ಕನ್ನಡ ಷ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada shha aksharada halegannadada padagalu , ಕನ್ನಡ ಷ ಅಕ್ಷರದ ಹಳೆಗನ್ನಡ ಪದಗಳು (shhA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಷ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( shha halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ
ಕನ್ನಡ ಷ ಅಕ್ಷರ ಎಂದರೇನು?
ಷ, ಕನ್ನಡ ವರ್ಣಮಾಲೆಯ ಏಳನೇ ಅವರ್ಗೀಯ ವ್ಯಂಜನವಾಗಿದೆ. ಮೂರ್ಧನ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿ.
ಅಶೋಕನ ಕಾಲದ ಈ ಅಕ್ಷರ ಸಾತವಾಹನ ಕಾಲದಲ್ಲಿ ಅಗಲವಾಗುತ್ತದೆ. ಕದಂಬ ಕಾಲದಲ್ಲಿ ಇದು ಸ್ವಲ್ಪ ಬದಲಾವಣೆಯನ್ನು ಹೊಂದಿ ಗಂಗರ ಕಾಲದಲ್ಲಿ ಈ ಅಕ್ಷರದ ಕೆಳಭಾಗ ಗುಂಡಗೆ ಆಗುತ್ತದೆ.
ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಈ ಅಕ್ಷರ ಸ್ಥಿರಗೊಂಡು ಅದೇ ರೂಪವೇ ಕಳಚುರಿ, ಹೊಯ್ಸಳ ಮತ್ತು ಸೇವುಣರ ಕಾಲಗಳಲ್ಲಿ ಉಪಯೋಗಕ್ಕೆ ಬರುತ್ತದೆ. ವೃತ್ತಾಕಾರದಂತಿದ್ದ ಈ ಅಕ್ಷರದ ಕೆಳಭಾಗ ವಿಜಯನಗರ ಕಾಲದಲ್ಲಿ ಗಮನಾರ್ಹವಾದ ಬದಲಾವಣೆಯನ್ನು ವ್ಯಕ್ತಪಡಿಸುತ್ತದೆ.
ಕೆಳಗಿನ ವೃತ್ತಾಕಾರ ಖಂಡವೃತ್ತವಾಗಿ ಪರಿವರ್ತಿತಗೊಳ್ಳುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಈ ಖಂಡವೃತ್ತಕ್ಕೆ ಒಂದು ಸಣ್ಣ ಕೊಂಡಿಯಂತಿರುವ ಆಕಾರ ಸೇರಿ ಅದೇ ರೂಪವೇ ಸ್ಥಿರವಾಗುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಷ ಅಕ್ಷರದ ಹಳೆಗನ್ನಡ ಪದಗಳು – Kannada Words
- ಷಂಡ – ಗುಂಪು; ನಪುಂಸಕ
- ಷಂಡಕವೇದ – (ಜೈನ) ಒಂದು ಬಗೆಯ ನೋಕಷಾಯ
- ಷಟ್ಕರ್ಮ – ಬ್ರಾಹ್ಮಣನ ಆರು ಕೆಲಸಗಳು: ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ, ಪ್ರತಿಗ್ರಹ; (ಜೈನ) ಶ್ರಾವಕನ ಆರು ಕರ್ತವ್ಯಗಳು: ಇಜ್ಯೆ, ವಾರ್ತೆ, ದತ್ತಿ, ಸ್ವಾಧ್ಯಾಯ, ಸಂಯಮ, ತಪ
- ಷಟ್ಕಷಾಯ – (ಜೈನ) ಹಾಸ್ಯ, ರತಿ, ಶೋಕ, ಭಯ, ಅರತಿ, ಜುಗುಪ್ಸೆ ಎಂಬ ಆರು ದೋಷಗಳು
- ಷಟ್ಖಂಡ – (ಜೈನ) ವಿಜಯಾರ್ಧಪರ್ವತದ
- ಉತ್ತರದಲ್ಲಿ ಗಂಗೆ-ಸಿಂಧುಗಳಿಂದ ಬೇರ್ಪಡಿಸಲ್ಟಟ್ಟ ಮೂರು; ಅದಕ್ಕೆ ದಕ್ಷಿಣದಲ್ಲಿರುವ ಮೂರು – ಹೀಗೆ ಒಟ್ಟು ಆರು ಭೂಭಾಗಗಳು
- ಷಟ್ವಕ್ರ – ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧ, ಆಜ್ಞಾ
- ಷಟ್ಚರಣ – ದುಂಬಿ
- ಷಟ್ತರ್ಕ – ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ವೇದಾಂತ, ಪೂರ್ವಮೀಮಾಂಸೆ ಎಂಬ ಆರು ದರ್ಶನಗಳು
- ಷಟ್ತ್ರಿಂಶದ್ಗುಣ – (ಜೈನ) ಮುನಿಗಳಲ್ಲಿರಬೇಕಾದ ಮೂವತ್ತಾರು ಮೂಲೋತ್ತರಗುಣಗಳು; ದ್ವಾದಶ ತಪಸ್ಸುಗಳು, ದಶಧರ್ಮಗಳು, ಪಂಚಾಚಾರಗಳು, ತ್ರಿಗುಪ್ತಿಗಳು; ಅವುಗಳನ್ನು ಪಡೆದವನು
- ಷಡ್ದರ್ಶನ – ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಪೂರ್ವಮೀಮಾಂಸೆ ಮತ್ತು ಉತ್ತರ ಮೀಮಾಂಸೆಗಳೆಂಬ ಆರು ತಾತ್ವಿಕ ನಿಲವುಗಳು
- ಷಟ್ಪದ – ದುಂಬಿ
- ಷಡಂಗ(ಬಲ) – ರಥ, ಆನೆ, ತುರಗ, ಪದಾತಿ, ದಿವಿಜ, ಖೇಚರ ಎಂಬ ಆರು ಬಗೆಯ ಸೇನೆಗಳು
- ಷಡಂಗಸೇನೆ – ಷಡಂಗ(ಬಲ)
- ಷಡಂತರಂಗತಪ – (ಜೈನ) ಪ್ರಾಯಶ್ಚಿತ್ತ, ವಿನಯ, ವೈಯಾಪೃತ್ಯ, ಸ್ವಾಧ್ಯಾಯ, ವ್ಯುತ್ಸರ್ಗ, ಧ್ಯಾನಗಳೆಂಬ ಆರು ಅಂತರಂಗದ ತಪಸ್ಸುಗಳು
- ಷಡಭಿಜ್ಞ – ದಿವ್ಯದೃಷ್ಟಿ, ದಿವ್ಯಶ್ರುತಿ, ಪೂರ್ವಾನುಸ್ಮøತಿ, ಪರೇಂಗಿತಜ್ಞಾನ, ಪರೋಕ್ಷವಿಷಯಜ್ಞಾನ, ಗಗನಗಮನಾದಿ ವಿದ್ಯಾಬುದ್ಧಿ – ಈ ಆರು ಶಾಸ್ತ್ರಗಳನ್ನು ಬಲ್ಲವನು; ಬುದ್ಧ; ಬೌದ್ಧಮತೀಯ
- ಷಡಯನ – ದುಂಬಿ
- ಷಡಾವಶ್ಯಕ(ತೆ) – )ಜೈನ) ಮುನಿಗಳು ಪ್ರತಿದಿನ ಆಚರಿಸಬೇಕಾದ ಸಾಮಯಿಕ, ತೀರ್ಥಂಕರಸ್ತವ, ಪಂಚಪರಮೇಷ್ಠಿವಂದನ, ಪ್ರತಿಕ್ರಮಣ, ಪ್ರತ್ಯಾಖ್ಯಾನ, ಕಾಯೋತ್ಸರ್ಗ ಎಂಬ ಆರು ಕ್ರಿಯೆಗಳು
- ಷಡ್ಜೀವ – (ಜೈನ) ಏಕೇಂದ್ರಿಯ, ದ್ವೀಂದ್ರಿಯ, ತ್ರೀಂದ್ರಿಯ, ಚತುರಿಂದ್ರಿಯ,, ಪಂಚೇಂದ್ರಿಯ ಅಸೈನೀ, ಪಂಚೇಂದ್ರಿಯ ಸೈನೀ – ಎಂಬ ಆರು ಬಗೆಯ ಜೀವಿಗಳು
- ಷಡ್ಬಲ – ಷಡಂಗ; ಆರು ಬಗೆಯ ಸೈನ್ಯಗಳು: ಮೌಲ, ಭೃತಕ, ಶ್ರೇಣಿ, ಮಿತ್ರ, ಅಮಿತ್ರ, ಅಟವಿಕ
- ಷಡ್ದ್ರವ್ಯ – (ಜೈನ) ಭೌತಿಕ ಜಗತ್ತಿನ ನಿರ್ಮಾಣಕ್ಕೆ ಕಾರಣವಾದ ಆರು ದ್ರವ್ಯಗಳು; ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶ, ಕಾಲ ಎಂಬಿವು
- ಷಣ್ಣವತಿ – ತೊಂಬತ್ತಾರು
- ಷಷ್ಟಿಕಾವ್ರೀಹಿ – ಅರವತ್ತು ದಿನಗಳಲ್ಲಿ ಕಟಾವಿಗೆ ಬರುವ ಒಂದು ಬಗೆಯ ಬತ್ತ
- ಷಷ್ಠೋಪವಾಸ – ಆರು ದಿನಗಳ ಉಪವಾಸವ್ರತ
- ಷಾಡ್ಗುಣ್ಯ – ರಾಜನ ಆರು ಗುಣಗಳಾದ ಸಂಧಿ, ವಿಗ್ರಹ, ಯಾನ, ಆಸನ, ಸಂಶಯ ಮತ್ತು ದ್ವೈಧೀಭಾವ
- ಷಿಡ್ಗ – ವಿಟ, ಕಾಮುಕ
- ಷೋಡಶಕಲ್ಪ – (ಜೈನ) ಸೌಧರ್ಮ, ಈಶಾನ, ಸನತ್ಕುಮಾರ, ಮಾಹೇಂದ್ರ, ಬ್ರಹ್ಮ, ಬ್ರಹ್ಮೋತ್ತರ, ಲಾಂತವ, ಕಾಪಿಷ್ಠ, ಶುಕ್ರ, ಮಹಾಶುಕ್ರ, ಶತಾರ, ಸಹಸ್ರಾರ, ಆನತ, ಪ್ರಾಣತ, ಆರಣ, ಅಚ್ಯುತ ಎಂಬ ಹದಿನಾರು ಸ್ವರ್ಗಗಳು
- ಷೋಡಶ(ತೀರ್ಥಕರ)ಭಾವನೆ – (ಜೈನ) ತೀರ್ಥಂಕರನಾಗಲು ಕಾರಣವಾಗುವ ದರ್ಶನವಿಶುದ್ಧಿ, ವಿನಯಸಂಪನ್ನತೆ, ಅನತಿಚಾರ, ಅಭೀಕ್ಷ್ನಕ್ಞಾನೋಪಯೋಗ, ಸಂವೇಗ, ಶಕ್ತಿತಸ್ತ್ಯಾಗ, ಶಕ್ತಿತಸ್ತಪ, ಸಾಧುಸಮಾಧಿ, ವೈಯಾವೃತ್ಯ, ಅರ್ಹದ್ಭಕ್ತಿ, ಆಚಾರ್ಯಭಕ್ತಿ, ಉಪಾಧ್ಯಾಯಭಕ್ತಿ, ಪ್ರವಚನಭಕ್ತಿ, ಅವಶ್ಯಕಾಪರಿಹಾರಿಣಿ, ಮಾiರ್ಗಪ್ರಭಾವನೆ, ಪ್ರವಚನವತ್ಸಲತ್ವ -ಎಂಬ ಹದಿನಾರು ಮನೋವೃತ್ತಿಗಳು
- ಷೋಡಶಸಂಧಿ – ರಾಜನು ಕೈಗೊಳ್ಳಬಹುದಾದ ಹದಿನಾರು ಬಗೆಯ ಸಂಧಿಗಳು: ಸಂಪ್ರದಾನ, ಕಪಾಲ, ಉಪಹಾಸನ, ಸಂತಾನ, ಸಂಗತ, ಉಪನ್ಯಾಸ, ಪ್ರತೀಕಾರ, ಸಂಯೋಗ, ಪುರುಷಾಂತರ, ಅದೃಷ್ಟಪುರುಷ, ಅದುಷ್ಟ, ಆತ್ಮಾಮಿಷ,ಉಪಗ್ರಹ, ಪರಿಕ್ರಮ, ಅರಿಪರದೂಷಣ, ಸ್ಕಂಧೋಪನಯ
- ಷೋಡಶಸಂಸ್ಕಾರ – ಗರ್ಭಾದಾನ, ಪುಂಸವನ, ಸೀಮಂತ, ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಲ, ಉಪನಯನ, ಪ್ರಾಜಾಪತ್ಯ, ಸಾಮ್ಯ, ಆಗ್ನೇಯ, ವೈಶ್ವದೇವ, ಗೋದಾನ, ಸಮಾವರ್ತನ, ವಿವಾಹ, ಅಂತ್ಯೇಷ್ಟಿ
- ಷೋಡಶಸ್ವಪ್ನ – (ಜೈನ) ಗರ್ಭಧಾರಣೆಯ ಕಾಲದಲ್ಲಿ ಜಿನಮಾತೆಯು ಕಾಣುವ ಐರಾವತ, ಬಿಳಿಯ ಹೋರಿ, ಸಿಂಹ, ಲಕ್ಷ್ಮಿ, ಹೂಹಾರ, ಚಂದ್ರ, ಬಾಲಸೂರ್ಯ, ಎರಡೆಳೆಯ ಮೀನು, ಜೋಡಿ ರತ್ನಕುಂಭ, ತಾವರೆಕೊಳ, ಸಮುದ್ರ, ಸಿಂಹಾಸನ, ದೇವವಿಮಾನ, ರತ್ನಸಮೂಹ, ಉಜ್ವಲಜ್ವಾಲೆ ಎಂಬ ಕನಸುಗಳು
- ಷೋಡಶಸ್ವರ್ಗ – ಷೋಡಶಕಲ್ಪ
Conclusion:
ಕನ್ನಡ ಷ ಅಕ್ಷರದ ಹಳೆಗನ್ನಡ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.