರಣಿ – ಪರ್ವತಶ್ರೇಷ್ಠ
- ನಗಾತ್ಮಜೇಶ್ವರ – ಶಿವ
- ನಗಾಧೀಶ್ವರ – ಪರ್ವತರಾಜ
- ನಗಾರಿ – ನಗ+ಅರಿ, ನಗವೈರಿ, ಇಂದ್ರ
- ನಗಾರ್ಚನೆ – ನಗಯಜ್ಞ
- ನಗಾಹಿತ – ನಗ+ಅಹಿತ, ಇಂದ್ರ
- ನಗಿಸು – ನಗುವಂತೆ ಮಾಡು
- ನಗು – ಪರಿಹಾಸ; ನಗುವಿಕೆ
- ನಗುಮೊಗ – ನಗುವ ಮುಖ
- ನಗೆ – ನಗುವಿಕೆ; ಪರಿಹಾಸ
- ನಗೆಗಡಲ್ – ನಗುವಿನ ಸಮುದ್ರ, ತುಂಬ ನಗೆ
- ನಗೆಗಣ್ – ನಗುವ ಕಣ್ಣು
- ನಗೆಗಣ್ಣೋಟ – ನಗೆಗಣ್ಣ ನೋಟ
- ನಗೆಗಾ¾ – ನಗಿಸುವವನು; ವಿದೂಷಕ
- ನಗೆಮಾಡು – ಹಾಸ್ಯಮಾಡು
- ನಗೆಮೊಗ – ನಗುಮೊಗ
- ನಗೆಯೊಡಲಾತ – ಇಂದ್ರ
- ನಗೆವೆಳಗು – ನಗೆಯ ಕಾಂತಿ
- ನಗೆವೆಳ್ಪು – ನಗೆವೆಳಗು
- ನಗೇಂದ್ರ – ಪರ್ವತರಾಜ
- ನಗೇಂದ್ರಧೈರ್ಯ – ಬೆಟ್ಟದಂತಹ ಕೆಚ್ಚು
- ನಗೇಂದ್ರಮೂಲ – ಬೆಟ್ಟದ ತಪ್ಪಲು
- ನಗೇಂದ್ರಯಜ್ಞ – ನಗಯಜ್ಞ
- ನಗೋತ್ಸಂಗ – ಬೆಟ್ಟದ ತಪ್ಪಲು
- ನಗೋಪಕಂಠ – ಪರ್ವತದ ಸನಿಹ
- ನಗೋಪತ್ಯಕ – ಬೆಟ್ಟದ ತಪ್ಪಲು
- ನಗೋಪರಿಮತಲ – ನಗ+ಉಪರಿಮತಲ, ಪರ್ವತಶಿಖರ
- ನಚ್ಚಣಿ(ಗೆ) – ನರ್ತಕಿ
- ನಚ್ಚಣಿಗ – ನರ್ತಕ
- ನಚ್ಚು(ರ್ಚು) – ನಂಬು; ನಂಬಿಕೆ, ನಚ್ಚಿಕೆ; ಮೋಹ
- ನಚ್ಚುಗಿಡಿಸು – ನಂಬಿಕೆ ಕೆಡಿಸು
- ನಚ್ಚುಗೆಡು – ನಚ್ಚಿಕೆ ಹಾಳಾಗು
- ನಚ್ಚುವೋಗು – ನಂಬಿಕೆಗೆ ಪಾತ್ರವಾಗು
- ನಟ – ನರ್ತಕ; ಅಭಿನಯಿಸುವವನು; ಈಶ್ವರ
- ನಟಣೆಗೊಳ್ – ನರ್ತಿಸತೊಡಗು
- ನಟರುದ್ರ – ನಟರಾಜ
- ನಟಿಯಿಸು – ನರ್ತಿಸು; ಅಭಿನಯಿಸು
- ನಟ್ಟ(ಟ್ಟೆ)ಗೊಂಬು – ನಡುವಣ ಕೊಂಬೆ
- ನಟ್ಟಡವಿ – ಅಡವಿಯ ಮಧ್ಯ
- ನಟ್ಟನಡು – ಸರಿಯಾಗಿ ನಡುವೆ
- ನಟ್ಟನಡುವಗಲ್ – ಸರಿಯಾಗಿ ನಡುಹಗಲು
- ನಟ್ಟನಡುವಿರುಳ್ – ಸರಿಯಾಗಿ ನಡುರಾತ್ರಿ
- ನಟ್ಟನಡುವೆ – ಸರಿಯಾಗಿ ನಡುವೆ
- ನಟ್ಟವಳ – ನರ್ತಕ; ಅಭಿನಯಕಾರ
- ನಟ್ಟವಿಸಿಲ್ – ನಡುಹಗಲ ಬಿಸಿಲು
- ನಟ್ಟಾ¿ – ತೀರ ಆಳ
- ನಟ್ಟಿ – (ನಷ್ಟಿ) ನಷ್ಟ ಹೊಂದಿದವನು
- ನಟ್ಟಿಗಂಪು – ನಾಟಿ ಮಾಡಿದ ಸಸಿಯ ಕಂಪು
- ನಟ್ಟಿರುಳ್ – ಮಧ್ಯರಾತ್ರಿ
- ನಟ್ಟುವ – ನರ್ತಕ
- ನಟ್ಟೆವಾನ್ – ಆಕಾಶದ ನಡುವೆ
- ನಡ(ಡೆ)ಪಾಡು – ಓಡಾಡು
- ನಡ(ಡೆ)ಪು – ಸಲಹು
- ನಡಿಸು – ನಾಟಿಸು, ಹುಗಿಸು
- ನಡು – ಸ್ಥಾಪಿಸು; ನಾಟಿಮಾಡು; ಚುಚ್ಚು;
- ಮಧ್ಯಭಾಗ; ಸೊಂಟ
- ನಡುಕ – ಕಂಪನ
- ನಡುಕಂಗಿಡು – ಕಂಪನ ನಿಲ್ಲು
- ನಡುಕಂಗೊಳ್ – ನಡುಗಲು ತೊಡಗು
- ನಡುಗಂಭ – ಮಧ್ಯದ ಕಂಬ
- ನಡುಗಟ್ಟು – ಸೊಂಟಕ್ಕೆ ಬಟ್ಟೆ ಕಟ್ಟು; ಸೊಂಟಪಟ್ಟಿ
- ನಡುಗಡಲ್ – ಕಡಲ ನಡುವೆ
- ನಡುಗು – ಕಫಿಸು; ಹೆದರು
- ನಡುಗೇರಿ – ಕೇರಿಯ ನಡುವೆ
- ನಡುಗೋಲ್ – ಬಾಣದ ಮಧ್ಯಭಾಗ
- ನಡುದಲೆ – ನೆತ್ತಿ; ತಲೆಯ ನಡುಭಾಗ
- ನಡುನಾಡು – ನಾಡ ನಡುಭಾಗ
- ನಡುನೀರ್ – ನೀರಿನ ನಡುವೆ
- ನಡುಮಾಳ – ಮಾಳದ (ಮೈದಾನದ) ನಡುಭಾಗ
- ನಡುವಗಲ್ – ಹಗಲಿನ ನಡುವಣಭಾಗ
- ನಡುವಣ – ಮಧ್ಯದ
- ನಡುವನೆ – ನಡುಮನೆ, ಮನೆಯ ನಡುಭಾಗ
- ನಡುವಾಯ್ – ನಡುವೆ ಹೋಗು
- ನಡುವಿರುಳ್ – ಮಧ್ಯ ರಾತ್ರಿ
- ನಡುವೀದಿ – ಬೀದಿಯ ಮಧ್ಯೆ
- ನಡುವು – ಮಧ್ಯಭಾಗ
- ನಡುವೆ – ಮಧ್ಯದಲ್ಲಿ
- ನಡುವೊಗು – ಮಧ್ಯೆ ಹೋಗು
- ನಡುಸೂಲ್ – ಹೆರಿಗೆಯ ನಡುಸಮಯ
- ನಡೆ – ಹೆಜ್ಜೆ ಹಾಕಿ ಮುಂದುವರಿ; ಚಲಿಸು; ನಡಿಗೆ; ನಡತೆ; ಚೆನ್ನಾಗಿ
- ನಡೆಗಲ್ – ನಡೆಯುವುದನ್ನು ಕಲಿ
- ನಡೆಗಲಿ – ನಡೆಯುವ (ನುಗ್ಗುವ) ಶೂರ
- ನಡೆಗೆ(ಗಿ)ಡು – ನಡೆಯಲಾಗದಂತಾಗು; ನಡಿಗೆಯ ಕ್ರಮತಪ್ಪು
- ನಡೆಗೊಳ್ – ಮುಂದುವರಿ; ಹೊರಡು
- ನಡೆಗೊಳಿಸು – ನಡೆಯುವಂತೆ ಮಾಡು
- ನಡೆಗೋಂಟೆ – ನಡೆಯುವ ಕೋಟೆ; ಒಂದು ಸೈನ್ಯವ್ಯೂಹ
- ನಡೆಜಂತ್ರ – ನಡೆದಾಡುವ ಯಂತ್ರ
- ನಡೆತರ್ – ಬರು
- ನಡೆಪಾಡು – ಸಂಚರಿಸು
- ನಡೆಮಾಡ – ನಡೆಯುವ ಮಾಡ; ವಿಮಾನ
- ನಡೆವಳಿ – ನಡವಳಿಕೆ
- ನಡೆವಳಿಕಾ¾ – ಮೇಲ್ವಿಚಾರಕ
- ನಡೆಸಾರ – ಏರುವ ಸಾಧನ
- ನಣ್ಪು – ಬಾಂಧವ್ಯ, ನಂಟಸ್ತಿಕೆ
- ನಣ್ಪುಗೆಯ್ – ಬಾಂಧವ್ಯ ಉಂಟುಮಾಡು
- ನತಚುಂಚು – ಬಾಗಿದ ಕೊಕ್ಕು
- ನತರಕ್ಷಾಚತುರ – ಶರಣಾದವರನ್ನು ರಕ್ಷಿಸುವುದರಲ್ಲಿ ಚತುರನಾದವನು
- ನತಾಸ್ಯ – ಬಾಗಿದ ಮುಖವುಳ್ಳವನು
- ನತಿ – ಬಾಗಿರುವಿಕೆ
- ನದ – ಶಬ್ದ; (ರಭಸವಾಗಿ ಹರಿಯುವ) ಗಂಡುತೊರೆ
- ನದಿ – ಹೊಳೆ
- ನದಿಪು – ಆರಿಸು, ನಂದಿಸು
- ನದೀಚರ – ನದಿಯಲ್ಲಿ ಚಲಿಸುವುದು
- ನದೀಜ – ನದಿಯಲ್ಲಿ ಹುಟ್ಟಿದ; ಭೀಷ್ಮ
- ನದೀಜಾತ – ನದೀಜ
- ನದೀತನೂಜ – ನದೀಜ
- ನದೀತರಣ – ನದಿಯನ್ನು ದಾಟುವುದು
- ನದೀತೀರ – ಹೊಳೆಯ ದಡ
- ನದೀನಂದನ – ನದೀಜ
- ನದೀನಾಥ – ನದಿಗಳ ಒಡೆಯ, ಸಮುದ್ರ; (ಜೈನ)
- ಒಂದು ಕಾಲಪ್ರಮಾಣ
- ನದೀನಿಕಟ – ನದಿಯ ಹತ್ತಿರದ
- ನದೀಪೂರ – ನದಿಯ ಪ್ರವಾಹ
- ನದೀಮಾತೃಕ – ನದಿ ನೀರಿನಿಂದ ಕೃಷಿಗೊಳ್ಳು ಭೂಮಿ
- ನದೀಸುತ – ನದೀಜ
- ನದೀಸೂನು – ನದೀಜ
- ನದೀಹ್ರದ – ನದಿಯಲ್ಲಿನ ಮಡು
- ನದುಗು – ವಿಮುಖನಾಗು
- ನದ್ದ – ಬದ್ಧನಾದ
- ನದ್ಯುತ್ತರಣ – ನದಿ+ಉತ್ತರಣ, ನದಿಯ ದಾಟುವಿಕೆ
- ನನಸು – ನೆನಸು, ದಿಟ
- ನನಾಂದೃ – ನಾದಿನಿ
- ನನೆ – ಒದ್ದೆಯಾಗು; ಮೊಗ್ಗು; ಹೂಬಿಡು
- ನನೆಕೇರ್ – ಮೊಗ್ಗಿನಿಂದಾದ ಗೋಡೆ
- ನನೆಕೊನೆ – ಮೊಳಕೆ
- ನನೆಕೊನೆಯಾಗು – ಅರಳು
- ನನೆಕೊನೆವೋಗಿಸು – ಅರಳುವಂತೆಮಾಡು; ಸಂತಸಗೊಳಿಸು
- ನನೆಕೊನೆವೋಗು – ಚಿಗುರು; ಸಂತಸದಿಂದ ಉಬ್ಬು
- ನನೆಗಣೆ – ಹೂವಿನ ಬಾಣ
- ನನೆಗಣೆಯ – ಹೂವಿನ ಬಾಣದವನು, ಮನ್ಮಥ
- ನನೆಗುದಿಗೊ – ತಳಮಳಿಸು
- ನನೆಗೊಂಬು – ಹೂತುಂಬಿದ ಕೊಂಬೆ
- ನನೆಗೊಯ್ – ಹೂಬಿಡಿಸು
- ನನೆಗೋಲ್ – ನನೆಗಣೆ
- ನನೆಗೋಲ – ನನೆಗಣೆಯ
- ನನೆದೊಡಿಗೆ – ಹೂವಿನ ಆಭರಣ
- ನನೆಮುಗುಳ್ – ಕಾಯಿ ಮೊಗ್ಗು
- ನನೆಮೊನೆಯಾಗು – ಚಿಗುರು
- ನನೆಯಂಬ – ನನೆಗಣೆಯ
- ನನೆಯಂಬು – ಹೂಬಾಣ
- ನನೆಯಕೋಲ್ – ಹೂಬಾಣ
- ನನೆಯ ಸರಲ್ – ಹೂಬಾಣ
- ನನೆಯೆಸ¿õï – ಹೂವಿನ ಪಕಳೆ
- ನನೆಯೇ¾ು – ಹೂಗಳಿಂದ ಕೂಡು
- ನನೆಯೊತ್ತು – ಅರಳು
- ನನೆಲತೆ – ಹೂಬಿಟ್ಟ ಬಳ್ಳಿ
- ನನೆವಾಸು – ಹೂವಿನ ಹಾಸಿಗೆ; ತೊಯ್ದ ಹಾಸಿಗೆ
- ನನೆವಿಲ್ – ಹೂವಿನ ಬಿಲ್ಲು
- ನನೆವಿಲ್ಲ – ಹೂಬಾಣವುಳ್ಳವನು, ಕಾಮ
- ನನೆವಿಲ್ಲ ಬಲ್ಲಹ – ಹೂಬಿಲ್ಲಿನ ಒಡೆಯ, ಮನ್ಮಥ
- ನನೆವೂ – ಅರಳಿದ ಹೂ
- ನನೆವೆರಸು – ಹೂಗಳಿಂದ ತುಂಬಿರು
- ನನೆವೊಯ್ – ಚಿಗುರು
- ನನೆವೋಗು – ಮೊಗ್ಗು ಬಿಡು
- ನನ್ನಿ – ಸತ್ಯ
- ನನ್ನಿಗೊಡು – ಮಾತು ಕೊಡು
- ನನ್ನಿಗೊಳ್ – ಮಾತು ಪಡೆ
- ನನ್ನಿವಾತು – ಸತ್ಯದ ನುಡಿ; ಪ್ರತಿಜ್ಞೆ
- ನಪುಂಸಕ – ಷಂಡ
- ನಪುಂಸಕವೇದ – (ಜೈನ) ಸ್ತ್ರೀ-ಪುರುಷ ಎರಡೂ ಭಾವನೆಗಳಿಲ್ಲದಂತಾಗುವ ಸ್ಥಿತಿ; ಒಂದು ಬಗೆಯ ನೋಕಷಾಯ; ಮೂರು ಬಗೆಯ ವೇದಗಳಲ್ಲಿ ಒಂದು
- ನಭ – ಆಕಾಶ
- ನಭಃಪಯೋಜ – ಆಕಾಶದ ಕಮಲ; ಗಗನಕುಸುಮ
- ನಭಃಪ್ರಸೃತಿ – ಮೋಡದ ರಾಶಿ
- ನಭಶ್ಚರ(ಪತಿ) – ಗಗನಗಾಮಿ, ವಿದ್ಯಾಧರ(ರಾಜ)
- ನಭಶ್ಚರಾನ್ವಯ – ಖೇಚರವಂಶ
- ನಭಶ್ಚರೇಂದ್ರ – ಖೇಚರರಾಜ
- ನಭಸ್ಥಲ – ಆಕಾಶ
- ನಭಸ್ಫಟಿಕ – ಪಾರರ್ಶಕ ಸ್ಫಟಿಕ
- ನಭೋಂಗಣ – ನಭಃ+ಅಂಗಣ, ಗಗನತಳ
- ನಭೋಗಮನ – ಆಕಾಶಗಮನ
- ನಭೋನಗರಹರಣ – ಆಕಾಶದಲ್ಲಿನ (ತ್ರಿ)ಪುರಗಳನ್ನು ನಾಶಮಾಡಿದವನು, ಶಿವ
- ನಭೋಭಾಗ – ನಭಸ್ಥಲ
- ನಭೋಮಂಡಲ – ಗಗನಮಂಡಲ
- ನಭೋಮಣಿ- ಸೂರ್ಯ
- ನಭೋಮಾರ್ಗ – ಮೇಘಮಾರ್ಗ, ಆಕಾಶ
- ನಭೋಯಾನ – ಗಗನಯಾನ
- ನಭೋವಳಯ – ನಭಸ್ಥಲ
- ನಮತ – ಒಡೆಯ
- ನಮನ – ಬಾಗುವುದು; ನಮಸ್ಕಾರ
- ನಮಸ್ಕರಿಸು – ನಮಸ್ಕಾರಮಾಡು
- ನಮಸ್ಕಾರಂಗೆಯ್ – ನಮಸ್ಕರಿಸು
- ನಮಸ್ಕøತಿ – ನಮಸ್ಕಾರ
- ನಮಸ್ಕ್ರಿಯಾವಿಧಿ – ನಮಸ್ಕಾರನಿಯಮ
- ನಮಸ್ಯ – ನಮಸ್ಕಾರಾರ್ಹ
- ನಮಿ – (ಜೈನ) ಇಪ್ಪತ್ತೊಂದನೆಯ ತೀರ್ಥಂಕರ
- ನಮಿತ – ಬಾಗಿದ
- ನಮೀಕೃತ – ಬಾಗಿಸಿದ; ಶರಣಾಗಿಸಿದ
- ನಮೆ – ಬಡವಾಗು; ಕೊರಗು
- ನಮೆಯಿಸು – ಕೃಶಪಡಿಸು, ಕೊರಗಿಸು
- ನಮೇರು – ಸುರಗಿ ಮರ, ಹೂ
- ನಮೇರುಕುಜ – ನಮೇರು
- ನಮೇರುಕುಸುಮ – ಸುರಗಿಹೂ
- ನಮೇರುಭೂಜ – ನಮೇರು
- ನಮೋಸ್ತು – ನಮಸ್ಕಾರ; (ಜೈನ) ಸನ್ಯಾಸಿ
- ನಮೋಸ್ತುಗೆಯ್ – ನಮಸ್ಕರಿಸು
- ನಮ್ರ – ಬಾಗಿದ
- ನಮ್ರತೆ – ನಮಸ್ಕರಿಸುವುದು
- ನಮ್ರತ್ವ – ಬಾಗುವಿಕೆ, ನಮಸ್ಕರಿಸುವುದು
- ನಮ್ರಮೂರ್ತಿ – ವಿನಯವಂತ
- ನಮ್ರಶಿರೋಧರ(ರೆ) – ಕತ್ತನ್ನು ಬಾಗಿಸಿದವನು(ಳು)
- ನಯ – ನುಣುಪು; ಸೊಗಸು; ನಾಜೂಕು; ರಾಜನೀತಿ; ನ್ಯಾಯ
- ನಯಂಗುಂದು – ಕಳೆಗುಂದು
- ನಯಂಗೆಡು – ಕಳೆಗೆಡು
- ನಯಂವಡೆ – ಕಳೆಯನ್ನು ಪಡೆ
- ನಯಂಬೆ¾ು – ನಯಂವಡೆ
- ನಯಕಾರ – ನಯಗೊಳಿಸುವವನು
- ನಯಕ್ರಮ – ರಾಜನೀತಿ ಕ್ರಮ
- ನಯಚಿತ್ತೆ – ವ್ಯವಹಾರ ಚತುರೆ
- ನಯಜ್ಞ – ರಾಜನೀತಿನಿಪುಣ
- ನಯಣ – (ಜೈನ) ಗಿರಿತಪ್ಪಲಿನ ವಿಶ್ರಾಂತಿಗೃಹ
- ನಯನತ್ರಿಭಾಗ – ಕುಡಿನೋಟ
- ನಯದಾಳ್ – ನಯ+ತಾಳ್, ನಯವನ್ನು ಪಡೆ
- ನಯನ – ಗಮನ; ಕಣ್ಣು
- ನಯನಜಲ – ಕಣ್ಣೀರು
- ನಯನತ್ರಿಭಾಗ – ಕಡೆಗಣ್ಣು
- ನಯನಪುತ್ರಿಕೆ – ಕಣ್ಣ ಪಾಪೆ
- ನಯನಪ್ರಭೆ – ಕಣ್ಣ ಕಾಂತಿ
- ನಯನಯುಗಳ – ಕಣ್ಣ ಜೋಡಿ
- ನಯನವಾರಿ – ಕಣ್ಣೀರು
- ನುನವಿಹ್ವಲ – ಕಂಗೆಟ್ಟವನು
- ನಯನಸುಮದರತೆ – ಕಣ್ಣಿಗೆ ಅಂದವಾಗಿರುವುದು
- ನಯನಾಂಚಲ – ಕಡೆಗಣ್ಣು
- ನಯನಾಂಜನ – ಕಾಡಿಗೆ
- ನಯನಾಂಬು – ಕಣ್ಣೀರು
- ನಯನಾಂಶು – ಕಣ್ಣ ಕಾಂತಿ
- ನಯನಾಕರ್ಷಣವಿದ್ಯೆ – ನೋಟ ಸೆಳೆಯುವ ಕಲೆ
- ನಯನಾನಂದ(ಕರ) – ಕಣ್ಣಿಗೆ ಸಂತೋಷ (ತರುವ)
- ನಯನಾನಂದನ – ಕಣ್ಣಿಗೆ ಸುಂದರವಾದ
- ನಯನಾಭಿರಾಮ – ಕಣ್ಣಿಗೆ ಆಹ್ಲಾದಕಾರಿಯಾದ
- ನಯನಾಮೃತ – ಕಣ್ಣಿಗೆ ಅಮೃತದಂತಿರುವ
- ನಯನಾಶ್ರು – ಕಣ್ಣೀರು
- ನಯನಿಪುಣ – ರಾಜನೀತಿ ಪರಿಣತ
- ನಯನೋತ್ಸವ)ಕರಿ – ಕಣ್ಣಿಗೆ ಸುಖ (ತರುವ)
- ನಯನೋತ್ಸಾಹ – ನೋಡಬೇಕೆಂಬ ಕಾತರ
- ನಯನೋನ್ಮಾದ – ನೋಟ ತರುವ ಆನಂದಾತಿಶಯ
- ನಯಮೂರ್ತಿ – ರಾಜನೀತಿಯ ಸಾಕಾರರೂಪ
- ನಯಯುಕ್ತ – ನಯವನ್ನು ಬಲ್ಲವ
- ನಯವಾದ – (ಜೈನ) ಸಮ್ಯಜ್ಞಾನ ಪಡೆಯಲು
- ವಸ್ತುವಿನ ಪ್ರತಿ ಅಂಶವನ್ನೂ ಗ್ರಹಿಸುವುದು
- ನಯವಿದ – ನಯವಂತ
- ನಯವಿದ್ಯಾವಿದ – ನೀತಿಶಾಸ್ತ್ರ ನಿಪುಣ
- ನಯವಿನಿಮಯ – ಪರಸ್ಪರ ನೀತಿ ಅರಿಯುವುದು
- ನಯಶಾಲಿ – ನಯನಿಪುಣ
- ನಯಶಾಸ್ತ್ರ – ರಾಜನೀತಿಶಾಸ್ತ್ರ
- ನಯಸಂಪನ್ನ – ನಯದ ನಿಧಿಯಂತಿರುವವನು
- ನಯಹೀನ – ಸೌಜನ್ಯರಹಿತನಾದವನು
- ನಯಾಂಕವಯಸ್ಕ – ರಾಜನೀತಿ ಬಲ್ಲ ಮಾತುಗಾರ
- ನಯಾಗಮ – ರಾಜನೀತಿಶಾಸ್ತ್ರ
- ನಯೋದಯ – ರಾಜನೀತಿಯ ಏಳಿಗೆ
- ನರ – ಮನುಷ್ಯ; ಅರ್ಜುನನ ಒಂದು ಹೆಸರು
- ನರಕ – ಸಾವಿನನಂತರ ಪಾಪಗಳಿಗೆ ಶಿಕ್ಷೆ ಪಡೆಯುವ ಸ್ಥಳ; (ಜೈನ) ಏಳು ಬಗೆಯ ನರಕಗಳು: ರತ್ನಪ್ರಭೆ, ಶರ್ಕರಾಪ್ರಭೆ, ವಾಲುಕಾಪ್ರಭೆ, ಪಂಕಪ್ರಭೆ, ಧೂಮಪ್ರಭೆ, ತಮಃಪ್ರಭೆ, ಮಹಾತಮಪ್ರಭೆ
- ನರಕಂಬುಗು – ನರಕಕ್ಕೆ ಹೋಗು
- ನರಕಗತಿ – ನರಕವಾಸ; (ಜೈನ) ಹದಿನಾರು ಕರ್ಮಪ್ರಕೃತಿಗಳಲ್ಲಿ ಒಂದು, ಇದರಿಂದ
- ನಾರಕೀಯ ಅವಸ್ಥೆ ಉಂಟಾಗುತ್ತದೆ
- ನರಕದುಃಖ – ನರಕದ ಶಿಕ್ಷೆಯಿಂದಾಗುವ ಸಂಕಟ
- ನರಕನಿಳಯ – ನರಕವೆಂಬ ಸ್ಥಳ
- ನರಕಬಿಲ – (ಜೈನ) ನರಕ ಎಂಬ ಬಿಲ
- ನರಕಭೂಮಿ – ನರಕಲೋಕ
- ನರಕಸ್ಥಾನ – ನರಕಭೂಮಿ
- ನರಕಾಂತಕ – ನರಕನೆಂಬ ರಾಕ್ಷಸನನ್ನು
- ಕೊಂದವನು, ಕೃಷ್ಣ; (ಜೈನ) ವಾಸುದೇವ
- ನರಕಾಗ್ನಿ – ನರಕದಲ್ಲಿ ಶಿಕ್ಷಿಸಲು ಬಳಸುವ ಬೆಂಕಿ
- ನರಕಾಯುಷ್ಯ – (ಜೈನ) ನರಕವಾಸದ ಅವಧಿ
- ನರಕಾರಿ – ಕೃಷ್ಣ
- ನರಕಾವಸ್ಥೆ – ನರಕವಾಸ
- ನರಕಾಸುರ – ನರಕ ಎಂಬ ಹೆಸರಿನ ರಾಕ್ಷಸ
- ನರಕೀಟ – ಕ್ಷುದ್ರ ಮನುಷ್ಯ
- ನರಡು – ದನಗಳಿಗೆ ಬರುವ ಒಂದು ರೋಗ
- ನರತ್ವ – ಮನುಷ್ಯನಾಗಿರುವಿಕೆ
- ನರನಂದನ – ಅರ್ಜುನನ ಮಗ, ಅಭಿಮನ್ಯು
- ನರನಾಥ – ರಾಜ
- ನರನಾಥಾಗ್ರಣಿ – ರಾಜಶ್ರೇಷ್ಠ
- ನರನಾಯಕ – ರಾಜ
- ನರಪ – ದೊರೆ
- ನರಪತಿ – ನರಪ
- ನರಪತಿತನಯ – ರಾಜಕುಮಾರ
- ನರಪಾಲ – ಜನರನ್ನು ರಕ್ಷಿಸುವವನು, ರಾಜ
- ನರಬಲ – ಪದಾತಿಸೈನ್ಯ
- ನರಮಹಿತ – ಜನರ ಗೌರವಕ್ಕೆ ಪಾತ್ರನಾದವನು
- ನರಲ್ – ವೇದನೆಯ ಧ್ವನಿ ಮಾಡು
- ನರಲೋಕ – ಮನುಷ್ಯರ ಲೋಕ; ಭೂಲೋಕ
- ನರಲೋಕದಲ್ಲ – ಭೂಲೋಕವನ್ನೇ ತಲ್ಲಣಗೊಳಿಸುವವನು
- ನರವಕ್ತ್ರ – ಮನುಷ್ಯನ ಮುಖವುಳ್ಳ, ಪ್ರಮಥರಲ್ಲಿ ಒಬ್ಬ
- ನರವರ – ನರಶ್ರೇಷ್ಠ
- ನರವಾಹ(ನ) – ಮನುಷ್ಯನನ್ನು ವಾಹನವಾಗಿ ಪಡೆದವನು, ಕುಬೇರ
- ನರವು – ಸ್ನಾಯುರಜ್ಜು; ಸ್ನಾಯುವನ್ನು ಮೂಳೆಗೆ
- ಸೇರಿಸುವ ಅಂಗಾಂಶ; ನರ
- ನರವೈದ್ಯ – ಮಾನವವೈದ್ಯ
- ನರಶಾಸನ – ಶಾಸನದ ಮನುಷ್ಯರೂಪ
- ನರಸಮಿತಿ – ಜನಸಮೂಹ
- ನರಸಿಂಹ – ವಿಷ್ಣುವಿನ ಮನುಷ್ಯ ದೇಹ ಹಾಗೂ ಸಿಂಹದ ಮುಖವುಳ್ಳ ನಾಲ್ಕನೆಯ ಅವತಾರ
- ನರಸಿಂಹಾಡಂಬರ – ನರಸಿಂಹನ ಆಟೋಪ
- ನರಸುತ – ಅರ್ಜುನನ ಮಗ, ಅಭಿಮನ್ಯು
- ನರಸೇವೆ – ಮನುಷ್ಯಸೈನ್ಯ
- ನರಾಕೃತಿ – ಮನುಷ್ಯ ರೂಪ
- ನರಾಧೀಶ – ರಾಜ
- ನರಿ – ಜಂಬುಕ
- ನರುವಾಯ – ಒಂದು ಬಗೆಯ ಬಾಣ(?)
- ನರೆ – ಬಿಳಿಗೂದಲು; ಮುಪ್ಪು
- ನರೆದಲೆ – ನರೆತಕೂದಲಿರುವ ತಲೆ
- ನರೆಪ – ಕೂದಲು ನರೆತವನು; ಮುದುಕ
- ನರೆಯೇ¾ು – ಕೂದಲು ಬೆಳ್ಳಗಾಗು; ಮುಪ್ಪಾಗು
- ನರೇಂದ್ರ – ರಾಜ
- ನರೇಂದ್ರಚಂದ – ರಾಜರಲ್ಲಿ ಚಂದ್ರನಂತಿರುವವನು
- ನರ್ತಕ – ನೃತ್ಯಗಾರ
- ನರ್ತಕಾಳಿ – ನೃತ್ಯಗಾರರ ಸಮೂಹ
- ನರ್ದನ – ದನಗಳ ಗುಟುರು
- ನರ್ಮ – ಆಟ; ವಿನೋದ
- ನರ್ಮಗೋಷ್ಠಿ – ವಿನೋದಗೋಷ್ಠಿ
- ನರ್ಮಸಚಿವ – ರಾಜನ ಆಪ್ತ, ಸಖ
- ನರ್ಮಸಹಾಯ – ನರ್ಮಸಚಿವ
- ನರ್ಮಾಲಾಪ – ವಿನೋದದ ಮಾತು, ಹರಟೆ
- ನಲವರಕೆ – ಪ್ರೀತಿಯ ಆಶೀರ್ವಾದ
- ನಲವರಿ – ಸಂತಸಗೊಳ್ಳು
- ನಲವು – ಸಂತಸ; ಪ್ರಿತಿ
- ನಲವುಗೆಡು – ಸಂತಸ ಕಳೆದುಕೊ
- ನಲವೇ¾ು – ಸಂತಸ ಹೊಂದು
- ನಲಿ – ಸಂತಸಗೊಳ್ಳು; ಕುಣಿ
- ನಲಿದಾಡು – ಸಂತಸದಿಂದ ಕುಣಿದಾಡು
- ನಲಿಗರ್ಚು – ಪ್ರೀತಿಯಿಂದ ಕಚ್ಚು; ದಂತಕ್ಷತ
- ನಲಿಯಿಸು – ಸಂತಸಗೊಳಿಸು
- ನಲಿವರಿ – ಸಂತಸದಿಂದ ಓಡಾಡು
- ನಲಿವು – ಸಂತೋಷ
- ನಲ್ಗಳಲ್ – ರುಚಿಯಾದ ಮಜ್ಜಿಗೆ
- ನಲ್ಗಳವು – ಹೆಚ್ಚು ಸಂಪಾದನೆಯ ಕಳ್ಳತನ
- ನಲ್ಗಾಡಿ – ಮೋಹಕ ಚೆಲುವು
- ನಲ್ಗುಟುಕು – ಸವಿಯಾದ ಗುಟುಕು
- ನಲ್ಗುನಿಗುಂಜಿ – ಒಳ್ಳೆಯ ಗುಲಗಂಜಿ
- ನಲ್ಗೆಳೆಯ – ಪ್ರೀತಿಯ ಗೆಲೆಯ
- ನಲ್ಗೊಣಸು – ಮೋಹಕ ಜಿಂಕೆಮರಿ
- ನಲ್ಜವ್ವನೆ – ಯುವಸುಂದರಿ
- ನಲ್ದಂಬುಲ – ರುಚಿಕರವಾದ ತಾಂಬೂಲ
- ನಲ್ನುಡಿ – ಒಳ್ಳೆಯ ಮಾತು
- ನಲ್ನೋಟ – ಪ್ರೀತಿಪೂರ್ವಕ ನೋಟ
- ನಲ್ಮಿಸುನಿ – ಅಪರಂಜಿ
- ನಲ್ಮೆ – ಪ್ರೀತಿ; ಒಳಿತು
- ನಲ್ಮೆಗಾರ್ತಿ – ನಲ್ಲೆ
- ನಲ್ಲ – ಪ್ರಿಯಕರ; ಒಳ್ಳೆಯ
- ನಲ್ಲರ್ – ಹಿತವರು
- ನಲ್ಲಂಬು – ಮೋಹದ ಬಾಣ
- ನಲ್ಲಮನಂದೋ¾ು – ಪ್ರೀತಿ ತೋರಿಸು
- ನಲ್ಲಲರ್ – ಸುಂದರ ಹೂ
- ನಲ್ಲವರಕೆ – ಶುಭ ಹಾರೈಕೆ
- ನಲ್ಲವಳ್ – ಪ್ರಿಯೆ
- ನಲ್ಲವೂ – ನಲ್ಲಲರ್
- ನಲ್ಲವೊಣರ್ – ನಲ್ಲ+ಪೊಣರ್, ಪ್ರಿಯರ ಜೋಡಿ
- ನಲ್ಲುಣಿಸು – ಸವಿಯಾದ ಊಟ
- ನಲ್ಲುಲಿ – ಸವಿನುಡಿ
- ನಲ್ಲಳ್ – ಪ್ರಿಯೆ
- ನಲ್ಲೆತ್ತು – ಶ್ರೇಷ್ಠ ಎತ್ತು
- ನಲ್ವಗೆಗೊಳ್ – ನಲ್+ಬಗೆಗೊಳ್, ಒಳ್ಳೆಯ
- ಮನಸ್ಸನ್ನು ಹೊಂದು
- ನಲ್ವಚ್ಚ – ಸುಂದರ ಆಭರಣ
- ನಲ್ವರಕೆ – ಶುಭ ಹರಕೆ
- ನಲ್ಸೊಗ – ಅತೀವ ಸಂತೋಷ
- ನವ – ಹಿಸದಾದ
- ನವಕ – ಒಂಬತ್ತರ ಗುಂಪು
- ನವಕಂಟಕ – ಹೊಸ ಮುಳ್ಳು
- ನವಕಮಲ – ಹೊಸತಾಗಿ ಅರಳಿದ ತಾವರೆ
- ನವಕವಿತ್ವ – ಹೊಸ ಕವಿತೆ
- ನವಖಂಡ – ಒಂಬತ್ತು ತುಂಡುಗಳು; (ಜೈನ) ಇಂದ್ರ, ಶ್ವೇತ, ತಾಮ್ರ, ಗಭಸ್ತಿ, ನಾಗ, ಸೌಮ್ಯ, ಗಂಧರ್ವ, ಚಾರಣ, ಭರತ ಎಂಬ ಭೂಮಿಯ ಒಂಬತ್ತು ಭಾಗಗಳು
- ನವಗ್ರೈವೇಯಕ – (ಜೈನ) ಸ್ವರ್ಗಗಳ ಮೇಲಿರು ಒಂಬತ್ತು ಕಲಾತೀತ ಸ್ವರ್ಗಗಳು: ಸುದರ್ಶನ, ಅಮೋಘ, ಸುಪ್ರಬುದ್ಧ, ಯಶೋಧರ, ಸುಭದ್ರ, ಸುವಿತಾಳ, ಸುಮನಸ, ಸೌಮನಸ, ಪ್ರೀತಿಕರ
- ನವನಾರಕ – ನರಕವನ್ನು ಹೊಸತಾಗಿ ಪ್ರವೇಶಿಸಿದವನು
- ನವನಿಧಿ – (ಜೈನ) ಚಕ್ರವರ್ತಿಯ ಬಳಿ ಇರುವ ಕಾಳ(ನೀಲ), ಮಹಾಕಾಳ, ನೈಸರ್ಪ, ಪಾಂಡುಕ, ಪದ್ಮ, ಪಿಂಗಳ, ಮಾಣವಕ, ಶಂಖ, ಸರ್ವರತ್ನ ಎಂಬ ಒಂಬತ್ತು ರತ್ನಗಳು
- ನವನಿಧಿವಲ್ಲಭ – ನವನಿಧಿಗಳಿಗೆ ಒಡೆಯ, ಚಕ್ರವರ್ತಿ
- ನವನಿಧಿಸನಾಥ – ನವನಿಧಿವಲ್ಲಭ
- ನವನೀತಚೋರ(ಕ) – ಬೆಣ್ಣೆಯ ಕಳ್ಳ, ಕೃಷ್ಣ-
- ನವನೀಲೋತ್ಪಲ – ಹೊಸತಾಗಿ ಅರಳಿದ ಕನ್ನೈದಿಲೆ
- ನವನೋಕಷಾಯ – (ಜೈನ) ಸುಖದುಃಖಗಳಿಗೆ ಕಾರಣವಾದ ಒಂಬತ್ತು ಕಿಂಚಿತ್ ಕಷಾಯಗಳು: ಹಾಸ್ಯ, ರತಿ, ಆರತಿ, ಶೋಕ, ಭತಯ, ಜಿಗುಪ್ಸೆ. ಸ್ತ್ರೀವೇದ, ಪುಂವೇದ, ನಪುಂಸಕವೇದ
- ನವಪಟವಾಸ – ಹೊಸ ಸುಗಂಧದ ಪುಡಿ
- ನವಪದಾರ್ಥ – (ಜೈನ) ಜೀವ, ಅಜೀವ, ಪುಣ್ಯ, ಪಾಪ, ಆಸ್ರವ, ಸಂವರ, ನಿರ್ಜರ, ಬಂಧ, ಮೋಕ್ಷ ಎಂಬ ಒಂಬತ್ತು ತತ್ವಗಳು
- ನವಪಯೋದ – ಹೊಸ ಮೋಡ
- ನವಪಿಷ್ಟಚರ್ಚಿಕೆ – ಹೊಸ ಹಿಟ್ಟಿನ ಲೇಪ
- ನವಪುಷ್ಪಿತೆ – ಹೊಸತಾಗಿ ಹೂ ಬಿಟ್ಟುದು; ಹೊಸತಾಗಿ ಋತುಮತಿಯಾದ ಹುಡುಗಿ
- ನವಪೇಟಕ – ಹೊಸ ಪರಿವಾರ
- ನವಬಂಧ – ನವಮನೋಕಷಾಯ
- ನವಭೂತಭಾಷೆ – ಹೊಸ ಪೈಶಾಚಿಕ ಭಾಷೆ; ಹೊಸ ಮರುಳುಗಳ ಭಾಷೆ
- ನವಮ – ಒಂಬತ್ತನೆಯ
- ನವಮಂಡನ – ಹೊಸ ಆಭರಣ
- ನವಮಣಿ – ನವರತ್ನಗಳು: ವಜ್ರ, ವೈಡೂರ್ಯ, ಗೋಮೇಧಕ, ಪುಷ್ಯರಾಗ, ನೀಲ,
- ಮರಕತ, ಮಾಣಿಕ್ಯ, ಹವಳ, ಮುತ್ತು
- ನವಮತಿ – ಹೊಸತಾದ ಪ್ರತಿಭೆ
- ನವಮಾಲಿಕಾಲತೆ – ಹೊಸ ಮಲ್ಲಿಗೆಯ ಬಳ್ಳಿ
- ನವಮಾಸ – ಒಂಬತ್ತು ತಿಂಗಳೂ; ಗರ್ಭಧಾರಣೆಯ ಅವಧಿ
- ನವಮೀವಾಸರ – ನವಮಿಯ ದಿನ
- ನವಮೇಘ – ಹೊಸ ಮೋಡ
- ನವಯವ್ವನ – ಏರುಜವ್ವನ
- ನವಯುವ – ಏರುಜವ್ವನದವನು
- ನವಯುವತಿ – ಏರುಜವ್ವನದವಳು
- ನವಯೌವನ – ಹೊಸ ಹರಯ
- ನವಯೌವನಾಂಕ – ನವಯೌವನ
- ನವಯೌವನೆ – ನವಯುವತಿ
- ನವರಂಗ – ದೇವಸ್ಥಾನದ ರಂಗಮಂಟಪ
- ನವರಕ್ತ – ಹೊಸ ರಕ್ತ
- ನವರಕ್ತತೆ – ಹೊಸತಾಗಿ ಮೂಡಿದ ಕೆಂಬಣ್ಣ
- ನವರತ್ನ – ನವಮಣಿ
- ನವರತ್ನಕೂಟ – ಒಂಬತ್ತೂ ರತ್ನಗಳನ್ನು ಅಳವಡಿಸಿದ ಶಿಖರ
- ನವರತ್ನಮಾಲೆ – ನವರತ್ನಗಳ ಹಾರ
- ನವರತ್ನವರ್ಣಪೂರ – ಬಣ್ಣಬಣ್ಣದ ಹಾಸು
- ನವರತ್ನಾಭರಣ – ಒಂಬತ್ತೂ ರತ್ನಗಳನ್ನು ಅಳವಡಿಸಿದ ಆಭರಣ
- ನವರತ್ನೋಜ್ವಲ – ನವರತ್ನಗಳಿಂದ ಕಾಂತಿಯುಕ್ತವಾದ
- ನವರಸ – ಒಂಬತ್ತು ರಸಗಳು: ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತ
- ನವಲೋಹಿತ – ಹೊಸ ರಕ್ತ
- ನವವಧು – ನವಯುವತಿ
- ನವವಯಸ – ಹೊಸ ಹರಯ
- ನವವರ – ಮದುವಣಿಗ
- ನವವಾರಿದ – ಹೊಸ ಮೋಡ
- ನವವಾಸರ – ಒಂಬತ್ತು ದಿನಗಳು
- ನವವಿಧ – ಒಂಬತ್ತು ಬಗೆ; ಹೊಸ ಬಗೆ
- ನವವಿಧಪುಣ್ಯ – (ಜೈನ) ಚರಿಗೆ ನೀಡುವಾಗ ಅನುಸರಿಸಬೇಕಾದ ಒಂಬತ್ತು ಕ್ರಮಗಳು: ತ್ರಿಪ್ರದಕ್ಷಿಣೆ, ಉಚ್ಚಾಸನ ಸಮರ್ಪಣೆ, ಪಾದಪೂಜೆ, ಅರ್ಚನೆ, ಪ್ರಣಾಮ, ವಚನಶುದ್ಧಿ, ಕಾಯಶುದ್ಧಿ, ಮನಶ್ಶುದ್ಧಿ, ಏಷಣಾಶುದ್ಧಿ
- ನವವಿಧಬ್ರಹ್ಮಚರ್ಯ – (ಜೈನ) ಮನಸ್ಸು, ದೇಹ, ಮಾತುಗಳಲ್ಲಿಯೂ ಕೃತ, ಕಾರಿತ, ಅನುಮೋದನ ಎಂಬ ಬಗೆಗಳು
- ನವವಿಧಭಕ್ತಿ – ಭಕ್ತಿಯ ಒಂಬತ್ತು ಬಗೆಗಳು -ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ,
- ನವವಿವರ – ನವದ್ವಾರ: ಕಣ್ಣುಗಳು, ಕಿವಿಗಳು, ಮೂಗಿನ ಹೊಳ್ಳೆಗಳು, ಬಾಯಿ, ಮೂತ್ರದ್ವಾರ, ಗುದದ್ವಾರ
- ನವವೈಜಯಂತಿ – ಹೊಸ ಧ್ವಜ
- ನವವೈಯಾಕರಣ – ಹೊಸ ವ್ಯಾಕರಣಪಂಡಿತ; ಹೊಸ ನಿಯಮಗಳನ್ನು ಜೋಡಿಸುವ ವ್ಯಾಕರಣಪಂಡಿತ
- ನವಶಶಿಕಳೆ – ಶುಕ್ಲಪಕ್ಷಾರಂಭದ ಚಂದ್ರಕಾಂತಿ
- ನವಶಶಿಲೇಖೆ – ನವಶಶಿಕಳೆ
- ನವಸಂಗ – ಹೊಸ ಕೂಟ
- ನವಸಂಧ್ಯಾರಾಗ – ಹೊಸ ಸಂಜೆಗೆಂಪು ಬಣ್ಣ
- ನವಸಂಧ್ಯೆ – ಹೊಸ ಸಂಜೆ
- ನವಸಹಕಾರ – ಚಿಗುರಿನಿಂದ ಲಕಲಕಿಸುವ ಮಾವಿನ ಮರ
- ನವಸಂಧ್ಯಾಜಳದ – ಹೊಸ ಸಂಜೆಗೆಂಪು ಬಣ್ಣದ ಮೋಡ
- ನವಸಂಧ್ಯಾರಾಗ – ಹೊಸ ಸಂಜೆಗೆಂಪು ಬಣ್ಣ
- ನವಸಿಗ – ಪರಪೀಡಕ
- ನವಸುಕುಮಾರತೆ – ನವಲಾಲಿತ್ಯ
- ನವಸುಧೆ – ಹೊಸ ಅಮೃತ
- ನವಸೌರಭ್ಯ – ಹೊಸ ಪರಿಮಳ
- ನವಸ್ಥಾನಕ – ಚಿತ್ರದ ಒಂಬತ್ತು ಬಗೆಯ ನೋಟಗಳು: ಋಜು, ಋಜುಪರಾವೃತ್ತಿ, ಅರ್ಧಋಜು, ಅರ್ಧಋಜುಪರಾವೃತ್ತಿ, ಸಾಚಿ, ಸಾಚಿಪರಾವೃತ್ತಿ, ದ್ವ್ಯರ್ಧಾಕ್ಷಂ, ತತ್ಪರಾವೃತ್ತಿ, ಪಾಶ್ರ್ವಗತ
- ನವಹಾಟಕ – ಅಪರಂಜಿ
- ನವಹಾರಿದ್ರಕ – ಹೊಸ ಅರಿಸಿನ
- ನವಾಂಕುರ – ಹೊಸ ಚಿಗುರು
- ನವಾಯಿ – ಠೀವಿ; ಅಪ್ರತಿಮ ಚೆಲುವು; ಹೊಸದು
- ನವಿರ್ – ಕೂದಲು; ತುಪ್ಪಳು
- ನವಿಲ್ – ಮಯೂರ
- ನವಿಲಾಟ – ನವಿಲ ನರ್ತನ
- ನವಿಲುಯ್ಯಲ್ – ನವಿಲಿನಾಕಾರದ ಉಯ್ಯಾಲೆ
- ನವಿಲ್ವಾಣತಿ – ನವಿಲ್+ಬಾಣತಿ, ಹೊಸತಾಗಿ ಮರಿಹಾಕಿದ ನವಿಲು
- ನವೀನ – ಹೊಸತು
- ನವೀನಚೀನ – ಹೊಸ ರೇಷ್ಮೆ ಬಟ್ಟೆ
- ನವೋತ್ಪಲದಲ – ಹೊಸ ನೈದಿಲೆಯ ಪಕಳೆ
- ನವೋದಬಿಂದು – ಹೊಸ ನೀರಿನ ಹನಿ, ಮಳೆ ಹನಿ
- ನವ್ಯ – ಹೊಸತಾದ
- ನವ್ಯಾಮೋದ – ಹೊಸ ಸುವಾಸನೆ
- ನಷ್ಟರಾಜ – ರಾಜ ಇಲ್ಲವಾಗುವುದು
- ನಸಿ – ಜೀರ್ಣವಾಗು
- ನಸಿಗುತ್ತ – ಶರೀರ ನವೆಯುವ ರೋಗ
- ನಸು – ಸ್ವಲ್ಪ
- ನಸುಗಂದು – ಸ್ವಲ್ಪ ಕಪ್ಪು ಬಣ್ಣವಾಗು
- ನಸುಗರ್ಪು – ನಸುಗಪ್ಪು, ತಿಳಿಯಾದ ಕಪ್ಪು
- ನಸುಗುತ್ತು – ಸ್ವಲ್ಪ ಕುಗ್ಗು
- ನಸುಗೆಂಪು – ತಿಳಿಗೆಂಪು
- ನಸುಗೆತ್ತು – ಸ್ವಲ್ಪ ಅದುರು
- ನಸುಗೇಳ್ – ಅಸ್ಪಷ್ಟವಾಗಿ ಕೇಲಿಸು
- ನಸು ಜೋಲ್ – ಸ್ವಲ್ಪ ಜಾರು
- ನಸುತೇಂಕುದೇಂಕು – ಸ್ವಲ್ಪ ತೇಲಾಡು
- ನಸುದಗ್ಗು – ಸ್ವಲ್ಪ ಜಾರು
- ನಸುದೆ¾õÉ – ಕೊಂಚ ತೆರೆ
- ನಸುದೋರೆ – ಹಣ್ಣಾಗಲು ತೊಡಗಿರುವ ಕಾಯಿ
- ನಸುದೋರೆವಣ್ – ಹೊಸ ದೋರೆಹಣ್ಣು
- ನಸುನಗೆ – ಮುಗುಳಗನಗೆ
- ನಸುನಳಿ – ಸ್ವಲ್ಪ ಬಾಗು
- ನಸುನಿದ್ದೆ – ಗಾಢವಲ್ಲದ ನಿದ್ದೆ
- ನಸುನೀಡು – ಸ್ವಲ್ಪ ಚಾಚು
- ನಸುನೆನೆ – ಸ್ವಲ್ಪ ಒದ್ದೆಯಾಗು
- ನಸುನೋಟ – ಕುಡಿನೋಟ
- ನಸುಬಳಲ್ಕೆ – ಸ್ವಲ್ಪ ದಣಿವು
- ನಸುಬಿಸಿ – ಬೆಚ್ಚನೆ
- ನಸುಬಿಳಿದು – ಸ್ವಲ್ಪ ಬೆಳ್ಳಗಾಗು
- ನಸುಬೆಳರ್ – ಸ್ವಲ್ಪ ಬಿಳಿಚಿಕೊ
- ನಸುಮರ್ಬು – ನಸುಗತ್ತಲೆ
- ನಸುಮಸುಳ್ – ಕೊಂಚ ಕಾಂತಿಗುಂದು
- ನಸುಮಾಸು – ನಸುಮಸುಳ್
- ನಸುಮುಚ್ಚು – ಕೊಂಚ ಮುಚ್ಚಿಕೊ
- ನಸುಮುಚ್ಚೆವೋಗು – ಸ್ವಲ್ಪಕಾಲ ಮೂರ್ಛೆಹೋಗು
- ನಸುಮುಟ್ಟು – ಸ್ವಲ್ಪ ತಾಗು
- ನಸುಮುರಿ – ಕೊಂಚ ತಿರುಗು
- ನಸುಮುಸುಂಕು – ತೆಳು ಪರದೆ
- ನಸುಮೆಲ್ – ಸ್ವಲ್ಪ ತಿನ್ನು
- ನಸುರೆಯ – ದಿಟ
- ನಸುಬಾಗು – ಕೊಂಚ ಬಗ್ಗು
- ನಸುವಾಡು – ಕೊಂಚ ಬಾಡು
- ನಸುವಿರಿ – ಕೊಂಚ ಅರಳು
- ನಸುವೆಸೆ – ಕೊಂಚ ಬಿಗುಮಾನಪಡು
- ನಸುವೆಳಗು – ನಸುಕಾಂತಿ
- ನಸುವೆಳ್ದಿಂಗಳ್ – ಮಬ್ಬು ಬೆಳದಿಂಗಳು
- ನಸುವೆಳ್ಪು – ಕೊಂಚ ಬಿಳಿಪು
- ನಸುಸಂಜೆ – ಸಂಜೆಯ ಆರಂಭ
- ನಸುಸುಯ್ – ಹಗುರಾಗಿ ನಿಟ್ಟುಸಿರುಬಿಡು
- ನಸುಸುರ್ಕು – ಕೊಂಚ ಕುಗ್ಗು
- ನಸುಸೋಂಕು – ಸ್ವಲ್ಪ ತಾಕು; ಮೃದುಸ್ಪರ್ಶ
- ನಸೆ – ಬೆದೆ, ಕಾಮಾತುರ
- ನಸೆಮಸಪು – ಕಾಮಾತುರತೆ
- ನಸೆಯಳಿಪು – ಕಾಮಾತುರ
- ನಸೆಯಿಚ್ಚೆ – ನಸೆಯಳಿಪು
- ನಸೆವಣಕ – ಬೆದೆಗೆ ಬಂದ ಪ್ರಾಣಿ
- ನ ಹನ್ಯಾತ್ – ಕೊಲ್ಲುವುದಿಲ್ಲವೋ
- ನಳಕೂಬರ – ಕುಬೇರನ ಮಗ
- ನಳನಳಿಸು – ಕಾಂತಿಗೊಳ್ಳು
- ನಳಿ – ಕೋಮಲವಾದ; ಬಾಗಿದ
- ನಳಿಗೊಂಬು – ಎಳೆ ರೆಂಬೆ
- ನಳಿದೋಳ್ – ಕೋಮಲ ಬಾಹು
- ನಳಿನ – ಕಮಲ
- ನಳಿನದಳ – ತಾವರೆಯ ಪಕಳೆ
- ನಳಿನದಳನಯನೆ – ತಾವರೆಯ ಪಕಳೆಯಕಾರದ ಕಣ್ಣುಳ್ಳವಳು
- ನಳಿನದಳಪುಟ – ತಾವರೆಯೆಲೆಯ ದೊನ್ನೆ
- ನಳಿನದಳಾಯತಾಕ್ಷ(ಕ್ಷಿ) – ಕಮಲದ ಎಸಳಿನಂತೆ ಅಗಲವಾದ ಕಣ್ಣುಗಳುಳ್ಳವನು(ಳು)
- ನಳಿನನಿಭ – ತಾವರೆಯಂತಹ
- ನಳಿನಭವಾಂಗ – ಬ್ರಹ್ಮನ ಶರೀರ
- ನಳಿನವನ – ಕಮಲಗಳ ಗುಂಪು
- ನಳಿನಸಮಾಜ – ನಳಿನವನ
- ನಳಿನಾಕರ – ಕಮಲಗಳ ನೆಲೆ; ಕೊಳ
- ನಳಿನಾಕ್ಷ – ಕಮಲದಂತೆ ಕಣ್ಣುಗಳುಳ್ಳವನು, ಕೃಷ್ಣ
- ನಳಿನಾನನೆ – ಕಮಲಮುಖಿ
- ನಳಿನಾಭಿನಳನ – ಕೋಮಲ ನಾಭಿಯ ಕಮಲ
- ನಳಿನಿ – ತಾವರೆ; ತಾವರೆಯ ಕೊಳ
- ನಳಿನೀಗರ್ಭಾಂಡ – ಬ್ರಹ್ಮಾಂಡ
- ನಳಿನೀತೀರ – ಕೊಳದ ತೀರ
- ನಳಿನೀಪತ್ರ – ತಾವರೆಯೆಲೆ
- ನಳಿನೀರೇಣು – ತಾವರೆಯ ಪರಾಗ
- ನಳಿನೇಕ್ಷಣೆ – ತಾವರೆಯಂತೆ ಕಣ್ಣುಳ್ಳವಳು
- ನಳಿಮೊಗ – ನಳನಳಿಸುವ ಮುಖ(ವುಳ್ಳವನು)
- ನಾಂಟು – ನಾಟು; ಚುಚ್ಚಿಕೊ
- ನಾಂದಿ – ಶುಭಕಾರ್ಯದ ಆರಂಭ
- ನಾಂದಿಸು – ಒದ್ದೆಮಾಡು
- ನಾಂದೀಪದ – ಮಂಗಳಾಚರಣೆಯ ಹಾಡು
- ನಾಂದೀಮುಖ – ಪಿತೃಗಳ ಆವಾಹನೆ; ಆರಂಭ
- ನಾಂದೀವಿಧಿ – ನಾಂದಿ
- ನಾಂದು – ನೆನೆಯಿಸು
- ನಾಂಬ – ಸೋಮಾರಿ
- ನಾಂಬು – ಆಲಸ್ಯಮಾಡು
- ನಾಕಚ್ಯುತ – ಸ್ವರ್ಗದಿಂದ ಇಳಿದವನು
- ನಾಕಜ – ದೇವತೆ
- ನಾಕಜನಾಥ – ದೇವೇಂದ್ರ
- ನಾಕಜಮಂತ್ರಿ – ಬೃಹಸ್ಪತಿ
- ನಾಕಜಾಪಗೆ – ದೇವಗಂಗೆ
- ನಾಕತರಂಗಿಣಿ – ನಾಕಜಾಪಗೆ
- ನಾಕನಾಯಕ – ದೇವೇಂದ್ರ
- ನಾಕಪತಿ – ನಾಕನಾಯಕ
- ನಾಕಪ್ರಭವ – ಸ್ವರ್ಗದಲ್ಲಿ ಹುಟ್ಟಿದ
- ನಾಕಲೋಕ – ಸ್ವರ್ಗಲೋಕ
- ನಾಕವಿಭವ – ಸ್ವರ್ಗದ ವೈಭವ
- ನಾಕಸದ್ಮ – ಸ್ವರ್ಗನಿವಾಸಿ, ದೇವತೆ
- ನಾಕಸುಖ – ಸ್ವರ್ಗಸುಖ
- ನಾಕಸ್ತ್ರೀ – ದೇವತಾಸ್ತ್ರೀ
- ನಾಕಾಧಿನಾಥ – ನಾಕನಾಯಕ
- ನಾಕಾನೀಕ – ದೇವತೆಗಳ ಸೈನ್ಯ
- ನಾಕಾನೋಕಹ – ದೇವಲೋಕದ ವೃಕ್ಷ, ಕಲ್ಪವೃಕ್ಷ
- ನಾಕಿ(ನಿ) – ದೇವತೆ
- ನಾಕಿನಾಯಕ – ದೇವೇಂದ್ರ
- ನಾಕಿನಿಕರ – ದೇವತೆಗಳ ಸಮೂಹ
- ನಾಕಿನಿಕಾಯ – ನಾಕಿನಿಕರ
- ನಾಕಿನಿಳಯ – ದೇವತೆಗಳ ನಿವಾಸ, ಸ್ವರ್ಗ
- ನಾಕಿವರ – ದೇವತಾಶ್ರೇಷ್ಠ, ದೇವೇಂದ್ರ
- ನಾಕೇಂದ್ರ – ನಾಕ+ಇಂದ್ರ, ದೇವೇಂದ್ರ
- ನಾಕೇಶ – ನಾಕೇಂದ್ರ; ಲೋಚು ಮಾಡಿಸಿಕೊಂಡವನು, ಸನ್ಯಾಸಿ
- ನಾಕೌಕ – ನಾಕ+ಓಕ, ದೇವತೆಗಳ ನಿಳಯ, ಸ್ವರ್ಗ
- ನಾಗ – ಹಾವು; ನಾಗರ ಕುಲದವನು; ನಾಗಸಂಪಿಗೆ; ಆನೆ; ಮೋಡ
- ನಾಗಚಂಪಕ – ಹೇಮಪುಷ್ಪ, ನಾಗಸಂಪಿಗೆ
- ನಾಗಠಾಣ – (ನಾಗಸ್ಥಾನ) ನಾಗರಕಲ್ಲುಗಳಿರುವ ಜಾಗ
- ನಾಗತರ – ಶ್ರೇಷ್ಠ ಆನೆ
- ನಾಗಧ್ವಜ – ಸರ್ಪಧ್ವಜ; ದುರ್ಯೋಧನ
- ನಾಗನಿವಾಸ – ನಾಗಠಾಣ; ಹುತ್ತ
- ನಾಗಪಾಶ – ಎದುರಾಳಿಯನ್ನು ಕಟ್ಟಿಹಾಕುವ ಒಂದು ದಿವ್ಯಾಸ್ತ್ರ
- ನಾಗಪಾಶವಿದ್ಯೆ – ನಾಗಪಾಶೊರಯೋಗದ ತಿಳಿವಳಿಕೆ
- ನಾಗಪುರ – ನಾಗಲೋಕ
- ನಾಗಬಂಧ – ಬಿಗಿಯಾದ ಅಪ್ಪುಗೆ
- ನಾಗರಕ – ರಾಜನಿಗೆ ಶೃಂಗಾರಸಹಾಯಕರಾದ ನಾಲ್ವರಲ್ಲಿ ಒಬ್ಬ; ಉಳಿದವರು, ವಿಟ, ವಿದೂಷಕ, ಪೀಠಮರ್ದ
- ನಾಗರಖಂಡ – ಹಸಿಶುಂಠಿ
- ನಾಗರಜ್ಜು – ನಾಗಪಾಶ
- ನಾಗರಾಜ – ಆದಿಶೇಷ
- ನಾಗರಿಕ – ನಗರವಾಸಿ
- ನಾಗರು – ನಾಗರಕಲ್ಲು
- ನಾಗಲೋಕ – ಪಾತಾಳ
- ನಾಗವಟ್ಟಳಿಗೆ – ಒಂದು ಬಗೆಯ ವಸ್ತ್ರ
- ನಾಗವಟ್ಟಿಗೆ – (ನಾಗಪಟ್ಟಿಕಾ) ನಾಗಂದಿಗೆ
- ನಾಗವಲಿ – ನಾಗೋಲಿ, ಮದುವೆಯ ಮುಕ್ತಾಯ
- ನಾಗವಲ್ಲಿ – ವೀಳೆಯ ಬಳ್ಳಿ-
- ನಾಗವಿಭೂಷಣ – ಸರ್ಪಾಕಾರದ ಒಂದು ಆಭರಣ; ಶಿವ
- ನಾಗವಿಮಾನ – ನಾಗಕನ್ನಿಕೆಯರ ಉಪ್ಪರಿಗೆ
- ನಾಗವ್ರಜ – ಸರ್ಪಸಮೂಹ; ಗಜಸಮೂಹ; ಕಪಿಸಮೂಹ
- ನಾಗಶಯನ – ಹಾವಿನ ಮೇಲೆ ಮಲಗಿದವನು, ವಿಷ್ಣು
- ನಾಗಶಯ್ಯೆ – ಹಾವಿನ ಹಾಸಿಗೆ
- ನಾಗಸಂಪಗೆ – ನಾಗಕೇಸರ ಹೂ
- ನಾಗಹ್ರದ – ಹಾವಿನ ಮಡು; ಯಮುನಾನದಿ
- ನಾಗಾಂಗನೆ – ನಾಗಕನ್ನಿಕೆ; ಹೆಣ್ಣು ಆನೆ
- ನಾಗಾಂತಕ – ಗರುಡ
- ನಾಗಾಧಿಪ – ಆದಿಶೇಷ
- ನಾಗಾಧೀಶ – ನಾಗಾಧಿಪ
- ನಾಗಾಭರಣ – ಸರ್ಪಭೂಷಣ, ಶಿವ
- ನಾಗಾಯ್ತ – ಮಾವತಿಗ
- ನಾಗಾರಿ – ಗರುಡ
- ನಾಗಾರಿಕೇತು – ಗರುಡಕೇತನ, ಕೃಷ್ಣ
- ನಾಗಾಲಯ – ನಾಗಠಾಣ
- ನಾಗಿಣಿ – ನಾಗಕನ್ಯೆ; ಹೆಣ್ಣು ಹಾವು
- ನಾಗೇಂದ್ರ – ಆದಿಶೇಷ
- ನಾಟಕ – ರೂಪಕ, ಅಭಿನಯ ಪ್ರದರ್ಶನ
- ನಾಟಕಶಾಲೆ – ನಾಟಕವಾಡುವ ರಂಗಮಂದಿರ
- ನಾಟ್ಯವಿದ್ಯೆ – ನೃತ್ಯಕಲೆ
- ನಾಟ್ಯವೇದ – ನಾಟ್ಯವಿದ್ಯೆ
- ನಾಟ್ಯವೇದಮೂರ್ತಿ – ನೃತ್ಯಕಲೆಯ ಸಾಕಾರದಂತಿರುವವನು
- ನಾಟ್ಯಶಾಲೆ – ನೃತ್ಯಶಾಲೆ
- ನಾಟ್ಯಾಗಮ – ನಾಟ್ಯವಿದ್ಯೆ
- ನಾಟ್ಯಾಲಯ – ನಾಟ್ಯಗೃಹ
- ನಾಡರಸು – ನಾಡಿನ ರಾಜ
- ನಾಡಾಡಿ – ಸಾಮಾನ್ಯ (ಮನುಷ್ಯ)
- ನಾಡಿಕೆ – ಒಂದು ಗಳಿಗೆ, ಇಪ್ಪತ್ತನಾಲ್ಕು ನಿಮಿಷ
- ನಾಡಿಗ – ಪ್ರಜೆ
- ನಾಡು – ಜನರಿರುವ ಪ್ರದೇಶ
- ನಾಡುವಿಡಿ – ನಾಡನ್ನು ಹಿಡಿ, ಆಕ್ರಮಿಸು
- ನಾಡೆ – ಅತಿಶಯವಾಗಿ
- ನಾಡೆಯುಂ – ನಾಡೆ
- ನಾಡೊವಜ – ನಾಡ ಗುರು
- ನಾಣ್ – ಲಜ್ಜೆ; ನಾಚಿಕೆಯ ಜಾಗ, ಗುಹ್ಯೇಂದ್ರಿಯ
- ನಾಣಳ್ಕು – ನಾಚಿಕೆಯಿಂದಾದ ಭಯ
- ನಾಣ¿Â – ನಾಚಿಕೆಬಿಡು
- ನಾಣಿಲಿ – ನಾಚಿಕೆಯಿಲ್ಲದ ವ್ಯಕ್ತಿ
- ನಾಣೀಲಿಗ – ನಾಣಿಲಿ
- ನಾಣಿಲಿವೆಣ್ – ನಾಚಿಕೆಯಿಲ್ಲದ ಹೆಣ್ಣು
- ನಾಣೋಡೆಯ – ವಿಟ
- ನಾಣ್ಗರೆ – ನಾಚಿಕೆಪಡು
- ನಾಣ್ಗಾಪು – ಮಾನರಕ್ಷಣೆ
- ನಾಣ್ಗುಂದು – ನಾಚಿಕೆಯಿಂದ ಕುಗ್ಗು
- ನಾಣ್ಗೆಡು – ನಾಚಿಕೆಯನ್ನು ತೊರೆ
- ನಾಣ್ಗೊಳ್ – ನಾಚಿಕೆಪಡು
- ನಾಣ್ಚಿಸು – ನಾಚಿಕೆಪಡಿಸು
- ನಾಣ್ಚು – ನಾಚಿಕೆಪಡು; ಅವಮಾನಗೊಳ್ಳು
- ನಾಣ್ಣುಡಿ – ಲೋಕೋಕ್ತಿ, ಗಾದೆ
- ನಾಣ್ದಳೆ – ನಾಚಿಕೆಪಡು
- ನಾಣ್ದಾಣ – ನಾಚಿಕೆಯ ಜಾಗ, ಗುಹ್ಯೇಂದ್ರಿಯ
- ನಾಣ್ಪು – ನಾಚಿಕೆ
- ನಾಣ್ಪೋಗು – ಪ್ರಾಣಿಗಳ ಸಂಭೋಗಕ್ರಿಯೆ
- ನಾಣ್ಮಾತು – ನಾಣ್ಣುಡಿ
- ನಾಣ್ಬಟ್ಟೆ – ನಾಡ ದಾರಿ
- ನಾಣ್ಬಟ್ಟೆವೆಣ್ – ನಾಡದಾರಿಯ ಹೆಣ್ಣು
- ನಾಣ್ಪದ – ಯೋನಿದ್ರವ
- ನಾಣ್ಬಿಡು – ನಾಚಿಕೆಯನ್ನು ಬಿಡು
- ನಾತ – ದುರ್ವಾಸನೆ
- ನಾತಂಬಿಡಿ – ವಾಸನೆಯನ್ನು ಅನುಸರಿಸು
- ನಾದ – ಧ್ವನಿ
- ನಾದಿಪಂಚೆ – ನಾದಿಪ+ಅಂಚೆ , ಧ್ವನಿಮಾಡುವ ಹಂಸ
- ನಾದಿಸು – ಧ್ವನಿಮಾಡು
- ನಾದುನಿ – ನಾದಿನಿ
- ನಾದೇಯ – ನದಿಗೆ ಸಂಬಂಧಿಸಿದ
- ನಾದೇಯಾಂಬು – ನದಿಯ ನೀರು
- ನಾನ್ – ಒದ್ದೆಯಾಗು; ನಾನು ಎಂಬ ಉತ್ತಮಪುರುಷ ಏಕವಚನ ಸರ್ವನಾಮ
- ನಾನಲ್ – ಜೊಂಡು
- ನಾನಲ್ವಳ್ಳ – ಜೊಂಡಿರುವ ಹಳ್ಳ
- ನಾನಲ್ವಿಡಿ – ಜೊಂಡಿರುವ ಜಾಗವನ್ನು ಹಿಡಿ
- ನಾನಾಜೀವ – ವಿಧವಿಧ ಜಂತುಗಳು
- ನಾನಾಭವ – ವಿವಿಧ ಜನ್ಮಗಳು
- ನಾನಾಯೋನಿ – ನಾನಾ ಜನ್ಮಗಳು
- ನಾನಾರಶ್ಮಿ – ನಾನಾ ಬಗೆಯ ಕಿರಣಗಳು
- ನಾನಾರ್ಥ – ವಿಧವಿಧವಾದ ಅರ್ಥಗಳು
- ನಾನಾವಿಧ – ವಿವಿಧ ಬಗೆ
- ನಾಭಸ – ಮಳೆಗಾಲಕ್ಕೆ ಸಂಬಂಧಿಸಿದ
- ನಾಭಿ – ಹೊಕ್ಕುಳು; ಕೇಂದ್ರ; (ಜೈನ) ಆದಿತೀರ್ಥಂಕರನ ತಂದೆ ನಾಭಿರಾಜ-
- ನಾಭಿಖಂಡನ – ಹೊಕ್ಕುಳ ಬಳ್ಳಿ ಕತ್ತರಿಸುವುದು
- ನಾಭಿದಘ್ನ – ಹೊಕ್ಕುಳು ಮುಳುಗುವಷ್ಟು ಆಳ
- ನಾಭಿನಗ – (ಜೈನ) ಮೇರುಪರ್ವತ
- ನಾಭಿನಾಳ(ಳ) – ಹೊಕ್ಕುಳ ಬಳ್ಳಿ
- ನಾಭೀನಿಕರ್ತನ – ನಾಭಿಖಂಡ
- ನಾಭಿಮಂಡಲ – ಹೊಕ್ಕುಳ ಸುತ್ತು
- ನಾಭಿಮೂಲ(ಳ) – ಹೊಕ್ಕುಳ ಬುಡ
- ನಾಭಿರಾಜ – (ಜೈನ) ಆದಿತೀರ್ಥಂಕರನ ತಂದೆ
- ನಾಭೀಸರೋಜ – ನಾಭಿಕಮಲ
- ನಾಭಿಸ್ಥಾನ – ಕೇಂದ್ರಸ್ಥಾನ
- ನಾಭೇಯ – ಬ್ರಹ್ಮ
- ನಾಮ – ಹೆಸರು
- ನಾರಕದುಃಖ – ನರಕದಲ್ಲಿ ಅನುಭವಿಸಬೇಕಾದ ನೋವು
- ನಾರಕಪಟಲ – (ಜೈನ) ಏಳು ನರಕಗಳ ಒಟ್ಟು ನಲವತ್ತೊಂಬತ್ತು ಸ್ತರಗಳು
- ನಾರಕಶರೀರ – ನರಲೋಕವಾಸಿಯ ಶರೀರ
- ನಾರಕಾವಾಸ – ನರಕಲೋಕ
- ನಾರಾಚ – ಬಾಣ; ತಕ್ಕಡಿ
- ನಾರಜ – ಮಾನವ(ಪದಾತಿ)ನಿಂದಾದ
- ನಾರದ – ಒಬ್ಬ ದೇವರ್ಷಿ
- ನಾರದತನಯೆ – ನಾರದ ಋಷಿಯ ಸಾಕುಮಗಳಾದ ಭದ್ರೆ
- ನಾರಸಿಂಗ – ನರಸಿಂಹಾವತಾರ
- ನಾರಾಚ – ಕಬ್ಬೀಣದಿಂದ ಮಾಡಿದ; ಬಾಣ; ತಕ್ಕಡಿ
- ನಾರಾಯಣ – ಕೃಷ್ಣ; (ಜೈನ) ಒಂಬತ್ತು ಮಂದಿ ವಾಸುದೇವರಲ್ಲಿ ಒಬ್ಬ
- ನಾರಿ – ಬಿಲ್ಲಿಗೆ ಕಟ್ಟುವ ಹಗ್ಗ; ಸ್ತ್ರೀ
- ನಾರಿಕೇಳ – ತೆಂಗು
- ನಾರುಗಿ – ನಾರು ಬಿಡಿಸು
- ನಾರುಡು – ನಾರುಮಡಿ ಉಟ್ಟುಕೊ
- ನಾರೆತ್ತು – ನಾರು ತೆಗೆ, ಎಳೆ ಬಿಡಿಸು
- ನಾಲಗೆ – ಜಿಹ್ವೆ
- ನಾಲಗೆಗಲಿ – ಮಾತಿನಲ್ಲಿ ಶೂರ
- ನಾಲಗೆದೀಂಟೆ – ನಾಲಗೆಯ ಚಪಲ; ಮಾತು ಅಥವಾ ರುಚಿಯ ಚಾಪಲ್ಯ
- ನಾಲಿಕೇರ – ನಾರಿಕೇಳ
- ನಾಲ್ಛಾಸಿರ – ನಾಲ್+ಸಾಸಿರ, ನಾಲ್ಕು ಸಾವಿರ
- ನಾಲ್ದಿಂಗಳ್ – ನಾಲ್ಕು ತಿಂಗಳು
- ನಾಲ್ದೆಸೆ – ನಾಲ್ಕು ದಿಕ್ಕು
- ನಾಲ್ನೂರ್ವರ್ – ನಾಲ್ಕು ನುರು ಮಂದಿ
- ನಾಲ್ಮೊಗ – ನಾಲ್ಕು ಮುಖ
- ನಾಲ್ಬಟ್ಟೆ – ನಾಲ್ಕು ದಾರಿಗಳು ಸೇರುವ ಜಾಗ
- ನಾಲ್ವಡಿ – ನಾಲ್ಕರಷ್ಟು
- ನಾಲ್ವೆರಲ್ – ನಾಲ್ಕು ಬೆರಳು
- ನಾಲ್ಸರ – ನಾಲ್ಕು ಬಾಣ
- ನಾವಿದ – ನಾಯಿಂದ, ಕ್ಷೌರಿಕ
- ನಾವಿದವಾಳ್ – ನಾವಿದ(ನಾಯಿಂದ)ನ ಕತ್ತಿ
- ನಾವೆ – ದೋಣಿ
- ನಾಸಕುಟ್ಮಳ – ಮೊಗ್ಗಿನಂತಹ ಮೂಗು
- ನಾಸಾಗ್ರ – ಮೂಗಿನ ತುದಿ
- ನಾಸಾಪುಟ – ಮೂಗಿನ ಹೊಳ್ಳೆ
- ನಾಸಿಕೆ – ಮೂಗು
- ನಾಳ(ಳಿ) – ದಂಟು
- ನಾಳಿಕೆ – ಇಪ್ಪತ್ತನಾಲ್ಕು ನಿಮಿಷಗಳ ಕಾಲ, ಒಂದು ಗಳಿಗೆ
- ನಾಳಿಕಾಪಾತ್ರೆ – ಕೋಳವೆಯಾಕಾರದ ಪಾತ್ರೆ; ಗಳಿಗೆಯ ಪಾತ್ರೆ
- ನಾಳಿಕೇರತೋಯ – ತೆಂಗಿನ ಕಾಯ ನೀರು
- ನಾಳಿಕೇರಪರ್ಣ – ತೆಂಗಿನ ಗರಿ
- ನಾಳಿಕೇರಫಲ – ತೆಂಗಿನ ಕಾಯಿ
- ನಾಳಿಕೇರರಸ – ಎಳನೀರು
- ನಾಳಿದು – ನಾಡಿದ್ದು, ಎರಡು ದಿನದನಂತರದ ದಿನ
- ನಾಳಿಪುಣ್ – ಬೆನ್ನೊಡೆದು ಆಗುವ ಹುಣ್ಣು
- ನಾಳೀವ್ರಣ – ನಾಳಿಪುಣ್
- ನಾಳಿಕೆ – ಒಂದು ಗಳಿಗೆ, ಇಪ್ಪತ್ತನಾಲ್ಕು ನಿಮಿಷ
- ನಾಳೀಜಂಘ – ಹೆಣ್ಣು ಕೋತಿ
- ನಾಳೆ – ಇಂದಿಗೆ ಮರುದಿನ
- ನಾಳ್ಗಡಿಗಳೆ – ಗಡಿಪಾರುಮಾಡು
- ನಿಃಕರುಣ – ನಿಷ್ಕರುಣ, ಕರುಣೆಯಿಲ್ಲದ
- ನಿಃಕಾಂಕ್ಷಿತ – ಆಸೆಯಿಲ್ಲದ
- ನಿಃಪ್ರವೀಚಾರ – ದೇಹಸಂಪರ್ಕವಿಲ್ಲದೆ ಸುಖವನ್ನನುಭವಿಸುವವನು
- ನಿಃಪ್ರಾದೇಶಿಕ – ಪ್ರದೇಶಾತೀತ, ದೇವರು
- ನಿಃಶಂಕತೆ- ನಿಶ್ಶಂಕತೆ, ಶಂಕೆಯಿಲ್ಲದ ಸ್ಥಿತಿ
- ನಿದಾನೆ – (ಜೈನ) ಮುಂದಿನ ಜನ್ಮದಲ್ಲಿ ಇಂಥದೇ ಸುಖ ಪಡೆಯಬೇಕೆಂದು ಆಸೆ ಹೊಂದಿದವಳು
- ನಿದ್ದೆ – ಸುಷುಪ್ತಿ, ಎಚ್ಚರವಿಲ್ಲದ ಸ್ಥಿತಿ
- ನಿದ್ದೆಗಣ್ಣು – ನಿದ್ದೆಯ ಭಾರದಿಂದಾಗಿ ಮುಚ್ಚಿಕೊಳ್ಳುವ ಕಣ್ಣು
- ನಿದ್ದೆಗೆಡು – ನಿದ್ದೆ ಇಲ್ಲದಿರು
- ನಿದ್ದೆಗೆಯ್ – ನಿದ್ದೆಮಾಡು
- ನಿದ್ರಾನಿದ್ರೆ – (ಜೈನ) ದರ್ಶನಾವರಣೀಯಗಳಲ್ಲಿ ಒಂದು: ಮತ್ತೆ ಮತ್ತೆ ನಿದ್ದೆ ಬರುವುದು, ನೋಡಿ,
ದರ್ಶನಾವರಣೀಯ' ಮತ್ತು
ಘಾತಿಕರ್ಮ’ - ನಿದ್ರಾಪ್ರಬೋಧಿನಿ – ನಿದ್ದೆಯಿಂದ ಎಚ್ಚರಗೊಳಿಸುವಂಥದು
- ನಿದ್ರಾಭಾರ – ನಿದ್ದೆಯ ಗಾಢತೆ
- ನಿದ್ರಾಭಾವ – ನಿದ್ರಾ+ಭಾವ, ನಿದ್ದೆಯ ಸ್ಥಿತಿ; ನಿದ್ರಾ+ಅಭಾವ, ನಿದ್ದೆ ಇಲ್ಲದಿರುವುದು
- ನಿದ್ರಾಮುದ್ರೆ – ನಿದ್ದೆ ಕವಿದ ಸ್ಥಿತಿ
- ನಿದ್ರಾರಸ – ನಿದ್ದೆಯ ಸಂತೋಷ
- ನಿದ್ರಾಲಸ್ಯ – ನಿದ್ದೆಯಿಂದುಂಟಾಗುವ ಜಡತೆ
- ನಿದ್ರಾಲಿಂಗನವಿಮುಖ – ನಿದ್ದೆಯಿಂದ ಎಚ್ಚರಗೊಂಡವನು
- ನಿದ್ರಾವಿದ್ರಾವಣ – ನಿದ್ದೆಯನ್ನು ಹೋಗಿಸುವವನು
- ನಿದ್ರಿಸು – ನಿದ್ದೆಮಾಡು
- ನಿಧಿಗಾಣ್ – ನಿಧಿಯನ್ನು ಕಾಣು
- ನಿಧಿದಾಣ – ಹೂತಿಟ್ಟ ಹಣವಿರುವ ಜಾಗ
- ನಿಧಿಪತಿತ್ವ – (ಜೈನ) ನವನಿಧಿಗಳ ಅಧಿಪತಿಯಾಗಿರುವುದು
- ನಿಧಿಪುರುಷ – (ಜೈನ) ಚಕ್ರವರ್ತಿ
- ನಿಧಿಸಮಿತಿ – (ಜೈನ) ನವನಿಧಿಗಳ ಗುಂಪು
- ನಿಧೀಶ – ಕುಬೇರ; (ಜೈನ) ಚಕ್ರವರ್ತಿ
- ನಿಧೀಶ್ವರ – ನಿಧೀಶ
- ನಿಧುವನ – ಸಂಭೋಗ
- ನಿಧುವನನಿಕೇತನ – ಸಂಭೋಗ ತಾಣ
- ನಿನತು(ತ್ತು) – ನಿನ್ನದು
- ನಿನ(ನಾ)ದ – ಶಬ್ದ
- ನಿನದಂಗೆಯ್ – ಶಬ್ದಮಾಡು
- ನಿನ್ನೆ – ನೆನ್ನೆ, ಇವತ್ತಿಗೆ ಹಿಂದಿನ ದಿನ
- ನಿಪಾತ – (ಬಾಣ)ಪ್ರಯೋಗ
- ನಿಪಾತಿಸು – ನಾಶಮಾಡು; ಕೊಲ್ಲು
- ನಿಪಾನ – ಚಿಕ್ಕ ಹೊಂಡ
- ನಿಪೀತ – ಚೆನ್ನಾಗಿ ಕುಡಿದ
- ನಿಪುಣ – ನಿಷ್ಣಾತ
- ನಿಪುಣತೆ – ಪ್ರಾವೀಣ್ಯ
- ನಿಪುಣೆ – ಪ್ರವೀಣೆ
- ನಿಪ್ಪಸರ – ಹೆಚ್ಚಾದ
- ನಿಪ್ಪುಟಂ – ಅಧಿಕವಾಗಿ
- ನಿಪ್ಪೊಸ(ತು) – ಹೊಚ್ಚ ಹೊಸ(ತು)
- ನಿಬಂಧ – ಕಾರಣ; ನಿಯಮ
- ನಿಬಂಧನ – ಕಟ್ಟುವುದು
- ನಿಬಂಧನೆ – ನಿಯಮ
- ನಿಬದ್ಧ – ಅಂಟಿಕೊಂಡ
- ನಿಬದ್ಧಾಂಜಳಿ – ಜೋಡಿಸಿದ ಕೈ, ಬೊಗಸೆ
- ನಿಬರ್ಹಣ – ವಧೆ
- ನಿಬಿಡ – ದಟ್ಟವಾದ
- ನಿಬಿಡತೆ – ದಟ್ಟಣೆ
- ನಿಬಿಡಮತಿ – ದಡ್ಡ(ತನ)
- ನಿಬಿಡಸ್ಯೂತ – ಒತ್ತೊತ್ತಾಗಿ ಹೊಲಿದಿರುವುದು
- ನಿಬಿಡಿತ – ಇಡಿಕಿರಿದ
- ನಿಬಿಡೋರು – ನಿಬಿಡ+ಊರು, ತೋರ ತೊಡೆ
- ನಿಬುದ್ಧಿ – (ನಿರ್ಬುದ್ಧಿ) ಬುದ್ಧಿಹೀನತೆ
- ನಿಬ್ಬಂದಿಗ – (ನಿರ್ಬಂಧಿಕ) ಕಟ್ಟಿಗೊಳಗಾದವನು
- ನಿಬ್ಬಡವ – ಕಡುಬಡವ
- ನಿಬ್ಬಣ – ಮದುವೆಯ ಉತ್ಸವ
- ನಿಬ್ಬಣಿಗರ್ – ಮದುವೆಯ ದಿಬ್ಬಣದವರು
- ನಿಬ್ಬರ – (ನಿರ್ಭರ) ತುಂಬಿದ; ಬತ್ತುವಿಕೆ
- ನಿಬ್ಬರಂಬಿರಿ – ಚೆನ್ನಾಗಿ ಅರಳು
- ನಿಬ್ಬರಿಬಾಯ್ – ದೊಡ್ಡ ಬಾಯಿ
- ನಿಬ್ಬರಿಸು – ತುಂಬಿಕೊ
- ನಿಬ್ಬೆಗ – ಉದ್ವೇಗ
- ನಿಭ – ಸಮಾನ
- ನಿಭೃತ – ತುಂಬಿದ
- ನಿಭೃತೇಂಗಿತ – ರಹಸ್ಯ ಅಭಿಪ್ರಾಯವುಳ್ಳವನು
- ನಿಮಗ್ನ – ಮುಳುಗಿದ(ವನು)
- ನಿಮಿತ್ತಜ್ಞ – ಜ್ಯೋತಿಷಿ
- ನಿಮಿತ್ತಮಾತ್ರ – ತೋರಿಕೆಯ ಕಾರಣ
- ನಿಮಿತ್ತವಿದ – ನಿಮಿತ್ತಜ್ಞ
- ನಿಮಿತ್ತಾಂಗ – (ಜೈನ) ನಿಮಿತ್ತಶಸ್ತ್ರ
- ನಿಮಿತ್ತಾಭ್ಯಾಸ – (ಜೈನ) ನಿಮಿತ್ತದ ಅಭ್ಯಾಸ
- ನಿಮಿತ್ತಿಕ – ಜ್ಯೋತಿಷಿ
- ನಿಮಿರ್ – ಹರಡು; ನೆಟ್ಟಗೆ ನಿಲ್ಲು
- ನಿಮಿರ್ಕೆ – ನಿಮಿರುವಿಕೆ, ಹರಡುವಿಕೆ; ನೆಟ್ಟಗೆ ನಿಲ್ಲುವಿಕೆ; ಆಧಿಕ್ಯ
- ನಿಮಿರ್ಕೆಗುಂದು – ಅತಿಶಯತೆ ಕುಂದು
- ನಿಮಿರ್ಕೆವಡೆ – ಹಿರಿಮೆ ಪಡೆ
- ನಿಮಿರ್ಚು – ಹರಡಿಕೊ; ನೇರಗೊಳ್ಳು; ಮಾಡು
- ನಿಮಿಷ – ರೆಪ್ಪೆ ಮಿಟುಕಿಸುವುದು; ಒಮ್ಮೆ ರೆಪ್ಪೆ ಮಿಟುಕಿಸುವಷ್ಟು ಕಾಲ
- ನಿಮಿಷಾರ್ಧ – ಅತ್ಯಪ್ಲಕಾಲ
- ನಿಮಿಸ – ನಿಮಿಷ
- ನಿಮೀಲನ – ಕಣ್ಣು ಮುಚ್ಚು
- ನಿಮೀಳಿತ – ಮುಚ್ಚಿಕೊಂಡ
- ನಿಮೀಲಿತನಯನ – ಮುಚ್ಚಿದ ಕಣ್ಣು(ಳ್ಳವನು)
- ನಿಮೀಲಿತಾಕ್ಷ – ನಿಮೀಲಿತನಯನ
- ನಿಮೀಲಿಸು – ಕಣ್ಣುಮುಚ್ಚು
- ನಿಮೇಷ – ರೆಪ್ಪೆ ಮಿಟುಕಿಸು; ಅತ್ಯಲ್ಪ ಕಾಲ
- ನಿಮ್ನ – ಆಳವಾದ (ಜಾಗ)
- ನಿಮ್ನಗಾತಟ – ನದಿಯ ದಡ
- ನಿಮ್ನಗೆ – (ನಿಮ್ನಗಾ) ನದಿ
- ನಿಮ್ನನಾಭಿ – ಆಳವಾದ ಹೊಕ್ಕುಳು
- ನಿಮ್ನಪ್ರದೇಶ – ತಗ್ಗಾದ ಜಾಗ
- ನಿಮ್ಮಳ – (ನಿರ್ಮಲ) ಶುಭ್ರವಾದ
- ನಿಯಂತ್ರಿತ – ಬಿಗಿದ
- ನಿಯತ – ಹತೋಟಿಗೊಳಗಾದ; ದೃಢವಾದ; ಕ್ರಮಬದ್ಧ
- ನಿಯತಂ – ತಪ್ಪದೆ
- ನಿಯತಪ್ರತೀತಿ – ನಡೆಯಬೇಕಾದದ್ದು ನಡೆದೇ ತೀರುವುದೆಂಬ ತಿಳಿವಳಿಕೆ
- ನಿಯತವೃತ್ತಸ್ಥಿತ – ಸ್ಥಿರ ನಡತೆಯುಳ್ಲವನು
- ನಿಯತಾಹಂಕೃತಿ – ಅಹಂಕಾರವನ್ನು ನಿಯಂತ್ರಿಸಿದವನು
- ನಿಯತಿ – ವಿಧಿ; ನಿಯಂತ್ರಣ
- ನಿಯತಿಕ್ರಮ – ನಿಗದಿತ ರೀತಿ
- ನಿಯತೇಂದ್ರಿಯ – ಇಂದ್ರಿಯನಿಗ್ರಹ ಮಾಡಿದವನು
- ನಿಯತ್ಯಂಗನೆ – ಮೃತ್ಯುದೇವತೆ
- ನಿಯಮ – ನಿಗ್ರಹ; ಕಟ್ಟಳೆ; ಕ್ರಮಬದ್ಧ ಆಚರಣೆ
- ನಿಯಮಜ್ಞ – ನಿಯಮಗಳನ್ನು ತಿಳಿದವನು
- ನಿಯಮನಿಧಾನ – ತಪವನ್ನೇ
- ನಿಧಿಯಾಗುಳ್ಳವನು, ತಪಸ್ವಿ
- ನಿಯಮಾಂತರಿತ – ನಿಯಮಗಳಿಂದ ಕೂಡಿದ
- ನಿಯಮಿಸು – ನಿರ್ಬಂಧಿಸು; ಅಪ್ಪಣೆಗೈ; ಗೊತ್ತುಮಾಡು
- ನಿಯಾಮಿಸು – ನಿಯಮಿಸು
- ನಿಯುಕ್ತ – ಸೇರಿಕೊಂಡಿರುವ
- ನಿಯುದ್ಧ – ದ್ವಂದ್ವಗಾಳಗ
- ನಿಯುದ್ಧರಂಗ – ಕುಸ್ತಿಯ ಕಣ
- ನಿಯೋಗ – ಕಾರ್ಯ; ಸೇರುವುದು; ಸೇವೆ
- ನಿಯೋಗಿ – ರಾಜಪ್ರತಿನಿಧಿ
- ನಿಯೋಜಿತ – ಕೂಡಿಕೊಂಡಿರುವ
- ನಿಯೋಜಿಸು – ಸೇರಿಸು; ನೇಮಿಸು
- ನಿರಂಕುಶೆ – ಸ್ವೇಚ್ಛಾಚಾರಿಣಿ; ತಡೆಯಿಲ್ಲದವನು
- ನಿರಂಜನ – ಕಣ್ಣ ಕಾಡಿಗೆಯಿಲ್ಲದ; ಅಂಟಿಕೊಳ್ಳದ(ವನು)
- ನಿರಂಜನಪದ – ಪರಮಾತ್ಮಪದವಿ
- ನಿರಂತ – ಅಂತವಿಲ್ಲದ
- ನಿರಂತರಂ ಮಾಡು – ತೃಪ್ತಿಪಡಿಸು; ಸದಾ ಕಾಲ
- ನಿರಂತರಾಯ – ಅಡಚಣೆಗಳಿಲ್ಲದಿರುವುದು
- ನಿರಂತರಿತ – ನಡುವೆ ಎಡೆಯಿಲ್ಲದ, ಒತ್ತೊತ್ತಾದ
- ನಿರಂಬರ – ಬತ್ತಲೆ
- ನಿರಂಶ – ಅಂಶವಲ್ಲದ, ಅಖಂಡವಾದ
- ನಿರಕ್ಷೀಕೃತ – ಕಣ್ಣಿಗೆ ಕಾಣದಂತೆ ಮಾಡಿದ
- ನಿರಘ – ಪಾಪರಹಿತ
- ನಿರತ – ತೊಡಗಿರುವ(ವನು)
- ನಿರತಿಕ್ರಮ – ಅತಿಕ್ರಮ ಮಾಡದಿರುವುದು
- ನಿರತಿಶಯ – ಬಹಳ ಅತಿಶಯವಾದ
- ನಿರತ್ಯಯಂ – ನಾಶವಿಲ್ಲದುದು(ದವನು)
- ನಿರದ – ಕೊಂದವನು
- ನಿರಧಿಷ್ಠಾನ – ಆಧಾರಹಿತವಾದುದು
- ನಿರನ್ನವಿಕಾರ – ಆಹಾರವಿಲ್ಲದುದರಿಂದಾಗುವ ವಿಕಾರ
- ನಿರನ್ವಯ – ಅನ್ವಯಗೊಳ್ಳದ
- ನಿರನ್ವೇಷ – (ಜೈನ) ಸುಖಸಾಧನಗಳಿಗೆ ಹಾತೊರೆಯದಿರುವುದು;
- ನಿರಪರಾಧ – ಅಪರಾದ ಮಾಡದಿರುವುದು
- ನಿರಪವಾದ – ಅಪವಾದರಹಿತವಾದುದು
- ನಿರಪಾಯ – ಸುರಕ್ಷಿತತೆ
- ನಿರಪೇಕ್ಷ – ಯಾವುದಕ್ಕೂ ಆಸೆಪಡದವನು
- ನಿರಪೇಕ್ಷಕ – ಅಪೇಕ್ಷೆಯಿಲ್ಲದ(ವನು)
- ನಿರಯ – ನರಕ
- ನಿರಯಕ್ಷೇತ್ರ – ನರಕಪ್ರದೇಶ
- ನಿರಯಜ – ನರಕದಲ್ಲಿ ಹುಟ್ಟಿದವನು
- ನಿರಯನಿಳಯ – ನಿರಯಕ್ಷೇತ್ರ
- ನಿರಯಭವ – ನಿರಯಜ
- ನಿರಯವಾಸ – ನರಕವಾಸ
- ನಿರರ್ಥ – ನಿಷ್ಫಲ
- ನಿರರ್ಥಕ – ವೈರ್ಥವಾದುದು
- ನಿರರ್ಥಕಂ- ವ್ಯರ್ಥವಾಗಿ
- ನಿರರ್ಥಕರ – ಸಾರ್ಥಕ್ಯವಿಲ್ಲದ
- ನಿರವ – ನಿರೂಪ
- ನಿರವದ್ಯ – ಕಳಂಕರಹಿತ; ಉತ್ಕøಷ್ಟವಾದುದು
- ನಿರವದ್ಯಚರಿತ್ರ – ದೋಷರಹಿತ ನಡವಳಿಕೆಯವನು
- ನಿರವದ್ಯಮಾರ್ಗ – ಶ್ರೇಷ್ಠವಾದ ಹಾದಿ
- ನಿರವದ್ಯವಿದ್ಯೆ – ಉತ್ಕøಷ್ಟ ವಿದ್ಯೆ
- ನಿರವದ್ಯವೃತ್ತ – ನಿರವದ್ಯಚರಿತ್ರ
- ನಿರವದ್ಯಾಚಾರ – ಉನ್ನತ ಆಚಾರ(ವುಳ್ಳವನು)
- ನಿರವದ್ಯಾನ್ವಯ – ದೋಷವಿಲ್ಲದ ವಂಶ
- ನಿರವದ್ಯಾಹಾರ – ಪರಿಶುದ್ಧ ಆಹಾರ
- ನಿರವಧಿ – ಮಿತಿಯಿಲ್ಲದ
- ನಿರವಧಿಕ – ಅತಿಶಯವಾದ
- ನಿರವಶೇಷ – ಏನೂ ಉಳಿಯದ; ಪರಿಪೂರ್ಣತೆ
- ನಿರವಶೇಷಂ – ಉಳಿಯದಂತೆ; ಪೂರ್ತಿಯಾಗಿ
- ನಿರವಸ್ಥ – ಬದುಕಿನ ವಿವಿಧ ಘಟ್ಟಗಳಿಲ್ಲದವನು
- ನಿರವಿಸು – ನಿರೂಪಿಸು; ಬಿನ್ನವಿಸಿಕೊ; ನಿಯಂತ್ರಿಸು
- ನಿರಸನ – ಹೊರಹಾಕುವುದು; ಕೊನೆ
- ನಿರಸ್ತ – ದೂರೀಕರಿಸಿದ; ಮೀರಿಸಿದ
- ನಿರಸ್ತಮಿತ – ಹೊರಹಾಕಿದ
- ನಿರಳಂಕೃತಿ – ಅಲಂಕಾರರಹಿತ
- ನಿರಾಕರಣಂಗೆಯ್ – ಅಲ್ಲಗಳೆ
- ನಿರಾಕರಿಸು – ನಿರಾಕರಣಂಗೆಯ್
- ನಿರಾಕಾರ (ಅನಶನ) – (ಜೈನ) ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವ ಉಪವಾಸ
- ನಿರಾಕುಲ(ಳ) – ದುಃಖವಿಲ್ಲದ
- ನಿರಾಕುಳತೆ – ನಿರುಮ್ಮಳ
- ನಿರಾಕೃತ – ಹೋಗಲಾಡಿಸಿದ
- ನಿರಾತಂಕ – ಅಡ್ಡಿಯಿಲ್ಲದ
- ನಿರಾದರ – ಆದರವಿಲ್ಲದ
- ನಿರಾದಾನ – ಪರಿಣಾಮರಹಿತ
- ನಿರಾನಂದ – ಆನಂದವಿಲ್ಲದೆ
- ನಿರಾಪೇಕ್ಷ – ನಿರಪೇಕ್ಷ, ಬಯಕೆಯಿಲ್ಲದ; ಸುಲಭ
- ನಿರಾಭರಣ – ಆಭರಣವಿಲ್ಲದ, ಅಲಂಕಾರರಹಿತತೆ
- ನಿರಾಮಯ – ರೋಗ ಚಿಂತೆಗಳಿಲ್ಲದ; ಮೋಕ್ಷ
- ನಿರಾಲಂಬನ – ಆಧಾರರಹಿತ
- ನಿರಾಲಸ್ಯ – ಆಲಸ್ಯವಿಲ್ಲದುದು
- ನಿರಾಲೋಚಂ – ಯೋಚನೆಯಿಲ್ಲದೆ
- ನಿರಾಶ್ರಯ – ಆಶ್ರಯವಿಲ್ಲದ
- ನಿರ್ಜರಾರ್ಯ – ಬೃಹಸ್ಪತಿ
- ನಿರ್ಜರಾವಿಧಿ – (ಜೈನ) ನಿರ್ಜರಾತತ್ವ
- ನಿರ್ಜರಿಸು – ಕರ್ಮಕ್ಷಯಮಾಡು
- ನಿರ್ಜರೆ – ದೇವತಾಸ್ತ್ರೀ; (ಜೈನ) ನಿರ್ಜರಾತತ್ವ
- ನೀಲಲೋಹಿತ – ಕೆಂಪುರಕ್ತ; ಕೊರಳ ನೀಲ ಹಾಗೂ ಕೂದಲ ಕೆಂಬಣ್ಣಗಳುಳ್ಳವನು, ಶಿವ
- ನೀಲವಣ್ಣ – ನೀಲಿ ಬಣ್ಣ(ದವನು), ಕೃಷ್ಣ
- ನೀಲವಸನ – ನೀಲಿಯ ಬಣ್ಣ(ದವನು), ಬಲರಾಮ
- ನೀಲಶತಪತ್ರ – ಕನ್ನೈದಿಲೆ
- ನೀಲಶೈಲ – ನೀಲಪರ್ವತ
- ನೀಲ(ಳ)ಸರೋಜ – ನೀಲಶತಪತ್ರ
- ನೀಲಸರೋರುಹ – ನೀಲಶತಪತ್ರ
- ನೀಲಸರೋರುಹಾಕ್ಷಿ – ಕನ್ನೈದಿಲೆಯಂತೆ ಕಣ್ಣುಳ್ಳವಳು
- ನೀಲಾಂಗ – ನೀಲದೇಹಿ, ಕೃಷ್ಣ
- ನೀಲಾಂಬರ – ಕಪ್ಪು ಬಟ್ಟೆ; ನೀಲವಸನ (ಬಲರಾಮ)
- ನೀಲಾಂಬುಜ – ನೀಲಶತಪತ್ರ
- ನೀಲಾಂಬುಜನಾಳ – ಕನ್ನೈದಿಲೆಯ ದಂಟು
- ನೀಲಾಂಬುದ – ಕಪ್ಪು ಮೋಡ
- ನೀಲಾ(ಳಾ)ಚಲ(ಳ) – ಕಪ್ಪು ಬೆಟ್ಟ
- ನೀಲಾದ್ರಿ – ಕಪ್ಪು ಬೆಟ್ಟ
- ನೀಲಾಬ್ಜ – ನೀಲಶತಪತ್ರ
- ನೀಲಾಬ್ದ – ನೀಲಮೇಘ
- ನೀಲಾ(ಳಾ)ಲ(ಳ)ಕ – ಕಪ್ಪು ಕೂದಲು
- ನೀಲೀರಾಗ – ನೀಲಿಯ ಬಣ್ಣ; ನಿಶ್ಚಲ ಪ್ರೀತಿ
- ನೀಲೀರಾಗತೆ – ನೀಲಿಬಣ್ಣವನ್ನು ಹೊಂದಿರುವುದು; ನಿಶ್ಚಲ ಪ್ರೀತಿಯನ್ನು ಪಡೆದಿರುವುದು
- ನೀಲೋ(ಳೋ)ತ್ಪಲ(ಳ) – ಕನ್ನೈದಿಲೆ
- ನೀವಳಿವಟ್ಟಂಗೆಯ್ – ನೀವಾಳಿಸಿ ತೆಗೆದಂತೆ ಕಿತ್ತೆಸೆ
- ನೀವಾರ – ನವಣೆ
- ನೀವಿ(ೀ)(ಬಂಧ)(ನ) – ಸೀರೆಯ ಸೊಂಟದ ಗಂಟು
- ನೀವೀಭರ – ಸೀರೆಯ ಸೊಂಟದ ಗಂಟು
- ನೀವು – ಸವರು
- ನೀಸು – ಈಜು
- ನೀಹಾರ – ಹಿಮ; ಮಲವಿಸರ್ಜನೆ
- ನೀಹಾರಕರ – ಹಿಮಕರ, ಚಂದ್ರ
- ನೀಹಾರಾಗ – ಹಿಮಬೆಟ್ಟ
- ನೀಳ್ – ಉದ್ದವಾಗು; ಚಾಚು; ಹರಡು
- ನೀಳ – ನಿಡಿದಾದ, ದೀರ್ಘ
- ನೀಳಗಳ – ನವಿಲು
- ನೀಳಘನಾಘನ – ಕಪ್ಪಾದ ಮೋಡ
- ನೀಳನಗ – ಕಪ್ಪು ಬೆಟ್ಟ
- ನೀಳನೀರೇಜ – ಕನ್ನೈದಿಲೆ
- ನೀಳಸರೀಜಮಾಳೆ – ಕನ್ನೈದಿಲೆಯ ಮಾಲೆ
- ನೀಳಾಚಳಚೂಳಿಕೆ – ಕಪ್ಪುಬೆಟ್ಟದ ಶಿಖರ
- ನೀಳಾಬ್ಜವನ – ಕನ್ನೈದಿಲೆಗಳ ಸಮೂಹ
- ನೀಳಾಭ್ರಜಾಳ – ಕಪ್ಪು ಮೋಡಗಳ ರಾಶಿ
- ನೀಳಾಶ್ಮ – ನೀಲಮಣಿ
- ನೀಳಾಳಕೆ – ಕಪ್ಪು ಕೂದಲುಳ್ಳವಳು
- ನೀಳೇಕ್ಷು – ನೀಳ+ಇಕ್ಷು, ಕಪ್ಪು ಬಣ್ಣದ ಕಬ್ಬು
- ನೀಳೋರ್ಮಿ – ಕಪ್ಪು ಬಣ್ಣದ ತೆರೆ
- ನೀಳ್ಕು – ನಿಲುಕು, ಎಟುಕಿಸು
- ನೀಳ್ಕೆಯ್ಸು – ಉದ್ದವಾಗಿಸು
- ನೀಳ್ಪು – ಉದ್ದ; ವಿಸ್ತಾರ; ಎತ್ತರ
- ನುಂಗು – ಕಬಳಿಸು; ಅಗಿಯದೆ ತಿನ್ನು
- ನುಗುಳ್ – ಒಳಹೊಗು; ನುಸುಳು
- ನುಗುಳ್ಚು – ನುಸುಳಿಸು
- ನುಗ್ಗಾಗು – ಚೂರಾಗು
- ನುಡಿ – ಮಾತಾಡು; ಮಾತು
- ನುಡಿಕಾ¾ – ಮಾತುಗಾರ
- ನುಡಿಗಲ್ – ಮಾತು ಕಲಿ
- ನುಡಿಗಲಿಸು – ಮಾತು ಕಲಿಸು
- ನುಡಿಗುಂದು – ಮಾತು ನಿಲ್ಲು
- ನುಡಿಗುಡು – ಮಾತು ಕೋಡು
- ನುಡಿಗೆಡಿಸು – ಮಾತಿಗೆ ತಪ್ಪು
- ನುಡಿಗೇಳ್ – ಮಾತನ್ನು ಆಲಿಸು
- ನುಡಿಜಾಣೆ – ಮಾಯಿನಲ್ಲಿ ನಿಪುಣೆ
- ನುಡಿಜಾಣ್ಮೆ – ಮಾತಿನ ಚಾತುರ್ಯ
- ನುಡಿಯಿಸು – ಮಾತಾಡುವಂತೆ ಮಾಡು
- ನುಡಿವಲ್ಮೆ – ನುಡಿಯ ಬಲ್ಮೆ, ಮಾತಿನ ಚಾತುರ್ಯ
- ನುಡಿಸು – ಮಾತಾಡಿಸು; ವಾದ್ಯ ಬಾರಿಸು
- ನುಣ್ಗಂಟು – ಸೊಬಗಿನ ಸಿರಿ
- ನುಣ್ಗಟಕಿ – ಹರಿತ ವ್ಯಂಗ್ಯ
- ನುಣ್ಗದಪು – ಕೋಮಲ ಕೆನ್ನೆ
- ನುಣ್ಗದಿರ್ – ಹೊಳೆಯುವ ಕಿರಣ, ಕಾಂತಿ
- ನುಣ್ಗರೆ – ನುಣುಪಾದ ಕರೆ
- ನುಣ್ಗಲ್ಗಟ್ಟು – ನುಣುಪು ಕಲ್ಲಿನ ಕಟ್ಟು
- ನುಣ್ಗುರುಳ್ – ಕೋಮಲ ಕೂದಲು
- ನುಣ್ಗೆಂಪು – ಹೊಳಪಿನ ಕೆಂಪು
- ನುಣ್ಗೊನರ್ – ಕೋಮಲವಾದ ಚಿಗುರು
- ನುಣ್ಗೊನೆ – ನವುರಾದ ತುದಿ
- ನುಣ್ಗೊರಲ್ – ನುಣುಪಾದ ಕೊರಳು
- ನುಣ್ಚರ – ಇನಿದನಿ
- ನುಣ್ಚು – ಜಾರಿಕೊ
- ನುಣ್ಜಗಲಿ – ಚೆಂದವಾದ ಕಟ್ಟೆ
- ನುಣ್ಣನಪ್ಪ – ನಯವಾದ; ಇಂಪಾದ
- ನುಣ್ಣನಿರ್ – ಸುಮ್ಮನಿರು
- ನುಣ್ಣನೆ – ನಯವಾಗಿ; ಸುಂದರವಾಗಿ
- ನುಣ್ಣವಿರ್ – ನುಣ್+ನವಿರ್, ಮೃದುವಾದ ತುಪ್ಪುಳು
- ನುಣ್ಣಿತು – ಮೃದು (ಮಾತು)
- ನುಣ್ಣಿತು(ತ್ತು) – ಕೋಮಲವಾದುದು
- ನುಣ್ಣಿಸು – ನುಣುಪುಮಾಡು
- ನುಣ್ಣುಡಿ – ನಯವಾದ ನುಡಿ
- ನುಣ್ಣೆಸಳ್ – ಕೋಮಲವಾದ ಪಕಳೆ
- ನುಣ್ಣೊಸಲ್ – ನುಣ್+ನೊಸಲ್, ಕೋಮಲ ಹಣೆ
- ನುಣ್ದನಿ – ಇನಿದನಿ
- ನುಣ್ದನಿವಿಡು – ಇನಿದನಿಯನ್ನುಂಟುಮಾಡು
- ನುಣ್ದಳಿರ್ – ಕೋಮಲವಾದ ಚಿಗುರು
- ನುಣ್ದುಟಿ – ಕೋಮಲ ತುಟಿ
- ನುಣ್ದೊಡೆ – ನುಣುಪಾದ ತೊಡೆ
- ನುಣ್ದೊದಳ್ – ಇನಿದಾದ ತೊದಲುಮಾತು
- ನುಣ್ಪಡರ್ – ನುಣುಪುಗೊಳ್ಳು
- ನುಣ್ಪಿಡು – ಹೊಳಪು ನೀಡು
- ನುಣ್ಪು – ನಯ; ನುಣುಪು; ಚೆಲುವು; ಕೋಮಲತೆ
- ನುಣ್ಪುವಡು – ನಯಗೊಳ್ಳು
- ನುಣ್ಪುವಡೆ – ನಯವನ್ನು ಹೊಂದು
- ನುಣ್ಪೆಸೆ – ನಯವಾಗು; ಕಂಗೊಳಿಸು
- ನುಣ್ಪನಿ – ಕೋಮಲ ಹನಿ
- ನುಣ್ಪರಲ್ – ನಯವಾದ ಹರಳು
- ನುಣ್ಪಸಲೆ – ನಯವಾದ ಹುಲ್ಲುಗಾವಲು
- ನುಣ್ಪಸೆ – ಅಂದವಾದ ಹಸೆಮಣೆ; ನಯವಾದ ಮಜ್ಜೆ
- ನುಣ್ಪಳುಕು – ನಯವಾದ ಹಳುಕು, ಹರಳು
- ನುಣ್ಬಳೆ – ಚೆಲುವಾದ ಬಳೆ
- ನುಣ್ಪುರುಳ್ – ಸಮೃದ್ಧ ತಿರುಳು
- ನುಣ್ಬೆರಲ್ – ನುಣುಪಾದ ಬೆರಳು
- ನುಣ್ಬೆಸ – ನಯಗೆಲಸ
- ನುಣ್ಬೆಳಂತಿಗೆ – ಕಾಂತಿಯುಕ್ತ ಬಿಳಿಪು
- ನುಣ್ಬೆಳಗು – ಕಾಂತಿಮಯ ಬೆಳಗು, ಬೆಳಕು
- ನುಣ್ಬೊಗರ್ – ಹೊಳಪಿನ ಕಿರನ
- ನುಣ್ಬೊಗರಿ – ಸುಂದರವಾದ ಬುಗುರಿ
- ನುಣ್ಮಡ – ಕೋಮಲವಾದ ಕಾಲು, ಹಿಮ್ಮಡಿ
- ನುಣ್ಮಣಲ್ – ನುಣುಪಾದ ಮರಳು
- ನುಣ್ಮಣಿ – ಹೊಳಪಿನ ರತ್ನ
- ನುಣ್ಮಸೆ – ಹೊಳೆಯುವ ಅಲುಗು
- ನುಣ್ಮಾತು – ನಯವಾದ ನುಡಿ
- ನುಣ್ಮೀಸೆ – ಹೊಳಪಿನ ಮೀಡೆ
- ನುಣ್ಮುತ್ತು – ನಯವಾದ ಮುತ್ತು
- ನುಣ್ಮೊಗ – ಕೋಮಲವಾದ ಮುಖ
- ನುತ – ಹೊಗಳಲ್ಪಟ್ಟ; ಪ್ರಸಿದ್ಧವಾದ
- ನುತಗುಣ – ಶ್ರೇಷ್ಠ ಗುಣ
- ನುತಿ – (ಸ್ತುತಿ) ಹೊಗಳಿಕೆ
- ನುತಿಗೆಯ್ – ಹೊಗಳು, ಸ್ತುತಿಸು
- ನುತಿವಡೆ – ಪ್ರಸಿದ್ಧನಾಗು
- ನುರ್ಗಾಡು – ನುಗ್ಗಾಡು, ಚೂರುಮಾಡು
- ನುರ್ಗು – ರಭಸದಿಂದ ಮುಂದುವರಿ; ಪುಡಿಗುಟ್ಟು
- ನುರ್ಗುಗುಟ್ಟು – ಪುಡಿಗುಟ್ಟು
- ನುರ್ಗೊತ್ತು – ಬಲವಾಗಿ ಒತ್ತು; ಸದೆಬಡಿ
- ನುಲಿ – ತಿರಿಚು; ಹೊಟ್ಟೆ ತೊಳಸು; ಹಗ್ಗ
- ನುಸುಳ್ – ನುಣುಚಿಕೊಳ್ಳು
- ನೂಂಕಿಸು – ದಬ್ಬುವಂತೆ ಮಾಡು
- ನೂಂಕು – ದಬ್ಬು
- ನೂತನ – ಹೊಸ
- ನೂತನಂಬಡೆ – ಹೊಸತನ ಹೊಂದು
- ನೂತನೆ – ಹೊಸ ಹರೆಯದವಳು
- ನೂತೆ – ಪೂಜ್ಯಳು
- ನೂತ್ನ – ನೂತನ; ಸುಂದರವಾದ
- ನೂನ – ಕೊರತೆ
- ನೂನಂ – ನಿಶ್ಚಿತವಾಗಿ
- ನೂಪುರ – ಕಾಲ್ಕಡಗ
- ನೂಪುರಕ್ವಣಿತ – ಕಾಲ್ಕಡಗದ ಸದ್ದು
- ನೂಪುರರಣಿತ – ನೂಪುರಕ್ವಣಿತ
- ನೂಪುರಾರಾವ – ನೂಪುರಕ್ವಣಿತ
- ನೂಪುರೋಲ್ಲಪನ – ನೂಪುರಕ್ವಣಿತ
- ನೂರ್ಛಾ(ಚ್ರ್ಛಾ)ಸಿರ – ನೂರು ಸಾವಿರ, ಒಂದು ಲಕ್ಷ
- ನೂರ್ಮಡಿ – ನೂರುಪಟ್ಟು
- ನೂರ್ಮಡಿಸು – ನೂರರಷ್ಟಾಗು
- ನೂರ್ಮಾತು – ನೂರು ಮಾತು; ಹೆಚ್ಚು ಮಾತು
- ನೂರ್ಮೆ – ನೂರು ಬಾರಿ
- ನೂಲ್ – ದಾರ ತೆಗೆ; ದಾರ; ಬಡಗಿಗಳು ಮಾಡುವ ಗುರುತು
- ನೂಲತೊಂಗಲ್ – ನೂಲ್ತೊಂಗಲ್, ಗೆಜ್ಜೆಗಳಿರುವ ಕಟಿಸೂತ್ರ
- ನೂಲತೊಡವು – ನೂಲಿನ ಆಭರಣ
- ನೂಲತೋಡಾಗು – ಹಾಸುಹೊಕ್ಕುಗಳಂತೆ ಒಂದಾಗು; ಹರಿದ ನೂಲು ಸೇರಿಕೊಳ್ಳುವುದು
- ನೂಲ ರಕ್ಕೆವಣಿ – ನೂಲಿನ ರಕ್ಷಾಮಣಿ
- ನೂಲಸೆಜ್ಜೆ – ಹತ್ತಿಯ ಹಾಸಿಗೆ
- ನೂಲ್ದೆಗೆ – ದಾರವನ್ನು ತೆಗೆ; ಗೆರೆಗಳನ್ನು ಬರೆ
- ನೂಲ್ವಾಸ – ದಾರದ ಕಟ್ಟು
- ನೂಲ್ವೊಯ್ – ನೂಲ್ದೆಗೆ
- ನೈದಿಲ್ – ಉತ್ಪಲ
- ನೈದಿಲ್ಗೊಳ – ನೈದಿಲೆಗಳಿಂದ ತುಂಬಿದ ಕೊಳ
- ನೈಪಥ್ಯ – ಅಲಂಕಾರಸಾಮಗ್ರಿ
- ನೈಪಥ್ಯಂಗೆಯ್ – ಅಲಂಕರಿಸಿಕೊ
- ನೈಪಥ್ಯಂದಳೆ – ನೈಪಥ್ಯಂಗೆಯ್
- ನೈಪಥ್ಯಗೃಹ – ಅಲಂಕಾರಗೃಹ
- ನೈಪಥ್ಯನಿಳಯ – ನೈಪಥ್ಯಗೃಹ
- ನೈಪುಣ್ಯ – ನಿಪುಣತೆ, ಪರಿಣತಿ
- ನೈಮಿತ್ತಿಕ – ನಿರ್ದಿಷ್ಟ ಕಾಲಕ್ಕೆ ಸಂಬಂಧಿಸಿದ; ಜ್ಯೋತಿಷಿ
- ನೈಮಿತ್ತಿಕವಚನ – ಭವಿಷ್ಯದ ಬಗೆಗಿನ ಮಾತು
- ನೈಮಿತ್ತಿಕಾದೇಶ – ಜ್ಯೋತಿಷಿಯ ಮಾತು
- ನೈಯಾಯಿಕ – ನ್ಯಾಯದರ್ಶನಜ್ಞ; ತಾರ್ಕಿಕ
- ನೈರಂತರ್ಯ – ನಿರಂತರತೆ; ತೃಪ್ತಿ
- ನೈರ್ಋತಿ – ನೈಋತ್ಯದಿಕ್ಕು; ಆ ದಿಕ್ಕಿನ ಪಾಲಕ
- ನೈಗ್ರ್ರಥ್ಯ – (ಜೈನ) ನಿಗ್ರಂಥತನ, ಸನ್ಯಾಸ
- ನೈಲಂಗಲ – ಚೆಲ್ವಿಕೆ
- ನೈಷಂಗ – ಬತ್ತಳಿಕೆ
- ನೈಷ್ಠಿಕ – ನಿಷ್ಠಾವಂತ; ಒಂದು ಆಯುಧ
- ನೈಸರ್ಪ – (ಜೈನ) ಚಕ್ರವರ್ತಿಯ ನವನಿಧಿಗಳಲ್ಲಿ ಒಂದು; ಭವನ, ಶಯ್ಯೆ, ಆಸನ ಮುಂತಾದವುಗಳನ್ನು ನೀಡುವಂಥದು, ನೋಡಿ, `ನವನಿಧಿ’
- ನೊಗ – ಯುಗ; ಎತ್ತಿನ ಜೋಡಿಯ ಮೇಲಿಡುವ ಮರ; ನಾಲ್ಕು ಹಸ್ತದ ಅಳತೆ
- ನೊಚ್ಚಗಾಗು – ಹಿತಕರವಾಗು
- ನೊಚ್ಚಿತು -ಹಗುರ; ಅಲ್ಪತೆ
- ನೊಚ್ಚಿದನ್(ಳ್)(ರ್) – ಅಲ್ಪನಾದವನು(ಳು)(ರು)
- ನೊಣೆ – ನುಂಗು; ನಾಶಗೈ
- ನೊರಜು – ಸಣ್ಣ ಸೊಳ್ಳೆ
- ನೊರೆ – ಡಿಂಡೀರ, ಫೇನ
- ನೊರೆನೆತ್ತರ – ನೊರೆಗೂಡಿದ ರಕ್ತ
- ನೊರೆವನಿ – ನೊರೆಯ ಹನಿ, ತುಂತುರು
- ನೊರೆವಾಲ್ – ನೊರೆಗೂಡಿದ ಹಾಲು
- ನೊರೆವಿಂಡು – ನೊರೆಯ ರಾಶಿ
- ನೊರೆವುಲ್ – ಎಳೆಯ ಹುಲ್ಲು
- ನೊರೆವೆರೆ – ನೊರೆಯಿಂದ ಕುಡು
- ನೊಸಲ್ – ಹಣೆ
- ನೊಸಲಕಣ್ಣದೇವ – ಹಣೆಯಲ್ಲಿ ಕಣ್ಣುಳ್ಳವನು, ಶಿವ
- ನೊಸಲಕಣ್ಣಾತ – ನೊಸಲಕಣ್ಣದೇವ
- ನೊಸಲಕಣ್ಪಾಯ್ದವ – (ಶಿವನ) ಹಣೆಗಣ್ಣಿನಿಂದ ಹುಟ್ಟಿದವನು, ವೀರಭದ್ರ
- ನೊಸಲಗಣ್ – ಹಣೆಗಣ್ಣು
- ನೊಸಲಕ್ಕರ – ಹಣೆಯ ಬರಹ
- ನೊಳ(ವು) – ನೊಣ
- ನೋ – ಯಾತನೆಪಡು
- ನೋನ್ – ವ್ರತ ಮಾಡು
- ನೋಂಪಿ – ವ್ರತ
- ನೋಕಷಾಯ – (ಜೈನ) ಚಾರಿತ್ರಮೋಹನೀಯದಲ್ಲಿ
- ಒಂದು ಬಗೆ, ಕಿಂಚಿತ್ ಕಷಾಯ
- ನೋಟ – ನೋಡಿವಿಕೆ; ದೃರ್ಶಯ
- ನೋಟಕ – ನೋಡಿವವನು, ಪ್ರೇಕ್ಷಕ
- ನೋಡಿಸು – ನೋಡಿವಂತೆ ಮಾಡು
- ನೋಡಿ – ಕಾಣು; ಪರೀಕ್ಷೆಮಾಡು
- ನೋದುಃಖ – ದುಃಖರಹಿತತೆ
- ನೋನ್ – ವ್ರತಹಿಡಿ
- ನೋನಿಸು – ವ್ರತ ಕೈಗೊಳಿಸು
- ನೋಯಿಸು – ನೋವುಂಟುಮಾಡು
- ನೋವು – ಯಾತನೆ; ದುಃಖ
- ನೋಳ್ – ಮುಂದೆ ನುಗ್ಗು; ಸನಿಹ ಹೋಗು
- ನೋಳ್ದು – ಎದುರಿಸು; ಅತಿಕ್ರಮಿಸು
- ನೌ – ಹಡಗು
- ನೌಸಾಧನ – ನೌಕಾಬಲ
- ನುಕ್ಕರಿಸು – ಉಪೇಕ್ಷೆಮಾಡು
- ನ್ಯಗ್ಭೂತ – ಕೀಳುಗೈದ
- ನ್ಯಗ್ರೋಧ – ಆಲದ ಮರ
- ನ್ಯಗ್ರೋಧಪರಿಮಂಡಲ – ದೇಹದ ಸುತ್ತಳತೆ
- ನ್ಯಗ್ರೋಧಪರಿಮಂಡಲೆ – ಸುಂದರಿ
- ನ್ಯಸನ – ಇಡುವುದು
- ನ್ಯಸ್ತ – ಇಡಲಾದ
- ನ್ಯಾಯ – ನಿಯಮ; ಲೋಕರೂಢಿಯಾದುದು
- ನ್ಯಾಯನಿಯುಕ್ತ – ನ್ಯಾಯಯುತವಾದುದು
- ನ್ಯಾಯಪುರುಷ – ನ್ಯಾಯ ನೀಡುವವನು
- ನ್ಯಾಯರಕ್ತ – ನ್ಯಾಯಮಾರ್ಗದಲ್ಲಿ ಆಸಕ್ತನಾದವನು
- ನ್ಯಾಯಾನ್ವಿತ – ನ್ಯಾಯದಿಂದ ಕೂಡಿದ(ವನು)
- ನ್ಯಾಯಾರ್ಜಿತ – ನ್ಯಾಯಮಾರ್ಗದಲ್ಲಿ ಗಳಿಸಿದ
- ನ್ಯಾಯೋಪಾರ್ಜಿತ – ನ್ಯಾಯಾರ್ಜಿತ
CONCLUSION:
ಕನ್ನಡ ನ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.