ಕನ್ನಡ ಅ ಅಕ್ಷರದ ಪದಗಳು – Kannada Words
Check out Kannada a aksharada padagalu in kannada , ಕನ್ನಡ ಅ ಅಕ್ಷರದ ಪದಗಳು ( A Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಅ ಅಕ್ಷರದಿಂದ ಪ್ರಾರಂಭವಾಗುವ ಹಲವು ಪದಗಳನ್ನು ( A Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಅ ಅಕ್ಷರ ಎಂದರೇನು?
ಅ ಕನ್ನಡ ವರ್ಣಮಾಲೆಯ ಮೊದಲ ಅಕ್ಷರವಾಗಿದೆ. ಅ ಕನ್ನಡದ ಸ್ವರಾಕ್ಷರ. ನಾಮಿ ಸ್ವರಗಳಲ್ಲಿ ಅ ಮತ್ತು ಆ ಸೇರುತ್ತವೆ. ಹಾಗಾಗಿ ಸವರ್ಣದೀರ್ಘ ಸಂಧಿಗಳಲ್ಲಿ ಅ ಅಕ್ಷರದ ಪಾತ್ರವೂ ಇದೆ. ಸಂಧಿಕಾರ್ಯ ಲೋಪಸಂಧಿಯಲ್ಲಿ ಅಕಾರ ಲೋಪಸಂಧಿ ಬರುತ್ತದೆ.
ಉದಾಹರಣೆಗೆ: ಅವನ+ಊರು=ಅವನೂರು ಎಂದಾಗುತ್ತದೆ. ಎಂದರೆ ಸಂಧಿ ಕಾರ್ಯದಲ್ಲಿ ಅ+ಊ=ಊ ಎಂದಾಗುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಅ ಅಕ್ಷರದ ಇತಿಹಾಸ :
ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರವಾದ ಅಕಾರದ ಅತ್ಯಂತ ಹಳೆಯ ರೂಪವನ್ನು ಪ್ರ. ಶ.ಪೂ. 3 ನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಬಹುದು. ಆ ಕಾಲದ ಬ್ರಾಹ್ಮೀಲಿಪಿಯಿಂದ ಅಕಾರವು ವಿಕಾಸಹೊಂದಿ ಇಂದಿನ ರೂಪವನ್ನು ತಾಳಿತೆಂಬುದನ್ನು ಗಮನಿಸಬೇಕು.
ಅಶೋಕನ ಬ್ರಾಹ್ಮೀಲಿಪಿಯಲ್ಲಿ ಇದು ಮೂರು ರೇಖೆಗಳಿಂದ ಕೂಡಿದ್ದು ಈಗಿನ ರೂಪಕ್ಕಿಂತ ಭಿನ್ನವಾಗಿ ಕಾಣುತ್ತದೆ. ಪ್ರ. ಶ . 2ನೇ ಶತಮಾನದ ಸಾತವಾಹನರ ಬ್ರಾಹ್ಮೀಲಿಪಿಯಲ್ಲಿ ಕಂಡುಬರುವ ಕೆಲವು ಬದಲಾವಣೆಗಳು ಗಮನಾರ್ಹ. ಅಕ್ಷರದ ಕೆಳತುದಿಗಳು ಬಾಗುತ್ತವೆ.
ಮೇಲ್ಭಾಗದಲ್ಲಿ ಕದಂಬ ತ್ರಿಕೋನಾಕಾರದ ತುದಿಗಳು ಕಾಣಬರುತ್ತವೆ. 5ನೆಯ ಶತಮಾನ ಪ್ರ. ಶ 5ನೆಯ ಶತಮಾನದ ಕದಂಬರ ಲಿಪಿಯಲ್ಲಿ ಚೌಕಾಕಾರದ ತಲೆಕಟ್ಟನ್ನು ಗಮನಿಸಬಹುದು. ಮುಂದಿನ ಶತಮಾನದ ಬಾದಾಮಿಚಾಳುಕ್ಯರ 6ನೆಯ ಶತಮಾನ ಶಾಸನಗಳಲ್ಲಿ ಇದು ಅಗಲವಾಗಿ ಈಗಿನ ರೂಪಕ್ಕೆ ದಾರಿಮಾಡಿಕೊಡುತ್ತದೆ.
ಪ್ರ. ಶ.9ನೆಯ ಶತಮಾನದ ರಾಷ್ರ್ಟಕೂಟರ ಶಾಸನಗಳಲ್ಲಿ ಪ್ರತ್ಯೇಕ ರೇಖೆಗಳು ಮಾಯವಾಗಿ ತುದಿಯಿಂದ ಕೊನೆಯವರೆಗೂ ವೃತ್ತಾಕಾರದ ಒಂದೇ ರೇಖೆಯು ಉಂಟಾಗುತ್ತದೆ.ಇದು ಈಗಿನ ರೂಪಕ್ಕೆ ಅತ್ಯಂತ ಸಮೀಪದ್ದಾಗಿ ಕಾಣುತ್ತದೆ. ಇದೇ ರೂಪ ಸ್ಥಿರಗೊಂಡು ಮುಂದಿನ ಶತಮಾನಗಳಲ್ಲಿ ಇನ್ನೂ ಗುಂಡಗಾಗಿ ಈಗಿನ ರೂಪವನ್ನು ಪ್ರ.ಶ 18ನೆಯ ಶತಮಾನದಲ್ಲಿ ತಾಳುತ್ತದೆ.
ಕನ್ನಡ ವರ್ಣಮಾಲೆಯ ಈ ಮೊದಲನೆಯ ಅಕ್ಷರ ಎರಡು ಹ್ರಸ್ವಸ್ವರಧ್ವನಿಗಳನ್ನು ಸೂಚಿಸುತ್ತದೆ. ಒಂದು, ಸಾಮಾನ್ಯವಾದ ವಿವೃತ ಮಧ್ಯ ಅಗೋಲ ಸ್ವರ; ಇನ್ನೊಂದು, ಕೆಲವರ ಉಚ್ಚಾರದಲ್ಲಿ ಕಂಡುಬರುವ ಮಧ್ಯ – ಮಧ್ಯ ಅಗೋಲ ಸ್ವರ.
ಇವು ಎರಡಕ್ಕೂ ಇರುವ ವ್ಯತ್ಯಾಸವನ್ನು ಅತ್ತೆ(ಅವಳು ನನ್ನ ಅತ್ತೆ’; ದುಃಖದಿಂದ ನಾನು ‘ಅತ್ತೆ’), ತಂದೆ (ಅವರು ನನ್ನ ‘ತಂದೆ’; ಅಂಗಡಿಯಿಂದ ‘ತಂದೆ’) ಮೊದಲಾದ ಪದಗಳ ಉಚ್ಚಾರದಲ್ಲಿ ಗಮನಿಸಬಹುದು.
ಕನ್ನಡ ಅ ಅಕ್ಷರದ ಪದಗಳು – Kannada Words
1. ಅಂಕಪಟ್ಟಿ | 2. ಅಂಕಿತನಾಮ |
3. ಅಪ್ಪ | 4. ಅಕ್ರಮ |
5. ಅಕ್ಕಿ | 6. ಅಂಕುಶ |
7. ಅಂಗ | 8. ಅಂಗರಾಜ |
9. ಅಂಗಲಾಚು | 10. ಅಂಗವಸ್ತ್ರ |
11. ಅಂಗೈ | 12. ಅಂಚೆ |
13. ಅಂಜಲಿ | 14. ಅಂಜು |
15. ಅಂಟು | 16. ಅಂತ |
17. ಅಂತಿಮ | 18. ಅಂತ್ಯ |
19. ಅಂದ | 20. ಅಂಧ |
21. ಅಂಧಕಾರ | 22 . ಅಂಬಲಿ |
23. ಅಂಬಿ | 24. ಅಂಬುಜ |
25. ಅಂಬೆ | 26. ಅಂಬೆಗಾಲು |
27. ಅಂಶ | 28. ಅಕಾಲ |
29. ಅಕ್ಕ | 30. ಅಕ್ಕಿ |
31. ಅಕ್ರಮ | 32. ಅಕ್ಷರ |
33. ಅಖಂಡ | 34. ಅಗ |
35. ಅಖಿಲ | 36. ಅಗತ್ಯ |
37. ಅಗಸೆ | 38. ಅಗ್ಗ |
39 . ಅಗೋಚರ | 40. ಅಗಾಧ |
41. ಅಗ್ನಿ | 42. ಅಚ್ಚರಿ |
43. ಅಜಯ | 44. ಅಜೀರ್ಣ |
45. ಅಜ್ಜ | 46 . ಅಜ್ಜಿ |
47. ಅಟ್ಟಹಾಸ | 48. ಅಡಿ |
49. ಅಡ್ಡ | 50. ಅಡ್ಡಿ |
51. ಅಣು | 52. ಅಣೆ |
53. ಅತಿ | 54. ಅತಿಕ್ರಮ |
55. ಅತಿಥಿ | 56. ಅತುಲ |
57. ಅತ್ತಿಗೆ | 58. ಅದೃಷ್ಟ |
59. ಅಧ್ಯಯನ | 60. ಅಧ್ಯಾಪಕ |
61. ಅನಂತ | 62. ಅನಾಚಾರ |
63. ಅನಾಥ | 64. ಅನಾಮಧೇಯ |
65. ಅನಾಮಿಕ | 66. ಅನಾವರಣ |
67. ಅನಾಹುತ | 68. ಅನಿಲ |
69. ಅನಿಲಜ | 70. ಅನಿಷ್ಟ |
71. ಅನಿವಾರ್ಯ | 72. ಅನುಕಂಪ |
73. ಅನುಕರಿಸು | 74. ಅನುಕೂಲ |
75. ಅನುಕ್ರಮ | 76 . ಅನುಗ್ರಹ |
77. ಅನುಜ | 78. ಅನುಬಂಧ |
79. ಅನುಭವ | 80. ಅನುಮತಿ |
81. ಅನುರೂಪ | 82. ಅನೇಕ |
83. ಅನ್ನ | 84. ಅಪಕಾರ |
85. ಅಪಚಾರ | 86. ಅಪರಂಜಿ |
87. ಅಪರೂಪ | 88. ಅರ್ಪಣೆ |
89. ಅಪಾರ | 90. ಅಪೇಕ್ಷೆ |
91. ಅಪ್ಪಟ | 92. ಅಪ್ಪಳಿಸು |
93. ಅಪ್ಪು | 94. ಅಪ್ರತಿಮ |
95. ಅಬ್ಬರ | 96. ಅಭಯ |
97. ಅಭಾಗ್ಯ | 98 . ಅಭಾವ |
99 . ಅಭಿಮಾನ | 100. ಅಭಿಮುಖ |
101. ಅಭಿರಾಮ | 102. ಅಬಲೆ |
103 . ಅಂಕ | 104. ಅಂಕಂಗಾರ |
105. ಅಂಕಂಗುಡು | 106. ಅಂಕಂಗೊಳ್ |
107. ಅಂಕಕರಣ | 108. ಅಂಕಕಹಳೆ |
109. ಅಂಕಕಾತಿ | 110. ಅಂಕಕಾರ |
111. ಅಂಕಕಾರ್ತಿ | 112. ಅಂಕಗಣಕ |
113. ಅಂಕಗಣಿತ | 114 . ಅಂಕಗದ್ಯಾಣ |
115. ಅಂಕಚಾರಣೆ | 116. ಅಂಕಚೇಯ |
117. ಅಂಕಜೇಯ | 118. ಅಂಕಝಂಕೆ |
119. ಅಂಕಟಂಕ | 120. ಅಂಕಟಂಕ |
121. ಅಂಕಟೆಂಕೆ | 122. ಅಂಕಡೊಂಕ |
123. ಅಭಿರುಚಿ | 124. ಅಭಿವೃದ್ಧಿ |
125. ಅಭ್ಯರ್ಥಿ | 126. ಅಭ್ಯಾಸ |
127. ಅಮಲ | 128. ಅಮಾವಾಸ್ಯೆ |
129. ಅಮೃತ | 130. ಅಮೋಘ |
131. ಅಯನ | 132. ಅರವಿಂದ |
133. ಅರಸ | 134. ಅರೆ |
135. ಅರಿ | 136. ಅರಿಕೆ |