ಕನ್ನಡ ಹ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada ha aksharada halegannadada padagalu , ಕನ್ನಡ ಹ ಅಕ್ಷರದ ಹಳೆಗನ್ನಡ ಪದಗಳು (hA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಹ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( hA halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ
ಕನ್ನಡ ಹ ಅಕ್ಷರ ಎಂದರೇನು?
ಹ, ಕನ್ನಡ ವರ್ಣಮಾಲೆಯ ಆರನೇ ಅವರ್ಗೀಯ ವ್ಯಂಜನವಾಗಿದೆ. ತಾಲವ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿ.
ಬಾಣದ ಆಕಾರದಲ್ಲಿರುವ ಅಶೋಕನ ಕಾಲದ ಈ ಅಕ್ಷರದ ಸ್ವರೂಪಕ್ಕೂ ಈಗಿನ ಸ್ವರೂಪಕ್ಕೂ ಯಾವ ವಿಧವಾದ ಹೋಲಿಕೆಗಳೂ ಕಂಡು ಬರುವುದಿಲ್ಲ. ಉದ್ದನೆಯ ಈ ಅಕ್ಷರ ಸಾತವಾಹನ ಕಾಲದಲ್ಲಿ ಸಣ್ಣದಾಗಿ ಕದಂಬ ಕಾಲದಲ್ಲಿ ಘಂಟೆಯ ಆಕಾರವನ್ನು ಹೊಂದುತ್ತದೆ.ಎರಡು ಪಾರ್ಶ್ವಗಳನ್ನು ಸೇರಿಸುವ ಒಂದು ರೇಖೆ ಇಲ್ಲಿ ಉದ್ಭವವಾಗುತ್ತದೆ. ಇದೇ ಮುಂದೆ ಪರಿವರ್ತಿತವಾಗಿ ಅಕ್ಷರದ ಕೆಳಭಾಗವಾಗುತ್ತದೆ.
ರಾಷ್ಟ್ರಕೂಟ ಕಾಲದಲ್ಲಿಯೂ ಈ ಅಕ್ಷರದಲ್ಲಿ ಅಂತಹ ಬದಲಾವಣೆಗಳೇನೂ ಕಾಣಬರುವುದಿಲ್ಲ. ಆದರೆ ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಬಹು ಬದಲಾವಣೆಗಳನ್ನು ಹೊಂದಿ ಈಗಿನ ಅಕ್ಷರಕ್ಕೆ ಅತಿ ಸಮೀಪವಾಗಿ ಕಾಣಬರುತ್ತದೆ. ಕೆಳಭಾಗದಲ್ಲಿ ಒಂದು ವೃತ್ತಾಕಾರ ಉದ್ಭವವಾಗಿ ಅದು ಪಾಶ್ರ್ವವನ್ನು ಮೀರಿ ಹೊರಬರುತ್ತದೆ. ಇದೇ ಆಕಾರ ಕಳಚುರಿ, ಹೊಯ್ಸಳ ಮತ್ತು ಸೇವುಣ ಕಾಲಗಳಲ್ಲಿಯೂ ಮುಂದುವರಿಯುತ್ತದೆ.
ಆದರೆ ವಿಜಯನಗರ ಕಾಲದಲ್ಲಿ ಕೆಳಗಿನ ವೃತ್ತಾಕೃತಿ ಅಗಲವಾಗುವ ಬದಲು ಉದ್ದವಾಗುತ್ತದೆ ಮತ್ತು ಪಾಶ್ರ್ವದ ರೇಖೆಯನ್ನು ಮೀರಿ ಹೊರಬರುವುದಿಲ್ಲ. ಇದೇ ಸ್ವರೂಪವೇ ಇನ್ನೂ ಗುಂಡಗಾಗಿ ಹದಿನೆಂಟನೆಯ ಶತಮಾನದಲ್ಲಿ ಮುಂದುವರಿಯುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಹ ಅಕ್ಷರದ ಹಳೆಗನ್ನಡ ಪದಗಳು – Kannada Words
- ಹಂಗ – ಶಕುನದ ಹಕ್ಕಿ
- ಹಂತಿದಪ್ಪು – ಸಾಲು ತಪ್ಪು
- ಹಂತುಕಾಮ – ಕೊಲ್ಲಬಯಸುವವನು
- ಹಂಸ -ಒಂದು ಪಕ್ಷಿ, ಮರಾಲ; ಸೂರ್ಯ; ಬೃಹಸ್ಪತಿ
- ಹಂಸಕುಳ – ಹಂಸಗಳ ಗುಂಪು
- ಹಂಸಗ್ರೀವ – ಹಂಸದ ಕೊರಳು
- ಹಂಸಚ್ಛದ – ಹಂಸದ ತುಪ್ಪುಳು
- ಹಂಸತೂಲತಳ್ಪ – ಹಂಸದ ತುಪ್ಪುಳಿಂದ ಮಾಡಿದ ಹಾಸಿಗೆ
- ಹಂಸಪದ – ಹಂಸದ ಪಾದ; ಹಂಸದ ಹೆಜ್ಜೆ
- ಹಂಸಮಿಥುನ – ಹಂಸಗಳ ಜೋಡಿ (ಗಂಡು ಹೆಣ್ಣು)
- ಹಂಸರುತಿ – ಹಂಸಗಳ ಕಲರವ
- ಹಂಸಾರ್ಭಕ – ಹಂಸದ ಮರಿ
- ಹಂಸಿ – ಹೆಣ್ಣು ಹಂಸ
- ಹಂಸೀಭಾವ – ಹಂಸದ ರೀತಿ
- ಹಂಸೆ – ಹಂಸಿ
- ಹಕ್ಕರಕ್ಕೆ – ಪಕ್ಷರಕ್ಷೆ
- ಹಟತ್ – ಹೊಳೆಯುವ
- ಹಟದ್ರತ್ನ – ಹಟತ್+ರತ್ನ, ಹೊಳೆಯುವ ಮಣಿ
- ಹಟದ್ರುಚಿ – ಹೊಳೆಯುವ ಕಾಂತಿ
- ಹಟನ್ನೀರೇಜ – ಕಾಂತಿಮಯವಾದ ತಾವರೆ
- ಹಡಣಿಗಿತ್ತಿ – ಹಾದರಗಿತ್ತಿ; ಸೂಳೆ
- ಹಡಹಾಳಿ – ಸಂಪಾದಿಸುವವನು
- ಹಣಾಹಣಿ – ಹಣೆಯಿಂದ ಹಣೆಗೆ ಹೊಡೆದು ಮಾಡುವ ಹೋರಾಟ
- ಹತ – ಭಂಗಗೊಂಡ
- ಹತಕ – ಕೆಟ್ಟವನು
- ಹತಕಲ್ಮಷ – ದೋಷವಿಲ್ಲದ
- ಹತದೇಹ – ಹೊಡೆಯಲ್ಪಟ್ಟ ಶರೀರ
- ಹತಪ್ರತಿಜ್ಞ – ಪ್ರತಿಜ್ಞೆ ನೆರವೇರಿಸಲಾರದವನು
- ಹತಪ್ರಭ – ಪೌರುಷಹೀನ; ಕಾಂತಿಹೀನ
- ಹತಭುಜದ್ವಯ – ಏಟು ಬಿದ್ದ ಎರಡೂ ಕೈಗಳು
- ಹತಮತಿ – ಬುದ್ಧಿಯನ್ನು ಕಳೆದುಕೊಂಡವನು
- ಹತವಿತತಕೋಳಾಹಳಂ – ಏಟುಗಳಿಂದ ಕ್ಷೋಭೆಗೊಳಿಸಿ(ದವನು)
- ಹತಿ – ಹೊಡೆತ; ಕೊಲ್ಲುವಿಕೆ
- ಹದಿ – ಹೂಳಿರುವುದನ್ನು ಅಗೆದು ತೆಗೆ
- ಹದಿಟೆ – (ಪ್ರತಿಷ್ಠಾ) ನೆಲೆಗೊಳಿಸುವಿಕೆ
- ಹನನ – ಕೊಲ್ಲುವಿಕೆ
- ಹನಿ – ತೊಟ್ಟುತೊಟ್ಟಾಗಿ ಬೀಳು
- ಹನಿಸು – ಸುರಿ
- ಹನು – ಕೆನ್ನೆ
- ಹನ್ಯತೇ – ಕೊಲ್ಲಲ್ಪಡುತ್ತಾನೆ
- ಹಪ್ಪಳಿಕೆ(ಗೆ) – ಚಪ್ಪಟೆ
- ಹಪ್ಪಳಿಕೆಮೂಗು – ಚಪ್ಪಟೆ ಮೂಗು
- ಹಮ್ಮದ – ಮೂರ್ಛೆ
- ಹಮ್ಮದಂಬೋಗು – ಮೂರ್ಛೆಗೊಳ್ಳು
- ಹಮ್ಮಯಿಸು – ಹಮ್ಮದಂಬೋಗು
- ಹಮ್ಮಯ್ಸು – ಹಮ್ಮದಂಬೋಗು
- ಹಮ್ಮು – ಹಗ್ಗವನ್ನು ಹೊಸೆ
- ಹಯ – ಕುದುರೆ
- ಹಯಖುರ – ಕುದುರೆಯ ಗೊರಸು
- ಹಯಗ್ರೀವ – ವಿಷ್ಣು; ಈ ಹೆಸರಿನ ಒಬ್ಬ ರಾಕ್ಷಸ
- ಹಯದ¿ – ಕುದುರೆಯ ಪಡೆ
- ಹಯಪರಿಕರ – ಕುದುರೆಗೆ ಹಾಕುವ ಲಗಾಮು
- ಹಯಪರ್ಯಾಣ – ಕುದುರೆಯ ಜೀನು
- ಹಯವಲ್ಲನ – ಕುದುರೆಯ ಒಂದು ಬಗೆಯ ನಡಿಗೆ
- ಹಯವೈಹಾಳಿ – ಕುದುರೆ ಸವಾರಿ
- ಹಯವ್ರಾತ – ಕುದುರೆಗಳ ಗುಂಪು
- ಹಯಶಾಸ್ತ್ರ – ಕುದುರೆಗಳ ಬಗೆಗಿನ ವಿಜ್ಞಾನ
- ಹಯಶಿಕ್ಷೆ – ಕುದುರೆಯನ್ನು ಪಳಗಿಸುವಿಕೆ
- ಹಯಶೃಂಗಚಾಪ – ಕುದುರೆಯ ಕೊಂಬಿನಿಂದ
- ಮಾಡಿದ ಬಿಲ್ಲು; ಅಸಂಭವವಾದುದು
- ಹಯಹೇಷಿತ – ಕುದುರೆಯ ಕೆನೆತ
- ಹಯ್ಯಂಗವೀನ – ನವನೀತ; ಹೊಸದಾಗಿ ತೆಗೆದ ಬೆಣ್ಣೆ
- ಹರಕಲಿಸು – ವ್ಯಾಪಿಸು
- ಹರಗು – ಕಳೆ ಕೀಳು
- ಹರಗುವಾಳ್ – ಕುಂಟೆಯ ಗುಳ
- ಹರಡು – ಬೆರಳಿನಿಂದ ಕೆದಕು; ಕಾಲಿನ ಹರಡು
- ಹರಡೆ – ಪರಡೆ, ಕಂಕಪಕ್ಷಿ, ಒಂದು ಬಗೆಯ ನೀರು ಹಕ್ಕಿ
- ಹರಣಂಗೆಯ್ – ಕೊಲ್ಲು
- ಹರಣಭರಣ – ತೆಗೆದುಕೊಳ್ಳುವುದು; ತುಂಬಿಸುವುದು
- ಹರನೇತ್ರ – ಶಿವನ (ಮೂರನೆಯ) ಕಣ್ಣು
- ಹರಪ್ರಿಯ – ಶಿವನ ಆಪ್ತ, ಕುಬೇರ
- ಹರವರಿ – ಕ್ಷೇತ್ರ
- ಹರವಸ – (ಪರವಶ) ಮೂರ್ಛೆ
- ಹರಸಖ – ಹರಪ್ರಿಯ
- ಹರಹಸನ – ಶಿವನ ಅಟ್ಟಹಾಸ
- ಹರಹಾಸ – ಹರಹಸನ
- ಹರಹಾಸದ್ಯುತಿ – ಶಿವ ನಗೆಯ ಕಾಂತಿ
- ಹರಳಿಗ – ಜಾರ
- ಹರಳ್ಚು – ದೃಷ್ಟಿಗೆ ಅಡ್ಡಿಯುಂಟುಮಾಡು
- ಹರಿ – ಓಡು, ಪ್ರವಹಿಸು; ಕುದುರೆ; ಸಿಂಹ; ಕೃಷ್ಣ
- ಹರಿಗ – ಅರಿಕೇಸರಿ; ಅರ್ಜುನ
- ಹರಿಚಂದನ – ಶ್ರೀಗಂಧ
- ಹರಿಣ – ಜಿಂಕೆ
- ಹರಿಣಕ್ರೀಡನ – ಜಿಂಕೆಯಂತೆ ನೆಗೆದಾಡುವ ಒಂದು ಆಟ
- ಹರಿಣಧರ – ಜಿಂಕೆಯ ಗುರುತನ್ನುಳ್ಳವನು, ಚಂದ್ರ
- ಹರಿಣಧರಹರಿಣ – ಚಂದ್ರನಲ್ಲಿರುವ ಜಿಂಕೆ
- ಹರಿಣರಿಪು – ಜಿಂಕೆಯ ವೈರಿ, ಸಿಂಹ
- ಹರಿಣಾಂಕ – ಹರಿಣಧರ
- ಹರಿಣಾಂಕಮಂಡಲ – ಚಂದ್ರಮಂಡಲ
- ಹರಿಣಾಕ್ಷಿ – ಜಿಂಕೆಯದರಂತೆ (ಚಂಚಲವಾದ) ಕಣ್ಣುಳ್ಳವಳು
- ಹರಿಣಾಜಿನ – ಜಿಂಕೆಯ ಧರ್ಮ
- ಹರಿಣಿ – ಹೆಣ್ಣು ಜಿಂಕೆ; ಗಿಳಿಹಸುರು ಬಣ್ಣ
- ಹರಿಣನೇತ್ರೆ – ಹರಿಣಾಕ್ಷಿ
- ಹರಿಣೀಯೂಥ – ಜಿಂಕೆಗಳ ಗುಂಪು
- ಹರಿಣೇಕ್ಷಣೆ – ಹರಿಣಾಕ್ಷಿ
- ಹರಿತ – ಹಸಿರು ಬಣ್ಣ(ದ)
- ಹರಿತಶಿಲೆ – ಪಚ್ಚೆಯ ಬಂಡೆ
- ಹರಿತಪರಿವೇಷ – ಹೊಂಬಣ್ಣದ ಪ್ರಭಾವಲಯ
- ಹರಿತಮಣಿ – ಮರಕತ ಮಣಿ
- ಹರಿತಾಂಕುರ – ಎಳೆಯ ಗರಿಕೆ
- ಹರಿತಾಲ – ಹಸಿರು ಪಾರಿವಾಳ
- ಹರಿತ್ಪ್ರದೇಶ – ಹುಲ್ಲುಗಾವಲು
- ಹರಿದಶ್ವ – ಹಸಿರು ಬಣ್ಣದ ಕುದುರೆಯವನು, ಸೂರ್ಯ
- ಹರಿದಿಕ್ – ಪೂರ್ವದಿಕ್ಕು
- ಹರಿದಿಗ್ವದನ – ಹರಿದಿಕ್
- ಹರಿದ್ರತ್ನ – ಹರಿತಮಣಿ
- ಹರಿದ್ರವನ – ಅರಿಸಿನ ಗಿಡಗಳ ತೋಟ
- ಹರಿದ್ವಸು – ಹರಿತಮಣಿ
- ಹರಿದ್ವ್ಯೂಹ – ಎಲ್ಲ ದಿಕ್ಕುಗಳು
- ಹರಿನೀಲ(ಳ) – ಇಂದ್ರನೀಲ ಮಣಿ
- ಹರಿನೀಲ(ಳ)ಚ್ಛವಿ – ಇಂದ್ರನೀಲ ಮಣಿಯ ಕಾಂತಿ
- ಹರಿನೀಲ(ಳ)ದ್ಯುತಿ – ಹರಿನೀಲ(ಳ)ಚ್ಛವಿ
- ಹರಿನೀಲರತ್ನ – ಹರಿನೀಲ(ಳ)
- ಹರಿನೀಲ(ಳ)ವರ್ಣ – ಕಡು ನೀಲಿ
- ಹರಿನೀಲೋ(ಳೋ)ಪಲ(ಳ) – ಹರಿನೀಲ(ಳ)
- ಹರಿನೀಲ(ಳ)ಕುಟ್ಟಿಮ – ಇಂದ್ರನೀಲದ ನೆಲಗಟ್ಟು
- ಹರಿನ್ಮಣಿ – ಪಚ್ಚೆ
- ಹರಿನ್ಮುಖ – ದಿಗಂತ
- ಹರಿಪದ – ವಿಷ್ಣುವಿನ ಪಾದ; ಕುದುರೆಯ
- ಗೊರಸು; ವಾಯುಮಂಡಲ
- ಹರಿಪೀಠ – ಸಿಂಹಾಸನ
- ಹರಿಪೌರುಷ – ಸಿಂಹಪರಾಕ್ರಮ
- ಹರಿಬ – ಕರ್ತವ್ಯ
- ಹರಿಬಲ – ಕುದುರೆಯ ಪಡೆ; ಸಿಂಹಬಲ; (ಜೈನ)
- ವಾಸುದೇವನ ಸೈನ್ಯ
- ಹರಿಬವೆತ್ತು – ಕರ್ತವ್ಯ ನಿರ್ವಹಣೆ ಮಾಡು
- ಹರಿಮುಖ – ಕುದುರೆಯ ಬಾಯಿ
- ಹರಿಮೇಖಲೆ – ಯಕ್ಷಿಣಿ
- ಹರಿಯ ವಲ್ಗನ – ಕುದುರೆಯ ನಡಿಗೆಯ ಭೇದ
- ಹರಿವಂಶ – ಸೂರ್ಯವಂಶ; ಕೃಷ್ಣನ ವಂಶ;-ಸರ್ಪಸಂಕುಲ
- ಹರಿವಧು – ಶಚೀದೇವಿ
- ಹರಿವರ್ಷ – (ಜೈನ) ಜಂಬೂದ್ವೀಪದ ಏಳು ಭಾಗಗಳಲ್ಲಿ ಒಂದು, ಮಧ್ಯಮ ಭೋಗಭೂಮಿ, ನೋಡಿ ಜಂಬೂದ್ವೀಪ’
- ಹರಿವಿಷ್ಟರ – ಸಿಂಹಾಸನ
- ಹರಿವ್ರಜ – ಕುದುರೆಗಳ ಸಮೂಹ
- ಹರಿಶಕ್ತಿ – ಸಿಂಹಬಲ(ವುಳ್ಳವನು)
- ಹರಿಶಿಶು – ಸಿಂಹದ ಮರಿ
- ಹರಿಶೌರ್ಯ – ಹರಿಶಕ್ತಿ
- ಹರಿಸತಿ – ಶಚೀದೇವಿ
- ಹರಿಸುತ – ವಿಷ್ಣುವಿನ ಮಗ, ಮನ್ಮಥ; ಇಂದ್ರನ ಮಗ, ಅರ್ಜುನ
- ಹರಿಸೈನ್ಯ – ಕುದುರೆಗಳ ಪಡೆ
- ಹರಿಹೇಷಾಧ್ವನಿ – ಕುದುರೆಯ ಕೆನೆತ
- ಹರೆಯಂಬಡೆ – ಯೌವನವನ್ನು ಹೊಂದು
- ಹಮ್ರ್ಯ – ಉಪ್ಪರಿಗೆ
- ಹಮ್ರ್ಯಾಗ್ರ – ಉಪ್ಪರಿಗೆಯ ಮಚ್ಚು
- ಹಮ್ರ್ಯೋಧ್ರ್ವ – ಹಮ್ರ್ಯಾಗ್ರ
- ಹರ್ಯಕ್ಷ – ಸಿಂಹ
- ಹರ್ಷ – ಆನಂದ
- ಹರ್ಷಗರ್ಭ – ಆನಂದ ತುಂಬಿದುದು
- ಹರ್ಷಪ್ರಕರ್ಷ – ಸಂತಸದ ಆಧಿಕ್ಯ
- ಹರ್ಷಾಶ್ರು – ಆನಂದದ ಕಣ್ಣೀರು
- ಹರ್ಷೋತ್ಕರ್ಷಚಿತ್ತ – ಆನಂದ ತುಂಬಿದ ಮನಸ್ಸು(ಳ್ಳವನು)
- ಹರ್ಷೋತ್ಕರ್ಷಿತ – ಅತಿಶಯ ಸಂತೋಷದಿಂದ ಕೂಡಿದ
- ಹಲ(ಳ) – ನೇಗಿಲು
- ಹಲಕು – ಮರ ಹತ್ತು; ಕೆಳದವಡೆ ಬಲರಾಮನ ಆಯುಧ
- ಹಲ(ಳ)ಧರ – ಬಲರಾಮ; (ಜೈನ)
- ವಾಸುದೇವಸಹೋದರ ಬಲರಾಮ
- ಹಲಸಿಗ – ವೈದ್ಯ
- ಹಲಾಯುಧ – ಹಲ(ಳ)ಧರ
- ಹಲ(ಳ) – ನೇಗಿಲು
- ಹಲಿ – ನೇಗಿಲು ಹಿಡಿದವನು, ರೈತ; ಬಲರಾಮ; (ಜೈನ) ವಾಸುದೇವಸಹೋದರ
- ಹಲಿ(ಳಿ)ಕ – ರೈತ, ಒಕ್ಕಲಿಗ
- ಹಲುಕು – ಮರ ಹತ್ತು; ದೇಹದ ಒಂದು ಭಾಗ
- ಹಲ್ಲಕ – ಕೆಂದಾವರೆ
- ಹಲ್ಲಣ – ಪಲ್ಲಣ, ಜೀನು
- ಹಸಿ – ಕ್ಷುಧೆಗೊಳ್ಳು; ಒದ್ದೆಯಾಗಿರುವುದು
- ಹಸುಬ – ಪಸುಂಬ, ಶಕುನದ ಹಕ್ಕಿ
- ಹಸ್ತ – ಕೈ; ಸಮೂಹ; ಒಬ್ಬ ರಾಕ್ಷಸನ ಹೆಸರು
- ಹಸ್ತಚ್ಛಟಾ – ಚಪ್ಪಾಳೆ
- ಹಸ್ತನ್ಯಸ್ತ – ಕೈಗೊಪ್ಪಿಸಿದ
- ಹಸ್ತಸ್ವಸ್ತಿಕ – ಅಡ್ಡಡ್ಡಲಾಗಿ ಕೈಗಳನ್ನಿಡುವುದು
- ಹಸ್ತಾಗ್ರ – ಕೈಬೆರಳು; ಸೊಂಡಿಲು
- ಹಸ್ತಾಮಳಕ – ಅಂಗೈ ನೆಲ್ಲಿಕಾಯಿ; ತುಂಬ ಸುಲಭ
- ಹಸ್ತಾರ್ಕ – ಹಸ್ತಾನಕ್ಷತ್ರದಲ್ಲಿರುವ ಸೂರ್ಯ
- ಹಸ್ತಾವಲಂಬ – ಕೈ ಆಸರೆ
- ಹಸ್ತಿ – ಸೊಂಡಿಲಿರುವ, ಆನೆ
- ಹಸ್ತಿನಿ – ಹೆಣ್ಣು ಆನೆ
- ಹಸ್ತಿಪಕ – ಮಾವುತ
- ಹಸ್ತಿಮಶಕಾಂತರ – ಆನೆ-ಸೊಳ್ಳೆಗಳ ನಡುವಣ ವ್ಯತ್ಯಾಸ; ತುಂಬ ಅಂತರ –
- ಹಸ್ತಿಯೂಧ – ಆನೆಗಳ ಗಿಂಡು
- ಹಸ್ತಿರದ- ಆನೆಯ ದಂತ
- ಹಸ್ತಿಶಾಲೆ – ಆನೆಯ ಲಾಯ
- ಹಳಚಿಕೆ – ಶುಭ್ರತೆ
- ಹಳಹಳಿಕೆ – ತೇಜಸ್ಸು
- ಹಾಟಕಪೀಠ – ಚಿನ್ನದ ಪೀಠ
- ಹಾಟಕವೆಟ್ಟು – ಚಿನ್ನದ ಬೆಟ್ಟ, ಮೇರು
- ಹಾದಂಡ – ವಾಗ್ದಂಡ
- ಹಾದಿಗೆಡು – ದಾರಿ ತಪ್ಪು
- ಹಾನ – ತ್ಯಾಗ; ತ್ಯಜಿಸುವಿಕೆ
- ಹಾಮಾದಂಡ – (ಜೈನ) ವಾಗ್ದಂಡ; ಹಾ, ಮಾ ಎಂಬ ಶಬ್ದಗಳನ್ನು ಹೇಳುವುದರ ಮೂಲಕ ಕೊಡುತ್ತಿದ್ದ ಶಿಕ್ಷೆ
- ಹಾಮಾಧಿಕ್ಕಾರದಂಡ – ಹಾಮಾದಂಡ
- ಹಾರ – ನೂರೆಂಟು ಎಳೆಗಳ ಮಾಲೆ;
- ಮನೋಹರವಾದ
- ಹಾರಯಷ್ಟಿ – ನೂರೆಂಟು ಎಳೆಗಳ ಮುತ್ತಿನ ಹಾರ
- ಹಾರವ – ಹಾ’ ಎಂಬ ಶಬ್ದ
- ಹಾರಿ – ಮನೋಹರ ಹಾರಿಗೊಳ್ – ಆಕರ್ಷಕವಾಗು
- ಹಾರಿದ್ರಕ – ಅರಿಸಿನ ಹಾರೀತ(ಕ) – ಪಾರಿವಾಳ
- ಹಾಲಿಗೆ – ಕರಡಿಗೆ
- ಹಾವ – ಶೃಂಗಾರ ಚೇಷ್ಟೆ
- ಹಾವಭಾವ – ವಿಲಾಸ
- ಹಾಸ – ನಗೆ
- ಹಾಸಂಗಿ – ಪಾಸಂಗೆ, ಪಗಡೆ ಹಾಸು
- ಹಾಸ್ತಿಕ – ಮಾವುತ; ಆನೆಗಳ ಹಿಂಡು
- ಹಾಸ್ಯಂಗೆಯ್ – ಗೇಲಿಮಾಡು
- ಹಾಸ್ಯಭಾರ – ಅತಿರೇಕವಾದ ಗೇಲಿ
- ಹಾಹಾಕ್ರಂದ(ನ) – ಹಾಹಾಕಾರ; ಗಾಬರಿ
- ಹಾಹಾಕ್ರಂದನಂಗೆಯ್ – ಪ್ರಲಾಪಿಸು
- ಹಾಹಾರವ – ಹಾಹಾಕ್ರಂದ(ನ)
- ಹಿಂಡು – ಮುಷ್ಟಿಯಿಂದ ಹಿಸುಕು; ದನಗಳ ಗುಂಪು
- ಹಿಂತಾಲ(ಳ)- ಒಂದು ಬಗೆಯ ತಾಳೆಯ ಮರ
- ಹಿಂದೋಲ(ಳ) – ಉಯ್ಯಾಲೆ; ಒಂದು ರಾಗ
- ಹಿಂಸಾರುಚಿ – ಪರರಿಗೆ ತೊಂದರೆ ಕೊಟ್ಟು ಆನಂದಿಸುವ ಸ್ವಭಾವ
- ಹಿಂಸಾವಿರಹಿತ – ಹಿಂಸೆಯನ್ನು ತ್ಯಜಿಸಿದವನು
- ಹಿಂಸೆ – ತೊಂದರೆ ಹಿಟಕವಾಡು – ಚೇಷ್ಟೆಮಾಡು
- ಹಿಡಿಂಬಾತಕ – ಹಿಡಿಂಬನನ್ನು ಕೊಂದವನು, ಭೀಮ
- ಹಿತ – ಸಂತೋಷದಾಯಕವಾದುದು
- ಹಿತಮಿತ – ಸಂತಸದಾಯಕವಾಗಿಯೂ ಹೆಚ್ಚಲ್ಲದೆಯೂ ಇರುವ
- ಹಿತಕರ – ಸಂತೋಷಕರ
- ಹಿತವ – ಒಳ್ಳೆಯದನ್ನು ಬಯಸುವವನು
- ಹಿತವಚಃಪ್ರಿಯ – ಇಳ್ಳೆಯ ಮಾತುಗಳನ್ನು ಇಷ್ಟಪಡುವವನು
- ಹಿತಾರ್ಥಂ – ಒಳ್ಳೆಯದಕ್ಕಾಗಿ
- ಹಿಪ್ಪದಿಕೆ – ಬೆಳಗಿನ ಜಾವ
- ಹಿಪ್ಪೆ – ರಸಹೀನವಾದುದು
- ಹಿಮ – ಇಬ್ಬನಿ; ಚಳಿ; ಹಿಮಾಲಯಪರ್ವತ;
- ಹಿಮಕರ – ಚಂದ್ರ; ಕರ್ಪೂರ
- ಹಿಮಕರಕಾಂತ – ಚಂದ್ರಕಾಂತಶಿಲೆ
- ಹಿಮಕರಬಿಂಬ – ಚಂದ್ರಬಿಂಬ
- ಹಿಮಕರಮಂಡಲ(ಳ) – ಚಂದ್ರಮಂಡಲ
- ಹಿಮಕರೋಪಳ – ಚಂದ್ರಕಾಂತಶಿಲೆ
- ಹಿಮಕಿರಣ – ತಂಪಾದ ಕಾಂತಿ; ಚಂದ್ರ
- ಹಿಮಕೃತ್ – ಚಂದ್ರ ಹಿಮಕೃನ್ಮಂಡಲ – ಹಿಮಕರಮಂಡಲ(ಳ)
- ಹಿಮಗಿರಿ – ಹಿಮಾಲಯ ಪರ್ವತ
- ಹಿಮಚೂರ್ಣ – ಕರ್ಪೂರದ ಪುಡಿ
- ಹಿಮತಾಂಬೂಲ – ಕರ್ಪೂರಮಿಶ್ರಿತ ತಾಂಬೂಲ
- ಹಿಮದೀಧಿತಿ – ಬೆಳುದಿಂಗಳು
- ಹಿಮದ್ಯುತಿ – ಹಿಮದೀಧಿತಿ
- ಹಿಮಪವನ – ತಂಗಾಳಿ
- ಹಿಮಪ್ರಭ – ಚಂದ್ರ
- ಹಿಮರಶ್ಮಿ – ತಂಪು ಕಿರಣ; ಚಂದ್ರ
- ಹಿಮರುಕ್ಬಿಂಬ – ಹಿಮಕರಬಿಂಬ
- ಹಿಮರುಗ್ಮೌಲಿ – ಹಿಮರುಕ್ – ಮೌಲಿ, ತಲೆಯಲ್ಲಿ ಚಂದ್ರನನ್ನು ಧರಿಸಿದವನು, ಶಿವ-
- ಹಿಮರುಚಿ – ಹಿಮರಶ್ಮಿ
- ಹಿಮರುಚಿಗ್ರಾವ – ಚಂದ್ರಕಾಂತಶಿಲೆ
- ಹಿಮರೋಚಿ – ಹಿಮರಶ್ಮಿ
- ಹಿಮವತ್ಕಾಲ(ಳ) – ಚಳಿಗಾಲ
- ಹಿಮವತ್ಕುತ್ಕೀಲ – ಹಿಮಾಲಯ ಪರ್ವತ
- ಹಿಮವತ್ಪಟ – ಹಿಮಾಲಯದ ತಪ್ಪಲು
- ಹಿಮವದ್ಗಿರಿ – ಹಿಮಾಲಯಪರ್ವತ
- ಹಿಮವನ್ನಗ – ಹಿಮವತ್+ನಗ, ಹಿಮವದ್ಗಿರಿ
- ಹಿಮವರ್ಷ – ಇಬ್ಬನಿಯ ಮಳೆ
- ಹಿಮವಾರವಾಣ – ಹಿಮಕವಚವುಳ್ಳುದು, ಹಿಮಾಲಯಪರ್ವತ
- ಹಿಮವಿಭವ – ಅಧಿಕ ಚಳಿ
- ಹಿಮಶಿಖರಿ – ಹಿಮವದ್ಗಿರಿ
- ಹಿಮಶೈಲ(ಳ) – ಹಿಮವದ್ಗಿರಿ
- ಹಿಮಶೈಲೇಂದ್ರ – ಹಿಮವದ್ಗಿರಿ
- ಹಿಮಸಮಯ – ಚಳಿಗಾಲ
- ಹಿಮಸಮಯಪತಿ – ಚಳಿಗಾಲದ ಒಡೆಯ, ಚಂದ್ರ
- ಹಿಮಾಂಬು – ತಣ್ಣೀರು
- ಹಿಮಾಂಶು – ಹಿಮರಶ್ಮಿ
- ಹಿಮಾಂಶುಮಂಡಲ – ಚಂದ್ರಮಂಡಲ
- ಹಿಮಾಂಶುರಶ್ಮಿ – ಬೆಳುದಿಂಗಳು
- ಹಿಮಾಂಶುವಂಶ – ಚಂದ್ರವಂಶ
- ಹಿಮಾಂಶುಶೇಖರ – ಚಂದ್ರನನ್ನು ಧರಿಸಿದವನು, ಶಿವ
- ಹಿಮಾಚಲ(ಳ) – ಹಿಮಾಲಯ ಪರ್ವತ
- ಹಿಮಾನಿ – ಮಂಜಿನ ಒಟ್ಟಿಲು
- ಹಿಮಾನಿಲ(ಳ) – ತಂಗಾಳಿ
- ಹಿಮೋಪಲ(ಳ) – ಚಂದ್ರಕಾಂತಶಿಲೆ
- ಹಿರಣ್ಯ – ಚಿನ್ನ
- ಹಿರಣ್ಯಕ(ಶಿಪು) – ಒಬ್ಬ ರಾಕ್ಷಸ
- ಹಿರಣ್ಯಗರ್ಭ – ಬ್ರಹ್ಮ; (ಜೈನ) ಆದಿ ತೀರ್ಥಂಕರ \
- ಹಿರಣ್ಯರೇತ – ಅಗ್ನಿ
- ಹಿರಣ್ಯಾಕ್ಷ – ಒಬ್ಬ ರಾಕ್ಷಸ
- ಹಿರಣ್ಯೋತ್ಕøಷ್ಟಜನ್ಮ – (ಜೈನ) ಒಂದು ಗರ್ಭಾನ್ವಯಕ್ರಿಯೆ, ಜಿನಜನನಿಯ ಗರ್ಭದಲ್ಲಿ ಅವತರಿಸುವುದು
- ಹಿವ – (ಹಿಮ) ಮಂಜು
- ಹಿವಗದಿರ – ಹಿಮಗದಿರ, ಚಂದ್ರ
- ಹೀನ – ಕ್ಷುದ್ರವ್ಯಕ್ತಿ
- ಹೀನತೆ – ಕ್ಷುದ್ರತೆ
- ಹೀನಬಲ – ಅಲ್ಪಬಲವುಳ್ಲವನು
- ಹೀನಾಂಗ – ಅಂಗವಿಕಲ
- ಹೀನಾಧಿಕ – ಕಡಿಮೆ ಮತ್ತು ಹೆಚ್ಚು
- ಹೀನಾಧಿಕವಿನಿಮಾನ – (ಜೈನ) ಆಸ್ತೇಯದ ಅತಿಚಾರಗಳಲ್ಲಿ ಒಂದು, ವ್ಯಾಪಾರದಲ್ಲಿ
- ತೂಕ-ಅಳತೆಗಳಲ್ಲಿ ಕಡಿಮೆ ಮಾಡುವುದು
- ಹೀನಿ – ಅವಿವೇಕಿ ಹೀರ್ – (ಪಿರ್) ಕುಡಿ
- ಹೀರ – ವಜ್ರ ಹೀಲಿ – ನವಿಲುಗರಿ ಹುಂಕಾರ -ಹುಂ’ ಎಂಬ ಶಬ್ದ
- ಹುಂಕೃತಿ – ಹುಂಕಾರ
- ಹುಂಕೊಳ್ – ಹೂಗುಟ್ಟು
- ಹುಂಡಸಂಸ್ಥಾನ – (ಜೈನ) ಶರೀರದ ಅವಯವಗಳನ್ನು ಕುರೂಪಗೊಳಿಸುವ ಕರ್ಮಗಳ ಉದಯ
- ಹುಂಡಾವಸರ್ಪಿಣಿ – (ಜೈನ) ಅನೇಕ ಅವಸರ್ಪಿಣಿಗಳ ನಂತರ ಬರುವ ಕಾಲಾವಧಿ
- ಹುತ – ಹೋಮ ಮಾಡಲ್ಪಟ್ಟ; ಹವಿಸ್ಸು
- ಹುತವಹ – ಅಗ್ನಿ
- ಹುತವಹಬಾಣ – ಆಗ್ನೇಯಾಸ್ತ್ರ
- ಹುತವಹವರ್ಷಾಗ್ನಿಯಂತ್ರ – ಬೆಂಕಿಯನ್ನುಗುಳುವ ಯಂತ್ರ
- ಹುತವಹಸಖ – ಬೆಂಕಿಯ ಗೆಳೆಯ, ವಾಯು
- ಹುತಾಗ್ನಿ – ಯಜ್ಞದೀಕ್ಷಿತ
- ಹುತಾಶ(ನ) – ಹವಿಸ್ಸನ್ನು ಸೇವಿಸುವವನು, ಅಗ್ನಿ
- ಹುತಾಶನಕುಂಡ – ಹೋಮಕುಂಡ
- ಹುತಾಶನಪುತ್ರಿ – ಬೆಂಕಿಯ ಮಗಳು, ದ್ರೌಪದಿ
- ಹುದುಗು – ಅಡಗಿಕೊ
- ಹುರಿ – ಒಣಗಿಸು; ಹಗ್ಗ
- ಹುಸಿ – ಸುಳ್ಳು ಹೇಳು; ಸುಳ್ಳು
- ಹೂಂಕರಿಸು – ರೋಷದಿಂದ ಹೂಂಕಾರ ಮಾಡು
- ಹೂಂಕಾರ – ರೋಷದಿಂ ಹೂಂ ಎಂದು ಕೂಗುವ ಶಬ್ದ
- ಹೂಂಕಾರಂಗೆಯ್ – ಹೂಂಕರಿಸು
- ಹೂಂಕೃತ – ಹೂಂಕಾರ
- ಹೂಂಕೊಳ್ – ಹೂ ಎನ್ನು, ಒಪ್ಪು
- ಹೂಜೆಗ – ಅಸೂಯೆಪಡುವವನು
- ಹೂಜೆಗತನ – ಹೊಟ್ಟೆಕಿಚ್ಚುಪಡುವುದು
- ಹೂಡು – ಯೋಜಿಸು
- ಹೂನ್ಯ – ಪುಣ್ಯ
- ಹೃಚ್ಛಲ್ಯ – ಎದೆಗೆ ನಾಟಿದ ಬಾಣ
- ಹೃಜ್ಜಾತ – ಮನಸ್ಸಿನಲ್ಲಿ ಹುಟ್ಟಿದವನು, ಮನ್ಮಥ
- ಹೃತ್ಕ್ಲೇಶ – ಮನಸ್ಸಿನ ನೋವು
- ಹೃತ್ತಾಪ – ಮನಸ್ಸಿನ ಕತ್ತಲೆ; ಅಜ್ಞಾನ
- ಹೃತ್ತಾಮಸ – ಮನಸ್ಸಿನ ತಾಪ
- ಹೃತ್ತಿಮಿರ – ಹೃತ್ತಾಮಸ
- ಹೃತ್ಸಂತಾಪ – ಮನಸ್ಸಿನ ದುಗುಡ
- ಹೃತ್ಸಮುದ್ಭೂತ – ಮನಸ್ಸಿನಲ್ಲಿ ಹುಟ್ಟಿದವನು, ಮನ್ಮಥ
- ಹೃದಯ – ಮನಸ್ಸು
- ಹೃದಯಂಗಮ – ಮನಮುಟ್ಟುವ
- ಹೃದಯಂಗುಡು – ಮನಸ್ಸು ಕೊಡು, ಆಕರ್ಷಣೆಗೊಳ್ಳು
- ಹೃದಯಂಬುಗಿಸು – ಮನಮುಟ್ಟುವಂತೆ ಮಾಡು
- ಹೃದಯಪ್ರಮೋದ – ಮನಸ್ಸಿನ ಸಂತೋಷ
- ಹಧರಯಪ್ರಿಯ – ಮನಸ್ಸಿಗೆ ಬೇಕಾದವನು
- ಹೃದಯಬಂಧ – ಎದೆ ಕಟ್ಟು
- ಹೃದಯಭವ – ಹೃತ್ಸಮುದ್ಭೂತ
- ಹೃದಯಸ್ಥಿತ – ಮನಸ್ಸಿನಲ್ಲಿ ನೆಲೆನಿಂತ
- ಹೃದಯಾಗ್ನಿ – ಮನಸ್ಸಿನಲ್ಲಿನ ಬೆಂಕಿ
- ಹೃದಯಾಧೀಶ – ಮನಸ್ಸಿನ ಒಡೆಯ, ಪ್ರಿಯಕರ
- ಹೃದ್ಗತ – ಮನವರಿಕೆಯಾದ
- ಹೃದ್ಗದ – ಎದೆಬೇನೆ
- ಹೃದ್ಗೋಚರ – ಮನಸ್ಸಿಗೆ ಕಾಣುವ
- ಹೃದ್ಭವ – ಹೃತ್ಸಮುದ್ಭೂತ
- ಹೃದ್ಭೂ – ಹೃತ್ಸಮುದ್ಭೂತ
- ಹೃದ್ರಾಜೀವ – ಹೃದಯಕಮಲ
- ಹೃದ್ಯ – ಚಿತ್ತಾಕರ್ಷಕವಾದ
- ಹೃದ್ಯವಿದ್ಯೆ – ಆಕರ್ಷಣೆಯ ವಿದ್ಯೆ
- ಹೃದ್ಯಾಂಗಿ – ಆಕರ್ಷಕ ರೂಪದವಳು
- ಹೃದ್ಯೋಗ – ಮನಸ್ಸಿನ ಬಯಕೆ
- ಹೃದ್ವಲ್ಲಭ – ಹೃದಯಾಧೀಶ
- ಹೃಷೀಕ – ಇಂದ್ರಿಯ; (ಜೈನ) ಏಳು ಬಗೆಯ
- ನರಕಗಳಲ್ಲಿ ಒಂದು
- ಹೃಷ್ಟ – ಆನಂದ ಹೊಂದಿದ
- ಹೃಷ್ಟತೆ – ಸಂತೋಷ
- ಹೆಕ್ಕಳ – ಸಂಭ್ರಮ
- ಹೆಟ್ಟೆ – ಹೆಂಟೆ
- ಹೆಡಗೆಗೋಂಟೆ – ಬುಟ್ಟಿಯ ಆಕಾರದಲ್ಲಿರುವ ಕೋಟೆ
- ಹೆಪ್ಪಿಡು – ಹಾಲಿಗೆ ಮೊಸರು ಬೆರಸು
- ಹೇತಿ – ಆಯುಧ
- ಹೇತಿವಿದಾರಿಣಿ – (ಜೈನ) ಶಸ್ತ್ರನಾಶಕ ವಿದ್ಯೆ
- ಹೇತು – ಕಾರಣ
- ಹೇತುತ್ವ – ಕಾರಣದಿಂದ ಕೂಡಿರುವುದು
- ಹೇತುಪದ – ಕಾರಣಸ್ಥಾನ
- ಹೇತುಭೂತ – ಕಾರಣ
- ಹೇದೆ – ಭೂತ
- ಹೇಮ – ಚಿನ್ನ
- ಹೇಮಂತ – ಷಡೃತುಗಳಲ್ಲಿ ಒಂದು, ಚಳಿಗಾಲ
- ಹೇಮಕುತ್ಕೀಲ(ಳ) – ಚಿನ್ನದ ಬೆಟ್ಟ, ಮೇರುಪರ್ವತ
- ಹೇಮಕೂಟ – ಹಿಮಾಲಯದ ಉತ್ತರ ಪರ್ವತಪಂಕ್ತಿ
- ಹೇಮಗಿರಿ – ಹೇಮಕುತ್ಕೀಲ(ಳ)
- ಹೇಮಜಾಳ – ಚಿನ್ನದ ತೋರಣ
- ಹೇಮನಗ – ಹೇಮಕುತ್ಕೀಲ(ಳ)
- ಹೇಮಪಟ್ಟಕ – ಚಿನ್ನದ ಪೀಠ
- ಹೇಮಪದ್ಮ – ಚಿನ್ನದ ಬಣ್ಣದ ಕಮಲ, ಹೊಂದಾವರೆ
- ಹೇಮಭೂಧ್ರ – ಹೇಮಕುತ್ಕೀಲ(ಳ)
- ಹೇಮಸರೋಜ – ಹೇಮಪದ್ಮ
- ಹೇಮಾಂಬುಜ – ಹೇಮಪದ್ಮ
- ಹೇಮಾಂಬುರುಹಾಸ್ಯೆ – ಹೊಂದಾವರೆಯಂತಹಮುಖವುಳ್ಳವಳು
- ಹೇಮಾಚಲ – ಹೇಮನಗ
- ಹೇಮಾದ್ರಿಧನ್ವ – ಮೇರುಪರ್ವತವನ್ನು
- ಬಿಲ್ಲನ್ನಾಗಿಸಿಕೊಂಡವನು, ಶಿವ
- ಹೇಮಾಸನ – ಚಿನ್ನದ ಪೀಠ
- ಹೇಯ – ಕ್ಷುಲ್ಲಕ
- ಹೇರಂಬ – ಗಣಪತಿ
- ಹೇರಂಬಾಂಬೆ – ಪಾರ್ವತಿ
- ಹೇರಿಗ – (ಹೇರಕ) ಗೂಢಚಾರ
- ಹೇಲ – ಸುಲಭ
- ಹೇಲಾ(ಳಾ)ಸಾಧ್ಯ – ಆಟದಷ್ಟು ಸುಲಭವಾಗಿ
- ಹೇವ – ಅಸಹ್ಯ
- ಹೇಷಾಘೋಷ – ಕುದುರೆಯ ಕೆನೆತ
- ಹೇಷಾರವ – ಹೇಷಾಘೋಷ
- ಹೇಷಿತ – ಕುದುರೆಯ ಕೆನೆತ
- ಹೇಷೆ – ಹೇಷಿತ
- ಹೇಸು – ಅಸಹ್ಯಪಡು
- ಹೇಳ – ಕ್ರೀಡೆ, ಆಟ
- ಹೇಳಾಂಚಿತ – ಹೇಲಾ(ಳಾ)ಸಾಧ್ಯ
- ಹೇಳಾವಲೋಕನ – ವಿಲಾಸದ ನೋಟ
- ಹೈತಿಗ – (ಪೈತೃಕ) ಪಿತೃಶ್ರಾದ್ಧ
- ಹೈಮ – ಚಿನ್ನ; ತಂಪಾದ
- ಹೈಮಕ್ಷ್ಮಾಚಲ(ಳ) – ಚಿನ್ನದ ಬೆಟ್ಟ;
- ಹಿಮಾಲಯಪರ್ವತ
- ಹೈಮನಗ – ಹೈಮಕ್ಷ್ಮಾಚಲ(ಳ)
- ಹೈಮವತ – ಹಿಮಾವೃತವಾದ
- ಹೈಮಶೈಲ – ಹೈಮಕ್ಷ್ಮಾಚಲ(ಳ)
- ಹೈಮಾಂಬುಜ – ಹೇಮಾಂಬುಜ
- ಹೈಮಾಚಲ(ಳ) – ಹೈಮಕ್ಷ್ಮಾಚಲ(ಳ)
- ಹೇಮಾದ್ರಿ – ಹೈಮಕ್ಷ್ಮಾಚಲ(ಳ)
- ಹೈಯಂಗವೀನ – ಹೊಸದಾಗಿ ತೆಗೆದ ಬೆಣ್ಣೆ; ನವನೀತ
- ಹೈರಣ್ಯವತ – (ಜೈನ) ಏಳು ಜನಪದಗಳಲ್ಲಿ ಒಂದು, ಒಂದು ಜಘನ್ಯಭೋಗಭೂಮಿ
- ಹೊಂಚು – ಸಮಯಕ್ಕಾಗಿ ಕಾಯು
- ಹೊಂದು – ಸಾಯು
- ಹೊಗೆ – ಹೊಗೆಯುಂಟುಮಾಡು; ಧೂಮ
- ಹೊಗೆಮುಸುಡಾತ – ಅಗ್ನಿ, ಬೆಂಕಿ
- ಹೊದೆ – ಮುಚ್ಚು
- ಹೊಮ್ಮಚ್ಚು – ಕುದುರೆಯ ಒಂದು ಬಗೆಯ ನಡಿಗೆ
- ಹೊರಡು – ಹೊರಳು
- ಹೊರಳೆ – ಸುತ್ತಾಟ
- ಹೊಲಗಿಡು – ದಿಕ್ಕುತೋಚದಂತಾಗು
- ಹೊಲಬು – ಪೊಲಂಬು, ಮಾರ್ಗ, ರಿತಿ
- ಹೊಲ್ಲಹಂಗೆಯ್ – ಕೇಡು ಮಾಡು
- ಹೋಗಾಡು – ಬಿಸಾಡು
- ಹೋತಾರ – ಋತ್ವಿಕ್ಕು, ಹೋಮ ಮಂತ್ರವನ್ನು
- ಹೇಳುವವನು
- ಹೋತೃ – ಹೋತಾರ
- ಹೋದಗೆ – ಒಂದು ಬಗೆಯ ಹಕ್ಕಿ
- ಹೋಮಕುಂಡ – ಯಜ್ಞದ ಬೆಂಕಿಯಿರುವ ಗುಂಡಿ
- ಹೋಮಾಗ್ನಿ – ಯಜ್ಞದ ಬೆಂಕಿ
- ಹ್ರದ – ಮಡು
- ಹ್ರದಿನಿ – ನದಿ
- ಹ್ರಸ್ವಗ್ರೀವ – ಚಿಕ್ಕ ಕೊರಳು
- ಹ್ರಸ್ವಚೂಚುಕ – ಚಿಕ್ಕ ಮೊಲೆತೊಟ್ಟು
- ಹ್ರಾದಿನೀ – ನದಿ; ಮಿಂಚು; ವಜ್ರಾಯುಧ
- ಹ್ರೀ – ಲಜ್ಜೆ; (ಜೈನ) ಒಬ್ಬ ದೇವತೆ
- ಹ್ಲಾದ – ಸಂತೋಷ
Conclusion:
ಕನ್ನಡ ಹ ಅಕ್ಷರದ ಹಳೆಗನ್ನಡ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.