ಕನ್ನಡ ಋ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada ru aksharada halegannadada padagalu , ಕನ್ನಡ ಋ ಅಕ್ಷರದ ಹಳೆಗನ್ನಡ ಪದಗಳು ( ru halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಋ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( ru halegannada Words in kannada ) ತಿಳಿದುಕೊಳ್ಳೋಣ.
ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಋ ಅಕ್ಷರ ಎಂದರೇನು?
ಋ ಕನ್ನಡ ವರ್ಣಮಾಲೆಯ ಏಳನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.
ಕನ್ನಡ ವರ್ಣಮಾಲೆಯ ಏಳನೆಯ ಅಕ್ಷರ. ಇದರ ಬ್ರಾಹ್ಮೀಲಿಪಿಯ ಸ್ವರೂಪ ದೊರಕಿಲ್ಲ. ಸಾಮಾನ್ಯವಾಗಿ ಕನ್ನಡದಲ್ಲಿ ಈ ಅಕ್ಷರದ ಬಳಕೆ ಬಹು ಕಡಿಮೆ. ಋಷಿ, ಋಣ ಮುಂತಾದ ಸಂಸ್ಕೃತದ ಶಬ್ದಗಳು ಬಂದಾಗ ಮಾತ್ರ ಇದರ ಉಪಯೋಗ. ಅಲ್ಲೂ ತದ್ಭವ ರೂಪಗಳಾದ ರಿಸಿ, ರಿಣ ಮುಂತಾದುವು ಬಂದು ಬಿಡುತ್ತವೆ. ವ್ಯಂಜನದೊಂದಿಗೆ ಸೇರಿ ಬಂದಾಗ ಮಾತೃಕೆ, ಗೃಹ ಮೊದಲಾದ ಶಬ್ದಗಳಲ್ಲಿ ಇದರ ನಿಷ್ಕೃಷ್ಟ ಉಪಯೋಗ ಉಂಟು. ವರ್ಣಮಾಲೆಯ ಎಂಟನೆಯ ಅಕ್ಷರವಾದ ಋಕಾರದ ಬಳಕೆಯಂತೂ ಕನ್ನಡದಲ್ಲಿ ಇಲ್ಲವೇ ಇಲ್ಲ. ಸಂಸ್ಕೃತದಲ್ಲಿ ಈ ಅಕ್ಷರದಿಂದ ಮೊದಲಾಗುವ ಪದಗಳು ತೀರ ವಿರಳ. ಕ್ರಿ.ಶ. ಆರನೆಯ ಶತಮಾನದ ಕದಂಬರಾಜ ಇಮ್ಮಡಿ ಕೃಷ್ಣವರ್ಮನ ಶಾಸನದಲ್ಲಿ ದೊರಕಿರುವ, ಋ ಕಾರದ ರೂಪವೇ ಬಹಶಃ ಅತಿ ಪ್ರಾಚೀನವಾದುದೆಂದು ಹೇಳಬಹುದು. ಕದಂಬ ಕಾಲದ ಈ ಅಕ್ಷರದ ಸ್ವರೂಪ, ಅದೇ ಕಾಲದ ಮ ಎನ್ನುವ ಅಕ್ಷರವನ್ನು ಬಹುವಾಗಿ ಹೋಲುತ್ತದೆ. ಕ್ರಿ.ಶ. ಹನ್ನೆರಡನೆಯ ಶತಮಾನದ ಕಲ್ಯಾಣಿ ಚಾಲುಕ್ಯರ ಶಾಸನಗಳಲ್ಲಿ, ಈ ಅಕ್ಷರ ಭು ಎಂಬುದನ್ನು ಬಹುವಾಗಿ ಹೋಲುತ್ತದೆ. ಇದೇ ರೂಪ ಮುಂದುವರಿದು ಕ್ರಿ.ಶ. ಹದಿನೆಂಟನೆಯ ಶತಮಾನದಲ್ಲಿ ಈಗಿರುವ ರೂಪಕ್ಕೆ ಬಹು ಸಮೀಪವಾಗಿ ಕಂಡರೂ ಒಂದು ಕೊಂಡಿ ಹೆಚ್ಚಾಗಿರುವುದನ್ನು ಗಮನಿಸಬೇಕು
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಋ ಅಕ್ಷರದ ಪದಗಳು – Kannada Words
- ಋಕ್ಕು – ಋಗ್ವೇದಮಂತ್ರ, ವೇದಮಂತ್ರ
- ಋಕ್ಷ – ಕರಡಿ; ನಕ್ಷತ್ರ
- ಋಕ್ಷಾಕೀರ್ಣ – ನಕ್ಷತ್ರಗಳಿಂ ಕೂಡಿದ; ಕರಡಿಗಳಿಂದ ಕೂಡಿದ
- ಋಕ್ಷೇಶ – ನಕ್ಷತ್ರಗಳ ಒಡೆಯ, ಚಂದ್ರ
- ಋಜು – ಸರಳವಾದ; ಒಂದು ವಸ್ತುವನ್ನು
- ನೋಡಿವ ವಿವಿಧ ಕೋನಗಳು
- ಋಜುತ್ವ – ನೇರ ನಡವಳಿಕೆ
- ಋಜುಮತಿ – (ಜೈನ) ಋಜು ಬುದ್ಧಿ
- ಋಜುಮಾರ್ಗ – ನೇರ ಮಾರ್ಗ, ನಡವಳೀಕೆ
- ಋಜುರೋಹಿತ – ಕಾಮನಬಿಲ್ಲು
- ಋಜುವೃತ್ತಿ – ನೇರ ನಡವಳಿಕೆ
- ಋಜ್ವಾಗತ – ನೇರವಾಗಿ ಬಂದ; ನೇರ ಮಾರ್ಗ
- ಋಣಂಗುಡು – ಸಾಲ ಕೊಡು
- ಋಣಿ – ಹಂಗಿಗೊಳಗಾದವನು
- ಋತ – ಸತ್ಯ; ತೇಜಸ್ವಿ; ಸೂರ್ಯ; ನೀರು; ಚಂದ್ರ; ಹಂಸ; ಮುನಿ
- ಋತವಚನ – ಸತ್ಯದ ಮಾತು
- ಋತವಾಕ್ಯ – ಋತವಚನ
- ಋತು – ಎರಡ ತಿಂಗಳ ಕಾಲ; ಸ್ತ್ರೀರಜಸ್ಸು
- ಋತುಪ್ರತಾನ – ಋತುಸಮೂಹ
- ಋತುವಿಮಾನ – (ಜೈನ) ಅರವತ್ತಮೂರು ಇಂದ್ರಕಗಳಲ್ಲಿ ಮೊದಲನೆಯದು
- ಋತುಸಾರ್ವಭೌಮ – ಋತುಗಳ ಸಮ್ರಾಟ; ವಸಂತಋತು
- ಋತ್ವಿ(ಕ್ಕು)ಜ – ಯಾಗದಲ್ಲಿ ಯಜಮಾನನಿಗೆ ಸಹಾಯ ಮಾಡುವವರು; ಯಜ್ಞಪುರೋಹಿತ
- ಋದ್ಧ – ವೃದ್ಧಿ ಹೊಂದಿದ; ತುಂಬಿದ
- ಋದ್ಧಿ – ಸಮೃದ್ಧಿ; ಅಭಿವೃದ್ಧಿ; ಕೈಗೂಡುವಿಕೆ; ಸಂಪತ್ತು, ಐಶ್ವರ್ಯ; (ಜೈನ) ತಪಸ್ಸಿನಿಂದ ಪ್ರಾಪ್ತವಾಗುವ ಮಹಿಮೆ, ಬುದ್ಧಿ, ಕ್ರಿಯಾ, ವಿಕ್ರಿಯಾ, ತಪ, ಬಲ, ಔಷಧಿ, ರಸ, ಅಕ್ಷೀಣ ಎಂಬ ಋದ್ಧಿಗಳು
- ಋದ್ಧಿಪ್ರಾಪ್ತ – ಋದ್ಧಿಯನ್ನು ಹೊಂದಿದವನು
- ಋದ್ಧಿಸಂಪನ್ನ – ಏಳಿಗೆಯನ್ನು ಪಡೆದವನು
- ಋಷಭ – ಎತ್ತು; (ಜೈನ) ಮೊದಲನೆಯ ತೀರ್ಥಂಕರ
- ಋಷಿ – ತಪಸ್ವಿ
- ಋಷಿನಿವೇದಕ – ಮಹರ್ಷಿಗಳ ಆಗಮನವನ್ನು ಸಾರುವ ದೂತ
- ಋಷಿರೂಪಕ – ಋಷಿಯ ರೂಪ, ಋಷಿದೇಹ
Conclusion:
ಕನ್ನಡ ಋ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.