ಕನ್ನಡ ಯ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada ya aksharada halegannadada padagalu , ಕನ್ನಡ ಯ ಅಕ್ಷರದ ಹಳೆಗನ್ನಡ ಪದಗಳು (YA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಯ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( YA halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ
ಕನ್ನಡ ಯ ಅಕ್ಷರ ಎಂದರೇನು?
ಯ, ಕನ್ನಡ ವರ್ಣಮಾಲೆಯ ಮೊದಲನೇ ಅವರ್ಗೀಯ ವ್ಯಂಜನವಾಗಿದೆ.
ಇದರ ಅತ್ಯಂತ ಪ್ರಾಚೀನ ರೂಪವನ್ನು ಅಶೋಕನ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಅರ್ಧವೃತ್ತದ ನಡುವೆ ಒಂದು ಉದ್ದವಾದ ರೇಖೆಯನ್ನುಳ್ಳ ಅಶೋಕನ ಕಾಲದ ಈ ಅಕ್ಷರ ಶಾತವಾಹನರ ಕಾಲದಲ್ಲಿ ಮೂಲಸ್ವರೂಪವನ್ನು ಉಳಿಸಿಕೊಂಡರೂ ಅರ್ಧವೃತ್ತ ಅಗಲಗೊಂಡು ಖಂಡವೃತ್ತವಾಗುವ ಅಲ್ಪ ಬದಲಾವಣೆಯನ್ನು ಹೊಂದುತ್ತದೆ.
ಕ್ರಿ.ಶ. ಐದನೆಯ ಶತಮಾನದ ಕದಂಬರ ಕಾಲದಲ್ಲಿ ಚೌಕತಲೆ ಕಾಣಿಸಿಕೊಳ್ಳುವುದಲ್ಲದೆ ಖಂಡವೃತ್ತದ ಎರಡು ಭಾಗಗಳೂ ಒಳಕ್ಕೆ ಬಾಗಿ ಮೇಲಿನವರೆಗೂ ಹೋಗುತ್ತದೆ. ಕ್ರಿ.ಶ ಆರನೆಯ ಶತಮಾನದ ಗಂಗರ ಕಾಲದಲ್ಲಿ ಖಂಡವೃತ್ತದ ಎಡಭಾಗ ಕೊಂಡಿಯಂತೆ ಸೇರಿಕೊಳ್ಳುತ್ತದೆ. ಕ್ರಿ.ಶ ಒಂಬತ್ತನೆಯ ಶತಮಾನದ ರಾಷ್ಟ್ರಕೂಟರ ಕಾಲದಲ್ಲಿ ಈ ಅಕ್ಷರ ತುಂಬ ಅಗಲಗೊಂಡು ಕೊಂಡಿಯು ಒಂದು ಸಣ್ಣ ವೃತ್ತದಂತಾಗುತ್ತದೆ.
ಕ್ರಿ.ಶ. ಹನ್ನೊಂದನೆಯ ಶತಮಾನದ ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಇದು ಸಂಪೂರ್ಣ ಪರಿವರ್ತನೆ ಹೊಂದಿ ಈಗಿನ ರೂಪವನ್ನು ತಾಳುತ್ತದೆ. ಇದೇ ರೂಪವೇ ಸ್ಥಿರಗೊಂಡು ಮುಂದೆಯೂ ಬಳಕೆಯಾಗುತ್ತದೆ. ಈ ಅಕ್ಷರ ತಾಲವ್ಯ ಜಿಹ್ವಾಮೂಲೀಯ ಅರ್ಧಸ್ವರ ಧ್ವನಿಯನ್ನು ಸೂಚಿಸುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಯ ಅಕ್ಷರದ ಹಳೆಗನ್ನಡ ಪದಗಳು – Kannada Words
- ಯಕ್ಷ – ಸುಗಂಧ; (ಜೈನ) ವ್ಯಂತರ ದೇವತೆಗಳ ಒಂದು ವರ್ಗ; ಪ್ರತಿಯೊಬ್ಬ ತೀರ್ಥಂಕರನ ಬಳಿ ಇರುವ ಶಾಸನ ದೇವತೆ
- ಯಕ್ಷಕರ್ದಮ – ಪರಿಮಳ, ಲೇಪನ ದ್ರವ್ಯ
- ಯಕ್ಷಾಂದೋಳ – ಒಂದು ಬಗೆಯ ನೃತ್ಯ
- ಯಕ್ಷಿ – (ಜೈನ) ಪ್ರತಿಯೊಬ್ಬ ತೀರ್ಥಂಕರನ ಬಳಿ ಇರುವ ಶಾಸನ ದೇವತೆ
- ಯಕ್ಷೆಂದ್ರ – ಯಕ್ಷರ ಒಡೆಯ, ಕುಬೇರ
- ಯಕ್ಷೇಶ್ವರ – ಯಕ್ಷೆಂದ್ರ
- ಯಜನ – ಯಾಗ ಮಾಡುವಿಕೆ
- ಯಜಮಾನ – ಯಾಗಕರ್ತ
- ಯಜ್ಞ – ಯಾಗ
- ಯಜ್ಞದ್ರವ್ಯ – ಯಜ್ಞ ಮಾಡಲು ಬೇಕಾದ ಸಾಮಗ್ರಿ
- ಯಜ್ಞವಿದ್ಯೆ – ಯಜ್ಞದ ಬಗೆಗಿನ ತಿಳಿವಳಿಕೆ
- ಯಜ್ಞವೇದಿ – ಯಜ್ಞಕ್ಕಾಗಿ ಸಿದ್ಧಪಡಿಸಿದ ವೇದಿಕೆ
- ಯಜ್ಞವೇದೀಸಂಭವೆ – ಯಜ್ಞದ ವೇದಿಕೆಯಲ್ಲಿ ಹುಟ್ಟಿದವಳು, ದ್ರೌಪದಿ
- ಯಜ್ಞೋಪವೀತ – ದ್ವಿಜರು ಧರಿಸುವ ಜನಿವಾರ
- ಯತಯಾತಪ್ರೌಢಿ – ಅಂಕುಶದಿಂದ ಆನೆಯನ್ನು ನಿಯಂತ್ರಿಸುವ ಕೌಶಲ
- ಯತಿಗಣ – ಮುನಿಸಂದೋಹ
- ಯತಿರಾಜ – ಮುನಿಶ್ರೇಷ್ಠ
- ಯಥಾಕಾಲ – ಸೂಕ್ತವಾದ ಸಮಯ
- ಯಥಾಕ್ರಮ – ಸಮರ್ಪಕವಾದ ರೀತಿ; ಸೂಕ್ತವಾಗಿ
- ಯಥಾಖ್ಯಾತಚರಿತ – (ಜೈನ) ವಿವಿಧ ಅನುಷ್ಠಾನಗಳಿಂದ ಕಷಾಯರಹಿತನಾದವನು
- ಯಥಾಖ್ಯಾತಚಾರಿತ್ರ – (ಜೈನ) ಮೋಹನೀಯ ಕರ್ಮಗಳನ್ನೆಲ್ಲ ಕಳೆದುಕೊಂಡ ಆತ್ಮನ ಸ್ಥಿತಿ, ಸಪ್ತಸಂಯಮಗಳಲ್ಲಿ ಒಂದು
- ಯಥಾಗಮ – ಆಗಮಕ್ಕನುಗುಣವಾಗಿ
- ಯಥಾಯಥಂ – ಯದ್ವಾತದ್ವ
- ಯಥಾರೂಪ – ತಕ್ಕುನಾದ
- ಯಥಾರ್ಥಂ – ಯೋಗ್ಯ ಬಗೆಯಲ್ಲಿ
- ಯಥಾರ್ಥಜ್ಞ – ಸತ್ಯವನ್ನು ತಿಳಿದವನು
- ಯಥಾರ್ಹ – ಯೋಗ್ಯತಾನುಸಾರವಾದ
- ಯಥಾವಿಧಿ – ವಿಧಿಗನುಗುಣವಾಗಿ
- ಯಥಾಶಕ್ತಿ – ಎಷ್ಟು ಶಕ್ತಿಯಿದೆಯೋ ಅಷ್ಟು
- ಯಥಾಸ್ಥಾನ – ಸೂಕ್ತ ಸ್ಥಳ
- ಯಥೋಕ್ತ – ಮುಂಚೆ ಹೇಳಿದ ಹಾಗೆ
- ಯಥೋಚಿತ – ತಕ್ಕ ರೀತಿಯ
- ಯಥೋದ್ದಿಷ್ಟ – ಸೂಚನೆಗನುಗುಣವಾದ
- ಯಥೋಪದಿಷ್ಟ – ಯಥೋದ್ದಿಷ್ಟ
- ಯದು – ಯದುವಂಶದವನು
- ಯದುಕುಲ – ಯದುವಂಶ; ಯದುವಂಶದವನು
- ಯದ್ಭವಿಷ್ಯ – ಭವಿಷ್ಯದಲ್ಲಿ ಏನಿದೆಯೋ ಹಾಗಾಗಲಿ
- ಎಂಬ ನಂಬಿಕೆಯವನು
- ಯಮ – ಹತೋಟಿ; ಮೃತ್ಯುದೇವತೆ
- ಯಮಜ – ಯಮನ ಮಗ, ಯುಧಿಷ್ಠಿರ
- ಯಮದಂಡ – ಯಮನ ಆಯುಧ, ಗದೆ
- ಯಮನಂದನ – ಯಮಜ
- ಯಮನಿಕೇತನ – ಯಮನ ಮನೆ, ಯಮಲೋಕ
- ಯಮಪಾಶ – ಯಮನ ಹಗ್ಗ
- ಯಮಪುತ್ರ – ಯಮಜ
- ಯಮಪುರ – ಸಂಯಮನೀ ಎಂಬ ಯಮನ ಊರು
- ಯಮಲ(ಳ) – ಅವಳಿ ಜವಳಿ, ನಕುಲ-ಸಹದೇವಯಮಳಮರ್ದಳ – ಜೋಡಿ ಮದ್ದಳೆ
- ಯಮಸಮಾಧಿ – ಇಂದ್ರಿಯನಿಗ್ರಹದಿಂದ ಸಾಧಿಸಿದ ಸಮಾಧಿಯೋಗ
- ಯಮಸುತ – ಯಮಜ
- ಯಮಿ – ಸಂಯಮಿ
- ಯವ(ವೆ) – ಒಂದು ಜಾತಿಯ ಗೋಧಿ
- ಯಮನಿ – ಯವನ ದೇಶದ ಹೆಂಗಸು
- ಯಮಿ – ತಪಸ್ವಿ
- ಯವನಿಕೆ – ತೆರೆ, ಪರದೆ
- ಯವ್ವನ – ಯೌವನ, ಹರಯ
- ಯಶ(ಸು) – ಕೀರ್ತಿ
- ಯಶಃಪಟಹ – ಜಯಭೇರಿ
- ಯಶಃಪಿಂಡ – ಜಯಗಳ ಸಾಲು
- ಯಶಸ್ಕೀರ್ತಿ – (ಜೈನ) ನಾಮಪ್ರಕೃತಿಗಳಲ್ಲಿ ಒಂದು; ಜೀವನಿಗೆ ಕೀತೀ ಬರುವಂತೆ ಮಾಡುವಂಥದು
- ಯಶಃಸ್ತಂಭ – ಗೆಲುವಿನ ಸ್ಮಾರಕವಾದ ಕಂಬ
- ಯಶೋದುಂದುಭಿ – ಗೆಲವನ್ನು ಸಾರುವದುಂದುಭಿಧ್ವನಿ
- ಯಶೋದೆ – ಜಯವನ್ನು ನೀಡುವವಳು; ಶ್ರೀಕೃಷ್ಣನ ಸಾಕುತಾಯಿ
- ಯಶೋಧನ – ಕೀರ್ತಿಯನ್ನೇ ಧನವಾಗುಳ್ಳವನು
- ಯಶೋಧಿಕ – ಹೆಚ್ಚಿನ ಕೀರ್ತಿಶಾಲಿ
- ಯಶೋನಿಧಿ – ಯಶಸ್ಸಿನ ಆಗರ
- ಯಶೋನಿಳಯ – ಯಶೋನಿಧಿ
- ಯಶೋರ್ಥಿ – ಯಶಸ್ಸನ್ನು ಬಯಸುವವನು
- ಯಷ್ಟಿ – ಕೋಲು; ಕಂಬ; ಗದೆ; ಹಾರ
- ಯಾಚಕ – ಬೇಡುವವನು
- ಯಾಜನ – ಯಜ್ಞ ಮಾಡಿಸುವುದು; ಬ್ರಾಹ್ಮಣನ ಷಟ್ಕರ್ಮಗಳಲ್ಲಿ ಒಂದು
- ಯಾಜ್ಞಸೇನಿ – ಯಾಜ್ಞಸೇನ(ದ್ರುಪದ)ನ ಮಗಳು, ದ್ರೌಪದಿ
- ಯಾತವ್ಯ – ಶತ್ರು
- ಯಾತುಧಾನ – ರಾಕ್ಷಸ
- ಯಾತ್ರೆ – ಪಯಣ; ಮೆರವಣಿಗೆ
- ಯಾಥಾತ್ಮ್ಯ – ಸ್ವಭಾವ
- ಯಾದಃಪತಿ – ವರುಣ; ಪಶ್ಚಿಮ ದಿಕ್ಕಿನ ಅಧಿಪತಿ
- ಯಾದವಕುಲ – ಯದುವಂಶ
- ಯಾದವೋದ – ಮೊಸಳೆ
- ಯಾದಶ್ಚರ – ಜಲಚರ
- ಯಾನ – ಚಲನೆ; ಪ್ರಯಾಣ; ರಾಜನ ಷಡ್ಗುಣಗಳಲ್ಲಿ
- ಒಂದು, ಯುದ್ಧಕ್ಕೆ ಹೊರಡುವುದು
- ಯಾನನಾಗ – ಸವಾರಿಯ ಆನೆ
- ಯಾನಪಾತ್ರ – ಹಡಗು
- ಯಾನಹಸ್ತಿ – ಯಾನನಾಗ
- ಯಾಪ್ಯಯಾನ – ಮೇನೆ, ಪಲ್ಲಕ್ಕಿ
- ಯಾಮತೂರ್ಯ – ಜಾವಕ್ಕೊಮ್ಮೆ ಮಾಡುವ ವಾದ್ಯಧ್ವನಿ
- ಯಾಮತ್ರಯ – ಮೂರು ಜಾವಗಳು
- ಯಾಮಿಕ – ಜಾವದ ಪಹರೆಯವನು
- ಯಾಮಿಕವೃತ್ತಿ – ಪಹರೆಯ ಕೆಲಸ
- ಯಾಮಿನಿ – ರಾತ್ರಿ
- ಯಾಮಿನೀವಿರಾಮ – ರಾತ್ರಿಯ ಕೊನೆ, ಬೆಳಗು
- ಯಾಮ್ಯದಿಶೆ – ಯಮನ ದಿಕ್ಕು, ದಕ್ಷಿಣ
- ಯಾವಕದ್ರವ – ಅರಗಿನ ರಸ; ಅಲತಿಗೆ
- ಯಾವಕರಸ – ಯಾವಕದ್ರವ
- ಯಾವಕರಾಗ – ಅರಗಿನ ಕೆಂಬಣ್ಣ
- ಯಾವಜ್ಜೀವ – ಯಾವತ್+ಜೀವ, ಜೀವವಿರುವವರೆಗೆ
- ಯಾವನಾಳ – ಜೋಳ
- ಯುಕ್ತ – ಜೋಡಿಸಿದ; ಸೂಕ್ತವಾದ
- ಯುಕ್ತಾರ್ಥ – ಸಮಂಜಸವಾದ
- ಯುಗ – ಜೋಡಿ; ಒಂದು ಮಾರು; ಐದು
- ವರ್ಷಗಳ ಅವಧಿ; ಚತುರ್ಯುಗಗಳಲ್ಲಿ ಒಂದು
- ಯುಗನಾಯಕ – ಒಂದು ಕಾಲಮಾನದ ಮುಂದಾಳು
- ಯುಗಪತ್ – ಏಕಕಾಲದಲ್ಲಿ
- ಯುಗಪರಿವರ್ತನ – ಒಂದು ಯುಗ ಹೋಗಿ
- ಮತ್ತೊಂದು ಬರುವುದು
- ಯುಗಲಕ – ಅವಳಿ ಜವಳಿ
- ಯುಗಳ – ಯುಗಲಕ
- ಯುಗಾಂತ – ಯುಗದ ಕೊನೆ; ಪ್ರಳಯ
- ಯುಗಾವಸಾನ – ಯುಗಾಂತ
- ಯುಗ್ಮ – ಜೋಡಿ; ದಂಪತಿ
- ಯುತ – ಕೂಡಿದ; ಸೇರಿಸಿದ
- ಯುದ್ಧಸನ್ನದ್ಧ – ಯುದ್ಧಮಾಡಲು ಸಿದ್ಧನಾದವನು
- ಯುವ – ಕಿರುವರೆಯದ; ತರುಣ; ಅರವತ್ತು ವರ್ಷದ ಆನೆ
- ಯುವತಿ – ತರುಣಿ
- ಯುವರಾಜ – ರಾಜನ ಬಳಿಕ ಪಟ್ಟಕ್ಕೆ ಬರುವವನು
- ಯುವರಾಜಕ್ರಿಯೆ – (ಜೈನ) ಒಂದು `ಗರ್ಭಾನ್ವಯಕ್ರಿಯೆ’; ಯೌವರಾಜ್ಯಾಭಿಷೇಕ
- ಯುವಾಧಿಪ – ಯುವರಾಜ
- ಯುಷತ್ – ನಿಮ್ಮ
- ಯೂಕ – ಕೂರೆ ಎಂಬ ಕ್ರಿಮಿ
- ಯೂಥ(ಧ) – ಗುಂಪು; ಹಿಂಡು
- ಯೂಥ(ಧ)ಪತಿ – ಗುಂಪಿನ ನಾಯಕ; ಸಲಗ
- ಯೂಥಿಕೆ – ಕಾಡಮಲ್ಲಿಗೆ
- ಯೂಪ – ಬಲಿಗಂಬ, ಯಜ್ಞಪಶುವನ್ನು ಕಟ್ಟುವ ಕಂಬ
- ಯೂಪಸ್ತಂಭ – ಯೂಪ
- ಯೋಗಂಗೊಳ್ – ಧ್ಯಾನದಲ್ಲಿ ತೊಡಗು
- ಯೋಗಕ್ಷೇಮ – ಸಂಪಾದನೆ ಮತ್ತು ಅದರ ರಕ್ಷಣೆ
- ಯೋಗ್ಯತಾಕ್ರಿಯೆ – (ಜೈನ) ಒಂದು ಗರ್ಭಾನ್ವಯ ಕ್ರಿಯೆ; ಸಮವಸರಣವನ್ನು ವಿಸರ್ಜಿಸಿ ವಿಹಾರಾದಿಗಳನ್ನು ಮಾಡುವುದು
- ಯೋಗತ್ರಯ – (ಜೈನ) ಮನ, ವಚನ, ಕಾಯಎಂಬ ಮೂರು ಪ್ರವೃತ್ತಿಗಳು
- ಯೋಗನಾಥ – ವಿಷ್ಣು; ಶಿವ
- ಯೋಗನಿಯೋಗ – ಯೋಗದಲ್ಲಿ ತೊಡಗುವುದು
- ಯೋಗನಿರೋಧ – (ಜೈನ) ಮನೋವಾಕ್ಕಾಯಗಳ ಚಂಚಲತೆಯನ್ನು ನಿಗ್ರಹಿಸುವುದು
- ಯೋಗನಿರ್ವಾಸಂಪ್ರಾಪ್ತಿ – (ಜೈನ) ಒಂದು ಗರ್ಭಾನ್ವಯ ಕ್ರಿಯೆ
- ಯೋಗನಿರ್ವಾಣಸಾಧನ – (ಜೈನ) ಒಂದು ಗರ್ಭಾನ್ವಯ ಕ್ರಿಯೆ
- ಯೋಗವರ್ತನ – (ಜೈನ) ತಪಸ್ಸಿನಲ್ಲಿ ಮನೋವಾಕ್ಕಾಯಗಳ ಸಂಬಂಧ
- ಯೋಗವಿಡಿಸು – (ಜೈನ) ಕರ್ಮಗಳ ಆಸ್ರವ ಸಂಬಂಧವನ್ನು ನಿಲ್ಲಿಸು
- ಯೋಗಶಾಸ್ತ್ರ – ಪಾತಂಜಲ ಯೋಗ
- ಯೋಗಸನ್ನಾಹ – (ಜೈನ) ಒಂದು ಗರ್ಭಾನ್ವಯ ಕ್ರಿಯೆ; ಕೇವಲಜ್ಞಾನ ಪಡೆದ ನಂತರ ಹೊಂದುವ ಪೂಜೆ
- ಯೋಗಾಕ್ಷಿ – ಯೌಗಿಕತೆಯಿಂದ ದೊರೆಯುವ ದೃಷ್ಟಿ, ಒಳನೋಟ
- ಯೋಗಾಚಾರ – ಯೋಗಾನುಷ್ಠಾನ; ಬೌದ್ಧಮತ
- ಯೋಗಿನಿ – ಪಿಶಾಚಿ; ಚೌಷಷ್ಠಿ ಉಗ್ರ ದೇವತೆಗಳು
- ಯೋಜಕ – ಹೊಂದಿಸುವಂತಹುದು
- ಯೋಜನ – ಎರಡು ಗಾವುದ ದೂರ
- ಯೋಜನಗಂಧಿತ್ವ – ಒಂದು ಯೋಜನ ದೂರ ದೇಹದ ಪರಮಳವನ್ನು ಸೂಸುವುದು
- ಯೋಜಿಸು – ಅನುಮತಿಸು; ನಿಯಮಿಸು; ಧಾರಣ
- ಮಾಡಿಸು; ಬಳಸು; ತೊಡಗಿಸು
- ಯೋಷಾ – ಹೆಂಗಸು
- ಯೋಷಿತ್ – ಯೋಷಾ
- ಯೋಷಿಜ್ಜನ – ಯೋಷಿತ್+ಜನ, ಸ್ತ್ರೀಸಮುದಾಯ
- ಯೌವತ(ವರ್ಗ) – ಯುವತಿಯರ (ಸಮೂಹ)
- ಯೌವನ – ತಾರುಣ್ಯ
- ಯೌವನೋದಯ – ತಾರುಣ್ಯದ ಆರಂಭ
- ಯೌವರಾಜ್ಯ(ಪದ) – ಯುವರಾಜ ಪದವಿ; (ಜೈನ) ಒಂದು ಗರ್ಭಾನ್ವಯ ಕರಿಯೆ
- ಯೌವರಾಜ್ಯಾಭಿಷೇಕ – ಯುವರಾಜನಾಗಿ ಮಾಡುವ ವಿಧಿ
Conclusion:
ಕನ್ನಡ ಯ ಅಕ್ಷರದ ಹಳೆಗನ್ನಡ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.