ಕನ್ನಡ ಇ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada e aksharada halegannadada padagalu , ಕನ್ನಡ ಇ ಅಕ್ಷರದ ಹಳೆಗನ್ನಡ ಪದಗಳು ( e halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಇ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( e halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಇ ಅಕ್ಷರ ಎಂದರೇನು?
‘ಇದು ಒಂದು ಸ್ವರಾಕ್ಷರ. ಇ ಕನ್ನಡ ವರ್ಣಮಾಲೆಯ ಮೂರನೆಯ ಅಕ್ಷರವಾಗಿದೆ. ಇ ಕನ್ನಡದ ಹೃಸ್ವ ಸ್ವರ ಅಕ್ಷರ. ನಾಮಿಸ್ವರಗಳಲ್ಲಿ ಇ ಮತ್ತು ಈ ಜೊತೆ ಸೇರುತ್ತವೆ. ಹಾಗಾಗಿ ಸವರ್ಣಗಳಲ್ಲಿ ಇ ಅಕ್ಷರದ ಪಾತ್ರವೂ ಇದೆ. ಈ ಅಕ್ಷರ ಪೂರ್ವ-ಸಂವೃತ ಅಗೋಳ ಹ್ರಸ್ವಸ್ವರವನ್ನು ಸೂಚಿಸುತ್ತದೆ.
Check out Kannada Varnmale : ಕನ್ನಡ ವರ್ಣಮಾಲೆ
ಕನ್ನಡ ಇ ಅಕ್ಷರದ ಇತಿಹಾಸ :
ಕನ್ನಡ ವರ್ಣಮಾಲೆಯ ಮೂರನೆಯ ಅಕ್ಷರವಾದ ಇ ಕಾರ ಕ್ರಿ.ಪೂ. ಮೂರನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ತ್ರಿಕೋಣಾಕಾರದ ಮೂರು ಬಿಂದುಗಳ ರೂಪದಲ್ಲಿತ್ತು. ಅನಂತರ ಕ್ರಿ.ಶ. ಎರಡನೆಯ ಶತಮಾನದ ಶಾತವಾಹನರ ಕಾಲದಲ್ಲಿ ರೂಪದಲ್ಲಿ ವಿಶೇಷ ಬದಲಾವಣೆಗಳು ಆಗದಿದ್ದರೂ ಬಿಂದುಗಳು ದೊಡ್ಡದಾದುವು.
ಐದನೆಯ ಶತಮಾನದ ಕದಂಬರ ಕಾಲದಲ್ಲಿ ಒಂದು ಬಿಂದು ಮಾಯವಾಗಿ ಸೇರಿಕೊಂಡ ಎರಡು ಖಂಡ ವೃತ್ತಗಳ ಕೆಳಭಾಗದಲ್ಲಿ ಎರಡು ಬಿಂದುಗಳು ಮುಂದುವರಿದವು. ಮುಂದಿನ ಶತಮಾನದಲ್ಲಿ ಖಂಡ ವೃತ್ತಗಳು ಅಗಲವಾದವು. ಒಂಬತ್ತನೆಯ ಶತಮಾನದ ರಾಷ್ಟ್ರಕೂಟರ ಕಾಲದಲ್ಲಿ ಬಲಭಾಗದ ಖಂಡವೃತ್ತ ಕೆಳಗಿನವರೆಗೂ ಹರಿದು ಅಕ್ಷರಕ್ಕೆ ಒಂದು ಹೊಸ ರೂಪವೇ ಬಂತು.
ಎರಡು ಬಿಂದುಗಳು ಮಾತ್ರ ಹಾಗೆಯೆ ಮುಂದುವರಿದುವು. ಹನ್ನೊಂದನೆಯ ಶತಮಾನದ ಕಲ್ಯಾಣಿ ಚಾಲುಕ್ಯರ ಲಿಪಿಯಲ್ಲಿ ಈ ಎರಡು ಬಿಂದುಗಳೂ ಬಲಭಾಗದ ಖಂಡವೃತ್ತಕ್ಕೆ ಸೇರಿ ಕೆಳಭಾಗದ ತುದಿಯಲ್ಲಿ ಒಂದು ಕೊಂಡಿಯ ಆಕಾರವನ್ನು ಹೊಂದಿದುವು. ಹದಿಮೂರನೆಯ ಶತಮಾನದ ಸಮಯಕ್ಕೆ ಅಕ್ಷರದ ಆಕಾರ ಸ್ಥಿರಗೊಂಡಿತು. ಬಲಭಾಗದ ಕೊಂಡಿಯತುದಿ ಕೆಳಕ್ಕೆ ಬಾಗಿತು. ಅನಂತರ ವಿಶೇಷ ಬದಲಾವಣೆಗಳಿಲ್ಲದೇ ಇದೇ ರೂಪ ಮುಂದುವರಿದಿದೆ.
ಇ ಅಕ್ಷರದ ಹಳೆಗನ್ನಡ ಪದಗಳು- Kannada Words
- ಇಂ – ಇನ್ನು; ಇನ್ನು ಮುಂದೆ
- ಇಂಕೆವರ್ – ಬತ್ತು, ಇಂಗಿಹೋಗು
- ಇಂಗಡಲ್ – ಹಾಲ್ಗಡಲು
- ಇಂಗಡಲಕುವರ – ಹಾಲ್ಗಡಲಲ್ಲಿ ಹುಟ್ಟಿದವನು, ಚಂದ್ರ
- ಇಂಗಡಲಣುಗಿ – ಲಕ್ಷ್ಮೀ
- ಇಂಗದಿರ್ – ಬೆಳುದಿಂಗಳು
- ಇಂಗದಿರ – ಚಂದ್ರ
- ಇಂಗದಿರ್ವಕ್ಕಿ – ಬೆಳದಿಂಗಳು ಕುಡಿಯುವ ಹಕ್ಕಿ, ಚಕೋರ
- ಇಂಗದಿರ್ವಟ್ಟು – ಚಂದ್ರ ಮಂಡಲ
- ಇಂಗಳ – ಕೆಂಡ
- ಇಂಗಳಗಣ್ – ಬೆಂಕಿಯ ಕಣ್ಣು; ಉರಿಯುವ ಕಣ್ಣು
- ಇಂಗಿಣೀಮರಣ – (ಜೈನ) ಹತ್ತೊಂಬತ್ತು ಬಗೆಯ ಮರಣಗಳಲ್ಲಿ ಒಂದು; ಯತಿಯು ಸಂಗವನ್ನು ತೊರೆದು ಒಂಟಿಯಾಗಿದ್ದು, ಆಹಾರವನ್ನು ಬಿಟ್ಟು, ಉಪಸರ್ಗದಲ್ಲಿ ಉಪಚಾರ ಬಿಟ್ಟು ಸಮತೆಯಿಂದ ಹೊಂದುವ ಮರಣ
- ಇಂಗು – ಬತ್ತು
- ಇಂಗುಲಿಕ – ಇಂಗಲೀಕ, ಹಿಂಗುಳ; ಪಾದರಸದಿಂದಾದ ಅದಿರು
- ಇಂಗೂಟ – ಇನಿದಾದ ಕೂಟ; ಸಂಭೋಗ
- ಇಂಗೋಲ್ – ರುಚಿಯಾದ ಕೋಲು, ಕಬ್ಬು
- ಇಂಗೋಲ – ಕಬ್ಬುವಿಲ್ಲ, ಮನ್ಮಥ
- ಇಂಗೋಲ್ವಿಲ್ಲ – ಇಂಗೋಲ, ಮನ್ಮಥ
- ಇಂ(ಈಂ)ಚರ – ಇಂಪಾದ ಧ್ವನಿ; ಇನಿದಾದ ಸರ(ಬಾಣ) ಉಳ್ಳವನು, ಮನ್ಮಥ
- ಇಂಚರಮೀ – ಮಧುರಧ್ವನಿ ನೀಡು
- ಇಂಚೆ – ಹಿಂಸೆ
- ಇಂಡೆ – ಚೂರು; ಹಿಂಡು; ಚೆಂಡು
- ಇಂಡೆಗಟ್ಟು – ಹೂವಿನ ಹಾರ ಕಟ್ಟು
- ಇಂಡೆಯನಾಡು – ಚೆಂಡಾಡು
- ಇಂಡೆಯಾಡು – ಹೂವಿನ ದಂಡೆಯನ್ನು ಎಸೆದಾಡು
- ಇಂತಪ್ಪ – ಇಂತಹ, ಇಂಥ
- ಇಂತುಟು – ಇಷ್ಟು; ಹೀಗೆ; ಈ ಪ್ರಕಾರವಾಗಿ
- ಇಂತುಟೆ ವಲಂ – ಇಷ್ಟೇ ಅಲ್ಲವೇ? ಹೀಗಾಯಿತೇ?
- ಇಂದಗಿ – ಇಂದ್ರಜಿತು
- ಇಂದಿರ – ಇಂದ್ರ
- ಇಂದಿಂದಿರ – ದುಂಬಿ; ಗುಂಗೀಹುಳು
- ಇಂದಿರದಿಕ್ಕು – ಪೂರ್ವದಿಕ್ಕು
- ಇಂದಿರವಿಲ್ – ಇಂದ್ರಬಿಲ್ಲು; ಕಾಮನಬಿಲ್ಲು
- ಇಂದಿರೆ – ಲಕ್ಷ್ಮಿ; ಬಿಲ್ವವೃಕ್ಷ
- ಇಂದೀವರ – ಕನ್ನೈದಿಲೆ
- ಇಂದೀವರನಾಭ – ವಿಷ್ಣು
- ಇಂದೀವರವಕ್ತ್ರೆ – ಕಮಲಮುಖಿ
- ಇಂದು – ಚಂದ್ರ; ಈ ಹೊತ್ತು
- ಇಂದುತನಹ – ಈವರೆಗೆ, ಈತನಕ
- ಇಂದುವರಂ – ಈತನಕ
- ಇಂದುಕರಾವಳಿ – ಬೆಳುದಿಂಗಳ ರಾಶಿ
- ಇಂದುಕಾಂತಿ – ಚಂದ್ರನ ಕಾಂತಿ
- ಇಂದುಕಾಂತೋಪಲ(ಳ) – ಚಂದ್ರಕಾಂತಶಿಲೆ
- ಇಂದುಜ – ಚಂದ್ರನ ಮಗ, ಬುಧ
- ಇಂದುಜನಕ – ಸಮುದ್ರ; ಅತ್ರಿ ಮಹರ್ಷಿ
- ಇಂದುಜ್ಯೋತ್ಸ್ನೆ – ಚಂದ್ರನ ಬೆಳಕು
- ಇಂದುದೀಧಿತಿ – ಚಂದ್ರನ ಕಾಂತಿ
- ಇಂದುದ್ಯುತಿ – ಇಂದುದೀಧಿತಿ
- ಇಂದುಧರ – ಶಿವ
- ಇಂದುನಿಭಾಸ್ಯೆ – ಚಂದ್ರನನ್ನು ಹೋಲುವ ಮುಖದವಳು
- ಇಂದುಮಂಡಲ(ಳ) – ಚಂದ್ರಮಂಡಲ
- ಇಂದುಮಣಿ – ಚಂದ್ರಕಾಂತಶಿಲೆ
- ಇಂದುರೋಚಿ – ಚಂದ್ರಕಾಂತಿ
- ಇಂದುಲಕ್ಷ್ಮಿ – ಚಂದ್ರನ ವೈಭವ
- ಇಂದುಸಖ – ಮನ್ಮಥ
- ಇಂದುಲಾಂಛನ – ಚಂದ್ರನ ಗುರುತು, ಕಳಂಕ
- ಇಂದೂದಯ – ಚಂದ್ರೋದಯ
- ಇಂದೂಪಲ – ಚಂದ್ರಕಾಂತಶಿಲೆ
- ಇಂದೊವರ್ – ಮಧುರವಾದ ಒಗರು ರುಚಿ
- ಇಂದೊ(ೀ)ಳ – ಮಧುರ ಗಾನ; ಹಿಂದೋಳ ರಾಗ
- ಇಂದ್ರ – ದೇವತೆಗಳ ಒಡೆಯ; ದ್ವಾದಶಾದಿತ್ಯರಲ್ಲಿ ಒಬ್ಬ; ಒಡೆಯ; ಶ್ರೇಷ್ಠ
- ಇಂದ್ರಕ – ಸಭಾಮಂಟಪ; (ಜೈನ) ನರಕಬಿಲಗಳಲ್ಲಿ ಒಂದು ಬಗೆ; ಸೌಧರ್ಮೇಂದ್ರ ಮುಂತಾದವರ ವಿಮಾನಗಳಲ್ಲಿ ಒಂದು ಬಗೆ
- ಇಂದ್ರಕೀಲ – ಒಂದು ಪರ್ವತದ ಹೆಸರು
- ಇಂದ್ರಕೇತು – ಇಂದ್ರನ ಧ್ವಜ; (ಜೈನ)
- ಮಹಾಮಂಡಲೇಶ್ವರರ ಜಿನಪೂಜೆ
- ಇಂದ್ರಕೋದಂಡ – ಇಂದ್ರಧನುಸ್ಸು
- ಇಂದ್ರಕೋಶ – ತವಗ, ಸುಖಾಸನ
- ಇಂದ್ರಗಾಯಕ – ಇಂದ್ರನ ಹಾಡುಗಾರ
- ಇಂದ್ರಗೋಪ – ಮಿಂಚುಹುಳು, ಹೊನ್ನೆ ಹುಳು; ಹಡಗಿನ ಮಂಚ
- ಇಂದ್ರಚಾಪ – ಕಾಮನ ಬಿಲ್ಲು
- ಇಂದ್ರಚ್ಛಂದ – ಸಾವಿರದೆಂಟು ಎಳೆಗಳಿಂದ ಕೂಡಿದ ಮುತ್ತಿನ ಹಾರ
- ಇಂದ್ರಜಾಲ – ಯಕ್ಷಿಣೀ; ಗಾರುಡಿ; ಕಣ್ಕಟ್ಟು
- ಇಂದ್ರಜಾಲಿಕ(ಗ) – ಯಕ್ಷಿಣಿಗಾರ
- ಇಂದ್ರಜಾಲಿಗತನ – ಮಾಯಾವಿತನ; ಮಾಯೆ
- ಇಂದ್ರಜಿತು(್ತ) – ಇಂದ್ರನನ್ನು ಗೆದ್ದವನು; ರಾವಣನ ಮಗ; ಮೇಘನಾದ
- ಇಂದ್ರತ್ಯಾಗ – (ಜೈನ) ಅಧಿಕಾರತ್ಯಾಗ; ಪದವಿತ್ಯಾಗ; ಐವತ್ತಮೂರು ಗರ್ಭಾನ್ವಯಕ್ರಿಯೆಗಳಲ್ಲಿ ಒಂದು
- ಇಂದ್ರತ್ಯಾಗಕ್ರಿಯೆ – ಇಂದ್ರತ್ಯಾಗ
- ಇಂದ್ರದಂತಿ – ಐರಾವತ
- ಇಂದ್ರದಿಕ್ಕು – ಪೂರ್ವದಿಕ್ಕು
- ಇಂದ್ರದ್ವಿಪ – ಇಂದ್ರನ ಆನೆ, ಐರಾವತ
- ಇಂದ್ರಧ್ವಜ – ಇಂದ್ರನ ಧ್ವಜ; ವಜ್ರಾಯುಧ (ಜೈನ)
- ಇಂದ್ರಾದಿಗಳು ಮಾಡುವ ಜಿನಪೂಜೆ
- ಇಂದ್ರನಂದನ – ಇಂದ್ರನ ಮಗ, ಅರ್ಜುನ; ಜಯಂತ
- ಇಂದ್ರನಗ – ಮೇರುಪರ್ವತ
- ಇಂದ್ರನೀಲ – ನೀಲವರ್ಣದ ರತ್ನ
- ಇಂದ್ರಪುರ – ಅಮರಾವತಿ
- ಇಂದ್ರಮಣಿ – ಇಂದ್ರನೀಲ
- ಇಂದ್ರವಧು – ಇಂದ್ರ ನೇಮಿಸಿದ ಅಪ್ಸರೆ; ಶಚೀದೇವಿ
- ಇಂದ್ರವಿದ್ವಿಷ – ಇಂದ್ರನ ಶತ್ರು; ರಾವಣ
- ಇಂದ್ರಸಿಂಧು – ದೇವಗಂಗೆ
- ಇಂದ್ರಸಿಂಧುರ – ಇಂದ್ರನ ಆನೆ, ಐರಾವತ
- ಇಂದ್ರಾಂಗನೆ – ಶಚೀದೇವಿ
- ಇಂದ್ರಾಣಿ – ಇಂದ್ರನ ಹೆಂಡತಿ, ಶಚೀದೇವಿ
- ಇಂದ್ರಾದ್ರಿ – ಮಂದರಪರ್ವತ
- ಇಂದ್ರಾನೇಕಪ – ಇಂದ್ರನ ಆನೆ, ಐರಾವತ
- ಇಂದ್ರಾನೋಕಹ – ಇಂದ್ರನ ಮರ, ಕಲ್ಪವೃಕ್ಷ
- ಇಂದ್ರಾಭಿಷೇಕ – ಇಂದ್ರನಿಗೆ ಮಾಡುವ ಅಭಿಷೇಕ; (ಜೈನ) ಐವತ್ತಮೂರು ಗರ್ಭಾನ್ವಯ ಕ್ರಿಯೆಗಳಲ್ಲಿ ಒಂದು
- ಇಂದ್ರಾಭಿಷೇಕಕ್ರಿಯೆ – (ಜೈನ) ಇಂದ್ರಾಭಿಷೇಕ
- ಇಂದ್ರಾಯುಧ – ವಜ್ರಾಯುಧ; ಸಿಡಿಲು
- ಇಂದ್ರಾರಿ – ಇಂದ್ರನ ಶತ್ರು, ಗರುಡ; ಇಂದ್ರಜಿತ್ತು, ಅಸುರ
- ಇಂದ್ರಾವತಾರ – (ಜೈನ) ಗರ್ಭಾನ್ವಯಕ್ರಿಯೆಗಳಲ್ಲಿ ಒಂದು
- ಇಂದ್ರಾವರಜ – ಇಂದ್ರನ ತಮ್ಮ, ಉಪೇಂದ್ರ; ವಿಷ್ಣು
- ಇಂದ್ರಾಶೆ – ಇಂದ್ರನ ದಿಕ್ಕು, ಪೂರ್ವದಿಕ್ಕು
- ಇಂದ್ರಿಯಸೌPಖ್ಯ – ಇಂದ್ರಿಯಗಳ ಸುಖ
- ಇಂದ್ರಿಯಕ್ಷರಣೆ – ರೇತಸ್ಸಿನ ಸ್ಖಲನೆ
- ಇಂದ್ರೇಭ – ಐರಾವತ
- ಇಂದ್ರಪಪಾತಕ್ರಿಯೆ – (ಜೈನ) ಐವತ್ತಮೂರು
- ಗರ್ಭಾನ್ವಯಕ್ರಿಯೆಗಳಲ್ಲಿ ಒಂದು
- ಇಂದ್ವಂಕ – ಚಂದ್ನಲ್ಲಿರುವ ಕಲೆ
- ಇಂದ್ವರ್ಧ – ಅರ್ಧಚಂದ್ರ
- ಇಂಧನ – ಹತ್ತಿಸುವುದು; ಉರುವಲು
- ಇಂಪಡರ್ – ರುಚಿಯಾಗು
- ಇಂಪಾಣ – ಇಂಪಾಗಿ ಹಾಡುವವನು
- ಇಂಪು – ಮಧುರತೆ, ಸವಿ
- ಇಂಪುಗಾಣ್ – ರುಚಿ ಕಾಣು
- ಇಂಬಣ್ – ಇಇದಾದ ಹಣ್ಣು
- ಇಂಬವಳ – ಇನಿದಾದ ಹವಳ
- ಇಂಬಾಗು – ಆಶ್ರಯವಾಗು; ಸೊಗಸಾಗು
- ಇಂಬಿಡು – ಹರಡು, ವ್ಯಾಪಿಸು
- ಇಂಬೀ – ಇಂಬು ಈ, ಆಶ್ರಯ ನೀಡು
- ಇಂಬ – ಸಂತೋಷ
- ಇಂಬು – ಆಶ್ರಯ, ಎಡೆ
- ಇಂಬುಕೆಯ್ – ಅಂಗೀಕರಿಸು; ಅವಕಾಶ ಮಾಡಿಕೊ; ಅನುಕೂಲಕರವಾಗಿ ನಡೆದುಕೊ; ಸಂತೋಷಪಡಿಸು; ರುಚಿಯಾಗು
- ಇಂಬುಕೆಯ್ಸು – ಹಿತವುಂಟುಮಾಡು;
- ಅವಕಾಶಮಾಡಿಕೊಡು
- ಇಂಬುಗಿಡು – ಅಂದಕೆಡು
- ಇಂಬುಗೊಡು – ಆಶ್ರಯಕೊಡು
- ಇಂಬುಗೊಳ್ – ಚೆನ್ನಾಗು
- ಇಂಬುಗೊಳಿಸು – ಹೊಂದಿಸು
- ಇಂಬುವಡೆ – ಅತಿಶಯತೆಯನ್ನು ಪಡೆ
- ಇಂಬುವರ್ – ಅನುಕೂಲವಾಗು; ಹಿತವಾಗು
- ಇಂಬೆಳಸು – ಚೆನ್ನಾದ ಬೆಳಸು; ಇನಿದಾದ ಬೆಳೆ
- ಇಕ್ಕಿಸು – ಇರಿಸು; ಸ್ಥಾಪಿಸು; ಊಟಕಾಕಿಸು
- ಇಕ್ಕಿಕೊಳ್ – ಇರಿಸಿಕೊ; ಧರಿಸು; ಆಚೆಗೆ ತಳ್ಳು; ಹೊಡೆದು ತುಳಿ
- ಇಕ್ಕು – ಇಡು; ಧರಿಸು; ಲೇಪಿಸು; ಮುಡಿಸು, ತೊಡಿಸು; ಚೆಲ್ಲು; ಬಿಟ್ಟುಹೋಗು; ಬಿಸಾಕು; ಪ್ರಯೋಗಿಸು; ನಿಕ್ಷೇಪಮಾಡು; ನೀಡು; ಹೊಡೆ, ಹನನಗೈ
- ಇಕ್ಕುಂಗೂಳ್- ಇತರರು ನೀಡುವ ಅನ್ನ; ಭಿಕ್ಷೆ
- ಇಕ್ಕುವಡು – ಸೋಲು ಅನುಭವಿಸು; ಹೊಡೆಯಲ್ಪಡು
- ಇಕ್ಕೆ – ಇರುವ ಜಾಗ
- ಇಕ್ಕೆದಾಣ – ಬಿಡದಿ, ಬಿಡಾರ
- ಇಕ್ಷುಕಾಂಡ – ಕಬ್ಬಿನ ಜಲ್ಲೆ
- ಇಕ್ಷುಚಾಪ – ಕಬ್ಬಿನ ಬಿಲ್ಲು, ಕಬ್ಬುವಿಲ್ಲ, ಮನ್ಮಥ
- ಇಕ್ಷುಪುಷ್ಪ – ಕಬ್ಬಿನ ಹೂ, ಸೂಲಂಗಿ
- ಇಕ್ಷುಯಂತ್ರ – ಕಬ್ಬಿನ ರಸ ತೆಗೆಯುವ ಯಂತ್ರ
- ಇಕ್ಷುರಸ – ಕಬ್ಬಿನ ರಸ
- ಇಕ್ಷುವಾಟ(ಟಿ) – ಕಬ್ಬಿನ ಗದ್ದೆ
- ಇಕ್ಷ್ವಾಕು – ಸೂರ್ಯವಂಶದ ಮೂಲಪುರುಷ
- ಇಚ್ಚಡಿ – ಎರಡು ಮಡಿಕೆ
- ಇಚ್ಚೆ – ಆಸೆ, ಬಯಕೆ; ಬಯಸಿದ ವಸ್ತು, ವಿಷಯ; ಸ್ವಾತಂತ್ರ್ಯ; ಅಭಿಪ್ರಾಯ; ಸಮ್ಮತಿ
- ಇಚ್ಚೆಕಾರ್ತನ – ಕಾಮ
- ಇಚ್ಚೆಕಾ(ಗಾ)ರ್ತಿ – ಇಚ್ಛಾನುಸಾರ ನಡೆಯುವವನು; ಸ್ವೈರ ವ್ಯಕ್ತಿ; ವಿಧೇಯ ವ್ಯಕ್ತಿ; ರತಿಇಚ್ಚೆಕಾ(ಗಾ)¾ – ಇಚ್ಛಾನುಸಾರ ನಡೆಯುವವನು; ಸ್ವೈರ ವ್ಯಕ್ತಿ; ವಿಧೇಯ ವ್ಯಕ್ತಿ; ಮನ್ಮಥಇಚ್ಚೆಕಾ¾ತನ – ಸ್ವಚ್ಛಂದವೃತ್ತಿ; ಪ್ರಣಯ
- ಇಚ್ಚೆಗೆಡು – ಆಸೆಭಂಗವಾಗು; ಸ್ವಾಧೀನ ತಪ್ಪು
- ಇಚ್ಚೆಗೆಯ್ – ಇಷ್ಟಪೂರ್ತಿಮಾಡು; ಇಷ್ಟಪಡು
- ಇಚ್ಚೆಯಾಣ್ಮ – ಪ್ರೀತಿಸಿದವನು; ಮನದನ್ನ
- ಇಚ್ಛಾಕಾರಂ(ಗೆಯ್) – ಆತಿಥ್ಯ(ಮಾಡು)
- ಇಚ್ಛಾಮರಣಿ – ಬೇಕೆಂದಾಗ ಸಾವು ಪಡೆಯುವವನು
- ಇಚ್ಛಾವಿಘಾತಿ – ಇಷ್ಟಕ್ಕೆ ಭಂಗ
- ಇಜ್ಯಾಪುರಸ್ಸರಂ – ದಾನಪೂರ್ವಕವಾಗಿ
- ಇಜ್ಯೆ – ಯಾಗ; ದಾನ; (ಜೈನ) ಅರ್ಹಂತಪೂಜೆ
- ಇಟ್ಟಗೆ – (ಇಷ್ಟಕಾ) ಇಟ್ಟಂಗಿ, ಇಟ್ಟಿಗೆ
- ಇಟ್ಟಡೆ – ಇಕ್ಕಟ್ಟು; ಅನಿವಾರ್ಯತೆ; ಸಾಂದ್ರತೆ
- ಇಟ್ಟಣ(ಳ) – ಗುಂಪು, ಮನೋಹರ
- ಇಟ್ಟಣಂಬಡೆ – ಅತಿಶಯವಾಗು
- ಇಟ್ಟಣ(ಳಿ)Âಸು – ಗುಂಪಾಗು; ಸುಂದರವಾಗು
- ಇಟ್ಟಳಂ – ಅತಿಶಯವಾಗಿ
- ಇಟ್ಟಳಂಗಟ್ಟು – ಒತ್ತಾಗಿ ಕಟ್ಟು
- ಇಟ್ಟಳಮಿಡು – ಆಕ್ಷೇಪ ಮಾಡು
- ಇಟ್ಟಾಡು – ಎಸೆದಾಡು, ಚೆಲ್ಲು
- ಇಟ್ಟಿ – ಈಟಿ; ಇಷ್ಠಿ, ಯಾಗ
- ಇಟ್ಟಿಗೆಗೊಳ್ – ಇಟ್ಟಿಗೆಗಳನ್ನು ಕೂಡಿಸು
- ಇಟ್ಟೆಡೆ – ಇಟ್ಟಡೆ
- ಇಡಿ – ಕುಟ್ಟು; ತಿವಿ; ತುಂಬಿರು
- ಇಡಿಕೆಗೊಳ್ – ನಿಬಿಡವಾಗು
- ಇಡಿ(ಡು)ವು – ಇಕ್ಕಟ್ಟು
- ಇಡು – ಹೊಡೆ; ಧರಿಸು
- ಇಡು(ಂ)ಕು – ದೂರ ಎಸೆ, ಬಿಸಾಕು
- ಇದುರಿತು – ಎದುರಿಗಿರುವುದು
- ಇಭದ್ವಿಣ್ಮೂರ್ತಿ – ಸಿಂಹದ ಆಕಾರ
- ಹಿಡಿಯುವ ಗಾಳದ ಕೊಕ್ಕೆ
- ಇಡು – ಇರಿಸು; ಹೂಡು; ಧರಿಸು; ಹೊಡೆ; ಎಸೆ
- ಇಡು(ಂ)ಕು – ಬಲವಾಗಿ ಎಸೆ; ತುರುಕು
- ಇಡುಕುಂಗಬ್ಬ – ಸ್ವಯಂಪೂರ್ಣ ಕಾವ್ಯ; ಮುಕ್ತಕ
- ಇಡುಕುಂಬನಿ – ದಟ್ಟವಾಗಿ ಹಾಕುವ ಹನಿ
- ಇಡುಗಿಚ್ಚು – ಹಾಕುವ ಕಿಚ್ಚು
- ಇಡುಮುಡುಕು – ಛಿಟಿಛಿಟಿರೆನ್ನುವ ಶಬ್ದ
- ಇಡುಕುಮುಡುಕೆನೆ – ಇಕ್ಕಟ್ಟಾದ ಜಾಗ
- ಇಡುವಗೆ – ಬದ್ಧದೇಷ
- ಇಡುವರ್ಣ – ಗಾಢವಾಗಿ ಬಳಿದ ಬಣ್ಣ
- ಇಡುವಲೆ – ಬೀಸುವ ಬಲೆ
- ಇಡುವ¿Â – ಇರಿಸಿದ ಸ್ಥಿತಿ
- ಇಡು(ಡಿ)ವು – ಸಂದಿಗೊಂದಿ, ಇಕ್ಕಟ್ಟು; ರಾಶಿ
- ಇಣಿ – ಎತ್ತಿನ ಹಿಣಿಲು
- ಇತರ – ಬೇರೆಯ
- ಇತರೆ – ಸಾಮಾನ್ಯಳು
- ಇತರೇತರ – ಪರಸ್ಪರ
- ಇತರೇತರಕ್ರಿಯೆ – ಪರಸ್ಪರ ಮಾಡುವ ಕೆಲಸ
- ಇತರೇತರೋಕ್ತಿ – ಪರಸ್ಪರ ಮಾತು
- ಇತಸ್ತತ – ಅತ್ತ ಇತ್ತ
- ಇತಿಹಾಸೋಪಾಶ್ರಯ – ಇತಿಹಾಸವನ್ನು ಅವಲಂಬಿಸಿರುವುದು
- ಇತ್ತ – ಈ ಕಡೆ
- ಇದಂದೇವ – ಈತನೇ ದೇವ
- ಇದಾನೀಂತನ – ಈಗಿನ, ಈ ಕಾಲದ
- ಇದಿರ್ – ಎದಿರು, ಸಮ್ಮುಖ; ವಿರೋಧ
- ಇದಿರಾನ್ – ಎದುರಿಸು
- ಇದಿರೀಸು – ಪ್ರವಾಹಕ್ಕೆ ವಿರುದ್ಧವಾಗಿ ಈಜು
- ಇದಿರುಗಟ್ಟು – ಮನೆಯ ಮುಂಭಾಗದ ಕಟ್ಟಡ
- ಇದಿರೆತ್ತು – ಎದುರಾಗಿ ದಂಡೆತ್ತಿ ಹೋಗು
- ಇದಿರೊಡ್ಡ – ಎದುರಿನ ಸೈನ್ಯ
- ಇದಿರೊಡ್ಡು – ಎದುರಾಗಿ ನಿಲ್ಲಿಸು; ಪ್ರತಿಸೈನ್ಯ
- ಇದಿರ್ಚು – ಎದುರಿಸು, ಪ್ರತಿಭಟಿಸು
- ಇದಿರ್ವರ್ – ಎದುರಾಗು
- ಇದಿರ್ವೋಗು – ಎದುರಾಗಿ ಹೋಗು; ಇದಿರುಗೊಳ್ಳು
- ಇಧ್ಮ – ಸಮಿತ್ತು, ಸೌದೆ
- ಇನ – ಸೂರ್ಯ; ಒಡೆಯ; ತಂದೆ; ದೇವರು; ಪ್ರಿಯಕರ
- ಇನಕಿರಣ – ಸೂರ್ಯಕಿರಣ
- ಇನಜ – ಯಮ; ಶನಿ; ಕರ್ಣ
- ಇನಜಾತ – ಇನಜ
- ಇನಮಂಡಲ – ಸೂರ್ಯಮಂಡಲ
- ಇನರಶ್ಮಿ – ಸೂರ್ಯರಶ್ಮಿ
- ಇನರಿಪು – ರಾಹು
- ಇನಿಗೊಳ – ಅಮೃತಸರೋವರ
- ಇನಿತ್ತು – ಇಷ್ಟು, ಇನಿತು; ಸ್ವಲ್ಪ
- ಇನಿದು – ಮಧುರ; ಸಿಹಿಯಾದ; ಇಂಪಾದ
- ಇನಿವಿರಿದು – ಇನಿತು+ಪಿರಿದು, ಇಷ್ಟು ದೊಡ್ಡದು
- ಇನಿವಿಲ್ – ಇನಿದು ಬಿಲ್ಲು, ಕಬ್ಬು
- ಇನಿಸು – ಇನಿತ್ತು
- ಇನ್ನ – ಇಂಥದು; ಇಲ್ಲಿಯವರೆಗೆ
- ಇನ್ನುಣಿಸು – ಇನಿದಾದ ಉಣಿಸು
- ಇನ್ನೆಗಂ – ಇಷ್ಟರವರೆಗೆ; ಇಲ್ಲಿಯವರೆಗೆ
- ಇನ್ನೆವರೆಂ – ಇದುವರೆಗೆ
- ಇನ್ನೆವರೆಗಂ – ಇನ್ನೆವರಂ
- ಇಬ್ಬ – ಹಣವಂತ; ಒಂದು ಕುಲದ ಹೆಸರು
- ಇಭ – ಆನೆ
- ಇಭಘಟೆ – ಆನೆಯ ಗುಂಪು
- ಇಭಪತಿ – ಆನೆಗಳ ಒಡೆಯ
- ಇಭರಿಪು – ಆನೆಯ ಶತ್ರು, ಸಿಂಹ
- ಇಭವಿದ್ವೇಷಿ – ಇಭರಿಪು
- ಇಭವೈರಿ – ಇಭರಿಪು
- ಇಭಶಿಕ್ಷಕ – ಆನೆಗಳನ್ನು ನಿಯಂತ್ರಿಸುವವನು, ಮಾವತಿಗ
- ಇಭಶಿಶು – ಆನೆಯ ಮರಿ
- ಇಭಾಂತಕ – ಆನೆಯನ್ನು ಕೊಲ್ಲುವಂಥದು, ಸಿಂಹ
- ಇಭಾರಿವಿಷ್ಟರ – ಸಿಂಹಾಸನ
- ಇಭಾರೋಹಕ – ಆನೆಯ ಸವಾರ
- ಇಭೇಂದ್ರ – ಸಲಗ; ಮುಖ್ಯ ಆನೆ
- ಇಭೇಂದ್ರಶಿಕ್ಷೆ – ಆನೆಗಳನ್ನು ಪಳಗಿಸುವಿಕೆ
- ಇಭ್ಯ – ಆನೆಗೆ ಸಂಬಂಧಿಸಿದ; ಆನೆಗಳ ಗುಂಪು; ಶ್ರೀಮಂತ, ವರ್ತಕ
- ಇಭ್ಯಕುಲ – ವೈಶ್ಯಕುಲ
- ಇಭ್ಯಾನ್ವಯ – ವೈಶ್ಯಕುಲದವನು
- ಇಮ್ಮಗೆ(ನೆ) – ಇಂಪಾಗಿ; ಸಂತೋಷವಾಗಿ
- ಇಮ್ಮಾವು – ಸಿಹಿ ಮಾವು
- ಇಮ್ಮಿದ – ಚೆಲುವ
- ಇರ್ – ಇರು; ಜೀವಿಸು; ವಾಸಮಾಡು; ವರ್ತಿಸು; ಎರಡು
- ಇರಂ – ಇರವು, ಇರುವಿಕೆ; ನೆಲೆ; ಸ್ಥಿತಿ
- ಇರಮ್ಮದ – ಸಿಡಿಲು
- ಇರವಂತಿ(ಗೆ) – ಇರುವಂತಿ, ಹೆಜ್ಜಾಜಿ
- ಇರಿ – (ಕರೆಯುವ ಹಾಲಿನ) ಧಾರೆ; ಹಾಲು ಕರೆ
- ಇರಿಸಿಡು – ಇಡು
- ಇರಿಸು – ಇರುವಂತೆ ಮಾಡು; ಇಡು
- ಇರು – ವಾಸಮಾಡು; ದೊಡ್ಡ ಗುಂಪು
- ಇರುಪೆ – ಇರುವೆ
- ಇರುಳ್(ಳು) – ರಾತ್ರಿ; ಅಜ್ಞಾನ
- ಇರುಳುಮೆಯ್ – ನಡುರಾತ್ರಿ
- ಇರುಳ್ಗಾಳೆಗ – ರಾತ್ರಿ ಕಾಳಗ
- ಇರ್ಕಂಡ – ಎರಡು ಭಾಗ
- ಇರ್ಕಚ್ಚೆ – ಜೋಡುಗಚ್ಚೆ
- ಇರ್ಕಡಿ(ಗೆಯ್) – ಎರಡು ಭಾಗ (ಮಾಡು)
- ಇರ್ಕಣ್ಗುರುಡ – ಎರಡು ಕಣ್ಣೂ ಕಾಣದವನು
- ಇರ್ಕು – ಹಿಂಸೆ ಸಿಲುಕಿಸು
- ಇರ್ಕೆ – ಇಕ್ಕೆ, ಇರುವಿಕೆ; ಇರುವ ಸ್ಥಳ
- ಇರ್ಕೆದಾಣ – ಇರುವ ಜಾಗ
- ಇರ್ಕೆಲ – ಎರಡೂ ಬದಿ
- ಇರ್ಕೆವನೆ – ಇರುವ ಮನೆ
- ಇರ್ಕೆವೆಟ್ಟು – ಇರುವ ಬೆಟ್ಟ
- ಇರ್ಛಾಸಿರ – ಎರಡು ಸಾವಿರ
- ಇರ್ತಟ್ಟು – ಎರಡು ಕಡೆ
- ಇರ್ತಡಿ – ಎರಡು ದಡ
- ಇರ್ತಡಿವಿಡಿ – ಎರಡು ದಡಗಳನ್ನು ಅನುಸರಿಸು
- ಇರ್ತರ – ಎರಡು ಸಾಲು
- ಇರ್ತಲೆವೊತ್ತು – ಎರಡು ಕಡೆಗಳಿಗೂ ಉರಿ ಹೊತ್ತು
- ಇರ್ತಳ – ಎರಡು ಅಂಗೈಗಳೂ
- ಇರ್ತಿಗ – ಇತ್ತಿಗ, ಇತ್ತಿಗೆ ಪಗಡೆಯಲ್ಲಿ ಎರಡು
- ಕಡೆ ಮೂರು ಬೀಳುವುದು
- ಇರ್ದಲ್ – ಇದ್ದಿಲು
- ಇರ್ದೆಸೆ – ಎರಡು ದಿಕ್ಕು, ಕಡೆ
- ಇರ್ಪತ್ತಿರ್ಛಾಸಿರ – ಇಪ್ಪತ್ತೆರಡು ಸಾವಿರ
- ಇರ್ಪತ್ತಿರ್ವರ್ – ಇಪ್ಪತ್ತೆರಡು ಮಂದಿ
- ಇರ್ಪು – ದ್ರವ, ತೇವ
- ಇರ್ಪುಗುಂದು – ಒಣಗು; ಕಾಂತಿಹೀನವಾಗು
- ಇರ್ಪುವಡೆಯಿಸು – ಹಸಿಯಾಗಿಸು
- ಇರ್ಪೊತ್ತು – ಎರಡು ಹೊತ್ತು; ಹಗಲು-ರಾತ್ರಿಇರ್ಪೋಡು – ಒಣಗಿಹೋಗು
- ಇರ್ಬಗಿ – ಇರ್ವಗಿ, ಇಬ್ಬಗಿ, ಎರಡು ಹೋಳು
- ಇರ್ಬಗಿಮಾಡು – ಎರಡು ಹೋಳಾಗಿ ಸೀಳು
- ಇರ್ಬದಿ – ಎರಡು ಪಕ್ಕ
- ಇರ್ಬರಿ – ಇರ್ಬದಿ
- ಇರ್ಬಾಯ – ಎರಡು ಬಾಯಿ ಉಳ್ಳುದು, ಗಂಡಭೇರುಂಡ
- ಇರ್ಮಡಿ – ಎರಡು ಪಟ್ಟು
- ಇರ್ಮಡಿಕೆ – ಎರಡು ಮಡಿಕೆ
- ಇರ್ಮಡಿಸು – ಎರಡರಷ್ಟಾಗು
- ಇರ್ಮೆ – ಎರಡು ಸಲ, ಬಾರಿ
- ಇರ್ಮೆಯ್ಗಾಣಿಸು – ಎದೆ ಬೆನ್ನುಗಳನ್ನು ಕಾಣಿಸು; ಬೆನ್ನಲ್ಲಿ ಹೊರಟು ಎದೆಯಲ್ಲಿ ಹೊರಬರು
- ಇರ್ಮೊನೆಗಾಣ್ – ಎರಡು ತುದಿಯಲ್ಲೂ ಕಾಣಿಸು
- ಇರ್ಮೊ¿ – ಎರಡು ಮೊಳ
- ಇರ್ವಕ್ಕ – ಎರಡು ಪಕ್ಕ, ಎರಡು ಮಗ್ಗುಲು
- ಇರ್ವರ್ – ಇಬ್ಬರು
- ಇರ್ವಲ – ಎರಡು ಕಡೆಯ ಸೈನ್ಯ
- ಇರ್ವಳಿ – ಇರ್+ಬಳಿ(ಬ¿Â), ಎರಡು ವಂಶ
- ಇಲ್ಲಣ – ಜೇಡನ ಬಲೆ; ಹೊಗೆನೂಲು
- ಇಲ್ಲಮೆ – ಇಲ್ಲವೆ, ಇಲ್ಲದಿರುವಿಕೆ
- ಇಲ್ಲಿ – ಈ ಎಡೆ
- ಇಷು – ಬಾಣ
- ಇಷುವಿದ್ಯೆ – ಧನುರ್ವಿದ್ಯೆ
- ಇಷ್ಟದಾನಿ – ಬಯಸಿದ್ದನ್ನು ಕೊಡುವವನು
- ಇಷ್ಟಯೋಗ – ಪ್ರಿಯರ ಸೇರುವಿಕೆ
- ಇಷ್ಟವಿಯೋಗ – ಪ್ರಿಯರ ಅಗಲಿಕೆ
- ಇಷ್ಟಸಿದ್ಧಿ – ಬಯಸಿದ್ದು ಕೈಗೂಡುವುದು
- ಇಷ್ಟಾರ್ಥಕರ – ಬಯಸಿದ್ದನ್ನು ಉಂಟುಮಾಡುವ
- ಇಷ್ಟಾವಾಪ್ತಿ – ಬಯಸಿದ್ದನ್ನು ಪಡೆಯುವುದು
- ಇಷ್ಟಿ – ಯಾಗ; ಪೂಜೆ; ಬಯಕೆ
- ಇಷ್ಟು – ಈ ಪ್ರಮಾಣದ
- ಇಸಿಸು – ಬಾಣಪ್ರಯೋಗ ಮಾಡಿಸು
- ಇಸು – ಬಾಣಪ್ರಯೋಗ ಮಾಡು; ಬಾಣ
- ಇಸುವೆಸ – ಊಳಿಗ; ಸೇವಕವೃತ್ತಿ
- ಇಸುವೆಸಕೆಯ್(ಕೈ) – ಸೇವೆಯಲ್ಲಿ ತೊಡಗಿಸಿಕೊ
- ಇಹ – ಇರುವಿಕೆ; ಈ ಲೋಕ
- ಇಹಗೆ – ಹೀಗೆ: ಈ ರೀತಿಯಾಗಿ
- ಇಹತ್ರೆ – ಇಹಲೋಕ; ಈ ಲೋಕದಲ್ಲಿ, ಜನ್ಮದಲ್ಲಿ
- ಇಹಭವ – ಇಲ್ಲಿ ಹುಟ್ಟಿದ
- ಇಳಾಗ್ರ – ಭೂಮಿಯ ಮೇಲ್ಭಾಗ
- ಇಳಾಚಕ್ರ – ಭೂಮಂಡಲ
- ಇಳಾತಳ – ಇಳಾಗ್ರ
- ಇಳಾಧಿಪ – ಭೂಮಿಯ ಒಡೆಯ, ರಾಜ
- ಇಳಾಭೃತ್ – ರಾಜ
- ಇಳಾಭೃತ್ಸುತ – ರಾಜನ ಮಗ
- ಇಳಾವಲ್ಲಭ – ಇಳಾಧಿಪ
- ಇಳಾವಳಯ – ಭೂಮಂಡಲ
- ಇಳಿ(ಂ)ಕೆ – ತಿರಸ್ಕಾರ, ಅವಜ್ಞೆ
- ಇಳಿಂಕೆಗೆಯ್ – ತಾತ್ಸಾರದಿಂದ ನೋಡಿ; ಪ್ರತಿಭಟಿಸು
- ಇಳಿಂಕೆಗೊಳ್ – ಕಡೆಗಣಿಸು; ಅಪಹಾಸಗೈ
- ಇಳಿಕೆಯ್- ತಾತ್ಸಾರದಿಂದ ನೋಡಿ
- ಇಳಿಕೆವಡೆ – ಉಪೇಕ್ಷೆಗೊಳಗಾಗು
- ಇಳಿಗಾ – ತಿರಸ್ಕರಿಸುವವನು
- ಇಳಿಗಿಣ್ಪು – ಹಿಮ್ಮಡಿ
- ಇಳಿದು – ಕೀಳಾದ; ಕ್ಷೀಣವಾದ
- ಇಳಿದಾಗು – ಕ್ಷೀಣವಾಗು
- ಇಳಿಪು – ಕೆಳಕ್ಕೆ ತರು, ಇಳಿಸು
- ಇಳಿ(ಳ)ಲೆ – ಸುಂದರಿ
- ಇಳಿಸು – ಕೀಳುಗೈ; ಧಿಕ್ಕರಿಸು
- ಇಳೆ – ಭೂಮಿ; ಶಬ್ದ; ಅನ್ನ; ನೀರು; ಧಮನಿ; ಮನುವಿನ ಮಗಳು
Conclusion:
ಕನ್ನಡ ಇ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.