ಕನ್ನಡ ಪ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada Pa aksharada halegannadada padagalu , ಕನ್ನಡ ಪ ಅಕ್ಷರದ ಹಳೆಗನ್ನಡ ಪದಗಳು (PA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಪ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( Pa halegannada Words in kannada ) ತಿಳಿದುಕೊಳ್ಳೋಣ
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಪ ಅಕ್ಷರ ಎಂದರೇನು?
ಪ, ಕನ್ನಡ ವರ್ಣಮಾಲೆಯ ಪ-ವರ್ಗದ ಮೊದಲನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಅಲ್ಪಪ್ರಾಣ. ಅಲ್ಪಪ್ರಾಣ. ಉಭಯೋಷ್ಠ್ಯ ಅಘೋಪ ಸ್ಪರ್ಶ ಧ್ವನಿಯನ್ನು ಸೂಚಿಸುತ್ತದೆ.
ಮೌರ್ಯರ ಕಾಲದ ಪಕಾರಕ್ಕೂ ಯಾವ ವ್ಯತ್ಯಾಸವೂ ಇಲ್ಲದಿರುವುದು ಗಮನಾರ್ಹ ಸಂಗತಿ ಮುಂದೆ ಕದಂಬರ ಕಾಲಕ್ಕೆ ಪಕಾರದ ಹೊಕ್ಕಳು ರೂಪುಗೊಳ್ಳುತ್ತಿರುವುದನ್ನು ಕಾಣುತ್ತೇವೆ. ಕಲ್ಯಾಣ ಚಾಳುಕ್ಯರ ಕಾಲಕ್ಕೆ ತಲೆಕಟ್ಟು ನಿಕರವಾಗಿ ಕಾಣತೊಡಗುತ್ತದೆ. ವಿಜಯನಗರದ ಕಾಲಕ್ಕೆ ಈ ಲಿಪಿಗೆ ಇಂದಿನ ರೂಪ ಬರಹತ್ತಿ ಅದು ಮೈಸೂರು ಅರಸರ ಕಾಲಕ್ಕೆ ಖಚಿತವಾಗುತ್ತದೆ. ಕಳಚೂರಿ ಕಾಲದಲ್ಲಿ ಹೊಕ್ಕಳು ಸೀಳುವ ಪ್ರಯತ್ನ ಪ್ರಾರಂಭವಾಗುತ್ತದೆ. ಅದು ವಿಜಯನಗರ ಹಾಗೂ ಮೈಸೂರು ಅರಸರ ಕಾಲದಲ್ಲಿ ಖಚಿತವಾಗುತ್ತದೆ
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಪ ಅಕ್ಷರದ ಹಳೆಗನ್ನಡ ಪದಗಳು – Kannada Words
- ಪಂಕ – ಕೆಸರು; ಲೇಪನದ್ರವ್ಯ
- ಪಂಕಜ – ಕೆಸರಿನಲ್ಲಿ ಹುಟ್ಟಿದುದು, ತಾವರೆ
- ಪಂಕಜನೇತ್ರೆ – ಕಮಲದಂತೆ ಕಣ್ಣುಳ್ಳವಳು
- ಪಂಕಜವಿಷ್ಟರ – ಕಮಲದ ಆಸನವುಳ್ಳವನು, ಬ್ರಹ್ಮ
- ಪಂಕಜಸಂಭವ – ಕಮಲದಲ್ಲಿ ಹುಟ್ಟಿದವನು, ಬ್ರಹ್ಮ
- ಪಂಕಜಾಕರ – ಕಮಲಗಳ ಆವಾಸ, ಕೊಳ
- ಪಂಕಜಾಕ್ಷ – ಕಮಲಾಕ್ಷ, ವಿಷ್ಣು
- ಪಂಕಜಾತ – ಪಂಕಜ
- ಪಂಕಜಾಸನ – ಪಂಕಜವಿಷ್ಟರ
- ಪಂಕಜೇಕ್ಷಣ – ಪಂಕಜಾಕ್ಷ
- ಪಂಚಶಿಖಿ – ಐದು ತುದಿಗಳು
- ಪಂಚಸಮಿತಿ – (ಜೈನ) ಈರ್ಯಾ, ಭಾಷಾ, ಏಷಣಾ, ಆದಾನನಿಕ್ಷೇಪಣ, ಉತ್ಸರ್ಗ ಎಂಬ ಐದು ಬಗೆಯ ಧಾರ್ಮಿಕಪ್ರವೃತ್ತಿಗಳು
- ಪಂಚಸರ – ಪಂಚಶರ
- ಪಂಚಸ್ಥಾನ – ಯುದ್ಧಮಾಡುವಾಗ ನಿಂತುಕೊಳ್ಳುವ ಆಲೀಢ, ಪ್ರತ್ಯಾಲೀಢ, ಸಮಪಾದ, ವೈಷ್ಣವ, ಮಂಡಲಾಗ್ರ ಎಂಬ ಐದು ಸ್ಥಾನಗಳು
- ಪಂಚಾಂಗ – ತಿಥಿ, ವಾರ, ನಕ್ಷತ್ರ, ಯೊಗ, ಕರಣಗಳೆಂಬ ದಿನದ ಐದು ಅಂಶಗಳು; ಔಷಧಿತಯಾರಿಕೆಯಲ್ಲಿ ಗಿಡಮರಗಳ ತೊಗಟೆ, ಎಲೆ, ಹೂವು, ಬೇರು, ಹಣ್ಣುಗಳೆಂಬ ಐದು ಅಂಶಗಳು
- ಪಂಚಾಂಗಮಂತ್ರ – ಕರ್ಮಾರಂಭೋಪಾಯ, ಪುರುಷದ್ರವ್ಯಸಂಪತ್ತು, ದೇಶಕಾಲವಿಭಾಗ, ವಿನಿಪಾತಪ್ರತೀಕಾರ, ಕಾರ್ಯಸಿದ್ಧಿ ಎಂಬ ರಾಜನೀತಿಯ ಐದು ಅಂಶಗಳು
- ಪಂಚಾಂಗಶುದ್ಧಿ – ದಿನದ ಐದು ಅಂಶಗಳಲ್ಲಿಯಾವುದೇ ದೋಷವಿಲ್ಲದಿರುವುದು; ಔಷಧಿತಯಾರಿಕೆಯಲ್ಲಿ ಗಿಡಮರಗಳ ಐದು ಅಂಶಗಳು ದೋಷರಹಿತವಾಗಿರುವುದು
- ಪಂಚಾಂಗಸನ್ಮಂತ್ರ – ಐದು ಅಕ್ಷರಗಳ ಶ್ರೇಷ್ಠ ಮಂತ್ರ
- ಪಂಚಾಗ್ನಿ – ಐದು ಬಗೆಯ ಅಗ್ನಿಗಳು: ಪವನ, ಪಾವನ, ತ್ರೇತಾ, ಗಾರ್ಹಪತ್ಯ, ಆಹವನೀಯ; ಋಷಿಗಳ ಬೇಸಿಗೆಯ ತಪಸಸ್ಸಿನ ಐದು ಅಗ್ನಿಗಳು: ನಾಲ್ಕು ಕಡೆಯ ಬೆಂಕಿ ಮತ್ತು ನೆತ್ತಿಯ ಮೇಲಿನ ಸೂರ್ಯ
- ಪಂಚಾಗ್ನಿಸಾಧಕ – ನಾಲ್ಕು ಕಡೆಯ ಬೆಂಕಿ ಮತ್ತು ನೆತ್ತಿಯ ಮೇಲಿನ ಸೂರ್ಯ ಇವುಗಳ ನಡುವೆ ತಪಸ್ಸು ಮಾಡುವವನು
- ಪಂಚಾಚಾರ – (ಜೈನ) ದರ್ಶನ, ಜ್ಞಾನ, ಚಾರಿತ್ರ, ತಪ, ವೀರ್ಯ ಎಂಬ ಐದು ಆಚಾರಗಳು
- ಪಂಚಾಣುವ್ರತಗಳು – (ಜೈನ) ಶ್ರಾವಕರು ಆಚರಿಸಬೇಕಾದ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಎಂಬ ವ್ರತಗಳು
- ಪಂಚಾಣೂತ್ತರೆ – (ಜೈನ) ಲೋಕಾಕಾಶದ ತುದಿಯ ನೆಲೆಯಲ್ಲಿರುವ ವಿಜಯ, ವೈಜಯಂತ, ಜಯಂತ, ಅಪರಾಜಿತ, ಸರ್ವಾರ್ಥಸಿದ್ಧಿ ಎಂಬ ಐದು “ವಿಮಾನ”ಗಳು
- ಪಂಚಾತಿಚಾರ – (ಜೈನ) ಸಮ್ಗ್ದøಷ್ಟಿಗೆ ಅಡ್ಡಿಯಾಗುವ ಶಂಕೆ, ಕಾಂಕ್ಷೆ, ನಿರ್ವಿಚಿಕಿತ್ಸೆ, ಅನ್ಯದೃಷ್ಟಿಪ್ರಶಂಸೆ, ಅನ್ಯದೃಷ್ಟಿಸಂಸ್ತವನ ಎಂಬ ಅತಿಚಾರಗಳು
- ಪಂಚಾನನ – ಶಿವ, ಶಿವನ ಐದು ಮುಖಗಳು: ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ; ಸಿಂಹ
- ಪಂಚಾವಸ್ಥೆಗೆದ¾ು – ಪಂಚತ್ವವನ್ನುಂಟುಮಾಡು, ಮರಣವುಂಟುಮಾಡು
- ಪಂಚಾಶ್ಚರ್ಯ – (ಜೈನ) ಆಹಾರದಾನಸಮಯದಲ್ಲಿ ಆಗುವ ಐದು ಅತಿಮಾನುಷ ಸೋಜಿಗಗಳು: ದೇವದುಂದುಭಿಸ್ವನ, ಪುಷ್ಪವೃಷ್ಟಿ, ಸುವರ್ಣವೃಷ್ಟಿ, ಮೆಲುಗಾಳಿ, ದೇವಪ್ರಶಂಸೆ
- ಪಂಚಾಷ್ಟ – ಐದೆಂಟಲ, ನಲವತ್ತು
- ಪಂಚಾಸ್ತಿಕಾಯ – (ಜೈನ) ಜೀವ, ಪುದ್ಗಲ, ಧರ್ಮ, ಅಧರ್ಮ, ಆಕಾಶ ಎಂಬ ಐದು ಅಸ್ತಿಕಾಯಗಳು
- ಪಂಚಾಸ್ತ್ರ – ಐದು ಬಾಣಗಳನ್ನುಳ್ಳವನು, ಮನ್ಮಥ
- ಪಂಚಾಸ್ಯ – ಸಿಂಹ
- ಪಂಚಾಸ್ರವ – (ಜೈನ) ಸಪ್ತತತ್ವಗಳಲ್ಲಿ ಒಂದು; ಪುಣ್ಯಪಾಪರೂಪವಾದ ಕರ್ಮವು ಜೀವನಲ್ಲಿ ಹರಿಯುವುದು, ಇಂದ್ರಿಯಸಂಬಂಧವಾದ ಐದು ಬಗೆಯ ಆಸ್ರವಗಳು
- ಪಂಚಿ(ಜಿ)ಕೆ – ವ್ಯಾಖ್ಯಾನ
- ಪಂಜರ – ಪ್ರಾಣಿಪಕ್ಷಿಗಳನ್ನು ಕೂಡಿಹಾಕುವ ಸಾಧನ
- ಪಂಜರಂಬಡೆ – ಪಂಜರ ನಿರ್ಮಿಸು
- ಪಂಜರಿಸು – ಪಂಜರದಂತೆ ಸುತ್ತಲೂ ಆವರಿಸು
- ಪಂಜಿ – ಹಿಂಜಿದ ಹತ್ತಿಯ ಉಂಡೆ
- ಪಂಟಿಸು – ಹೊದಿಸು
- ಪಂಡಕ – ಪುರೋಹಿತ
- ಪಂಡಿತ(ಮಂಡಲಿ) – ವಿದ್ವಾಂಸ (ಸಮೂಹ)
- ಪಂಡಿತಮರಣ – (ಜೈನ) ಜ್ಞಾನಿಯಾಗಿ ಸಲ್ಲೇಖನದಿಂದ ಪಡೆಯುವ ಮರಣ
- ಪಂಡಿತವಕ್ಕಿ – ಗಿಳಿ
- ಪಂಡಿತಿಕ್ಕೆ – ಪಾಂಡಿತ್ಯ
- ಪಂಡಿತೋಕ್ತಿ – ವಿದ್ವಾಂಸನ ನುಡಿ
- ಪಂತಿ – ಸಾಲು; ಊಟದ ಪಂಕ್ತಿ
- ಪಂತಿಗೊಳ್ – ಸಾಲುಗಟ್ಟು
- ಪಂತಿಗೊಳಿಸು – ಸಾಲಾಗಿ ಮಾಡು
- ಪಂಥ – ದಾರಿ; ಯೋಗ್ಯಕ್ರಮ
- ಪಂಥಾತಿಚಾರನಿಯಮ – (ಜೈನ) ಗಮನ ಪ್ರಾಯಶ್ಚಿತ್ತ; ನಡೆಯುವಾಗ ಆಗಬಹುದಾದ ಹಿಂಸೆಗೆ ಶ್ರವಣರು ಮಾಡಿಕೊಳ್ಳುವ ಪ್ರಾಯಶ್ಚಿತ್ತ
- ಪಂಥಾತಿಚಾರನೇಮ – ಪಂಥಾತಿಚಾರನಿಯಮ
- ಪಂದರ್(ರ) – ಚಪ್ಪರ
- ಪಂದರಿಕ್ಕು – ಚಪ್ಪರ ಹಾಕು
- ಪಂದಲೆ – ಪಚ್ಚನೆಯ ತಲೆ, ಆಗ ತಾನೇ ಕತ್ತರಿಸಿದತಲೆ
- ಪಂದಲೆದರ್ – ಹಸಿತಲೆಯನ್ನು ತಾ
- ಪಂದಳಿರ್ – ಹಸಿರಾದ ಚಿಗುರು
- ಪಂದಿ – ಹಂದಿ
- ಪಂದಿವೇಂಟೆ – ಹಂದಿಯ ಬೇಟೆ
- ಪಂದೆ – ಹೇಡಿ
- ಪಂದೆಗಜ್ಜ – ಹೇಡಿಯ ಕೆಲಸ
- ಪಂದೆತನ – ಹೇಡಿತನ
- ಪಂದೊವಲ್ – ಸುಲಿದ ಹಸಿಯ ಚರ್ಮ
- ಪಂದೋಲ್ – ಪಂದೊವಲ್
- ಪಂಪಕ – ಒತ್ತಾದುದು, ದಟ್ಟವಾದುದು
- ಪಂಬಲ್ – ಹಂಬಲ
- ಪಂಬಲಿಸು – ಹಂಬಲಿಸು, ಹಾತೊರೆ
- ಪಕ್ಕ – (ಪಕ್ಷ) ಬದಿ, ಮಗ್ಗುಲು; ರೆಕ್ಕೆ
- ಪಕ್ಕಂಬಿಡಿ – ಪಕ್ಕವನ್ನು ಹಿಡಿ
- ಪಕ್ಕಣ – ಬೇಡರ ವಾಸಸ್ಥಳ; ಕೆಳವರ್ಗದವರ ವಾಸಸ್ಥಳ
- ಪಕ್ಕರಿಕೆ – (ಪಕ್ಷರಕ್ಷಾ) ಕುದುರೆಯ ಮೇಳಣ ಕವಚ
- ಪಕ್ಕರಿಸು – ಪಕ್ಕರಿಕೆ ಹಾಕು
- ಪಕ್ಕರೆ – ಪಕ್ಕರಿಕೆ; ಪಾತ್ರೆ
- ಪಕ್ಕರೆಯಿಕ್ಕು – ಪಕ್ಕರಿಸು
- ಪಕ್ಕವಾದಕ – ಪಕ್ಕವಾದ್ಯ ನುಡಿಸುವವನು
- ಪಕ್ಕ(ಕ್ಕೆ)ಸಾರಿ – ಪಟ್ಟದಾನೆಯ ಜೊತೆಗೆ ಬರುವ ಆನೆ
- ಪಕ್ಕಾಗಿಸು – ಒಳಗಾಗಿಸು; ಆಸರೆಯಾಗಿಸು
- ಪಕ್ಕಾಗು – ಯೋಗ್ಯವಾಗು; ಆಸರೆಯಾಗು
- ಪಕ್ಕಿ – (ಪಕ್ಷಿ) ಹಕ್ಕಿ
- ಪಕ್ಕಿವಣೆ – ಹಕ್ಕಿಯ ಗೂಡು
- ಪಕ್ಕು – ಗುರಿ; ಆಸ್ಪದ
- ಪಕ್ಕುಗೊ(ಗು)ಡು – ಆಸರೆ ಕೊಡು
- ಪಕ್ಕುವಾರು – ಅವಕಾಶಕ್ಕಾಗಿ ಕಾಯಿ
- ಪಕ್ಕುವಿಡಿ – ಪಕ್ಕು+ಪಿಡಿ, ಜೊತೆಯ ಹೆಣ್ಣಾನೆ
- ಪಕ್ಕೆದಲೆ – ಮಲಗುವ ಜಾಗ
- ಪಕ್ವಬಿಂಬ – ಮಾಗಿದ ತೊಂಡೆಹಣ್ಣು
- ಪಕ್ವಶಾಳಿ – ಮಾಗಿದ ಬತ್ತದ ಪೈರು
- ಪಕ್ಷ – ಪಕ್ಕ; ರೆಕ್ಕೆ; ಹದಿನೈದು ದಿನಗಳ ಅವಧಿ; ಬಣ; (ಜೈನ) ಎಲ್ಲ ಬಗೆಯ ಹಿಂಸೆಯನ್ನು ತೊರೆಯುವುದು
- ಪಕ್ಷಂಗೆಡು – ಆಸೆಯಿಲ್ಲದಂತಾಗು
- ಪಕ್ಷಕುತ್ಕೀಳ – ಗುಡ್ಡ
- ಪಕ್ಷತಿ – ಪಕ್ಷಮೂಲ
- ಪಕ್ಷದ್ವಾರ – ಪಕ್ಕದ ಬಾಗಿಲು
- ಪಕ್ಷಪರಿತ್ಯಾಗ – ವಾದಿಸಲಾರದೆ ತನ್ನ ನಿಲವನ್ನು ಕೈಬಿಡುವುದು
- ಪಕ್ಷಪಾತ – ಹಕ್ಕಿಗಳ ಬೀಳುವಿಕೆ; ಒಂದು ಕಡೆಗೆ ಹೆಚ್ಚು ಒಲವು ತೋರಿಸುವುದು
- ಪಕ್ಷಪ್ರತಿಷ್ಠಾಪನೆಗೆಯ್ – ತನ್ನ ನಿಲವನ್ನು ಮಂಡಿಸು
- ಪಕ್ಷಸಂಪುಟ – ರೆಕೆಕಯ ಒಳಭಾಗ
- ಪಕ್ಷಸಿದ್ಧಿ – ತನ್ನ ನಿಲವನ್ನು ಸಾಧಿಸುವುದು
- ಪಕ್ಷಿ – ಪಕ್ಷಗಳನ್ನು ಹೊಂದಿರುವುದು, ಹಕ್ಕಿ
- ಪಕ್ಷ್ಮ – ಕಣ್ಣಿನ ರೆಪ್ಪೆ
- ಪಕ್ಷ್ಮಪಾತನ – ರೆಪ್ಪೆ ಮಿಟುಕಿಸುವುದು
- ಪಕ್ಷ್ಮಪಾಳಿ – ರೆಪ್ಪೆ ಕೂದಲ ಸಾಲು
- ಪಕ್ಷ್ಮಮಾಲೆ – ಪಕ್ಷ್ಮಪಾಳಿ
- ಪಕ್ಷ್ಮಸ್ಪಂದನ – ರೆಪ್ಪೆ ಮಿಟುಕಿಸುವುದು
- ಪಕ್ಷ್ಮಾಳಿ – ಪಕ್ಷ್ಮಪಾಳಿ
- ಪಗರಣ – (ಪ್ರಕರಣ) ಒಂದು ರೂಪಕಪ್ರಭೇದ
- ಪಗರಣದರಸ – ನಾಟಕದ ರಾಜ; ವೇಷಧಾರಿ
- ಪಗರಣದಾಟ – ಸೋಗು
- ಪಗರಣದಾನೆ – ನಿಜವಲ್ಲದ ಆನೆ
- ಪಗರಣಿಗ – ವೇಷಧಾರಿ; ಪಗರಣ ಎಂಬ ಆಟವಾಡುವವನು
- ಪಗಲ್ – ಹಗಲು
- ಪಗಲಿರುಳ್ – ಹಗಲು ಮತ್ತು ರಾತ್ರಿ; ಯಾವಾಗಲೂ
- ಪಗಲುಲ್ಕ – ಉಲ್ಕೆ
- ಪಗ(ಗೆ)ವು – ಹಗೇವು, ಕಣಜ
- ಪಗಿನ್(ನ) – ಮರದ ಅಂಟು
- ಪಗಿಲ್ – ಅಂಟಿಕೊ; ಸೇರು
- ಪಗೆ – ದ್ವೇಷ; ಶತ್ರು
- ಪಗೆಗೊಳ್ – ದ್ವೇಷ ತಾಳು
- ಪಗೆವ – ಶತ್ರು
- ಪಗೆವಡೆ – ಶತ್ರುಸೈನ್ಯ
- ಪಗೆವಾಡಿ – ಶತ್ರು ಪಾಳೆಯ
- ಪಗೆವೊಯ್ – ದ್ವೇಷವುಂಟುಮಾಡು
- ಪಗ್ಗ – ಹಗ್ಗ
- ಪಚನಧಾಮ – ಅಡಿಗೆಯ ಮನೆ
- ಪಚಾರಿಸು – ಹೀಯಾಳಿಸು
- ಪಚ್ಚಖ್ಖಾಣಂಗುಡು – (ಜೈನ) ಪಚ್ಚಖ್ಖಾಣವ್ರತ (ಸೀಮಿತಕಾಲಕ್ಕೆ ಆಹಾರ ಬಿಡುವುದು) ದೀಕ್ಷೆ ಕೊಡು
- ಪಚ್ಚಖ್ಖಾಣಂಗೊಳ್ – ಪಚ್ಚಖ್ಖಾನವ್ರತ ತೊಡು
- ಪಚ್ಚಡ – ಹಚ್ಚಡ, ಹೊದಿಕೆ
- ಪಚ್ಚಡಿಕೆ – ಪಚ್ಚಡ
- ಪಚ್ಚಡಿಸು – ಹೊದಿಸು
- ಪಚ್ಚಣ – ಮುಚ್ಚುಮರೆ
- ಪಚ್ಚನೆ – ಹಸುರಾದ
- ಪಚ್ಚಪಸಿ – ಬಹಳ ಹಸಿ
- ಪಚ್ಚಪಸಿವರೆಯ – ಹೊಚ್ಚ ಹೊಸ ಹರಯ
- ಪಚ್ಚಬಗೆ – ಒಡೆದ ಮನಸ್ಸು
- ಪಚ್ಚಯಿಲ – ಪಚ್ಚಗಾ¾
- ಪಚ್ಚವಡ – ಬಚ್ಚಲು
- ಪಚ್ಚವಡಿಕೆ(ಗೆ) – ಮಗ್ಗುಲುಹಾಸಿಗೆ
- ಪಚ್ಚವಡಿತಿ – ಹಚ್ಚಡಿಸುವಾಕೆ; ಅಲಂಕರಿಸುವವಳು
- ಪಚ್ಚವಡಿಸು – ಹೊದಿಸು
- ಪಚ್ಚವಾಗಲ್ – ಪಚ್ಚೆಯ ಪ್ರಾಕಾರ, ಸುತ್ತುಗೋಡೆ
- ಪಚ್ಚಾಯ್ಲ – ಅಲಂಕರಿಸುವವನು
- ಪಚ್ಚಿಕೊಳ್ – ಹಂಚಿಕೊ
- ಪಚ್ಚು – ಹೊಂದಿಕೆ, ಅನ್ಯೋನ್ಯತೆ
- ಪಚ್ಚುಕು(ಕೊ)ಡು – ಹಂಚಿ ಕೊಡು
- ಪಚ್ಚುಗಂಟು – ಹಂಚಿಕೆಯಾದ ಗಂಟು
- ಪಚ್ಚುಗೊಡು – ಪಚ್ಚುಕುಡು
- ಪಚ್ಚು(ರ್ಚು)ಗೊಳ್ – ಹಂಚಿಕೊ, ವಿಭಾಗಿಸಿಕೊ
- ಪಚ್ಚುಡಿ – ಹಂಚಿಹೋಗು
- ಪಚ್ಚೆಗರ್ಬುನ – ಅಶುದ್ಧ ಕಬ್ಬಿಣ
- ಪಚ್ಚೆಗೊಡೆ – ಪಚ್ಚೆಯ ಕೊಡೆ, ಹಸಿರು ಕೊಡೆ
- ಪಚ್ಚೆದೋರಣ – ಹಸಿರು ತೋರಣ
- ಪಚ್ಚೆಲೆ – ಹಸಿರೆಲೆ
- ಪಚ್ಚೆಲೆದೊಂಗಲ್ – ಹಸಿರೆಲೆಯ ಗೊಂಚಲು
- ಪಚ್ಚೆವಟ್ಟು – ಪಚ್ಚೆಯ ಬಟ್ಟು, ಗುಂಡು
- ಪಚ್ಚೆವಡಿಗ – ಪಚ್ಚೆ+ಪಡಿಗ, ಪಚ್ಚೆಯ
- ಉಗುಳುಪಾತ್ರೆ
- ಪಚ್ಚೆವರಲ್ – ಪಚ್ಚೆಯ ಹರಳು, ಹಸಿರು ಮಣಿ
- ಪಚ್ಚೆವರಿಗೆ – ಪಚ್ಚೆ+ಪರಿಗೆ, ಹಸಿರು ಗುರಾಣಿ
- ಪಚ್ಚೆವಾಕಲು – ಹಸಿರುಮನೆ, ಬಳ್ಳಿಮಾಡ, ಮಲ್ಲಿಗೆ ಬಳ್ಳಿ
- ಪಚ್ಚೆವಿಲ್ಲ – ಹಸಿರು ಬಿಲ್ಲನ್ನು (ಕಬ್ಬಿನ ಬಿಲ್ಲನ್ನು) ಪಡೆದವನು, ಮನ್ಮಥ
- ಪಚ್ಚೆಸಾರ – ಪಚ್ಚೆಯ ಆಭರಣ
- ಪಚ್ಚೋಲೆ – ಹಸಿಯ ಓಲೆಗರಿ, ಬಿಚ್ಚೋಲೆ, ಪಚ್ಚೆಯ ಓಲೆ (ಕಿವಿಯ ಆಭರಣ)
- ಪಜ್ಜ – ಮುತ್ತಾತ
- ಪಜ್ಜತಿ – ಪದ್ಧತಿ
- ಪಜ್ಜಳ – (ಪ್ರಜ್ವಲ) ಹೊಳಪು
- ಪಜ್ಜಳಿಕೆ – ಕಾಂತಿ
- ಪಜ್ಜಳಿಸು – ಹೊಳೆ, ಪ್ರಕಾಶಿಸು
- ಪಜ್ಜೆ – (ಪದ್ಯಾ) ಹೆಜ್ಜೆ; ಅಡಿ; ದಾರಿ; ಗುರುತು
- ಪಜ್ಜೆವಿಡಿ – ಹೆಜ್ಜೆಯ ಗುರುತು ಹಿಡಿದು ಹೋಗು
- ಪಟ – ಬಟ್ಟೆ; ತೆರೆ
- ಪಟಂಗೊಳ್ – ಹಾರಾಡು, ಪ್ರಸಿದ್ಧಗೊಳ್ಳು
- ಪಟಕುಟಿ – ಬಟ್ಟೆಯ ಗುಡಿಸಲು, ಡೇರೆ
- ಪಟಚ್ಚರ – ಹಳೆಯ ಬಟ್ಟೆ
- ಪಟಮಂಡಪ – ಪಟಕುಟಿ, ಡೇರೆ
- ಪಟಲ(ಳ) – ಗುಂಪು; ಹೊದಿಕೆ
- ಪಟಲ(ಳ)ಕ – ಪರದೆ
- ಪಟಲಿ(ಳಿ)(ಕೆ) – ಸಮೂಹ
- ಪಟವಾಸ – ಸುಗಂಧದ ಪುಡಿ
- ಪಟವಾಸಕ್ಷೋದ – ಪಟವಾಸ
- ಪಟವಾಸಚೂರ್ಣ – ಪಟವಾಸ
- ಪಟವಿದ್ದೆ – (ಪಟವಿದ್ಧ) ಚಿತ್ರ ಬರೆಯುವುದು
- ಪಟಹ – ಭೇರಿ
- ಪಟಹಡಕ್ಕೆ – ಪಟಹ
- ಪಟಾಳಿ – ಬಟ್ಟೆಗಳ ರಾಶಿ
- ಪಟಿಷ್ಠ – ಹರಿತವಾದ; ಚುರುಕಾದ; ಸಮರ್ಥವಾದ
- ಪಟೀರ – ಶ್ರೀಗಂಧ
- ಪಟು – ಶಕ್ತಿಶಾಲಿ, ಉಗ್ರ; ಸಮರ್ಥ
- ಪಟುದೇಹ – ಚಟುವಟಿಕೆಯ ದೇಹ
- ಪಟುಪಟಹ – ಜೋರಾಗಿ ಸದ್ದುಮಾಡುವ ಭೇರಿ
- ಪಟುಪ್ರತಾಪ(ಪಿ) – ಉಗ್ರಪ್ರತಾಪ (ಉಳ್ಳವನು)
- ಪಟುಪ್ರಧ್ವಾನ – ಜೋರಾದ ಧ್ವನಿ
- ಪಟುಮತಿ – ಹರಿತ ಬುದ್ಧಿ
- ಪಟುರವ – ಪಟುಪ್ರಧ್ವಾನ
- ಪಟ್ಟ – ಅಧಿಕಾರಸೂಚಕ ಬಾಸಿಂಗ; ಕಿರೀಟ
- ಪಟ್ಟಂಗಟ್ಟು – ವಿಧ್ಯುಕ್ತವಾಗಿ ಅಧಿಕಾರ ವಹಿಸಿಕೊಡು
- ಪಟ್ಟಣ – ನಗರ
- ಪಟ್ಟಣಿಗ – ನಗರವಾಸಿ
- ಪಟ್ಟಣಿಗೆ – ಪಟ್ಟೆಯ ಸೀರೆ, ದುಕೂಲ
- ಪಟ್ಟದ ಮೊದಲಿಗ – ಅಧಿಕಾರಕ್ಕೆ ಅತ್ಯಂತ ಹಿರಿಯ ಹಕ್ಕುದಾರ
- ಪಟ್ಟನೂಲ್ – ರೇಷ್ಮೆಯ ಎಳೆ
- ಪಟ್ಟಬಂಧ(ನ) – ಪಟ್ಟ ಕಟ್ಟುವುದು, ಪಟ್ಟಾಭಿಷೇಕ
- ಪಟ್ಟಬಂಧೋತ್ಸವ – ಪಟ್ಟಾಭಿಷೇಕ ಸಮಾರಂಭ
- ಪಟ್ಟಮಹಿಷಿ – ಪಟ್ಟ ಕಟ್ಟಿಸಿಕೊಂಡ ರಾಣಿ, ಹಿರಿಯ ರಾಣಿ
- ಪಟ್ಟಮಾರ್ಗ – ರಾಜಮಾರ್ಗ
- ಪಟ್ಟಮಾರ್ಗಂಬಿಡಿ – ರಾಜಮಾರ್ಗ (ನೇರಮಾರ್ಗ) ಹಿಡಿ
- ಪಟ್ಟವಣೆ – ಸಿಂಹಾಸನ; ಹಸೆಮಣೆ
- ಪಟ್ಟವರ್ಧನ – ಪಟ್ಟದ ಆನೆ
- ಪಟ್ಟಶಿಲೆ – ಹಾಸುಗಲ್ಲು
- ಪಟ್ಟಸ – ಈಟಿ
- ಪಟ್ಟಸಾಲಿಗ – ರೇಷ್ಮೆ ನೇಕಾರ
- ಪಟ್ಟಸಾಲೆ – ಮೊಗಸಾಲೆ
- ಪಟ್ಟಸೂತ್ರ – ರೇಷ್ಮೆ ಎಳೆ
- ಪಟ್ಟಳಿ(ಣಿ)ಗೆ – ಪಟ್ಟವ¿Â
- ಪಟ್ಟಳೆ – ತೊಲೆ
- ಪಟ್ಟಾಂಶುಕ – ಪಟ್ಟವ¿Â
- ಪಟ್ಟಿಕ – ಪೀಠ
- ಪಟ್ಟಗಾಳೆಗ – ಹಳ್ಳಿ(ಕೇರಿ)ಗಳ ನಡುವಣ ಕಾಳಗ
- ಪಟ್ಟಿ – ಹಟ್ಟಿ, ಹಳ್ಳಿ; ರೊಪ್ಪ
- ಪಟ್ಟಿರ್ – ಮಲಗಿರು
- ಪಟ್ಟಿರಿಸು – ಮಲಗಿಸು
- ಪಟ್ಟಿಹೆ – ಕೊರಳ ತೊಡುಗೆ; ಡಾಬು
- ಪಟ್ಟಿಸ – ಕುಸ್ತಿಯ ಒಂದು ಪಟ್ಟು
- ಪಟ್ಟಿಸಭಂಡಾರ – ರೇಷ್ಮೆ ಬಟ್ಟೆಗಳ ಸಂಗ್ರಹ
- ಪಟ್ಟಿವಣೆ – ಹಸೆ ಮಣೆ
- ಪಟ್ಟುಕಾ¾ – ಪಟ್ಟಸಾಲಿಗ
- ಪಟ್ಟೆಯ – ಒಂದು ಆಯುಧ
- ಪಠರೀ – ಮಡಕೆ
- ಪಠಿಸು – ಓದು; ಹೇಳು
- ಪಡಕೆ – ಹಾಸಿಗೆ; ಒಂದು ಬಗೆಯ ಧರ್ಮವಾದ್ಯ
- ಪಡಣ – ಅನಿಷ್ಟ, ಕೇಡು
- ಪಡಣಿಗೆ – ಅಮಂಗಳಕರ ಹೆಂಗಸು
- ಪಡಪಡವಾಯ್ – ಎದೆ ಡವಗುಟ್ಟು
- ಪಡಪು – ಪ್ರಯೋಜನ
- ಪಡಪುಗಾರ್ತಿ – ಹಣಗಳಿಸುವ ಹೆಣ್ಣು; ಠೀವಿಯವಳು
- ಪಡಲ – ಹರಿವಾಣ; ಬುಟ್ಟಿ
- ಪಡಲ(ಲಿ)ಗೆ – (ಪಟಲಿಕಾ) ಪಡಲ
- ಪಡಲಿಡು – ಚೆಲ್ಲಾಪಿಲ್ಲಿಯಾಗಿ ಬೀಳು; ಸಾಯು
- ಪಡಲ್ವಡು – ಚೆಲ್ಲಾಪಿಲ್ಲಿಯಾಗು
- ಪಡಲ್ವಡಿಸು – ಚೆಲ್ಲಾಪಿಲ್ಲಿಯಾಗಿಸು
- ಪಡವು – ಸಂಪಾದನೆ; ಆಶ್ರಯ
- ಪಡಿ – (ಪ್ರತಿ) ಕದ; ಸಮಾನ
- ಪಡಿಕಮಂಗೆಯ್ – (ಜೈನ) ಪ್ರಾಯಶ್ಚಿತ್ತಕ್ಕೋಸುಗ ತಪಸ್ಸು ಮಾಡು
- ಪಡಿಕಮಣಂಗೇಳ್ – (ಜೈನ) ಪ್ರಾಯಶ್ಚಿತ್ತಕ್ಕಾಗಿ ಧರ್ಮೋಪದೇಶವನ್ನು ಕೇಳುಧರ್ಮೋಪದೇಶಮಾಡು
- ಪಡಿಕೆ – ಬಂಧನ
- ಪಡಿಗ – (ಪತದ್ಗ್ರಹ) ಪೀಕದಾನಿ
- ಪಡಿಗಟ್ಟು – ಹೋಲಿಕೆ ಮಾಡು
- ಪಡಿಗಹ – (ಪ್ರತಿಗ್ರಹ) ಸ್ವೀಕರಿಸು
- ಪಡಿಗೋಂಟೆ – ಪ್ರತಿ ಕೋಟೆ; ಕೃತಕ ಕೋಟೆ
- ಪಡಿಚಂದ – (ಪ್ರತಿಚ್ಛಂದ) ಪ್ರತಿಕೃತಿ; ಸಮಾನ
- ಪಡಿಯಿಡು – ಸಮಾನವಾಗು; ತಾಳೆ ನೋಡಿ
- ಪಡಿಲೇಖಿಸು – ಪ್ರತಿಬಿಂಬವನ್ನು ರಚಿಸು
- ಪಡಿವಡೆ – ಪ್ರತಿ ಸೈನ್ಯ, ಶತ್ರು ಸೈನ್ಯ
- ಪಡಿವರಿಜು – ಪ್ರತಿರೂಪ
- ಪಡಿವಳಗಟ್ಟಿಗೆ – ಪಡಿಯ¾ಗಟ್ಟಿಗೆ
- ಪಡಿವಾ(ಮಾ)ತು – ಪ್ರತಿ ಮಾತು; ಪ್ರತ್ಯುತ್ತರ
- ಪಡಿವೆಸ – ಸೇವೆಯ ಕೆಲಸ
- ಪಡಿಸಣ – ಪರೀಕ್ಷೆ; ಆಹಾರ ಪರೀಕ್ಷೆ
- ಪಡಿಸು – ಮಲಗಿಸು
- ಪಡು – ಬೀಳು; ಮಲಗು; (ಸೂರ್ಯ) ಅಸ್ತಮಿಸು
- ಪಡು(ಡಿ)ಕೆ – ಕೆಟ್ಟ ವಾಸನೆ; ಹೊಲಸು
- ಪಡುತರ್ – ಸೂರ್ಯನು ಅಸ್ತವಾಗು
- ಪಡುಮಿಗ – ಬೇಟೆಗೆ ಬೀಳುವ ಪ್ರಾಣಿ
- ಪಡುವ(ಣ್) – ಪಶ್ಚಿಮ
- ಪಡುವಣ – ಪಶ್ಚಿಮದ; ಪಶ್ಚಿಮ ದಿಕ್ಕು
- ಪಡುವಣಂ – ಪಶ್ಚಿಮದವನು
- ಪಡುಶಿಲೆ – ಮಲಗುವ ಕಲ್ಲು
- ಪಡೆ – ಹೊಂದು; ಉಂಟುಮಾಡು; ಸೈನ್ಯ
- ಪಡೆಪು – ಇಷ್ಟಾರ್ಥ, ಪಡೆಯಬೇಕೆಂದಿರುವುದು; ಲಾಭ
- ಪಡೆಪುಗಿಡು – ಧೈರ್ಯಗೆಡು
- ಪಡೆಪಾಳಿತನ – ಸಂಪಾದನೆಗೈಯುವಿಕೆ
- ಪಡೆಮಾ(ವಾ)ತು – ಸುದ್ದಿ; ವಿಷಯ; ಕೀರ್ತಿ; ವ್ಯರ್ಥ ಮಾತು
- ಪಡೆಮೆಚ್ಚೆಗಂಡಂ – (ಎದುರು) ಸೈನ್ಯವೂ ಮೆಚ್ಚಿಕೊಳ್ಳುವ ಶೂರ
- ಪಡೆವಳ(ಳ್ಳ) – ಸೇನಾನಿ
- ಪಡ್ಡಳಿ – ಕಣಿಗಿಲೆ
- ಪಣ್ – ಹಣ್ಣು; ಹಣ್ಣು ಬಿಡು; ಮಾಗು; ರುಚಿಯಾಗು; ಮಾಡು
- ಪಣ – ಜೂಜಿನ ಒತ್ತೆ; ಹಣ
- ಪಣಂಕು – ಪಳುಂಕು, ಬಲವಾಗಿ ತಾಗು
- ಪಣಕಾಂತೆ – ಸೂಳೆ
- ಪಣಗೊಳ್ – ಒತ್ತೆ ಹಣ ತೆಗೆದುಕೊ
- ಪಣವ – ಮದ್ದಳೆ
- ಪಣವಧು – ಪಣಕಾಂತೆ
- ಪಣವಧೂಗೇಹ – ಸೂಳೆಯ ಮನೆ
- ಪಣವಧೂಟಿ – ಪಣಕಾಂತೆ
- ಪಣವನಿತೆ – ಪಣಕಾಂತೆ
- ಪಣವು – ದುಡ್ಡು; ಒಂದು ನಿರ್ದಿಷ್ಟ ನಾಣ್ಯ
- ಪಣಾಂಗನೆ – ಪಣಕಾಂತೆ
- ಪಣಿ – ಘಟ್ಟಿಸು
- ಪಣಿಗೆ – ಬಾಚಣಿಗೆ; ಬಾಳೆ ಹಣ್ಣಿನ ಚಿಪ್ಪು
- ಪಣಿತ – ಪಂತ; ದ್ಯೂತ
- ಪಣಿದ – ಪೈರು; ಕಾಳಗ; ಕತ್ತರಿಸುವಿಕೆ
- ಪಣಿದಂಬೊಯ್ – ಕತ್ತರಿಸಿ ಹಾಕು; ಯುದ್ಧಮಾಡು; ಪಣವಾಗಿ ಕೊಡು
- ಪಣೆ – ಹಣೆ; ಮರದ ಕಾಂಡದ ಕವಲೊಡೆವ ಜಾಗ; ಕಾಡುಮೃಗಗಳ ವಾಸದ ನೆಲೆ
- ಪಣೆಕ(ಗ)ಟ್ಟು – ಹಣೆಯ ಅಲಂಕಾರ ಪಟ್ಟಿ; ತಲೆಯ ಪಾಗು
- ಪಣೆಗಣ್ – ಹಣೆಗಣ್ಣು; ಶಿವನ ಮೂರನೆಯ ಕಣ್ಣು
- ಪಣೆಯಿಕ್ಕು – ಹಣೆ ಚಾಚು; ತಲೆಯೆತ್ತು
- ಪಣ್ಗೊ(ನೆ)ಲೆ – ಹಣ್ಣಿನ ಗೊನೆ
- ಪಣ್ಣಪಣ್ಣನೆ – ಮೆಲ್ಲಮೆಲ್ಲಗೆ
- ಪಣ್ಣಿಗೆವಿಡಿ – ಪಣ್ಣಿಗೆ+ಪಿಡಿ, ಅಲಂಕೃತವಾದ ಹೆಣ್ಣಾನೆ
- ಪಣ್ಣು – ಸಜ್ಜುಮಾಡು; ಸಜ್ಜಾಗು; ಮಾಡು
- ಪಣ್ಣುಗೆ – ಸಜ್ಜು; ಸಿದ್ಧತೆ; ಅಲಂಕಾರ
- ಪಣ್ಣೆಯ – ಹವ್ಯಾಸ
- ಪಣ್ಪಲ(ಳ) – ಹಣ್ಣುಹಂಪಲು
- ಪಣ್ಯಕರ್ಮ – ವ್ಯಾಪಾರ
- ಪಣ್ಯವಧು – ಸೂಳೆ
- ಪಣ್ಯವನಿತೆ – ಪಣ್ಯವಧು
- ಪಣ್ಯಾಂಗನಾಜನ – ಸೂಳೆಯರ ಗುಂಪು
- ಪಣ್ಯಾಂಗನಾವೀಧಿ – ಸೂಳೆಗೇರಿ
- ಪಣ್ಯಾಂಗನೆ – ಪಣ್ಯವಧು
- ಪಣ್ಯಾಗಾರ – ವ್ಯಾಪಾರದ ಸ್ಥಳ; ಅಂಗಡಿ
- ಪಣ್ಯಾಂಗನಾ – ಸೂಳೆ, ವೇಶ್ಯೆ
- ಪತಂಗ – ಸೂರ್ಯ; ಈಚಲು ಹುಳು; ದೀಪದ ಹುಳು; ಹಕ್ಕಿ; ಬಾಣ
- ಪತಂಗಮಂಡಲ – ಸೂರ್ಯಮಂಡಲ
- ಪತಂಗವೃತ್ತಿ – ದೀಪದ ಹುಳುವಿನಂತೆ ನುಗ್ಗುವುದು
- ಪತತ್ರ – ರೆಕ್ಕೆ
- ಪತತ್ರಿ – ರೆಕ್ಕೆಯುಳ್ಳುದು, ಹಕ್ಕಿ; ಬಾಣ
- ಪತಾಕಪಟ – ಬಾವುಟದ ಬಟ್ಟೆ
- ಪತಾಕಿನಿ – ಸೈನ್ಯ
- ಪತಾಕಿನೀಪತಿ – ಸೇನಾಧಿಪತಿ
- ಪತಾಕೆ – ಬಾವುಟ, ಧ್ವಜ
- ಪತತ್ರಿ – ಪಕ್ಷಿ
- ಪತತ್ರಿಗೋತ್ರ – ಪಕ್ಷಿಗಳ ಗುಂಪು
- ಪತಿ – ಒಡೆಯ; ಗಂಡ
- ಪತಿಂವರೆ – ಸ್ವಯಂವರದ ಅವಕಾಶವಿರುವ ಕನ್ಯೆ
- ಪತಿಕಾರ್ಯ – ಯಜಮಾನನ ಕೆಲಸ
- ಪತಿತ್ವ – ಒಡೆತನ
- ಪತಿವ್ರತಾಗುಣ – ಪತಿನಿಷ್ಠೆಯ ನಡವಳಿಕೆ
- ಪತಿವ್ರತಾಚರಣ – ಪಾತಿವ್ರತ್ಯದ ಅನುಸರಣೆ
- ಪತಿವ್ರತಾಲಿಂಗ – (ಜೈನ) ಯೋಗಸಾಧನಯ ಒಂದು ಬಗೆ
- ಪತಿವ್ರತಿಕೆ – ಪಾತಿವ್ರತ್ಯದ ಗುಣ
- ಪತಿಹಿತವ – ಒಡೆಯನ ಹಿತ ಬಯಸುವವನು
- ಪತ್ತನ – ನಗರ; ಗಾಡಿ ಅಥವಾ ನಾವೆಯಲ್ಲಿ ತಲುಪಬಹುದಾದ ದೊಡ್ಡ ಊರು
- ಪತ್ತಳೆ – (ಪತ್ರಿಕಾ) ಓಲೆ, ಪತ್ರ, ಕಾಗದ
- ಪತ್ತಿ – ಪದಾತಿ ಸೈನಿಕ; ಒಂದು ರಥ, ಎರಡು ಆನೆ, ಮೂರು ಕುದುರೆ, ನಾಲ್ಕು ಕಾಲಾಳುಗಳ ಗುಂಪು; ಬಾಣ
- ಪತ್ತಿಸು – ಹತ್ತಿಸು; ಮನಸ್ಸನ್ನು ನಿಲ್ಲಿಸು
- ಪತ್ತೀಂದ್ರ – ಪದಾತಿಯ ದಳಪತಿ
- ಪತ್ತು – ಹತ್ತು; ಮೇಲೇರು; ಉರಿಗೊಳ್ಳು; ಮೆತ್ತಿಕೊ; ಒಂದು ಸಂಖ್ಯೆ
- ಪತ್ತುಗೆ – ಸಂಭವಿಸುವಿಕೆ; ಸಂಬಂಧ; ಸ್ನೇಹ; ಆಶ್ರಯ; ರಥದ ಅಚ್ಚು
- ಪತ್ತುಗೆಗುಂದು – ಸಂಬಂಧ ಕಳೆದುಹೋಗು
- ಪತ್ತುಗೆಗೆಡು – ಸಂಬಂಧ ತಪ್ಪಿಹೋಗು
- ಪತ್ತುಗೆಗೊಳ್ – ಸಂಬಂಧವುಂಟಾಗು
- ಪತ್ತುಗೆವಿಡು – ಸಂಬಂಧ ಕಳೆದುಕೊ
- ಪತ್ತುಗೆವೆ¾ು – ಸಂಬಂಧ ಪಡೆದಿರು
- ಪತ್ತುವಿಡಿಸು – ಪತ್ತು+ಬಿಡಿಸು, ಸಂಬಂಧ ತಪ್ಪಿಸು
- ಪತ್ತುವಿಡು – ಸಂಬಂಧ ತಪ್ಪಿಹೋಗು; ಬೇರೆಯಾಗು; ಮುಗಿದುಹೋಗು; ದೂರಮಾಡು
- ಪತ್ತೆಪಾಯ್ – ಹತ್ತಿರ ಸೇರು, ಸಮೀಪಿಸು
- ಪತ್ತೆಸಾರ್ – ಪತ್ತೆಪಾಯ್
- ಪತ್ರಭಂಗ – ಕೆನ್ನೆ ಮೊದಲಾದವುಗಳ ಮೇಲೆ ಬರೆಯುವ ಚಿತ್ರ
- ಪತ್ತೆವೊಯ್ – ಒಂದಾಗಿ ಸೇರಿಸು; ಬೆಸೆ
- ಪತ್ತೆಸಾರ್ – ಹತ್ತಿರ ಹೋಗು
- ಪತ್ತೆಂಟು – ಅನೇಕ
- ಪತ್ರ(ಕ) – ಎಲೆ; ಹೂವಿನ ಎಸಳು
- ಪತ್ರಚ್ಛೇದ – ಎಲೆಗಳ ಚಿತ್ರ
- ಪತ್ರಪುಟಿಕೆ – ಎಲೆಯಿಂದ ಮಾಡಿದ ದೊನ್ನೆ
- ಪತ್ರಭಂಗ – ದೇಹದ ಮೇಲೆ ಚಿತ್ರ ಬಿಡಿಸುವುದು; ಮಕರಿಕೆ
- ಪತ್ರರೇ(ಲೇ)ಖೆ – ಪತ್ರಭಂಗ
- ಪತ್ರಾಲಂಬನ – ವಾದಕ್ಕೆ ನೀಡುವ ಆಹ್ವಾನ
- ಪತ್ರಾಲಿ – ಎಲೆಗಳ ಸಮೂಹ
- ಪತ್ರಿಕುಲಚರಿತ್ರ – ಎಲೆಗಳಿಂದ (ಬಾಣಗಳಿಂದ) ತುಂಬಿರುವುದು
- ಪತ್ಸನ್ನಿಧಿ – ಪಾದಸನ್ನಿಧಿ
- ಪಥ(ಪರಿ)ಶ್ರಮ – ಮಾರ್ಗಾಯಾಸ; ಪಯಣದ ದಣಿವು
- ಪಥಾರ್ತ – ಪಯಣಿಸಿ ದಣಿದವನು
- ಪಥಿಕ(ಜನ) – ಪ್ರಯಾಣಿಕ (ಜನರು)
- ಪಥಿಶ್ರಮ – ಪಥ(ಪರಿ)ಶ್ರಮ
- ಪಥ್ಯ – ತಕ್ಕುದಾದ
- ಪದ – ಸ್ಥಾನ; ಹೆಜ್ಜೆ; ಹದ; ಸಂದರ್ಭ
- ಪದನ್(ನ)(ನು) – ಸರಿಯಾದ ಸ್ಥಿತಿ
- ಪದಂಗಾಣ್ – ಹದಗೊಳ್ಳು
- ಪದಂಗಾಸು – ಹದವಾಗಿ ಕಾಯಿಸು; ಪುಟವಿಟ್ಟುದು
- ಪದಂಗುಟ್ಟು – ಉಚ್ಚರಿಸು
- ಪದಂಗೆಡು – ಹದ ತಪ್ಪು; ದಾರಿ ತಪ್ಪು
- ಪದಂಗೊಳಿಸು – ಹದಗೊಳಿಸು
- ಪದಂದಪ್ಪು – ಹದ ತಪ್ಪು
- ಪದಂದಿರಿ – ಹೆಜ್ಜೆ ತಿರುಗಿಸು
- ಪದಂಬಡಿಸು – ನೆರವೇರಿಸು; ಹದಗೊಳಿಸು
- ಪದಂಬಡೆ – ಹದಗೊಳ್ಳು
- ಪದಕ – ಸರದ ನಡುವಿನ ಬಿಲ್ಲೆ
- ಪದಕಟಕ – ಕಾಲುಕಡಗ
- ಪದಗತಿ – ಹೆಜ್ಜೆಯಿಡುವ ರೀತಿ
- ಪದಗೆಂಪು -ಹದವಾದ ಕೆಂಬಣ್ಣ
- ಪದಘಾತ – ಕಾಲಿನ ಘಟ್ಟನೆ
- ಪದಚಾರಿ – ಪದಗತಿ
- ಪದಡಕ್ಕೆ – ಭೇರಿ
- ಪದದಪ್ಪು – ಹದ ತಪ್ಪು; ದಾರಿ ತಪ್ಪು
- ಪದಧೂಲಿ(ಳಿ) – ನಡೆಯುವಾಗ ಏಳುವ ಧೂಳು
- ಪದನ್ – ಹದ, ಸುಸ್ಥಿತಿ
- ಪದನಖ – ಕಾಲುಗುರು
- ಪದನತ – ಕಾಲಿಗೆ ಬಿದ್ದ, ನಮಸ್ಕರಿಸಿದ
- ಪದನ¾Â – ಕ್ರಮವನ್ನು ತಿಳಿ
- ಪದನಿಸು – ಆಕರ್ಷಿಸು
- ಪದನ್ಯಸನ – ಹೆಜ್ಜೆಯಿಡುವಿಕೆ
- ಪದನ್ಯಾಸ – ಪದನ್ಯಸನ
- ಪದಪದ್ಧತಿ – ಹೆಜ್ಜೆಯ ಗುರುತು
- ಪದಪಾಂಸು – ಪದಧೂಲಿ(ಳಿ)
- ಪದಪಾತ – ಒದೆಯುವುದು
- ಪದಪೀಠ – ಪಾದಗಳನ್ನಿಟ್ಟುಕೊಳ್ಳುವ ಪೀಠ
- ಪದ(ದೆ)ಪು – ಮೋಹ; ಪ್ರೀತಿ; ಸಂಭ್ರಮ; ಅಂದ
- ಪದಮಿಕ್ಕು – ಪದಗಳನ್ನು ಜೋಡಿಸು
- ಪದಯಿದ – ಪ್ರಿಯನಾದ(ವನು)
- ಪದಯಿಸು – ಹದಗೊಳಿಸು
- ಪದಯುಗ(ಳ) – ಎರಡು ಪಾದಗಳು
- ಪದರಕ್ಷೆ – ಪಾದರಕ್ಷೆ
- ಪದರಜ – ಪದಧೂಲಿ(ಳಿ)
- ಪದರಾಗ – ಅಂಗಾಲಿನ ಕೆಂಬಣ್ಣ
- ಪದವಡು – ಹದವನ್ನು ಹೊಂದು; ಹಿತಕರವಾಗು
- ಪದವಣ್ – ಹವಾಗಿರುವ ಹಣ್ಣು
- ಪದವ¿õÉ – ಹದವಾದ ಮಳೆ
- ಪದವಿದ್ಯೆ – ವ್ಯಾಕರಣ
- ಪದವಿನ್ಯಾಸ – ಹೆಜ್ಜೆಯಿಡುವ ರೀತಿ; ಪದಜೋಡಣೆ
- ಪದವಿಲ್ – ಸಿದ್ಧಪಡಿಸಿದ ಬಿಲ್ಲು
- ಪದವೆಂಕೆ – ಪದ+ಬೆಂಕೆ, ಹದವಾದ ಉರಿ
- ಪದಸಂಚಯ – ಪದಗಳ ಸಮೂಹ
- ಪದಸ್ಖಳನ – ಹೆಜ್ಜೆ ತಪ್ಪುವುದು
- ಪದಾಗಮಜ್ಞ – ವ್ಯಾಕರಣವನ್ನು ಬಲ್ಲವನು
- ಪದಾಘಾತ – ಒದೆತ
- ಪದಾತಿ(ನಿ) – ಕಾಲಾಳು ದಳ
- ಪದಾನತ – ಪದನತ
- ಪದಾರ್ಥ – ವಸ್ತು; ಪದ+ಅರ್ಥ; (ಜೈನ) ತತ್ವಗಳು, ಇವು ಒಂಬತ್ತು ಬಗೆ: ಜೀವ, ಅಜೀವ, ಆಸ್ರವ, ಬಂಧ, ಸಂವರ, ನಿರ್ಜರ, ಮೋಕ್ಷ, ಪಾಪ, ಪುಣ್ಯ
- ಪದಾವನತಿ – ಕಾಲುಗಳಿಗೆ ಬೀಳುವುದು, ನಮಸ್ಕಾರ
- ಪದಿಟೆ – (ಪ್ರತಿಷ್ಠೆ) ಸ್ಥಾಪನೆ
- ಪದಿಂಬರ್(ರು) – ಹತ್ತು ಮಂದಿ
- ಪದಿರ್ – ದ್ವಂದ್ವಾರ್ಥದ ಮಾತು; ಚಮತ್ಕಾರೋಕ್ತಿ
- ಪದಿರಿಕ್ಕು – ಶಬ್ದಮಾಡು; ಸಂಕೇತಧ್ವನಿಮಾಡು
- ಪದಿರ್ಮಡಿ – ಹತ್ತು ಪಟ್ಟು
- ಪದಿರ್ಮಡಿಸು – ಹತ್ತರಷ್ಟು ಮಾಡು
- ಪದುಮ – ಪದ್ಮ
- ಪದುಳ – ಕ್ಷೇಮ, ನೆಮ್ಮದಿ
- ಪದುಳಂ – ಕ್ಷೇಮದಿಂದ; ನೆಮ್ಮದಿಯಿಂದ
- ಪದುಳಂಗೆಯ್ – ನೆಮ್ಮದಿಯುಂಟುಮಾಡು
- ಪದುಳಮಿರ್ – ಕ್ಷೇಮವಾಗಿರು
- ಪದುಳಿಕೆ – ಕ್ಷೇಮ; ಸ್ಥಿರತೆ
- ಪದುಳಿಗ – ಸುಖವಾಗಿರುವವನು; ಜಾಗರೂಕ
- ಪದುಳಿಸು – ಸಮಾಧಾನ ಹೊಂದು
- ಪದೆ – ಆಸೆಪಡು; ಪ್ರೀತಿಸು; ಸಂತೋಷಪಡು
- ಪದೆಪು – ಪ್ರೀತಿ; ಸಂತೋಷ
- ಪದೆಪುಗೆಡು – ಸಂತೋಷ ಹಾಳಾಗು
- ಪದೆಯಿಸು – ಆಸೆಪಡುವಂತೆ ಮಾಡು
- ಪದ್ಧತಿ – ಹೆಜ್ಜೆ; ವಿಧಾನ
- ಪದ್ಮಗರ್ಭ – ಬ್ರಹ್ಮ
- ಪದ್ಮಜ – ಬ್ರಹ್ಮ
- ಪದ್ಮಭವಾಂಡ – ಬ್ರಹ್ಮಾಂಡ
- ಪದ್ಮಮಿತ್ರ – ತಾವರೆಯ ಮಿತ್ರ, ಸೂರ್ಯ
- ಪದ್ಮಯೋನಿ – ಪದ್ಮಗರ್ಭ
- ಪದ್ಮರಾಗ – ತಾವರೆಯ ಬಣ್ಣ; ಕೆಂಪು ರತ್ನಮಾಣಿಕ್ಯ-
- ಪದ್ಮವೇದಿಕೆ – ತಾವರೆಯ ಆಕಾರದಲ್ಲಿ ನಿರ್ಮಿತವಾದ ವೆದಿಕೆ
- ಪದ್ಮಷಂಡ – ತಾವರೆಯ ಗುಂಪು; ತಾವರೆಯ ಕೊಳ
- ಪದ್ಮಸದ್ಮ – ತಾವರೆಗೊಳ; ಕಮಲದ ಮನೆಯವನು, ಬ್ರಹ್ಮ
- ಪದ್ಮಸದ್ಮೆ – ಕಮಲದಲ್ಲಿ ನೆಲೆಸಿದವಳು, ಲಕ್ಷ್ಮೀ
- ಪದ್ಮಹ್ರದ – ತಾವರೆಗಳ ನೆಲೆ, ಕೊಳ
- ಪದ್ಮಾಂಕಿತ – ಕಮಲಲಾಂಛನ
- ಪದ್ಮಾಕರ – ಪದ್ಮಹ್ರದ
- ಪದ್ಮಾನಂದಿ – ಪದ್ಮಕ್ಕೆ ಸಂತಸ ನೀಡುವವನು, ಸೂರ್ಯ
- ಪದ್ಮಾಲಯೆ – ಪದ್ಮಸದ್ಮೆ
- ಪದ್ಮಾಸನ – ಕಮಲದ ಆಸನವುಳ್ಳವನು, ಬ್ರಹ್ಮ; ಒಂದು ಯೋಗಾಸನ
- ಪದ್ಮಿನೀ – ಕಮಲಲತೆ; ಪದ್ಮಿನೀ ಎಂಬ ಸ್ತ್ರೀ ಜಾತಿ
- ಪದ್ಮಿನೀಷಂಡ – ಪದ್ಮಷಂಡ; ಪದ್ಮಿನೀ ಜಾತಿಯ ಸ್ತ್ರೀಯರ ಸಮೂಹ
- ಪದ್ಮೇಶ – ಕಮಲಕ್ಕೆ ಒಡೆಯ, ಸೂರ್ಯ
- ಪದ್ಯರಚನೆ – ಪದ್ಯಗಳನ್ನು ಬರೆಯುವುದು
- ಪನ – ಸಂಕೇತಸ್ಥಳ
- ಪನಿ – ತೊಟ್ಟು; ತೊಟ್ಟಿಕ್ಕು; ಸತತವಾಗಿ ಸುರಿ
- ಪನಿಗೊಳ್ – ಕಂಬನಿ ಸುರಿಸು
- ಪನಿದಂದಲ್ – ತುಂತುರು ಮಳೆ
- ಪನಿನೀರ್ – ತಂಪಾದ ನೀರು, ಪನ್ನೀರು
- ಪನಿಪುಲ್ – ಇಬ್ಬನಿಯಿಂದ ಕೂಡಿದ ಹುಲ್ಲು
- ಪನೆ – ತಾಳೆ ಮರ; ಹೊಸದಾಗಿ ಮೊಳೆತ ಹಲ್ಲು
- ಪನ್ನ(ನ್ನಿ) – ಬಿಂಕ
- ಪನ್ನಗ- ಹಾವು; ಕಶ್ಯಪ-ಕದ್ರು ಇವರ ಸಂತತಿ-
- ಪನ್ನಗಪತಾಕ – ಸರ್ಪಧ್ವಜ, ದುರ್ಯೋಧನ
- ಪನ್ನಗರ್ – ನಾಗರು
- ಪನ್ನಗರಾಜ – ಆದಿಶೇಷ
- ಪನ್ನಗವಿದ್ಯೆ – ಹಾವಿನ ವಿಷ ಹೋಗಲಾಡಿಸುವ ವಿದ್ಯೆ; ಗಾರುಡವಿದ್ಯೆ
- ಪನ್ನಗವಿರೋಧಿ – ಸರ್ಪವಿರೋಧಿ, ಗರುಡ
- ಪನ್ನಗಶಯನ – ವಿಷ್ಣು
- ಪನ್ನತ – ವೀರ, ಪರಾಕ್ರಮಿ
- ಪನ್ನತಿಕೆ – ಶೌರ್ಯ
- ಪನ್ನಿರ್ಛಾಸಿರ – ಹನ್ನೆರಡು ಸಾವಿರ
- ಪನ್ನಿರ್ವರ್ – ಹನ್ನೆರಡು ಮಂದಿ
- ಪನ್ನೊರ್ವರ್ – ಹನ್ನೊಂದು ಮಂದಿ
- ಪಪ್ಪ(ವರ್) – ಸ್ತುತಿ(ಪಾಠಕರು)
- ಪಪ್ಪಕ – ರಾಜನನ್ನು ಬೆಳಿಗ್ಗೆ ಎಚ್ಚರಿಸುವವನು; ಬೇಟೆಯಲ್ಲಿ ಸೋವುವುದು
- ಪಯ – ನೀರು; ಹಾಲು
- ಪಯಃಕಣ(ಕಣಿಕೆ) – ನೀರಿನ ಹನಿ
- ಪಯಃಕೇಲಿ(ಳಿ) – ನಿರಿನಲ್ಲಿನ ಆಟ
- ಪಯಃಪತಿ – ನೀರಿನ ಒಡೆಯ, ವರುನ
- ಪಯಃಪಯೋಧಿ- ಕಾಲಿನ ಸಮುದ್ರ
- ಪಯಃಪೂರ – ನೀರಿ(ಹಾಲಿ)ನಿಂದ ತುಂಬಿರುವುದು; ಹಾಲ ಹೊಳೆ
- ಪಯಃಪ್ರಸಾದ – ಪಾದೋದಕ
- ಪರ್ಯಪ್ರವಾಹ – ಪಯಃಪೂರ
- ಪಯಗತಿ – ನಡೆಯುವ ರೀತಿ
- ಪಯಗರಡಿ – ಮರಿ ಹಾಕಿದ ಕರಡಿ
- ಪಯಣ – (ಪ್ರಯಾಣ) ಯಾತ್ರೆ; ಒಂದು ದಿನ ನಡೆಯುವ ದೂರ
- ಪಯಣಂಬರ್ – ಪಯಣಿಸಿ ಬಾ
- ಪಯಣಂಬೋಗು – ಪ್ರವಾಸ ಹೋಗು
- ಪಯ(ಯಿ)ನ್ – ಹಯನು, ಈದ ಪ್ರಾಣಿ; ಕರಾವು
- ಪಯನಾವು – ಕರೆಯುವ ಹಸು, ಕರಾವು
- ಪಯಶ್ಚರ – ಮೀನು ಮುಂತಾದ ಜಲಚರ
- ಪಯಷ್ಕಣ – ಪಯಃಕಣ(ಕಣಿಕೆ)
- ಪಯಸ್ವಿನಿ – ಹಾಲು ಕೊಡುವ ಹಸು, ಕರಾವು
- ಪಯಸ್ಸದ್ – ನೀರಿನ ಆಶ್ರಯಸ್ಥಾನ, ಸಮುದ್ರ
- ಪಯಿಂಛಾಸಿರ(ರ್ವರ್) – ಹತ್ತು ಸಾವಿರ (ಮಂದಿ)
- ಪಯೋಜ – ನೀರಿನಲ್ಲಿ ಹುಟ್ಟಿದುದು, ತಾವರೆ
- ಪಯೋಜಜ – ತಾವರೆಯಲ್ಲಿ ಹುಟ್ಟಿದವನು, ಬ್ರಹ್ಮ
- ಪಯೋಜಸೂತ್ರ – ಕಮಲದ ದಂಟು
- ಪಯೋಜಿನಿ – ಕಮಲ
- ಪಯೋದ – ನೀರನ್ನು ಕೊಡುವುದು, ಮೋಡ
- ಪಯೋದಪಥ – ಮೇಘಮಾರ್ಗ, ಆಕಾಶ
- ಪಯೋದಮಾರ್ಗ – ಪಯೋದಪಥ
- ಪಯೋಧರ – ಮೋಡ; ಮೊಲೆ
- ಪಯೋಧರಕಾಲ – ಮೋಡಗಳ ಕಾಲ, ಮಳೆಗಾಲ
- ಪಯೋಧರಶರ – ವಾರುಣಾಸ್ತ್ರ
- ಪಯೋಧರಶಿಲೀಮುಖ – ಪಯೋಧರಶರ
- ಪಯೋಧಾರೆ – ನೀರಿನ ಧಾರೆ
- ಪಯೋಧಿ – ಸಮುದ್ರ; (ಜೈನ) ಒಂದು
- ಕಾಲಗಣನೆ, ಸಾಗರ
- ಪಯೋಧಿಕೇಳಿ – ನೀರಾಟ
- ಪಯೋನಿಧಿ – ಸಮುದ್ರ; ಹಾಲಿನ ಸಮುದ್ರ
- ಪಯೋಭೃತ್ – ಮೊಲೆ
- ಪಯೋರಸ – ನೀರು
- ಪಯೋರಾಶಿ – ಸಮುದ್ರ
- ಪಯೋರುಹ – ನೀರಿನಲ್ಲಿ ಹುಟ್ಟಿದುದು, ಕಮಲ
- ಪಯೋವಾರ್ಧಿ – ಪಯೋಧಿ
- ಪಯೋಷಿಣಿ – ನದಿ; ಪಯೋಷ್ಣೀ
- ಪಯೋಷ್ಣೀ – ಒಂದು ನದಿ
- ಪರ – ಎದುರಿನಲ್ಲಿರುವ; ಬೇರೆಯ; ಪರಲೋಕ
- ಪರಂತಪ – ಶತ್ರುಗಳನ್ನು ತಾಪಗೊಳಿಸುವವ, ಶೂರ
- ಪರಂತಪನ – ತುಮಬ ತಾಪ ನೀಡುವ
- ಪರಂಪರೆ – ಒಂದನ್ನೊಂದು ಹಿಂಬಾಲಿಸುವುದು, ಅಲೆ; ಸಾಲು
- ಪರಕ – ಪರೋಕ್ಷ
- ಪರಕಲಿ(ರಿ)ಸು – ವ್ಯಾಪಿಸು; ಗುಂಪುಗೂಡು; ಮೀರು
- ಪರಕಳತ್ರ – ಪರನಾರಿ
- ಪರಕಾಯಪ್ರವೇಶ – ತನ್ನ ಪ್ರಾಣ ಮತ್ತೊಬ್ಬನ ಶರೀರದಲ್ಲಿ ಸೇರುವಂತೆ ಮಾಡುವ ಸಾಧನೆ
- ಪರಕೆ – ಹರಕೆ, ಆಶೀರ್ವಾದ
- ಪರಕೆಗು(ಗೊ)ಡು – ಹರಕೆ ಒಪ್ಪಿಸು
- ಪರಕೆಗೊಳ್ – ಆಶೀರ್ವಾದವನ್ನು ಹೊಂದು
- ಪರಕ್ಷಿತೀಶ – ಬೇರೆಯ ರಾಜ
- ಪರಕ್ಷ್ಮಾಪ – ಪರಕ್ಷಿತೀಶ
- ಪರಗತಿ – ಕೈವಲ್ಯ
- ಪರಗು – ಭೂಮಿ ಶುದ್ಧಿಗೊಳಿಸು; ಕುಂಟೆ ಹೊಡೆ
- ಪರಚಕ್ರ – ಶತ್ರು ಸಮೂಹ; ಶತ್ರುರಾಜ್ಯ
- ಪರಡು – ಕೆದರು; ಕೆರೆ; ಹರಡು; ಹಿಮ್ಮಡಿ ಗಂಟು
- ಪರತಂತ್ರ – ಬೇರೆಯವನ ಅಧೀನ
- ಪರತತ್ವ – ಶ್ರೇಷ್ಠ ತತ್ವ; ಮೋಕ್ಷ ತತ್ವ
- ಪರತ್ರೆ – ಮೋಕ್ಷ
- ಪರಡಿ – ಸೇವಗೆ
- ಪರಡೆ – ಹರಡೆ ಹಕ್ಕಿ
- ಪರದ – ವ್ಯಾಪಾರಿ, ಹರದ
- ಪರದಾಡು – ವ್ಯಾಪರ ಮಾಡು
- ಪರದಾರ – ಬೇರೆಯವನ ಹೆಂಡತಿ
- ಪರದಾರಗಮನ – ವ್ಯಭಿಚಾರ
- ಪರದಾರಪ್ರಿಯ – ಹಾದರಿಗ
- ಪರದಾರವಿದೂರ – ಅನ್ಯಸ್ತ್ರೀದೂರ
- ಪರದಾರಾತಿಕ್ರಮಣ – ಅನ್ಯಸ್ತ್ರೀಯ ಮೇಲೆ ಎರಗುವುದು
- ಪರದಿ(ತಿ) – ವ್ಯಾಪಾರಿಯ ಹೆಂಡತಿ
- ಪರದು – ವ್ಯಾಪಾರ
- ಪರದುಗೆಯ್ – ವ್ಯಾಪಾರಮಾಡು
- ಪರದುವೋಗು – ವ್ಯಾಪಾರಕ್ಕಾಗಿ ದೂರ ಹೋಗು
- ಪರದೇಸಿ – ಅನ್ಯದೇಶದವನು; ಅನಾಥ
- ಪರದ್ರವ್ಯ – ಅನ್ಯರ ಹಣ
- ಪರಧನ – ಪರದ್ರವ್ಯ
- ಪರನೃಪ – ಶತ್ರುರಾಜ
- ಪರನೃಪಮಂಡಳ – ಶತ್ರುರಾಜನ ಪ್ರದೇಶ
- ಪರಪಕ್ಷ – ಎದುರು ಪಕ್ಷ
- ಪರಪಾರ – ಆಚೆಗಿನ ದಡ
- ಪರಪೀಡೆ – ಇತರರಿಗೆ ತೊಂದರೆ ಕೊಡುವುದು
- ಪರ(ರೆ)ಪು – ಹರಡು; ಆವರಿಸು; ಕೆದರು; ವಿಸ್ತಾರ
- ಪರಪುರುಷ – ಪರಕೀಯ; ಗಂಡನಲ್ಲದವನು
- ಪರಪುಷ್ಟ(ಟ್ಟ) – ಬೇರೆಯವರಿಂದ ಪೋಷಿಸಲ್ಪಟ್ಟ; ಕೋಗಿಲೆ
- ಪರಬಲ – ಶತ್ರು ಸೈನ್ಯ
- ಪರಬಲಾಪಹ – ಅನ್ಯಸೈನ್ಯವನ್ನು ವಿನಾಶಕ
- ಪರಭಾಗ – ಶೋಭೆ; ಮೇಲ್ಮೆ; ಹಿಂಭಾಗ
- ಪರಭಾಗಂಬಡೆ – ಶೋಭೆವಡೆ
- ಪರಭಾಗಂಬೆ¾ು – ಪರಭಾಗಂಬಡೆ
- ಪರಭಾವ – ಇತರರ ಆಲೋಚನೆ
- ಪರಭೂಪಾಲ – ಶತ್ರುರಾಜ
- ಪರಭೃತ – ಪರಪುಷ್ಟ(ಟ್ಟ)
- ಪರಮ – ಉತ್ಕøಷ್ಟ
- ಪರಮಕೋಟಿ – ಪರಾಕಾಷ್ಠೆ; ಆಧಿಕ್ಯ
- ಪರಮಗುಣ – ಶ್ರೇಷ್ಠ ಗುಣ
- ಪರಮಜಾತಿ – (ಜೈನ) ನಾಲ್ಕು ಪರಿವ್ರಾಜಕ
- ವರ್ಗಗಳಲ್ಲಿ ಒಂದು
- ಪರಮಜಿನ – ಶ್ರೇಷ್ಠನಾದ ಜಿನ
- ಪರಮಜಿನೇಂದ್ರ – ಪರಮಜಿನ
- ಪರಮಜ್ಞಾನಿ – ಶ್ರೇಷ್ಠವಾದುದರ ಜ್ಞಾನಪಡೆದವನು
- ಪರಮತ – ಬೇರೆಯ ಮತಧರ್ಮ
- ಪರಮತಪೋಧನ – ತಪಸ್ಸನ್ನೇ ಧನವಾಗುಳ್ಳವನು,
- ಮಹಾತಪಸ್ವಿ
- ಪರಮತಪೋನಿಧಿ – ಪರಮತಪೋಧನ
- ಪರಮದರುಶನಿಕ – ಶ್ರೇಷ್ಠ ದಾರ್ಶನಿಕ
- ಪರಮದೀಕ್ಷೆ – ಶ್ರೇಷ್ಠ ವ್ರತ
- ಪರಮದ್ರೋಹ – ಮಹಾ ದ್ರೊಹಗೈಯುವವನು
- ಪರಮಪದ(ವಿ) – ಶ್ರೇಷ್ಠ ಪದವಿ, ಸ್ಥಾನ
- ಪರಮಪುರುಷಾರ್ಥ – ಅತ್ಯಂತ ದೊಡ್ಡ
- ಪರುರುಷಾಥ್, ಮೋಕ್ಷ
- ಪರಮಪ್ರಮಾಣ – ಅತ್ಯಂತ ಹೆಚ್ಚಿನ ಮಟ್ಟ
- ಪರಮಬ್ರಹ್ಮ – ಅತ್ಯಂತ ಶ್ರೇಷ್ಠ ಬ್ರಹ್ಮ
- ಪರಮಯೋಗಿ – ಮಹಾಯೋಗಿ
- ಪರಮಸುಖ – ಅತ್ಯಂತ ಶ್ರೇಷ್ಠ ಸುಖ
- ಪರಮಸ್ಥಾನ – (ಜೈನ) ಮೋಕ್ಷಸಂಬಂಧಿ ಉತ್ತಮ ಸ್ಥಿತಿಗಳು; ಒಳ್ಳೆಯ ಹುಟ್ಟು, ಉತ್ತಮ ಶ್ರಾವಕನಾಗುವುದು, ತಪಸ್ವಿಯಾಗುವುದು, ದೇವೇಂದ್ರಪದವಿ, ಚಕ್ರವರ್ತಿಪದವಿ, ಅರ್ಹತ್ಪದವಿ, ಮೋಕ್ಷ ಎಂಬ ಏಳು
- ಪರಮಹಂಸ – ಕುಟೀಚಕ, ಬಹೂದಕ, ಹಂಸ, ಪರಮಹಂಸ ಎಂಬ ನಾಲ್ಕು ಪ್ರಕಾರಗಳಲ್ಲಿ ಕೊನೆಯ ವರ್ಗದ ಸನ್ಯಾಸಿ
- ಪರಮಾಕೃತ – ಶ್ರೇಷ್ಠವಾದ ರೂಪು
- ಪರಮಾಗಮ – ಶ್ರೇಷ್ಠ ಶಾಸ್ತ್ರಗ್ರಂಥ; (ಜೈನ) ಜಿನಾಗಮ
- ಪರಮಾಚಾರ್ಯ – ಶ್ರೇಷ್ಠ ಗುರು
- ಪರಮಾಣು – ತುಂಬ ಸೂಕ್ಷ್ಮ ವಸ್ತು; (ಜೈನ) ಪುದ್ಗಲದ್ರವ್ಯದ ಸೂಕ್ಷ್ಮಾತಿಸೂಕ್ಷ್ಮ ಭಾಗ
- ಪರಮಾಣುಮಾರ್ಗ – ಪರಮಾಣುಗಳ ಹಾದಿ,
- ಪರಮಾತ್ಮ – ಶ್ರೇಷ್ಠ ಚೈತನ್ಯ; ದೇವರು; (ಜೈನ) ಜಿನ; ಕೇವಲಜ್ಞಾನಿ
- ಪರಮಾನಂದ – ಮಹದಾನಂದ; ಅದನ್ನು ಪಡೆದವನು
- ಪರಮಾನುಗ್ರಹ – ಅತ್ಯುತ್ಕøಷ್ಠ ಅನುಗ್ರಹ
- ಪರಮಾಯು(ಷ್ಯ) – (ಜೈನ) ಒಂದು ಪೂರ್ವಕೋಟಿ ಪ್ರಮಾಣದ ಜೀವಿತಾವಧಿ
- ಪರಮಾರಾಧ್ಯ – ಪರಮ ಪೂಜ್ಯ ವ್ಯಕ್ತಿ
- ಪರಮಾರ್ಥ – ಮೋಕ್ಷ
- ಪರಮಾರ್ಥಂ – ನಿಶ್ಚಯವಾಗಿ
- ಪರಮಾರ್ಥಂಗೆಯ್ – ನಿರ್ಧಾರಗೊಳಿಸು
- ಪರಮಾರ್ಥತೆ – ಮೋಕ್ಷಸಾಧನೆ
- ಪರಮಾಶೀರ್ವಾಧ – ಅತ್ಯುತ್ಕøಷ್ಟ ಆಶೀರ್ವಾದ
- ಪರಮಾಶ್ಚರ್ಯ – ಭಾರಿ ಅಚ್ಚರಿ
- ಪರಮೆ – ದುಂಬಿ
- ಪರಮೇಶ – ಎಲ್ಲರಿಗಿಂತ ದೊಡ್ಡ ಒಡೆಯ
- ಪರಮೇಶ್ವರ – ಪರಮೇಶ
- ಪರಮೇಶ್ವರಾವತಾರ – ಶಿವನ ಅಂಶಸಂಜಾತ, ಅಶ್ವತ್ಥಾಮ
- ಪರಮೇಶ್ವರಿ – ಎಲ್ಲರಿಗಿಂತ ದೊಡ್ಡ ಒಡತಿ
- ಪರಮೇಷ್ಠಿ – ಬ್ರಹ್ಮ; (ಜೈನ) ತೀರ್ಥಂಕರ
- ಪರಮೋದಯ – ಅತ್ಯುತ್ಕøಷ್ಠವಾದ ಏಳಿಗೆ
- ಪರಮೌದಾರಿಕ – (ಜೈನ) ಘಾತಿಕರ್ಮ ನಾಶವಾಗಿ ಅರ್ಹದವಸ್ಥೆಯಲ್ಲಿರುವ ಜೀವ
- ಪರಯ – ಹರೆಯ, ಯೌವನ
- ಪರರಾಜ – ಶತ್ರುರಾಜ
- ಪರರಾಜಕ – ಶತ್ರುಸಮೂಹ
- ಪರಲ್ – ಕಲ್ಲಿನ ಹರಳು; ರತ್ನ
- ಪರಲೋಕಕ್ರಿಯೆ – ಅಪರಕಾರ್ಯ
- ಪರಲೋಕಸುಖ – ಸ್ವರ್ಗಸುಖ
- ಪರಲೋಕಿ – ಬೇರೆಯ ಲೋಕದ ಜೀವಿ
- ಪರವಧು – ಬೇರೆಯವನ ಹೆಂಡತಿ
- ಪರವರಿ – ನೆಲೆವನೆ
- ಪರವಶ – ಮೂರ್ಛೆ
- ಪರವಶತೆ – ಪರಾಧೀನತೆ; ತಲ್ಲೀನನಾಗಿರುವುದು
- ಪರವಶೆ – ಮೈಮರೆತವಳು
- ಪರವಸ – (ಪರವಶ) ಮೈಮರೆವು
- ಪರವಸಂಗೊಳ್ – ಉದ್ವೇಗಕ್ಕೊಳಗಾಗು
- ಪರವಾದಿ – ಮತ್ತೊಂದು ಮತದ ಪರವಾದವನು
- ಪರವಿದ್ಧ – ಎದುರಿರದ ವಸ್ತುವನ್ನು ಚಿತ್ರಿಸುವುದು
- ಪರವೆಣ್ – ಪರವಧು
- ಪರವೋಗು – ದೂರದೆಡೆಗೆ ಹೋಗು
- ಪರವ್ಯಪದೇಶ – (ಜೈನ) ಶಿಕ್ಷಾವ್ರತದ ಒಂದು ಆಚಾರ; ಪಾತ್ರದಾನಕ್ಕೆ ಅತಿಥಿಯನ್ನು ಕರೆತರಲು ಸಂಬಂಧಿಕನಲ್ಲದವನಿಗೆ ಹೇಳುವುದು
- ಪರವ್ಯೂಹ – ಶತ್ರುಸೈನ್ಯ
- ಪರಶು – ಗಂಡುಗೊಡಲಿ
- ಪರಶುಧರ – ಗಂಡುಗೊಡಲಿಯನ್ನು ಹಿಡಿದವನು, ಪರಶುರಾಮ
- ಪರಶುರಾಮ – ಜಮದಗ್ನಿಯ ಮಗ
- ಪರಶುಶರ – ಕೊಡಲಿಯಾಕಾರದ ಬಾಣ
- ಪರಸಮಯ – ಅನ್ಯ ಮತಧರ್ಮ
- ಪರಸಮಯಿ – ಅನ್ಯ ಮತಧರ್ಮಕ್ಕೆ ಸೇರಿದವನು
- ಪರಸು – ಆಶೀರ್ವದಿಸು; ಹರಕೆ ಮಾಡಿಕೊ; ಪರಶು
- ಪರಸೇವೆ – ಬೇರೆಯವರ ಊಳಿಗ
- ಪರಸ್ಪರೋದೀರೀತ – (ಜೈನ) ನಾರಕರು ಪರಸ್ಪರರು ಕೊಡುವ ದುಃಖ
- ಪರಹಿತ – ಅನ್ಯಹಿತ; ಉಪಕಾರಬುದ್ಧಿ(ಯುಳ್ಳವನು)
- ಪರಹಿತಚರಿತ – ಪರೋಪಕಾರದ ಸ್ವಭಾವದವನು
- ಪರಹಿತವ್ಯಸನಿ – ಪರೋಪಕಾರದಲ್ಲಿ ಅತ್ಯಾಸಕ್ತ
- ಪರಾಂಗಣ – ಅಂಗಳದ ಹಿಂಭಾಗ
- ಪರಾಂಗನಾವಿರತಿವ್ರತ – ಅನ್ಯಸ್ತ್ರೀಯಲ್ಲಿ ಮೋಹಗೊಳ್ಳದಿರುವ ವ್ರತ
- ಪರಾಂಗನಾಸ್ಪøಹೆ – ಅನ್ಯಸ್ತ್ರೀಯಲ್ಲಿನ ಆಸಕ್ತಿ
- ಪರಾಂಗನೆ – ಅನ್ಯಸ್ತ್ರೀ
- ಪರಾಕ್ರಮ – ಶೌರ್ಯ
- ಪರಾಗ – ಹೂವಿನ ಧೂಳಿ
- ಪರಾಗಪಾಂಸು – ಪರಾಗ
- ಪರಾಙ್ಮುಖ – ಬೇರೆಡೆಗೆ ಮುಖ ತಿರುಗಿಸಿದವನು
- ಪರಾಜಿತ – ಸೋತುಹೋದ
- ಪರಾಧೀನ – ಬೇರೆಯವರ ಅಧೀನದಲ್ಲಿರುವ
- ಪರಾಭವ – ಸೋಲು, ಅವಮಾನ
- ಪರಾಭವಿಸು – ಸೋಲಿಸು; ಅವಮಾನಿಸು
- ಪರಾಭೂತ – ಸೋತವನು
- ಪರಾಭೂತಿ – ಸೋಲು, ಅವಮಾನ
- ಪರಾಮರ್ಶೆ – ವಿವೇಚನೆ
- ಪರಾಮೃಷ್ಟ – ನಾಶವಾದುದು
- ಪರಾಯಣ – ತತ್ಪರ
- ಪರಾರ್ಜಿತ – ಬೇರೆಯವರಿಗೆ ದೊರಕಿದ
- ಪರಾರ್ಥಚರಿತ – ಅನ್ಯರ ಹಿತದಲ್ಲಿ ಆಸಕ್ತ
- ಪರಾರ್ಥಪರ – ಪರಾರ್ಥಚರಿತ
- ಪರಾರ್ಥಸ್ಪøಹೆ – ಅನ್ಯರ ಹಿತದಲ್ಲಿ ಆಸಕ್ತಿ
- ಪರಾರ್ಥಹರ – ಸತ್ರುಗಳ ಸಂಪತ್ತು ದೋಚುವವನು
- ಪರಾರ್ಥಾಪಹಾರ – ಅನ್ಯರ ಸಂಪತ್ತು ಕದಿಯುವವನು
- ಪರಾವರ್ತನ – ಸುತ್ತುಹಾಕುವುದು; ಬದಲಾವಣೆ
- ಪರಾವೃತ್ತವದನ – ಮುಖ ತಿರುಗಿಸಿಕೊಂಡ(ವನು)
- ಪರಾಶರ – ವ್ಯಾಸಮುನಿಯ ತಂದೆ, ಸ್ಮøತಿಕಾರ
- ಪರಾಸು – ಪರ+ಅಸು, ಪ್ರಾಣ ಹೋದ
- ಪರಿ – ಹರಿ, ಮುಂದೆ ಸರಿ; ರೀತಿ
- ಪರಿಕಣಿ – ಹರಿಯುವ ಜಾಡು, ಕಾಲುವೆ
- ಪರಿಕರ – ಸಂಬಂಧಿಸಿದ ಸಾಮಗ್ರಿ; ಸಮೀಪ; ಸಮೂಹ-
- ಪರಿಕರಿತ – ಒಡಗೂಡಿದ
- ಪರಿಕಲಿತ – ಒಗ್ಗೂಡಿದ
- ಪರಿಕಲಿಸು – ಕೂಡು, ಸೇರು
- ಪರಿಕಲ್ಪಂಗೆಯ್ – ನಿರ್ಧರಿಸು
- ಪರಿಕಲ್ಪಿತ – ನಿರ್ಧಾರಗೊಂಡ
- ಪರಿಕಲ್ಪಿಸು – ಪರಿಕಲ್ಪಂಗೆಯ್
- ಪರಿಕಾಲ್ – ಕಾಲುವೆ
- ಪರಿಕಾ¾ – ಓಡುವವನು; ದೂತ
- ಪರಿಕಿಸು – (ಪರೀಕ್ಷಿಸು) ಪರಿಶೀಲಿಸು
- ಪರಿಕೃತ – ಸುತ್ತುವರಿಯಲ್ಪಟ್ಟ
- ಪರಿಕ್ರಮ – ಸುತ್ತುವುದು, ಸಂಚಾರ
- ಪರಿಕ್ರಮಸಂದಿ – ಶತ್ರುವಿನೊಡನೆ ಮಾಡಿಕೊಳ್ಳುವ ಹದಿನಾರು ಬಗೆಯ ಸಂಧಿಗಳಲ್ಲಿ ಒಂದು; ಶತ್ರುವಿಗೆ ಅರ್ಧ ಸಂಪತ್ತಿತ್ತು ಮಾಡಿಕೊಳ್ಳುವ ಸಂಧಾನ
- ಪರಿಕ್ರುದ್ಧ – ಬಹಳ ಕೋಪಗೊಂಡ
- ಪರಿಕ್ಷಯ – ವಿನಾಶ
- ಪರಿಕ್ಷುಬ್ಧ – ಅಲ್ಲೋಲಕಲ್ಲೋಲ
- ಪರಿಕ್ಷೇಪ – ಸುತ್ತುಗಟ್ಟುವುದು
- ಪರಿಖಂಡಿತ – ಸಂಪೂರ್ಣ ಹಾಳಾದ
- ಪರಿಖಚಿತ – ಸೇರಿಸಿದ
- ಪರಿಖಾಚಕ್ರ – ಕಂದಕದ ಸುತ್ತು
- ಪರಿಖಾತ – ಕಂದಕ
- ಪರಿಖಾವಾರಿ – ಕಂದಕದ ನೀರು
- ಪರಿಖೆ – ಪರಿಖಾತ
- ಪರಿಗತ – ಆವರಿಸಲ್ಪಟ್ಟ; ತುಂಬಿದ
- ಪರಿಗೃಹೀತ – ಸ್ವೀಕರಿಸಲಾದ
- ಪರಿಗೆ – ಗುರಾಣಿ, ಅಡ್ಡಣ
- ಪರಿಗೆಕಾ¾ – ಗುರಾಣಿಯೋಧ
- ಪರಿಗೆಡು – ಹದಗೆಡು, ರೀತಿಗೆಡು
- ಪರಿಗೊಳ್ – ಪಲಾಯನ ಮಾಡು; ಹರಡು
- ಪರಿಗ್ರಹ – ಸ್ವೀಕರಣ; ಸಂಸಾರ; (ಜೈನ) ಮಮತೆ
- ಪರಿಘ – ಅಗುಳಿ; ಕಬ್ಬಿಣದ ಒಂದು ಆಯುಧ
- ಪರಿಘೂರ್ಣಿತ – ಮೊರೆಯುತ್ತಿರುವ
- ಪರಿಘೋಷ – ಮೊರೆತ
- ಪರಿಚಯ – ಸಲಿಗೆ
- ಪರಿಚಯಂಬಡೆ – ಸೇರು
- ಪರಿಚರ – ತಿರುಗಾಟ
- ಪರಿಚರ್ಯ(ರ್ಯೆ) – ಸೇವೆ
- ಪರಿಚಾರಕ – ಸೇವೆ (ಮಾಡುವವನು)
- ಪರಿಚಾರಕತ್ವ – ಊಳಿಗ
- ಪರಿಚಾರಕಿ – ಸೇವಕಿ
- ಪರಿಚಾರಿಕೆ – ಪರಿಚಾರಕಿ
- ಪರಿಚಿತ – ತುಂಬಿದ; ತಿಳಿದ
- ಪರಿಚುಂಬಿಸು – ಮುತ್ತಿಡು
- ಪರಿಚೆ(ಜೆ) – ¸ಸುಗಂಧ ದ್ರವ್ಯ; ಅನುಲೇಪನ
- ಪರಿಚೋದಿಸು – ಮುನ್ನುಗ್ಗಿಸು
- ಪರಿಚ್ಛದ – ಮುಸುಕು
- ಪರಿಚ್ಛೇದ – ಕತ್ತರಿಸುವುದು; ನಿರ್ಣಯ, ನಿಷ್ಕರ್ಷೆ
- ಪರಿಚ್ಛೇದಂಗೆಯ್ – ತುಂಡರಿಸು; ನಿಧ್ರಿಸು
- ಪರಿಚ್ಛೇದಿ – ನಿರ್ಧರಿಸಿದವನು
- ಪರಿಚ್ಛೇದಿಸು – ಪರಿಚ್ಛೇದಂಗೆಯ್
- ಪರಿಚ್ಯುತ – ಬಿದ್ದ(ವನು); ಚೆಲ್ಲಿಹೋದ
- ಪರಿಜನ – ಸೇವಕಜನ
- ಪರಿಜಪನಂಗೆಯ್ – ಜಪ ಮಾಡು
- ಪರಿಜು – ಆಕಾರ; ಪ್ರತಿಮೆ; ರೀತಿ, ಬಗೆ; ಭಂಗಿ; ವೇಷ
- ಪರಿಠವಿಸು – ನೇಮಿಸು
- ಪರಿಡೋಣಿ – ನೀರು ಹರಿಯುವ ದೋಣಿ
- ಪರಿಣತ – ಪಕ್ವವಾದ; ಸಮರ್ಥ; ನಿಪುಣ
- ಪರಿಣತಮತಿ – ಪಕ್ವ ಬುದ್ಧಿ
- ಪರಿಣತವಯಸ – ಮುದುಕ
- ಪರಿಣತಿ – ಪಾಂಡಿತ್ಯ; ಬಗ್ಗುವಿಕೆ
- ಪರಿಣತಿವಡೆ – ಪಕ್ವತೆಯನ್ನು ಪಡೆ
- ಪರಿಣತಿಸುಖ – ಅಂತಿಮ ಸುಖ; ಗರಿಷ್ಠ ಸುಖ
- ಪರಿಣತೆ – ಪಾಂಡಿತ್ಯ
- ಪರಿಣದ್ಧ – ಬಿಕ್ಕಟ್ಟಾದ
- ಪರಿಣಯನ – ಮದುವೆ
- ಪರಿಣಯನಗೃಹ – ಮದುವೆ ಮಂಟಪ
- ಪರಿಣಯನೋತ್ಸವ – ಮದುವೆಯ ಸಮಾರಂಭ
- ಪರಿಣಯೋತ್ಸವ – ಪರಿಣಯನೋತ್ಸವ
- ಪರಿಣಾಮಪಥ್ಯ – ಕೊನೆಗೆ ಮಂಗಳಕರವಾದ
- ಪರಿಣಾಮರಮಣೀಯ – ಕೊನೆಗೆ ಚಂದವಾಗುವುದು
- ಪರಿಣಾಮಶುದ್ಧಿ – (ಜೈನ) ಮನಃಪರಿಪಾಕ
- ಪರಿಣಾಹ – ವೈಶಾಲ್ಯ, ಹರಹು
- ಪರಿಣಿಚಿತ – ತುಂಬಿಕೊಂಡ
- ಪರಿಣೀತ – ಸುತ್ತುವರಿದ; ಮದುವೆಯಾದ
- ಪರಿತಂ – ಎದುರಾಗಿ
- ಪರಿತಪ್ತ – ಚೆನ್ನಾಗಿ ಕಾದ; ದುಃಖಗೊಂಡ
- ಪರಿತರ್ – ಧಾವಿಸು; ಆಗಮಿಸು; ಹರಿದು ಬರು
- ಪರಿತಾಪ – ಬೇಗುದಿ; ಕಾವು
- ಪರಿತಾಪಿತ – ಬೇಗುದಿಗೊಂಡ
- ಪರಿತುಷ್ಟ – ತೃಪ್ತಿವಡೆದ
- ಪರಿತುಷ್ಟಿ – ಪೂರ್ಣ ತೃಪ್ತಿ
- ಪರಿತೃಪ್ತ – ಸಂತೃಪ್ತ
- ಪರಿತ್ಯಕ್ತ – ತ್ಯಜಿಸಲ್ಪಟ್ಟ
- ಪರಿತ್ಯಜನ – ಬಿಟ್ಟುಬಿಡುವುದು
- ಪರಿತ್ಯಾಗ – ಪರಿತ್ಯಜನ
- ಪರಿತ್ರಾಸ – ಭಯ
- ಪರಿದಿಟ್ಟಿ – ಚಂಚಲ ದೃಷ್ಟಿ
- ಪರಿದೇವನ – ಗೋಳಾಟ
- ಪರಿಧಾನ – ಉಡುವ ಬಟ್ಟೆ
- ಪರಿಧಾವನ – ಧಾವಿಸುವುದು
- ಪರಿಧಿ – ಸುತ್ತುಗೋಡೆ; ಪ್ರಭಾಮಂಡಲ
- ಪರಿಧೂತ – ತ್ಯಜಿಸಲ್ಪಟ್ಟ
- ಪರಿಧೌತ – ಚೆನ್ನಾಗಿ ತೊಳೆದ
- ಪರಿನಾಳ – ನೀರು ಹರಿಯುವ ಕಾಲುವೆ
- ಪರಿನಾಳಿಕೆ – ಪರಿನಾಳ
- ಪರಿನಿರ್ಮಿತ – ಚೆನ್ನಾಗಿ ರಚಿತವಾದ
- ಪರಿನಿರ್ವಾಣ – (ಜೈನ) ಅರ್ಹಂತನ ದೇಹಾವಸಾನ
- ಪರಿನಿರ್ವಾಣಕಲ್ಯಾಣ – (ಜೈನ) ಅರ್ಹಂತನ ದೇಹಸಂಸ್ಕಾರ; ಪಂಚಕಲ್ಯಾಣಗಳಲ್ಲಿ ಕೊನೆಯದು
- ಪರಿನಿರ್ವಾಣಕ್ರಿಯೆ – (ಜೈನ) ಅರ್ಹಂತನ ದೇಹಾವಸಾನ ಸಮಯದಲ್ಲಿ ಮಾಡುವ ಉತ್ಸವ
- ಪರಿನಿರ್ವಾಣಕ್ಷೇತ್ರ – (ಜೈನ) ಅರ್ಹಂತನ ದೇಹಾವಸಾನದ ಜಾಗ
- ಪರಿನಿರ್ವಾಣಪೂಜೆ – (ಜೈನ) ಪರಿನಿರ್ವಾಣಕ್ರಿಯೆ
- ಪರಿನಿರ್ವಾಣಮಹೋತ್ಸವ – (ಜೈನ) ಪರಿನಿರ್ವಾಣಕಲ್ಯಾಣ
- ಪರಿನಿರ್ವೃತಿ – ಪರಿನಿರ್ವಾಣ
- ಪರಿನಿರ್ವೃತಿಭೂಮಿ – ಪರಿನಿರ್ವಾಣಕ್ಷೇತ್ರ
- ಪರಿನಿರ್ವೇಗ – ಪರಮ ವೈರಾಗ್ಯ
- ಪರಿನಿಷ್ಕ್ರಮಣ – (ಜೈನ) ತೀರ್ಥಂಕರನು ಸಂಸಾರದಲ್ಲಿ ವಿರಕ್ತಿಯನ್ನು ಹೊಂದಿ ತಪಸ್ಸಿಗೆ ಹೋಗುವುದು
- ಪರಿನಿಷ್ಕ್ರಮಣಕಲ್ಯಾಣ – (ಜೈನ) ಪಂಚಕಲ್ಯಾಣಗಳಲ್ಲಿ ಒಂದು; ತೀರ್ಥಂಕರನು ತಪಸ್ಸಿಗೆ ತೆರಳುವ ಸಂದರ್ಭದಲ್ಲಿ ನಡೆಸುವ ಉತ್ಸವ
- ಪರಿನಿಷ್ಕ್ರಾಂತಿಮಹೋತ್ಸವ – ಪರಿನಿಷ್ಕ್ರಮಣಕಲ್ಯಾಣ
- ಪರಿನೀರ್ – ಹರಿಯುವ ನೀರು; ಕಾಲುವೆ
- ಪರಿನ್ಯಸ್ತ – ಇಡಲ್ಪಟ್ಟ
- ಪರಿಪಂಥಿ – ಶತ್ರು; ದ್ವೇಷಿಸುವ
- ಪರಪಂಥಿನಿ – ಅಡ್ಡಿಯಾದವಳು
- ಪರಿಪಂಥಿಭಾವ – ವಿರೋಧಿಭಾವ
- ಪರಿಪಕ್ವ – ಚೆನ್ನಾಗಿ ಬೆಂದ; ಮಾಗಿದ
- ಪರಿಪಠನ – ಚೆನ್ನಾಗಿ ಓದುವುದು
- ಪರಿಪಠಿತ – ಚೆನ್ನಾಗಿ ಓದಿದ, ಹೇಳಿದ
- ಪರಿಪಡು – ಧಾವಿಸು
- ಪರಿಪಥಿಕ – ಸುತ್ತಾಡುವ, ತಿರುಗಾಡುವ
- ಪರಿಪಾಂಡು(ರ) – ಅಚ್ಚ ಬಿಳುಪಾದ
- ಪರಿಪಾಂಸು – ಆವರಿಸಿದ ಧೂಳು
- ಪರಿಪಾಕ – ಕೊನೆಯ ಪರಿಣಾಮ
- ಪರಿಪಾಕಪಥ್ಯ – ಹಿತಕರ ಪರಿಣಾಮವುಳ್ಳುದು
- ಪರಿಪಾಟಿ – ಅಚ್ಚುಕಟ್ಟು
- ಪರಿಪಾಟುದಪ್ಪು – ಕ್ರಮವಿಹೀನವಾಗು
- ಪರಿಪಾತನ – ಸಂಪೂರ್ಣ ವಿನಾಶ
- ಪರಿಪಾಲನ – ಕಾಪಾಡುವುದು; ಕೊಟ್ಟ ಮಾತನ್ನು ನೆರವೇರಿಸುವುದು
- ಪರಿಪಾಲಿತ – ಸಂರಕ್ಷಿತವಾದ
- ಪರಿಪಾಲಿಸು – ಕಾಪಾಡು
- ಪರಿಪೀಡನ – ಹಿಂಸಿಸುವುದು
- ಪರಿಪೀತ – ಕಡು ಹಳದಿ
- ಪರಿಪೀತಾಸವ – ಹೆಂಡ ಕುಡಿದವನು
- ಪರಿಪುಷ್ಟ – ಚೆನ್ನಾಗಿ ಪೋಷಣೆಗೊಂಡ
- ಪರಿಪೂಜಿಸು – ಚೆನ್ನಾಗಿ ಪೂಜಿಸು
- ಪರಿಪೂತ – ತುಂಬ ಪವಿತ್ರವಾದ
- ಪರಿಪೂರಿತ – ಆವರಿತವಾದ
- ಪರಿಪೂರಿಸು – ಆವೃತಗೊಳ್ಳು
- ಪರಿಪೂರ್ಣ – ಪೂರ್ತಿಯಾದ; ತುಂಬಿದ
- ಪರಿಪೂರ್ಣಚಂದ್ರ – ಹುಣ್ಣಿಮೆ ಚಂದ್ರ
- ಪರಿಪೂರ್ಣಾಂಗಿ – ದೋಷರಹಿತವಾದ ದೇಹವುಳ್ಳವಳು
- ಪರಿಪೂರ್ಣಾವಧಿ – ಪೂರ್ತಿಯಾದ ಕಾಲ
- ಪರಿಪೂರ್ಣೇಂದು – ಪರಿಪೂರ್ಣಚಂದ್ರ
- ಪರಿಪ್ರಮಾಣ – ಅಳತೆ
- ಪರಿಪ್ಲವ – ಚಂಚಲ
- ಪರಿಪ್ಲಾವಿತ – ತೇಲಾಡುವ
- ಪರಿಬೃಢ – ಮುಖ್ಯನಾದವನು
- ಪರಿಭವ – ತಿರಸ್ಕಾರ; ಅವಮಾನ; ಸೋಲು
- ಪರಿಭವಂಬಡಿಸು – ಅವಮಾನಿಸು
- ಪರಿಭವಂಬಡು – ಅವಮಾನಗೊಳ್ಳು
- ಪರಿಭವಿಸು – ತಿರಸ್ಕರಿಸು; ಅವಮಾನಿಸು; ಸೋಲಿಸು
- ಪರಿಭಾವಿಸು – ಯೋಚಿಸು; ಸೂಕ್ಷ್ಮವಾಗಿ ನೋಡು
- ಪರಿಭಾಷಣ – ಮಾತನಾಡುವುದು
- ಪರಿಭಾಷಿತ – ಹೇಳಲ್ಪಟ್ಟ
- ಪರಿಭಾಷೆ – ವಿವರಣೆ
- ಪರಿಭಾಸಿ – ಕಾಂತಿಯುಕ್ತವಾದ
- ಪರಿಭೂತ – ತಿರಸ್ಕøತವಾದ
- ಪರಿಭೃತ – ಸಂರಕ್ಷಿತ
- ಪರಿಭೋಗ – ಸಂತೋಷ
- ಪರಿಭ್ರಮ(ಣ) – ಸುತ್ತಾಡುವಿಕೆ; ತಿರುಗುವಿಕೆ
- ಪರಿಭ್ರಮಣಂಗೆಯ್ – ತಿರುಗು; ಅಲೆ
- ಪರಿಭ್ರಮಿಸು – ಪರಿಭ್ರಮಣಂಗೆಯ್
- ಪರಿಮರ್ದಿಸು – ಜಜ್ಜು
- ಪರಿಮಲಿ(ಳಿ)ತ – ಒಳ್ಳೆಯ ವಾಸನೆಯುಳ್ಳ
- ಪರಿಮಳವಾರಿ – ಸುವಾಸಿತ ನೀರು
- ಪರಿಮಳಶಾಳಿ – ಸುಗಂಧಭರಿತ ಬತ್ತ; ಕಮ್ಮಗಡಲೆ ಬತ್ತ
- ಪರಿಮಳಾಂಬು – ಪರಿಮಳವಾರಿ
- ಪರಿಮಾಣಪರಿಗ್ರಹವ್ರತ – (ಜೈನ) ಆವಶ್ಯಕವಾದಷ್ಟು ಮಾತ್ರ ಹೊಂದಿರುವ ವ್ರತ
- ಪರಿಮಿತ – ಮಿತಿಯಾದ
- ಪರಿಮಿತಪರಿಗ್ರಹ – ಪರಿಮಾಣಪರಿಗ್ರಹವ್ರತ
- ಪರಿಮಿಶ್ರಿತ – ಚೆನ್ನಾಗಿ ಬೆರಕೆಗೊಂಡ-
- ಪರಿಮಿಳತ್ – ಸಡಗರ
- ಪರಿಮುತ್ತುಗೊಳ್ – ಆವರಿಸು
- ಪರಿಮೃತ – ಸತ್ತುಹೋದವನು
- ಪರಿಮ್ಲಾನ – ಹೆಚ್ಚು ಕಳೆಗುಂದಿದ
- ಪರಿಮ್ಲಾನತೆ – ಕಳೆಗುಂದುವಿಕೆ
- ಪರಿಯ(ಯಾ)ಣ – ಹರಿವಾಣ, ತಟ್ಟೆ
- ಪರಿಯಷ್ಟಿ – ಶುಶ್ರೂಷೆ
- ಪರಿಯಳ – ಪರಿಯ(ಯಾ)ಣ
- ಪರಿಯಿಡು – ರಭಸದಿಂದ ಮುನ್ನುಗ್ಗು
- ಪರಿಯಿಸು – ಓಡಿಸು
- ಪರಿಯುಕ್ತ – ಚೆನ್ನಾಗಿ ಸೇರಿದ
- ಪರಿರಂಜಿತ – ಚೆನ್ನಾಗಿ ಹೊಳೆಯುವ
- ಪರಿರಂಭ(ಣ) – ಆಲಿಂಗನ
- ಪರಿರಂಭಿಸು – ಅಲಿಂಗಿಸಿಕೊ
- ಪರಿರಕ್ಷಣ – ಸಂರಕ್ಷಣೆ
- ಪರಿರಕ್ಷಿಸು – ಸಂರಕ್ಷಿಸು
- ಪರಿಲಂಬ – ವಿಳಂಬ; ಸಲಕರಣೆ
- ಪರಿಲಂಬಿ – ತೂಗಾಡುತ್ತಿರುವ
- ಪರಿಲಬ್ಧ – ಸಂಪಾದಿಸಿದ
- ಪರಿಲಿಪ್ತ – ಚೆನ್ನಾಗಿ ಬಳಿದ
- ಪರಿವಡಿಗೆಯ್ – ಅನುಕ್ರಮವಾಗಿ ಪಠಿಸು
- ಪರಿವರ್ಣನ – ಒಳ್ಳೆಯ ಬಣ್ಣನೆ
- ಪರಿವರ್ತನ – ಸುತ್ತುವಿಕೆ; ಬದಲಾವಣೆ
- ಪರಿವರ್ತಿತ – ಬದಲಾವಣೆಗೊಂಡ
- ಪರಿವರ್ತಿಸು – ಬದಲಾಯಿಸು
- ಪರಿವರ್ಧಕ – ಅಭಿವೃದ್ಧಿಗೊಳ್ಳುವುದು; ಕುದುರೆಯನ್ನು ಸಾಕುವವನು
- ಪರಿವಾದ – ಅಪವಾದ; ನಿಂದೆ
- ಪರಿವಾದಕ – ನಿಂದಕ; ವಾದ್ಯಗಾರ
- ಪರಿವಾದಿನಿ – ಏಳು ತಂತಿಗಳ ವೀಣೆ
- ಪರಿವಾರ – ಸುತ್ತಲಿನ ಜನ
- ಪರಿವಾರದೇವಿ – (ಜೈನ) ಕಲ್ಪಾದಿಗಳ ಇಂದ್ರಸೇವೆ ಮಾಡುವ ಸ್ತ್ರೀ
- ಪರಿವಾರಾಂಗನೆ – ಸೇವಕಿ
- ಪರಿವಾರಿಕೆ – ಪರಿವಾರದೇವಿ
- ಪರಿವಾರಿಸು – ಸೇವೆಗೈ
- ಪರಿವಾಸ – ನೆಲೆ ನಿಲ್ಲುವಿಕೆ
- ಪರಿವಾಹ – ಹರಿಯುವುದು
- ಪರಿವಿಡಿ – ಅನುಕ್ರಮ, ಪರಂಪರೆ
- ಪರಿವಿ(ವ)ಡಿಗೆಯ್ – ಕ್ರಮವಾಗಿ ಹೇಳು, ಓದು; ಕ್ರಮಗೊಳಿಸು; ಉಪಕ್ರಮಿಸು
- ಪರಿವಿಷ್ಟ – ಸುತ್ತುವರಿದ
- ಪರಿವೀಕ್ಷಿಸು – ಚೆನ್ನಾಗಿ ನೋಡಿ
- ಪರಿವೀಜನ – ಗಾಳಿ ಬೀಸುವಿಕೆ
- ಪರಿವೃಢ – ಒಡೆಯ; ಶ್ರೇಷ್ಠವಾದ
- ಪರಿವೃತ – ಆವೃತಗೊಂಡ
- ಪರಿವೃತ್ತ – ದುಂಡಾದ
- ಪರಿವೆಸ – ಪರಿಚಾರಿಕೆ
- ಪರಿವೆಸವೋಗು – ಪರಿಚಾರಿಕೆ ಮಾಡು
- ಪರಿವೇದಿ – ಜ್ಞಾನಿ
- ಪರಿವೇಷ – ಸುತ್ತುವರಿಯುವಿಕೆ
- ಪರಿವೇಷಂಗೊಳ್ – (ಪ್ರಭಾಮಂಡಲದಿಂದ) ಸುತ್ತುವರಿ
- ಪರಿವೇಷ್ಟಿತ – ಸುತ್ತಲ್ಪಟ್ಟ
- ಪರಿವೇಷ್ಟಿಸು – ಬಳಸು, ಸುತ್ತುಗಟ್ಟು
- ಪರಿವೊಟ್ಟೆಯವರ್ – ಒಂಟೆಯ ಮೇಲೆ ಸಾಗುವ ದೂತರು
- ಪರಿವೊನಲ್ – ಹರಿಯುವ ಹೊಳೆ
- ಪರಿವ್ರಾಜಕ – ಪರ್ಯಟನಕಾರ; ಸನ್ಯಾಸಿ
- ಪರಿವ್ರಾಜಿಕೆ – ಸನ್ಯಾಸಿನಿ, ವಿರಕ್ತೆ
- ಪರಿಶಂಕೆ – ಹೆದರಿಕೆ
- ಪರಿಶೇಷ – ಉಳಿಕೆ
- ಪರಿಶ್ರಮ – ದಣಿವು
- ಪರಿಶ್ರಾಂತ – ದಣಿದ
- ಪರಿಶ್ರಾಂತೆ – ಬಳಲಿದವಳು
- ಪರಿಷಜ್ಜನ – ಪರಿಷತ್+ಜನ, ಸಭೆಯ ಜನ
- ಪರಿಷತ್ – ಆಸ್ಥಾನ
- ಪರಿಷದ್ವಲಯ – ಸಭೆ
- ಪರಿಷನ್ಮಂಡಲ – ಪರಿಷದ್ವಲಯ
- ಪರಿಷೇಕ – ಸುತ್ತು ಕಟ್ಟುವಿಕೆ; ಸಿಂಪಡಿಸುವಿಕೆ
- ಪರಿಷ್ಕøತಿ – ಆಭರಣ
- ಪರಿಷ್ವಂಗ – ಅಪ್ಪುಗೆ
- ಪರಿಸಂಖ್ಯೆ – ಆವೃತ್ತಿ; ಎಣಿಕೆ; ಮೊತ್ತ
- ಪರಿಸಂಭ್ರಮ – ಸಡಗರ
- ಪರಿಸಮಾಪ್ತ – ಮುಗಿಸಿದ; ಕೊನೆಗಂಡ
- ಪರಿಸಮಾಪ್ತಿ – ಮುಗಿವು
- ಪರಿಸರ – ಸಮೀಪ; ಪ್ರದೇಶ
- ಪರಿಸೂತ್ರ – ಮಧ್ಯಭಾಗ
- ಪರಿಸ್ಖಲನ – ಹೊಡೆತ, ತಾಗುವಿಕೆ
- ಪರಿಸ್ಖಲಿತ – ಜಾರಿ ಬಿದ್ದ
- ಪರಿಸ್ತರಣ – ಸುತ್ತ ಹಾಸುವುದು
- ಪರಿಸ್ಪಂದ(ನ) – ಅಲುಗಾಟ, ಕಂಪನ
- ಪರಿಸ್ಫುರಿತ – ಹೊಮ್ಮಿದ; ಹೊಳೆಯುವ
- ಪರಿಸ್ರವಣಿ – ಮದ್ಯ
- ಪರಿಸ್ರುತಿ – ಪರಿಸ್ರವಣಿ
- ಪರಿಹರಿಸು – ಹೋಗಲಾಡಿಸು; ತ್ಯಜಿಸು
- ಪರಿಹರ್ತವ್ಯ – ದೂರಸರಿಸಬೇಕಾದ; ತ್ಯಜಿಸಬೇಕಾದ
- ಪರಿಹಸಿತ – ನಗುವಿಗೀಡಾದ
- ಪರಿಹಾರವಿಶುದ್ಧಿ(ಕ್ರಿಯೆ) – (ಜೈನ) ಸಮ್ಯಗ್ದರ್ಶನದ ವಿಶುದ್ಧಿ
- ಪರಿಹಾರಶುದ್ಧಿ – ಪರಿಹಾರವಿಶುದ್ಧಿ
- ಪರಿಹಾರ್ಯ – ತೊರೆಯಬೇಕಾದ
- ಪರಿಹಾಸ – ಹಾಸ್ಯ, ವಿನೋದ
- ಪರಿಹಾಸಕೇಳಿ – ವಿನೋದದಾಟ
- ಪರಿಹೃತ – ನಿವಾರಣೆಗೊಂಡ; ತ್ಯಜಿಸಲಾದ
- ಪರೀಕ್ಷಕ – ಪರೀಕ್ಷೆ ಮಾಡುವವನು
- ಪರೀಕ್ಷಿಸು – ಪರಿ+ಈಕ್ಷಿಸು, ಚೆನ್ನಾಗಿ ನೋಡಿ
- ಪರೀಕ್ಷೆ – ಸೂಕ್ಷ್ಮ ಪರಿಶೀಲನೆ
- ಪರೀತ – ಸುತ್ತಲ್ಪಟ್ಟ; ಒಳಗೊಂಡಿರುವ; ದೋಣಿ
- ಪರೀಷಹ – (ಜೈನ) ತಪಶ್ಚರಣಕ್ಕೆ ಇರುವ ಇಪ್ಪತ್ತೆರಡು ಬಗೆಯ ಅಡ್ಡಿಗಳು: ಹಸಿವು, ಬಾಯಾರಿಕೆ, ಚಳಿ, ಉಷ್ಣ, ಸೊಳ್ಳೆ ಮುಂತಾದವುಗಳ ಕಚ್ಚುವಿಕೆ, ಬತ್ತಲೆಯಿರುವುದರಿಂದಾಗುವ ತೊಂದರೆಗಳು, ಅರತಿ, ಸ್ತ್ರೀವಿರಹ, ಸಂಚಾರಬಾಧೆ, ಶಯ್ಯಾಬಾಧೆ, ಆಸನಬಾಧೆ, ಬೈಗುಳ, ಯಾಚನೆಯಿಂದಾಗುವ ತೊಂದರೆಗಳು, ಹೊಡೆತ, ಭಿಕ್ಷೆ ದೊರೆಯದ ಖೇದ, ತಪಸ್ಸಿಗೆ ತಕ್ಕ ಫಲ ಸಿಕ್ಕದಿರುವುದು, ರೋಗ, ಮುಳ್ಳುಕಲ್ಲುಗಳಿಂದ ತೊಂದರೆ, ಅಹಂಕಾರ, ಅಜ್ಞಾನದ ಕೊರಗು, ಸ್ನಾನವಿರದ್ದರಿಂದಾಗುವ ಬಾಧೆ, ಜನರಿಂದ ಪುರಸ್ಕಾರ ದೊರೆಯದಿರುವುದು
- ಪರೀಷಹಜಯ – (ಜೈನ) ಪರೀಷಹಗಳನ್ನು ಮೀರುವುದು
- ಪರುಷ – ಕಠಿಣವಾದ; ನಿಷ್ಠುರವಾದ
- ಪರುಷಾಟವಿ – ಘೋರ ಅರಣ್ಯ
- ಪರುಷೇಕ್ಷಣ – ಭಯಂಕರ ನೋಟ
- ಪರುಸ(ನ) – ಸ್ಪರ್ಶ(ನ), ಸೋಂಕು
- ಪರುಸ(ಷ)ವೇದಿ – (ಸ್ಪರ್ಶವೇದಿ) ಲೋಹವನ್ನು ಚಿನ್ನವನ್ನಾಗಿಸುವ ಕಲ್ಲು; ಸ್ಪರ್ಶಶಿಲೆ
- ಪರೆ – ಹರಡು, ವಿಸ್ತರಿಸು
- ಪರೆಯಿಸು – ಹಬ್ಬಿಸು; ಹೋಗಲಾಡಿಸು
- ಪರೇಂಗಿತಜ್ಞ – ಇತರರ ಅಭಿಪ್ರಾಯವನ್ನು ತಿಳಿಯಬಲ್ಲವನು
- ಪರೇತವನ – (ಪ್ರೇತವನ) ಶ್ಮಶಾನ
- ಪರೋಕ್ಷ – ಅಗೋಚರ; ದೃಷ್ಟಿದೂರ
- ಪರೋಪಕಾರ – ಇತರರಿಗೆ ಮಾಡುವ ಸಹಾಯ
- ಪರ್ಚು – ಪಿಸುಗುಡು; ಗುಟ್ಟು
- ಪರ್ಜನ್ಯ – ಮಳೆ; ಮಳೆಯ ಒಡೆಯ, ಇಂದ್ರ
- ಪರ್ಜನ್ಯಗರ್ಜನ – ಗುಡುಗು
- ಪರ್ಣ – ಎಲೆ
- ಪರ್ಣಪುಟ(ಕೆ) – ಎಲೆಯಿಂದ ಮಾಡಿದ ದೊನ್ನೆ
- ಪರ್ಣಲಘು(ವಿದ್ಯೆ) – (ಜೈನ) ಶರೀರವನ್ನು ಎಲೆಯಂತೆ ಹಗುರಮಾಡಿಕೊಳ್ಳುವ ವಿದ್ಯೆ
- ಪರ್ದು – ಹದ್ದು, ಗೃಧ್ರ
- ಪರ್ಪರಿಕೆ – ಕರ್ಕಶತೆ; ದಿಟ್ಟತನ
- ಪರ್ಪರಿಕೆಗಿಡು – ಕರ್ಕಶತೆ ಹೋಗು, ಮೃದುವಾಗು
- ಪರ್ಬ – (ಪರ್ವ) ಉತ್ಸವ
- ಪರ್ಬು(ರ್ವು) – ಹರಡು; ಕೆದರು
- ಪರ್ಯಂಕ – ಮಂಚ; ಪಲ್ಲಕ್ಕಿ; ಒಂದು ಆಸನ
- ಪರ್ಯಂಕಾಸನ – ಎಡಬಲತೊಡೆಗಳನ್ನು ಬಲ ಎಡ ಪಾದಗಳ ಮೇಲಿಟ್ಟು ಕೊಳ್ಳುವ ಆಸನ
- ಪರ್ಯಂಕಿಕೆ – ಪರ್ಯಂಕ
- ಪರ್ಯಟನ – ಸಂಚಾರ; (ಜೈನ) ಸನ್ಯಾಸಿಗಳು ಚರಿಗೆಗಾಗಿ ಮಾಡುವ ಸಂಚಾರ
- ಪರ್ಯವಲೋಕನ – ಸೂಕ್ಷ್ಮವಾಗಿ ನೋಡಿವುದು
- ಪರ್ಯವಸಾನ – ಮುಕ್ತಾಯ, ಕೊನೆ
- ಪರ್ಯಷ್ಟಿ(ಗೆಯ್) – ಪರಿಚರ್ಯೆ(ಮಾಡು)
- ಪರ್ಯಾಕುಲ – ಕಳವಳ
- ಪರ್ಯಾಣ – (ಪಲ್ಯಯನ) ಕುದುರೆಯ ಜೀನು
- ಪರ್ಯಾಣಕ – ಹಲ್ಲಣ ಹಾಕಿ ಸಿದ್ಧಗೊಂಡುದು
- ಪರ್ಯಾತೀತ – ಹೆಚ್ಚಳ
- ಪರ್ಯಾಪ್ತ – ತುಂಬಿದ
- ಪರ್ಯಾಯ – ಸುತ್ತುವಿಕೆ; ರೀತಿ; ಕ್ರಮ
- ಪರ್ಯಾಯದಪ್ಪು – ಕ್ರಮ ತಪ್ಪು
- ಪರ್ಯಾಲೋಚನ – ಚೆನ್ನಾಗಿ ಆಲೋಚಿಸುವುದು
- ಪರ್ಯಾಲೋಚಿತ – ಚೆನ್ನಾಗಿ ಆಲೋಚಿಸಲಾದ
- ಪರ್ಯುಷಿತ – ಹಳೆಯ
- ಪರ್ವ – ಜೋಡಣೆ; ಗೆಣ್ಣು; ಪುಣ್ಯಕಾಲ, ಹಬ್ಬ
- ಪರ್ವತ – ದೊಡ್ಡ ಬೆಟ್ಟ
- ಪರ್ವತಬಾಣ – ಬೆಟ್ಟಗಳನ್ನು ಸುರಿಸುವ ಬಾಣ
- ಪರ್ವತಾಧೀಶ್ವರ – ಹಿಮವಂತ
- ಪರ್ವದಿನ – (ಜೈನ) ಪೂಜೆಗೆ ಪ್ರಶಸ್ತವಾದ ದಿನ
- ಪರ್ವದಿವಸ – ಪರ್ವದಿನ
- ಪರ್ವಿಸು – ಹಬ್ಬಿಸು
- ಪಲ(ಲ) – ಮಾಂಸ
- ಪಲಂಬರ್ – ಹಲವು ಜನ
- ಪಲ(ವು)ಕಾಲಂ – ಬಹಳ ಕಾಲದವರೆಗೆ
- ಪಲಗೆ – (ಫಲಕ) ಹಲಗೆ, ಆಟದ ಹಾಸು; ಗುರಾಣಿ
- ಪಲಗೆಗಟ್ಟು – ಹಲಗೆಗಳನ್ನು ಜೋಡಿಸಿ ಮಾಡಿದ ಕಟ್ಟು
- ಪಲಗೆಜೂಜು – ಪಗಡೆ ಜೂಜು
- ಪಲಗೆವಿನ್ನಣ – ಗುರಾಣಿ ಹಿಡಿಯುವ ಕೌಶಲ
- ಪಲದಿವಸ – ಹಲವು ದಿನಗಳು
- ಪಲವಾಡು – ನಾನಾ ಮಾತುಗಳನ್ನಾಡು
- ಪಲರ್ – ಪಲಂಬರ್
- ಪಲರ್ಮೆ – ಹಲವು ಬಾರಿ
- ಪಲ(ನ)ಸು – ಹಲಸಿನ ಮರ, ಹಣ್ಣು
- ಪಲಾಲ – ಹುಲ್ಲು; ಜೊಂಡು; ಮೋಸ; ನಿಷ್ಫಲ
- ಪಲಾಶ – ಮುತ್ತುಗ; ರಾಕ್ಷಸ
- ಪಲಾಶಪತ್ರ – ಮುತ್ತುಗದೆಲೆ
- ಪಲಾಶವೃತ್ತಿ – ರಾಕ್ಷಸ ನಡತೆ
- ಪಲಿತ – ನರೆ, ನರೆಗೂದಲು
- ಪಲಿತಶ್ಮಶ್ರು – ನರೆತ ಮೀಸೆ
- ಪಲಿತಾಂಕುರ – ನರೆಗೂದಲು
- ಪಲಿತೌಷಧ – ನರೆಗೂದಲನ್ನು ಕಪ್ಪಾಗಿಸುವ ಔಷಧಿ
- ಪಲುಂಬು – ಹಲುಬು, ದುಃಖಪಡು
- ಪಲ್ಗರ್ಚಿ ಸೈರಿಸು – ಹಲ್ಲು ಕಚ್ಚಿಕೊಂಡು ಸಹಿಸು
- ಪಲ್ಗರ್ಚು – ಹಲ್ಲು ಕಚ್ಚು; ಔಡುಗಚ್ಚು
- ಪಲ್ಗ¾õÉ – ಹಲ್ಲಿನ ಕರೆ, ಬಣ್ಣ
- ಪಲ್ದಿನ್ – ಪಲ್ಗಡಿ
- ಪಲ್ಮಿಗ – ಕೋರೆಗಳುಳ್ಳ ಮೃಗ: ಹುಲಿ, ಸಿಂಹ, ಆನೆ ಇತ್ಯಾದಿ
- ಪಲ್ಮೊರೆ – ಹಲ್ಲು ಕಡಿದು ಶಬ್ದಮಾಡು
- ಪಲ್ಮೊಳೆ – ಚಿಗುರು ಹುಲ್ಲು
- ಪಲ್ಯ – (ಜೈನ) ಒಂದು ದೊಡ್ಡ ಕಾಲಪ್ರಮಾಣ; ಇದರಲ್ಲಿ ಮೂರು ಬಗೆ; ವ್ಯವಹಾರಪಲ್ಯ, ಉದ್ಧಾರಪಲ್ಯ, ಅದ್ಧಾಪಲ್ಯ
- ಪಲ್ಯಂಕಾಸನ – ಒಂದು ಯೋಗಾಸನ
- ಪಲ್ಯೋಪಮ – ಪಲ್ಯ
- ಪಲ್ಲಟಂಬಾಯ್ – ಬದಲಾವಣೆಮಾಡು
- ಪಲ್ಲಟಿಸು – ಬದಲಾಯಿಸು
- ಪಲ್ಲಣ – ಕುದುರೆಯ ಜೀನು
- ಪಲ್ಲಣಂಗಟ್ಟಿಸು – ಜೀನು ತೊಡಿಸು
- ಪಲ್ಲಟಂಗಟ್ಟು – ಜೀನು ಹಾಕು
- ಪಲ್ಲಣಿಸು – ಪಲ್ಲಟಂಗಟ್ಟು
- ಪಲ್ಲವಕ – ವಿಟ
- ಪಲ್ಲವಗ್ರಾಹಿ – ಆಳ ಪಾಂಡಿತ್ಯವಿಲ್ಲದವನು
- ಪಲ್ಲವನೇತ್ರೆ – ಚಿಗುರಿನಂತೆ ಕೆಂಪಾದ ಕಣ್ಣುಳ್ಳವಳು
- ಪಲ್ಲವಿಕ – ವಿಟ; ಮೀನು
- ಪಲ್ಲವಿಸು – ಚಿಗುರು
- ಪಲ್ಲಿ – ಹಲ್ಲಿ; ಗ್ರಾಮ
- ಪಲ್ಲಿಲಿ(ವಾಯ್) – ಹಲ್ಲಿಲ್ಲದ(ಬಾಯಿ)
- ಪಲ್ವಲ – ಕೊಳ; ಹಳ್ಳ
- ಪವಡಿಸು – ಮಲಗು
- ಪವಣ್ – ಪ್ರಮಾಣ; ಅಳತೆ; ಮಿತಿ
- ಪವಣ¾Â – ಹವಣು ತಿಳಿ; ಸಾಮಥ್ರ್ಯ ಅರಿ
- ಪವಣಿಸು – ಲೆಕ್ಕಹಾಕು; ಅಳತೆಮಾಡು
- ಪವಣ್ಗಟ್ಟು – ಹೊಂದಿಸಿ ಕಟ್ಟು
- ಪವಣ್ಗ¿Â – ಅಳತೆ ಮೀರು; ಲೆಕ್ಕ ಮೀರು
- ಪವಣ್ಗಿಡು – ಲೆಕ್ಕ ತಪ್ಪು
- ಪವಣ್ಗೊಳ್ – ಲೆಕ್ಕ ಹಾಕು
- ಪವಣ್ಬುಗಿಸು – ಅಳತೆಗೆ ಅಳವಡಿಸು
- ಪವನ – ವಾಯು
- ಪವನಜ – ವಾಯುಪುತ್ರ
- ಪವನಜವ – ಗಾಳಿಯಷ್ಟು ವೇಗ
- ಪವನತ್ರಯ – ಭೂಲೋಕವನ್ನು ಆವರಿಸಿರುವ
- ಘನೋದಧಿ, ಗನವಾತ, ತನುವಾತಗಳೆಂಬ
- ಮೂರು ಬಗೆಯ ಗಾಳಿಗಳು
- ಪವನನಂದನ – ವಾಯುಪುತ್ರ; ಆಂಜನೇಯ; ಭೀಮ
- ಪವನನಿರೋಧ – ಉಸಿರು ಬಿಗಿಹಿಡಿಯುವುದು
- ಪವನಪಥ – ಆಕಾಶ
- ಪವನವೇಗ – ವಾಯವೇಗ (ಹೊಂದಿದ ವ್ಯಕ್ತಿ)
- ಪವನಸುತ – ಪವನಜ
- ಪವನಾಧ್ವ – ಪವನಪಥ
- ಪವಮಾನ – ಪವನ
- ಪವಮಾನಸುತ – ಪವನಜ
- ಪವಳ – (ಪ್ರವಾಳ) ಹವಳ
- ಪವಳವಾಯ್ – ಹವಳದಂತೆ ಕೆಂಪಾದ ಬಾಯಿ
- ಪವಿ – ವಜ್ರಾಯುಧ; ವಜ್ರ
- ಪವಿತ್ರ – ಪಾವನಕರ; ಕಿವಿಯ ಒಂದು ಆಭರಣ
- ಪವಿತ್ರಗಾತ್ರ – ಪಾವನಕರ ದೇಹದವನು
- ಪವಿತ್ರಗ್ರಾವ – ಸ್ವಚ್ಛ ಕಲ್ಲು; ಪಾವನಕರವಾದ ಕಲ್ಲು
- ಪವಿತ್ರತೀರ್ಥ – ಪಾವನ ತೀರ್ಥ
- ಪವಿತ್ರದಿನ – ಪುಣ್ಯದಿನ
- ಪವಿತ್ರಿತ – ಪಾವನಗೊಂಡ
- ಪವಿತ್ರೀಕರಣ – ಪುಣ್ಯಕರವನ್ನಾಗಿಸುವುದು
- ಪವಿತ್ರೀಕರಿಸು – ಪುಣ್ಯಮಯವಾಗಿ ಮಾಡು
- ಪವಿತ್ರೀಭೂತ – ಪುಣ್ಯಕರವಾದ
- ಪವಿಧರ – ಇಂದ್ರ
- ಪವಿಭೃನ್ಮಣಿ – ಪವಿಭೃತ್+ಮಣಿ, ಇಂದ್ರನೀಲರತ್ನ
- ಪಶು – ಹಸು; ಪ್ರಾಣಿ
- ಪಶುಪಾಲ – ದನಗಾಹಿ
- ಪಶುವುಸನ – ಗೋಹತ್ಯೆ
- ಪಶ್ಚಾತ್ಕಾಲ – ಮುಪ್ಪು
- ಪಶ್ಚಿಮಾಭಿಮುಖ – ಪಶ್ಚಿಮ ದಿಕ್ಕಿಗೆ ಎದುರು
- ಪಸ(ನು) – ಹಸನು, ಅಂದವಾದುದು
- ಪಸ(ವು) – ಕ್ಷಾಮ; ಬಯಕೆ
- ಪಸದನ – (ಪ್ರಸಾಧನ) ಅಲಂಕಾರ, ಒಡವೆ
- ಪಸದನಂಗೆಯ್ – ಅಲಂಕರಿಸು
- ಪಸದನಂಗೊಳ್ – ಅಲಂಕಾರಗೊಳ್ಳು
- ಪಸದನಂಗೊಳಿಸು – ಅಲಂಕಾರಗೊಳಿಸು
- ಪಸದನಂಬಡೆ – ಅಲಂಕಾರಗೊಳ್ಳು
- ಪಸಯಿಸು – ವಾಸಿಸು
- ಪಸರ – ಅಂಗಡಿ; ಸರಕು; (ಪ್ರಸರ) ಪ್ರಚುರತೆ; ಸಲಿಗೆ
- ಪಸರಂಗೆಯ್ – ಹರಡು
- ಪಸರಂಗೊಡು – ಸದರ ಕೊಡು
- ಪಸರಂಗೊಳ್ – ವಿಸ್ತಾರಗೊಳ್ಳು
- ಪಸರಂಬಡೆ – ಪಸರಂಗೊಳ್
- ಪಸರಿಸು – ಹರಡು; ಹಬ್ಬಿಸು
- ಪಸಲೆ – ಹಸುರು ಹುಲ್ಲು; ಹುಲ್ಲುಗಾವಲು
- ಪಸಲೆಗವಿ – ಹಸುರು ಆವರಿಸು
- ಪಸವ – ಕಾಮುಕ
- ಪಸವಡು – ಬಯಕೆ ಹೊಂದು
- ಪಸಾದ – ಹಸಾದ, ಅನುಗ್ರಹ
- ಪಸಾಯ(ನ) – ಬಹುಮಾನ, ಉಡುಗೊರೆ
- ಪಸಾಯ(ನ)ಂಗೊಡು – ಉಡುಗೊರೆ ನೀಡು
- ಪಸಾಯದಾನ – ಮೆಚ್ಚು; ಭಕ್ಷೀಸು
- ಪಸಾಯ್ತ – ರಾಜನ ಆಪ್ತ ವ್ಯಕ್ತಿ
- ಪಸ(ಸಾ)ಯಿತ – (ಪ್ರಸಾದಿತ) ಪಸಾಯ್ತ; ಸಾಕುಪ್ರಾಣಿ
- ಪಸಾಯ್ತೆ – ರಾಣಿಯ ಅಪ್ತೆ; ವಸ್ತ್ರಗಳ ಮೇಲ್ವಿಚಾರಕಿ
- ಪಸಿ – ಹಸಿಯಾದ; ತೇವವಿರುವ; ಹಸಿವುಗೊಳ್ಳು
- ಪಸಿಯ ಬಣ್ಣ – ಶ್ಯಾ,ಲವರ್ಣ
- ಪಸಿ(ವು) – ಹಸಿವು
- ಪಸು – ಹಸು; ಹಂಚು; ಕತ್ತರಿಸು
- ಪಸುಂಗ¾Â – ಹಸುರಾದ ಗರಿ
- ಪಸುಂಬ – ಶಕುನದ ಹಕ್ಕಿ
- ಪಸುಂಬೆ – ಹಸಿಬೆ ಚೀಲ; ಎರಡು ಒಡಲ ಚೀಲ
- ಪಸುಗೂಸು – ಎಳೆಯ ಮಗು; ಹಸುಗೂಸು
- ಪಸುಗೆ – ವಿವೇಕ; ಔಚಿತ್ಯ; ಔದಾರ್ಯ; ಶೋಭೆ; ಪಾಲು
- ಪಸುಗೆಗೆಡು – ವಿವೇಕಶೂನ್ಯವಾಗು
- ಪಸುಗೆದಪ್ಪು – ಪಸುಗೆಗೆಡು
- ಪಸುಗೆವಡೆ – ವಿವೇಕದಿಂದ ಕೂಡು
- ಪಸುಗೆವೋಗು – ಹಂಚಿಕೆಗೊಳ್ಳು, ಪಾಲಾಗು
- ಪಸುಮಗ – ಎಳೆಯವನು
- ಪಸುಮಕ್ಕಳ್ – ಹಸುಗೂಸುಗಳು
- ಪಸುಮ¾Â – ಎಳೆಯ ಮರಿ
- ಪಸುರ್ – ಹಸಿರು; ಹಸಿರಾಗು
- ಪಸುರೆಲೆ – ಹಸುರೆಲೆ
- ಪಸುರೆ¾ಕೆ – ಹಸಿರು ರೆಕ್ಕೆ
- ಪಸುರ್ಗಂಕಣ – ಹಸಿರು ಬಳೆ, ಪಚ್ಚೆಯ ಬಳೆ
- ಪಸುರ್ಗಂಬ – ಹಸಿರು ಕಂಬ
- ಪಸುರ್ಗಪ್ಪು – ಕಡುಗಪ್ಪು
- ಪಸುರ್ಗಲ್ – ಹಸಿರು ಕಲ್ಲು, ಪಚ್ಚೆಯ ಮಣಿ
- ಪಸುರ್ಗವಿಲ – ಹಸಿರ ಕಪಿಲಗಳ ಮಿಶ್ರವರ್ಣ
- ಪಸುರ್ಗ¿Â – ಹಸುರುತನ ಹಾಳಾಗು
- ಪಸುರ್ದಳಿರ್ – ಹಸಿರಾದ ಚಿಗುರು
- ಪಸಿರ್ನನೆ – ಹಸಿರು ಮೊಗ್ಗು, ಕಾಯಿಮೊಗ್ಗು
- ಪಸುರ್ಪು – ಹಸಿರು ಬಣ್ಣ
- ಪಸುರ್ಪುವಡೆ – ಹಸುರು ಬಣ್ಣವನ್ನು ತಾಳು
- ಪಸುರ್ಮಿಡಿ – ಹಸಿರು ಮಿಡಿಗಾಯಿ
- ಪಸುರ್ವಂದರ್(ಲ್) – ಹಸಿರು ಚಪ್ಪರ
- ಪಸುರ್ವಟ್ಟೆ – ಹಸಿರು ವಸ್ತ್ರ
- ಪಸುರ್ವಡೆ – ಹಸುರು ಬಣ್ಣವನ್ನು ತಾಳು
- ಪಸುರ್ವ(ರ್ಮ)ಣಿ – ಪಚ್ಚೆ ಮಣಿ
- ಪಸುರ್ವರಲ್ – ಹಸಿರು ಹರಳು, ಪಚ್ಚೆ
- ಪಸುರ್ವಾಸೆ – ಹೊಟ್ಟೆಯ ಮೇಲಿನ ಕೂದಲಸಾಲು
- ಪಸುರ್ವುಲ್ – ಹಸುರು ಹುಲ್ಲು
- ಪಸುರ್ವೆಳಗು – ಹಸಿರಿನ ಕಾಂತಿ
- ಪಸುರ್ವೆಳ್ಪು – ಪಸುರ್ವೆಳಗು
- ಪಸುರ್ವೊ(ಪೊ)ನ್ – ಹಳದಿ ಬಣ್ಣದ ಲೋಹ, ಚಿನ್ನ
- ಪಸುಳೆ – ಹಸುಳೆ; ಎಳೆಯ ಮಗು
- ಪಸುಳೆಗೋಗಿಲೆ – ಮರಿ ಕೋಗಿಲೆ
- ಪಸುಳೆವಿಸಿಲ್ – ಎಳೆಬಿಸಿಲು
- ಪಸೆ – ಹಸೆ; ಹಾಸು; ಹಾಸಿಗೆ
- ಪಸೆನಿಲ್ – ಹಸೆಯ ಮೇಲೆ ನಿಲ್ಲು; ಮದುವೆ ನಿಲ್ಲು
- ಪಸೆವರಿಸು – ಹಾಸನ್ನು ಹರಡು; ಹಸೆ ಹಾಸು
- ಪಸೆವಾಸು – ಹಸೆಯ ಹಾಸು
- ಪಹರಣೆ – ಮದ್ದಳೆ ಬಾಜನದ ಒಂದು ರೀತಿ
- ಪಳಂಚಲೆ – ಅಪ್ಪಳಿಸು; ಸೋಕು; ಥಳಥಳಿಸು
- ಪಳಂಚಿನುಂಗುರ – ಮುದ್ರೆಯುಂಗುರ
- ಪಳಂಚಿಸು – ಕುಟ್ಟು
- ಪಳಂಚು – ತಾಗು, ಸಂಘಟ್ಟಿಸು
- ಪಳಚ್ಚನಾಗು – ಹೊಳಪಿನಿಂದ ಕೂಡು
- ಪಳಚ್ಚನೆ – ಹೊಲಪಿನಿಂದ ಕೂಡಿ
- ಪಳಪಳಿಸು – ಹಳಹಳಿಸು, ಗಾಬರಿಗೊಳ್ಳು
- ಪಳಬದ್ದ – ಲಾಭ ಅಥವಾ ಪ್ರಯೋಜನ ಪಡೆಯುವುದು
- ಪಳಯಿ(ವಿ)ಸು – (ಪ್ರಲಾಪಿಸು) ದುಃಖಿಸು, ಅಳು
- ಪಳವ – ಚರ್ಮವಾದ್ಯ
- ಪಳಹರ – ಬಟ್ಟೆ; ಧ್ವಜ
- ಪಳಾಳ – ಪಲಾಲ; ನಿಷ್ಫಲ; ಠಕ್ಕು
- ಪಳಿಕುವೆಸ – ಸ್ಫಟಿಕದ ರಚನೆ
- ಪಳಿತ – ಲೆಕ್ಕಕ್ಕೆ ಸಿಕ್ಕದಷ್ಟು ದೀರ್ಘಕಾಲ
- ಪಳಿತ ಚಿಕುರ – ನರೆತ ಕೂದಲು
- ಪಳುಂ(ಳಂ)ಕು – ನೂಕು; ಒತ್ತು
- ಪಳು(ಳಿ)ಕು – ಸ್ಫಟಿಕ
- ಪಳ್ಳ – ನೀರು ಹರಿಯುವ ಹಳ್ಳ
- ಪಳ್ಳಿವರ್ – (ಹಳ್ಳಿಯಂತೆ) ಗುಂಪಾಗಿ ಬರು
- ಪಳ್ಳಿವೋಗು – (ಹಳ್ಳಿಯಂತೆ) ಗುಂಪಾಗಿ ಹೋಗು
- ಪಾಂಚಾಲಿ – ಪಾಂಚಾಲದೇಶದವಳು; ದ್ರೌಪದಿ
- ಪಾಂಚಾಲಿಕಾ – ಬೊಂಬೆ, ಪ್ರತಿಮೆ
- ಪಾಂಡವ – ಪಾಂಡುವಿನ ಮಗ; ಅವನ ವಂಶ
- ಪಾಂಡಿತ್ಯ – ಆಳವಾದ ಅರಿವು
- ಪಾಂಡಿಮ – ಬಿಳುಪಾದ
- ಪಾಪಭೀರು – ಪಾಪಕ್ಕೆ ಹೆದರುವ ವ್ಯಕ್ತಿ
- ಪಾಪರ್ಧಿ – ಬೇಟೆ
- ಪಾಪವಿನಾಶ – ಪಾಪವನ್ನು ಹೋಗಲಾಡಿಸುವವನು
- ಪಾಪಸತ್ವ – ದುಷ್ಟಸ್ವಭಾವದವನು
- ಪಾಪಹರ – ಪಾಪವಿನಾಶ
- ಪಾಪಹೃತ್ – ಪಾಪವಿನಾಶ
- ಪಾಪಾಸ್ರವ – (ಜೈನ) ಜೀವನದಲ್ಲಿ ಹರಿದು ಬರುವ
- ಪಾಪಕರ್ಮಗಳು
- ಪಾಪೆ – ಬೊಂಬೆ; ಕಣ್ಣುಗುಡ್ಡೆ
- ಪಾಪೌಘ – ಪಾಪ+ಓಘ, ಪಾಪರಾಶಿ
- ಪಾಮರಿ – ಹಳ್ಳಿಯ ಹೆಂಗಸು
- ಪಾಯ್ತರ್ – ಚಿಮ್ಮು; ವೇಗವಾಗಿ ಬಾ; ಮುನ್ನುಗ್ಗು
- ಪಾರ್ – ನೋಡಿ; ನಿರೀಕ್ಷಿಸು; ಯೋಚಿಸು
- ಪಾರ – ಗಡಿ; ದಡ
- ಪಾರಂ – ಚೆನ್ನಾಗಿ
- ಪಾರಕು(ಕ್ಕು) – ಹಾರಕ ಎಂಬ ಧಾನ್ಯ
- ಪಾರಗ – ದಡ ಸೇರಿದವನು; ಪಾರಂಗತ
- ಪಾರಗತ್ವ – ನೈಪುಣ್ಯ
- ಪಾರಣಕ್ಷಮ – ಪಾರಣೆ ಮಾಡಿಸುವುದರಲ್ಲಿ ಬಲ್ಲಿದ
- ಪಾರಣಾವಾಸರ – ಪಾರಣೆಯ ದಿನ
- ಪಾರಣಾವಿಧಿ – ಪಾರಣೆಯ ಕ್ರಮ
- ಪಾರಣೆ – ವ್ರತಸಂಬಂಧಿ ಉಪವಾಸದ ಮರುದಿನ ಮಾಡುವ ಊಟ
- ಪಾರತಂತ್ರತೆ – ಮತ್ತೊಬ್ಬರ ಅಧೀನವಿರುವುದು
- ಪಾರದ – ಪಾದರಸ
- ಪಾರದ(ದಾ)ರ – ಅನ್ಯಸ್ತ್ರೀಗಮನ
- ಪಾರದಂದೊಡೆ – ಪಾದರಸ ಲೇಪನಮಾಡು
- ಪಾರದೃಶ್ವ – ಪೂರ್ತಿ ತಿಳಿದವನು
- ಪಾರಮಾರ್ಥಿಕ – ಪರಮಾರ್ಥಕ್ಕೆ ಸಂಬಂಧಿಸಿದ
- ಪಾರಯಿಸು – ಹಾರೈಸು; ಬಯಸು
- ಪಾರಲೌಕಕವಿಧಿ – ಅಪರಕರ್ಮ
- ಪಾರಾವತ – ಪಾರಿವಾಳ; ಹಾಲುವಾಣದ ಮರ
- ಪಾರಾವಾರ – ತೀರಗಳು; ಸಮುದ್ರ
- ಪಾರಾವಾರಗ – ಪ್ರವೀಣ
- ಪಾರಾಶರ – ವೇದವ್ಯಾಸ
- ಪಾರಸ್ಥಳಿ – ತೀರ
- ಪಾರಿ – ಸಾಲು; ಪಾನಪಾತ್ರೆ
- ಪಾರಿಜಾತ(ಕ) – ಒಂದು ಗಿಡ ಮತ್ತದರ ಹೂ
- ಪಾರಿಣಾಮಕ – (ಜೈನ) ಜೀವತ್ವ, ಭವ್ಯತ್ವ, ಅಭವ್ಯತ್ವ ಮೊದಲಾದ ಕರ್ಮಗಳು
- ಪಾರಿತೋಷ(ಷಿ)ಕ – ಬಹುಮಾನ
- ಪಾರಿದಿವಮಂದಿರೆಯರ್ – ಅಪ್ಸರೆಯರು
- ಪಾರಿಪ್ಲವ – ಚಂಚಲವಾದ; ಚಾಂಚಲ್ಯ
- ಪಾರಿಬ್ರಾ(ವ್ರಾ)ಜಕ – ಸನ್ಯಾಸಿ
- ಪಾರಿವ – ಪಾರಿವಾಳ; ಅದರ ಬಣ್ಣ
- ಪಾರಿವ್ರಾಜ್ಯ – (ಜೈನ) ಶ್ರಾವಕನು ನಿರ್ವಾಣದೀಕ್ಷೆಯನ್ನು ಕೈಗೊಳ್ಳುವುದು
- ಪಾರಿಷದ – (ಜೈನ) ಇಂದ್ರನ ಸಭೆಯ ಸದಸ್ಯರಾದ ದೇವತಾವರ್ಗ
- ಪಾರಿಸು – ಪಾರಣೆ ಮಾಡು
- ಪಾರಿಹಾರ್ಯ – ಬಳೆ, ಕಂಕಣ
- ಪಾರೀಣ – ಪಾಂಡಿತ್ಯ; ಪಂಡಿತ
- ಪಾರೆ – ಹಾರೆ; ಅಗೆಯುವ ಕಬ್ಬಿಣದ ಉಪಕರಣ
- ಪಾರೆಯಂಬು – ಹಾರೆ ಆಕಾರದ ಬಾಣ
- ಪಾರೆವಾಯ್ – ಹಾರೆಯ ಮೊನೆ
- ಪಾರೈಸು – ಪಾರಯಿಸು
- ಪಾರ್ಕು – ಹೆಗಲು
- ಪಾರ್ಥ – ರಾಜ; ಪೃಥೆಯ ಮಗ; ಅರ್ಜುನ
- ಪಾರ್ಥಿವ – ರಾಜ; ರಾಜವಂಶದ
- ಪಾರ್ಥಿವಕುಲ – ರಾಜವಂಶ
- ಪಾರ್ಥಿವಗುಣ – ರಾಜಯೋಗ್ಯಗುಣ
- ಪಾರ್ಥಿವತ್ವ – ಮತ್ರ್ಯದ ಗುಣ
- ಪಾರ್ಥಿವಪುತ್ರ – ರಾಜಪುತ್ರ
- ಪಾರ್ವ(ರ್ಬ) – ಹಾರುವ, ಬ್ರಾಹ್ಮಣ
- ಪಾರ್ವಂತಿ – ಬ್ರಾಹ್ಮಣ ಸ್ತ್ರೀ
- ಪಾರ್ವಣ – ಅಮಾವಾಸ್ಯೆ-ಹುಣ್ಣಿವೆಗಳಿಗೆ ಸಂಬಂಧಿಸಿದ-
- ಪಾರ್ವಿತಿ – ಪಾರ್ವಂತಿ
- ಪಾಶ್ರ್ವ – ಮಗ್ಗುಲು; (ಜೈನ) ಪಾಶ್ರ್ವನಾಥ ಪಾಶ್ರ್ವ(ಶ್ರ್ವಾ)ಗತ – ವಸ್ತುವಿನ ಮಗ್ಗುಲ ನೋಟ
- ಪಾಶ್ರ್ವಚರ – ಪಕ್ಕದಲ್ಲಿ ನಡೆಯುವವನು
- ಪಾಶ್ರ್ವನಾಥ – (ಜೈನ) ಇಪ್ಪತ್ತಮೂರನೆಯ ತೀರ್ಥಂಕರ
- ಪಾಷ್ರ್ಣಿ – ಹಿಮ್ಮಡಿ
- ಪಾಷ್ರ್ಣಿಗ್ರಾಹಕ – ಹಿಂದಿದ್ದು ದಾಳಿ ನಡೆಸುವವನು
- ಪಾಲ್ – ಹಾಲು; ಭಾಗ
- ಪಾಲಕಾಪ್ಯ – ಗಜಶಾಸ್ತ್ರ ಅಶ್ವಶಾಸ್ತ್ರಗಳನ್ನು ಬರೆದ ಒಬ್ಬ ಮುನಿ
- ಪಾಲಡಕೆ – ಹಸಿ ಅಡಕೆ
- ಪಾಲಿ(ಳಿ)ಸು – ಕಾಪಾಡು
- ಪಾಲಾಶ – ಮುತ್ತುಗ
- ಪಾಲಿಕೆ – ಪಾತ್ರೆ
- ಪಾಲುಂಡೆ – ಪೀಯೂಷಪಿಷ್ಟ; ಹಾಲಿನ ಸಿಹಿತಿಂಡಿ
- ಪಾಲೆ – (ಕಿವಿಯ) ಹಾಲೆ, ಕೊಪ್ಪು; ಸೇತುವೆ
- ಪಾಲ್ಗಡಲ್ – ಹಾಲಿನ ಸಮುದ್ರ, ಕ್ಷೀರಸಾಗರ
- ಪಾಲ್ಗೆನೆ – ಹಾಲಿನ ಕೆನೆ
- ಪಾಲ್ದೆನೆ – ಎಳೆಯ ತೆನೆ
- ಪಾಲ್ಬತ್ತು – (ಎದೆಯಲ್ಲಿ) ಹಾಲು ಇಂಗಿಹೋಗು
- ಪಾಲ್ಮರ – ಗೀರಿದರೆ ಹಾಲು ಬರುವ ಮರ, ಆಲ, ಅರಳಿ, ಅತ್ತಿ ಇತ್ಯಾದಿ
- ಪಾಲ್ಯ – ಪಾಲಿಸಬೇಕಾದುದು
- ಪಾಲ್ವರಿ – ಹಾಲಿನ ಪ್ರವಾಹ
- ಪಾಲ್ವೊನಲ್ – ಪಾಲ್ದೊ¾õÉ
- ಪಾಲ್ಸೊದೆ – ಬಿಳಿಯ ಸುಣ್ನ
- ಪಾವಕ – ಶುದ್ಧಿಗೊಳಿಸುವ; ಅಗ್ನಿ
- ಪಾವಕದಿಕ್ಕು – ಆಗ್ನೇಯ
- ಪಾವಡಿಗ – ಹಾವಾಡಿಗ
- ಪಾವನ – ಪವಿತ್ರವಾದ
- ಪಾವನಚಾರಿತ್ರ – ಸನ್ನಡತೆ
- ಪಾವನತೆ – ಪಾವಿತ್ರ್ಯ
- ಪಾವನಿ – ಹನುಮಂತ; ಭೀಮ
- ಪಾವಸೆ – ಪಾಚಿ
- ಪಾವಸೆಗಲ್ – ಪಾಚಿ ಕಟ್ಟಿದ ಕಲ್ಲು
- ಪಾವು – ಹಾವು
- ಪಾವುಕೊಳ್ – ಹಾವು ಕಚ್ಚು
- ಪಾವುಗೆ – (ಪಾದುಕಾ) ಪಾದರಕ್ಷೆ
- ಪಾವುಡ – (ಪ್ರಾಭೃತ) ಕಾಣಿಕೆ
- ಪಾವುಮೆಕ್ಕೆ – ಒಂದು ಕಹಿಕಾಯಿಯ ಗಿಡ
- ಪಾಶಪಾಣಿ – ಕೈಯಲ್ಲಿ ಹಗ್ಗ ಹಿಡಿದವನು, ಯಮ-
- ಪಾಶಬಂಧ – ಹಗ್ಗದಿಂದ ಕಟ್ಟುವುದು
- ಪಾಶಹಸ್ತ – ಪಶ್ಚಿಮ ದಿಕ್ಕಿನ ಒಡೆಯ, ವರುಣ
- ಪಾಶುಪತ – ಒಂದು ಶೈವಪಂಥ
- ಪಾಶುಪತಾಸ್ತ್ರ – ಶಿವ ಅರ್ಜುನನಿಗಿತ್ತ ಅಸ್ತ್ರ
- ಪಾಷಾಣ – ಕಲ್ಲು
- ಪಾಷಾಣಹೃದಯ – ಕಲ್ಲಿನಂತೆ ಕಠಿಣ ಮನಸ್ಸಿನವನು
- ಪಾಸ(ಸು) – ಹಗ್ಗ
- ಪಾಸಗೆ – ಮಲ್ಲಯುದ್ಧದ ಒಂದು ವರಸೆ
- ಪಾಸಟಿ – ಸಮಾನ
- ಪಾಸಿಕೆ – ಹಾಸಿಗೆ
- ಪಾಸು – ಹರಡು; ಚಾಚು; ಹಾಸುಗೆ
- ಪಾಸುಂಪೊಕ್ಕುಂ – ಹಾಸುಹೊಕ್ಕು; ಉದ್ದಗಲವಾಗಿ
- ಪಾಸು(ಗೆ) – ಹಾಸಿಗೆ
- ಪಾಸುದಳಿರ್ – ಹಾಸಿದ ಚಿಗುರು
- ಪಾಳ್ಪಕ್ಕೆ – ಹಾಳು ಮನೆ
- ಪಾಳಕಾಪ್ಯ – ಗಜಶಾಸ್ತ್ರ
- ಪಾಳಾಸ – ಕುದುರೆ ಕಟ್ಟುವ ಹಗ್ಗ
- ಪಾಳಿ – ಚೂರ್ಣ; ಬಾವುಟ
- ಪಾಳಿಕೇತನ – ಸಾಲು ಧ್ವಜ; ಏರಿ, ಸೇತುವೆ
- ಪಾಳಿಧ್ವಜ – ಪಾಳಿಕೇತನ
- ಪಾಳಿಸು – ರಕ್ಷಿಸು; ಮೀರಿಸು
- ಪಾಳೆ – ಹಾಳೆ, ಅಡಕೆಪಟ್ಟೆ
- ಪಾಳೇಳ್ – ಹಾಳು ಬೀಳು
- ಪಿಂಗಳನೇತ್ರ – ಕೆಂಗಣ್ಣು; ಶಿವ
- ಪಿಂಗಳಾಕ್ಷ – ಪಿಂಗಳನೇತ್ರ
- ಪಿಂಗಳಿ – ಸಿಂಹ
- ಪಿಂಗಾಕ್ಷ – ಪಿಂಗಚಕ್ಷು
- ಪಿಂಗಾಲ್ – ಹಿಂಗಾಲು, ಹಿಮ್ಮಡಿ
- ಪಿಂಗಿಸು – ಹಿಂಗಿಸು; ಹೋಗಲಾಡಿಸು
- ಪಿಂಗು – ಹಿಂದಿರುಗು; ಕ್ಷಯಿಸು; ಹೊರಟುಹೋಗು
- ಪಿಂಗೂಳೆಯ – ಹಿಂದಿರುವ ಗುಂಪು
- ಪಿಂಗೋಳ್ – ಹಿಂಭಾಗ
- ಪಿಂಚಕಚುಂಬಕ – ಮೊದಲ ಬಾರಿ ಮುತ್ತಿಡುವವನು
- ಪಿಂಚು – ಹಿಂದೆ ಬೀಳು
- ಪಿಂಚೆಯ – ನವಿಲು ಗರಿ
- ಪಿಂಛಚ್ಛತ್ರ – ನವಿಲುಗರಿಯ ಕೊಡೆ
- ಪಿಂಛಾತಪತ್ರ – ಪಿಂಛಚ್ಛತ್ರ
- ಪಿಂಜರ – ಹೊಂಬಣ್ಣ; ಕಂದುಬಣ್ಣ
- ಪಿಂಜರಿ – ಒಂದು ಬಗೆಯ ಹಾವು; ಚಿನ್ನ; ಬೆಳ್ಳಿ
- ಪಿಂಜರಿತ – ಕಂದುಬಣ್ಣದ; ಹೊಂಬಣ್ಣದ
- ಪಿಂಜರಿವಟ್ಟಲ್ – ಬೆಳ್ಳಿ ಬಟ್ಟಲು
- ಪಿಂಜರಿವೆಡಟ್ಟ – ಬೆಳ್ಳಿ ಬೆಟ್ಟ
- ಪಿಂಜು – ಹಿಂಜು, ಹತ್ತಿಯನ್ನು ಎಕ್ಕು
- ಪಿಂಡಚ್ಚನೆ – ಪಿಂಡು+ಅಚ್ಚನೆ, ಸಮೂಹ ಪೂಜೆ
- ಪಿಂಡಚ್ಛೇದ – ಪಿಂಡಪ್ರದಾನ ನಿಲ್ಲುವುದು
- ಪಿಂಡಲು – ರಾಶಿ
- ಪಿಂಡಾನೆ – ಹಿಂಡಿನ ಆನೆ
- ಪಿಂಡಿ – ಹಿಂಡಿ; ಎಣ್ಣೆ ತೆಗೆದ ಮೇಲೆ ಉಳಿಯುವ ಕಾಳು
- ಪಿಂಡು – ಹಿಂಡು; ಹಿಸುಕು; ಗುಂಪು
- ಪಿಂಡಿಗಂಕಣ – ಒಂದು ಬಗೆಯ ಬಳೆ, ಆಭರಣ
- ಪಿಂತಿರಿಸು – ಪಿಂತಿಕ್ಕು
- ಪಿಂತು – ಹಿಂಭಾಗ
- ಪಿಂತೆ(ದೆ) – ಹಿಂಬದಿಯಲ್ಲಿ
- ಪಿಂದಡಿಯಿಡು – ಅಡಿ ಹಿಂದಿಡು, ಹಿಂಜರಿ
- ಪಿಂದಲೆ – ಹಿಂದಲೆ, ತಲೆಯ ಹಿಂಭಾಗ
- ಪಿಂದುಗಳೆ – ಹಿಂದೆ ಸರಿ, ಹಿಮ್ಮೆಟ್ಟು
- ಪಿಂದುಗೆಯ್ – ಹಿಂದೆ ಹಾಕು
- ಪಿಂದಿಗೊಳ್ – ಬೆನ್ನಟ್ಟು
- ಪಿಂದೆಗೆ – ಹಿಂದೆಗೆ, ಹಿಮ್ಮಟ್ಟು
- ಪಿಂದೊಡೆ – ತೊಡೆಯ ಹಿಂಭಾಗ
- ಪಿಂಬಕ್ಕ – ಹಿಂಭಾಗ
- ಪಿಂಬಗಲ್ – ಹಗಲಿನ ಹಿಂಭಾಗ, ಸಾಯಂಕಾಲ
- ಪಿಂಬ(ಬಿ)ಡು – ಹಿಂದೆ, ತರುವಾಯ
- ಪಿಕನಿಸ್ವನೆ – ಕೋಗಿಲೆಯಂತಹ ಧ್ವನಿಯವಳು
- ಪಿಕಳ – ಕಾಗೆ
- ಪಿಕಾಳಿ – ಪಿಕ+ಆಳಿ, ಕೋಗಿಲೆಗಳ ಗುಂಪು
- ಪಿಕ್ಕು – ಹಿಕ್ಕು; ಬಿಡಿಸು; ಕೆದಕು
- ಪಿಚುಮಂದ – ಬೇವಿನ ಮರ
- ಪಿಚುಸೋದ – ಕುಡುಹು, ಹತ್ತಿ ಬಡಿಯುವ ಕೋಲು
- ಪಿಟ್ಟಾಗು – ಹಿಟ್ಟಾಗು, ಪುಡಿಯಾಗು; ನಾಶವಾಗು
- ಪಿಟ್ಟು – (ಪಿಷ್ಟ) ಹಿಟ್ಟು
- ಪಿಟ್ಟುಗುಟ್ಟು – ಹಿಟ್ಟಾಗುವಂತೆ ಕುಟ್ಟು;
- ಪಿಟ್ಟುಗೆಯ್ – ಪುಡಿಮಾಡು
- ಪಿಟ್ಟೆನ್ – ಏನಾದರೂ ಮಾತಾಡು
- ಪಿಡಿ – ಕೈಯಲ್ಲಿ ಹಿಡಿದುಕೊ; ತೆಗದುಕೊ; ಮುಷ್ಟಿ; ಮೊದಲುಮಾಡು; ಹೆಣ್ಣಾನೆ
- ಪಿಡಿಕೆಯ್ – ಮುಷ್ಟಿ
- ಪಿಡಿಕೆಯ್ಸು(ಕೈಸು) – ಹಿಡಿಯುವಂತೆ ಮಾಡು
- ಪಿಡಿಖಂಡಂಗೊಯ್ – ತುಂಡುಗಳಾಗಿ ಕತ್ತರಿಸು
- ಪಿಡಿಖಂಡಂಗೊಳ್ – ತುಂಡುಗಳಾಗಿ ಮಾಡು
- ಪಿಡಿಕ(ಗ)ಟ್ಟು- ಹಿಡಿದು ಕಟ್ಟು, ಬಂಧಿಸು; ಬಂಧನ
- ಪಿಡಿಗುದುರೆ – ಹೆಣ್ಣು ಕುದುರೆ
- ಪಿಡಿತರಿಸು – ಹಿಡಿದು ತರಿಸು; ಸೆರೆಗೈಸು
- ಪಿಡಿಪೀ – ವಶಕ್ಕೆ ಒಪ್ಪಿಸು
- ಪಿಡಿಯಚ್ಚು – ಪಡಿಯಚ್ಚು
- ಪಿಡಿಯಚ್ಚುವಿಡಿ – ಬಲವಾಗಿ ಹಿಡಿ; ದೃಢವಾಗಿ ನೆಚ್ಚು
- ಪಿಡಿಯಾನೆ – ಹೆಣ್ಣಾನೆ
- ಪಿಡಿಯಿಸು – ಹಿಡಿಸು, ಹಿಡಿಯುವಂತೆ ಮಾಡು
- ಪಿಡಿವಡು – ಪಿಡಿ+ಪಡು, ಸೆರೆಗೊಳಗಾಗು
- ಪಿಡಿವಡೆ – ಪಿಡಿವಡು
- ಪಿಡುಗು – ಸಿಡಿ; ಸಿಡಿಲು; ಸೀಳು
- ಪಿಣಿ – ಸೆರೆಹಿಡಿ
- ಪಿಣಿಲ್ಗಂಡ – ಹಿಣಿಲಿನ ಮಾಂಸಖಂಡ
- ಪಿಣ್ಣ – ದಪ್ಪನಾದ
- ಪಿತರ – ಪಿತೃ; ಸತ್ತಿರುವ ಹಿರಿಯ
- ಪಿತಾಮಹ – ತಂದೆಯ ತಂದೆ, ತಾತ; ಬ್ರಹ್ಮ
- ಪಿತೃ – ತಂದೆ; ಪೂರ್ವಿಕ
- ಪಿತೃದ್ವಂದ್ವ – ತಾಯ್ತಂದೆಯರು
- ಪಿತೃಪತಿ – ಪಿತೃಗಳ ಯಜಮಾನ, ಯಮ
- ಪಿತೃಭಕ್ತತೆ – ಹಿರಿಯರ ಬಗೆಗಿನ ಗೌರವ
- ಪಿತೃಭಕ್ತಿ – ಪಿತೃಭಕ್ತತೆ
- ಪಿತೃವನ – ಶ್ಮಶಾನ
- ಪಿತೃವಿತ್ತ – ಪಿತ್ರಾರ್ಜಿತ ಆಸ್ತಿ
- ಪಿತೃವಿಯೋಗ – ತಂದೆಯ ವಿಯೋಗ, ಮರಣ
- ಪಿತೃವ್ಯ – ತಂದೆಯ ಒಡಹುಟ್ಟಿದವನು
- ಪಿತ್ತಳೆ – (ಪಿತ್ತಲ) ಹಿತ್ತಾಳೆ; ತಾಮ್ರ-ಸತುಗಳ ಮಿಶ್ರಲೋಹ-
- ಪಿತ್ತಾವಿಳ – ಪಿತ್ತಸಂಬಂಧಿ ರೋಗವುಳ್ಳವನು
- ಪಿನದ್ಧ – ಕಟ್ಟಿರುವ; ಸೇರಿಸಿರುವ
- ಪಿನಾಕಪಾಣಿ – ಪಿನಾಕವನ್ನು ಧರಿಸಿದವನು, ಶಿವ
- ಪಿನ್ನೆ – ಸೂಜಿಯ ಕಣ್ಣು
- ಪಿಪಾಸೆ – ಬಾಯಾರಿಕೆ
- ಪಿಪೀಲಿಕ(ಕೆ) – ಇರುವೆ
- ಪಿಪ್ಪಲ – ಅರಳಿಯ ಮರ
- ಪಿಪ್ಪಲಿ – ಒಂದು ಸಸ್ಯ, ಬಾಲಮೆಣಸು
- ಪಿಪ್ಪಲೀಪತ್ರ – ಅರಳಿಯ ಎಲೆ
- ಪಿಮ್ಮೆಟ್ಟು – ಹಿಮ್ಮೆಟ್ಟು, ಹಿಂದೆ ಸರಿ
- ಪಿರಿದು – ದೊಡ್ಡದು; ಮಿಗಿಲಾದುದು
- ಪಿರಿದುಂ – ಹೆಚ್ಚಾಗಿ
- ಪಿರಿಯಣ್ಣ – ಹಿರಿಯ ಅಣ್ಣ
- ಪಿರಿಯರಸಿ – ಹಿರಿಯ ರಾಣಿ, ಪಟ್ಟದ ರಾಣಿ
- ಪಿಲ್ಲಣಿ(ಗೆ) – ಕಬ್ಬಿಣದ ಒಂದು ಆಯುಧ; ದೊಣ್ಣೆ
- ಪಿಶಂಗ(ತೆ) – ನಸುಗೆಂಪು
- ಪಿಶಂಗತಲ – ನಸುಗೆಂಪು ಅಂಗಾಲು
- ಪಿಶಂಗಿತ – ನಸುಗೆಂಪು ಬಣ್ಣದಿಂದ ಕೂಡಿದ
- ಪಿಶಾಚ – ದೆವ್ವ; ದೇಹವಿಲ್ಲದ ಪ್ರೇತಾತ್ಮ
- ಪಿಶಿತ – ಮಾಂಸ; ಮಾಂಸದ ಅಡುಗೆ
- ಪಿಶಿತಖಂಡ – ಮಾಂಸಖಂಡ; ಮಾಂಸದ ತುಂಡು
- ಪಿಶಿತಾಶಿ – ರಾಕ್ಷಸ; ನೈಋತ್ಯಾಧಿಪತಿ, ನಿರುತಿ
- ಪಿಶಿತಾಹಾರ – ಮಾಂಸದ ಊಟ
- ಪಿಶುನ – ಚಾಡಿ ಹೇಳುವುದು; ಚಾಡಿಕೋರ
- ಪಿಷ್ಟ – ಹಿಟ್ಟು; ಪುಡಿ
- ಪಿಷ್ಟಚರ್ಚೆ – ರಂಗೋಲಿ
- ಪಿಷ್ಟಪೇಷಣ – ಹಿಟ್ಟನ್ನೇ ಕುಟ್ಟುವುದು; ಹೇಳಿದ್ದನ್ನೇ
- ಹೇಳುವುದು; ಚರ್ವಿತಚರ್ವಣ
- ಪಿಷ್ಟಾತ(ಕ) – ಬಟ್ಟೆಗಳಿಗೆ ಪರಿಮಳ ಕಟ್ಟುವ ಸುಗಂಧದ್ರವ್ಯ
- ಪಿಷ್ಟಾತಕೇಳಿ – ಪರಸ್ಪರ ಸುಗಂಧದ್ರವ್ಯ ಎರಚುವ ಆಟ
- ಪಿಷ್ಟಾತಕಚೂರ್ಣ – ಪಿಷ್ಟಾತ(ಕ)
- ಪಿಷ್ಟಿ – ಹಿಟ್ಟು
- ಪಿಷ್ಟೋದಕ – ಹಿಟ್ಟಿನೊಡನೆ ಬೆರೆಸಿದ ನೀರು
- ಪಿಸುಂಕು – ಹಿಸುಕು, ಹಿಂಡು
- ಪಿಸುಗುಟ್ಟು – ಕಿವಿಯಲ್ಲಿ ಮೆಲ್ಲಗೆ ಮಾತಾಡು
- ಪಿಸುಣ್ – ಕುತ್ಸಿತ, ಚಾಡಿ
- ಪಿಸುಣಾಡು – ಚಾಡಿ ಹೇಳು
- ಪಿಸುಣ್ಗೆಡೆ – ಅಪವಾದ ಹೊರಿಸು
- ಪಿಸುಣ್ಬೇ¿õï – ಚಾಡಿ ಹೇಳು
- ಪಿಸುವಾತು – ಪಿಸುಗುಟ್ಟುವ ಮಾತು
- ಪಿಸಿ¿õï – ಸೀಳು; ಹರಿದು ಹೋಗು
- ಪಿಹಿತ – ಮರೆಮಾಡಿದ
- ಪಿಳಿ – ಹಿಳಿ; ಬಿರಿಯು
- ಪಿಳಿಗು – ಸೀಳು
- ಪಿಳಿಲ್ – ಎಸೆ
- ಪಿಳುಕು – ಮರಿ
- ಪಿಳ್ಕು – ಹಿಳಿಕು, ಗರಿಯಿರುವ ಬಾಣದ ಹಿಂಭಾಗ
- ಪಿಳ್ಗಿಸು – ಹಿಗ್ಗಿಸು, ದೊಡ್ಡದಾಗಿಸು
- ಪಿಳ್ಗು – ಹಿಗ್ಗು, ದೊಡ್ಡದಾಗು; ಸಂತಸಪಡು
- ಪಿಳ್ಳೆ – ಮಗು
- ಪೀಠಿಕೆ – ಪೀಠ, ಆಸನ
- ಪೀಡಿತ – ಹಿಂಸೆಗೊಳಗಾದ
- ಪೀಡಿಸು – ಹಿಂಸಿಸು, ಕಾಟಕೊಡು
- ಪೀಡೆ – ದುಃಖ; ಅನಿಷ್ಟ; ಕಾಟಕೊಡುವ ವ್ಯಕ್ತಿ
- ಪೀತ – ಹೀರಿಕೊಂಡ
- ಪೀತನ – ಅಂಬಟೆ ಗಿಡ
- ಪೀತವಸನ – ರೇಷ್ಮೆ ವಸ್ತ್ರ(ಧಾರಿ); ವಾಸುದೇವ
- ಪೀತಾಂಬರ(ಧರ) – ಪೀತವಸನ
- ಪೀತಾಂಶುಕ – ಹೊಂಬಣ್ಣದ ಕಾಂತಿಯವನು, ಅಗ್ನಿ
- ಪೀನ – ದಪ್ಪವಾಗಿರುವ
- ಪೀನಂ – ಹೆಚ್ಚಾಗಿ
- ಪೀನಸ – ನೆಗಡಿ
- ಪೀನೋದರ – ಡೊಳ್ಳು ಹೊಟ್ಟೆ(ಯುಳ್ಳವನು)
- ಪಿಯೂಷ – ಅಮೃತ; ಹಾಲು
- ಪೀರ್ – ಹೀರು; ಚಪ್ಪರಿಸು
- ಪೀರ್ತರ್ – ಹೀರಲ್ಪಡು
- ಪೀಲಿ – ನವಿಲುಗರಿ
- ಪೀಲಿಗಣ್ – ನವಿಲುಗರಿಯ ಕಣ್ಣು
- ಪೀಲಿಗರಗ – ಪೀಲಿ+ಕರಗ, ನವಲುಗರಿಗಳಿಂದ
- ಅಲಂಕೃತಗೊಂಡ ಗಡಿಗೆ
- ಪೀಲಿದ¿õÉ – ಪಿಂಛಾತಪತ್ರ
- ಪೀಲವಿಜ್ಜಣಿಗೆ – ನವಿಲುಗರಿಯ ಬೀಸಣಿಗೆ
- ಪೀಲಿವೊ¾õÉ – ನವಿಲುಗರಿಗಳ ಹೊರೆ
- ಪೀವರ -ದೊಡ್ಡದಾದ
- ಪುಂಖಾನುಪುಂಖ – ಬಾಣಪರಂಪರೆ
- ಪುಂಖಾನುಪುಂಖಂ – ಬಾಣಗಳು ಒಂದನ್ನೊಂದು ಹಿಂಬಾಲಿಸುವಂತೆ
- ಪುಂಗವ – ಹೋರಿ
- ಪುಂಗವಧ್ವಜ – ವೃಷಧ್ವಜ, ಶಿವ
- ಪುಂಖ – ಬಾಣದ ಹಿಂಭಾಗ
- ಪುಂಜ – ಹುಂಜ; ಗುಂಪು
- ಪುಂಜಿ – ಉಂಡೆ
- ಪುಂಜಿಕೆ(ಗೆ) – ಗೊಂಚಲು; ರಾಶಿ
- ಪುಂಜಿಸು – ಗುಡ್ಡೆ ಮಾಡು
- ಪುಂಡರೀಕ – ಬಿಳಿಯ ತಾವರೆ; ಬೆಳ್ಗೊಡೆ; ಹುಲಿ;ಐರಾವತ
- ಪುಂಡ್ರಾಂಬುಜ – ಬಿಳಿದಾವರೆ
- ಪುಂಡ್ರೇಕ್ಷುದಂಡೆ – ಪಟ್ಟೆಕಬ್ಬು ಜಲ್ಲೆ
- ಪುಂಡ್ರೇಕ್ಷುವಾಟ – ಕಬ್ಬಿನ ತೋಟ
- ಪುಂಭಾವ – ಗಂಡಸಿನ ಮನೋಭಾವ
- ಪುಂವೇದ – (ಜೈನ) ಗಂಡುಜೀವಕ್ಕೆ ಹೆಣ್ಣಿನ ಮೋಹವುಂಟುಮಾಡುವ ಕರ್ಮ
- ಪುಂಶ್ಚಲಿ(ಳಿ) – ಹಾದರಗಿತ್ತಿ; ಗಂಡುಬೀರಿ
- ಪುಂಸವನ – ಷೋಡಶಸಂಸ್ಕಾರಗಳಲಿ ಒಂದು; ಗರ್ಭೀಣಿಗೆ ಗಂಡುಮಗುವಾಗಲೆಂದು ಮಾಡುವ ಸೀಮಂತೋನ್ನಯನ
- ಪುಂಸ್ಕೇಸರಿ – ಗಂಡು ಹುಲಿ
- ಪುಂಸ್ಕೋಕಿಲ(ಳ) – ಗಂಡು ಕೋಗಿಲೆ
- ಪುಗ(ಗಿ)ಲ್ – ಪ್ರವೇಶ; ಬಾಗಿಲು; ಆರಂಭ; ಕತ್ತಿವರಸೆಯ ಒಂದು ಭಂಗಿ; ಕೋಗಿಲೆಯ ಕೂಜನ
- ಪುಗಿಲ್ಗರೆ – ಕೂಜಿಸು, ಧ್ವನಿಗೈ
- ಪುಗಿ(ಯಿ)ಸು – ಒಳಗೆ ಸೇರಿಸು
- ಪುಗುತರ್ – ಪ್ರವೇಶಿಸು
- ಪುಗುಲ್ವಿಡು – ಎಡೆ ಕೊಡು
- ಪುಗುಳ್(¿õï) – ಬೊಕ್ಕೆ, ದದ್ದು
- ಪುಗುಳೇ¿õï – ಬೊಕ್ಕೆಯೇಳು
- ಪುಗುಳೊಡೆ – ಪುಗುಳೇ¿õï
- ಪುಗ್ಗಾಯಿಲ – ಗರ್ವಿಷ್ಠ
- ಪುಗ್ಗಾಯ್ಲ – ಪುಗ್ಗಾಯಿಲ
- ಪುಚ್ಚವಣಂ – ಪರೀಕ್ಷೆ
- ಪುಚ್ಚ¿Â – ನಾಶವಾಗು
- ಪುಚ್ಚ¿Âಸು – ನಾಶಗೊಳಿಸು
- ಪುಟ – ನೆಗೆತ; ದೊನ್ನೆ; ಮೂಸೆ
- ಪುಟಂನೆಗೆ – ಛಂಗನೆ ನೆಗೆ
- ಪುಟಪಾಕ – ಶುದ್ಧಿಗೊಳಿಸಲು ಬೇಯಿಸುವುದು
- ಪುಟವಿಡು – ಪುಟಕ್ಕೆ ಹಾಕು; ಶುದ್ಧಿಗೊಳಿಸು
- ಪುಟಿಕೆ – ಭರಣಿ
- ಪುಟ್ಟಜ – ಹುಟ್ಟಿದ ಜಾಗ; ತವರು
- ಪುಟ್ಟಿ – ಬುಟ್ಟಿ; ಜೇನುಗೂಡು
- ಪುಟ್ಟಿಗೆ – ಸೀರೆ; ಬುಟ್ಟಿ
- ಪುಟ್ಟಿಸು – ಹುಟ್ಟಿಸು; ಸೃಷ್ಟಿ ಮಾಡು
- ಪುಟ್ಟು – ಹುಟ್ಟು; ಜನ್ಮಿಸು; ಜನ್ಮ; ಮರದ ಸೌಟು;
- ದೋಣಿ ನಡೆಸುವ ಸಾಧನ
- ಪುಟ್ಟುವೆಟ್ಟು – (ಸೂರ್ಯ) ಮೂಡುವ ಬೆಟ್ಟ
- ಪುಡಿ – ಹಿಟ್ಟು
- ಪುಡಿ(ಡು)ಕೆ – ಭರಣಿ; ಪೆಟ್ಟಿಗೆ
- ಪುಡಿಗುಟ್ಟಿಸು – ಪುಡಿಪುಡಿಯಾಗಿಸು
- ಪುಡಿಗುಟ್ಟು – ಪುಡಿಯಾಗುವಂತೆ ಕುಟ್ಟು
- ಪುಡಿಯಾಡು – ಮಣ್ಣಲ್ಲಿ ಆಡು
- ಪುಡಿವಿಡು – ನಾಶಗೊಳ್ಳು
- ಪುಡುಕುನೀರ¿್ದು(ರ್ದು) – ಬಿಸಿನೀರಲ್ಲಿ ಅದ್ದು
- ಪುಣ್ – ಹುಣ್ಣು, ಗಾಯ
- ಪುಣಿಲ್ – ಮರಳುದಿಣ್ಣೆ
- ಪುಣುಂಬು – ಬಾಣ
- ಪುಣ್ಗಲೆ – ಗಾಯದ ಕಲೆ
- ಪುಣ್ಣ(ಣ್ಣಿ)ಮೆ(ಮಿ)(ವೆ) – (ಪೂರ್ಣಿಮಾ))
- ಹುಣ್ಣಿಮೆ; ಪೂರ್ಣ ಚಂದ್ರನಿರುವ ದಿನ
- ಪುಣ್ಬಡಿಸು – ಹುಣ್ಣು ಮಾಡು, ಗಾಯಗೊಳಿಸು
- ಪುಣ್ಬಡು – ಗಾಯಗೊಳ್ಳು
- ಪುಣ್ಬಡೆ – ಪುಣ್ಬಡು
- ಪುಣ್ಬೊಲಸು – ಹುಣ್ಣಿನ ಕೊಳೆ
- ಪುಣ್ಯ – ಸುಂದರವಾದ; ಪವಿತ್ರವಾದ
- ಪುಣ್ಕರ್ಮ – ಶ್ರೇಯಸ್ಕರವಾದ ಕೆಲಸ
- ಪುಣ್ಯಕ್ಷಯ – ಪುಣ್ಯವು ಕಳೆದುಹೋಗುವುದು
- ಪುಣ್ಯಕ್ಷೇತ್ರ – ಪವಿತ್ರವಾದ ಸ್ಥಳ
- ಪುಣ್ಯಜನ – ಪುಣ್ಯವಂತರು; ರಾಕ್ಷಸರು
- ಪುಣ್ಯಪದಾರ್ಥ – (ಜೈನ) ನವಪದಾರ್ಥಗಳಲ್ಲಿ ಒಂದು
- ಪುಣ್ಯಪಾಠಕ – ಶುಭ ನುಡಿಯುವವನು
- ಪುಣ್ಯಜ್ಞ – (ಜೈನ) ದೀಕ್ಷೆ ಪಡೆದವನು ಮಾಡುವ ಚತುರ್ದಶಪೂರ್ವಗಳ ಓದುವಿಕೆ ಮತ್ತು ಕೇಳುವಿಕೆ; ಆರನೆಯ ದೀಕ್ಷಾನ್ವಯಕ್ರಿಯೆ
- ಪುಣ್ಯವಂತ – ಪುಣ್ಯ ಮಾಡಿದವನು
- ಪುಣ್ಯವತಿ – ಪುಣ್ಯ ಮಾಡಿದವಳು
- ಪುಣ್ಯವಾಸರ – ಶುಭದಿನ
- ಪುಣ್ಯಾಸ್ರವ – (ಜೈನ) ಪುಣ್ಯವು ಜೀವನಲ್ಲಿ
- ಸೇರುವುದು; ಪುಣ್ಯಸಂಪಾದನೆ
- ಪುಣ್ಯಾಹ – ಪುಣ್ಯದಿನ
- ಪುಣ್ಯೋದ – ಪವಿತ್ರಜಲ
- ಪುತ್ತಳಿಗೆ – ಬೊಂಬೆ
- ಪುತ್ತಿಗೆ – (ಪುತ್ರಿಕೆ) ಬೊಂಬೆ
- ಪುತ್ತಿಡು – ಹುತ್ತಗಟ್ಟು
- ಪುತ್ತು – ಹುತ್ತ; ಗೆದ್ದಲು ಕಟ್ಟು ಗೂಡು
- ಪುತ್ತುಂಗಾಲ್ – ಆನೆ ಕಾಲು ರೋಗ
- ಪುತ್ರ – ಮಗ
- ಪುತ್ರದೋಹಳ – ಗಂಡುಮಗುವನ್ನು ಪಡೆಯುವ ಬಯಕೆ
- ಪುತ್ರದೌಹೃದ – ಪುತ್ರದೋಹಳ
- ಪುತ್ರಾಂತರಾಯ – ಮಕ್ಕಳಾಗುವುದಕ್ಕಿರುವ ಅಡ್ಡಿ
- ಪುತ್ರಿಕೆ – ಬೊಂಬೆ
- ಪುದಿ – ತುಂಬು; ಸೇರು; ಪಡೆ; ಬಾಗಿಲಿನ ಪಕ್ಕ
- ಪುದಿವು – ಸೇರುವಿಕೆ; ಗುಂಪು; ಆವರಣ
- ಪುದು(ವು) – ಜೊತೆ, ಸೇರುವಿಕೆ; ಸಹವಾಸ; ಜಂಟಿ ಒಡೆತನ; ಸದೃಶವಾದ
- ಪುದುಗಳ್ಳ – ಜೊತೆಗಿನ ಕಳ್ಳ
- ಪುದುಮಾಡ – ಸಾಲು ಹಮ್ರ್ಯ
- ಪುದುವೀ – ಹಂಚಿ ಕೊಡು
- ಪುದುವುಗು – ಹೊಂದಿಕೊ
- ಪುದುವೆನಿಸು – ಸಮಾನವಾಗಿ ತೋರು
- ಪುದ್ಗಲ(ಳ) – (ಜೈನ) ಪರಮಾಣುಗಳ ಸಂಯೋಗದಿಂದ ಉಂಟಾದ ಹಾಗೂ ಸ್ಪರ್ಶ, ಗಂಧ, ಬಣ್ಣಗಳನ್ನು ಹೊಂದಿದಿ ಅಜೀವಸತ್ವ’
- ಪುನರುಕ್ತ – ಮತ್ತೆ ಹೇಳಿದ
- ಪುನರ್ದರ್ಶನ – ಮತ್ತೆ ಕಾಣುವಿಕೆ
- ಪುನರ್ನವ – ಪುನಃ ಹೊಸದಾಗುವ
- ಪುನ್ನಾಗ – ಗಂಡಾನೆ; ಹಾವು; ಸುರ ಹೊನ್ನೆ
- ಪುಪ್ಪಕ – ಬಿಸಿ
- ಪುಬ್ಬೆ – (ಪೂರ್ವೆ) ಒಂದು ನಕ್ಷತ್ರದ ಹೆಸರು; (ಜೈನ) ದೀರ್ಘ ಕಾಲಾವಧಿ, ಎಪ್ಪತ್ತುಲಕ್ಷ ಮೂವತ್ತು ಸಾವಿರ ಕೋಟಿ ವರ್ಷಗಳು
- ಪುಯ್ಯಲ್ – ಹುಯ್ಯಲು, ಗೋಳು; (ಪೊಯಲ್) ಯುದ್ಧ
- ಪುಯ್ಯಲಿಕ್ಕು – ರಕ್ಷಣೆಗಾಗಿ ಕೂಗಿಕೊ
- ಪುಯ್ಯಲಿಡು – ಪುಯ್ಯಲಿಕ್ಕು
- ಪುಯ್ಯಲಿಸು – ಪುಯ್ಯಲಿಕ್ಕು
- ಪುಯ್ಯಲ್ಚು – ಪುಯ್ಯಲಿಕ್ಕು
- ಪುಯ್ಯಲ್ವೋಗು – ಕಾಳಗಕ್ಕೆ ಹೋಗು
- ಪುರ – ನಗರ
- ಪುರಂದರ – ಇಂದ್ರ
- ಪುರಂದರಚಾಪ – ಇಂದ್ರಚಾಪ, ಕಾಮನ ಬಿಲ್ಲು
- ಪುರಂಧ್ರಿ – ಹೆಂಗಸು; ಮುತ್ತೈದೆ
- ಪುರಃಪ್ರದರ್ಶಿತ – ಮುಂಚೆಯೇ ತೋರಿಸಿದ
- ಪುರಜನ – ನಾಗರಿಕರು
- ಪುರದೇವತೆ – ಊರ ಅಧಿದೇವತೆ
- ಪುರಭೃತ್ – ಊರ ಒಡೆಯ, ರಾಜ
- ಪುರಮಥನ – ತ್ರಿಪುರಗಳನ್ನು ಸುಟ್ಟವನು, ಶಿವ
- ಪುರಸ್ಸರ – ಮುಂದೆ ಬರುವ; ಶ್ರೇಷ್ಠವಾದ
- ಪುರಸ್ಸರಂ – ಪುರಸ್ಸರವಾಗಿ. ಜೊತೆಗೂಡಿ
- ಪುರಸ್ಸರತೆ – ಕೂಡಿಕೊಂಡಿರುವಿಕೆ
- ಪುರಹರ – ಪುರಮಥನ
- ಪುರಾಂಗನೆ – ನಗರದಲ್ಲಿನ ಹೆಂಗಸು
- ಪುರಾಕೃತ – ಹಿಂದೆ ಅಥವಾ ಹಿಂದಿನ ಜನ್ಮಗಳಲ್ಲಿ ಮಾಡಿದ
- ಪುರಾಣ – ಹಳೆಯ
- ಪುರಾಣಕಮಠ – ಪುರಾತನವಾದ ಆಮೆ, ವಿಷ್ಣುವಿನ ಕೂರ್ಮಾವತಾರ
- ಪುರಾಣಕವಿ – ಹಿಂದಿನ ಕವಿ; ಪುರಾಣ ರಚಿಸಿದ ಕವಿ
- ಪುರಾಣಚೂಡಾಮಣಿ – ಅತ್ಯುತ್ತಮ ಪುರಾಣ
- ಪುರಾಣಪುರುಷ – ಮುದುಕ
- ಪುರಾಣವಾಕ್ಯ – ಹಳೆಯ ಮಾತು, ಗಾದೆ
- ಪುರಾತನ – ಪ್ರಾಚೀನ ಕಾಲದ
- ಪುರಾತನಮತ – ಹಿಂದಿನವರ ಅಭಿಪ್ರಾಯ
- ಪುರಾಧೀಶ – ನಗರದ ಒಡೆಯ, ರಾಜ
- ಪುರಿ – ಹುರಿ, ಕಾಯಿಸು; ನಗರ
- ಪು(ಹು)ರಿಗಡಲೆ – ಹುರಿದ ಕಡಲೆ
- ಪುರಿಗಣೆ – ಹೆಚ್ಚಿನ ಶಕ್ತಿಯ ಬಾಣ
- ಪುರಿವರಲ್ – ಬಿಸಿಯಾದ ಕಲ್ಲು
- ಪುರೀಷ – ಮಲ, ಅಮೇಧ್ಯ
- ಪುರು – ವಿಪುಲವಾದ; ಹಿರಿದಾದ; (ಜೈನ) ಮೊದಲನೆಯ ತೀರ್ಥಂಕರನ ಹೆಸರುಗಳಲ್ಲಿ ಒಂದು
- ಪುರುಚರಿತ – ತೀರ್ಥಂಕರಚರಿತೆ
- ಪುರುಡಿ – ಹೊಟ್ಟೆಕಿಚ್ಚು ಪಡುವವಳು
- ಪುರುಡಿಗ – ಹೊಟ್ಟೆಕಿಚ್ಚು ಪಡುವವನು
- ಪುರುಡಿಸು – ಸ್ಪರ್ಧೆ ಮಾಡು; ಹೊಟ್ಟೆಕಿಚ್ಚುಪಡು
- ಪುರುಡು – ಹುರುಡು, ಸ್ಪರ್ಧೆ
- ಪುರುಭೂತಿ – ಅಧಿಕ ಲಾಭ; ಹೆಚ್ಚಿನ ಶ್ರೇಯಸ್ಸು
- ಪುರುಷ – ಮನುಷ್ಯ; ಗಂಡತ್ರಿಮೂರ್ತಿಗಳಲ್ಲಿ ಪ್ರತಿಯೊಬ್ಬ
- ಪುರುಷಕಾರ – ಮನುಷ್ಯ ಪ್ರಯತ್ನ
- ಪುರುಷಗುಣ – ಗಂಡಸಿಗೆ ತಕ್ಕನಾದ ಲಕ್ಷಣ
- ಪುರುಷತ್ರಯ – ಬ್ರಹ್ಮ ವಿಷ್ಣು ಮಹೇಶ್ವರರು
- ಪುರುಷಧರ್ಮ – ಗಂಡ ಪಾಲಿಸಬೇಕಾದ ಧರ್ಮ
- ಪುರುಷಬ್ರ(ವ್ರ)ತ – ಬ್ರಹ್ಮಚರ್ಯ
- ಪುರುಷಭಿಕ್ಷ – ಗಂಡನಿಗೆ ಜೀವದಾನ ಮಾಡುವುದು
- ಪುರುಷಭೈಕ್ಷ(ಕ್ಷೆ) – ಪುರುಷಭಿಕ್ಷ
- ಪರುಷರ್ ಮೂವರ್ – ತ್ರಿಮೂರ್ತಿಗಳು: ಬ್ರಹ್ಮ, ವಿಷ್ಣು, ಮಹೇಶ್ವರ
- ಪೂರ್ವಕೋಟಿ – (ಜೈನ) ಒಂದು ಕೋಟಿ
ಪೂರ್ವ'ಗಳಷ್ಟು ಕಾಲಾವಧಿ ಪೂರ್ವಜ - ಪೂರ್ವಿಕ, ವಂಶದ ಹಿಂದಿನವನು ಪೂರ್ವಧರ - (ಜೈನ)
ಚತುರ್ದಶಪೂರ್ವ’ಗಳನ್ನು ಚೆನ್ನಾಗಿ ಬಲ್ಲವನು - ಪೂರ್ವಪಕ್ಷ – ವಿರುದ್ಧವಾದ ಹೇಳಿಕೆ
- ಪೂರ್ವಪರಾಮರ್ಶೆ – ಹಿಂದಿನ ಸಂಗತಿಗಳ ಪುನರವಲೋಕನ
- ಪೂರ್ವಭವ – ಹಿಂದಿನ ಜನ್ಮ
- ಪೂರ್ವರಂಗ – ಪೂರ್ವಸಿದ್ಧತೆ
- ಪೂರ್ವವಿದೇಹ – (ಜೈನ) ಜಂಬೂದ್ವೀಪದ ಸಪ್ತಕ್ಷೇತ್ರಗಳಲ್ಲಿ ಒಂದು; ಮಂದರದ ಪೂರ್ವದಿಕ್ಕಿನಲ್ಲಿರುವ ಪ್ರದೇಶ
- ಪೂರ್ವವಿರೋಧ – ಹಿಂದಿನ ದ್ವೇಷ
- ಪೂರ್ವವೃತ್ತಿ – ಹಿಂದಿನ ಉದ್ಯೋಗ
- ಪೂರ್ವವೈರ – ಪೂರ್ವವಿರೋಧ
- ಪೂರ್ವಶಾಸ್ತ್ರ – ಹಿಂದಿನಿಂದ ಬಂದ ಶಾಸ್ತ್ರ
- ಪೂರ್ವಸೂಚನೆಗೆಯ್ – ಮುನ್ಸೂಚನೆ ಕೊಡು
- ಪೂರ್ವಸ್ಮರಣ – ಹಿಂದಿನದನ್ನು ನೆನಪು ಮಾಡಿಕೊಳ್ಳುವುದು
- ಪೂರ್ವಹಗೆ – ಪೂರ್ವವಿರೋಧ
- ಪ್ರಚಳಿತ – ನಡೆಯುತ್ತಿರುವ
- ಪ್ರಚುರ – ಅತಿಶಯವಾದ; ಗಾಢವಾದ
- ಪ್ರಚುರತೆ – ಆಧಿಕ್ಯ
- ಪ್ರಚ್ಛದ – ಹಚ್ಚಡ; ಹೊದಿಕೆ; ಮಗ್ಗುಲು ಹಾಸಿಗೆ
- ಪ್ರಚ್ಛನ್ನ – ಹೊದಿಸಿರುವ; ವೇಷ ಮರೆಸಿಕೊಂಡ; ರಹಸ್ಯ
- ಪ್ರಚ್ಛಾದನ – ಮರೆಸಿರುವುದು
- ಪ್ರಜಾನುರಾಗ – ಪ್ರಜೆಗಳ ಪ್ರೀತಿಗೆ ಪಾತ್ರನಾದವನು
- ಪ್ರಜಾಪತಿ – ಬ್ರಹ್ಮ
- ಪ್ರಜಾಪಾಲನ – ಪ್ರಜೆಗಳನ್ನು ರಕ್ಷಿಸುವಿಕೆ
- ಪ್ರಜಾಸಂಬಂಧಾಂತರ – (ಜೈನ) ಅತಿಬಾಲವಿದ್ಯಾ, ಕುಲಾವಧಿ, ವರ್ಣೋತ್ತಮತ್ವ, ಪಾತ್ರತ್ವ, ಸೃಷ್ಟ್ಯಧಿಕಾರ, ವ್ಯವಹಾರೇಶಿತ್ವ, ಅವಧ್ಯತ್ವ, ಅದಂಡ್ಯತ್ವ, ಮಾನಾರ್ಹತ್ವ, ಪ್ರಜಾಸಂಬಂಧಾಂತರ ಎಂಬ ಜೈನಬ್ರಾಹ್ಮಣನ ಹತ್ತು ಅಧಿಕಾರಗಳು
- ಪ್ರಜೆ – ಒಂದು ದೇಶದ ಜನ
- ಪ್ರಜ್ಞ – ಪಂಡಿತ
- ಪ್ರಜ್ಞಪ್ತಿವಿದ್ಯೆ – (ಜೈನ) ಒಂದು ಬಗೆಯ ವಿದ್ಯೆ
- ಪ್ರಜ್ವಲ(ಳ) – ಚಿನ್ನಾಗಿ ಉರಿಯುವ
- ಪ್ರಣತ – ಬಾಗಿದ; ವಿಧೇಯವಾದ
- ಪ್ರಣತಾರಾತಿ – ಶತ್ರುಗಳಿಂದ ನಮಸ್ಕರಿಸಿಕೊಳ್ಳುವವನು
- ಪ್ರಣತಿ – ಬಾಗುವಿಕೆ; ನಮಸ್ಕಾರ
- ಪ್ರಣಮ – ಪ್ರಣವ, ಬೀಜಾಕ್ಷರ, ಓಂಕಾರ
- ಪ್ರಣಯ – ಹೆಣ್ಣು-ಗಂಡಿನ ಪ್ರೀತಿ; ವಿನಯ; ಆತ್ಮೀಯತೆ; ಗೌರವ-
- ಪ್ರಣಯಕೇಲಿ(ಳಿ) – ಸಂಭೋಗಕ್ರಿಯೆ
- ಪ್ರಣಯಾಲಂಬಿನಿ – ಪ್ರೀತಿಯನ್ನು ಪಡೆದಿರುವವಳು
- ಪ್ರಣಯಿನಿ – ಪ್ರೇಯಸಿ
- ಪ್ರಣವ – ಪ್ರಣಮ, ಓಂಕಾರ
- ಪ್ರಣವೋತ್ಥ – ಪ್ರಣವಾಕ್ಷರದಿಂದ ಹೊರಟ; ಹೊಸತನದಿಂದಾದ-
- ಪ್ರಣಾದ – ದೊಡ್ಡ ಶಬ್ದ, ಕೂಗು
- ಪ್ರಣಾಲ(ಳ)(ಳಿ) – ನೀರು ಹರಿಯುವ ಕಾಲುವೆ; ನೀರು ಹರಿದುಹೋಗುವ ದೋಣಿ-
- ಪ್ರಣಿಧಿ – ಬೇಹುಗಾರ, ಬೇಹುಗಾರಿಕೆ; ಎಚ್ಚರಿಕೆ; ಆನೆಯನ್ನು ಪಳಗಿಸುವ ಮಾವುತ
- ಪ್ರಣಿಪಾತ – ನಮಸ್ಕಾರ; ಶರಣಾಗುವುದು
- ಪ್ರಣಿಹಿತ – ಸ್ಥಾಪಿಸಿದ; ಸೇರಿಸಿದ
- ಪ್ರಣೀತ – ನಿರ್ದೆಶಿಸಿದ; ನೆರವೇರಿಸಿದ; ರಚಿತವಾದ
- ಪ್ರ(ಣು)ಣೂತ – ಪ್ರಸಿದ್ಧವಾದ; ಹೊಗಳಿದ
- ಪ್ರತತಿ – ಸಮೂಹ
- ಪ್ರತರ – ಗಾಢವಾದ; ವಿಸ್ತಾರವಾದ
- ಪ್ರತರಕ್ರಿಯೆ – (ಜೈನ) ಪರಿನಿರ್ವಾಣ ಸಮಯದಲ್ಲಿ ಆತ್ಮನು ವಿಸ್ತಾರಗೊಳ್ಳುವ ಸ್ಥಿತಿ
- ಪ್ರತಾನ – ಗುಂಪು; ಕವಲುಗೊಂಡ ರೆಂಬೆಗಳು
- ಪ್ರತಾಪ – ಉಷ್ಣತೆ; ತೇಜಸ್ಸು; ಶೌರ್ಯ
- ಪ್ರತಾಪೋದಯ – ಶೌರ್ಯದ ಏಳಿಗೆ
- ಪ್ರತಾಪೋಷ್ಮ – ಪ್ರತಾಪ+ಊಷ್ಮ, ಶೌರ್ಯಪ್ರಖರತೆ
- ಪ್ರತಾರಣ – ಮೋಸಗೊಳಿಸುವುದು; ವಂಚನೆ
- ಪ್ರತಾರಿಸು – ವಂಚಿಸು
- ಪ್ರತಿ – ಸಮಾನ; ಪರ್ಯಾಯವಾದ
- ಪ್ರತಿಕಾರ – ಪ್ರತಿಯಾದ ಕ್ರಿಯೆ
- ಪ್ರತಿಕೂಲ – ಎದುರು ದಡ; ವಿರುದ್ಧವಾದ
- ಪ್ರತಿಕೂಲದೈವ – ಅನುಕೂಲಕರವಲ್ಲದ ಅದೃಷ್ಟ
- ಪ್ರತಿಕೂಲೋಕ್ತಿ – ಅನುಕೂಲಕರವಲ್ಲದ ಮಾತು
- ಪ್ರತಿಕೃತಿ – ಪ್ರತಿಬಿಂಬ; ಪ್ರತಿಮೆ
- ಪ್ರತಿಕ್ರಮಣ – (ಜೈನ) ಸಾಧುಗಳ ಇಪ್ಪತ್ತೆಂಟು ಮೂಲಗುಣಗಳಲ್ಲಿ ಒಂದು; ಗುರುವಿನಲ್ಲಿ
- ಪಶ್ಚಾತ್ತಾಪಪೂರ್ವಕ ನಿವೇದನ
- ಪ್ರತಿಕ್ಷಣಂ – ಒಂದೊಂದು ಕ್ಷಣದಲ್ಲೂ; ಸತತವಾಗಿ
- ಪ್ರತಿಗ್ರಹ – ದಾನ ಸ್ವೀಕರಿಸುವುದು; ಬ್ರಾಹ್ಮಣನ ಆರು
- ಪ್ರಥಿತ – ಪ್ರಖ್ಯಾತವಾದ; ಪ್ರಖ್ಯಾತವಾದುದು
- ಪ್ರದಕ್ಷಿಣ – ಎಡಗಡೆಯಿಂದ ಬಲಗಡೆಯೆಡೆ ಸುತ್ತು ಹಾಕುವುದು
- ಪ್ರದರ – ಬಾಣ
- ಪ್ರದರ್ಶಿತ – ತೋರಿಸಲಾದ
- ಪ್ರದಾರಿತ – ಸೀಳಿದ
- ಪ್ರದೀಪ – ದೀಪ; ಬೆಳಗುವಿಕೆ
- ಪ್ರದೀಪಕ – ಬೇಳಕನ್ನೀಯುವ
- ಪ್ರದೀಪಕತೆ – ಬೆಳಗುವಿಕೆ
- ಪ್ರದೀಪಕಲಿಕೆ – ಬೆಳಕಿನ ಕುಡಿ
- ಪ್ರದುಷ್ಟ – ತುಂಬ ಕೆಟ್ಟುದಾದ
- ಪ್ರದೇಶ – ಜಾಗ; (ಜೈನ) ಒಂದು ಪರಮಾಣು ಹಿಡಿಸುವಷ್ಟು ಸ್ಥಳ
- ಪ್ರದೇಶಬಂಧ – (ಜೈನ) ಬಂಧನವನ್ನು ಹೊಂದಿರುವ ಕರ್ಮಗಳ ಸಂಖ್ಯೆಯ ನಿರ್ಣಯ
- ಪ್ರದೇಶಸೌಷ್ಠವ – ಒಂದು ಕಲಾಕೃತಿಯ ವಿವಿಧಾಂಶಗಳ ಚೆಲುವು
- ಪ್ರದೋಷಕಾಲ – ಸಾಯಂಕಾಲ
- ಪ್ರದ್ಯುತಿ – ಹೆಚ್ಚಿನ ಪ್ರಕಾಶ
- ಪ್ರದ್ಯೋತ – ಕಿರಣ; ಕಾಂತಿ
- ಪ್ರದ್ಯೋತಿ – ಕಾಂತಿ
- ಪ್ರಧನ – ಯುದ್ಧ
- ಪ್ರಧಾನ – ಮುಖ್ಯ; ರಾಜನ ಪ್ರಮುಖ ಅಧಿಕಾರಿ
- ಪ್ರಧಾನಮಂತ್ರಿ – ಮುಖ್ಯ ಅಮಾತ್ಯ
- ಪ್ರಧಾನಶ್ರೇಷ್ಠಿ – ಮುಖ್ಯ ವರ್ತಕ
- ಪ್ರಧ್ವಂಸ – ಸರ್ವನಾಶ
- ಪ್ರಧ್ವಾನ – ದೊಡ್ಡ ಶಬ್ದ
- ಪ್ರಪಂಚ – ಸಂಗತಿ, ವಿಚಾರ
- ಪ್ರಪತ್ತಿ – ಶರಣಾಗತಿ
- ಪ್ರಪನ್ನ – ಶರಣಾಗತನಾದವನು
- ಪ್ರಪನ್ನೆ – ಹೊಂದಿರುವವಳು
- ಪ್ರಪಾ – ಅರವಟ್ಟಿಗೆ
- ಪ್ರಪಾಂಗನೆ – ಅರವಟ್ಟಿಗೆಯಲ್ಲಿ ನೀರು ಕೊಡುವ
- ಹೆಂಗಸು; ಅರವಟ್ಟಿಗೆಯ ಸೇವಕಿ
- ಪ್ರಪಾಂಥ – ಪ್ರಯಾಣಿಕ
- ಪ್ರಪಾಕಾಂತೆ – ಪ್ರಪಾಂಗನೆ
- ಪ್ರಪಾತ – ಕೊರಕಲು
- ಪ್ರಪಾಪಾಲಿಕೆ – ಪ್ರಪಾಂಗನೆ
- ಪ್ರಪಾಪ್ರಣಯಿನಿ – ಪ್ರಪಾಂಗನೆ
- ಪ್ರಪಾಪ್ರಮದೆ – ಪ್ರಪಾಂಗನೆ
- ಪ್ರಪಾಮಂಟಪ – ಅರವಟ್ಟಿಗೆ
- ಪ್ರಪಾಸದನ – ಪ್ರಪಾಮಂಟಪ
- ಪ್ರಪೂರ್ಣ – ತುಂಬಿದ
- ಪ್ರಪೆ – ಪ್ರಪಾ, ಅರವಟ್ಟಿಗೆ
- ಪ್ರಬಂಧ – ಪರಂಪರೆ; ಕಾವ್ಯ
- ಪ್ರಬೋಧ(ನ) – ಎಚ್ಚರಗೊಳ್ಳುವುದು; ತಿಳಿವಳಿಕೆ
- ಪ್ರಬೋಧಿತ – ಎಚ್ಚರಗೊಂಡ
- ಪ್ರಭಂಜನ – ವಾಯು; ಬಿರುಗಾಳಿ; ವಿಧ್ವಂಸಕ
- ಪ್ರಭಂಜನಪ್ರವರ – ವಾಯವ್ಯಾಸ್ತ್ರ
- ಪ್ರಭಂಜನಪ್ರಿಯ – ಗಾಳಿಯ ಗೆಲೆಯ, ಅಗ್ನಿ
- ಪ್ರಭಂಜನಸಖ – ಪ್ರಭಂಜನಪ್ರಿಯ
- ಪ್ರಭಂಜನಸುತ – ವಾಯುಪುತ್ರ; ಭೀಮ
- ಪ್ರಭಗ್ನ – ಮುರಿದುಹೋದ
- ಪ್ರಭವ – ಹುಟ್ಟಿದ; ಪ್ರಭೆ
- ಪ್ರಭವಿಷ್ಣು – ಅತ್ಯುತ್ತಮ
- ಪ್ರಭಾಕರ – ಸೂರ್ಯ
- ಪ್ರಭಾಕರ ನಿಶಾಕರ ಬೀದಿ – ಸೂರ್ಯಚಂದ್ರ ಬೀದಿ
- ಪ್ರಭಾಗ – ಭಾಗ
- ಪ್ರಭಾಚಕ್ರ – ಬೆಳಕಿನ ಮಂಡಲ
- ಪ್ರಭಾತ – ಬೆಳಿಗ್ಗೆ
- ಪ್ರಭಾಮಂಡಲ(ಳ) – ತೇಜೋವಲಯ; (ಜೈನ) ಜನಕನ ಮಗ, ಸೀತೆಯ ಅಣ್ಣ
- ಪ್ರಭಾವ – ವರ್ಚಸ್ಸು
- ಪ್ರಭಾವನೆ – ಹಿರಿಮೆ
- ಪ್ರಭಾವಲ್ಲಭ – ಸೂರ್ಯ
- ಪ್ರಭಿನ್ನ – ಒಡೆದುಹೋದ; ಅರಳಿದ
- ಪ್ರಭುತೆ – ಒಡೆಯನಾಗಿರುವಿಕೆ; ರಾಜಾಧಿಕಾರ
- ಪ್ರಭುಶಕ್ತಿ – ರಾಜನ ಮೂರು ಶಕ್ತಿಗಳಲ್ಲಿ ಒಂದು, ನೋಡಿ,
ಶಕ್ತಿತ್ರಯ' ಪ್ರಭೂತ - ಹೆಚ್ಚಾದ; ಆಧಿಕ್ಯ ಪ್ರಭೃತಿ - ತೂಕವುಳ್ಳುದು; ಶ್ರೇಷ್ಠ; ಮೊದಲಾದ ಪ್ರಭೆ - ಕಾಂತಿ ಪ್ರಮತ್ತ - (ಜೈನ) ಆತ್ಮನ ಎರಡು ಅವಸ್ಥೆಗಳಲ್ಲಿ ಒಂದು; ಇನ್ನೊಂದು
ಅಪ್ರಮತ್ತ’ - ಪ್ರಮದ – ಆನಂದ
- ಪ್ರಮದವನ – ಅಂತಃಪುರಸ್ತ್ರೀಯರ ಉದ್ಯಾನವನ
- ಪ್ರಮದಾ(ದೆ) – ಹೆಂಗಸು, ಸುಂದರಿ
- ಪ್ರಮದಾಳಿ – ಪ್ರಮದಾ+ಆಳಿ, ಮದಿಸಿದ ದುಂಬಿ; ಸ್ತ್ರಿಸಮೂಹ
- ಪ್ರಮದೋದ್ಯಾನ – ಪ್ರಮದವನ
- ಪ್ರಮಾಣ – ಗಡುವು
- ಪ್ರಮಾಣತೆ – ಪ್ರಭುತ್ವ
- ಪ್ರಮಾಣಸಿದ್ಧ – ದೃಢೀಕರಣಗೊಂಡುದು
- ಪ್ರಮಾದ – (ಜೈನ) ಬಂಧಹೇತುವಾದುದು
- ಪ್ರಮಾದಫಲಕ – ಆಕಸ್ಮಿಕದ ಸಂದರ್ಭದಲ್ಲಿ ಪಾರಾಗಲು ಹಡಗಿನಲ್ಲಿ ಬಳಸುವ ಹಲಗೆ
- ಪ್ರಮಾದವಲಗೆ – ಪ್ರಮಾದಫಲಕ
- ಪ್ರಮಾದಿ – ಹುಚ್ಚ
- ಪ್ರಮಿತ – ಪ್ರಸಿದ್ಧವಾದ; ಅಳತೆಯುಳ್ಳ
- ಪ್ರಮಿತಿ – ಅಳತೆ
- ಪ್ರಮುದಿತ – ಆನಂದಕರವಾದ; ಅರಳಿದ
- ಪ್ರಮೃಷ್ಟ – ಲೇಪಿಸಿದ
- ಪ್ರಮೋದ – ಸಂತೋಷ
- ಪ್ರಯತ – ಶುದ್ಧ
- ಪ್ರಯಾಣ – ಯಾತ್ರೆ
- ಪ್ರಯಾತ – ಹೋಗುವ
- ಪ್ರಯೋಗ – ನಿದರ್ಶನ; ಪರೀಕ್ಷೆ ಮಾಡುವುದು; ಪರಿಶೀಲನೆ
- ಪ್ರಯೋಗಿಸು – ಉಪಯೋಗಿಸು; ಬಾಣ
- ಮುಂತಾದವನ್ನು ಬಿಡು
- ಪ್ರಯೋಜನ – ಉಪಯೋಗ
- ಪ್ರಯೋಜ್ಯ – ಬಳಸಲು ತಕ್ಕುದಾದ
- ಪ್ರರತ್ನ – ಶ್ರೇಷ್ಠವಾದ ಮಣಿ
- ಪ್ರರೂಢ – ಚೆನ್ನಾಗಿ ಬೆಳೆದ; ಹೆಚ್ಚಾದ
- ಪ್ರರೋಚನ(ನೆ) – ಅಭಿರುಚಿಯನ್ನುಂಟುಮಾಡುವುದು
- ಪ್ರರೋಹ – ಮೊಳಕೆ ಒಡೆಯುವುದು; ಮೊಳಕೆ
- ಪ್ರಲಂಬ – ಜೋತುಬಿದ್ದ
- ಪ್ರಲ(ಳ)ಯ – ವಿನಾಶ; ಕಲ್ಪದ ಕೊನೆಯಲ್ಲಿನ ವಿನಾಶ
- ಪ್ರಲಾಪಂಗೆಯ್ – ರೋದಿಸು
- ಪ್ರವಗ – ಕೋತಿ
- ಪ್ರವಚನ – (ಜೈನ) ಜಿನವಾಣಿಯ ವ್ಯಾಖ್ಯಾನ
- ಪ್ರವಚನವತ್ಸಲತ್ವ – (ಜೈನ) ಪ್ರವಚನಭಕ್ತಿ, ಅರ್ಹಂತರ ಅಥವಾ ಜಿನಾಗಮಗಳ ಮೇಲಿನ ಭಕ್ತಿ
- ಪ್ರವಣ – ತಲ್ಲೀನವಾದ; ಆಸಕ್ತ; ಪ್ರಸಿದ್ಧವಾದವನು
- ಪ್ರವಯಸ್ಕ – ಹಣ್ಣು ಹಣ್ಣು ಮುದುಕ
- ಪ್ರವರ – ಶ್ರೇಷ್ಠವಾದ; ಅಗ್ರ ವ್ಯಕ್ತಿ
- ಪ್ರವರ್ತಕ – ಮೂಲಪುರುಷ
- ಪ್ರವರ್ತನ – ಮುಂದುವರಿಯುವುದು; ತೊಡಗುವಿಕೆ
- ಪ್ರವರ್ತಿತ – ಮುಂದೆ ಸಾಗಿದ
- ಪ್ರವರ್ತಿಸು – ಕಾರ್ಯಶೀಲವಾಗು; ಕಾಲ ಮುಂದುವರಿ; ಅನುಸರಿಸು
- ಪ್ರವರ್ಧ(ಮಾ)ನ – ವೃದ್ಧಿಗೊಳ್ಳುವ; ವೃದ್ಧಿ
- ಪ್ರವಳ – ರಭಸವಾಗಿ ಚಲಿಸುವ
- ಪ್ರವಾಲ(ಳ) – ಚಿಗುರು; ಹವಳ
- ಪ್ರವಾಸ – ಪರಸ್ಥಳ ಯಾತ್ರೆ
- ಪ್ರವಾಹಿನಿ – ನದಿ
- ಪ್ರವಿಕಸಿತ – ಚೆನ್ನಾಗಿ ಅರಳಿದ
- ಪ್ರವಿತತ – ಹರಡಿಕೊಂಡ
- ಪ್ರವಿದಿತ – ಚೆನ್ನಾಗಿ ತಿಳಿದ
- ಪ್ರವಿನಾಶನ – ಪೂರ್ತಿ ನಾಶಗೊಳ್ಳುವುದು
- ಪ್ರವಿಪುಳ – ಬಹು ಅಧಿಕವಾದ
- ಪ್ರವಿಭಕ್ತ – ಪ್ರತ್ಯೇಕವಾದ
- ಪ್ರವಿಭಗ್ನ – ಚೆನ್ನಾಗಿ ಮುರಿದ
- ಪ್ರವಿಭಾಸಿ – ಕಾಂತಿಯುಕ್ತನಾದ ವ್ಯಕ್ತಿ
- ಪ್ರವಿಮಲ – ಪರಿಶುದ್ಧವಾದ
- ಪ್ರವಿರಳಮಣಿ – ತುಂಬ ಅಪರೂಪವಾದ ಮಣಿ
- ಪ್ರವಿಲಿಪ್ತ – ಬಲವಾಗಿ ಅಂಟಿಕೊಂಡ
- ಪ್ರವಿಲೀನ – ಲೀನಗೊಳಿಸುವುದು, ಸೇರಿಸುವುದು
- ಪ್ರವಿಷ್ಟ – ಒಳಸೇರಿದ
- ಪ್ರವೀಚರಣ – (ಜೈನ) ಇಂದ್ರಿಯ ಸುಖಾನುಭವ
- ಪ್ರವೀಚಾರ – ಪ್ರವೀಚರಣ
- ಪ್ರವೀರ(ಪುರುಷ) – ಮಹಾ ಪರಾಕ್ರಮಿ
- ಪ್ರವೃತ್ತ – ಪ್ರವರ್ತಿತವಾದ; ಆರಂಭಿಸಿದ
- ಪ್ರವೃತ್ತಿ – ವೃತ್ತಾಂತ
- ಪ್ರವೃದ್ಧ – ಬೆಳೆದಂತಹ; ಅಧಿಕವಾದ
- ಪ್ರವೇಕ – ಶ್ರೇಷ್ಠ ವ್ಯಕ್ತಿ
- ಪ್ರವ್ಯಕ್ತ – ವೇದ್ಯವಾದ
- ಪ್ರವ್ರಜಿತ – ಸಂಚರಿಸುವವನು; ಸನ್ಯಾಸಿ
- ಪ್ರವ್ರಜ್ಯ – (ಸಂಚಾರ ಮಾಡುವ) ಸನ್ಯಾಸದೀಕ್ಷೆ
- ಪ್ರಶಮ(ನ) – ಸಮಾಧಾನ; ನಿವಾರಣೆ
- ಪ್ರಶಮಿತ – ಶಾಂತಗೊಂಡ; ಉಪಶಮನಗೊಂಡ
- ಪ್ರಶಮಿಸು – ಉಪಶಮನಗೊಳ್ಳು
- ಪ್ರಶಮೆ – ಪ್ರಶಮ(ನ)
- ಪ್ರಶಸ್ತ – ಉತ್ತಮವಾದ; ಮಂಗಳಕರವಾದ
- ಪ್ರಶಸ್ತಮುಹೂರ್ತ – ಮಂಗಳಕರ ಸಮಯ
- ಪ್ರಶಸ್ತಿ – ಹೊಗಳಿಕೆ; ಬಿರುದು
- ಪ್ರಶಸ್ತಿಲೇಖನ – ಹೊಗಳಿಕೆಯ ಬರಹ
- ಪ್ರಸವಾಗಾರ – ಹೆರಿಗೆ ಕೋಣೆ
- ಪ್ರಸವಾಲಯ – ಪ್ರಸವಾಗಾರ
- ಪ್ರಸವೋತ್ಸವ – ಜನ್ಮೋತ್ಸವ
- ಪ್ರಸಹ – ಶಾಶ್ವತವಾದ
- ಪ್ರಸಾಧನ – ಅಲಂಕಾರ; ಆಭರಣ
- ಪ್ರಸಾದನಕರಣ – ಅಲಂಕಾರ ಮಾಡುವ ಕೆಲಸ
- ಪ್ರಸಾಧಿತ – ಅಲಂಕಾರಗೊಂಡ
- ಪ್ರಸಾರಿತ – ಹಬ್ಬಿದ
- ಪ್ರಸಾರಿಸು – ಹರಡು
- ಪ್ರಸಿದ್ಧಾನ – ಪ್ರಖ್ಯಾತಿ
- ಪ್ರಸುಪ್ತ – ನಿದ್ದೆಯಲ್ಲಿರುವ; ನಿದ್ದೆ ಮಾಡುತ್ತಿರುವವನು
- ಪ್ರಸೂಚಕ – ಸೂಚಿಸುವಂತಹದು
- ಪ್ರಸೂತ – ಹುಟ್ಟಿದ; ಹೆರಿಗೆ; ಹೂವು
- ಪ್ರಸೂತಿ – ಹೆರಿಗೆ
- ಪ್ರಸೂತಿ(ಕಾ)ಗೃಹ – ಪ್ರಸವಾಗಾರ
- ಪ್ರಸೂನ – ಹುಟ್ಟು; ಹುಟ್ಟಿದ; ಹೂವು; ಮೊಗ್ಗು
- ಪ್ರಸೂನವಿಶಿಖ – ಪುಷ್ಪಾಯುಧ, ಮನ್ಮಥ
- ಪ್ರಸೂನಾಯುಧ – ಪ್ರಸೂನವಿಶಿಖ
- ಪ್ರಸ್ಖಲಿತ – ಮುಗ್ಗುರಿಸಿದ
- ಪ್ರಸ್ತರ – ಬಂಡೆಗಲ್ಲು
- ಪ್ರಸ್ತರಣ – ಹಾಸಿಗೆ
- ಪ್ರಸ್ತರಭವನ – ಕಲ್ಲಿನ ಮನೆ
- ಪ್ರಸ್ತಾರ – ಹರಡುವುದು; ಹಾಸಿಗೆ
- ಪ್ರಸ್ತಾವ – ಆರಂಭ; ವಿಷಯ; ಸಂದರ್ಭ
- ಪ್ರಸ್ತಾವಿತ – ಸೂಸಿದ
- ಪ್ರಸ್ತುತ – ಸಿದ್ಧಗೊಂಡ; ಸಂದರ್ಭ; ಸನ್ನಿವೇಶಕ್ಕೆ ತಕ್ಕನಾದ
- ಪ್ರಸ್ತುತ್ಯ – ಸ್ತುತಿಸಲ್ಪಟ್ಟ
- ಪ್ರಸ್ಥ – ಬೆಟ್ಟದ ತಪ್ಪಲು; ಪ್ರದೇಶ
- ಪ್ರಸ್ಥಾನ – ಪ್ರಯಾಣ; ಜೈತ್ರಯಾತ್ರೆ
- ಪ್ರಸ್ಥಾನಂಗೆಯ್ – ಪ್ರಯಾಣ ಮಾಡು
- ಪ್ರಸ್ಥಾನಭೇರಿ – ಪ್ರಸ್ಥಾನತೂರ್ಯ
- ಪ್ರಸ್ಥಾನಶಿಬಿರ – ಪ್ರಯಾಣಕಾಲದಲ್ಲಿನ ಬಿಡಾರ
- ಪ್ರಸ್ಪರ್ಧಿ – ಪೈಪೋಟಿ ಮಾಡುವ(ವನು)
- ಪ್ರಸ್ಫಾರ – ಹೊಳೆಯುವ
- ಪ್ರಸ್ಫುಟ – ಸ್ಪಷ್ಟವಾದ; ಕಾಂತಿಯುಕ್ತವಾದ
- ಪ್ರಸ್ಫುರಿತ – ಹೊರಸೂಸಿದ; ಹೊಳೆಯುವ
- ಪ್ರಸ್ಯಂದಿ – ಸುರಿಯುವ
- ಪ್ರಹತ – ಶಬ್ದಮಾಡಿದ; ಹೊಡೆಯಲ್ಪಟ್ಟ
- ಪ್ರಹತಿ – ಹೊಡೆತ
- ಪ್ರಹರಿಣಿ – (ಜೈನ) ಮಂತ್ರದ ನೆರವಿನಿಂದ ಕೊಡುವ ಪೆಟ್ಟು; ಅಂತಹ ವಿದ್ಯೆ
- ಪ್ರಹಸ್ತ – ಚಾಚಿದ ಹಸ್ತ; ರಾವಣನ ಒಬ್ಬ ಮಂತ್ರಿ
- ಪ್ರಹಾರ – ಹೊಡೆತ
- ಪ್ರಹಾರತ್ರಯ – ವಾದ್ಯ ನುಡಿಸುವ ಮೂರು ನಲೆಗಳು; ಸಮ, ವಿಷಮ, ಸಮವಿಷಮ
- ಪ್ರಹಿತ – ಕಳುಹಿಸಲಾದ; ಹೊಡೆದ
- ಪ್ರಹೃಷ್ಟ – ಸಂತುಷ್ಟ
- ಪ್ರಹೇಲಿ(ಳಿ)ಕೆ – ಒಗಟು
- ಪ್ರಹ್ಲಾದ – ಅತೀವ ಸಂತೋಷ
- ಪ್ರಲಯಕರ – ನಾಶಮಾಡುವಂತಹ
- ಪ್ರಳಯಪಯೋಧಿ – ಉಕ್ಕಿ ಹರಿದು ವಿನಾಶಮಾಡುವ ಸಮುದ್ರ
- ಪ್ರಳಯಾನಿಲ(ಳ) – ಪ್ರಳಯ ಕಾಲದಲ್ಲಿ ಬೀಸುವ ಬಿರುಗಾಳಿ
- ಪ್ರಾಂಗಣ – ಅಂಗಳ
- ಪ್ರಾಂಚತ್ – ಶೋಭಿಸುವ
- ಪ್ರಾಂಚಿತ – ಸುಂದರವಾದ
- ಪ್ರಾಂಜಲಿ – ಮುಗಿದ ಕೈಗಳು
- ಪ್ರಾಂಶು – ಉನ್ನತ, ಎತ್ತರವಾದ
- ಪ್ರಾಕ್ – ಪೂರ್ವ
- ಪ್ರಾಕಟ – ಪ್ರಕಟಗೊಂಡ
- ಪ್ರಾಕೃತ – ಸಾಮಾನ್ಯ ವ್ಯಕ್ತಿ; ಒರಟು ಮನುಷ್ಯ; ಒಂದು ಭಾಷೆ
- ಪ್ರಾಕೃತಜನ – ನಾಡಾಡಿಗಳು
- ಪ್ರಾಕೃತಪುರುಷ – ನಾಡಾಡಿ
- ಪ್ರಾಕೃತಾಸ್ತ್ರ – ಸಾಮಾನ್ಯ ಬಾಣ
- ಪ್ರಾಕ್ತನ – ಹಿಂದಿನ
- ಪ್ರಾಗಲ್ಭ್ಯ – ಪ್ರೌಢಿಮೆ; ಧೈರ್ಯ
- ಪ್ರಾಗೇಯ – ಸ್ತೋತ್ರಾರ್ಹವಾದ
- ಪ್ರಾಗ್ಜನ್ಮ – ಹಿಂದಿನ ಜನ್ಮ
- ಪ್ರಾಗ್ಭಾಗ – ಮೊದಲ ಭಾಗ
- ಪ್ರಾಗ್ರ – ತುತ್ತ ತುದಿ; ಮುಖ್ಯನಾದವನು
- ಪ್ರಾಙ್ಮುಖ – ಪ್ರಾಕ್+ಮುಖ, ಪೂರ್ವಾಭಿಮುಖವಾದ
- ಪ್ರಾಚೀ – ಪೂರ್ವ
- ಪ್ರಾಚೀನಬರ್ಹಿ – ಇಂದ್ರ
- ಪ್ರಾಚುರ್ಯ – ಅಧಿಕವಾಗಿರುವುದು
- ಪ್ರಾಚ್ಯಶೈಲ – ಪೂರ್ವದ ಬೆಟ್ಟ
- ಪ್ರಾಜ್ಞ(ಕ) – ಕಾರಣ ಶರೀರದಲ್ಲಿದ್ದು ಸುಷುಪ್ತಾವಸ್ಥೆ ಅನುಭವಿಸುವ ಅನುಭವಿಸುವ ಆತ್ಮ
- ಪ್ರಾಜ್ಯ – ವಿಸ್ತಾರವಾದ; ಉತ್ತಮವಾದ
- ಪ್ರಾಣ – ಜೀವಿಯಲ್ಲಿನ ಚೈತನ್ಯ
- ಪ್ರಾಪ್ಯ – ಹೊಂದಬಹುದಾದ
- ಪ್ರಾಭವ – ಮೇಲ್ಮೆ
- ಪ್ರಾಭಾತಿಕ – ಬೆಳಗಿನ ಸಮಯದ
- ಪ್ರಾಭೃತ – ಹಿರಿಯರಿಗೆ ಸಲ್ಲಿಸುವ ಕಾಣಿಕೆ
- ಪ್ರಾಯ – ಹರೆಯ; ವಯಸ್ಸು
- ಪ್ರಾಯೋಪಗಮನ – (ಜೈನ) ನಿರಾಹಾರಿಯಾಗಿ ಮರಣವನ್ನು ಹೊಂದುವ ವ್ರತ
- ಪ್ರಾಯೋಪವೇಶ – ಪ್ರಾಯೋಪಗಮನ
- ಪ್ರಾರಂಭ – ಉದ್ಯಮ, ಕಾರ್ಯ
- ಪ್ರಾರಂಭಿಗ – ಆರಂಭ ಮಾಡುವವನು
- ಪ್ರಾರ್ಥಿಸು – ಬೇಡಿಕೊ
- ಪ್ರಾಲಂಬ – ಜೋತಾಡುವ
- ಪ್ರಾಲೇ(ಳೇ)ಯ – ಮಂಜು
- ಪ್ರಾಲೇಯಕರ – ಚಂದ್ರ; ಕರ್ಪೂರ
- ಪ್ರಾಲೇಯಾಂಶು – ಪ್ರಾಲೇಯಕರ
- ಪ್ರಾವರಣ – ಉತ್ತರೀಯ
- ಪ್ರಾವಿರ್ಭೂತ – ಕಾಣಿಸಿಕೊಂಡ ವ್ಯಕ್ತಿ
- ಪ್ರಾವೃಟ್ಕಾಲ – ಮಳೆಗಾಲ
- ಪ್ರಾವೃತ – ಸುತ್ತುವರಿದ
- ಪ್ರಾವೃಷ – ಪ್ರಾವೃಟ್ಕಾಲ
- ಪ್ರಾವೃಷೇಣ್ಯ – ಮಳೆಗಾಲದ
- ಪ್ರಾಶ್ನಿಕ – ಪ್ರಶ್ನೆ ಮಾಡುವವನು
- ಪ್ರಾಸ(ಕ) – ಒಂದು ಆಯುಧ, ಕೊಂತ
- ಪ್ರಾಸುಕ – ಶುದ್ಧವಾದ, ಹುಳ ಬೀಳದ
- ಪ್ರಾಳೇಯ – ಹಿಮ
- ಪ್ರಾಳೇಯಾಚಲ(ಳ) – ಹಿಮವತ್ಪರ್ವತ
- ಪ್ರಿಯಂಗು – ನವಣೆ
- ಪ್ರಿಯಕ – ಜಿಂಕೆ, ಕಡವೆ; ಹೊನ್ನೆಮರ(?)
- ಪ್ರಿಯಕರ – ಪ್ರೀತಿಯುಳ್ಳವನು
- ಪ್ರಿಯಕಾರಿಣಿ – ಪ್ರಿಯೆ
- ಪ್ರಿಯಗಳ್ಳ – ಪ್ರೀತಿಯನ್ನು ಕದ್ದವನು
- ಪ್ರಿಯಜನ – ಪ್ರೀತಿಪಾತ್ರರಾದ ಜನ
- ಪ್ರಿಯತಮ(ಮೆ) – ಅತ್ಯಂತ ಪ್ರಿಯವಾದುದು; ನಲ್ಲ(ಲ್ಲೆ)
- ಪ್ರಿಯಮಿತ್ರ – ಆಪ್ತ ಗೆಳೆಯ
- ಪ್ರಿಯವಚ(ನ) – ಪ್ರೀತಿಯ ಮಾತು
- ಪ್ರಿಯವನಿತೆ – ನಲ್ಲೆ
- ಪ್ರಿಯವಾದಿನಿ – ಹೆಣ್ಣು ಗಿಳಿ
- ಪ್ರಿಯಸಂಭಾಷಣ – ಸರಸ ಸಲ್ಲಾ ಪ್ರಿಯಸಖ(ಖಿ) ಪ್ರೀತಿಪಾತ್ರ ಗೆಳೆಯ(ತಿ)-
- ಪ್ರಿಯೆ – ನಲ್ಲೆ
- ಪ್ರಿಯೋದ್ಭವ – (ಜೈನ) ಒಂದು ಗರ್ಭಾನ್ವಯಕ್ರಿಯೆ;
- ಪ್ರೇಕ್ಷಾಗೃಹ – ಪ್ರದರ್ಶನಶಾಲೆ
- ಪ್ರೇಕ್ಷಾಸದನ – ಪ್ರೇಕ್ಷಾಗೃಹ
- ಪ್ರೇತ – ಶರೀರ ಬಿಟ್ಟ ಜೀವ; ಹೆಣ
- ಪ್ರೇಮ – ಪ್ರೀತಿ
- ಪ್ರೇಮಾನುಬಂದ – ಪ್ರೀತಿಯ ಕಟ್ಟು
- ಪ್ರೇಮಾಲೋಕನ – ಪ್ರೀತಿಪೂರ್ಣ ನೋಟ
- ಪ್ರೇಯಸಿ – ನಲ್ಲೆ
- ಪ್ರೇರಣ(ಣೆ) – ಪ್ರಚೋದನೆ
- ಪ್ರೇರಿತ – ಪ್ರಚೋದನೆಗೊಂಡ (ವ್ಯಕ್ತಿ)
- ಪ್ರೇರಿಸು – ಪ್ರಚೋದಿಸು
- ಪ್ರೇಷಣ – (ಜೈನ) ಒಂದು ದೇಶವ್ರತಾತಿಚಾರ; ದೂತರನ್ನು ಕಳಿಸಿ ಕೆಲಸ ಮಾಡಿಸುವುದು, ನೋಡಿ, `ದೇಶವ್ರತಾತಿಚಾರ’
- ಪ್ರೇಷಿತ – ಕಳಿಸಿದ
- ಪ್ರೇಷ್ಯ – ಕಳಿಸಲ್ಪಟ್ಟವನು, ದೂತ
- ಪ್ರೋಕ್ತ – ಹೇಳಲಾದ
- ಪ್ರೋಚ್ಚಂಡ – ತುಂಬ ಭಯಂಕರವಾದ
- ಪ್ರೊಚ್ಚಳಿತ – ಮೇಲಕ್ಕೆ ಹಾರಿದ
- ಪ್ರೋಜ್ಝಿತಚಾಪ – ಬಿಲ್ಲು ಹಿಡಿಯುವುದನ್ನು ಬಿಟ್ಟವನು
- ಪ್ರೋಡ್ಡೀನ – ಮೇಲೆ ಹಾರಿದ
- ಪ್ರೋತ್ಕರ – ಗುಂಪು
- ಪ್ರೋತ್ಕಲಿತ – ಮೇಲಕ್ಕೆ ಹಾರಿದ
- ಪ್ರೋತ್ತುಂಗ – ತುಂಬ ಎತ್ತರವಾದಪ್ರೋತ್ಪಿಹಿತ -ಚೆನ್ನಾಗಿ ಮುಚ್ಚಿದ-
- ಪ್ರೋತ್ಫುಲ್ಲ – ಚೆನ್ನಾಗಿ ಅರಳಿದ
- ಪ್ರೋಥ – ಕುದುರೆಯ ಮೂಗಿನ ಹೊಳ್ಲೆ
- ಪ್ರೋದ್ಗತ – ಚಾಚಿಕೊಂಡಿರುವ; ಹೊಮ್ಮಿದ
- ಪ್ರೋದ್ಗಮ – ಉಂಟುಮಾಡುವಂತಹ(ದು)
- ಪ್ರೋದ್ಯತ್ – ಮೇಲಕ್ಕೆದ್ದಿರುವ; ಉಬ್ಬಿಕೊಂಡ
- ಪ್ರೋದ್ದಾನ – ಸುರಿಯುವ ಆನೆಯ ಮದಜಲ
- ಪ್ರೋದ್ದಾಮ – ಅತಿಶಯವಾದ; ಶ್ರೇಷ್ಠವಾದ
- ಪ್ರೋದ್ಧೂತ – ಮೇಲೇಳುತ್ತಿರುವ
- ಪ್ರೋದ್ಭಾಸಿ – ಚೆನ್ನಾಗಿ ಹೊಳೆಯುವ
- ಪ್ರೋದ್ಭೂತ – ಆವಿರ್ಭವಿಸಿದ
- ಪ್ರೋದ್ಭೇದ – ಮುರಿದುಹೋದ ; ಮುರಿಯುವಿಕೆ
- ಪ್ರೋದ್ವøತ್ತ – ಸೊಕ್ಕಿದ(ವನು)
- ಪ್ರೋನ್ನತ – ಉನ್ನತವಾದ
- ಪ್ರೋನ್ಮತ್ತ – ತುಂಬ ಸೊಕ್ಕಿದ
- ಪ್ರೋನ್ಮಿಳಿತ – ಚೆನ್ನಾಗಿ ಮಿಲನಗೊಂಡ
- ಪ್ರೋಷಧ – (ಜೈನ) ಉಪವಾಸದ ಹಿಂದಿನ ಮತ್ತು ಮುಂದಿನ ದಿನ ಒಂದೇ ಹೊತ್ತು ಊಟಮಾಡುವ ವ್ರತ
- ಪ್ರೋಷಧೋಪವಾಸ – ಪ್ರೋಷಧ
- ಪ್ರೋಷಧೋಪವಾಸಿ – ಪ್ರೋಷಧೋಪವಾಸ ಮಾಡುವ ವ್ರತಿ
- ಪ್ರೋಹ – ಆನೆಯ ಕಾಲು
- ಪ್ಲೋಷ – ಸುಡುವ
- ಪ್ರೌಢತೆ – ನೈಪುಣ್ಯ
- ಪ್ರೌಢಿ – ಜಾಣತನ
- ಪ್ಲಕ್ಷ್ಯ – ಅತ್ತಿಮರ; ಆಲದ ಮರ
- ಪ್ಲವ – ತೇಲುವ; ಪ್ರವಾಹ; ತೆಪ್ಪ; ಅರವತ್ತು ಸಂವತ್ಸರಗಳಲ್ಲಿ ಒಂದು
- ಪ್ಲವಂಗವಿದ್ಯೆ – (ಜೈನ) ಕೋತಿಯ ವೇಷ ತಾಳುವ ಒಂದು ವಿದ್ಯೆ
- ಪ್ಲವಗಪ್ಲುತ – ಕುಪ್ಪಳಿಸು
- ಪ್ಲವನ – ತೇಲುವುದು; ಪ್ರವಾಹ
- ಪ್ಲುತ – ಹಾರುವ
- ಪ್ಲುಷ್ಪ – ಸುಟ್ಟ
- ಪ್ಲೋಷ – ಸುಡುವ
Conclusion:
ಕನ್ನಡ ಪ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.