ಕನ್ನಡ ಶ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada sha aksharada halegannadada padagalu , ಕನ್ನಡ ಶ ಅಕ್ಷರದ ಹಳೆಗನ್ನಡ ಪದಗಳು (shA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಶ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( sha halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ
ಕನ್ನಡ ಶ ಅಕ್ಷರ ಎಂದರೇನು?
ಶ, ಕನ್ನಡ ವರ್ಣಮಾಲೆಯ ಆರನೇ ಅವರ್ಗೀಯ ವ್ಯಂಜನವಾಗಿದೆ. ತಾಲವ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿ.
ಬಾಣದ ಆಕಾರದಲ್ಲಿರುವ ಅಶೋಕನ ಕಾಲದ ಈ ಅಕ್ಷರದ ಸ್ವರೂಪಕ್ಕೂ ಈಗಿನ ಸ್ವರೂಪಕ್ಕೂ ಯಾವ ವಿಧವಾದ ಹೋಲಿಕೆಗಳೂ ಕಂಡು ಬರುವುದಿಲ್ಲ. ಉದ್ದನೆಯ ಈ ಅಕ್ಷರ ಸಾತವಾಹನ ಕಾಲದಲ್ಲಿ ಸಣ್ಣದಾಗಿ ಕದಂಬ ಕಾಲದಲ್ಲಿ ಘಂಟೆಯ ಆಕಾರವನ್ನು ಹೊಂದುತ್ತದೆ.
ಎರಡು ಪಾರ್ಶ್ವಗಳನ್ನು ಸೇರಿಸುವ ಒಂದು ರೇಖೆ ಇಲ್ಲಿ ಉದ್ಭವವಾಗುತ್ತದೆ. ಇದೇ ಮುಂದೆ ಪರಿವರ್ತಿತವಾಗಿ ಅಕ್ಷರದ ಕೆಳಭಾಗವಾಗುತ್ತದೆ. ರಾಷ್ಟ್ರಕೂಟ ಕಾಲದಲ್ಲಿಯೂ ಈ ಅಕ್ಷರದಲ್ಲಿ ಅಂತಹ ಬದಲಾವಣೆಗಳೇನೂ ಕಾಣಬರುವುದಿಲ್ಲ. ಆದರೆ ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಬಹು ಬದಲಾವಣೆಗಳನ್ನು ಹೊಂದಿ ಈಗಿನ ಅಕ್ಷರಕ್ಕೆ ಅತಿ ಸಮೀಪವಾಗಿ ಕಾಣಬರುತ್ತದೆ.
ಕೆಳಭಾಗದಲ್ಲಿ ಒಂದು ವೃತ್ತಾಕಾರ ಉದ್ಭವವಾಗಿ ಅದು ಪಾಶ್ರ್ವವನ್ನು ಮೀರಿ ಹೊರಬರುತ್ತದೆ. ಇದೇ ಆಕಾರ ಕಳಚುರಿ, ಹೊಯ್ಸಳ ಮತ್ತು ಸೇವುಣ ಕಾಲಗಳಲ್ಲಿಯೂ ಮುಂದುವರಿಯುತ್ತದೆ. ಆದರೆ ವಿಜಯನಗರ ಕಾಲದಲ್ಲಿ ಕೆಳಗಿನ ವೃತ್ತಾಕೃತಿ ಅಗಲವಾಗುವ ಬದಲು ಉದ್ದವಾಗುತ್ತದೆ ಮತ್ತು ಪಾಶ್ರ್ವದ ರೇಖೆಯನ್ನು ಮೀರಿ ಹೊರಬರುವುದಿಲ್ಲ. ಇದೇ ಸ್ವರೂಪವೇ ಇನ್ನೂ ಗುಂಡಗಾಗಿ ಹದಿನೆಂಟನೆಯ ಶತಮಾನದಲ್ಲಿ ಮುಂದುವರಿಯುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಶ ಅಕ್ಷರದ ಹಳೆಗನ್ನಡ ಪದಗಳು – Kannada Words
- ಶಂಕರಸಖ – ಕುಬೇರ
- ಶಂಕಾಂತರ – ಸಂದೇಹ
- ಶಂಕಾಕುಲಿ(ಳಿ)ತ – ಸಂಶಯದಿಂದ ಪೀಡಿತವಾದ
- ಶಂಕಾವಹ – ಸಂದೇಹವುಂಟುಮಾಡುವ
- ಶಂಕಿಸು – ಸಂಶಯಪಡು
- ಶಂಕು – ಗೂಟ
- ಶಂಖ – ಪಂಚಮಹಾವಾದ್ಯ;ಗಳಲ್ಲಿ ಒಂದು; ಕುಬೇರನ ನವನಿಧಿಗಲ್ಲಿ ಒಂದು
- ಶಂಖಧ್ವಾನ – ಶಂಖಧ್ವನಿ
- ಶಂಖಪ್ರಣಾದ – ಶಂಖಧ್ವಾನ
- ಶಂತನುಜ – ಶಂತನುವಿನ ಮಗ, ಭೀಷ್ಮ
- ಶಂಪಾ – ಮಿಂಚು
- ಶಂಬ – ವಜ್ರಾಯುಧ; ಸಿಡಿಲು
- ಶಂಬಧರ – ಇಂದ್ರ
- ಶಂಬಪಾಣಿ – ಶಂಬಧರ
- ಶಂಬಾಪಾತ – ಸಿಡಿಲಿನ ಹೊಡೆತ
- ಶಂಬರ – ನೀರು; ಒಬ್ಬ ರಾಕ್ಷಸ
- ಶಂಬರಜಾತ – ತಾವರೆ
- ಶಂಬರದರ್ಪಧ್ವಂಸಿ – ಮನ್ಮಥ
- ಶಂಬರಧಿ – ಸಮುದ್ರ
- ಶಂಬರಸಂಹೃತ್ – ಶಂಬರದರ್ಪಧ್ವಂಸಿ, ಪ್ರದ್ಯುಮ್ನ
- ಶಂಬರಸೂದನ – ಶಂಬರಸಂಹೃತ್
- ಶಂಬರಾರಿ – ಮನ್ಮಥ
- ಶಂಬವಿಪಕ್ಷ – ಶಂಬರಾರಿ
- ಶಂಬಾಯುಧ – ಇಂದ್ರ
- ಶಂಬೂಕ – ಕಪ್ಪೆಚಿಪ್ಪು
- ಶಕಟ – ಬಂಡಿ; ರಥ; ಒಬ್ಬ ರಾಕ್ಷಸ
- ಶಕಟಪ್ರಸಂಹಾರ – ಶಕಟನನ್ನು ಕೊಂದವನು, ಶ್ರೀಕೃಷ್ಣ
- ಶಕಟವ್ಯೂಹ – ರಥದ ಆಕಾರದಲ್ಲಿ ಸೇನೆಯನ್ನು ನಿಲ್ಲಿಸುವ ಒಂದು ರಚನೆ
- ಶಕಲ(ಳ) – ಚೂರು, ತುಂಡು
- ಶಕುಂತ – ಶಕುನದ ಹಕ್ಕಿ
- ಶಕುನ(ನಿ) – ಶಕುಂತ
- ಶಕುನಶಾಸ್ತ್ರ – ಹಕ್ಕಿ; ಭವಿಷ್ಯತ್ತನ್ನು ತಿಳಿಸುವ ಜ್ಞಾನ
- ಶಕುಲ(ಳ) – ಮೀನು
- ಶಕ್ತಿ – ಬಲ; ಒಂದು ಆಯುಧ
- ಶಕ್ತಿತ್ರಯ – ಪ್ರಭು, ಮಂತ್ರ, ಉತ್ಸಾಹ ಎಂಬ ರಾಜನ ಮೂರು ಬಗೆಯ ಶಕ್ತಿಗಳು
- ಶಕ್ತಿಧರ – ಕುಮಾರಸ್ವಾಮಿ
- ಶಕ್ಯ – ಸಾಧ್ಯವಾದ
- ಶಕ್ಯಾನುಷ್ಠಾನ – ಅರ್ಥವನ್ನು ತಿಳಿಯುವ ಪ್ರಯತ್ನ
- ಶಕ್ರ – ಇಂದ್ರ
- ಶಕ್ರಗೋಪ – ಮಿಣುಕು ಹುಳು
- ಶಕ್ರಚಾಪ – ಕಾಮನ ಬಿಲ್ಲು
- ಶಕ್ರಧನು – ಶಕ್ರಚಾಪ
- ಶಕ್ರನೃತ್ಯ – (ಜೈನ) ಜಿನ ಜನ್ಮಾಭಿಷೇಕಕಾಲದಲ್ಲಿ ಸೌಧರ್ಮೇಂದ್ರನು ಮಾಡುವ ಆನಂದನೃತ್ಯ
- ಶಕ್ರಾಸ್ತ್ರ – ಇಂದ್ರನ ಆಯುಧ, ವಜ್ರ
- ಶಕ್ವರ – ಗೂಳಿ
- ಶಚಿ – ಇಂದ್ರನ ಪಟ್ಟದರಸಿ
- ಶಣ – ಸಣಬು
- ಶತಕ್ರತು – ನೂರು ಯಜ್ಞ; ಇಂದ್ರ
- ಶತಧಾರ – ನೂರು ಅಲಗುಗಳನ್ನುಳ್ಳುದು; ವಜ್ರಾಯುಧ; ಮೋಡ
- ಶತಧೃತಿ – ಶತಕ್ರತು; ಬ್ರಹ್ಮ
- ಶತಧೃತಿಪೌತ್ರ – ಬ್ರಹ್ಮನ ಮೊಮ್ಮಗ, ರಾವಣ
- ಶತಪತ್ರ – ಕಮಲ
- ಶತಪತ್ರನೇತ್ರ – ರಾಜೀವಲೋಚನ, ವಿಷ್ಣು
- ಶತಪತ್ರಷಂಡ – ಕಮಲ ಸರೋವರ
- ಶತಮಖ – ಶತಕ್ರತು
- ಶತಮನ್ಯು – ಶತಕ್ರತು
- ಶತಸಂಕುಲೆ – (ಜೈನ) ಒಂದು ವಿದ್ಯೆ
- ಶತಸಪ್ತತಂತು – ಶತಕ್ರತು
- ಶತಸಹಸ್ರ – ಒಂದು ಲಕ್ಷ
- ಶತಹ್ರದ – ಮಿಂಚು
- ಶತಾಂಗ – ರಥ
- ಶತಾಂಬಕ – ಇಂದ್ರ
- ಶತಾಂಬಕಸುತ – ಇಂದ್ರನ ಮಗ, ಅರ್ಜುನ
- ಶತಾಧ್ವರಿ – ಶತಕ್ರತು
- ಶತಾರ(ಕಲ್ಪ) – ವಜ್ರಾಯುಧ; (ಜೈನ)
- ಅರವತ್ತಮೂರು ಇಂದ್ರಕ(ವಿಮಾನ)ಗಳಲ್ಲಿ ಒಂದು
- ಶತ್ರುಂತಪ – ಶತ್ರುಗಳಿಗೆ ತಾಪವುಂಟುಮಾಡುವವನು
- ಶತ್ರುಂದಮ – ಶತ್ರುಗಳನ್ನು ದಮನಮಾಡುವವನು
- ಶತ್ರುಘ್ನ – ಶತ್ರುಂದಮ; ದಶರಥನ ನಾಲ್ಕನೆಯ ಮಗ
- ಶತ್ರುಸಂಘಾತ – ವೈರಿಗಳ ಸಮೂಹ
- ಶಫ – ಗೊರಸು
- ಶಫರ – ಮೀನು
- ಶಫರಲೋಚನೆ – ಮೀನಿನಂತೆ ಕಣ್ಣುಳ್ಳವಳು
- ಶಫರೇಕ್ಷಣೆ – ಶಫರಲೋಚನೆ
- ಶಬ – (ಶವ) ಹೆಣ
- ಶಬರ – ಬೇಡರವನು
- ಶಬರಿ – ಬೇಡ ಹೆಂಗಸು; ರಾಮನ ಭಕ್ತೆ
- ಶಬಲ(ಳ) – ಚಿತ್ರವರ್ಣ, ಬಣ್ಣ ಬಣ್ಣದ
- ಶಬಾಲಯ – ಶ್ಮಶಾನ
- ಶಬ್ದದ್ರವ್ಯ – ಧ್ವನಿಯ ಮೂಲದ್ರವ್ಯ
- ಶಬ್ದಪ್ರವೀಚಾರ – (ಜೈನ) ಕೇಳುವಿಕೆಯಿಂದಲೇ ಇಂದ್ರಿಯಸುಖವನ್ನು ಹೊಂದುವುದು
- ಶಬ್ದವಿದ್ಯೆ – ವ್ಯಾಕರಣ
- ಶಬ್ದವೇಧಿ – ಶಬ್ದ ಕೇಳಿ ಬಾಣ ಬಿಡುವವನು
- ಶಬ್ದಶಾಸ್ತ್ರ – ಶಬ್ದವಿದ್ಯೆ
- ಶಬ್ದಸಂದೇಹ – ಪದ ಮತ್ತು ಅರ್ಥಗಳ ಬಗೆಗಿನ ಅನುಮಾನ
- ಶಮನ – ಪರಿಹಾರ; ಯಮ
- ಶಮೀ – ಬನ್ನಿಯ ಗಿಡ
- ಶಮ್ಯಾಕ – ಕಕ್ಕೆ ಗಿಡ
- ಶಯನ – ನಿದ್ದೆ; ಹಾಸಿಗೆ
- ಶಯನಸದನ – ಮಲಗುವ ಮನೆ
- ಶಯು – ಮಹಾಸರ್ಪ
- ಶಯ್ಯಾಗ್ರ – ಹಾಸಿಗೆ
- ಶಯ್ಯಾತಳ – ಶಯ್ಯಾಗ್ರ
- ಶರ – ಬಾಣ; ನೀರು; ಹುಲ್ಲು
- ಶರಚ್ಚಂದ್ರಿಕೆ – ಶರತ್ಕಾಲದ ಬೆಳುದಿಂಗಳು
- ಶರಜಾಲ – ಬಾಣಗಳ ಬಲೆ (ಗುಂಪು)
- ಶರಣ್(ಣ) – ಆಶ್ರಯ
- ಶರಣಾಗತ – ರಕ್ಷಣೆ ಬಯಸಿ ಬಂದವನು
- ಶರಣಾಗತರಕ್ಷಣ – ಆಶ್ರಯ ಬಯಸಿ ಬಂದವನನ್ನು ಕಾಪಾಡುವವನು
- ಶರಣಾಗತವಜ್ರಪಂಜರ – ಆಶ್ರಯ ಬಯಸಿ ಬಂದವನನ್ನು ಬಿಗಿಯಾದ ಪಂಜರದಲ್ಲಿಟ್ಟಂತೆ ಜೋಪಾನವಾಗಿ ಕಾಪಾಡುವವನು
- ಶರಣ್ಯ – ಆಶ್ರಯದಾತ
- ಶರತ್ಸಮಯ – ಶರತ್ಕಾಲ
- ಶರದ – ಶರದೃತು
- ಶರದಂಬರ – ಶರತ್ಕಾಲದ ನಿರಭ್ರ ಆಕಾಶ
- ಶರದಂಬುದ – ಶರತ್ಕಾಲದ ಮೋಡ
- ಶರದಭ್ರ – ಶರತ್ಕಾಲದ ಮೋಡ
- ಶರಧರ – ಮೋಡ
- ಶರದಾಗಮನ – ಶರತ್ಕಾಲದ ಆರಂಭ
- ಶರದಾತಪ – ಶರತ್ಕಾಲದ ಬಿಸಿಲು, ಮಾಗಿಯ ಬಿಸಿಲು
- ಶರಧರ – ಮೋಡ
- ಶರಣಾಗತರಕ್ಷಣ – ಆಶ್ರಯ ಬಯಸಿ ಬಂದವನನ್ನು ಕಾಪಾಡುವವನು
- ಶರಧಿ – ಸಮುದ್ರ; ಬತ್ತಳಿಕೆ
- ಶರನಿಧಿ – ಶರಧಿ
- ಶರಪಂಜರ – ಬಾಣಗಳಿಂದ ಮಾಡಿದ ಪಂಜರ
- ಶರಪರಿಣತಿ – ಬಾಣ ಬಿಡುವುದರಲ್ಲಿನ ನೈಪುಣ್ಯ
- ಶರಭ – ಸಿಂಹಕ್ಕಿಂತ ಬಲಿಷ್ಠವಾದ ಎಂಟುಕಾಲುಗಳ ಒಂದು ಕಲ್ಪಕ ಪ್ರಾಣಿ
- ಶರಭಂಗ – ಬಾಣದ ತುಂಡು; ನೀರಿನ ತೆರೆ
- ಶರಭರಿಪು – ಗಂಡಭೇರುಂಡ
- ಶರಮಂಚ – ಬಾಣಗಳ ಮಂಚ
- ಶರರುಹ – ತಾವರೆ
- ಶರವಿದ್ಯೆ – ಧನುರ್ವಿದ್ಯೆ
- ಶರವೃಷ್ಟಿ – ಬಾಣಗಳ ಮಳೆ
- ಶರವೇದ – ಶರವಿದ್ಯೆ
- ಶರಶಯ್ಯೆ – ಬಾಣಗಳ ಹಾಸಿಗೆ
- ಶರಶಲ್ಯ – ಬಾಣದ ಮೊನೆ
- ಶರತಾಳಿ – ನಿಪುಣ ಬಿಲ್ಗಾರ
- ಶರಸಂಧಾನ – ಬಿಲ್ಲಿಗೆ ಬಾಣವನ್ನು ಹೂಡುವುದು
- ಶರಸ್ತಂಬ – ಲಾಳದ ಕಡ್ಡಿ; ಜೊಂಡು
- ಶರಾರು – ದುಷ್ಟ
- ಶರಾಶ್ರಯ – ಬತ್ತಳಿಕೆ
- ಶರಾಸನ – ಬಿಲ್ಲು
- ಶರಾಸನಾಗಮ – ಧನುರ್ವಿದ್ಯೆ
- ಶರಾಸಾರ – ಶರವೃಷ್ಟಿ
- ಶರೀರದಂಡ – ದೇಹದಂಡನೆ
- ಶರೀರಪೂಜೆ – ಸತ್ತವರ ದೇಹಕ್ಕೆ ಮಾಡುವ ಪೂಜೆ
- ಶರೀರಪ್ರತ್ಯಾಖ್ಯಾನ – (ಜೈನ) ದೇಹದ ಬಗೆಗಿನ ತಿರಸ್ಕಾರ
- ಶರೀರೋಪಾದನ – ಹುಟ್ಟು
- ಶರ್ಕರಾ – ಸಕ್ಕರೆ; ನೊರಜುಗಲ್ಲು
- ಶರ್ಕರಾಪ್ರಭೆ – (ಜೈನ) ಒಂದು ನರಕ
- ಶರ್ಮ – ನೆಲೆ, ಆಶ್ರಯ; ಸಂತೋಷ
- ಶರ್ವರಿ – ರಾತ್ರಿ
- ಶರ್ವರೀಶ – ರಾತ್ರಿಯ ಒಡೆಯ, ಚಂದ್ರ
- ಶರ್ವಾಣಿ – ಪಾರ್ವತಿ
- ಶಲಭ – ಮಿಡಿತೆ
- ಶಲಲಿ – ಮುಳ್ಳುಹಂದಿ
- ಶಲಾಕಾಪುರುಷ – (ಜೈನ) ಅರವತ್ತು ಮೂವರು ಶ್ರೇಷ್ಠಪುರುಷರು: ಇಪ್ಪತ್ತನಾಲ್ಕು ಮಂದಿ ತೀರ್ಥಂಕರರು, ಹನ್ನೆರಡು ಮಂದಿ ಚಕ್ರವರ್ತಿಗಳು, ಒಂಬತ್ತು ಮಂದಿ ಬಲದೇವರು, ಒಂಬತ್ತು ಮಂದಿ ವಾಸುದೇವರು, ಒಂಬತ್ತು ಮಂದಿ ಪ್ರತಿವಾಸುದೇವರು; ವಿವರಗಳಿಗೆ ನೋಡಿ, ತ್ರಿಷಷ್ಠಿಶಲಾಕಾಪುರುಷರು’
- ಶಲಾಕೆ – ಈಟಿ
- ಶಲಾಟು(ಕ) – ಮಿಡಿಗಾಯಿ
- ಶಲ್ಕ – ಚೂರು
- ಶಲ್ಯ – ಮುಳ್ಳು; ಚುಚ್ಚುವ ಆಯುಧ; ಸಂಕಟಕರ; ಮೂಳೆ
- ಶಲ್ಯಕ – ಮುಳ್ಳುಹಂದಿ
- ಶಲ್ಯತ್ರಯ – (ಜೈನ) ವ್ರತಸ್ಥನನ್ನು ಬಾಧಿಸುವ ಮಾಯಾ, ಮಿಥ್ಯಾ, ನಿದಾನ ಎಂಬ ಮೂರು ತೊಂದರೆಗಳು
- ಶಲ್ಯವಿದೂರ – (ಜೈನ) ಶಲ್ಯತ್ರಯಗಳನ್ನು ನಿವಾರಿಸಿಕೊಂಡವನು
- ಶಶ(ಕ) – ಮೊಲ
- ಶಶಧರ – ಚಂದ್ರ
- ಶಶಾಂಕ – ಚಂದ್ರ
- ಶಶಿಖಂಡ – ಬಾಲಚಂದ್ರ
- ಶಶಿಮಣಿ – ಚಂದ್ರಕಾಂತಶಿಲೆ
- ಶಸ್ತ್ರಕರ್ಮ – ಶಸ್ತ್ರಗಳನ್ನು ಪ್ರಯೋಗಿಸುವುದು
- ಶಸ್ತ್ರವಿಡಂಬ – ಆಯುಧಗಳ ಅಟಾಟೋಪ
- ಶಸ್ತ್ರವಿದ – ಆಯುಧಪ್ರಯೋಗ ನಿಪುಣ
- ಶಸ್ತ್ರವ್ರಣ – ಆಯುಧದಿಂದಾದ ಗಾಯ
- ಶಸ್ತ್ರಶಾಲೆ – ಆಯುಧಾಗಾರ
- ಶಶ್ತ್ರಾಗ್ನಿ – ಆಯುಧವು ಸೂಸುವ ಬೆಂಕಿ
- ಶಸ್ತ್ರಾಶಸ್ತ್ರಿ – ಆಯುಧ ಹಿಡಿದು ಮಾಡುವ ಯುದ್ಧ
- ಶಳ – ಮುಳ್ಳು; ಮುಳ್ಳು ಹಂದಿ
- ಶಾಂತಾಂತರಂಗ – ಶಾಂತವಾದ ಮನಸ್ಸು
- ಶಾಂತಿಕ – ಅನಿಷ್ಟನಿವಾರಣೆಯ ಒಂದು ಕರ್ಮ
- ಶಾಂತಿಕ್ರಿಯೆ – ಶಾಂತಿಕ
- ಶಾಂತಿಕರ್ಮ – ಶಾಂತಿಕ
- ಶಾಂತಿಧನ – ಶಾಂತಿಯನ್ನೇ ಧನವಾಗುಳ್ಳವನು
- ಶಾಂತ್ಯಭಿಷೇಕ – ಅನಿಷ್ಟನಿವಾರಣೆಗಾಗಿ ದೇವರಿಗೆ
- ಮಾಡುವ ಅಭಿಷೇಕ
- ಶಾಕಟಿಕ – ಸರಕು ಬಂಡಿಯವನು
- ಶಾಕವರ್ತಿಕ(ಗೆ) – ತರಕಾರಿಯ ಒಂದು ಭಕ್ಷ್ಯ
- ಶಾಕಿನಿ – ಪಿಶಾಚಿ
- ಶಾಕ್ವರ – ಎತ್ತು
- ಶಾಖಾಚರ – ಕೊಂಬೆಯ ಮೇಲೆ ಓಡಾಡುವುದು, ಕೋತಿ ಮುಂತಾದವು
- ಶಾಖಾಮೃಗ – ಕೋತಿ
- ಶಾಖಿ – ಮರ
- ಶಾಠ್ಯ – ಹಟ; ಮೋಸ
- ಶಾಡ್ವಲ(ಳ) – ಗರಿಕೆ; ಹುಲ್ಲು ಹಾಸಲೆ
- ಶಾಣ – ಸಾಣೆಕಲ್ಲು; ಒರೆಗಲ್ಲು
- ಶಾತ – ಹರಿತವಾದ
- ಶಾತಕುಂಭ – ಚಿನ್ನ
- ಶಾತಶರ – ಹರಿತವಾದ ಬಾಣ
- ಶಾತಾಸ್ತ್ರ – ಶಾತಶರ
- ಶಾತೋದರಿ – ತೆಳುವಾದ ಸೊಂಟದವಳು
- ಶಾತ್ರವ – ಶತ್ರು
- ಶಾತ್ರವಮಂತ್ರಪಂಚಕ – ರಾಜನು ಶತ್ರುನಿನೊಡನೆ ವ್ವಹರಿಸುವಾಗ ಕೈಗೊಳ್ಳಬಹುದಾದ ಕರ್ಮಾರಂಭ, ಪುರುಷದ್ರವ್ಯಸಂಪತ್ತು, ದೇಶಕಾಲವಿಭಾಗ, ವಿನಿಪಾತಪ್ರತೀಕಾರ, ಕಾರ್ಯಸಿದ್ಧಿ ಎಂಬ ಐದು ಉಪಾಯಗಳು
- ಶಾಪಮೋಕ್ಷ – ಶಾಪದಿಂದ ಬಿಡುಗಡೆ
- ಶಾಬ(ಕ) – ಮರಿ
- ಶಾಬ್ದಿಕ – ಶಬ್ದಸಂಬಂಧಿಯಾದ; ಶಬ್ದ; ವ್ಯಾಕರಣಪಂಡಿತ
- ಶಾರದ – ಶರತ್ಕಾಲ; ಬಿಳಿಯ ತಾವರೆ
- ಶಾರದನೀರದ – ಶರತ್ಕಾಲದ ಮೋಡ
- ಶಾರಿಕೆ – ಮೈನಾ, ಗಿಳಿ; ಆನೆಯ ಮೇಲಣ ಜೀನು
- ಶಾಙ್ರ್ಗ(ಚಾಪ) – ಕೊಂಬಿನಿಂದ ಮಾಡಿದ ಬಿಲ್ಲು; ವಿಷ್ಣವಿನ ಬಿಲ್ಲು
- ಶಾಙ್ರ್ಗಧರ – ವಿಷ್ಣು; (ಜೈನ) ವಾಸುದೇವ
- ಶಾರ್ದೂಲ – ಹುಲಿ
- ಶಾರ್ವರಿ – ರಾತ್ರಿ; ಅರವತ್ತು ಸಂವತ್ಸರಗಳಲ್ಲಿ ಒಂದು
- ಶಾಲ(ಳ) – ಮನೆ; ಒಂದು ಬಗೆಯ ಮೀನು; ಕೋಟೆಯ ಗೋಡೆ; ಸರ್ಜವೃಕ್ಷ
- ಶಾಲ(ಳ)ಭಂಜಿಕೆ – ಶಾಲವೃಕ್ಷದ ಮರದಿಂದ ಮಾಡಿದ ಬೊಂಬೆ
- ಶಾಲಿ(ಳಿ) – ಬತ್ತ
- ಶಾಲಿ(ಳಿ)ಕೆ – ಮನೆ
- ಶಾಲಿ(ಳಿ)ವನ – ಬತ್ತದ ಗದ್ದೆ
- ಶಾಲಿ(ಳಿ)ಹೋತ್ರ – ಒಬ್ಬ ಋಷಿ; ಅವನು ಬರೆದ ಅಶ್ವಶಾಸ್ತ್ರ
- ಶಾಲೀನತೆ – ವಿನಯ
- ಶಾಲು(ಲೂ)ಕ – ಕಮಲದ ಗಡ್ಡೆ
- ಶಾಲೂರ – ಕಪ್ಪೆ
- ಶಾಲೇಯ – ಬತ್ತದ ಗದ್ದೆ
- ಶಾಲ್ಮಲಿ – ಬೂರುಗದ ಮರ
- ಶಾಲ್ಯಕ್ಷತ – ಮಂತ್ರಾಕ್ಷತೆ
- ಶಾಸನ – ಅಪ್ಪಣೆ
- ಶಾಸನದೀಪಕ – (ಜೈನ) ಧರ್ಮವನ್ನು ಬೆಳಗುವವನು
- ಶಾಸನದೇವಿ – ತೀರ್ಥಂಕರನ ಯಕ್ಷಿ
- ಶಾಸನಹರ – ಓಲೆಕಾರ
- ಶಾಸಿಸು – ಶಕ್ಷಿಸು
- ಶಾಸ್ತಿ – ದಂಡನೆ
- ಶಾಸ್ತ್ರದಾನ – (ಜೈನ) ನಾಲ್ಕು ಬಗೆಯ ದಾನಗಳಲ್ಲಿ ಒಂದು, ಜೈನಗ್ರಂಥಗಳನ್ನು ಶ್ರಾವಕರಿಗೆ ನೀಡುವುದು
- ಶಾಸ್ತ್ರಪಾರಗ – ಶಾಸ್ತ್ರಗಳಲ್ಲಿ ಪಂಡಿತನಾದವನು
- ಶಾಸ್ತ್ರೋಕ್ತ – ಶಾಸ್ತ್ರಗಳಲ್ಲಿ ಹೇಳಿರುವ ರೀತಿ
- ಶಾಳ – ಸಾಲ, ಕೋಟೆಯ ಗೋಡೆ
- ಶಾಳಿ – ಬತ್ತದ ಪೈರು
- ಶಿಂಜಿತ – ಧ್ವನಿ ಮಾಡುವ; ಆಭರಣಗಳ ಧ್ವನಿ
- ಶಿಂಶುಮಾರ – ಮೊಸಳೆ
- ಶಿಕ್ಷಾವಚನ – ಉಪದೇಶದ ಮಾತು
- ಶಿಕ್ಷಾವ್ರತ – (ಜೈನ) ಶ್ರಾವಕರು ಪಾಲಿಸಬೇಕಾದ ಸಾಮಯಿಕ, ಪ್ರೋಷಧ, ಅತಿಥಿಸಂಗ್ರಹ, ಸಲ್ಲೇಖನ ಎಂಬ ನಾಲ್ಕು ವ್ರತಗಳು
- ಶಿಕ್ಷಾಸೂತ್ರ – ಉಚ್ಚಾರಣೆಯ ಕ್ರಮ
- ಶಿಕ್ಷಿಸು – ನಿಯಮಿಸು; ಬೋಧಿಸು
- ಶಿಖಂಡ(ಕ) – ತಲೆ; ಚೆಂಡಿಕೆ; ಕೊಟ್ಟು; ನವಿಲುಗರಿ
- ಶಿಖಂಡಮಂಡನ – ತಲೆಯಲ್ಲಿ ಧರಿಸುವ ಆಭರಣ
- ಶಿಖಂಡಮಣಿ – ಶಿಖಂಡಮಂಡನ
- ಶಿಖಂಡರತ್ನ – ಶಿಖಂಡಮಂಡನ
- ಶಿಖಂಡಶೇಖರ – ಶಿಖಂಡಮಂಡನ
- ಶಿಖಂಡಿ – ನವಿಲು; ನಪುಂಸಕ
- ಶಿಖಂಡಿತಾಂಡವ – ನವಿಲ ಕುಣಿತ
- ಶಿಖರಿ – ಶಿಖರವುಳ್ಳುದು, ಬೆಟ್ಟ
- ಶಿಖರಿಣಿ – ಒಂದು ಭಕ್ಷ್ಯ
- ಶಿಖರಿಶಿಖರ – ಬೆಟ್ಟದ ತುದಿ
- ಶಿಖಾಕಲಾ(ಳಾ)ಪ – ಬೆಂಕಿಯ ನಾಲಗೆಗಳ ಸಮೂಹ
- ಶಿಖಾಮಣಿ – ಶಿಖಂಡಮಂಡನ
- ಶಿಖಾವಹ – ಬೆಂಕಿ
- ಶಿಖಾಸ್ರಜ – ಜಟಾಮಾಲೆ
- ಶಿಖಿ -ಚೆಂಡಿಕೆ; ಬೆಂಕಿ; ನವಿಲು
- ಶಿಖಿಶಿಖೆ – ಬೆಂಕಿಯ ಜ್ವಾಲೆ
- ಶಿಖೆ – ಚೆಂಡಿಕೆ; ನವಿಲಿನ ಜುಟ್ಟು;ಬೆಂಕಿಯ ಜ್ವಾಲೆ
- ಶಿತ- ಹರಿತವಾದ
- ಶಿತಾಸಿ – ಹರಿತವಾದ ಕತ್ತಿ
- ಶಿತಾಸ್ತ್ರ – ಚೂಪಾದ ಬಾಣ (ಆಯುಧ)
- ಶಿತಿಕಂಠ – ಈಶ್ವರ
- ಶಿಥಿಲ – ಸಡಿಲ
- ಶಿಬಿಕೆ – ಪಲ್ಲಕ್ಕಿ
- ಶಿಬಿರ – ಸೈನ್ಯದ ಬೀಡು
- ಶಿರಃಕಂಪ – ತಲೆದೂಗುವಿಕೆ
- ಶಿರಸ್ತೋದ – ತಲೆನೋವು
- ಶಿರಸ್ತ್ರಾಣ – ತಲೆಯ ಕವಚ
- ಶಿರೀಷ(ಕುಸುಮ) – ಬಾಗೆ (ಹೂ)
- ಶಿರೋಜ – ತಲೆಗೂದಲು
- ಶಿರೋದಳನ – ತಲೆಯನ್ನು ಕತ್ತರಿಸುವಿಕೆ
- ಶಿರೋಧಿ – ಕೊರಳು, ಕತ್ತು
- ಶಿರೋಮಂಡನ – ತಲೆಯ ಆಭರಣ
- ಶಿರೋರುಹ – ಶಿರೋಜ
- ಶಿರೋವೇಷ್ಟನ – ತಲೆಗೆ ಸುತ್ತುವ ವಸ್ತ್ರ
- ಶಿಲಾಕರ್ಮ – ಕಲ್ಲಿನ ಕೆತ್ತನೆ
- ಶಿಲಾತಲ(ಳ) – ಚಪ್ಪಟೆಯಾದ ಕಲ್ಲು
- ಶಿಲಾಪಟ್ಟ(ಕ) – ಕಲ್ಲಿನ ಪೀಠ
- ಶಿಲಾಸಾರ – ಕಬ್ಬಿಣ
- ಶಿಲಾಸ್ತಂಭ – ಕಲ್ಲಿನ ಕಂಬ
- ಶಿಲೀಂಧ್ರ – ಅಣಬೆ
- ಶಿಲೀ(ಳೀ)ಮುಖ – ಬಾಣ; ದುಂಬಿ
- ಶಿಲೋಚ್ಚಯ – ಪರ್ವತ
- ಶಿಲ್ಪಕರ್ಮ – ಕುಶಲಕಲೆ
- ಶಿವ – ಶುಭ; ತ್ರಿಮೂರ್ತಿಗಳಲ್ಲಿ ಒಬ್ಬ
- ಶಿವಾಕ್ಷ – ರುದ್ರಾಕ್ಷ
- ಶಿವಿಗೆ – ಪಲ್ಲಕ್ಕಿ
- ಶಿವಸುಖ – ಮೋಕ್ಷ
- ಶಿವಾ – ನರಿ
- ಶಿಶಿರ – ತಂಪಾದ; ಷಡೃತುಗಳಲ್ಲಿ ಒಂದು, ಮಾಘ-ಫಾಲ್ಗುಣಗಳು-
- ಶಿಶಿರಕರ – ತಂಪುಕಿರಣ(ವುಳ್ಳವನು), ಚಂದ್ರ
- ಶಿಶಿರಶಿಲೆ – ಚಂದ್ರಕಾಂತದ ಕಲ್ಲು
- ಶಿಶಿರಾಂಶು – ಶಿಶಿರಕರ
- ಶಿಶಿರೋಪಚಾರ – ಶೀತಲೋಪಚಾರ
- ಶಿಶುಮಾರ – ಮೊಸಳೆ
- ಶಿಷ್ಟಜನ – ಯೋಗ್ಯರಾದವರು
- ಶೀಕರ – ತುಂತುರು
- ಶೀತಕೃತ್ಕರ – ಚಂದ್ರ
- ಶೀತದ್ಯುತಿ – ಚಂದ್ರ
- ಶೀತಮಯೂಖ – ಶೀತದ್ಯುತಿ
- ಶೀತಮರೀಚಿ – ಚಂದ್ರ
- ಶೀತರೋಚಿ – ಶೀತಮರೀಚಿ
- ಶೀತವಾತ – ತಣ್ಣನೆಯ ಗಾಳಿ
- ಶೀತವೇತಾಳವಿದ್ಯೆ – ರೂಪಾಂತರಗೊಳಿಸುವ ವಿದ್ಯೆ
- ಶೀತಳಿಕೆ – ತಾವರೆ
- ಶೀತಾಂಬು – ತಣ್ಣೀರು
- ಶೀತಾಂಶು – ಚಂದ್ರ
- ಶೀತಾಶ್ಮ – ಹಿಮದ ಗಡ್ಡೆ
- ಶೀತೋದಕ – ಶೀತಾಂಬು
- ಶೀತೋಷ್ಣಭವನ – ಧಾರಾಗೃಹ, ಹಿಮಗೃಹ
- ಶೀರ್ಣ – ಬತ್ತಿಹೋದ; ಹರಿದ; ಕೃಶವಾದ
- ಶೀರ್ಯಮಾಣ – ಒಡೆದ
- ಶೀರ್ಷಕ – ಶಿರಸ್ತ್ರಾಣ; ತಲೆಯ ಆಭರಣ
- ಶೀರ್ಷಾಭರಣ – ತಲೆಯ ಆಭರಣ
- ಶೀಲ – ಸ್ವಭಾವ; (ಜೈನ) ದಿಗ್ವ್ರತ, ದೇಶವ್ರತ ಮತ್ತು ಸಾಮಯಿಕ ಪ್ರೋಷಧೋಪಚಾರಗಳೆಂಬ ವ್ರತ
- ಶೀಲವ್ರತ – (ಜೈನ) ಮುನಿಗಳ ವ್ರತಾಚರಣೆ
- ಶೀಲಸಂಪನ್ನ – ಶೀಲವ್ರತವನ್ನಾಚರಿಸುವವನು
- ಶುಂಡ – ಆನೆಯ ಸೊಂಡಿಲು
- ಶುಂಡಾದಂಡ – ಶುಂಡ
- ಶುಂಡಾಲ(ಳ) – ಆನೆ; ಸೊಂಡಿಲು
- ಶುಂಭತ್ – ಒಡೆಯುತ್ತಿರುವ
- ಶುಕ – ಗಿಳಿ; ಬೂರುಗದ ಮರ
- ಶುಕಕಾಮಿನಿ – ಹೆಣ್ಣುಗಿಳಿ
- ಶುಕ್ತಿ(ಕೆ) – ಚಿಪ್ಪು
- ಶುಕ್ತಿಜ – ಚಿಪ್ಪಿನಲ್ಲಿ ಹುಟ್ಟಿದುದು, ಮುತ್ತು
- ಶುಕ್ತಿ(ಸಂ)ಪುಟ – ಮುತ್ತಿನ ಚಿಪ್ಪು
- ಶುಕ್ತಿಪುಟೋದರ – ಮುತ್ತಿನ ಚಿಪ್ಪಿನ ಒಳಭಾಗ
- ಶುಕ್ಲ – ಬಿಳಿಯ; (ಜೈನ) ಪರಿಶುದ್ಧ ಆತ್ಮಜ್ಞಾನ
- ಶುಕ್ಲಧ್ಯಾನ – (ಜೈನ) ಪರಿಶುದ್ಧ ಆತ್ಮಜ್ಞಾನ
- ಶುಕ್ಲಪಕ್ಷ – ಚಂದ್ರನ ಬೆಳವಣಿಗೆಯ ಕಾಲ
- ಶುಕ್ಲಲೇಶ್ಯೆ – (ಜೈನ) ಕರ್ಮಸಂಬಂಧವಾದ ಬಣ್ಣಗಳಲ್ಲಿ ಒಂದು; ಅತಿನಿದ್ದೆಯ ಸಂಕೇತವಾದ ಬಿಳಿ
- ಶುಚಿಸ್ವಾಂತೆ – ಪರಿಶುದ್ಧ ಮನಸ್ಸಿನವಳು
- ಶುಚ್ಯಂಬಕ – ಉರಿಗಣ್ಣ, ಶಿವ
- ಶುದ್ಧಗೆ – (ಶುದ್ಧಕ) ಸುದ್ದಗೆ, ಅಕ್ಷರ
- ಶುದ್ಧಪಾಷ್ರ್ಣಿ – ಹಿಂಚೂಣಿ ಸೈನ್ಯ
- ಶುದ್ಧವೃತ್ತ – ಒಳ್ಳೆಯ ನಡತೆ
- ಶುದ್ಧಾಂತ – ಅಂತಃಪುರ
- ಶುದ್ಧಾಕ್ಷರ – ವರ್ಣಮಾಲೆಯ ಅಕ್ಷರ
- ಶುದ್ಧ್ಯಷ್ಟಕ – (ಜೈನ) ಮುನಿಗಳು ಸಾಧಿಸಬೇಕಾದ ಎಂಟು ಬಗೆಯ ಶುದ್ಧಿಗಳು
- ಶುನಾಸೀರ – ದೇವೇಂದ್ರ
- ಶುಭಂಕರಕ(ಗ)ತ್ತಿಗೆ – ಒಂದು ಬಗೆಯ ಕತ್ತಿ
- ಶುಭಚರಿತ(ತೆ) – ಪರಿಶುದ್ಧ ನಡತೆ(ಯವನು/ಳು)
- ಶುಭತಿಥಿ – ಶುಭಕರವಾದ ದಿನ
- ಶುಭದ – ಮಂಗಳಕರವಾದ
- ಶುಭಧ್ಯಾನ – ಮಂಗಳಕರವಾದ ಆಲೋಚನೆ
- ಶುಭಯೋಗ – ಶುಭಧ್ಯಾನ
- ಶುಭಲಕ್ಷಣ – ಒಳ್ಳೆಯ ಲಕ್ಷಣ
- ಶುಭವೃತ್ತ – ಒಳ್ಳೆಯ ನಡತೆ
- ಶುಭ್ರಾತಪತ್ರ – ಬೆಳ್ಗೊಡೆ
- ಶುಶ್ರೂಷ(ಷೆ) – ಪರಿಚರ್ಯೆ
- ಶುಶ್ರೂಷೆಗೆಯ್ – ಪರಿಚರ್ಯೆಮಾಡು
- ಶುಷ್ಕ – ಒಣಗಿದ
- ಶುಷ್ಕತಾರ್ಕಿಕ – ಒಣಕಲು ಚರ್ಚೆ ಮಾಡುವವನು
- ಶುಷ್ಕೇಂಧನ – ಒಣಗಿದ ಸೌದೆ
- ಶೂಕ – ಕರುಣೆ, ದಯೆ
- ಶೂಕಲ(ಳ) – ಕಾಡುಕುದುರೆ
- ಶೂಕಲಾಶ್ವ – ಶೂಕಲ(ಳ)
- ಶೂನ್ಯ – ಇಲ್ಲವಾದುದು; ಸೊನ್ನೆ; ಬರಿದು
- ಶೂನ್ಯವಾದ(ದಿ) – ನಾಸ್ತಿಕವಾದ (ಪ್ರತಿಪಾದಕ)
- ಶೂನ್ಯಾಧ್ವ – ಆಕಾಶಮಾರ್ಗ; ಮಾಟದ ವಸ್ತುಗಳನ್ನಿರಿಸಿದ ದಾರಿ
- ಶೂರತೆ – ಪರಾಕ್ರಮ
- ಶೂರ್ಪಕರ್ಣ – ಮೊರಗಿವಿಯುಳ್ಳುದು, ಆನೆ; ಗಣೇಶ
- ಶೂರ್ಪಶ್ರವ – ಶೂರ್ಪಕರ್ಣ
- ಶೃಂಗ – ಬೆಟ್ಟದ ತುದಿ; ಕೊಂಬು
- ಶೃಂಗಾಟ(ಕ) – ನಾಲ್ಕು ದಾರಿಗಳು ಸೇರುವ ಚೌಕ
- ಶೃಂಗಾಟಕ – ನಾಲ್ಕು ದಾರಿ ಸೇರುವ ಜಾಗ; ಒಂದು ಬಗೆಯ ಸೇನಾ ರಚನೆ
- ಶೃಂಗಾಟಕವ್ಯೂಹ – ಒಂದು ಸೇನಾರಚನೆ
- ಶೃಂಗಾರಂಗೆಯ್ – ಅಲಂಕರಿಸಿಕೊ
- ಶೇಖರ – ಶಿರೋಭೂಷಣ
- ಶೇಮುಷಿ – ಬುದ್ಧಿ, ಜ್ಞಾನ
- ಶೇಷ – ಉಳಿದುದು; ಆದಿಶೇಷ
- ಶೇಷಾಕ್ಷತ – ಆಶೀರ್ವಾದಪೂರ್ವಕ ಹಾಕುವ ಅಕ್ಷತೆ
- ಶೈಕ್ಷ್ಯ – ಪ್ರಾವೀಣ್ಯ
- ಶೈಲ – ಬೆಟ್ಟ
- ಶೈಲನಿತಂಬ – ಬೆಟ್ಟದ ತಪ್ಪಲು
- ಶೈಲಚಾಪ – ಬೆಟ್ಟವನ್ನೇ ಬಾಣವಾಗುಳ್ಳವನು, ಶಿವ
- ಶೈಲಪ – ಬೆಟ್ಟಗಳ ರಾಜ, ಶ್ರೇಷ್ಠ ಬೆಟ್ಟ,
- ಹಿಮಾಲಯ
- ಶೈಲರಾಜ – ಶೈಲಪ
- ಶೈಲಾದಿ – ನಂದಿ
- ಶೈಲಿ – ನಡತೆ
- ಶೈಲೂಷ – ನರ್ತಕ, ನಟ
- ಶೈಲೇಂದ್ರ – ಶೈಲಪ
- ಶೈಲೇಯ – ಕಲ್ಲುಹೂ; ಪಾಚಿ
- ಶೈವ(ವಾ)ಲ(ಳ) – ಪಾಚಿ
- ಶೈಶವ – ಮಗುವಿನ ಹಂತ
- ಶೈಶವಕೇಳಿ – ಮಕ್ಕಳ ಆಟ
- ಶೈಶವಭಾವ – ಮಗುತನ
- ಶೈಳೋದಕ – ಬೆಟ್ಟದಿಂದ ಹರಿದುಬರುವ ನೀರು
- ಶೋಕಬಾಷ್ಪ – ದುಃಖದ ಕಣ್ಣೀರು
- ಶೋಕಾಂದ – ದುಃಖದಿಂದ ದಿಕ್ಕುತೋಚದವನು
- ಶೋಕೋದ್ರೇಕ – ದುಃಖದ ಅತಿರೇಕ
- ಶೋಚ್ಯ – ದುಃಖಿಸಬೇಕಾದ
- ಶೋಣ – ಕೆಂಪು ಬಣ್ಣ
- ಶೋಣಮಣಿ – ಮಾಣಿಕ್ಯ
- ಶೋಣಾಶ್ವ – ಕೆಂಪು ಕುದುರೆ
- ಶೋಣಿತಜಲ – ಕೆಂಪು ನೀರು; ರಕ್ತ
- ಶೋಭಾಕರ – ಶೋಭೆಯನ್ನುಂಟುಮಾಡುವ
- ಶೋಭಾವಹ – ಶೋಭಿಸುವ
- ಶೌಂಡ – ಅಮಲಿನಲ್ಲಿರುವ; ಆಸಕ್ತಿಯುಳ್ಳ
- ಶೌಂಡಿಕ – ಹೆಂಡ ತಯಾರಿಸುವವನು,
- ಮಾರುವವನು
- ಶೌಕ್ತಿಕೇಯ – ಮುತ್ತು, ಮುಕ್ತಕ; ವಿಷ
- ಶೌಚ – ಪರಿಶುದ್ಧ ನಡತೆ; ಬ್ರಹ್ಮಚರ್ಯ (ಜೈನ) ಒಂದು ಕುಲಧರ್ಮ, ಲೋಭವನ್ನು ಬಿಡುವುದು, ನೋಡಿ `ದಶಕುಲಧರ್ಮ’
- ಶೌಚಾಚಾರ – ಶುದ್ಧಿಕ್ರಿಯೆ
- ಶೌಚಿ – ಪರಿಶುದ್ಧ ನಡತೆಯುಳ್ಳವನು
- ಶೌರಿ – ಶೂರಸೇನನ ವಂಶದವನು, ಶ್ರೀ ಕೃಷ್ಣ
- ಶೌರ್ಯಮದ – ಅಷ್ಟಮದಗಳಲ್ಲಿ ಒಂದು
- ಶೌರ್ಯಸಖ – ಪರಾಕ್ರಮದ ಕೆಲಸಗಳಲ್ಲಿನ ಸ್ನೇಹಿತ
- ಶ್ಮಶ್ರು – ಮೀಸೆ
- ಶ್ಯಾಮ – ಕಪ್ಪು; ಕಡುನೀಲ
- ಶ್ಯಾಮಕ – ಕಪ್ಪಾಗಿರುವ
- ಶ್ಯಾಮತೆ – ಕಪ್ಪು ಬಣ್ಣ
- ಶ್ಯಾಮಲ(ಳ) – ಕಪ್ಪು; ಕಡುನೀಲಿ
- ಶ್ಯಾಮಾಂಗ – ಕಪ್ಪು ದೇಹ(ದವನು)
- ಶ್ಯೇನ – ಬಿಳಿಯ ಬಣ್ಣ; ಗಿಡುಗ
- ಶ್ರಮಗೃಹ – ಗರಡಿಯ ಮನೆ
- ಶ್ರಮಾಂಭಃಕಣ – ಬೆವರ ಹನಿ
- ಶ್ರಯಣೀಯ – ಆಶ್ರಯಿಸಿದವನು, ಸೇರಿದವನು
- ಶ್ರವ(ಣ) – ಕೇಳುವಿಕೆ; ಕಿವಿ
- ಶ್ರವಣವಿವರ – ಕಿವಿಯ ತೂತು
- ಶ್ರವಣಶೂಲ – ಕಿವಿ ನೋವು
- ಶ್ರವಣಸುಖ – ಕೇಳಲು ಹಿತಕರವಾದುದು
- ಶ್ರವಣಾಭರಣ – ಕಿವಿಗಿಟ್ಟುಕೊಳ್ಳುವ ಒಡವೆ
- ಶ್ರವ್ಯ – ಕೇಳಲು ಯೋಗ್ಯವಾದ
- ಶ್ರಾಂತ – ಬಳಲಿದ
- ಶ್ರಾಂತಿ – ಆಯಾಸ
- ಶ್ರಾವಕ – ಕೇಳುವವನು; ಜೈನ ಗೃಹಸ್ಥ
- ಶ್ರಾವಕತನ – (ಜೈನ) ಐದು ಅಣುವ್ರತಗಳು, ಮೂರು ಗುಣವ್ರತಗಳು ಮತ್ತು ನಾಲ್ಕು
- ಶಿಕ್ಷಾವ್ರತಗಳನ್ನು ಪಾಲಿಸುವಿಕೆ
- ಶ್ರೀತಾಲ – ಬೀಸಣಿಗೆಯ ತಾಳೆ
- ಶ್ವಾವಕತ್ವ – ಶ್ರಾವಕತನ
- ಶ್ರಾವಕಧರ್ಮ – ಜೈನಧರ್ಮ
- ಶ್ರಾವಕಬ(ವ್ರ)್ರತ – ಶ್ರಾವಕತನ
- ಶ್ರಾವಕಮಾನಿ – ಶ್ರಾವಕನೆಂಬ ಗೌರವಕ್ಕೆ ಪಾತ್ರನಾದವನು
- ಶ್ರಾವಕಾಚಾರ – ಶ್ರಾವಕತನ
- ಶ್ರಾವಕಿ – ಕೇಳುವವಳು; ಜೈನ ಗೃಹಿಣಿ
- ಶ್ರಾವಿಕೆ – ಶ್ರಾವಕಿ
- ಶ್ರಾವ್ಯ – ಕೇಳಬಹುದಾದ; ಇಂಪಾದ
- ಶ್ರೀ – ಐಶ್ವರ್ಯ; ಲಕ್ಷ್ಮಿ; ಕಾಂತಿ
- ಶ್ರೀಕರ – ಸಂಪತ್ತನ್ನುಂಟುಮಾಡುವುದು; ವಿಷ್ಣು
- ಶ್ರೀಕಾಂತೆ – ಲಕ್ಷ್ಮಿ
- ಶ್ರೀತಾಳಿಕ – ತಾಳೆಮರ
- ಶ್ರೀದ – ಸಂಪತ್ತನ್ನು ಕೊಡುವವನು; ಕುಬೇರ
- ಶ್ರೀದಯಿತ – ಲಕ್ಷ್ಮಿಯ ಒಡೆಯ, ವಿಷ್ಣು
- ಶ್ರೀದಯಿತೆ – ಲಕ್ಷ್ಮಿ
- ಶ್ರೀನಾರೀಪತಿ – ವಿಷ್ಣು
- ಶ್ರೀನಿಕೇತನ – ಸಂಪತ್ತಿನ ಮನೆ; ಭಂಡಾರ
- ಶ್ರೀನಿಲಯ – ಶ್ರೀನಿಕೇತನ; (ಜೈನ) ಸೌಧರ್ಮಕಲ್ಪದ ಒಂದು ವಿಮಾನ
- ಶ್ರೀನೀಡ – ಸಂಪತ್ತಿನ ಆಗರ
- ಶ್ರೀಫಲ(ಳ) – ಬಿಲ್ವಪತ್ರೆ
- ಶ್ರೀರಮಣ – ಸಂಪತ್ತಿನ ಒಡೆಯ, ಚಕ್ರವರ್ತಿ
- ಶ್ರೀರೋಹಣಗಿರಿ – ಮೇರುಪರ್ವತ
- ಶ್ರೀವತ್ಸ – ಕಪ್ಪು ಮಚ್ಚೆ; ವಿಷ್ಣು
- ಶ್ರೀವನಿತೆ – ಲಕ್ಷ್ಮಿ
- ಶ್ರೀವರ – ಸಂಪತ್ತಿನ ಒಡೆಯ; ಚೆಲುವ; ವಿಷ್ಣು
- ಶ್ರೀವಿಲಾಸ – ಕಾಂತಿಯಿಂದ ಕೂಡಿದ
- ಶ್ರೀವೃಕ್ಷ – ಶ್ರೀಫಲ(ಳ)
- ಶ್ರೀಶ – ವಿಷ್ಣು
- ಶ್ರುತ – ಕೇಳಿದ; ಶಾಸ್ತ್ರ; ವೇದ
- ಶ್ರುತಕೇವಲ – ಜೈನಾಗಮದಲ್ಲಿ ಪೂರ್ಣಜ್ಞಾನವುಳ್ಳವನು
- ಶ್ರುತಕೇವಲಿ(ಳಿ) – (ಜೈನ) ವಿಷ್ಣುನಂದಿ, ನಂದಿಮಿತ್ರ, ಅಪರಾಜಿತ, ಗೋವರ್ಧನ, ಭದ್ರಬಾಹುಗಳೆಂಬುವವರು
- ಶ್ರುತಜಾನ – (ಜೈನ) ಒಂದು ಬಗೆಯ ಜ್ಞಾನ, ಓದು ಮತ್ತು ಕೇಳುವಿಕೆಯಿಂದ ಪಡೆಯುವ ಜ್ಞಾನ
- ಶ್ರುತಜ್ಞಾನಾವರಣೀಯ – (ಜೈನ) ಶ್ರುತಜ್ಞಾನವನ್ನುಂಟುಮಾಡುವ ಕರ್ಮ
- ಶ್ರುತದೇವಿ – ಶಾರದೆ
- ಶ್ರುತಪಾರಗ – ವೇದಪಾರಂಗತ
- ಶ್ರುತವಿದ್ಧ – ಮತ್ತೊಬ್ಬರಿಂದ ಕೇಳಿ ಮಾಡಿದ ಚಿತ್ರಣ
- ಶ್ರುತವಿಳಾಸ – ಶಾಸ್ತ್ರಜ್ಞಾನದಿಂದ ಶೋಭಿಸುವವನು
- ಶ್ರುತಸ್ಕಂದ – (ಜೈನ) ಗಣಧರರು ಬರೆದ ದ್ವಾದಶಾಂಗದ ಸೂತ್ರ
- ಶ್ರುತ(ವಿ)ಹೀನ – ಶಾಸ್ತ್ರಜ್ಞಾನವಿಲ್ಲದವನು
- ಶ್ರುತಿ – ಕಿವಿ; ವಾರ್ತೆ
- ಶ್ರುತಿಪಥ – ಕಿವಿ
- ಶ್ರುತಿಪುರುಷ – ವೇದಪುರುಷ, ಬ್ರಹ್ಮ
- ಶ್ರುತಿಪೂರ – ಕರ್ಣಾಭರಣ
- ಶ್ರುತಿವಿದ್ಧ – ಶ್ರುತವಿದ್ಧ
- ಶ್ರುತಿಶೂನ್ಯ – ಕಿವುಡ
- ಶ್ರುತಿಸುಭಗ – ಇಂಪಾದುದು
- ಶ್ರುತ್ಯಾರೂಢ – ವೇದಪ್ರತಿಪಾದಿತವಾದುದು; ದೇವರು
- ಶ್ರೇಢಿಬದ್ಧ – (ಜೈನ) ಮೂರು ನರಕಬಿಲಗಳಲ್ಲಿ ಒಂದು
- ಶ್ರೇಣಿ – ಗುಂಪು; ಸಾಲು
- ಶ್ರೇಣಿಕೆ – ಗುಂಪು; ಗುಡಾರ
- ಶ್ರೇಯ – ಉತ್ಕøಷ್ಟವಾದ; ಮಂಗಳ
- ಶ್ರೇಯಾಂಸ – ಏಳಿಗೆ ಹೊಂದಿದವನು; (ಜೈನ) ಹನ್ನೊಂದನೆಯ ತೀರ್ಥಂಕರ
- ಶ್ರೇಯೋಮಾರ್ಗ – ಮೋಕ್ಷದ ದಾರಿ
- ಶ್ರೋಣಿ – ನಿತಂಬ
- ಶ್ರೋತೃ – ಕೇಳುವವನು
- ಶ್ರೋತ್ರ – ಕಿವಿ
- ಶ್ರೋತ್ರಿಯ – ವೈದಿಕ, ವೇದವಿದ
- ಶ್ರೌತ – ಕೇಳಲ್ಪಡುವ; ಕಾವ್ಯ; ಉಪದೇಶ
- ಶ್ಲಾಘಿ – ಹೊಗಳಿಕೆಗೆ ಅರ್ಹವಾದ
- ಶ್ಲಥ – ಸಡಿಲವಾದುದು
- ಶ್ಲಿಷ್ಟ – ಹತ್ತಿದ
- ಶ್ಯಾಮಾಕ – ಸಾವೆ
- ಶ್ವಗಣ – ನಾಯಿಗಳ ಗುಂಪು
- ಶ್ವಪಚ(ಕ) – ಚಂಡಾಲ
- ಶ್ವಭ್ರ – ಬಿಲ; ನರಕ
- ಶ್ವಯು – ಹೆಬ್ಬಾವು
- ಶ್ವಸನ – ಉಸಿರಾಟ; ಗಾಳಿ
- ಶ್ವಸನಪಥ – ಗಾಳಿಯ ಮಾರ್ಗ, ಆಕಾಶ
- ಶ್ವಸಿತಗತಿ – ಉಸಿರಾಟ
- ಶ್ವಾಪದ – ಉಗ್ರವಾದ; ಕಾಡುಪ್ರಾಣಿ
- ಶ್ವೇತಕೃಷ್ಣಕಾರಕ – ಬಿಳಿದನ್ನು ಕಪ್ಪಾಗಿಸುವವನು; ವಂಚಕ
- ಶ್ವೇತಕಪೋತ – ಬಿಳಿ ಪಾರಿವಾಳ
- ಶ್ವೇತಪಟ – ಬಿಳಿಯ ಬಟ್ಟೆ; (ಜೈನ) ಜೈನಮುನಿಗಳ ಒಂದು ಬಣ
- ಶ್ವೇತಾತಪತ್ರ – ಬೆಳ್ಗೊಡೆ
Conclusion:
ಕನ್ನಡ ಶ ಅಕ್ಷರದ ಹಳೆಗನ್ನಡ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.