ಕನ್ನಡ ಲ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada la aksharada halegannadada padagalu , ಕನ್ನಡ ಲ ಅಕ್ಷರದ ಹಳೆಗನ್ನಡ ಪದಗಳು (lA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಲ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( lA halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ
ಕನ್ನಡ ಲ ಅಕ್ಷರ ಎಂದರೇನು?
ಲ, ಕನ್ನಡ ವರ್ಣಮಾಲೆಯ ನಾಲ್ಕನೇ ಅವರ್ಗೀಯ ವ್ಯಂಜನವಾಗಿದೆ. ದಂತ್ಯ ಘೋಷ ಪಾರ್ಶ್ವಿಕ ವ್ಯಂಜನ ಧ್ವನಿ. ಅವರ್ಗೀಯ ವ್ಯಂಜನವರ್ಗದ ಮೂರನೆಯ ಅಕ್ಷರ.
ಉದ್ದವಾಗಿಯೂ ಚೂಪಾಗಿಯೂ ಇರುವ ಅಶೋಕನ ಕಾಲದ ‘ಲ’ ಎಂಬ ಅಕ್ಷರ ಸಾತವಾಹನ ಕಾಲದಲ್ಲಿ ಅಗಲವಾಗುತ್ತದೆ. ಕದಂಬರ ಕಾಲದಲ್ಲಿ ಕೆಳಗಿನ ಭಾಗ ಅಗಲವಾಗುವುದರ ಜೊತೆಗೆ ಎರಡು ಭಾಗಗಳಾದಂತೆ ಮಾರ್ಪಡುತ್ತದೆ.
ರಾಷ್ಟ್ರಕೂಟರ ಕಾಲ ದಲ್ಲಿ ಗಮನಾರ್ಹ ವಾದ ಬದಲಾವಣೆ ಉಂಟಾಗುತ್ತದೆ. ಇದುವರೆವಿಗೂ ಇದ್ದ ರೂಪ ಸಣ್ಣದಾಗಿ ಅದರ ಸುತ್ತಲೂ ಖಂಡವೃತ್ತ ಬಂದು ಸೇರುತ್ತದೆ. ಈ ಖಂಡ ವೃತ್ತವೇ ಮುಂದೆ ಅಕ್ಷರ ಬೆಳೆವಣಿಗೆಗೆ ಸಹಾಯ ವಾಗುತ್ತದೆ. ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಈ ಅಕ್ಷರದ ಬೆಳೆವಣಿಗೆ ಪೂರ್ಣವಾಗಿ ಅದೇ ರೂಪ ಸ್ಥಿರಗೊಳ್ಳುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಲ ಅಕ್ಷರದ ಹಳೆಗನ್ನಡ ಪದಗಳು – Kannada Words
- ಲಂಗಿಗ – ದೊಂಬರವನು
- ಲಂಘನ – ನೆಗೆತ; ಉಪವಾಸ
- ಲಂಘನೀಯ – ತಿರಸ್ಕಾರಾರ್ಹ
- ಲಂಘಿಸು – ಹಾರು
- ಲಂಚಂಗುಳಿ – ಲಂಚಕ್ಕೆ ಆಸೆಪಡುವವನು
- ಲಂಚಂಗೊಳ್ – ಲಂಚ ತೆಗದುಕೊ
- ಲಂಚವಣಿಗ – ಲಂಚಗುಳಿ
- ಲಂಜಿಕೆ ಸೂಳೆ-
- ಲಂಡ – ಲದ್ದಿ
- ಲಂಪಟ(ಳ) – ಆಸಕ್ತ
- ಲಂಪಟತೆ – ಕಾಮುಕತನ
- ಲಂಪಳಿಕೆ – ಲಂಪಟತೆ
- ಲಂಬ – ಜೋಲುಬಿದ್ದಿರುವ
- ಲಂಬಣ(ಳ) – ಹಾರ; ಕುಚ್ಚು
- ಲಂಬೂಷ – ಏಳು ಎಳೆಗಳ ಹಾರ
- ಲಂಬೋದರ – ಡೊಳ್ಳುಹೊಟ್ಟೆಯವನು
- ಲಂಭ – ಸಿದ್ಧಿ
- ಲಂಭೂಷ – ಒಂದು ಆಭರಣ
- ಲಕುಚ – ಕಂಚಿ ಗಿಡ
- ಲಕುಟ – ಕೋಲು
- ಲಕ್ಕ(ಕ್ಕೆ) – ಲಕ್ಷ ಎಂಬ ಸಂಖ್ಯೆ
- ಲಕ್ಕಂಬಡೆ – ನೂರು ಸಾವಿರ (ಒಂದು ಲಕ್ಷ) ಬೆಲೆಬಾಳು
- ಲಕ್ಕಚಣ – ಒಂದು ಆಯುಧ
- ಲಕ್ಕಣ – ಲಕ್ಷಣ; ದುರ್ಯೋಧನನ ಮಗನ ಹೆಸರು
- ಲಕ್ಕೆ – ತಡೆ
- ಲಕ್ಷ – ನೂರು ಸಾವಿರ; ಗುರಿ
- ಲಕ್ಷಣ – ಗುರುತು; ಸೂತ್ರ; ದುರ್ಯೋಧನನ ಮಗ; (ಜೈನ) ಪರಿವ್ರಾಜಕನ ಗುರುತು
- ಲಕ್ಷಿತ – ಲಕ್ಷಣಸಹಿತವಾದ
- ಲಕ್ಷಿಸು – ಗಮನಿಸು; ಅನ್ವಯಿಸು
- ಲಕ್ಷ್ಮ – ಗುರುತು; ಚಂದ್ರನ ಕಲೆ
- ಲಕ್ಷ್ಮೀನೀಡ – ಸಂಪತ್ತಿನ ಆಗರ
- ಲಕ್ಷ್ಮೀಸುತ – ಮನ್ಮಥ
- ಲಕ್ಷ್ಯ – ಗುರಿ; ನಿದರ್ಶನ; ಪಾತ, ಲಕ್ಷ್ಯ, ಶೀಘ್ರ, ಘಾತ, ಬಹುವೇಗ ಎಂಬ ಐದು ಬಗೆಯ ಬಾಣಪ್ರಯೋಗಗಳಲ್ಲಿ ಒಂದು
- ಲಕ್ಷ್ಯಸಿದ್ಧಿ – ಗುರಿ ತಲುಪುವುದು
- ಲಗತ – ನೃತ್ಯ
- ಲಗುಡತಾಡನ – ಕೋಲಿನಿಂದ ಕೊಡುವ ಪೆಟ್ಟು
- ಲಗ್ಗಿಕ – ಜ್ಯೋತಿಷಿ
- ಲಗ್ಗೆಗೆಯ್ – ದಾಳಿ ಮಾಡು
- ಲಗ್ನ – ಕೂಡಿದ; ಚುಚ್ಚಿಕೊಂಡ
- ಲಗ್ನಾಹ – ಕಾರ್ಯ ನಡೆಸಲು ನಿಗದಿಯಾದ ದಿನ
- ಲಘುವಾಗು – ಕೀಳಾಗು
- ಲಘುಕರಿ – (ಜೈನ) ಒಂದು ವಿದ್ಯೆ,
- ಹಗುರಗೊಳ್ಳುವುದು
- ಲಚ್ಚಣ – (ಲಕ್ಷಣ) ಗುರುತು
- ಲಚ್ಚಿಸು – ಗುರುತು ಮಾಡು
- ಲಜ್ಜಿಸು – ಸಿಗ್ಗುಗೊಳ್ಳು, ನಾಚಿಕೊ
- ಲಜ್ಜೆಗೆಡು – ನಾಚಿಕೆಗೆಡು
- ಲಟಹ – (ರಟಭ) ಬೆಡಗು
- ಲಟ್ಟೆ – ಎಳೆಯ ಬಿದಿರು
- ಲತಾಂತ – ಹೂ
- ಲತಾಗೃಹ – ಬಳ್ಳಿಮಾಡ
- ಲತಾಲೀಢ – ಲತಾಗೃಹ
- ಲತಿಕಾ(ಕೆ) – ಬಳ್ಳಿ
- ಲತಿಕಾಗೃಹ – ಲತಾಗೃಹ
- ಲತೆವನೆ – ಲತಾಗೃಹ
- ಲಪನ – ಮುಖ
- ಲಬ್ಧ – ಸಿಕ್ಕಿದ; ಪ್ರಾಪ್ತಿ
- ಲಬ್ಧಿ – (ಜೈನ) ಮೋಕ್ಷಪೂರ್ವಜ್ಞಾನ
- ಲಬ್ಧಿಗ್ರಹ – ಸಮ್ಯಕ್ತ್ವ ಪಡೆಯುವುದು
- ಲಬ್ಧಿತ್ರಯ – (ಜೈನ) ಕಾಯ, ಕರಣ, ಉಪಶಮ
- ಎಂಬ ಮೂರು ಲಬ್ಧಿಗಳು
- ಲಬ್ಧಿಪಂಚಕ – (ಜೈನ) ಕಾಲ, ಕರಣ, ಉಪಶಮ, ಕ್ಷಯೋಪಶಮ, ಪ್ರಾಯೋಗ್ಯತಾ ಎಂಬ ಐದು ಲಬ್ಧಿಗಳು
- ಲಬ್ಧಿಬಧಿರಸಮ – (ಜೈನ) ಕಿವುಡನ ಹಾಗೆ ಬೇರೇನನ್ನೂ ಕೇಳಿಕೊಳ್ಳದೆ ಜಿನತತ್ವವನ್ನು ಕೇಳಿಸಿಕೊಳ್ಳುವವನು
- ಲಬ್ಧಿಬುದ್ಧ – (ಜೈನ) ಸಮ್ಯಕ್ಜ್ಞಾನಿ
- ಲಬ್ಧೋಪದೇಶ – ಉಪದೇಶ ಪಡೆದವನು
- ಲಯ – ನಾಶ; ತಾಳಗತಿ
- ಲಯಕಾಲ – ವಿನಾಶಕಾಲ; ಪ್ರಳಯ
- ಲಯಕ್ರೀಡೆ – ಪ್ರಳಯ ಕಾಲದ ವಿನೋದ
- ಲಯತ್ರಯ – ದ್ರುತ, ಮಧ್ಯಮ, ವಿಲಂಬಿತ ಎಂಬ ಮುರು ಲಯಗಳು
- ಲಯ ತಾಂಡವ – ಪ್ರಳಯ ಕಾಲದ ಕುಣಿತ
- ಲಯಸಮಯ – ಲಯಕಾಲ
- ಲಯಾಂತಕ – ಪ್ರಳಯಕಾಲದಂತೆ ವಿನಾಶಕಾರಕವಾದ; ಪ್ರಳಯಕಾಲದ ಯಮ
- ಲಯಾಗ್ನಿ – ಪ್ರಳಯಕಾಲದ ಬೆಂಕಿ
- ಲಲನಾ(ನೆ) – ಹೆಂಗಸು
- ಲಲಾಟತ್ರಿಪತಾಕೆ – ಹಣೆಯ ಮೂರು ಗೆರೆಗಳು
- ಲಲಾಟ(ಪಟ್ಟ) – ಹಣೆ
- ಲಲಾಟನೇತ್ರ – ಹಣೆಯ ಕಣ್ಣು; ಶಿವ
- ಲಲಾಟುಕೆ – ಹಣೆಯ ಬೊಟ್ಟು, ತಿಲಕ
- ಲಲಾಮ – ತಿಲಕ; ಶ್ರೇಷ್ಠ
- ಲಲಾಮೆ – ತಿಲಕದಂತೆ ಶ್ರೇಷ್ಠಳಾದವಳು
- ಲಲಿತ – ಸುಂದರವಾದ; ಕೋಮಲವಾದ
- ಲಲಿತಾಂಗ – ಸುಂದರ
- ಲಲಿತಾಕಾರ – ಸುಂದರ ದೇಹ
- ಲಲ್ಲಯಿಸು – ರಮಿಸು
- ಲಲ್ಲೆ – ಪ್ರೇಮ, ಸರಸ
- ಲಲ್ಲೆಗೆಯ್ – ಲಲ್ಲಯಿಸು
- ಲಲ್ಲೈಸು – ಮೆಚ್ಚಿಕೆಯ ಮಾತಾಡು
- ಲವ – ಸ್ವಲ್ಪ; ತುಂತುರು
- ಲವಣೋದಧಿ – ಉಪ್ಪುನೀರಿನ ಸಮುದ್ರ
- ಲವಲಿ(ಳಿ) – ಅರನೆಲ್ಲಿ ಮರ
- ಲವಲಿಕೆ – ಲವಲವಿಕೆ
- ಲವೋದ್ಗಮ – ತುಂತುರುಹನಿ
- ಲಸತ್ – ಹೊಳೆಯುವ
- ಲಸಿತ – ಚಲತ್ಕಾರ
- ಲಹರಿ(ಕೆ) – ಅಲೆ
- ಲಳಿ – ಕೌಶಲ
- ಲಾಂಗಲ – ನೇಗಿಲು
- ಲಾಂಗಲಹಸ್ತ – ಬಲರಾಮ
- ಲಾಂಗಲಿ – ಲಾಂಗಲಹಸ್ತ
- ಲಾಂಗೂಲ – ಬಾಲ
- ಲಾಂಚನ – ಚಿಹ್ನೆ; ಚಂದ್ರನಲ್ಲಿರುವ ಕಪ್ಪು ಕಲೆ
- ಲಾಂತವ – (ಜೈನ) ಒಂದು ಕಲ್ಪ
- ಲಾಕುಳ – ಯೋಗದಂಡ
- ಲಾಕ್ಷಾ – ಅರಗು
- ಲಾಕ್ಷಾಗೃಹ – ಅರಗಿನ ಮನೆ
- ಲಾಕ್ಷಾದ್ರವ – ಅರಗಿನ ರಸ
- ಲಾಕ್ಷಾಮುದ್ರೆ – ಅರಗಿನ ಮೊಹರು
- ಲಾಕ್ಷಾರಸ – ಲಾಕ್ಷಾದ್ರವ
- ಲಾಘವ – ಕ್ಷುಲ್ಲಕ; ಹಗುರವಾದ
- ಲಾಜ(ಜೆ) – ಬತ್ತದ ಅರಳು
- ಲಾಜಾಂಜಲಿ(ಳಿ) – ಅರಳು ತುಂಬಿದ ಬೊಗಸೆ
- ಲಾಭಂಬೆ¾ು – ಲಾಭವನ್ನು ಪಡೆ
- ಲಾಲಂಗಿ – ಆಲಾಪನೆಯ ಒಂದು ವಿಧ
- ಲಾಲಸ(ಸೆ) – ಬಯಕೆ
- ಲಾಲಾಂಬು – ಜೊಲ್ಲಿನ ರಸ
- ಲಾಲಾಜಲ(ಳ) – ಲಾಲಾಂಬು
- ಲಾಲೆ(ಳೆ) – ಲಾಲಾಂಬು
- ಲಾವ(ವಿ)ಗೆ – ಒಂದು ಹಕ್ಕಿ; ಪತಂಜಲ
- ಲಾವುಕ – ವಿಟಪುರುಷ; ಚಾಡಿಕೋರ
- ಲಾವಣಿಗೆ – ಉಪ್ಪಿನಕಾಯಿ
- ಲಾವಣ್ಯ – ಉಪ್ಪಾಗಿರುವುದು; ಚೆಲುವು
- ಲಾವ(ವು)ಕ – ಲಾವಗೆ
- ಲಾಸಕಿ – ನರ್ತಕಿ
- ಲಾಸಿಕೆ – ಲಾಸಕಿ
- ಲಾಳವಿಂಡಿಗೆ – ಅಗುಳಿ
- ಲಾಳ(ಳಾ) – (ಲಾಲಾ) ಜೊಲ್ಲು
- ಲಿಂಗಜ – ಇಂದ್ರಿಯಜನ್ಯಜ್ಞಾನ
- ಲಿಕುಚ – ಗಜನಿಂಬೆ
- ಲಿಪಿವಿಧಾನ – ಬರೆಯುವ ಕ್ರಮ
- ಲಿಪಿಸಂಖ್ಯಾನಸಂಗ್ರಹ – (ಜೈನ) ಒಂದು ಗರ್ಭಾನ್ಯಕ್ರಿಯೆ
- ಲೀಲಾಜಲಾಶಯ – ಆಟಕ್ಕಾಗಿ ನಿರ್ಮಿಸಿದ ಕೊಳ
- ಲೀಲೆ(ಳೆ) – ಸಂತೋಷ; ಆಟ; ವಿಲಾಸ
- ಲುಂಗ – ಮಾದಲ
- ಲುಂಟಾಕ – (ಲುಂಠಾಕ) ಕಳ್ಳ
- ಲುಂಠನ – ಅಪಹರಣ
- ಲುಂಠಾ(ಡಾ)ಕ – ಕಳ್ಳ
- ಲುಂದು – ಮಲಗು; ಸಂಭೋಗಿಸು; ಸಂಭೋಗ
- ಲುಂದುವೋವರಿ(ಗೆ) – ಮಲಗುವ ಮನೆ
- ಲುಬ್ಧ – ಲೋಭಗೊಂಡ(ವನು)
- ಲುಬ್ಧಕ – ಲೋಭಿ; ಬೇಡ
- ಲುಲಾಯ – ಕೋಣ, ಮಹಿಷ
- ಲುಲಾಯಚ್ಛವಿಕ – ಕೋಣದ ಬಣ್ಣವುಳ್ಳ; ಕಪ್ಪು
- ಲುಲಿ(ಳಿ)ತ – ಚಲಿಸುತ್ತಿರುವ; ಸುಂದರವಾದ
- ಲುಲಿಳಿ)ತಕುಂತಲೆ – ಅಲುಗುವ ಮುಂಗುರುಳವಳು
- ಲುಲಿ(ಳಿ)ತಾಳಕಿ – ಲುಲಿತಕುಂತಲೆ
- ಲೂನ – ಮುರಿಯಲ್ಪಟ್ಟ
- ಲೆಂಕ – ನಿಷ್ಠಾವಂತ ಸೇವಕ; ಭೃತ್ಯ
- ಲೆಂಕದಂಡ – ಲೆಂಕರ ಮುಖ್ಯಸ್ಥ
- ಲೆಂಕಿ – ಸೇವಕಿ
- ಲೆಕ್ಕ – ಎಣಿಕೆ; ಪರಿಗಣನೆ
- ಲೆಕ್ಕಂಗೊಳ್ – ಎಣಿಕೆಮಾಡು
- ಲೆಕ್ಕಣಿ(ಕೆ) – (ಲೇಖನೀ, ಲೇಖನಿಕಾ) ಬರೆಯುವ ಸಾಧನ
- ಲೆಕ್ಕವಣಿಗೆ – ಲೆಕ್ಕದ ವಿವರ
- ಲೆಕ್ಕವಲಗೆ – ಲೆಕ್ಕ ಬರೆಯುವ ಹಲಗೆ
- ಲೆಕ್ಕಿಗ – ಕರಣಿಕ
- ಲೆಕ್ಕಿಗರ ಪಿರಿಯ – ಕರಣಿಕರ ಮುಖ್ಯಸ್ಥ
- ಲೆಕ್ಕಿಗರರಸ – ಲೆಕ್ಕಿಗರ ಪಿರಿಯ
- ಲೆಪ್ಪ – (ಲೇಪ್ಯ) ಎರಕದ ಬೊಂಬೆ
- ಲೇಖವಾರ್ತೆ – ಪತ್ರದಲ್ಲಿ ಬರೆದಿರುವ ವಿಷಯ
- ಲೇಖವಾಹ(ಕ)(ನ) – ಓಲೆ ಒಯ್ಯುವವನು
- ಲೇಖವಾಹಕವೃತ್ತಿ – ದೌತ್ಯ, ಸಂದೇಶವಾಹನ
- ಲೇಖೆ – ಗೆರೆ
- ಲೇಲಿಹಾನ – ಹಾವು
- ಲೇಶ್ಯಾ(ವಿ)ಶುದ್ಧಿ – (ಜೈನ) ಕರ್ಮಸಂಬಂಧೀ ಬಣ್ಣಗಳ ನಾಶ
- ಲೇಶ್ಯೆ – (ಜೈನ) ಕರ್ಮಸಂಬಂಧವಾದ ಬಣ್ಣಗಳು ಆರು ಕೃಷ್ಣ, ನೀಲ, ಕಪೋತ, ಪೀತ, ಪದ್ಮ, ಶುಕ್ಲ; ಇವು ಕ್ರಮವಾಗಿ ಆಲಸ್ಯ, ಬುದ್ಧಿಹೀನತೆ, ಅವಿವೇಕ, ವಿಷಯಲಂಪಟತೆ, ಅಭಿಮಾನ, ಕಾಪಟ್ಯ, ಅತಿನಿದ್ರೆ ಇವುಗಳಿಗೆ ಕಾರಣ
- ಲೇಸಲ್ಲರ್ – ಒಳ್ಳೆಯವರಲ್ಲದವರು
- ಲೇಸು – ಹಿತಕರವಾದುದು; ಶ್ರೇಯಸ್ಕರ
- ಲೇಸುಗೆಯ್ – ಒಳ್ಳೆಯದನ್ನು ಮಾಡು
- ಲೋಕಜ್ಞ – ಲೋಕದ ರೀತಿನೀತಿಗಳನ್ನು ಬಲ್ಲವನು
- ಲೋಕನೇತ್ರ- ಸೂರ್ಯ, ಚಂದ್ರ
- ಲೋಕಪೂರಣ(ಕ್ರಿಯೆ) – (ಜೈನ) ಕೇವಲಿಗಳ ಆತ್ಮವು ಭೂಮಂಡಲದ ವಾಯುತ್ರಯದೊಡನೆ ಬೆರೆಯುವುದು
- ಲೋಕಪ್ರತೀತ – ಜಗತ್ಪ್ರಸಿದ್ಧ
- ಲೋಕಲುಂಟಾಕ – ಲೋಕಕ್ಕೆ ಪೀಡೆಯಾದವನು
- ಲೋಕಾಂತರಿತ – ಬೇರೆ ಲೋಕಕ್ಕೆ ಹೋದವನು, ಸತ್ತವನು
- ಲೋಕಾಂತಿಕ(ದೇವ) – (ಜೈನ) ಸಾರಸ್ವತ, ಆದಿತ್ಯ, ವಹ್ನಿ, ಅರುಣ, ಗರ್ದತೋಯ. ತುಷಿತ, ಅವ್ಯಾಬಾಧ, ಅರಿಷ್ಟ ಎಂಬ ಎಂಟು ಮಂದಿ
- ಲೋಕಾಕಾರಕಥನ – (ಜೈನ) ಅಧೋ, ಮಧ್ಯ, ಊಧ್ರ್ವಲೊಕಗಳ ವರ್ಣನೆ
- ಲೋಕಾಕಾಶ – (ಜೈನ) `ಷಡ್ದ್ರವ್ಯ’ಗಳನ್ನು ಹೊಂದಿರುವ ಆಕಾಶಪ್ರದೇಶ
- ಲೊಕಾಖ್ಯಾನ – (ಜೈನ) ಲೋಕದ ಆಕಾರ ವರ್ಣನೆ
- ಲೋಕಾಯತ(ವಾದಿ) – ನಾಸ್ತಿಕ
- ಲೋಕಾಯತಿಕ – ನಾಸ್ತಿಕತೆ
- ಲೋಕೋತ್ತರ – ಅಸಾಧಾರಣ(ವಾದ)
- ಲೋಗ – ಸಾಮಾನ್ಯ ವ್ಯಕ್ತಿ
- ಲೋಗಾಣಿ – ಲೋಕಾಕಾರವನ್ನು ತಿಳಿಸುವ ಗ್ರಂಥ
- ಲೋಚನ – ಹೊಳೆಯುವ; ಕಣ್ಣು
- ಲೋಚನಾಂಶು – ಕಣ್ಣಿನ ಹೊಳಪು
- ಲೋಚು – (ಜೈನ) ಮುನಿಗಳು ತಮ್ಮ
- ತಲೆಗೂದಲನ್ನು ತಾವೇ ಕಿತ್ತುಕೊಳ್ಳುವುದು
- ಲೋಚುಗೆಯ್ – (ಜೈ) ಜಿನದೀಕ್ಷೆ ಪಡೆದವರ ಕೂದಲು ಕೀಳು
- ಲೋಧ್ರ – ಸಾಂಬ್ರಾಣಿ ಗಿಡ
- ಲೋಭಕ – ಅತಿ ಆಸೆಯಿಂದ ಕೂಡಿದ; ಜಿಪುಣತನದಿಂದ ಕುಡಿದ
- ಲೋಲ – ಆಸಕ್ತಿಯುಳ್ಳವನು; ಲಂಪಟ; ಅಲ್ಲಾಡುತ್ತಿರುವ
- ಲೋಲಂಬಕದಂಬ – ದುಂಬಿಗಳ ಹಿಂಡು
- ಲೋಲ(ಳ)ತೆ – ಅಲುಗಾಟ, ಚಾಂಚಲ್ಯ
- ಲೋಲಾಪಾಂಗೆ – ಚಂಚಲನೇತ್ರೆ
- ಲೋಲುಪ – ಲಂಪಟ
- ಲೋಲುಪ್ತಿ – ಲಾಂಪಟ್ಯ
- ಲೋಲೇಕ್ಷಣ – ಚಂಚಲನೇತ್ರ
- ಲೋಲೆ – ಸೂರಿನ ಮುಂಭಾಗ; ಇಳಿ ಸೂರು
- ಲೋಹಕಂಟಕ – ಮುಳ್ಳುತಂತಿಯ ಬೇಲಿ
- ಲೋಹಖುರವಾಹ – ಲಾಳ ಕಟ್ಟಿದ ಕುದುರೆ
- ಲೋಹಜಬಂದ – ಕಬ್ಬಿಣದ ಸರಪಳಿ
- ಲೋಹವಕ್ಕರೆ – ಯುದ್ಧದ ಆನೆಕುದುರೆಗಳಿಗೆ ಹಾಕಿರುವ ಕಬ್ಬಿಣದ ಪಕ್ಷರಕ್ಷೆ
- ಲೋಹಿತ – ರಕ್ತ; ಕೆಂಪು ಬಣ್ಣದ
- ಲೋಹಿತಮತ್ಸ್ಯ – ಕೆಂಪು ಮೀನು
- ಲೋಹಿತಲೋಚನ – ಕೆಂಗಣ್ಣು(ಗಳುಳ್ಳವನು)
- ಲೋಹಿತಾಶ್ವ – ಅಗ್ನಿ
- ಲೋಳೆ – ಜೊಲ್ಲು
- ಲೋಳೆವಾಯ್ – ಜೊಲ್ಲು ಸುರಿಯುವ ಬಾಯಿ
- ಲೌಲ್ಯ – ಚಂಚಲತೆ
- ಲೌಹಿತ್ಯ – ಕೆಂಬಣ್ಣ
Conclusion:
ಕನ್ನಡ ಲ ಅಕ್ಷರದ ಹಳೆಗನ್ನಡ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.