ಕನ್ನಡ ಝ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada jha aksharada halegannadada padagalu , ಕನ್ನಡ ಝ ಅಕ್ಷರದ ಹಳೆಗನ್ನಡ ಪದಗಳು (jhA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಝ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( jha halegannada Words in kannada ) ತಿಳಿದುಕೊಳ್ಳೋಣ
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಝ ಅಕ್ಷರ ಎಂದರೇನು?
ಝ, ಕನ್ನಡ ವರ್ಣಮಾಲೆಯ ಚ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.
ಮಹಾಪ್ರಾಣ, ಕ್ವಚಿತ್ತಾಗಿ ಬಳಕೆಯಲ್ಲಿತ್ತಾದ ಕಾರಣ ಎಲ್ಲ ಕಾಲಹಂತಗಳಲ್ಲೂ ಇದು ಕಾಣಸಿಗುವುದಿಲ್ಲ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿರುವ ಈ ಅಕ್ಷರಕ್ಕೆ ಸ್ವಲ್ಪಮಟ್ಟಿಗೆ ಈಗಿನ ಅಕ್ಷರದ ಹೋಲಿಕೆ ಬರುವುದು ಗಂಗರ ಕಾಲದಲ್ಲಿ. ರಾಷ್ಟ್ರಕೂಟರ ಕಾಲಕ್ಕೆ ತಲೆಕಟ್ಟು ಭದ್ರವಾಗುತ್ತದೆ. ಅದರ ಹೊಕ್ಕಳು ಸೀಳಿರುವುದನ್ನು ಮೈಸೂರು ಅರಸರ ಕಾಲದಲ್ಲಿ ಕಾಣಬಹುದು.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಝ ಅಕ್ಷರದ ಹಳೆಗನ್ನಡ ಪದಗಳು – Kannada Words
- ಝಂಕಟ – ಒಂದು ವಾದ್ಯ
- ಝಂಕಾರ – ಝಂ ಎಂಬ ಸದ್ದು
- ಝಂಕಾರಿತ – ಝಂಕಾರವನ್ನು ಮಾಡುವ
- ಝಂಕೃತ – ಝಂಕಾರ
- ಝಂಕೃತಿ – ಝಂಕಾರ
- ಝಂಪಾಳ – ಮೇಲ್ಮುಸುಕು
- ಝಂಪಾಳಿ – ಡೇರೆ
- ಝಣಂಬ – ಮೇಲುಹೊದಿಕೆ
- ಝಣನ್ನೂಪುರ – ಝಣತ್+ನೂಪುರ, ಝಣಝಣ ಎಂದು ಶಬ್ದಮಾಡುವ ಕಡಗ
- ಝಮ್ಮಗೆ – ಒಂದು ಅನುಕರಣ ಶಬ್ದ
- ಝಲ್ಲರಿ – ಒಂದು ಚರ್ಮವಾದ್ಯ; ಕಂಚಿನ ತಾಳ; ಜರಡಿ
- ಝಷ – ಮೀನು
- ಝಷಕೇತನ – ಮೀನಿನ ಗುರುತುಳ್ಳ
- ಧ್ವಜವುಳ್ಳವನು, ಮನ್ಮಥ
- ಝಷಕೇತು – ಝಷಕೇತನ
- ಝಷನೇತ್ರ – ಮೀನಿನ ಆಕಾರದ ಕಣ್ಣು
- ಝಷಪತಾಕೆ – ಮೀನಿನ ಗುರುತುಳ್ಳ ಧ್ವಜ
- ಝಳಂಬಂ – ಮೇಲು ಮುಸುಕು, ಹೊದಿಕೆ
- ಝಾಳೆಯಂಗೊಳ್ – ತೆಗೆದುಕೊ; ಕಿತ್ತುಕೊ
- ಝೇಂಕರಿಸು – ಆರ್ಭಟಿಸು
CONCLUSION:
ಕನ್ನಡ ಝ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.