ಕನ್ನಡ ಎ ಅಕ್ಷರದ ಹಳೆಗನ್ನಡ  ಪದಗಳು – Kannada Words

Check out Kannada ae aksharada halegannadada padagalu , ಕನ್ನಡ ಎ ಅಕ್ಷರದ ಹಳೆಗನ್ನಡ  ಪದಗಳು ( ae halegannada Words in kannada ).

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಎ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( ae halegannada Words in kannada ) ತಿಳಿದುಕೊಳ್ಳೋಣ.

 ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.

ಕನ್ನಡ ಎ ಅಕ್ಷರ ಎಂದರೇನು?

ಕನ್ನಡ ವರ್ಣಮಾಲೆಯ ಎಂಟನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.

ಕನ್ನಡ ವರ್ಣಮಾಲೆಯ ಒಂಬತ್ತನೆಯ ಅಕ್ಷರ. ಹ್ರಸ್ವ ಸ್ವರ. ಸಂಸ್ಕøತದಲ್ಲಿ ಹ್ರಸ್ವ ಎಕಾರವಿಲ್ಲವಾಗಿ ಬ್ರಾಹ್ಮೀ ಲಿಪಿಯ ಲೇಖಗಳಲ್ಲಿ ಈ ಅಕ್ಷರದ ರೂಪ ದೊರೆಯದು. ಕನ್ನಡದಲ್ಲಿ ಈ ಲಿಪಿ ಮತ್ತು ಉಚ್ಛಾರಣೆ ಬಳಕೆಯಲ್ಲಿದ್ದರೂ ಪ್ರಾಚೀನ ಕನ್ನಡದ ಶಾಸನಗಳಲ್ಲಿ ಎ ಕಾರಕ್ಕೆ ಬದಲು ಏ ಕಾರವನ್ನೇ ಬಳಸಲಾಗಿದೆ. ಬಹುಶಃ ಇದು ಸಂಸ್ಕøತ ಪ್ರಭಾವದಿಂದ ಆಗಿರಬಹುದು. ಬರವಣಿಗೆಯಲ್ಲಿ ಒಂದೇ ಅಕ್ಷರ ಕಂಡುಬಂದರೂ ಸಂದರ್ಭಕ್ಕೆ ತಕ್ಕಂತೆ ಹ್ರಸ್ವವಾಗಿಯೊ ದೀರ್ಘವಾಗಿಯೊ ಉಚ್ಛರಿಸುವ ವಾಡಿಕೆ ಇತ್ತು. ಲಿಪಿಯ ದೃಷ್ಟಿಯಿಂದ ಈ ಅಕ್ಷರದ ಹ್ರಸ್ವ ಮತ್ತು ದೀರ್ಘ ರೂಪಗಳಿಗಿರುವ ವ್ಯತ್ಯಾಸ ಯಾವಾಗ ರೂಢಿಗೆ ಬಂತು ಎಂದು ಹೇಳುವುದು ಕಷ್ಟ. ಕ್ರಿ.ಶ.15ನೆಯ ಶತಮಾನದ ವಿಜಯನಗರ ಕಾಲದಲ್ಲಿ ವ್ಯಂಜನಾಕ್ಷರಗಳೊಂದಿಗಿನ ಎ ವರ್ಣದ ರೂಪ ಹೇಗಿತ್ತೆಂಬುದನ್ನು ಚಿತ್ರದಲ್ಲಿ ತೋರಿಸಿದೆ.

Check out Kannada Varnamale : ಕನ್ನಡ ವರ್ಣಮಾಲೆ

ಕನ್ನಡ ಅಕ್ಷರದ ಹಳೆಗನ್ನಡ  ಪದಗಳು – Kannada Words

 1. ಎಂ(ಚ)ಲ್ – ತಿಂದ ಮೇಲು ಉಳಿಯುವುದು; ಇತರರು ತಿಂದು ಮಿಕ್ಕದ್ದು
 2. ಎಂಜಲಿಸು – ಎಂಜಲುಮಾಡು
 3. ಎಂಟಡಿ – ಶರಭ
 4. ಎಂಟುಗೆಯ್ – ಎಂಟು ಭಾಗ ಮಾಡು
 5. ಎಂಟೆರ್ದೆ – ತುಂಬ ಧೈರ್ಯ
 6. ಎಂತಕ್ಕೆ – ಹೇಗಾದರೂ
 7. ಎಂತಪ್ಪ – ಎಂತಹ, ಎಂಥ
 8. ಎಂತಾನುಂ – ಹೇಗಾದರೂ, ಯಾವುದೇ
 9. ರೀತಿಯಲ್ಲಿಯಾದರೂ
 10. ಎಂತು – ಹೇಗೆ, ಯಾವ ರೀತಿ
 11. ಎಂತುಗೆ – ಹೇಗೆ
 12. ಎಂತುಟು – ಹೇಗೆ
 13. ಎಂದುಂ – ಯಾವಾಗಲೂ
 14. ಎಂದುದನೆನ್ – ಆಜ್ಞಾವರ್ತಿಯಾಗಿರು, ಹೇಳಿದಂತೆ ಕೇಳು
 15. ಎಂಬುಕೆಯ್ – (ಎಂಬುದಂ+ಕೆಯ್) ಅಂಗೀಕರಿಸು
 16. ಎಕ್ಕಛಾಯ – ಒಂದೇ ಬಣ್ಣ; ಇಂದ್ರನೀಲ
 17. ಎಕ್ಕಟಿ – ಗುಪ್ತವಾಗಿ, ಗುಟ್ಟಾಗಿ; ಏಕಾಂತ
 18. ಎಕ್ಕಟಗಲಿ – ಏಕಾಂಗವೀರ
 19. ಎಕ್ಕಟಿಗಾಳೆಗ – ದ್ವಂದ್ವಯುದ್ಧ
 20. ಎಕ್ಕಡಿ – ಪಗಡೆಯಾಟ
 21. ಎಕ್ಕತಕ್ಕು – ಸಮಾನಯೋಗ್ಯತೆ, ಅರ್ಹತೆ
 22. ಎಕ್ಕತಳ – ನಿಯಮಿತ ಜಾಗ
 23. ಎಕ್ಕತುಳ – (ಏಕತುಲ) ಒಂದೇ ತೂಕ;
 24. ಸಮಾನ; ದ್ವಂದ್ವಯುದ್ಧ
 25. ಎಕ್ಕತುಳಂ – ಅತಿಶಯವಾಗಿ
 26. ಎಕ್ಕಬಾಗೆ – ಒಂದೇ ಪಾಲು, ಭಾಗ
 27. ಎಕ್ಕಮ(ವ)ದ್ದಳೆ – ಒಂದು ಬಗೆಯ ಚರ್ಮವಾದ್ಯ
 28. ಎಕ್ಕರ – ಸೂಕರ, ಕಾಡುಹಂದಿ; ಒಂಟಿ ಸಲಗ
 29. ಎಕ್ಕಲಗಾಣ – ಒಂಟಿ ಹಾಡುಗಾರ
 30. ಎಕ್ಕಲದುಂಬಿ – ಒಂಟಿದುಂಬಿ
 31. ಎಕ್ಕಲವಂದಿ – ಒಂಟಿ ಹಂದಿ
 32. ಎಕ್ಕಲವಿರಿ – ಎಲ್ಲಮ್ಮ, ರೇಣುಕಾದೇವಿ
 33. ಎಕ್ಕಲಾವಣ – ಏಕ ನೆಲೆ. ಒಂಟಿ ಅಂಗಡಿ
 34. ಎಕ್ಕವಡ – ಎಕ್ಕಡ, ಪಾದರಕ್ಷೆ
 35. ಎಕ್ಕವತ್ತ – ಒಂಟಿ ಎಲೆಯಿರುವ
 36. ಎಕ್ಕಸ – ರಭಸ, ವೇಗ
 37. ಎಕ್ಕಸಕ್ಕ – ಹರಟುವಿಕೆ, ಅಸಂಬದ್ಧ ನುಡಿ; ಅಸಂಬದ್ಧಪ್ರಲಾಪಿ
 38. ಎಕ್ಕಸಕ್ಕತನ – ಅಸಂಬದ್ಧತೆ; ಕರುಬುತನ; ನಿಂದೆ
 39. ಎಕ್ಕಸರ – ಒಂಟಿ ಎಳೆಯ ಸರ; ಒಂದೇ ಬಾಣ; ಒಂದೇ ಧ್ವನಿ; ನಿರಂತರತೆಎಕ್ಕಸಿಕ್ಕ – ಎಕ್ಕಸಕ್ಕ
 40. ಎಕ್ಕಳವಟ್ಟ – ಏಕವಸ್ತ್ರ; ಉಡುವ ಒಂದೇ ಬಟ್ಟೆ
 41. ಎಕ್ಕಾವಳಿ – ಏಕಾವಳಿ, ಒಂದೆಳೆಯ ಸರ
 42. ಎಕ್ಕು – ಹಿಂಜು, ಬಿಡಿಸು, ಬೇರ್ಪಡಿಸು; ಭೇದಿಯಾಗು
 43. ಎಕ್ಕೆ – ಒಟ್ಟಿಗೆ; ಸಂಗಡ; ಒಂದು ಜಾತಿಯ ಗಿಡ; ಮಂಚದ ಚೌಕಟ್ಟು; ಮನೆ
 44. ಎಕ್ಕೆಕ್ಕೆ – ಮೇಲೆ ಮೇಲೆ; ಒಟ್ಟಾಗಿ
 45. ಎಕ್ಕೆಗುಟ್ಟು – ಗೊಳಗುಟ್ಟಿಕೊ
 46. ಎಗ್ಗ – ಮೂಢ, ಗಾಂಪ
 47. ಎಗ್ಗತನ – ಹೆಡ್ಡತನ
 48. ಎಗ್ಗಿಕೆ – ಹೆಡ್ಡತನ
 49. ಎಗ್ಗು – ದಡ್ಡತನ; ಬಿಕ್ಕಳಿಸು; ನಾಚಿಕೆ
 50. ಎಚ್ಚಿಕೊಳ್ – ಬಳಿದುಕೊ, ಲೇಪಿಸಿಕೊ
 51. ಎಚ್ಚು – ಬಳಿ, ಲೇಪಿಸು
 52. ಎಚ್ಚುಪಾಯ್ – ಚಿಮ್ಮಿ ಹರಿ
 53. ಎಟ್ಟು – ನಿಲುಕು, ಕೈಗೆ ಸಿಕ್ಕು
 54. ಎಟ್ಟುಗೆ – ಬಟ್ಟಲು
 55. ಎಡಂಬಡು – ಅಸಮಾಧಾನ; ಎಡವಟ್ಟು
 56. ಎಡಗ – ನಿಷ್ಪ್ರಯೋಜಕ
 57. ಎಡಗಲಿಸು – ಎಡಕ್ಕೆ ಸರಿಸು, ಬದಿಗೊತ್ತು
 58. ಎಡಚತನ – ಎಡಗೈಯನ್ನೇ ಬಳಸುವುದು
 59. ಎಡ(ಂ)ಪು – ಎಡವು, ತೊಡರಿ ಬೀಳು
 60. ಎಡರ್(ರು) – ಅಡಚಣೆ; ಕಷ್ಟ
 61. ಎಡವ – ದನಕಾಯುವವನು
 62. ಎಡವಕ್ಕ – ಎಡದ ಭಾಗ, ಮಗ್ಗುಲು
 63. ಎಡವೆಗಲ್ – ಎಡಭಾಗದ ಹೆಗಲು
 64. ಎಡೆ – ಸ್ಥಳ; ಸಂದರ್ಭ; ಮಧ್ಯೆ; ಸಮಾನ ; ಅವಕಾಶ; ನೈವೇದ್ಯ; ಕೀಳಾಗಿರುವಿಕೆ; ಹೆಚ್ಚಾಗಿ; ಊಟ
 65. ಎಡಗಂಡಿಕೆ – ಮಂತ್ರವಾದಿ
 66. ಎಡಗಟ್ಟು – ಕಟ್ಟುಪಾಡು, ನಿಯಮ
 67. ಎಡೆಗಲ(ಲಿ)ಸು – ಜೊತೆಗೂಡಿಸು
 68. ಎಡೆಗಾಣ್ – ಜಾಗವನ್ನು ನೋಡಿ, ಆಶ್ರಯ ಹೊಂದು
 69. ಎಡೆಗಾಳ – ಸುಮಾರು ಗಾತ್ರದ ಗಾಳ
 70. ಎಡೆಗಿ(ಗೆ)ಡಿಸು – ನೆಲೆ ತಪ್ಪಿಸು
 71. ಎಡೆಗಿ(ಗೆ)ಡು – ಸ್ಥಳಾಂತರ ಹೊಂದು; ನೆಲೆಗೆಡು
 72. ಎಡೆಗು(ಗೊ)ಡು – ಆಸ್ಪದ ನೀಡು
 73. ಎಡೆಗೆಯ್ – ಜಾಗ ಕೊಡು; ಅವಕಾಶ ಕೊಡು
 74. ಎಡೆಗೊಳ್ – ಅವಕಾಶ ಹೊಂದು; ಆಶ್ರಯಿಸು
 75. ಎಡೆಗೊಳಿಸು – ಅಳವಡಿಸು, ಹೊಂದಿಸು
 76. ಎಡೆಗೋ – ನಡುವೆ ಸೇರಿಕೊ; ತೂರಿಕೊ
 77. ಎಡೆದೆ¾ಪು – ನಡುವಣ ಅವಕಾಶ; ಬಿಡುವು
 78. ಎಡೆನುಡಿ – ನಡುವಣ ನುಡಿ
 79. ಎಡೆಮಡಗು – ತಡಮಾಡು; ಅವಕಾಶ ಕೊಡು; ದಾಕ್ಷಿಣ್ಯ ಮಾಡು; ಮುಚ್ಚಿಕೊ
 80. ಎಡೆಮಾಡಿಸು – ಊಟ ಬಡಿಸು
 81. ಎಡೆಮಾಡು – ಅವಕಾಶವೊದಗಿಸು; ನೈವೇದ್ಯಮಾಡು
 82. ಎಡೆಯ – ದನಗಾಹಿ
 83. ಎಡೆಯಾಡು – ಓಡಾಡು, ತಿರುಗಾಡು
 84. ಎಡೆಯಿಡು – ಮಧ್ಯೆ ಇಡು
 85. ಎಡೆಯುಡುಗು – ವಿಚ್ಛೇದಗೊಳ್ಳು; ಕೊಂಡಿ
 86. ಎಡೆಯೊತ್ತು – ಅದುಮು
 87. ಎಡೆವಗಲ್ – ನಡುಹಗಲು
 88. ಎಡೆವಟ್ಟಲ್ – ಊಟದ ತಟ್ಟೆಯ ಜೊತೆಗಿನ ಬಟ್ಟಲು
 89. ಎಡೆವಟ್ಟೆ – ಎಡೆ+ಬಟ್ಟೆ, ನಡುವಣ ದಾರಿ
 90. ಎಡೆವಡು – ಎಡೆ+ಪಡು, ಮಧ್ಯೆ ಮಲಗು
 91. ಎಡೆವಡೆ – ಅವಕಾಶ ಪಡೆ
 92. ಎಡೆವಲಿ – ನಡುನಡುವೆ ಕೊಡುವ ಬಲಿ(?)
 93. ಎಡೆಮಾ(ವಾ)ತು – ನಡುವಣ ಮಾತು
 94. ಎಡೆವಾಯ್ – ಮಧ್ಯೆ ಬರು
 95. ಎಡೆವಿಡಿಸು – ಜಾಗ ಬಿಡಿಸು
 96. ಎಡೆವು(ವೊ)ಗು – ಮಧ್ಯೆ ಪ್ರವೇಶಿಸು
 97. ಎಡೆವೆರಲ್ – ನಡುವಣ ಬೆರಳು
 98. ಎಡೆವೆ¾ು – ಸ್ಥಳವನ್ನು ಪಡೆ; ಅವಕಾಶ ಪಡೆ
 99. ಎಡೆವೇಡು – ಜಾಗಕ್ಕಾಗಿ ಬೇಡು
 100. ಎಡೆವೋಗು – ಸಂಕೇತಸ್ಥಾನಕ್ಕೆ ಹೋಗು
 101. ಎಡ್ಡ – ಸುಂದರ
 102. ಎಡ್ಡತಾಣ – ರಮ್ಯವಾದ ಜಾಗ
 103. ಎಡ್ಡಮಾಗು – ಸುಂದರವಾಗು
 104. ಎಡ್ಡಮಿಂಡಿ – ಚೆಲುವೆ ಹೆಣ್ಣು
 105. ಎಣ್ – ಎಂಟು; ಎಣಿಕೆಮಾಡು
 106. ಎ(ಏ)ಣಗೋಣ – ಗರ್ವವಕ್ರತೆ; ಕೊಂಕು; ಬಿಂಕ
 107. ಎಣಿಕೆ – ಲೆಕ್ಕ, ಅಂದಾಜು
 108. ಎಣಿಕೆಗಳೆ – ಲೆಕ್ಕಿಸದಿರು
 109. ಎಣಿಕೆದಪ್ಪು – ಲೆಕ್ಕ ತಪ್ಪು
 110. ಎಣಿಕೊಳ್ – ಲೆಕ್ಕಹಾಕುಎಣಿಲ್ – ಸುಂದರಿಎಣಿಸು – ಲೆಕ್ಕಹಾಕು; ಪರಿಗಣಿಸು
 111. ಎಣೆ – ಸಮ; ಹೊಂದಿಕೆ; ಜೋಡಿ
 112. ಎಣೆಗೊಳ್ – ಸಮನಾಗು
 113. ಎಣೆವಕ್ಕಿ – ಜೋಡಿಹಕ್ಕಿ, ಚಕ್ರವಾಕ
 114. ಎಣೆವರ್ – ಸರಿಸಮನಾಗು
 115. ಎಣ್ಗಾವುದ – ಎಂಟು ಗಾವುದ
 116. ಎಣ್ಛಾಸಿರ್ವರ್ – ಎಂಟು ಸಾವಿರ ಮಂದಿ
 117. ಎಣ್ದೆಸೆ – ಎಂಟು ದಿಕ್ಕು
 118. ಎಣ್ಪತ್ತು – ಎಂಬತ್ತು
 119. ಎತ್ತಕ – ಸತ್ತಿಗೆಯ ಮರ
 120. ಎನತು(ತ್ತು) – ನನ್ನದು
 121. ಎನ್ಬರಿಜು – ಎಂಟು ರೂಪಗಳು
 122. ಎಣ್ಬಟ್ಟೆ – ಎಮಟು ದಾರಿಗಳು
 123. ಎಣ್ಬರ್ – ಎಂಟು ಮಂದಿ
 124. ಎಣ್ಬೆರಲ್ – ಎಂಟು ಬೆರಳು
 125. ಎತ್ತ – ಎಲ್ಲಿ, ಯಾವ ಕಡೆ
 126. ಎತ್ತಣ – ಎಲ್ಲಿಯ
 127. ಎತ್ತಲ್(ಲು) – ಎಲ್ಲಿ, ಎಲ್ಲ ಕಡೆಯೂ
 128. ಎತ್ತಂ – ಎಲ್ಲೆಡೆಯೂ
 129. ಎತ್ತಿಸು – ಮೇಲೆ ಹಿಡಿಸು
 130. ಎತ್ತು – ಮೇಲೆ ಹಿಡಿ; ನೀರು ಹಾಯಿಸು
 131. ಎತ್ತುಂಗೋಲ್ – ಕೂರಂಬು
 132. ಎತ್ತುಂಗೋಲಿಕ್ಕು – ಕೂರಂಬು ಪ್ರಯೋಗಿಸು
 133. ಎತ್ತುಂಗೋಲ್ವೋಗು – ಕೂರಂಬಿನ
 134. ತಿವಿತಕ್ಕೊಳಗಾದಎತ್ತಗುಂಡು – ಎತ್ತಿದ ಗುಂಡು
 135. ಎದೆಗುದಿಪ – ಎದೆಗುದಿತ, ಹೃದಯ ವೇದನೆ
 136. ಎನ್ – ಮಾತಾಡು; ಆಗಿದ್ದೇನೆ
 137. ಎನತು(ತ್ತು) – ನನ್ನದು
 138. ಎನಸುಂ – ಎಷ್ಟೋ, ತುಂಬ
 139. ಎನಿತು(ತ್ತು) – ಎಷ್ಟು
 140. ಎನಿವಿರಿದು – ಎಷ್ಟು ದೊಡ್ಡದು
 141. ಎನಿಸು – ಎನ್ನುವಂತೆ ಮಾಡು, ಅನ್ನಿಸು; ಎಷ್ಟು
 142. ಎನ್ನ – ಎಂತಹ
 143. ಎನ್ನದು – ಎಂಥದು
 144. ಎನ್ನೆಗಂ – ಎಲ್ಲಿಯವರೆಗೆ
 145. ಎನ್ನೆವರಂ – ಎನ್ನೆಗಂ
 146. ಎಬ್ಬಟ್ಟು – ಬೆನ್ನಟ್ಟು
 147. ಎಬ್ಬು – ಎ¿್ಬು, ಮೇಲೆಬ್ಬಿಸು
 148. ಎಮ – ಒಪ್ಪಿಗೆ ಸೂಚಕ ಪ್ರತ್ಯಯ (ಉದಾ:
 149. ಎಮೆಯಿಕ್ಕು – ರೆಪ್ಪೆ ಮಿಟುಕಿಸು
 150. ಎಮೆಯಿಕ್ಕದವರ್ – ಕಣ್ಣು ಮಿಟುಕಿಸದವರು, ದೇವತೆಗಳ
 151. ಎಯ್ – ಮುಳ್ಳುಹಂದಿ, ಎಕ್ಕಲ
 152. ಎಯ್ತರ್ – ಐತರು, ಬರು, ಹತ್ತಿರ ಬರು
 153. ಎಯ್ದಿಸು – ಐದಿಸು, ಬಂದು ಸೇರುವಂತೆ ಮಾಡು
 154. ಎಯ್ದು – ಬಂದು ಸೇರು; ಸಮರ್ಥವಾಗು
 155. ಎಯ್ದೆ – ಐದೆ, ಚೆನ್ನಾಗಿ; ಅಯ್ದೆ (ಸುಮಂಗಲಿ)
 156. ಎಮ್ಮಂದಿಗರ್ – ನಮ್ಮಂಥವರು
 157. ಎಯ್ಯಪಂದಿ – ಮುಳ್ಳುಹಂದಿ
 158. ಎಯ್ಯಮಿ(ಮೃ)ಗ – ಮುಳ್ಳುಹಂದಿ
 159. ಎರ – ಎಲಚಿ ಮರ
 160. ಎರಂಗುಡು – ಕಡಕೊಡು
 161. ಎರಕ – ಅಚ್ಚು ಹಾಕು; ಅಚ್ಚು
 162. ಎರಡಿಡು – ಎರಡಾಗಿ ಮಾಡು
 163. ಎರಡುಗೇಳು – ಬೇರೇನನ್ನು ಕೇಳು; ಎರಡನೆಯ ಬಾರಿ ಕೇಳಿಸಕೊ
 164. ಎರಡುಗೊಳ್ – ಎರಡನೆಯದನ್ನು ತೆಗೆದುಕೊ; ಎರಡು ತೆಗೆದುಕೊ
 165. ಎರಡೆಣಿಸು – ಅನ್ಯವನ್ನು ಭಾವಿಸು; ಎರಡು ಬಗೆ
 166. ಎರಲ್ – ಎಲರ್, ಗಾಳಿ
 167. ಎರಲೆ(ಳೆ) – ಜಿಂಕೆ
 168. ಎರಲೆಧೀಂಕು – ಜಿಂಕೆಯ ನೆಗೆತ; ಹಾಗೆ ನೆಗೆಯುವ ಒಂದು ಆಟ
 169. ಎರವಣ್ಣು – ಎಲಚಿಹಣ್ಣು
 170. ಎರವಿಗೊಳ್ – ಬೇಡಿಕೊ
 171. ಎರವು – ಸಾಲ
 172. ಎರಳ್ಮಾಡು – ಎರಡಾಗಿ ಮಾಡು ಪ್ರಾಣಿಗಳಿಗೆ ಹಾಕುವ ಆಹಾರ; ಹಾವಿನ ಪೊರೆ; ಜೊತೆಗಾರ; ಅಂಚು; ದಡ
 173. ಎರೆಗೆಯ್ – ಪೊರೆಯನ್ನು ಬಿಡು; ಎರೆ (ಕಪ್ಪು) ಹೊಲ
 174. ಎರೆಗೊಳ್ – ತಿನ್ನುತ್ತಿರು
 175. ಎರೆಯ ಪೆಟ್ಟೆ – ಮಣ್ಣ ಹೆಂಟೆ
 176. ಎರೆಯಿಕ್ಕು – ಪೊರೆ ಬಿಡು
 177. ಎರೆವಚ್ಚಾಡು – ಎರಡಾಗಿ ಹಂಚಿ (ಎರಡು
 178. ಗುಂಪಾಗಿ ಮಾಡಿ) ಆಡು
 179. ಎರೆವಚ್ಚು – ಎರಡಾಗಿ ವಿಭಾಗಿಸು
 180. ಎರ್ದೆ – ಎದೆ, ಹೃದಯ
 181. ಎರ್ದೆಕೊ(ಗೊ)ಳ್ – ಹೃದಯಂಗಮವಾಗು;
 182. ಮನಸ್ಸಿಗೆ ತಂದುಕೊ; ಧೈರ್ಯವಹಿಸು
 183. ಎರ್ದೆಗರಗು – ಎದೆ ಕರಗು, ಮರುಕ ಹೊಂದು
 184. ಎರ್ದೆಗಾಯ್ – ಆತ್ಮರಕ್ಷಣೆ ಮಾಡಿಕೊ
 185. ಎರ್ದೆಗಿಚ್ಚು – ಎದೆಯ ಉರಿ; ದುಃಖ
 186. ಎರ್ದೆಗುಂದು – ಧೈರ್ಯಗುಂದು
 187. ಎರ್ದೆಗಿ(ಗೆ)ಡು – ಎರ್ದೆಗುಂದು
 188. ಎರ್ದೆಗು(ಗೊ)ಡು – ಧೈರ್ಯ ತುಂಬು; ಮನಸ್ಸು ಕೊಡು
 189. ಎರ್ದೆಗೆಚ್ಚು – ಎದೆಯ ಕೆಚ್ಚು, ಧೈರ್ಯ
 190. ಎರ್ದೆಗೊಳ್ – ಮನಸ್ಸಿಗೆ ತಂದುಕೊ, ಒಪ್ಪಿಕೊ
 191. ಎರ್ದೆಗೊಳಿಸು – ಮನಸ್ಸು ಗೆಲ್ಲು
 192. ಎರ್ದೆದಲ್ಲಣ – ಎದೆಯ ತಲ್ಲಣ
 193. ಎರ್ದೆನೋ – ಮನಸ್ಸಿನ ನೋವು
 194. ಎರ್ದೆಯಂಟು – ಎದೆಗೆ ಅಂಟಿಕೊ, ನಾಟು
 195. ಎರ್ದೆಯಾಣ್ಮ – ಪ್ರಿಯಕರ
 196. ಎರ್ದೆಯಾರು – ಮನವಾರು, ಹೃದಯಕ್ಕೆ ತೃಪ್ತಿ ತರು
 197. ಎರ್ದೆಯಿಕ್ಕು – ಧೈರ್ಯ ಕುಗ್ಗು, ಮನಸ್ಸು ಕುಸಿ
 198. ಎರ್ದೆಯುಗಿ – ಎದೆಯನ್ನು ಸೀಳು
 199. ಎರ್ದೆಯುರ್ಚು – ಎದೆಗೆ ತಿವಿ, ಚುಚ್ಚು
 200. ಎರ್ದೆಯುರ್ಬು – ಎದೆ ಉಬ್ಬು
 201. ಎರ್ದೆಯೊಡೆ – ಧೈರ್ಯಗುಂದು
 202. ಎರ್ದೆವತ್ತುಗೆ – ಎದೆ ಹತ್ತುವಿಕೆ, ಸೇರುವಿಕೆ
 203. ಎರ್ದೆವ¿ಲ್ – ಎದೆಯ ಅಳಲು
 204. ಎರ್ದೆವುಗು – ಎದೆಯನ್ನು ಹೊಗು; ಮನಸ್ಸನ್ನು ಸೇರು
 205. ಎರ್ಮೆ(ಮ್ಮೆ)ವೋರಿ – ಎಮ್ಮೆಯ ಹೋರಿ, ಕೋಣ
 206. ಎಲರ್ – ಗಾಳಿ
 207. ಎಲರುಣಿ – ಗಾಳಿಯನ್ನು ಉಣ್ಣುವಂಥದು, ಹಾವು
 208. ಎಲರ್ಗೆಳೆಯ – ವಾಯುವಿನ ಮಿತ್ರ, ಅಗ್ನಿ
 209. ಎಲರ್ಚು – ಚೇತನಗೊಳ್ಳು
 210. ಎಲರ್ವಟ್ಟೆ – ಗಾಳಿವಟ್ಟೆ, ವಾಯುಮಾರ್ಗ
 211. ಎಲರ್ವೊಯ್ಲು – ಗಾಳಿಯ ಹೊಡೆತ
 212. ಎಲವ – ಬೂರುಗ, ಶಾಲ್ಮಲೀ
 213. ಎಲವೊ – ತಿರಸ್ಕಾರ-ಕೋಪದಿಂದ ಕೂಡಿದ ಸಂಬೋಧನೆಎಲುವಡೆ – ಹೊಳಪು ಹೊಂದು
 214. ಎಲೆ – ಆಶ್ಚರ್ಯಸೂಚಕವಾದ ಅವ್ಯಯ
 215. ಎಲೆಗೆ – ಹೆಂಗಸನ್ನು ಸಂಬೋಧಿಸುವ ರೀತಿ
 216. ಎಲೆಮಿಡುಕು – ಎಲೆಯಂತೆ ಅಲುಗಾಡು(ವುದು)
 217. ಎಲೆಯಿಕ್ಕು – ಚಿಗುರು
 218. ಎಲೆವನಿ – ಎಲೆ+ಪನಿ, ಎಲೆಯಿಂದ ಬೀಳುವ ಹನಿ
 219. ಎಲೆವರದು – ಎಲೆ+ಪರದು, ಎಲೆಯ ವ್ಯಾಪಾರ
 220. ಎಲೆವಸರ – ಎಲೆ+¥ಪಸರ, ಎಲೆಯ ಅಂಗಡಿ
 221. ಎಲೆವಿಜ್ಜಣಿಗೆ – ಎಲೆ+ಬಿಜ್ಜಣಿಗೆ, ಎಲೆಯ ಬೀಸಣಿಗೆ
 222. ಎಲೆಲೊ – ತಿರಸ್ಕಾರದಿಂದ ಗಂಡಸನ್ನು ಸಂಬೋಧಿಸುವ ಬಗೆ
 223. ಎಲ್ಲದು – ಎಲ್ಲ, ಸಮಸ್ತ
 224. ಎಲ್ಲಿತು(ತ್ತು) – ಎಲ್ಲಿಯದು, ಎಲ್ಲಿರುವುದು
 225. ಎಲ್ಲಿದ – ಎಲ್ಲಿಯವನು
 226. ಎಲ್ವಡಗು – (ಎಲ್ವು+ಅಡಗು) ಮೂಳೆ ಮಾಂಸ
 227. ಎಲ್ವು – ಎಲುಬು, ಮೂಳೆ
 228. ಎವೆಯಿಕ್ಕದರ್ – ಕಣ್ಣ ರೆಪ್ಪೆ ಮಿಟುಕಿಸದವರು, ದೇವತೆಗಳು
 229. ಎಸಕ – ಕಾಂತಿ; ವೈಭವ; ಅತಿಶಯ; ಕೆಲಸ;
 230. ವ್ಯವಹಾರ; ಉದ್ಯೋಗ; ವ್ರತ
 231. ಎಸಕಂಗಾಯ್ – ಕರ್ತವ್ಯಪಾಲಿಸು
 232. ಎಸಕಂಗಿಡು – ಕಾಂತಿಗುಂದು; ಕೆಲಸಗೆಡು
 233. ಎಸಗಿಸು – ಉಂಟುಮಾಡಿಸು
 234. ಎಸಗು – ಮಾಡು; ಒದಗಿಸು; ರಥ ನಡೆಸು; ಗಾಳಿ ಬೀಸು; ಯತ್ನಿಸು
 235. ಎಸಡಿ(ಡು) – ಏಡಿ; ಆಮೆ
 236. ಎಸಪಂ – ನಡೆಸುವವನು, ಸಾರಥಿ
 237. ಎಸರ್ಗೊಳ್ – ಕುದಿಯಲು ತೊಡಗು
 238. ಎಸರ್ – ಎಸರು, ಅಡಿಗೆಗೆಂದು ಕುದಿಯುವ ನೀರು
 239. ಎಸು – ಭಾಣಪ್ರಯೋಗಿಸು
 240. ಎಸುಗೆ – ಎಸೆತ
 241. ಎಸೆ – ಬಾಣ ಪ್ರಯೋಗಿಸು; ಬಿಸುಡು; ಶೋಭಿಸು
 242. ಎಹಗೆ – ಹೇಗೆ
 243. ಎಳ್ – ಎಳ್ಳು, ತಿಲ
 244. ಎಳಕ – ಅಲುಗಾಟ
 245. ಎಳಗಂದಿ – ಈದು ಕೆಲವೇ ಕಾಲವಾಗಿರುವ ಹಸು, ಎಮ್ಮೆ; ನವಪ್ರಸೂತ ಪ್ರಾಣಿ
 246. ಎಳಗಂಪು – ನಸುಗಂಪು
 247. ಎಳಗಳಿಕೆ – ಎಳೆಯ ಮೊಗ್ಗು
 248. ಎಳಗಾಯ್ – ಹೀಚುಗಾಯಿ
 249. ಎಳಗಾರ್ – ಮುಂಗಾರು, ಮಳೆಗಾಲದ ಆರಂಭ
 250. ಎಳಗಾವು – ಕೋಮಲವಾದ ಹೂದಂಟು
 251. ಎಳಗಿಳಿವಿಂಡು – ಮರಿಗಿಳಿಗಳ ಹಿಂಡು
 252. ಎಳಗೂಸು – ಎಳೆಯ ಮಗು
 253. ಎಳಗೆಂಪು – ನಸುಗೆಂಪು
 254. ಎಳಗೊಂಬು – ಎಳೆಯ ಕೊಂಬೆ
 255. ಎಳಗೊನರ್ – ಎಳೆಯ ಕುಡಿ
 256. ಎಳಗೌಂಗು – ಎಳೆಯ ಅಡಕೆಮರ
 257. ಎಳಜವ್ವನೆ – ಎಳೆಯ ಹರೆಯದವಳು
 258. ಎಳಜೊನ್ನ – ನಸು ಬೆಳದಿಂಗಳು
 259. ಎಳದಳಿರ್ – ಎಳೆಯ ಚಿಗುರು
 260. ಎಳ(ಳೆ)ದಳಿಸು – ಎಳವೆಯಿಂದ ಹೊಳೆ
 261. ಎಳದಾವರೆ – ಏಳೆಯ ತಾವರೆ
 262. ಎಳದಿಂಗಳ್ – ಎಳೆಯ ಚಂದ್ರ, ಬಾಲಚಂದ್ರ
 263. ಎಳದು – ಎಳೆಯ; ಕೋಮಲವಾದ; ಅಲುಗಾಡು
 264. ಎಳದೆಂಗು – ಎಳೆಯ ತೆಂಗು, ಎಳನೀರು ಕಾಯಿ
 265. ಎಳನನೆ – ಎಳೆಯ ಮೊಗ್ಗು
 266. ಎಳೆನವಿಲ್ – ನವಿಲಿ ಮರಿ
 267. ಎಳನೀರ್ – ಸೀಯಾಳ
 268. ಎಳನೀರ್ವೂ – ಎಳೆಯ ತಾವರೆ
 269. ಎಳನೀರ್ವೊನಲ್ – ತಿಳಿನೀರಿನ ಪ್ರವಾಹ
 270. ಎಳನೀಲ – ರಾಜಾವರ್ತ ಎಂಬ ರತ್ನ
 271. ಎಳಮನ – ಕೋಮಲ ಮನಸ್ಸು
 272. ಎಳಮಾಮರ – ಎಳೆಯ ಮಾವಿನ ಮರ
 273. ಎಳಮಾವು – ಎಳಮಾಮರ
 274. ಎಳಮಿಂಚು – ಚಿಕ್ಕ ಮಿಂಚು
 275. ಎಳಮುತ್ತು – ಸಣ್ಣ ಮುತ್ತು
 276. ಎಳವರ – ಎಳೆಯ ಮರ
 277. ಎಳವಸಲೆ – ಎಳೆಯ ಹಸಲೆ, ಹುಲ್ಲು
 278. ಎಳವಳಿಕು – ಎಳೆಯ ಸ್ಫಟಿಕ
 279. ಎಳವಳ್ಳಿ – ಎಳೆಯ ಬಳ್ಳಿ
 280. ಎಳವಾಸು – ಮೃದುವಾದ ಹಾಸಿಗೆ
 281. ಎಳವಾಸೆ – ಎಳೆಯ ಹಾವಸೆ, ಪಾಚಿ
 282. ಎಳವಾಳೆ – ಬಾಳೆಯ ಮೀನು
 283. ಎಳವಾ¿õÉ – ಎಳೆಯ ಬಾಳೆಗಿಡ
 284. ಎಳವಿದಿರ್ – ಎಳೆಯ ಬಿದಿರು
 285. ಎಳವಿಸಿಲ್ – ಎಳೆ ಬಿಸಿಲು
 286. ಎಳವು – ಆಜ್ಞೆಮಾಡು
 287. ಎಳವುಲ್ – ಎಳೆಯ ಹುಲ್ಲು
 288. ಎಳವೆಣ್ – ಎಳೆಯ ಹೆಣ್ಣು
 289. ಎಳವೆಳಗು – ನಸು ಬೆಳಕು
 290. ಎಳವೇಟ – ಪ್ರೇಮಾಂಕುರ
 291. ಎಳಸು – ಆಸೆಪಡು; ವ್ಯಾಪಿಸು
 292. ಎಳೆ – ಇಳಾ, ಭೂಮಿ
 293. ಎಳೆಗನ್ನಡವಕ್ಕಿ – ಎಳೆಯ ಕನ್ನಡವಕ್ಕಿ; ಮರಿಗಿಳಿ
 294. ಎಳೆತಳಲ್ – ಚಿಗುರು
 295. ಎಳೆತೆಗೆ – ಜಗ್ಗುವಿಕೆ
 296. ಎಳೆದೇರ – ಭೂಮಿಯನ್ನೇ ರಥವಾಗುಳ್ಳವನು, ಈಶ್ವರ
 297. ಎಳ್ಕಳ – ಯುದ್ಧಕಣ
 298. ಎಳ್ತರ – ಎತ್ತರ; ಅಟಾಟೋಪ
 299. ಎಳ್ಳನಿತು – ಏಳ್ಳಿನಷ್ಟು, ಸ್ವಲ್ಪ
 300. ಎಳ್ಳುಂಡೆ – ಎಳ್ಳಿನ ಉಂಡೆ

Conclusion:

ಕನ್ನಡ ಅಕ್ಷರದ ಹಳೆಗನ್ನಡ  ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.

Similar Posts

0 0 votes
Article Rating
Subscribe
Notify of
guest

0 Comments
Inline Feedbacks
View all comments