ಕನ್ನಡ ಸ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada sa aksharada halegannadada padagalu , ಕನ್ನಡ ಸ ಅಕ್ಷರದ ಹಳೆಗನ್ನಡ ಪದಗಳು (sA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಸ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( sA halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ
ಕನ್ನಡ ಸ ಅಕ್ಷರ ಎಂದರೇನು?
ಸ’, ಕನ್ನಡ ವರ್ಣಮಾಲೆಯ ಎಂಟನೇ ಅವರ್ಗೀಯ ವ್ಯಂಜನವಾಗಿದೆ. ವತ್ಸ್ರ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿ.
ಅಶೋಕನ ಕಾಲದ ಈ ಅಕ್ಷರಕ್ಕೂ ಈಗಿನ ಅದೇ ಅಕ್ಷರಕ್ಕೂ ಸಾಮ್ಯವಿರುವ ಅಂಶ ಚೆನ್ನಾಗಿ ತಿಳಿದುಬರುತ್ತದೆ. ಕದಂಬ ಕಾಲದ ಚೌಕತಲೆಯು ಮುಂದೆ ತಲೆಕಟ್ಟಾಗಿ ಪರಿವರ್ತಿತವಾಗಿ ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಸ್ಥಿರಗೊಳ್ಳುತ್ತದೆ. ಅದೇ ರೂಪವೇ ಹೊಯ್ಸಳ, ಕಳಚುರಿ ಮತ್ತು ಸೇವುಣರ ಕಾಲಗಳಲ್ಲಿಯೂ ಮುಂದುವರಿ ಯುತ್ತದೆ.
ಆದರೆ ವಿಜಯನಗರ ಅರಸರ ಕಾಲದಲ್ಲಿ ತಲೆಕಟ್ಟಿನ ಕೆಳಗಿದ್ದ ರೇಖೆಯು ಅದೃಶ್ಯವಾಗಿ, ಅದೇ ರೂಪವೇ ಹದಿನೆಂಟನೆಯ ಶತಮಾನದಲ್ಲಿಯೂ ಮುಂದುವರಿಯುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಸ ಅಕ್ಷರದ ಹಳೆಗನ್ನಡ ಪದಗಳು – Kannada Words
- ಸಂಕ – ಶಂಖ
- ಸಂಕಟ – ಇಕ್ಕಟ್ಟಾದ, ದಟ್ಟವಾದ; ವ್ಯಥೆ
- ಸಂಕಡಿ – ಇಕ್ಕಟ್ಟು; ದುಃಖ; ರಿಕಾಪು
- ಸಂಕಡಿಗೊಳ್ – ದುಃಖಪಡು
- ಸಂಕರಗೊಳ್ – ಬೆರಕೆ ಹೊಂದು
- ಸಂಕರ್ಷಣ – ಬಲರಾಮ
- ಸಂಕಲೆ – ಬೇಡಿ
- ಸಂಕಲ್ಪನವಧೆ – ಪೂರ್ವನಿರ್ಧಾರಿತ ಕೊಲೆ
- ಸಂಕಲ್ಪಹಿಂಸೆ – ಹಿಂಸೆಗೆ ಮಾನಸಿಕ ಒಪ್ಪಿಗೆ
- ಸಂಕಾಶ – ಸಮೀಪದ; ಹೋಲಿಕೆಯಿರುವ; ಸಮಾನ
- ಸಂಕಾಶಿ – ಹೋಲಿಕೆಯಿರುವುದು
- ಸಂಕೀರ್ಣ – ಬೆರೆತುಕೊಂಡಿರುವ; ಜಟಿಲವಾದ
- ಸಂಕು – (ಶಂಕು) ಕಠಾರಿ
- ಸಂಕುಲ(ಳ) – ಸಮೂಹ
- ಸಂಕೆ – (ಶಂಕೆ) ಸಂದೇಹ; ಅಂಜಿಕೆ
- ಸಂಕೆವೆ¾ು – ಸಂದೇಹಪಡು
- ಸಂಕೇತ – ವ್ಯವಸ್ಥೆ, ಗೊತ್ತುಮಾಡುವಿಕೆ
- ಸಂಕೇತಂಗೊಳಿಸು – ಸಂಕೇತಸ್ಥಳವನ್ನು ಗೊತ್ತುಮಾಡು
- ಸಂಕೇತಸಮಯ – ಪ್ರೇಮಿಗಳು ಸೇರಲು ಗೊತ್ತುಮಾಡಿದ ಹೊತ್ತು
- ಸಂಕೋಚಿಸು – ಕುಗ್ಗು; ಕುಗ್ಗಿಸು
- ಸಂಕ್ರಂದನ – ಇಂದ್ರ; ಕೂಗಿಕೊಳ್ಳುವುದು
- ಸಂಕ್ರಂದನಗಜ – ಐರಾವತ
- ಸಂಕ್ರಂದನದಿಕ್ – ಪೂರ್ವದಿಕ್ಕು
- ಸಂಕ್ರಂದನನಂದನ – ಇಂದ್ರನ ಮಗ, ಅರ್ಜುನ
- ಸಂಕ್ರಮಣ – ಒಟ್ಟಿಗೇ ಹೋಗುವುದು; ಸೂರ್ಯನು ಒಂದು ರಾಶಿಯಿಂದ ಮತ್ತೊಂದಕ್ಕೆ ದಾಟುವ ಕಾಲ
- ಸಂಕ್ರಮಣಿ – (ಜೈನ) ಒಂದು ವಿದ್ಯೆ
- ಸಂಕ್ರಮಿಸು – ಸೇರು; ಸೇರಿಸು
- ಸಂಕ್ಲಿಷ್ಟಾಸುರೋದೀರಿತ – (ಜೈನ) ಐದು ಬಗೆಯ ದುಃಖಗಳಲ್ಲಿ ಒಂದು, ರಾಕ್ಷಸರಿಂದ ಉಂಟಾಗುವ ಭಯ
- ಸಂಕ್ಲೇಶಂಬಡು – ಕಷ್ಟ ಅನುಭವಿಸು
- ಸಂಕ್ಲೇಶಕರ – ತೊಂದರೆಯುಂಟುಮಾಡುವ
- ಸಂಕ್ಷೋಭಿತ – ಕಲಕಿಹೋದ; ಗೊಂದಲಗೊಂಡ
- ಸಂಖ್ಯಾತ – ಎಣಿಕೆ ಮಾಡಿದುದು
- ಸಂಖ್ಯಾತೀತ – ಎಣಿಸಲಾಗದ
- ಸಂಖ್ಯಾನ – ಎಣಿಕೆ
- ಸಂಗಡಂಗೊಳ್ – ಜೋತೆಗೂಡು
- ಸಂಗಡಗಿತ್ತಿ – ಜೊತೆಗಾತಿ
- ಸಂಗಡಮಿ¿õÀ್ತು – ಕೂಡಿ ಸಾಯುವುದು; ಸಹಗಮನ
- ಸಂಗಡವರ್ – ಜೊತೆ ಬಾ
- ಸಂಗವೆಕ್ಕಣ – ಜೊತೆ ನರ್ತನ
- ಸಂಗಡಿಗ – ಜೊತೆಗಾರ
- ಸಂಗತ – ಕೂಡಿದ; ಯೋಗ್ಯವಾದ; ರಾಜನ ಹದಿನಾರು ಬಗೆಯ ಒಪ್ಪಂದಗಳಲ್ಲಿ ಒಂದು, ಮಿತ್ರತ್ವ
- ಸಂಗತಿ – ಕೂಡುವಿಕೆ; ಸಹವಾಸ
- ಸಂಗತಿವಡೆ – ಜೊತೆಗೂಡು; ಸಂಬಂಧ ಹೊಂದು
- ಸಂಗರ – ಯುದ್ಧ; ಪ್ರತಿಜ್ಞೆ
- ಸಂಗರಂ – ಪ್ರತಿಜ್ಞೆಯುಳ್ಳವನು
- ಸಂಗರಪಿಶುನ – ಯುದ್ಧಸೂಚನೆ
- ಸಂಗರರಂಗ – ರಣಭೂಮಿ
- ಸಂಗರಾಜಿರ – ಸಂಗರರಂಗ
- ಸಂಗಳಿಸು – ಕೂಡಿಕೊ, ಸೇರಿಕೊ
- ಸಂಗಳಿ(ಡಿ)ಸು – ಒಟ್ಟಾಗು, ಸೇರು; ಉಂಟುಮಾಡು
- ಸಂಗಾಣಿ – ಸಪ್ತಪದಾರ್ಥಗಳ ಸ್ವರೂಪನಿರೂಪಣ ಗ್ರಂಥ
- ಸಂಗಿ – ಕೂಡಿದುದು
- ಸಂಗೀತ – ಹಾಡಲ್ಪಟ್ಟ
- ಸಂಗುಡಿ – ಬಾವುಟ
- ಸಂಗ್ರಹಿಣಿ – (ಜೈನ) ಒಂದು ವಿದ್ಯೆ
- ಸಂಗ್ರಾಮ – ಯುದ್ಧ
- ಸಂಗ್ರಾಮಲಂಪಟ – ಯುದ್ಧದಲ್ಲಿ
- ಅತ್ಯಾಸಕ್ತನದವನು; ಕಲಹಪ್ರಿಯ
- ಸಂಗ್ರಾಮಾಂಗಣ – ಸಂಗರರಂಗ
- ಸಂಗ್ರಾಮಾವನಿ – ಸಂಗರರಂಗ
- ಸಂಘಟನೆ – ಹೊಂದಿಸುವಿಕೆ
- ಸಂಘಟ್ಟನ – ತಾಗುವಿಕೆ; ಘರ್ಷಣೆ
- ಸಂಘಾತ – ಗುಂಪು; ಹೊಂದಾಣಿಕೆ
- ಸಂಚಕ(ಕಾ)ರ – ಮುಂಗಡ
- ಸಂಚಕರಂಗೊಳ್ – ಮುಂಗಡವನ್ನು ಪಡೆದುಕೊ
- ಸಂಚಯ – ಸಂಗ್ರಹ
- ಸಂಚರಣ – ತಿರುಗಾಟ
- ಸಂಚಲಿ)ಳಿ)ತ – ಅಲುಗಾಡುತ್ತಿರುವ
- ಸಂಚಲಿ(ಳಿ)ಸು – ಕಂಪಿಸು; ಅಲುಗು
- ಸಂಚಾರಿ – ಚಲಿಸುವ
- ಸಂಚಾರಿ(ಕೆ) – ದೂತಿ
- ಸಂಚಿತ – ಕೂಡಿಟ್ಟ
- ಸಂಚಿತಪುಣ್ಯ – ಹಿಂದೆ ಗಳಿಸಿದ ಪುಣ್ಯ(ವುಳ್ಳವನು)
- ಸಂಚಿತಸುಕೃತ – ಸಂಚಿತಪುಣ್ಯ
- ಸಂಚಿವಾರ – ಹಣದ ಸಂಗ್ರಹ
- ಸಂಚಿಸು – ಸಂಗ್ರಹಿಸು
- ಸಂಚೂರ್ಣ – ಚೂರು
- ಸಂಚೂರ್ಣಿತ – ಚೂರುಚೂರಾದ
- ಸಂಚೂರ್ಣಿತಮತಿ – ಘಾತಕ ಬುದ್ಧಿ(ಯವನು)
- ಸಂಚೂಲಿ(ಳಿ)ಕೆ – ಬೆಟ್ಟದ ತುದಿ
- ಸಂಛನ್ನ – ಚೆನ್ನಾಗಿ ಮುಚ್ಚಿದ ; ಇಡಿಕಿರಿದ; ಗುಂಪು
- ಸಂಛಾದನ – ಆವರಿಸುವುದು
- ಸಂಛಾದಿಸು – ಆವರಿಸು
- ಸಂಜನಿತ – ಹುಟ್ಟಿದ, ಮೂಡಿದ
- ಸಂಜನಿತೋತ್ಸವ – ಹುಟ್ಟಿದ ಹಬ್ಬ
- ಸಂಜಯ – ಸಂಪೂರ್ಣ ವಿಜಯ; ಕುರುಕ್ಷೇತ್ರದಲ್ಲಿ
- ನಡೆಯುವುದನ್ನು ಧೃತರಾಷ್ಟ್ರನಿಗೆ ವಿವರಿಸಿದ ಅವನ ಆಪ್ತ
- ಸಂಜೆಗೆಂಪು – ಸಾಯಂಕಾಲದ ಆಕಾಶದ ಕೆಂಬಣ್ಣ
- ಸಂಜೆಮಂತ್ರ – ಸಂಧ್ಯಾವಂದನೆ
- ಸಂಜೆಮೀಹ – ಸಾಯಂಕಾಲದ ಸ್ನಾನ; ಸಂಧ್ಯಾವಂದನೆ
- ಸಂಜೆಮುಗಿಲ್ – ಸಾಯಂಕಾಲದ ಕೆಂಪು ಮೋಡ
- ಸಂಜೆವಾರಿಸು – ಸಾಯಂಸಂಧ್ಯಾವಂದನೆ ಮಾಡು
- ಸಂಜೆವಾಸ – ಸಂಜೆಮಂತ್ರ
- ಸಂಜ್ಞಾನಪಂಚಕ – (ಜೈನ) ಮತಿ, ಶ್ರುತ, ಅವಧಿ, ಮನಃಪರ್ಯಯ, ಕೇವಲ ಎಂಬ ಐದು ಬಗೆಯ ಜ್ಞಾನಗಳು
- ಸಂಜ್ಞಾಪ್ರಕೃಷ್ಟ – ಆಹಾರ, ಭಯ, ಮೈಥುನ, ನಿದ್ರೆ ಎಂಬ ಸಂಜ್ಞೆ(ಬಯಕೆ)ಗಳಿಂದ ಜಗ್ಗಲ್ಪಟ್ಟ
- ಸಂಜ್ಞಿ(ಜೀವ) – ಸಂಜ್ಞೆ(ಬಯಕೆ)ಗಳಿರುವ ಜೀವಿ, ಮನುಷ್ಯ
- ಸಂಜ್ವಲ(ಳ)ನ – ತೀವ್ರವಾದ ಶಾಖ; (ಜೈನ) ಚಾರಿತ್ರ್ಯದ ಪರಿಪೂರ್ಣತೆಗೆ ಪೂರಕವಾದ ಕರ್ಮ
- ಸಂತ – ಸೌಖ್ಯ; ಸಮಾಧಾನ
- ಸಂತಂ – ಸಮಾಧಾನದಿಂದ; ಯಾವಾಗಲೂ
- ಸಂತತಂ – ಯಾವಾಗಲೂ
- ಸಂತತಿ – ಪೀಳಿಗೆ, ವಂಶ; ಗುಂಪು
- ಸಂತತಿಗೆಡು – ವಂಶ ನಾಶವಾಗು
- ಸಂತತಿಚ್ಛೇದ – ವಂಶನಾಶ
- ಸಂತಮಿಡು – ಸಮಾಧಾನಪಡಿಸು
- ಸಂತಮಿರ್ – ಸಮಾಧಾನದಿಂದಿರು; ಸುಮ್ಮನಿರು
- ಸಂತಯಿ(ವಿ)ಸು – ಸಂತಮಿಡು
- ಸಂತರ್ಪಣ – ತೃಪ್ತಿಗೊಳಿಸು(ವಿಕೆ)
- ಸಂತರ್ಪಣಕರ – ಸಂತೋಷಕರ
- ಸಂತರ್ಪಿನಂ – ತೃಪ್ತಿಯಾಗುವವರೆಗೂ
- ಸಂತಸ – ಸಂತೋಷ
- ಸಂತಸಂಗಿಡು – ಸಂತೋಷ ಹಾಳಾಗು
- ಸಂತಸಂಬಡಿಸು – ಸಂತೋಷಗೊಳಿಸು
- ಸಂತ(ತೋ)ಸಂಬಡು – ಸಂತೋಷಗೊಳ್ಳು
- ಸಂತಸಮಿರ್ – ಸಂತೋಷದಿಂದಿರು
- ಸಂತಸವಾತು – ಸಂತೋಷದ ನುಡಿ
- ಸಂತಸಿಕೆ – ನಲಿವು
- ಸಂತಾನ – ಸಮೂಹ; ಸಾಲು; ವಂಶನುಗತವಾದುದು; ಇಂದ್ರನ ವನದ ಒಂದು ಗಿಡ; ರಾಜನು ಮಾಡಿಕೊಳ್ಳಬಹುದಾದ ಹದಿನಾರು ಬಗೆಯ ಸಂಧಿಗಳಲ್ಲಿ ಒಂದು, ಮಗಳನ್ನು ಮದುವೆ ಮಾಡಿಕೊಟ್ಟು ಸಂಧಿ ಮಾಡಿಕೊಳ್ಳುವುದು
- ಸಂತಾನಕ – ವಿಸ್ತರಣೆ; ಸಮೂಹ; ದೇವಲೋಕದ ಒಂದು ಮರ
- ಸಂತಾನರೂಪ (ಜೈನ) ಅನುಭವಕ್ಕೆ ಬಾರದ ಕ್ಷಣಗಳ
- ಸಂತಾಪ – ಶಾಖ; ಸಂಕಟ
- ಸಂತಾಪಂಗೊಳ್ – ವೇದನೆಗೊಳಗಾಗು
- ಸಂತಾಪನ – ಮನ್ಮಥನ ಐದು ಬಾಣಗಳಲ್ಲಿ ಒಂದು; ಮನ್ಮಥ
- ಸಂತುಷ್ಟ – ಸಂತೋಷಗೊಂಡ(ವನು)
- ಸಂತುಷ್ಟಾಂತರಂಗ – ಸಂತೃಪ್ತಿಗೊಂಡ ಮನಸ್ಸು(ಳ್ಳವನು)
- ಸಂತೆ – (ಸಂಸ್ಥಾ) ಗುಂಪು
- ಸಂತೋಷದಾಳಿ – ಸಂತೋಷವುಂಟುಮಾಡುವ ಗೆಳತಿ
- ಸಂತೋಷಂಬಡು – ಆನಂದಪಡು
- ಸಂತೋಷಕರ – ಆನಂದವುಂಟುಮಾಡುವ
- ಸಂತ್ರಾಸಕರ – ಭಯಂಕರ
- ಸಂತ್ರಾಸಿ – ಭಯಗೊಳಿಸುವವನು
- ಸಂದಂಶ – ಇಕ್ಕುಳ
- ಸಂದಣಿ – ಗುಂಪು
- ಸಂದಣಿಗಳ್ – ಗುಂಪಾಗು; ಒಟ್ಟಾಗು
- ಸಂದಣಿಸು – ಗುಂಪಾಗು
- ಸಂದರ್ಶನ – ನೋಡಿವುದು; ಕಾಣಿಸಿಕೊಳ್ಳುವಿಕೆ
- ಸಂದರ್ಶನೀಯ – ನೋಡಬಹುದಾದ; ಸುಂದರವಾದ
- ಸಂದಿಯ – ಸಂಶಯಗ್ರಸ್ತ
- ಸಂದಿಗ್ಧ – ಸಂದೇಹ
- ಸಂದಿಸು – ಸೇರಿಸು; ಗುಂಪುಗೂಡು; ಹೊಂದಿಸು
- ಸಂದೀಪಿತಚಿತ್ತ – ಕೆರಳಿದ ಮನಸ್ಸು(ಳ್ಳವನು)
- ಸಂದು – ಸೇರುವಿಕೆ; ಮೂಲೆ; ಕಿರುದಾರಿ; ಕೀಲು; ಮರದ ಗೆಣ್ಣು
- ಸಂದೃಪ್ತ – ಮತ್ತ
- ಸಂದೆಗ(ಯ) – ಸಂದೇಹ
- ಸಂದೆಗಂ(ಯಂ)ಬಡು – ಸಂದೇಹಗೊಳ್ಳು
- ಸಂದೇಶ – ಅಪ್ಪಣೆ; ಸಮಾಚಾರ
- ಸಂದೇಶಿಸು – ಹೇಳು; ತಿಳಿಸು
- ಸಂದೋಹ(ಕ) – ಸಮೂಹ; ರಾಶಿ
- ಸಂದರಿಸು – ಹೊತ್ತುಕೊ
- ಸಂಧಾನ – ಬಿಲ್ಲಿನ ಹೆದೆಗೆ ಬಾಣ ಹೂಡುವಿಕೆ; ಉಪಾಯ
- ಸಂಧಾನಂಗೆಯ್ – ಉಪಾಯ ಮಾಡು
- ಸಂಧಾನಿ – ಕೂಡಿದುದು
- ಸಂಧಾರಿತ – ತೊಡಿಸಿದ; ತೊಟ್ಟ
- ಸಂಧಿ – ಕೀಲು; ಸೇರಿಕೆ; ಒಡಂಬಡಿಕೆ; ಹದಿನಾರು ಬಗೆಯ ಸಂಧಿಗಳು: ನೋಡಿ,
- ಸಂಧಿಗೆಯ್ – ಒಪ್ಪಂದ ಮಾಡಿಕೊ
- ಸಂಧಿಬಂಧ – ಸೇರುವ ಜಾಗ
- ಸಂಧಿವಿಗ್ರಹ – ರಾಜಿ ಮತ್ತು ಯುದ್ಧ
- ಸಂಧಿವಿಗ್ರಹಿ – ರಾಜಿ-ಯುದ್ಧಗಳ ಬಗೆಗಿನ ಮಂತ್ರಿ-
- ಸಂಧಿಸು – ಸೇರು; ಸೇರಿಸು; ಒದಗು
- ಸಂಧ್ಯಾಂಬುದ – ಸಂಜೆ ಹೊತ್ತಿನ ಕೆಂಬಣ್ಣದ ಮೋಡ
- ಸಂಧ್ಯಾತೆಪನ – ಸಂಜೆಯ ಸೂರ್ಯ
- ಸಂಧ್ಯಾನಕ – ಸಂಜೆ ಬಾರಿಸುವ ನಗಾರಿ
- ಸಂಧ್ಯಾಭ್ರ – ಸಂಧ್ಯಾಂಬುದ
- ಸಂಧ್ಯಾರಾಗ – ಸಂಜೆಗೆಂಪು ಬಣ್ಣ
- ಸಂಧ್ಯಾರುಚಿ – ಸಂಧ್ಯಾರಾಗ
- ಸಂಧ್ಯಾಶ್ಲೇಷ – ಸಂಧ್ಯೆಯಿಂದ ಕೂಡಿದುದು
- ಸಂನ್ಯಸನ(ವಿಧಿ) – (ಜೈನ) ಉಪವಾಸವಿದ್ದು ಮಾಡುವ ಒಂದು ವ್ರತ
- ಸಂಪಗೆವಣ್ಣ – ನಸುಹಳದಿ-ನಸುಗೆಂಪು ಬಣ್ಣ-
- ಸಂಪಗೆವೂ – ಸಂಪಿಗೆಯ ಹೂ
- ಸಂಪನ್ನ – ತುಂಬಿದ; ಪರಿಪೂರ್ಣವಾದ
- ಸಂಪನ್ನತೆ – ತುಂಬಿರುವುದು; ಸಮೃದ್ಧಿ
- ಸಂಪಾತನ – ಬೀಳುವಿಕೆ
- ಸಂಪುಟ(ಕ) – ಭರಣಿ
- ಸಂಪೂರ್ಣಸಂಕಾಶ – ಸೂರ್ಯ
- ಸಂಪೂರ್ಣೇಂದು – ಹುಣ್ಣಿಮೆಯ ಚಂದ್ರ
- ಸಂಪ್ರಣಿಧಾನ – ಚಿಂತನೆ; ಯೋಗ್ಯ ನಡತೆಯವನು
- ಸಂಪ್ರತಿ – ವರ್ತಮಾನ, ಈಗಿನ ಕಾಲ
- ಸಂಪ್ರದಾನ – ಕೊಡುವುದು;
ಷೋಡಶಸಂಧಿ'ಗಳಲ್ಲಿ ಒಂದು, ಉಡುಗೊರೆ ಕೊಡುವ ಮೂಲಕ ಮಾಡಿಕೊಳ್ಳುವ ಸಂಧಿ ಸಂಪ್ರಯೋಗ - ಸೇರುವಿಕೆ, ಸಂಭೋಗ ಸಂಪ್ರೀತಿ - ಗಾಢ ಪ್ರೀತಿ ಸಂಬಲ(ಳ) - ಬುತ್ತಿ ಸಂಬಳಂಗೊಳ್ - ಬುತ್ತಿಯನ್ನು ಕಟ್ಟಿಕೊ ಸಂಬಳಂಬಡೆ - ಜೀವಿತವನ್ನು ಪಡೆ ಸಂಬಳಿಕೋಲ್ - ಕೈಯಲ್ಲಿ ಹಿಡಿಯುವ ದೊಣ್ಣೆ ಸಂಬಳಿಗೆ - (ಸಂಪುಟಕ) ಹೋಳು, ಭಾಗ; ಡಬ್ಬಿ ಸಂಬೋಧನೆ - ಉಪದೇಶ ಸಂಬೋಧಿಸು - ತಿಳಿವಳಿಕೆ ಹೇಳು; ಉದ್ದೇಶಿಸಿ ಮಾತಾಡು ಸಂಭವ - ಹುಟ್ಟುವ ಸಂಭವಿಸು - ಉಂಟಾಗು ಸಂಭಾವನೆ - ಚಿಂತನೆ ಸಂಭಾಷಣ - ಮಾತುಕತೆ ಸಂಭಾಷಣಂಗೆಯ್ - ಮಾತನಾಡು ಸಂಭಾಷಿಸು - ಸಂಭಾಷಣಂಗೆಯ್ ಸಂಭಿನ್ನವಿದ್ಯೆ - (ಜೈನ) ಒಂದು ಬಗೆಯ ವಿದ್ಯೆ ಸಂಭೂತ - ಒಟ್ಟಾಗಿ ಕೂಡಿಸಿದ ಸಂಭೃತ - ತುಂಬಿದ; ಸಜ್ಜುಗೊಳಿಸಿದ ಸಂಭೇದ - ಒಡೆಯುವಿಕೆ; ಒಗ್ಗಟ್ಟನ್ನು ಒಡೆಯುವವನು ಸಂಭೋಗ - ಕಾಮ; ಕೂಟ ಸಂಭೋಗ್ಯ - ಅನುಭವಿಸಲು ತಕ್ಕುನಾದ ಸಂಭ್ರಮ - ಸಡಗರ, ತ್ವರೆ; ಸುತ್ತಾಡುವಿಕೆ ಸಂಭ್ರಮಾಕುಳ - ಆತುರದಿಂದ ತುಂಬಿದವನು ಸಂಮಾರ್ಜಿನಿ - ಕಸಪೊರಕೆ ಸಂಯತ - ಜಿತೇಂದ್ರಿಯ; (ಜೈನ) ಜಿತೇಂದ್ರಿತ್ವದಿಂದ ಪರಿಪೂರ್ಣನಾದ ಶ್ರಮಣ ಸಂಯಮ - ನಿಗ್ರಹ; (ಜೈನ) ಶ್ರಂಣನು ಆಚರಿಸಬೇಕಾದ
ದಶಕುಲಧರ್ಮ’ಗಳಿಳಲ್ಲಿ ಒಂದು - ಸಂಯಮಮಂತ್ರ – (ಜೈನ) ಐದು ಬಗೆಯ ಮಂತ್ರಗಳಲ್ಲಿ ಒಂದು
- ಸಂಯಮಿ – ಜಿತೇಂದ್ರಿಯನಾದವನು
- ಸಂಯುಗ – ಯುದ್ಧ
- ಸಂಯುತ – ಸೇರಿದ
- ಸಂಯೋಗ – ಕೂಡುವಿಕೆ; ಒಂದು ಉದ್ದೇಶಕ್ಕಾಗಿ ಇಬ್ಬರು ರಾಜರಲ್ಲಿ ಏರ್ಪಡುವ ಒಪ್ಪಂದ
- ಸಂವ್ಯಾನ – ಉತ್ತರೀಯ; ಸೆರಗು
- ಸಂವರ – (ಜೈನ) ಕರ್ಮಪ್ರವಾಹವನ್ನು ತಡೆಯುವುದು
- ಸಂವರಣೆ – ಮುಚ್ಚುವುದು
- ಸಂವರಿಸು – ಸನ್ನಾಹಿಸು
- ಸಂವರ್ತ – ಪ್ರಕ್ಷುಬ್ಧ; ಪ್ರಳಯ
- ಸಂವಳಯಿತ – ಸುತ್ತಲ್ಪಟ್ಟ
- ಸಂವಾಹನ – ಮೈಕೈ ಹಿಸುಕುವುದು
- ಸಂವೀತ – ಕೂಡುವುದು
- ಸಂವೇಗ – ದೃಢಸಂಕಲ್ಪ
- ಸಂವ್ಯಾನ – ಉತ್ತರೀಯ
- ಸಂಶ್ಲಿಷ್ಟ – ಹತ್ತಿಕೊಂಡಿರುವ
- ಸಂಸಕ್ತ – ಕೂಡಿದ
- ಸಂಸರಣ – ಸಂಸಾರ
- ಸಂಸಾರ – (ಜೈನ) ದ್ರವ್ಯ, ಕ್ಷೇತ್ರ, ಕಾಲ, ಭವ, ಭಾವ ಎಂಬ ಬಗೆಗಳು
- ಸಂಸಾರಕ್ಷಪಕ – ಸಂಸಾರವನ್ನು ಪರಿತ್ಯಜಿಸಿದವನು
- ಸಂಸ್ಕಾರ – ಪರಿಶುದ್ಧವಾಗಿ ಮಾಡುವುದು; ವ್ಯಕ್ತಿಗೆ ಸಂಬಂಧಿಸಿದಂತೆ ಮಾಡುವ ಶ್ರುತಿಗಳಲ್ಲಿ ಹೇಳಿರುವ ಧಾಮಿಕ ವಿಧಿಗಳು, ನೊಡಿ, ಷೋಡಶಸಂಸ್ಕಾರ’
- ಸಂಸ್ತಾರ – ಹರಡಿದುದು
- ಸಂಸ್ತೂಯಮಾನ – ಹೊಗಳಲ್ಪಡುವ
- ಸಂಸೃತಿ – ಸಂಸಾರ
- ಸಂಹತಿ – ಸಮೂಹ
- ಸಂಹನನ – ದೇಹ(ವುಳ್ಳವನು)
- ಸಂಹರಣ – ಸಂಕೋಚ(ಗೊಳ್ಳುವುದು)
- ಸಂಹರಿಸು – ನಾಶಗೊಳಿಸು; ಕೊಲ್ಲು
- ಸಂಹಾರಕ – ಕೊಲ್ಲುವುದು
- ಸಂಹಾರರುದ್ರ – ಪ್ರಳಯಕಾಲದ ಶಿವ
- ಸಂಹಾರಿಸು – ನಾಶಮಾಡು; ಕೊಲ್ಲು
- ಸಃ – ಅವನು
- ಸಕಲ(ಳ) – ಸಮಗ್ರ
- ಸಕಲಂ(ಳಂ)ಕ – ಚಂದ್ರ
- ಸಕಲಕಲಾ(ಳಾ)ಧರ – ಹದಿನಾರು ಕಳೆಗಳುಳ್ಳವನು, ಹುಣ್ಣಿಮೆ ಚಂದ್ರ
- ಸಕಲಕಲಾಧರೆ – ಎಲ್ಲ ಕಲೆಗಳನ್ನು ಬಲ್ಲವಳು
- ಸಕಲ(ಳ)ಜ್ಞ – ಸರ್ವಜ್ಞ
- ಸಕಲ(ಳ)ದತ್ತಿ – (ಜೈನ) ವಂಶದ ಎಲ್ಲವನ್ನೂ ಮಗನಿಗೆ ಕೊಡುವುದು
- ಸಕಲ(ಳ)ರ್ತು(ಕ) – ಎಲ್ಲ ಋತುಗಳು; ಸರ್ವಋತು
- ಸಕ(ಲ)ಳವಟ್ಟೆ – ತುಂಡು ಬಟ್ಟೆಯ ಪಟ್ಟಿಗಳು
- ಸಕಲವ್ಯಾಪಿ – ಎಲ್ಲೆಡೆ ಹಬ್ಬಿರುವ
- ಸಕಳಕ್ಷಮಾಪತಿತ್ವ – ಎಲ್ಲವನ್ನೂ ಕ್ಷಮಿಸುವ; ಭೂಮಿ ಎಲ್ಲದಕ್ಕೂ ಒಡೆತನ, ಚಕ್ರವರ್ತಿತ್ವ
- ಸಕಿಂಚನ – ಪರಮಾವಧಿಯಾಗಿ ಹೊಂದಿದವನು
- ಸಕೃತ್ – ಒಮ್ಮೆ
- ಸಕ್ಕ – ಕಟವಾಯಿ, ಬಾಯಿಯ ಕೊನೆ
- ಸಕ್ಕ(ಕ್ಕೆ) – (ಶಲ್ಕ) ಚಕ್ಕೆ
- ಸಕ್ಕದ – ಸಂಸ್ಕøತ ಭಾಷೆ
- ಸಕ್ಕಿ – ಸಾಕ್ಷಿ
- ಸಕ್ತ – ಕೂಡಿದ
- ಸಖಾಯ – ಗೆಳೆಯ
- ಸಗಣ – (ಶಕೃತ್) ಸಗಣಿ
- ಸಗರ್ಭವಚನ – ಅರ್ಥತುಂಬಿದ ಮಾತು
- ಸಗರ್ಭಾಂಗನೆ – ಬಸುರಿ ಹೆಂಗಸು
- ಸಗಾಟಿಸು – ಗೆಳೆತನ ಮಾಡು
- ಸಗುಣ – ತ್ರಿಗುಣಯುಕ್ತನಾದ
- ಸಗ್ಗ – (ಸ್ವರ್ಗ) ದೇವತೆಗಳ ವಾಸಸ್ಥಳ
- ಸಗ್ಗದ ಜತಿ – ಸ್ವರ್ಗದ ಋಷಿ
- ಸಗ್ಗದವರ್ಗಳ್ – ದೇವಲೋಕದವರು
- ಸಗ್ಗದಾಕೆ – ಅಪ್ಸರೆ
- ಸಚಿತ್ತವಿರತ – (ಜೈನ) ಹಸಿರು ತರಕಾರಿಗಳನ್ನು ತಿನ್ನದ ವ್ರತ
- ಸಚಿವ – ಒಡನಾಡಿ; ಮಂತ್ರಿ
- ಸಚೇತನ – ಜೀವಂತವಾದ್ರ
- ಸಚೇತನೆ – ಎಚ್ಚರಗೊಂಡವಳು
- ಸಜಲತೆ – ತೇವವಾಗಿರುವಿಕೆ
- ಸಜೀವಚಿತ್ರ – ಜೀವಂತಿಕೆಯಿಂದ ಕೂಡಿದ ಚಿತ್ರ
- ಸಜ್ಜಕ – ರವೆ
- ಸಜ್ಜನ – ಕುಲಸ್ತ್ರೀ, ಧರ್ಮಪತ್ನಿ
- ಸಜ್ಜನವನಿತೆ – ಸಜ್ಜನ
- ಸಜ್ಜನವೆಂಡತಿ – ಸಜ್ಜನ
- ಸಜ್ಜನಿಕೆ – ಪಾತಿವ್ರತ್ಯ
- ಸಜ್ಜಾತಿಕ್ರಿಯೆ – (ಜೈನ) ಸತ್ಕುಲದಲ್ಲಿ ಹುಟ್ಟುವ
- ಪರಿಶುದ್ಧ ಜನ್ಮ
- ಸಜ್ಜಾತಿತ್ವ – ಸಜ್ಜಾತಿಕ್ರಿಯೆ
- ಸಜ್ಜಾಯಿಗ – ರತ್ನಗಂಬಳಿ ಮಾರುವವನು
- ಸಜ್ಜೀಕೃತ – ಸಿದ್ಧಮಾಡಿದ
- ಸಜ್ಜುಕ – ಮೊಗ್ಗು
- ಸಜ್ಜೈವಾತೃಕ – ಬೆಳುದಿಂಗಳು, ಚಂದ್ರ
- ಸಜ್ಞಾನಚಕ್ಷು – ಜ್ಞಾನದೃಷ್ಟಿಯಿರುವವನು
- ಸಟ(ಟಾ) – ಜಡೆ; ಬೀಳಲು
- ಸಟಾಜಾಳ – ಕೂದಲ ರಾಶಿ
- ಸಟಾ(ವ)ಳಿ – ಸಿಂಹದ ಕೇಸರ
- ಸಟ್ಟುಗ – ಸೌಟು; ಒಂದು ಅಳತೆ
- ಸಡಗರ – ಸಂಭ್ರಮ
- ಸಡಗರಿಸು – ಸಂಭ್ರಮಪಡು
- ಸಡಪುಡಂಗೆಯ್ – ಲವಲವಿಕೆಯಿಂದಿರು
- ಸಡಪುಡನೆ – ಕೂಡಲೇ
- ಸಡಹುಡ – ಚುರುಕುತನ, ಲವಲವಿಕೆ
- ಸಡಿಲ್ – (ಶಿಥಿಲ) ಅಳ್ಳಕ(ಗೊಳ್ಳು)
- ಸಡಿಲಿಸು – ಅಳ್ಳಕಗೊಳಿಸು; ಬಿಚ್ಚು
- ಸಡಿಲ್ಚು – ಸಡಿಲಿಸು
- ಸ(ಸೆ)ಣಂಬು – ಸಣಬು ಎಂಬ ಗಿಡ
- ಸಣ್ಣಿಗೆ – ಒರಳು-ರುಬ್ಬುಗುಂಡು-
- ಸಣ್ಣಿತು – ಸಣ್ಣಗಿರುವುದು, ಚಿಕ್ಕದು
- ಸಣ್ಣಿಸು – ಪುಡಿಮಾಡು; ನಯಗೊಳಿಸು; ಕೃಶಮಾಡು
- ಸಣ್ಣುಕ – ಕುಳ್ಳ
- ಸತ – ಶಾಶ್ವತ
- ಸತತಂ – ಯಾವಾಗಲೂ
- ಸತತಗತಿ – ಸದಾ ಚಲಿಸುವುದು, ಗಾಳಿ
- ಸತತಗತಿತನೂಜ – ವಾಯುಪುತ್ರ, ಹನುಮಂತ
- ಸತನು – ಶರೀರಸಹಿತನಾದವನು
- ಸತೃಣಾಭ್ಯವಹಾರಿ – ಹುಲ್ಲು ತಿನ್ನುವವನು, ದಡ್ಡ
- ಸತ್ಕವಿ – ಒಳ್ಳೆಯ ಕವಿ
- ಸತ್ಕೀರ್ತಿ – ಒಳ್ಳೆಯ ಕೀರ್ತಿ
- ಸತ್ಕøತ – ಉಪಕಾರ; ಗೌರವ
- ಸತ್ಕøತಿ – ಉತ್ತಮ ಗ್ರಂಥ; ಉತ್ತಮ ಕೆಲಸ
- ಸತ್ತವಿ – ಸಪ್ತಮಿ
- ಸತ್ತಿಗೆ (ಛತ್ರಿಕಾ) ಕೊಡೆ-
- ಸತ್ತಿಗೆತ್ತಿಸು – ಕೊಡೆ ಹಿಡಿಸು
- ಸತ್ತಿಗೆವಂತ – (ಬಿಳಿ)ಕೊಡೆ ಹೊಂದಿದವನು, ರಾಜ
- ಸತ್ತುಗ – ಹುರಿಟ್ಟು; ಸಾರ
- ಸತ್ತ್ವ – ಹಿಟ್ಟು; ಶಕ್ತಿ; ಸತ್ವಗುಣ; ಪ್ರಾಣಿ
- ಸತ್ಪಥ – ಒಳ್ಳೆಯ ಮಾರ್ಗ; ಆಕಾಶ
- ಸತ್ಪಥಕುಂತಲ – ಆಕಾಶಕೇಶಿ, ಶಿವ
- ಸತ್ಪಥಾತಿಥಿ – ಆಕಾಶಗಾಮಿ
- ಸತ್ಪ್ರಣೀತ – (ಜೈನ) ಅಷ್ಟಧರ್ಮಗಳಲ್ಲಿ ಒಂದು
- ಸತ್ಫಲ – ಒಳ್ಳೆಯ ಹಣ್ಣು; ಉತ್ತಮ ಫಲಿತಾಂಶ
- ಸತ್ಯಪ್ರತಿಜ್ಞ – ಪ್ರತಿಜ್ಞೆಯನ್ನು ನಡೆಸುವವನು
- ಸತ್ಯವಾಕ್ಯ – ಸತ್ಯವಂತ
- ಸತ್ಯಾರ್ಥ – ನಿಜವಾದುದು
- ಸತ್ರನಿಳಯ – ಧರ್ಮಛತ್ರ
- ಸತ್ವಬಾಧೆ – (ಜೈನ) ಜೀವಿಗಳಿಗೆ ಒದಗುವ ನೋವು
- ಸತ್ವಾಢ್ಯ – ಬಲಿಷ್ಠ
- ಸತ್ತ್ವ – ಸತ್ವಗುಣ; ಜೀವ
- ಸತ್ವಾವಲಂಬ – ಶಕ್ತಿಯನ್ನವಲಂಬಿಸುವವನು
- ಸದಮಲ(ಳ)ಚರಿತ(ತ್ರ) – ನಿರ್ಮಲವಾದ ನಡತೆಯವನು
- ಸದಮಲ(ಳ)ಬೋಧ – ನಿರ್ಮಲ ಉಪದೇಶ
- ಸದಮಳಧರ್ಮ – ಪರಿಶುದ್ಧ ಧರ್ಮ
- ಸದರ್ಥವಾದಿತ್ವ – ಸರಿಯಾದ ವಾದಮಂಡನೆ
- ಸದಸನ್ಮತಿ – ಒಳ್ಳೆಯ ಮತ್ತು ಕೆಟ್ಟ ಮನಸ್ಸುಳ್ಳವನು
- ಸದಾನಿ – ದಾನಿಗಳಿಂದ ಕೂಡಿದ
- ಸದಾನಿಕೇತನ – ದಾನಿಗಳಿರುವ ಮನೆ
- ಸದಾನುವರ್ತಿ – ಸದಾ+ಅನುವರ್ತಿ,
- ಸದಾ ಹಿಂಬಾಲಿಸುವವನು
- ಸದಾಗ್ರಹ – ಒಳ್ಳೆಯದಕ್ಕಾಗಿ ಒತ್ತಾಯ
- ಸದಾವ್ರತ – ಯಾವಾಗಲೂ ವ್ರತದಲ್ಲಿರುವವನು
- ಸದುಂಬು – ಜೌಗು ಭೂಮಿ
- ಸದುಬೀ¿õï – ತೇವಗೊಳ್ಳು
- ಸದೃಶವೃತ್ತಿ – ಒಂದೇ ಬಗೆಯ ನಡತೆ
- ಸ(ತ)ದೆ – ಬಡಿ, ಚೆಚ್ಚು
- ಸದೆಬಡಿ – ಬಲವಾಗಿ ಚೆಚ್ಚು
- ಸದೇಹ – ಶರೀರಸಮೇತ
- ಸದ್ಗುಣೈಕ್ಯ – ಸದ್ಗುಣಗಳಿಂದ ಕೂಡಿದವನು
- ಸದ್ದ – (ಶಬ್ದ) ಸದ್ದು
- ಸದ್ಧರ್ಮ – ಒಳ್ಳೆಯ ನಡವಳಿಕೆ(ಯುಳ್ಳವನು)
- ಸದ್ಬೋಧ – ಒಳ್ಳೆಯ ಜ್ಞಾನ
- ಸದ್ಭವ್ಯ – (ಜೈನ) ಒಳ್ಳೆಯ ಧಾರ್ಮಿಕ ವ್ಯಕ್ತಿ
- ಸದ್ಭಾವ – ಒಳ್ಳೆಯ ಭಾವನೆ, ಅಭಿಪ್ರಾಯ
- ಸದ್ಭ್ರಾಂತ – ಸುತ್ತುತ್ತಿರುವ
- ಸದ್ರತಿ – ಶುದ್ಧವಾದ ಅನುರಾಗ
- ಸದ್ವನಜವನ – ಸುಂದರ ತಾವರೆಗಳ ಸಮೂಹ, ಕೊಳ
- ಸದ್ವಿಜಕುಳೋಪಶೋಭಿ – ಒಳ್ಳೆಯ ಬ್ರಾಹ್ಮಣಕುಲದಿಂದ ಶೋಭಿಸುವವನು; ಒಳ್ಳೆಯ ಹಲ್ಲುಗಳಿಂದ ಶೋಭಿಸುವವನು
- ಸದ್ವøತ್ತ – ಒಳ್ಳೆ ನಡತೆ(ಯುಳ್ಳವನು)
- ಸದ್ವೇದ್ಯ – (ಜೈನ) ಇಂದ್ರಿಯ ಸುಖವನ್ನು ಉಂಟುಮಾಡುವುದು
- ಸಧರ್ಮಚಾರಿಣಿ – ಧರ್ಮಕಾರ್ಯಗಳಲ್ಲಿ ಸಹಭಾಗಿ, ಹೆಂಡತಿ
- ಸಾಮಥ್ರ್ಯ – ಯೋಗ್ಯತೆ
- ಸಾಮಾಜಿಕ – ಗಣ್ಯವ್ಯಕ್ತಿ
- ಸಾಮಾನಿಕ(ದೇವ) – (ಜೈನ) ಒಂದು ದೇವತಾವರ್ಗ; ಆ ವರ್ಗದ ದೇವತೆ
- ಸಾಮಾನ್ಯಾಸ್ತ್ರ – ಸಾಧಾರಣವಾದ ಬಾಣ
- ಸಾಮಾಭಾಸ – ಸಾಮೋಪಾಯದ ತೋರಿಕೆ
- ಸಾಮಾಯಿಕವ್ರತ – (ಜೈನ) ಒಂದು ಶಿಕ್ಷಾವ್ರತ
- ಸಾಮಿಪಕ್ವ – ಅರ್ಧ ಹಣ್ಣಾದ
- ಸಾಮುದ್ರಿಕ – ಅಂಗೈಯ ಗೆರೆಗಳ ಆಧಾರದ ಮೇಲೆ ಭವಿಷ್ಯ ನುಡಿಯುವ ಶಾಸ್ತ್ರ
- ಸಾಮೋದ ಶೇಷಾಕ್ಷತ – ಪರಿಮಳಭರಿತ ಅಕ್ಷತೆ
- ಸಾಮ್ರಾಜ್ಯ – ಪರಮಾಧಿಕಾರದ ನಾಡು; (ಜೈನ) ಮೋಕ್ಷಕ್ಕೆ ಸಂಬಂಧಿಸಿದ ಏಳು ಉತ್ತಮಸ್ಥಾನಗಳಲ್ಲಿ ಒಂದು
- ಸಾಮ್ರಾಜ್ಯಕ್ರಿಯೆ – (ಜೈನ) ಒಂದು
- ಗರ್ಭಾನ್ವಯಕ್ರಿಯೆ, ಧರ್ಮದಿಂದ ರಾಜ್ಯಪಾಲನೆ ಮಾಡುವುದು
- ಸಾಯಂತನ(ಸಮಯ) – ಸಾಯಂಕಾಲ (ವೇಳೆ)
- ಸಾಯಕ – ಬಾಣ
- ಸಾಯಸ – ಕಷ್ಟ
- ಸಾಯಿ(ಸಿ)ಸು – ಸಾಯುವಂತೆ ಮಾಡು, ಕೊಲ್ಲು
- ಸಾರ್ – ಸಮೀಪಿಸು; ತಲುಪು; ಸರಿದುಕೊ; ಸಾನ್ನಿಧ್ಯ
- ಸಾರ – ಶ್ರೇಷ್ಠವಾದ; ಸತ್ವ
- ಸಾರಂಗ – ಒಂದು ಬಗೆಯ ಜಿಂಕೆ; ಮೋಡ
- ಸಾರಂಗಟ್ಟು – ಅಡ್ಡಗಟ್ಟೆ ಕಟ್ಟು
- ಸಾರಂಗಿ(ಗೆ)ಡು – ಸತ್ವಗುಂದು
- ಸಾರಘ – ಜೇನುತುಪ್ಪ
- ಸಾರಣ್ – ಸಮೀಪ
- ಸಾರಣೆ – ಜರಡಿ; ಸುಗಂಧಲೇಪನ
- ಸಾರತಪ – ಶ್ರೇಷ್ಠ ತಪಸ್ಸು
- ಸಾರದಾರು – ಮರದ ದಿಮ್ಮಿ
- ಸಾರಬೀದಿ – ಸಂಪದ್ಭರಿತ ಬೀದಿ
- ಸಾರಭಾಂಡ – ವಸ್ತುಗಳ ಸಮೂಹ
- ಸಾರಮಣಿ – ಶ್ರೇಷ್ಠವಾದ ರತ್ನ
- ಸಾರಮಾರಿ – ಸಾರ ಎಂಬ ಸಾಧನವನ್ನು ನಾಶಮಾಡುವಂತಹ ವಸ್ತು
- ಸಾರಮೇಯ(ಶಿಶು) – ನಾಯಿ (ಮರಿ)
- ಸಾರವಣೆ – ಸಾರಿಸುವುದು
- ಸಾರವಸ್ತು – ಉತ್ಕøಷ್ಟ ವಸ್ತು
- ಸಾರವೀರ – ಶ್ರೇಷ್ಠ ಪರಾಕ್ರಮಿ
- ಸಾರಸ – ನೀರ ಹಕ್ಕಿ, ಕೊಕ್ಕರೆ; ತಾವರೆ
- ಸಾರಸನ – ಡಾಬು
- ಸಾರಸಸಖ – ಕಮಲಮಿತ್ರ, ಸೂರ್ಯ
- ಸಾರಸಾರಸ – ಕಮಲ
- ಸಾರಸಾಸನ – ಕಮಲಪೀಠ, ಬ್ರಹ್ಮ
- ಸಾರಸ್ವತ – ವಿದ್ವಾಂಸ; ಪಾಂಡಿತ್ಯಪೂರ್ಣ; (ಜೈನ) ಎಂಟು ಬಗೆಯ ಲೋಕಾಂತಿಕದೇವರಲ್ಲಿ ಒಂದು ವರ್ಗ
- ಸಾರಸ್ವತಗುಣ – ವಿದ್ವತ್ತು
- ಸಾರಾಯ – ಸತ್ವಭರಿತವಾದ
- ಸಾರಿ – ಅಂಬಾರಿ; ಪಗಡೆ ಕಾಯಿ
- ಸಾರಿಕೆ – (ಶಾರಿಕಾ) ಹೆಣ್ಣು ಗಿಳಿ
- ಸಾರಿಗೆದೇರ – ಗಿಳಿಯನ್ನು ವಾಹನವಾಗಿ ಹೊಂದಿರುವವನು, ಮನ್ಮಥ
- ಸಾರೆ – ಸಮೀಪ; ಜೊತೆಗೆ
- ಸಾರೆಕ(ಗ)ರೆ – ಹತ್ತಿರ ಬರಹೇಳು
- ಸಾರೆವ(ಬ)ರ್ – ಹತ್ತಿರ ಬಾ
- ಸಾರೋಕ್ತಿ – ಅರ್ಥಪೂರ್ಣ ನುಡಿ
- ಸಾರೋರ್ವೀಜ – ಗಟ್ಟಿಯಾದ ಮರ
- ಸಾರ್ಕೆ – ಸಮೀಪ; ಪ್ರಾಪ್ತಿ
- ಸಾರ್ಕೆಗುಡು – ಹತ್ತಿರ ಬರಲು ಅವಕಾಶಕೊಡು
- ಸಾರ್ಕೆವರ್ – ಸಮೀಪಿಸು
- ಸಾರ್ಚು – ಹತ್ತಿರ ಬರು; ಇರಿಸು
- ಸಾರ್ಚುಂದೊಲೆ – ಕೋಟೆಗೆ ಆನಿಸಿ ಮೇಲೆ ಹತ್ತಲು ಬಳಸುತ್ತಿದ್ದ ಮರದ ದಿಮ್ಮಿ
- ಸಾರ್ತರ್ – ಸಮೀಪಿಸು; ಉಂಟಾಗು
- ಸಾರ್ಥ – ಸಮೂಹ, ಸಮುದಾಯ; ರಾಶಿ; ಅರ್ಥಪೂರ್ಣವಾದ
- ಸಾರ್ಥತೆ – ಅನ್ವರ್ಥಗೊಳಿಸುವಿಕೆ
- ಸಾರ್ಥನಾಥ – ವ್ಯಾಪಾರಿಗಳ ಗುಂಪಿನ ಮುಂದಾಳು
- ಸಾರ್ಥಪತಿ – ಸಾರ್ಥನಾಥ
- ಸಾರ್ಥವಾಹ(ಕ) – ವ್ಯಾಪಾರಿ
- ಸಾರ್ಥಾಧಿಪತಿ – ಸಾರ್ಥವಾಹ(ಕ)
- ಸಾದ್ರ್ರತೆ – ತೇವ, ಒದ್ದೆ
- ಸಾದ್ರ್ರವಿಲೋಕನ – ಪ್ರೇಮಲವಾದ ನೋಟ
- ಸಾದ್ರ್ರಹೃದಯ – ಪ್ರೇಮಲವಾದ
- ಮನಸ್ಸು(ಳ್ಳವನು)
- ಸಾದ್ರ್ರಾಂತರಂಗ – ಸಾದ್ರ್ರಹೃದಯ
- ಸಾರ್ಧ – ಅರ್ಧದಿಂದ ಕೂಡಿದ
- ಸಾರ್ವಭೌಮ – ಚಕ್ರವರ್ತಿ; ಕುಬೇರನ ಆನೆ
- ಸಾರ್ವರ್ತುಕಂ – ಸರ್ವ ಋತುಗಳಲ್ಲಿಯೂ
- ಸಾರ್ವರ್ತುಕವನ – ಎಲ್ಲ ಕಾಲಳ್ಲಿ ಚಿಗುರು, ಹೂ,
- ಹಣ್ಣುಗಳನ್ನು ಬಿಡುವ ಮರಗಳಿರುವಉದ್ಯಾನವನ
- ಸಾರ್ವರ್ತುಕೋದ್ಯಾನ – ಸಾರ್ವರ್ತುಕವನ
- ಸಾಲ್ – ಸಮರ್ಥನಾಗಿರು; ಸಾಲಮಾಡು; ಸಾಲುವಷ್ಟು; ಪಂಕ್ತಿ
- ಸಾಲ – ಕಡ
- ಸಾಲ(ಳ) – ಕೋಟೆ; ಮತ್ತಿಯ ಮರ
- ಸಾಲ(ಳ)ಗ – ಮೇಳ
- ಸಾಲಂಗೊಳ್ – ಕಡ ತೆಗೆದುಕೊ
- ಸಾಲ(ಳ)ಭಂಜಿಕೆ – (ಮರದ) ಬೊಂಬೆ
- ಸಾಲವಿದ್ಯೆ – ಕೋಟೆಯನ್ನು ನಿರ್ಮಿಸುವ ವಿದ್ಯೆ
- ಸಾಲಿಗ – ನೇಕಾರ
- ಸಾಲಿಡು – ಪಂಕ್ತಿಗಟ್ಟು; ನಿರಂತರವಾಗಿಸು
- ಸಾಲಿಸು – ಸಾಲವನ್ನು ನೀಡು
- ಸಾಲಿ¾Â – ಪಂಕ್ತಿಯಾಗು
- ಸಾಲೆ – (ಶಾಲಾ) ಕಾರ್ಯಾಗಾರ
- ಸಾಲ್ಸರಿ – ಜಡಿ ಮಳೆ
- ಸಾವಗಿಸು – ಸರಿಪಡಿಸು; ಕ್ರಮಗೊಳಿಸು; ಸಾಂತ್ವನಗೊಳಿಸು
- ಸಾವದ್ಯ – ಕಳಂಕ
- ಸಾವದ್ಯಕ್ರಿಯೆ – ಕೆಟ್ಟ ಕೆಲಸ
- ಸಾವದ್ಯಭೀರು – ಪಾಪಕ್ಕೆ ಹದರುವವನು
- ಸಾವಷ್ಟಂಭ – ಗರ್ವದಿಂದ ಕೂಡಿರುವ
- ಸಾವಾಸಿ – ಕಂಚುಕಿ
- ಸಾವು – ಮರಣ
- ಸಾವೆ (ಶ್ಯಾಮ) ಒಂದು ಧಾನ್ಯ-
- ಸಾಷಾಢ – ಪೂರ್ವಾಷಾಢ ಉತ್ತರಾಷಾಢ ನಕ್ಷತ್ರಗಳಿಂದ ಕೂಡಿದ್ದು; ಋಷಿಗಳು ಹಿಡಿಯತಕ್ಕ ಮುತ್ತುಗಳ ದಂಡ
- ಸಾಷ್ಟಾಂಗ – ಎಂಟು ಅಂಗಗಳ ಸಹಿತ (ಎದೆ, ಹಣೆ, ಎರಡು ಕೈಗಳು, ಎರಡು ಮಂಡಿಗಳು, ಎರಡು ಪಾದಗಳು)
- ಸಾಸಿಗ – ಸಾಹಸಿಗ, ಪರಾಕ್ರಮಿ; ದುಸ್ಸಾಹಸಿ
- ಸಾಸಿರಕ(ಗ)ಣ್ಣ – ಬಹುಗಣ್ಣ, ಇಂದ್ರ
- ಸಾಸವೆಗುಡಿ – ಸಾಸಿವೆಯನ್ನು ಅರೆದು ಕುಡಿ; ಸಂಕಟ ಅನುಭವಿಸು
- ಸಾಸಿರ್ಮಡಿ – ಸಾವಿರಪಟ್ಟು
- ಸಾಸ್ನ – ಗಂಗೆದೊಗಲು
- ಸಾಸ್ನಾಪಟ – ಹಸುಗಳ ಗಂಗೆದೊಗಲು
- ಸಾಹಣ – ಆನೆಕುದುರೆಗಳನ್ನು ಪಳಗಿಸುವಿಕೆ
- ಸಾಹಣಿ – ಸವಾರ; ಆನೆಕುದುರೆಗಳನ್ನು ಪಳಗಿಸುವವನು
- ಸಾಹಸ – ಪರಾಕ್ರಮ
- ಸಾಹಸಭೂಷಣೆ – ಸಾಹಸವನ್ನೇ ಆಭರಣವಾಗುಳ್ಳವಳು
- ಸಾಹಸರಸಿಕ – ಸಾಹಸದಲ್ಲಿ ಸಂತೋಷಪಡುವವನು
- ಸಾಹಸವಂತ – ಪರಾಕ್ರಮಿ
- ಸಾಹಿತ್ಯವಿದ್ಯೆ – ಲಕ್ಷಣಶಾಸ್ತ್ರ
- ಸಾಳುವ – ಗಿಡುಗ
- ಸಿಂಗಬಲ – (ಸಿಂಹಬಲ) ಸಿಂಹದ ಶಕ್ತಿ
- ಸಿಂಗರಂಗೆಯ್ – ಅಲಂಕಾರಮಾಡು
- ಸಿಂಗವೇಂಟೆ – ಸಿಂಹವನ್ನು ಹಿಡಿಯುವ ಬೇಟೆ
- ಸಿಂಗಾಡಿ – ಬಿಲ್ಲು
- ಸಿಂಜಾನ – ಗೆಜ್ಜೆಯ ಧ್ವನಿ
- ಸಿಂಜಿನಿ – ಬಿಲ್ಲಿನ ಹೆದೆ
- ಸಿಂಜಿನೀವಳಯ – ಕಾಲ್ಗಡಗ
- ಸಿಂಟ – ಕೊಳಕ
- ಸಿಂದುರ – ಒಂದು ಬಗೆಯ ಹೂ, ಸಿಂದುವಾರ; ಆನೆ
- ಸಿಂದೂರ – ಕೇಸರಿಬಣ್ಣದ ಪುಡಿ
- ಸಿಂದೂರವಸನ – ಕೇಸರಿಬಣ್ಣದ ಬಟ್ಟೆ
- ಸಿಂಧ(ದ) – ಧ್ವಜ
- ಸಿಂಧು – ಸಮುದ್ರ; ನದಿ
- ಸಿಂಧುತಟ – ನದಿಯ ದಡ
- ಸಿಂಧುತೋಯ – ಸಮುದ್ರದ ನೀರು
- ಸಿಂಧುದ್ವಾರ – ಸಮುದ್ರದ ಮುಂಭಾಗ
- ಸಿಂಧುಪತಿ – ನದಿಗಳ ಒಡೆಯ, ಸಮುದ್ರ
- ಸಿಂಧುಪುತ್ರ – ಭೀಷ್ಮ
- ಸಿಂಧುಪ್ಲವ – ಪ್ರವಾಹ
- ಸಿಂಧುರ – ಆನೆ
- ಸಿಂಧುರಘಟೆ – ಆನೆಗಳ ಗುಂಪು
- ಸಿಂಧುರವಿರೋಧಿ – ಆನೆಯ ಶತ್ರು, ಸಿಂಹ
- ಸಿಂಧರಸ್ಕಂಧ – ಆನೆಯ ಭುಜ
- ಸಿಂಧರಸ್ಕಂಧಪೀಠ – ಆನೆಯ ಮೇಲಿನ ಅಂಬಾರಿ
- ಸಿಂಧುವಾರ – ಒಂದು ಮರ
- ಸಿಂಪಿಣಿ – ಚಿಮುಕಿಸುವುದು
- ಸಿಂಪಿಣಿಯಾಡು – ಸಿಂಪಡಿಸು
- ಸಿಂಪಿಸು – ಸಿಂಪಿಣಿಯಾಡು
- ಸಿಂಪು – ಹೀಚುಗಾಯಿ; ಮುತ್ತಿನ ಚಿಪ್ಪು
- ಸಿಂಬಿ – ಸುರುಳಿ
- ಸಿಂಬೆಗೊಳ್ – ಸುರುಳಿಯಾಗು
- ಸಿಂಹಗರ್ಜನೆ – ಸಿಂಹದ(ತೆ) ಗಟ್ಟಿಯಾದ ಕೂಗು
- ಸಿಂಹಘಂಟಿಕೆ – ಗಜನೆಯ ಧ್ವನಿ ಮಾಡುವ ಗಂಟೆ
- ಸಿಂಹಬಲ – ಸಿಂಹದಂತೆ ಬಲಿಷ್ಠನಾದವನು
- ಸಿಂಹರವ – ಸಿಂಹದ ಗರ್ಜನೆ
- ಸಿಂಹಲಂಘನ – ಸಿಂಹದ ನೆಗೆತ
- ಸಿಂಹವರ್ಣ – ಸಿಂಹದ ಸ್ವಭಾವದವನು
- ಸಿಂಹವಾಹಿನಿ – (ಜೈನ) ಒಂದು ವಿದ್ಯೆ; ಭರತ ಚಕ್ರವರ್ತಿಯ ಹಾಸಿಗೆಯ ಹೆಸರು
- ಸಿಂಹವಿಕ್ರೀಡಿತ – (ಜೈನ) ಒಂದು ಉಪವಾಸ ವ್ರತ
- ಸಿಂಹವಿಧೃತ – ಭರತ ಚಕ್ರವರ್ತಿಯ ಹಾಸಿಗೆಯ ಹೆಸರು
- ಸಿಂಹಶಿಶು – ಸಿಂಹದ ಮರಿ
- ಸಿಂಹಸಂಘಾತ – ಸಿಂಹಗಳ ಗುಂಪು
- ಸಿಂಹಾವಲೋಕನಕ್ರಮ – ಸಿಂಹದ ನೋಟದ ರೀತಿ; ಹಿಂದೆ ನಡೆದುದನ್ನು ಸಂಕ್ಷಿಪ್ತವಾಗಿಯೂ ಸಮಗ್ರವಾಗಿಯೂ ಪರಿಶೀಲಿಸುವ ಬಗೆ
- ಸಿಂಹಾಸಂದಿ – ಸಿಂಹಾಸನ
- ಸಿಂಹಾಸನ – (ಜೈನ) ಆಸನವನ್ನು ತ್ಯಜಿಸಿ ಪರಮಾತ್ಮನ ಆಸನವನ್ನು ಹೊಂದುವ ವ್ರತ, ಪರಿವ್ರಾಜಕ ಲಕ್ಷಣಗಲನ್ನುಳ್ಳ ಇಪ್ಪತ್ತೇಳು ಸೂತ್ರಪದಗಳಲ್ಲಿ ಒಂದು
- ಸಿಂಹಾಸನಸ್ಥ – ಸಿಂಹಾಸನವನ್ನು ಉಳ್ಳವನು, ರಾಜ
- ಸಿಂಹಾಸನಾಸೀನ – ಸಿಂಹಾಸನದಲ್ಲಿ ಕುಳಿತವನು, ರಾಜ
- ಸಿಂಹೀಮಧ್ಯೆ – ಸಿಂಹದ ನಡುವಿನಂತಹ ನಡುವುಳ್ಳವಳು
- ಸಿಕತ – ಮರಳು
- ಸಿಕತಾಕೃತಿ – ಮರಳಿನ ಆಕಾರ
- ಸಿಕತಿಲ(ಳ) – ಮರಳಿನಿಂದ ಕೂಡಿದ; ಮರಳಿನ ಭೂಮಿ
- ಸಿಕತಿಲ(ಳ)ತಲ(ಳ) – ಮರಳಿನಿಂದ ಕೂಡಿದ ಭೂಮಿ
- ಸಿಕ್ತ – ಒದ್ದೆಯಾದ; ಸಿಂಪಡಿಸಿದ
- ಸಿಗ್ಗಾಳಿ – ನಾಚಿಕೆಯ ಸ್ವಭಾವದವನು(ಳು)
- ಸಿಗ್ಗು – ನಾಚಿಕೆ; ಅವಮಾನ
- ಸಿಗ್ಗಾಗು – ನಾಚಿಕೆಗೊಳ್ಳು; ಅವಮಾನ ಅನುಭವಿಸು
- ಸಿಚಯ – ಮೇಲುಹೊದಿಕೆ, ಸೆರಗು
- ಸಿಚಯಕ – ರವಿಕೆ
- ಸಿಟ್ಟಿ – (ಸೃಷ್ಟಿ) ಜಗತ್ತು
- ಸಿಟ್ಟು – ಕೋಪ ಸಿಡಿ ಚಿಮ್ಮು; ಚೆಲ್ಲಾಪಿಲ್ಲಿಯಾಗು-
- ಸಿಡಿದಲೆ – ಮುಂಡದಿಂದ ಬೇರ್ಪಟ್ಟ ರುಂಡ; ಲೆಂಕರು ತಮ್ಮ ಯಜಮಾನನಿಗೆ ತಮ್ಮ ತಲೆಯನ್ನು ಕಡಿದು ಅರ್ಪಿಸುವ ವಿಧಿ
- ಸಿಡಿಮಿಡಿಗೊಳ್(ಳು) – ಚಡಪಡಿಸು; ಅಸಹನೆಯಿಂದ ಕುದಿ
- ಸಿಡಿಮಿಡಿವರ್ – ಚಡಪಡಿಕೆಯಿಂದ ಬಾ
- ಸಿಡಿಲ್ – ಚಿಮ್ಮು; ಗರ್ಜಿಸು; ಮೋಡದ ಘಟ್ಟನೆಯಿಂದಾಗುವ ಬೆಂಕಿ
- ಸಿಡಿಲ ಕಿಚ್ಚು – ಸಿಡಿಲಿನಿಂದಾದ ಬೆಂಕಿ
- ಸಿಡಿಲ ದನಿ – ಸಿಡಿಲಿನ ಆರ್ಭಟ
- ಸಿಡಿಲ ಬಳಗ – ಸಿಡಿಲುಗಳ ಪಂಕ್ತಿ
- ಸಿಡಿಲ ಸರಿ – ಸಿಡಲುಗಳಿಂದ ಕೂಡಿದ ಮಳೆ
- ಸಿಡಲ್ಗೆಂಡ – ಸಿಡಿಲಿನ ಬೆಂಕಿ
- ಸಿಡಿಲ್ತರ್ – ಸಿಡಿದು ಬಾ; ಚಿಮ್ಮಿ ಬಾ
- ಸಿಡಿಲ್ವೊಡೆ – ಸಿಡಿಲೆ¾ಗು
- ಸಿಡಿಲ್ಸಿಡಿ – ಸಿಡಿಲು ಚಿಮ್ಮು
- ಸಿಡುಂ(ಡಿಂ)ಬು – ಬಿದಿರ ಮೆಳೆ, ಪೊದೆ; ಮುಳ್ಳು
- ಸಿತ – ಬಿಳುಪಾದ; ಶುಕ್ರ; ಸಕ್ಕರೆ; ಶುಕ್ಲಪಕ್ಷ
- ಸಿತಕಿರಣಾಶ್ಮ – ಚಂದ್ರಕಾಂತಶಿಲೆ
- ಸಿತಗ – ಜಾರ; ವಂಚಕ
- ಸಿತಗತನ – ಹಾದರ
- ಸಿತಗೆ – ಜಾರಿಣಿ
- ಸಿತಚ್ಛವಿ – ಬಿಳಿಯ ಕಾಂತಿ
- ಸಿತದೂರ್ವಾಂಕುರ – ಬಿಳಿಯ ಗರಿಕೆಯ ಚಿಗುರು
- ಸಿತದ್ಯುತಿ – ಬಿಳಿಯ ಕಾಂತಿ, ಚಂದ್ರ
- ಸಿತಪಕ್ಷ – ಬಿಳಿಯ ರೆಕ್ಕೆ; ಶುಕ್ಲಪಕ್ಷ
- ಸಿತರುತ್ – ಸಿತದ್ಯುತಿ
- ಸಿತಸರ್ಷಪ – ಬಿಳಿಯ ಸಾಸಿವೆ
- ಸಿತಾಂಬುಜ – ಬಿಳಿಯ ತಾವರೆ, ಪುಂಡರೀಕ
- ಸಿತಾಕ್ಷತ – ಬಿಳಿಯ ಅಕ್ಷತೆ ಕಾಳು
- ಸಿತಾತಪತ್ರ – ಬೆಳ್ಗೊಡೆ, ಶ್ವೇತಚ್ಛತ್ರ
- ಸಿತಾಬ್ಜ – ಸಿತಾಂಬುಜ
- ಸಿತೇಕ್ಷು – ಬಿಳಿಯ ಕಬ್ಬು
- ಸಿತೇಕ್ಷುದಂಡ – ಬಿಳಿಯ ಕಬ್ಬಿನ ಜಲ್ಲೆ
- ಸಿತೇತರಗತಿ – ಸಿತ+ಇತರ+ಗತಿ, ಬಿಳಿಯಲ್ಲದ ನಡವಳಿಕೆ, ದುರ್ನಡತೆ; ಕಪ್ಪು (ಹೊಗೆಯ) ಹಾದಿಯಲ್ಲಿ ಸಾಗುವವನು, ಅಗ್ನಿ
- ಸಿದಿಗೆ – ಚಿತೆ
- ಸಿದುಗು – ತಡಕಾಡು
- ಸಿದ್ದಿಗೆ – ಚರ್ಮದ ಬುದ್ದಲಿ
- ಸಿದ್ಧ – ಸಾಬೀತಾದುದು; (ಜೈನ) ಪಂಚಪರಮೇಷ್ಠಿಗಳಲ್ಲಿ ಒಬ್ಬ
- ಸಿದ್ಧಕ್ಷೇತ್ರ – ಸಿದ್ಧರು ನೆಲೆಸಿರುವ ಸ್ಥಳ
- ಸಿದ್ಧನಿಲಯ – ಸಿದ್ಧಕ್ಷೇತ್ರ
- ಸಿದ್ಧಪಪದ – ಮೋಕ್ಷ
- ಸಿದ್ಧಪರಮೇಷ್ಠಿ – (ಜೈನ) ಪಂಚಪರಮೇಷ್ಠಿಗಳಲ್ಲಿ ಒಬ್ಬ
- ಸಿದ್ಧಮಾತೃಕೆ – ಸಿದ್ಧರಲ್ಲಿ ಪ್ರ್ರೀತಿ
- ಸಿದ್ಧರಸ – ಕೀಳು ಲೋಹಗಳನ್ನು ಚಿನ್ನವನ್ನಾಗಿಸುವ ರಸ
- ಸಿದ್ಧಶಿಲೆ – (ಜೈನ) ಸಿದ್ಧರು ನೆಲಸುವ ಬೆಟ್ಟ
- ಸಿದ್ಧಶೇಷೆ – (ಜೈನ) ನಿರ್ಮಾಲ್ಯ ಮುಂತಾದ ಪೂಜಿಸಿದ ವಸ್ತುಗಳು
- ಸಿದ್ಧಶೈಲ – ಸಿದ್ಧಶಿಲೆ
- ಸಿದ್ಧಸೇಸೆ – ಸಿದ್ಧಶೇಷೆ
- ಸಿದ್ಧಾಂಜನ – ಸಿದ್ಧರು ತಯಾರಿಸಿದ ಅತಿಮಾನುಷ ಶಕ್ತಿಯುಳ್ಳ ಅಂಜನ
- ಸಿದ್ಧಾಂತ – ಶಾಸ್ತ್ರಗ್ರಂಥ; ನಿರ್ಣೀತವಾದ ತತ್ವ
- ಸಿದ್ಧಾಂತಿ – ತತ್ವಪ್ರತಿಪಾದಕ
- ಸಿದ್ಧಾಯ – ನಿಗದಿಯಾದ ಕಂದಾಯ
- ಸಿದ್ಧಾಯತನ – ಸಿದ್ಧಕ್ಷೇತ್ರ
- ಸಿದ್ಧಾರ್ಥ – ಬಿಳಿಯ ಸಾಸಿವೆ
- ಸಿದ್ಧಾರ್ಥವೃಕ್ಷ – ಕಲ್ಪವೃಕ್ಷ
- ಸಿದ್ಧಿಸು – ನೆರವೇರು
- ಸಿಪ್ಪಡಸು – ಚಿಪ್ಪು ಆವರಿಸು
- ಸಿಪ್ಪಿಡು – ಚೀಪು
- ಸಿಪ್ಪು – ಚಿಪ್ಪು; ಭರಣಿ; ತಲೆಬುರುಡೆ
- ಸಿಬಿ(ವಿ)ಗೆ – ಪಲ್ಲಕ್ಕಿ
- ಸಿಬ್ಬ – ಆನೆಯ ಮೈಮೇಲಿನ ಮಚ್ಚೆ
- ಸಿರಣವಟ್ಟಿ – ಕುಸ್ತಿಯ ಒಂದು ಪಟ್ಟು
- ಸಿರಿ – (ಶ್ರೀ) ಸಂಪತ್ತು; ಲಕ್ಷ್ಮಿ; ಚೆಲುವು
- ಸಿರಿಕಂಡ – (ಶ್ರೀಖಂಡ) ಶ್ರೀಗಂಧ
- ಸಿರಿಕಂಡವೆಟ್ಟು – ಮಲಯ ಪರ್ವತ
- ಸಿರಿಗಂಧ – ಸಿರಿಕಂಡ
- ಸಿರಿಗನ್ನಡಿ – ಶ್ರೇಷ್ಠವಾದ ಕನ್ನಡಿ
- ಸಿರಿತಾಳೆ – (ಶ್ರೀತಾಲ) ಒಂದು ಬಗೆಯ ತಾಳೆಯ ಮರ
- ಸಿರಿಮಂಚ – ಶ್ರೇಷ್ಠವಾದ ಮಂಚ
- ಸಿರಿಯರಸ – ವಿಷ್ಣು
- ಸಿರಿಯಾಣ್ಮ – ಸಿರಿಯರಸ
- ಸಿರಿಯುಳ್ಳಂ – ಹಣವಂತ
- ಸಿರಿಯೊಡೆಯ – ಹಣವಂತ
- ಸಿರಿಯೋಲಗಂಗೊಡು – ವೈಭವದ ಕೂಡಿದ ಒಡ್ಡೋಲಗ ನಡೆಸು
- ಸಿರಿವಂತ – ಹಣವಂತ
- ಸಿರಿವಂತಿಗೆ – ಹುರಿಯೋಡು; ಬಾಣಲಿ
- ಸಿರಿವೆಣ್ – ಲಕ್ಷ್ಮಿ
- ಸಿರಿವೆಣ್ಣರಸ – ಲಕ್ಷ್ಮಿಯ ಒಡೆಯ, ವಿಷ್ಣು
- ಸಿರೆ – ಹಣ್ಣಿನ ನಾರು; ಮೆಣಸಿನ ಬಳ್ಳಿ
- ಸಿರ್ಕು – ಅಡ್ಡಿಯುಂಟುಮಾಡು
- ಸಿವಡಿ – ಲೆಕ್ಕದ ಪುಸ್ತಕ
- ಸಿವಿಗೆ – (ಶಿಬಿಕಾ) ಪಲ್ಲಕ್ಕಿ
- ಸಿ(ಸೆ)ಲೆ – ಬಂಡೆ
- ಸಿಲ್ಕಿಸು – ಸಿಕ್ಕಿಬೀಳುವಂತೆ ಮಾಡು
- ಸಿಲ್ಕು – ಅಡ್ಡಿಯುಂಟುಮಾಡುಸಿಕ್ಕಿಹಾಕಿಕೊ; ಬಂಧನ; ಬಂಧನಕ್ಕೊಳಗಾದ ವಸ್ತು
- ಸಿವಡಿ – ಲೆಕ್ಕದ ಪುಸ್ತಕ
- ಸೀ – ಸೀದುಹೋಗು, ಹೆಚ್ಚು ಉರಿಯಿಂದ ಕರಿಕಾಗುವುದು
- ಸೀಂಟಿ ಕಳೆ -ಒರೆಸಿ ಹಾಕು
- ಸೀಂಟು – (ಗುದಪ್ರದೇಶವನ್ನು) ತೊಳೆ; ಒರಸು; ನಾಶಮಾಡು
- ಸೀಕರ – ತುಂತುರು
- ಸೀಕರಿವೋಗು – ಸೀದುಹೋಗು
- ಸೀಗುರಿ – ಕೊಡೆ, ಚಾಮರ; ಒಂದು ಬಗೆಯ ಮರ
- ಸೀಗುರಿಯನಿಕ್ಕು – ಚಾಮರ ಬೀಸು
- ಸೀಗುರಿವಿಡು – ಚಾಮರವನ್ನು ಹಿಡಿದುಕೊ
- ಸೀತ – ಚಳಿ
- ಸೀತೆ – ಸೀತಾದೇವಿ; ಉತ್ತ ಭೂಮಿ
- ಸೀತ್ಕರಿಸು – ಸಂತೋಷದಿಂದ ಉದ್ಗರಿಸು
- ಸೀತ್ಕಾರ – ಭಾವಾಭಿವ್ಯಕ್ತಿಯ ಧ್ವನಿ
- ಸೀದು(ಧು) – ಮದ್ಯ
- ಸೀನ್ – ಮೂಗಿನಿಂದ ರಭಸವಾಗಿ ಉಸಿರು ಬರು
- ಸೀಪು – ಹೀರಿಕೊ; ಸಿಹಿತನ
- ಸೀಮ(ಮೆ) – ಎಲ್ಲೆ
- ಸೀಮಂತ(ರೇಖೆ) – ಬೈತಲೆ (ಗೆರೆ)
- ಸೀಮಂತಿನಿ – ಹೆಂಗಸು
- ಸೀಮಂತೋನ್ನಯನ – ಬಸಿರಿಗೆ ಬೈತಲೆ ತೆಗೆಯುವ ಶಾಸ್ತ್ರ; ಷೋಡಶ ಸಂಸ್ಕಾರಗಳಲ್ಲಿ ಒಂದು
- ಸೀಮಾವಿವಾದ – ಗಡಿಕಲಹ
- ಸೀಮಾವು – ಇಮ್ಮಾವು
- ಸೀಮೆಗಳೆ – ಗಡಿದಾಟು, ಮೀರು
- ಸೀಯನೆ – ಸಿಹಿಯಾಗಿ
- ಸೀರ – ನೇಗಿಲು; ತುಂತುರು
- ಸೀರಧರ – ನೇಗಿಲನ್ನು ಹಿಡಿದವನು, ಬಲರಾಮ
- ಸೀರಪಾಣಿ – ಸೀರಧರ
- ಸೀರಹಸ್ತ – ಸೀರಧರ
- ಸೀರಾಯುಧ – ನೇಗಿಲ ಆಯುಧ
- ಸೀರಾಸ್ತ್ರ – ಸೀರಾಯುಧ
- ಸೀರಿ – ಸೀರಧರ
- ಸೀರೆ – (ಚೀರ) ಬಟ್ಟೆ
- ಸೀರುಡು – ಜೀರುಂಡೆ
- ಸೀರ್ಕರಡಿ – ಭಯಂಕರವಾದ ಕರಡಿ
- ಸೀರ್ನಾಯ್ – ಉಗ್ರವಾದ ನಾಯಿ
- ಸೀರ್ವನಿವಡಪ(ಹ) – ತುಂತುರು ಮಳೆ
- ಸೀರ್ಪುಲ್ – ಸಣ್ಣ ಹುಲ್ಲುಕಡ್ಡಿ
- ಸೀರ್ವ(ರ್ಪ)ನಿ – ತುಂತುರು
- ಸೀವರ – ತುಂತುರು
- ಸೀವಳಿಗೆ – ಸಿಡುಬು
- ಸೀವು – ಅಲಂಕರಿಸಿಕೊ
- ಸೀಸಕ – ಕುಸ್ತಿಯ ಒಂದು ಪಟ್ಟು; ತಲೆಯ ಕವಚ
- ಸೀಳ್ – ಹೋಳುಮಾಡು; ಬಿರುಕು ಬಿಡು
- ಸೀಳಿಸು – ಸೀಳುವಂತೆ ಮಾಡು
- ಸುಂಕಂಗೊಳ್ – ತೆರಿಗೆ ವಸೂಲುಮಾಡು
- ಸುಂಟಿ – ಶುಂಠಿ
- ಸುಂಟಿಗೆ – (ಸುಟ್ಟ) ಮಾಂಸ
- ಸುಂದು – ಮಲಗು; ಸಂಭೋಗಿಸು
- ಸುಕ – ಸುಖ
- ಸುಕರ – ಮನೋಹರವಾದ; ಒಳ್ಳೆಯ ಕೈ
- ಸುಕವಿ – ಒಳ್ಳೆಯ ಕವಿ
- ಸುಕುಮಾರ(ಕ) – ಕೋಮಲವಾದ(ವನು)
- ಸುಕುಮಾರಾಂಗ(ಗಿ) – ಕೋಮಲ ದೇಹವುಳ್ಳವನು(ಳು)
- ಸುಕೃತ – ಪುಣ್ಯ
- ಸುಕೃತನಿಧಾನ – ಪುಣ್ಯನಿಧಿ
- ಸುಕೃತಿ – ಒಳ್ಳೆಯ ಕೆಲಸ; ಒಳ್ಳೆಯ ಸ್ವಭಾವ
- ಸುಖಂಬಡು – ಸುಖ ಅನುಭವಿಸು
- ಸುಖಕರ – ಸುಖವನ್ನುಂಟುಮಾಡುವ
- ಸುಖನಿಧಿ – ಸುಖದ ನೆಲೆ
- ಸುಖಲವ – ಅಲ್ಪಸುಖ
- ಸುಖಾಕರ – ಸುಖನಿಧಿ
- ಸುಖಾತ್ಮ – ಸುಖಸ್ವರೂಪಿ
- ಸುಖಾ(ವಾ)ಪ್ತಿ – ಸುಖವನ್ನು ಪಡೆಯುವಿಕೆ
- ಸುಖಾಶ್ರು – ಆನಂದದ ಕಣ್ಣೀರು
- ಸುಖಾಸೀನ – ಆರಾಮವಾಗಿ ಕುಳಿತಿರುವವನು
- ಸುಖಿ – ಸಂತೋಷದಿಂದಿರುವವನು
- ಸುಖೋದಯ – ಆನಂದದ ಪ್ರಾರಂಭ
- ಸುಗಂಧ – ಒಳ್ಳೆ ವಾಸನೆ, ಪರಿಮಳ
- ಸುಗಂಧಭಂಡಾರಿಗ – ಪರಿಮಳಗಳ ಶೇಖರಣೆಯ ಮೇಲ್ವಿಚಾರಕ
- ಸುಗತಮತ – ಬೌದ್ಧಮತ
- ಸುಗತಿ – ಮೋಕ್ಷ
- ಸುಗತಿವಡೆ – ಸದ್ಗತಿಯನ್ನು ಹೊಂದು
- ಸುಗಿ – ಹೆದರು; ಹಿಮ್ಮಟ್ಟು; ಪರಿತಪಿಸು
- ಸುಗ್ಗಿ – ವಸಂತಕಾಲ
- ಸುಗ್ರೀವ – ಒಳ್ಳೆಯ ಕೊರಳನ್ನು ಹೊಂದಿದ(ವನು); ಕಿಷ್ಕಂಧೆಯ ರಾಜ
- ಸುಚರಿತ(ತೆ) – ಸನ್ನಡತೆಯುಳ್ಳವ(ನು)(ಳು)
- ಸುಚರಿತ್ರತೆ – ಒಳ್ಳೆಯ ನಡವಳಿಕೆ
- ಸುಜವತ್ಸಲ(ಳ) – ಸಜ್ಜನಪಕ್ಷಪಾತಿ
- ಸುಜಾತ – ಚೆನ್ನಾಗಿ ವಿಕಸಿತಗೊಂಡ
- ಸುಟ್ಟಿತೋ(ದೋ)¾ು – ಬೆರಳಿನಿಂದ ತೋರಿಸು
- ಸುಟ್ಟಿಸು – ಸುಟ್ಟಿತೋ(ದೋ)¾ು
- ಸುಟ್ಟು – ಸುಟ್ಟಿತೋ(ದೋ)¾ು
- ಸುಟ್ಟುಂಬೆ – ತೋರುಬೆರಳು
- ಸುಟ್ಟುಂಬೆಯ ನೆ¿ಲ್ – ಮಾರ್ಗದರ್ಶನದ ನೆರಳು
- ಸುಟ್ಟುಂಬೆರಲ್ – ಸುಟ್ಟುಂಬೆ
- ಸುಟ್ಟುರೆ(¾õÉ) – ಸುಂಟರ ಗಾಳಿ; ಪ್ರವಾಹ
- ಸುಟ್ಟುರೆಮಸಗು – ಸುಂಟರಗಾಳಿ ಹರಡು
- ಸುಟ್ಟುರೆವಿಡು – ಸುಂಟರಗಾಳಿಯಂತೆ ಬೇಗ ಹರಡು
- ಸುಡು – ದಹಿಸು
- ಸುಡುನುಡಿ – ತೀಕ್ಷ್ಣವಾದ ಮಾತು
- ಸುಡುಪುಡು – ಬಿಸಿಬಿಸಿ
- ಸುಡುಮಿಡು – ಚಡಪಡಿಸು
- ಸುಡುವುಣ್ – ಉರಿಯುವ ಹುಣ್ಣು
- ಸುಣ್ಣದೆಲೆ – ಸುಣ್ಣ ಹಾಕಿದ ವೀಳೆಯದೆಲೆ
- ಸುತ – ಹುಟ್ಟಿದ; ಮಗ
- ಸುತದೋಹಳ – ಮಗನ್ನು ಪಡೆಯಬೇಖೇಂಬ ಹಂಬಲ
- ಸುತಪ – ಶ್ರೇಷ್ಠ ತಪಸ್ಸು
- ಸುತಮೋಹ – ಮಗನ ಮೇಲಿನ ಪ್ರೀತಿ
- ಸುತಲ(ಳ) – ಕೆಳಗಿನ ಏಳುಲೋಕಗಳಲ್ಲಿ ಒಂದು
- ಸುತಲಾಭ – ಮಗನನ್ನು ಪಡೆಯುವ ಸಂತೋಷ
- ಸುತಲಾಭಾರ್ಥಿ – ಮಗನ್ನು ಪಡೆಯುವ
- ಸಂತಸಕ್ಕಾಗಿ ಹಂಬಲಿಸುವವನು
- ಸುತಶೋಕ – ಮಗನ ಕಾರಣದಿಂದಾಗುವ ದುಃಖ
- ಸುತಾಹೃತಿ – ಮಗನ ಅಪಹರಣ
- ಸುತಿ – (ಶ್ರುತಿ), ವೇದ
- ಸುತಿಗೂಡು – ಹಾಡುವಾಗ ಆಧಾರಸ್ಥಾಯಿಗೆ ಹೊಂದಿಕೊಳ್ಳುವುದು
- ಸುತೆ – ಮಗಳು
- ಸುತ್ತುಂಗುರುಳ್ – ಗುಂಗುರು ಕೂದಲು
- ಸುತ್ಥಣೆ – ಕಾಲಾಳು ಸೈನ್ಯ
- ಸುದತಿ – ಚೆನ್ನಾದ ಹಲ್ಲುಗಳುಳ್ಳವಳು, ಸುಂದರಿ
- ಸುದೃಢ – ಬಹಳ ಗಟ್ಟಿಯಾದ
- ಸುದ್ದಗನ್ನಡ – ಅಚ್ಚಗನ್ನಡ
- ಸುದ್ದಗೆ – (ಶುದ್ಧಕ) ಅಕ್ಷರ; ಶುದ್ಧಗೆ
- ಸುಧರ್ಮ – ಒಳ್ಳೆಯ ನಡವಳಿಕೆ
- ಸುಧರ್ಮಾಧಿಪ – ಒಳ್ಳೆಯ ಧರ್ಮದ ಒಡೆಯ
- ಸುಧರ್ಮಾನುವರ್ತಿನಿ – ಒಳ್ಳೆಯ ಧರ್ಮವನ್ನು ಅನುಸರಿಸುವವನು(ಳು)
- ಸುಧಾ – ಅಮೃತ; ಸುಣ್ಣ
- ಸುಧಾಂಶು(ಬಿಂಬ) – ಚಂದ್ರ(ಮಂಡಲ)
- ಸುಧಾಂಶುಲೇಖೆ – ಚಂದ್ರನಲ್ಲಿನ ಕಲೆ
- ಸುಧಾಂಶುವಲ್ಲಭ – ಬಿಳಿ ಕಿರಣಗಳಿಗೆ ಒಡೆಯ, ಚಂದ್ರ
- ಸುಧಾಕರ – ಚಂದ್ರ
- ಸುಧಾಕರಧರ – ಚಂದ್ರಮೌಳಿ, ಶಿವ
- ಸುಧಾಗೃಹ – ಸುಣ್ಣ ಬಳಿದ ಮನೆ
- ಸುಧಾಜಾತ – ಹಾಲ್ಗಡಲಲ್ಲಿ ಹುಟ್ಟಿದವನು, ಚಂದ್ರ
- ಸುಧಾಧವಲಿ(ಳಿ)ತ – ಸುಣ್ಣ ಬಳಿದು ಬೆಳ್ಳಗಾದ
- ಸುಧಾಬ್ಧಿ – ಹಾಲ್ಗಡಲು
- ಸುಧಾಭವನ – ಸುಧಾಗೃಹ
- ಸುಧಾಮಯೂಖ – ಸುಧಾಕರ
- ಸುಧಾಮರೀಚಿ – ಬೆಳುದಿಂಗಳು, ಚಂದ್ರ
- ಸುಧಾರುಗ್ಧರ – ಸುಧಾಕರಧರ
- ಸುಧಾರುಚಿ – ಸುಧಾಮರೀಚಿ
- ಸುಧಾರ್ಣವ – ಸುಧಾಬ್ಧಿ
- ಸುಧಾಶ(ನ) – ಅಮೃತ ಕುಡಿದವನು, ದೇವತೆ
- ಸುಧಾಸೂತಿ – ಸುಧಾಜಾತ, ಚಂದ್ರ
- ಸುಧಾಸ್ಯಂದಿ – ಅಮೃತವನ್ನು ಸುರಿಸುವ; ಸಂತೋಷವುಂಟುಮಾಡುವ
- ಸುಧೆ – (ಸುಧಾ) ಅಮೃತ
- ಸುನಯ – ಒಳ್ಳೆಯ ನಡವಳಿಕೆ
- ಸುನಾಕನಗ – ದೇವಲೋಕದ ಬೆಟ್ಟ, ಮೇರು
- ಸುನಾಸೀರ – ದೇವತೆಗಳ ಒಡೆಯ, ಇಂದ್ರ
- ಸುನಾಸೀರಶರಾಸನ – ಇಂದ್ರನ ಬಿಲ್ಲು, ಕಾಮನ ಬಿಲ್ಲು
- ಸುನ್ನ – ಶೂನ್ಯ
- ಸುಪಕ್ಷ – ಒಳ್ಳೆಯ ರೆಕ್ಕೆ; ಶುಕ್ಲಪಕ್ಷ; ಒಂದು ಕುಲಪರ್ವತ
- ಸುಪರ್ಣ – ಗರುಡ; (ಜೈನ) ದೇವತೆಗಳ ಒಂದು ವರ್ಗ
- ಸುಪರ್ಣಕೇತು – ಗರುಡಧ್ವಜ, ವಿಷ್ಣು
- ಸುಪರ್ಣರಥ – ಗರುಡನನ್ನು ರಥವನ್ನಾಗಿ (ವಾಹನವನ್ನಾಗಿ) ಉಳ್ಳವನು, ವಿಷ್ಣು
- ಸುಪರ್ವ – ದೇವತೆ
- ಸುಪರ್ವಗುರು – ದೇವತೆಗಳ ಗುರು, ಬೃಹಸ್ಪತಿ
- ಸುಪರ್ವವಧು – ಅಪ್ಸರಸ್ತ್ರೀ
- ಸುಪಾಣಿ – ಒಳ್ಳೆಯ ಮುತ್ತು
- ಸುಪುಷ್ಪಪಟ್ಟ – ರಾಜರೂ, ದೇವತೆಗಳೂ ಧರಿಸುವ ನಾನಾ ಬಗೆಯ ಕಿರೀಟಗಳಲ್ಲಿ ಒಂದು
- ಸುಪ್ತಪ್ರಲಾಪ – ಕನವರಿಕೆ
- ಸುಪ್ತಿ – ನಿದ್ದೆ; ಮರೆವು
- ಸುಪ್ತೆ – ನಿದ್ದೆ ಮಾಡುತ್ತಿರುವವಳು
- ಸುಪ್ಪಲ್ – ಒಂದು ಬಗೆಯ ಭಕ್ಷ್ಯ; ಚಾಕಣ
- ಸುಪ್ರತಿಷ್ಠ – (ಜೈನ) ಅರವತ್ತುಮೂರು
- ಇಂದ್ರಕ(ವಿಮಾನ)ಗಳಲ್ಲಿ ಒಂದು
- ಸುಪ್ರತಿಷ್ಠಕ – (ಜೈನ) ಮಂಗಳದ್ರವ್ಯಗಳ ಪಾತ್ರೆ
- ಸುಪ್ರತೀಕಪತಿ – (ಜೈನ) ಈಶಾನಕಲ್ಪದ ಒಡೆಯ
- ಸುಪ್ರಬುದ್ಧ – ಜೈನ) ಅರವತ್ತುಮೂರು
- ಇಂದ್ರಕ(ವಿಮಾನ)ಗಳಲ್ಲಿ ಒಂದು
- ಸುಪ್ರಭೆ – ಒಳ್ಳೆಯ ಕಾಂತಿ; ಗ್ನಿಯ ಏಳು ನಾಲಗೆಗಳಲ್ಲಿ ಒಂದು
- ಸುಪ್ರಾಸುಕ – (ಜೈನ) ಜೀವಜಂತುಗಳಿಲ್ಲದೆ ಶುದ್ಧವಾಗಿರುವ
- ಸುಪ್ರೀತಿ – (ಜೈನ) ಗರ್ಭಾನ್ವಯಕ್ರಿಯೆಗಳಲ್ಲಿ ಒಂದು; ಗರ್ಭಿಣಿಗೆ ಐದನೆಯ ತಿಂಗಳಲ್ಲಿ ಮಾಡುವ ಒಂದು ಸಂಸ್ಕಾರ
- ಸುಬಟ್ಟಕ್ಕರ – (ಪ್ರಾಕೃತದ ಸುಬ+ಅಟ್ಠ+ಅಕ್ಕರ) ಎಂಟು ಅಕ್ಷರಗಳ ನಮಸ್ಕಾರ ಮಂತ್ರ
- ಸುಬುದ್ಧಿಗೆಡು – ವಿವೇಚನೆಯನ್ನು ಕಳೆದುಕೊ
- ಸುಬ್ಬರಸೂ¾õÉ – ಎಲ್ಲವನ್ನೂ ದೋಚುವುದು
- ಸುಬ್ಬುರುವಾಲ – ಕೂದಲು ತುಂಬಿದ ಬಾಲವುಳ್ಳ ನಾಯಿ
- ಸುಭಗ – ಸುಂದರವಾದ; ಶ್ರೇಷ್ಠ; ಚೆಲುವ; ಪುಣ್ಯವಂತ
- ಸುಭಗೆ – ಸೌಭಾಗ್ಯವತಿ
- ಸುಭಟತ್ರಿಣೇತ್ರ – ಮುಕ್ಕಣ್ಣನಂತಹ ಯೋಧ
- ಸುಭಟವೃತ್ತಿ – ಶ್ರೇಷ್ಠ ಭಟರಿಗೆ ಕೊಡುವ ಮಾನ್ಯ
- ಸುಭದ್ರ – ಆನೆಯ ಉತ್ತಮ ತಳಿ
- ಸುಭಾಷಿತ – ಚೆನ್ನಾಗಿ ಮಾತನಾಡುವ; ಸೂಕ್ತಿ
- ಸುಭಿಕ್ಷತ್ವ – (ಜೈನ) ಕೇವಲಜಾÐನ ಉಂಟಾದಾಗ ದೊರೆಯುವ ಹತ್ತು ಅತಿಶಯಗಳಲ್ಲಿ ಒಂದು
- ಸುಮತಿ – ಜ್ಞಾನಿ; (ಜೈನ) ಐದನೆಯ ತೀರ್ಥಂಕರ
- ಸುಮನಸ್ – ಒಳ್ಳೆಯ ಮನಸ್ಸು; ಹೂ; ದೇವತೆ; ಪಂಡಿತ
- ಸುಮನಶ್ಚಾಪ – ಸುಮನಸ್+ಚಾಪ, ಮನ್ಮಥ
- ಸುಮನಶ್ಶರ – ಹೂಬಾಣ, ಮನ್ಮಥ
- ಸುಮನಶ್ಚೈಳ – ದೇವಪರ್ವತ, ಮೇರು
- ಸುಮನಶ್ಶೇಖರ – ಹೂಮುಡಿದವನು
- ಸುಮನಸ್ವಿ – ಒಳ್ಳಯ ಮನಸ್ಸುಳ್ಳವನು
- ಸುಮನಸ್ಸಿಂಧು – ದೇವನದಿ
- ಸುಮನೋದಾಮ – ಹೂಹಾರ
- ಸುಮನೋಧರ್ಮ – ಒಳ್ಳೆಯ ಸ್ವಭಾವ; ಹೂವಿನ ಬಿಲ್ಲು; ಪಂಡಿತಧರ್ಮ
- ಸುಮನೋನಿವೇಶ – ಹೂಗಳ ನೆಲೆ; ಒಳ್ಳೆಯ ಮನಸ್ಸಿನ ನೆಲೆ
- ಸುಮನೋಬಾಣ – ಹೂಬಾಣ, ಮನ್ಮಥ
- ಸುಮನೋಬಾಣಕ್ರೀಡೆ – ಕಾಮಕೇಳಿ
- ಸುಮನೋಮಂಜರಿ – ಹೂಗೊಂಚಲು
- ಸುಮನೋಮಾರ್ಗಣ – ಸುಮನೋಬಾಣ
- ಸುಮನೋಮಾಲೆ(ಳೆ) – ಸುಮನೋದಾಮ
- ಸುಮನೋಮಿಥುನ – ದೇವದಂಪತಿ
- ಸುಮನೋಲೋಕ – ಸ್ವರ್ಗ
- ಸುಮನೋವನ – ಇಂದ್ರನ ನಂದನವನ
- ಸುಮನೋವರ್ಷ – ಹೂಮಳೆ
- ಸುಮನೋವಲ್ಲಭ – ದೇವೇಂದ್ರ
- ಸುಮನೋವಾಸ – ಹೂಗಳಿಗೆ ಆಶ್ರಯವಾದವನು;
- ಪಂಡಿತಜನಕ್ಕೆ ಆಶ್ರಯವಿತ್ತವನು
- ಸುಮನೋವಿಶಿಖ – ಸುಮನೋಬಾಣ
- ಸುಮಾರ್ಗ – ಸರಿಯಾದ ದಾರಿ; ಉತ್ತಮ ಶೈಲಿ
- ಸುಮಾಸಾರ – ಸುಮನೋವರ್ಷ
- ಸುಮೇರುಮೇಖಳೆ – ಮೇರುಪರ್ವತದ ತಪ್ಪಲು
- ಸುಮೇಷು – ಸುಮ+ಇಷು, ಹೂಬಾಣ
- ಸುಯ್ – ಉಸಿರು; ಉಸಿರಾಡು; ನಿಟ್ಟುಸಿರುಬಿಡು
- ಸುಯ್ದಾನ – ಕಾವಲು
- ಸುಯ್ಯತಾಣ – ಕಸೂತಿ ಮಾಡಿದ ಬಟ್ಟೆ
- ಸುಯ್ಯಲ್ – ಉಸಿರು; ನಿಟ್ಟುಸಿರು
- ಸುಯ್ಯಾಣ – ಸುಯ್ಯತಾಣ
- ಸುಯ್ವೆಂಕೆ – ನಿಟ್ಟಿಸಿರಿನ ಬಿಸಿಪು
- ಸುಯ್ವೊಡರ್ – ನಿಟ್ಟುಸಿರು ಹೊರಹೊಮ್ಮು
- ಸುರಕನ್ನೆ – ದೇವಕನ್ನಿಕೆ
- ಸುರಕನ್ಯಕೆ – ಸುರಕನ್ನೆ
- ಸುರಕರಿ – ಐರಾವತ
- ಸುರಕಾಂತೆ – ಸುರಕನ್ನೆ
- ಸುರಕುಜ – ಕಲ್ಪವೃಕ್ಷ
- ಸುರಕುಧರ – ದೇವಲೋಕದ ಬೆಟ್ಟ, ಮೇರು
- ಸುರಕುಸುಮ – ಪಾರಿಜಾತ
- ಸುರಖ – ಕಳ್ಳತನವನ್ನು ಪತ್ತೆಮಾಡುವ ಕಲೆ
- ಸುರಗಂಧವಾರಣ – ಸುರಕರಿ
- ಸುರಗಣಾಧಿಪ – ದೇವೇಂದ್ರ
- ಸುರಗಣಿಕೆ – ಅಪ್ಸರೆ
- ಸುರಗತಿ – ಅಮರತ್ವ
- ಸುರಗಿ – (ಸುರಿಕಾ) ಸಣ್ಣ ಕತ್ತಿ; ಒಂದು ಹೂ
- ಸುರಗಿಗಟ್ಟು – ಕಠಾರಿ ಸಿಕ್ಕಿಸಿಕೊಂಡಿರು
- ಸುರಗೀತ – ದೇವತೆಗಳ ಹಾಡು
- ಸುರಗುರು – ದೇವತೆಗ: ಗುರು, ಬೃಹಸ್ಪತಿ
- ಸುರಗೇಯ – ಸುರಗೀತ
- ಸುರಗೋಪ – ಮಿಂಚುಹುಳು
- ಸುರಚಾಪ – ಕಾಮನ ಬಿಲ್ಲು
- ಸುರಜನ – ದೇವತೆಗಳು
- ಸುರಜ್ಯೇಷ್ಠ – ದೇವತೆಗಳ ಹಿರಿಯ, ಬ್ರಹ್ಮ
- ಸುರತರಾಗ – ಕಾಮಾಸಕ್ತಿ
- ಸುರತರು – ಸುರಕುಜ
- ಸುರತರುಣಿ – ದೇವವಕನ್ನಿಕೆ
- ಸುರತಾಲಯ – ಸಂಭೋಗದ ಸ್ಥಳ; ಮಲಗುವ ಮನೆ
- ಸುರತೂರ್ಯ – ದೇವದುಂದುಭಿ
- ಸುರತ್ವ – ದೇವತೆಯ ಸ್ಥಿತಿ
- ಸುರದಿಕ್ಕು – ಪೂರ್ವದಿಕ್ಕು
- ಸುರದೀಘೀಕೆ – ದೇವನದಿ
- ಸುರದುಂದುಭಿ – (ಜೈನ) ಅಷ್ಟಮಹಾ ಪ್ರತಿಹಾರ್ಯಗಳಲ್ಲಿ ಒಂದು, ದೇವದುಂದುಭಿ
- ಸುರದ್ರುಮ – ಸುರಕುಜ
- ಸುರಧನು – ಕಾಮನ ಬಿಲ್ಲು
- ಸುರಧರೆ – ಸ್ವರ್ಗ
- ಸುರನಗ – ಮೇರುಪರ್ವತ
- ಸುರನದಿ – ದೇವಗಂಗೆ
- ಸುರನಾರಿ – ದೇವತಾಸ್ತ್ರೀ
- ಸುರಪ(ತಿ) – ದೇವತೆಗಳ ಒಡೆಯ, ಇಂದ್ರ
- ಸುರಪಟಹ – ದೇವಲೋಕದ ತಮ್ಮಟೆ
- ಸುರಭಿ – ಕಾಮಧೇನು; ಹಸು; ಸುವಾಸನೆ; ವಸಂತ
- ಸುರಭಿಗಂಧತ್ವ – ಪರಿಮಳಯುಕ್ತತೆ
- ಸುರಭಿಜಲ(ಳ) – ಸುವಾಸನೆಯ ನೀರು, ಪನ್ನೀರು
- ಸುರಭಿದ್ರವ್ಯ – ಸುಗಂಧದ್ರವ್ಯ
- ಸುರಭಿನಿಶ್ವಾಸ – ಪರಿಮಳಯುಕ್ತ ಉಸಿರು
- ಸುರಭಿಪರಿಮಳ – ಸುವಾಸನೆ
- ಸುರಭಿಸಮಯ – ವಸಂತಕಾಲ
- ಸುರಭೂಜ – ಕಲ್ಪವೃಕ್ಷ
- ಸುರಭೂಧರ – ಮೇರುಪರ್ವತ
- ಸುರಭೂರುಹ – ಕಲ್ಪವೃಕ್ಷ
- ಸುರಮಹೀರುಹ – ಸುರಭೂರುಹ
- ಸುರಮಾರ್ಗ – ದೇವತೆಗಳ ದಾರಿ, ಆಕಾಶ
- ಸುರಮಿಥುನ – ದೇವದಂಪತಿ
- ಸುರಯಿ – ಪುನ್ನಾಗ, ಸುರಗಿ ಗಿಡ
- ಸುರರಮಣಿ – ದೇವತಾಸ್ತ್ರೀ
- ಸುರವಕ್ತ್ರ – ಅಗ್ನಿ
- ಸುರವಧು – ಅಪ್ಸರೆ
- ಸುರವನಿತೆ – ಸುರವಧು
- ಸುರವಲ್ಲರಿ – ದೇವಲೋಕದ ಬಳ್ಳಿ, ಕಲ್ಪಲತೆ
- ಸುರವಿಧ್ವಂಸಿ – ದೇವತೆಗಳ ಶತ್ರು
- ಸುರವಿಳಾಸಿನಿ – ಅಪ್ಸರೆ
- ಸುರವೈದ್ಯ – ದೇವತೆಗಳ ವೈದ್ಯ, ಧನ್ವಂತರಿ
- ಸುರವೈರಿ – ಸುರವಿಧ್ವಂಸಿ
- ಸುರವೊ(ಹೊ)ನ್ನೆ – ಪುನ್ನಾಗದ ಮರ
- ಸುರಶಿಖರಿ – ಮೇರುಪರ್ವತ
- ಸುರಸದ್ಮ – ಸ್ವರ್ಗ
- ಸುರಸಮಿತಿ – ದೇವತೆಗಳ ಸಮೂಹ
- ಸುರಸರಿತ್ – ದೇವನದಿ
- ಸುರಸಿಂಧು – ಸುರಸರಿತ್
- ಸುರಸಿಂಧುಜ – ಭೀಷ್ಮ
- ಸುರಸ್ತ್ರೀ – ದೇವತಾಸ್ತ್ರೀ
- ಸುರಾಂಗ – (ಜೈನ) ದಶಕಲ್ಪಕುಜಗಳಲ್ಲಿ ಒಂದು, ಮಾದಕ ಪಾನೀಯಗಳನ್ನು ನೀಡುವಂಥದು
- ಸುರಾಂಗನೆ – ಸುರಸ್ತ್ರೀ
- ಸುರಾಚಲ(ಳ) – ಮೇರುಪರ್ವತ
- ಸುರಾದ್ರಿ – ಸುರಾಚಲ(ಳ)
- ಸುರಾಧೀಶ – ಇಂದ್ರ
- ಸುರಾಧ್ವ – ಆಕಾಶ
- ಸುರಾಪಗೆ – ಸುರಸರಿತ್
- ಸುರಾವನೀಜ – ಸುರತರು
- ಸುರಾಸನ – ಇಂದ್ರನ ಪೀಠ
- ಸುರಿ – ಒಂದೇ ಸಮನೆ ಬೀಳು; ಸೋರು
- ಸುರಿಗೆ – ಕಿರುಗತ್ತಿ
- ಸುರಿಗೆಗಾಳಗ – ಕಿರುಗತ್ತಿಗಳನ್ನು ಹಿಡಿದು
- ಮಾಡುವ ಯುದ್ಧ
- ಸುರಿಗೆವಿಡಿ – ಕಿರುಗತ್ತಿಯನ್ನು ಹಿಡಿದುಕೊ
- ಸುರಿತರ್ – ಹರಿದು ಬಾ
- ಸುರುಂಟು – ಮುರುಟಿಕೊ, ಸಂಕೋಚಗೊಳ್ಳು
- ಸುರುಳ್ – ಸುತ್ತಿಕೊ, ಸಂಕೋಚಗೊಳ್ಳು; ಸಂಶಯ
- ಸುರುಳಿ – ಕೆಟ್ಟ ಹೆಂಗಸು
- ಸುರುಳಿಗುರುಳ್ – ಗುಂಗುರು ಕೂದಲು
- ಸುರುಳ್ಚು – ಸಂಕೋಚಗೊಳಿಸು
- ಸುರುಳ್ತರ್ – ಕುಸಿದುಹೋಗು
- ಸುರೂಪವೃತ್ತಿ – ಸೌಂದರ್ಯ
- ಸುರೆ – ಮದ್ಯ
- ಸುರೇಂದ್ರ – ದೇವೇಂದ್ರ
- ಸುರೇಂದರಜ – ದೇವೇಂದ್ರನ ಮಗ, ಅರ್ಜುನ
- ಸುರೇಂದ್ರತ್ವ – (ಜೈನ) ಸಪ್ತ ಪರಮಸ್ಥಾನಗಳಲ್ಲಿ ಒಂದು, ಇಂದ್ರಪದವಿ
- ಸುರೇಂದ್ರಧನು – ಕಾಮನ ಬಿಲ್ಲು
- ಸುರೇಂದ್ರಾಶೆ – ಇಂದ್ರನ ದಿಕ್ಕು, ಪೂರ್ವ
- ಸುರೇಭ – ಸುರ+ಇಭ, ಐರಾವತ
- ಸುರೇಶ್ವರ – ದೇವೇಂದ್ರ
- ಸುರೋಧ – ಆಕಾಶ, ಸ್ವರ್ಗ
- ಸುರೋರ್ವಿ(ೀ)ಜ – ಕಲ್ಪವೃಕ್ಷ
- ಸುರ್ಕು – ಕುಗ್ಗು; ಹೆದರು; ನಿರುತ್ಸಾಹಗೊಳ್ಳು; ಚರ್ಮದ ಸುಕ್ಕು
- ಸುರ್ಕುಂಗುರುಳ್ – ಗುಂಗುರು ಕೂದಲು
- ಸುರ್ಕುಸಿರ್ – ಕುಗ್ಗಿದ ಉಸಿರು
- ಸುರ್ವ(ರ್ಬ)ಡರ್ – ಒತ್ತೊತ್ತಾಗು
- ಸುರ್ವು(ರ್ಬು) – ನಿಬಿಡತೆ; ರಾಶಿ
- ಸುರ್ವುಗೊಳ್ – ಸುರ್ವ(ರ್ಬ)ಡರ್
- ಸುಲಲಿತ – ಮೋಹಕವಾದ
- ಸುಲಲಿತೆ – ಸುಂದರಿ
- ಸುಲಿ – ಹೊರಪದರವನ್ನು ತೆಗೆ; ಬಿರುಕುಬಿಡು; ಶುಭ್ರಗೊಳಿಸಲು ತಿಕ್ಕು; ಕಿತ್ತುಕೊ
- ಸುಲಿಕೆ – ನಾರು
- ಸುಲಿಪ(ವ)ಲ್ – ಶುಭ್ರಗೊಳಿಸಿದ ಹಲ್ಲು
- ಸುಲಿಪಲ್ವೆಳಗು – ಶುಭ್ರಗೊಳಿಸಿದ ಹಲ್ಲಿನ ಹೊಳಪು
- ಸುಲ್ವ(ಲ್ವು) – ತಾಮ್ರ
- ಸುವರ್ಣ – ಒಳ್ಳೆಯ ಬಣ್ಣ; ಚಿನ್ನಸುವರ್ಣಕಾ
- ಸುವರ್ಣಕಾರ – ಅಕ್ಕಸಾಲೆ
- ಸುವರ್ಣಕ್ರೌಂಚ – ಕ್ರೌಂಚಪಕ್ಷಿಯ ಆಕಾರದ ನೀರಿನ ಚಿನ್ನದ ಗಿಂಡಿ
- ಸುವರ್ಣವರ್ಣ – ಚಿನ್ನದ ಬಣ್ಣ, ಹಳದಿ
- ಸುವರ್ಣಾಂಬರ – ಜರತಾರಿ ಬಟ್ಟೆ
- ಸುವರ್ಣಾಂಬುಜ – ಹೊಂಬಣ್ಣದ ತಾವರೆ
- ಸುವರ್ತಕ – ಪ್ರಳಯಕಾಲದ ಮೋಡ
- ಸುವಿಚಾರಿತ – ಚೆನ್ನಾಗಿ ಪರಿಶೀಲನೆಗೊಳಗಾದ
- ಸುವಿಧಾನ – ಅಚ್ಚುಕಟ್ಟು
- ಸುವೃಷ್ಟಿ – ಸಮೃದ್ಧವಾದ ಮಳೆ
- ಸುವ್ರತ – ಒಳ್ಳೆಯ ವ್ರತ; (ಜೈನ) ಇಪ್ಪತ್ತನೆಯ ತೀರ್ಥಂಕರನ ಹೆಸರು
- ಸುವ್ವಿ – ಹಾಡಿನ ಸೊಲ್ಲು
- ಸುಶ್ಲಕ್ಷ್ಣ – ಹೊಳಪುಗೊಂಡ
- ಸುಷಮ – ಸಮಾನವಾದ; (ಜೈನ) ಅವಸರ್ಪಿಣಿಯ ಒಂದು ಹಂತ, ಸಮೃದ್ಧಿಯ ಕಾಲ
- ಸುಷಮದುಷ್ಷಮ – (ಜೈನ) ಅವಸರ್ಪಿಣಿಯ ಒಂದು ಹಂತ, ಕಡಿಮೆ ದುಃಖದ ಕಾಲ
- ಸುಷಮಸುಷಮ(ಮೆ) – (ಜೈನ) ಅವಸರ್ಪಿಣಿಯ ಒಂದು ಹಂತ, ತುಂಬ ಸುಖದ ಕಾಲ
- ಸುಷಿರ(ವಾದ್ಯ) – ಊದುವ ವಾದ್ಯ
- ಸಷುಮ್ನೆ – ಚಂದ್ರನಿಗೆ ಶಾಖವುಂಟುಮಾಡುವ ಏಳು ಕಿರಣಗಳಲ್ಲಿ ಒಂದು
- ಸುಷ್ಣು – ಸಮರ್ಥ
- ಸುಸರ – (ಸುಸ್ವರ) ಇಂಪಾದ ಧ್ವನಿ
- ಸುಸರತನ – ಇಂಪು
- ಸುಸರಿಕೆ – ಇಂಪಾದ ಧ್ವನಿಯನ್ನು ಹೊಂದಿರುವುದು
- ಸುಸಿರ – ತೂತು
- ಸುಸಿಲ್ – ರತಿ, ಸಂಭೋಗ; ಬೆಳಗಿನ ಹೊತ್ತು
- ಸುಸಿಲಾಸೆ – ಕಾಮೇಚ್ಛೆ
- ಸುಸ್ತನಿತ – ಮೇಘಧ್ವನಿ, ಗುಡುಗು
- ಸುಸ್ಥ – ಗಟ್ಟಿಯಾಗಿ ನೆಲೆಗೊಂಡ
- ಸುಸ್ಥತೆ – ನೆಲೆಗೊಮಡ ಸ್ಥಿತಿ
- ಸುಹೃಜ್ಜನ – ಸುಹೃತ್+ಜನ, ಮಿತ್ರವರ್ಗ
- ಸುಹೃತ್ – ಸ್ನೇಹಿತ
- ಸುಹೃತ್ವ – ಗೆಳೆತನ
- ಸೂಕರ – ಹಂದಿ
- ಸೂಕರಿ – ಹೆಣ್ಣು ಹಂದಿ
- ಸೂಕಳ – ಬಿರುಗುದುರೆ, ಕಾಡುಕುದುರೆ
- ಸೂಕಳತುರಂಗ – ಸೂಕಳ
- ಸೂಕಳತ್ವ – ತುಂಟತನ, ಬಿರುಸು
- ಸೂಕಳಾಶ್ವ – ಸೂಕಳ
- ಸೂಕುಳಿ – ಜಡತ್ವ
- ಸೂಕ್ತಸತ್ಯ – ಸಮಂಜಸವಾದ ಸತ್ಯವನ್ನು ಹೇಳುವವನು
- ಸೂಕ್ತಿ – ಒಳ್ಳೆಯ ಮಾತು; ಸುಭಾಷಿತ
- ಸೂಕ್ತಿಗರ್ಭ – ಒಳ್ಳೆಯ ಮಾತುಗಳನ್ನು ಉಳ್ಳುದುಸೂಕ್ಷ್ಮಕಾಯಯೋಗ (ಜೈನ) ಪಾಪವಿಹರಣಾತ್ಮಕ ಕ್ರಿಯೆಯಿಲ್ಲದೆ ಪದ್ಮಾಸನದಿಂದಲೇ ಗಮನಕ್ರಿಯೆಯ ಸಾಗುವಿಕೆ-
- ಸೂಕ್ಷ್ಮಕ್ರಿಯಾಪ್ರತಿಪಾತಿ – (ಜೈನ) ಶುಕ್ಲಧ್ಯಾನದ ಮೂರನೆಯ ಭೇದ
- ಸೂಕ್ಷ್ಮಕ್ರಿಯೆ – ಗುಟ್ಟು
- ಸೂಕ್ಷ್ಮತ್ವ – ಚುರುಕುತನ; (ಜೈನ) ಮುಕ್ತಜೀವರ ಗುಣಗಳಲ್ಲಿ ಒಂದು
- ಸೂಕ್ಷ್ಮಬಾದರ – (ಜೈನ) ಪುದ್ಗಲಸ್ಕಂಧದ ಆರು ಪ್ರಕಾರಗಲಲ್ಲಿ ಒಂದು, ಸೂಕ್ಷ್ಮವಾಗಿದ್ದರೂ ಸ್ಥೂಲದಂತೆ ಕಾಣುವುದು
- ಸೂಕ್ಷ್ಮಮಧ್ಯೆ – ತೆಳುವಾದ ಸೊಂಟವುಳ್ಳವಳು
- ಸೂಕ್ಷ್ಮರೂಪ – (ಜೈನ) ಕರ್ಮವಿನಾಶದಿಂದ ಆತ್ಮನಿಗಾಗುವ ಸೂಕ್ಷ್ಮಸ್ವಭಾವ
- ಸೂಕ್ಷ್ಮಲೋಭ – (ಜೈನ) ಹತ್ತನೆಯ ಗುಣಸ್ಥಾನದ ಲೋಭ ಎಂಬ ಕಷಾಯ
- ಸೂಕ್ಷ್ಮಸಾಂಪರಾಯ – (ಜೈನ) ಹತ್ತನೇ ಗುಣಸ್ಥಾನ
- ಸೂಕ್ಷ್ಮಸಾಂಪರಾಯಕೃಷ್ಟಿ – (ಜೈನ) ಹತ್ತನೇ ಗುಣಸ್ಥಾನದಲ್ಲಿ ಆಗುವ ಸಂಜ್ವಲನಲೋಭ ಎಂಬ ಕಷಾಯದ ನಾಶ
- ಸೂಕ್ಷ್ಮಸಾಂಪರಾಯಕ್ಷಪಕ – (ಜೈನ) ಹತ್ತನೇ ಗುಣಸ್ಥಾನದಲ್ಲಿರುವ ಆತ್ಮ
- ಸೂಕ್ಷ್ಮಸಾಂಪರಾಯಸ್ಥಿತ – (ಜೈನ) ಸೂಕ್ಷ್ಮಸಾಂಪರಾಯಕ್ಷಪಕ
- ಸೂಕ್ಷ್ಮಸೂಕ್ಷ್ಮ – (ಜೈನ) ಪುದ್ಲಸ್ಕಂಧದ ಆರು ಪ್ರಕಾರಗಳಲ್ಲಿ ಒಂದು, ಕರ್ಮವರ್ಗಣೆಗಿಂತಸೂಕ್ಷ್ಮವಾದುದು
- ಸೂಗುರಿಸು – ಗಾಬರಿಗೊಳ್ಳು
- ಸೂಚ – ಹುಲ್ಲಿನ ಊಬು
- ಸೂಚಿ – ಸೂಜಿ
- ಸೂಚೀಯಾನೆ – ಸೇನೆಯ ಮುಂಭಾಗದ ಆನೆ
- ಸೂಚಿಶಕ್ತಿ – ವ್ಯೂಹರಚನಾ ಸಾಮಥ್ರ್ಯ
- ಸೂಚೀನಾಟ್ಯ – ಒಂದು ಬಗೆಯ ನಾಟ್ಯ
- ಸೂಚೀಮುಖ – ಸೂಜಿಯ ಮೊನೆಯಂತಹ ಚೂಪಾದ ತುದಿ(ಯುಳ್ಳುದು)
- ಸೂಚೀವ್ಯೂಹ – ಒಂದು ಬಗೆಯ ಸೇನಾವ್ಯೂಹ
- ಸೂಜಿಗಲ್ – ಅಯಸ್ಕಾಂತ
- ಸೂಜಿಗೊಂಬು – ಚೂಪಾದ ಕೊಂಬು
- ಸೂಜಿಗೊಳ್ – ಸೂಜಿಯಿಂದ ಚುಚ್ಚಲ್ಪಡು
- ಸೂಜಿಯ ಪಿನ್ನೆ – ಸೂಜಿಯ ರಂಧ್ರ
- ಸೂಟಿ – ಚುರುಕು
- ಸೂಡಿ – ಪಂಜು
- ಸೂಡಿಸು – ತೊಡಿಸು
- ಸೂಡು – ಧರಿಸು; ಸುಡು; ಹೊರೆ; ಕಾವು
- ಸೂತ – ಅಂಬಿಗ; ಸಾರಥಿ; ಹೊಗಳುಭಟ್ಟ
- ಸೂತಕ – ಜನನ
- ಸೂತಜ – ಸೂತಕುಲದಲ್ಲಿ ಹುಟ್ಟಿದವನು
- ಸೂತಸುತ – ಸೂತನ ಮಗ
- ಸೂತಿಕಾಗೃಹ – ಬಾಣಂತಿಮನೆ
- ಸೂತಿಕಾಮಂದಿರ – ಸೂತಿಕಾಗೃಹ
- ಸೂತಿಕಾಸದನ – ಸೂತಿಕಾಗೃಹ
- ಸೂತೀಜನ – ಸೂಲಗಿತ್ತಿಯರು
- ಸೂತ್ತುಂಗ – ಚೆನ್ನಾಗಿ ಉಬ್ಬಿರುವ
- ಸೂತ್ರ – ದಾರ; ನಿಯಮ
- ಸೂತ್ರಕೃತ – (ಜೈನ) ದ್ವಾದಶಾಂಗವೇದಗಳಲ್ಲಿ ಒಂದು
- ಸೂತ್ರಕೃತಾಂಗ – ಸೂತ್ರಕೃತ
- ಸೂತ್ರಧಾರ(ರಿ) – (ಸೂತ್ರದ ಬೊಂಬೆಯಾಟದಲ್ಲಿ) ದಾರ ಹಿಡಿದವನು; ನಾಟಕದ ನಡೆಯನ್ನು ನಿಯಂತ್ರಿಸುವವನು
- ಸೂತ್ರಪ್ರಾಯ – ನಿಯಮಗಳ ಸಾಕಾರರೂಪ(ಪಿ)
- ಸೂತ್ರದಲ್ಲಿ – ದಾರಕ್ಕೆ ಪೋಣಿಸಿದ ರತ್ನ
- ಸೂತ್ರಾವೇಷ್ಟಿತ – ದಾರದಿಂದ ಕಟ್ಟಲ್ಪಟ್ಟ
- ಸೂತ್ರಿಸು – ಅಳೆಯುವ ನೂಲನ್ನಿಡು; ಸೂತ್ರರೂಪದಲ್ಲಿ ನಿರೂಪಿಸು; ಮಾರ್ಗದರ್ಶನಮಾಡು
- ಸೂದನ – ನಾಶಮಾಡುವವನು, ವೈರಿ
- ಸೂನು – ಮಗ
- ಸೂನೃತ – ಪ್ರಿಯಕರ ಸತ್ಯನುಡಿ; ಸಮ್ಯಕ್ಚಾರಿತ್ರದ ಒಂದು ಬಗೆ, ಹಿತವಾಗಿ ಸತ್ಯ ನುಡಿಯುವುದು
- ಸೂನೃತವಚನ – ಪ್ರಿಯಕರ ಸತ್ಯನುಡಿ
- ಸೂನ್ಯಾಸ – ಒಳ್ಳೆಯ ವಿನ್ಯಾಸ
- ಸೂಪಕಾರ – ಅಡುಗೆಂiÀವನು
- ಸೂಪಶಾಸ್ತ್ರ – ಅಡುಗೆಯ ವಿದ್ಯೆ
- ಸೂಯಿಯಾಣ – (ಸೂಚೀಯಾನ) ಸುಯ್ಯಾಣ, ಕಸೂತಿ ಕೆಲಸ; ಸೂಜಿಯಲ್ಲಿ ಪೋಣಿಸಿದಂತೆ ಸಾಲಾಗಿ ಸಾಗುವ ಸೈನ್ಯ
- ಸೂರ್ – ಮನೆಯ ಛಾವಣಿ
- ಸೂರಿ(ಜನ) – ವಿದ್ವಾಂಸ(ರು)
- ಸೂರುಳ್ – ಪ್ರತಿಜ್ಞೆ; ಆಣೆ ಮಾಡು
- ಸೂರುಳಿಸು – ಆಣೆಯಿಡಿಸು; ಪ್ರತಿಜ್ಞೆಮಾಡು
- ಸೂರುಳುಗೆಯ್ – ಪ್ರತಿಜ್ಞೆಮಾಡು
- ಸೂರುಳ್ಗೊಳ್ – ಸೂರುಳುಗೆಯ್
- ಸೂರ್ಯಕಾಂತ(ಮಣಿ) – ಬಿಸಿಲಿಗೆ ಕಿಡಿಕಾರುವ ಕಲ್ಲು
- ಸೂರ್ಯವಿಮಾನ – (ಜೈನ) ಒಂದು ಸ್ವರ್ಗ
- ಸೂರ್ಯವೀಥಿ(ಧಿ) – ಪೂರ್ವ-ಪಶ್ಚಿಮವಾಗಿರುವ ಪಟ್ಟಣಬೀದಿ-
- ಸೂರ್ಯಾಶ್ವ – ಸೂರ್ಯನ ಕುದುರೆ
- ಸೂರ್ಯೋಪಲ – ಸೂರ್ಯಕಾಂತ(ಮಣಿ)
- ಸೂಲ – (ಶೂಲ) ದಸಿ
- ಸೂಲಪಾಣಿ – ಶಿವ
- ಸೂಲೆ – ನೋವು
- ಸೂಸಕ – ಆಭರಣ ವಿಶೇಷ; ಗೊಂಚಲು
- ಸೂಸು – ಎಸೆ; ಹೊಮ್ಮು; ಚೆಲ್ಲು
- ಸೂಸುನೀರ್ – ಸಿಂಪಡಿಸುವ ನೀರು
- ಸೂಸುವೆಳ್ಪು – ಸೂಸು+ಬೆಳ್ಪು, ಹೊಮ್ಮುವ ಕಾಂತಿ
- ಸೂಳಿ – (ಶೂಲಿ) ಈಶ್ವರ
- ಸೂಳೆಗೆಯ್ – ಸೂಳೆಯ ಸಹವಾಸ ಮಾಡು
- ಸೂಳೆಗೇರಿ – ಸೂಳೆಯರು ವಾಸಿಸುವ ಕೇರಿ
- ಸೂಳೆಗೊಟ್ಟಿ – ಸೂಳೆಯರ ಗುಂಪು
- ಸೂಳೆಮಾತು – ಒಯ್ಯಾರದ ನುಡಿ
- ಸೂಳೆವಬ)ಂಟ – ಸೂಳೆಯ ಸಹಚರ
- ಸೂಳೆವನೆ – ಸೂಳೆಯ ಮನೆ
- ಸೂಳೆವೆಂಡತಿ – ಸೂಳೆ
- ಸೂಳೈಸು – ಶಬ್ದಮಾಡು
- ಸೃಕ್ವ – ಕಟವಾಯಿ
- ಸೃಗಾಲ – ನರಿ
- ಸೃಣಿ – ಅಂಕುಶ
- ಸೃತ – ಸೋರಿದ
- ಸೃಷ್ಟಿಕ್ಷಮ – ಸೃಷ್ಟಿ ಮಾಡುವುರಲ್ಲಿ ನಿಪುಣ
- ಸೆಂಡಾಡು – ಚೆಂಡಾಟವಾಡು
- ಸೆಂಡು – ಚೆಂಡು
- ಸೆಂಡುಕೋ(ಗೋ)ಲ್ – ಒಂದು ಬಗೆಯ ಬಾಣ
- ಸೆಂದುರ – ಸಿಂದೂರ, ಕೆಂಪು ಬಣ್ಣದ ಪುಡಿ; ಗೈರಿಕ ಶಿಲೆ
- ಸೆಜ್ಜ(ಜ್ಜಾ)ರ – (ಶಯ್ಯಾಗಾರ) ಮಲಗುವ ಕೋಣೆ
- ಸೆಜ್ಜೆ – (ಶಯ್ಯಾ) ಹಾಸಿಗೆ; ಸನ್ಯಾಸಿಯ ಕೌದಿ
- ಸೆಜ್ಜೆಯೋವರಿ – ಮಲಗುವ ಕೋಣೆ
- ಸೆಜ್ಜೆವನೆ – ಸೆಜ್ಜೆಯೋವರಿ
- ಸೆಜ್ಜೆವಳ(ಳ್ತಿ) – ಶಯ್ಯಾಗೃಹದ ಮೇಲ್ವಿಚಾರಕ(ಕಿ)
- ಸೆಜ್ಜೆವಾಡ – ಮಲಗುವ ಕೋಣೆ
- ಸೆಟ್ಟಿ – (ಶ್ರೇಷ್ಠಿ) ವರ್ತಕ
- ಸೆಟ್ಟಿತಿ – ಸೆಟ್ಟರ ಹೆಂಗಸು
- ಸೆಟ್ಟಿಗುತ್ತ – ಸೆಟ್ಟಿ
- ಸೆಟ್ಟಿವಟ್ಟ – ರಾಜಶ್ರೇಷ್ಠಿಯ ಪಟ್ಟ
- ಸೆಟ್ಟಿವಟ್ಟಂಗಟ್ಟು – ರಾಜಶ್ರೇಷ್ಠಿಯ ಪಟ್ಟ ಕಟ್ಟು
- ಸೆಟ್ಟೆ – ಮಣ್ಣಿನ ಹೆಂಟೆ
- ಸೆಡು – ಹೊಲಿ; ಪೋಣಿಸು
- ಸೆಡೆ – ಸಂಕೋಚಪಡು, ಭಯಪಡು; ದಪ್ಪನಾಗು; ಅಹಂಕರಿಸು
- ಸೆಣಸು – ಹೋರಾಡು; ಹೊಟ್ಟೆಕಿಚ್ಚುಪಡು
- ಸೆಣೆ – ಕೋಪಗೊಳ್ಳು
- ಸೆರಗು – ಭಯ
- ಸೆರಗಂ ಪಾರು – ಆಪತ್ತನ್ನು ನಿರೀಕ್ಷಿಸು
- ಸೆರಗಂ ಬೆರಗಂ ಪಾರು – ಸೆರಗಂ ಪಾರು
- ಸೆರಗಂ ಬೆರಗಂ ಬಗೆ – ಅಪಾಯ-ಉಪಾಯಗಳನ್ನು ಕುರಿತು ಆಲೋಚಿಸು-
- ಸೆರಗುವಾರು – ಸೆರಗಂ ಪಾರು
- ಸೆರವಟ್ಟಣಿ – ಕುಸ್ತಿಯ ಒಂದು ಪಟ್ಟು
- ಸೆರೆ – ನರ, ರಕ್ತನಾಳ
- ಸೆರೆಯಂ ಬಿಡಿಸು – ರಕ್ತನಾಳವನ್ನು ಸೀಳು
- ಸೆರೆಗಾಲ್ – ನರಗಳು ಊದಿರುವ ಕಾಲು
- ಸೆರೆದುರುಗಲ್ – ನರಗಳ ಜಾಲ
- ಸೆರೆವಿಡು – ಸೆರೆಯಂ ಬಿಡಿಸು
- ಸೆರ್ಕು(ಕ್ಕು) – ತುರುಕು
- ಸೆಲಂದಿ(ಬೆ) – ಜೇಡ
- ಸೆಲವೀ – ಸೆಲವು+ಈ, ಒಳಬರಲು ಅಪ್ಪಣೆಕೊಡು
- ಸೆಲವು – ಸಲವು, ಪ್ರವೇಶ
- ಸೆಲೆ – ಒರತೆ, ಜಿನುಗುವಿಕೆ
- ಸೆಲ್ಲೆಹ – ಈಟಿ
- ಸೆಳೆ – ಎಳೆ; ಆಕರ್ಷಿಸು; ನಡುಗು; ಬೆತ್ತ; ರೆಂಬೆ
- ಸೆಳೆ(ಳ್ಳ)ಗೊಂಬು – ರೆಂಬೆ
- ಸೆಳೆನಡು – ಬಡನಡು
- ಸೆಳೆಮಂಚ – ತೂಗುಮಂಚ
- ಸೆಳೆಮಿಂಚು – ಬಳ್ಳಿಮಿಂಚು
- ಸೆಳೆವಿಡಿ – ಬೆತ್ತ ಹಿಡಿ
- ಸೆಳ್ಳುಗುರ್ – ಕೋಮಲವಾದ ಉಗುರು
- ಸೇಕ – ಬಿಸಿ; ಚಿಮುಕಿಸುವುದು
- ಸೇಕಂಗೊಳ್ – ಬಿಸಿಯಾಗು
- ಸೇಗು – ಕೆಚ್ಚು, ಚೇಗು
- ಸೇಚನ(ನೆ) – ಸೇಕ
- ಸೇಡು – ಮುದುಡುವಿಕೆ; ಸೆಡೆತು ಹೋಗುವುದು
- ಸೇಡು(ಂ)ಗೊಳ್ – ಸೆಡೆತುಹೋಗು
- ಸೇಡುವಡು – ಸೇಡು(ಂ)ಗೊಳ್
- ಸೇತ – (ಶ್ವೇತ) ಬಿಳಿಪು
- ಸೇತಮಾಲೆ – ಬಿಳಿಯ (ಮುತ್ತಿನ) ಹಾರ
- ಸೇತುಗಟ್ಟು – ಸೇತುವೆ ನಿರ್ಮಿಸು
- ಸೇತುಬಂಧ(ನ) – ಅಣೆಕಟ್ಟು; ಅಡ್ಡಗಟ್ಟೆ
- ಸೇತುಮಾರ್ಗ – ಸೇತುವೆಯ ಮೂಲಕದ ದಾರಿ
- ಸೇದೆ – (ಸ್ವೇದ) ಆಯಾಸ
- ಸೇದೆಗಳೆ – ದಣಿವನ್ನು ಪರಿಹರಿಸು
- ಸೇದೆಗಿ(ಗೆ)ಡು – ದಣಿವಿನಿಂದ ಬಳಲು
- ಸೇದೆವಡು – ಸೇದೆಗಿ(ಗೆ)ಡು
- ಸೇನಾಗ್ರಗಣ್ಯ – ಸೇನಾಧಿಪತಿ
- ಸೇನಾಧಿನಾಥ – ಸೇನಾಗ್ರಗಣ್ಯ
- ಸೇನಾನಾಯಕ – ಸೇನಾಗ್ರಗಣ್ಯ
- ಸೇನಾನಿ – ಸೇನಾಗ್ರಗಣ್ಯ
- ಸೇನಾನಿರತ್ನ – (ಜೈನ) ಜೀವರತ್ನಗಳಲ್ಲಿ ಒಂದು, ಚಕ್ರವರ್ತಿಯ ಸೇನಾಧಿಪತಿ, ನೋಡಿ, ಜೀವರತ್ನ’
- ಸೇನಾಭಂಗ – ಸೈನ್ಯ ಪಡೆಯುವ ಸೋಲು
- ಸೇನಾಮುಖ – ಸೈನ್ಯದ ಎದುರು
- ಸೇನೆ – ಸೈನ್ಯ
- ಸೇಬ್ಯ – (ಸೇವ್ಯ) ಸೇವೆಗೆ ಯೋಗ್ಯವಾದುದು
- ಸೇರ್ – ಒಂದುಗೂಡು; ಸಮ್ಮತಿಸು
- ಸೇರ್ಪಡು – ಕೂಡು
- ಸೇಷ್ರ್ಯ – ಸ+ಈಷ್ರ್ಯ, ಪೈಪೋಟಿಯ
- ಹುರುಪಿನಲ್ಲಿರು
- ಸೇಲೆ – ವಸ್ತ್ರ
- ಸೇವ – ಕ್ಷೇಮ
- ಸೇವಂತಿ(ಗೆ) – (ಸೇವಂತಿಕಾ) ಒಂದು ಹೂಪ್ರಭೇದ
- ಸೇವನೆ – ಪೂಜೆ; ತಿನ್ನುವಿಕೆ
- ಸೇವನೆಗೆಯ್ – ತಿನ್ನು
- ಸೇವ(ವಾ)ಳ – (ಶೈವಾಲ) ಪಾಚಿ
- ಸೇವಾರತಿ – ಸೇವೆ ಮಾಡುವ ಆಸಕ್ತಿ
- ಸೇವಾವಿಚಕ್ಷಣ – ಸೇವೆ ಮಾಡುವುದರಲ್ಲಿ ನಿಪುಣ
- ಸೇವಾಳ – (ಶೈವಾಲ) ಪಾಚಿ
- ಸೇವಾಳಂಬೊರೆ – ಪಾಚಿಗಟ್ಟು
- ಸೇವಿತ – ಸೇವೆಗೊಂಡ
- ಸೇವಿಸು – ಸೇವೆಗೈ; ತಿನ್ನು
- ಸೇವೆ – ಊಳಿಗ; ಶುಶ್ರೂಷೆ
- ಸೇವೆಗಾಯ್ – ಸೇವೆಯ ಸಂದರ್ಭಕ್ಕಾಗಿ ಕಾಯಿ
- ಸೇವ್ಯ – ಸೇವಾಯೋಗ್ಯವಾದ; ತಿನ್ನಲು (ಅನುಭವಿಸಲು) ಯೋಗ್ಯವಾದ-
- ಸೇವ್ಯತೆ – ಸೇವೆ
- ಸೇವ್ಯತ್ವ – ಅನುಭವಿಸುವಿಕೆ
- ಸೇಸೆ – ಶೇಷಾಕ್ಷತೆ
- ಸೇಸೆಗೊಡು – ಅಕ್ಷತೆ ಹಾಕು
- ಸೇಸೆಗೊಳ್ – ಹಾಕಿದ ಅಕ್ಷತೆಯನ್ನು ಸ್ವೀಕರಿಸು
- ಸೇಸೆಯಿಕ್ಕು – ಸೇಸೆಗೊಡು
- ಸೈಂಧವ – ಒಂದು ಬಗೆಯ ಉಪ್ಪು
- ಸೈಂಹಿಕೇಯ – ಸಿಂಹಿಕೆಯ ಮಗ, ರಾಹು
- ಸೈಕತಸ್ಥಳ – ಮರಳಿನ ಜಾಗ
- ಸೈಕತೋದ್ದೇಶ – ಸೈಕತಸ್ಥಳ
- ಸೈಕಾಗ್ರಮನಸ್ಕ – ಸ+ಏಕಾಗ್ರಮನಸ್ಕ, ಏಕಾಗ್ರವಾದ ಮನಸ್ಸನ್ನು ಪಡೆದವನು
- ಸೈಗೋಲ – ಬಿಲ್ವಿದ್ಯಾ ನಿಪುಣ
- ಸೈತಿಕ್ಕು – ಕ್ರಮಗೊಳಿಸು, ಸರಿಯಾಗಿಡು
- ಸೈತಿಡು – ಸೈತಿಕ್ಕು
- ಸೈತಿರ್ – ನೆಮ್ಮದಿಗೊಳ್
- ಸೈತು – ಸುಮ್ಮನೆ; ಸಮಾಧಾನ
- ಸೈದ – ನಿಷ್ಕಪಟಿ
- ಸೈದಾರಿ – ನೇರವಾದ ದಾರಿ
- ಸೈದ್ಧಾಂತಿಕಚಕ್ರವರ್ತಿ – (ಜೈನ) ಷಟ್ಖಂಡಾಗಮವನ್ನು ಅಭ್ಯಸಿಸಿ ಜೈನಸಿದ್ಧಾಂತವನ್ನು ಕರಗತಮಾಡಿಕೊಂಡವನು
- ಸ್ತೋಕ – ಅಲ್ಪ ಕಾಲ ಉಳಿಯುವ(ಂಥದು); (ಜೈನ) ಕಾಲ ಅಳೆಯುವ ಪರಿಮಾಣ, ಏಳು ಉಚ್ಛ್ವಾಸಗಳ ಅವಧಿ
- ಸ್ತೋಭ – ತಡೆ
- ಸ್ತೋಭಂಗೊಳ್ – ಮೈಮರೆ
- ಸ್ತೋಭನಾಕ್ಷರ – ಎದುರಿಗಿರುವುದನ್ನು ಪ್ರತಿಬಂಧಿಸುವ ಮಂತ್ರ
- ಸ್ತೋಮ – ಸಮೂಹ
- ಸ್ತ್ಯಾನಗೃದ್ಧಿ – (ಜೈನ) ದರ್ಶನಾವರಣಿಯಕರ್ಮದ ಒಂದು ಪ್ರಕಾರ
- ಸ್ತ್ರೀತ್ವ – ಹೆಣ್ತನ
- ಸ್ತ್ರೀಪ್ರತಿಬದ್ಧ – ಹೆಣ್ಣಿಗೆ ಸಂಬಂಧಿಸಿದ್ದು
- ಸ್ತ್ರೀರತ್ನ – ಉತ್ತಮ ಸ್ತ್ರೀ
- ಸ್ತ್ರೀರೂಪ – ಹೆಣ್ಣಿನ ಚೆಲುವು
- ಸ್ತ್ರೀವೇದ – (ಜೈನ) ಒಂದು ಬಗೆಯ ನೋಕಷಾಯ, ಹೆಣ್ಣಿಗೆ ಗಂಡಿನ ಬಗ್ಗೆ ಮೋಹವುಂಟುಮಾಡುವ ಕರ್ಮ
- ಸ್ತ್ರೀಸವನ – ಹೆಣ್ಣಿನ ಮುಟ್ಟಿನ ನಂತರದ ಸ್ನಾನ
- ಸ್ತ್ರೈಣ – ಹೆಣ್ಣಿನ ಬಗ್ಗೆ ಅತಿಮೋಹ
- ಸ್ತ್ರೈಣಸುಖ – ಹೆಣ್ಣಿನ ಸುಖ
- ಸ್ಥಗಿತ – ಮುಚ್ಚಿದ; ಆವರಿಸಿದ
- ಸ್ಥಪತಿ – ವಾಸ್ತುಶಿಲ್ಪಿ; ಬಡಗಿ; (ಜೈನ) ಚಕ್ರವರ್ತಿಗೆ ದೊರೆಯುವ ಜೀವರತ್ನಗಳಲ್ಲಿ ಒಂದು, ಶ್ರೇಷ್ಠ ವಾಸ್ತುಶಿಲ್ಪಿ
- ಸ್ಥಪತಿರತ್ನ – (ಜೈನ) ಚಕ್ರವರ್ತಿಗೆ ದೊರೆಯುವ ಜೀವರತ್ನಗಳಲ್ಲಿ ಒಂದು, ಶ್ರೇಷ್ಠ ವಾಸ್ತುಶಿಲ್ಪಿ
- ಸ್ಥಪುಟಿತ – ಏರುತಗ್ಗುಗಳಿಂದ ಕೂಡಿದ
- ಸ್ಥಲ(ಳ)ಕಮಲ(ಳ) – ನೆಲದಾವರೆ
- ಸ್ಥಲೀಕ – ನೆಲಗಟ್ಟು
- ಸ್ಥವಿರ – ಮುದುಕ
- ಸ್ಥಳನಳಿನಿ – ಸ್ಥಲ(ಳ)ಕಮಲ(ಳ)
- ಸ್ಥಳಯಾತ್ರೆ – ವ್ಯಾಪಾರಕ್ಕಾಗಿ ಮಾಡುವ ಭೂಮಿಯ ಮೇಲಣ ಪ್ರಯಾಣ
- ಸ್ಥಳಾಂಬುರುಹ – ಸ್ಥಲ(ಳ)ಕಮಲ(ಳ)
- ಸ್ಥಳೇಂದೀವರ – ಸ್ಥಲ(ಳ)ಕಮಲ(ಳ)
- ಸ್ಥಳಪರ್ಯಯ – ಜಾಗದ ಬದಲಾವಣೆ
- ಸ್ಥಳಾಂಥರ – ಬೇರೆಯ ಜಾಗ
- ಸ್ಥಾಣು – ಸ್ಥಿರವಾದ; ಗೂಟ; ಮರದ ಕಾಂಡ; ಶಿವ
- ಸ್ಥಾಣುನಿವಸನ – ಶಿವನ ನಿವಾಸ; ಮರದ ಕಾಂಡಕ್ಕೆ ಆಶ್ರಯವಾದುದು
- ಸ್ಥಾಣೂತ್ಕರ – ಗೂಟ ಅಥವಾ ಒಣಕೊರಡುಗಳ ಸಮೂಹ
- ಸ್ಥಾನದೀಪಿಕೆ – ತಾಣದೀವಿಗೆ, ಒಂದೆಡೆ ನಟ್ಟಿರುವ ದೀವಿಗೆ
- ಸ್ಥಾನಭ್ರಷ್ಟತೆ – ಸ್ಥಾನವನ್ನು ಕಳೆದುಕೊಳ್ಳುವುದು
- ಸ್ಥಾನಲಾಭ – ಪದವಿಯನ್ನು ಹೊಂದುವುದು; (ಜೈನ) ದೀಕ್ಷಾನ್ವಯಗಳಲ್ಲಿ ಒಂದು
- ಸ್ಥಾಪನಂಗೆಯ್ – ನಿರ್ಮಾಣಮಾಡು
- ಸ್ಥಾಪಿಸು – ಇರಿಸು
- ಸ್ಥಾಯಿ – ನಿಲ್ಲುವುದು; ಆಶಿಸುವವನು
- ಸ್ಥಾಯಿಭಾವ(ಕ) – ಮನುಷ್ಯನ ಮೂಲ ಚಿತ್ತವೃತ್ತಿ
- ಸ್ಥಾಸಕ – ಸುಗಂಧಲೇಪನ
- ಸ್ಥಿತಿಸಾರ – ಕೊಟ್ಟ ಮಾತಿಗೆ ತಪ್ಪದವನು; ದೃಢಚಿತ್ತ
- ಸ್ಥಿರ – (ಜೈನ) ನಾಮಕರ್ಮಪ್ರಕಾರಗಳಲ್ಲಿ ಒಂದು, ಇದರಿಂದ ರಸಾಧಿಧಾತುಗಳು ಶರೀರದಲ್ಲಿ ನೆಲೆ ನಿಲ್ಲುತ್ತವೆ
- ಸ್ಥಿರಂ – ದೃಢವಾಗಿ
- ಸ್ಥಿರತೆ – ಶಾಶ್ವತತೆ
- ಸ್ಥಿರತ್ವ – ಸ್ಥೈರ್ಯ; ಸಾಮಥ್ರ್ಯ
- ಸ್ಥಿರಬೋಧ – ಕೇವಲಜ್ಞಾನಿ
- ಸ್ಥಿರೆ – ದೃಢಚಿತ್ತೆ; ಭೂಮಿ
- ಸ್ಥೂರಿ – ಭಾರ ಹೊರುವ ಕುದುರೆ
- ಸ್ನಪನ – ಅಭಿಷೇಕ
- ಸ್ನಾನೀಯ – ಸ್ನಾನಕ್ಕೆ ಬೇಕಾದ ವಸ್ತುಗಳು
- ಸ್ನಾಪಕ – ಸ್ನಾನ ಮಾಡಿಸುವವನು
- ಸ್ನಿಗ್ಧ – ಸ್ನೇಹದಿಂದ ಕೂಡಿದ್ದು, ನಯವಾದದ್ದು; ಜಿಡ್ಡು
- ಸ್ನಿಗ್ಧಾಲೋಕ – ಆಕರ್ಷಕ ನೋಟ
- ಸ್ನುಹಿ – ಕಳ್ಳಿ ಗಿಡ
- ಸ್ನೇಹ – ಗೆಳೆತನ; ಜಿಡ್ಡು
- ಸ್ಪಂದ – ಅದುರುವಿಕೆ
- ಸ್ಪರ್ಶನಾನುಮಿತ – ಮುಟ್ಟಿ ತಳಿಯಬಹುದಾದ
- ಸ್ಪರ್ಶನೀಯ – ಮುಟ್ಟಲು ಹಿತಕರವಾದ
- ಸ್ಪರ್ಶಪ್ರವೀಚಾರ – (ಜೈನ) ಸ್ಪರ್ಶದ ಮೂಲಕ ರತಿಸುಖವನ್ನು ಪಡೆಯುವುದು
- ಸ್ಪರ್ಶಾನುಮೇಯ – ಸ್ಪರ್ಶನಾನುಮಿತ
- ಸ್ಪರ್ಶಾಷ್ಟಕ – (ಜೈನ) ಎಂಟು ಬಗೆ
- ಸ್ಪರ್ಶನಾಮಕರ್ಮಪ್ರಕೃತಿ
- ಸ್ಫಟಾಧರ – ಹೆಡೆಯುಳ್ಳದ್ದು, ಹಾವು
- ಸ್ಫಟಾರತ್ನ – ಹೆಡೆಮಣಿ
- ಸ್ಫ(ಸ್ಫಾ)ಟಿಕಾದ್ರಿ – ಕೈಲಾಸ ಪರ್ವತ
- ಸ್ಫಟಿಕಾಬ್ಜ – ಬೆಳ್ದಾವರೆ
- ಸ್ಫಟಿಕಾಶ್ಮ – ಬಿಳಿಯ ಕಲ್ಲು; ಸ್ಫಟಿಕ ಶಿಲೆ
- ಸ್ಫಾಟಿಕಗ್ರಾವ – ಸ್ಫಟಿಕಾಶ್ಮ
- ಸ್ಫಾರ – ಅಗಲವಾದ; ಅತಿಶಯವಾದ
- ಸ್ಫಾಲನ – ನಡುಕ; ಸೋಕುವಿಕೆ
- ಸ್ಫೀತ – ವಿಶಾಲವಾದ
- ಸ್ಫುಟಹರ್ಷ – ಹೆಚ್ಚು ಹರ್ಷವುಳ್ಳವನು
- ಸ್ಫುಟಿತ – ಬಿರಿದ, ಸೀಳಕಬಿಟ್ಟ
- ಸ್ಫುರದನಲ – ಚಾಚುವ ನಾಲಗೆಯುಳ್ಳ ಬೆಂಕಿ
- ಸ್ಫುರಿತ – ನಡುಗುವ; ಪ್ರಕಾಶಮಾನವಾದ
- ಸ್ಫುರಿ(ಯಿ)ಸು – ತಟ್ಟನೆ ಹೊಳೆ
- ಸ್ಫುಲಿಂಗ – ಬೆಂಕಿಯ ಕಿಡಿ
- ಸ್ಮಯ – ನಗೆ; ವಿಸ್ಮಯ; ಅಹಂಕಾರ
- ಸ್ಮಯರಹಿತ – ನಿಗರ್ವಿ
- ಸ್ಮರ – ನೆನಪು; ಮನ್ಮಥ
- ಸ್ಮರಘುಸ್ಮರ – ಕಾಮಮರ್ದನ, ಶಿವ
- ಸ್ಮರಚಾಪ – ಕಬ್ಬು
- ಸ್ಮರತತ್ವ – ಕಾಮತತ್ವ
- ಸ್ಮರಬಾಣ – ಕಾಮಬಾಣ
- ಸ್ಮರಮಂತ್ರ – ರತಿಹಸ್ಯ
- ಸ್ಮರರಾಗ – ಪ್ರಣಯಾತುರ
- ಸ್ಮರರಿಪು – ಕಾಮನ ಶತ್ರು, ಶಿವ
- ಸ್ಮರಹರ – – ಕಾಮನನ್ನು ಕೊಂದವನು, ಶಿವ; ಅರ್ಹಂತ-
- ಸ್ಮರಾಮರ್ಶಿತೆ – ಪ್ರಣಯಕುಪಿತೆ
- ಸ್ಮರಿಯಿಸು – ನೆನೆಪಿಸಿಕೊ; ಧ್ಯಾನಿಸು
- ಸ್ಮರೋನ್ಮಾದ – ಪ್ರಣಯೋದ್ರೇಕ
- ಸ್ಮಿತ – ಅರಳಿದ; ನಗುವ; ಮಂದಹಾಸ
- ಸ್ಮೇರ – ಮುಗುಳ್ನಗೆ; ನಗುವ
- ಸ್ಮೇರಮುಖ – ನಗುಮುಖ
- ಸ್ಯಂದ – ಜಿನುಗುವ
- ಸ್ಯಂದನ – ರಥ
- ಸ್ಯಮಂತಪಂಚಕ – ಪರಶುರಾಮನಿರ್ಮಿತವೆಂದು ನಂಬಲಾದ ಐದು ಮಡುಗಳು
- ಸ್ಯಾಮಾಕ – ಸಾವೆ ಎಂಬ ಧಾನ್ಯ
- ಸ್ರಂಸಿ – ಕಳಚುವ, ಉದುರುವ
- ಸ್ರಕ್ – ಹೂವಿನ ಹಾರ
- ಸ್ರಜ – ಸ್ರಕ್
- ಸ್ರವಂತಿ – ನದಿ
- ಸ್ರುಕ್ – ಯಜ್ಞದಲ್ಲಿ ಬಳಸುವ ಮರದ ಸೌಟು
- ಸ್ರುವ – ಸ್ರುಕ್
- ಸ್ರೋತ – ಪ್ರವಾಹ; ನದಿ; ಧಾರೆ
- ಸ್ರೋತಃಪತಿ – ಸಮುದ್ರ
- ಸ್ರೋತಸ್ವಿನಿ – ನದಿ
- ಸ್ವಕೀಯ – ತನ್ನ, ಸ್ವಂತದ
- ಸ್ವಕೀಯಾನ್ವಯ – ತನ್ನ ವಂಶ
- ಸ್ವಗತ – ಸ್ವಂತ; ಅಂತರ್ಗತವಾದ
- ಸ್ವಗುರುಸ್ಥಾನಸಂಕ್ರಾಂತಿ – (ಜೈನ) ಒಂದು ಗರ್ಭಾನ್ವಯಕ್ರಿಯೆ, ತನ್ನ ಗುರುವಿನ ಸ್ಥಾನವನ್ನು ಹೊಂದುವುದು
- ಸ್ವಗೃಹತ್ಯಾಗ – (ಜೈನ) ಒಂದು ಗರ್ಭಾನ್ವಯಕ್ರಿಯೆ, ಆತ್ಮಕಲ್ಯಾಣಕ್ಕಾಗಿ ತನ್ನ ಮನೆಯನ್ನು ತೊರೆಯುವುದು
- ಸ್ವಚ್ಛ – ಬಿಳಿಯ; ನಿರ್ಮಲವಾದ
- ಸ್ವಚ್ಛಂದ – ಸ್ವತಂತ್ರವಾದ
- ಸ್ವಚ್ಛಂದಗಾಮಿ – ಮನಸ್ಸು ಬಂದಂತೆ ತಿರುಗುವವನು
- ಸ್ವದಾರಸಂತೋಷ – ತನ್ನ ಹೆಂಡತಿಗೆ ಕೊಡುವ ಸಂತೋಷ; ತನ್ನ ಹೆಂಡತಿಯಿಂದ ಪಡೆಯುವ ಸಂತೋಷ
- ಸ್ವಪಕ್ಷ – ತನ್ನ ಗುಂಪು
- ಸ್ವಪ್ನ – ನಿದ್ದೆ; ಕನಸು
- ಸ್ವಪ್ನದರ್ಶನ – ಕನಸು ಕಾಣುವಿಕೆ
- ಸ್ವಭಾವ – ಹುಟ್ಟುಗುಣ
- ಸ್ವಭಾವವೈರಾಗ್ಯ – ಹುಟ್ಟಿನಿಂದಲೇ ಬಂದ ವೈರಾಗ್ಯ
- ಸ್ವಯಂಕೃತ – ತಾನೇಮಾಡಿದ
- ಸ್ವಯಂಪ್ರಭು – ತನಗೆ ತಾನೇ ಒಡೆಯನಾದವನು
- ಸ್ವಯಂಬುದ್ಧ – ತನಗೆ ತಾನೇ ಜ್ಞಾನಿಯಾದವನು
- ಸ್ವಯಂಭೂರಮಣ – (ಜೈನ) ಮಧ್ಯಲೋಕದ ಒಂದು ಸಾಗರ
- ಸ್ವರವೇದವಿದ್ಯೆ – ಶಬ್ದವೇದಿ, ಧ್ವನಿ ಕೇಳಿ ಗುರಿಗೆ ಹೊಡೆಯುವ ಬಾಣವಿದ್ಯೆ
- ಸ್ವರಾಜ್ಯ(ಕ್ರಿಯೆ) – (ಜೈನ) ಒಂದು ಗರ್ಭಾನ್ವಯಕ್ರಿಯೆ; ಜಿನನಾಗುವವನಿಗೆ ಮಾಡುವ ಪಟ್ಟಾಭಿಷೇಕ
- ಸ್ವರ್ಗ – (ಜೈನ) ಸೌಧರ್ಮ, ಈಶಾನ, ಸನತ್ಕುಮಾರ, ಮಾಹೇಂದ್ರ, ಬ್ರಹ್ಮ, ಬ್ರಹ್ಮೋತ್ತರ, ಲಾಂತವ, ಕಾಪಿಷ್ಠ, ಶುಕ್ರ, ಮಹಾಶುಕ್ರ, ಶತಾರ, ಸಹಸ್ರಾರ, ಅನತ, ಪ್ರಾಣತ, ಆರಣ, ಅಚ್ಯುತ ಎಂಬ ಹದಿನಾರು ಸ್ವರ್ಗಗಳು
- ಸ್ವರು – ವಜ್ರಾಯುಧ; ಸಿಡಿಲು
- ಸ್ವರ್ಣದಿ – ಸ್ವರ್+ನದಿ, ದೇವಗಂಗೆ
- ಸ್ವರ್ಣಪಾಷಾಣ – ಚಿನ್ನದ ಅದಿರು
- ಸ್ವರ್ಧುನಿ – ಸ್ವರ್ಣದಿ
- ಸ್ವರ್ಧೌರೇಯ – ಇಂದ್ರ, ಸ್ವರ್ಗದ ನಾಯಕ
- ಸ್ವಸ್ತಿಕ – ಒಂದು ಮಂಗಳಕರ ಚಿಹ್ನೆ
- ಸ್ವಸ್ಥಾನ – (ಜೈನ) ಜೀವಿಯ ಮೂರು ಅವಸ್ಥೆಗಳಲ್ಲಿ ಒಂದು
- ಸ್ವಾಂತಭೂ – ಮನ್ಮಥ
- ಸ್ವಾಗತವಚನ – ಬರಮಾಡಿಕೊಳ್ಳುವ ಕುಶಲ ವಚನ
- ಸ್ವಾದನೀಯ – ರುಚಿಕರವಾದ (ತಿನಿಸು)
- ಸ್ವಾದು – ರುಚಿಯಾದ ಆಹಾರ)
- ಸ್ವಾಹಾಪತಿ – ಅಗ್ನಿ
- ಸ್ವಿನ್ನತೆ – ಬೆವರುವಿಕೆ
- ಸ್ವಿನ್ನಾಂಗ – ಬೆವರುವ ದೇಹ
- ಸ್ವೀಕರಿಸು – ತನ್ನದಾಗಿಸಿಕೊ; ಒಪ್ಪಿಕೊ; ಪಡೆ
- ಸ್ವೇಚ್ಛಾಮೃತ್ಯು – ಬಯಸಿದಾಗ ಸಾಯುವುದು
- ಸ್ವೇದಜಲ – ಬೆವರು
- ಸ್ವೇದಬಿಂದು – ಬೆವರ ಹನಿ
- ಸ್ವೈರ – ಸ್ವೇಚ್ಛೆ
- ಸ್ವೈರಚ(ಚಾ)ರ – ಮಂದವಾಗಿ ಚಲಿಸುವವನು
- ಸ್ವೈರಮಾರ್ಗ – ತನ್ನದೇ ಆಯ್ಕೆಯ ದಾರಿ
- ಸ್ವೈರಾಲಾಪ – ಮನಸ್ಸಿಗೆ ಬಂದಂತೆ ಮಾತಾಡುವುದು
- ಸ್ವೈರಿಣಿ – ವ್ಯಭಿಚಾರಿಣಿ
- ಸ್ವೋದರಪೂರಣ – ಸ್ವ+ಉದರಪೂರಣ, ಹೊಟ್ಟೆ ಹೊರೆದುಕೊಳ್ಳುವುದು
Conclusion:
ಕನ್ನಡ ಸ ಅಕ್ಷರದ ಹಳೆಗನ್ನಡ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.