ಕನ್ನಡ ಕ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada Ka aksharada halegannadada padagalu , ಕನ್ನಡ ಕ ಅಕ್ಷರದ ಹಳೆಗನ್ನಡ ಪದಗಳು ( KA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಕ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( KA halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಕ ಅಕ್ಷರ ಎಂದರೇನು?
ಕ, ಕನ್ನಡ ವರ್ಣಮಾಲೆಯ ಕ-ವರ್ಗದ ಮೊದಲನೇ ಅಕ್ಷರವಾಗಿದೆ, ವರ್ಗೀಯ ವ್ಯಂಜನಗಳ ಸರಣಿಯಲ್ಲಿ ಮೊದಲನೆಯದು. ಇದು ಒಂದು ವ್ಯಂಜನ.ಈ ಅಕ್ಷರ ಕಂಠ್ಯ ಅಘೋಷ ಸ್ಪರ್ಶ ವ್ಯಂಜನ ಧ್ವನಿಯನ್ನು ಸೂಚಿಸುತ್ತದೆ.ಕನ್ನಡ ವರ್ಣಮಾಲೆಯಲ್ಲಿನ ಕ್ ಮತ್ತು ಅ ಸೇರಿ ಆಗಿದೆ. ಲಂಬರೇಖೆ ಮತ್ತು ಸಮತಲರೇಖೆಗಳಿಂದ ಕೂಡಿದೆ
ಈ ಅಕ್ಷರದ ಬ್ರಾಹ್ಮೀಸ್ವರೂಪ ಶಾತವಾಹನರ ಕಾಲದಲ್ಲಿ ಕೆಲವು ಬದಲಾವಣೆಗಳನ್ನು ಹೊಂದಿದೆ. ಲಂಬರೇಖೆ ಎಡಭಾಗಕ್ಕೆ ಸ್ವಲ್ಪ ಬಾಗುತ್ತದೆ ಮತ್ತು ಸಮತಲರೇಖೆ ಸಣ್ಣದಾಗುತ್ತದೆ. ತ್ರಿಕೋಣಾಕೃತಿಯ ತಲೆಕಟ್ಟು ಕಾಣಬರುತ್ತದೆ. ಕದಂಬರ ಕಾಲದಲ್ಲಿ ಚೌಕ ತಲೆಯ ತಲೆಕಟ್ಟಿನ ಜೊತೆಗೆ ಲಂಬರೇಖೆ ಇನ್ನೂ ಬಾಗುತ್ತದೆ. ಪ್ರ.ಶ. 9ನೆಯ ಶತಮಾನದಲ್ಲಿ ಲಂಬರೇಖೆಯ ಕೆಳಭಾಗ ವೃತ್ತವಾಗುವ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತದೆಯಲ್ಲದೆ ತಲೆಕಟ್ಟು ಸ್ಪಷ್ಟವಾಗುತ್ತದೆ. ಪ್ರ. ಶ. 13ನೆಯ ಶತಮಾನದಲ್ಲಿ ಅಕ್ಷರದ ಆಕಾರ ಗುಂಡಾಗಿ ಅದೇ ರೂಪ ಮುಂದಿನ ಶತಮಾನಗಳಲ್ಲಿಯೂ ಮುಂದುವರಿಯುತ್ತದೆ
ಕನ್ನಡ ಕ ಅಕ್ಷರದ ಹಳೆಗನ್ನಡ ಪದಗಳು – Kannada Words
- ಕಂ – ನೀರು
- ಕಂಕ – ಚಿಮಟ, ಇಕ್ಕುಳ; ಕರೀ ಹದ್ದು
- ಕಂಕಟ – ಕವಚ
- ಕಂಕಣ – ಬಳೆ
- ಕಂಕಣವಾರ – ಬಳೆಗಳ ಸಾಲು
- ಕಂಕಪತ್ರ – ಹದ್ದಿನ ಗರಿ(ಗಳುಳ್ಳ ಬಾಣ)
- ಕಂಕರಿ – ಒಂದು ವಾದ್ಯ
- ಕಂಕಾಲಿ(ಳಿ) – ಶಿವ
- ಕಂಕಾಳಿಕೆ – ಎಲುಬು ಗೂಡು
- ಕಂಕೇಲಿ(ಳಿ) – ಅಶೋಕದ ಮರ
- ಕಂಗನೆ – ಬಹಳವಾಗಿ
- ಕಂಗು – ನವಣೆ
- ಕಂಗೆಡಿಸು – ದಿಕ್ಕು ತೋಚದಂತಾಗಿಸು
- ಕಂಗೊಳಿಸು – ಕಣ್ಣನ್ನು ಸೆಳೆ
- ಕಂಚಗಾರ್ತಿ – ಕಂಚುಗಾರನ ಹೆಂಡತಿ
- ಕಂಚೀಳೆ – ಕಂಚಿನಿಂಬೆ, ಈಳೆ ಜಾತಿಯ ಒಂದು ಹಣ್ಣು
- ಕಂಚುಕ – ಅಂಗಿ
- ಕಂಚುಕಿ – ರಾಣಿವಾಸದ ಅಧಿಕಾರಿ
- ಕಂಚುಕೀಂದ್ರ – ಹಾವುಗಳ ರಾಜ; ಆದಿಶೇಷ
- ಕಂಜ – ಕಮಲ
- ಕಂಜಜ – ತಾವರೆಯಲ್ಲಿ ಜನಿಸಿದವನು, ಬ್ರಹ್ಮ
- ಕಂಜಜಾತಾಕರ – ತಾವರೆಯ ಕೊಳ
- ಕಂಜಭವ – ಕಂಜಜ
- ಕಂಜರಜ – ತಾವರೆಯ ಪರಾಗ
- ಕಂಜಸಖ – ತಾವರೆಯ ಪ್ರಿಯ, ಸೂರ್ಯ
- ಕಂಜಾಕ್ಷ- ತಾವರೆಗಣ್ಣ, ವಿಷ್ಣು
- ಕಂಜಾತ – ತಾವರೆತಲೆಗಳ ಸಮೂಹ
- ಕಂಜಾಸನ – ಬ್ರಹ್ಮ
- ಕಂಜಾಸ್ತ್ರ – ಮನ್ಮಥ
- ಕಂಜಾಳಿ – ತಾವರೆಗಳ ಸಮೂಹ
- ಕಂಜೋದರ – ಹೊಕ್ಕುಳಲ್ಲಿ ತಾವರೆಯನ್ನು ಹೊಂದಿದವನು, ವಿಷ್ಣು
- ಕಂಟ – ತಾಳೆಗರಿಯ ಮೇಲೆ ಬರೆಯಲು ಬಳಸುತ್ತಿದ್ದ ಸಾಧನ
- ಕಂಟಕ – ಮುಳ್ಳು; ಪುಲಕ; ತೊಂದರೆ ಮಾಡುವವನು
- ಕಂಟಕಗುಲ್ಮ – ಮುಳ್ಳುಪೊದೆ
- ಕಂಟಕದ್ವಾರ – ಮೊಳೆಗಳಿರುವ ಬಾಗಿಲು
- ಕಂಟಕವಕ್ರಿಮ – ಮುಳ್ಳಿನಂತೆ ಡೊಂಕಾದ
- ಕಂಟಕಸ್ಥಿತಿ – ಮುಳ್ಳುಗಳಿಂದ ಕೂಡಿದ
- ಕಂಟಕಾಂಕುರ – ಪುಲಕವುಂಟಾಗು
- ಕಂಟಕಿತ – ಪುಲಕಿತ
- ಕಂಟಮೊನೆ – ಬರೆಯುವ ಸಾಧನದ ಮೊನೆ
- ಕಂಟಿಸು – ಪೀಡಿಸು
- ಕಂಠಗತವಾಯು – ಕೊರಳಲ್ಲಿ ಉಸಿರು
- ಸಿಕ್ಕಿಹಾಕಿಕೊಂಡವನು, ಮರಣೋನ್ಮುಖ
- ಕಂಠಗತಾಸು – ಕಂಠಗತವಾಯು
- ಕಂಠಗ್ರಹಂಗೆಯ್ – ಕತ್ತು ಹಿಸುಕು
- ಕಂಠದಘ್ನ – ಕಂಠ ಮುಳುಗುವುದು
- ಕಂಠನಾಳ – ಕಂಟದ ನಾಳ
- ಕಂಠರುತಿ – ಕಂಠಧ್ವನಿ
- ಕಂಠಸ್ಥ – ಕೊರಳಿನಲ್ಲಿರುವ, ಕಂಠಗತ
- ಕಂಠಾಭರಣ – ಕೊರಳ ಆಭರಣ
- ಕಂಠಿಕಾಬಂಧ- ಕೊರಳ ಆಭರಣವನ್ನು ತೊಡಿಸುವುದು
- ಕಂಠಿಕಾ(ಕೆ) – ಹಾರ, ಸರ, ಏಕಾವಳಿ
- ಕಂಠೀರವ – ಸಿಂಹ
- ಕಂಠೀರವವಾಹನೆ – ಸಿಂಹವಾಹನೆ, ದುರ್ಗೆ
- ಕಂಠೀರವಾಸಂದಿ – ಸಿಂಹಾಸನ
- ಕಂಡ – (ಖಂಡ) ತುಂಡು, ಭಾಗ
- ಕಂಡದಿಂಡೆ – ಮಾಂಸಖಂಡ
- ಕಂಡಪಟ – (ಕಾಂಡ ಪಟ) ತೆರೆ, ಪರದೆ
- ಕಂಡರಣೆಗೆಯ್ – ಕೆತ್ತನೆಯ ಕೆಲಸ ಮಾಡು
- ಕಂಡರಿಸು – ಕಂಡರಣೆಗೆಯ್
- ಕಂಡವಡ – ಕಂಡಪಟ
- ಕಂಡಿ – ನುಸುಳುವ ರಂಧ್ರ
- ಕಂಡಿಕೆ – ತುಂಡು
- ಕಂಡು – (ಖಂಡ) ಕಂಡಿಕೆ
- ಕಂಡುವೋಗು – ತುಂಡಾಗು
- ಕಂಡೂಯ(ನ) – ನವೆ, ತುರಿಕೆ
- ಕಂಡೂಲ – ನವೆ; ಕಜ್ಜಿ
- ಕಂಡೂಹೃತಿ- ನವೆಯನ್ನು ಹೋಗಲಾಡಿಸುವುದು
- ಕಂತಿ – ಜೈನಸನ್ಯಾಸಿನಿ
- ಕಂತಿಕೆ – ಕಂತಿ
- ಕಂತು – ಮನ್ಮಥ
- ಕಂತುಕ – ಚೆಂಡು
- ಕಂತುಮನ – ಕಾಮಭಾವ
- ಕಂತುಚಾಪ – ಕಾಮನಬಿಲ್ಲು
- ಕಂತುಚೇತ – ಕಾಮಾಸಕ್ತಿ
- ಕಂತುಮನ – ಕಾಮಾಪೇಕ್ಷೆ
- ಕಂತುಶರ – ಕಂತುಚಾಪ
- ಕಂತೆ – ಚಿಂದಿ ಬಟ್ಟೆ
- ಕಂತೆಗ – ಚಿಂದಿ ಬಟ್ಟೆ ಧರಿಸಿದವನು, ವಿರಾಗಿ
- ಕಂದ – ಮೋಡ; ಮಗು, ಚಿಕ್ಕವರನ್ನು
- ವಾತ್ಸಲ್ಯದಿಂದ ಸಂಬೋಧಿಸುವುದು
- ಕಂದಕ – ಅಗಳು, ಕೋಟೆಯ ಸುತ್ತಲಿನ ನೀರು ತುಂಬಿದ ಗುಂಡಿ
- ಕಂದರ – ಗುಹೆ; ಕೊರಳು; ಕಣಿವೆ
- ಕಂದರೋದರ – ಕಂದರಗಳನ್ನು ಒಳಗೊಂಡುದು
- ಕಂದರ್ಪ – ಮನ್ಮಥ
- ಕಂದರ್ಪಸಾಯಕ – ಕಾಮಬಾಣ
- ಕಂದರ್ಪಾರಿ – ಕಾಮವೈರಿ, ಶಿವ
- ಕಂದಲ್(ಲ) – ಮೊಳಕೆ, ಚಿಗುರು
- ಕಂದಲಿ – ಬಾವುಟ
- ಕಂದ(ಲ್)ಲು – ಮಣ್ಣಿನ ಗಡಿಗೆ
- ಕಂದಳ(ಳಿ) – ಮೊಳಕೆ
- ಕಂ(ಕೆಂ)ದಳ – ಒಂದು ಬಗೆಯ ಹೂ
- ಕಂದಳಿಕೆ – ನೆಲ ಬಾಳೆ ಗಿಡ
- ಕಂದಳಿತ -ಅರಳಿದ
- ಕಂದಳಿಸು – ಕುಡಿಯೊಡೆ
- ಕಂದಿಸು – ಬಾಡುವಂತೆ ಮಾಡು
- ಕಂದು – ಕಾಂತಿಹೀನವಾಗು; ಕೆಂಪು ಮಿಶ್ರ ಕಪ್ಪು ಬಣ್ಣ; ರುಬ್ಬುಗುಂಡು; ಸೆಜ್ಜೆ; ಹಸುಕರು; ಕಾವಲಿ
- ಕಂದುಕ – ಚೆಂಡು
- ಕಂದುಕಕೇಳಿ – ಚೆಂಡಾಟ
- ಕಂದುಕಕ್ರೀಡೆ – ಕಂದುಕಕೇಳಿ
- ಕದುಗೊರಲ – ಶಿವ
- ಕಂಧರ – ಕೊರಳು
- ಕಂಧರದ್ವಯಸ – ಕೊರಳು ತಾಕುವವರೆಗೆ
- ಕಂಧರಬಂಧ – ಹೆಗಲು
- ಕಂಪ – ಜೇಡಿಮಣ್ಣು; ನಡುಕ
- ಕಂಪಣ(ನ) – ಒಂದು ಆಯುಧ
- ಕಂಪನ – ನಡುಗುವಿಕೆ
- ಕಂ(ಗಂ)ಪಲ್ – ಕೆಸರು
- ಕಂಪಲರ್ – ವಾಸನೆ ಪಸರಿಸು
- ಕಂಪಿಡಿ – ಗಮಗಮಿಸು
- ಕಂಪಿತ – ಕಂಪನಗೊಂಡ
- ಕಂಪಿಸು – ನಡುಗು
- ಕಂಪು – ಸುಗಂಧ, ವಾಸನೆ
- ಕಂಪುಗು – ಸುಗಂಧ ಸೂಸು
- ಕಂಪುಗೊಳ್ – ಮೂಸಿನೋಡಿ
- ಕಂಪುವಳ – ಗಾಳಿ
- ಕಂಬನಿಗಿಡಿ -ಕಣ್ಣೀರ ಕಿಡಿ
- ಕಂಬಲಾಶ್ವತ – ಕಂಬಲ, ಅಶ್ವತ ಎಂಬ ಇಬ್ಬರು ನಾಗರು
- ಕಂಬಳ – ಕಂಬಳಿ, ಉಣ್ಣೆಯ ಹೊದಿಕೆ
- ಕಂಬಳತೀರ್ಥ – ಒಂದು ಕ್ಷೇತ್ರದ ಹೆಸರು
- ಕಂಬಿ – ಕುದುರೆ ಬಾಯಲ್ಲಿನ ಲೋಹದ ತುಂಡು;
- ಕಲಾಬತ್ತಿನ ಅಂಚು; ತಂತಿ
- ಕಂಬು – ನೀರು; ಶಂಖು
- ಕಂಬುಗಲ – ಶಂಖುವಿನಂತಹ ಕೊರಳು
- ಕಂಬುಗ್ರೀವೆ – ಶಂಖುವಿನಂತಹ ಕೊರಳುಳ್ಳವಳು
- ಕಂಭ – ಕಂಬ
- ಕಂಭಗಟ್ಟು – ಕಂಬದ ಸುತ್ತ ಮಾಡಿದ ಅಲಂಕಾರ
- ಕಂಭಶಕ್ತಿ – ಬೆಂಬಲ ಶಕ್ತಿ
- ಕಂಸಸೂದನ – ಕಷ್ಣ
- ಕಂಸಾಳ – (ಕಾಂಸ್ಯ+ತಾಳ) ಕಂಚಿನ ತಾಳ
- ಕಃ – ಯಾವನು
- ಕಕರಗೆಯ್ತ – ಕಕರವೆಂಬ ಮದ್ಯದ ಕಾರ್ಯ, ಅಂದರೆ ಅಮಲು
- ಕಕುದ – ಶಿಖರ; ಗೂಳಿಯ ಹಿಣಿಲು
- ಕಕುದ್ಮತ್ – ಎತ್ತು
- ಕಕುಭ – ದಿಕ್ಕು; ಮತ್ತಿಯ ಗಿಡ; ವೀಣೆಯ ಬುರುಡೆ
- ಕಕ್ಕಂಬು – ಒಂದು ಬಗೆಯ ಬಾಣ, ಮುಳ್ಳಿನ ಬಾಣ
- ಕಕ್ಕಡವಂದಿ – ದೊಡ್ಡ ಹಂದಿ
- ಕಕ್ಕಡೆ – ಗರಗಸದಂತೆ ಬಾಯುಳ್ಳ ಒಂದು ಬಗೆಯ ಆಯುಧ; ಗುದ್ದಲಿ
- ಕಕ್ಕಡೆಗಾಸಿಯಾಗು – ಕಕ್ಕಡೆಯ ಏಟಿನಿಂದ ಗಾಸಿಗೊಳ್ಳು
- ಕಕ್ಕರ – ಒಂದು ಬಗೆಯ ಮದ್ಯ; ಕೃಕರ, ಒಂದು
- ವಿಧದ ನೀರುಹಕ್ಕಿ
- ಕಕ್ಕರಗೆಯ್ತ – ಕಕ್ಕರವೆಂಬ ಮದ್ಯದ ಅಮಲಿನಿಂದ
- ಮಾಡುವ ಚೇಷ್ಟೆ
- ಕಕ್ಕರನೆ – ಕರಕರನೆ ಎಂಬ ಅನುಕರಣಶಬ್ದ
- ಕಕ್ಕರವ¿ಯಿಗೆ – ಮಾಸಲು ಬಣ್ಣದ ಬಟ್ಟೆ
- ಕಕ್ಕರಸಂಜೆ – ಬಣ್ಣಬಣ್ಣದ ಸಂಜೆ
- ಕಕ್ಕರಿ – ಮೋಸ, ವಂಚನೆ
- ಕಕ್ಕವಡೆ – ಮಲ್ಲಯುದ್ಧದ ಒಂದು ವರಸೆ
- ಕಕ್ಕು – ವಾಂತಿಮಾಡಿಕೊ; ಗರಗಸದ ಹಲ್ಲು
- ಕಕ್ಷ – ಕಂಕುಳು
- ಕಕ್ಷಪಾಲಿಕೆ – ಬಗಲ ಚೀಲ
- ಕಕ್ಷಪುಟ – ಕಕ್ಷ
- ಕಕ್ಷಮೂಲ – ಕಕ್ಷ
- ಕಕ್ಷ್ಯ – ಮನೆಯ ತೊಟ್ಟಿ
- ಕಕ್ಷ್ಯಾಂತರ – ಒಳ ಆವರಣ
- ಕಕ್ಷ್ಯಾವಕಾಶ – ಆವರಣದ ಹರಹು
- ಕಗ್ಗು – ಕಪ್ಪಾಗು; ಕಪ್ಪಿಡು
- ಕಚ – ತಲೆ ಕೂದಲು
- ಕಚಗ್ರಹ – ಕೂದಲನ್ನು ಹಿಡಿಯುವಿಕೆ
- ಕಚಗ್ರಹಂಗೆಯ್ – ಮುಡಿ ಹಿಡಿ
- ಕಚಬಂಧ – ಮುಡಿ, ತುರುಬು
- ಕಚಭಾರ – ಕೇಶರಾಶಿ
- ಕಚರಿ – ಅರಿದಾಳ
- ಕಚಾಕಚಿ – ಪರಸ್ಪರ ಕೂದಲು ಹಿಡಿದೆ ಎಳೆದಾಡು
- ಕಚಾವಳಿ – ಕೇಶರಾಶಿ
- ಕಚೌಘ – ಕೇಶರಾಶಿ
- ಕಚ್ಚುಟ – ಕೌಪೀನ
- ಕಚ್ಚೆ – ಪಂಚೆ ಅಥವಾ ಸೀರೆಯ ಚುಂಗು
- ಕಚ್ಚೆಯಕಟ್ಟು – ಸಿದ್ಧವಾಗು
- ಕಚ್ಛ- ಕಚ್ಚೆ
- ಕಚ್ಛಪ – ಆಮೆ
- ಕಚ್ಛಾವಾಲ – ಹಿಂಗಚ್ಚೆ
- ಕಜ್ಜ – ಕಾರ್ಯ
- ಕಜ್ಜಕ – ಲಾಳದ ಕಡ್ಡಿ
- ಕಜ್ಜಗಿ – ಕೆಲಸದಲ್ಲಿ ಗಟ್ಟಿಗ
- ಕಜ್ಜಲ(ಳ) – ಕಣ್ಣಿನ ಕಾಡಿಗೆ
- ಕಟ – ಆನೆಯ ಗಂಡಸ್ಥಳ; ದವಡೆ
- ಕಟಕ – ಸೈನ್ಯ; ಪಾಳೆಯ; ಕೈಬಳೆ; ರಾಜಧಾನಿ; ಬಿಲ್ಲಿನ ಹೆದೆ
- ಕಟಕತ್ವ – ಸೇನಾಧಿಪತ್ಯ
- ಕಟಕಾಚಾರ್ಯ – ಸೇನೆಯ ತರಬೇತಿದಾರ
- ಕಟಕೋಪಾಧ್ಯಾಯ – ಕಟಕಾಚಾರ್ಯ
- ಕಟವಾಯ್ – ಬಾಯ ಕೊನೆ
- ಕಟಾಕ್ಷ – ಕುಡಿನೋಟ
- ಕಟಾಕ್ಷವಿಕ್ಷೇಪ – ಕುಡಿನೋಟ; ಕಣ್ಣ ಸಂಜ್ಞೆ
- ಕಟಾಕ್ಷವೀಕ್ಷಣ – ಕಟಾಕ್ಷವಿಕ್ಷೇಪ
- ಕಟಾಕ್ಷಿಸು – ಓರೆನೋಟ ಬೀರು
- ಕಟಾರ(ರಿ) – ಕಿರುಗತ್ತಿ
- ಕಟಾಹ – ದೊಡ್ಡ ಪಾತ್ರೆ
- ಕಠಾರ – ಕಟಾರ
- ಕಟಿ – ಸೊಂಟ
- ಕಟಿತಟ – ಸೊಂಟ ಪ್ರದೇಶ
- ಕಟಿದಘ್ನ – ಸೊಂಟದವರೆಗೆ ಮುಳುಗುವ
- ಕಟಿಬಂಧ – ಉಡಿದಾರ; ಡಾಬು
- ಕಟಿವ – ಕಟಿ
- ಕಟಿಸೂತ್ರ – ಕಟಿಬಂಧ
- ಕಟು – ಕಾರವಾದ; ರಭಸದ
- ಕಟುತ್ರಯ – ಶುಂಠಿ, ಮೆಣಸು, ಹಿಪ್ಪಲಿಗಳ ಮಿಶ್ರಣ
- ಕಟುಕತ್ರಯ – ಕಟುತ್ರಯ
- ಕಟುರ – ಕಠೋರ
- ಕಟುವಿಪಾಕೆ – ಕಟು ರುಚಿಯನ್ನು ನೀಡುವವಳು
- ಕಟ್ಟಂಕ – ಬಿರುಸಾದ ಕಾಳಗ
- ಕಟ್ಟಂಕದಲ್ಲಣ – ದೊಡ್ಡ ಶೂರರನ್ನೂ
- ತಲ್ಲಣಗೊಳಿಸುವವನು
- ಕಟ್ಟಕಡೆ – ತೀರ ಕೊನೆ
- ಕಟ್ಟಚ್ಚರಿ – ಕಡಿದಾದ ಅಚ್ಚರಿ
- ಕಟ್ಟಣಕ – ಸುಂದರ, ಅದ್ಭುತ
- ಕಟ್ಟಣ್ಮು – ಕಡುಗಲಿತನ
- ಕಟ್ಟರಸ – ಪ್ರಬಲನಾದ ರಾಜ
- ಕಟ್ಟ(ಲೆ)ಳೆ -ತೂಕದ ಬಟ್ಟು; ನಿಯಮ; ಚಿನ್ನರತ್ನಗಳನ್ನು ತೂಗುವ ಒಂದು ಅಳತೆ
- ಕಟ್ಟಳ್ಕೆ – ಒತ್ತಾಗಿರುವುದು
- ಕಟ್ಟಾನೆ – ಶಕ್ತಿಶಾಲಿಯಾದ ಆನೆ
- ಕಟ್ಟಾಯ – ಕಠಿಣ ಸಂದರ್ಭ; ಖಂಡಿತವಾದ ಮಾತು; ಮಹಾ ಪರಾಕ್ರಮ
- ಕಟ್ಟಾಯಕಾರ್ತಿ – ಬಹು ಚೆಲುವೆ; ಅತಿ ಚತುರೆ
- ಕಟ್ಟಾಯತ – ಚೆನ್ನಾದ ಸಿದ್ಧತೆ
- ಕಟ್ಟಾಳ್ – ಮಹಾ ಶೂರ
- ಕಟಾಳ್ತನ – ಮಹಾ ಶೌರ್ಯ
- ಕಟ್ಟಿಗೆವಿಡಿ – ದಂಡಧಾರಿಯಾಗು
- ಕಟ್ಟಿದಿರ್ – ಕಟ್ಟಾ ಎದುರು
- ಕಟ್ಟಿಸು – ಬಂಧಿಸು; ಅಳವಡಿಸು
- ಕಟ್ಟು – ಬಂಧಿಸು; ತಡೆ ಹಾಕು; ತೊಡು; ಬಂಧನ; ಸಂಕೋಲೆ
- ಕಟ್ಟುಂಗವಳ – ಬುತ್ತಿ
- ಕಟ್ಟುಂಜುರಿಗೆ – ಸೊಂಟದಲ್ಲಿ ಕಟ್ಟಿಕೊಂಡ ಸುರಿಗೆ
- ಕಟ್ಟುಕಡಹ – ತೊಳಲಾಟ
- ಕಟ್ಟುಕಡಿ – ಆತಂಕಪಡು
- ಕಟ್ಟುಕಡೆ – ಮರುಗು; ಮರ್ಯಾದೆ ಮೀರು, ನಿಯಮೋಲ್ಲಂಘನೆ ಮಾಡು
- ಕಟ್ಟುಗ್ಗರ – ಕಟ್ಟುಗ್ರ
- ಕಟ್ಟುಬ್ಬಸ – ಬಹು ಉಬ್ಬಸ
- ಕಟ್ಟುಬ್ಬೆಗ – ಬಹು ಚಿಂತೆ
- ಕಟ್ಟುರ್ಬಟೆ – ಆಧಿಕ್ಯ; ರಭಸ
- ಕಟ್ಟುವಂಜರ – ಬಲವಾದ ಪಂಜರ; ನಾಗವೇದಿಕೆ
- ಕಟ್ಟುವಡು – ಕಟ್ಟನಿಂದ ಬಿಗಿ
- ಕಟ್ಟವಡೆ – ಕಟ್ಟುವಡು
- ಕಟ್ಟುವರ್ – ಕಠಿಣವಾಗು
- ಕಟ್ಟೆ – ಜಗಲಿ
- ಕಟ್ಟೆಗಟ್ಟು – ಅಣೆಯನ್ನು ಕಟ್ಟು
- ಕಟ್ಟೆಗ್ಗ – ಮಹಾ ಮೂರ್ಖ
- ಕಟ್ಟೆಲ್ವು – ಗಟ್ಟಿಯಾದ ಮೂಳೆ
- ಕಟ್ಟೇಕಾಂತ – ಕಡಿದು ಏಕಾಂತ, ಮಹಾ ರಹಸ್ಯ
- ಕಟ್ಟೇವ – ಕಡು ಬೇಸರ; ತಿರಸ್ಕಾರ
- ಕಠೋರ – ಬಿರುಸು; ಉಗ್ರ
- ಕಠೋರವಾಣಿ – ಗಡಸು ಮಾತು
- ಕಡಂಕು – ಕಬಂಧ, ಅಟ್ಟೆ
- ಕಡಂಗ – ಕಡಗ, ಒಂದು ಆಭರಣ
- ಕಡಂಗು – ಉತ್ಸುಕಗೊಳ್ಳು; ಆವೇಶಗೊಳ್ಳು; ಕಂದಕ
- ಕಡಂಗೊಳ್ – ಸಾಲ ತೆಗೆದುಕೊ
- ಕಡಂಬ – ಕದಂಬ ವೃಕ್ಷ, ಈಚಲ ಮರ
- ಕಡಂಬಡೆ – ಕಡಂಗೊಳ್
- ಕಡಂಬರಸ – ಈಚಲ ರಸ, ಹೆಂಡ
- ಕಡಂಮಾಡು – ಕಡಂಗೊಳ್
- ಕಡಕು – ಚೂರು ಕಲ್ಲು
- ಕಡಲ್ – ಸಮುದ್ರ
- ಕಡಲುರಿ – ಸಮುದ್ರದ ಬೆಂಕಿ, ಬಡಬಾಗ್ನಿ
- ಕಡಲೆ – ಚಣಕ
- ಕಡಲ್ಗಟ್ಟು – ಕಡಲಿನಂತೆ ಅಗಾಧವಾಗು
- ಕಡಲ್ಗಿಚ್ಚು – ಬಡಬಾಗ್ನಿ
- ಕಡಲ್ವರಿ – ಕಡಲಿನಂತೆ ಅಗಾಧವಾಗು
- ಕಡಲ್ವುಗು – ಸಮುದ್ರವನ್ನು ಹೊಗು
- ಕಡವಡ – ಡೇರೆ
- ಕಡವು – (ಕದಂಬ) ಕಡವಾಲದ ಮರ
- ಕಡವೆ – ಕಡವು, ಒಂದು ಜಾತಿಯ ಜಿಂಕೆ
- ಕಡಸು – ಕರು ಹಾಕದ ಹಸು
- ಕಡಾರ – ಕೊಪ್ಪರಿಗೆ
- ಕಡಾಹ – ಕಡಾರ
- ಕಡಿ – ಹಲ್ಲಿನಿಂದ ಕಚ್ಚು, ಕತ್ತರಿಸು; ತುಂಡು; (ಕಟಿ) ಸೊಂಟ
- ಕಡಿಕ – ಕಟುಕ
- ಕಡಿಕಂಡ – ತುಂಡು ತುಂಡು
- ಕಡಿಕಂಡಂಗೆಯ್ – ತುಂಡು ತುಂಡುಮಾಡು
- ಕಡಿಕೆಯ್ – ಕಡಿಕಂಡಂಗೆಯ್; ರಭಸಗೊಳ್ಳು
- ಕಡಿಕೊಂಬು – ಕತ್ತರಿಸಿದ ಕೊಂಬೆ
- ಕಡಿಗಡಿ – ಸೀಳು
- ಕಡಿಗೊಂಬುಗೊಳ್ – ಕತ್ತರಿಸಿದ ಕೊಂಬೆಯುಳ್ಳದ್ದಾಗು
- ಕಡಿತ – ಬಳಪದಿಂದ ಬರೆಯಲು ಕಪ್ಪುಲೇಪನವುಳ್ಳ ಬಟ್ಟೆ; ಪಗಡೆ ಚದುರಂಗಗಳ ಹಾಸು; ಚರ್ಮ; ಕಡತ, ಲೆಕ್ಕದ ಪುಸ್ತಕ
- ಕಡಿತಲೆ – ಕತ್ತಿ
- ಕಡಿತಲೆಯಾಳ್ – ಕತ್ತಿ ಹಿಡಿದ ಅಂಗರಕ್ಷಕ
- ಕಡಿದು – ತೀವ್ರವಾದ; ಉಗ್ರವಾದ
- ಕಡಿಯಣ – ಕಡಿವಾಣ
- ಕಡಿಯಿಸು – ಕತ್ತರಿಸು, ಖಂಡಿಸು
- ಕಡಿವಡೆ – ತುಂಡಾಗು
- ಕಡಿಹ – ಕತ್ತರಿಸುವಿಕೆ
- ಕಡು – ಹೆಚ್ಚಾಗಿ
- ಕಡುಕು – ಅಟ್ಟೆ, ಕಬಂಧ
- ಕಡುಕೆಂಕ – ಅತಿ ಕೆಂಪು
- ಕಡುಕೆಯ್ – ರಭಸಗೊಳ್ಳು; ಶೌರ್ಯ ತೋರು
- ಕಡುಗಂದಿ – ಕರುವಿನ ಮೇಲೆ ಪ್ರೀತಿಯಿಟ್ಟ ಹಸು
- ಕಡುಗಂದಿಕಲಿ – ಮಹಾ ಶೂರ
- ಕಡುಗಂದಿತನ – ಅತಿಪ್ರೀತಿ
- ಕಡುಗಂದು – ಅತಿಯಾಗಿ ಬಾಡು
- ಕಡುಗಂಪು – ತುಂಬ ಸುವಾಸನೆ
- ಕಡುಗಜ್ಜ – ದೊಡ್ಡ ಕೆಲಸ
- ಕಡುಗಟ್ಟ – ಕಡುಕಷ್ಟ
- ಕಡುಗಡಿದು – ತುಂಬ ವೇಗಶಾಲಿ
- ಕಡುಗಡುಪು – ತುಂಬ ರಭಸ
- ಕಡುಗರಿದು – ಕಡುಗಪ್ಪಾದುದು
- ಕಡುಗರ್ಪು – ತುಂಬ ಕಪ್ಪು
- ಕಡುಗಲಿ – ಮಹಾ ಶೂರ
- ಕಡುಗಲಿತನ – ಮಹಾ ಪರಾಕ್ರಮ
- ಕಡುಗವಿಲ – ಕಡು ಕಂದು ಬಣ್ಣ
- ಕಡುಗಾಡಿ – ಬಹು ಚೆಲುವು
- ಕಡುಗಾಯ್ – ಬಹಳ ಬಿಸಿಯಾಗು
- ಕಡುಗಾಯ್ಪು – ಬಹಳ ಬಿಸಿ
- ಕಡುಗಾಳಿ – ಬಿರುಗಾಳಿ
- ಕಡುಗಾಳುತನ – ಮಹಾ ಮೂರ್ಖತೆ; ಮಹಾ ಮೋಸ
- ಕಡುಗು – ಸಮರ್ಥನೆ
- ಕಡುಗುಣ್ಪು – ತುಂಬ ಆಳ
- ಕಡುಗುತ್ತ – ತೀವ್ರವಾದ ಕಾಯಿಲೆ
- ಕಡುಗುದುರೆ – ಬಿರುಗುದುರೆ
- ಕಡುಗೂರ್ – ತುಂಬ ಪ್ರೀತಿಸು
- ಕಡುಗೂರಿತು – ಬಹಳ ಕರಿತವಾದುದು
- ಕಡುಗೂರ್ಪ – ತುಂಬ ಪ್ರೀತಿಸುವವನು
- ಕಡುಗೂರ್ಪು – ಆಳವಾದ ಪ್ರೀತಿ; ಬಹಳ ಹರಿತ
- ಕಡುಗೂರ್ಮೆ – ಬಹಳ ಪ್ರೇಮ
- ಕಡುಗೆಂಟು – ಬಹು ದೂರ
- ಕಡುಗೆಂಪು – ಆಳವಾದ ಕೆಂಪು ಬಣ್ಣ
- ಕಡುಗೆಚ್ಚಲ್ – ತುಂಬಿದ ಕೆಚ್ಚಲು
- ಕಡುಗೆಯ್ಯ – ಕೈಚಳಕವುಳ್ಳವನು
- ಕಡುಗೆಲಸಿ – ಕಷ್ಟಪಟ್ಟು ಕೆಲಸಮಾಡುವವನು
- ಕಡುಗೆಲ್ಲಕಾರ್ತಿ – ಸದಾ ಗೆಲ್ಲುವವಳು
- ಕಡುಗೇಡಿ – ಬಹು ಕೇಡಿಗ
- ಕಡುಗೊಯ್ಯಲ್ – ಪೂರ್ತಿ ಕತ್ತರಿಸುವುದು
- ಕಡುಗೊರ್ಬು(ರ್ವು) – ತುಂಬ ಕೊಬ್ಬು, ಸೊಕ್ಕು
- ಕಡುಗೋಪ – ಬಹಳ ಕೋಪ
- ಕಡುಚಪಲ – ತುಂಬ ಚಂಚಲವಾಧ
- ಕಡುಚಳಿ – ತುಂಬ ಚಳಿ
- ಕಡುಚೆಲ್ವ – ಬಹಳ ಚೆಲುವ
- ಕಡುಚೆಲ್ವು – ತುಂಬ ಚೆಲುವು
- ಕಡುಚೆಲ್ವೆ – ಬಹು ಚೆಲುವೆ
- ಕಡುಜರ – ತೀಕ್ಷ್ಣ ಜ್ವರ
- ಕಡುಜವ – ತೀವ್ರ ವೇಗ
- ಕಡುಜಾಣ್ – ಬಹು ಜಾಣತನ
- ಕಡುಜಾಣ – ಯುಂಬ ಜಾಣ
- ಕಡುಜಾಣೆ – ಬಹು ಜಾಣೆ
- ಕಡುಟಕ್ಕು – ಮಹಾ ಮೋಸ
- ಕಡುತಪ – ಕಠಿಣ ತಪಸ್ಸು
- ಕಡುದಣ್ಪು – ತುಂಬ ತಂಪು
- ಕಡುದರ್ಪ – ಬಹು ಗರ್ವ
- ಕಡುದಿಟ – ಪೂರ್ಣ ಸತ್ಯ
- ಕಡುದುಗುಡ – ಆಳವಾದ ದುಃಖ
- ಕಡುದೇಸಿವೆಣ್ – ಬಹು ಚೆಲುವೆಯಾದ ಹೆಣ್ಣು
- ಕಡುನಂಜು – ತೀಕ್ಷ್ಣ ವಿಷ
- ಕಡುನಂಟ – ಆತ್ಮೀಯ ಬಂಧು
- ಕಡುನನ್ನಿ – ಪೂರ್ಣ ಸತ್ಯ
- ಕಡುನಾಣ್ – ಬಹು ನಾಚಿಕೆ
- ಕಡುನಿಡಿದುಗೊಳ್ – ಬಹು ನೀಳವಾಗು
- ಕಡುನಿಮಿರ್ – ಬಹು ಉದ್ದವಾಗು
- ಕಡುನೀರಡಸು – ಬಹು ಬಾಯಾರಿಕೆಗೊಳ್ಳು
- ಕಡುನುಡಿ – ಕಟು ಮಾತು
- ಕಡುನುಣ್ಪು – ಬಹು ನುಣುಪು
- ಕಡುನೇಹ – ತುಂಬ ಪ್ರೀತಿ
- ಕಡುನೋವು – ಆಳವಾದ ನೋವು
- ಕಡುಪಗಲ್ – ಏರಿದ ಹಗಲು ಕಡಿಮೆಯಾಗು
- ಕಡುಪು – ಉಗ್ರತೆ; ಪರಾಕ್ರಮ
- ಕಡುಪುಗಿಡಿಸು – ಉಗ್ರತೆಯನ್ನು ಕಡಿಮೆಮಾಡು
- ಕಡುಪುಗೆಯ್ – ಸಾಹಸ ಮಾಡು
- ಕಡುಪೆಂಪು – ಅತಿಶಯ ಹಿರಿಮೆ
- ಕಡುಪೊಲ್ಲ – ಬಲು ಕೆಟ್ಟದ್ದು
- ಕಡುಬಲ್ಲಿದ – ಬಹು ಬಲಶಾಲಿ; ಬಹು ಶ್ರೀಮಂತ
- ಕಡುಬಿನ್ನಣಂಬಡೆ – ಬಹಳ ಕೌಶಲವನ್ನು ಹೊಂದು
- ಕಡುಬಿಸುಪು – ತುಂಬ ಬಿಸಿ
- ಕಡುಮುಳಿ – ಬಹಳವಾಗಿ ಕೋಪಿಸಿಕೊ
- ಕಡುಮುಳಿಸು – ಕಡುಗೋಪ
- ಕಡುಮೆ – ಉಗ್ರತೆ
- ಕಡುಮೋಹ – ಅತಿ ಮೋಹ
- ಕಡುಮೋಹಿತ – ಅತಿಮೋಹಕ್ಕೊಳಗಾದವನು
- ಕಡುರಯ್ಯ – ತುಂಬ ಸುಂದರ
- ಕಡುರಾಗಿ – ತುಂಬ ಮೋಹವುಳ್ಳವನು
- ಕಡುವಂದೆ – ದೊಡ್ಡ ಹೇಡಿ
- ಕಡುವಿಣ್ಣಿತ್ತು – ತುಂಬ ಭಾರವಾದುದು
- ಕಡುವಿಣ್ಪು – ಬಹು ಭಾರ
- ಕಡುವಿತ್ತೆಗ – ಬಹು ನಿಪುಣ
- ಕಡುವಿನ್ನಣ – ಮಿಗಿಲಾದ ಕೌಶಲ
- ಕಡುವಿನ್ನನೆ – ಬಹಳ ಖಿನ್ನತೆಯಿಂದ
- ಕಡುವಿಲ್ಲ – ಗಟ್ಟಿಗನಾದ ಬಿಲ್ಲುಗಾರ
- ಕಡುವಿಸಿಲ್ – ಬಿರುಬಿಸಿಲು
- ಕಡುವೆಂಕೆ – ಪ್ರಖರ ಬೆಂಕಿ
- ಕಡುವೆಟ್ಟಿತ್ತು – ಬಹು ಕಠಿಣವಾದುದು
- ಕಡುವೆರ್ಚು – ಬಹು ಏಳಿಗೆ
- ಕಡುವೆಸ – ದೊಡ್ಡ ಕೆಲಸ
- ಕಡುವೆಸನಿಗ – ಬಿಡಿಸಲಗದ ದುಶ್ಚಟವುಳ್ಳವನು
- ಕಡುವೇಗ – ಅಧಿಕ ವೇಗ
- ಕಡುವೇಟಗಾರ್ತಿ – ಉತಕ್ಟ ಪ್ರೇಮಿಯಾದವಳು
- ಕಡುವೇನೆ – ಬಹಳ ನೋವು
- ಕಡುವೊಂಗು – ತೀರ ಸಡಗರಿಸು
- ಕಡುವೊದಗು – ಜೋರಾಗಿ ಉಂಟಾಗು
- ಕಡುವೊಸತು – ಹೊಚ್ಚ ಹೊಸದು
- ಕಡುಸಂತಸ – ಬಹಳ ಸಂತೋಷ
- ಕಡುಸಾರೆ – ತೀರ ಹತ್ತಿರ
- ಕಡುಸಿಗು – ತುಂಬ ನಾಚಿಕೆ
- ಕಡುಸೇದೆ – ತುಂಬ ಬಳಲಿಕೆ
- ಕಡುಸೊರ್ಕು – ತುಂಬ ಮದ(ವೇರು)
- ಕಡುಸೋಲ – ದೊಡ್ಡ ಸೋಲು
- ಕಡೆ – ಮಥಿಸು; ಕೆತ್ತು; ಕೊನೆ; ರಂಗೋಲಿ
- ಕಡೆಗಣ್ – ಕಟಾಕ್ಷ
- ಕಡೆಗಣಿಸು -ಅಲಕ್ಷ್ಯಮಾಡು
- ಕಡೆಗಣ್ಮು – ಕಡೆಗಣಿಸು
- ಕಡೆಗಾಣ್ – ಕೊನೆಗಾಣು
- ಕಡೆಗೋಡಿವರಿ – ಕೋಡಿ ಬೀಳು
- ಕಡೆಗೋಡಿವರಿಯಿಸು – ಕೋಡಿ ಬೀಲುವಂತೆ ಮಾಡು
- ಕಡೆಗೋಡಿವಿಡು – ಕಡೆಗೋಡಿವರಿಯಿಸು
- ಕಡೆನೇಣ್ – ಕಡೆಗೋಲಿನ ಹಗ್ಗ
- ಕಡೆಪ – ಕಡೆಯುವಿಕೆ; ಕೆತ್ತುವಿಕೆ
- ಕಡೆಪಟ್ಟು – ಕೊನೆಯದಾಗಿ
- ಕಡೆಪಡು – ಅಲಂಕೃತಗೊಳ್ಳು
- ಕಡೆಮುಟ್ಟು – ಕೊನೆ ಮುಟ್ಟು
- ಕಡೆಯಾಣಿ – ಅಪರಂಜಿ
- ಕಡೆಯಿಕ್ಕು – ಅಲಂಕರಿಸು
- ಕಡೆಯಿಸು – ಮಥಿಸುವಂತೆ ಮಾಡು
- ಕಡೆಯುಡಿ – ಕೊನೆಯ ಭಾಗ
- ಕಡೆಯೆಯ್ದಿಸು – ಕೊನೆಗಾಣಿಸು
- ಕಡೆವಗಲ್ – ಹಗಲ ಕೊನೆ, ಸಂಜೆ
- ಕಡೆವಾಯ್ – ಕಡೆ+ಪಾಯ್, ಕೊನೆ ಮುಟ್ಟು;
- ಕಟವಾಯಿ, ಬಾಯಿಯ ಕೊನೆ
- ಕಡೆವುಟ್ಟು – ಕಡೆಯಲ್ಲಿ ಹುಟ್ಟಿದ ಮಗು
- ಕಡೆವೊನ್ – ಪುಟವಿಟ್ಟ ಚಿನ್ನ
- ಕಡೆಸಲ್ – ಕೊನೆ ಮುಟ್ಟು; ಸಾಧ್ಯವಾಗಿಸು
- ಕಡೆಸಿಡಿಲ್ – ಹೊರಕ್ಕೆ ಹಾರು
- ಕಡೆಸಿಲ್ಕು – ಕೊನೆಗೆ ಉಳಿ
- ಕಡ್ಡ – ದಿಟ್ಟತನ; ಮತ್ಸರ; ವೈರಿ
- ಕಡ್ಡಗೂಂಟಣಿ – ದಿಟ್ಟೆಯಾದ ಕುಂಟಣಿ
- ಕಡ್ಡಣ – ಜಡೆಗಟ್ಟಿದ ಕೂದಲು
- ಕಡ್ಡವಾರ – ಕೆಟ್ಟ ವಾರ; ಶನಿವಾರ; ವಡ್ಡವಾರ
- ಕಡ್ಡು – ಗಡ್ಡ
- ಕಡ್ಡುಗೊಳ್ – ರೋಷಗೊಳ್ಳು
- ಕಡ್ಡುದರ್ – ವಿರಸಮಾಡು
- ಕಡ್ಡೆ – ದುಷ್ಟೆ
- ಕಣಕ್ – ಅನುಕರಣ ಶಬ್ದ
- ಕಣಕಣಿಸು – ಕಣಕಣ ಎಂದು ಶಬ್ದಮಾಡು
- ಕಣಕಾಲ್ – ಮಂಡಿಯಿಂದ ಪಾದದವರೆಗಿನ ಭಾಗ
- ಕಣಕೆನೆವೋಪಂಬು – ಕಣಕ್ ಎಂದು ಹೋಗುವ ಬಾಣ
- ಕಣಯ – ಸೀರೆಯ ಉಡಿಯ ಗಂಟು; ನೀವಿಬಂಧ
- ಕಣಿ – (ಖನಿ) ಗಣಿ
- ಕಣಿಕಾಲ್ – ಜಂಘೆ
- ಕಣಿಕೆ – ಚೂರು, ತುಂಡು; ಹನಿ
- ಕಣಿಕೈ – ಮುಂಗೈ
- ಕಣಿಶ – ತೆನೆ
- ಕಣೆ – ಬಾಣ; ಕೊನೆ
- ಕಣೆಗೊಳ್ – ಬಾಣವನ್ನು ತೆಗದುಕೊ
- ಕಣೆದೊಡು – ಬಾಣ ಹೂಡು
- ಕಣೆವೋಗು – ದಿಂಡು ತುಂಡಾಗಿಹೋಗು
- ಕಣ್ಕೆ(ಣ್ಗೆ)ತ್ತು – ಕಣ್ಣು ಮಿಟುಕಿಸು; ಸನ್ನೆ ಮಾಡು
- ಕಣ್ಗಾಣ್ – ಕಣ್ಣಿಗೆ ಕಾಣಿಸು
- ಕಣ್ಗಾಪು – ಕಣ್ಣ ಕಾವಲು
- ಕಣ್ಗುಡಿತೆ – ಬೊಗಸೆಗಣ್ಣು
- ಕಣ್ಗೆಡು – ನೋಡಿವ ಶಕ್ತಿ ಕುಂದು
- ಕಣ್ಗಿಡಿ – ಕಣ್ಣಿನ ಕಿಡಿ; ಕೋಪದ ಕಿಡಿ
- ಕಣ್ಗುಬ್ಬೆ – ಕಣ್ಣ ಗುಡ್ಡೆ
- ಕಣ್ಗೆಯ್ – ಕಣ್ಣು ಮುಚ್ಚು, ನಿದ್ದೆಮಾಡು
- ಕಣ್ಗೆವರ್ – ಚೆನ್ನಾಗಿ ಕಾಣು, ಆಕರ್ಷಿಸು
- ಕಣ್ಗೊಳ್ – ಕಣ್ಣು ಸೆಳೆ, ಸುಂದರವಾಗಿ ಕಾಣು
- ಕಣ್ಗೊಳಿಸು – ಆಕರ್ಷಿಸು
- ಕಣ್ಚಲ್ಲ – ಚೆಲ್ಲುನೋಟ
- ಕಣ್ಣಡಿಗ – ಪಾದದಲ್ಲಿ ಕಣ್ಣುಳ್ಳವನು, ಶಿವ
- ಕಣ್ಣಪಾಪೆ – ಕಣ್ಣಿನ ಗುಡ್ಡೆ
- ಕಣ್ಣಲಾಗೆನೆ – ಕ್ಷಣ ಮಾತ್ರದಲ್ಲಿ
- ಕಣ್ಣ ಹಕ್ಕ – ಕಣ್ಣಿನ ಜಿಬುರು
- ಕಣ್ಣಾಗಿರು – ತೀವ್ರವಾಗಿ ಬಯಸು
- ಕಣ್ಣಾರ್ – ಕಣ್ಣಿಗೆ ತೃಪ್ತಿಯಾಗು
- ಕಣ್ಣಾಲಿ – ಕಣ್ಣ ಗುಡ್ಡೆ
- ಕಣ್ಣಿ – ಹಗ್ಗ, ಕುಣಿಕೆ
- ಕಣ್ಣಿಡು – ದೃಷ್ಟಿಸಿ ನೋಡಿ
- ಕಣ್ಣಿವಲೆ – ಕಣ್ಣಿಯ (ದಾರದ) ಬಲೆ
- ಕಣ್ಣೀರ್ – ಕಂಬನಿ
- ಕಣ್ಣುರಿ – (ಶಿವನ) ಕಣ್ಣಿನ ಉರಿ
- ಕಣ್ಣುಳ್ಕು – ಕೋರೈಸು
- ಕಣ್ದೊಡವು – ಕಣ್ಣ ತೊಡವು
- ಕಣ್ದೊಳಲ್ – ಕಣ್ಣು ತೊಳಲು, ಕಂಗೆಡು
- ಕಣ್ಪಚ್ಚ – ಕಣ್ಣ ಅಲಂಕಾರ
- ಕಣ್ಪೀಲಿ – ನವಿಲುಗರಿ
- ಕಣ್ಬಡಿಗ – ಕಣ್ತಪ್ಪಿಸಿ ತಿರುಗುವವನು; ಮೋಸಗಾರ
- ಕಣ್ಬಡು – ಆಸೆಪಡು
- ಕಣ್ಬನಿ – ಕಂಬನಿ
- ಕಣ್ಬರಿ(ವು) – ಕಣ್ಣಿನ ಹರವು
- ಕಣ್ಬರಿಗೆಡು – ವಿವೇಕವನ್ನು ಕಳೆದುಕೊ
- ಕಣ್ಬರಿವು – ಕಣ್ಬರಿ
- ಕಣ್ಬಸ – ಕಣ್ಣಿನ ಅಪೇಕ್ಷೆ; ಬಯಕೆ
- ಕಣ್ಬಸಿವು – ಕಣ್ಣಿನ ಹಸಿವು
- ಕಣ್ಬೀಡು – ಕಣ್ಣು ಬಿಡುವಿಕೆ
- ಕಣ್ಬೀಲಿ – ಕಣ್ಣುಳ್ಳ ಪೀಲಿ, ನವಿಲ ಗರಿ
- ಕಣ್ಬೆಳಗು – ಕಣ್ಣ ಬೆಳಕು, ಕಾಂತಿ
- ಕಣ್ಬೇಟ – ಕಣ್ಣೊಲುಮೆ; ಮೊದಲ ನೋಟದ ಪ್ರೇಮ
- ಕಣ್ಬೇಟಂಗೊಳ್ – ನೋಟದಿಂದ ಮೋಹವಶನಾಗು
- ಕಣ್ಬೇನೆ – ಕಣ್ಣ ನೋವು
- ಕಣ್ಬೇಹತನ – ನೋಟದಿಂದ ಉಂಟಾಗುವ ಬಯಕೆ
- ಕಣ್ಬೊಣರ್ – ಕಣ್+ಪೊಣರ್, ಕಣ್ಣ ಜೋಡಿ
- ಕಣ್ಬೊಲ – ಕಣ್ಣಿಗೆ ಕಾಣುವಷ್ಟು ದೂರ, ದೃಷ್ಟಿಪಥ
- ಕಣ್ಬೊಳೆಪು – ಕಣ್ಣಿನ ಕಾಂತಿ
- ಕಣ್ಮಲರ್ – ಹೂವಿನಂತಹ ಕಣ್ಣು
- ಕಣ್ಮಲೆ – ಕಣ್ಣು ಕೆರಳಿಸು; ಮನಸ್ಸಿಗೆ ಹೊಳೆ
- ಕಣ್ಮಾಯ – ಕಣ್ಕಟ್ಟು, ಇಂದ್ರಜಾಲ
- ಕಣ್ಮುಚ್ಚು – ಕಣ್ಣು ಮುಚ್ಚು; ನಿದ್ರಿಸು; ಸಾಯು
- ಕಣ್ಸನ್ನೆ – ಕಣ್ಣಿನಿಂದ ನೀಡುವ ಸೂಚನೆ
- ಕಣ್ಸವಿ – ಕಣ್ಣಿಗೆ ಸವಿಯಾದುದು
- ಕಣ್ಸೆಡೆ – ನೋಡಿ ಹೆದರು
- ಕಣದಸೋಲ್ – ಕಣ್ಣು ಸೋತುಹೋಗು; ಆಕರ್ಷಣೆಗೊಳ್ಳು
- ಕಣ್ಸೋಲ – ಕಣ್ಣು ಆಕರ್ಷಣೆಗೊಳ್ಳುವ ಮೂಲಕಸೋಲುವುದು
- ಕತ – ಕಾರಣ; ದುಃಖ
- ಕತಕಬೀಜ – ಚಿಲ್ಲದ ಬೀಜ; ಕದಡುನೀರನ್ನು ತಿಳಿಗೊಳಿಸುವ ಬೀಜ
- ಕತಿಪಯ – ಕೆಲವು; ಹಲವು
- ಕತಿಯಿಸು – ಕಥಿಸು, ನಿರೂಪಿಸು
- ಕತೆ – ನಿರೂಪಿತ ಘಟನೆ
- ಕತ್ತರಿ – ಗಾಣಿಗ ಕುಳಿತುಕೊಳ್ಳುವ ಗಾಣದ ಭಾಗ
- ಕತ್ತರಿಗೊಳ್ – ಕತ್ತರಿಯಂತೆ ಹಿಡಿ
- ಕತ್ತರಿವಾಣಿ – ಕರ್ತರಿ+ಪಾನೀಯ, (ಮುಟ್ಟಿದರೆ) ಕತ್ತರಿಸುವ ನೀರು
- ಕತ್ತರಿವೀಲಿ- ಕತ್ತರಿಯಂತೆ ಧರಿಸಿರುವ ನವಿಲುಗರಿ
- ಕತ್ತರಿವೆಸ -ಕತ್ತರಿಯ ಕೆಲಸ; ಕತ್ತರಿಸುವುದು
- ಕತ್ತಳಿಕೆ – ಕಿರುಗತ್ತಿ, ಕಠಾರಿ
- ಕತ್ತಿ – ಖಡ್ಗ
- ಕತ್ತಿಗೆ – (ಕತ್ರ್ರಿಕಾ) ಕೈ ಮಚ್ಚು; ಕತ್ತಿ
- ಕತ್ತುರಿ – ಕಸ್ತೂರಿ, ಒಂದು ಸುಗಂಧ ದ್ರವ್ಯ
- ಕತ್ತುರಿಗದಡು – ಕಸ್ತೂರಿಯನ್ನು ಕದಡಿ ಮಾಡಿದ ಸುಗಂಧ
- ಕತ್ತುರಿನೀರ್ – ಕಸ್ತೂರಿ ಬೆರಸಿದ ನೀರು
- ಕತ್ತುರಿಬೊಜಂಗ – ಕಸ್ತೂರಿ ಲೇಪಿಸಿಕೊಂಡ ವಿಟ
- ಕತ್ತುರಿಬೊಟ್ಟು – ಕಸ್ತೂರಿ ತಿಲಕ
- ಕತ್ತುರಿಮಿಗ – ಕಸ್ತೂರಿ ಮೃಗ
- ಕತ್ತುರಿವಳೆ – ಕಸ್ತೂರಿ ಬಳೆ; ಕರಿ ಬಳೆ
- ಕತ್ತುರಿವೆಕ್ಕು – ಪುನುಗಿನ ಬೆಕ್ಕು
- ಕಥಕ – ಕತೆ ಹೇಳುವವನು; ಒಂಟೆ
- ಕಥಾಂತರ – ಮತ್ತೊಂದು ಕತೆ
- ಕಥಾನಾಯಕ – ಕತೆಯ ಮುಖ್ಯ ಪಾತ್ರ
- ಕಥಾನ್ವಯ – ಕತೆಯ ವಿನ್ಯಾಸ
- ಕಥಾಪತಿ – ಕತೆಯ ನಾಯಕ
- ಕಥಾಭಿತ್ತಿ – ಕತೆಯ ಹಿನ್ನೆಲೆ, ಕತೆಯ ವಸ್ತು
- ಕಥಾವತಾರ – ಕತೆಯ ಆರಂಭ
- ಕಥಿತ – ಹೇಳಲಾದ
- ಕಥಿಸು – ನಿರೂಪಿಸು
- ಕಥೆ – ಕತೆ
- ಕದಂಬ – ಈಚಲ ಮರ; ಗುಂಪು, ಸಮೂಹ
- ಕದಂಬಕ – ಗುಂಪು, ಸಮೂಹ
- ಕದಂಬದಂಬುಲ – ಸುಗಂಧಭರಿತ ತಂಬುಲ
- ಕದಂಬವೆಳಗು – ವಿವಿಧ ಬಣ್ಣಗಳ ಮಿಶ್ರ ಕಾಂತಿ
- ಕದಕದಪು – ನಡುಕ
- ಕದಕದಿಸು – ನಡುಗು
- ಕದಡು – ಕಲಕು; ರಾಡಿ, ಬಗ್ಗಡ
- ಕದಡುನೀರು – ಬಗ್ಗಡಗೊಂಡ ನೀರು
- ಕದನಕ್ಷೇತ್ರ – ಯುದ್ಧರಂಗ
- ಕದನತ್ರಿಣೇಥ್ರ – ಯುದ್ಧದಲ್ಲಿ ರುದ್ರನಂತೆ ಪ್ರಚಂಡ
- ಕದನಾನಕ – ರಣಭೇರಿ
- ಕದರ್ಥನೆ – ಕಾಟ
- ಕದರ್ಥಿಸು – ಪೀಡಿಸು
- ಕದಲೆಗದಿರ್ – ಪ್ರಖರ ಕಿರಣ
- ಕದಲೊಡೆ – ತೆನೆಬಿಡು
- ಕದಳ – ಬಾಳೆ ಗಿಡ
- ಕದಳಿಕೆ – (ಕದಲಿಕಾ) ಪತಾಕೆ
- ಕದಳೀಗರ್ಭ – ಬಾಳೆಯ ಮೋತೆಯ ಒಳಭಾಗ
- ಕದಳೀಘಾತ – ಒಮ್ಮೆಲೇ ಬೀಳುವಂತೆ ಬಾಳೆಮರಕ್ಕೆ ಹೊಡೆದ ಏಟು; (ಜೈನ) ಅಕಾಲಮರಣ;
- ಕದಳೀದಳ – ಬಾಳೆಯ ಎಲೆ
- ಕದಳೀಷಂಡ – ಬಾಳೆಯ ತೋಟ
- ಕದಿರ್ – ಕಿರಣ, ತೆನೆ, ನೂಲು ತೆಗೆಯುವ ಸಾಧನ
- ಕದಿರ್ಗಂಪು – ತೆನೆಗಳ ನರುಗಂಪು
- ಕದಿರ್ಜೊನ್ನ – ಕಾಂತಿಯುಕ್ತ ಬೆಳುದಿಂಗಳು
- ಕದುಪು – ಗುಂಪು
- ಕದುಷ್ಣ – ಉಗುರು ಬೆಚ್ಚಗಿರುವ
- ಕನಕಪೀಠ – ಚಿನ್ನದ ಪೀಠ
- ಕನಕ – ಚಿನ್ನ; ದತ್ತೂರಿ ಗಿಡ
- ಕನಕಗಿರಿ – ಚಿನ್ನದ ಬೆಟ್ಟ; ಮೇರು ಪರ್ವತ
- ಕನಕಾಚಲ – ಕನಕಗಿರಿ
- ಕನಕಾವಳಿ – (ಜೈನ) ಒಂದು ವರ್ಷದಲ್ಲಿ ಎಂಬತ್ತಮೂರು ಬಾರಿ ಉಪವಾಸವಿರುವ ವ್ರತ
- ಕನತ್ – ಹೊಳೆಯುವ
- ಕನರ್ – ಒಗರು ರುಚಿ
- ಕನರ್ಗಂಪು – ಒಗರು ವಾಸನೆ
- ಕನರ್ಗಾಯ್ – ಕಸಗಟ್ಟೆ ಕಾಯಿ
- ಕನರ್ಗೊನರ್ – ಎಳೆಯ ಚಿಗುರು
- ಕನಲ್ – ಸಿಟ್ಟುಗೊಳ್ಳು, ಕೋಪಿಸಿಕೊ; ಕೋಪ
- ಕನಲಿಸು – ಕೆರಳಿಸು, ಸಿಟ್ಟಿಗೆಬ್ಬಿಸು
- ಕನಲ್ಕೆ – ಕೋಪ
- ಕನಲ್ಗಿಡಿ – ನಿಗಿನಿಗಿ ಕೆಂಡ
- ಕನಲ್ಚು – ಕನಲಿಸು
- ಕನವರಿಸು – ನಿದ್ದೆಯಲ್ಲಿ ಮಾತಾಡು
- ಕನಸು – ಸ್ವಪ್ನ; ಕಲ್ಪನೆ
- ಕನಸುಗಾಣು – ಕನಸು ಕಾಣು; ಕಲ್ಪಿಸಿಕೊ
- ಕನಿ – ಪ್ರಕಾಶಿಸು
- ಕನೀಯ – ಕಿರಿಯ, ತಮ್ಮ; ನೀಚ
- ಕನ್ನ – ಗೋಡೆಯಲ್ಲಿ ಮಾಡುವ ರಂಧ್ರ
- ಕನ್ನಗಳ್ಳ – ಕನ್ನ ಹಾಕಿ ಕದಿಯುವವನು
- ಕನ್ನಡ – ಕನ್ನಡ ನುಡಿ, ಕನ್ನಡ ನಾಡು
- ಕನ್ನಡವಕ್ಕಿ – ಗಿಳಿ
- ಕನ್ನಡಿ – ಪ್ರತಿಬಿಂಬ ಕಾಣಿಸುವ ಸಾಧನ
- ಕನ್ನಡಿಗ – ಕನ್ನಡ ನಾಡಿನವನು
- ಕನ್ನಡಿಗಿತಿ – ಕನ್ನಡ ನಾಡಿನವಳು
- ಕನ್ನಡಿವಿಡಿ – ನೋಡಿಕೊಳ್ಳಲು ಕನ್ನಡಿಯನ್ನು ಹಿಡಿ
- ಕನ್ನಡಿಸು – ಕನ್ನಡದಲ್ಲಿ ಹೇಳು; ಪ್ರತಿಫಲಿಸು
- ಕನ್ನಮಿಕ್ಕು – ಕಳವಿಗಾಗಿ ಕನ್ನ ಹಾಕು
- ಕನ್ನವಟ್ಟ – ಮದ್ದಳೆಯ ಧರ್ಮವಿರುವ ಭಾಗ
- ಕನ್ನವಡ – ತೆರೆ, ಕನ್ನಡಿ ಗೋಡೆ
- ಕನ್ನವುರ – (ಕರ್ಣಪೂರ) ಕಿವಿಯ ಆಭರಣ
- ಕನ್ನಸ – ಮಗ್ಗುಲು
- ಕನ್ನೆ – ಕನ್ಯೆ, ಮದುವೆಯಾಗದ ಹುಡುಗಿ
- ಕನ್ನೆಗೋಸಾಸ – ಕನ್ಯಾಗೋಸಹಸ್ರ, ಕನ್ಯೆಯರ ಮೇಲೆ ಮತ್ತು ಗೋವುಗಳ ಮೇಲೆ ಮಾಡುವ ಸಾಹಸ
- ಕನ್ನೆತನ – ಕನ್ಯಾವಸ್ಥೆ
- ಕನ್ನೆವಾ(ಮಾ)ಡ – ಕನ್ನಿಕೆಯರ ವಾಸಸ್ಥಾನ, ಅಂತಃಪುರ
- ಕನ್ನವೇಟ – ಕನ್ಯೆಯ ಬೇಟ
- ಕನ್ನೆಸಾಸ – ಕನ್ಯೆ ಮಾಡುವ ಸಾಹಸ
- ಕನ್ನೈಸು – ಕಪ್ಪಾಗು
- ಕನ್ಯಕೆ – ಕನ್ಯೆ
- ಕನ್ಯಾಬ್ರತ – ಕನ್ಯೆಯಾಗಿಯೇ ಉಳಿಯುವ ವ್ರತ
- ಕನ್ಯಾರತ್ನ – ಶ್ರೇಷ್ಠ ಕನ್ಯೆ
- ಕನ್ಯಾವ್ರತ – ಕನ್ಯಾಬ್ರತ
- ಕಪಟ – ಮೋಸ
- ಕಪಟಕ್ರಿಯೆ – ಮೊಸದ ಕೃತ್ಯ
- ಕಪಟಪಟು – ಮೋಸದಲ್ಲಿ ನಿಷ್ಣಾತ
- ಕಪಟಶಬರ – ಶಬರನ ವೇಷತೊಟ್ಟವನು
- ಕಪರ್ದ – ಕವಡೆ, ಜಡೆ
- ಕಪರ್ದಿ – ಶಿವ
- ಕಪಾಲಪಾಣಿ – ಶಿವ
- ಕಪಾಲಿನಿ – ಕೈಲಾದಲ್ಲಿರುವ ಶಕ್ತಿದೇವತೆಯರಲ್ಲಿ ಒಬ್ಬಳು
- ಕಪಿಂಜಲ – ಚಾತಕ ಪಕ್ಷಿ; ಒಬ್ಬ ಋಷಿಕುಮಾರನ ಹೆಸರು
- ಕಪಿಕೇತು – ವಾನರಧ್ವಜ, ಅರ್ಜುನ; (ಜೈನ) ಬಾವುಟದಲ್ಲಿ ಕಪಿ ಲಾಂಛನವುಳ್ಳವರು; ಸುಗ್ರೀವಾದಿಗಳು
- ಕಪಿತ್ಥ – ಬೇಲದ ಹಣ್ಣು
- ಕಪಿಧ್ವಜ – ಕಪಿಕೇತು
- ಕಪಿಧ್ವಜಕುಲ – ಕಪಿಧ್ವಜವನ್ನು ಹೊಂದಿದವರ ಕುಲ
- ಕಪಿರಾಜಧ್ವಜ – ಕಪಿಕೇತು
- ಕಪೋತ – ಪಾರಿವಾಳ; ಒಂದು ಬಗೆಯ ಮರ
- ಕಪೋತಕ – ಪಾರಿವಾಳದ ಮರಿ
- ಕಪೋತಪಾಲಿಕೆ – ಪಾರಿವಾಳದ ಗೂಡು
- ಕಪೋತಲೇಶ್ಯೆ – (ಜೈನ) ಕರ್ಮಸಂಬಂಧವಾದ ಬೂದುಬಣ್ಣ; ಆರು ಲೇಶ್ಯೆಗಳಲ್ಲಿ ಒಂದು
- ಕಪೋತಿಕೆ – ನಾಟ್ಯದಲ್ಲಿ ಒಂದು ಹಸ್ತವಿನ್ಯಾಸ
- ಕಪೋಲ – ಕೆನ್ನೆ
- ಕಪೋಲಪತ್ರ – ಮಕರಿಕಾ ಪತ್ರ; ಕೆನ್ನೆಯ ಮೇಲೆ
- ಬರೆದುಕೊಳ್ಳುವ ರೇಖೆಗಳು
- ಕಪೋಲಪತ್ರೆ – ಕಪೋಲಪತ್ರ ಉಳ್ಳವಳು
- ಕಪೋಲಫಲ(ಳ)ಕ – ಕೆನ್ನೆಯ ಮೇಲಿನ ಚಪ್ಪಟೆಯ ಭಾಗ
- ಕಪೋಳವಿಪುಳೆ – ತುಂಬಿದ ಕೆನ್ನೆಯವಳು
- ಕಪ್ಪ – ರಾಜನಿಗೆ ಒಪ್ಪಿಬೇಕಾದ ಪೊಗದಿ
- ಕಪ್ಪಂಗವಿ – ಕಪ್ಪು+ಕವಿ, ಕತ್ತಲೆ ಕವಿ
- ಕಪ್ಪಂಗವಿಯಾಗು – ಕತ್ತಲೆ ದಟ್ಟೈಸು
- ಕಪ್ಪಂಗುಡು – ಕಪ್ಪವನ್ನು ಕೊಡು
- ಕಪ್ಪಂಗೊಳ್ – ಕಪ್ಪ ಸ್ವೀಕರಿಸು
- ಕಪ್ಪಡ – (ಹರಕಲು) ಬಟ್ಟೆ
- ಕಪ್ಪಡಿ – ಹರಕಲು ಬಟ್ಟೆ ತೊಟ್ಟವನು, ತಿರುಕ
- ಕಪ್ಪವೀ – ಕಪ್ಪ ಕೊಡು
- ಕಪ್ಪು – ಗುಂಡಿ; ಖೆಡ್ಡ
- ಕಪ್ಪುರ – ಕರ್ಪೂರ
- ಕಪ್ಪುರಗರಡಿಗೆ – ಕರ್ಪೂರವಿರಿಸುವ ಭರಣಿ
- ಕಪ್ಪುದಂಬುಲ – (ಪಚ್ಚ) ಕರ್ಪೂರ ಹಾಕಿದ ತಾಂಬೂಲ
- ಕಪ್ಪರದೀವ – ಕರ್ಪೂರದೀಪ
- ಕಪ್ಪುರವಚ್ಚ – ಕರ್ಪೂರದ ತಂಪು
- ಕಪ್ಪುರವಳುಕು – ಕರ್ಪೂರದ ಹರಳು
- ಕಪ್ಪುರವಳ್ಳಿ – ಕರ್ಪೂರದ ಬಳ್ಳಿ
- ಕಪ್ಪೆ – ಮಂಡೂಕ
- ಕಫ – ಶ್ಲೇಷ್ಮ; ದೇಹದ ಮೂರು ಧಾತುಗಳಲ್ಲಿ ಒಂದು: ವಾತ, ಪಿತ್ತ, ಕಫ(ಶೇಷ್ಮ)
- ಕಬಂಧ – ಅಟ್ಟೆ. ತಲೆಯಿಲ್ಲದ ದೇಹ
- ಕಬಂಧನಾಟಕ – ಅಟ್ಟೆಗಳ ಕುಣಿದಾಟ
- ಕಬರಿ(ಕಾ) – ತುರುಬು, ಹೆರಳು
- ಕಬರಿಕಾಬಂಧ – ಕಟ್ಟಿದ ಮುಡಿ
- ಕಬ(ಲಾ)ಳಾಹಾರ – ಯತಿಗಳು ನುಂಗುವ ತುತ್ತಿನ ಲೆಕ್ಕ
- ಕಬ್ಬ – ಕಾವ್ಯ
- ಕಬ್ಬಿ – ಕಡಿವಾಣ
- ಕಬ್ಬಿಗ – ಕವಿ, ಕಾವ್ಯರಚಕ
- ಕಬ್ಬಿಗಗಳ್ಳ – ಕೃತಿಚೌರ್ಯ ಮಾಡುವವನು
- ಕಬ್ಬಿಗವಂದಿ – ಕಬ್ಬಿಗ+ಮಂದಿ, ಕವಿಜನ
- ಕಬ್ಬಿಲ – ಬೇಡರವನು
- ಕಮಂಡಲ(ಲು) – ಯತಿಯ ನೀರಿನ ಪಾತ್ರೆ
- ಕಮಠ – ಆನೆ; ಕೂರ್ಮಾವತಾರ
- ಕಮಠಾಧಿಪ – ಆದಿಕೂರ್ಮ, ವಿಷ್ಣುವಿನ ಕೂರ್ಮಾವತಾರ
- ಕಮನ – ಚೆಲುವಾದ
- ಕಮನೀಯ – ಮನೋಹರ
- ಕಮನೀಯತೆ – ಮನೋಹರತೆ
- ಕಮಲ – ತಾವರೆ
- ಕಮಲಕುಲೋದ್ಭವ – ಕಮಲದಲ್ಲಿ ಹುಟ್ಟಿದವನು, ಬ್ರಹ್ಮ
- ಕಮಲಜ – ಬ್ರಹ್ಮ
- ಕಮಲನಾಭ – ಹೊಕ್ಕುಳಲ್ಲಿ ಕಮಲವುಳ್ಳವನು, ವಿಷ್ಣು
- ಕಮಲಬಾಂಧವ – ಕಮಲಮಿತ್ರ, ಸೂರ್ಯ
- ಕಮಲಭವ – ಕಮಲಜ, ಬ್ರಹ್ಮ
- ಕಮಲವೈರಿ – ಕಮಲಗಳ ಶತ್ರು, ಚಂದ್ರ
- ಕಮಲಷಂಡ – ತಾವರೆಗಳ ಸಮೂಹ
- ಕಮಲಾ(ಲೆ) – ಲಕ್ಷ್ಮೀ
- ಕಮಲಾಕರ – ಕೊಳ, ಸರೋವರ
- ಕಮಲಾಕ್ಷ – ವಿಷ್ಣು
- ಕಮಲಾಕ್ಷಿ – ಕಮಲದಂತಹ ಕಣ್ಣುಳ್ಳವಳು, ಚೆಲುವೆ
- ಕಮಲಾನನೆ – ಕಮಲದಂತಹ ಮುಖವುಳ್ಳವಳು, ಸುಂದರಿ
- ಕಮಲಾಪ್ತ – ಸೂರ್ಯ
- ಕಮಲಾವಸಥ – ಲಕ್ಷ್ಮಿಯ ವಾಸಸ್ಥಾನ;
- ಕಮಲವನ್ನು ಮನೆಯಾಗುಳ್ಳವನು, ಬ್ರಹ್ಮ
- ಕಮಲಿ(ಳಿ)ನಿ – ತಾವರೆಯ ಬಳ್ಳಿ
- ಕಮಲೆ – ಲಕ್ಷ್ಮಿ
- ಕಮಲೇಕ್ಷಣ – ಕಮಲಾಕ್ಷ
- ಕಮಲೋದಯ – ವಿಷ್ಣುವಿನ ಹೊಕ್ಕುಳ ಕಮಲದಲ್ಲಿ ಜನಿಸಿದ, ಬ್ರಹ್ಮ
- ಕಮಳ(ಲ)ಕಾಮುಕ – ಕಮಲಗಳಿಗೆ ಪ್ರಿಯನಾದವನು, ಸೂರ್ಯ
- ಕಮಳಬಂಧು – ಕಮಲದ ಸ್ನೇಹಿತ, ಸೂರ್ಯ
- ಕಮಳಾಕರಬಾಂಧವ – ಕಮಳಬಂಧು
- ಕಮಳಾಪ್ತ – ಕಮಳಬಂಧು
- ಕಮಳಾರ್ಥಿ – ಕಮಲವನ್ನು (ಲಕ್ಷ್ಮಿಯನ್ನು)ಬಯಸುವಂಥದು
- ಕಮ್ಮ – (ಕರ್ಮ) ಕೆಲಸ
- ಕಮ್ಮಂಗಣೆ – ಕಮ್ಮನೆಯ ಬಾಣ, ಹೂವಿನ ಬಾಣ
- ಕಮ್ಮಂಗಣೆಯ – ಹೂಬಾಣವುಳ್ಳವನು, ಮನ್ಮಥ
- ಕಮ್ಮಂಗೋಲ – ಕಮ್ಮಂಗಣೆಯ
- ಕಮ್ಮಕ – ಬಾಣ
- ಕಮ್ಮಟ – ಕುಲುಮೆ
- ಕಮ್ಮನೆ – ಸುಗಂಧವುಳ್ಳ
- ಕಮ್ಮಯಿಸು – ಕಮ್ಮೈಸು, ಶೋಭೆಯುಂಟುಮಾಡು
- ಕಮ್ಮರ – ಕಮರಿಕೆ ಎಂಬ ಹಣ್ಣು
- ಕಮ್ಮರಿ – ಪ್ರಪಾತ, ಕೊಳ್ಳ
- ಕಮ್ಮರಿಯೊವಜ – ನುಡಿದಂತೆ ನಡೆಯದ ಉಪಾಧ್ಯಾಯ
- ಕಮ್ಮರಿಯೋಜ – ಕಮ್ಮರಿಯೊವಜ
- ಕಮ್ಮರಿವಾಯ್ – ಕಮರಿಯಲ್ಲಿ ಬೀಳು
- ಕಮ್ಮವಟ್ಟಿ(ಟ್ಟೆ) – ಅಧಿಕಾರ ಪತ್ರ(?)
- ಕಮ್ಮಾಯಿಲ – ಕೆಲಸಗಾರ
- ಕಮ್ಮಿತು – ಸುಗಂಧಭರಿತವಾದ
- ಕಮ್ಮಿತ್ತಾಗು – ಸುಗಂಧಭರಿತವಾಗು
- ಕಮ್ಮಿಸು – ಗಮಗಮಿಸು
- ಕಮ್ಮು – ಕಮ್ಮಿಸು
- ಕಮ್ಮೆ – ಒಂದು ನಾಡು; ಒಂದು ವಂಶ
- ಕಮ್ಮೆಣ್ಣೆ – ಸುವಾಸಿತ ಎಣ್ಣೆ
- ಕಮ್ಮೆಲರ್ – ಸುಗಂಧಭರಿತ ಗಾಳಿ
- ಕಮ್ರ – ಮನೋಹರವಾದ
- ಕಯ್ಕೊಳ್ – ಸ್ವೀಕರಿಸು
- ಕಯ್ಗಣ್ಮು – ಅತಿಕ್ರಮಿಸು
- ಕಯ್ಗ¿Â – ಕೈಮೀರು
- ಕಯ್ಗಾಯ್ – ಕಾಪಾಡು
- ಕಯ್ಗೆಯ್ – ಅಲಂಕರಿಸು
- ಕಯ್ತು – ಕಹಿಯಾಗಿರುವುದು
- ಕಯ್ಪೆ – ಕಹಿ
- ಕಯ್ಪೆಸರಂ – ಕಠಿನೋಕ್ತಿ
- ಕಯ್ಪೆಸೊ(ೀ)ರೆ – ಕಹಿ ಸೋರೆ
- ಕಯ್ಪೊಯ್ – ಪ್ರತಿಜ್ಞೆಮಾಡು
- ಕಯ್ವಾಯ್ – ಸೆಣಸಾಡು
- ಕಯ್ವೀಸು – ಕೈಯನ್ನು ಬೀಸು; ಯುದ್ಧಾರಂಭಕ್ಕೆ ಸೂಚ ನೆ ಕೊಡು
- ಕರ – ಕೈ; ಆನೆಯ ಸೊಂಡಿಲು; ತೆರಿಗೆ; ಕಪ್ಪ; ಕಾಂತಿ
- ಕರಂ – ಹೆಚ್ಚಾಗಿ
- ಕರಂಕ – ಭರಣಿ, ಸಣ್ಣ ಪೆಟ್ಟಿಗೆ
- ಕರಂಕವಾಹಿನಿ – ಭರಣಿಯನ್ನು ಹೊತ್ತ ಪರಿಚಾರಿಕೆ
- ಕರಂಗು – ಕರಗಿ ಹೋಗು, ನೀರಾಗು
- ಕರಂಗೊಳ್ – ಹಿಡಿದುಕೊ
- ಕರಂಜ(ಕ) – ಹುಲುಗಿಲ ಮರ
- ಕರಂಜಿಕೆ – ಒಂದು ಬಗೆಯ ಹುಳಿಯಾದ ಕಾಯಿ
- ಕರಂಡ(ಕ) – ಭರಣಿ
- ಕರಂಡಿ(ಕೆ)ಗೆ – ಕರಂಡ(ಕ)
- ಕರಂಡೆ – ಒಂದು ಬಗೆಯ ನೀರು ಹಕ್ಕಿ
- ಕರಂಬ – ಸಸ್ಯದ ದೇಟು, ಕಾವು
- ಕರಂಬವಾಸಿಗ – ವಿವಿಧ ಹೂಗಳ ಬಾಸಿಗ
- ಕರಂಪು(ಬು) – ಸುಟ್ಟ ವಾಸನೆ
- ಕರಕ – ಆಲಿಕಲ್ಲು; ಕರಗ, ಕಳಶ
- ಕರಕಾಂಬು – ಕಳಶದ ನೀರು
- ಕರಕರಿಸು – ಪೀಡಿಸು
- ಕರಕವೃಷ್ಟಿ – ಆಳಿಕಲ್ಲು ಮಳೆ
- ಕರಕೆ – ಕಮಂಡಲು
- ಕರಕೋಪಲ – ಆಲಿಕಲ್ಲು
- ಕರಗ – ಗಡಿಗೆ
- ಕರಗದ ದಾರೆ – ಗಡಿಗೆಯ ನೀರ ಧಾರೆ
- ಕರಗವಳ – ಕೊಡದಿಂದ ನೀರು ತುಂಬುವವನು
- ಕರಗಸ – ಗರಗಸ
- ಕರಗಸಿಗ – ಗರಗಸದಿಂದ ಕೊಯ್ಯುವವನು
- ಕರಗ್ರಹಣ – ಕೈಹಿಡಿಯುವಿಕೆ; ಮದುವೆ
- ಕರಜ – ಕೈಯಲ್ಲಿ ಹುಟ್ಟಿದ್ದು, ಉಗುರು
- ಕರಟಕ – ಕಾಗೆ;
ಕರ್ಣಪತ್ರ - ಕಿವಿಯ ಆಭರಣ ಕರ್ಣಪರಂಪರೆ- ಕಿವಿಯಿಂದ ಕಿವಿಗೆ ಬರುವ ರೀತಿ ಕರ್ಣಪಾಲಿಕೆ - ಕಿವಿಯ ಹಾಲೆ ಕರ್ಣಪಿಶಾಚಿ - ಚಾಡಿ ಹೇಳುವ ಪಿಶಾಚಿ ಕರ್ಣರಸಾಯನ - ಕಿವಿಗೆ ಹಿತವಾಗಿರುವ ಕರ್ಣಶೂಲ - ಕಿವಿ ನೋವು ಕರ್ಣಾಭ್ಯರ್ಣ - ಕಿವಿಯ ಹತ್ತಿರ ಕರ್ಣಾವತಂಸ - ಕಿವಿಯ ಆಭರಣ ಕರ್ಣಾವಧಿ - ಕಿವಿಯವರೆಗೆ ಕರ್ಣಿಕಾರ - ಬೆಟ್ಟದಾವರೆ ಕರ್ಣಿಕೆ - ತಾವರೆಯ ಮಧ್ಯಭಾಗ ಕರ್ಣೇಜಪ - ಚಾಡಿಕೋರ ಕರ್ಣೋತ್ತಂಸ - ಕಿವಿಯ ಆಭರಣ ಕರ್ಣೋತ್ಪಲ - ಕಿವಿಗೆ ಅಲಂಕಾರವಾಗಿಟ್ಟುಕೊಳ್ಳುವ ನೈದಿಲೆ ಕರ್ತಾರ - ಸೃಷ್ಟಿಕರ್ತ ಕರ್ದಡಿಗ - ಕರಿಯ ದಾಂಡಿಗ ಕರ್ದಮ - ಕೆಸರು, ನೀರಲ್ಲಿ ಕದರಿರುವುದು ಕರ್ದಮಂಬೊರೆ - ಕೆಸರು ಮೆತ್ತು ಕರ್ದಮಿತ - ಕೆಸರಿನಿಂದ ಕೂಡಿದ ಕರ್ದರಿ - ಕತ್ತಲೆ ತುಂಬಿದ ಕಮರಿ ಕರ್ದಿಂಗಳ್ - ಅಮಾವಾಸ್ಯೆ ಕರ್ನೆತ್ತರ್ - ಕಪ್ಪು (ಕಡುಗೆಂಪು) ರಕ್ತ ಕರ್ನೆಯ್ದಿಲ್ - ಕನ್ನೈದಿಲೆ ಕರ್ಪಟ(ಡ) - ಬಟ್ಟೆ; ಹರಿದ ಬಟ್ಟೆ ಕರ್ಪರ - ತಲೆಬುರುಡೆ ಕರ್ಪಿಡಿ - ಕಪ್ಪಾಗು ಕರ್ಪಿಡು - ಕರ್ಪಿಡಿ ಕರ್ಪು - ಕಪ್ಪು ಕರ್ಬಕ್ಕಿ - ಕಬ್ಬಕ್ಕಿ ಕರ್ಬಟ್ಟೆಗ - ಕಪ್ಪು ಹಾದಿಯವನು, ಅಗ್ನಿ ಕರ್ಬಲೆ - ಕರಿಯ ಬಲೆ ಕರ್ಬಸು - ಕಪ್ಪು ಹಸು; ಪಿತ್ತಕೋಶ ಕರ್ಬಳ್ಳಿ - ಕಪ್ಪು ಬಳ್ಳಿ ಕರ್ಬಾಳ - ಕಪ್ಪು ಬಾಳದ ಬೇರು ಕರ್ಬುರ - ಬೂದುಬಣ್ಣ; ನಾನಾ ಬಣ್ಣ; ಬಂಗಾರ ಕರ್ಬುರಿತ - ವಿವಿಧ ಬಣ್ಣಗಳೆ ಸೇರಿದ ಕರ್ಬುಲಿ - ಕಪ್ಪು ಬಣ್ಣದ ಹುಲಿ ಕರ್ಬೊಗರ್ - ಕಪ್ಪು ಬಣ್ಣದ ಹೊಳಪು ಕರ್ಬೊನ್ - ಕಬ್ಬಿಣ ಕರ್ಮಕ್ಷಪಣ - (ಜೈನ) ಒಂದು ವ್ರತ ಕರ್ಮಕ್ಷಯ - (ಜೈನ) ಇರುವ ಕರ್ಮಗಳನ್ನು ನಾಶಗೊಳಿಸುವುದು ಮತ್ತು ಬರುವ ಕರ್ಮಗಳನ್ನು ನಿವಾರಿಸುವುದು ಕರ್ಮಗತಿ - ಕರ್ಮಫಲ ಕರ್ಮಡು - (ಮರಗಿಡಗಳ ನೆರಳಿನಿಂದ) ಕಪ್ಪಾದ ಮಡು ಕರ್ಮನಿರ್ಜರೆ - (ಜೈನ) ಕರ್ಮಕ್ಷಯ ಕರ್ಮಪಾಕ - ಪೂರ್ವಜನ್ಮದ ಕರ್ಮಗಳ ಫಲ ಕರ್ಮಬಂಧ - ಕರ್ಮದಿಂದಾದ ಬಂಧನ ಕರ್ಮಬಂಧನ - ಕರ್ಮಬಂಧ ಕರ್ಮವಿಪಾಕ - ಪೂವಾರ್ಜಿತ ಕರ್ಮದ ಫಲ ಕರ್ಮಾಯತ್ತ - ಕರ್ಮವಶ ಕರ್ಮೇಂಧನ - ಕರ್ಮವೆಂಬ ಸೌದೆ ಕರ್ವು - ಕಬ್ಬು ಕರ್ವುಗೋಲ್ - ಕಬ್ಬಿನ ಜಲ್ಲೆ ಕರ್ವುದೋಂಟ - ಕಬ್ಬಿನ ತೋಟ ಕರ್ವುವಿಲ್ - ಕಬ್ಬಿನ ಬಿಲ್ಲು, ಮನ್ಮಥನ ಬಿಲ್ಲು ಕರ್ವೆಟ್ಟು - ಕಪ್ಪು ಬೆಟ್ಟ, ನೀಲಾಚಲ ಕರ್ವೊಗೆ - ಕರ್ಬೊಗೆ, ಕಪ್ಪು ಹೊಗೆ ಕರ್ವೊನ್ - ಕರ್ಬೊನ್, ಕಬ್ಬಿಣ ಕರ್ಷ - ಎಳೆಯುವಿಕೆ ಕರ್ಷಣ - ಸೆಳೆತ ಕರ್ಷಣೀಯ - ಎಳೆದುಹಾಕಬೇಕಾದ ಕರ್ಷೋಪಲ - ಒರೆಗಲ್ಲು ಕಲ್ - ಅಭ್ಯಾಸಮಾಡು; ಕಲ್ಲು, ಬಂಡೆ ಕಲ - ಪಾತ್ರೆ; ಇಂಪಾದ ಕಲಂಕು - ಕಲಕು; ಮಥನಮಾಡು ಕಲಂಬಡೆ - ಶಕ್ತಿ ಹೊಂದು, ಜ್ಞಾನ ಪಡೆ ಕಲಕಾಂಚಿ - ಇಂಪಾದ ಶಬ್ದಮಾಡುವ ಒಡ್ಯಾಣ ಕಲಗಲ್ - ಬೆರಸು ಕಲಡು - ಕೆರಾಗು ಕಲ(ಳ)ತ್ರ - ಹೆಂಡತಿ ಕಲ(ಳ)ಧೌತ - ಚಿನ್ನ, ಬೆಳ್ಳಿ ಕಲಧೌತಕ್ಷ್ಮಾಧರ - ಚಿನ್ನದ ಬೆಟ್ಟ, ಮೇರುಪರ್ವತ ಕಲನ್ - ಪಾತ್ರೆ ಕಲಮ - ಬತ್ತ ಕಲಲ - ಮಾಸಲು ಬಣ್ಣ ಕಲಶಜ - ದ್ರೋಣ; ಅಗಸ್ತ್ಯ ಕಲಶವಿಡು - ಶೋಭೆಯುಂಟುಮಾಡು ಕಲಸು - ಮಿಶ್ರಮಾಡು ಕಲಸುಗೂಳ್ - ಕಲಸಿದ ಅನ್ನ ಕಲಹ - ಜಗಳ; ಕಾಳಗ ಕಲಹಕೃಷ್ಣಕ - ಜಗಳಗಂಟ ಕಲಹಲಂಪಟ - ಕಲಹಕೃಷ್ಣಕ ಕಲಾಕಲಾಪ - ಲಲಿತಕಲೆಗಳ ಸಮೂಹ ಕಲಾಕಲಿತ - ಕಲೆಯಿಂದ ಕೂಡಿದ (ಚಂದ್ರ); ಕಲಾವಂತ ಕಲಾಪ - ಸಮೂಹ; ನವಿಲುಗರಿ ಕಲಾಪಂಡಿತ - ಕಲೆಗಳಲ್ಲಿ ಬಲ್ಲಿದ ಕಲಾಪತಿಕಲೆ - ಚಂದ್ರನ ಕಲೆ ಕಲಾಪಮಾಲೆ - ನವಿಲುಗರಿಗಳ ಕಟ್ಟು ಕಲಾಪಿ - ಗಂಡುನವಿಲು ಕಲಾಪಿಸ್ತ್ರೀ - ಹೆಣ್ಣು ನವಿಲು ಕಲಿ - ಕಲಿತುಕೊ; ಶೂರ ಕಲಿ(ಳಿ)ಕೆ - ಮೊಗ್ಗು; ದೀಪದ ಕುಡಿ; ಚಾತುರ್ಯ ಕಲಿಗಂಟಿಕ್ಕು - ವೀರನಂತೆ ಕೂದಲನ್ನು ಗಂಟುಹಾಕಿಕೊ ಕಲಿಗಂಟು - ವೀರರ ಕೂದಲು ಗಂಟು ಕಲಿಗೂಂಟಣೀ - ಗಟ್ಟಿಯದ ಕುಂಟಲಗಿತ್ತಿ ಕಲಿಗೋಂಟೆ - ಭದ್ರವಾದ ಕೋಟೆ ಕಲಿತನ - ಪೌರುಷ; ಬಂಟತನ ಕಲಿಲ - ಬೆರೆತ; ನಿಬಿಡವಾದ; ಪಾಪ ಕಲಿವೃಕ್ಷ - ಕಲಿ ನೆಲಸಿದ ಮರ ಕಲಿಸು - ಹೇಳಿಕೊಡು ಕಲುಂಬು - ಕಲಕು; ಕೊಳೆ; ಕಿಲುಬು ಕಲುಂಬುಗೊಳ್ - ಕದಡಿಹೋಗು; ಕಲ್ಮಷಹೊಂದು ಕಲುವಾದರಿ - ಒಂದು ಬಗೆಯ ಪಾದರಿ ಹೂ ಕಲುಷ - ಕೊಳೆ; ವೈರ; ರೋಷ; ಕಳಂಕ ಕಲೆ(ಳೆ) - ಅಂಶ; ಕುಶಲವಿದ್ಯೆ ಕಲೆಗಟ್ಟು - ಗಾಯದಿಂದ ಗುರುತು ಬೀಳು ಕಲೆಮುಟ್ಟು - ಕಲೆಯಾಗು; ಕಲ್ಮಷಗೊಳ್ಳು ಕಲೆವೆರಸು - ಕಲೆಗಳಿಂದ ಕೂಡು ಕಲ್ಕಂಗೂಡು - ಚೆನ್ನಾಗಿ ಕದಡು ಕಲ್ಕಿ - ವಿರ್ಷಣುವಿನ ಹತ್ತನೆಯ ಅವತಾರ ಕಲ್ಕೆ - ಕಲಿಕೆ, ವಿದ್ಯೆ ಕಲ್ನೆ(ಲ್ನಿ)ಲೆ - (ಜೈನ) ಬೇಸಗೆಯಲ್ಲಿ ಕಲ್ಲ ಮೇಲೆ ನಿಂತು ಮಾಡುವ ತಪಸ್ಸು ಕಲ್ನೆಲೆನಿಲ್ -
ಕಲ್ನೆಲೆ’ ತಪಸ್ಸಿಗೆ ನಿಲ್ಲು - ಕಲ್ಪ – (ಜೈನ) ಸೌಧರ್ಮ, ಈಶಾನ, ಸನತ್ಕುಮಾರ
- ಕಲ್ಪಕುಜಾತ – ಕಲ್ಪಕುಜ
- ಕಲ್ಪಜ – ಸ್ವರ್ಗದಲ್ಲಿ ಹುಟ್ಟಿದುದು; ದೇವತೆ
- ಕಲ್ಪಜಪತಿ – ಕಲ್ಪೇಂದ್ರ; ದೇವೇಂದ್ರ
- ಕಲ್ಪದ್ರುಮ – ಕಲ್ಪಕುಜ
- ಕಲ್ಪಪಾದಪ – ಕಲ್ಪಕುಜ
- ಕಲ್ಪಭೂರುಹ – ಕಲ್ಪಕುಜ
- ಕಲ್ಪಮಹೀಜ – ಕಲ್ಪಕುಜ
- ಕಲ್ಪಲತೆ – ಕಲ್ಪಕುಜ
- ಕಲ್ಪವಾಸಿಗ – (ಜೈನ) ಸ್ವರ್ಗವಾಸಿ, ದೇವತೆ
- ಕಲ್ಪಾಂಘ್ರಿಪ – ಕಲ್ಪಕುಜ
- ಕಲ್ಪಾಂತ – ಕಲ್ಪದ ಕೊನೆ
- ಕಲ್ಪಾಂತಕಾಲ – ಪ್ರಳಯಕಾಲ
- ಕಲ್ಪಾಂತರಸ್ಥಾಯಿ – ಕಲ್ಪಾಂತರಗಳವರೆಗ ಇರುವ
- ಕಲ್ಪಾಂತಸ್ಥಾಯಿ – ಕಲ್ಪಾಂತರಸ್ಥಾಯಿ
- ಕಲ್ಪಾಮರ – (ಜೈನ) ಕಲ್ಪಗಳಲ್ಲಿರುವ ದೇವತೆ
- ಕಲ್ಪಾವನಿಜ – ಕಲ್ಪಕುಜ
- ಕಲ್ಪಾವನೀಜ – ಕಲ್ಪಕುಜ
- ಕಲ್ಪಿ – ಕಲಿಯುವಿಕೆ; ವಿದ್ಯೆ, ಕಲೆ, ಕುಶಲವಿದ್ಯೆ
- ಕಲ್ಲಿಂ – ಕಲಿಯಿರಿ
- ಕಲ್ಪಿಸು – ಕಲಿಸು; ಹೇಳಿಕೊಡು
- ಕಲ್ಪೇಂದ್ರ – (ಜೈನ) ಸ್ವರ್ಗವನ್ನಾಳುವ ಇಂದ್ರ; ಇಂಥವರು ಹನ್ನೆರಡು ಮಂದಿ
- ಕಲ್ಪೇಶ್ವರ – ಕಲ್ಪೇಂದ್ರ
- ಕಲ್ಪೋಪರಮ – ಕಲ್ಪದ ಕೊನೆ; ಪ್ರಳಯ
- ಕಲ್ಮಾಷ – ಬೂದುಬಣ್ಣ
- ಕಲ್ಮುಷಿಕ – ಕಲ್ಮಷ; ದೋಷ
- ಕಲ್ಮೆಯ್ – ಕಲ್ಲಿನಂತಹ ಗಟ್ಟಿ ಮೈ
- ಕಲ್ಯಾಣ – ಚಿನ್ನ; ಮಂಗಳ (ಜೈನ) ಜಿನನಿಗೆ ಮಾಡುವ ಐದು ಮಹೋತ್ಸವಗಳು; ನೋಡಿ, ಪಂಚಮಹಾಕಲ್ಯಾಣ
- ಕಲ್ಯಾಣಗರ್ಭ – ಹಿರಣ್ಯಗರ್ಭ, ಬ್ರಹ್ಮ
- ಕಲ್ಯಾಣಮಿತ್ರ – ಒಳ್ಳೆಯದಕ್ಕೆ ನೆರವಾಗುವ ಗೆಳೆಯ
- ಕಲ್ಯಾಣಿ – ಪಾರ್ವತಿ
- ಕಲ್ಲವಿಲ – ಕಲ್ಲಾಬಿಲ್ಲಿ
- ಕಲ್ಲಾಯ್ತ – ಕಲಿಸುವವನು, ಗುರು
- ಕಲ್ಲೆ – ಬೇಲಿ
- ಕಲ್ಲೆಯುಂ ಕವಿಲೆಯುಂ – ಅಲ್ಲೋಲ ಕಲ್ಲೋಲ
- ಕಲ್ಲೆರ್ದೆ – ಕಲ್ಲು ಹೃದಯ; ಕಠೋರತೆ
- ಕಲ್ಲೆರ್ದೆಗವಿ – ಕಲ್ಲು ಹೃದಯದ ಕಬ್ಬಿಗ; ಕಲ್ಲಿನ ಗವಿ
- ಕಲ್ಲೆರ್ದೆತನ – ಕಠೋರತೆ
- ಕಲ್ಲೆರ್ದೆಯಳ್ – ಕಲ್ಲು ಹೃದಯದವಳು
- ಕಲ್ಲೋಲ – ಅಲೆ, ತೆರೆ
- ಕಲ್ಹಾರ – ಒಂದು ಬಗೆಯ ನೈದಿಲೆ; ಸೌಗಂಧಿಕಾ ಪುಷ್ಪ
- ಕವ – ಕ್ರಮ
- ಕವಂ(ವುಂ(ದಿ – ಕವುದಿ. ತುಂಡು ಬಟ್ಟೆಗಳಿಂದ ಹೊಲಿದ ಹಚ್ಚಡ
- ಕವಚಹರ – ಕವಚ ತೊಡುವವನು, ಪ್ರಾಪ್ತವಯಸ್ಕ
- ಕವರ್ – ಸೂರೆ ಮಾಡು; ಸೆರೆ ಹಿಡಿ; ಕವಲು ಮರ, ಕವೆ; ರಥದ ಒಂದು ಭಾಗ
- ಕವತೆರ್() – ಬಲಾತ್ಕಾರದಿಂದ ಕಿತ್ತುಕೊಳ್ಳುವುದು; ಲೂಟಿ
- ಕವರ್ತೆಗೊಳ್ – ಸುಲಿಗೆ ಮಾಡು
- ಕವರ್ತೆವೋಗು – ಕವರ್ತೆಪಡು, ಸುಲಿಗೆಗೆ ಒಳಗಾಗು
- ಕವರ್ದುಕೊಳ್ – ವಶಪಡಿಸಿಕೊ
- ಕವಲ್ – ಕೊಂಬೆ ಒಡೆ; ಟಿಸಿಲು
- ಕವಲಂಬು – ಕವಲಾದ ಬಾಣ
- ಕವಳ – ತುತ್ತು
- ಕವಳಿಗೆ – ಕಡತದ ಕಟ್ಟು
- ಕವಾಟ – ಬಾಗಿಲು
- ಕವಾಟಪುಟ – ಬಾಗಿಲ ರೆಕ್ಕೆ , ಕದ
- ಕವಿ – ಮುಚ್ಚು, ಧರಿಸು; ತುಂಬು, ದಟ್ಟವಾಗು; ಮೇಲೆ ಬೀಳು; ಧರಿಸು; ಮುಚ್ಚಳ; ಚತುರ; ಕಬ್ಬಿಗ; ನೀರ ಹಕ್ಕಿ; ಕಡಿವಾಣ
- ಕವಿಂಜ – ಕಪಿಂಜಲ, ಒಂದು ಹಕ್ಕಿ
- ಕವಿಯುಂ ಕಲ್ಲೆಯುಂ – ಅಲ್ಲೋಲ ಕಲ್ಲೋಲ
- ಕವಿಲ್ – (ಕಪಿಲ) ಮಾಸಲು ಕೆಂಪು; ಮಾಸಲು ಕೆಂಪು ಬಣ್ಣವಾಗು
- ಕವ್ವರೆ – ಸಡಗರ
- ಕಶಾದಂಡ – ಚಾವಟಿ
- ಕಶೆ – ಕಶಾದಂಡ
- ಕಷಣ – ಉಜ್ಜುವಿಕೆ
- ಕಷಾಯ – ಸುವಾಸನೆಯಿಂದ ಕೂಡಿದ; ಸುಗಂಧ; (ಜೈನ) ಸುಖದುಃಖಗಳನ್ನುಂಟುಮಾಡುವ ನಾಲ್ಕು ಬಗೆಯ ದೋಷ: ಕ್ರೋಧ, ಮಾನ, ಮಾಯಾ, ಲೋಭಗಳು
- ಕಷಾಯಕಂಠ – ಮಧುರಧ್ವನಿಯ ಕಂಠ
- ಕಷಾಯತೋಯ – ಸುಗಂಧದ ನೀರು
- ಕಷಾಯಸಲ್ಲೇಖನ – ಜೈನರ ಪ್ರಕಾರ, ಮನಃಕಷಾಯಗಳನ್ನು ಹೋಗಲಾಡಿಸುವಿಕೆ
- ಕಷಾಯಾಕ್ಷ – ಕೆಂಪು ಕಣ್ಣುಗಳುಳ್ಳವನು
- ಕಷಾಯಿತ – ಒಗರಾದ; ಕಹಿಯಾದ
- ಕಷಾಯೋದಕ – ಐದು ಮರಗಳ ತೊಗಟೆಗಳಿಂದ ಕಾಯಿಸಿದ ನೀರು
- ಕಷ್ಟತಿಕ್ಕೆ – ತೊಂದರೆ
- ಕಸರ್ – ಗಂಟಲು ಕೆರೆ
- ಕಸವರ – ಧನ, ಚಿನ್ನ
- ಕಸವು – ಕಸ; ಕೇಡಿಗ, ದುಷ್ಟ
- ಕಸೆ – ಚಾವಟಿ; ಲಾಡಿ
- ಕಸೆಗೊಳ್ – ಚಾವಟಿ ತೆಗೆದುಕೊ
- ಕಳ್ – ಕದಿ, ಕಳ್ಳತನಮಾಡು; ಮದ್ಯ, ಕಳ್ಳು
- ಕಳ(ಣ) – ಯುದ್ಧರಂಗ
- ಕಳಕಂಠ – ಇಂಪಾದ ಧ್ವನಿಯುಳ್ಳುದು, ಕೋಗಿಲೆ
- ಕಳಕಂಠಿ – ಇಂಪಾದ ಕಂಠವುಳ್ಳ, ಹೆಣ್ಣು ಕೋಗಿಲೆ
- ಕಳಕಳಾವರ್ತ – ಕಳಕಳ ಸದ್ದಿನ ಸುಳಿದಾಟ
- ಕಳಕುಳ – ಅಸ್ತವ್ಯಸ್ತ
- ಕಳ(ಲ)ತ್ರ – ಹೆಂಡತಿ
- ಕಳ(ಲ)ಧೌತ – ಚಿನ್ನ, ಬೆಳ್ಳಿ; ಬಿಳಿ ಬಣ್ಣ; ದತ್ತೂರ
- ಕಳ(ಲ)ಭ – ಆನೆಯ ಮರಿ
- ಕಳ(ಲ)ಮ – ಬತ್ತ; ಪೈರು; ಗದ್ದೆ
- ಕಳಮಕ್ಷೇತ್ರ – ಬತ್ತದ ಗದ್ದೆ
- ಕಳಮಾಕ್ಷತ – ಅಕ್ಕಿಯ ಕಾಳು, ಅಕ್ಷತೆ ಕಾಳು
- ಕಳರುತಿ – ಮಧುರ ಧ್ವನಿ
- ಕಳಲ್ – ಚದುರಿ ಹೋಗು, ಹಾರಿ ಹೋಗು
- ಕಳವಳಿಸು – ತವಕಿಸು; ಸಡಗರಿಸು
- ಕಳವು – ಕಳ್ಳತನ
- ಕಳಶಪ್ರೋದ್ಭೂತ – ಕಲಶಜ, ದ್ರೋಣ; ಅಗಸ್ತ್ಯ
- ಕಳಶೋದ್ಧಾರಮಂತ್ರ – ಕಳಶವೆತ್ತುವಾಗ ಹೇಳುವ ಮಂತ್ರ
- ಕಳ(ಲ)ಹಂಸ – ಕಂದುಬಣ್ಣದ ರೆಕ್ಕೆಗಳಿರುವ ಹಂಸ
- ಕಳಾ(ಲಾ) – ಕಾಂತಿ; ಕಲೆ; ಚಮತ್ಕಾರ
- ಕಳಾಕಳಿತ – ಕಲಾಕಲಿತ
- ಕಳಾಧರ – ಕಲೆಗಳನ್ನು ಬಲ್ಲವನು
- ಕಳಾ(ಳಾ)ನಿಧಿ – ಕಲೆಗಳ ಸಮೂಹ; ಹದಿನಾರು
- ಕಲೆಗಳಿಗೆ ಆಶ್ರಯನಾದವನು, ಚಂದ್ರ
- ಕಳಾ(ಲಾ)ಪ – ಸಮೂಹ; ಡಾಬು
- ಕಳಾಪಿ(ನಿ) – ಹೆಣ್ಣು ನವಿಲು
- ಕಳಾಪ್ರಣೀತೆ – ಕಲೆಯಲ್ಲಿ ಪರಿಣತಳಾದವಳು
- ಕಳಾರುಂದ್ರ – ಕಲೆಗಳಿಂದ ದಟ್ಟವಾದ
- ಕಳಿಂಚು – ಮೋಸ, ವಂಚನೆ
- ಕಳಿಂದಕನ್ಯೆ – ಯಮುನಾ ನದಿ
- ಕಳಿಂದಜೆ – ಕಳಿಂದಕನ್ಯೆ
- ಕಳಿಕ – ಜೋಳ
- ಕಳಿ(ಲಿ)ಕಾ – ಮೊಗ್ಗು; ಚಿಗುರು
- ಕಳಿಕೆ – ಕಣ, ಹನಿ; ಚಿಗುರು
- ಕಳಿಕೆಗರ್ಚು – ಚಿಗುರ(ಮೊಗ್ಗ)ನ್ನು ಕಚ್ಚು
- ಕಳಿತ – ಕೂಡಿದ
- ಕಳಿಪು – ಕಳುಹಿಸಿಕೊಡು
- ಕಳಿಸು – ಕಳ್ಳತನ ಮಾಡಿಸು
- ಕಳೆ – ವಿಸರ್ಜಿಸು; ಹೋಗಲಾಡಿಸು
- ಕಳೆಗಳೆ – ಕಾಂತಿಗುಂದು
- ಕಳೆದಿಡು – ಬಿಡು. ತ್ಯಜಿಸು
- ಕಳೋನ್ನತ – ಕಲೆಗಳಿಂದ ವೃದ್ಧಿಗೊಂಡವನು, ಚಂದ್ರ
- ಕಳ್ಗುಡಿ – ಹೆಂಡ ಕುಡಿ
- ಕಳ್ಗುಡಿಕಿ – ಹೆಂಡ ಕುಡುಕಿ
- ಕಳ್ಗುಡಿಪಿ – ಕಳ್ಗುಡಿಕಿ
- ಕಳ್ವಡಿಗ – ಹೆಂಡದ ಮಾರಾಟಗಾರ
- ಕಳ್ಳಚ್ಚು – ಕಳ್ಳ ಮುದ್ರೆ
- ಕಳ್ಳವತಿ – ಹೆಂಡ ಮಾಡಿ ಮಾರುವವಳು
- ಕಳ್ಳವತ್ತಿಗೆ – ಕಳ್ಳವತಿ
- ಕಳ್ಳವಳ – ಹೆಂಡ ಮಾಡಿ ಮಾರುವವನು
- ಕಳ್ಳವೆಳ್ಳಿ – ಕೀಳು ಗುಣಮಟ್ಟದ ಬೆಳ್ಳಿ
- ಕಳ್ಳಸಿಗ – ಹೆಂಡ ಮಾಡುವವನು
- ಕಳ್ಳಸಿಗಗೇರಿ – ಹೆಂಡ ಮಾರುವವರ ಬೀದಿ
- ಕಳ್ಳಾಳ್ – ಕಳ್ಳ
- ಕಳ್ಳಿ – ಎಲೆ ಕಿತ್ತರೆ ಮಂದ ಹಾಲು ಬರುವ ಗಿಡ
- ಕಳ್ಳುಣಿ – ಹೆಂಡಗುಡುಕ
- ಕಾ – ಕಾಪಾಡು
- ಕಾಂಕ್ಷಿಸು – ಅಪೇಕ್ಷಿಸು
- ಕಾಂಕ್ಷೆ – ಬಯಕೆ
- ಕಾಂಚನ – ಚಿನ್ನ
- ಕಾಂಚನಮಂಚ – ಚಿನ್ನದ ಮಂಚ
- ಕಾಂಚನಮಾಲೆ – ಚಿನ್ನದ ಸರ
- ಕಾಂಚನವರ್ಣ – ಹೊಂಬಣ್ಣ
- ಕಾಂಚನವೃಷ್ಟಿ – ಚಿನ್ನದ ಮಳೆ
- ಕಾಂಚನಸರೋರುಹ – ಹೊಂದಾವರೆ
- ಕಾಂಚಿ – ಡಾಬು
- ಕಾಂಚೀಕಳಾಪ – ಕಾಂಚಿ
- ಕಾಂಚೀದಾಮ – ಕಾಂಚಿ
- ಕಾಂಡ – ದೇಟು; ಬಾಣ
- ಕಾಂಡಧಿ – ಅಮುದ್ರ; ಬತ್ತಳಿಕೆ
- ಕಾಂಡಪಟ – ತೆರೆ, ಪರದೆ
- ಕಾಂಡಾಸನ – ಬಿಲ್ಲು
- ಕಾಂತ – ಇಷ್ಟವಾದ; ಪ್ರಿಯಕರ
- ಕಾಂತಾತತಿ – ಹೆಂಗಸರ ಗುಂಪು
- ಕಾಂತಾರ – ಕಾಡು
- ಕಾಂತಾರಚರ್ಯೆ – (ಜೈನ) ಕಾಡಿನಲ್ಲಿ ಭಿಕ್ಷೆಗಾಗಿ ಸಂಚರಿಸುವುದು
- ಕಾಂತಾರಭಿಕ್ಷೆ – ಕಾಂತಾರಚರ್ಯೆ
- ಕಾಂತಿಗುಂದು – ನಿಸ್ತೇಜಗೊಳ್ಳು
- ಕಾಂತಿಮಂ(ವಂ)ತ – ತೇಜಸ್ವಿ
- ಕಾಂತೆ – ಸ್ತ್ರೀ; ಪ್ರಿಯೆ
- ಕಾಂತ್ಯಾಕರ – ಕಾಂತಿಯ ಆಕರ, ಚಂದ್ರ
- ಕಾಂತ್ಯಾಸ್ಪದ – ಕಾಂತ್ಯಾಕರ
- ಕಾಂಸ್ಯ – ಕಂಚು
- ಕಾಂಸ್ಯತಾಲ(ಳ) – ಕಂಚಿನ ತಾಳ
- ಕಾಂಸ್ಯತೋರಣ – ಕಂಚಿನ ತೋರಣ
- ಕಾಕತಾಲೀ(ಳೀ)ಯ – ಅನಿರೀಕ್ಷಿತ ಘಟನೆ
- ಕಾಕಧ್ವಜ – ಬಾವುಟದಲ್ಲಿ ಕಾಗೆಯ ಲಾಂಛನವುಳ್ಳವನು, ಕರ್ಣ
- ಕಾಕಪಕ್ಷ – ಕಾಗೆಯ ರೆಕ್ಕೆ; ಜುಟ್ಟಿನ ಒಂದು ಶೈಲಿ
- ಕಾಕ(ಲಿ)ಳಿ – ಇಂಪಾದ ದನಿ
- ಕಾಕಾಕ್ಷಿಗೋಳಕನ್ಯಾಯ – ಒಂದೇ ಕಣ್ಣನ್ನು ಹೊರಳಿಸಿ ಕಾಗೆ ಎಲ್ಲಡೆ ನೋಡಿವ ಬಗೆ; ಒಂದು ಯುಕ್ತಿಯಿಂದ ಹಲವು ಫಲಸಿದ್ಧಿಯಾಗುವುದು
- ಕಾಕಿಣಿರತ್ನ – (ಜೈನ) ಒಂದು ಜೀವರತ್ನ; ಉಜ್ಜಿದರೆ ಬೆಳಕು ಬೀರುವ ರತ್ನ
- ಕಾಗಿಣಿ – ನಾಲ್ಕು ವೀಸ ಬೆಲೆಯ ಒಂದು ನಾಣ್ಯ
- ಕಾಗೆದೊಂಡೆ – ಗುಲಗಂಜಿ
- ಕಾಚ – ಗಾಜು
- ಕಾಚಭೂಷಣ – ಗಾಜಿನ ಒಡವೆ
- ಕಾಜು – ಗಾಜು
- ಕಾಟ – ಪೀಡೆ; ಒಂದು ಕ್ಷುದ್ರ ದೇವತೆ
- ಕಾಟಿ – ಒಂದು ಕ್ಷುದ್ರ ದೇವತೆ
- ಕಾಡಾನೆ – ಅಡವಿಯ ಆನೆ; ಪಳಗಿಸದ ಆನೆ
- ಕಾಡಾವು – ಕಾಡ ಹಸು
- ಕಾಡಿಗೆಗುಡಿ – ದೀಪದ ಕಪ್ಪು ಕುಡಿ
- ಕಾಡಿಗೆಯಚ್ಚು – ಕಾಡಿಗೆ ಹಚ್ಚಿಕೊ
- ಕಾಡಿಗೆವೊಗರ್ – ಕಾಡಿಗೆಯ ಹೊಳಪು
- ಕಾಡಿಸು – ಕಾಟ ಕೊಡು
- ಕಾಡು – ಅಡವಿ; ಕಾಟ ಕೊಡು
- ಕಾಡೆರ್ಮೆ – ಕಾಡೆಮ್ಮೆ
- ಕಾಡೊಡಮೆ – ಕಾಡ ವಸ್ತು, ಸಂಪತ್ತು
- ಕಾಡೊಡೆಯ – ಕಾಡಿನ ದೊರೆ, ಬೇಡರ ದೊರೆ
- ಕಾಣ್ – ಕಾಣು, ನೋಡಿ
- ಕಾಣ – ಒಕ್ಕಣ್ಣ
- ಕಾಣ್ಕೆ – ಕಾಣುವಿಕೆ; ಕಾಣಿಕೆ (ಉಡುಗೊರೆ)
- ಕಾಣ್ಕೆಗೈ – ಕಾಣಿಕೆ ಒಪ್ಪಿಸು
- ಕಾಣ್ಕೆಗೊಡು – ಕಾಣ್ಕೆಗೈ
- ಕಾತರ – ಕಳವಳಗೊಂಡ; ಕಳವಳ
- ಕಾದಂಬ – ಹಂಸ; ಕದಂಬವೃಕ್ಷ
- ಕಾದಂಬಿನಿ – ಮುಗಿಲು
- ಕಾದಂಬಿನೀನಾಥ – ಮುಗಿಲಿನ ಒಡೆಯ, ಇಂದ್ರ
- ಕಾದಲ – ಪ್ರಿಯ, ನಲ್ಲ, ಇನಿಯ
- ಕಾದಲೆ – ಪ್ರಿಯೆ, ನಲ್ಲೆ
- ಕಾದಲ್ಮೆ – ಪ್ರೇಮ
- ಕಾದಿಗೆ – (ಖಾತಿಕಾ) ಅಗಳು, ಕಂದಕ
- ಕಾದಿಸು – ಹೋರಾಡಿಸು
- ಕಾದು – ಹೋರಾಡು
- ಕಾದ್ರವೇಯ – ಹಾವು
- ಕಾನೀನ – ಕನ್ಯೆಯಲ್ಲಿ ಹುಟ್ಟಿದವನು; ಕರ್ಣ
- ಕಾಪ¿Â – ರಕ್ಷಣೆ ಇಲ್ಲವಾಗು, ಕಾಪು ಹಾಳುಮಾಡು
- ಕಾಪಿಡು – ರಕ್ಷಿಸು
- ಕಾಪಿನಾಳ್ – ಅಂಗರಕ್ಷಕ
- ಕಾಪಿರಿಸು – ಕಾವಲಿಗೆ ನಿಲ್ಲಿಸು
- ಕಾಪು – ರಕ್ಷಣೆ, ಕಾವಲು
- ಕಾಪುಗಾಡು – ಕಾಯ್ದಿಟ್ಟ ಕಾಡು
- ಕಾಪುಗೊಳ್ – ಕಾವಲಿರು
- ಕಾಪುರುಷ – ಹೀನ ವ್ಯಕ್ತಿ
- ಕಾಪುವೆರಸು – ಕಾವಲು ಸಹಿತವಾಗಿ
- ಕಾಪುವೇ¿õï – ಕಾವಲಿರಲು ಹೇಳು
- ಕಾಮಕರ – ಗರ್ವ
- ಕಾಮಕಾಮಿನಿ – ವಿಷಯಾಸಕ್ತೆ; ರತಿ
- ಕಾಮಚಾಪ – ಕಬ್ಬು; ಕಾಮನ ಬಿಲ್ಲು
- ಕಾಮಚಾರಿ – ಇಷ್ಟ ಪಟ್ಟ ಕಡೆ ಹೋಗಬಲ್ಲವನು
- ಕಾಮಜಾ – ಒಂದು ಬಗೆಯ ಬೇಟೆ
- ಕಾಮದುಘ – ಬಯಸಿದ್ದನ್ನು ಕೊಡುವ ಹಸು
- ಕಾಮಧೇನು – ಕಾಮದುಘ
- ಕಾಮಧ್ವಂಸಿ – ಜಿತೇಂದ್ರಿಯ; ಶಿವ
- ಕಾಮನಿರ್ಜರೆ – (ಜೈನ) ಕಾಮನಾಶವಾಗುವುದು
- ಕಾಮಪಾಲ – ಆಸೆ ನೆರವೇರಿಸುವವನು; ಬಲರಾಮ
- ಕಾಮಬ್ರಹ್ಮವ್ರತ – (ಜೈನ) ಗೃಹಸ್ಥಾಶ್ರಮದಲ್ಲಿ ರಸ, ಸ್ಪರ್ಶಗಳ ಅನುಭವವನ್ನು ಪಡೆಯಬೇಕೆಂಬ ಒಂದು ವ್ರತ
- ಕಾಮಮಥನ – ಕಾಮಧ್ವಂಸಿ
- ಕಾಮರೂಪಿ – ಬೇಕಾದ ರೂಪ ಧರಿಸಬಲ್ಲವನು
- ಕಾಮಶಿಳೀಮುಖ – ಕಾಮಬಾಣ
- ಕಾಮಶುದ್ಧಿ – ಕಾಮವನ್ನು ಗೆದ್ದಿರುವುದು
- ಕಾಮಾ – ಲಕ್ಷ್ಮಿ
- ಕಾಮಾಂಗ – ಕಾಮ ಕೆರಳಿಸುವ ಮದ್ಯ
- ಕಾಮಾಂಧ – ಕಾಮದಿಂದಾಗಿ ವಿವೇಕವನ್ನು ಕಳೆದುಕೊಂಡವನು
- ಕಾಮಾರ್ಥ – ಪುರುಷಾರ್ಥಗಳಲ್ಲಿ ಮೂರನೆಯದು; ಇಂದ್ರಿಯಸುಖ
- ಕಾಮಿಸು – ಬಯಸು
- ಕಾಮುಕ – ವಿಷಯಲಂಪಟ
- ಕಾಯ್ – ಬಿಸಿಯಾಗು; ಕಾಯಿಬಿಡು; ಕಾಯಿ; ಕಾಪಾಡು
- ಕಾಯಕ್ಲೇಶ – ಶರೀರ ಕ್ಲೇಶ; (ಜೈನ) ಬಾಹ್ಯತಪಸ್ಸುಗಳಲ್ಲಿ ಆರನೆಯದು
- ಕಾಯಮಲ – ದೇಹದ ಕೊಳೆ
- ಕಾಯಮಾನ – ಚಪ್ಪರ; ಮಂಟಪ
- ಕಾಯಸ್ಥಿತಿ – (ಜೈನ) ದೇಹ ಕಾಪಾಡಲು ಮಾಡಬೇಕಾದ ಆಹಾರಸೇವನೆ
- ಕಾಯಿಸು – ಬಿಸಿಮಾಡು
- ಕಾಯೋತ್ಸರ್ಗ – (ಜೈನ) ಕೈ ಇಳಿಬಿಟ್ಟುಕೊಂಡು ನೇರವಾಗಿ ಮತ್ತು ನಿಶ್ಚಲವಾಗಿ ನಿಂತಿರುವುದು
- ಕಾಯ್ಗೊಂಡ – ನೀರು ಕಾಯಿಸುವ ಹಂಡೆ
- ಕಾರ್ – ತಿನ್ನು; ಮಳೆಗಾಲ
- ಕಾರಂಡ – ಬಾತುಕೋಳಿ
- ಕಾರಲಗು – ಕಪ್ಪು ಕತ್ತಿ
- ಕಾರಳೆಗೊಳಿಸು – ಕಾರಣೆಮಾಡಿ ಅಲಂಕರಿಸು
- ಕಾರಿರುಳ್ – ಮಳೆಗಾಲದ ರಾತ್ರಿ; ಕತ್ತಲೆ ತುಂಬಿದ ರಾತ್ರಿ
- ಕಾರಿವ – ಸುಳ್ಳು
- ಕಾರುಕ – ಕೈಕೆಲಸಗಾರ; ಶಿಲ್ಪಿ; ಕಮ್ಮಾರ
- ಕಾರುಣ್ಯಂಗೆಯ್ – ಕರುಣೆ ತೋರಿಸು, ದಯೆಗೆಯ್
- ಕಾರುಣ್ಯಂಬಡೆ – ದಯೆಯನ್ನು ಹೊಂದು, ಅನುಗ್ರಹೀತನಾಗು
- ಕಾರುಣ್ಯಚಿತ್ತ – ಕರುಣೆಯಿಂದ ಕೂಡಿದ ಮನಸ್ಸು
- ಕಾರೊ¾õÉ – ಕಪ್ಪು ಬಣ್ಣದ ಒರೆ
- ಕಾರ್ಗತ್ತಲೆ – ಕಗ್ಗತ್ತಲೆ
- ಕಾರ್ಗಾಲ – ಮಳೆಗಾಲ
- ಕಾರ್ಗೆಯ್ – ಮಳೆಗಾಲದಲ್ಲಿ ಸಾಗುಮಾಡುವ ಗದ್ದೆ
- ಕಾರ್ತಸ್ವರ – ಚಿನ್ನ
- ಕಾರ್ತಾಂತಿಕ – ಮೌಹೂರ್ತಿಕ
- ಕಾರ್ತಿಕೇಯ – ಷಣ್ಮುಖ, ಕುಮಾರಸ್ವಾಮಿ, ಸ್ಕಂದ
- ಕಾರ್ಪಾಸ – ಹತ್ತಿ
- ಕಾರ್ಪಾಸಚಾಪ – ಹತ್ತಿ ಹಿಂಜುವ ಬಿಲ್ಲು
- ಕಾರ್ಬೊನ್ – ಕರಿಯ ಲೋಹ, ಕಬ್ಬಿಣ
- ಕಾರ್ಮುಕ – ಬಿಲ್ಲು, (ಕಾರ್+ಮುಖ) ಮಳೆಗಾಲದ ಆರಂಭ
- ಕಾರ್ಮುಗಿಲ್ – ಮಳೆಗಾಲದ ಮೋಡ; ಕಪ್ಪು ಮೋಡ
- ಕಾರ್ಮುಗಿಲೊಡ್ಡು – ಕಾರ್ಮುಗಿಲ ಸಮೂಹ
- ಕಾರ್ಮೊಗ – ಮಳೆಗಾಲದ ಆರಂಭ
- ಕಾರ್ಯಭರ – ಕೆಲಸದ ಹೊರೆ
- ಕಾರ್ಯಸ್ಥಿತಿ – ಕಾರ್ಯಸ್ವರೂಪ
- ಕಾರ್ಯಾಂತರ – ಬೇರೆಯ ಕಾರ್ಯ
- ಕಾಷ್ರ್ಣ್ಯ – ಕಪ್ಪು ಬಣ್ಣ
- ಕಾಲ್ – ಕಾಲುವೆ; ಪಾದ
- ಕಾಲಕ್ಷೇಪ – ತಡಮಾಡುವುದು
- ಕಾಲಕ್ಷ್ವೇಳ – ವಿಷಪೂರಿತ
- ಕಾಲಡಿ – ಪಾದ
- ಕಾಲತ್ರಯ – ಭೂತ, ವರ್ತಮಾನ, ಭವಿಷ್ಯತ್ಕಾಲಗಳು
- ಕಾಲತ್ರಯವೇದಿ – ಕಾಲತ್ರಯಗಳನ್ನು ತಿಳಿದವನು; ತ್ರಿಕಾಲಜ್ಞಾನಿ
- ಕಾಲದಂಡ – ಯಮನ ದಂಡಾಯುಧ
- ಕಾಲದ್ರವ್ಯ – (ಜೈನ) ಷಡ್ದ್ರವ್ಯಗಳಲ್ಲಿ ಒಂದು ಕಾಲಪರಿವರ್ತನ
- ಕಾಲಪುರುಷ – ಕಾಲಕ್ಕೆ ಅಧಿಪತಿಯಾದ ದೇವತೆ; ಮೃತ್ಯುದೇವತೆ
- ಕಾಲಮುಖ – ಯಮನ ಬಾಯಿ, ಮೃತ್ಯುಮುಖ
- ಕಾಲರಾಜ – ಕಾಲಪುರುಷ
- ಕಾಲಲಬ್ಧಿ – (ಜೈನ) ಲಬ್ಧಿಪಂಚಕಗಳಲ್ಲಿ ಒಂದು; ಆಧ್ಯಾತ್ಮಿಕ ಜೀವನದ ಆರಂಭಕ್ಕೆ ಪಕ್ವವಾದ ಕಾಲ ಬರುವುದು
- ಕಾಲಸಂಸಾರ – (ಜೈನ) ಅವಸರ್ಪಿಣಿಯ ಮೊದಲ ಸಮಯದಲ್ಲಿ ಹುಟ್ಟುವುದು
- ಕಾಲಸಂಹರ – ಯಮನನ್ನು ಸಂಹರಿಸಿದವನು, ಶಿವ
- ಕಾಲಹರ – ಮರಣವನ್ನು ನಿವಾರಿಸುವವನು
- ಕಾಲಾಂತ – ಆಯುಸ್ಸಿನ ಕೊನೆ
- ಕಾಲಾಂತಕ – ಕಾಲಸಂಹರ
- ಕಾಲಾ)ಳಾ)ಗರು – ಕರಿಯ ಅಗರು
- ಕಾಲಾಗ್ನಿರುದ್ರ – ಪ್ರಳಯಕಾಲದ ಬೆಂಕಿಯುಗುಳುವ ರುದ್ರ
- ಕಾಲಾಧ್ವ- ಆಗ್ನೇಯ
- ಕಾಲಾನಲ – ಪ್ರಳಯಕಾಲದ ಬೆಂಕಿ
- ಕಾಲಾ(ಳಾ)ಯಸ – ಕಪ್ಪು ಲೋಹ, ಕಬ್ಬಿಣ
- ಕಾಲಾವಧಿ – ಗೊತ್ತುಪಡಿಸಿದ ಸಮಯ
- ಕಾಲಾಹಿ – ಕೃಷ್ಣಸರ್ಪ
- ಕಾಲಾಳ್ – ಪದಾತಿ
- ಕಾಲುಗುರ್ – ಕಾಲ್ಬೆರಳಿನ ಉಗುರು
- ಕಾಲುಡಿ – ಕಾಲುಮುರಿ
- ಕಾಲುರಿಚ – ಹಳ್ಳಿಗ
- ಕಾಲೂರ್ – ಚಿಕ್ಕ ಹಳ್ಳಿ, ಕುಗ್ರಾಮ
- ಕಾಲೆಡೆ – ಕಾಲಿನ ಬಳಿ
- ಕಾಲೇಯಕ – ನಾಯಿ
- ಕಾಲೋಚಿತ – ಸಮಯಕ್ಕೆ ಸೂಕ್ತವಾದ
- ಕಾಲೋ(ಳೋ)ದಕವಾರ್ಧಿ – (ಜೈನ) ಪ್ರಳಯಕಾಳದಲ್ಲಿ ಉಕ್ಕಿಬರುವ ಸಮುದ್ರ; (ಜೈನ) ಧಾತಕೀ-ಪುಷ್ಕರ ದ್ವೀಪಗಳ
- ನಡುವಣ ಸಮುದ್ರಕಾಲೋ(ಳೋ)ರಗ – ಕೃಷ್ಣಸರ್ಪ, ಕರಿನಾಗ
- ಕಾಲ್ಗಟ್ಟೆ – ಕಾಲುವೆ ಮತ್ತು ಕಟ್ಟೆ
- ಕಾಲ್ಗಡಗ – ಕಾಲಬಳೆ
- ಕಾಲ್ಗಾಪು – ಪದಾತಿ; ಬೆಂಗಾವಲು
- ಕಾಲ್ಗುತ್ತು – ಕಾಲಿನಿಂದಸ ಕುಕ್ಕು, ಬೆದಕಿ ಪರೀಕ್ಷಿಸು
- ಕಾಲ್ಗೆಡಿಸು – ಅಡ್ಡಗಟ್ಟು; ಗಾಬರಿಗೊಳಿಸು; ಧೈರ್ಯಗುಂದಿಸು
- ಕಾಲ್ಗೆಡು – ಶಕ್ತಿಗುಂದು
- ಕಾಲ್ಗೊಲೆ – ತುಳಿದು ಕೊಲ್ಲುವುದು
- ಕಾಲ್ಗೋ – ಕಾಲುಜೊಡಿಸು; ವಾಹನವನ್ನೇರು; ಹಿಂಬಾಲಿಸು
- ಕಾಲ್ತೊಡರ್ – ಕಾಲಿಗೆ ತೊಡಕಿಕೊಳ್ಳು
- ಕಾಲ್ದೆಗೆ – ಓಡಿಹೋಗು, ಪಲಾಯನ ಮಾಡು
- ಕಾಲ್ಪರಿ – ಕಾಲು ಕೀಳು, ಓಡಿಹೋಗು
- ಕಾಲ್ವಟ್ಟೆ – ಕಾಲುದಾರಿ
- ಕಾಲ್ಸರಿ – ಕಾಲುವೆಯಂತೆ ಸುರಿಯುವ ಮಳೆ
- ಕಾಲ್ಸೊಲಪು – ಕಾಲು ಸೋತುಹೋಗುವಿಕೆ
- ಕಾವ್ – ಅನುಕರಣ ಶಬ್ದ
- ಕಾವ – (ಕಾಮ) ಮನ್ಮಥ
- ಕಾವಡಿಗಾ¾ – ಕಂಬಿ (ಅಡ್ಡೆ) ಹೊರುವವನು
- ಕಾವಣ – (ಕಾಯಮಾನ) ಚಪ್ಪರ, ಹಂದರ
- ಕಾವದೇವ – ಕಾಮದೇವ
- ಕಾವನಂಬು – ಕಾಮಬಾಣ
- ಕಾವನಗೆಲ್ಲ – ಕಾಮನ ಗೆಲವು
- ಕಾವನಯ್ಯ – ಕಾಮನ ತಂದೆ, ವಿಷ್ಣು
- ಕಾವರಿಸು – ಕಾತರಿಸು
- ಕಾವಲಿ – ಬಾಣಲಿ, ಹುರಿಯುವ ಹೆಂಚು
- ಕಾವಲೆ – ಬಯಕೆ
- ಕಾವಳ – ಕತ್ತಲೆ, ಮಬ್ಬು
- ಕಾವಳಗೊಳ್ – ಕತ್ತಲಲ್ಲಿ ಸೇರು, ಅಡಗಿಕೊ
- ಕಾವಿ – ಕೆಂಪು ಮಣ್ಣು; ಜಾದು ಕಲ್ಲು; ಕಾಷಾಯ ವಸ್ತ್ರ
- ಕಾವು – ದಂಟು, ದೇಟು; ಹಿಡಿಕೆ; ದಡ, ಕರೆ
- ಕಾವ್ಯ – ಕಬ್ಬ, ಕವಿತೆ; ಶುಕ್ರಾಚಾರ್ಯ
- ಕಾವ್ಯಪ್ರಯೋಗ – ಕಾವ್ಯರಚನೆ; ಕಾವ್ಯೋಕ್ತಿಗಳನ್ನು ಪ್ರಯೋಗಿಸು
- ಕಾವ್ಯಬಂಧ – ಕಾವ್ಯದ ಶಯ್ಯೆ
- ಕಾಶ – ಕಾಂತಿ; ಜೊಂಡುಹುಲ್ಲು
- ಕಾಶಾಂಬರ – ಕಾವಿಯ ಬಟ್ಟೆ
- ಕಾಶ್ಮೀರ – ಕುಂಕುಮ; ಕೇಸರಿ
- ಕಾಶ್ಯ – ಪ್ರಕಾಶ, ತೇಜಸ್ಸು; ಹೆಂಡ
- ಕಾಷ್ಠಾಂತರ – ದಿಗಂತ
- ಕಾಷ್ಠಾಂಬರ – ದಿಗಂಬರ
- ಕಾಷ್ಣ್ರ್ಯ – ಕಪ್ಪು ಬಣ್ಣ
- ಕಾಸಟ – ಹತ್ತಿಯ ಬಟ್ಟೆ
- ಕಾಸರಪತಿ – ಕಾಡು ಕೋಣ
- ಕಾಸಾಯ – ಕಾಷಾಯ
- ಕಾಸಾರ – ಕೊಳ
- ಕಾಸಿಗಪ್ಪಡ – ಕಾಷಾಯವಸ್ತ್ರ
- ಕಾಸು – ಬಿಸಿಮಾಡು, ಕರಗಿಸು; ನೆಲವು; ಕಾಚ
- ಕಾಸೆ – ಕಚ್ಚೆ; ಕಾವಿ ಬಟ್ಟೆ
- ಕಾಹಳ(ಲ)(ಲೆ) – ದೊಡ್ಡ ಭೇರಿ, ನಗಾರಿ
- ಕಾಹಳಿಕಾ – ಕಾಹಳ
- ಕಾಳಕೂಟ – ವಿಷ
- ಕಾಳಕೂಟಪ್ರಭವ – ಕಾಳಕೂಟಕ್ಕೆ ಜನ್ಮವಿತ್ತುದು
- ಕಾಳರಕ್ಕಸ – ಕಪ್ಪುಬಣ್ಣದ ರಾಕ್ಷಸ
- ಕಾಳವಟ್ಟ – ಕರ್ಣನ ಬಿಲ್ಲಿನ ಹೆಸರು;
- ಕತ್ತಿಯುದ್ಧದ ಒಂದು ವರಸೆ
- ಕಾಳ(ಸ)ಸೆ – ಅಂಟಿಕೊಳ್ಳುವಿಕೆ; ಬೆಸುಗೆ
- ಕಾಳಸೆಗೊಳ್ – ಅಂಟಿಕೊಳ್ಳು
- ಕಾಳಹಸ್ತ – ಯಮನ ಕೈ, ಮೃತ್ಯುಹಸ್ತ
- ಕಾಳಾ(ಳ)ಂಜಿ -ಪೀಕದಾನಿ, ಉಗುಳುವ ಪಾತ್ರೆ
- ಕಾಳಾಂಬುವಾಹ – ಕರಿಯ ಮೋಡ
- ಕಾಳಾಗರು – ಕರಿಯ ಅಗಿಲು
- ಕಾಳಿಂದೀಸೋದರ – ಯಮ
- ಕಾಳಿಕೆ – ಕಲ್ಮಷ
- ಕಾಳ್ಕಾಳ್ – ಒಂದು ಅನುಕರಣ ಧ್ವನಿ
- ಕಾಳ್ಬೊಜಂಗ – ಕಾಡುವಿಟ, ಒರಟು ಸ್ವಭಾವದ ವಿಟ
- ಕಾಳ್ಮರೆ – ಕಾಡು ಜಿಂಕೆ
- ಕಾಳ್ಮಾತು – ಕೆಟ್ಟ ಮಾತು; ವ್ಯರ್ಥ ಮಾತು
- ಕಿಂಕರಣ – ಕಿಂಕರತೆ, ಆಳಾಗಿರುವಿಕೆ
- ಕಿಂಕರಭಾವ – ಸೇವಕನಂತೆ ಇರುವುದು
- ಕಿಂಕರವೆಸ – ಆಳಿನ ಕೆಲಸ, ಊಳಿಗವೃತ್ತಿ
- ಕಿಂಕರವೆಸಗೆಯ್ – ಊಳಿಗದ ಕೆಲಸ ಮಾಡು
- ಕಿಂಕರ್ತವ್ಯತಾಮೂಢ – ದಿಕ್ಕು ತೋಚದಿರುವವನು
- ಕಿಂಕಿಣಿ – ಕಿರುಗೆಜ್ಜೆ
- ಕಿಂಕಿಣೀಕ್ವಣಿತ – ಕಿರುಗೆಜ್ಜೆಯ ನಾದ
- ಕಿಂಕಿಣೀದಾಮ – ಕಿರುಗೆಜ್ಜೆಗಳುಳ್ಲ ನಡುಕಟ್ಟು
- ಕಿಂಕಿಣೀರವ – ಕಿಂಕಿಣಿ ರವ
- ಕಿಂಕಿಣೀರುತಿ – ಕಿಂಕಿಣಿ ರವ
- ಕಿಂಕಿರ – ಕುದುರೆ; ಕೋಗಿಲೆ; ದುಂಬಿ; ಕಾಮ
- ಕಿಂಕಿರಾತ – ಗಿಳಿ; ಕೋಗಿಲೆ; ಮನ್ಮಥ; ಅಶೋಕವೃಕ್ಷ; ಗೋರಂಟಿ
- ಕಿಂಕಿರಿ(ನಿ)ವೋಗು – ಕಿರಿಕಿರಿಗೊಳ್ಳು; ಸಿಡಿಮಿಡಿಗೊಳ್ಳು
- ಕಿಂಕುರ್ವಾಣಂಗೆಯ್ – ಸೇವೆ ಮಾಡು
- ಕಿಂಕುರ್ವಾಣತೆ – ಅಸಹಾಯ ಪರಿಸ್ಥಿತಿ, ದಿಗ್ಭ್ರಮೆ
- ಕಿಂಕುರ್ವಾಣಪ್ರವಣ – ಸೇವಾತತ್ಪರ
- ಕಿಂಚು(ಜು)ಲ(ಳ)ಕ – ಎರಹುಳು
- ಕಿಂಜಲ್ಕ(ಳ್ಕ) – ಕೇಸರ, ಹೂವಿನ ಕುಸುರು
- ಕಿಂಪಾಕ – ಪಕ್ವವಲ್ಲದ, ಮಾಗದ; ಒಂದು ವಿಷದಹಣ್ಣಿನ ಮರ; ಕಾರಸ್ಕರ ವೃಕ್ಷ
- ಕಿಂಪಾಕಪರಿಪಾಕ – ಕಿಂಪಾಕದ ಪರಿಣಾಮ; ಕೆಟ್ಟ ಪರಿಣಾಮ
- ಕಿಂಪುರುಷ – ಕುದುರೆಯ ತಲೆ ಮತ್ತು ಮನುಷ್ಯನ ದೇಹದ ದೇವತೆ, ಕಿನ್ನರ
- ಕಿಂಬಹುನಾ – ಹೆಚ್ಚು ಹೇಳುವುದೇನು
- ಕಿಂರಾಜ – ಚಿಲ್ಲರೆ ರಾಜ, ಅನಾಮಧೇಯ ರಾಜ
- ಕಿಂವಾರ್ತೆ – ಯಾರ ಸಮಾಚಾರ
- ಕಿಂಶುಕ – ಮುತ್ತುಗದ ಮರ
- ಕಿಟ – ಕಾಡು ಹಂದಿ, ಎಕ್ಕಲ
- ಕಿಟ್ಟ – ಲೋಹಗಳ ಕಿಲುಬು, ತುಕ್ಕು
- ಕಿಟ್ಟಳ – ಸೊಕ್ಕು, ಮದ; ಉಪಟಳ
- ಕಿಟ್ಟಾಲಯ – ಕೊಳೆ ತೊಳೆದುಕೊಳ್ಳುವ ಮನೆ, ಬಚ್ಚಲ ಮನೆ
- ಕಿಟ್ಟು – ತಾಗು, ಸೋಂಕು, ಸ್ಪರ್ಶ; ಲೇಪಿಸು, ಬಳಿ
- ಕಿಡಿ – ಬೆಂಕಿಯ ಚೂರು
- ಕಿಡಿಗುಟ್ಟು – ಕಿಡಿ ಹಾರಿಸು
- ಕಿಡಿಯಿಡು – ಕಿಡಿ ಕಾರು
- ಕಿಡಿವಣ್ಣ – ಕಿಡಿಯ ಬಣ್ಣ, ಕೆಂಪು ಬಣ್ಣ
- ಕಿಡಿವಿಡು – ಕಿಡಿ ಸೂಸು
- ಕಿಡಿಸು – ಕೆಡಿಸು, ಹಾಳುಮಾಡು
- ಕಿಡು – ನೋಡಿ, ಕೆಡು
- ಕಿಡುತರ್ – ಕ್ರಮವಾಗಿ ಕಳೆದುಹೋಗು, ನಿವಾರಣೆಯಾಗು
- ಕಿಣ – ಘರ್ಷಣೆಯಿಂದಾದ ಚರ್ಮದ ದಡ್ಡು, ಗಾಯದ ಗುರುತು
- ಕಿಣಕರ – ದಡ್ಡುಗಟ್ಟಿಸುವಂತಹ
- ಕಿಣೀಕೃತ – ಜಿಡ್ಡುಗಟ್ಟಿದ
- ಕಿತ – ಮೋಸ
- ಕಿತಕ – ಮೋಸಗಾರ
- ಕಿತವ – ಜೂಜುಗಾರ; ಮೋಸಗಾರ
- ಕಿತವಿ – ಮೋಸಗಾತಿ
- ಕಿತ್ತಂಬು – ಕಿರಿದಾದ ಬಾಣ
- ಕಿತ್ತಡ – ಅಸಹ್ಯಕರ
- ಕಿತ್ತಡಿ – ಚಿಕ್ಕ ಪಾದ; ಋಷಿ, ಮುನಿ
- ಕಿತ್ತನ್ – ಚಿಕ್ಕವನು
- ಕಿತ್ತನಾಸಿ – ಕತ್ತರಿಸಿದ ಮೂಗುಳ್ಳವನು
- ಕಿತ್ತಯ್ಯ – ಚಿಕ್ಕ ಒಡೆಯ, ಮರಿ ಸ್ವಾಮಿ
- ಕಿತ್ತಲಗು – ಬಿಚ್ಚುಗತ್ತಿ
- ಕಿತ್ತಾಚ – ಸಣ್ಣ ಆಚ ಮರ
- ಕಿತ್ತಾತ – ಚಿಕ್ಕವನು
- ಕಿತ್ತು – ಸಂಗೀತ (?)
- ಕಿತ್ತುಸಿರ್ – ಸಣ್ಣ ಮೇಲುಸಿರು
- ಕಿತ್ತೆಸಳ್ – ಸಣ್ಣ ಎಸಳು
- ಕಿದ್ದೆಸೆ – ಸಂಧಿವಾತ ರೋಗ
- ಕಿನಿಸು – ಕೋಪಿಸಿಕೊ
- ಕಿನಿಸುವೋದು – ಕೋಪವನ್ನು ಬೋಧಿಸು
- ಕಿನ್ನ – (ಖಿನ್ನ) ದುಃಖಗೊಂಡ
- ಕಿನ್ನರ – ಕುದುರೆಯಂತೆ ಕುಖ ಹಾಗೂ ಮನುಷ್ಯನಂತೆ ಶರೀರವುಳ್ಳ ಒಂದು ಅತಿಮಾನುವ ಜೀವಿ
- ಕಿನ್ನರಗೇಯ – ಕಿನ್ನರರ ಗಾಯನ
- ಕಿನ್ನರಮಿಥುನ – ಕಿನ್ನರದ್ವಯ, ಕಿನ್ನರದಂಪತಿ
- ಕಿನ್ನರಿ – ಕಿನ್ನರ ಸ್ತ್ರೀ ; ಒಂದು ತಂತಿವಾದ್ಯ
- ಕಿನ್ನರಿಕ್ರಿಯೆ – ಕಿನ್ನರಿ ಬಾರಿಸುವಿಕೆ
- ಕಿನ್ನಡು – ಕೆಳಗಿನ ನಾಡು, ಪಾತಾಳಲೋಕ
- ಕಿನ್ನೀರ್ – ತಳದ ಜಲ
- ಕಿನ್ನೀರ್ಗಾಣ್ – ಬತ್ತಿ ಹೋಗು
- ಕಿನ್ನೆಲ – ತಗ್ಗು
- ಕಿಮ್ಮೀರ – ಒಂದು ದೇಶ; ಭೀಮನಿಂದ ಸತ್ತ ಒಬ್ಬ ರಾಕ್ಷಸ
- ಕಿಮ್ಮೀರವೈರಿ – ಭೀಮ
- ಕಿರ – ಕಾಡು ಹಂದಿ
- ಕಿರಣ – ಬೆಳಕಿನ ಕಾಂತಿ
- ಕಿರಾಟ – ವ್ಯಾಪಾರಿ
- ಕಿರಾತ(ಕ) – ಕಾಡಿನ ವಾಸಿ; ಬೇಡ
- ಕಿರಾತವಡೆ – ಬೇಸರ ಸೈನ್ಯ
- ಕಿರಾರಸತಿ – ಬೇಡ ಹೆಂಗಸು, ಬೇಡಿತಿ
- ಕಿರಿ – ಕೂದಲನ್ನು ತೆಗೆ; ಹಲ್ಲು ಕಿಸಿ; ದಾರದ ಗಂಟು; ಹಂದಿ
- ಕಿರಿ(ಯಿ)ಸು – ಕ್ಷೌರ ಮಾಡಿಸು
- ಕಿರಿವಕ್ತ್ರ – ಹಂದಿಯ ಮುಖ
- ಕಿರೀಟ – ರಾಜರ ತಲೆಯ ರತ್ನಖಚಿತ ಟೊಪ್ಪಿಗೆ
- ಕಿರೀಟಿ – ಕಿರೀಟ ಧರಿಸಿದವನು; ಅರ್ಜುನ
- ಕಿರುಂಡೆಗ – ಗೋಪ್ಯವಾಗಿ ಹಡೆದ ಮಗ(?)
- ಕಿರ್ಗಣ್ಣಿಕ್ಕು – ಕೆಳಗಣ್ಣಿನಿಂದ ನೋಡಿ
- ಕಿರ್ಗಯ್ಯಾಗು – ಕೈಗುಂದು, ಕಡಿಮೆಯಾಗು
- ಕಿರ್ಗಿ – ಚೆಲುವು
- ಕಿರ್ಚು – ಬೆಂಕಿ; ತಾಪ
- ಕಿಲ(ಳ)ಕಿಂಚಿತ – ಶೃಂಗಾರ ಚೇಷ್ಟೆ; ಸಿಟ್ಟು, ಸಂತೋಷ ಮೊದಲಾದವುಗಳ ಸಮ್ಮಿಶ್ರಣ
- ಕಿಲಕಿಂಚಿತೆ – ಕಿಲಕಿಂಚಿತವನ್ನು ಮಾಡುವವಳು
- ಕಿಲುಂಬು – ಕಿಲುಬು, ಕೊಳೆ, ಕಿಟ್ಟ
- ಕಿಲುಂಬುಗೊಳ್ – ಕಿಲುಬುಗಟ್ಟು
- ಕಿಲ್ಬಿಷ – ಕೊಳೆ, ಕಳಂಕ; ಪಾಪ; ಅಪರಾಧ
- ಕಿಲ್ಬಿಷಿಕ – (ಜೈನ) ದೇವತೆಗಳಲ್ಲಿ ಒಂದು ವರ್ಗ
- ಕಿಲ್ಮಿ(ಲ್ವಿ)ಷ- ಕಿಲ್ಬಿಷ
- ಕಿಲ್ಮಿಷಿಕ – ಕಿಲ್ಬಿಷ
- ಕಿವರಕ – ಒಂದು ಅಲಂಕಾರ ವಸ್ತು
- ಕಿವಿಗೊಳ್ – ಕೇಳು, ಆಲಿಸು
- ಕಿವಿದುಡಿಗೆ – ಕಿವಿಯ ಆಭರಣ
- ಕಿವಿದೊಡವು – ಕಿವಿದುಡಿಗೆ
- ಕಿವಿಯಾರ್ – ಕಿವಿಗೆ ತೃಪ್ತಿಯಾಗು, ಕಿವಿ ತುಂಬು
- ಕಿವಿಯೀ – ಕಿವಿಗೊಡು
- ಕಿವಿಲುತನ – ಕೀಳ್ತನ, ಅಲ್ಪತೆ
- ಕಿವಿವೇಂಟಗೊಳ್ – ಕಿವಿವೇಟ ಹೊಂದು
- ಕಿವಿವೊಗು – ಕಿವಿಯನ್ನು ಪ್ರವೇಶಿಸು
- ಕಿವಿಸವಿ – ಕಿವಿಗೆ ಹಿತಕರವಾದ
- ಕಿವುಂ()ಡು – ಕಿವಿ ಕೇಳಿಸದಿರುವುದು
- ಕಿವುಂಡುವಡಿಸು – ಕಿವುಡಾಗುವಂತೆ ಮಾಡು
- ಕಿವುಂಡುಗೇಳ್ – ಕೇಳಿದರೂ ಕೇಳಿಸದಂತಿರು
- ಕಿಶೋರ – ಮರಿ, ಮಗು; ಮರಿಗುದುರೆ
- ಕಿಶೋರಕ – ಕಿಶೋರ
- ಕಿಷ್ಕಿಂಧ – ಒಂದು ಊರಿನ ಹೆಸರು; ಒಂದು ಆನೆಯ ಹೆಸರು
- ಕಿಸಲಯ – ಚಿಗುರು
- ಕಿಸಿ – ಹಿಗ್ಗಿಸು, ಅಗಲಗೊಳಿಸು
- ಕಿಸು – ಕೆಂಪು ಬಣ್ಣ; ತಾಮ್ರ
- ಕಿಸುಕುರಿ – ಒಂದು ಬಗೆಯ ಹುಲ್ಲು
- ಕಿಸುಗಟ್ಟು – ಕೆಂಪಾದ ಕಟ್ಟು
- ಕಿಸುಗಣ್ – ಕೆಂಪಾದ ಕಣ್ಣು
- ಕಿಸುಗಣ್ಚು – ಕಣ್ಣು ಕೆಂಪಾಗಿಸಿಕೊ, ಕೋಪಿಸಿಕೊ; ಕೋಪ, ಕ್ರೋಧ
- ಕಿಸುಗಣ್ಣ – ಕೆಂಪು ಕಣ್ಣುಳ್ಳವನು; ಕೋಗಿಲೆ
- ಕಿಸುಗಣ್ಬಿ(ೀ)ಡು – ಕೆಂಗಣ್ಣಿನಿಂದ ನೊಡು; ಕೋಪಿಸಿಕೊ
- ಕಿಸುಗದಿರ್ – ಕೆಂಪಾದ ಕಿರಣ
- ಕಿಸುಗಲ್ – ಕೆಂಪು ಕಲ್ಲು, ಮಾಣಿಕ್ಯ
- ಕಿಸುಗಾಡು – ಕೆಂಪು ಕಾಡು; ಕೆಂಪು ಮಣ್ಣಿನ ಭೂಮಿ
- ಕಿಸುಗುಳ – ಕೊಳೆ, ಹೊಲಸು; ಹೇಯವಸ್ತು; ಹೊಲಸು ವ್ಯಕ್ತಿ
- ಕಿಸುಗುಳೆ – ಹೊಲಸು ಹೆಂಗಸು
- ಕಿಸುಜಡೆ – ಕೆಂಪು ಜಡೆ, ಕೆಂಜಡೆ
- ಕಿಸುದಳಿರ್ – ಕೆಂಪು ಚಿಗುರು
- ಕಿಸುಬಿಸುಮೆಯ್ಯ – ಕೆಂಪು ಬಿಸಿ ದೇಹವುಳ್ಳವನು, ಅಗ್ನಿ
- ಕಿಸುರ್ – ಅಸಹ್ಯವಾಗಿರು; ಹೇಸಿಗೆ; ಮತ್ಸರ; ವಿರೋಧ; ಕೆಂಪು ಬಣ್ಣ; ತಾಮ್ರ
- ಕಿಸುರಳಿಪ – ಕಲಹವನ್ನು ಬಯಸುವವನು
- ಕಿಸುವಂಚೆ – ಕೆಂಪು ಬಟ್ಟೆ
- ಕಿಸುವಣ್ – ಕೆಂಪು ಹಣ್ಣು
- ಕಿಸುವಲಗೆ – ತಾಮ್ರದ ಹಲಗೆ; ತಾಮ್ರಪಟ
- ಕಿಸುವುಡಿ – ಕೆಂಪು ಪುಡಿ
- ಕಿಸುವೊನ್ – ಕೆಂಪು ಲೋಹ, ತಾಮ್ರ
- ಕಿಸುವೊನಲ್ – ಕೆಂಪು ಹೊನಲು
- ಕಿಸುವೊ¿ಲ್ – ಒಂದು ಊರಿನ ಹೆಸರು
- ಕಿಸುಸಂಜೆ – ಕೆಂಪಾದ ಸಂಜೆ
- ಕಿಸುಸಂಜೆವೊರೆ – ಸಾಯಂಕಾಲದ ಕೆಂಬಣ್ಣ ಕೂಡಿರು
- ಕಿಸಿಸೆರೆ – ಕೆಂಪಾದ ನರ
- ಕಿಸುಸೆರೆವರಿ – ಕೆಂಪು ನರ ಹರಡು
- ಕಿಳಿರ್ – ನಿಮಿರು
- ಕೀಚಕ – ಬಿದಿರು; ವಿರಾಟನ ಬಾವಮೈದುನ
- ಕೀಟ – ಹುಳು, ಕೀಡೆ; ಕ್ಷುದ್ರ ಜೀವಿ
- ಕೀಡಿ(ಡೆ) – ಕೀಟ, ಹುಳು
- ಕೀನಾಶ – ಕಿರಿಯ; ಜಿಪುಣ; ದರಿದ್ರ; ಯಮ
- ಕೀನಾಶಪಾಶ – ಯಮಪಾಶ
- ಕೀನಾಶಲುಲಾಯ – ಯಮನ ಕೋಣ
- ಕೀನಿವಲ್ – ಕೀಚು ಹಲ್ಲು
- ಕೀರ – ಮುಂಗುಸಿ; ಗಿಳಿ
- ಕೀರಂಜ – ಒಂದು ಹಕ್ಕಿ
- ಕೀರರವ – ಗಿಳಿಯ ಧ್ವನಿ
- ಕೀರವೃಂದ – ಗಿಳಿಗಳ ಗುಂಪು
- ಕೀರಾವಳಿ – ಗಿಳಿವಿಂಡು
- ಕೀರೋತ್ಕಾರ – ಗಿಳಿಗಳ ಚಪ್ಪರಣೆ
- ಕೀರ್ಣ – ತುಂಬಿದ; ಮುಸುಕಿದ
- ಕೀರ್ತಿಗೆ – .ಒಬ್ಬ ಕ್ಷುದ್ರ ದೇವತೆಯ ಹೆಸರು
- ಕೀರ್ತಿಮುಖ – ಆನೆಯ ಕೊಂಬಿನ ಗೊಣಸು; ಒಂದು ಆಭರಣ
- ಕೀರ್ತಿಸು – ಹೊಗಳು, ಸ್ತುತಿ ಮಾಡು
- ಕೀರ್ತಿಸ್ತಂಭ – ಯಶಸ್ಸಿನ ಸ್ಮಾರಕ ಕಂಬ
- ಕೀತ್ರ್ಯನ್ವಿತ – ಯಶಸ್ಸಿನಿಂದ ಕೂಡಿದವನು
- ಕೀಲ್ – ಅಗುಳಿ, ಬೆನೆ; ಕಡಾಣಿ
- ಕೀಲಕ – ಕೀಲ್, ಅಗುಳಿ
- ಕೀಲಣೆ – ಜೋಡಿಸುವಿಕೆ; ಕಟ್ಟು
- ಕೀಲಾಕ್ಷಿ – ಬೆಂಕಿಯ ಜ್ವಾಲೆಯಿರುವ ಕಣ್ಣು, ಕೆಮಡಗಣ್ಣು
- ಕೀಲಾರ – ಗೋಶಾಲೆ, ಕೊಟ್ಟಿಗೆ
- ಕೀಲ್ – (ಕೀಲ) ಕಡಾಣಿ; ಅಗುಳಿ
- ಕೀಲಾಲ – ರಕ್ತ; ನೀರು; ಅಮೃತ
- ಕೀಲಾಲಪ – ಅಮೃತ ಕುಡಿಯುವವನು, ದೇವತೆ
- ಕೀಲಾವಳಿ – ಜ್ವಾಲೆಗಳ ಸಮೂಹ
- ಕೀಲಿ – ಕ್ಷುದ್ರನಾದವನು
- ಕೀಲಿಗ – ಬೆಸ್ತ
- ಕೀಲಿತ – ಜೋಡಿಸಿದ; ಆರು ಬಗೆಯ ಸಂಹನನ ನಾಮಕರ್ಮಗಳಲ್ಲಿ ಒಂದು
- ಕೀಲಿಸು – ತಗುಲಿಕೊಳ್ಳು, ಜೋಡಿಸು; ನಾಟು; ಬಿಗಿದುಕಟ್ಟು
- ಕೀಲ್ಗುಡು – ಆಧಾರ ನೀಡು; ಬಿಗಿದು ಕಟ್ಟು
- ಕೀಲ್ಗೊಳಿಸು – ಜೋಡಿಸು, ಸೇರಿಸು
- ಕೀಲ್ದೆಗೆ – ಕೀಳನ್ನು ಕಳಚು
- ಕೀವಡಿಗೆ – ಕೀವು ತುಂಬಿ ನಾರುವಿಕೆ
- ಕೀವಿಲ – ಕೀಳಾದ, ಕೊಳಕು
- ಕೀವುಗಿವಿ – ಕೀವು ತುಂಬಿದ ಕಿವಿ
- ಕೀಶ – ಕೋತಿ, ಮಂಗ
- ಕೀಸು – ಕೃಶವಾಗಿ ಮಾಡು; ಕೆತ್ತು, ಕೊರೆ;
- ಕಿವಿಯಲ್ಲಿಟ್ಟುಕೊಳ್ಳುವ ತಾಳೆಯ ಗರಿ
- ಕೀಳ – ಜ್ವಾಲೆ
- ಕೀಳಿಡು – ಅರಚು, ಕೂಗು
- ಕೀಳು – ಹಸುವಿನ ಕರು
- ಕೀಳ್ವಾನಿಸ – ಕ್ಷುದ್ರ ವ್ಯಕ್ತಿ
- ಕುಂಕುಮರಾಗ – ಕೆಂಪು ಬಣ್ನ
- ಕುಂಕುಮವಿಲಾಸ – ಕುಂಕುಮದ ಶೋಭೆ
- ಕುಂಕುಮೋದಕ – ಕುಂಕುಮ ಕದಡಿದ ನೀರು
- ಕುಂಕುವ – ಕುಂಕುಮ
- ಕುಂಗ – ಮೀನುಗಾರ
- ಕುಂಚ – ಗೊಂಚಲು; ನವಿಲುಗರಿಯ ಸಣ್ಣ ಚಾಮರ
- ಕುಂಚಂಬಿಡಿ – ಕುಂಚ(ಚಾಮರ) ಹಿಡಿ
- ಕುಂಚಣಿಗೆ – ಜೈನ ಮುನಿಗಳ ಕೈಯಲ್ಲಿರುವ ನವಿಲುಗರಿಯ ಕುಂಚ
- ಕುಂಚವಡಿಗ – ಕುಂಚ ಹಿಡಿಯುವವನು, ಚಾಮರ ಬಿಸುವ ಆಳು
- ಕುಂಚಿ – ಕುಚ್ಚು, ಗೊಂಚಲು
- ಕುಂಚಿಕೆ(ಗೆ) – ಕುಂಚ; ಗೊಣಸು; ಬೀಗದಕೈ
- ಕುಂಚಿತ – ಬಾಗಿದ; ಮುದುಡಿದ
- ಕುಂಚಿತಕೇಶಪಾಶ – ಗುಂಗುರು ಕೂದಲು
- ಕುಂಜ – ಬಳ್ಳಿಮಾಡ, ಲತಾಗೃಹ
- ಕುಂಜನ – ಪೊದರು
- ಕುಂಜರ – ಮಿಗಿಲಾದುದು; ಆನೆ; ಒಬ್ಬ ರಾಕ್ಷಸನ ಹೆಸರು
- ಕುಂಜರಕರ – ಆನೆಯ ಸೊಂಡಿಲು
- ಕುಂಜರಗಾಮಿನಿ – ಗಜಗಮನೆ, ನಿಧಾನವಾಗಿ ನಡೆಯುವವಳು
- ಕುಂಜರಾರಾತಿ – ಆನೆಯ ಶತ್ರು, ಸಿಂಹ
- ಕುಂಜರಾರಿ – ಕುಂಜರಾರಾತಿ
- ಕುಂಜರಾಶನ – ಅರಳಿಮರ
- ಕುಂಜೋಪಾಂತ – ಹೊದರಿನ ಅಮಚು
- ಕುಂಟ – ಕಾಲು ಊನವಾವನು
- ಕುಂಟಣಿ(ಲಿ) – (ಕುಟ್ಟಿನೀ) ತಲೆಹಿಡುಕಿ
- ಕುಂಟಣಿವದಿರ್ – ಕುಂಟಣಿಯ ಮಾತಿನ ಶ್ಲೇಷೆ
- ಕುಂಟವೆರಲ್ – ಮೊಂಡಾದ ಬೆರಳು
- ಕುಂಟೆ – ಮೊಳಕಾಲು
- ಕುಂಠ – ಸೋಮಾರಿ, ಅಲಸಿ
- ಕುಂಠೀಕರಣ – ಕುಂಠಿತಗೊಳಿಸುವಿಕೆ
- ಕುಂಡಲ – ಕಿವಿಯ ಒಂದು ಆಭರಣ; ಒಂದು ಬಗೆಯ ಶಿರೋವೇಷ್ಟನ
- ಕುಂಡಲಿ – ಸುರುಳಿ ಸುತ್ತಿಕೊಂಡ ಹಾವು
- ಕುಂಡಲೀಕರಣ – ಗುಂಡಾಗಿ ಮಾಡುವುದು; ವೃತ್ತರಚಿಸುವುದು
- ಕುಂಡಲೀಶಯನ – ಶೇಷನ ಮೇಲೆ ಮಲಗಿದವು, ವಿಷ್ಣು
- ಕುಂಡಲೀಶ್ವರಕುಂಡಲ – ಸರ್ಪವನ್ನೇ ಕಿವಿಯ ಆಭರಣವನ್ನಾಗಿ ಪಡೆದವನು, ಶಿವ
- ಕುಂತ – ಈಟಿ, ಭರ್ಜಿ
- ಕುಂತಣ – ಕೂದಲು, ಕೇಶ; ಕುಂತಳದೇಶ
- ಕುಂತಲ – ಕುಂತಣ, ಕೂದಲು
- ಕುಂತಹಸ್ತ – ಕುಂತವನ್ನು ಹಿಡಿದವನು
- ಕುಂತಳ – ತಲೆಗೂದಲು; ಒಂದು ಮೂಲಿಕೆ
- ಕುಂತಳಭರ – ಕುಂತಲಹಸ್ತ
- ಕುಂತಳಿಕ(ಕೆ) – ಒಂದು ಜಾತಿಯ ಪಕ್ಷಿ
- ಕುಂತಾಕುಂತಿ – ಕುಂತಗಳಿಂದ ಮಾಡುವ ಯುದ್ಧ
- ಕುಂತಾಹತಿ – ಈಟಿಯ ಹೊಡೆತ
- ಕುಂಥು – ಒಂದು ಬಗೆಯ ಕೀಟ; (ಜೈನ) ಹದಿನೇಳನೆಯ ತೀರ್ಥಂಕರನ ಹೆಸರು
- ಕುಂದ – ಮೊಲ್ಲೆ ಹೂ; ಅಪರಂಜಿ
- ಕುಂದಿಸು – ಕುಗ್ಗಿಸು, ಕಡಿಮೆ ಮಾಡು
- ಕುಂದು – ಕುಂದ, ಕೊರತೆ; ದನಕ್ಕೆ ಬರುವ ಒಂದು ರೋಗ
- ಕುಂದುಗೆ – ಕೊರತೆ, ನ್ಯೂನತೆ
- ಕುಂದುಗೊಳ್ – ಬಡವಾಗು, ಸೊರಗು
- ಕುಂದುವಡೆ – ಕುಗ್ಗು, ಕಡಿಮೆಯಾಗು
- ಕುಂಬ – (ಕುಂಭ) ಗಡಿಗೆ; ಕೂವೆ ಮರ; ಯಾಗಶಾಲೆಯ ಬೇಲಿ
- ಕುಂಬಕಂಬಾಯ್ – ಉಸಿರು ಕಟ್ಟಿಕೊಂಡು ಹಾಯು
- ಕುಂಬತಳ – ಆನೆಯ ನೆತ್ತಿ
- ಕುಂಭ – ಆನೆಯ ಕುಂಭಸ್ಥಳ; ಕೊಡ, ಕಳಶ
- ಕುಂಭಕ – ಉಸಿರನ್ನು ತಡೆಹಿಡಿಯುವಿಕೆ
- ಕುಂಭಕರ್ಣ – ಒಬ್ಬ ರಾಕ್ಷಸ, ರಾವಣನ ತಮ್ಮ
- ಕುಂಭಕಾರ – ಕುಂಬಾರ
- ಕುಂಭಕೂಟ – ಆನೆಯ ಕುಂಭದ ತುದಿ
- ಕುಂಭಜ – ದ್ರೋಣ, ಅಗಸ್ತ್ಯ
- ಕುಂಭತಟ – ಆನೆಯ ಕುಂಭಸ್ಥಳ
- ಕುಂಭಧ್ವಜ – ಕುಂಭದ ಚಿಹ್ನೆಯುಳ್ಳ ಧ್ವಜ, ದ್ರೋಣನ ಧ್ವಜ
- ಕುಂಭಭೇಧನ – ಆನೆಯ ಕುಂಭಸ್ಥಳವನ್ನು ಸೀಳುವುದು
- ಕುಂಭಧ್ವಜ – ದ್ರೋಣ
- ಕುಂಭಸಂಭವ – ದ್ರೋಣ
- ಕುಂಭಸಂಭವಸಂಭವ – ದ್ರೋಣಪುತ್ರ, ಅಶ್ವತ್ಥಾಮ
- ಕುಂಭಾಂಬು – ಕೋಡದ ನೀರು
- ಕುಂಭಿ – ಆನೆ; ಒಂದು ಜಾತಿಯ ಮರ
- ಕುಂಭಿನಿ – ಭೂಮಿ; ಹೆಣ್ಣಾನೆ
- ಕುಂಭಿನೀಪತಿ – ರಾಜ
- ಕುಂಭೀನ – ದೊಡ್ಡ ಆನೆ
- ಕುಂಭೀನಸ – ಹಾವು
- ಕುಂಭೀರ – ಮೊಸಳೆ
- ಕುಕವಿ – ಕೀಳು ಕವಿ, ಕೆಟ್ಟ ಕವಿ
- ಕುಕಿಲ್ – ಕೋಗಿಲೆಯ ಕೂಜನ; ಕೋಗಿಲೆ
- ಕುಕ್ಕು – ಚುಚ್ಚು; ಕೊಕ್ಕರೆ
- ಕುಕ್ಕುಟ – ಹುಂಜ; ಮೋಸ, ಕಪಟ
- ಕುಕ್ಕುಟಿ – ಮೋಸ, ವಂಚನೆ
- ಕುಕ್ಕುಟಾಸನ – ಯೋಗಾಸನದ ಒಂದು ಪ್ರಕಾರ
- ಕುಕ್ಕುಟೇಶ್ವರ – ಗೊಮ್ಮಟೇಶ್ವರ
- ಕುಕ್ಕುಭ – ಕಾಡು ಕೋಳಿ
- ಕುಕ್ಕುರಿ – ಹೆಣ್ಣು ನಾಯಿ
- ಕುಕ್ಕೂಕೂ – ಕೋಳಿ ಕೂಗಿನ ಅನುಕರಣ ಶಬ್ದ
- ಕುಕ್ಕೆ – ಹೊಟ್ಟೆ
- ಕುಕ್ಷಿ – ಹೊಟ್ಟೆ; ಗುಹೆ
- ಕುಕ್ಷಿನಿವಾಸ – ಗುಹೆಯಲ್ಲಿನ ವಾಸಸ್ಥಳ
- ಕುಕ್ಕಿನಿವಾಸಿ – ಗುಹೆಯಲ್ಲಿ ವಾಸಿಸುವವನು
- ಕುಚ – ಮೊಲೆ
- ಕುಚಚೂಚುಕ – ಮೊಲೆಯ ತೊಟ್ಟು
- ಕುಚರ – ನೆಲದ ಮೇಲೆ ಸಾಗುವ; ಮಂದಗತಿಯ;
- ವಕ್ರಬುದ್ಧಿಯವನು
- ಕುಚಾಂತರ – ಮೊಲೆಗಳ ನಡುವಿನ ಅಂತರ
- ಕುಚಾಗ್ರ – ಕುಚಚೂಚುಕ
- ಕುಚಾಬನನ – ಕುಚಚೂಚುಕ
- ಕುಚು – ಗೊಂಚಲು; ಗೋಡೆ
- ಕುಜ – ಮರ; ಮಂಗಳ ಗ್ರಹ; ನಿಷ್ಠುರದ ಮಾತು
- ಕುಜವಾರ – ಮಂಗಳವಾರ
- ಕುಜಾತ – ಭೂಮಿಯಿಂದ ಹುಟ್ಟಿದುದು, ಮರ
- ಕುಜಾತವಿವರ – ಮರದ ಪೊಟರೆ
- ಕುಜಾತಿಸಮೃದ್ಧ – ಮರಗಳಿಂದ ತುಂಬಿದ
- ಕುಜ್ಜ – ಗುಜ್ಜ, ಬಾಗಿದ
- ಕುಟ – ಕೊಡ; ಮರ; ಸುತ್ತಿಗೆ
- ಕುಟಂಕ – ಮೇಲ್ಛಾವಣಿ; ಕೊಟ್ಟಿಗೆ
- ಕುಟಜ – ಕೊಡಸಿಗೆ ಹೂ
- ಕುಟಹಾರಿ – ನೀರು ತರುವ ದಾಸಿ
- ಕುಟಿಹಾರಿಕೆ – ಕುಟಿಹಾರಿ
- ಕುಟಿ – ಬಾಗಿದುದು; ಗುಡಿಸಲು
- ಕುಟಿಲ – ವಕ್ರವಾದ; ಗುಂಗುರಾದ; ಮೋಸ
- ಕುಟಿಲಕುಂತಲ – ಗುಂಗುರು ಕೂದಲು
- ಕುಟಿಲಕುಂತ(ಲೆ)ಳೆ – ಗುಂಗುರು ಕೂದಲುಳ್ಳವಳು
- ಕುಟಿಲಾಲಕ -ಕುಟಿಲಕುಂತಲ
- ಕುಟಿಲಾಶಯ – ವಕ್ರಬುದ್ಧಿಯವನು
- ಕುಟಿಲಾಳಕಿ – ಗುಂಗುರು ಕೂದಲುಳ್ಳವಳು
- ಕುಟೀಚಕ – ಸನ್ಯಾಸದ ನಾಲ್ಕು ಬಗೆಗಳಲ್ಲಿ ಒಂದು
- ಕುಟೀರ – ಗುಡಿಸಲು
- ಕುಟೀರಕ – ಸಣ್ಣ ಗುಡಿಸಲು
- ಕುಟುಂಬಿಗ – ಕುಟುಂಬವುಳ್ಳವನು, ಕುಟುಂಬಿ
- ಕುಟುಂಬಿನಿ – ಮನೆಯ ಒಡತಿ
- ಕುಟುಕು – ಹಕ್ಕಿ ಮರಿಗೆ ಕೊಡುವ ಗುಟುಕು; ಕುಕ್ಕು
- ಕುಟುಕುಗೊಳ್ – ಕುಕ್ಕಿ ತಿನ್ನು; ತುತ್ತುಗೊಳ್ಳು
- ಕುಟ್ಟಿನಿ – ಕುಂಟಣಿ
- ಕುಟ್ಟಿಮ – ನೆಲಗಟ್ಟು
- ಕುಟ್ಟು – ಗುದ್ದು, ಹೊಡೆ; ಒಟಗುಟ್ಟು; ಕುಟ್ಟಿ ಹೊಟ್ಟು ತೆಗೆ
- ಕುಟ್ಮಲ(ಳ) – ಮೊಗ್ಗು
- ಕುಟ್ಮಳೀಕೃತ – ಕುಟ್ಮಳಿತ
- ಕುಠಾರ – ಕೊಡಲಿ, ಒಂದು ಆಯುಧ
- ಕುಠಾರಧರ – ಕೊಡಲಿ ಹಿಡಿದವನು, ಪರಶುರಾಮ
- ಕುಡಿ – ಸೇವಿಸು; ಚಿಗುರು; ವಂಶ
- ಕುಡಿತೆ – ಹಿಡಿಯಷ್ಟು
- ಕುಡಗೂಸು – ಕನ್ಯೆ
- ಕುಡಲಾದ ಕೂಸು – ಕನ್ಯಾದಾನ
- ಮಾಡಿಕೊಡುವುದಕ್ಕೆ ತಕ್ಕನಾದ ಹುಡುಗಿ
- ಕುಡಲಿರ್ದ ಕೂಸು – ದಾನ ಮಾಡಿ ಕೊಡಲಿರುವ ಕೂಸು
- ಕುಡಿಗೈ – ಸೊಂಡಿಲಿನ ತುದಿ
- ಕುಡಿಗೊಳ್ – ಚಿಗುರೊಡೆ
- ಕುಡಿತೆ – ಅಂಗೈಯಲ್ಲಿ ಹಿಡಿಯುವಷ್ಟು
- ಕುಡಿತೆಕಣ್ – ಬೊಗಸೆಯಂತೆ ಅಗಲವಾದ ಕಣ್ಣು
- ಕುಡಿತೆಗಣ್ಬೆಳಗು – ಅಗಲವಾದ ಕಣ್ಣ ಕಾಂತಿ
- ಕುಡಿದಳಿರ್ – ಬಳ್ಳಿಯ ಕೊನೆಯಲ್ಲಿನ ಚಿಗುರು
- ಕುಡಿನಿಮಿರ್ – ಕುಡಿಯಿಡು, ಚಿಗುರು
- ಕುಡಿನೀರ್ – ಕುಡಿಯುವ ನೀರು
- ಕುಡಿಬಿದಿರ್ – ಬಿದಿರಿನ ಕುಡಿ; ಕಳಿಲೆ
- ಕುಡಿಮಿಂಚು – ಬಳ್ಳಿಮಿಂಚು; ಕುಡಿಯಂತಹ ಮಿಂಚು
- ಕುಡಿಮುಂಜೆರಗು – ಮುಂಜೆರಗಿನ ತುದಿ
- ಕುಡಿಯ – ಒಕ್ಕಲಿಗ
- ಕುಡಿಯಳ್ಳೆ – ಪಕ್ಕೆಯ ತುದಿ
- ಕುಡಿಯಿಕ್ಕು – ಚಿಗುರು, ಹಬ್ಬು
- ಕುಡಿಯಿಡು – ಕುಡಿಯಿಕ್ಕು
- ಕುಡಿಯಿಸು – ಕುಡಿಯುವಂತೆ ಮಾಡು
- ಕುಡಿವರಿ – ಕುಡಿಯಿಕ್ಕು; ಉಕ್ಕಿ ಹರಿ
- ಕುಡಿವಾಲ – ಬಾಲದ ತುದಿ
- ಕುಡಿವಿಡು – ಕುಡಿಯಿಕ್ಕು
- ಕುಡಿವುರ್ವು – ಕುಡಿ ಹುಬ್ಬು
- ಕುಡಿವೆರಲ್ – ಬೆರಳಿನ ತುದಿ
- ಕುಡಿವೆರಸು – ತುದಿಯೊಂದಿಗೆ
- ಕುಡು – ಹೊಡೆ; ವಕ್ರವಾಗಿರುವಿಕೆ
- ಕುಡುಕಿಕ್ಕು – ಕುಟುಕು ಇಡು
- ಕುಡುಕು – ಕುಟುಕು
- ಕುಡುಗುರುಳ್ – ಕೊಂಕಿದ ಕೂದಲು
- ಕುಡುಗೋಲ್ – ಕುಡಿಲು; ಒಂದು ಆಯುಧ
- ಕುಡುತೆ – ಕುಡಿತೆ; ವಕ್ರತೆ
- ಕುಡಿದಡಿ – ಡೊಂಕಾದ ಕೋಲು
- ಕುಡುದಾಡೆ – ಕೋರೆ ಹಲ್ಲು
- ಕುಡುಪು – ಕುಡುವು, ಕುಡುಹು, ಡೊಂಕು; ವಾದ್ಯ ಬಾರಿಸುವ ಕೋಲು
- ಕುಡುಮಿಂಚು – ಕೊಂಕಾದ ಮಿಂಚು
- ಕುಡುವಿಲ್ – ಕುಡುಬಿಲ್ಲು, ಡೊಂಕಾದ ಬಿಲ್ಲು
- ಕುಡುವಿಲ್ಲ – ಮನ್ಮಥ, ಕಾಮ
- ಕುಡ್ಯ – ಗೋಡೆ
- ಕುಣಪ – ಹೆಣ
- ಕುಣಪಭೂಮಿ – ಶ್ಮಶಾನ
- ಕುಣಪಾಲಯ – ಕುಣಪಭೂಮಿ
- ಕುಣಿ – ನೆಗೆ, ನರ್ತಿಸು; ಮೊಂಡುಗೈಯ
- ಕುಣಿಕ – ಮೋಟುಗೈಯವನು
- ಕುಣಿಕೋಲ್ – ಕೋಲಾಟದ ಕೋಲು; ಪ್ರಾಣಿಯನ್ನು ಆಡಿಸುವವನು ಹಿಡಿದುಕೊಳ್ಳುವ ಕೋಲು
- ಕುಣುಕು – ಕುಟ್ಟು, ಪುಡಿಮಾಡು; ಅಗುಳಿ
- ಕುತಪ – ಬೆಚ್ಚಗಿನ; ಶ್ರಾದ್ಧಹೋಮಕ್ಕೆ ತಕ್ಕ ಕಾಲ; ಅಪರಾಹ್ನ; ಬೊಗಸೆ
- ಕುತಪಕಾಲ – ಶ್ರಾದ್ಧಕಾಲ
- ಕುತಕಪ್ರತತಿ – ಗಾಯಕ ವಾದಕ ನರ್ತಕರ ಸಮೂಕ
- ಕುತಪಿ – ವಾದ್ಯಗಾರ
- ಕುತೀರ್ಥಧ್ವಾಂತ – ಕೆಟ್ಟಮತವೆಂಬ ಕತ್ತಲೆ
- ಕುತುಕ – ಕೌತುಕ ; ಆಶ್ಚರ್ಯ
- ಕುತ್ಕೀಲ(ಳ) – ಪರ್ವತ
- ಕುತ್ತಿರ್ – ಭೇದಿಸಲ್ಪಟ್ಟ
- ಕುತ್ತಿಸು – ಚುಚ್ಚು, ಚುಚ್ಚಿಸು
- ಕುತ್ತು – ಚೂಪಾದುದರಿಂದ ತಿವಿ; ಹೊಡೆ, ಬಡಿ; ಕಣ್ಣು ಕೋರೈಸು; ಬಾಗು, ಕುಸಿ; ತೊಡು, ಧರಿಸು; ಏಟು, ಹೊಡೆತ; ಆಪತ್ತು
- ಕುತ್ತುಂಗುಳಿ – ಹೊಡೆಯುವ ಚಟವುಳ್ಳವನು
- ಕುತ್ತುನವಿರ್ – ನಿಮಿರಿದ ಕೂದಲು
- ಕುತ್ತುಪೆನ – ಜಗಳ, ಕದನ
- ಕುತ್ತುವಡೆ – ಪೆಟ್ಟು ತಿನ್ನು
- ಕುತ್ಸಿತ – ದೂಷಿತ; ನಿಂದ್ಯ ವಸ್ತು; ದುಷ್ಟ
- ಕುತ್ಸಿತಯೋನಿ – ಹೀನಜನ್ಮ, ಪಶುಪಕ್ಷ ಮುಂತಾದವು
- ಕುತ್ಸಿತತ್ವ – ಕೀಳುತನ
- ಕುತ್ಸಿತವೃತ್ತಿ – ನೀಚವೃತ್ತಿ
- ಕುತ್ಸಿತಾಚಾರ – ಹೀನ ನಡವಳಿಕೆ
- ಕುಥ – ಆನೆಯ ಬೆನ್ನ ಮೇಲೆ ಅಲಂಕಾರಕ್ಕಾಗಿ ಹೊದಿಸುವ ಬಣ್ಣದ ಬಟ್ಟೆ
- ಕುಥೆ – ಕುಥ
- ಕುದಿ – ಬೇಯು; ಮಾನಸಿಕವಾಗಿ ನೋಯು; ಕೋಪದಿಂದ ಜ್ವಲಿಸು; ಉಚಿತವಲ್ಲದ ಮಾತನ್ನಾಡು; ಹಾರು, ನೆಗೆ; ವ್ಯಥೆ, ಸಂಕಟ; ಹೊಟ್ಟೆಯ ಕಿಚ್ಚು; ರೋಷ
- ಕುದಿಗೊಳ್ – ಮರಳು; ಸಂಕಟಪಡು
- ಕುದಿಪ – ಕುದಿಯುವಿಕೆ; ಅಂತಃಸ್ತಾಪ; ತೀವ್ರ ಬಯಕೆ
- ಕುದಿಪು – ಕುದಿಯುವಿಕೆ; ದಾರುಣತೆ
- ಕುದಿಯಿಸು – ಕುದಿಸು, ಬೇಯಿಸು
- ಕುದಿರ್ – ಕುದುರು, ಬಿದಿರಿನ ಅಥವಾ ಮಣ್ಣಿನ ಕಣ; ಸಣ್ಣ ದ್ವೀಪ
- ಕುದು(ಕು)ಗುಳಿ – ವ್ಯಾಕುಲಗೊಂಡವನು; ಮತ್ಸರಗೊಂಡವನು; ವೈರ ತಾಳಿದವನು; ಆತುರಪಡುವವನು
- ಕುದುಗುಳಿತನ – ತೀವ್ರವಾದ ತವಕ, ಹಂಬಲ
- ಕುದುರ್ – ಗೋಡೆ
- ಕುದುರೆಗಂಡಿ – ಕೋಟೆಯಲ್ಲಿ ಕುದುರೆ ನುಗ್ಗುವಷ್ಟು ಅವಕಾಶ, ಕಿಂಡಿ
- ಕುದುರೆಗಾಲಿಕ್ಕು – ಕುದುರೆಯಂತೆ ಕಾಲನ್ನಿಡು
- ಕುದುರೆವಳಯ – ಕುದುರೆಯನ್ನು ಹತೋಟಿಯಲ್ಲಿಡಲು ಕಟ್ಟುವ ಸೊಂಟಪಟ್ಟಿ
- ಕುದೃಷ್ಠಾಂತ – ಕೆಟ್ಟ ದೃಷ್ಟಾಂತ, ಸರಿಯಲ್ಲದ ನಿದರ್ಶನ
- ಕುದೃಷ್ಟಿ – ಸರಿಯಲ್ಲದ ದೃಷ್ಟಿ; ದುಷ್ಟ ನೋಟ; ಮಿಥ್ಯಾಜ್ಞಾನ; ದೋಷಯುಕ್ತ ವಿಚಾರ; ಕುಮತದ ವಿಚಾರ
- ಕ್ಷುದ್ರಕ – ಒಂದು ನೃತ್ಯಭಂಗಿ
- ಕುಧರ – ಬೆಟ್ಟ, ಪರ್ವತ
- ಕುಧರಜಾರ್ಧಾಂಗ – ಆರ್ಧನಾರೀಶ್ವರ, ಗಿರಿಜೆಯನ್ನು ಅರ್ಧಾಂಗಿಯಾಗುಳ್ಳವನು, ಶಿವ
- ಕುಧರಜೆ – ರ್ವತರಾಜನ ಕುವರಿ, ಗಿರಿಜೆ, ಪಾರ್ವತಿ
- ಕುಧರಸ್ಥ – ಬೆಟ್ಟದ ತುದಿಯಲ್ಲಿ ವಾಸಿಸುವವನು, ಶಿವ; ವಿಷ್ಣುಕುಧರಾಗ್ರವಾಸಿ – ಕುಧರಸ್ಥ
- ಕುಧ್ರ – ಕುಧರ, ಬೆಟ್ಟ
- ಕುನಖ – ಉಗುರು ಕಪ್ಪಾಗುವ ಒಂದು ರೋಗ
- ಕುನಖಿ – ಕುನಖ ರೋಗವುಳ್ಳವನು
- ಕುನಯೋಪಪತ್ತಿ – ಕೆಟ್ಟ ತತ್ವದ ತರ್ಕ
- ಕುನಿ – ಮುದುರು, ಮುರುಟು; ತಲೆ ಬಾಗು; ಹಿಮ್ಮೆಟ್ಟು; ಗುಳಿ ಬಿದ್ದ ನೆಲ
- ಕುನುಂಗು – ಕುಗ್ಗು, ಸುರುಟು; ಬಾಗು; ಕುಸಿ
- ಕುನ್ನಗೆಯ್ – ಮುರಿದ ಕೈ, ಕತ್ತರಿಸಿದ ಕೈ
- ಕುನ್ನಿ – ನಾಯಿ; ಯಾವುದೇ ಪ್ರಾಣಿಯ ಮರಿ
- ಕುಪತಿ – ಭೂಮಿಯನ್ನು ಆಳುವವನು, ರಾಜ
- ಕುಪಥ – ಕಟ್ಟ ದಾರಿ; ಕೆಟ್ಟ ಮತ
- ಕುಪಿತಮತಿ – ಸಿಡುಕನ ಸ್ವಭಾವ
- ಕುಪಿತಾಕೃತಿ – ಕೋಪಗೊಂಡವನ ರೂಪ
- ಕುಪೂಯ – ನೀಚವಾದ, ತುಚ್ಛ
- ಕುಪ್ಪ – ಸೇನೆಯ ಶಿಬಿರದ ಡೇರೆ
- ಕುಪ್ಪಸ – (ಕೂರ್ಪಾಸ) ಕಂಚುಕ, ಒಂದು ಉಡುಪು
- ಕುಪ್ಪಸಿಗ – ಕುಪ್ಪಸ ತೊಟ್ಟವನು
- ಕುಪ್ಪಳಿಸು – ಹಾರು, ಜಿಗಿ
- ಕುಪ್ಪಿ – ಬತ್ತಳಿಕೆ; ಗಾಜು ಮುಂತಾದ್ದರ ಪಾತ್ರೆ
- ಕುಪ್ಪಿಗೆ – ಕೊಳವೆ; ಭರಣಿ
- ಕುಪ್ಪಿಸು – ಒಟ್ಟುಗೂಡಿಸು
- ಕುಪ್ಪು – ರಾಶಿಮಾಡು, ಪುಂಜೀಕರಣ; ಹಾರು, ನೆಗೆ; ಕಾರುವಿಕೆ, ನೆಗೆತ
- ಕುಪ್ಪೆ – ಕುಪ್ಪಿ, ಗುಟ್ಟೆ, ರಾಶಿ
- ಕುಪ್ಪೆಗೆಡೆ – ರಾಶಿಯಾಗಿ ಬೀಳು
- ಕುಪ್ಪೆಗೊಳ್ – ರಸಿಯಾಗಿ ಮಾಡು
- ಕುಪ್ಪೆವಾಯ್ – ನೆಗೆ, ಹಾರು
- ಕುಪ್ಯ – ಹಿತ್ತಾಳೆ ಕಂಚು ಮುಂತಾದ ಕೀಳು ಲೋಹ
- ಕುಬೇರ – ಅಷ್ಟದಿಕ್ಪಾಲಕರಲ್ಲಿ ಒಬ್ಬ, ಉತ್ತರ ದಿಕ್ಕಿನ ಅಧಿಪತಿ, ಧನಪತಿ
- ಕುಬೇರಕಾಂತ – (ಜೈನ) ಚಕ್ರವರ್ತಿಯ ಬಳಿಯ ಅಕ್ಷಯ ಭಂಡಾರ
- ಕುಬೇರದಳ – ಕುಬೇರನ ಸೈನ್ಯ
- ಕುಬೇರಪಟ್ಟಣ – ಅಲಕಾವತಿ
- ಕುಬೇರಾದ್ರೀಂದ್ರ – ಕುಬೇರನ ಬೆಟ್ಟ, ಕೈಲಾಸಪರ್ವತ
- ಕುಬ್ಜ – ಕುಳ್ಳಾದವನು, ಗಿಡ್ಡ; ಗೂನು ಬೆನ್ನಿನವನು
- ಕುಬ್ಜಕಸಂಸ್ಥಾನ – ತೊಂತ್ಮೂರು ನಮಕರ್ಮಗಳಲ್ಲಿ ಒಂದು
- ಕುಬ್ಜಕೀ – ಒಂದು ತಂತೀವಾದ್ಯ
- ಕುಬ್ಜೆ – ಬಾಗಿದ ಬೆನ್ನವಳು
- ಕುಭಾಷ್ಯ – ಕೆಟ್ಟ ವ್ಯಾಖ್ಯಾನ
- ಕುಭೃಚ್ಚಕ್ರ – ರಾಜರ ಸಮೂಹ; ಬೆಟ್ಟಗಳ ಗುಂಪು
- ಕುಭ್ರಜ್ಜಾತೆ – ಪರ್ವತರಾಜನ ಮಗಳು, ಪಾರ್ವತಿ
- ಕುಭೃತ್ – ಬೆಟ್ಟ, ಪರ್ವತ; ರಾಜ
- ಕುಭೃತ್ಪಕ್ಷ – ಬೆಟ್ಟದ ರೆಕ್ಕೆ; ರಾಜರ ಪಕ್ಷ
- ಕುಭೃತ್ಪತಿ – ರಾಜೇಂದ್ರ
- ಕುಭೃತ್ಸಂಗ – ರಾಜರ ಸಹವಾಸ
- ಕುಭೃತ್ಸುತೆ – ಕುಭೃಜ್ಜಾತೆ
- ಕುಭ್ರದ್ವಲ್ಲಭ – ಅರಸನ ಪ್ರೀತಿಪಾತ್ರ
- ಕುಮಂಜನ – ಒಂದು ಜಾತಿಯ ಗಿಡ
- ಕುಮತ – ಕೆಟ್ಟ ಮತ
- ಕುಮತನಿರತ(ತೆ) – ಕೆಟ್ಟ ಮತದಲ್ಲಿ ಆಸಕ್ತಿ ಹೊಂದಿದವನು(ಳು)
- ಕುಮತಿ – ದುಷ್ಟ ಭಾವನೆ; (ಜೈನ)ಅಷ್ಟವಿಧ ಜ್ಞಾನಗಳಲ್ಲೊಂದು; ದೋಷಯುಕ್ತ ಜ್ಞಾನ
- ಕುಮಾನುಷತ್ವ – ಕೆಟ್ಟ ಮನುಷೈ ಜನ್ಮ
- ಕುಮಾರ – ಬಾಲಕ; ಯುವಕ; ಷಣ್ಮುಖ
- ಕುಮಾರಕ – ಕುಮಾರ
- ಕುಮಾರಕಾಲ – ಹದಿನಾರು ವರ್ಷದೊಳಗಿನ ಹರಯ. ಕೌಮಾರ್ಯ
- ಕುಮಾರಭೃತ್ಯ – ಬಾಲಸೇವಕ
- ಕುಮಾರಶ್ರವಣ – ಝಯನ ಅಥವಾ ಬೌದ್ಧರ ಬಾಲಯತಿ
- ಕುಮಾರಿ – ಕನ್ಯೆ; ಹುಡುಗಿ; ಅರಗುವರಿ
- ಕುಮಾರಿಕೆ – ಕುಮಾರಿ
- ಕುಮುದ – ಬಿಳಿಯ ನೈದಿಲೆ; ದಿಗ್ಗಜಗಳಲ್ಲಿ ಒಂದು; (ಜೈನ) ಕಾಲಪ್ರಮಾಣದ ಒಂದು ಲೆಕ್ಕ
- ಕುಮುದಕರ – ಚಂದ್ರ; ಸಂತೋಷ ನೀಡುವವನು
- ಕುಮುದಪ್ರಿಯಾತಪ – ಚಂದ್ನ ಬೆಳಕು, ಬೆಲುದಿಂಗಳು
- ಕುಮುದಬಂಧು – ಚಂದ್ರ
- ಕುಮುದಬಾಂಧವ – ಕುಮುದಬಂಧು
- ಕುಮುದವನ – ನೈದಿಲೆಗಳ ಸಮೂಹ
- ಕುಮುದವೈರಿ – ಸೂರ್ಯ
- ಕುಮುದಾಂಗ – (ಜೈನ) ಒಂದು ಕಾಲಗಣನೆ
- ಕುಮುದಾಕರ – ನೈದಿಲೆಗಳ ಸಮೂಹ; ಸರೋವರ
- ಕುಮುದಾಕ್ಷಿ – ನೈದಿಲೆಯಂತೆ ಕಣ್ಣಳ್ಳವಳು
- ಕುಮುದಾನಂದನ – ಚಂದ್ರ
- ಕುಮುದಾಪ್ತ – ಚಂದ್ರ
- ಕುಮುದಾಭೋಗ – ನೈದಿಲೆಗಳ ಅರಳುವಿಕೆ
- ಕುಮುದಾರಿ – ಸೂರ್ಯ
- ಕುಮುದಿನಿ – ನೈದಿಲೆಯ ಬಳ್ಳಿ; ನೈದಿಲೆಗಳ ಸಮೂಹ; ನೈದಿಲೆಗಳಿಂದ ಕೂಡಿದ ಜಾಗ
- ಕುಮುದಿನೀಪತಿ – ಕುಮುದ ಬಂಧು
- ಕುಮುದಿನೀಬಾಂಧವ – ಕುಮುದ ಬಂಧು
- ಕುಮುದಿನೀಶ್ವರ – ಚಂದ್ರ
- ಕುಮುದ್ವತಿ – ಕೊಳ; ಒಂದು ನದಿಯ ಹೆಸರು
- ಕುಮ್ಮರಿ – ಕಾಡನ್ನು ಕಡಿದು ವ್ಯವಸಾಯಕ್ಕೆ ಯೋಗ್ಯವನ್ನಾಗಿ ಮಾಡಿದ ಜಾಗ
- ಕುಮ್ಮರಿಗಡಿ – ಬೇಸಾಯಕ್ಕಾಗಿ ಕಾಡನ್ನು ಕಡಿ
- ಕುಮ್ಮರಿಸು – ಕೆಳಕ್ಕೆ ಸುರಿ, ಚೆಲ್ಲು
- ಕುಮ್ಮು – ಗುಮ್ಮು; ಕುಟ್ಟು; ಕುಕ್ಕರಿಸಿ ಬೀಳು; ಇರಿ
- ಕುಯಕ – (ಕುಹಕ) ಕಪಟ, ಮೋಸ
- ಕುಯೋನಿ – ಪಶು ಪಕ್ಷಿ ಮೊದಲಾದ ಕೆಳವರ್ಗದ ಜನ್ಮ
- ಕುರ – (ಖುರ) ಗೊರಸು
- ಕುರಂಗ – ಜಿಂಕೆ, ಚಿಗರೆ
- ಕುರಂಗಧರ – ಜಿಂಕೆಯ ಗುರುತುಳ್ಳವನೂ, ಚಂದ್ರ
- ಕುರಂಗನಾಭಿ – ಕಸ್ತೂರಿ, ಮೃಗನಾಭಿ
- ಕುರಂಗರಿಪು – ಜಿಂಕೆಯ ಶತ್ರು, ಹುಲಿ
- ಕುರಂಗಾಂಬಕಿ – ಕುರಂಗನೇತ್ರೆ, ಜಿಂಕೆಯಂತೆ ಚಂಚಲ ಕಣ್ಣುಳ್ಳವಳು
- ಕುರಂಗು – ಕೋತಿ, ಕೋಡಗ
- ಕುರರ – ಕುರವಕ್ಕಿ; ಒಂದು ನೀರ ಹಕ್ಕಿ
- ಕುರರಿ – ಕುರರದ ಹೆಣ್ಣ ಬಗೆ
- ಕುರವಕ – ಮದರಂಗಿ
- ಕುರವಿ – ಗುಬ್ಬಚ್ಚಿ; ಒಂದು ಗಿಡದ ಹೆಸರು
- ಕುರಿ – ಬಾಗು, ಡೊಂಕಾಗು
- ಕುರು – ಮೈಮೇಲೆ ಏಳುವ ಗುಳಳೆ; ಪಕ್ವವಾದ ಅನ್ನ; ಒಂದು ದೇಶದ ಹೆಸರು
- ಕುರುಂಜಿಗೆ – ಕುರ್ಚಿಗೆ, ಹುಲ್ಲನ್ನು ತೆಗೆಯುವ ಸಲಕರಣೆ
- ಕುರುಕುರುಕಾರ – ಅಕ್ಕಸಾಲಿಗ
- ಕುರುಕುಲ(ಳ) – ಕುರುವಂಶ
- ಕುರುಕುಲಲಲಾಮ – ಕುರುಕುಲದ ಶ್ರೇಷ್ಠ
- ಕುರುಕ್ಷೇತ್ರ – ಪಾಂಡವ-ಕೌರವರು ನಡೆಸಿದ ಯುದ್ಧದ ಜಾಗ
- ಕುರುಜಾತ – ಕೌರವ
- ಕುರುಜು – ಬಿದಿರ ಮೆಳೆ
- ಕುರುಡ – ಕಣ್ಣು ಕಾಣದವನು; ಅಜ್ಞಾನಿ
- ಕುರುಡಾಗು – ಕಣ್ಣು ಕಾಣದಾಗು
- ಕುರುಡಾವು – ಕಣ್ಣು ಕಾಣದ ಹಸು
- ಕುರುಡಿ – ಕಣ್ಣು ಕಾಣದವಳು
- ಕುರುಡು – ಕಣ್ಣು ಕಾಣದ ಸ್ಥಿತಿ; ವಿವೇಕರಾಹಿತ್ಯ
- ಕುರುಣೆ – ಪ್ರಾಣಿಪಕ್ಷಿಗಳ ಮರಿ
- ಕುರುಣೆ – ಹಿಚಿಕೆ
- ಕುರುಧ್ವಜಿನಿ – ಕುರುಸೈನ್ಯ
- ಕುರುಪತಿ – ದುರ್ಯೋಧನ
- ಕುರುಪ್ರಭು – ಕುರುಪತಿ
- ಕುರುವ – ಪ್ರದೇಶ
- ಕುರುವಿಂದ – ಇಂಗಲೀಕ; ಒಂದು ಸುವಾಸನೆಯ ಹುಲ್ಲು; ಮಾಣಿಕ್ಯ
- ಕುರುವಿಂದಕ – ಮಾಣಿಕ್ಯ
- ಕುರುವೈರಿ – ಭೀಮಸೇನ
- ಕುರುಳ್ – ಕೂದಲು, ಮುಂಗೂದಲು
- ಕುರುಳಿ – ಚಿಕ್ಕ ಮಣ್ಣಿನ ಕುಡಿಕೆ; ಸುಕ್ಕು
- ಕುರುಳಿಗೊಳ್ – ಮುದುಡಿಕೊಳ್ಳು, ಸುಕ್ಕಾಗು
- ಕುರುಳೋಳಿ – ಕೇಶರಾಶಿ
- ಕುರುಳ್ಗೂದಲ್ – ಗುಂಗುರು ಕೂದಲು
- ಕುರುಳ್ಚು – ಅಯುಧ ಝಳಪಿಸು, ಶಸ್ತ್ರ ಸಂಚಾಲನ
- ಕುರುಳ್ದಲೆ – ಗುಂಗುರು ಕೂದಲುಳ್ಳ ತಲೆ
- ಕುರ್ಕು – ಒಂದು ಬಗೆಯ ನೀರ ಹಕ್ಕಿ
- ಕುರ್ಕುಟಾಹಿ – ಕೋಳಿಯ ದೇಹ ಮತ್ತು ಹಾವಿನ ಹೆಡೆಯುಳ್ಳ ಒಂದು ಸರ್ಪ
- ಕುರ್ಕುರಿ – ಕೆಣ್ಣು ನಾಯಿ
- ಕುರ್ಗು – ಕುಬ್ಜತೆ, ಕುಳ್ಳಾಗಿರುವುದು
- ಕುಲ – ಗುಂಪು; ಮನೆತನ
- ಕುಲ(ಂ)ಕರ – (ಜೈನ) ಒಬ್ಬ ಮನುವಿನ ಹೆಸರು
- ಕುಲಕ – ಒಂದು ಜಾತಿಯ ಮರ; ಕುಲಕ್ಕೆ ಸಂಬಂಧಿಸಿದ
- ಕುಲಕ್ಷತಿ – ಕುಲದ ವಿನಾಶ; ಕುಲದ ಕೇಡು
- ಕುಲಗಿರಿ – ಮಹೇ<ದ್ರ, ಮಲಯ, ಸಹ್ಯ, ಶುಕ್ತಿಮನ್, ಋಕ್ಷ, ವಿಂಧ್ಯ ಮತ್ತು ಪಾರಿಯಾತ್ರ ಎಂಬ ಏಳು ಮುಖ್ಯ ಪರ್ವತಗಳಲ್ಲಿ ಒಂದು
- ಕುಲಗೃಹ – ಉತ್ತಮ ಗೃಹ; ತವರು ಮನೆ
- ಕುಲಗೇಹ – ಕಯಲಗೃಹ
- ಕುಲಚರ್ಯೆ – ಕುಲಾಚಾರ; (ಜೈನ) ಐವತ್ತು
- ಮೂರು ಗರ್ಭಾನ್ವಯ ಕ್ರಿಯೆಗಳಲ್ಲಿ ಒಂದು
- ಕುಲಜ – ಸತುಲದಲ್ಲಿ ಹುಟ್ಟಿದವನು
- ಕುಲಟಾಂಗನೆ – ಹಾದರಗಿತ್ತಿ, ಜಾರೆ
- ಕುಲಟಾವಧು – ಕುಲಟಾಂಗನೆ
- ಕುಲಟೆ – ಕುಲಟಾಂಗನೆ
- ಕುಲತಿಲಕ – ಕುಲಕ್ಕೆ ತಿಲಕಪ್ರಾಯನಾದವನು
- ಕುಲತ್ಥ – ಹುರುಳಿ
- ಕುಲತ್ಥಿಕೆ(ಕಾ) – ಕಾಡಿಗೆಯಾಗಿ ಬಳಸುವ
- ನೀಲವರ್ಣದ ಕಲ್ಲು
- ಕುಲಥಾಂಜನ – ಕುಲತ್ಥಿಕೆಯ ಕಾಡಿಗೆ
- ಕುಲದೀಪಕ – ಕುಲವನ್ನು ಬೆಳಗುವವನು
- ಕುಲದಸೂಷಣ – ಕುಲಕ್ಕೆ ಕುಂದು ತರುವವನು
- ಕುಲದೈವ – ಕುಲದೇವತೆ, ಮನೆದೈವ
- ಕುಲಧನ – ಪಿತ್ರಾರ್ಜಿತ ಆಸ್ತಿ
- ಕುಲ(ಳ)ಧರ – ವಂಶೋದ್ಧರಕ; (ಜೈನ) ಒಬ್ಬ ಮನುವಿನ ಹೆಸರು
- ಕುಲಧ್ವಜ – ಕುಲದ ಧ್ವಜದಂತಿರುವವನು
- ಕುಲನಗ – ಕುಲಗಿರಿ
- ಕುಲನಾರಿ – ಕುಲೀನೆ, ಪತಿವ್ರತೆ
- ಕುಲಪತಿ – ಮನೆತನದ ಯಜಮಾನ
- ಕುಲಪರಿಭವ – ಕುಲಕ್ಕೆ ಅವಮಾನ
- ಕುಲಪಾಂಸುಲ – ಕುಲಕ್ಕೆ ದೂಳಾದ, ಕುಲಕಳಂಕ
- ಕುಲಪಾಂಸುಲೆ(ಳೆ) – ಕುಲಗೇಡಿ ಹೆಣ್ಣು; ಕುಲಟೆ
- ಕುಲಪಾಲನ – ಕುಧರ್ಮದ ಪರಿಪಾಲನೆ
- ಕುಲಪ್ರದೀಪ – ಕುಲವನ್ನು ಬೆಳಗಿಸುವವನು
- ಕುಲಭೂಭೃತ್ತು – ಕುಲಗಿರಿ
- ಕುಲಮಾನಿನಿ – ಗೃಹಿಣಿ
- ಕುಲರನ್ನ – ಕುಲಕ್ಕೆ ರತ್ನದಂತಿರುವವನು
- ಕುಲರಾಜ – ಕುಲೀನನಾದ ಅರಸು
- ಕುಲವಧು – ಕುಲನಾರಿ
- ಕುಲವನಿತೆ – ಕುಲನಾರಿ
- ಕುಲವರ್ಧನ – ಕುಲದ ಏಳಿಗೆ
- ಕುಲವಾಕ್ಕ್ರಿಯೆ – ಕುಲಚುರ್ಯಕ್ರಿಯೆ
- ಕುಲವೃದ್ಧ – ಕುಲದ ಹಿರಿಯ
- ಕುಲವೆಣ್ – ಕುಲೀನೆ
- ಕುಲಾಂಗನೆ – ಕುಲನಾರಿ
- ಕುಲಾಚಲ – ಕುಲಗಿರಿ
- ಕುಲಾಚಾರ – ಕುಲಧರ್ಮ
- ಕುಲಾಪವಾದ – ಕುಲಕ್ಕೆ ಬಂದ ಅಪವಾದ
- ಕುಲಾಲ – ಕುಂಬಾರ
- ಕುಲಾಲಕರಣ – ಕುಂಬಾರನ ಕೆಲಸ
- ಕುಲಾಲಗೇಹ – ಕುಂಬಾರನ ಮನೆ
- ಕುಲಾಲಚಕ್ರ – ಕುಂಬಾರನ ಚಕ್ರ; ತಿಗುರಿ
- ಕುಲಾವಧಿ – (ಜೈನ) ಕುಲಾಚಾರವನ್ನು
- ಕಾಯ್ದುಕೊಳ್ಳುವುದು
- ಕುಲಿಂಗ – ಕೆಟ್ಟ ಚಿಹ್ನೆ
- ಕುಲಿ(ಳಿ)ಕ – ಕುಲೀನ
- ಕುಲಿ(ಳಿ)ಶ – ವಜ್ರಾಯುಧ
- ಕುಲಿ(ಳಿ)ಶಧರ – ಇಂದ್ರ
- ಕುಲಿ(ಳಿ)ಶಧಾರಿ – ಕುಲಿಶಧರ
- ಕುಲಿಶವಿಘಾತ – ಕುಲಿಶದ ಹೊಡೆತ; ಮುಷ್ಟಿಯುದ್ಧದ ಒಂದು ಪ್ರಕಾರ
- ಕುಲಿಶಹಸ್ತ – ಇಂದ್ರ
- ಕುಲಿಶಾಯುಧ – ಇಂದ್ರಾಯುಧ
- ಕುಲಿಶಾಸ್ತ್ರ – ಕುಲಿಶಾಯುಧ
- ಕುಲಿಶಿ – ಇಂದ್ರ
- ಕುಲೀನವೃತ್ತಿ – ಕುಲೀನನ ನಡವಳಿಕೆ; ಭೂಮಿಯಲ್ಲಿ ಅಡಗಿರುವಿಕೆ
- ಕುಲೀ(ಳೀ)ರ – ಏಡಿ; ಕರ್ಕಾಟಕ ರಾಶಿ
- ಕುಲೋದ್ಭೂತ – ಕುಲೀನ; ಸತ್ಕುಲಪ್ರಸೂತ
- ಕುಲೋನ್ನತಿ – ಕುಲದ ಏಳಿಗೆ
- ಕುಲೋರ್ವೀಧರ – ಕುಲಪರ್ವತ
- ಕುಲ್ಯ – ಕುಲಕ್ಕೆ ಸಂಬಂಧಪಟ್ಟ; ಕುಲಜ
- ಕುಲ್ಯಾ – ಹಳ್ಳ
- ಕುವರ್ಣ – ಕೆಟ್ಟ ಬಣ್ಣ; ಕಪ್ಪು ಬಣ್ಣ
- ಕುವಲ(ಳ)ಯ – ಕನ್ನೈದಿಲೆ; ಭೂಮಂಡಲ
- ಕುವಲ(ಳ)ಯಪತಿ – ಚಂದ್ರ; ಭೂಮಂಡಲದ ಅಧಿಪತಿ
- ಕುವಲ(ಳ)ಯಿತ – ನೈದಿಲೆಗಳಿಂದ ತುಂಬಿದ
- ಕುವಾಕ್ಛ್ರುತ – ಕುವಾಕ್+ಶ್ರುತ, ಚಾಡಿ ಮಾತನ್ನು ಕೇಳುವವನು
- ಕುವಾದಿ – ಕೆಟ್ಟ ವಾದ ಮಂಡಿಸುವವನು; ವಿತಂಡವಾದಿ
- ಕುವಿಂದ(ಕ) – ನೇಯ್ಗೆಯವನು, ನೇಕಾರ
- ಕುವಿಟ – ಕೆಟ್ಟ ವಿಟ
- ಕುವೇಣಿ – ಮೀನು ಹಿಡಿಯುವ ಬಲೆ
- ಕುವೇಷ – ಕುತ್ಸಿತ ವೇಷ
- ಕುಶ – ದರ್ಭೆಹುಲ್ಲು; ನೀರು
- ಕುಶದಳ – ದರ್ಭೆಯ ಎಸಳು
- ಕುಶಲಕ್ರಿಯೆ – ಕುಶಲಕರ್ಮ, ನಯಗೆಲಸ
- ಕುಶಲವ – ನೀರಾಟ, ಜಲಕ್ರೀಡೆ
- ಕುಶಲವಾರ್ತೆ – ಕ್ಷೇಮ ಸಮಚಾರ
- ಕುಶಲಿಕೆ – ಕುಶಲತೆ
- ಕುಶಾಗ್ರ – ದರ್ಭೆಯ ತುದಿ; ಚುರುಕು
- ಕುಶಾಗ್ರಮತಿ – ಹರಿತ ಬುದ್ಧಿಯವನು
- ಕುಶಾಗ್ರೀಯಬುದ್ಧಿ – ಕುಶಾಗ್ರಮತಿ
- ಕುಶಾಗ್ರೀಯಮತಿ – ಕುಶಾಗ್ರಮತಿ
- ಕುಶಾರಣ – ಒಂದು ಜೈನ ವ್ರತ(?)
- ಕುಶಿರ – ನೇಗಿಲ ಗುಳ
- ಕುಶೀಲ – ಕೆಟ್ಟ ನಡತೆ, ದುಸ್ವಭಾವ
- ಕುಶೂಲ – ಧಾನ್ಯದ ಕಣಜ
- ಕುಶೆ – ದರ್ಭೆ; ಕಡಿವಾಣದ ಹಗ್ಗ
- ಕುಶೇಶಯ – ನೀರಿನಲ್ಲಿರುವುದು, ತಾವರೆ
- ಕುಶೇಶಯಗರ್ಭ – ಕಮಲದಲ್ಲಿ ಜನಿಸಿದವನು, ಬ್ರಹ್ಮ
- ಕುಶೇಶಯನಯನ – ಕಮಲನಯನ, ಕೃಷ್ಣ
- ಕುಶೇಶಯಲೋಚನ – ಕುಶೇಶಯನಯನ
- ಕುಶ್ರುತ – ಮಿಥ್ಯಾಜ್ಞಾನಿ
- ಕುಸಿ – ಶಕ್ತಿಗುಂದು, ಕುಗ್ಗು, ಕ್ಷೀಣತ್ವ; ಹಿಂತೆಗೆ, ಹಿಮ್ಮೆಟ್ಟು; ನಿರೋಧಿಸು; ಚಿಮ್ಮು, ಹೊಮ್ಮು; ಉಡುಗಿ ಬೀಳು; ಉತ್ಸಾಹಹೀನತೆ
- ಕುಸಿಕ -ಉತ್ಸಾಹ ಕುಗ್ಗಿದವನು
- ಕುಸಿಗೊರಲ್ – ಕುಗ್ಗಿದ ಕೊರಳು
- ಕುಸಿಗೊರಲ – ಕುಗ್ಗಿದ ಕತ್ತುಳ್ಳವನು
- ಕುಸಿಯೊತ್ತು – ಕುಸಿಯುವಂತೆ ಒತ್ತು
- ಕುಸೀದ – ಹಣವನ್ನು ಬಡ್ಡಿಗೆ ಕೊಡುವುದು; ಹಾಗೆ ಮಾಡಿ ಜೀವಿಸುವವನು, ವೃದ್ಧಿಜೀವನ
- ಕುಸೀದಕ – ಹಣವನ್ನು ಬಡ್ಡಿಗೆ ಕೊಟ್ಟು ಬದುಕುವವನು
- ಕುಸುಂಕು – ಬಟ್ಟೆಯನ್ನು ಕುಕ್ಕು, ಘಾತನ
- ಕುಸುಂಬೆ – ಕುಸುಂಭ, ಒಂದು ಬಗೆಯ ಗಿಡ
- ಕುಸುಂಭ – ಕುಸುಬೆ, ಕುಸುಬೆ ಗಿಡ; ಕಮಂಡಲು
- ಕುಸುಕ – ಕೆತ್ತನೆಯ ಕೆಲಸ
- ಕುಸುಮ – ಹೂವು; ಎಸಳು; ರಜಸ್ಸು
- ಕುಸುಮಕಳಂಬ – ಹೂಬಾಣದವನು, ಮನ್ಮಥ
- ಕುಸುಮಬಾಣ – ಮನ್ಮಥ
- ಕುಸುಮಮಂಜರಿ – ಹೂವಿನ ಗೊಂಚಲು
- ಕುಸುಮಮಾಳೆ – ಹೂಗಳ ಸಾಲು, ಹಾರ
- ಕುಸುಮರಜ – ಹೂವಿನ ಪರಾಗ
- ಕುಸುಮಲಿಟ್ – ದುಂಬಿ
- ಕುಸುಮಲಿಡ್ಭಾಮೆ – ಹೆಣ್ಣು ದುಂಬಿ
- ಕುಸುಮವರ್ಷ – ಹೂಮಳೆ, ಪುಷ್ಪವೃಷ್ಟಿ
- ಕುಸುಮಶಿಳೀಮುಖ – ಕುಸುಮಬಾಣ; ಹೂಗಳನ್ನು ಮುತ್ತುವ ದುಂಬಿ
- ಕುಸುಮಸ್ತಬಕ – ಹೂಗೊಂಚಲು
- ಕುಸುಮಾಕರ – ಪುಷ್ಪವಾಟಿ; ಹೂಗೊಂಚಲು; ವಸಂತ ಋತು
- ಕುಸುಮಾಕೀರ್ಣ – ಹೂಗಳಿಂದ ತುಂಬಿದ
- ಕುಸುಮಾಪಚಯ – ಹೂ ಬಿಡಿಸುವುದು
- ಕುಸುಮಾಭ – ಹೂವಿನ ಕಾಂತಿಯುಳ್ಳ
- ಕುಸುಮಾಮೋದ – ಹೂವಿನ ಪರಿಮಳ
- ಕುಸುಮಾಯುಧ – ಹೂಬಾಣ; ಮನ್ಮಥ; ಅನುರಾಗ
- ಕುಸುಮಾಸವ – ಕುಸುಮರಸ
- ಕುಸುಮಾಸಾರ – ಹೂಮಳೆ, ಪುಷ್ಪವೃಷ್ಟಿ
- ಕುಸುಮಿತ – ಹೂ ಬಿಟ್ಟ
- ಕುಸುಮಿಸು – ಅರಳು, ಹೂವಾಗು; ಹೂವನ್ನು ಬಿಡು; ಹೂಬಿಡುವಂತೆ ಮಾಡು
- ಕುಸುಮೇಷು – ಹೂಬಾಣ; ಮನ್ಮಥ
- ಕುಸುಮೋತ್ಕರ – ಹೂರಾಶಿ
- ಕುಸುಮೋಪಹಾರ – ಹೂಗಳ ಕಾಣಿಕೆ; ಹೂ ಚೆಲ್ಲುವುದು
- ಕುಸುರಿ – ಹೂವಿನ ಮೃದುವಾದ ಭಾಗ; ತಿರುಳು; ಆಭರಣ; ಬೆಡಗು; ಸೂಕ್ಷ್ಮ ಕೆಲಸ; ಮೊಳಕೆ; ಚಾತುರ್ಯ; ಕುಗ್ಗು(?)
- ಕುಸುರಿವಾತು – ನಾಜೂಕು ಮಾತು
- ಕುಸುರಿವೆಸ – ಕುಸುರಿಗೆಲಸ
- ಕುಸೂಲ – ಕಣಜ, ಉಗ್ರಾಣ
- ಕುಸೂಲಗೃಹ – ಉಗೃಆಣದ ಮನೆ
- ಕುಸೃತಿ – ವಂಚನೆ
- ಕುಸೃತಿಬಂಧ – ಇಂದ್ರಜಾಲದ ಕಟ್ಟು
- ಕುಸೆ – (ಕುಶ) ಒಂದು ಬಗೆಯ ಹುಲ್ಲು
- ಕುಸೆಗಾತಿ – ಕುಶಲಗಾತಿ; ಬಿನ್ನಾಣಗಿತ್ತಿ
- ಕುಸ್ತುಂಭರ – ಕೊತ್ತಂಬರಿ
- ಕುಹರ – ಬಿಲ; ಗುಹೆ; ತೂತು
- ಕುಹರಣ – ಸುರತಧ್ವನಿ
- ಕುಹಳ(ಳಿ) – ಹೊಂಬಾಳೆ
- ಕುಹೇತು – ಕೆಟ್ಟ ಕಾರಣ; ಕೆಟ್ಟ ಹೇತು
- ಕುಹೇತುಕ – ಕುಹೇತುವಿನಿಂದ ಕೂಡಿದ
- ಕುಳ್ – ಕುಳಿತುಕೋ
- ಕುಳಿಕಾಹಿ – ಕುಳಿಕ ಎಂಬ ಸರ್ಪ
- ಕುಳಿಕೆ – ಕುಣಿಕೆ
- ಕುಳಿಯ – ಮೂಢ
- ಕುಳಿರ್ – ಶೀತಲವಾಗು, ತಂಪಾಗು; ಒಂದು ಅನುಕರಣ ಶಬ್ದ(?)
- ಕುಳಿರ್ಕೊ9ರ್ಗೊ)ಳಿಸು – ತಂಪು ಮಾಡು; ಸಂತಸಗೊಳಿಸು
- ಕುಳಿರ್ಕೋಡು(ಳು) – ತುಂಬ ತಂಪಾಗು; ತೃಪ್ತನಾಗು; ಹಿಗ್ಗು; ತಣಿಸು
- ಕುಳಿರ್ಗಲ್ – ತಂಪಾದ ಕಲ್ಲು; ಅಮೃತಶಿಲೆ
- ಕುಳಿರ್ಗಾಳಿ – ತಂಗಾಳಿ
- ಕುಳಿರ್ಗೆಯ್ – ತಂಪಾದ ಕಿರಣ
- ಕುಳಿರ್ಗೆಯ್ಯ – ಚಂದ್ರ
- ಕುಳಿರ್ಗೊಳ್ – ತಣ್ಣಗಾಗು; ಸಂತೋಷಪಡು
- ಕುಳಿರ್ಗೊಳ – ತಂಪಾದ ಕೊಳ
- ಕುಳಿರ್ವನೆ – ತಂಪು ಮನೆ, ಶೀತಲಗೃಹ
- ಕುಳಿರ್ವಳ್ಳ – ತಣ್ಣನೆಯ ಹಳ್ಳ; ತಂಪಾದ ನದಿ
- ಕುಳಿರ್ವೆಟ್ಟು – ಹಿಮಾಲಯ ಬೆಟ್ಟ
- ಕುಳಿರ್ವೆಟ್ಟುಮಗಳು – ಹಿಮವಂತನ ಮಗಳು, ಪಾರ್ವತಿ
- ಕುಳಿರ್ವೆಳಗ – ತಂಪು ಬೆಳಕಿನವನು, ಚಂದ್ರ
- ಕುಳಿಲ್ – ಮರಕೋತಿ ಆಟ
- ಕುಳಿಶ(ಸ) – ಕುಲಿಶ, ವಜ್ರಾಯುಧ
- ಕುಳಿಶಾಶ್ಮ – ವಜ್ರಶಿಲೆ
- ಕುಳಿಶಿ – ಇಂದ್ರ
- ಕುಳೀರ – ಏಡಿ, ನಳ್ಳಿ
- ಕುಳೀರಮಂದಿರ – ಕರ್ಕಾಟಕ ರಾಶಿ
- ಕುಳೀರಸಂಭವ – ಕರ್ಕಾಟಕ ರಾಶಿಯಲ್ಲಿ ಹುಟ್ಟಿದವನು
- ಕುಳುಂಪೆ – ನೀರು ನಿಂತ ಗುಂಡಿ, ಕುಂಟೆ
- ಕುಳುಪೆಗೊಳ್ – ಗುಂಡಿಯಾಗು, ಕೆಸರಾಗು
- ಕುಳುತ್ಥ(ಕ) – ಹುರುಳಿ ಕಾಳು
- ಕುಳುಪು – ತುಂಡು, ಭಾಗ
- ಕುಳ್ಳಿರ್ – ಕುಳಿತುಕೊ
- ಕುಳ್ಳಿರಿಸು – ಕುಳಿತುಕೊಳ್ಳುವಂತೆ ಮಾಡು
- ಕೂಂಕು – ನೆಗೆ, ಹಾರು, ಉತ್ಸರ್ಪಣ; ತಳ್ಳು; ಕೂಗು
- ಕೂಂಟು – ಕುಂಟು, ವಿಕೃತ ಗತಿ; ಕುಂಟುತನ
- ಕೂಂದಲ್ – ಕೂದಲು
- ಕೂಕಂಬ – (ಕೂಪಸ್ತಂಭ) ಕುಕಂಭ, ಕೂವಕಂಭ, ಹಡಗಿನ ನಡುವಣ ಕಂಬ
- ಕೂಕಟಿ – ಜಡೆ, ಜುಟ್ಟು
- ಕೂಕಿಡು – ಕೂಗು, ಧ್ವನಿಗೈ
- ಕೂಗಾಡು – ಕಿರಿಚಾಡು, ರೇಗಾಡು
- ಕೂಗಾಳ್ – ಶೂರ
- ಕೂಗಿಡು – ಗಟ್ಟಿಯಾಗಿ ಕೂಗು
- ಕೂಗು – ಕಿರಿಚು, ಉಚ್ಚ ಧ್ವನಿ ಮಾಡು; ಕೂಗುವಿಕೆ
- ಕೂಚಿಪತ್ರ – ವಿಷಯವನ್ನು ಬರೆದಿರುವ ಪತ್ರ
- ಕೂಜತ್ – ಧ್ವನಿ ಮಾಡುತ್ತಿರುವ
- ಕೂಜನ – ಕೂಗು, ಕುಕಿಲು
- ಕೂಜಿತ – ಕೂಜನ
- ಕೂಜಿಸು – ಹಕ್ಕಿಯಂತೆ ಕೂಗು
- ಕೂಟ – ಶಿಖರ, ತುದಿ; ಸೇರುವಿಕೆ; ಸಮುದಾಯ; ಸಂಭೋಗ; ಅಚಲತೆ
- ಕೂಟಕುಳಿ(ಗಳ್) – ಗುಂಪು ಸೇರುವ ಜನ
- ಕೂಟಕ್ರಿಯೆ – ಮೋಸ
- ಕೂಟಪಾಕಳ – ಆನೆಗೆ ಬರುವ ಒಂದು ಬಗೆಯ ಜ್ವರ; ಪಿತ್ತ ಜ್ವರ
- ಕೂಟಮಾನ – ಮೋಸದ ಅಳತೆ ಅಥವಾ ತೂಕ
- ಕೂಟಶಾಲ್ಮಲಿ – ಬೂರುಗದ ಮರದ ಒಂದು ಬಗೆ
- ಕೂಟಾವಳಿ – ಕೂಟಗಳ ಸಾಲು; ಶಿಖರಸಮೂಹ
- ಕೂಡು – ಒಂದಾಗು, ಸಮ್ಮೇಳ; ಸಾಧ್ಯವಾಗು;
- ಸಂಭೋಗಿಸು; ಸೇರಿಸು
- ಕೂಡೆವರ್ – ಜೊತೆಯಲ್ಲಿ ಬರು
- ಕೂಣಿತ – ಮುಚ್ಚಿದ; ಮುಗಿದ
- ಕೂಣಿಸು – ಸಂಕೋಚಗೊಳ್ಳು; ಮುಚ್ಚಿಹೋಗು
- ಕೂನ್ – ಬಾಗು; ಗೂನು
- ಕೂನ – ಗೂನ, ಕುಬ್ಜ; ಕುಬ್ಜತೆ; ಗುರುತು
- ಕೂನಗೊರಡು – ಬಾಗಿದ ಕೊರಡು
- ಕೂನಬೆನ್ – ಗೂನು ಬೆನ್ನು
- ಕೂಪ(ಕ) – ಬಾವಿ, ಹಳ್ಳ; ಕೂವೆಯ ಕಂಬ
- ಕೂಪಾರ – ಸಮುದ್ರ
- ಕೂಪಾರಾರವ – ಸಮುದ್ರ ಗರ್ಜನೆ
- ಕೂಪಿಡು – ಕೂಗು
- ಕೂಬರಿ – ಬಂಡಿ, ರಥ
- ಕೂರ್ – ಪ್ರೀತಿಸು, ಮೋಹಿಸು; ಹರಿತವಾದ
- ಕೂರಂಕುಶ(ಸ) – ಹರಿತವಾದ ಅಕುಶ
- ಕೂರಂಗಿ – ಒಂದು ಕಾಡು ಪ್ರಾಣಿ
- ಕೂರಂಬು – ಹರಿತವಾದ ಕತ್ತಿ
- ಕೂರಗೆ – ಕೂರಂಗಿ
- ಕೂರಲಗು – ಹರಿತವಾದ ಅಲಗು
- ಕೂರಸಿ – ಹರಿತವಾದ ಕತ್ತಿ
- ಕೂರಾಳ್ತನ – ಕಲಿತನ
- ಕೂರಿತು(ತ್ತು) – ಹರಿತವಾದ
- ಕೂರಿಲಿ – ಹರಿತವಲ್ಲದ, ಮೊಂಡು
- ಕೂರಿಸು – ಪ್ರೀತಿಸು
- ಕೂರುಗುರ್ – ಹರಿತವಾದ ಉಗುರು
- ಕೂರೆಲೆ – ಮೊನಚಾದ ಎಲೆ
- ಕೂರ್ಗಣೆ – ಹರಿತವಾದ ಬಾಣ
- ಕೂರ್ಗಣೆವಳೆ – ಹರಿತವಾದ ಬಾಣಗಳ ಮಳೆ
- ಕೂರ್ಗತ್ತಿ(ಗೆ) – ಕೂರಸಿ
- ಕೂರ್ಚ – ಕುಚ್ಚು; ಗಡ್ಡ; ತಲೆ; ಕುಂಚ
- ಕೂರ್ಚಕ – ಕುಂಚ; ಬಾವುಟದ ಗೊಂಡೆ; ಗಡ್ಡ
- ಕೂರ್ಚಕಲಾ(ಳಾ)ಪ – ಗಡ್ಡ ಉಳ್ಳವನು
- ಕೂರ್ಚಾಲ(ಳ) – ಗಡ್ಡಮೀಸೆ ಇರುವ
- ಕೂರ್ತಂ – ಪ್ರೀತಿಸಿದವನು, ನಲ್ಲ
- ಕೂರ್ದಸಿ – ಹರಿತವಾದ ಕತ್ತಿ
- ಕೂರ್ದಾಡೆ – ಹರಿತವಾದ ದಾಡೆ
- ಕೂರ್ನಾಯ್ – ಉಗ್ರವಾದ ನಾಯಿ
- ಕೂರ್ಪ – ಪ್ರೀತಿಸುವವನು
- ಕೂರ್ಪರ – ಮೊಳಕೈ
- ಕೂರ್ಪಾಸ(ಕ) – ಕುಪ್ಪುಸ
- ಕೂರ್ಪು – ಪ್ರೀತಿ; ಸ್ನೇಹ; ಹರಿತತೆ; ಕಲಿತನ
- ಕೂರ್ಪುಗಿಡು – ಹರಿತತೆಯನ್ನು ಕಳೆದುಕೋ,
- ಮೊಂಡಾಗು; ಸಾಮಥ್ರ್ಯ ಕುಂದು
- ಕೂರ್ಪುಡುಗು – ಕೂರ್ಪುಗಿಡು
- ಕೂರ್ಮ – ಆಮೆ; ವಿಷ್ಣುವಿನ ಒಂದು ಅವತಾರ
- ಕೂರ್ಮಸೆಯಿಡು – ಮಸೆದು ಹರಿತಗೊಳಿಸು
- ಕೂರ್ಮಿ – ಹೆಣ್ಣಾನೆ
- ಕೂರ್ಮೆ – ಪ್ರೀತಿ
- ಕೂರ್ಮೆಗೆಡು – ಒಲುಮೆಯನ್ನು ಕಳೆದುಕೊ
- ಕೂರ್ಮೊತ್ತ – ಗಾಢ ಪ್ರೀತಿ
- ಕೂರ್ಮೊನೆ – ಹರಿತವಾದ ಮೊನೆ
- ಕೂರ್ವಾಳ್ – ಕೂರಸಿ
- ಕೂರ್ವಿಸಿಲ್ – ಕಡು ಬಿಸಲು
- ಕೂಲ್(ಲು) – ವಿಗ್ರಹ ಕೂಡಿಸಲು ಇರುವ ಬೆಣೆ; ತುದಿ
- ಕೂಲ – ರಾಶಿ; ತೀರ
- ಕೂವಕಂಬ – ಹಡಗಿನ ಪಟಕಂಬ
- ಕೂಷ್ಮಾಂಡ – ಕುಂಬಳ; ಒಂದು ಪಿಶಾಚಿ
- ಕೂಷ್ಮಾಂಡಿ – ದುರ್ಗೆಯ ಹೆಸರು; (ಜೈನ) ಒಬ್ಬಯಕ್ಷಿ
- ಕೂಸ – ಚಿಕ್ಕವನು
- ಕೂಸಾಟ – ಮಕ್ಕಳ ಆಟ
- ಕೂಸಾಡಿಸು – ಮಗುವನ್ನು ಆಡಿಸು
- ಕೂಸು – ಮಗು; ಕನ್ಯೆ; ಹುಡುಗ
- ಕೂಸುಗು(ಗೊ)ಡು – ಹೆಣ್ಣು ಕೊಡು
- ಕೂಸುತನ – ಬಾಲ್ಯ
- ಕೂಳೆ – ಮೀನು ಹಿಡಿಯುವ ಬಲೆ; ಕೀವು
- ಕೂಳ್ವುಗು – ಆಹಾರ ಸೇರು
- ಕೃಂತನ – ಭೇದನ, ತುಂಡರಿಸುವುದು
- ಕೃಕರ – ಕಕ್ಕರ, ಒಂದು ಬಗೆಯ ನೀರ ಹಕ್ಕಿ
- ಕೃಕವಾಕು – ಕೋಳಿ
- ಕೃಕಾಟಿಕ(ಕೆ) – ಹೆಕ್ಕತ್ತು
- ಕೃಚ್ಛø – ಕಷ್ಟಕರವಾದ; ಪ್ರಯಾಸ; ಕಠಿಣವಾದ
- ಒಂದು ವ್ರತ
- ಕೃತಕ – ಸ್ವಾಭಾವಿಕವಲ್ಲದ; ಕಪಟ; ನಿರ್ಮಾಣ
- ಕೃತಕಗಿರಿ – ಕೃತಕ ಬೆಟ್ಟ
- ಕೃತಕದ್ವಿಜ – ಕಪಟ ಬ್ರಾಹ್ಮಣ
- ಕೃತಕನಗ – ಕೃತಕಗಿರಿ
- ಕೃತಕಪುತ್ರ – ದತ್ತು ಮಗ
- ಕೃತಕಪ್ರಣಯ – ತೋರಿಕೆಯ ಪ್ರಣಯ
- ಕೃತಕಪ್ರತಿಜ್ಞೆ – ಹೂಡಿರುವ ಪ್ರತಿಜ್ಞೆ
- ಕೃತಕರ್ಮ – ಕರ್ತವ್ಯ ಮಾಡಿದವನು; ಸಮರ್ಥ
- ಕೃತಕವಿಷಾದ – ತೋರಿಕೆಯ ದುಃಖ
- ಕೃತಕಶೈಲ – ಕೃತಕಗಿರಿ
- ಕೃತಕಾಚಲ(ಳ) – ಕೃತಕಗಿರಿ
- ಕೃತಕಾದ್ರಿ – ಕೃತಕಗಿರಿ
- ಕೃತಕಿ – ಮೋಸಗಾರ
- ಕತಕೃತ್ಯ – ಕರ್ತವ್ಯ ಮಾಡಿದವನು
- ಕೃತಕೃತ್ಯತೆ – ಕರ್ತವ್ಯ ನಿರ್ವಹಿಸಿದ ಸಮಾಧಾನ
- ಕೃತಘ್ನ – ಉಪಕಾರ ಸ್ಮರಣೆಯಿಲ್ಲದವನು
- ಕೃತಘ್ನಭಾವ – ಕೃತಘ್ನತೆ
- ಕೃತನಾಶಿ – ಕೃತಘ್ನ
- ಕೃತಪುಂಖ – ಬಿಲ್ಲು ವಿದ್ಯೆಯನ್ನು ತಿಳಿದವನು
- ಕೃತಪುಣ್ಯ – ಪುಣ್ಯ ಮಾಡಿದವನು
- ಕೃತಮತಿ – ವಿವೇಕಿ; ನಿಶ್ಚಿತಬುದ್ಧಿಯವನು
- ಕೃತಯುಗ – ಚತುರ್ಯುಗಗಳಲ್ಲಿ ಮೊದಲನೆಯದು; ಮಾನವರ ಹದಿನೇಳು ಲಕ್ಷ ಇಪ್ಪತ್ತೆಂಟು ಸಾವಿರ ವರುಷಗಳ ಕಾಲಪ್ರಮಾಣವುಳ್ಳುದು
- ಕೃತವಿದ್ಯ – ವಿದ್ಯೆಯನ್ನು ಚೆನ್ನಾಗಿ ಬಲ್ಲವನು
- ಕೃತವೇದಿ – ಕೃತಜ್ಞ
- ಕೃತಹಸ್ತ – ಬಿಲ್ವಿದ್ಯಾ ನಿಪುಣ
- ಕೃತಾಂಜಲಿ – ಭಕ್ತಿಯಿಂದ ಮುಗಿದ ಕೈಗಳು
- ಕೃತಾಂತ – ಯಮ; ಸಿದ್ಧಾಂತ; ಕೊನೆಗಂಡ
- ಕೃತಾಂತಗೇಹ – ಯಮಸದನ
- ಕೃತಾಂತಭವನ – ಕೃತಾಂತಗೇಹ
- ಕೃತಾಂತಜ – ಯಮಸುತ, ಧರ್ಮರಾಯ
- ಕೃತಾಂತಮರ್ದಕ – ಯಮನನ್ನು ಮದಿಸಿದವನು, ಶಿವ
- ಕೃತಾಂತರೂಪ – ಯಮಸ್ವರೂಪ; ಅಂತ್ಯವುಳ್ಳುದು
- ಕೃತಾನುಶಯ – ಪಶ್ಚಾತ್ತಾಪಗೊಂಡವನು
- ಕೃತಾರ್ಥ – ಕೃತಕೃತ್ಯ; ಸಾರ್ಥಕ
- ಕೃತಾರ್ಥವೃತ್ತಿ – ಕೃತಾರ್ಥನ ಸ್ವಭಾವ
- ಕೃತಾರ್ಥಾತ್ಮ – ಧನ್ಯಾತ್ಮ
- ಕೃತಾರ್ಥೀಕೃತ – ಕೃತಾರ್ಥಗೊಂಡ
- ಕೃತಾವದಾನ – ಶೌರ್ಯದ ಕೆಲಸ ಮಾಡಿದವನು
- ಕೃತಾಸ್ತ್ರ – ಅಸ್ತ್ರವಿದ್ಯೆಯನ್ನು ಚೆನ್ನಾಗಿ ಬಲ್ಲವನು
- ಕೃತಿ – ಕಾರ್ಯ; ಕಾವ್ಯ; ಪೂರ್ತಿಮಾಡಿದ ಕೆಲಸ; ವಿದ್ವಾಂಸ
- ಕೃತಿಕರ್ತೃ – ಕಾವ್ಯರಚಕ, ಕವಿ
- ಕೃತಿದೋಷ – ಕಾವ್ಯದೋಷ; ಕೆಲಸದಲ್ಲಿನ ದೋಷ
- ಕೃತಿನಾಯಕ – ಕಾವ್ಯದ ನಾಯಕ
- ಕೃತಿನಿಂದಿತ – ದೋಷಯುಕ್ತವಾದುದು
- ಕೃತಿಯುಕ್ತ – ಕೃತಿಗೆ ಯೋಗ್ಯವಾದ; ಕಾವ್ಯಸಮ್ಮತವಾದ
- ಕೃತಿಯುಗ – ಕಾವ್ಯಜೋಡಿ
- ಕೃತಿಲೋಕ – ವಿದ್ವಾಂಸಸಮೂಹ
- ಕೃತ್ತಕ್ಲೇಶ – ಕಷ್ಟವನ್ನು ಪರಿಹರಿಸಿದವನು
- ಕೃತ್ತಿ – ಚರ್ಮ, ಅಜಿನ
- ಕೃತ್ತಿಕೆ -ಜೊಂದು ನಕ್ಷತ್ರಪುಂಜದ ಹೆಸರು; ವಾಹನ; ಧರ್ಮ
- ಕೃತ್ತಿವಸ್ತ್ರ – ಚರ್ಮದ ಬಟ್ಟೆ
- ಕೃತ್ತಿವಾಸ – ಕೃತ್ತಿವಸ್ತ್ರ
- ಕೃತ್ಯಶೇಷ – ಇನ್ನೂ ಉಳಿದಿರುವ ಕೆಲಸ
- ಕೃತ್ಯಾಕೃತ್ಯ – ಮಾಡಬೇಕಾದ ಹಾಗೂ ಮಾಡಬಾರದ ಕೆಲಸ
- ಕೃತ್ರಿಮ – ಕೃತಕ; ಮೋಸ; ಶೂನ್ಯಮಾಟ; ದತ್ತು ಮಗ
- ಕೃತ್ಸ್ನ – ಸಂಪೂರ್ಣ; ನೀರು; ಹೊಟ್ಟೆ
- ಕೃತ್ಸ್ನಕರ್ಮ – ಪೂರ್ತಿ ಕೆಲಸ
- ಕೃತ್ಸ್ನಸುಖ – ಸಂಪೂರ್ಣಸುಖ
- ಕೃದರ – ಉಗ್ರಾಣ, ಕಣಜ
- ಕೃಪಣ – ತುಚ್ಛವಾದ; ವಿವೇಕಹೀನವಾದ; ಜಿಪುಣ
- ಕೃಪಾಂಗ – ದಯಾಮಯ
- ಕೃಪಾಕರ – ಕೃಪೆಗೆ ನೆಲೆವನೆಯಾದವನು
- ಕೃಪಾಣ – ಕತ್ತಿ
- ಕೃಪಾಣಿ – ಕತ್ತರಿ
- ಕೃಪಾವತಿ – ದಯಾವಂತೆ
- ಕೃಶಮಧ್ಯೆ – ತೆಳುವಾದ ಸೊಂಟವುಳ್ಳವಳು
- ಕೃಶರಾಗ – ಪ್ರೀತಿ ಕಡಿಮೆಯಾದವನು
- ಕೃಶಶರ – ದುರ್ಬಲವದ ಬಾಣವುಳ್ಳವನು
- ಕೃಶಾನು – ಅಗ್ನಿ
- ಕೃಶಾನುನೇತ್ರ – ಬೆಂಕಿ ಕಣ್ಣುಳ್ಳವನು, ಶಿವ
- ಕೃಶಾನುಪೃಷತ್ಕ – ಬೆಂಕಿಯುಗುಳುವ ಬಾಣ
- ಕೃಶಾನುಶಿಖೆ – ಬೆಂಕಿಯ ಜ್ವಾಲೆ
- ಕೃಶಾಶ್ವಿ – ನಟ, ನರ್ತಕ
- ಕೃಶೀಕರಣ – ತೆಳ್ಳಗಾಗಿಸುವಿಕೆ
- ಕೃಶೋದರ – ತೆಳುವಾದ ಹೊಟ್ಟೆಯುಳ್ಳ
- ಕೃಷಿ – ಬೇಸಾಯ
- ಕೃಷಿನಿರತ – ರೈತ, ಬೇಸಾಯಗಾರ
- ಕೃಷೀವಲ – ಕೃಷಿಕ, ರೈತ
- ಕೃಷ್ಟಪಾಕ – ನರಕದ ದುಃಖ
- ಕೃಷ್ಟಿ – ಎಳೆಯುವುದು; ಆಕರ್ಷಣೆ; ಬಾಸಾಯ; ಪಂಡಿತ
- ಕೃಷ್ಟಿಕ್ರಿಯೆ – (ಜೈನ) ನರಕದುಃಖಕಾರಕ ಕ್ರಿಯೆ
- ಕೃಷ್ಣ – ಕಪ್ಪಾದ; ಕಪ್ಪು ಬಣ್ಣ; ಕೆಟ್ಟ; ವಿಷ್ಣುವಿನ ಎಂಟನೆಯ ಅವತಾರ
- ಕೃಷ್ಣಕಥೆ – ಕೃಷ್ನಚರಿತೆ
- ಕೃಷ್ಣಕರ್ಮ – ಕೆಟ್ಟ ಕೆಲಸ
- ಕೃಷ್ಣದ್ವೈಪಾಯನ – ವ್ಯಾಸ ಮಹರ್ಷಿ
- ಕೃಷ್ಣನವಮಿ – ಕೃಷ್ಣಪಕ್ಷದ ನವಮಿ
- ಕೃಷ್ಣಪಕ್ಷ – ಬಹುಳ; ಪೌರ್ಣಮಿಯ ಮಾರನೇ ದಿನದಿಂದ ಅಮಾವಾಸ್ಯೆಯವರೆಗಿನ ಪಕ್ಷ
- ಕೃಷ್ಣಮಾರ್ಗ – ಅಗ್ನಿ
- ಕೃಷ್ಣಮೃಗ – ಕಪ್ಪು ಬಣ್ಣದ ಜಂಕೆ
- ಕೃಷ್ಣಪಾಂಡುರ – ಕಪ್ಪುಮಿಶ್ರಿತ ಬಿಳಿ ಬಣ್ಣ
- ಕೃಷ್ಣಮತಿ – ಮಲಿನ ಬುದ್ಧಿಯವನು
- ಕೃಷ್ಣರುಚಿತ್ವ – ಕಪ್ಪು ಬಣ್ಣ ಹೊಂದಿರುವಿಕೆ;
- ಕೃಷ್ಣನಲ್ಲಿ ಪ್ರೀತಿ ಹೊಂದಿರುವುದು
- ಕೃಷ್ಣಲೆ – ಗುಲಗಂಜಿ
- ಕೃಷ್ಣಲೇಶ್ಯೆ – (ಜೈನ) ಆರು ವಿಧವಾದ ಲೇಶ್ಯೆಗಳಲ್ಲೊಂದು; ಕ್ರೋಧ
- ಕೃಷ್ಣಲೋಹ – ಕರಿಯ ಲೋಹ, ಕಬ್ಬಿಣ
- ಕೃಷ್ಣಲೋಹಿತ – ಕಡುಗೆಂಪು ಬಣ್ಣದ
- ಕೃಷ್ಣವಕ್ತ್ರ – ಕಪ್ಪುಮುಖವುಳ್ಳ; ಕಪ್ಪುಮುಖ
- ಕೃಷ್ಣವರ್ಣ – ಕಪ್ಪು ಬಣ್ಣ
- ಕೃಷ್ಣವತ್ರ್ಮ – ಕಪ್ಪು ಹಾದಿಯುಳ್ಳವನು, ಅಗ್ನಿ
- ಕೃಷ್ಣಸರ್ಪ – ಕರಿನಾಗ
- ಕೃಷ್ಣಸಾರ – ಕಪ್ಪು ಬಣ್ಣದ ಜಿಂಕೆ; ಶ್ರೀಕೃಷ್ಣನ ಶಕ್ತಿ
- ಕೃಷ್ಣಾಂಗ – ಕಪ್ಪು ಮೈ
- ಕೃಷ್ಣಾಂಬರ – ಕಪ್ಪು ಬಟ್ಟೆ; ದ್ರೌಪದಿಯ ವಸ್ತ್ರ
- ಕೃಷ್ಣಾಗರುಧೂಪ – ಒಂದು ಪರಿಮಳದ್ರವ್ಯ
- ಕೃಷ್ಣಾಚರಣ – ಕೆಟ್ಟ ನಡತೆ
- ಕೃಷ್ಣಾಜಿನ – ಕೃಷ್ಣಮೃಗದ ಧರ್ಮ
- ಕೃಷ್ಣಾಹಿ – ಕಾಳಸರ್ಪ
- ಕೃಷ್ಣಿಕೆ – ಕರಿಯ ಸಾಸಿವೆ; ಕಪ್ಪು ಕಲೆ
- ಕೃಷ್ಣೆ – ಅಗ್ನಿಯ ಏಳು ನಾಲಗೆಗಳಲ್ಲೊಂದು; ಹಿಪ್ಪಲಿ; ದ್ರೌಪದಿ
- ಕೃಷ್ಣೋರಗ – ಕಾಳಸರ್ಪ
- ಕೃಷ್ಯ – ಎಳೆಯಲು ಸಾಧ್ಯವಾದ; ಉಳಲು ಸಾಧ್ಯವಾದ; ಬೇಸಾಯಯೋಗ್ಯ ಭೂಮಿ
- ಕೆಂಕ – ಕೆಂಬಣ್ಣ
- ಕೆಂಕಲ್ – ಒಂದು ಜಾತಿಯ ಮೀನು
- ಕೆಂಕಲಿ – ಅಶೋಕವೃಕ್ಷ
- ಕೆಂಕೆಲ್ಲಿ – ಕೆಂಕಲಿ
- ಕೆಂಗಡೆ – ಜಡ್ಡುಹಿಡಿದು ಕೆಂಪಾದ ಭಾಗ
- ಕೆಂಗಣ್ – ಕೆಂಪಾದ ಕಣ್ಣು; ಕೋಪಗೊಂಡ ಕಣ್ಣು
- ಕೆಂಗಣ್ಣಲರ್ವಕ್ಕಿ – ಕೋಗಿಲೆ
- ಕೆಂಗಣ್ವಕ್ಕಿ – ಕೆಂಪು ಕಣ್ಣಿನ ಹಕ್ಕಿ, ಕೋಗಿಲೆ
- ಕೆಂಗದಿರ್ – ಕೆಂಪು ಕಿರಣ
- ಕೆಂಗದಿರ – ಸೂರ್ಯ
- ಕೆಂಗಲಿಸು – ಕೆಂಪಾಗು
- ಕೆಂಗಲೆ – ಕೆಂಪು ಗುರುತು
- ಕೆಂಗಲೆಗಟ್ಟು – ಕೆಂಪಾದ ಗುರುತಾಗು
- ಕೆಂಗಲೆವಡೆ – ಕೆಂಪು ಗುರುತನ್ನು ಹೊಂದು
- ಕೆಂಗಲ್ಮಸಗು – ಕಣ್ಣು ಕೆಂಪೇರು; ಕೋಪಗೊಳ್ಳು
- ಕೆಂಗವಸಣಿ(ಗೆ) – ಕೆಂಪು ಹೊದಿಕೆ
- ಕೆಂಗಿಡಿ – ಕೆಂಪು ಕಿಡಿ
- ಕೆಂಗಿಡಿಯ – ಕೆಂಪು ಕಿಡಿಯುಳ್ಳವನು, ಅಗ್ನಿ
- ಕೆಂಗುಡಿ – ಕೆಂಪು ಧ್ವಜ; ಕೆಂಪು ಚಿಗುರು; ಹವಳ
- ಕೆಂಗೊಡೆ – ಕೆಂಪು ಬಣ್ಣದ ಕೊಡೆ
- ಕೆಂಗೊನರ್ – ಕೆಂಪಾದ ಚಿಗುರು
- ಕೆಳಗೊಲೆ – ಕೆಂಪಾದ ಗೊನೆ
- ಕೆಂಗೋಲ್ – ಕೆರಳುವಿಕೆ; ಕೆಂಪುಗರಿಯ ಬಾಣ
- ಕೆಂಗೋಲ್ಗೊಳ್ – ಕೆರಳು, ಉದ್ರೇಕಗೊಳ್ಳು
- ಕೆಂಗೋಲ್ಮಸಗಿಸು – ಕೆರಳಿಸು
- ಕೆಂಗೋಲ್ಮಸಗು – ಕೋಪಗೊಳ್ಳು
- ಕೆಂಚಣಿಲು – ಕೆಂಪು ಬಣ್ಣದ ಅಳಿಲು
- ಕೆಂಚಿ – ಚೆಲುವೆ
- ಕೆಂಚಂಜೆ – ಕೆಂಪು ಸಂಜೆ
- ಕೆಂಜ(ಜೆ)ಡೆ – ಕೆಂಪು ಜಡೆ
- ಕೆಂಜಾಜಿ – ಕೆಂಪು ಜಾಜಿ
- ಕೆಂಜಿಗುರ್ – ಕೆಂಪು ಚಿಗುರು
- ಕೆಂಜಿಗೆ – ಕೆಂಪು ಇರುವೆ
- ಕೆಂಡ – ಉರಿಯುವ ಇದ್ದಿಲು, ಇಂಗಳ
- ಕೆಂದಟ್ಟಿ – ಕೆಂಪು ಬಣ್ಣದ ಬಟ್ಟೆ
- ಕೆಂದಳ – ಕೆಂಪಾದ ಕೈ; ಕೆಂಪಾದ ಎಸಳು
- ಕೆಂದಳಿರ್ – ಕೆಂಪು ಚಿಗುರು
- ಕೆಂದಳಿರ್ಮಾವು – ಕೆಂಪು ಚಿಗುರಿನಿಂದ ಕೂಡಿದ ಮಾವು
- ಕೆಂದಳಿರ್ವಸೆ – ಕೆಂಪು ಚಿಗುರಿನ ಹಾಸಿಗೆ
- ಕೆಂದಳಿರ್ವಾಸು – ಕೆಂದಳಿರ್ವಸೆ
- ಕೆಂದಾಮ(ವ)ರೆ – ಕೆಂಪು ತಾವರೆ
- ಕೆಂದಾವರೆಗೊಳ – ಕೆಂಪು ತಾವರೆಗಳಿರುವ ಕೊಳ
- ಕೆಂದು – ಅನುರಾಗ, ರತಿ; ಆತುಕೊಳ್ಳು, ಆಶ್ರಯಿಸು
- ಕೆಂಪಡರ್ – ಕೆಂಪಬಣ್ಣ ಆವರಿಸು, ಕೆಂಪೇರು
- ಕೆಂಪಡಸು – ಕೆಂಪಡರ್
- ಕೆಂಪಿಡಿ – ಕೆಂಪಾಗು
- ಕೆಂಪು – ಕೆಂಪು ಬಣ್ಣ; ತಾಮ್ರ; ಮಾಣಿಕ್ಯ
- ಕೆಂಪೆಸೆ – ಕೆಂಪನ್ನು ಬೀರು, ಕೆಂಪಗೆ ಹೊಳೆ
- ಕೆಂಪಳಸು – ಕೆಂಪೇರು
- ಕೆಂಪೊಡರಿಸು – ಕೆಂಪಾಗು
- ಕೆಂಪೊದವು – ಕೆಂಪಗಾಗು
- ಕೆಂಬಟ್ಟೆ – ಕೆಂಪು ಬಟ್ಟೆ, ಕೆಂಪು ವಸ್ತ್ರ
- ಕೆಂಬಣ್ಣ – ಕೆಂಪು ಬಣ್ಣ
- ಕೆಂಬರಲ್ – ಕೆಂಪು ಹರಳು, ಮಾಣಿಕ್ಯ, ಪದ್ಮರಾಗ
- ಕೆಂಬರಲೋಲೆ – ಕೆಂಪು ಹರಳಿನ ಓಲೆ
- ಕೆಂಬಲ್ – ಕೆಂಪು ಹಲ್ಲು
- ಕೆಂಬಲಗೆ – ಕೆಂಪು ಗುರಾಣಿ
- ಕೆಂಬಸದನ – ಕೆಂಪು ಬಣ್ಣದ ವೇಷ
- ಕೆಂಬೆಳಗು – ಕೆಂಪು ಬೆಳಕು
- ಕೆಂಬೊನ್ – ಚಿನ್ನ
- ಕೆಂಬೊಳಪು – ಕೆಂಪಾದ ಹೊಳಪು
- ಕೆಕ್ಕರಿ(ಕೆ) – ಒಂದು ಹಣ್ಣು
- ಕೆಕ್ಕರೆಗೆರಳು – ಕೋಪದಿಂದ ಕೆಂಪಾಗು
- ಕೆಕ್ಕಳ – ಕೋಪ
- ಕೆಕ್ಕಳಗೆಳರ್(ಲ್) – ಕೆಕ್ಕರೆಗೆರಳು
- ಕೆಕ್ಕಳಿ(ರಿ)ಸು – ಕೆಂಪೇರು; ಕೋಪಗೊಳ್ಳು
- ಕೆಕ್ಕು – ಹಸು ಕಾಯುವಾಗ ಕೂಗು, ಗೋಶಿಕ್ಷಾಧ್ವನ; ಕೇಕೆ ಹಾಕು
- ಕೆಚ್ಚನೆ – ಕೆಂಪಾಗಿ
- ಕೆಚ್ಚಲ್ – ಕೆಚ್ಚಲು
- ಕೆಚ್ಚು – ದಾರದ ತುದಿಗಳನ್ನು ಸೇರಿಸು; ನೇಯ್ಗೆಯ ಕೆಲಸ; ಕೆಂಪುಬಣ್ಣ
- ಕೆಚ್ಚುಗಟ್ಟು – ಗಟ್ಟಿಯಾಗು, ದೃಢವಾಗು
- ಕೆಚ್ಚುವಿರ್ – ಚೆನ್ನಾಗಿ ಅಂಟಿಕೊಳ್ಳು
- ಕೆಟ್ಟಾಡು – ಕೆಟ್ಟತನದಿಂದ ನಡೆದುಕೋ
- ಕೆಡಪು – ಕೆಡವು, ಪತನ
- ಕೆಡಿಸು – ಕಿಡಿಸು, ಹಾಳುಮಾಡು; ನಂದಿಸು; ಶೀಲಭಂಗಮಾಡು
- ಕೆಡು – ಹಾಳಾಗು, ನಾಶವಾಗು; ಅಳಿಸಿಹೋಗು; ನಿವಾರಣೆಯಾಗು; ದುರ್ಗತಿತೀಡಾಗು; ಚೆದುರಿ ಹೋಗು; ಕೈಮೀರು; ದುಷ್ಟನಾಗು; ಅಪವಿತ್ರನಾಗು; ಮರಣಹೊಂದು; ವಿನಾಶ; ಹದಗೆಡು
- ಕೆಡುಕಿ – ಕೆಟ್ಟ ಹೆಂಗಸು
- ಕೆಡುವೊಡಲ್ – ನಾಶಗೊಳ್ಳುವ ದೇಹ
- ಕೆಡೆ – ಬೀಳು; ಮಲಗು; ಬಾಯಿಗೆ ಬಂದಂತೆ ಗಳಹು
- ಕೆಡೆನುಡಿ – ಕೆಟ್ಟ ಮಾತಾಡು; ಬೈಗುಳ, ದೂಷಣೆ
- ಕೆಡೆನೂಂಕು – ತಳ್ಳು, ಬೀಳುವಂತೆ ನೂಕು
- ಕೆಡೆಮೆಟ್ಟು – ಮೆಟ್ಟಿ ತುಳಿ
- ಕೆಡೆಯಿಕ್ಕು – ಬೀಳಿಸು
- ಕೆಡೆಯೆಸು – ಬೀಳುವಂತೆ ಹೊಡೆ
- ಕೆಡೆವೊಯ್ – ಬೀಳುವಂತೆ ಹೊಡೆ
- ಕೆಣಕು – ರೇಗಿಸು
- ಕೆತ್ತಣ – ಕೆತ್ತನೆ; ಕುಂದಣಗೆಲಸ
- ಕೆತ್ತಿಸು – ಕೊರೆಯಿಸು
- ಕೆತ್ತು – ಅದಿರು, ಮಿಡುಕು; ಸ್ಪಂದನ; ಮೇಲ್ಭಾಗವನ್ನು ಸೀಳು
- ಕೆತ್ತುಗುಂದು – ನಡುಕ ನಿಲ್ಲು; ಸ್ಪಂದನವಿಲ್ಲದಿರು
- ಕೆದಕು – ಬೆದಕು, ನೆಲವನ್ನು ಅಗೆ
- ಕೆನೆ – ಕುದುರೆಯಂತೆ ಹೇಕರಿಸು; ಹೇಷಾರವ ಮಾಡು; ಹಾಲಿನ ಸಾರಭಾಗ
- ಕೆನೆಗೊಳ್ – ಕೆನೆಗಟ್ಟು
- ಕೆನ್ನಂ – ಹೆಚ್ಚಾಗಿ; ವೆಗ್ಗಳವಾಗಿ; ವ್ಯರ್ಥವಾಗಿ
- ಕೆನ್ನಗಸೆ – ಕೆಂಪು ಅಗಸೆ
- ಕೆನ್ನನೆ – ಸುಮ್ಮನೆ
- ಕೆನ್ನವಿರ್ – ಕೆಂಪು ಕೂದಲು
- ಕೆನ್ನೀರ್ – ಕೆಂಪು ನೀರು; ರಕ್ತ
- ಕೆನ್ನುರಿ – ಕೆಂಪಾದ ಉರಿ
- ಕೆನ್ನೆ – ಕಪೋಲ
- ಕೆನ್ನೆತ್ತರ್ – ಕೆಂಪು ರಕ್ತ
- ಕೆಮ್ಮಗೆ – ಸುಮ್ಮನೆ ; ಮೌನವಾಗಿ
- ಕೆಮ್ಮಡ – ಕೆಂಪಾದ ಹಿಮ್ಮಡಿ
- ಕೆಮ್ಮಣ್ – ಕೆಂಪು ಮಣ್ಣು
- ಕೆಮ್ಮನೆ – ಕೆಮ್ಮಗೆ, ಸುಮ್ಮನೆ; ವಿಚಾರ ಮಾಡದೆಕೆಮ್ಮುಗಿಲ್ – ಕೆಂಪು ಮೋಡ
- ಕೆಯ್ – ಕೈ; ಮಾಡು; ನೆರವೇರಿಸು; ಹಸ್ತ; ಮರದ ಕೊಂಬೆ; ಸಾಗುವಳಿ ಭೂಮಿ; ಸೊಂಡಿಲು
- ಕೆಯ್ಕುಸುರಿ – ಕೈಸುರಿ, ಕೈಚಳಕ
- ಕೆಯ್ಕೊಳ್ – ಕೈಗೊಳ್ಳು, ಸ್ವೀಕರಿಸು; ತನ್ನದಾಗಿಸಿಕೊ; ಕೈಗೆತ್ತಿಕೊ; ಆಕ್ರಮಿಸು; ಗ್ರಹಿಸು
- ಕೆಯ್ಕೊಳಿಸು – ಕೈಕೊಳಿಸು, ಕೈಗೊಳ್ಳುವಂತೆ ಮಾಡು
- ಕೆಯ್ಗಟ್ಟಲೆ – ಕೈಗಟ್ಟಲೆ, ಕೈಯ ಅಳತೆ, ಕೈ ಹಿಡಿಯುವಷ್ಟು; ಕೈಯೇ ತೂಕ
- ಕೆಯ್ಗಟ್ಟಿ – ಕೈಗಟ್ಟಿ, ತೆಯ್ದ ಗಂಧ, ಕೈಗೆ ಹಚ್ಚಿಕೊಳ್ಳುವ ಗಂಧ
- ಕೆಯ್ಗಟ್ಟಿಗೊಳ್ – ಕೈಗಟ್ಟಿಗೊಳ್, ಸುಗಂಧವ್ನು ಕೈಗೆ ಲೇಪಿಸಿಕೊ
- ಕೆಯ್ಗಡಿ – ಕೈಗಡಿ, ಕತ್ತರಿಸಲಾದ ಸೊಂಡಿಲ ತುಂಡು
- ಕೆಯ್ಗಣ್ಮು – ಕೈಗಣ್ಮು, ಮಿತಿಮೀರು, ಕೈಮೀರು
- ಕೆಯ್ಗಾ(ಯ್) – ಕೈಗಾಯ್, ನಿಧಾನಿಸು; ರಕ್ಷಿಸು
- ಕೆಯ್ಗಾವಲಿ – ಕೈಗಾವಲಿ, ಚಿಕ್ಕ ಕಾವಲಿ
- ಕೆಯ್ಗೂಡು – ಕೈಗೂಡು, ಒದಗು, ದೊರಕು; ಸಿದ್ಧಿಸು; ಸ್ವಾಧೀನವಾಗು
- ಕೆಯ್ಗೆಮಾಡು – ಕೈಗೆಮಾಡು, ತನ್ನದಾಗಿಸಿಕೊ, ಸ್ವಾಧೀನಪಡಿಸಿಕೊಳ್ಳು
- ಕೆಯ್ಗೆಯ್ – ಕೈಗೈ, ಅಲಂಕರಿಸು; ಅಲಂಕರಿಸಿಕೊ
- ಕೆಯ್ಗೆಯ್ಸು – ಕೈಗೈಸು, ಅಲಂಕರಿಸು
- ಕೆಯ್ಗೊಡು – ಕೈಗೊಡು, ಕೈ ನೀಡು; ಕೈಯಾಸರೆ ನೀಡು; ಕರೆತರಲು ಗೌರವದಿಮದ ಕೈ ಚಾಚು; ಸಹಾಯ ಮಾಡು
- ಕೆಯ್ಗೊಳಿಸು – ಕೈಗೊಳಿಸು, ಸಿಂಗರಿಸು; ಅಣಿಗೊಳಿಸು
- ಕೆಯ್ತ – ಕೈತ, ಕೆಲಸ; ಚೇಷ್ಟೆ; ಮೋಸ
- ಕೆಯ್ತೀವು – ಕೈತೀವು, ಕೈತುಂಬು
- ಕೆಯ್ದರ್ – ಕೈಯನ್ನು ತಾ; ಕೈ ನೀಡು
- ಕೆಯ್ದೀವಿಗೆ – ಕೈದೀವಿಗೆ, ಕೈ ದೀಪ
- ಕೆಯ್ದು – ಕೈದು, ಆಯುಧ
- ಕೆಯ್ಪಿಡಿ – ಕೈಪಿಡಿ, ಕನ್ನಡಿ; ಒಂದು ಬಗೆಯ ಆಯುಧ(?); ಕೈಹಿಡಿಕೆ; ಚುಕ್ಕಾಣಿ
- ಕೆಯ್ಗೆಮಾಡು – ಕೈಗೆಮಾಡು, ವಶಪಡಿಸಿಕೊ
- ಕೆಯ್ಪೊಡೆ – ಬಾಣದ ಗರಿ; ಕೈಚೀಲ; ಬಿಲ್ಲಿನ ಹೆದೆ ತಾಗದಂತೆ ಮುಂಗೈಗೆ ಹಾಕುವ ಗೌಸು
- ಕೆಯ್ಮಾಡು – ಕೈಯಾಡು, ಕೈಯಿಂದ ಸನ್ನೆ ಮಾಡು; ಆಯುಧ ಝಳಪಿಸು; ದಾಳಿ ಮಾಡು
- ಕೆಯ್ಮಾಸು – ಕೈಮಾಸು, ಮೈಲಿಗೆಯಾಗು
- ಕೆಯ್ಮಿಗು – ಕೈಮಿಗು, ಹೆಚ್ಚಾಗು; ಮಿತಿ ಮೀರು
- ಕೆಯ್ಮುಗಿ – ಕೈಮುಗಿ, ಕೈಜೋಡಿಸು
- ಕೆಯ್ಯಳವಿ – ಭುಜಬಲ; ಶಕ್ತಿಸಾಧ್ಯವಾದುದು
- ಕೆಯ್ಯಳವು – ಕೆಯ್ಯಳವಿ
- ಕೆಯ್ಯಾನ್ – ಕಯಯಾನ್, ಕೈ ಚಾಚು; ಬೇಡು
- ಕೆಯ್ಯಿಕ್ಕು – ಕೈಯಿಕ್ಕು, ಕೈಯಿಡು, ಕೈಯಿಡು; ಹಿಡಿದುಕೊ; ಸುಮ್ಮನಿರು
- ಕೆಯ್ಯೆಡೆ – ಕೈಯೆಡೆ, ಒತ್ತೆ; ಕೈಗೆ ಕೊಟ್ಟದ್ದು
- ಕೆಯ್ಯೆತ್ತು – ಕೈಯೆತ್ತು, ಕೈ ಅಥವಾ ಸೊಂಡಿಲು ಮೇಲಕ್ಕೆತ್ತು
- ಕೆಯ್ಯೊಡ್ಡು – ಕೈಯೊಡ್ಡು, ಕೈ ಚಾಚು
- ಕೆಯ್ವತ್ತು – ಕೆಯ್+ಪತ್ತು, ಕೈಗೆ ಹತ್ತು
- ಕೆಯ್ವರ್ – ಕೈವರ್, ಕೈಗೆ ಬರು; ದೊರಕು;
- ಚಿಗುರು; ವೃದ್ಧಿಯಾಗು
- ಕೆಯ್ವಲ – ಕೈವಲ, ಕೈಯ ಶಕ್ತಿ, ಭುಜಬಲ
- ಕೆಯ್ವಸ – ಕೈವಸ, ಕೈವಶ, ಸ್ವಾಧೀನ
- ಕೆಯ್ವಸಗೊಳ್ – ಸ್ವಾಧೀನಪಡಿಸಿಕೊ
- ಕೆಯ್ವಾರ – ಕೈವಾರ, ಹೊಗಳಿಕೆ; ವರ್ತುಲ ಬರೆಯುವ ಸಾಧನ, ಬಟ್ಟತ್ತಾಗಿ ತೋರ್ಪುದು
- ಕೆಯ್ವಿಡಿ – ಕೈವಿಡಿ, ಕೈಯನ್ನು (ಸೊಂಡಿಲನ್ನು) ಹಿಡಿ; ಕೈಯಿಂದ ಹಿಡಿ
- ಕೆಯ್ವಿಡು – ಕೈವಿಡು, ಕೈಬಿಡು; ತ್ಯಜಿಸು; ಚಿಗುರು
- ಕೆಯ್ವೀಸು – ಕೈವೀಸು, ಯುದ್ಧಾರಂಭಕ್ಕೆ ಕೈ ಬೀಸಿ ಸನ್ನೆ ಮಾಡು, ಹಸ್ತಸೂಚನೆ
- ಕೆಯ್ವುಗು – ಕೈವುಗು, ಕೈಸೇರು
- ಕೆಯ್ವೆಸ – ಕೈವೆಸ, ಕೈಚಳಕ
- ಕೆಯ್ವೇಗ – ಕೈವೇಗ, ಬಾಣಪ್ರಯೋಗದ ಕೈಚಳಕ
- ಕೆಯ್ವೊಯ್ – ಕೈವೊಯ್, ಕೈ ತಟ್ಟು; ಕಾಳಗಕ್ಕೆ ಕರೆ
- ಕೆಯ್ವೊಲ – ಗದ್ದೆ
- ಕೆಯ್ವೊಲಂಗಾ – ಕೈವೊಲಂಗಾ, ಗದ್ದೆಯನ್ನು ಕಾಯಿ
- ಕೆಯ್ವೋಗು – ಕೈವೋಗು, ಕೈತಪ್ಪು; ಚಿಗುರು
- ಕೆಯ್ಸನ್ನೆ – ಕೈಸನ್ನೆ, ಕೈಯಿಂದ ಮಾಡುವ ಸನ್ನೆ
- ಕೆಯ್ಸನ್ನೆಗೆಯ್ – ಕೈಸನ್ನೆಗೈ, ಕೈಯಿಂದ ಸನ್ನೆಮಾಡು
- ಕೆಯ್ಸಾರ್ – ಕೈಸಾರ್, ಈಡೇರು; ವಶವಾಗು
- ಕೆಯ್ಸು – ಕೈಸು, ಮಾಡಿಸು
- ಕೆಯ್ಸುರಿಗೆ – ಕೈಸುರಿಗೆ, ಕೈಗತ್ತಿ
- ಕೆರಂಕು – ಕೆರಿ; ಕಜ್ಜಿ, ತುರಿ
- ಕೆರಂಟು – ಉಗುರಿನಿಂದ ಗೀಚು, ನಖ ಖನನ
- ಕೆರಪು – ಕೆರ್ಪು, ಚಪ್ಪಲಿ
- ಕೆರಸಿ – ಚೌಕಾಕಾರದ ಬಿದಿರ ಕುಕ್ಕೆ, ಮೊರ
- ಕೆರಳ್ಚು – ರೇಗಿಸು; ಭುಜತಟ್ಟು; ಸ್ಫೋಟಗೊಳಿಸು
- ಕೆರೆ – ಉಗುರಿನಿಂದ ಗೀರು
- ಕೆರ್ಚು – ಕೆಚ್ಚು, ದಂಟು
- ಕೆರ್ಪು – ಪಾದರಕ್ಷೆ
- ಕೆರ್ಪುಗಾಲ್ – ಪಾದರಕ್ಷೆ ಹಾಕಿದ ಕಾಲು
- ಕೆಲ – ಪಕ್ಕ, ಪಕ್ಕದಲ್ಲಿರುವವನು; ಪ್ರದೇಶ, ಸ್ಥಳ; ಕೊಂಚ; ಕೆಲವು
- ಕೆಲಂ – ಪಕ್ಕಕ್ಕೆ
- ಕೆಲಂಬರ್ – ಸ್ವಲ್ಪ ಜನ
- ಕೆಲಂದೆಗೆ – ಪಕ್ಕಕ್ಕೆ ಸರಿಸು
- ಕೆಲಂದೊಲಗು – ಪಕ್ಕಕ್ಕೆ ಹೋಗು
- ಕೆಲಂಬಿಡಿ – ಮಗ್ಗುಲಾಗು
- ಕೆಲಜಂಕೆ – ಮಗ್ಗುಲನ್ನು ಹೆದರಿಸುವುದು
- ಕೆಲದ – ಪಕ್ಕದಲ್ಲಿರುವವನು
- ಕೆಲಪು – ಗುಟುರು, ಕೆಲೆಯುವಿಕೆ
- ಕೆಲವಣಿ – ಕೆಲವು ಮಣಿ; ಪಕ್ಕದ ಮಣಿ
- ಕೆಲಸಂಗೆಯ್ – ಕೆಲಸ ಮಾಡು
- ಕೆಲಸಂಬೊಗು – ಕೆಲಸಕ್ಕೆ ತೊಡಗು
- ಕೆಲೆ – ಗುಟುರು ಹಾಕು; ಉತ್ಸಾಹದಿಂದ ಕೂಗು
- ಕೆಲ್ಲೆ – ಸಿಬುರು
- ಕೆಲ್ಲಂಬು – ಈಟಿಯಂತಹ ಬಾಣ
- ಕೆಲ್ಲಯಿಸು – ಕೆಲ್ಲೈಸು, ಬೆದರು, ಗಾಬರಿಗೊಳ್ಳು
- ಕೆಲ್ಲೆನೋಟ – ಓರೆನೋಟ
- ಕೆರ್ಮಸಗು – ಕೆಸರು ತುಂಬು, ಬಗ್ಗಡಗೊಳ್ಳು
- ಕೆಸವು – ಅಣಬೆ, ಛತ್ರಿಕೆ
- ಕೆಳಗಿವಿಗೆಯ್ – ಅಲಕ್ಷ್ಯಮಾಡು
- ಕೆಳಯಿಂಕೆ – ಕೆಳಗಡೆಗೆ
- ಕೆಳರ್ – ಬಾಯಿಬಿಡು; ವ್ಯಾಪಿಸು; ಆಕಳಿಸು; ಕೋಪಿಸಿಕೋ
- ಕೆಳರ್ಚು – ಕೆರಳಿಸು, ರೇಗಿಸು
- ಕೆಳವಾಡಿ – ಒಂದು ಬಗೆಯ ಕಬ್ಬು
- ಕೆಳವು – ಎಳೆಯುವಿಕೆ
- ಕೆಳಸಾರ್ – ಕೆಳಕ್ಕೆ ಹೋಗು
- ಕೆಳಿ – ಒಂದು ಸುಗಂಧದ್ರವ್ಯ
- ಕೆಳೆ – ಸ್ನೇಹ, ಗೆಳೆತನ; ಸೆಳೆ, ಆಕರ್ಷಿಸು
- ಕೆಳೆಗೊಳ್ – ಸ್ನೇಹಮಾಡು, ಜೊತೆಗೂಡು
- ಕೆಳೆತನ – ಗೆಳೆತನ, ಸ್ನೇಹ
- ಕೆಳೆಯ – ಸ್ನೇಹಿತ, ಜೊತೆಗಾರ
- ಕೆಳೆಸಂಕಲೆ – ಇಬ್ಬರ ಕಯಗಳನ್ನು ಕೂಡಿಸಿ ಕಟ್ಟುವ ಸಂಕೋಲೆ
- ಕೇ – ಮಲಗು, ಶಯನಗೈ; ರತಿಕ್ರೀಡೆ ಮಾಡು
- ಕೇಂಕರಿಸು – ಕೆಕ್ಕರಿಸು, ಕೇಕರಿಸು, ಗುರುಗುಡು
- ಕೇಂದ್ರಸ್ಥ – ಕೇಂದ್ರದಲ್ಲಿರುವವನು
- ಕೇಕರ – ಓರೆಗಣ್ಣು, ಮೆಳ್ಳೆಗಣ್ಣು
- ಕೇಕರದ್ಯುತಿ – ಕಡೆಗಣ್ಣಿನ ಕಾಂತಿ
- ಕೇಕರಮರೀಚಿ – ಕೇಕರದ್ಯುತಿ
- ಕೇಕರರುಚಿ – ಕೇಕರದ್ಯುತಿ
- ಕೇಕರಾಲೋ(ಳೋ)ಕ(ನ) – ಕಡೆಗಣ್ಣ ನೋಟ, ಕುಡಿನೋಟ
- ಕೇಕರಿಸು – ಓರೆಗಣ್ಣಿನಿಂದ ನೊಡು
- ಕೇಕ¾ – ಹೆಗ್ಗಣ
- ಕೇಕಿ – ನವಿಲು
- ಕೇಕಿತಾಂಡವ – ನವಿಲ ನೃತ್ಯ
- ಕೇಕಿನರ್ತನ – ಕೇಕಿತಾಂಡವ
- ಕೇಕಿವಿಲಾ(ಳಾ)ಸ – ಕೇಕಿತಾಂಡವ
- ಕೇಗು – ನವಿಲಿನಂತೆ ಧ್ವನಿಮಾಡು; ನವಿಲ ಕೂಗು
- ಕೇಡಾಕುಳಿ – ನೀರಾಟವಾಡಲು ಮಾಡಿದ ಗುಂಡಿ
- ಕೇಡಾಳಿ – ಕೇಡಿಗ
- ಕೇಡು – ಅಪಾಯ; ಹಾನಿ; ಚೆಲ್ಲುವಿಕೆ
- ಕೇಡೆಯ್ದಿಸು – ಕೆಡನ್ನುಂಟುಮಾಡು
- ಕೇಣ – ಮತ್ಸರ, ದ್ವೇಷ, ರೋಷ
- ಕೇಣಂಬಡೆ – ಮತ್ಸರಿಸು; ಸ್ಪರ್ಧಿಸು
- ಕೇಣಿಕ – ಗಿರವಿ, ನ್ಯಾಸ
- ಕೇಣಿಗೊಡು – ಗೇಣಿಗೆ ಕೊಡು
- ಕೇಣಿಗೊಳ್ – ಗುತ್ತಿಗೆಗೆ ತೆಗೆದುಕೊ; ಸಾಲುಗಟ್ಟು
- ಕೇತ – ಕರೆ, ಆಹ್ವಾನ; ಸ್ತಲ; ಒಂದು ಕ್ಷುದ್ರ ದೇವತೆ
- ಕೇತಕಿ – ಕೇದಗೆ ಹೂ
- ಕೇತನ – ಧ್ವಜ; ಮನೆ
- ಕೇತನಮಾಲಿ(ಳಿ)ಕೆ – ಧ್ವಜಗಳ ಸಾಲು
- ಕೇತು – ಧೂಮಕೇತು; ಬೆಳಕಿನ ಕಾಂತಿ;
- ನವಗ್ರಹಗಳಲ್ಲಿ ಒಂದು; ಮುಂದಾಳು; ರಕ್ಕಸ ಬಾಳೆ
- ಕೇತುದಂಡ – ಧ್ವಜಸ್ತಂಭ
- ಕೇತುಪಟ – ಬಾವುಟ, ಧ್ವಜ
- ಕೇತುಹಸ್ತ – ಕೇತುದಂಡ
- ಕೇದಗೆ – ಕೇತಕಿ
- ಕೇದರ – ಗದ್ದೆ; ಉಪವನ
- ಕೇದಾರವನ – ಬತ್ತದ ಗದ್ದೆ
- ಕೇನ – ಏತರಿಂದ
- ಕೇಯೂರ – ಕಡಗ, ತೋಳುಬಂದಿ
- ಕೇರ್ – ಗೋಡೆ; ಗೇರು ಮರ
- ಕೇರಳಿ – ಕೇರಳದ ಹೆಂಗಸು
- ಕೇರೆ – ಒಂದು ಜಾತಿಯ ಹಾವು
- ಕೇರ್ಗಟ್ಟು – ಗೋಡೆಯನ್ನು ಕಟ್ಟು; ತಡಿಕೆ
- ಕೇಲ್ – ಮಣ್ಣಿನ ಹರವಿ
- ಕೇಲಿ(ಳಿ) – ಆಟ; ಶೃಂಗಾರಕ್ರೀಡೆ
- ಕೇಲಿಗೃಹ – ಆಟದ ಮನೆ
- ಕೇಲೀನಿಲಯ – ಕೇಲಿಗೃಹ
- ಕೇವಣ – (ಕ್ಷೇಪಣ) ಕುಂದಣಗೆಲಸ; ನೂಕುವುದು
- ಕೇವಣಿಸು – ಲೇಪಿಸು; ಜೋಡಿಸು; ಧರಿಸು
- ಕೇವಲ(ಳ) – ಸಮಗ್ರ; (ಜೈನ) ಜ್ಞಾನದ ಐದು ಪ್ರಕಾರಗಳಲ್ಲಿ ಒಂದು
- ಕೇವಲಜ್ಞಾನ – ಸರ್ವಜ್ಞತ್ವ
- ಕೇವಜ್ಞಾನಾವರಣೀಯ – (ಜೈನ) ಕೇವಲಜ್ಞಾನವನ್ನು ಆವರಿಸುವ ಕರ್ಮ
- ಕೇವಲಜ್ಞಾನಿ – ಕೇವಲಜ್ಞಾನವನ್ನು ಪಡೆದವನು
- ಕೇವಲದರ್ಶನ – (ಜೈನ) ದರ್ಶನದ ನಾಲ್ಕು ಪ್ರಕಾರಗಳಲ್ಲಿ ಒಂದು
- ಕೇವಲದರ್ಶನಾವರಣೀಯ – (ಜೈನ) ಕೇವಲದರ್ಶನಕ್ಕೆ ಆವರಣವನ್ನುಂಟುಮಾಡುವ ಕರ್ಮ
- ಕೇವಲಪುಣ್ಯಾನ್ವಿತ – ಸಂಪೂರ್ಣ ಪುಣ್ಯವಂತ
- ಕೇವಲಬೋಧ – ಕೇವಲಜ್ಞಾನ
- ಕೇವಲಲಬ್ಧಿ – (ಜೈನ) ಪಂಚ ಪರಮೇಷ್ಠಿಗಳ ಒಂಬತ್ತು ಲಬ್ಧಿಗಳಲ್ಲಿ ಒಂದು
- ಕೇವಲವಿಭೂತಿ – ಕೇವಲಜ್ಞಾನ
- ಕೇವಲಾಗಮ – ಕೇವಲಜ್ಞಾನ
- ಕೇವಲಿ(ಳಿ) – ಕೇವಲಜ್ಞಾನಿ
- ಕೇವಲಿ(ಳಿ)ಪೂಜೆ – ಕೇವಲಜ್ಞಾನವನ್ನು ಪಡೆದವನ ಪೂಜೆ
- ಕೇವಲಲೋಚನ – ಕೇವಲ ದರ್ಶನ
- ಕೇಶಪಾಶ – ಸಮೃದ್ಧ ತಲೆಗೂದಲು
- ಕೇಶಪ್ರತಿಲಿಂಗ – (ಜೈನ) ಮುನಿಗಳ ಯೋಗಸಾಧನೆಯ ಒಂದು ಬಗೆ; ಸನ್ಮಾರ್ಗ ಸಾಧನ
- ಕೇಶಬಂಧ(ನ) – ತಲೆಗೂದಲ ಕಟ್ಟುವಿಕೆ; ಮುಡಿ
- ಕೇಶವ – ವಿಷ್ಣು
- ಕೇಶವಪನ – ಚೌಲಕ್ರಿಯೆ
- ಕೇಶಹಸ್ತ – ಕೇಶಪಾಶ
- ಕೇಶಾವಪಾಟವ – (ಜೈನ) ಐವತ್ತಮೂರು ಗರ್ಭಾನ್ವಯ ಕ್ರಿಯೆಗಳಲ್ಲಿ ಒಂದು
- ಕೇಶಾವಾಪ – ಕೇಶಾವಪಾಟವ
- ಕೇಶಿ – ಕೃಷ್ಣನಿಂದ ಕೊಲ್ಲಲ್ಪಟ್ಟ ಒಬ್ಬ ರಾಕ್ಷಸ
- ಕೇಶೋತ್ಪಾಟನ – ಕೇಶಾವಪಾಟವ
- ಕೇಸ – (ಕೇಶ) ತಲೆಗೂದಲು
- ಕೇಸಕ್ಕಿ – ಕೆಂಪು ಅಕ್ಕಿ
- ಕೇಸಡಗು – ಕೆಂಪು ಮಾಂಸ
- ಕೇಸಡಿ – ಕೆಂಪಾದ ಅಡಿ
- ಕೇಸಡಿಯ – ಕೆಂಪಾದ ಅಡಿಗಳುಳ್ಳವನು
- ಕೇಸಡಿವೆಳಗು – ಕೆಂಪು ಪಾದಗಳ ಕಾಂತಿ
- ಕೇಸರ – ಕೋಳಿ, ಕುದುರೆ ಅಥವಾ ಸಿಂಹದ ಕುತ್ತಿಗೆಯ ಕೂದಲು
- ಕೇಸರದ್ರುಮ – ಬಕುಳದ ಮರ
- ಕೇಸರಫಲ – ಬಕುಳದ ಹಣ್ಣು
- ಕೇಸರರಜ – ಹೂವನ ಬಂಡು, ಪರಾಗ
- ಕೇಸರಿ – ಕೇಸರವನ್ನುಳ್ಳುದು, ಸಿಂಹ
- ಕೇಸರಿಕಿಶೋರ – ಸಿಂಹದ ಮರಿ
- ಕೇಸರಿಕೇತನ – ಸಿಂಹದ ಚಿಹ್ನೆಯ ಧ್ವಜ; ಭೀಮ
- ಕೇಸರಿಣಿ – ಹೆಣ್ಣು ಸಿಂಹ
- ಕೇಸರಿದ್ವಿಷ – ಸಿಂಹದ ಶತ್ರು, ಶರಭ
- ಕೇಸರದ್ವಿಷಾರಿ – ಶರಭದ ಶತ್ರು, ಭೇರುಂಡ
- ಕೇಸರಿಪೀಠ – ಸಿಂಹಾಸನ
- ಕೇಸರಿಸು – ಕೆಂಪಗೆ ಮಾಡು
- ಕೇಸುರಿ – ಕೆಂಪಾದ ಉರಿ
- ಕೇಸೊಡಲ – ಕೆಂಪು ದೇಹವುಳ್ಳವನು; ಮಂಗಳಗ್ರಹ
- ಕೇಳ್ – ಕೇಳು, ಆಲಿಸು, ಗಮನಿಸು; ಪಾಲಿಸು; ಪ್ರಶ್ನಿಸು
- ಕೇಳ – ಸಂಗಡಿಗ, ಸ್ನೇಹಿತ; ನರ್ತಕ
- ಕೇಳಿ – ಆಟ; ವಿನೋದ
- ಕೇಳಿಕೆ – ಆಟ; ಪ್ರಸಿದ್ಧಿ
- ಕೇಳೀಕೆವಿಡಿ – ನೃತ್ಯಮಾಡು
- ಕೇಳಿನಿವಾಸ – ನೃತ್ಯಮಂದಿರ
- ಕೇಳಿಲೀಲೆ – ಶೃಂಗಾರಲೀಲೆ
- ಕೇಳಿವಟ್ಟಲ್ – ತೆಂಗಿನ ಚಿಪ್ಪು
- ಕೇಳಿಶೀಳ – ಆಟವೇ ಶೀಲವಾಗಿರುವವನು, ಆಟಗುಳಿ
- ಕೇಳಿಸು – ಕೇಳುವಂತೆ ಮಾಡು; ವಾದ್ಯ ನುಡಿಸು; ಹಾಡು; ನಾಟ್ಯವಾಡು
- ಕೇಳೀಪ್ರಾಸಾದ – ವಿನೋದಮಂದಿರ; ಆಟದ ಮನೆ
- ಕೇಳೀಭೂಧರ – ಕ್ರೀಡಾಶೈಲ
- ಕೇಳೀಮರಾಳ – ಅಟಕ್ಕಾಗಿ ಸಾಕಿರುವ ಹಂಸ
- ಕೇಳೀಲೋಲ – ಕ್ರೀಡಾಲೋಲ
- ಕೇಳೀಶೈಲ – ಕೇಳೀಭೂಧರ
- ಕೇಳ್ಪಿ – ಕೇಳುವಿಕೆ
- ಕೈ – ಆನೆಯ ಸೊಂಡಿಲು; ಮರದ ರೆಂಬೆ
- ಕೈಕೋಲ್ – ಕಡೆಗೋಲು, ಮಂತು
- ಕೈಗಡಿ – ಕೈಯನ್ನು ಕಡಿ, ತುಂಡುಮಾಡು
- ಕೈಗಣ್ಮು – ಹೆಚ್ಚಾಗು
- ಕೈಗನ್ನಡಿ – ಸಣ್ಣ ಕನ್ನಡಿ
- ಕೈಗರ್ಚು – ಕೈಯನ್ನು ತೊಳೆ
- ಕೈಗುಣ – ಹಸ್ತಗುಣ; ಪ್ರಭಾವ
- ಕೈಗುತ್ತು – ಕೈಯಿಂದ ಗುದ್ದು
- ಕೈಗೆಯ್ – ಅಲಂಕರಿಸಿಕೊ
- ಕೈಗೆಲ್ – ಬಲವಂತವಾಗಿ ಕೈಹಿಡಿದುಕೊ
- ಕೈಗೊಂಬಾಳ – ಚಪ್ಪಾಳೆ ತಟ್ಟಿ ಕುಣಿಯುವುದು
- ಕೈಗೊಳ್ಳಿ – ಕೈಯಲ್ಲಿ ಹಿಡಿದ ಕೊಳ್ಳಿ
- ಕೈಘಟ್ಟಿ – ಪರಿಮಳ
- ಕೈಟಭಾರಾತಿ – ಕೈಟಭನ ಶತ್ರು, ವಿಷ್ಣು
- ಕೈಟುಂಕೆಗೆಯ್ – ಚಿಟಕಿ ಹೊಡೆ
- ಕೈತ – ಮಾಡಿದ, ರಚಿಸಿದ
- ಕೈತಕ – ಕೇತಕಿ ಪುಷ್ಪ
- ಕೈತಕದಳ – ಕೇದಗೆ ವನ
- ಕೈತಕಧೂಳಿ – ಕೇದಗೆಯ ಪರಾಗ
- ಕೈತಡವು – ಕೈಯಿಂದ ತಡವು
- ಕತವ – ಮೋಸ; ನೆಪ
- ಕೈತವೋದರ – ಕೈತವ+ಉದರ, ಮಾಯಾ ಶರೀರ
- ಕೈದಟ್ಟು- ಕೈ ತಟ್ಟು, ಚಪ್ಪಾಳೆ ತಟ್ಟು
- ಕೈದವ – (ಕೈತವ) ಕಪಟ
- ಕೈದಾಗು – ಕೈ ತಗುಲು; ಕೈಚಳಕ
- ಕೈದು – ಆಯುಧ
- ಕೈಪಿಡಿ – ಕನ್ನಡಿ
- ಕೈಪೆ – ಕಹಿ
- ಕೈಪೆದೊಂಡೆ – ಕಹಿ ತೊಂಡೆ
- ಕೈಪೆವಾತು – ಅಪ್ರಿಯ ನುಡಿ
- ಕೈಪೆವೀರೆ – ಕಹಿ ಹೀರೆ
- ಕೈಪೆವೆಮರ್ – ಕಹಿ ಬೆವರು
- ಕೈಪೆಸರ – ಕಹಿಯಾದ, ಕರ್ಕಶ ಧ್ವನಿ
- ಕೈಬರ್ – ಚಿಗುರಿಡು
- ಕೈಬರ್ದುಕು – ಕೈಯಿಂದ ನುಣುಚಿಕೊ
- ಕೈಬಸ – ಕೈವಶ
- ಕೈ ಬಾಚಿ – ಸಣ್ಣ ಬಾಚಿ
- ಕೈಬೋನ – ಕೈ ತುತ್ತು
- ಕೈಮಡು – ಬೊಗಸೆ
- ಕಯಮಾಡು – ಆಯುಧ ಝಳಪಿಸು
- ಕೈಮಳೆ – ಗಿಂಡಿ
- ಕೈಮಿಗು – ಕೆಯ್ಮಿಗು, ಹೆಚ್ಚಾಗು; ಮಿತಿ ಮೀರು
- ಕೈಮುಗಿಯಿಸು – ಕೈಮುಗಿಯುವಂತೆ, ನಮಸ್ಕರಿಸುವಂತೆ ಮಾಡು
- ಕೈಮುರಿಗೆ – ಕೈಯ ಸುತ್ತ ಕಟ್ಟಿದ ಹುಲ್ಲು ಅಥವಾ ಬಟ್ಟೆ
- ಕೈಯಂಬು – ಕೈಯ ಬಾಣ
- ಕೈಯಳವಿ – ಕೆಯ್ಯಳವಿ, ಶಕ್ತಿಸಾಧ್ಯ
- ಕೈಯಳೆ – ಮಜ್ಜಿಗೆ
- ಕೈಯಾಣೆಯಿಡು – ಕೈ ಮೇಲೆ ಕೈಯಿಟ್ಟು ಭಾಷೆ ಕೊಡು; ಪ್ರತಿಜ್ಞೆ ಮಾಡು
- ಕೈಯುಗುರ್ – ಕೈಬೆರಳಿನ ಉಗುರು
- ಕೈರವ – ಬಿಳಿಯ ನೈದಿಲೆ
- ಕೈರವಗಂಧಿ – ಬಿಳಿ ನೈದಿಲೆಯ
- ಸುಗಂಧವಿರುವವರು
- ಕೈರವಮಿತ್ರ – ಚಂದ್ರ
- ಕೈಲಾಸ – ಬೆಳ್ಳಿ ಬೆಟ್ಟ
- ಕೈಲಾಸಶೈಲಕಲ್ಪಕ – ಕೈಲಾಸಪರ್ವತಕ್ಕೆ ಸದೃಶ
- ಕೈವಟ್ಟಲ್ – ಕೈ ಬಟ್ಟಲು, ಸಣ್ಣ ಬಟ್ಟಲು
- ಕೈವರ್ತ – ಬೆಸ್ತ, ಮೀನುಗಾರ
- ಕೈವಲ್ಯ – ಮೋಕ್ಷ, ನಿರ್ವಾಣ
- ಕೈವಲ್ಯಬೋಧ – ಕೇವಲಜ್ಞಾನ; ಮೋಕ್ಷ
- ಕೈವಾಗು – ಕೈಯನ್ನು ಬಗ್ಗಿಸು
- ಕೈವಾರ್ – ಸಹಾಯ ಬಯಸು; ನಿಲ್ಲಿಸು, ತಡೆ
- ಕೈವಾರ – ಸ್ತ್ರೋತ್ರ; ಹೊಗಳಿಕೆ
- ಕೈವಾರಂಗೊಳ್ – ಮೆಚ್ಚು; ಹೊಗಳು
- ಕೈವಾರಿಸು – ನೆರವಾಗು
- ಕೈವೀಣ – ಒಂದು ಬಗೆಯ ಆಯುಧ
- ಕೈವೋಗು – ಕೆಯ್ವೋಗು, ಗುರಿತಪ್ಪು; ಚಿಗುರು; ಫಲಿಸು
- ಕೈಶಿಕ – ಕೇಶರಾಶಿ; ಪ್ರಣಯ; ಒಂದು ರಾಗ
- ಕೈಶಿಕೀ(ವೃತ್ತಿ) – ಶೃಂಗಾರಕ್ಕೆ ತಕ್ಕ ನಡವಳಿಕೆಯನ್ನು ಸ್ಮಜಿಸುವ ಒಂದು ವೃತ್ತಿ
- ಕೈಸಾಣೆ – ಚಿಕ್ಕ ಸಾಣೆ ಕಲ್ಲು
- ಕೈಸಾರೆ – ಕೈಗೆಟುಕುವಷ್ಟು ಹತ್ತಿರ
- ಕೈಳಾಸಶೈಲ – ಕೈಲಾಸ ಪರ್ವತ
- ಕೈಳಾಶಾಚಳ – ಕೈಲಾಸಶೈಲ
- ಕೊಂಕ – ವಕ್ರ; ಒಂದು ಕಾಡುಪ್ರಾಣಿ
- ಕೊಂಕಾಡು – ಕೊಂಕು ಮಾತಾಡು; ಚಮತ್ಕಾರದ ಮಾತಾಡು
- ಕೊಂಕಾನ್ – ಬಾಗಿರು
- ಕೊಂಕಿಗ – ವಕ್ರವಾದ ಸ್ವಭಾವವುಳ್ಳವನು
- ಕೊಂಕು – ವಕ್ರವಾಗು; ವಕ್ರತೆ
- ಕೊಂಕುಗೊಂಬು – ಬಾಗಿದ ಕೊಂಬು; ಡೊಂಕಾದ ರೆಂಬೆ
- ಕೊಂಗ – ಒಂದು ದೇಶದ ಹೆಸರು
- ಕೊಂಚೆ – (ಕ್ರೌಂಚ) ಒಂದು ಬಗೆಯ ಹಕ್ಕಿ
- ಕೊಂಚೆಯ – ಚಪ್ಪರ; ಬಳ್ಳಿಮಾಡ
- ಕೊಂಚೆವಿಂಡು – ಕ್ರೌಂಚಪಕ್ಷಿಗಳ ಹಿಂಡು
- ಕೊಂಡ – ಅಗ್ನಿಕುಂಡ
- ಕೊಂಡಗು – ನಾಲ್ಕು ಕೊಂಬುಗಳ ಸಾರಂಗ
- ಕೊಂಡಾಡು – ಬಹುವಾಗಿ ಆದರಿಸು
- ಕೊಂಡುಕೊನೆ – ಸಂತೋಷಿಸು; ಹೊಗಳು
- ಕೊಂಡೆಯ – ಚಾಡಿ ಮಾತು
- ಕೊಂತ – ಸಬಳ, ಒಂದು ಆಯುಧ
- ಕೊಂತಂಗೊಳ್ – ಕೊಂತ ಹಿಡಿ; ಕೊಂತದಿಮದ ಹೊಡೆ; ಕೊಂತದಿಂದ ಗಾಯಗೊಳ್ಳು
- ಕೊಂತಗಾ- ಕೊಂತ ಹಿಡಿದು ಯುದ್ಧ ಮಾಡುವವನು
- ಕೊಂತಗೆಯ್ಯ – ಕೈಯಲ್ಲಿ ಕೊಂತ ಹಿಡಿದವನು; ನೈರುತ್ಯಾಧಿಪತಿ, ನಿರುತಿ
- ಕೊಂಬಳಿ – ಕೊಂಬೆ, ರೆಂಬೆ
- ಕೊಂಬಾಟ – ಕೊಂಬಿನ ಆಟ
- ಕೊಂಬು – ಸಂಕೇತಸ್ಥಳ
- ಕೊಂಬುಗೊಡು – ಆಶ್ರಯ ನೀಡು
- ಕೊಂಬುಗೊಳ್ – ಆಶ್ರಯ ಪಡೆ
- ಕೊಕ್ಕ – ಕೋಳಿ
- ಕೊಗ್ಗನೆ – ಕಗ್ಗನೆ, ಕಪ್ಪಗೆ
- ಕೊಗ್ಗಿ – ಒಂದು ಔಷಧಿಸಸ್ಯ; ಕಿವಿಯ ಕೊಳೆ
- ಕೊಟಕ – ನೋಟಕ
- ಕೊಟಕಿಡು – ನೆಗೆದಡು
- ಕೊಟ್ಟಗೆ – ಕೊಟ್ಟಿಗೆ, ಚಿಕ್ಕ ಕೊಠಡಿ
- ಕೊಟ್ಟಜ – ಕಪ್ಪ, ಕಾಣಿಕೆ
- ಕೊಟ್ಟಜಂಗೊಡು – ಕಪ್ಪ ಕೊಡು
- ಕೊಟ್ಟವಳ – ಕೋಟೆಯ ಕಾವಲುಗಾರ
- ಕೊಟ್ಟ(ಸ)ಸು – ಸುಟ್ಟ ಮಾಂಸ
- ಕೊಟ್ಟಿಸ – ಕೊಟ್ಟ(ಸ)ಸು
- ಕೊಟ್ಟಿಗೆ – ಹೊರೆ ಹೊರುವ ಎತ್ತು; ಹೇರೆತ್ತು
- ಕೊಟ್ಟು – ನವಿಲು, ಕೋಳಿಗಳ ತಲೆಯ ಮೇಲಿನ ತುರಾಯಿ; ಚೂಚುಕ
- ಕೊಟ್ಟೆ – ಗೊರಟೆ, ಓಟೆ
- ಕೊಡ – ಗಡಿಗೆ, ಬಿಂದಿಗೆ
- ಕೊಡ(ಂ)ಕೆ – ಕಿವಿ
- ಕೊಡಂಚಿ – ಒಂದು ಜಾತಿಯ ಮುಳ್ಳಿನ ಗಿಡ
- ಕೊಡಂತಿ – ಕೊಡತಿ, ಮರಗೆಲಸದ ಸಾಧನ
- ಕೊಡಂಬೆ – ಮೀನು ಹಿಡಿಯಲು ಬಳಸುವ ಬುಟ್ಟಿ
- ಕೊಡ(ಡು)ಗೂಸು – ಎಳೆಯ ಹುಡುಗಿ, ಕನ್ಯೆ
- ಕೊಡಗೂಸುತನ – ಕನ್ನೆತನ
- ಕೊಡಗೊಳ್ – ಕೊಡವನ್ನು ತೆಗೆದುಕೊ
- ಕೊಡಪು – ಒದರು, ಜಾಡಿಸು, ವಿಕೀರ್ಣ
- ಕೊಡಲಿ – ಮರ ಕಡಿಯುವ ಸಾಧನ
- ಕೊಡಲಿಗೊಳ್ – ಕೊಡಲಿಯನ್ನು ತೆಗೆದುಕೊ
- ಕೊಡಲೆ – ಕರುಳು
- ಕೊಡವಿ – ಮದುವೆಯಾಗದ ಹೆಣ್ಣು, ಕನ್ಯೆ
- ಕೊಡಸಾರಿ – ಒಂದು ಮೂಲಿಕೆ
- ಕೊಡಸಿಗೆ – ಒಂದು ಬಗೆಯ ಸಸ್ಯ
- ಕೊಡು – ಸಮರ್ಪಿಸು
- ಕೊಡುಕಿಸು – ಗುಟುಕು ಕೊಡು
- ಕೊಡೆ – ಆತಪತ್ರ, ಛತ್ರಿ
- ಕೊಡೆನೆಗೆ – ಪುಟ ನೆಗೆ; ಒಂದು ಕಡೆ ಬಾರದಿಂದ
- ಮತ್ತೊಂದು ಕಡೆ ಮೇಲಕ್ಕೇಳು
- ಕೊಡೆಯೆಲೆ – ದೊಡ್ಡ ಎಲೆ
- ಕೊಡೆಯೊಡೆಯ – ಕೊಡೆಯ ಒಡೆಯ, ರಾಜ
- ಕೊಡೆವಿಡಿ – ಕೊಡೆ ಹಿಡಿ
- ಕೊಣಕಿಡು – ನೆಗೆದಾಡು, ಕುಪ್ಪಳಿಸು
- ಕೊಣಕು – ಕೊಣಕಿಡು
- ಕೊಣಕೋಲ್ – ಬಾಗಿದ ಬಾಣ
- ಕೊಣಸು – ಜಿಂಕೆಯ ಮರಿ
- ಕೊತ್ತಳ – ಕೋಟೆಯ ಬುರುಜು
- ಕೊದಲು – ತಡವರಿಸು, ಉಗ್ಗು
- ಕೊದಳಿ – ಎಳ್ಳುಗಿಡದ ಸಿಪ್ಪೆ
- ಕೊನರ್ – ಚಿಗುರು; ಅಭಿವೃದ್ಧಿ ಹೊಂದು
- ಕೊನರಿಸು – ಚಿಗುರಿಸು
- ಕೊನರೇ¾ು – ಚಿಗುರಿಡು
- ಕೊನರ್ಮೀಸೆ – ಚಿಗುರುಮೀಸೆ
- ಕೊನರ್ವೆರ್ಚಿಸು – ಚಿಗುರು ಹೆಚ್ಚುವಂತೆ ಮಾಡು
- ಕೊನೆ – ಕೊನರ್; ಹೊಗಳು; ಸಂತೋಷಪಡು; ಹೆಮ್ಮೆಪಡು; ತುದಿ, ಅಗ್ರ; ಚಿಗುರು
- ಕೊನೆಮೀಸೆ – ಕುಡಿಮೀಸೆ
- ಕೊನೆವಾಸೆ – ಕಿಬ್ಬೊಟ್ಟೆಯಿಂದ ಎದೆಯವರೆಗಿನ ಕೂದಲು
- ಕೊನೆವುಗುರ್ – ಉಗುರಿನ ತುದಿ
- ಕೊನೆವೆಳಗು – ಚಿಗುರಿನ ಕಾಂತಿ
- ಕೊನ್ನಿಗ – ದೃಢಕಾಯ; ಸುಂದರ
- ಕೊಪ್ಪರ – ಮೊಳಕೈ; ಮೊಳಕಾಲು; ಮಲ್ಲಯುದ್ಧದ ಒಂದು ವರಸೆ
- ಕೊಪ್ಪರಿಕೆ – ಕೊಪ್ಪರಿಗೆ, ಅಗಲ ಬಾಯಿಯ ದೊಡ್ಡ ಪಾತ್ರೆ
- ಕೊಪ್ಪು – ಬಿಲ್ಲಿನ ತುದಿ; ಒಂದು ಕಿವಿಯ ಆಭರಣ; ಜಡೆಬಿಲ್ಲೆ ಕೊಯ್ – ಕತ್ತರಿಸು; ಹೂಬಿಡಿಸು
- ಕೊಯ್ತಲೆಯಧಮಾ – ಕೊಯ್ದ ತಲೆಯ ನೀಚನೇ, ಎಂದರೆ ಎರಡು ತಲೆಯ ನೀಚನೇ
- ಕೊರಂಗು – ಕೊರಗು; ಸೊರಗು; ನಿಸ್ಸಾರವಾಗು
- ಕೊರಂಟು – ಕೊರಡು, ಒಣಗಿದ ಮರ
- ಕೊರಂಟುದಲೆ – ಒಣಗಿ ಕೊರಡಿನಂತಾದ ತಲೆ
- ಕೊರಗಿಸು – ಕುಗ್ಗಿಸು; ಬಾಡಿಸು
- ಕೊರಡಗೆ – ಕಾಮನ ಬಿಲ್ಲು
- ಕೊರಡು – ಒಣಮರದ ತುಂಡು
- ಕೊರಲ್(ಳ್) – ಕೊರಳು, ಗ್ರೀವ, ಕಂಠ; ಧ್ವನಿ; ಮಾತು, ನುಡಿ
- ಕೊರಲುಲಿ – ಕೊರಳ ಧ್ವನಿ
- ಕೊರಲ್ಚು – ಹುಯ್ಯಲಿಡು; ಆಕ್ರೋಶ ಮಾಡು
- ಕೊರಸು – ಒಂದು ಬಗೆಯ ಹಕ್ಕಿ
- ಕೊರೆ – ಗೊರಕೆ ಹೊಡೆ
- ಕೊರ್ಬು – ಗರ್ವ
- ಕೊರ್ಬುಗುಡು – ಕೊಬ್ಬಿಸು
- ಕೊರ್ವಿಸು – ಕೊಬ್ಬಿಸು
- ಕೊರ್ವು – ಕೊಬ್ಬು, ಹೆಚ್ಚಾಗು; ಉಬ್ಬು; ದಪ್ಪನಾಗು; ಸೊಕ್ಕು; ಹೆಚ್ಚಳ; ಅಹಂಕಾರ; ನೆಣ, ಮೇದಸ್ಸು
- ಕೊಲ್ – ಪ್ರಾಣ ತೆಗೆ; ಪೀಡಿಸು, ಹಿಂಸೆ ಮಾಡು
- ಕೊಲಿ(ಲ್ಲಿ)ಸು – ಕೊಲ್ಲುವಂತೆ ಮಾಡು
- ಕೊಲೆ – ಹತ್ಯೆ
- ಕೊಲೆಗೈ – ವಧಿಸು
- ಕೊಲೆಪಡು – ಕೊಲೆಗೊಳಗಾಗು
- ಕೊಲ್ಲಟಿ – ದೊಂಬ
- ಕೊಲ್ಲಟಿಗ – ಕೊಲ್ಲಟಿ
- ಕೊಲ್ಲಟಿಗತನ – ದೊಂಬವಿದ್ಯೆ
- ಕೊಲ್ಲಣಿಗೆ – ವೇಷ; ಆಟ; ಗುಂಪು
- ಕೊಲ್ಲಣೆ – ಸಂದಣಿ
- ಕೊಲ್ಲಿ – ವಕ್ರ
- ಕೊಲ್ಲಿನೋಟ – ವಕ್ರ ನೋಟ, ಓರೆನೋಟ
- ಕೊಸಗು – ಬೆಟ್ಟದಾವರೆ
- ಕೊಸೆ – ಕುದುರೆ ಸವಾರಿಯ ಒಂದು ಬಗೆ; ಕಡಿವಾಣ; ಸಂಭೋಗ
- ಕೊಸೆಗೊಳ್ – ಕಡಿವಾಣ ಹಿಡಿ
- ಕೊಳ್ – ತೆಗೆದುಕೊ; ವಶಪಡಿಸಿಕೊ; ಕ್ರಯಕ್ಕೆ ಪಡೆ; ತಾಗು; ಕಚ್ಚು, ಇರಿ; ಪ್ರಯೋಜನವಾಗು; ಸಂಪಾದಿಸು; ಆವರಿಸು
- ಕೊಳ – ಕೆರೆ; ಸಂಕೇತಸ್ಥಳ
- ಕೊಳಂಗಟ್ಟು – ಮಡುಗಟ್ಟು
- ಕೊಳಗೊಳ್ – ಮಡುಗಟ್ಟು; ಬಂಧಿತವಾಗು
- ಕೊಳಗ – ನಾಲ್ಕು ಬಳ್ಳಗಳ ಒಂದು ಅಳತೆ;
- ಲೋಹದ ದೊಡ್ಡ ಪಾತ್ರೆ
- ಕೊಳಗು – ಗೊರಸು
- ಕೊಳಗುಳ – ಯುದ್ಧರಂಗ
- ಕೊಳತ – ಲಾಮಂಚ
- ಕೊಳರ್ – ಲಾಮಂಚದ ಬೇರು
- ಕೊಳರ್ವಕ್ಕಿ – ನೀರು ಹಕ್ಕಿ
- ಕೊಳವಿಗೆ – ಕೊಳಗ
- ಕೊಳವೇರ್ – ಕೊಳರ್, ಲಾಮಂಚ
- ಕೊಳಿಸು – ಪಡೆಯುವಂತೆ ಮಾಡು
- ಕೊಳುಕ್ – ಕಳಕ್ ಎನ್ನುವ ಅನುಕರಣ ಶಬ್ದ
- ಕೊಳ್ಕುಬಳ್ಕು – ಒನಪು, ಒಯ್ಯಾರ
- ಕೊಳ್ಕೊಡೆ – ಕೊಡುವ ಮತ್ತು ತೆಗೆದುಕೊಳ್ಳುವ
- ವ್ಯವಹಾರ; ನಂಟಸ್ತಿಕೆ
- ಕೊಳ್ಕೊಳಿಸು – ಕಚ್ಚುವ ಹಾಗೆ ಮಾಡು
- ಕೊಳ್ಗಾರ್ – ಒಂದೇ ಸಮನೆ ಸುರಿಯುವ ಮಳೆ
- ಕೊಳ್ಗುಳ – ಯುದ್ಧ; ಯುದ್ಧರಂಗ
- ಕೊಳ್ಳ – ತಗ್ಗು ಪ್ರದೇಶ; ಕಂದರ
- ಕೊಳ್ಳಿ – ಉರಿಯುವ ಕಟ್ಟಿಗೆ
- ಕೊಳ್ಳಿವೀಸು – ಯುದ್ಧಾರಂಭವಾಗಲೆಂದು ಕೊಳ್ಳಿಯನ್ನು ಬೀಸು
- ಕೊಳ್ಳಿವೆಳಗು – ಕೊಳ್ಳಿಯ ಬೆಳಕು
- ಕೊಳ್ಳೆ – ಸುಲಿಗೆ, ಲೂಟಿ
- ಕೋ – ಪೋಣಿಸು; ಚುಚ್ಚು; ಸಿಕ್ಕಿಸು; ವಶವಾಗು
- ಕೋಂಟೆಗಾಳಗ – ಕೋಟೆಯ ಕಾಳಗ
- ಕೋಕ – ಚಕ್ರವಾಕ; ತೋಳ; ಕೋಗಿಲೆ; ಖರ್ಜೂರ
- ಕೋಕನದ – ಕೆಂದಾವರೆ
- ಕೋಕನದಗರ್ಭ – ತಾವರೆಯಲ್ಲಿ ಹುಟ್ಟಿದವನು,ವಿಷ್ಣು
- ಕೋಕನದಜಠರ – ಹೊಟ್ಟೆಯ ಮೇಲೆ
- ತಾವರೆಯಿರುವವನು, ವಿಷ್ಣು
- ಕೋಕನದಪ್ರದ್ವಿಷ – ಕೋಕನದ ವೈರಿ, ಚಂದ್ರ
- ಕೋಕನದವೈರಿ – ಚಂದ್ರ
- ಕೋಕಿಲ – ಪರಪುಟ್ಟ, ಕೋಗಿಲೆ
- ಕೋಕಿಲಸ್ವನ – ಕೋಗಿಲೆಯ ಕೂಜನ
- ಕೋಕಿಲಾರವ – ಕೋಗಿಲೆಯ ಧ್ವನಿ
- ಕೋಗಿಲೆ – ಕೋಕಿಲ
- ಕೋಗಿಲೆವೆಣ್ – ಹೆಣ್ಣು ಕೋಗಿಲೆ
- ಕೋಟರ – ಮರದ ಪೊಟರೆ; ಬಿಲ
- ಕೋಟಲೆ – ತೊಂದರೆ
- ಕೋಟಲೆಗೊಳ್ – ಯಾತನೆ ಅನುಭವಿಸು
- ಕೋಟಲೆಗೊಳಿಸು – ತೊಂದರೆಗೆ ಗುರಿಪಡಿಸು
- ಕೋಟಲೆವಡಿಸು – ಕೋಟಲೆಗೊಳಿಸು
- ಕೋಟಲೆವಡು – ತೊಂದರೆಪಡು
- ಕೋಟಾಚಕ್ರ – ಕೋಟೆಯ ಸುತ್ತು
- ಕೋಟಾಯಂತ್ರ – ಕೋಟೆಯನ್ನು ಒಡೆಯುವ ಯಂತ್ರ
- ಕೋಟಿ – ನೂರು ಲಕ್ಷ; ತುದಿ
- ಕೋಟಿಕ – ಶಿಖರ
- ಕೋಟಿಕಶಿಲೆ – (ಜೈನ) ಸಿದ್ಧಶಿಲೆ
- ಕೋಟಿಶ – ಹಲಬೆ
- ಕೋಟೀರ – ಕಿರೀಟ; ಆಶ್ರಯ; ಶಿಖರ
- ಕೋಟೆಗಾ – ಕೋಟೆಯನ್ನು ರಕ್ಷಿಸು
- ಕೋಡಗ – ಕೋತಿ
- ಕೋಡಗಗಟ್ಟು – ಕಪಿಯನ್ನು ಕಟ್ಟುವಂತೆ ಕಟ್ಟು, ಹೆಡಮುರಿಗೆ
- ಕೋಡಗಗಟ್ಟುಗಟ್ಟು – ಹೆಡಮುರಿಗೆ ಕಟ್ಟು
- ಕೋಡ ಸೇಡು – ಚಳಿಯ ಸೆಡೆತ
- ಕೋಡಿ – ಕೆರೆಯ ಹೆಚ್ಚಿನ ನೀರನ್ನು ಬಿಡುವ ಮಾರ್ಗ; ಉದಕೋಚ್ಛ್ವಾಸ; ತುದಿ, ಕೊನೆ
- ಕೋಡಿಗೊಳ್ – ಉಕ್ಕಿ ಹರಿ
- ಕೋಡಿಡು – ಕೊಂಬಿನಿಂದ ತಿವಿ; ಸ್ಪರ್ಧಿಸು
- ಕೋಡಿನೀರ್ – ಕೋಡಿಯಿಂದ ಹೊರಬರುವ ನೀರು
- ಕೋಡಿವರಿ – ಕೋಡಿಯಿಂದ ನೀರು ಬರು
- ಕೋಡಿಸು – ತಂಪಾಗಿಸು
- ಕೋಡು – ತಂಪಾಗು; ಚಳಿಯಿಂದ ನಡುಗು;
- ಭಯಪಡು; ತಣ್ಣಗಿರುವಿಕೆ; ದಾನ;
- ಪ್ರಾಣಿಯ ಕೊಂಬು; ಮರದ ಕೊಂಬೆ
- ಕೋಡು(ಂ)ಗಲ್ – ಬೆಟ್ಟದ ತುದಿಯ ಕಲ್ಲು
- ಕೋಡುಗೈ – ಮರದ ಕೊಂಬೆ
- ಕೋಡುಗೊಳ್ – ಕೋರೆಹಲ್ಲನ್ನು ಹೊಂದು; ದಂತದಿಂದ ತಿವಿ
- ಕೋಣ್(ಣು) – ಮೂಲೆ; ದಿಕ್ಕು
- ಕೋಣ – ಎಮ್ಮೆಯ ಜಾತಿಯಲ್ಲಿ ಗಂಡು, ಮಹಿಷ; ಮೂಲೆ; ತಮಟೆ ಬಾರಿಸುವ ಕೋಲು; ಅಸಿಧಾರೆ
- ಕೋಣಪ – ಒಬ್ಬ ದಿಕ್ಪಾಲಕ, ನಿರುತಿ
- ಕೋಣಪದಿಕ್ಕು – ನೈರುತ್ಯ
- ಕೋಣೆವುಗಿದು – ಒಳಮನೆಯನ್ನು ಹೊಗಿಸು
- ಕೋದಂಡ – ಬಿಲ್ಲು
- ಕೋದಂಡಕಾಂಡ – ಬಿಲ್ಲಿನ ಕೋಲು
- ಕೋದಂಡಕೋಟಿ – ಬಿಲ್ಲಿನ ತುದಿ
- ಕೋದ್ರವ – ಹಾರಕ ಎಂಬ ಧಾನ್ಯ
- ಕೋಪ – ಸಿಟ್ಟು
- ಕೋಪಗರ್ಭ – ಕೋಪವನ್ನು ಒಳಗಿಟ್ಟುಕೊಂಡವನು
- ಕೋಪನ – ಕೋಪದಿಂದ ಕೂಡಿದವನು
- ಕೋಪನಿರ್ಭರ – ಕೋಪಾತಿಶಯ
- ಕೋಪಟಾಪಳ – ಕೋಪದಿಂದ ಕೆಂಪಾದ
- ಕೋಪರಸ – ರೌದ್ರರಸ
- ಕೋಪಾಗಾರ – ಕೋಪಗೃಹ
- ಕೋಪಾರಕ್ತ – ಕೋಪದಿಂದ ಕೆಂಪಾದ
- ಕೋಪಾರುಣ – ಕೋಪಾರಕ್ತ
- ಕೋಪಾವಲೇಪ – ಕೋಪೋದ್ರೇಕ
- ಕೋಪಿಸು – ಸಿಟ್ಟು ಮಾಡಿಕೊ
- ಕೋಪು – ಭಾವಾಭಿನಯ; ಒಂದು ಬಗೆಯ ಬೇಟೆ; ಕೌಪೀನ
- ಕೋಪೋದ್ದೀಪನಪಿಂಡ – ಆನೆಗೆ
- ಕೋಪವುಂಟುಮಾಡಲು ತಿನ್ನಿಸುತ್ತಿದ್ದ ಉಂಡೆ
- ಕೋಮಲ – ಮೃದುವಾದ; ಸುಂದರ; ಎಳೆಗಾಯಿ
- ಕೋಮಲಾಂಕುರ – ಕೋಮಲವಾದ ಚಿಗುರು
- ಕೋಮಲೆ(ಳೆ) – ಕೋಮಲ ದೇಹವುಳ್ಳವಳು; ನೈದಿಲೆ
- ಕೋಮಳಾ(ಲಾ)ಂಗಿ – ಕೋಮಲೆ
- ಕೋಯಂಡ – (ಕೋದಂಡ) ಬಿಲ್ಲು
- ಕೋರಕ – ಮೊಗ್ಗು
- ಕೋರಕಗ್ರಂಥಿ – ಮೊಗ್ಗಿನ ಗಂಟು
- ಕೋರಕಿತ – ಮೊಗ್ಗು ಬಿಟ್ಟಿರುವ
- ಕೋರಡಿಗ – ಮೂರ್ಖ
- ಕೋರಯಿಸು – ಕೋರೈಸು, ಕಣ್ಣು ಕುಕ್ಕು
- ಕೋರಿಸು – ನಾಟು; ಇರಿ
- ಕೋರೆ – ವಕ್ರತೆ
- ಕೋರ್ಗುಡಿಗೊಳ್ – ಉದ್ಯೋಗಗೊಳ್ಳು(?)
- ಕೋಲ್ – ಕೋಲು, ದೊಣ್ಣೆ; ಬಾಣ
- ಕೋಲ – ಕಾಡುಹಂದಿ
- ಕೋಲವ – ಹಿಪ್ಪಲಿ
- ಕೋಲಾಟ – ಕೋಲು ಹೊಯ್ದು ಮಾಡುವ ಕುಣಿತ; ಬಾಣಗಳ ಕಾದಾಟ
- ಕೋಲಾ(ಳಾ)ಹಲ(ಳ) – ಗಲಭೆ, ಗದ್ದಲ, ಕ್ಷೋಭೆ
- ಕೋಲೆತ್ತು – ಬಾಣವನ್ನು ತೆಗೆ
- ಕೋಲೊಡ್ಡು – ಬಾಣ ಪ್ರಯೋಗಿಸು
- ಕೋಲ್ಕುಟ್ಟು – ಬಾಣದಿಂದ ಹೊಡೆ
- ಕೋಲ್ಬೆಳೆ – ನೇರವಾಗಿ ಬೆಳೆದ ಬೆಳೆ
- ಕೋಲ್ವಲೆ – ಉದ್ದವಾದ ಬಲೆ
- ಕೋವಣ – (ಕೌಪೀನ) ಲಂಗೋಟಿ
- ಕೋವರ್ – ಕುಂಬಾರರು
- ಕೋವರ ಚಕ್ರ – ಕುಂಬಾರನ ಚಕ್ರ
- ಕೋವಳೆ – ನೈದಿಲೆ
- ಕೋವಿದ – ವಿದ್ವಾಂಸ
- ಕೋಶ – ಒರೆ; ವೃಷಣ; ಭಂಡಾರ
- ಕೋಶಗೃಹ – ಭಂಡಾರ
- ಕೋಶವಿಭೂತಿ – ಹೂವಿನ ಕರ್ಣಿಕೆಯ ಸಮೃದ್ಧಿ; ಭಂಡಾರದ ಸಿರಿ
- ಕೋಶಾಗಾರ – ಕೋಶಗೃಹ
- ಕೋಶಾತಕಿ – ಒಂದು ಬಗೆಯ ಕುಂಬಳ; ಪಡುವಲ ಕಾಯಿ
- ಕೋಶೋದರ – ಮೊಗ್ಗಿನ ಒಳಭಾಗ
- ಕೋಷ್ಠ – ಒಳಹೊಟ್ಟೆ; ಒಳಕೊಠಡಿ; ಕಣಜ; ಸುತ್ತುಗೋಡೆ; ಪೀಠ
- ಕೋಷ್ಠಕ – ಉಗ್ರಾಣ; ಒಳಕೊಠಡಿ
- ಕೋಷ್ಠಬುದ್ಧಿ – (ಜೈನ) ಬುದ್ಧಿಯ ಮಹತ್ವಕ್ಕೆ ಸಂಬಂಧಿಸಿದ ಹದಿನೆಂಟು ಋದ್ಧಿಗಳಲ್ಲಿ ಒಂದು
- ಕೋಷ್ಠಾಗಾರ – ಉಗ್ರಾಣದ ಮನೆ
- ಕೋಷ್ಠಾಸನ – ಕೊಠಡಿಯಲ್ಲಿನ ಪೀಠ
- ಕೋಸು – ಪೋಣಿಸು; ಕೋಶ, ಒಂದು ಹರದಾರಿ
- ಕೋಸುವಲೆ – ಒಂದು ಬಗೆಯ ಬಲೆ
- ಕೋಳ್ – ಹೊಡೆತ; ಹಿಡಿತ; ಕೊಳ್ಳೆ ಹೊಡೆಯುವುದು; ಆಕರ್ಷಣೆ
- ಕೋಳಕ – ಮೆಣಸು
- ಕೋಳ್ಗುದಿ – ತುಂಬ ವ್ಯಥೆ; ಪ್ರೇಮಾಕ್ರಮಣದ ತಿವಿತ
- ಕೋಳ್ಗುದಿಗೊಳ್ – ಸಂಕಟ ಅನುಭವಿಸು
- ಕೋಳ್ಗೊಲೆ – ಸೂರೆಗಾಗಿ ಮಾಡುವ ಕೊಲೆ
- ಕೋಳ್ದಪ್ಪು – ಹಿಡಿತ ತಪ್ಪು
- ಕೋಳ್ದಾಂಟು – ದಾಪುಗಾಲು ಹಾಕಿ ದಾಟು; ವ್ಯಾಪಿಸುವಷ್ಟು ದೂರ
- ಕೋಳ್ನುಡಿ – ಕೊಳ್ಳೆಹೊಡೆಯುವ ಮಾತು
- ಕೋಳ್ಪಡು – ಸೂರೆಯಾಗು
- ಕೋಳ್ಪಾಂಗು – ಬೇಟೆ ವಶವಾಗುವ ರೀತಿ
- ಕೋಳ್ಪೋಗು – ಸೂರೆ ಹೋಗು
- ಕೋಳ್ಮಸಗು – ಕೈಸೆರೆಯಾಗಿ ಕೆರಳು
- ಕೋಳ್ಮೊಗ – ಕೊಂಬು ಮೂಡಿದ ಮುಖ
- ಕೋಳ್ವಡು – ಕೋಳ್ಪಡು
- ಕೋಳ್ವೋಗು – ಕೋಳ್ಪೋಗು
- ಕೌಂಗು – (ಕ್ರಮುಕ) ಅಡಕೆ
- ಕೌಂತೇಯ – ಕುಂತಿಯ ಮಗ, ಪಾಂಡವ
- ಕೌಕ್ಷೇಯಕ – ಕತ್ತಿ
- ಕೌಟವಿ – ಬತ್ತಲೆ ಹೆಣ್ಣು
- ಕೌಟಿಲ್ಯ – ವಕ್ರತೆ, ಕೊಂಕು
- ಕೌಟಿಲ್ಯವೃತ್ತಿ – ವಕ್ರವಾಗಿರುವಿಕೆ; ಕಪಟ ನೀತಿ
- ಕೌಣಪ – ಹೆಣ ತಿಂದು ಬದುಕುವವನು; ರಾಕ್ಷಸ
- ಕೌತುಕ – ಅದ್ಭುತ; ಕುತೂಹಲಕರ
- ಕೌತುಕಂಗೊಳ್ – ವಿಸ್ಮಯಪಡು, ಕುತೂಹಲ ಹೊಂದು
- ಕೌತುಕಂಗೊಳಿಸು – ವಿಸ್ಮಯಪಡಿಸು
- ಕೌತುಕಂದಾಳ್ – ಆಶ್ಚರ್ಯ ಪಡು
- ಕೌತುಕಜನಕ – ಕುತೂಹಲವುಂಟುಮಾಡುವ; ಪ್ರೀತಿಜನಕ
- ಕೌತುಕಪ್ರೇರಿತ – ಕುತೂಹಲದಿಂದ ಪ್ರೇರಣೆ ಪಡೆದ
- ಕೌತುಕಸೃಷ್ಟಿ – ವಿಸ್ಮಯಕರ ಸೃಷ್ಟಿ
- ಕೌತೂಹಲ – ಅಪೇಕ್ಷೆ; ಚಿಂತೆ
- ಕೌದ್ರವೀಣ – ಹಾರಕದ ಹೊಲ
- ಕೌಪ – ಕೌಪು, ಲಂಗೋಟಿ
- ಕೌಪೀನ – ಕೌಪು
- ಕೌಪೀನಧಾರಿ – ಕೌಪೀನ ಧರಿಸಿದವನು; ಸನ್ಯಾಸಿ
- ಕೌಮುದಿ – ಬೆಳುದಿಂಗಳು
- ಕೌಮುದೀಮಹೋತ್ಸವ – ಬೆಳದಿಂಗಳ ಒಂದು ಹಬ್ಬ, ಆಚರಣೆ
- ಕೌಮೋದಕಿ – ವಿಷ್ಣು ಅಥವಾ ಕಷ್ಣನ ಗದೆ
- ಕೌರವ – ಕುರುವಂಶಸಂಬಂಧವಾದ; ಧೃತರಾಷ್ಟ್ರನ ಮಗ; ದುರ್ಯೋಧನ
- ಕೌರವ್ಯಕೋಳಾಹಳ – ಕೌರವನಲ್ಲಿ ತಳಮಳ ಉಂಟುಮಾಡುವವನು, ಭೀಮಸೇನ
- ಕೌರವ್ಯಕ್ರವ್ಯಹವ್ಯ – ಕೌರವನ ಮಾಂಸವೆಂಬ ಹವಿಸ್ಸು
- ಕೌಲ(ಳ) – ಒಂದು ವಾಮಾಚಾರ ಶೈವ ಪಂಗಡ
- ಕೌಲಿ(ಳಿ)ಕ – ಕುಲಸಂಬಂಧಿಯಾದ;
- ವಂಶಪಾರಂಪರ್ಯವಾದ; ಸೋಗುಗಾರ; ವದಂತಿ
- ಕೌಲೇಯ(ಕ) – ಸದ್ವಂಶಜ; ಬೇಟೆಯ ನಾಯಿ
- ಕೌವರೆ – ಸಡಗರ
- ಕೌಶಿಕ – ಕುಶಿಕ ವಂಶದವನು, ವಿಶ್ವಾಮಿತ್ರ; ಗುಗ್ಗು:
- ಗೂಬೆ; ಚಂದ್ರ; ಇಂದ್ರ; ಹಾವಿನ ಪೊರೆ
- ಕೌಶೇಯ – ಕೋಶದಿಂದ ಬಂದದ್ದು, ರೇಷ್ಮೆ
- ಕೌಸುಂಭ – ಕುಸುಬೆ ಗಿಡಕ್ಕೆ ಸಂಬಂಧಿಸಿದ
- ಕೌಸುಂಭರಾಗ – ಕುಸುಬೆ ಹೂವಿನ ಕೆಂಪು ಬಣ್ಣ
- ಕೌಸ್ತುಭ – ವಿಷ್ಣುವಿನ ಎದೆಯ ಮೇಲಿರುವ ರತ್ನ
- ಕೌಸ್ತುಭದ್ಯುತಿ – ಕೌಸ್ತುಭದ ಕಾಂತಿ
- ಕೌಸ್ತುಭಮಣಿ – ಕೌಸ್ತುಭ ರತ್ನ
- ಕೌಸ್ತುಭವಕ್ಷ – ಕೌಸ್ತುಭವನ್ನು ಎದೆಯ ಮೇಲೆ ಧರಿಸಿದವನು, ವಿಷ್ಣು
- ಕೌಳಾಚಾರ್ಯ – ಕೌಲಪಂಥದ ಗುರು
- ಕೌಳಿಕ – ಕಟುಕ
- ಕೌಳಿಕನಾದ – ಸಾಮೂಹಿಕ ಶಬ್ದ
- ಕೌಳುಡೆ – ದಿಂಬು
- ಕೌಳೇಯಕತತಿ – ನಾಯಿಗಳ ಗುಂಪು
- ಕೌಳೇಯಕಕುಟುಂಬಿನಿ – ಹೆಣ್ಣು ಬೇಟೆನಾಯಿ
- ಕ್ರಂದತ್ – ಶಬ್ದ ಮಾಡುತ್ತಿರುವ
- ಕ್ರಕಚ – ಗರಗಸ, ಕರಗಸ
- ಕ್ರಕಚವಿದಾರಣ – ಗರಗಸದಿಂದ ಕೊಯ್ಯುವುದು
- ಕ್ರತು – ಯಜ್ಞ; ಗಜ್ಜುಗದ ಗಿಡ
- ಕ್ರಮ – ಪಾರಂಪರ್ಯ; ರಾಜ್ಯ; ಪಾದ; ನೇರ; ಇಡುವಿಕೆ; ರೀತಿ; ಪದ್ಧತಿ
- ಕ್ರಮಂದಪ್ಪು – ಕ್ರಮ ತಪ್ಪು, ನಿಯಮ ಬಿಟ್ಟ
- ಕ್ರಮಗಣನ(ನೆ) – ಎಣಿಕೆ; ಅನುಕ್ರಮ
- ಕ್ರಮದವರ್ – ಹಕ್ಕುದಾರರು, ಪಾಲುದಾರರು
- ಕ್ರಮವಿಕ್ಷೇಪ – ಅಡಿಯಿಡುವಿಕೆ, ಹೆಜ್ಜೆ ಹಾಕುವಿಕೆ
- ಕ್ರಮವಿಪರ್ಯಯ – ಕ್ರಮ ತಪ್ಪಿದ; ರೂಢಿಗೆ ವಿರುದ್ಧವಾದ
- ಕ್ರಮವಿಹಿತ – ಕ್ರಮಾನುಗತವಾಗಿ
- ಕ್ರಮಸಂಧಾನ – ಕ್ರಮವಾಗಿ ಜೋಡಿಸುವುದು
- ಕ್ರಮಾಂಭೋರುಹ – ಪಾದಕಮಲ
- ಕ್ರಮಾಧಿಕ – ಒಳ್ಳೆಯ ನಡತೆಯಿಂದ ಶ್ರೇಷ್ಠನಾದವನು
- ಕ್ರಮುಕ – ಅಡಿಕೆ
- ಕ್ರಮೇಲ(ಳ)ಕ – ಒಂಟೆ
- ಕ್ರವ್ಯ – ಬೇಯಿಸದ ಮಾಂಸ, ಹಸಿಮಾಂಸ
- ಕ್ರವ್ಯಾದ – ರಾಕ್ಷಸ
- ಕ್ರಿಯಾಋದ್ಧಿ – (ಜೈನ) ಕ್ರಿಯಾಗೋಚರರದ್ರ್ಧಿ
- ಕ್ರಿಯಾಕುಶಲ – ಕೆಲಸ ಮಾಡುವುದರಲ್ಲಿ ಕುಶಲನಾದವನು
- ಕೆರಿಯಾಗೋಪಕ – ಒಂದು ಶಬ್ದಾಲಂಕಾರ
- ಕ್ರಿಯಾನಿವೃತ್ತಿ – ಕ್ರಿಯೆಯನ್ನು ನಿಲ್ಲಿಸುವುದು
- ಕ್ರಿಯಾಪೂರ್ವಕ – ವಿಧಿಗೆ ಅನುಸಾರವಾದ
- ಕ್ರಿಯಾಮಂತ್ರ – (ಜೈನ) ಐದು ಬಗೆಯ ಂತ್ರಗಳಲ್ಲಿ ಒಂದು
- ಕ್ರಿಯಾವರ್ಧನ – (ಜೈನ) ಒಂದು ಬಗೆಯ ತಪಸ್ಸು
- ಕ್ರಿಯಾಶೂನ್ಯ – ಯಾವ ಕ್ರಿಯೆಯೂ ಇಲ್ಲದ
- ಕ್ರಿಯಾಸಮಭಿಹಾರ – ಕ್ರಿಯೆಯ ಪುನರಾವರ್ತನೆ
- ಕ್ರಿಯೆ – ಕಾರ್ಯ; ಆಚರಣೆ; ಆರಂಭಿಸುವಿಕೆ
- ಕ್ರೀಂಕಾರ – ಒಂದು ಅನುಕರಣ ಧ್ವನಿ
- ಕ್ರೀಡನಶೀಲ – ಆಟದಲ್ಲಿ ಅಸಕ್ತನಾದವನು
- ಕ್ರೀಡಮಾನ – ಆಡುತ್ತಿರುವ, ಆಡಿಸುತ್ತಿರುವ
- ಕ್ರೀಡಾಗೋಳಕ – ಆಟದ ಚೆಂಡು
- ಕ್ರೀಡಾಚಳ – ಆಟಕ್ಕಾಗಿ ಮಾಡಿದ ಬೆಟ್ಟ
- ಕ್ರೀಡಾಪರ್ವತ – ಕ್ರೀಡಾಚಳ
- ಕ್ರೀಡಾರಸ – ಆಟದಿಂದಾಗುವ ಸಂತೋಷ
- ಕ್ರೀಡಾಸಕ್ತ – ಆಟದಲ್ಲಿ ಆಸಕ್ತನಾದವನು
- ಕ್ರೀಡಿಸು – ಆಟವಾಡು; ವಿನೋದ ಹೊಮದು; ಸಂಭೋಗಿಸು
- ಕ್ರೀಡೆ – ಆಟ; ವಿನೋದ; ಸಂಭೋಗ
- ಕ್ರುದ್ಧ – ಕೋಪಗೊಂಡ
- ಕ್ರೇಂಕಾರ- ಒಂದು ಅನುಕರಣ ಪದ; ಹಂಸದ ಕೂಗು
- ಕ್ರೋಡ – ಎದೆ; ಹಂದಿ; ಶನಿಗ್ರಹ; ಸಮೀಪ
- ಕ್ರೋಡಧ್ವಜ – ವರಾಹಧ್ವಜ
- ಕ್ರೋಡವಸೆ – ಹಂದಿಯ ಕೊಬ್ಬು
- ಕ್ರೋಡಶಾಲೆ – ಗಜಶಾಲೆ
- ಕ್ರೋಡೀಕೃತ – ಒಟ್ಟುಗೂಡಿಸಿದ
- ಕ್ರೋಧ – ಕೋಪಾತಿರೇಕ
- ಕ್ರೋಧನ – ಕ್ರುದ್ಧನಾದವನು; ಅರವತ್ತು ಸಂವತ್ಸರಗಳಲ್ಲಿ ಒಂದರ ಹೆಸರು
- ಕ್ರೋಧಿನಿ – ಆನೆಯ ಏಳು ಮದಾವಸ್ಥೆಗಳಲ್ಲಿ ಒಂದು
- ಕ್ರೋಷ್ಟ್ರು – ಕೂಗುವವನು; ನರಿ
- ಕ್ರೌಂಚಾರಾತಿ – ಕ್ರೌಂಚವೆಂಬ ಪರ್ವತದ ವೈರಿ; ಷಣ್ಮುಖ; ಪರಶುರಾಮ
- ಕ್ಲಮ – ಆಯಾಸ
- ಕ್ಲಮಥು – ಕ್ಲಮ
- ಕ್ಲಿಷ್ಯಮಾನ – ತೊಂದರೆಗೊಳಗಾದ; ದುಃಖದಲ್ಲಿರುವ
- ಕ್ಲಿಷ್ಟಕ – ತೊಂದರೆಗೊಳಿಸುವವನು
- ಕ್ಲೀಬ – ನಪುಂಸಕ
- ಕ್ಲೇದನ – ತೇವಗೊಳಿಸುವಿಕೆ
- ಕ್ಲೇಶಂಗೊಳಿಸು – ತೊಂದರೆ ಕೊಡು
- ಕ್ಲೇಶಕ್ಷತ – ಕಷ್ಟದಿಂದ ಗಾಸಿಗೊಂಡವನು
- ಕ್ವಚಿತ್ಪ್ರಯೋಗ – ಅಪರೂಪವಾಗಿ ಬಳಸಲ್ಪಡುವುದು
- ಕ್ವಣ – ಆಭರಣ ಅಥವಾ ವಾದ್ಯದ ಧ್ವನಿ
- ಕ್ವಣತ್ಕಂಕಣ – ಕ್ವಣ
- ಕ್ವಣಿತ – ನಾದ, ಧ್ವನಿ
- ಕ್ವಾಣ – ಧ್ವನಿ
- ಕ್ಷಣತ್ವಿಟ್ – ಮಿಂಚು
- ಕ್ಷಣಪ್ರಭೆ – ಮಿಂಚು
- ಕ್ಷಣಭಂಗವೃತ್ತಿ – ಅತ್ಯಲ್ಪ ಕಾಲದಲ್ಲಿ ನಾಶವಾಗುವ
- ಕ್ಷಣಮಾತ್ರ – ಒಂದು ಕ್ಷಣಕಾಲಕ್ಕೆ ಮಾತ್ರ
- ಕ್ಷಣರುಗ್ಮಾಲೆ – ಕ್ಷಣರುಕ್+ಮಾಲೆ, ಮಿಂಚಿನ ಬಳ್ಳಿ
- ಕ್ಷಣರುಚಿ – ಕ್ಷಣಪ್ರಭೆ
- ಕ್ಷಣವಂತ – (ಜೈನ) ಎಲ್ಲ ವ್ಯಾಪಾರಗಳನ್ನು ಬಿಟ್ಟವನು; ಪ್ರಶಾಂತ
- ಕ್ಷಣವಿಳಂಬಿ – ಅತ್ಯಲ್ಪ ಕಾಲ ಮಾತ್ರ ಇರುವ
- ಕ್ಷಣಾರ್ಧ – ಅರ್ಧಕ್ಷಣ
- ಕ್ಷಣಿಕತ್ವ – ಕ್ಷಣಿಕವಾಗಿರುವಿಕೆ
- ಕ್ಷತ – ಗಾಯಗೊಂಡ
- ಕ್ಷತಜ – ರಕ್ತ
- ಕ್ಷತತ್ರಾಣ – ಆಪತ್ತಿನಿಂದ ರಕ್ಷಿಸುವಿಕೆ
- ಕ್ಷತ್ರ – ನಾಲ್ಕು ವರ್ಣಗಳಲ್ಲಿ ಒಂದು; ಕ್ಷತ್ರಿಯ; ಕಷ್ಟಗಳಿಂದ ಪಾರುಮಾಡುವವನು; ಕ್ಷತ್ರಿಯ ಗುಣಗಳಾದ ಶೌರ್ಯಪ್ರತಾಪ ಮುಂತಾದವು
- ಕ್ಷತ್ರಕ್ಷಯ – ಕ್ಷತ್ರಿಯ ನಾಶ(?)
- ಕ್ಷತಚಕ್ರ – ಕ್ಷತ್ರಿಯರ ಗುಂಪು
- ಕ್ಷತ್ರತೇಜ – ಕ್ಷತ್ರಿಯ ತೇಜಸ್ಸು
- ಕ್ಷತ್ರಧರ್ಮ – ಕ್ಷತ್ರಿಯರ ಧರ್ಮ
- ಕ್ಷತ್ರಧಾಮ – ಕ್ಷಾತ್ರದ ನೆಲೆ
- ಕ್ಷತ್ರಪುತ್ರ – ಕ್ಷತ್ರಿಯ ಕುಮಾರ
- ಕ್ಷತ್ರವೃತ್ತಿ – ಕ್ಷತ್ರಿಯನ ಆಚರಣೆ
- ಕ್ಷತ್ರಾಧಮ – ನೀಚ ಕ್ಷತ್ರಿಯ
- ಕ್ಷತ್ರಿಯ – ಎರಡನೆಯ ವರ್ಣ
- ಕ್ಷತ್ರಿಯಕುಲ – ಕ್ಷತ್ರಿಯ ವಂಶ
- ಕ್ಷಪಕ – (ಜೈನ) ಕರ್ಮಗಳನ್ನು ಕಳೆದುಕೊಳ್ಳುವವನು, ನಿವಾರಿಸುವವನು
- ಕ್ಷಪಕಶ್ರೇಣಿ – (ಜೈನ) ಕರ್ಮಕ್ಷಯಮಾಡಿ ಉತ್ತಮಗತಿಗೆ ಹೋಗುವ ಒಂದು ಮಾರ್ಗ
- ಕ್ಷಪಣ – ಉಪವಾಸದಿಂದ ದೇಹವನ್ನು ಕುಗ್ಗಿಸುವುದು; ನಾಶ; ಜೈನ ಅಥವಾ ಬೌದ್ಧ ಸನ್ಯಾಸಿ-
- ಕ್ಷಪಣಕ – ಕ್ಷಪಣ
- ಕ್ಷಪಣೆ – ಇಲ್ಲದಿರುವಿಕೆ; ಕರ್ಮಕ್ಷಯ
- ಕ್ಷಪಿತ – ಕಳೆದ; ಕ್ಷೀಣಗೊಂಡ
- ಕ್ಷಪಿತಕಾಯ – ಕ್ಷೀಣವಾದ ದೇಹವುಳ್ಳವನು
- ಕ್ಷಪಿತದುರಿತ – ಪಾಪಗಳನ್ನು ನಾಶಗೊಳಿಸಿದವನು
- ಕ್ಷಪಿತವಯಸ – ವಯಸ್ಸು ಕುಗ್ಗಿದವನು
- ಕ್ಷಪಿಯಿಸು – ಕುಗ್ಗಿಸು; ನಾಶಗೊಳಿಸು
- ಕ್ಷಪಿಸು – ಕ್ಷಪಿಯಿಸು
- ಕ್ಷಮ – ತಾಳ್ಮೆಯುಳ್ಳ; ಶಾಂತ; ಶಕ್ತ; ಅನುಕೂಲವಾದ; ಸಮರ್ಥನಾದ
- ಕ್ಷಮತೆ – ಯೋಗ್ಯತೆ; ಶಕ್ತಿ
- ಕ್ಷಮಾಗುಣ – ಕ್ಷಮಿಸುವ ಗುಣ
- ಕ್ಷಮಾಜ – ಭೂಮಿಯಲ್ಲಿ ಹುಟ್ಟಿದುದು; ಗಿಡ, ಮರ
- ಕ್ಷಮಾಧರ – ಭೂಮಿಯನ್ನು ಧರಿಸಿರುವುದು, ಬೆಟ್ಟ; ಭೂಮಿಯನ್ನು ಹೊತ್ತಿರುವವನು, ಆದಿಶೇಷ
- ಕ್ಷಮಾಧರತೆ – ಭೂಮಿ ಕೆಳಗೆ ಇಳಿಯುವಿಕೆ
- ಕ್ಷಮಾಧರನಿವಾಸ – ಆದಿಶೇಷನ ವಾಸಸ್ಥಳ, ಪಾತಾಳ
- ಕ್ಷಮಾಪ – ಭೂಮಿಯ ಒಡೆಯ, ರಾಜ
- ಕ್ಷಮಾಪರ – ಕ್ಷಮಾಗುಣವುಳ್ಳವನು; ಸಹಿಷ್ಣು
- ಕ್ಷಮಾವಲ್ಲಭ – ಕ್ಷಮಾಪ, ರಾಜ
- ಕ್ಷಮಿ – ಕ್ಷಮೆಯ ಗುಣವುಳ್ಳವನು
- ಕ್ಷಮಿಸು – ಸೈರಿಸು, ಅಪರಾಧ ಮನ್ನಿಸು
- ಕ್ಷಮೆಗೊಳ್ – ಕ್ಷಮಿಸು; ಕ್ಷಮೆ ಬೇಡು
- ಕ್ಷಯ – ನಾಶ; ಕೊರಗುವಿಕೆಅರವತ್ತು ಸಂವತ್ಸರಗಳಲ್ಲಿ ಒಂದು; ಕ್ಷಯ, ಸ್ಥಾನ, ವೃದ್ಧಿ ಎಂಬ ತ್ರಿವರ್ಗದಲ್ಲಿ ಒಂದು
- ಕ್ಷಯವೃಜಿನ – ಪಾಪನಾಶಕ
- ಕ್ಷಯಾಶುಶುಕ್ಷಣಿ – ಪ್ರಳಯಕಾಲದ ಬೆಂಕಿ
- ಕ್ಷಯೋಪಶಮ – (ಜೈನ) ಆತ್ಮನ ಐದು ಭಾವಗಳಲ್ಲಿ ಒಂದು
- ಕ್ಷಯೋಪಶಮಲಬ್ಧಿ – (ಜೈನ) ಐದು ಬಗೆಯ ಲಬ್ಧಿಗಳಲ್ಲಿ ಒಂದು
- ಕ್ಷರ – ಕರಗಿ ಹೋಗುವ, ನಶ್ವರವಾದ; ವ್ಯತ್ಯಾಸಗೊಳ್ಳುವ
- ಕ್ಷರಣೆ – ಸೋರುವಿಕೆ
- ಕ್ಷರತ್ಕರಟ – ಸ್ರವಿಸುವ ಆನೆಯ ಕುಂಭ
- ಕ್ಷವಥು – ಸೀನು, ಕೆಮ್ಮು
- ಕ್ಷಳ – ಸಂಸ್ಕøತ ಪದಗಳು ಕನ್ನಡಕ್ಕೆ ತದ್ಭವಾಗಿ ಬರುವಾಗ ಅವುಗಳಲ್ಲಿನ
ಲ'ಕಾರಕ್ಕೆ ಬದಲಾಗಿ ಬರುವ
ಳ’ಕಾರ - ಕ್ಷಾಂತಿ – ತಾಳ್ಮೆ; ಕ್ಷಮೆ
- ಕ್ಷಾತ್ರ – ಕ್ಷತ್ರಿಯಸಂಬಂಧಿಯಾದ; ಕ್ಷತ್ರಿಯಕುಲ; ಕ್ಷತ್ರಿಯ ತೇಜಸ್ಸು
- ಕ್ಷಾತ್ರಭಾರ – ರಾಜ್ಯಭಾರ
- ಕ್ಷಾಮ – ತೆಳುವು; ಬರಗಾಲ; ಕಪೋಲ
- ಕ್ಷಾಯಿಕ – (ಜೈನ) ಆತ್ಮನ ಐದು ಭಾವಗಳಲ್ಲಿ ಒಂದು; ಕರ್ಮದಿಂದ ಪೂರ್ಣ ಬಿಡುಗಡೆ ಹೊಂದಿದ ಸ್ಥಿತಿ
- ಕ್ಷಾಯಿಕದೃಷ್ಟಿ – (ಜೈನ) ದರ್ಶನ ಮೋಹನೀಯ
- ಕರ್ಮವು ಕ್ಷಣವಾದ ಮೇಲೆ ನಿರ್ಮಲಶ್ರದ್ಧೆಯುಂಟಾಗುವುದು
- ಕ್ಷಾಯಿಕಸಮ್ಯಕ್ತ್ವ – ಕ್ಷಾಯಿಕದೃಷ್ಟಿ
- ಕ್ಷಾಯಿಕಸಮ್ಯಗ್ದರ್ಶನ – ಕ್ಷಾಯಿಕದೃಷ್ಟಿ
- ಕ್ಷಾಯಿಕಸಮ್ಯಗ್ದøಷ್ಟಿ – ಕ್ಷಾಯಿಕದೃಷ್ಟಿ
- ಕ್ಷಾಯೋಪಶಮಿಕ – (ಜೈನ) ಆತ್ಮನ ಐದು ಭಾವಗಳಲ್ಲಿ ಒಂದು
- ಕ್ಷಾರವಾರಿ – ಉಪ್ಪು ನೀರು
- ಕ್ಷಾಲ – ತೊಳೆಯುವಿಕೆ
- ಕ್ಷಾಲನ – ಕ್ಷಾಲ
- ಕ್ಷಿತಿ – ಭೂಮಿ; ಸ್ಥಳ; ನೆಲ
- ಕ್ಷಿತಿಚಕ್ರ – ಭೂಮಂಡಲ
- ಕ್ಷಿತಿಜ – ಭೂಮಿಯಲ್ಲಿ ಹುಟ್ಟಿದುದು, ಮರ; ಮಂಗಳಗ್ರಹ, ಕುಜಗ್ರಹ
- ಕ್ಷಿತಿಜಾತ – ಭೂಮಿಯಲ್ಲಿ ಹುಟ್ಟಿದುದು, ಮರ
- ಕ್ಷಿತಿಧರ – ಭೂಮಿಗೆ ಆಧಾರವಾದದ್ದು, ಬೆಟ್ಟ
- ಕ್ಷಿತಿನಾಥ – ಭೂಮಿಯ ಒಡೆಯ, ರಾಜ
- ಕ್ಷಿತಿನಾಥತ್ವ – ರಾಜತ್ವ
- ಕ್ಷಿತಿಪ – ಭೂಮಿಯ ಒಡೆಯ, ರಾಜ
- ಕ್ಷಿತಿಪತಿ – ಕ್ಷಿತಿಪ
- ಕ್ಷಿತಿಭೃತ್ – ಪರ್ವತ
- ಕ್ಷಿತಿರಕ್ಷಕ – ಕ್ಷಿತಿಪಾಲ
- ಕ್ಷಿತಿರಸ – ಭೂಮಿಯಲ್ಲಿನ ನೀರು
- ಕ್ಷಿತಿವಲಯ – ಭೂಮಂಡಲ
- ಕ್ಷಿತೀಶ – ಕ್ಷಿತಿನಾಥ
- ಕ್ಷೀಣ – ಕುಗ್ಗಿದ
- ಕ್ಷೀಣಕಷಾಯ – (ಜೈನ) ಕಷಾಯ ಕ್ಷಯಿಸಿದವನು
- ಕ್ಷೀಣಧಾತರ್ – ನಿಶ್ಶಕ್ತರು
- ಕ್ಷೀಣತ್ವ – ತಗ್ಗುವಿಕೆ
- ಕ್ಷೀಣಧನ – ಬಡವ
- ಕ್ಷೀಣಧಾತು – ಶಕ್ತಿಗುಂದಿದವನು
- ಕ್ಷೀಣಬಲ – ಬಲಹೀನ
- ಕ್ಷೀಬ – ಮದಿಸಿದ
- ಕ್ಷೀರ – ಹಾಲು
- ಕ್ಷೀರಗೌರ – ಹಾಲಿನಂತೆ ಬೆಳ್ಳಗಾದ
- ಕ್ಷೀರಗೌರತ್ವ – ಹಾಲಿನಂತೆ ಬೆಳ್ಳಗಿರುವಿಕೆ
- ಕ್ಷೀರಜಲಾಕರ – ಹಾಲಿನ ಸಮುದ್ರ
- ಕ್ಷೀರನೀರನ್ಯಾಯ – ಹಾಲು ಮತ್ತು ನೀರು ಬೆರೆಯುವ ರೀತಿ
- ಕ್ಷೀರನೀರಾಕರ – ಹಾಲುಗಡಲು
- ಕ್ಷೀರಪಯೋಧಿ – ಕ್ಷೀರನೀರಾಕರ
- ಕ್ಷೀರಪೂರ – ಹಾಲಿನ ಪ್ರವಾಹ
- ಕ್ಷೀರಲಂಪಟ – ಹಾಲಿನ ಆಸೆಯುಳ್ಳವನು
- ಕ್ಷೀರವಾರಾಶಿ – ಕ್ಷೀರನೀರಾಕರ
- ಕ್ಷೀರವಾರಿಧಿ – ಕ್ಷೀರನೀರಾಕರ
- ಕ್ಷೀರವಾರಿಧಿ – ಹಾಲುಗಡಲಲ್ಲಿ ಮಲಗಿರುವವನು, ವಿಷ್ಣು
- ಕ್ಷೀರಸಮುದ್ರ – ಕ್ಷೀರನೀರಾಕರ
- ಕ್ಷೀರಸಾಗರ – ಕ್ಷೀರನೀರಾಕರ
- ಕ್ಷೀರಸ್ರಾವಿತ್ವ – (ಜೈನ) ಕೈಗೆ ಬಿಕ್ಷೆಯಾಗಿ ನೀಡಿದ
- ಕದನ್ನವನ್ನೂ ಕ್ಷೀರರಸವನ್ನಾಗಿ ಮಾಡುವ ಸಿದ್ಧಿ
- ಕ್ಷೀರಾಂಬು – ಹಾಲು
- ಕ್ಷೀರಾಂಬುಧಿ – ಕ್ಷೀರನೀರಾಕರ
- ಕ್ಷೀರಾರ್ಣವ – ಕ್ಷೀರನೀರಾಕರ
- ಕ್ಷೀರೋದಭವ – ಹಾಲುಗಡಲಿನಲ್ಲಿ ಹುಟ್ಟಿದವನು, ಚಂದ್ರ
- ಕ್ಷೀರೋದವಾರಿ – ಹಾಲುಗಡಲ ನೀರು
- ಕ್ಷುಣ್ಣ – ಮೆಟ್ಟಿದ, ತುಳಿಯಲ್ಪಟ್ಟ; ಮರ್ದಿಸಿದ
- ಕ್ಷುತ – ಸೀನು
- ಕ್ಷುತಕತರಣ – ಸೀನುವಿಕೆ
- ಕ್ಷುತ್ಕ್ಷಾಮ – ಹಸಿವೆಯಿಂದ ಬಳಲಿದ
- ಕ್ಷುದ್ರ – ಚಿಕ್ಕದಾದ; ನಿಕೃಷ್ಟ; ಕ್ರೂರವಾದ; ಅಲ್ಪನಾದವನು; ಇರುವೆ; ಚಾಡಿಕೋರ
- ಕ್ಷುದ್ರಮೃಗ – ಕ್ರೂರಮೃಗ
- ಕ್ಷುಪ – ಪೊದರು
- ಕ್ಷುಭಿತ – ಕಲಕಿದ; ಬಿರುಸಾದ; ಕೋಪಗೊಂಡ; ಕಳವಳಗೊಂಡ
- ಕ್ಷುಭಿತಚಿತ್ತ – ಕನಲಿನ ಮನಸ್ಸಿನವನು; ಕಳವಳಗೊಂಡ ಮನಸ್ಸಿನವನು
- ಕ್ಷುಭಿಸು – ಕ್ಷೋಭೆಗೊಳ್ಳು
- ಕ್ಷುರ – ಸಣ್ಣ ಕತ್ತಿ, ಸುರಿಗೆ; ಗೊರಸು
- ಕ್ಷುರಭಾಂಡ – ನಾಯಿಂದನ ಹಡಪ
- ಕ್ಷುರಿಕೆ – ಸುರಿಗೆ
- ಕ್ಷುಲ್ಲಕ – ಚಿಕ್ಕದಾದ; ದರಿದ್ರ; ದೀನ; ಸುಳ್ಳು ಹೇಳುವವನು; (ಜೈನ) ಎರಡು ಬಗೆಗಳಪ್ರತಿಮಾಧಾರಿಗಳಲ್ಲಿ ಒಬ್ಬ
- ಕ್ಷುಲ್ಲಕದ್ವಾರ – ಚಿಕ್ಕ ಬಾಗಿಲು
- ಕ್ಷೂಣತೆ – ಕೊರತೆ, ನ್ಯೂನತೆ
- ಕ್ಷೇತ್ರ – ಹೊಲ; ಹೆಂಡತಿ; ದೇಹ; (ಜೈನ) ಕಥೆಯ ಸಪ್ತಾಂಗಗಳಲ್ಲಿ ಒಂದು
- ಕ್ಷೇತ್ರಜ – ಹೊಲದಲ್ಲಿ ಬೆಳೆದ; ಶರೀರದಲ್ಲಿ ಹುಟ್ಟಿದ; (ಜೈನ) ಐದು ಬಗೆಯ ದುಃಖಗಳಲ್ಲಿ ಒಂದು
- ಕ್ಷೇತ್ರಜ್ಞ – ಆತ್ಮ
- ಕ್ಷೇತ್ರಪರಾವರ್ತನ – (ಜೈನ) ಒಂದು ಕ್ಷೇತ್ರವನ್ನು
- ಬಿಟ್ಟು ಮತ್ತೊಂದಕ್ಕೆ ಹೋಗುವುದು
- ಕ್ಷೇತ್ರದ್ರ್ಧಿ – (ಜೈನ) ಅಷ್ಟ ಋದ್ಧಿಗಳಲ್ಲಿ ಒಂದು
- ಕ್ಷೇತ್ರಾಕರ್ಷ – ಹೊಲವನ್ನು ಉಳುವಿಕೆ
- ಕ್ಷೇಪ – ಎಸೆಯುವುದು; ಚೆಲ್ಲುವುದು
- ಕ್ಷೇಮಂಕರ – (ಜೈನ) ಕ್ಷೇಮವನ್ನುಂಟುಮಾಡುವ; (ಜೈನ) ಲೋಕಾಂತಿಕ ದೇವತೆಗಳಲ್ಲಿ ಒಂದು ವರ್ಗ
- ಕ್ಷೇಮಕ್ಷೇತ್ರ – ಶುಭಸ್ಥಾನ
- ಕ್ಷೋಣೀಧ್ರ – ಬೆಟ್ಟ
- ಕ್ಷೋಣೀಶ್ವರ – ಭೂಮಿಯ ಒಡೆಯ, ರಾಜ
- ಕ್ಷೋದ – ಕುಟ್ಟುವುದು; ಚೂರ್ಣ
- ಕ್ಷೋದಕ್ಷಮ – ತಿಕ್ಕಾಟವನ್ನು ಸಹಿಸಬಲ್ಲ
- ಕ್ಷೋದನೀಯ – ಪುಡಿಮಾಡುವ; ಪುಡಿಮಾಡಲು ಯೋಗ್ಯವಾದ
- ಕ್ಷೋಭ – ಕಲಕುವಿಕೆ; ಗಾಬರಿ; ಕ್ರೋಧ;
- ಕ್ಷೋಭಕಾರಿ – ದಿಗಿಲನ್ನುಂಟುಮಾಡುವ
- ಕ್ಷೋಭಿತ – ಕ್ಷೋಭೆಗೊಳಿಸಲ್ಪಟ್ಟ
- ಕ್ಷೋಭಿಸು – ಕಲಕಲ್ಪಡು
- ಕ್ಷೋಭೆ – ಕೋಲಾಹಲ; ಅಶಾಂತಿ
- ಕ್ಷೌದ್ರ – ಜೇನುತುಪ್ಪ
- ಕ್ಷೌದ್ರಪಟಲ(ಳ) – ಜೇನುಹುಟ್ಟು, ಜೇನುಗೂಡು
- ಕ್ಷೌಮ – ರೇಷ್ಮೆ ವಸ್ತ್ರ, ದುಕೂಲ; ನಾರುಮಡಿ
- ಕ್ಷೌಮಾಂಬರ – ರೇಷ್ಮೆ ವಸ್ತ್ರ
- ಕ್ಷ್ಣುತ – ಸಾಣೆ ಹಿಡಿಯಲ್ಪಟ್ಟ
- ಕ್ಷ್ವೇಡ – ವಿಷ
- ಕ್ಷ್ಮಾ – ಭೂಮಿ
- ಕ್ಷ್ಮಾಚರ – ಭೂಮಿಯ ಮೇಲೆ ತಿರುಗುವವನು, ಮನುಷ್ಯ
- ಕ್ಷ್ಮಾಚಳ – ಬೆಟ್ಟ
- ಕ್ಷ್ಮಾಜ – ಮರ
- ಕ್ಷ್ಮಾಜಾತ – ಮರ
- ಕ್ಷ್ಮಾಧರ – ಬೆಟ್ಟ
- ಕ್ಷ್ಮಾಧವ – ರಾಜ
- ಕ್ಷ್ಮಾಧ್ರ – ಕ್ಷ್ಮಾಧರ
- ಕ್ಷ್ಮಾಪ -ದೊರೆ
- ಕ್ಷ್ಮಾಪತಿ – ಕ್ಷ್ಮಾಪ
- ಕ್ಷ್ಮಾಪಾಲ – ಕ್ಷ್ಮಾಪ
- ಕ್ಷ್ವೇಡ – ನಂಜು, ವಿಷ
- ಕ್ಷ್ವೇಡಾಗ್ನಿ – ವಿಷದ ಉರಿ
- ಕ್ಷ್ವೇಡಿತ – ಸಿಂಹನಾದ
- ಕ್ಷ್ವೇಳ – ಕ್ಷ್ವೇಡ
Conclusion:
ಕನ್ನಡ ಕ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.