ಕನ್ನಡ ಭ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada bha aksharada halegannadada padagalu , ಕನ್ನಡ ಭ ಅಕ್ಷರದ ಹಳೆಗನ್ನಡ ಪದಗಳು (bha halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಭ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( bha halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಭ ಅಕ್ಷರ ಎಂದರೇನು?
ಭ, ಕನ್ನಡ ವರ್ಣಮಾಲೆಯ ಮ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಭ ಘೋಷ-ಓಷ್ಠ್ಯ-ಸ್ಟರ್ಶ ವ್ಯಂಜನ ಧ್ವನಿ.
ಸಂಸ್ಕೃತದ ತ ಎನ್ನುವ ಅಕ್ಷರವನ್ನು ಬಹುವಾಗಿ ಹೋಲುವ ರೂಪವೇ ಮೌರ್ಯರ ಕಾಲದಲ್ಲಿದ್ದು ಸುಮಾರಾಗಿ ಆರನೆಯ ಶತಮಾನದ ತನಕ ಮುಂದುವರಿಯುತ್ತದೆ. ಒಂಬತ್ತನೆಯ ಶತಮಾನದಲ್ಲಿ ಅಕ್ಷರದ ಕೆಳಭಾಗದಲ್ಲಿ ವಿಶೇಷ ಬದಲಾವಣಿಗಳುಂಟಾಗುತ್ತವೆ.
ಎರಡು ಭಾಗಗಳನ್ನೊಳಗೊಂಡ ಈ ಅಕ್ಷರ ಹದಿಮೂರನೆಯ ಶತಮಾನದ ತನಕ ಮುಂದುವರಿಯುತ್ತದೆ. ವಿಜಯನಗರ ಕಾಲದಲ್ಲಿ ಈ ಎರಡು ಭಾಗಗಳೂ ಒಂದುಗೂಡುತ್ತವೆ. ಮಹಾಪ್ರಾಣದ ಸಂಕೇತವಾದ ಹೊಕ್ಕಳು ಸೀಳಿಕೆ ಕಾಣಿಸುತ್ತದೆ. 6ನೆಯ ಶತಮಾನದಲ್ಲಿ ಕಾಣಿಸಿಕೊಂಡ ತಲೆಕಟ್ಟು ಸ್ಥಿರವಾಗುತ್ತದೆ. ಇದೇ ರೂಪ ಮುಂದುವರಿಯುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಭ ಅಕ್ಷರದ ಹಳೆಗನ್ನಡ ಪದಗಳು – Kannada Words
- ಭಂಭಾ – ಒಂದು ಚರ್ಮವಾದ್ಯ; ನಗಾರಿ
- ಭಂಭಾರವ – ನಗಾರಿಯ ಸದ್ದು
- ಭಕ್ತಿ – ಪೂಜ್ಯಭಾವನೆ
- ಭಕ್ತಿಪೂರ್ವಕ – ಭಕ್ತಿಯಿಂದ ಕೂಡಿದ
- ಭಕ್ಷ್ಯ – ತಿಂಡಿ
- ಭಗ – ಕೀರ್ತಿ, ಯಶಸ್ಸು; ಸೂರ್ಯ; ಸ್ತ್ರೀಯೋನಿ
- ಭಗಂದರ – ಒಂದು ಗುಹ್ಯರೋಗ
- ಭಗಣ – ನಕ್ಷತ್ರಸಮೂಹ
- ಭಗಣೇಶ – ನಕ್ಷತ್ರಸಮೂಹದ ಒಡೆಯ, ಚಂದ್ರ
- ಭಗವ – ವೈಷ್ಣವ ಸನ್ಯಾಸಿ
- ಭಗವತಿ – ದೇವತೆ
- ಭಗೀರಥ – ಒಬ್ಬ ಚಕ್ರವರ್ತಿ
- ಭಗ್ನ – ಮುರಿದುಹೋದ
- ಭಗ್ನಮನೋರಥ – ಕೈಗೂಡದ ಆಸೆಯುಳ್ಳವನು
- ಭಗ್ನೋತ್ಸಾಹ – ಉತ್ಸಾಹ ಕಳೆದುಕೊಂಡವನು
- ಭಟ – ಸೈನಿಕ
- ಭಟಕಟಾಹ – ಸೈನಿಕಸಮೂಹ
- ಭಟಸಂಘ – ಭಟಕಟಾಹ
- ಭಟಾ(ಳಾ)ರ – (ಭಟ್ಟಾರ) ಗುರು
- ಭಟ್ಟ – ಪ<ಡಿತ
- ಭಟ್ಟಮಂಡಪ – ವಿದ್ವತ್ಸಭೆ ಸೇರುವ ಜಾಗ, ಸಭಾಮಂದಿರ
- ಭಟ್ಟಾರಕ – ಗೌರವಸೂಚಕ ವಿಶೇಷಣ
- ಭಟ್ಟಿಗೆಯ್ – ಭಟ್ಟಿಯಿಳಿಸು, ಬೇಯಿಸಿ ಕರಗಿಸಿ ಸೋಸು
- ಭಣತಿ – ಮಾತು
- ಭಣಿತೆ – ಭಣತಿ
- ಭದ್ರ – ಉಪ್ಪರಿಗೆ; ಮಂಗಳಕರ; ಶುಭಲಕ್ಷಣದ ಆನೆ
- ಭದ್ರಗಜ – ಶುಭಲಕ್ಷಣಗಳ ಆನೆ
- ಭದ್ರಬಾಹು – (ಜೈನ) ಐದನೆಯ ಶ್ರುತಕೇವಲಿ; ಉತ್ತರಭಾರತದಿಂದ ಶ್ರವಣಬೆಳುಗೊಳಕ್ಕೆ ಚಂದ್ರಗುಪ್ತನ ಜೊತೆ ಬಂದನೆನ್ನಲಾದ ಮುನಿ
- ಭದ್ರಲಕ್ಷಣ – ಶುಭಲಕ್ಷಣ; ಭದ್ರ ಎಂಬ ಜಾತಿಯ ಆನೆಯ ಲಕ್ಷಣಗಳು
- ಭದ್ರಶಾಲ – (ಜೈನ) ಮೇರುಪರ್ವತದ ಮೇಲಿರುವ ನಾಲ್ಕು ವನಗಳಲ್ಲಿ ಒಂದು; ಉಳಿದ ಮೂರು: ನಂದನ, ಸೌಮನಸ, ಪಾಂಡುಕ
- ಭದ್ರಹಸ್ತಿ – ಭದ್ರಗಜ
- ಭದ್ರಾಕಾರ – ಶುಭಕರವಾದ ಆಕಾರ(ವುಳ್ಳವನು)
- ಭದ್ರಾಸನ – ಸಿಂಹಾಸನ
- ಭದ್ರಿಸು – ಕ್ಷೌರ ಮಾಡು
- ಭಯ – ಅಂಜಿಕೆ
- ಭಯಂಗೊಳ್ – ಹೆದರು
- ಭಯಂಗೊಳಿಸು – ಅಂಜಿಸು
- ಭಯಂಬಡು – ಭಯಂಗೊಳ್
- ಭಯಂಬೆರಸು – ಭಯದಿಂದ ಕೂಡಿ(ರು)
- ಭಯರಸ(ಕ) – ಹೆದರಿಕೆ
- ಭಯವಿಹ್ವಲ(ಳ) – ಭಯದಿಂದ ತತ್ತರಿಸು
- ಭಯಸ್ಥೆ – ಭೀತಳಾದವಳು
- ಭಯಾಕುಳ – ಭಯದಿಂದ ಕೂಡಿದ
- ಭಯಾನಕ – ನವರಸಗಳಲ್ಲಿ ಒಂದು
- ಭರಂಗೆಯ್ – ಕಾರ್ಯಭಾರವನ್ನು ಹೊರು; ತವಕಪಡು: ಆರ್ಭಟಿಸು
- ಭರಂಗೊಳ್ – ಚುರುಕಾಗು
- ಭರಣ – ಹೊರುವುದು; ರಕ್ಷಣೆ
- ಭರಣಂಗೆಯ್ – ರಕ್ಷಿಸು
- ಭರತ – ನಾಟ್ಯಶಾಸ್ತ್ರ; ಒಬ್ಬ ಚಕ್ರವರ್ತಿ; ಶ್ರೀರಾಮನ ತಮ್ಮ; (ಜೈನ) ಆದಿತೀರ್ಥಂಕರನ ಹಿರಿಯ ಮಗ, ತ್ರಿಷಷ್ಠಿಶಲಾಕಾಪುರುಷರಲ್ಲಿ ಒಬ್ಬ
- ಭರತಕುಲ – ಪಾಂಡವ-ಕೌರವರ ರಾಜವಂಶ-
- ಭರತಕ್ಷೇತ್ರ – ಭರತವರ್ಷ
- ಭರತಜ – ಭರತವಂಶದಲ್ಲಿ ಜನಿಸಿದವನು
- ಭರತಪತಿ – (ಜೈನ) ಆದಿತೀರ್ಥಂಕರನ ಹಿರಿಯ ಮಗ, ತ್ರಿಷಷ್ಠಿಶಲಾಕಾಪುರುಷರಲ್ಲಿ ಒಬ್ಬ
- ಭರತಮಂಡಲ – ಭರತಕ್ಷೇತ್ರ
- ಭರತಾಗಮ – ನಾಟ್ಯವಿದ್ಯೆ
- ಭರತಾನ್ವ(ನ್ವಾ)ಯ – ಭರತವಂಶ
- ಭರತೋರ್ವಿ – ಭರತಕ್ಷೇತ್ರ
- ಭರದ್ವಾಜ – ಒಬ್ಬ ಋಷಿ
- ಭರಭಾರ – ಪಾಲಿಸುವ ಜವಾಬ್ದಾರಿ
- ಭರವಶ – ಅತಿಯಾದ ವೇಗ
- ಭರಿಕೆಯ್ – ಸೊಂಡಿಲು
- ಭರಿತ – ತುಂಬಿರುವ
- ಭರ್ತಾರ – ಗಂಡ
- ಭರ್ತಾರಿ – ಹೆಂಡತಿ
- ಭರ್ತೃ – ಗಂಡ
- ಭರ್ಮ – ಚಿನ್ನ
- ಭರ್ಮಹಮ್ರ್ಯ – ಚಿನ್ನದ ಮಂದಿರ
- ಭರ್ಮಾಚಲ – ಚಿನ್ನದ ಬೆಟ್ಟ, ಮೇರು
- ಭಲ್ಲ – ಅರ್ಧಚಂದ್ರಾಕಾರದ ಬಾಣ; ಕರಡಿ
- ಭಲ್ಲಾಸನ – ಬಿಲ್ಲು
- ಭಲ್ಲೂಕ – ಕರಡಿ
- ಭವ – ಜೀವಿತಾವಧಿ; ಶಿವ; (ಜೈನ) ತೀರ್ಥಂಕರ
- ಭವಚತುಷ್ಟಯ – (ಜೈನ) ದೇವ, ಮನುಷ್ಯ, ತಿರ್ಯಕ್, ನರಕ ಎಂಬ ನಾಲ್ಕು ಬಗೆಯ ಹುಟ್ಟುಗಳು
- ಭವತ್ – ನಿನ್ನ
- ಭವದೀಯ – ನಿನಗೆ ಸಂಬಂಧಿಸಿದ
- ಭವನ – ದೊಡ್ಡ ಮನೆ
- ಭವನಮಹತ್ತರದೇವ – (ಜೈನ) ದೇವತೆಗಳ ಒಂದು ಪಂಗಡ
- ಭವನವಾಸಿಗ – (ಜೈನ) ಭವನಮಹತ್ತರದೇವ
- ಭವನಾಂಗ – (ಜೈನ) ಹತ್ತು ಬಗೆಯ ಕಲ್ಪವೃಕ್ಷಗಳಲ್ಲಿ ಒಂದು
- ಭವನಾಂಗಭೂಜ – ಭವನಾಂಗ
- ಭವನಾಮರ – ಭವನವಾಸಿಗ
- ಭವಪರಿಣತಿ – ಬೇರೆ ಬೇರೆ ರೂಪಗಳಲ್ಲು ಹುಟ್ಟುವುದು
- ಭವಪರಿಣಾಮ – ಭವಪರಿಣತಿ
- ಭವಪರಿವರ್ತನ – ಭವಪರಿಣತಿ
- ಭವಪಾಶ – ಸಂಸಾರಬಂಧನ
- ಭವಪ್ರತ್ಯಯಜ್ಞಾನ – (ಜೈನ) ಅವಧಿಜ್ಞಾನ; ಕಾಲದೇಶಗಳ ಎಲ್ಲೆಯನ್ನು ಮೀರಿ ಸಂಗತಿಗಳನ್ನು ಅರಿಯಬಲ್ಲ ಜ್ಞಾನ
- ಭವಬದ್ಧವೈರ – ಜನ್ಮಾಂತರದ ದ್ವೇಷ
- ಭವಬಾಧೆ – ಸಂಸಾರದ ಕಷ್ಟ
- ಭವಭೋಗ – ಬದುಕಿನ ಸಂತೋಷ
- ಭವಭ್ರಮಣ – ಜನ್ಮಗಳ ಚಕ್ರದಲ್ಲಿ ಸುತ್ತುವುದು
- ಭವಮಥನ – ಜನ್ಮಗಳ ಕರ್ಮವನ್ನು ನಾಶಪಡಿಸುವುದು
- ಭವರಿಪು – ಬದುಕಿನ ಕ್ಲೇಶಗಳನ್ನು ನಿವಾರಿಸುವವನು; 9ಜೈನ) ಅರ್ಹಂತ
- ಭವವಧು – ಪಾರ್ವತಿ
- ಭವಸ್ಮರಣೆ – ಹಿಂದಿನ ಜನ್ಮದ ನೆನಪು; ಜಾತಿಸ್ಮರಣೆ
- ಭವಸ್ಮøತಿ – ಭವಸ್ಮರಣೆ
- ಭವಾಂತರ – ಬೇರೆಯ ಹುಟ್ಟು
- ಭವಾದ್ರಿ – ಶಿವನ ಬೆಟ್ಟ, ಕೈಲಾಸ
- ಭವಾನೀಧವ – ಶಿವ
- ಭವಾಮಯ – (ಭವ+ಆಮಯ) ಭವರೋಗ
- ಭವಾ(ವ)ಳಿ – ಹುಟ್ಟುಸಾವುಗಳ ಪರಂಪರೆ
- ಭವಿತವ್ಯ – ಮುಂದೆ ನಡೆಯುವುದು
- ಭವಿಷ್ಯತ್ತು – ಮುಂದೆ ಸಂಭವಿಸುವ
- ಭವ್ಯ – ಕ್ಷೇಮ; (ಜೈನ) ಮೋಕ್ಷಕ್ಕೆ ಅರ್ಹನಾದ ಜೀವ
- ಭವ್ಯಚಿಂತಾಮಣಿ – ಭವ್ಯರ ಆಸೆಗಳನ್ನು ನೆರವೇರಿಸುವವನು
- ಭವ್ಯಜನ – ಭವ್ಯರ ಸಮೂಹ
- ಭವ್ಯಜೀವ – ಮೋಕ್ಷಾರ್ಹ ಜೀವ
- ಭವ್ಯತೆ(ತ್ವ) – ಶ್ರೇಷ್ಠತೆ; (ಜೈನ) ಮೋಕ್ಷ ಪಡೆಯುವ ಅರ್ಹತೆ
- ಭವ್ಯಪ್ರಬೋಧಬೋಧಿ – (ಜೈನ) ಬೋಧಿದುರ್ಲಭ ಎಂಬ ದ್ವಾದಶಾನುಪ್ರೇಕ್ಷೆಗಳಲ್ಲಿ ಒಂದು.
- ಭಾದ್ರಪದ – ಚಾಂದ್ರಮಾನದ ಆರನೆಯ ತಿಂಗಳು
- ಭಾನಾಬಿ – ತೇಜೋಕೇಂದ್ರ
- ಭಾನುತನೂಜ – ಸೂರ್ಯನ ಮಗ, ಕರ್ಣ
- ಭಾನುಬಿಂಬ – ಸೂರ್ಯಮಂಡಲ
- ಭಾನುಮತಿ – ದುರ್ಯೋಧನನ ಹೆಂಡತಿ; ತೇಜೋವಂತೆ
- ಭಾನುರೋಚಿ – ಸೂರ್ಯನ ತೇಜಸ್ಸು
- ಭಾಮಂಡಲ – (ಜೈನ) ಪ್ರಭಾವಲಯ;
- ಭಾಮಿನೀವೇದ – (ಜೈನ) ಸ್ತ್ರೀವೇದ, ಮೂರು ಬಗೆಯ ವೇದಗಳಲ್ಲಿ ಒಂದು
- ಭಾರತ – ಭರತವಂಶಕ್ಕೆ ಸಂಬಂಧಪಟ್ಟ; ಮಹಾಭಾರತ ಕಾವ್ಯ; ಭಾರತ ಯುದ್ಧ; ಭಾರತಯುದ್ಧ ನಡೆದ ಪ್ರದೇಶ
- ಭಾರತಿ – ಸರಸ್ವತಿ
- ಭಾರತಿಭಾಳನೇತ್ರ – ವಿದ್ಯೆಯಲ್ಲಿ ಹಣೆಗಣ್ಣನಂತಹವನು
- ಭಾರತಿಕ – ಭರತಮುನಿಗೆ ಸಂಬಂಧಿಸಿದ; ನರ್ತಕ
- ಭಾರತಿಕವಿದ್ಯೆ – ನಟನಕಲೆ; ನಾಟ್ಯ
- ಭಾರದ್ವಾಜ – ಭರದ್ವಾಜನ ಮಗ, ದ್ರೋಣ
- ಭಾರಾವತಾರ – ಭಾರವನ್ನಿಳಿಸುವುದು
- ಭಾರ್ಗವ – ಭೃಗುವಂಶಜ, ಪರಶುರಾಮ;
- ಬಿಲ್ಲುಗಾರ; ಬಾಣ
- ಭಾಲ(ಳ) – ಹಣೆ
- ಭಾವ – ಅಕ್ಕ ಅಥವಾ ತಂಗಿಯ ಗಂಡ; ಸೋದರಮಾವನ ಮಗ; ಅಭಿಪ್ರಾಯ; ಚಿತ್ತವೃತ್ತಿ; (ಜೈನ) ಔಪಶಾಮಿಕ, ಪಾರಿಣಾಮಿಕ ಎಂಬ ಐದು ಪ್ರಭೇದಗಳ ಜೀವನ ಪರಿಣಾಮ
- ಭಾವಕ – ರಸಿಕ
- ಭಾವಕಿ – ಚೆಲುವೆ
- ಭಾವಚೇಷ್ಟೆ – ಭಾವನೆಗಳಿಗನುಗುಣವಾದ ಶಾರೀರಕ ಚೇಷ್ಟೆ
- ಭಾವಜ – ಮನ್ಮಥ
- ಭಾವನ -(ಜೈನ) ನಾಲ್ಕು ಬಗೆಯ ದೇವತೆಗಳಲ್ಲಿ ಒಂದು ಬಗೆ; ಭವನವಾಸಿ
- ಭಾವನಿದ್ರ್ವಂದ್ವ – ಭಾವನೆಯಲ್ಲಿ ದ್ವಂದ್ವವಿಲ್ಲದ(ವನು); ಸಮಪ್ರಜ್ಞೆಯವನು
- ಭಾವನೆ – ಅನುಸಂಧಾನ, ಧ್ಯಾನ
- ಭಾವಪರಿವರ್ತನ – (ಜೈನ) ಜೀವಗಳ ಭವ ಬದಲಾಗುವುದು
- ಭಾವಭವ – ಮನಸ್ಸಿನಲ್ಲಿ ಹುಟ್ಟದವನು, ಮನ್ಮಥ
- ಭಾವವಿದ – ಇತರರ ಭಾವಗಳನ್ನು ತಿಳಿಯಬಲ್ಲವನು
- ಭಾವಶುದ್ಧಿ – (ಜೈನ) ವೀತರಾದನಾದವನಿಗೆ ಮನಸ್ಸು ಶುದ್ಧವಾಗುವುದು; ಇದು ಅಷ್ಟಶುದ್ಧಗಳಲ್ಲಿ ಒಂದು
- ಭಾವಶುದ್ಧಿಗೆಡು – ಮನಸ್ಸಿನ ನೈರ್ಮಲ್ಯವನ್ನು ಕಳೆದುಕೊ
- ಭಾವಳಯ – ಪ್ರಭಾವಲಯ
- ಭಾವಾತ್ಮ – ತತ್ವಜ್ಞ
- ಭಾವಿ – ಭವಿಷ್ಯದ; ಕರ್ಮವಶದಿಂದ ಆಗಲೇಬೇಕಾದ
- ಭಾವಿಕೇವಲಿ – (ಜೈನ) ಮುಂದೆ ಕೇವಲಿಯಾಗುವವನು
- ಭಾವಿತಾತ್ಮ – ಪರಿಪಕ್ವ ಮನಸ್ಸಿನವನು; ಆತ್ಮಜ್ಞಾನಿ
- ಭಾವಿಸು – ನೆನೆಪಿಸಿಕೊ; ತಿಳಿ; ಲಕ್ಷ್ಯಕೊಡು
- ಭಾವುಕ – ಸಹೃದಯ
- ಭಾವೆ – ಚೆಲುವೆ
- ಭಾವೋದ್ಭವ – ಮನಸ್ಸಿನಲ್ಲಿ ಹುಟ್ಟಿದವನು, ಮನ್ಮಥ
- ಭಾವ್ಯ – ಮುಂದೆ ನಡೆಯುವಂಥ(ದು); ಆಸ್ವಾದ್ಯವಾದುದು
- ಭಾಷಾವಿದ – ಭಾಷೆಯಲ್ಲಿ ಪಾಂಡತ್ಯ ಗಳಿಸಿದವನು
- ಭಾಷಾಸಂಸ್ಕರಣ – ಭಾಷೆಯ ತಪ್ಪುಗಳನ್ನು ತಿದ್ದುವುದು
- ಭಾಷಿತ – ಹೇಳಲ್ಪಟ್ಟ(ದ್ದು); ನುಡಿ
- ಭಾಸ್ಕರಸುತ – ಸೂರ್ಯನ ಮಗ, ಕರ್ಣ
- ಭಾಸ್ವರ – ಹೊಳೆಯುವ
- ಭಾಸ್ವರಬೋಧ – ದಿವ್ಯಜ್ಞಾನ(ವನ್ನು ಹೊಂದಿದವನು)
- ಭಾಳಾಕ್ಷಿ – (ಫಾಲಾಕ್ಷಿ) (ಜೈನ) ಹಣೆಯಲ್ಲಿ ಕಣ್ಣುಳ್ಳವಳು, ಜ್ವಾಲಾಮಾಲಿನಿ ಎಂಬ ಯಕ್ಷಿ
- ಭಿಂಡಿವಾಲ – ಒಂದು ಆಯುಧ, ಭಲ್ಲೆ
- ಭಿಕ್ಷುಕ – ಜೈನಯತಿ, ಶ್ರಮಣ
- ಭಿತ್ತಿ – ಗೋಡೆ
- ಭಿತ್ತಿಚಿತ್ರ – ಗೋಡೆಯ ಮೇಲೆ ರಚಿಸಿದ ಚಿತ್ರ
- ಭಿದು – ಕುಂಭಸ್ಥಳ
- ಭಿದುರ – ಮುರಿಯುವ(ವನು)
- ಭಿನ್ನ – ಬೇರೆಯಾದುದು; ಸೀಳಲ್ಪಟ್ಟ(ವನು)
- ಭಿನ್ನಭಾಜನ – ಒಡೆದ ಮಡಕೆ, ಬೋಕಿ ಬಿಂಚು
- ಭಿನ್ನರುಚಿ – ಬೇರೆ ಆಸಕ್ತಿ ಹೊಂದಿದವನು
- ಭಿನ್ನವಿದ್ಯ – ವಿದ್ಯೆಯನ್ನು ಕಲೆದುಕೊಂಡವನು
- ಭಿಲ್ಲ – ಬೇಡರವನು
- ಭಿಲ್ಲಪಲ್ಲಿ(ಳ್ಳಿ) – ಬೇಡರು ವಾಸಿಸುವ ಹಳ್ಳಿ
- ಭಿಷಗ್ಜನ – ವೈದ್ಯರ ಸಮೈಹ
- ಭಿಷಗ್ದೋಷ – ವೈದ್ಯನು ಮಾಡುವ ತಪ್ಪು
- ಭೀ – ಭಯ
- ಭೀಂಕೃತ(ತಿ) – ಬಾಣದ ಠೇಂಕಾರ
- ಭೀಕರ – ಭಯಂಕರ(ವಾದುದು)
- ಭೀತಿ – ಭಯ
Conclusion:
ಕನ್ನಡ ಭ ಅಕ್ಷರದ ಹಳೆಗನ್ನಡ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.