ಕನ್ನಡ ಏ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada aee aksharada halegannadada padagalu , ಕನ್ನಡ ಏ ಅಕ್ಷರದ ಹಳೆಗನ್ನಡ ಪದಗಳು ( aee halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಏ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( aee halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಏ ಅಕ್ಷರ ಎಂದರೇನು?
ಎ ಕನ್ನಡ ವರ್ಣಮಾಲೆಯ ಎಂಟನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.
ಕನ್ನಡ ವರ್ಣಮಾಲೆಯ ಒಂಬತ್ತನೆಯ ಅಕ್ಷರ. ಹ್ರಸ್ವ ಸ್ವರ. ಸಂಸ್ಕøತದಲ್ಲಿ ಹ್ರಸ್ವ ಎಕಾರವಿಲ್ಲವಾಗಿ ಬ್ರಾಹ್ಮೀ ಲಿಪಿಯ ಲೇಖಗಳಲ್ಲಿ ಈ ಅಕ್ಷರದ ರೂಪ ದೊರೆಯದು. ಕನ್ನಡದಲ್ಲಿ ಈ ಲಿಪಿ ಮತ್ತು ಉಚ್ಛಾರಣೆ ಬಳಕೆಯಲ್ಲಿದ್ದರೂ ಪ್ರಾಚೀನ ಕನ್ನಡದ ಶಾಸನಗಳಲ್ಲಿ ಎ ಕಾರಕ್ಕೆ ಬದಲು ಏ ಕಾರವನ್ನೇ ಬಳಸಲಾಗಿದೆ. ಬಹುಶಃ ಇದು ಸಂಸ್ಕøತ ಪ್ರಭಾವದಿಂದ ಆಗಿರಬಹುದು. ಬರವಣಿಗೆಯಲ್ಲಿ ಒಂದೇ ಅಕ್ಷರ ಕಂಡುಬಂದರೂ ಸಂದರ್ಭಕ್ಕೆ ತಕ್ಕಂತೆ ಹ್ರಸ್ವವಾಗಿಯೊ ದೀರ್ಘವಾಗಿಯೊ ಉಚ್ಛರಿಸುವ ವಾಡಿಕೆ ಇತ್ತು. ಲಿಪಿಯ ದೃಷ್ಟಿಯಿಂದ ಈ ಅಕ್ಷರದ ಹ್ರಸ್ವ ಮತ್ತು ದೀರ್ಘ ರೂಪಗಳಿಗಿರುವ ವ್ಯತ್ಯಾಸ ಯಾವಾಗ ರೂಢಿಗೆ ಬಂತು ಎಂದು ಹೇಳುವುದು ಕಷ್ಟ. ಕ್ರಿ.ಶ.15ನೆಯ ಶತಮಾನದ ವಿಜಯನಗರ ಕಾಲದಲ್ಲಿ ವ್ಯಂಜನಾಕ್ಷರಗಳೊಂದಿಗಿನ ಎ ವರ್ಣದ ರೂಪ ಹೇಗಿತ್ತೆಂಬುದನ್ನು ಚಿತ್ರದಲ್ಲಿ ತೋರಿಸಿದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಏ ಅಕ್ಷರದ ಹಳೆಗನ್ನಡ ಪದಗಳು – Kannada Word
- ಏಂ – ಏನು
- ಏಕ – ಒಂದು; ಸಮಾನವಿಲ್ಲದ; ಮುಖ್ಯ
- ಏಕಕ – ಒಬ್ಬಂಟಿ
- ಏಕಕುಂಡಲ – ಒಂಟಿ ಕುಂಡಲವನ್ನು ಧರಿಸಿದವನು; ಕುಬೇರ; ಬಲರಾಮ; (ಜೈನ) ಶ್ರೀರಾಮ
- ಏಕಕ್ರಿಯೆ – ಒಟ್ಟುಗೂಡಿಸುವುದು
- ಏಕಗ್ರಾಹಿ – ಒಂದೇ ಪಟ್ಟು ಹಿಡಿದವನು; ಹಟವಾದಿ
- ಏಕಚಕ್ರ – ಒಬ್ಬನೇ ರಾಜನ ಆಳ್ವಿಕೆಗೊಳಪಟ್ಟದ್ದು
- ಏಕಚ್ಛತ್ರಚ್ಛಾಯೆ – ಒಂದೇ ಕೊಡೆಯ ನೆರಳು; ಒಬ್ಬ ರಾಜನ ಆಳ್ವಿಕೆ
- ಏಕಚ್ಛತ್ರೀಕೃತ – ಒಂದೇ ಆಳ್ವಿಕೆಗೊಳಪಡಿಸಿದ
- ಏ ಕಜ್ಜಂ – ಏನು ಕೆಲಸ? ನಿಷ್ಫಲ
- ಏಕದಂಡಿ – ಒಂದು ದಂಡ ಧ್ರಿಸಿದ ಸನ್ಯಾಸಿ
- ಏಕಪತಿ – ಒಬ್ಬನೇ ಒಡೆಯ
- ಏಕಪದ – ಒಂದು ಪಾದ, ಒಂದು ಹೆಜ್ಜೆ
- ಏಕಪಾದಿ – ಒಂದೇ ಪಾದವುಳ್ಳದ್ದು, ಒಂದು ಕಾಲಿನ ಮೇಲೆ ನಿಂತವನು
- ಏಕಪಾದಗತಿ – ಒಂದೇ ಕಾಲಲ್ಲಿ ನಡೆಯುವುದು
- ಏಕಪಾದವ್ರತಸ್ಥ – ಒಂದೆ ಕಾಲ ಮೇಲೆ ನಿಂತು ತಪಸ್ಸು ಮಾಡುವವನು
- ಏಕಪ್ರಕಾರ – ಒಂದೇ ವಿಧ
- ಏಕಭುಕ್ತ – ಒಂದೇ ಹೊತ್ತು ಊಟಮಾಡುವುದು
- ಏಕಮತ – ಒಂದೇ ಅಭಿಪ್ರಾಯ
- ಏಕರಸ – ಒಂದೇ ರಸ; ಸಮರಸ
- ಏಕರೂಪ – ಒಂದೇ ರೂಪ
- ಏಕರೂಪಾಧೀನ – ಒಂದೇ ರೂಪಕ್ಕೆ ಒಳಪಟ್ಟ
- ಏಕವಣ್ – ಒಂದೇ ಬಣ್ಣ
- ಏಕವಾಕ್ಯ – ಒಂದೇ ಮಾತಾಡುವವನು, ಸತ್ಯವಂತ
- ಏಕವಿಹಾರಿ – ಒಬ್ಬನೇ ಸಂಚರಿಸುವವನು
- ಏಕಶೇಷ – ಒಂಟಿ ಉಳಿದ
- ಏಕಸಂಧಿ – ಒಂದು ಬಾರಿ ಕೇಳಿ ನೆನಪಿನಲ್ಲಿರಿಸಿಕೊಳ್ಳಬಲ್ಲವನು
- ಏಕಸಿಕ್ಥ – ಒಂದೇ ಅಗುಳು ಆಹಾರ
- ಏಕಸ್ಥ – ಒಂದೇ ಆಗಿರುವ
- ಏಕಾಂಗ – ಒಬ್ಬನೇ
- ಏಕಾಂಗವಿಜಯ – ಒಬ್ಬನೇ ಯುದ್ಧಮಾಡಿ
- ಪಡೆಯುವ ಗೆಲವು
- ಏಕಾಂಗವೀರ – ಒಬ್ಬನೇ ಯುದ್ಧಮಾಡುವವನು
- ಏಕಾಂತ – ಗುಟ್ಟು
- ಏಕಾಂತನಿಕೇತನ – ಗುಟ್ಟಿನ ಮನೆ;
- ಮಂತ್ರಾಲೋಚನೆ ಮಾಡುವ ಮನೆ
- ಏಕಾಕಿನಿ – ಒಬ್ಬಂಟಿ ಹೆಂಗಸು
- ಏಕಾಕೃತಿ – ಒಂದೇ ಆಕಾರ
- ಏಕಾಗ್ರ – ಒಂದೇ ವಿಷಯದ ಮೇಲೆ ಗಮನವಿರುವ
- ಏಕಾಗ್ರಚಿತ್ತ – ಒಂದೇ ವಿಷಯದ ಮೇಲೆ ಕೇಂದ್ರೀಕರಿಸಿರುವ ಮನಸ್ಸು (ಉಳ್ಳವನು)
- ಏಕಾಗ್ರಗಮನ – ಒಂದೇ ವಿಷಯದ ಮೇಲೆ ಗಮನವಿರಿಸಿರುವುದು
- ಏಕಾತಪತ್ರ – ಒಂದೇ ಕೊಡೆ
- ಏಕಾತ್ಮಜ – ಒಂದೇ ಆತ್ಮದಲ್ಲಿ ಹುಟ್ಟಿದ
- ಏಕಾದಶಧಾರಿ – (ಜೈನ) ದ್ವಾದಶಾಂಗಗಳಲ್ಲಿ ಹನ್ನೊಂದನ್ನು ಮಾತ್ರ ತಿಳಿದವನು
- ಏಕಾದಶನಿಳಯ – (ಜೈನ) ಶ್ರಾವಕರು ಆಚರಿಸಬೇಕಾದ ಹನ್ನೊಂದು ವಿಧಿಗಳು : ದರ್ಶನ, ವ್ರತ, ಸಾಮಯಿಕ, ಪ್ರೋಷದೋಪವಾಸ, ಸಚಿತ್ತವಿರತಿ, ರಾತ್ರಿಭುಕ್ತಿತ್ಯಾಗ, ಬ್ರಹ್ಮಚರ್ಯೆ, ಆರಂಭತ್ಯಾಗ, ಪರಿಗ್ರಹತ್ಯಾಗ, ಅನುಮತಿತ್ಯಾಗ, ಉದಿಷ್ಟತ್ಯಾಗ
- ಏಕಾದಶರುದ್ರ – ಹನ್ನೊಂದು ಬಾರು ರುದ್ರಜಪ ಮಾಡಿ ಅಭಿಷೇಕ ಮಾಡುವ ಕ್ರಮ
- ಏಕಾದಶಸ್ಥಾನ – ಏಕಾದಶನಿಳಯ
- ಏಕದಶಾಂಗಧರ – ಏಕಾದಶಧಾರಿ
- ಏಕದಶಾಂಗಧಾರ – ಏಕದಶಾಂಗಧರ
- ಏಕದಶಾಂಗಧಾರಿ -ಏಕದಶಾಂಗಧಾರ
- ಏಕವಿಹಾರಿ – (ಜೈನ) ಒಂಟಿಯಾಗಿ ಸಂಚರಿಸುವ ಸಾಧು
- ಏಕಾಯತಮಾನಸ – ಏಕಾಗ್ರಚಿತ್ತ
- ಏಕಾಯತ್ತ – ಒಂದಕ್ಕೆ ವಶವಾದ
- ಏಕಾರಣ – ಯಾವ ಕಾರಣ
- ಏಕಾರ್ಣವ – ಒಂದು ಸಮುದ್ರದಂತೆ ನೀರು ತುಂಬಿರುವ
- ಏಕಾವಲಿ(ಳಿ) – ಒಂದೆಳೆಯ ಸರ
- ಏಕಾಶ್ರಯ – ಒಂದೇ ಆಶ್ರಯ; ಸಮಾನ ಆಶ್ರಯ
- ಏಕೀಕತ – ಒಂದಾದ
- ಏಕೀಭೂತ – ಒಂದರಲ್ಲಿ ಸೇರಿದ
- ಏಕೈಕ – ಒಂದೇ ಒಂದು
- ಏಕೋಕ್ತಿ – ಒಂದೇ ಪದ
- ಏಕೋತ್ತರವೃದ್ಧಿ – ಒಂದೊಂದಾಗಿ ಹೆಚ್ಚುವಿಕೆ
- ಏಕೋದರ – ಸಹೋದರ
- ಏಗಂ – ನಿಶ್ಚಿತವಾಗಿ
- ಏಗಳ್ – ಯಾವಾಗ, ಯಾವಾಗಲೂ
- ಏಗುಂ – ಯಾವಾಗಲೂ
- ಏಗು – ಏನು ಮಾಡು, ಏನುಪಯೋಗ
- ಏಗೆಡು – ಏನು ಕೆಡುವುದು
- ಏಗೆಯ್ ಏನು ಮಾಡುಏಗೊಳ್ – ಒಪ್ಪು, ಸಮ್ಮತಿಸು
- ಏಟವಿಟ – ಕ್ಷುದ್ರ ವಿಟ
- ಏಡ – ಕಿವುಡ
- ಏಡಿಸು – ಅಪಹಾಸ್ಯಮಾಡು, ಅವಹೇಳಿಸು
- ಏಡು – ಕೊಳೆ
- ಏಣ್ – ಅಂಚು
- ಏಣ – ಜಿಂಕೆ
- ಏಣಗೋಣತನ – ಕೊಂಕುಮಾತು, ಚುಚ್ಚುಮಾತು
- ಏಣವಾಹನ – ಜಿಂಕೆಯ ವಾಹನದವನು, ವಾಯು
- ಏಣಾಂಕ – ಜಿಂಕೆಯ ಗುರುತುಳ್ಳವನು, ಚಂದ್ರ
- ಏಣಾಕ್ಷಿ – ಜಿಂಕೆಯಂತಹ ಚಂಚಲ ಕಣ್ಣುಳ್ಳವಳು
- ಏಣಿ – ಹೆಣ್ಣು ಜಿಂಕೆ; ನಿಚ್ಚಣಿಕೆ
- ಏಣೀದೃಶೆ – ಏಣಾಕ್ಷಿ
- ಏತ – ಮೇಲೇರುವುದು; ನೀರೆತ್ತುವ ಸಾಧನ
- ಏತೊದಳ್ – ಏನು ಸುಳ್ಳು
- ಏದಟ್ಟು – ಏದುಸಿರುಬಿಡುವಂತೆ ಅಟ್ಟಿಸಿಕೊಂಡು ಹೋಗು
- ಏದೊರೆತು – ಯಾವ ಬಗೆಯದು, ಎಂತಹುದು
- ಏನ – ಪಾಪ
- ಏನಸ್ಸಂತಾನ – ಪಾಪಸಮೂಹ
- ಏನೋಹರ – ಪಾಪನಿವಾರಕ
- ಏಪೊತ್ತುಂ -ಯಾವ ಹೊತ್ತಿಲ್ಲಿಯೂ; ಎಲ್ಲ
- ವೇಳೆಯಲ್ಲೂ
- ಏಬಂ(ಭಂ)ಡ – ಯಾವ ವಸ್ತು; ಏನು ಉಪಯೋಗ; ಏನು ಲೆಕ್ಕ
- ಏರ್ – ನೊಗ-ಎತ್ತುಗಳನ್ನು ಕಟ್ಟಿದ ನೇಗಿಲುಏರಂಡ – ಔಡಲ ಗಿಡ
- ಏರಣಿಗ – ಅಕ್ಕಸಾಲೆ, ಚಿನಿವಾರ
- ಏರಿ -ಕೆರೆಯ ಕಟ್ಟೆ
- ಏರ್ವೆಸ(ನ) – ಯುದ್ಧಕಾರ್ಯ; ಯುದ್ಧ ಪ್ರಯತ್ನ
- ಏರ್ವೆ(ರ್ಬೆ)ಸನ – ಏರ್ವೆಸ(ನ)
- ಏಲೆ – ಏಲಕ್ಕಿ
- ಏವ – ಬೇಸರ; ವ್ಯಥೆ; ಮತ್ಸರ; ಜಿಗುಪ್ಸೆ; ಉಪೇಕ್ಷೆ; ದ್ವೇಷ; ನಾಚಿಕೆ ಪದ್ಧತಿ; ರೂಢಿ; ಮಾರ್ಗ
- ಏವಂಗೊಳ್ – ಸಿಟ್ಟು ಮಾಡಿಕೊ
- ಏವಂಬಡೆ – ಮಾತ್ಸರ್ಯಹೊಂದು
- ಏವಣ್ಣಿಸು – ಏನು ತಾನೆ ವರ್ಣಿಸು
- ಏವಯಿಸು – ನೋಯು; ಹೇಸಿಕೆಪಡು
- ಏವರ್ – ಏನು ಬರು; ಏನು ಮಾಡುವರು
- ಏವಿರಿದು – ಏನು ದೊಡ್ಡದು, ಯಾವ ಮಹತ್ವದ್ದು
- ಏವುದು – ಏನು ಮಾಡುವುದು
- ಏವೋಗು – ಏಕೆ ಹೋಗು
- ಏಷಣಾಸಮಿತಿ – (ಜೈನ) ಸಾದಕನು ರತ್ನತ್ರಯಭಾವನೆಯಿಂದ ಪ್ರಾಸುಕಾಹಾರವನ್ನು ತೊರೆದು ಸಮಚಿತ್ತದಿಂದ ಊಟಮಾಡುವುದು
- ಏಸಾಡು – ಬಾಣ ಪ್ರಯೋಗಮಾಡು
- ಏಸು – ಎಷ್ಟು; ಬಾಣಪ್ರಯೋಗ ಮಾಡು(ವುದು)
- ಏಸುವೆಸ(ನ) – ಬಾಣಪ್ರಯೋಗ
- ಏಳಗ – ಟಗರು
- ಏಳಾ – ಏಲಕ್ಕಿ
- ಏಳಾಗಂಧ – ಏಲಕ್ಕಿಯ ವಾಸನೆ
- ಏಳಾವನ – ಏಲಕ್ಕಿ ತೋಟ
- ಏಳಿದ – ತಿರಸ್ಕಾರ; ಅವಮಾನ; ನಿಕೃಷ್ಟ
- ಏಳಿದಂಗೆಯ್ – ತಿರಸ್ಕಾರ ಮಾಡು
- ಏಳಿದಂಬಗೆ – ತಿರಸ್ಕಾರದಿಂದ ಕಾಣು
- ಏಳಿದಂಮಾಟು – ಏಳಿದಂಗೆಯ್
- ಏಳಿದಿಕೆ(ಕ್ಕೆ) – ಅವಜ್ಞೆ; ತಿರಸ್ಕಾರ
- ಏಳಿಸು – ತಿರಸ್ಕಾರಮಾಡು; ಅವಹೇಳನಗೈ
Conclusion:
ಕನ್ನಡ ಏ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.