ಕನ್ನಡ ಉ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada u aksharada halegannadada padagalu , ಕನ್ನಡ ಉ ಅಕ್ಷರದ ಹಳೆಗನ್ನಡ ಪದಗಳು ( u halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಉ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( u halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಉ ಅಕ್ಷರ ಎಂದರೇನು?
ಉ ಕನ್ನಡ ವರ್ಣಮಾಲೆಯ ಐದನೇ ಸ್ವರಾಕ್ಷರ. ಉ ಕನ್ನಡದ ಹೃಸ್ವ ಸ್ವರ ಅಕ್ಷರ. ನಾಮಿಸ್ವರಗಳಲ್ಲಿ ಉ ಮತ್ತು ಊ ಜೊತೆ ಸೇರುತ್ತವೆ. ಹಾಗಾಗಿ ಸವರ್ಣಗಳಲ್ಲಿ ಉ ಅಕ್ಷರದ ಪಾತ್ರವೂ ಇದೆ
ಇದು ಕನ್ನಡ ವರ್ಣಮಾಲೆಯ ಐದನೆಯ ಅಕ್ಷರ. ಅಶೋಕನ ಶಾಸನಗಳಲ್ಲಿನ ಇದರ ರೂಪ ಅತಿ ಪ್ರಾಚೀನವಾದುದು. ಎರಡು ನೇರಗೆರೆಗಳು ಸುಮಾರು 120 ಡಿಗ್ರಿ ಕೋನದಲ್ಲಿ ಸಂಧಿಸಿದಂತೆ ಕಾಣುವ ಈ ರೂಪ ಸು. 300 ವರ್ಷಗಳ ಕಾಲ ಯಾವ ಬದಲಾವಣೆಯೂ ಇಲ್ಲದೆ ಮುಂದುವರಿದಂತೆ ಕಾಣುತ್ತದೆ. ಕದಂಬರ ಕಾಲದಲ್ಲಿ ಗುಂಡಗಾಗುವ ಪ್ರವೃತ್ತಿಯನ್ನು ತೋರುತ್ತದೆ. ರಾಷ್ಟ್ರಕೂಟರ ಕಾಲದಲ್ಲಿ ಅಕ್ಷರದ ಕೆಳಭಾಗ ಅಗಲವಾಗುತ್ತದೆ. ಪ್ರ.ಶ. 13ನೆಯ ಶತಮಾನದ ಹೊತ್ತಿಗೆ ಕೆಳಭಾಗ ಎರಡು ಕೊಂಡಿಗಳಂತೆ ಆಗಿ, ಅದೇ ರೂಪ ವಿಜಯನಗರದ ಕಾಲದಲ್ಲೂ ಮುಂದುವರಿಯುತ್ತದೆ. ಪ್ರ.ಶ. 16ನೆಯ ಶತಮಾನದ ಅನಂತರ ಗಮನಾರ್ಹವಾದ ಬದಲಾವಣೆಗಳುಂಟಾಗಿ ಪ್ರ.ಶ. 18ನೆಯ ಶತಮಾನದಲ್ಲಿ, ಈಗಿನ ರೂಪಕ್ಕೆ ಸಮೀಪವಾಗಿರುವಂತೆ ತೋರುತ್ತದೆ. ಆದರೆ ಮೇಲಿರುವ ತಲೆಕಟ್ಟಿನ ಮಾದರಿಯ ರೇಖೆ ಮಾತ್ರ ಉಳಿದುಬರುತ್ತದೆ. ಅನಂತರ ಅದು ಮಾಯವಾಗಿ, ಈಗಿನ ರೂಪವನ್ನು ತಾಳುತ್ತದೆ
Check out Kannada Varnamale : ಕನ್ನಡ ವರ್ಣಮಾಲೆ
ಉ ಅಕ್ಷರದ ಹಳೆಗನ್ನಡ ಪದಗಳು – Kannada Words
- ಉಂಗುಟ – ಕಾಲಿನ ಹೆಬ್ಬೆರಳು
- ಉಂಗುರವಿಡು – ಮದುವೆ ನಿಶ್ಚಿತಾರ್ಥದಲ್ಲಿ ಉಂಗುರ ತೊಡಿಸು
- ಉಂಚ – ಎತ್ತರ; ಉದ್ದವಾದ
- ಉಂಟು – ಇದೆ
- ಉಂಟೊಡೆತು – ಹೌದು, ಇದೆ ಎಂಬುದನ್ನಾಗಿ ಮಾಡಿ
- ಉಂಡಗೆ – ಉಂಡೆ
- ಉಂಡಲಿಗೆ – ಕಡುಬು
- ಉಂಡಿಗೆ – ಮುದ್ರೆ; ಅಪ್ಪಣೆ ಚೀಟಿ; ಗಂಟಲು
- ಉಂಡಿಗೆ ಸಾಧ್ಯಂ ಮಾಡು – ತನ್ನ ಹೆಸರಿನ ಮುದ್ರೆ ಬೇರೆಡೆ ಚಲಾವಣೆಯಾಗುವಂತೆ ಮಾಡು, ಆ ಪ್ರದೇಶವನ್ನು ಗೆಲ್ಲು
- ಉಂಡಿಗೆಯೊತ್ತು – ಮುದ್ರೆ ಒತ್ತು
- ಉಂಡೆ – ಮುದ್ದೆ
- ಉಂತಪ್ಪ – ನಡುವಣ ರೀತಿಯ
- ಉಂತು – ನಡುವಣ ರೀತಿಯಲ್ಲಿ
- ಉಂತೆ – ವ್ಯರ್ಥವಾಗಿ
- ಉಂದುರ – ಇಲಿ, ಹೆಗ್ಗಣ
- ಉಕ್ಕಂದ – ತುಂಬಿ ತುಳುಕುವ; ಉತ್ಸಾಹ
- ಉಕ್ಕಡ – ನಗರದ ಗಡಿ; ಪಹರೆಯ ನೆಲೆ
- ಉಕ್ಕೆವ – ಠಕ್ಕು, ಮೋಸ; ಉತ್ಸಾಹ; ಉತ್ಸವ
- ಉಕ್ಕೆವಗುದುರೆ – ಮೋಸದ ಕುದುರೆ
- ಉಕ್ಕೆವಚಾಮರ – ಉತ್ಸವಕಾಲದ ಚಾಮರ
- ಉಕ್ಕೆವತನ – ವಂಚಕತನ
- ಉಕ್ಕೆವತಪ – ಕಪಟ ತಪಸ್ಸು
- ಉಕ್ತಿಪ್ರೌಢ – ಮಾತಿನ ನಿಪುಣ
- ಉಕ್ತಿವಕ್ರಿಮ – ಮಾತಿನ ಕೊಂಕು
- ಉಕ್ಷ – ಎತ್ತು
- ಉಗಿ – ಹೊರಗೆಳೆ; ಸಡಿಲವಾಗು; ಉಗುಳು; ಕುಗ್ಗಿಸು; ಹೆದರು; ಸೀಳಿಹೋಗಿರುವುದು; ಕೀಳು
- ಉಗಿಗೊಳ್ – ತಿವಿಯಲ್ಪಡು; ಉಗುರಿನಿಂದ ಗಾಯಹೊಂದು
- ಉಗಿಪಟಂಗೊಳ್ – ಸೆಳೆದುಕೊ; ಹೋಗಲಾಡಿಸು
- ಉಗಿಪದ – ಸುಲಿಗೆ
- ಉಗಿಬಗಿ – ಸೀಳು; ಚೂರಾಗಿರುವುದು
- ಉಗಿಬಗಿಮಾಡು – ಚೂರುಮಾಡು; ಕಲಕು; ಪರವಶಗೊಳಿಸು; ಉಗುರಿನಿಂದ ಪರಚಿ ಗಾಯಮಾಡು
- ಉಗಿಬಗಿಯಾಗು – ಹೊಯ್ದಾಡು; ಆತುರಪಡು
- ಉಗಿವಡೆ – ಗಾಯಹೊಂದು
- ಉಗಿಸು – ಚೆಲ್ಲಿಸು; ಚಿಮುಕಿಸು; ಹೊರಬೀಳಿಸು
- ಉಗು – ಚೆಲ್ಲು; ಹೊರಬೀಳಿಸು; ಸುರಿ
- ಉಗುತರ್ – ಉಕ್ಕಿಬರು; ಸುರಿ; ಸ್ರವಿಸು
- ಉಗುರಿಸು – ಉಗುರಿನಿಂದ ಕೆರೆ, ಗೀಚು
- ಉಗುರ್ವಿಸಿ – ಉಗುರು ಬಿಸಿ
- ಉಗುರ್ವೆಚ್ಚನೆ- ಉಗುರುಬೆಚ್ಚಗೆ
- ಉಗುರ್ವೊಯ್ಲು – ಉಗುರಿನ ಹೊಡೆತ
- ಉಗ್ಗಡ – (ಉತ್ಕಟ) ಆಧಿಕ್ಯ
- ಉಗ್ಗಡರಾವಿತ – ಶೂರನಾದ ಸವಾರ
- ಉಗ್ಗಡಿ(ಳಿ)ಸು – (ಉದ್ಘೋಷಿಸು) ಕೂಗಿ ಹೇಳು; ಕೊಂಡಾಡು
- ಉಗ್ಗು – ತೊದಲುವಿಕೆ
- ಉಗ್ರ – ಭಯಂಕರವಾದ
- ಉಗ್ರಕರ – ತೀಕ್ಷ್ಣ ಕಿರಣಗಳನ್ನುಳ್ಳವನು, ಸೂರ್ಯ
- ಉಗ್ರಘೋಷ – ಭಯಂಕರ ಧ್ವನಿ
- ಉಗ್ರತಿಮಿ – ಭಯಂಕರ ಮೀನು
- ಉಗ್ರತೇಜ – ಕೋರೈಸುವ ಕಾಂತಿ
- ಉಗ್ರನಖ – ಹರಿತವಾದ ಉಗುರು
- ಉಗ್ರಪಾಣಿ – ಭಯಂಕರ ಕೈಯುಳ್ಳವನು
- ಉಗ್ರಬಲ – ಭಯಂಕರ ಬಲಿಷ್ಠ
- ಉಗ್ರಸತ್ವ – ಬಹಳ ಬಲಶಾಲಿ
- ಉಘೇ – ಜಯಘೋಷ
- ಉಚಿತ – ತಕ್ಕ, ಸರಿಯಾದ
- ಉಚಿತಜ್ಞ – ಯೋಗ್ಯವಾದುದನ್ನು ತಿಳಿದವನು
- ಉಚಿತವಿಧಿ – ಯೋಗ್ಯ ಕ್ರಮ
- ಉಚಿತೋಕ್ತಿ – ಯೋಗ್ಯವಾದ ಮಾತು
- ಉಚ್ಚ – ಉನ್ನತವಾದ; ಮುಖವೆತ್ತಿ ನಡೆವವನು; ಉನ್ನತಿ
- ಉಚ್ಚಂಡ – ಹರಿತವಾದ; ಉಗ್ರವಾದ
- ಉಚ್ಚಂಡಕರ – ಕೊರೈಸುವ ಕಾಂತಿ; ಬಲಿಷ್ಠ ಕೈ
- ಉಚ್ಚಂಬರಿ – ಮೇಲೆ ಹಾರು
- ಉಚ್ಚರಿಸು – ಉಚ್ಚಾರಮಾಡು; ಹೇಳು
- ಉಚ್ಚಲಿ(ಳಿ)ತ – ಮೇಲಕ್ಕೆ ಎದ್ದ
- ಉಚ್ಚಲಿ(ಳಿ)ಸು – ಮೇಲಕ್ಕೆ ಚಿಮ್ಮು; ಎಲ್ಲೆ ಮೀರು
- ಉಚ್ಚವ – ಸಡಗರ; ಉತ್ಸವ
- ಉಚ್ಚವಿಗ್ರಹ – ಬಲಿಷ್ಠರೊಡನೆ ಮಾಡುವ ಯುದ್ಧ
- ಉಚ್ಚಸ್ತನಿ – ಉನ್ನತವಾದ ಮೊಲೆಯುಳ್ಳವಳು
- ಉಚ್ಚಾಟನಂಗೆಯ್ – ಓಡಿಸು
- ಉಚ್ಚಾಟಿತ – ಓಡಿಸಿದ
- ಉಚ್ಚಾಟಿಸು – ಓಡಿಸು
- ಉಚ್ಚಾರಿತ – ಹೇಳಿದ
- ಉಚ್ಚಾರಿಸು – ನುಡಿ, ಹೇಳು
- ಉಚ್ಚಾವಚ – ಮೇಲು ಮತ್ತು ಕೀಳು; ವಿವಿಧ
- ಉಚ್ಚಾಸನ – ಉನ್ನತ ಪೀಠ
- ಉಚ್ಚೈರ್ಗೋತ್ರ – (ಜೈನ) ಉತ್ಕøಷ್ಟ ವಂಶ
- ಉಚ್ಚೈಧ್ರ್ವಾನ – ಗಟ್ಟಿ ಕೂಗು
- ಉಚ್ಚೈಶ್ರವತ್ವ – ನೆಟ್ಟಗಿರುವ ಕಿವಿಗಳನ್ನು ಪಡೆದಿರುವಿಕೆ
- ಉಚ್ಚೈಶ್ರವಸ್ಸು – ಇಂದ್ರನ ಕುದುರೆ
- ಉಚ್ಚಿತ್ತಿ – ಕತ್ತರಿಸುವುದು
- ಉಚ್ಚಿಷ್ಟಪಕ್ವ – ತಿಂದು ಬಿಟ್ಟ ಹಣ್ಣು
- ಉಚ್ಛೇದನ – ತುಂಡರಿಸುವುದು; ನಾಶಮಾಡುವುದು
- ಉಚ್ಛೇದ್ಯಶತ್ರು – ನಾಶಮಾಡಬಹುದಾದ ಶತ್ರು
- ಉಚ್ಛ್ರಿತ – ಮೇಲೆತ್ತಿದ
- ಉಚ್ಛ್ವಾಸ – ಉಸಿರನ್ನು ಹೊರಕ್ಕೆ ಬಿಡು; ಮರಣ; (ಜೈನ) ಕಾಳವನ್ನು ಅಳೆಯುವ ಒಂದು ಪ್ರಮಾಣಉಜ್ಜನ – ತ್ಯಾಗ; ರಾಹಿತ್ಯ
- ಉಜ್ಜವಣೆ – (ಉದ್ಯಾಪನಾ) ವ್ರತಸಮಾಪ್ತಿ; ನೆರವೇರುವಿಕೆ
- ಉಜ್ಜವಣೆವಡೆ – ಮುಗಿಸು, ಪೂರ್ಣಗೊಳಿಸು
- ಉಜ್ಜಳ – (ಉಜ್ಜ್ವಲ) ಪ್ರಕಾಶಿಸುವ
- ಉಜ್ಜಳಿಕೆ – ಪ್ರಕಾಶ
- ಉಜ್ಜಳಿಸು – ಪ್ರಕಾಶಿಸು
- ಉಜ್ಜುಗ – (ಉದ್ಯೋಗ) ಪ್ರಯತ್ನ; ಉದ್ದೇಶ
- ಉಜ್ಜುಗಂಗೆಯ್ – ಪ್ರಯತ್ನಿಸು; ಆಲೋಚನೆಗೈ
- ಉಜ್ಜುಗಂದಳೆ – ಪ್ರಯತ್ನಿಸು
- ಉಜ್ಜುಗಿಸು – ಪ್ರಯತ್ನಸು
- ಉಜ್ಜ್ವಲ(ಳ) – ಹೊಳೆಯುವ; ಉರಿಯುವ; ತೇಜಸ್ಸು
- ಉಜ್ಜ್ವಲಿ(ಳಿ)ಸು – ಹೊಳೆ; ಪ್ರಕಾಶಿಸು
- ಉಜ್ಜ್ವಳಂಮಾಡು – ಪ್ರಕಾಶಿಸುವಂತೆ ಮಾಡು
- ಉಜ್ಜ್ವಳಕೇಶ – ಕಾಂತಿಯುಕ್ತವಾದ ಕೂದಲುಳ್ಳವನು
- ಉಜ್ಜ್ವಳೀಕೃತ – ಪ್ರಕಾಶಗೊಳಿಸಲಾದ
- ಉಜ್ಝಿತಲಕ್ಷ್ಮ – ದೋಷರಹಿತವಾದ
- ಉಜ್ವಳಾಂಗಿ – ಕಾಂತಿಯುಕ್ತವಾದ ಶರೀರವುಳ್ಳವಳು
- ಉಜ್ವಳಿಕೆ – ಕಾಂತಿ
- ಉಟಜ – ಪರ್ಣಶಾಲೆ
- ಉಟಜಾಂಗಣ – ಪರ್ಣಕುಟಿ(ಮನೆ)ಯ ಮುಂದಿನ ಅಂಗಳ
- ಉಡ(ಮೊಗ) – ಬಾಗೆಹೂ(ವಿನಂತಹ) ಮುಖ
- ಉಡಲಿಕ್ಕು – ಉಡುಗೊರೆಯನ್ನು ಕೊಡು
- ಉಡಿ – ಒಡೆದುಹೋಗು; ತುಂಡುಮಾಡು; ವಾಸಿಮಾಡು; ಚಿಗುರಿಡು; ಚೂರು; ಸೊಂಟ; ಮಡಿಲು; ಸೋಗಿಲು
- ಉಡಿಯಿಸು – ಹುಣ್ಣಿಗೆ ಮದ್ದುಮಾಡು
- ಉಡಿಸು – ಉಟ್ಟುಕೊಳ್ಳುವಂತೆ ಮಾಡು
- ಉಡು – ಧರಿಸು; ಹಲ್ಲಿ ಜಾತಿಯ ಒಂದು ಪ್ರಾಣಿ; ಶಿರೀಷಪುಷ್ಪ; ನಕ್ಷತ್ರ
- ಉಡುಕ – ಕುಂದುವಿಕೆ; ನಡುಕ
- ಉಡುಗಿಸು – ತಗ್ಗಿಸು; ಅಡಗಿಸು
- ಉಡುಕು – ಕಚ್ಚು
- ಉಡುಗು – ಸಂಕುಚಿತಗೊಳ್ಳು; ಒಳಸೇರು; ನಿಂತುಹೋಗು; ಹಿಂತೆಗೆದುಕೊ; ಕುಗ್ಗಿಸು; ಗುಡಿಸು; ಗುಡಿಸುವಿಕೆ
- ಉಡುಗೆ – ಹಾಕಿಕೊಳ್ಳುವ ಬಟ್ಟೆ
- ಉಡುಗೊ¾õÉ – ಕಾಣಿಕೆ
- ಉಡುತತಿ – ನಕ್ಷತ್ರಗಳ ಸಮೂಹ
- ಉಡುಪ – ಚಂದ್ರ; ಅಂಗಹೀನ
- ಉಡುಪಥ – ನಕ್ಷತ್ರಮಾರ್ಗ
- ಉಡು(ಡ)ಮೊಗ – ಶಿರೀಷದ ಹೂವಿನಂತೆ ಕೋಮಲಮುಖವುಳ್ಳವನು
- ಉಡುರಾಜಾನನೆ – ಚಂದ್ರಮುಖಿ
- ಉಡೆ – ಸೊಂಟ; ಉಡುವ ಬಟ್ಟೆ
- ಉಡೆ(ಡಿ)ಗಂಟೆ – ಮಕ್ಕಳಿಗೆ ಸೊಂಟಕ್ಕೆ ಕಟ್ಟುವ
- ಗಂಟೆಯಾಕಾರದ ಆಭರಣ
- ಉಡೆದೊವಲ್ – ಉಟ್ಟಿರುವ ಧರ್ಮ
- ಉಡೆ(ಡಿ)ನೂಲ್ – ಉಡಿದಾರ
- ಉಡೆವಣಿ – ಗೆಜ್ಜೆಯುಳ್ಳ ಉಡಿದಾರ
- ಉಣ್ – ತಿನ್ನು; ಕುಡಿ; ಅನುಭವಿಸು
- ಉಣಿಸು – ಊಟಮಾಡಿಸು; ಊಟ
- ಉಣ್ಣದರ ಬೀಯ – ದೇವತೆಗಳ ಆಹಾರ, ಅಮೃತ
- ಉಣ್ಣವಳಿ – ದೋಷವಿಲ್ಲದ್ದು; ಹಿರಿದು
- ಉಣ್ಮಿಪೊಣ್ಮು – ಚಿಮ್ಮಿ ಸೂಸು
- ಉಣ್ಮು – ಉಬ್ಬು; ಉಕ್ಕಿ ಬರು; ಹಿಗ್ಗು
- ಉಣ್ಮೆ – ಇರುವಿಕೆ
- ಉತ್ಕ – ಕುತೂಹಲವುಳ್ಳ; ಮದಿಸಿದ; ಮೈಮರೆತ
- ಉತ್ಕಂಠ – ಕೊರಳು ಮೇಲೆತ್ತಿದ; ಎತ್ತರವಾದ ಧ್ವನಿ; ತೀವ್ರ ಬಯಕೆಯಿರುವ
- ಉತ್ಕಂಠರೆ – ಕತ್ತೆತ್ತುವುದು; ಗಟ್ಟಿಯಗು ಕೂಗು; ತವಕ
- ಉತ್ಕಂಠಿತ – ತವಕದಿಂದ ಕೂಡಿದ
- ಉತ್ಕಂಠೆ – ತವಕವುಳ್ಳವಳು; ಉತ್ಸುಕಳಾದವಳು
- ಉತ್ಕಂಪ – ನಡುಕ
- ಉತ್ಕಂಪಿತ – ನಡುಗುವ
- ಉತ್ಕಚ – ಮೇಲಕ್ಕೆದ್ದ ಕೂದಲು
- ಉತ್ಕಟ – ಪ್ರಬ¯ವಾದ; ಆಧಿಕ್ಯ; ಉಗ್ರತೆ
- ಉತ್ಕಟತೆ – ಆಧಿಕ್ಯ; ಹೆಚ್ಚಳ
- ಉತ್ಕಟತ್ವ – ಅತಿಪ್ರಯಾಸ
- ಉತ್ಕಟವೃತ್ತಿ – ತೀವ್ರತೆ ಹೊಂದಿರುವ ಸ್ಥಿತಿ
- ಉತ್ಕಟಿಸು – ತೀವ್ರತೆಯನ್ನು ಹೊಂದು
- ಉತ್ಕರ – ಸಮೂಹ, ಗುಂಪು; ಸೀಳುವುದು
- ಉತ್ಕರಣ – ಕೆತ್ತನೆ ಕೆಲಸ
- ಉತ್ಕರ್ಣ – ಮೇಲಕ್ಕೆದ್ದಿರುವ ಕಿವಿ
- ಉತ್ಕರ್ಷ(ಣ) – ಉತ್ಸಾಹ; ಹೆಚ್ಚಳ; ಏಳಿಗೆ
- ಉತ್ಕರ್ಷತೆ – ಏಳಿಗೆ; ಉತ್ಸಾಹ
- ಉತ್ಕಲಿ(ಳಿ)ಕೆ – ಉತ್ಕಟ ಬಯಕೆ; ಕುತೂಹಲ; ವಿರಹಕಾತರ; ಅಲ್ಲೋಲಕಲ್ಲೋಲ
- ಉತ್ಕಲ್ಲೋಲ(ಳ) – ಮೇಲೆದ್ದ ಅಲೆ
- ಉತ್ಕಳಿಕಾವಿಲಾಸ – ಮೊಗ್ಗುಗಳ ವೈಭವ
- ಉತ್ಕೀರ್ಣ – ರಾಶಿಮಾಡಿದ; ಚೆದುರಿದ; ಕೆತ್ತಲ್ಪಟ್ಟ
- ಉತ್ಕೂಟ – ಎತ್ತರವಾದ ಶಿಖರ
- ಉತ್ಕೆ – ಉತ್ಕಂಠತೆ; ವಿರಹಕಾತರೆ
- ಉತ್ಕೇತು – ಮೇಲೆತ್ತಿದ (ಹಾರಾಡುವ) ಬಾವುಟ
- ಉತ್ಕ್ರಾಂತಿ – ಹೊರಟುಹೋಗುವಿಕೆ
- ಉತ್ಖಾತ – ಅಗೆದ; ಹೊರಕ್ಕೆಳೆದ
- ಉತ್ತ – ಮಧ್ಯದ ಪ್ರದೇಶ
- ಉತ್ತಂಛಿತ – ಮೇಲೆತ್ತಿ ಹಿಡಿದ
- ಉತ್ತಂಸ – ತಲೆಯ ಒಡವೆ; ಶಿರೋಭೂಷಣ
- ಉತ್ತಂಸಕ – ಶ್ರೇಷ್ಠನಾದವನು
- ಉತ್ತಂಸಿತ – ಶೋಭಿಸುವ
- ಉತ್ತಪ್ತ – ಚೆನ್ನಾಗಿ ಕಾದ
- ಉತ್ತಮತಪ – ಶ್ರೇಷ್ಠವಾದ ತಪಸ್ಸು
- ಉತ್ತಮಪಾತ್ರ – ದಾನಕ್ಕೆ ಯೋಗ್ಯ ವ್ಯಕ್ತಿ
- ಉತ್ತಮಭಗಣ – ಶುಭನಕ್ಷತ್ರಗಳ ಸಮೂಹ
- ಉತ್ತಮಾಂಗ – ತಲೆ; ಶ್ರೇಷ್ಠವಾದ ಅವಯವ
- ಉತ್ತಮಿಕೆ – ಮೇಲ್ಮೆ
- ಉತ್ತರ – ಮೇಲಿನ; ಅಭಿವೃದ್ಧಿ; ಮರು ನುಡಿ; ಮೇಲ್ತರಗತಿಯ; ಎಡ ಭಾಗ
- ಉತ್ತರಕಾಲ – ಆನಂತರ ಉತ್ತರಕುರು -ಕುರುದೇಶದ ಉತ್ತರಭಾಗಉತ್ತರಕ್ರಿಯೆ – ಅಪರಕರ್ಮ; ಮುಂದಿನ ಕೆಲಸ; (ಜೈನ) ಗರ್ಭಿಣಿಗೆ ಏಳನೆಯ ತಿಂಗಳಲ್ಲಿ ಮಾಡುವ ಮಂಗಳಕಾರ್ಯ
- ಉತ್ತರಕ್ಷಣ – ಮುಂದಿನ ಗಳಿಗೆ, ಕ್ಷಣ
- ಉತ್ತರಣ – ದಾಟುವುದು
- ಉತ್ತರತಪ – (ಜೈನ) ಹನ್ನೆರಡು ವಿಧವಾದ ತಪ್ಸುಗಳಲ್ಲಿ ಒಂದು
- ಉತ್ತರಮಾಗು – (ಉತ್ತರಂ+ಆಗು) ಅತಿಶಯವಾಗು
- ಉತ್ತರಶ್ರೇಣಿ – ಉತ್ತರಭಾಗದ ಪಂಕ್ತಿ
- ಉತ್ತರಸಾಧಕ – ಮುಂದಿನ ಕೆಲಸವನ್ನು ಸಾಧಿಸುವವನು; ಸಹಾಯಕ
- ಉತ್ತರಳ – ಹೆಚ್ಚು ಚಂಚಲವಾದ; ತುಂಬ ಹೊಳೆಯುವ
- ಉತ್ತರಾಪಥ – ವಿಂಧ್ಯಪರ್ವತದಿಂದ ಉತ್ತರಕ್ಕಿರುವ ದೇಶ; ಉತ್ತರಮಾರ್ಗ
- ಉತ್ತರಾಭಿಮುಖ – ಉತ್ತರಕ್ಕೆ ಮುಖಮಾಡಿಕೊಂಡಿರುವ
- ಉತ್ತರಾಯಣ – ಸೂರ್ಯ ಉತ್ತರದ ಕಡೆಗೆ ಓಲಿ ಸಾಗುವ ಕಾಲ
- ಉತ್ತರಾರ್ಧ – ಕೊನೆಯ ಅರ್ಧ; (ಜೈನ) ಒಂದು ಪರ್ವತದ ಹೆಸರು
- ಉತ್ತರಾಶಾಧಿಪತಿ – ಉತ್ತರ ದಿಕ್ಕಿನ ಒಡೆಯ, ಕುಬೇರ
- ಉತ್ತರಿಗೆ – ಉತ್ತರೀಯ
- ಉತ್ತರಿಗೆಜನ್ನಿವರ – ಉತ್ತರೀಯವಾಗಿ ದರಿಸಿದ ಜನಿವಾರ
- ಉತ್ತರಿಸು – ದಾಟು; ಅತಿಕ್ರಮಿಸು; ನೆರವೇರು; (ಸವಾರ) ಕೆಳಗಿಳಿ
- ಉತ್ತರೀಯ – ಉತ್ತರಿಗೆ, ಹೊದೆದುಕೊಳ್ಳುವ ಬಟ್ಟೆ
- ಉತ್ತರೀಯಾಂಶುಕ – ಉತ್ತರೀಯದ ಬಟ್ಟೆ
- ಉತ್ತರೋತ್ತರ – ಹೆಚ್ಚು ಹೆಚ್ಚು ಅಭಿವೃದ್ಧಿ; ಮುಂದಿನದು; ಉತ್ತರಕ್ಕೆ ಉತ್ತರವಾದದ್ದು
- ಉತ್ತರ್ಯದುಕೂಲ – ಹೊಳೆಯುವ ಬಟ್ಟೆ
- ಉತ್ತಲ್ – ನಡುವೆ, ಎಡಬಿಡಂಗಿ
- ಉತ್ತವಳ – ಕಾತರತೆ
- ಉತ್ತವಳತನ – ಕಾತರತೆ
- ಉತ್ತವಳಿಕೆ – ಉತ್ತವಳತನ
- ಉತ್ತವಳಿಸು – ಕಾತರಿಸು
- ಉತ್ತಳಿಸು – ಚೆಲ್ಲು; ಎರಚು
- ಉತ್ತಾನ – ಮೇಲಕ್ಕೆದ್ದ; ವಿಸ್ತಾರವಾದ
- ಉತ್ತಾನಕ – ಮಲ್ಲಯುದ್ಧದ ಒಂದು ವರಸೆ
- ಉತ್ತಾನಗಾನ – ಉಚ್ಚಕಂಠದ ಹಾಡುಗಾರಿಕೆ
- ಉತ್ತಾನಶಯನ – ಅಂಗತ್ತಲಾಗಿ ಮಲಗುವುದು
- ಉತ್ತಾನಿತ – ಮೇಲಕ್ಕೆದ್ದ
- ಉತ್ತಾಯಕ – ಪ್ರತಾಪವನ್ನು ಮೆರೆದವನು; ಪ್ರತಿಭಟಿಸುವವನು
- ಉತ್ತಾರ – ಉಚ್ಚಸ್ವರ
- ಉತ್ತಾರಣ – ದಾಟಿಸುವ; ಪಾರುಮಾಡುವ; ದಾಟುವುದು
- ಉತ್ತಾರರಾಗ – ಉಚ್ಚ ಸ್ವರಸಮ್ಮೇಳನದ ರಾಗ
- ಉತ್ತಾರಿತ – ದಾಟಿದ
- ಉತ್ತುಂಗ – ಎತ್ತರವಾದ; ಉನ್ನತವಾದ; ಶ್ರೇಷ್ಠವಾದ
- ಉತ್ತುಂಗಕುಚೆ – ಉಬ್ಬಿದ ಮೊಲೆಗಳನ್ನುಳ್ಳವಳು
- ಉತ್ತುಂಗಚೂಡ – ಎತ್ತರವಾದ ಶೀಖರವಿರುವುದು
- ಉತ್ತುಂಗಭಂಗ – ದೊಡ್ಡ ಅಲೆ
- ಉತ್ತುಂಗಭುಜ – ಎತ್ತರವಾದ ಭುಜಗಳುಳ್ಳವನು
- ಉತ್ತೋಯ – ಚಿಮ್ಮುವ ನೀರು
- ಉತ್ತೋರಣ – ಉನ್ನತವಾದ ತೋರಣ
- ಉತ್ಥ – ಮೇಲಕ್ಕೆದ್ದ
- ಉತ್ಥಾಪಿತ – ಮೇಲಕ್ಕೆತ್ತಿ ನಿಲ್ಲಿಸಿದ
- ಉತ್ಥಿತ – ಮೇಲಕ್ಕೆದ್ದ; ಉಂಟಾದ
- ಉತ್ಪತನ – ಜಯ
- ಉತ್ಪತಾಕ – ಮೇಲೇರಿಸಿದ ಬಾವುಟ
- ಉತ್ಪತ್ತಿಸ್ಥಾನ – ಹುಟ್ಟಿನ ಸ್ಥಳ
- ಉತ್ಪಥ – ತಪ್ಪು ದಾರಿ; ಆಕಾಶ ಮಾರ್ಗ
- ಉತ್ಪನ್ನ – ಹುಟ್ಟಿದ
- ಉತ್ಪನ್ನಮತಿ – ಬುದ್ಧಿವಂತ
- ಉತ್ಪಲ(ಳ) – ನೈದಿಲೆ
- ಉತ್ಪಲಿನಿ – ಉತ್ಪಗಳಿಂದ ಕೂಡಿದುದು, ಕೊಳ
- ಉತ್ಪಾಟನ – ಕೀಳುವುದು
- ಉತ್ಪಾಟಿತ – ಕಿತ್ತುಹಾಕಿದ
- ಉತ್ಪಾಟಿನಿ – ಒಂದು ವಿದ್ಯೆ
- ಉತ್ಪಾತ – ಮೇಲೆ ಹಾರುವುದು; ದುರಂತಕಾರಕ ಪ್ರಾಕೃತಿಕ ಘಟನೆ; ಅಪಶಕುನ; ವೈಹಾಯಸ, ಭೌಮ, ದಿಗ್ಭವ, ಸೈನ್ಯಜ, ಗೃಹೋದ್ಧೂತ ಎಂದು ಐದು ಬಗೆ
- ಉತ್ಪಾತಕೇತು – ಕೇಡನ್ನು ಸೂಚಿಸುವ ಗ್ರಹ; ಧೂಮಕೇತು
- ಉತ್ಪಾತಮರುತ್ – ಪ್ರಳಯಮಾರುತ
- ಉತ್ಪಾದ – ಉತ್ಪತ್ತಿ
- ಉತ್ಪಾದಯತಿ – ಹುಟ್ಟಿಸುತ್ತದೆ
- ಉತ್ಪಾದಿಸು – ಉಂಟುಮಾಡು
- ಉತ್ಪುಂಜ್ಯಮಾನ – ಒಟ್ಟಿಗೇ ಏಳುತ್ತಿರುವ
- ಉತ್ಪ್ರಭ – ಹೆಚ್ಚು ಕಾಂತಿಯುಳ್ಳ
- ಉತ್ಪ್ರಸವ – ಮೇಲಕ್ಕೆ ಚಿಮ್ಮಿದ
- ಉತ್ಪ್ರೇಂಕಿತ – ಮೇಲೆ ತೇಲಾಡುವ
- ಉತ್ಪ್ರೇಕ್ಷಿಸು – ಗಮನ ಕೊಟ್ಟು ಪರಿಶೀಲಿಸು
- ಉತ್ಪ್ಲುತ – ಜೋರಾಗಿ ಹಾರುವಿಕೆ
- ಉತ್ಫಣಿತ – ಮೇಲೆತ್ತಿದ ಹೆಡೆಯುಲ್ಲ
- ಉತ್ಫುಲ್ಲ – ಚೆನ್ನಾಗಿ ಅರಳಿದ
- ಉತ್ಸ – ನೀರಿನ ಬುಗ್ಗೆ
- ಉತ್ಸಂಗ – ಸೇರುವುದು; ಸಮಾಗಮ; ತೊಡೆ;
- ಮಗ್ಗುಲು; ನಡು
- ಉತ್ಸಂಗಸ್ಥೆ – ತೊಡೆಯಮೇಲೆ ಕುಳಿತವಳು
- ಉತ್ಸಂಚಂ – ಗಟ್ಟಿಯಾಗಿ
- ಉತ್ಸನ್ನಶರೀರೆ – ನಷ್ಟಗೊಂಡ ದೇಹದವಳು
- ಉತ್ಸರ್ಗ – ವಿಸರ್ಜನೆ
- ಉತ್ಸರ್ಜನಂಗೆಯ್ – ವಿಸರ್ಜನೆಮಾಡು
- ಉತ್ಸರ್ಜಿಸು – ಉತ್ಸರ್ಜನಂಗೆಯ್
- ಉತ್ಸರ್ಪಣ – ಮೇಲೇರುವಿಕೆ; ಹತ್ತಿರ ಬರುವುದು; ನಿಟ್ಟುಸಿರು ಬಿಡುವುದು; (ಜೈನ)
- ಉತ್ಸರ್ಪಿಣಿ – (ಜೈನ) ಮನುಷ್ಯರ ಭೋಗ ಆಯುಸ್ಸು ಮುಂತಾದವು ಹೆಚ್ಚುವ ಕಾಲ
- ಉತ್ಸವಕರ – ಉತ್ಸವ ಉಂಟುಮಾಡುವ
- ಉತ್ಸವಾನಕ – ಸಂತೋಷಸೂಚಕ ವಾದ್ಯಗಳಿಂದ ಕೂಡಿದ
- ಉತ್ಸಾಯಕ – ಬಾಣಗಳ್ನು ಸಜ್ಜುಮಾಡಿಕೊಂಡಿರುವವನು
- ಉತ್ಸಾರಿತ – ತ್ಯಜಿಸಿದ; ದೂರೀಕರಿಸಿದ
- ಉತ್ಸಾಹ – ಹುರುಪು; ಪರಾಕ್ರಮ; ರಾಜರ ಮೂರು ಶಕ್ತಿಗಳಾದ ಮಂತ್ರ, ಪ್ರಭು, ಉತ್ಸಾಹಗಳಲ್ಲಿ ಒಂದು
- ಉತ್ಸಾಹಂಗುಂದು – ಉತ್ಸಾಹಗೆಡು
- ಉತ್ಸಾಹಸದ್ಮ – ಉತ್ಸಾಹದ ಮನೆ
- ಉತ್ಸಾಹಿಸು – ಹುರಿದುಂಬಿಸು; ಹುರಿದುಂಬು
- ಉತ್ಸಿಕ್ತ – ನೆನೆದ, ತೊಯ್ದ
- ಉತ್ಸುಕ – ಕುತೂಹಲಗೊಂಡ
- ಉತ್ಸುಕಚಿತ್ತ – ಕುತೂಹಲಗೊಂಡ ಮನಸ್ಸಿನವನು
- ಉತ್ಸುಕತೆ – ಔತ್ಸುಕ್ಯ; ಕುತೂಹಲ; ಬಯಕೆ
- ಉತ್ಸುಕತ್ವ – ಉತ್ಸುಕತೆ
- ಉತ್ಸೇಕ – ಅಭಿಮಾನ; ದರ್ಪ
- ಉತ್ಸೇಧ – ಎತ್ತರ; ಉದ್ದ; ಔನ್ನತ್ಯ
- ಉದ – ನೀರು
- ಉದಂಚ – ನೇರವಾಗಿ ಗುರಿ ತಲುಪುವ; ಗದಾಯುದ್ಧದ ಒಂದು ವರಸೆ
- ಉದಂತೋಚ್ಚರಣ – ಎತ್ತಿ ಕಟ್ಟಿರುವ ತೋರಣ
- ಉದಂಚಿತ – ಮೇಲೆಕ್ಕೆತ್ತಿರುವ; ಹೊಮ್ಮುವ; ಒಡಗೂಡಿದ; ಹೆಚ್ಚಾದ
- ಉದಂಚಿತತರ್ಜನಿ – ಮೇಲೆತ್ತಿದ ತೋರುಬೆರಳು
- ಉದಂಚಿತಭ್ರುಕುಟಿ – ಮೇಲೆತ್ತಿದ ಹುಬ್ಬುಗಂಟಿನವನು
- ಉದಂತ – ಸುದ್ದಿ
- ಉದಂಶು – ಮೇಲೆದ್ದ ಕಿರಣ
- ಉದಕ – ನೀರು
- ಉದಕಮಂತ್ರ – ಜಲಸ್ತಂಭನ ವಿದ್ಯೆ
- ಉದಕವಾಸಿ – ನೀರಿನಲ್ಲಿ ವಾಸಮಾಡುವುದು, ಜಲಚರ
- ಉದಕಸ್ತಂಭಿನಿ – ಜಲಸ್ತಂಭನ
- ಉದಗ್ರ – ಎತ್ತರ; ಶ್ರೇಷ್ಠ
- ಉದಗ್ರತೇಜ – ಅಧಿಕ ಕಾಂತಿ, ಅಧಿಕ ತಾಪ
- ಉದಗ್ರಪೀಡೆ – ಅಧಿಕವಾದ ಹಿಂಸೆ
- ಉದಗ್ರಮೂರ್ತಿ – ಎತ್ತರವಾಗಿರುವವನು
- ಉದಗ್ರಾವನಿಪ – ಶ್ರೇಷ್ಠನಾದ ರಾಜ
- ಉದಙ್ಮುಖ – ಉತ್ತರಕ್ಕೆ ಅಭಿಮುಖವಾಗಿರುವ
- ಉದ(ನಿ)ಧಿ – ಸಮುದ್ರ
- ಉದಧಿಪ – ಸಮುದ್ರರಾಜ
- ಉದಧಿವೇಲೆ – ಸಮುದ್ರದ ಅಲೆ
- ಉದನ್ವದಂತಸ್ಥ – ಸಮುದ್ರದೊಳಗಿರುವ
- ಉದನ್ವದ್ವೀಚಿ – ಸಮುದ್ರದ ಅಲೆ
- ಉದಬಿಂದು – ನೀರ ಹನಿ
- ಉದಯ – ಹುಟ್ಟು; ಅಭಿವೃದ್ಧಿ
- ಉದಯಂಗೆಯ್ – ಹುಟ್ಟು; ಮೂಡು
- ಉದಯಗಿರಿ – ಸೂರ್ಯ ಹುಟ್ಟುವ ಮೂಡಣ ಬೆಟ್ಟ
- ಉದಯಸ್ಥ – ಮೂಡುತ್ತಿರುವ; ಹುಟ್ಟುತ್ತಿರುವ
- ಉದಯಾಚಲ – ಉದಯಗಿರಿ
- ಉದಯಾದಿತ್ಯ – ಹುಟ್ಟುತ್ತಿರುವ ಸೂರ್ಯ
- ಉದಯಾದ್ರಿ – ಉದಯಗಿರಿ
- ಉದಯಾರೂಢ – ಏಳಿಗೆ ಹೊಂದುತ್ತಿರುವವನು
- ಉದಯಿಸು – ಹುಟ್ಟು; ಮೂಡು
- ಉದರ – ಹೊಟ್ಟೆ
- ಉದರಬಂಧ – ನಡುಪಟ್ಟಿ; ಡಾಬು
- ಉದರ್ಕೆ – ಮುಂದಾಗುವ ಫಲ
- ಉದವಾಸ – ನೀರಲ್ಲಿ ವಾಸಿಸುವುದು, ಜಲಚರ
- ಉದವಾಸವ್ರತ – ನೀರಲ್ಲಿ ವಾಸಿಸುವ ವ್ರತ
- ಉದಶ್ರು – ಉಕ್ಕಿಬರುವ ಕಣ್ಣೀರು
- ಉದಸ್ತ – ಮೆಲೆ ಹರಡಿದ
- ಉದಾತ್ತ – ಶ್ರೇಷ್ಠವಾದ; ಉದಾರತೆ
- ಉದಾತ್ತಮತಿ – ಶ್ರೇಷ್ಠ ಜ್ಞಾನಿ
- ಉದಾತ್ತವಿಷ್ಟರ – ಉನ್ನತ ಪೀಠ
- ಉದಾತ್ತವೃತ್ತ – ಉದಾತ್ತ ನಡತೆಯವನು
- ಉದಾತ್ತವೃತ್ತಿ – ಉತ್ತಮ ವ್ಯವಹಾರ
- ಉದಾತ್ತಸತ್ವ – ಉದಾತ್ತ ಸತ್ವವುಳ್ಳವನು
- ಉದಾರ – ಕೊಡುಗೈ ಸ್ವಭಾವದ
- ಉದಾರಚರಿತ – ಉದಾತ್ತವೃತ್ತ
- ಉದಾರತೆ – ಔದಾರ್ಯ
- ಉದಾರತೇಜ – ಅತಿಶಯ ತೇಜಸ್ಸುಳ್ಳವನು
- ಉದಾರಮತಿ – ವಿಶಾಲ ಮನೋಭಾವದವನು
- ಉದಾಸೀನಮಾನಸ – ಅನಾಸಕ್ತಿಯವನು
- ಉದಾಹರಣ – ಹೇಳಿಕೆ; ದೃಷ್ಟಾಂತ; ಆದರ್ಶ
- ಉದಿತ – ಹುಟ್ಟಿದ; ಉಂಟಾದ
- ಉದಿತಕೀರ್ತಿ – ಕೀರ್ತಿವಂತ
- ಉದಿತಸ್ಮೇರ – ಮುಗುಳುನಗೆಯಿಂದ ಕೂಡಿದವನು
- ಉದಿತೋದಿತ – ನಿರಂತರ ಏಳಿಗೆಯುಳ್ಳವನು
- ಉದಿ(ದು)ರ್ – ಮೇಲಿನಿಂದ ಬೀಳು
- ಉದಿರ್ಚು(ರ್ಪು) – ಉದುರಿಸು
- ಉದೀಚಿ – ಉತ್ತರ ದಿಕ್ಕು
- ಉದೀಚೀಭವ – ಉತ್ತರದಲ್ಲಿ ಹುಟ್ಟಿದ
- ಉದೀಚ್ಯ – ಉತ್ತರದಿಕ್ಕಿನ; ಔತ್ತರೇಯ
- ಉದೀರಿತ – ನುಡಿದ
- ಉದೀರ್ಣ – ದೊಡ್ಡದಾದ; ಹಿರಿಯ
- ಉದೀರ್ಣತೆ – ಅತಿಶಯ; ಏಳಿಗೆ
- ಉದುಂಬರ – ಅತ್ತಿ ಹಣ್ಣು
- ಉದುಂಬರಕುಷ್ಠ – ಅತ್ತಿ ಹಣ್ಣಿನಂತೆ ಒಳಗೆ ಹುಳು ಬೀಳುವ ಕುಷ್ಠರೋಗ
- ಉದ್ಗಂಧ – ಒಳ್ಳೆಯ ಪರಿಮಳವುಳ್ಳ
- ಉದ್ಗಂಧಿ – ಉದ್ಗಂಧವನ್ನು ಹೊಂದಿದ
- ಉದ್ಗತ – ಮೇಲಕ್ಕೆ ಬಂದ; ಸಂಭವಿಸಿದ
- ಉದ್ಗತೋಷ್ಮ – ಹೊಮ್ಮಿದ ಉಮ್ಮಳ
- ಉದ್ಗಮ – ಮೇಲೇರುವುದು; ಹುಟ್ಟಿಬರುವುದು; ಹೊಮ್ಮುವುದು; ಹೂವು
- ಉದ್ಗಮಚಾಪ – ಹೂಬಾಣ, ಮನ್ಮಥ
- ಉದ್ಗಮಬಾಣ – ಉದ್ಗಮಚಾಪ
- ಉದ್ಗಮಮಂಜರಿ – ಹೂಗೊಂಚಲು
- ಉದ್ಗಮಾಸ್ತ್ರ – ಹೂಬಾಣ
- ಉದ್ಗಮೇಷು – ಹೂಬಾಣ
- ಉದ್ಗಾತೃ – ಯಜ್ಞಯಾಗಗಳಲ್ಲಿ ಸಾಮವೇದ ಖೇಳುವ ಋತ್ವಿಕ್ಕು
- ಉದ್ಗಾಯನ – ಉತ್ತಮ ಗಾಯನ
- ಉದ್ಗಾರಿ – ಹೊರಸೂಸುವ
- ಉದ್ಗಾರಿಸು – ವಾಂತಿಮಾಡಿಕೊ
- ಉದ್ಗ್ರೀವ – ಕೊರಳೆತ್ತಿದವನು
- ಉದ್ಘ – ಪ್ರಶಸ್ತವಾದ; ಸುಖ; ಬಲ
- ಉದ್ಘಕೃತಿ – ಶ್ರೇಷ್ಠ ಕೃತಿ, ಶ್ರೇಷ್ಠ ಗ್ರಂಥ
- ಉದ್ಘಚಾರಿ – ಶ್ರೇಷ್ಠ ನಡತೆಯವನು
- ಉದ್ಘಟ್ಟ(ನ) – ಬಲವಾದ ಹೊಡೆತ; ಸದೆಬಡಿಯುವಿಕೆ
- ಉದ್ಘಾಚಾರ – ಶ್ರೇಷ್ಠ ಆಚಾರ
- ಉದ್ಘಾಟನ – ತೆರೆಯುವಿಕೆ; ಮೇಲೆತ್ತುವುದು
- ಉದ್ಘಾಟಿಸು – ಆರಂಭಮಾಡು; ಆಕ್ಷೇಪಿಸು
- ಉದ್ಘಾತ – ಬಲವಾದ ಹೊಡೆತ
- ಉದ್ಘಾಸಿ – (ಉದ್ಘ+ಅಸಿ) ಶ್ರೇಷ್ಠವಾದ ಕತ್ತಿ
- ಉದ್ಘುಷ್ಟಿ – ಉದ್ಘೋಷ, ಘೋಷಣೆ
- ಉದ್ಘೂಣ – ನಡುಕ
- ಉದ್ದಂ – ಯದ್ದವಾಗಿ
- ಉದ್ದಂಡ – ಮೇಲೆತ್ತಿದ ಕೋಲನ್ನು ಪಡೆದ; ನೀಳವಾದ; ಪ್ರಬಲವಾದ
- ಉದ್ದಂಡತೆ – ದರ್ಪ; ಪ್ರತಿಷ್ಠೆ
- ಉದ್ದಂತ – ಉಬ್ಬು ಹಲ್ಲಿನವನು
- ಉದ್ದಂನುಡಿ – ಹೆಚ್ಚು ಮಾತಾಡು
- ಉದ್ದಂನೆಗೆ – ಎತ್ತರಕ್ಕೆ ನೆಗೆ
- ಉದ್ದಂಬರ್ – ಸಾಲಾಗಿ ಬಾ
- ಉದ್ದಬಿದ್ದ – ನೀರಿನಿಂದ ತುಂಬು
- ಉದ್ದಮುರಿ – ಹೆಚ್ಚು ಉರಿ; ಸಿಟ್ಟಾಗು
- ಉದ್ದಮುರಿಸು – ಹೆಚ್ಚು ಉರಿಸು
- ಉದ್ದವಣ – ಜೋರಾಗಿ ಕೂಗು; ಘೋಷಣೆ; ಒಂದು ವಾದ್ಯ
- ಉದ್ದವರಿ – ಉದ್ದವಾಗಿ ಹರಿ; ನೀಳವಾಗು
- ಉದ್ದಳನ – ಸೀಳುವುದು
- ಉದ್ದಳಿತ – ಸೀಳಿದ
- ಉದ್ದಾನಿ – ಹಿರಿಮೆ; ವೈಭವ; ಅತಿಶಯ
- ಉದ್ದಾಮ – ಉತ್ತಮವಾದ; ಉನ್ನತವಾದ
- ಉದ್ದಾಮಧಾಮ – ಶ್ರೇಷ್ಠವಾದ ತೇಜಸ್ಸು(ಳ್ಳವನು)
- ಉದ್ದಿತ್ತು – ಉದ್ದವಾದ
- ಉದ್ದಿಷ್ಟವಿರತ – (ಜೈನ) ತನಗಾಗಿ ಮಾಡಿದ ಆಹಾರವನ್ನು ಉಣ್ಣದಿರುವವನು
- ಉದ್ದೀಪನ – ಉರಿಸುವ; ಉತ್ತೇಜನ
- ಉದ್ದೀಪಿತ – ಪ್ರಕಾಶಗೊಂಡ
- ಉದ್ದೆಸ – (ಉದ್ದೇಶ) ಗುರಿ; ಅಭಿಪ್ರಾಯ
- ಉದ್ದೇಶ – ಗುರಿ; ಅಭಿಪ್ರಾಯ; ಎತ್ತರವಾದ ಪ್ರದೇಶ
- ಉದ್ದೇಶಿಸು – ದೃಷ್ಟಿಯಲ್ಲಿಟ್ಟುಕೊ
- ಉದ್ದøಪ್ತ – ಗರ್ವದಿಂದ ಕೂಡಿದ
- ಉದ್ಗ್ರೀವ – ಎತ್ತಿದ ಕೊರಳು
- ಉದ್ಧತ – ಮೇಲೆತ್ತಿದ; ಹೊಡೆದ; ಸೊಕ್ಕಿದ; ಕೆರಳಿದ; ಒರಟ; ಶ್ರೇಷ್ಠ
- ಉದ್ಧತಂ – ವೈಭವದಿಂದ
- ಉದ್ಧತವೃತ್ತ – ಸೊಕ್ಕಿನ ನಡವಳಿಕೆಯುಳ್ಳವನು
- ಉದ್ಧತಾರಿ – ಸೊಕ್ಕಿದ ಶತ್ರು
- ಉದ್ಧತಿಕೆ(ಕ್ಕೆ) – ಅಹಂಕಾರ
- ಉದ್ಧರಣ – ಮೇಲಕ್ಕೆತ್ತುವಿಕೆ
- ಉದ್ಧರಿಸು – ಮೇಲಕ್ಕೆತ್ತು
- ಉದ್ಧುರ – ಸ್ವತಂತ್ರವಾದ; ಸಮರ್ಥವಾದ; ಹುರುಪಿನ; (ರಥದಿಂದ) ಕಳಚಿದ
- ಉದ್ಧೂತ – ಮೇಲಕ್ಕೆ ಎಸೆಯಲಾದ
- ಉದ್ಧೂತದೋಷ – ದೋಷಮುಕ್ತವಾದ
- ಉದ್ಧೂಪ – ಮೇಲಕ್ಕೆದ್ದ ಧೂಪ
- ಉದ್ಧೂಲ(ಳ)ನ – ಪುಡಿಗುಟ್ಟುವುದು; ಬಳಿಯುವುದು
- ಉದ್ಧೂಲಿ(ಳಿ)ಸು – ಲೇಪಿಸು
- ಉದ್ಬದ್ಧ – ಎತ್ತಿ ಕಟ್ಟಲ್ಪಟ್ಟ
- ಉದ್ಬದ್ಧಕುಕ್ಷಿ – ದೃಢವಾದ ಹೊಟ್ಟೆಯುಳ್ಳ
- ಉದ್ಬದ್ಧಜೂಟ – ಎತ್ತಿ ಕಟ್ಟಿದ ಜಡೆಯುಳ್ಳ
- ಉದ್ಬೋಧಕೋಶ – ಜ್ಞಾನಕೋಶ
- ಉದ್ಭಟಭಟ – ಉತ್ತಮವಾದ ಭಟ
- ಉದ್ಭಟವೃತ್ತ – ಉತ್ತಮ ನಡವಳಿಕೆಯುಳ್ಳ
- ಉದ್ಭವ – ಹುಟ್ಟುವುದು; ಉತ್ಪತ್ತಿ
- ಉದ್ಭವಿಸು – ಹುಟ್ಟು; ತಲೆದೋರು
- ಉದ್ಭಾವಕ – ಎಣಿಕೆಮಾಡುವ; ಭಾವಿಸುವ
- ಉದ್ಭಾವಿಸು – ಎಣಿಕೆಮಾಡು; ತೋರ್ಪಡಿಸು; ಹುಟ್ಟು; ಕಾಣಿಸಿಕೊ
- ಉದ್ಭಾಷಿಸು – ವರ್ಣನೆ ಮಾಡು; ಪ್ರಕಾಶಗೊಳಿಸು
- ಉದ್ಭಾಸಿ(ನಿ) – ಪ್ರಕಾಶಮಾನ(ಳಾದವಳು)
- ಉದ್ಭಾಸೆ – ಪ್ರಕಾಶಗೊಳಿಸುವವಳು
- ಉದ್ಭೇದ – ಹೊರಹೊಮ್ಮುವುದು; ಮೊಳೆಯುವುದು
- ಉದ್ಭ್ರಾಂತ – ಭ್ರಾಂತಿಗೊಂಡ; ಕಕ್ಕಾಬಿಕ್ಕಿಯಾದ
- ಉದ್ಭ್ರಾಮಿತ – ಗದೆಯಿಂದ ಹೊಡೆಯುವ ರೀತಿಗಳಲ್ಲಿ ಒಂದು
- ಉದ್ಯಚ್ಚಕ್ರ – ಶ್ರೇಷ್ಠ ಚಕ್ರ
- ಉದ್ಯಚ್ಚಕ್ರಿ – ಉದ್ಯಚ್ಚಕ್ರವನ್ನು ಹಿಡಿದವನು
- ಉದ್ಯತ್ – ಮೇಲಕ್ಕೆ ಚಾಚಿಕೊಂಡಿರುವ
- ಉದ್ಯತ – ಪ್ರಯತ್ನವುಳ್ಳ
- ಉದ್ಯಮ – ಪ್ರಯತ್ನ; ಮೇಲೆತ್ತುವಿಕೆ
- ಉದ್ಯಾನಪಾಲಕ – ಉದ್ಯಾನವನ್ನು ಕಾಯುವವನು
- ಉದ್ಯಾಪನ – ಪೂರ್ಣಗೊಳಿಸುವುದು; ವ್ರತವನ್ನು ಮುಗಿಸಲು ಮಾಡುವ ಕರ್ಮ
- ಉದ್ಯುಕ್ತ – ಪ್ರಯತ್ನಪಡುವವನು
- ಉದ್ಯೋಗ – ಪ್ರಯತ್ನಪಡುವುದು; ಕೆಲಸ
- ಉದ್ಯೋಗಂಗೆಯ್ – ಪ್ರಯತ್ನಪಡು
- ಉದ್ಯೋಗಾರಂಭ – ಕೆಲಸದ ಪ್ರಾರಂಭ
- ಉದ್ಯೋಗಿ – ಪ್ರಯತ್ನಶೀಲ
- ಉದ್ಯೋಗಿಸು – ಪ್ರಯತ್ನಿಸು
- ಉದ್ಯೋತ – ಹೊಳಪು; ಕಾಂತಿ
- ಉದ್ಯೋತಿಸು – ಬೆಳಗು; ಪ್ರಕಾಶಿಸು
- ಉದ್ರಿಕ್ತ – ಹೆಚ್ಚಿದ
- ಉದ್ರುತ – ಬಹಳ ದುಡುಕು ಸ್ವಭಾವದ
- ಉದ್ರೇಕ – ಭಾವಾವೇಶ
- ಉದ್ವಂಶ – ಎತ್ತರವಾದ ಬಿದಿರ ಮೆಳೆ; ಶ್ರೇಷ್ಠ ಕುಲ
- ಉದ್ವರ್ತ – ಅಂಗರಾಗ
- ಉದ್ವರ್ತನ – ಹೆಚ್ಚುವುದು; ನಿವಾರಿಸುವುದು; ಲೇಪಿಸುವುದು
- ಉದ್ವರ್ತನಂಗೆಯ್ – ಲೇಪನಮಾಡು
- ಉದ್ವರ್ತನವಿಧಿ – ಸುಗಂಧವನ್ನು ಲೇಪಿಸುವ ಕ್ರಿಯೆ
- ಉದ್ವರ್ತಿಸು – ಲೇಪಿಸು
- ಉದ್ವಹ – ಸುಖ; ಸಂತೋಷ; ಶ್ರೇಷ್ಠ, ಅಗ್ರಗಣ್ಯ
- ಉದ್ವಾಹ – ಮದುವೆ
- ಉದ್ವಾಹಗೇಹ – ಮದುವೆಯ ಮನೆ
- ಉದ್ವಿಗ್ನೆ – ತಳಮಳಗೊಂಡವಳು
- ಉದ್ವೀಕ್ಷಣ – ಮೇಲೆ ನೋಡಿವುದು
- ಉದ್ವೇಗ – ಕಳವಳ
- ಉದ್ವೇಗಪರ – ಕ್ಷೋಭೆಗೊಂಡ
- ಉದ್ವೇಜನ – ಉದ್ವೇಗ
- ಉದ್ವೇಲ(ಳ) – ಮೇರೆಮೀರಿದ
- ಉನ್ನಂ – ನಡುವಣ ರೀತಿಯವನು
- ಉನ್ನತಪೀಠ – ಎತ್ತರವಾದ ಪೀಠ
- ಉನ್ನತಿ – ಮೇಲ್ಮೆ; ಏಳಿಗೆ; ಉಚ್ಚತೆ
- ಉನ್ನತಿಕೆ – ಉನ್ನತಿ
- ಉನ್ನತಿಗಿಡು – ಹಿರಿತನ ಕುಗ್ಗು
- ಉನ್ನಮಿತ – ಮೇಲಕ್ಕೆತ್ತಿದ
- ಉನ್ನಿದ್ರ – ನಿದ್ದೆಯಿಲ್ಲದ; ಅರಳಿದ
- ಉನ್ನಿದ್ರತೆ – ಎಚ್ಚರ
- ಉನ್ನಿದ್ರೆ – ನಿದ್ದೆಯಿಲ್ಲದವಳು
- ಉನ್ನುನ್ನಂ – ವಿಶೇಷವಾಗಿ
- ಉನ್ನೆ – ನಡುವಣ ಕಾಲ
- ಉನ್ಮಗ್ನ – ಮುಳುಗಿ ಮೇಲೆದ್ದ
- ಉನ್ಮತ್ತ – ಮದಿಸಿದ; ಬುದ್ಧಿಭ್ರಮಣೆಗೊಂಡ
- ಉನ್ಮತ್ತಕವಿಳಸನ – ಹುಚ್ಚಾಟ
- ಉನ್ಮದ – ಸೊಕ್ಕಿದ; ಮದಿಸಿದ
- ಉನ್ಮದನ – ಕಾಮನ ಬಾಣಗಳಲ್ಲಿ ಒಂದು
- ಉನ್ಮದನಬಾಣ – ಉನ್ಮದನ
- ಉನ್ಮದಾಳಿನಿ – ಸೊಕ್ಕಿದ ಹೆಣ್ಣುದುಂಬಿ
- ಉನ್ಮನ – ಉತ್ಕಂಠಿತ ಮನಸ್ಸು(ಳ್ಳವನು)
- ಉನ್ಮಾರ್ಗ – ಎತ್ತರವಾದ ದಾರಿ; ಕೆಟ್ಟ ದಾರಿ
- ಉನ್ಮಾರ್ಗತೆ – ತಪ್ಪು ದಾರಿಯಲ್ಲಿ ನಡೆಯುವುದು
- ಉನ್ಮಾರ್ಗಿ – ತಪ್ಪು ದಾರಿಯಲ್ಲಿ ನಡೆಯುವವನು
- ಉನ್ಮಾರ್ಜನ – ಉಜ್ಜುವುದು, ತೊಳೆಯುವುದು
- ಉನ್ಮಿಶ್ರ – ಕಲಬೆರಕೆಯಾದ
- ಉನ್ಮಿಷಿತ – ಕಣ್ಣು ತೆರೆದ; ವಿಕಾಸಗೊಂಡ
- ಉನ್ಮೀಲ(ಳ)(ನ) – ಅರಳು; ತೆರೆ
- ಉನ್ಮೀಲಿತನಯನ – ಅರಳಿದ ಕಣ್ಣು
- ಉನ್ಮೀಲಿಸು – ಅರಳಿಸು
- ಉನ್ಮುಖ – ಎತ್ತಿದ ಮುಖ; ಅಭಿಮುಖ; ಕಾತರನಾದ
- ಉನ್ಮೂಲನ – ಬೇರುಸಹಿತ ಕಿತ್ತುಹಾಕುವುದು
- ಉನ್ಮೂಲಿತ – ಬುಡಸಹಿತ ಕಿತ್ತ
- ಉನ್ಮೂಲಿ(ಳಿ)ಸು – ಬೇರುಸಹಿತ ಕೀಳು
- ಉನ್ಮೇಷ – ಕಣ್ಣು ತೆರೆಯುವುದು
- ಉಪಕಂಠ – ಹತ್ತಿರ; ತಪ್ಪಲು; ಕೊರಳಿನ ಬಳಿ
- ಉಪಕರಿಸು – ಸಹಾಯಮಾಡು
- ಉಪಕಾರ – ಸಹಾಯ
- ಉಪಕಾರಂಗೆಯ್ – ಸಹಯಮಾಡು
- ಉಪಕಾರಿ – ಸಹಾಯ ಮಾಡುವವನು(ಳು)
- ಉಪಕಾರಿಕೆ – ಅರಸನ ಬಿಡಾರ
- ಉಪಕಾರ್ಯ – ಅರಸನ ಬಿಡಾರ; ಅರಮನೆ
- ಉಪಕೃತ – ಸಹಾಯಪಡೆದ
- ಉಪಕೃತಿ – ಸಹಾಯ
- ಉಪಗತ – ಹತ್ತಿರ ಬಂದ
- ಉಪಗಮನ – ಪ್ರಾಯೋಪಗಮನ
- ಉಪಗೂಹನ – ಮರೆಮಾಡುವುದು; ಆಲಿಂಗನ; ಆಶ್ಚರ್ಯ; ರಕ್ಷಣೆ
- ಉಪಗೂಹಿತ – ಬಚ್ಚಿಟ್ಟ
- ಉಪಗೃಹೀತ – ವಶಪಡಿಸಿಕೊಂಡ
- ಉಪಗ್ರಹಸಂಧಿ – ರಾಜನು ಮಾಡಿಕೊಳ್ಳುವ ಹದಿನಾರು ಬಗೆಯ ಸಂಧಿಗಳಲ್ಲಿ ಒಂದು; ಸರ್ವಸ್ವವನ್ನು ತೆತ್ತು ಪ್ರಾಣರಕ್ಷಣೆ ಮಾಡಿಕೊಳ್ಳುವುದು
- ಉಪಘಾತ – ಪೆಟ್ಟು, ಏಟು
- ಉಪಚಯ – ಶೇಖರಣೆ; ರಾಶಿ; ಅಭಿವೃದ್ಧಿ
- ಉಪಚರಿತ – ಹತ್ತಿರ ಬಂದ; ನೆರವೇರಿಸಿದ
- ಉಪಚರಿಸು – ಆಚರಿಸು
- ಉಪಚಿತ – ಹೆಚ್ಚಾದ
- ಉಪಚಿತಗುಣ – ಹೆಚ್ಚಿದ ಗುಣವುಳ್ಳವನು
- ಉಪಚಿತವಾರ್ತೆ – ಕೂಡಿಕೊಂಡು ಬಂದ ಸುದ್ದಿ
- ಉಪಜ – ಕುದುರೆಯ ಒಂದು ಬಗೆಯ ಓಟ
- ಉಪಜಲಧಿ – ಜಲಾಶಯ
- ಉಪಜಾತ – ಉತ್ಪತ್ತಿಗೊಂಡ
- ಉಪಚಾಪ – ಪಿಸುಗುಟ್ಟುವುದು; ಒಳಜಗಳ; ಭೇದೋಪಾಯ
- ಉಪಚಾಪ್ಯ – ಪಿಸುಮಾತಲ್ಲಿ ಹೇಳಿದ
- ಉಪಜೀವಿಸು – ಅನ್ಯರನ್ನು ಆಶ್ರಯಿಸಿ ಬದುಕು
- ಉಪಢೌಕಿತ – ಸಜ್ಜಿತವಾದ
- ಉಪತ್ಯಕ – ಬೆಟ್ಟದ ಬುಡ, ತಪ್ಪಲು
- ಉಪದಂಶ – ವ್ಯಂಜನಪದಾರ್ಥ
- ಉಪದಿಗ್ಧ – ಲೇಫಿಸಿದ
- ಉಪದಿಶ್ಯಮಾನ – ಉಪದೇಶಕ್ಕೊಳಗಾದ
- ಉಪದಿಷ್ಟ – ಉಪದೇಶಿಸಲ್ಪಟ್ಟ
- ಉಪದೂಷಣ – ಸಂಬಂಧಪಟ್ಟ ತಪ್ಪು
- ಉಪದೇಶ – ಮಂತ್ರ ಮುಂತಾದವನ್ನು ಬೋಧಿಸುವುದು
- ಉಪದೇಶಂಗುಡು – ಉಪದೇಶ ಮಾಡು
- ಉಪದೇಶಂಗೆಯ್ – ಉಪದೇಶಂಗುಡು
- ಉಪದೇಶಕ – ಉಪದೇಶಿಸುವ ಗುರು
- ಉಪದ್ರವ – ಹತ್ತಿರ ಓಡು; ಕಾಟ; ರೋಗ
- ಉಪದ್ರುತಶೀಲ – ತೊಂದರೆಗೊಳಗಾದ ಶೀಲವುಳ್ಳವನು
- ಉಪಧಾನ – ಒರಗುವಿಕೆ; ತಲೆದಿಂಬು
- ಉಪಧಾನಾವಲಂಬ – ದಿಂಬನ್ನು ಒರಗಿ ಮಲಗುವುದು
- ಉಪಧಾವಿಶುದ್ಧ – ಪರೀಕ್ಷೆಗಳಿಂದ ಶುದ್ಧನೆಂದು ನಿರ್ಣಯಿಸಲ್ಪಟ್ಟವನು
- ಉಪಧಾಶುದ್ಧ – ಉಪಧಾವಿಶುದ್ಧ
- ಉಪಧಿ – ಮೋಸ; ತೊಂದರೆ, ಹಿಂಸೆ
- ಉಪಧೆ – ವಂಚನೆ
- ಉಪನತ – ಸಮೀಪಕ್ಕೆ ಬಂದ
- ಉಪನಯನ – ಮುಂಜಿ, ಬ್ರಹ್ಮೋಪದೇಶ; (ಜೈನ) ಜೈನಾಗಮಗಳ ಅಭ್ಯಾಸಕ್ಕೆ ಹುಡುಗನನ್ನು ಗುರುವಿನ ಬಳಿ ಕಳಿಸುವ ಸಂಸ್ಕಾರ
- ಉಪನಿಯುದ್ಧ – ಮಲ್ಲಯುದ್ಧ
- ಉಪನೀತ – ಹತ್ತಿರ ತರಲಾದ
- ಉಪನೀಯಮಾನ – ಸಮೀಪಕ್ಕೆ ತರಲಾಗುತ್ತಿರುವ
- ಉಪನ್ಯಾಸ – ಹತ್ತಿರದಲ್ಲಿಡುವುದು; ಭಾಷಣ
- ಉಪನ್ಯಾಸಂಧಿ – ಶತ್ರುಗಳೊಡನೆ ರಾಜ ಮಾಡಿಕೊಳ್ಳಬಹುದಾದ ಹದಿನಾರು ಬಗೆಯ ಸಂದಿಗಳಲ್ಲಿ ಒಂದು: ತನ್ನ ಉದ್ದೇಶಸಾಧನೆಗಾಗಿ ಮಾಡಿಕೊಳ್ಳುವ ಸಂಧಿ
- ಉಪಪತಿ – ಹಾದರಿಗ
- ಉಪಪತ್ತಿ – ಸಿದ್ಧಾಂತಸಮರ್ಥನೆಗೆ ಅನುಸರಿಸುವ ತರ್ಕ; ಯುಕ್ತಿ
- ಉಪಪದಪಂಚಕ – ಸಮ ಅಥವಾ ಸದೃಶ ಆಕಾರದ ಐದು ವಸ್ತುಗಳ ಗುಂಪು
- ಉಪಪಾತತಲ್ಪ(ಳ್ಪ) – (ಜೈನ) ಕಲ್ಪದಲ್ಲಿ ದೇವತೆಗಳು ಹುಟ್ಟುವ ಹಾಸಿಗೆ
- ಉಪಪಾತಶಯನ – ಉಪಪಾತತಲ್ಪ
- ಉಪಪಾದ(ನಿಕೇತನ) – (ಜೈನ) ಗರ್ಭವಾಸವಿಲ್ಲದೆ ಹುಟ್ಟಿದವನು, ದೇವತೆ
- ಉಪಪಾದಜ – (ಜೈನ) ಉಪಪಾದಕಲ್ಪದಲ್ಲಿ ಹುಟ್ಟಿದವನು, ದೇವತೆ, ನರಕಿ
- ಉಪಪ್ರಚ್ಛದ – ಹೊದಿಕೆ, ಮಗ್ಗುಲು ಹಾಸಿಗೆ
- ಉಪಪ್ಲವ – ಮುತ್ತಿಗೆ; ತೊಂದರೆ; ಗ್ರಹಣ
- ಉಪಬೃಂಹಣ – ಹೆಚ್ಚಾಗುವುದು
- ಉಪಭೋಗ – ವಿಷಯಸುಖ
- ಉಪಭೋಗ್ಯ – ಅನುಭವಿಸಲು ಯೋಗ್ಯವಾದ
- ಉಪಮಾತೀತ – ಹೋಲಿಕೆಗೆ ಮೀರಿದ
- ಉಪಮಿತ – ಹೋಲಿಸಲಾದ
- ಉಪಯಾಮ – ಮದುವೆ
- ಉಪಯೋಗಾಸ್ತ್ರ – ಉಪಯೋಗಕ್ಕೆ ಬರುವ ಅಸ್ತ್ರ
- ಉಪರಚಿತ – ರಚಿತವಾದ
- ಉಪರತ – ಸತ್ತ
- ಉಪರತವಶನಾಗು – ಮೃತ್ಯುವಶನಾಗು
- ಉಪರಾಗ – ಕಪ್ಪಾಗಿರುವುದು; ಗ್ರಹಣ
- ಉಪರಿ – ಮೇಲ್ಭಾಗದ; ಆನಂತರ
- ಉಪರಿದೇಶ – ಮೇಲುಭಾಗದ ದೇಶ
- ಉಪರಿಮ – ಮೇಲಿನ; ಮೇಲ್ಭಾಗ
- ಉಪರಿಮತಲ(ಳ) – ಮೇಲುಗಡೆಯ ಪ್ರದೇಶ
- ಉಪರಿಮಭೂಮಿ – ಉಪರಿಮತಲ
- ಉಪರೋಧ – ಅಡ್ಡಿ; ಬಲಾತ್ಕಾರ
- ಉಪರೋಧಿಸು – ಅಡ್ಡಿಮಾಡು; ಒತ್ತಾಯಿಸು
- ಉಪರ್ಬು(ರ್ವು)ದ – ಬೆಂಕಿ
- ಉಪಲ(ಳ) – ಕಲ್ಲು
- ಉಪಲಕ್ಷ – ಗುರುತು
- ಉಪಲಕ್ಷಿತ – ಕಾಣುವ; ಗುರುತುಮಾಡಿದ; ವಿಶಿಷ್ಟವಾದ
- ಉಪಲಕ್ಷಿಸು – ನೋಡಿ, ಗುರುತಿಸು
- ಉಪಲತಲ – ಕಲ್ಲಿನ ಮೇಲ್ಭಾಗ
- ಉಪಲಬ್ಧ – ಸಿಕ್ಕಿದ; ಮತ್ತೆ ಕಾಣಿಸಿದ
- ಉಪಲಸಿತ – ಪ್ರಕಾಶಮಾನವಾದ
- ಉಪಲಾಲನೆ – ಮುದ್ದಾಡು
- ಉಪಲಾಲನೋಕ್ತಿ – ಮುದ್ದುಗರೆಯುವ ಮಾತು
- ಉಪಲಾಸಿತ – ಅಲಂಕೃತವಾದ; ಮುದ್ದುಮಾಡಿದ
- ಉಪಲಿಪ್ತ – ಲೇಪಿಸಿದ
- ಉಪಲಿಪ್ಸೆ – ಬಯಕೆ
- ಉಪವನ – ಊರ ಬಳಿಯ ಉದ್ಯಾನ
- ಉಪವರ್ಣಿತ – ಸೂಕ್ಷ್ಮವಾಗಿ ವರ್ಣಿಸಿದ
- ಉಪವಾದಕ – ಅನುಸರಿಸಿ ವಾದಿಸುವ; ಅನುಸರಿಸಿ ಬಾಜಿಸುವ; ಸ್ವರ್ಗದ ಒಂದು ವಾದ್ಯ
- ಉಪವಶ – ಸಮೀಪದಲ್ಲಿ ವಾಸಿಸುವುದು; ಆಹಾರವಿಲ್ಲದಿರುವುದು
- ಉಪವಾಸಂಗೆಯ್ – ಆಹಾರತ್ಯಾಗ
- ಉಪವಿದ್ಧ – ಜೊತೆಗಿರುವ
- ಉಪವಿಷ್ಟ – ಕುಳಿತುಕೊಂಡಿರುವ
- ಉಪವೀಣಿತ – ವೀಣೆಯ ವಾದನದಿಂದ ಕೂಡಿದ
- ಉಪವೀತ – ಜನಿವಾರ
- ಉಪವೇದ – ಆಯುರ್ವೇದ, ಧನುರ್ವೇದ, ಗಾಂಧರ್ವವೇದ , ಅರ್ಥಶಾಸ್ತ್ರಗಳೆಂಬ ನಾಲ್ಕು ವಿದ್ಯೆಗಳು
- ಉಪಶಮ(ನ) – ಇಂದ್ರಿಯ ನಿಗ್ರಹ; ಸಹನೆ
- ಉಪಶಮಾಂಭೋರಾಶಿ – ಸಮಾಧಾನವೆಂಬ ಸಾಗರ
- ಉಪಶಲ್ಯ – ಊರಿನ ಹತ್ತಿರ; ಈಟಿ
- ಉಪಶಲ್ಯಕ – ಊರಿನ ಹತ್ತಿರ
- ಉಪಶಾಂತ – ಅಡಗಿಹೋದ
- ಉಪಶಾಂತಿ – ಸಹನೆ
- ಉಪಶಿಷ್ಟ – ಒಡಗೂಡಿದ
- ಉಪಶೀರ್ಷಕ – ಮಧ್ಯದಲ್ಲಿ ಕ್ರಮವಾಗಿ ದೊಡ್ಡದಾಗಿರುವ ಮೂರು ಮುತ್ತುಗಳುಳ್ಳ ಹಾರ
- ಉಪಶೋಭಿತ – ಅಲಂಕೃತಗೊಂಡ
- ಉಪಶ್ಲೋಕಿಸು – ಸ್ತುತಿಮಾಡು, ಹೊಗಳು
- ಉಪಶ್ರುತಿ – ಜೋಯಿಸರನ್ನು ಕೇಳುವ ಭವಿಷ್ಯ
- ಉಪಶ್ಲೋಕಿಸು – ಹೊಗಳು
- ಉಪಸಂಹ(ಹಾ)ರಿಸು – ಮುಕ್ತಾಯಗೊಳಿಸು
- ಉಪಸಂಹೃತಿ – ವಿನಾಶ
- ಉಪಸಮುದ್ರ – ಚಿಕ್ಕ ಸಮುದ್ರ
- ಉಪಸರ್ಗ – ಹತ್ತಿರ; ಬಾಧೆ
- ಉಪಸೃಷ್ಟಿ – ಜೊತೆಗಿನ ಸೃಷ್ಟಿ
- ಉಪಸೇವಿಸು – ಮನಸ್ಸನ್ನರಿತು ಸೇವೆಮಾಡು
- ಉಪಸೇವೆಗೆಯ್ – ಉಪಸೇವಿಸು
- ಉಪಸ್ಥಾಪನ – ಹತ್ತಿರ ಇರಿಸುವುದು
- ಉಪಹತಿ – ಪೆಟ್ಟು
- ಉಪಹತಿಗೆಯ್ – ಹೊಡೆ, ಹಿಂಸಿಸು
- ಉಪಹಸಿತ – ಪರಿಹಾಸಕ್ಕೊಳಗಾದ
- ಉಪಾಹಾರ – ಸಮೀಪಕ್ಕೆ ತರುವುದು; ನೈವೇದ್ಯ
- ಉಪಹಾಸನ – ಹದಿನಾರು ಬಗೆಯ ಸಂಧಿಗಳಲ್ಲಿ ಒಂದು
- ಉಪಹಾಸಿ – ತಿರಸ್ಕಾರ ಅಥವಾ ಹಾಸ್ಯ ಮಾಡುವ
- ಉಪಹಿತ – ಕೂಡಿರುವ
- ಉಪಾಂತ್ಯ – ಹತ್ತಿರ
- ಉಪಾಂಶು – ರಹಸ್ಯ
- ಉಪಾಂಶು(ಸು)ವಧೆ – ರಹಸ್ಯವಾದ ಕೊಲೆ
- ಉಪಾಂಶುವಧೆಗೆಯ್ – ರಹಸ್ಯವಾಗಿ ಕೊಲ್ಲು
- ಉಪಾಂಸು – ಗುಟ್ಟು; ಮೋಸ
- ಉಪಾಖ್ಯಾನ – ಹಿಂದಿನ ಘಟನೆ; ಅದರ ನಿರೂಪಣೆ
- ಉಪಾತ್ತ – ಗಳಿಸಿದ; ಉಂಟುಮಾಡುವ
- ಉಪಾದೇಯ – ಸ್ವೀಕಾರಾರ್ಹ
- ಉಪಾದ್ರಿ – ಬೆಟ್ಟದ ಬಳಿ
- ಉಪಾಧ್ಯಾಯ – ಓದಿಸುವಾತ; (ಜೈನ) ಪಂಚಪರಮೇಷ್ಠಿಗಳಲ್ಲಿ ಒಬ್ಬ
- ಉಪಾಧ್ಯಾಯತೆ – ಉಪಾಧ್ಯಾಯವೃತ್ತಿ
- ಉಪಾಧ್ಯಾಯರಹಸ್ಯ – ಉಪಾಧ್ಯಾಯನು ಶಿಷ್ಯನಿಗೆ
- ಉಪದೇಶಿಸುವ ರಹಸ್ಯ
- ಉಪಾನಹ – ಪಾದರಕ್ಷೆ
- ಉಪಾಯ – ಹತ್ತಿರ ಬರುವುದು; ಯುಕ್ತಿ; ಸಾಮ, ದಾನ, ಭೇದ ದಂಡಗಳೆಂಬ ಚತುರೋಪಾಯಗಳು
- ಉಪಾಯನ – ಉಡುಗೊರೆ, ಕಾಣಿಕೆ
- ಉಪಾಯನಂಗೆಯ್ -ಉಪಾಯನ ನೀಡು
- ಉಪಾಯನಂಬೆರಸು – ಉಪಾಯನದೊಡನೆ
- ಉಪಾಯಾಂತರ – ಬೇರೆಯ ಉಪಾಯ
- ಉಪಾರೂಢ – ಮೇಲೇರಿದ
- ಉಪಾರ್ಜಿತ – ಸಂಪಾದನೆಮಾಡಿದ
- ಉಪಾರ್ಜಿತಯಶ – ಕೀರ್ತಿಯನ್ನು ಸಂಪಾದಿಸಿದವನು
- ಉಪಾರ್ಜಿಸು – ಸಂಪಾದಿಸು
- ಉಪಾಲಂಭ(ನ) – ಪಡೆಯುವಿಕೆ; ನಿಂದೆ ವ್ಯಂಗ್ಯೋಕ್ತಿ
- ಉಪಾಲಂಭಂಗೆಯ್ – ನಿಂದಿಸು
- ಉಪಾಶ್ರಯ – ಆಸರೆ, ಆಶ್ರಯ; ಒರಗು ದಿಂಬು
- ಉಪಾಶ್ರಯಂಬಡೆ – ಆಸರೆಯನ್ನು ಹೊಂದು
- ಉಪಾಶ್ರಿತ – ಆಶ್ರಯಪಡೆದ
- ಉಪಾಸಕ – (ಜೈನ) ಶ್ರಾವಕ
- ಉಪಾಸಕಾಂಗನೆ – (ಜೈನ) ಶ್ರಾವಕಿ
- ಉಪಾಸಕಾಧ್ಯಯನ – (ಜೈನ) ಶ್ರಾವಕರ ಕರ್ತವ್ಯ ತಿಳಿಸುವ ಶಾಸ್ತ್ರ
- ಉಪಾಸಾಸ್ತವ – ಸ್ತುತಿ, ಸ್ತೋತ್ರ
- ಉಪಾಸಿತ – ಪೂಜಿತವಾದ
- ಉಪಾಸಿಸು – ಉಪಾಸನೆಗೈ
- ಉಪಾಸ್ತಿ(ಸ್ತೆ)ಗೆಯ್ – ಉಪಾಸಿಸು
- ಉಪಾಸ್ಯ – ಪೂಜಿಸತಕ್ಕ
- ಉಪಾಹಿತ – ಹತ್ತಿರವಿರಿಸಿದ
- ಉಪೇಂದ್ರ – ಇಂದ್ರನ ತಮ್ಮ; ವಿಷ್ಣು
- ಉಪೇಕ್ಷಾದೋಷ – ಅನ್ಯರ ದೋಷವನ್ನು ತಿದ್ದದ ದೋಷ; ಉದಾಸೀನ ದೋಷ
- ಉಪೇಕ್ಷಾಸಂಯುತ – ಜಿತೇಂದ್ರಿಯ
- ಉಪೇಕ್ಷಿಸು – ಅಲಕ್ಷಿಸು
- ಉಪೇಕ್ಷೆ – ಅವಜ್ಞೆ
- ಉಪೇತ – ಕೂಡಿದ
- ಉಪೇಶ್ವರ – ಉಪಪತಿ, ಮಿಂಡ
- ಉಪೋಷಿತ(ತೆ) – ಉಪವಾಸವ್ರತವನ್ನು ಆಚರಿಸುವವನು(ಳು)
- ಉಪ್ಪಟ(ಟ್ಟ)(ಡ) – ವಸ್ತ್ರ, ಬಟ್ಟೆ
- ಉಪ್ಪಯಣ – ಪಯಣದ ನಡುವೆ ತಂಗುವುದು
- ಉಪ್ಪಯಣಂಗೆಯ್ – ಪಯಣದ ನಡುವೆ ತಂಗು
- ಉಪ್ಪರಂನೆಗೆ – ಎತ್ತರಕ್ಕೆ ನೆಗೆ
- ಉಪ್ಪರವಟ್ಟ – ಮೇಲುಮಟ್ಟ; ಮೇಲ್ಕಟ್ಟಿನ ಬಟ್ಟೆ
- ಉಪ್ಪರವೊಯ್ಲು – ಮೇಲಿನ ಹೊಡೆತ
- ಉಪ್ಪವಡಂಬಡೆ – ಹಾಸಿಗೆಯಿಂದ ಮೇಲೇಳು
- ಉಪ್ಪವಡಿಸು – ನಿದ್ದೆಯಿಂದ ಎಚ್ಚರಗೊಳ್ಳು; ಮೇಲೆ ನೆಗೆ; ಎತ್ತರಗೊಳಿಸು
- ಉಪ್ಪಲ(ಳ) – (ಉತ್ಪಲ) ನೈದಿಲೆ
- ಉಪ್ಪಿಕ್ಕು – ಉಪ್ಪು ಹಾಕು
- ಉಬುಬು – ಸಡಗರವನ್ನು ಸೂಚಿಸುವ ಅವ್ಯಯ
- ಉಬ್ಬಡಿಗ – ಅತಿಶಯ, ಆಧಿಕ್ಯ
- ಉಬ್ಬ(ಬ್ಬು)ದಿಗ – ಅತಿಶಯ
- ಉಬ್ಬರ – ಅತಿಶಯ; ಉಬ್ಬಟೆ; ಆವೇಗ
- ಉಬ್ಬರಂಬರಿ – ಉಕ್ಕಿ ಹರಿ
- ಉಬ್ಬರಮುರಿ – ಜೋರಾಗಿ ಉರಿ; ವಿಶೇಷವಾಗಿ ಕಾಣು
- ಉಬ್ಬರಿಕೆ – ಅತಿಶಯ, ಉಬ್ಬರ
- ಉಬ್ಬರಿಸು – ಮೇಲೇಳು; ತುಂಬಿಕೊ; ಗರ್ವಿಸು
- ಉಬ್ಬಸ – ತೊಂದರೆ; ಉಸಿರಾಟದ ಕಷ್ಟಕರ ಸ್ಥಿತಿ
- ಉಬ್ಬಸಂಬಡು – ಕಷ್ಟಪಡು; ಉಸಿರಾಡಲು ಕಷ್ಟಪಡು
- ಉಬ್ಬಾಳಿ – ಉಬ್ಬು ಸ್ವಭಾವದವನು
- ಉಬ್ಬೆ – ಸೆಕೆ, ಬಿಸಿಪು
- ಉಬ್ಬೆಗ – (ಉದ್ವೇಗ) ದುಃಖ; ಚಿಂತೆ
- ಉಬ್ಬೆಗಂಬಡು – ದುಃಖಪಡು
- ಉಭಯಕವಿ – ಕನ್ನಡ ಮತ್ತು ಸಂಸ್ಕøತಗಳಲ್ಲಿ ಕಾವ್ಯ ರಚಿಸುವವನು
- ಉಭಯಕುಲ – ತಂದೆ ನತ್ತು ತಾಯಿಯರ ಕುಲ
- ಉಭಯಬಲ – ಎರಡೂ ಕಡೆಗಳ ಸೈನ್ಯ
- ಉಭಯಲೋಕ – ಇಹ ಮತ್ತು ಪರ
- ಉಭಯವ್ಯಾಕರಣ – ಕನ್ನಡ ಮತ್ತು ಸಂಸ್ಕøತಗಳ ವ್ಯಾಕರಣ
- ಉಭಯಶ್ರೇಣಿ – (ಜೈನ) ಉತ್ತರ-ದಕ್ಷಿಣಗಳ
- ಉಭಯಾಬ್ಧಿ – (ಪೂರ್ವ-ಪಶ್ಚಿಮಗಳಲ್ಲಿರುವ)-ಎರಡು ಸಮುದ್ರಗಳು –
- ಉಮಾವರ – ಉಮೆಯ ಗಂಡ, ಶಿವ; ಕೀರ್ತಿವಂತ
- ಉಮ್ಮಚ್ಚ – (ಉನ್ಮತ್ತ) ಕೋಪ; ಅಸಮಾಧಾನ; ದಿಗ್ಭ್ರಮೆ; ಬುದ್ಧಿಭ್ರಮೆ
- ಉಮ್ಮಚ್ಚರ – ತೀವ್ರ ಕೋಪ
- ಉಮ್ಮನೆ – ಬಿಸಿಬಿಸಿಯಾಗಿ
- ಉಮ್ಮಳ – ದುಃಖ
- ಉಮ್ಮಳಿಕೆ – ಉಮ್ಮಳ
- ಉಮ್ಮಳಿಸು – ದುಃಖಿಸು; ಚಿಂತಿಸು
- ಉಮ್ಮಾರ್ಗ – ವಿರುದ್ಧಮಾರ್ಗ
- ಉಮ್ಮಿ- ಧಾನ್ಯದ ಹೊಟ್ಟು
- ಉಮ್ಮೆ – ತಾಪ; ಉಮ್ಮಳ
- ಉಯ್ – ಕರೆದುಕೊಂಡು ಹೋಗು; ನಿರ್ಬಂಧಿಸು; ಧಾನ್ಯದ ಹೊಟ್ಟು
- ಉಯ್ಯಲ್ – ಉಯ್ಯಾಲೆ
- ಉಯ್ಯಲಾಡು – ತೂಗಾಡು; ಉಯ್ಯಾಲೆಯಾಡು; ಡೋಲಾಯಮಾನವಾಗು
- ಉರ – ಎದೆ
- ಉರಃಕವಾಟ -ಎದೆಯ ಬಾಗಿಲು
- ಉರಗ – ಎದೆಯಿಂದ ಚಲಿಸುವಂಥದು, ಹಾವು
- ಉರಗಗೇಹ – ಹುತ್ತ
- ಉರಗಪತಾಕ – ಸರ್ಪಧ್ವಜ; ದುರ್ಯೋಧನ
- ಉರಗಪರಿವೃಢ – ಉರಗಪತಿ; ಆದಿಶೇಷ
- ಉರಗಮಥನ – ಹಾವನ್ನು ಕೊಲ್ಲುವವನು, ಗರುಡ
- ಉರಗಮಥನಾರೂಢ – ಗರುಡವಾಹನ, ವಿಷ್ಣು
- ಉರಗರಾಜ – ಆದಿಶೇಷ
- ಉರಗವನಿತೆ – ನಾಗಕನ್ನಿಕೆ
- ಉರಗವರ – ಆದಿಶೇಷ
- ಉರಗಶಯ್ಯೆ – ಹಾವಿನ ಹಾಸಿಹೆ
- ಉರಗೆಜ್ಜೆ – ಎತ್ತುಗಳ ಕೊರಳಿಗೆ ಕಟ್ಟುವ ಗೆಜ್ಜೆ
- ಉರಗೌಘ – ನಾಗರುಗಳ ಸಮೂಹ
- ಉರಚಲ್ಲಿ- ಮೊಲೆಕಟ್ಟು; ಎದೆಗೆ ಕಟ್ಟಿಕೊಳ್ಳುವ ಕನ್ನಡಿ
- ಉರಭ್ರ – ಮೇಕೆ
- ಉರರೀಕರಿಸು – ಸ್ವೀಕರಿಸು
- ಉರರೀಕೃತ – ಒಪ್ಪಿದ; ವಿಸ್ತಾರಗೊಳಿಸಿದ
- ಉರವಣಿಸು – ವೇಗವಾಗಿ ಮುನ್ನುಗ್ಗು
- ಉರವಣೆ – ಶೀಘ್ರತೆ; ಆತುರ; ದಿಟ್ಟತನ
- ಉರವರಿಸು – ವೇಗವಾಗಿ ಮುನ್ನುಗ್ಗು
- ಉರಸಿಜ – ಮೊಲೆ
- ಉರಸ್ಸ್ಥಲ(ಳ) – ಎದೆಯ ಪ್ರದೇಶ
- ಉರಾವುರೇ – ಬಾಪುರೇ ಎಂಬಂತಹ ಉದ್ಗಾರ
- ಉರಸ್ಕಂ – ಎದೆಯುಳ್ಳವನು
- ಉರಿ – ದಹನ, ಸುಡು; ಸಂಕಟಪಡು; ಜ್ವಾಲೆ
- ಉರಿಗಣ್ – ಉರಿಕಾರುವ ಕಣ್ಣು; ಕೋಪದ ಸ್ಥಿತಿ
- ಉರಿಗಣೆ – ಉರಿಯುವ ಬಾಣ; ಆಗ್ನೇಯಾಸ್ತ್ರ
- ಉರಿಗೆದ¾õï – ಬೆಂಕಿಯನ್ನು ಹರಡು
- ಉರಿಗೇಸಂ – ಉರಿಯಂತಹ ಕೇಶವುಳ್ಳವನು
- ಉರಿದೇ¿õï – ಕೆರಳು; ಪ್ರತಿಭಟಿಸು
- ಉರಿ(ರು)ಪು – ಸುಡು
- ಉರಿಸು – ಉರಿಯುವ ಹಾಗೆ ಮಾಡು
- ಉರಿವುರಿ – ಉರಿಯ ಹುರಿ
- ಉರುಗಜ್ಜ – ದೊಡ್ಡ ಕೆಲಸ
- ಉರುಗುರ – ಅಮೇಧ್ಯ
- ಉರುಗೂಧ – ಉರುಗುರ
- ಉರುಟಾಟ – ಪ್ರತಿಭಟನೆ
- ಉರುಟು – ಅತಿಕ್ರಮಣ
- ಉರುಡಾಡು – ಪ್ರತಿಭಟಿಸು
- ಉರುಪಾರ – ದೂರತೀರ
- ಉರುಪು – ಸುಡು, ದಹಿಸು
- ಉರುಸರ – ಪ್ರಬಲ ಧ್ವನಿ
- ಉರುಳ್ – ಉರುಳು; ಸಾಯಿ; ಹೊರಳಾಡು
- ಉರುಳಿ – ಉಂಡೆ
- ಉರುಳಿಗೊಳ್ – ಗುಂಡಗೆ ಆಗು; ಸುರುಳಿಯಾಗು
- ಉರುಳೆವರಿ – ಉರುಳಿಕೊಂಡು ಹೋಗು
- ಉರುಳೆವಾಯ್ – ಉರುಳೆವರಿ
- ಉರುಳ್ಚು – ಉರುಳಿಸು
- ಉರೋಜ – ಮೊಲೆ
- ಉರೋದಘ್ನ – ಎದೆ ಮುಳುಗುವುದು
- ಉರೋರುಹ – ಉರೋಜ
- ಉರ್ಕಳಿ – ಉಕ್ಕು (ಧೈರ್ಯ) ಕುಂದು
- ಉರ್ಕಾಳು – ಶೂರ
- ಉರ್ಕು – ಹಿಗ್ಗು; ಉತ್ಸಾಹ; ದರ್ಪ; ಕೆಚ್ಚು; ಹದ ಮಾಡಿದ ಕಬ್ಭಿಣ
- ಉರ್ಕುಗಿಡು – ಎದೆಗುಂದು
- ಉರ್ಕುಡಿ – ಗರ್ವವನ್ನು ಮುರಿ; ಪರಾಕ್ರಮಶಾಲಿ
- ಉರ್ಕುಡಿಸು – ಗರ್ವವನ್ನು ಮುರಿ
- ಉರ್ಕುಡುಗು – ಉರ್ಕುಗಿಡು
- ಉರ್ಕೆ(ಕ್ರ್ಕೆ)ವ – ಮೋಸ
- ಉರ್ಗಿವಳದೆಣ್ಣೆ – ಉರಿಯುತ್ತಿರುವ ಎಣ್ಣೆ
- ಉರ್ಚಿಸು – ಸೀಳು; ಭೇದಿಸು
- ಉರ್ಚು – ಹೊರಕ್ಕೆ ತೆಗೆ; ಚುಚ್ಚು; ಹೊರಕ್ಕೆ
- ಚಾಚು; ಮಲವಿಸರ್ಜನೆಯಾಗುಉರ್ದು – ಉಜ್ಜು, ತಿಕ್ಕು; ಉದ್ದಿನ ಕಾಳು, ಬೇಳೆ
- ಉರ್ಬಿ – ಉರ್ವಿ, ಭೂಮಿ
- ಉರ್ಬಿನಂ – ಅತಿಶಯವಾಗಿ
- ಉರ್ಬುಗುಂದು – ಉಬ್ಬುವಿಕೆ ಕುಂದು
- ಉರ್ಮೆ – ಹೆಚ್ಚಿಕೆ
- ಉರ್ವರ – ಉಬ್ಬರ
- ಉರ್ವರಾಪಾಳ – ಭೂಮಿಯನ್ನು ಪಾಲಿಸುವವನು, ರಾಜ
- ಉರ್ವರೆ – (ಫಲವತ್ತಾದ) ಭೂಮಿ
- ಉರ್ವರೇಶ್ವರ – ಭೂಮಿಯ ಒಡೆಯ, ರಾಜ
- ಉರ್ವಸಿ – ಊರ್ವಶಿ
- ಉರ್ವಿ – ಭೂಮಿ
- ಉರ್ವಿ(ರ್ವೀ)ಜ – ಭೂಮಿಯಲ್ಲಿ ಹುಟ್ಟಿದುದು, ಗಿಡಮರ
- ಉರ್ವಿನಂ – ಅತಿಶಯ, ಹೆಚ್ಚಿಗೆ
- ಉರ್ವಿಸು – ಉಬ್ಬಿಸು, ಹೆಚ್ಚಿಸು
- ಉರ್ವೀಧರ – ಬೆಟ್ಟ
- ಉರ್ವೀಧರವೈರಿ – ಇಂದ್ರ
- ಉರ್ವೀಧವ – ಭೂಮಿಯ ಯಜಮಾನ, ರಾಜ
- ಉರ್ವೀಭರ – ರಾಜ್ಯಭಾರ; ಭೂಮಿಯ ಭಾರ
- ಉರ್ವೀರುಹ – ಉರ್ವಿ(ರ್ವೀ)ಜ
- ಉವರ್ವೀಲೇಖಂ – ಬ್ರಾಹ್ಮಣ
- ಉರ್ವೀಹರ್ಷ – ಭೂಮಿಗೆ ಹರ್ಷ ತರುವ
- ಉರ್ವು(ರ್ಬು) – ಉಬ್ಬು, ಮೇಲೇಳು; ಮಿತಿಮೀರು; ಸಂತೋಷಪಡು; ಗರ್ವದಿಂದ ಕೂಡು; ಏಳಿಗೆ; ಹಿಗ್ಗು; ಅಹಂಕಾರ
- ಉಲಿ – ಧ್ವನಿ ಮಾಡು; ಮಾತನಾಡು; ಘೋಷಿಸು; ಧ್ವನಿ; ಕೂಗು
- ಉಲಿಗುಡು – ಧ್ವನಿಮಾಡು
- ಉಲಿಪು – ಧ್ವನಿ, ಕೂಗು
- ಉಲಿಪುಗೇಳ್ – ಧ್ವನಿಯನ್ನು ಕೇಳು
- ಉಲುಕು – ಅಲುಗು; ನಡುಗು; ಅದುರುವಿಕೆ
- ಉಲೂ(ಳೂ)ಕ – ಗೂಬೆ
- ಉಲೂಖ(ಲ) – ಒರಳು
- ಉಲ್ಕ(ಲ್ಕೆ) – ಕೊಳ್ಳಿ; ಆಕಾಶದಿಂದ ಬೀಳುವ ಹೊಳೆಯುವ ವಸ್ತು
- ಉಲ್ಕಾಪಾತ – ಆಕಾಶದಿಂದ ಹೊಳೆಯುವ ವಸ್ತುಕೆಳಕ್ಕೆ ಬೀಳುವುದುಉಲ್ಮುಕ – ಕೊಳ್ಳಿ
- ಉಲ್ಲಟಿಸು – ತಲೆಕೆಳಗುಮಾಡು
- ಉಲ್ಲುಳಿತ – ಚಲಿಸುವ
- ಉಲ್ಬಣ – ತೀವ್ರವಾದ; ರಾಶಿ, ಮೆದೆ
- ಉಲ್ಲಂಘನ – ದಾಟುವುದು
- ಉಲ್ಲಂಘಿಸು – ದಾಟು; ಅತಿಕ್ರಮಿಸು
- ಉಲ್ಲಟಿಸು – ಚಂಚಲಗೊಳ್ಳು
- ಉಲ್ಲವ – ಮೇಲ್ಕಟ್ಟು
- ಉಲ್ಲಸಿತ – ಕಾಂತಿಯುಕ್ತವಾದ; ಸಂತಸಕರವಾದ
- ಉಲ್ಲಾರ – ದಿಂಬು ಹಾಕಿದ ಹಾಸಿಗೆ
- ಉಲ್ಲಾಸ – ಉತ್ಸಾಹ; ಸ<ತೋಷ; ಕಾಂತಿ
- ಉಲ್ಲಾಳ – ಒಂದು ನಾಟ್ಯ ಭಂಗಿ
- ಉಲ್ಲಿ – ನಡುವಣ ಸ್ಥಳದಲ್ಲಿ
- ಉಲ್ಲುಳಿತ – ಸುಳಿದಾಡಿದ
- ಉಲ್ಲೇಖನಂಗೆಯ್ – ಬರೆ, ಲಿಖಿಸು
- ಉಲ್ಲೋಲ(ಳ) – ದೊಡ್ಡ ಅಲೆ
- ಉಷ – ಬೆಳಗಿನ ಜಾವ
- ಉಷರ್ಬುಧ – ಬೆಂಕಿ, ಅಗ್ನಿ
- ಉಷೆ – ಬೆಳಿಗ್ಗೆ ಹೊತ್ತು
- ಉಷ್ಣಜಲ – ಬಿಸಿನೀರು
- ಉಷ್ಣರಶ್ಮಿ – ಬಿಸಿಯಾದ ಕಿರಣ
- ಉಷ್ಣರೋಚಿ – ಉಷ್ಣರಶ್ಮಿ
- ಉಷ್ಣವೈತಾಳಿ – ಒಂದು ವಿದ್ಯೆ
- ಉಷ್ಣಾಂಶು – ಸೂರ್ಯ
- ಉಷ್ಣೀಷ – ಪಾಗು, ಶಿರಸ್ತ್ರಾಣ
- ಉಷ್ಣೀಷಪಟ್ಟ – ಉಷ್ಣೀಷದ ಬಟ್ಟೆ
- ಉಷ್ಣೇತರಕಿರಣ – ಬಿಸಿಯಲ್ಲದ ಕಿರಣವುಳ್ಳವನು, ಚಂದ್ರ
- ಉಸಿಕನೆ – ಸುಮ್ಮನೆ, ಮೌನದಿಂದ
- ಉಸಿರ್ – ಉಸಿರು, ಶ್ವಾಸೋಚ್ಛ್ವಾಸ; ಧ್ವನಿಮಾಡು; ಹೇಳು
- ಉಸಿರ್ ತವು – ಪ್ರಾಣ ಹೋಗು, ಸಾಯಿ
- ಉಸಿರ್ದಾಣ – ಉಸಿರು ನಿಲ್ಲಿಸುವ ಜಾಗ, ಯತಿ
- ಉಸುರ್ವೆಣ್ – ಸರಸ್ವತಿ
- ಉಳ್ – ಹೊಂದು
- ಉಳೂಕ – ಗೂಬೆ
- ಉಳಿ – ಅವಿತುಕೊ; ಅವಿತುಕೊಳ್ಳುವಿಕೆ; ಕಲ್ಲು ಕತ್ತರಿಸುವ ಸಾಧನ; ಕಳ್ಳ
- ಉಳಿಸೆಂಡು – ಚೆಂಡನ್ನು ಬಚ್ಚಿಟ್ಟು ಆಡುವ ಆಟ
- ಉಳ್ಕು – ಪ್ರಕಾಶಿಸು; ತಿವಿ; ಬಾಗು; ಕುಗ್ಗು; ಪ್ರವಾಹವಾಗಿ ಹರಿ; ಉಲ್ಕೆ
- ಉಳ್ಪಂಜರಿಸು – ಒಳಗೆ ಹೆಣೆದುಕೊ
- ಉಳ್ಳಂಜಿಸು – ಒಳಗೆ (ಮನಸ್ಸಿನಲ್ಲಿ) ಅಂಜಿಸು, ಭಯವುಂಟುಮಾಡು
- ಉಳ್ಳಲರ್ – ಚೆನ್ನಾಗಿ ಅರಳು; ಅರಳಿದ ಹೂವು
- ಉಳ್ಲಲರ್ಚು – ಚೆನ್ನಾಗಿ ಅರಳಿಸು
- ಉಳ್ಳಳ್ಕು – ಒಳಗೊಳಗೆ ಹೆದರು
- ಉಳ್ಳಾತ – ಉಳ್ಳವನು; ಹಣವಂತ
- ಉಳ್ಳಾಯ – ಸಾಮಥ್ರ್ಯ
- ಉಳ್ಳಾಳು – ದಂಡಿನಲ್ಲಿರುವ ಶೂರ
- ಉಳ್ಳಿ – ಈರುಳ್ಳಿ ಅಥವಾ ಬೆಳ್ಳುಳ್ಳಿ
- ಉಳ್ಳುಗುರ್ – ಉಗುರಿನ ಒಳಭಾಗ
- ಉಳ್ಳುಡೆ – ಒಳ ಉಡುಪು
- ಉಳ್ಳೊಳ – ಕೋಲಾಹಲ
Conclusion:
ಕನ್ನಡ ಉ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.