ಕನ್ನಡ ಈ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada ee aksharada halegannadada padagalu , ಕನ್ನಡ ಈ ಅಕ್ಷರದ ಹಳೆಗನ್ನಡ ಪದಗಳು ( ee halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಈ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( ee halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಈ ಅಕ್ಷರ ಎಂದರೇನು?
ಈ ಕನ್ನಡ ವರ್ಣಮಾಲೆಯ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ದೀರ್ಘಸ್ವರಾಕ್ಷರ. ಈ ಅಕ್ಷರವು ಒಂದು ಸ್ವತಂತ್ರ ಧ್ವನಿಮಾ.
Check out Kannada Varnmale : ಕನ್ನಡ ವರ್ಣಮಾಲೆ
ಕನ್ನಡ ಈ ಅಕ್ಷರದ ಇತಿಹಾಸ :
ಕನ್ನಡ ವರ್ಣಮಾಲೆಯ ನಾಲ್ಕನೆಯ ಅಕ್ಷರ. ಬಳಕೆ ಅಪೂರ್ವವಾದ್ದರಿಂದ ಇದರ ಬ್ರಾಹ್ಮೀರೂಪ ಉಪಲಬ್ಧವಿಲ್ಲ. ಶಾತವಾಹನರ ಕಾಲದಲ್ಲಿ ಎರಡು ಚುಕ್ಕೆಗಳನ್ನೊಳಗೊಂಡಿದ್ದ ಇದರ ರೂಪ ರಾಷ್ಟ್ರಕೂಟರ ಕಾಲದಲ್ಲಿ ಸಾಕಷ್ಟು ಮಾರ್ಪಟ್ಟಿತು. ನಡುವಿದ್ದ ನೀಳಗೆರೆ ವೃತ್ತವಾಗುತ್ತಿರುವುದನ್ನು ಇಲ್ಲಿ ಗಮನಿಸಬಹುದು. ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಪಾಶ್ರ್ವದ ಬಿಂದುಗಳು ವೃತ್ತಕ್ಕೆ ಸೇರಿದಂತೆ ಎರಡು ವಕ್ರರೇಖೆಗಳಾದುವು.
ಇದೇ ರೂಪ ಸೇವಣ ಮತ್ತು ಕಳಚೂರಿಗಳ ಕಾಲದಲ್ಲಿ ಮುಂದುವರಿಯಿತು. ವೃತ್ತದ ತಲೆಕಟ್ಟು ಸಿದ್ಧವಾಯಿತು. ವಿಜಯನಗರದ ಕಾಲದಲ್ಲಿ ನಡುವಿನ ಅಡ್ಡಗರೆ ವೃತ್ತದ ನಟ್ಟ ನಡುವೆ ಹಾಯುವುದನ್ನು ಕಾಣಬಹುದು. ಹದಿನೆಂಟನೆಯ ಶತಮಾನದ ಮೈಸೂರು ಅರಸರ ಕಾಲದಲ್ಲಿ ಅಕ್ಷರಕ್ಕೆ ಈಗಿನ ರೂಪ ಬಂದಿತಾದರೂ ನಡುವಿನ ಅಡ್ಡಗೆರೆಯ ತುದಿಯಲ್ಲಿರುವ ಕೊಂಡಿ ಸ್ವಲ್ಪ ಭಿನ್ನವಾಗಿತ್ತು. ಕಾಲ ಕ್ರಮೇಣ ಅಕ್ಷರಕ್ಕೆ ಈಗಿನ ರೂಪಬಂತು.
ಈ ಅಕ್ಷರದ ಹಳೆಗನ್ನಡ ಪದಗಳು- Kannada Words
- ಈ – ಕೊಡು; ದಾನಮಾಡು; ಎಡೆಗೊಡು
- ಈಂಚಿಲ್ – ಈಚಲುಮರ
- ಈಂಚುವೋಗು – ಇಂಚೆವೋಗು; ಬತ್ತಿಹೋಗು;
- ತೊಲಗು
- ಈಂಟಿಸು – ಕುಡಿಸು
- ಈಂಟು – ಕುಡಿ, ಪಾನಗೈ
- ಈಂತ – ಹೆರುವುದು; ಮರಿ ಹಾಕುವುದು
- ಈಂದನಿ – ಇನಿದನಿ
- ಈಂದೋಳ್ – ಸುಂದರವಾದ ತೋಳು
- ಈಕ್ಷಣ – ಕಣ್ಣು; ನೋಟ
- ಈಕ್ಷಣಭದ್ರ – ನೋಡಲು ಶುಭಪ್ರದವಾದ
- ಈಕ್ಷಣಾಕರ್ಷಣ – ನೋಟವನ್ನು ಸೆಳೆಯುವ;
- ಆಕರ್ಷಕವಾದ
- ಈಕ್ಷಿಸು – ನೋಡಿ
- ಈಗಡು -ಈಗ, ಈ ಸಮಯದಲ್ಲಿ
- ಈಗಡೆ – ಈಗಲೇ
- ಈಗಳ್ – ಈಗ
- ಈಜ್ಯೆ – ಪೂಜೆ
- ಈಡಾಡು – ಚೆಲ್ಲಾಡು, ಬಿಸಾಡು
- ಈಡಿತ – ಹೊಗಳಲ್ಪಟ್ಟ
- ಈಡು – ಬಾಣದ ಗುರಿ; ಎಸೆತ
- ಈಡೊರಸು – ಕೊಂಬಿನಿಂದ ತಿಕ್ಕು, ಉಜ್ಜು
- ಈದಲೆ – ಇತ್ತ, ಈ ಕಡೆ
- ಈದೊರೆತು – ಇಂತಹ; ಈ ರೀತಿಯ
- ಈನ್ – ಮರಿ ಹಾಕು, ಹೆರು
- ಈಪ್ಸಿತಾರ್ಥ – ಬಯಸಿದ; ಬಯಕೆ
- ಈರಣ – ಚಲನೆ, ಅಲುಗಾಟ
- ಈರಯ್ದು – ಎರಡು ಬಾರಿ ಐದು, ಹತ್ತು
- ಈರಳ್ಳೆ – ಎರಡು ಕಡೆಯ ಪಕ್ಕೆ
- ಈರಿತ – ಹೇರಲಾದ; ಎಸೆಯಲಾದ; ಹೇಳಿದ ಮಾತು
- ಈರೆಂಟು – ಎರಡು ಸಲ ಎಂಟು, ಹದಿನಾರು
- ಈರೆರಡು – ಎರಡು ಸಲ ಎರಡು, ನಾಲ್ಕು
- ಈರೆಲೆವೋಗು – ಬೀಜ ಮೊಳೆತು ಎರಡು ಎಲೆ ಬಿಡು; ಚಿಗುರು; ಏಳಿಗೆಯಾಗು
- ಈರೊಂಬದಿಂಬರ್ – ಹದಿನೆಂಟು ಮಂದಿ
- ಈರೊಡಲ್ – ಎರಡು ದೇಹ
- ಈರೊಡ್ಡು – ಎರಡು (ಕಡೆಯ) ಸೈನ್ಯ
- ಈರ್ಮ – ಗಾಯ
- ಈರ್ಯಾಪಥ(ರಿ)ಶುದ್ಧಿ – (ಜೈನ) ನೆಲವನ್ನು ನಾಲ್ಕು ಮೊಳಗಳಷ್ಟು ಮುಂದೆ ನೋಡಿತ್ತ ನಡೆಯುತ್ತ ಆಗಬಹುದಾದ ಜೀವಹಿಂಸೆಯನ್ನು ತಡೆಯುವುದು
- ಈರ್ಯಾಮಾರ್ಗ – ಪರ್ಯಟಣದ ದಾರಿ
- ಈರ್ಯಾಶುದ್ಧಿ – ಈರ್ಯಾಪಥಶುದ್ಧಿ
- ಈರ್ಯೆ – (ಜೈನ) ಸನ್ಯಾಸಿಗಳ ಸಂಚಾರ
- ಈರ್ಷೆ – ಮತ್ಸರ
- ಈಷ್ರ್ಯೆ – ಈರ್ಷೆ
- ಈಶಶಾಸನ – ಒಡೆಯನ ಆಜ್ಞೆ
- ಈಶಾದಂಡ – ಬಂಡಿಯ ಈಸು
- ಈಶಾನ – ಈಶ್ವರ; ಶಿವನ ಪಂಚಮುಖಗಳಲ್ಲಿ ಒಂದು
- ಈಶಾನಕಲ್ಪ – (ಜೈನ) ಹದಿಆನಾÀು ಸ್ವರ್ಗಗಳಲ್ಲಿ ಎರಡನೆಯದು
- ಈಶಾನೇಂದ್ರ – (ಜೈನ) ಈಶಾನಕಲ್ಪದ ಒಡೆಯ
- ಈಶ್ವವಿರಹ – ಒಡೆಯನ ಅಗಲಿಕೆ
- ಈಶ್ವರಶೈಲ – ಕೈಲಾಸಪರ್ವತ
- ಈಷತ್ – ಸ್ವಲ್ಪ
- ಈಷತ್ಪ್ರಾಗ್ಭಾರ – (ಜೈನ) ಅಷ್ಟಮಭೂಮಿ
- ಈಷದಾವಲಿತ – ಸ್ವಲ್ಪ ತಿರುಗಿದ
- ಈಷದುನ್ಮಿಷಿತ – ಸ್ವಲ್ಪ ಅರಳಿದ
- ಈಸ – (ಈಶ) ಶಿವ
- ಈಸರ (ಈಶ್ವರ) ಶಿವಈಸಾಡು – ಚಲನೆಯಿಲ್ಲದೆ ನೀರಲ್ಲಿ ತೇಲು; ಈಜು
- ಈಸು – ಈಜು; ಇರ್ಚಿಮರ
- ಈಳೆ – ಕಿತ್ತಿಳೆ, ಹೇರಿಳೆ ಮುಂತಾದ ಜಾತಿಯ ಮರ, ಹಣ್ಣು
- ಈಳೆಸಾಂದು – ಈಳೆಯ ಗಂಧ, ಅನುಲೇಪನ
Conclusion:
ಕನ್ನಡ ಈ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.