ಕನ್ನಡ ದ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada da aksharada halegannadada padagalu , ಕನ್ನಡ ದ ಅಕ್ಷರದ ಹಳೆಗನ್ನಡ ಪದಗಳು (DA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ದ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( da halegannada Words in kannada ) ತಿಳಿದುಕೊಳ್ಳೋಣ
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ದ ಅಕ್ಷರ ಎಂದರೇನು?
ದ, ಕನ್ನಡ ವರ್ಣಮಾಲೆಯ ತ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.
ಚಿತ್ರದಲ್ಲಿ ಕಾಣಿಸಿರುವಂತೆ ಅಶೋಕನ ಕಾಲದ ಬ್ರಾಹ್ಮೀ ಅಕ್ಷರದ ಬಲಗಡೆಯ ಬಾಗು ಶಾತವಾಹನರ ಕಾಲಕ್ಕೆ ಎಡಗಡೆಗೆ ಬರುತ್ತದೆ. ಬಾಗಿನಲ್ಲಿ ಹೊಕ್ಕಳು ಸೂಕ್ಷ್ಮವಾಗಿ ಕಾಣಿಸಿಕೊಳ್ಳುವುದು ಗಂಗರ ಕಾಲದಲ್ಲಿ. ಜೊತೆಗೆ ಒಂದು ತಲಕಟ್ಟೂ ಕಾಣಸಿಗುತ್ತದೆ. ಏಳು ಶತಮಾನಗಳು ಕಳೆಯುವ ಹೊತ್ತಿಗೆ ಅಕ್ಷರಕ್ಕೆ ಈಗಿನ ರೂಪ ಬರುತ್ತದೆ. ಅದರ ರೂಪ ಖಚಿತವಾಗುವುದು ಮೈಸೂರು ಅರಸರ ಕಾಲದಲ್ಲಿ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ದ ಅಕ್ಷರದ ಹಳೆಗನ್ನಡ ಪದಗಳು – Kannada Words
- ದಂಟು – ತಾವರೆ ಮುಂತಾದುದರ ನಾಳ
- ದಂಡ – ದಂಡನೆ; ಕೋಲು
- ದಂಡಂಗೊಳ್ – ದಂಡನೆಯನ್ನು ಪಡೆ
- ದಂಡಖಂಡ – ಚಿಕ್ಕ ಕೋಲು
- ದಂಡತೋರಣಕ – ನೀರೆತ್ತುವ ರಾಟೆಯ ಅರೆಕಾಲುಗಳ ಪಂಕ್ತಿ
- ದಂಡತ್ರಯ – (ಜೈನ) ಮನಸ್ಸು, ದೇಹ, ಮಾತುಗಳಿಗೆ ಸಂಬಂಧಿಸಿದ ಮೂರು ಬಗೆಯ ದೋಷಗಳು
- ದಂಡಧರ – ದಂಡವನ್ನು ಹಿಡಿದಿರುವವನು; ಅಧಿಕಾರ ಹಿಡಿದವನು; ಯಮ
- ದಂಡಧಾರ – ಅಧಿಕಾರದಂಡ ಹಿಡಿದವನು
- ದಂಡನಮಸ್ಕಾರ – ಸಾಷ್ಟಾಂಗ ನಮಸ್ಕಾರ
- ದಂಡನಾಯಕ – ಸೇನಾಧಿಪತಿ
- ದಂಡನೀತಿ – ರಾಜನೀತಿ
- ದಂಡಪಾಣಿ – ಗದೆ ಹಿಡಿದವನು, ಯಮ
- ದಂಡಭ್ರಮ – ತಪ್ಪು ತಿಳಿವಳಿಕೆಯಿಂದ ಮುಗ್ಧನನ್ನು ದಂಡಿಸುವುದು
- ದಂಡರತ್ನ – (ಜೈನ) ಏಳು ಜೀವರತ್ನಗಳಲ್ಲಿ ಒಂದು, ದಿವ್ಯದಂಡ
- ದಂಡಾಧಿನಾಯಕ – ದಂಡನಾಯಕ
- ದಂಡಾಧಿಪ – ದಂಡನಾಯಕ
- ದಂಡಾಧೀಶ – ದಂಡನಾಯಕ
- ದಂಡಾಧ್ಯಕ್ಷಕ – ನ್ಯಾಯಾಧಿಪತಿ
- ದಂಡಿಗೆ (ದಂಡಿಕಾ) – ಪಲ್ಲಕ್ಕಿ; ಒಂದು ತಂತೀವಾದ್ಯ
- ದಂಡಿತ – ದಂಡನೆಗೊಳಗಾದ; ಸೋತ
- ದಂಡಿಸು – ಶಿಕ್ಷೆಗೊಳಪಡಿಸು
- ದಂಡು – ಸೈನ್ಯ
- ದಂಡೆ – ಕುಚ್ಚು
- ದಂಡೆಗಟ್ಟು – ಮಾಲೆಯಾಗಿ ಕಟ್ಟು
- ದಂಡೆಗೊಡು – ವೀರಮಂಡಿಯಲ್ಲಿ ಕುಳಿತುಕೊ
- ದಂಡೆಗೊಳ್ – ದಾಳಿಮಾಡು
- ದಂಡೆದೊಮಡಿಲ್ – ಕುಚ್ಚಿನ ಹಾಗಿರುವ ಒಂದು ಆಭರಣ
- ದಂಡೋಕ್ತಿ – ದಂಡನೆಯ ಮಾತು
- ದಂಡೋಪನತ – ಸಾಷ್ಟಾಂಗ ನಮಸ್ಕಾರ ಮಾಡಿದವನು
- ದಂತ – ಹಲ್ಲು; ಆನೆಯ ಕೋರೆ
- ದಂತಕಾಂತಿ – ಹಲ್ಲುಗಳ ಕಾಂತಿ
- ದಂತಕೂಟ – ಆನೆಯ ದಂತದ ಮೊನೆ
- ದಂತಚಯ – ಹಲ್ಲುಗಳ ಸಾಲು
- ದಂತಚ್ಛದ – ತುಟಿ
- ದಂತಧಾವನ – ಹಲ್ಲುಜ್ಜುವುದು
- ದಂತಪಂಕ್ತಿ – ಹಲ್ಲುಸಾಲು
- ದಂತಪತ್ರ – ಕಿವಿಗೆ ಹಾಕಿಕೊಳ್ಳುವ ಓಲೆ
- ದಂತಪ್ರಭೆ – ದಂತಕಾಂತಿ
- ದಂತರುಚಿ – ದಂತಕಾಂತಿ
- ದಂತಶಲ್ಕ – ದಂತದ ಚೆಕ್ಕೆ
- ದಂತಾಂಕುರ – ಹಲ್ಲು ಮೊಳೆಯುವುದು
- ದಂತಾಂಶು – ದಂತಕಾಂತಿ
- ದಂತಾಂಶುಕ – ತುಟಿ
- ದಂತಾವರಣ – ತುಟಿ
- ದಂತಾವಲ(ಳ) – ಆನೆ
- ದಂತಾಹತಿ – ಆನೆಯ ದಂತದ ಹೊಡೆತ
- ದಂತಿ – ಆನೆ
- ದಂತಿನಿ – ಹೆಣ್ಣಾನೆ
- ದಂತಿಪ – ಆನೆಯನ್ನು ಕಾಯುವವನು, ಮಾವತಿಗ
- ದಂತಿರಾಜ – ಶ್ರೇಷ್ಠ ಆನೆ; ಐರಾವತ
- ದಂತಿಶಿಶು – ಮರಿ ಆನೆ
- ದಂತಿಸಂತಾನ – ಆನೆಗಳ ಸಮೂಹ
- ದಂತುರ – ಹರಡಿರುವ
- ದಂತುರಿತ – ವ್ಯಾಪಿಸಿದ
- ದಂದಶೂಕ – ಹಾವು
- ದಂದಶೋಕಪತಾಕ – ಸರ್ಪಧ್ವಜ, ದುರ್ಯೋಧನ
- ದಂದಶೂಕಪತಿ – ಆದಿಶೇಷ
- ದಂದಶೂಕಪ್ರಮಾಥಿ – ಹಾವುಗಳ ಮರ್ದಕ, ಗರುಡ
- ದಂದಶೂಕಭಯ – ಹಾವಿನ ಭಯ
- ದಂದಶೂಕವನಿತೆ – ಹೆಣ್ಣು ಹಾವು
- ದಂದಹ್ಯಮಾನಗಾತ್ರೆ – ಸುಡುವ ದೇಹವುಳ್ಳವಳು; ಬಹಳ ವ್ಯಥೆಪಡುವವಳು
- ದಂದಹ್ಯಮಾನಮಾನಸ – ಬೇಯುವ ಮನಸ್ಸುಳ್ಳವನು
- ದಂದುಗ – ವ್ಯಥೆ; ಗೊಂದಲ
- ದಂಪತಿ – ಗಂಡಹೆಂಡಿರು
- ದಂಪತಿವಕ್ಕಿ – ಚಕ್ರವಾಕ ಜೋಡಿ
- ದಂಬಿಸು – ಮೋಸಗೊಳಿಸು
- ದಂಭಾಲಿ(ಳಿ) – ವಜ್ರಾಯುಧ
- ದಂಭೋಳಿ – ದಂಭಾಲಿ(ಳಿ)
- ದಂಭೋಳಿಹಸ್ತ – ದಂಭೋಳಿಯನ್ನು ಹಿಡಿದವನು, ಇಂದ್ರ
- ದಂಶ – ಕಾಡುನೊಣ; ಚಿಗಟ
- ದಂಶ(ನ) – ಕಚ್ಚುವುದು
- ದಂಷ್ಟ್ರ(ಕ) – ದಾಡೆ, ಕೋರೆ ಹಲ್ಲು
- ದಂಷ್ಟ್ರಾಂಕುರ – ಮೊಳೆಯುತ್ತಿರುವ ಕೋರೆ
- ದಂಷ್ಟ್ರಾಕಿರಣ – ಕೋರೆದಾಡೆಗಳ ಕಾಂತಿ
- ದಂಷ್ಟ್ರಾಗ್ರ – ಕೋರೆದಾಡೆಯ ಮೊನೆ
- ದಂಸ – ದಂಶ
- ದಕ್ಕಣ – ನೋಡಲು ಚೆಂದವಾದ
- ದಕ್ಕು – ದಸಿ
- ದಕ್ಕುಂದಲೆವರಿ – ಗರ್ವದಿಂದ ಮುಂದೆ ನುಗ್ಗು
- ದಕ್ಷ – ಸಮರ್ಥ
- ದಕ್ಷತೆ – ಸಾಮಥ್ರ್ಯ
- ದಕ್ಷಿಣ – ಬಲಗಡೆ
- ದಕ್ಷಿಣಖುರ – ಬಲಗಾಲಿನ ಗೊರಸು
- ದಕ್ಷಿಣಚರಣ – ಬಲಗಾಲು
- ದಕ್ಷಿಣಪಕ್ಷ – ಬಲಪಕ್ಕ
- ದಕ್ಷಿಣಬಾಹು – ಬಲತೋಳು
- ದಕ್ಷಿಣಭುಜ – ದಕ್ಷಿಣಬಾಹು
- ದಕ್ಷಿಣಮುಷ್ಟಿ – ಬಲ ಮುಷ್ಟಿ
- ದಕ್ಷಿಣವರ್ತನ – ಬಲಕ್ಕೆ ತಿರುಗುವುದು
- ದಕ್ಷಿಣಶ್ರೇಣಿ – ದಕ್ಷಿಣರಾಜ್ಯಗಳ ಸಾಲು
- ದಕ್ಷಿಣಹಸ್ತ – ಬಲಗೈ
- ದಕ್ಷಣಾಂಘ್ರಿ – ಬಲಗಾಲು
- ದಕ್ಷಿಣಾಂಸ – ಬಲಭುಜ
- ದಕ್ಷಣಾಕ್ಷಿಸ್ಪಂದ – ಬಲಗಣ್ಣ ಅದುರುವಿಕೆ
- ದಕ್ಷಿಣಾಗ್ನಿ – ದಕ್ಷಿಣ ದಿಕ್ಕು; ಅಗ್ನಿತ್ರಯದಲ್ಲಿ ಒಂದು
- ದಕ್ಷಿಣಾಪಥ – ವಿಂಧ್ಯಪರ್ವತದ ದಕ್ಷಿಣಕ್ಕಿರುವ ಭೂಭಾಗ
- ದಕ್ಷಿಣಾಭಿಮುಖ – ದಕ್ಷಿಣಕ್ಕೆ ಎದುರಾದ
- ದಕ್ಷಿಣಾಮೂರ್ತಿ – ಶಿವನ ಇಪ್ಪತ್ತೈದು ಲೀಲಾಮೂರ್ತಿಗಳಲ್ಲಿ ಒಂದು
- ದಕ್ಷಿಣಾವರ್ತ – ಬಲಭಾಗವಾಗಿ ಸುತ್ತು, ಪ್ರದಕ್ಷಿಣೆ
- ದಕ್ಷಿಣಾವರ್ತನಾಭಿ – ಬಲಸುಳಿ
- ದಕ್ಷಿಣಾವೃತ್ತಿ – ಸಂಗೀತದಲ್ಲಿ ಗೀತ ಹಾಗೂ ವಾದ್ಯಗಳ ಪ್ರಾಧಾನ್ಯ
- ದಕ್ಷಿಣೆಗೊಡು – ಗುರುಹಿರಿಯರಿಗೆ ದಾನ ನೀಡು
- ದಕ್ಷಿಣೇಂದ್ರ – ದಕ್ಷಿಣ ದಿಕ್ಪತಿ; (ಜೈನ) ಆರು ಮಂದಿ ದಕ್ಷಿಣೇಂದ್ರರು: ಸೌಧರ್ಮ, ಸನತ್ಕುಮಾರ, ಬ್ರಹ್ಮ, ಶುಕ, ಅನತ, ಅರಣ್ಯ
- ದಗುಂತಿ – ಆಧಿಕ್ಯ
- ದಗ್ಧವಾರಿ – ಉರಿಯುವ ನೀರು
- ದಟ್ಟ – ಒತ್ತಾದ
- ದಟ್ಟಡಿ – ಮಕ್ಕಳಿಡುವ ತಪ್ಪು ಹೆಜ್ಜೆ
- ದಟ್ಟಡಿಯಿಡು – ನಡೆಯಲು ತೊಡಗು
- ದಟ್ಟವಬಳ್ಳಿ – ದಟ್ಟವಾಗಿ ಹಬ್ಬಿರುವ ಬಳ್ಳಿ
- ದಟ್ಟಿತು(ತ್ತು) – ದಪ್ಪನಾದ
- ದಡದಡಿಸು – ಜೋರಾಗಿ ನಡುಗು
- ದಡಿ – ಕೋಲು
- ದಡಿಗ – ದೊಣ್ಣೆಯನ್ನು ಹಿಡಿದವನು; ಪರಾಕ್ರಮಿ
- ದಡಿಗವೆಣ – ಭರಿ ಹೆಣ
- ದಡಿಯ – ದಡಿಗ
- ದಡ್ಡಕ್ಕರ – ಒತ್ತಕ್ಷರ, ದ್ವಿತ್ವ
- ದಡ್ಡಸ – ಡೊಳ್ಳು
- ದಡ್ಡಿ – ತೆರೆ; ಬಲೆ
- ದಡ್ಡು – ಒರಟು; ಜಡ್ಡುಗಟ್ಟಿರುವ
- ದಡ್ಡುಗಟ್ಟು – ಒರಟಾಗು
- ದಣಿಂಬ – ಮೆತ್ತೆ
- ದಣುವಟ್ಟಿ – ಕುಸ್ತಿಯ ಒಂದು ವರಸೆ
- ದತ್ತ – ಕೊಟ್ಟ
- ದತ್ತಕನಿಷ್ಟಿಕ – (ಎಣಿಕೆಯಲ್ಲಿ) ಮೊದಲನೆಯವನು
- ದತ್ತಾವಧಾನ – ಗಮನ ಹರಿಸುವುದು
- ದತ್ತಿ – ದಾನ
- ದಧಿ – ಮೊಸರು
- ದಧಿಮುಖ – (ಜೈನ) ಒಂದು ಪರ್ವತ; ಇಂಥ ಹದಿನಾರು ಪರ್ವತಗಳಿರುವುವೆಂದು ಪುರಾಣಗಳ ಹೇಳಿಕೆ
- ದನಗಾಹಿ – ಗೋಪಾಲ
- ದನಿ – (ಧ್ವನಿ) ಸಪ್ಪುಳ
- ದನಿಗೆಯ್ – ಸದ್ದುಮಾಡು
- ದನಿದೋ¾ು – ದನಿಮಾಡು
- ದನಿಯೆತ್ತು – ದನಿಯುಂಟುಮಾಡು
- ದನುಜ – ದನು ಎಂಬುವವನ ವಂಶದ ರಾಕ್ಷಸ
- ದನುಜವಿರೋಧಿ – ರಾಕ್ಷಸವೈರಿ, ಕೃಷ್ಣ
- ದನುಜಾಂತಕ – ರಾಕ್ಷಸರನ್ನು ಕೊಲ್ಲುವವನು
- ದನುಜಾಧೀಶ್ವರ – ರಾಕ್ಷಸರ ಒಡೆಯ, ರಾವಣ
- ದನುಜಾರಾತಿ – ದನುಜವಿರೋಧಿ
- ದನುಜಾರಾತಿಜಾತಾಧಿವಾಸ – ಮೇರುಪರ್ವತ
- ದನುಜಾರಿ – ದನುಜವಿರೋಧಿ
- ದನುಜಾರಿರಿಪು – ಕೃಷ್ಣನ ಶತ್ರು, ಜರಾಸಂಧ
- ದನುಜೇಂಧ್ರ – ರಾಕ್ಷಸರ ರಾಜ
- ದನಿಜೋದೀರಿತ – (ಜೈನ) ರಾಕ್ಷಸರಿಂ ಉಂಟಾದ ದುಃಖ
- ದನುಸುತ – ದನುಜ
- ದಪ್ಪಗ – (ದರ್ಪಕ) ಮನ್ಮಥ
- ದಬ್ಬಳ(ಣ) – ದಪ್ಪನಾದ ಸೂಜಿ
- ದಬ್ಬುಕ – ಕಲ್ಲು ಸೀಳುವ ಚಾಣ; ಹಾರೆ
- ದಮ – ನಿಗ್ರಹ
- ದಮನಕ –
ಪಂಚತಂತ್ರ
ದ ಒಂದು ನರಿ - ದಮಿತಾರಿ – ಅರಿಗಳನ್ನು ದಮನಮಾಡಿದವನು
- ದಮ್ಮ – ದ್ರಮ್ಮ, ಒಂದು ಚಿನ್ನದ ನಾಣ್ಯ
- ದಮ್ಮಾಣಿ – (ಧರ್ಮಪಾನೀಯ) ಧರ್ಮಾರ್ಥವಾಗಿ ಪ್ರಯಾಣಿಕರಿಗೆ ಕೊಡುವ ನೀರು
- ದಮ್ಮಿ – ಧರ್ಮವಂತ
- ದಯಂಗೆಯ್ – ಕೃಪೆ ತೋರಿಸು
- ದಯಾಗರ್ಭ – ಕರುಣಾಳು
- ದಯಾದತ್ತಿ – (ಜೈನ) ನಾಲ್ಕು ವಿಧವಾದ ದತ್ತಿಗಳಲ್ಲಿ ಒಂದು; ನೋಡಿ, ಚತುರ್ವಿಧದತ್ತಿ
- ದಯಾಪರ – ದಯಾವಂತ
- ದಯಾಪರಿಣತಿ – ದಯೆಯಿಂದ ಕೂಡಿರುವುದು
- ದಯಾಬ್ಧಿ – ದಯೆಯ ಸಾಗರ
- ದಯಾರಸ – ಕರುಣೆಯ ರಸ
- ದಯಾರಸಾರ್ಣವ – ಕರುಣೆಯೆಂಬ ರಸದ ಸಮುದ್ರ
- ದಯಾದ್ರ್ರಹೃದಯ – ದಯೆಯಿಂದ ತೊಯ್ದ ಹೃದಯವುಳ್ಳವನು
- ದಯಾಲು(ಳು) – ದಯೆಯಿಂದ ಕೂಡಿರುವವನು
- ದಯಿತ – ಪ್ರಿಯ
- ದಯಿತಾಸಂಬಂಧ – ನಲ್ಲೆಯ ಸಂಬಂಧ
- ದಯಿತೆ – ನಲ್ಲೆ, ಹೆಂಡತಿ
- ದಯೆ – ಕರುಣೆ
- ದಯೆಗೆಡು – ಕರುಣೆಯನ್ನು ಕಳೆದುಕೊ
- ದಯೆಗೆಯ್ – ಕರುಣೆಯನ್ನು ಹೊಂದು
- ದಯೆವೆರಸು – ದಯೆಯಿಂದ ಕೂಡಿ(ರು)
- ದಯೈಕನಿಧಿ – ದಯೆಯೆಗ ಒಬ್ಬನೇ ಆದವನು
- ದರ – ಸ್ವಲ್ಪ
- ದರದಳಿತ – ಕೊಂಚ ಅರಳಿದ
- ದರನಿಮೀಲಿತಲೋಚನ – ಅರೆಮುಗಿದ ಕಣ್ಣು
- ದರನಿಮೀಳಿತಾಂಬಕ – ದರನಿಮೀಲಿತಲೋಚನ
- ದರವಿಕಸಿತ – ದರದಳಿತ
- ದರವುರ – ಕೀಳಾದ
- ದರವುರಂಗಾಣ್ – ಆಕಸ್ಮಿಕವಾಗಿ ನೋಡಿ
- ದರವುರಗಲಿ – ಅಲ್ಪಶೂರ
- ದರವುರವಿದ್ದೆ – ಕ್ಷುಲ್ಲಕಜ್ಞಾನ
- ದರವುರಿಗ – ಸಾಮಾನ್ಯ
- ದರಸ್ಮಿತ – ಮುಗುಳ್ನಗೆ
- ದರವುರಿಗ – ಸಾಮಾನ್ಯ
- ದರಸ್ಮೇರ – ದರಸ್ಮಿತ
- ದರಹಸಿತ – ಮುಗುಳ್ನಗೆಯಿಂದ ಕೂಡಿದ
- ದರಹಾಸ – ದರಸ್ಮಿತ
- ದರಹಾಸಪೇಶಲ – ಮುಗುಳ್ನಗೆಗೂಡಿ ಮನೋಹರನಾದ
- ದರಿ – ಕಂದರ; ಬಿರುಕು
- ದರೀ – ಬಿಲ
- ದರಿಗೊಳ್ – ಬಿರುಕುಬಿಡು
- ದರೆ – (ಧರೆ) ಭೂಮಿ
- ದರ್ಕು – ದಸಿ, ಚೂಪಾದ ಬೆಣೆ
- ದರ್ಕುಂದಲೆ – ಶೂಲಕ್ಕೇರಿಸಿದ ತಲೆ
- ದರ್ಕುಂದಲೆವಾಯ್ – ಸೊಕ್ಕಿನಿಂದ ಕೂಡು
- ದರ್ದುರ – ಕಪ್ಪೆ; ಊದಿಕೊಳ್ಳುವಿಕೆ
- ದರ್ಪಕ – ಮನ್ಮಥ
- ದರ್ಪಕದರ್ಪಭಂಜನ – ಕಾಮನ ದರ್ಪವನ್ನು ನಿಗ್ರಹಿಸಿದವನು, ಅರ್ಹಂತ
- ದರ್ಪಕವಿರೋಧಿ – ಕಾಮನ ವೈರಿ, ಶಿವ
- ದರ್ಪಣ – ಕನ್ನಡಿ
- ದರ್ಪಿತ – ಅಹಂಕಾರದಿಂದ ಕೂಡಿದ
- ದರ್ಪಿಷ್ಠ – ಅಹಂಕಾರಿ
- ದರ್ಭಶಯನ – ದಭೇಯ ಹಾಸಿಗೆ
- ದರ್ಭಶಯ್ಯೆ – ದರ್ಭಶಯನ
- ದರ್ಭಾಂಕುರ – ದರ್ಭೇಯ ಮೊನೆ
- ದರ್ಭಾಧಿಕಾರ – ದಭೇ ಹಿಡಿದು ಕರ್ಮ ಮಾಡುವ ಅಧಿಕಾರ
- ದರ್ಭಾಸ್ತರಣ – ದರ್ಭಶಯನ
- ದರ್ವಿ – ಸೌಟು
- ದರ್ವೀಕರ – ಸೌಟು ಹಿಡಿದವನು, ಬಾಣಸಿಗ; ಹಾವು
- ದರ್ಶಕ – ನೋಡಿವವನು
- ದರ್ಶನ – ನೋಡಿವುದು
- ದರ್ಶನಮೋಹ – (ಜೈನ) ಎರಡು ಬಗೆಯ ಮೋಹನೀಯಕರ್ಮಗಳಲ್ಲಿ ಒಂದು; ಸಮ್ಯಗ್ದರ್ಶನಕ್ಕೆ ಅಡ್ಡಿಯಾದುದು
- ದರ್ಶನಮೋಹನೀಯ – ದರ್ಶನಮೋಹವನ್ನು ಉಂಟುಮಾಡುವಂಥದು
- ದರ್ಶನರತ್ನ – (ಜೈನ) ಸಮ್ಯಕ್ದೃಷ್ಟಿ
- ದರ್ಶನವತ್ಸಲ(ಳ)ತ್ವ – ದರ್ಶನದಲ್ಲಿ ಒಲವು; ಹದಿನಾರು ಭಾವಗಳಲ್ಲಿ ಒಂದು
- ದರ್ಶನವಿಶುದ್ಧ – (ಜೈನ) ಪರಿಶುದ್ಧ ಸಮ್ಯಕ್ದರ್ಶನ ಉಳ್ಳವನು
- ದರ್ಶನವಿಶುದ್ಧಿ – (ಜೈನ) ತೀರ್ಥಂಕರತ್ವಕ್ಕೆ ಕಾರಣವಾಗುವ ಹದಿನಾರು ಭಾವಗಳಲ್ಲಿ ಒಂದು; ಸಮ್ಯಗ್ದರ್ಶನದ ಬಗೆಗಿನ ಪರಿಶುದ್ಧ ದೃಷ್ಟಿ
- ದರ್ಶನಶುದ್ಧಿ(ದ್ಧತೆ) – (ಜೈನ) ದರ್ಶನವಿಶುದ್ಧಿ
- ದರ್ಶನಾಚಾರ – (ಜೈನ) ಸಮ್ಯಗ್ದರ್ಶನದ ಎಂಟು ಅಂಗಗಳಲ್ಲಿ ವ್ಯವಹರಿಸುವಿಕೆ
- ದರ್ಶನಾವರಣ – (ಜೈನ) ಆತ್ಮನ ದರ್ಶನಶಕ್ತಿಯನ್ನು ಮರೆಮಾಡುವುದು
- ದರ್ಶನಾವರಣಚತುಷ್ಕ- (ಜೈನ) ಚಕ್ಷು, ಅಚಕ್ಷು, ಅವಧಿ, ಕೇವಲ ಎಂಬ ದರ್ಶನಾವರಣದ ನಾಲ್ಕು ಅಂಗಗಳು
- ದರ್ಶನಿಕ – (ಜೈನ) ಹನ್ನೊಂದು ವರ್ಗದ ಶ್ರಾವಕರಲ್ಲಿ ಮೊದಲನೆಯವನು
- ದಲ್ – ನಿಶ್ಚಿತವಾಗಿ; ಅಲ್ಲವೇ ಎಂಬ ಅವಧಾರಣಸೂಚಕ ಶಬ್ದ
- ದಲ(ಳ)ನ – ಸೀಳುವಿಕೆ
- ದವ – ಕಾಡು
- ದವದಹನ – ಕಾಡುಗಿಚ್ಚು
- ದವನ – ಸುವಾಸನೆಯ ಎಲೆಗಳುಳ್ಳ ಒಂದು ಸಸ್ಯ
- ದವಶೀಖಿ – ಕಾಡುಗಿಚ್ಚು
- ದವಳಾರ – ಬಿಳಿಯ ಹಾರ; (ಧವಲಾಗಾರ) ಬಿಳಿಯ ಮನೆ
- ದಶಕಂಠ – ಹತ್ತು ತಲೆಗಳುಳ್ಳವನು, ರಾವಣ
- ದಶಕಂಠವೈರಿ – ರಾವಣವೈರಿ, ಶ್ರೀರಾಮ
- ದಶಕಂಧರ – ದಶಕಂಠ
- ದಶಕುಲಧರ್ಮ – (ಜೈನ) ಸನ್ಯಾಸಿ ಅನುಸರಿಸಬೇಕಾದ ಕ್ಷಮೆ, ಮಾರ್ದವ, ಆರ್ಜವ, ಸತ್ಯ, ಶೌಚ, ಸಂಯಮ, ತಪಸ್ಸು, ತ್ಯಾಗ, ಅಕಿಂಚನ್ಯ, ಬ್ರಹ್ಮಚರ್ಯೆಗಳೆಂಬ ಹತ್ತು ಧರ್ಮಗಳು
- ದಶಗುಣ – ಹತ್ತು ಪಟ್ಟು; ಹಾಡಬೇಕಾದ ಕೃತಿಯಲ್ಲಿ ನಿರೀಕ್ಷಿಸುವ ಹತ್ತು ಗುಣಗಳು
- ದಶಗ್ರೀವ – ದಶಕಂಠ
- ದಶಧರ್ಮ – ದಶಕುಲಧರ್ಮ
- ದಶಧರ್ಮಧ(ಧಾ)ರ(ರಿ) – (ಜೈನ) ದಶಧರ್ಮಗಳನ್ನು ಹೊಂದಿದವನು
- ದಶನ – ಕಚ್ಚುವುದು; ಹಲ್ಲು
- ದಶನಕಾಂತಿ – ಹಲ್ಲುಗಳ ಕಾಂತಿ
- ದಶನಕ್ಷತ – ದಂತಕ್ಷತ, ಸಂಭೋಗಸಮಯದಲ್ಲಿ ಕಚ್ಚುದುರಿಂದಾಗುವ ಹಲ್ಲಿನಗುರುತು
- ದಶಣಘಟ್ಟನ – ಹಲ್ಲು ಕಡಿಯುವುದು
- ದಶನ(ನಿ)ಚಯ – ದಂತಪಂಕ್ತಿ
- ದಶನಚ್ಛದ – ಹಲ್ಲುಗಳನ್ನು ಮುಚ್ಚಿರುವುದು, ತುಟಿ
- ದಶನಥಟ್ಟನ – ಹಲ್ಲು ಕಡಿಯುವಿಕೆ
- ದಶನದ್ಯುತಿ – ದಶನಕಾಂತಿ
- ದಶನಪವನ – ಐದು ಪ್ರಾಣವಾಯುಗಳು (ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ) ಮತ್ತು ಐದು ಉಪವಾಯುಗಳು (ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ)
- ದಶನರುಚಿ – ದಶನಕಾಂತಿ
- ದಶನವಸನ – ದಶನಚ್ಛದ
- ದಶನಹತಿ – ದಶನಕ್ಷತ
- ದಶನಾಂಶು – ದಶನಕಾಂತಿ
- ದಶನೌಘ – ದಶನಚಯ
- ದಶಪೂರ್ವಧರ – (ಜೈನ) ಉತ್ಪಾದಪೂರ್ವ, ಆಗ್ರಾಯಣೀಯ, ವೀರ್ಯಾನುವಾದಪ್ರವಾದ, ಅಸ್ತಿನಾಸ್ತಿಪ್ರವಾದ, ಜ್ಞಾನಪ್ರವಾದ, ಸತ್ಯಪ್ರವಾದ, ಆತ್ಮಪ್ರವಾದ, ಕರ್ಮಪ್ರವಾದ, ಪ್ರತ್ಯಾಖ್ಯಾನ, ವಿದ್ಯಾನುವಾದ ಎಂಬ ದಶಪೂರ್ವಗಳನ್ನು ಅಭ್ಯಸಿಸಿದವನು
- ದಶಮ – ಹತ್ತನೆಯ
- ದಶಮದಶೆ – ಮದನಾವಸ್ಥೆಯ ಹತ್ತನೆಯದು, ಮರಣ
- ದಶಮಾವಸ್ಥೆ – ದಶಮದಶೆ
- ದಶಮುಖ – ಹತ್ತು ಮುಖಗಳು; ರಾವಣ
- ದಶರಥ – ಹತ್ತು ದಿಕ್ಕುಗಳಲ್ಲಿಯೂ ರಥವನ್ನು ನಡೆಸಬಲ್ಲವನು
- ದಶರೂಪಕ – ನಾಟಕ, ಪ್ರಕರಣ, ಚಾರಣ, ಭಾಣ, ಸಮವಕಾರ, ಡಿಮ, ಈಹಾಮೃಗ, ವ್ಯಾಯೋಗ, ಪ್ರಹಸನ, ವೀಧಿ ಎಂಬ ಹತ್ತು ರೂಪಕಗಳು
- ದಶವದನ – ದಶಮುಖ
- ದಶವಿಧಧರ್ಮ – ದಶಕುಲಧರ್ಮ
- ದಶವಿಧನಾದ – ಭ್ರಮರ, ಶಂಖ, ಮೃದಂಗ, ತಾಳ, ಗಂಟೆ, ವೀಣೆ, ಭೇರಿ, ದುಂದುಭಿ, ಸಮುದ್ರಗರ್ಜನೆ, ಮೇಘಗರ್ಜನೆಗಳೆಂಬ ಹತ್ತು ನಾದಗಳು
- ದಶವಿಧಶ್ರವಣಧರ್ಮ – ದಶಕುಲಧರ್ಮ
- ದಶವಿಧಸತ್ಯ – (ಜೈನ) ಜನಪದ, ಸಮ್ಮತಿ, ಸ್ಥಾಪನಾ, ನಾಮ, ರೂಪ, ಪ್ರತೀತ್ಯ, ವ್ಯವಹಾರ, ಸಂಭಾವನಾ, ಭಾವ, ಉಪಮಾ ಎಂಬ ಹತ್ತು ಬಗೆಯ ಸತ್ಯಗಳು
- ದಶವ್ಯಾಕರಣ – ಐಂದ್ರ, ಚಾಂದ್ರ, ಕಾಶಕೃತ್ಸ್ನ, ಕೌಮಾರ, ಶಾಕಟಾಯನ, ಸಾರಸ್ವತ, ಶಾಕಲ, ಅಪಿಶಲ, ಕಾತಂತ್ರ, ಪಾಣಿನೀಯ ಎಂಬ ಹತ್ತು ವ್ಯಾಕರಣಗಳು
- ದಶಶತಕರ (ಕಿರಣ) – ಸೂರ್ಯ
- ದಶಾಂಗ – ಹತ್ತು ಅಂಗಗಳು; (ಜೈನ) ಭೋಗಭೂಮಿಯ ಮಧ್ಯ, ಭೂಷಣ, ವಸ್ತ್ರ, ಆತೋದ್ಯ, ಸ್ರಗ್ಭವನ, ಭಾಜನ, ಅಶನ, ದೀಪ, ಪ್ರೋದ್ಯತ್, ಜ್ಯೋತಿಸ್ಥಿತಿ ಎಂಬ ಹತ್ತುಕಲ್ಪವೃಕ್ಷಗಳು
- ದಾಂಗಕಲ್ಪಕುಜ – (ಜೈನ) ದಶಾಂಗ
- ದಶಾಂಗಕಲ್ಪತರು – (ಜೈನ) ದಶಾಂಗ
- ದಶಾಂಗಭೋಗ – ಚಕ್ರವರ್ತಿಗಳಿಗೆ ದೊರಕುವದಿವ್ಯನಗರ, ಚತುರ್ದಶರತ್ನಗಳು, ನವನಿಧಿ, ಸೈನ್ಯ, ಭೋಜನ, ಭಾಜನ, ಶಯ್ಯಾ, ಆಸನ, ವಾಹನ, ನಾಟ್ಯ ಎಂಬ ಹತ್ತು ಭೋಗಗಳು
- ದಶಾನನ – ಹತ್ತುಮುಖಗಳುಳ್ಳವನು, ರಾವಣ
- ದಶಾವತಾರ – ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ ಎಂಬ ವಿಷ್ಣುವಿನ ಹತ್ತು ಅವತಾರಗಳು
- ದಶಾಸ್ಯ – ದಶಾನನ
- ದಶಾಸ್ಯಾಂತಕ – ದಶಾಸ್ಯನನ್ನು ಕೊಂದವನು, ಶ್ರೀರಾಮ
- ದಷ್ಟ(ಷ್ಟೆ) – ಕಚ್ಚಿಸಿಕೊಂಡವನು(ಳು)
- ದಸಿ(ಕು) – ತಿವಿಗೋಲು; ಶೂಲ
- ದಸಿಕ – ಶೂಲಕ್ಕೇರಿಸುವವನು
- ದಸೆ – ಅವಸ್ಥೆ
- ದಸ್ರಾತ್ಮಜರ್ – ದಸ್ರ+ಆತ್ಮಜರ್, ಅಶ್ವಿನೀದೇವತೆಗಳ
- ಮಕ್ಕಳು; ನಕುಲ ಮತ್ತು ಸಹದೇವ
- ದಹನ – ಅಗ್ನಿ; ಸುಡುವಿಕೆ
- ದಹನಕ್ರಿಯೆ – ಹೆಣವನ್ನು ಸುಡುವ ಕಾರ್ಯ
- ದಹನಾರ್ಚಿ – ಅಗ್ನಿಜ್ವಾಲೆ
- ದಹನಾಶೆ – ಅಗ್ನಿಯ ದಿಕ್ಕು, ಆಗ್ನೇಯ
- ದಹಿಸು – ಸುಡು
- ದಹ್ಯಮಾನ – ಸುಡುತ್ತಿರುವ
- ದಳ – ಪತ್ರ, ಎಸಳು; ದಟ್ಟ
- ದಳನ(ಣ) – ಸೀಳುವಿಕೆ
- ದಳಂಗೊಳಿಸು – ದಟ್ಟಗೊಳಿಸು
- ದಳಂಬಡೆ – ದಟ್ಟಗೊಳ್ಳು
- ದಳತ್ – ಅರಳುವ, ಚಿಗುರುವ
- ದಳತ್ಕೋಕನದಜಠರ – ದಳತ್+ಕೋಕನದ+ಜಠರ, ತಾವರೆಯನ್ನು ಹೊಕ್ಕುಳಲ್ಲಿ ಉಳ್ಳವನು, ವಿಷ್ಣು
- ದಳತ್ಪದ್ಮ – ಅರಳುವ ತಾವರೆ
- ದಳಬೆಸ – ದಳಗಳನ್ನು ಬಿಡಿಸುವ ಕೆಲಸ(?)
- ದಳಿಂಬ – ದಡಿಬ, ಮಡಿ ಬಟ್ಟೆ
- ದಳಿತಮಾರ – ಕಾಮನನ್ನು ದಮನಮಾಡಿದವನು
- ದಳಿತಾಬ್ಜ – ಅರಳಿದ ಕಮಲ
- ದಳಿತೇಂದೀವರ – ಅರಳಿದ ನೈದಿಲೆ
- ದಳಿತೇಕ್ಷಣೆ – ಅಗಲವಾದ ಕಣ್ಣುಳ್ಳವಳು
- ದಳಿವ – ದಡಿಬ
- ದಳಿಯಿಸು – ಸೀಳು
- ದಳಿವಿಡಿ – ಕೂಡಿಸು
- ದಳೆಪು – ನೆರೆ, ಕೂಡು
- ದಳ್ಳಿಸು – ಗರ್ವದಿಂದ ಮೆರೆ; ಸುಡು
- ದಳ್ಳುರಿ – ದೊಡ್ಡ ಉರಿ; ಗರ್ವದಿಂದ ಮೆರೆ
- ದಾಂಗುಡಿ – (ದಾವು+ಕುಡಿ) ದಾಟುವ ಕುಡಿ, ಹಬ್ಬುವ ಕುಡಿ
- ದಾಂಗುಡಿವಡೆ – ಹಬ್ಬು
- ದಾಂಗುಡಿವರಿ – ದಾಂಗುಡಿವಡೆ
- ದಾಂಗುಡಿವಿಡು – ದಾಂಗುಡಿವಡೆ
- ದಾಂಟು – ದಾಟು, ಲಂಘಿಸು; ನೆಗೆತ
- ದಾಕ್ಷಿಣಾತ್ಯೆ – ದಕ್ಷಿಣದೇಶದಲ್ಲಿ ಜನಿಸಿದವಳು
- ದಾಕ್ಷಿಣ್ಯ – ಅನುಕಂಪ
- ದಾಘ – ದಾಹ, ತಾಪ
- ದಾಡಿಮ – ದಾಳಿಂಬೆ
- ದಾಡೆ – ಕೋರೆಹಲ್ಲು
- ದಾಡೆಗಡಿ – ಹಲ್ಲು ಕಡಿ
- ದಾಡೆಗುಟ್ಟು – ದಾಡೆಗಡಿ
- ದಾತ – (ದಾತೃ) ದಾನಿ
- ದಾತವ್ಯ – ಕೊಡಲು ಅರ್ಹವಾದ
- ದಾತೃ – ದಾನಿ
- ದಾತ್ರ – ಕುಡುಗೋಲು
- ದಾದಿ – (ಧಾತ್ರಿ) ಸಾಕಿದವಳು; ದಾಸಿ
- ದಾದಿಕಾ¾ವೆಸ – ದಾಸಿಯ ಕೆಲಸ
- ದಾನ – ಮದೋದಕ; ತ್ಯಾಗ
- ದಾನಗುಣ – ದಾನಕೊಡುವ ಸ್ವಭಾವ
- ದಾನಚತುಷ್ಟಯ – (ಜೈನ) ಆಹಾರ, ಅಭಯ, ಭೈಷಜ, ಶಾಸ್ತ್ರಗಳೆಂಬ ನಾಲ್ಕು ಬಗೆಯ ದಾನಗಳು
- ದಾನಚಿಂತಾಮಣಿ – ಚಿಂತಾಮಣಿಯಂತೆ ಕೊಡುಗೈದಾನಿ
- ದಾನತೀರ್ಥಪ್ರವರ್ತಕ – (ಜೈನ) ಚರಿಗೆಗೆ ಬಂದ ಮುನಿಗೆ ಮೊದಲು ದಾನ ನೀಡುವವನು
- ದಾನದಂತಿ – ಮದೋದಕವನ್ನು ಸುರಿಸುವ ಆನೆ
- ದಾನಧಾರಾಂಬು – ಸುರಿಯುವ ಮದಜಲ
- ದಾನಧಾರೆ – ದಾನಧಾರಾಂಬು
- ದಾನಪರ – ದಾನ ನೀಡುವುದರಲ್ಲಿ ನಿರತ; ದಾನದಂತಿ
- ದಾನಪ್ಲವ – ಮದಜಲದ ಪ್ರವಾಹ
- ದಾನವ – ದನುವಿನ ಮಗ; ರಾಕ್ಷಸ
- ದಾನವಕುಲ – ರಾಕ್ಷಸವರ್ಗ
- ದಾನವಖಳ – ಖೂಳ ರಾಕ್ಷಸ
- ದಾನವಮರ್ದನ – ರಾಕ್ಷಸಸಂಹಾರಿ
- ದಾನವರಾಜ – ರಾಕ್ಷಸರಾಜ
- ದಾನವರಿಪು – ರಾಕ್ಷಸಶತ್ರು, ವಿಷ್ಣು
- ದಾನವಸೇನೆ – ರಾಕ್ಷಸ ಪಡೆ
- ದಾನವಾರಿ – ರಾಕ್ಷಸಶತ್ರು
- ದಾನವಿಘ್ನ – ದಾನಕ್ಕೆ ಮಾಡುವ ಅಡ್ಡಿ
- ದಾನವಿನೋದ – ದಾನ ನೀಡುವುದರಲ್ಲಿ ಸಂತಸ ಪಡೆಯುವವನು
- ದಾನವ್ಯಸನಿ – ದಾನ ನಿಡುವವುದರಲ್ಲಿ ಅತ್ಯಾಸಕ್ತ
- ದಾನವ್ರತ – (ಜೈನ) ದಾನಮಾಡುವ ವ್ರತ; ಒಂದು ಶಿಕ್ಷಾವ್ರತ
- ದಾನಶಾಲೆ – ಧರ್ಮಶಾಲೆ
- ದಾನಶೂರ – ದಾನ ನಿಡುವುದರಲ್ಲಿ ಶೂರ
- ದಾನಾಂಧ – ಮದದಿಂದ ಕುರುಡಾದ (ಆನೆ)
- ದಾನಾಂಬುಧಾರೆ – ಮದಜಲದ ಧಾರೆ
- ದಾನಾನುಮೋದ – ದಾನ ಕೊಡಲು ಸಮ್ಮತಿ
- ದಾನಾಸಾರ – ದಾನ ಕೊಡುವಾಗ ಹೊಯ್ಯುವ ನೀರಿನ ಮಳೆ
- ದಾನಿ – ದಾನ ಕೊಡುವವನು
- ದಾಮ – ಮನೆ; ಹಗ್ಗ; ಸೊಂಟಪಟ್ಟಿ (ಡಾಬು)
- ದಾಮಕ – ಹಾರ
- ದಾಮೋದರ – ಚಿಕ್ಕಂದಿನಲ್ಲಿ ಯಶೋದೆ ಸೊಂಟಕ್ಕೆ ಹಗ್ಗ ಕಟ್ಟುತ್ತಿದ್ದುದರಿಂದ ಕೃಷ್ಣನಿಗೆ ಈ ಹೆಸರು, ವಿಷ್ಣು
- ದಾಯ – ಪಗಡೆಯ ಗರ; ಬಹುಮಾನ; ಅವಕಾಶ
- ದಾಯಂಗೊಡು – ಅವಕಾಶ ನೀಡು
- ದಾಯಂಬಡೆ – ಅವಕಾಶ ಪಡೆದುಕೊ; ಬೇಕಾದ ಗರ ಪಡೆದುಕೊ
- ದಾಯಾದ – ಜ್ಞಾತಿ; ಪಾಲು ಪಡೆಯಲು ಅರ್ಹನಾದವನು
- ದಾಯಿಗರ್ – ದಾಯಾದಿಗಳು
- ದಾಯಿಗತನ – ದಾಯಾದಿಯ ಸ್ವಭಾವ, ವೈರ
- ದಾಯಿತ(ದ) – ಇಷ್ಟಮಿತ್ರ; ನೆಂಟ
- ದಾರ – ನೂಲು; ದ್ವಾರ
- ದಾರಕ – ಹುಡುಗ; ಸೀಳುವವನು
- ದಾರಕಮಲ್ಲ – ಗಟ್ಟಿಗನಾದ ಹುಡುಗ
- ದಾರವಂದ – (ದ್ವಾರಬಂಧ) ಬಾಗಿಲ ಚೌಕಟ್ಟು
- ದಾರವಟ್ಟ – ಪುರದ್ವಾರ; ಮುಂಬಾಗಿಲು
- ದಾರವಟ್ಟಿಗ – ಬಾಗಿಲು ಕಾಯುವವನು
- ದಾರಿಕೆ – ಸೂಳೆ
- ದಾರಿಗೆಡು – ದಾರಿತಪ್ಪು
- ದಾರಿತ – ಸೀಳಿದ
- ದಾರಿದ್ರ(್ಯದ್ರ) – ಬಡತನ
- ದಾರಿದ್ರ್ಯವಿದ್ರಾವಣ – ಬಡತನವನ್ನು ನೀಗುವವನು
- ದಾರಿದ್ರ್ಯಾಭಿಭೂತ – ಬಡತನದ ಪೀಡೆಗೊಳಗಾದವ
- ದಾರು – ದಿಮ್ಮಿ
- ದಾರುಕರ್ಮ – ಮರಗೆಲಸ
- ದಾರುಣ – ಕ್ರೂರ
- ದಾರುಣತೆ – ಕ್ರೌರ್ಯ
- ದಾರುಣಮುಖ – ಕ್ರೂರಮುಖದವನು
- ದಾರುದಾರುಣ – ದಿಮ್ಮಿಯಂತೆ ನಿಸ್ಪಂದವಾದ
- ದಾವ – ದವ, ಕಾಡು
- ದಾವಣ – ಚಪ್ಪರ
- ದಾವಣಿ – ಹಗ್ಗ
- ದಾವಣಿಗಟ್ಟು – ಸಾಲುಗಟ್ಟು
- ದಾವತಿ – ಧಾವತಿ, ಶ್ರಮ, ದಣಿವು
- ದಾವದಗ್ಧ – ಕಾಡುಗಿಚ್ಚಲ್ಲಿ ಸುಟ್ಟುಹೋದ
- ದಾವದಹನ – ಕಾಡುಗಿಚ್ಚು
- ದಾವಪಾವಕ – ದಾವದಹನ
- ದಾವಶಿಖಿ – ದಾವದಹನ
- ದಾವಾಗ್ನಿ – ದಾವದಹನ
- ದಾವಾನಲ(ಳ) – ದಾವದಹನ
- ದಾವು – ಹಗ್ಗ
- ದಾಶ – ಬೆಸ್ತ
- ದಾಷ್ಟಿಕ – ಕಚ್ಚಲ್ಪಟ್ಟವನು
- ದಾಸವಣ – ದಾಸವಾಳ
- ದಾಸೇರಕ – ದಾಸಿಯ ಮಗ
- ದಾಹ – ತಾಪ
- ದಾಹಿಕಾಶಕ್ತಿ – ಸುಡುವ ಶಕ್ತಿ
- ದಾಹಿನಿ – ಬೇಯುತ್ತಿರುವವಳು
- ದಾಹೋತ್ತರ – ಸುಟ್ಟು ಪರಿಶುದ್ಧವಾದದ್ದು
- ದಾಳ – ಪಗಡೆಯಾಟದ ಗರ ಬೀಳಿಸುವ ಸಾಧನ
- ದಾಳಿಂಬ – ದಾಡಿಮ
- ದಿಂಕಿಕ್ಕು – ಕುಪ್ಪಳಿಸು, ನೆಗೆದಾಡು
- ದಿಂಕುಗೊಳ್ – ಚಿಮ್ಮು, ಹಾರು, ಕುಪ್ಪಳಿಸು
- ದಿಂಡು – ಪಿಂಡಿ, ಹೊರೆ; ಬಾಳೆಯ ದಂಟಿನ ಒಳಭಾಗ
- ದಿಂಡುಕ – ದಪ್ಪವಾದ ದೇಹವುಳ್ಳವನು
- ದಿಂಡುಗೆಡಪು – ಮರದ ತುಂಡಿನಂತೆ ಕೆಡವು
- ದಿಂಡುಗೆಡೆ – ಮರದ ತುಂಡಿನಂತೆ ಬೀಳು
- ದಿಂಡುವಾಯ್ – ರಭಸದಿಂದ ನುಗ್ಗು
- ದಿಕ್ಕರಿ- ದಿಗ್ಗಜ
- ದಿಕ್ಕರಿಕರ – ದಿಗ್ಗಜದ ಸೊಂಡಿಲು
- ದಿಕ್ಕರಿನಿಚಯ – ದಿಗ್ಗಜಗಳ ಸಮೂಹ
- ದಿಕ್ಕು – ದೆಸೆ
- ದಿಕ್ಕುಂಜರ – ದಿಕ್ಕರಿ
- ದಿಕ್ಕುಂಭಿ – ದಿಕ್ಕರಿ
- ದಿಕ್ಕುಮಾರ – ದಿಕ್ಪಾಲಕ
- ದಿಕ್ಚಕ್ರ – ದಿಗ್ವಲಯ
- ದಿಕ್ತಟ – ದಿಕ್ಕಿನ ಕೊನೆ
- ದಿಕ್ಪ – ದಿಕ್ಪಾಲಕ
- ದಿಕ್ಪತಿ – ದಿಕ್ಕಿನ ಒಡೆಯ
- ದಿಕ್ಪಾರ – ದಿಕ್ಕಿನ ಎಲ್ಲೆ
- ದಿಕ್ಪ್ರಸರ – ದಿಕ್ಕುಗಳ ಸಮೂಹ
- ದಿಕ್ಸ್ವಸ್ತಿಕ – (ಜೈನ) ಒಂದು ಸಭಾಮಂಟಪ
- ದಿಗಂತ – ದಿಕ್ಕಿನ ಕೊನೆ, ಕ್ಷಿತಿಜ
- ದಿಗಂತರ – ದಿಕ್ಕುಗಳ ನಡುವಣ ಪ್ರದೇಶ
- ದಿಗಂತರಾಳ – ದಿಗಂತರ
- ದಿಗಂತರೋಪಗತ – ದಿಕ್ಕಿನ ಕೊನೆ ಮುಟ್ಟಿದ
- ದಿಗಂತರದೀಕ್ಷೆ – (ಜೈನ) ದಿಗಂಬರ ಸನ್ಯಾಸಿಯ ದೀಕ್ಷೆ
- ದಿಗಂತರರೂಪ – ಬೆತ್ತಲೆ ರೂಪ
- ದಿಗಂಬರಲೀಲೆ – (ಜೈನ) ದಿಗಂಬರತ್ವದ ಶೋಭೆ
- ದಿಗಂಬರವಿಳಾಸ – ದಿಗಂಬರಲೀಲೆ
- ದಿಗಧಿಪ – ದಿಕ್ಪಾಲಕ
- ದಿಗಧೀಶ – ದಿಗಧಿಪ
- ದಿಗವಲೋಕನಗೃಹ – ದಿಕ್ಕುಗಳನ್ನು ನೋಡಲು ಅನುಕೂಲವಾಗುವ ಎತ್ತರವಾದ ಮನೆ
- ದಿಗಿಭ – ದಿಕ್ಕರಿ
- ದಿಗಿಭೇಂದ್ರ – ಶ್ರೇಷ್ಠ ದಿಕ್ಕರಿ, ಐರಾವತ
- ದಿಗ್ಗಜ – ಭೂಮಿಯನ್ನು ಎಂಟು ದಿಕ್ಕುಗಳಲ್ಲಿ ಹೊತ್ತಿವೆ ಎನ್ನಲಾದ ಐರಾವತ, ಪುಂಡರೀಕ, ವಾಮನ ಕುಮುದ, ಅಂಜನ, ಪುಷ್ಪದಂತ, ಸಾರ್ವಭೌಮ, ಸುಪ್ರತೀಕ ಎಂಬ ಆನೆಗಳು
- ದಿಗ್ಗಜರಾಜಿ – ದಿಗ್ಗಜಗಳ ಗುಂಪು
- ದಿಗ್ಜಯಂಗೆಯ್ – ದಿಗ್ವಿಜಯವನ್ನು ಕೈಗೊಳ್ಳು
- ದಿಗ್ಜಯೋದ್ಯಮ – ದಿಕ್ಕುಗಳನ್ನು ಗೆಲ್ಲುವ ಕೆಲಸ
- ದಿಗ್ದಂತಿ – ದಿಕ್ಕರಿ
- ದಿಗ್ದಂತಿಯೂಥ – ದಿಕ್ಕರಿಗಳ ಸಮೂಹ
- ದಿಗ್ದಾಹ – ದಿಕ್ಕಿನಲ್ಲಿ ಕಾಣಿಸಿಕೊಳ್ಳುವ ಬೆಂಕಿ; ಅಪಶಕುನ
- ದಿಗ್ದೇವತೆ – ದಿಕ್ಕಿನ ಅಧಿದೇವತೆ
- ದಿಗ್ಧೂಮ – ದಿಕ್ಕಿನಲ್ಲಿ ಕಾಣಿಸಿಕೊಳ್ಳು ಹೊಗೆ
- ದಿಗ್ಭವ – ದಿಕ್ಕಿನಲ್ಲಿ ಉಂಟಾಗುವ ವೈಹಾಯಸ, ಭೌಮ, ದಿಗ್ಭವ, ಸೈನ್ಯಜ, ಗೃಹೋದ್ಭೂತ ಎಂಬ ಐದು ಬಗೆಯ ಉತ್ಪತಗಳು
- ದಿಗ್ಭ್ರಾಮಿತ – ಗದಾಯುದ್ಧದ ಒಂದು ವರಸೆ
- ದಿಗ್ರದನಿ – ದಿಕ್ಕರಿ
- ದಿಗ್ರಾಜಿ- ದಿಕ್ಕುಗಳ ಸಮೂಹ
- ದಿಗ್ವಸನ – ದಿಗಂಬರ
- ದಿಗ್ವಾರಣ – ದಿಗ್ಗಜ
- ದಿಗ್ವಾಸ – ದಿಗಂಬರ
- ದಿಗ್ವಿಜಯ – ಎಲ್ಲ ದಿಕ್ಕುಗಳ ರಾಜ್ಯಗಳನ್ನೂ ಗೆಲ್ಲುವುದು
- ದಿಗ್ವಿತತಿ – ದಿಕ್ಕುಗಳ ಸಮೂಹ
- ದಿಗ್ವಿವರ – ದಿಕ್ಕುಗಳ ನಡುವಣ ಪ್ರದೇಶ
- ದಿಙ್ಮುಖ – ದಿಕ್ಕಿನ ಮುಂಭಾಗ
- ದಿಙ್ಮೂಢ – ದಿಕ್ಕು ತೋಚದಂತೆ ಗೊಂದಲಗೊಂಡವನು
- ದಿಟ – ವಾಸ್ತವ
- ದಿಟಂ – ನಿಶ್ಚಿತವಾಗಿಯೂ
- ದಿಟ್ಟಿ – (ದೃಷ್ಟಿ) ಕಣ್ಣು; ನೋಟ
- ದಿಟ್ಟಿಗೆವರ್ – ಕಣ್ಣಿಗೆ ಬೀಳು
- ದಿಟ್ಟಿಗೆಡು – ಕಂಗೆಡು
- ದಿಟ್ಟಿವಿಸ – (ದೃಷ್ಟಿವಿಷ) ಕೆಟ್ಟ ಕಣ್ಣು
- ದಿಟ್ಟಿವೆಳಗು – ಕಣ್ಣ ಕಾಂತಿ
- ದಿಟ್ಟಿಸು – ನೋಡಿ
- ದಿತಿಜ – ದಿತಿಯ ಮಗ; ರಾಕ್ಷಸ; ನೈರುಯ್ತ ದಿಕ್ಕಿನ
- ಅಧಿಪತಿಯಾದ ನೈಋತ್ಯ
- ದಿತಿಜಕುಲ(ಳ) – ರಾಕ್ಷಸ ಕುಲ
- ದಿತಿಜಾರಿ – ರಾಕ್ಷಸರ ಶತ್ರು; ಕೃಷ್ಣ
- ದಿತಿಸುತ – ದಿತಿಜ
- ದಿನ – ಹಗಲು; ಸೂರ್ಯ ಇರುವಷ್ಟು ದಿನದ ಅವಧಿ
- ದಿನಕರ – ಸೂರ್ಯ
- ದಿನಕರತನಯ – ಸೂರ್ಯನ ಮಗ, ಕರ್ಣ; ಶನಿ; ಯಮ; ಸುಗ್ರೀವ
- ದಿನಕರತೇಜ – ಸೂರ್ಯನ ಕಾಂತಿ
- ದಿನಕರಸುತ – ಕರ್ಣ
- ದಿನಕರೋಪಲ – ಸೂರ್ಯಕಾಂತಶಿಲೆ
- ದಿನಕೃತ್ – ಸೂರ್ಯ
- ದಿನಕೃತ್ತನೂಭವ – ದಿನಕೃತ್+ತನೂಭವ, ಸೂರ್ಯನ ಮಗ, ಕರ್ಣ
- ದಿನಕೃದ್ಬಿಂಬ – ದಿನಕೃತ್+ಬಿಂಬ, ಸೂರ್ಯಬಿಂಬ
- ದಿನಕೃದ್ರಥ – ದಿನಕೃತ್+ರಥ, ಸೂರ್ಯನ ರಥ
- ದಿನಕೃನ್ಮಂಡಲ – ದಿನಕೃತ್+ಮಂಡಲ, ಸೂರ್ಯಮಂಡಲ
- ದಿನನಾಥ – ದಿನದ ಒಡೆಯ, ಸೂರ್ಯ
- ದಿನನಾಯಕ – ದಿನನಾಥ
- ದಿನಪ – ದಿನನಾಥ
- ದಿನಪಕುಲ – ಸೂರ್ಯವಂಶ
- ದಿನಪತಿ – ದಿನನಾಥ
- ದಿನಪತಿವಾರ – ರವಿವಾರ
- ದಿನಪಾಂಶು – ಸೂರ್ಯಕಿರಣ, ಬಿಸಿಲು
- ದಿನಮಣಿ – ಸೂರ್ಯ
- ದಿನಮುಖ – ದಿನದ ಮೊದಲು, ಬೆಳಗಿನ ಜಾವ
- ದಿನಾಂತ – ದಿನದ ಕೊನೆಯ ಭಾಗ, ಸಂಜೆ
- ದಿನಾಧಿನಾಯಕ – ದಿನಪ
- ದಿನಾಧಿಪ – ದಿನಪ
- ದಿನಾಧಿಪತಿ – ದಿನಪ
- ದಿನೇಶ – ಸೂರ್ಯ
- ದಿನೇಶತನಯ – ಸೂರ್ಯನ ಮಗ, ಕರ್ಣ
- ದಿಬ್ಬಣ – ಮದುವೆಯ ಮೆರವಣಿಗೆ
- ದಿಬ್ಯ – (ದಿವ್ಯ) ಪ್ರಮಾಣ, ದೈವ ಸಾಕ್ಷ್ಯ; ಇವು ಐದರಿಂದ ಒಂಬತ್ತು ಬಗೆ ಎಂದು ಸ್ಮøತಿಕಾರರು; ಪ್ರಾಚೀನ ಕರ್ನಾಟಕದಲ್ಲಿ ಪ್ರಚಲಿತವಾಗಿದ್ದ ಏಳು ಬಗೆಯ ದಿಬ್ಯಗಳು: ಕೋಶ, ರವಿ, ತಂಡುಲ, ಅಗ್ನಿ, ತಪ್ತಮಾಷ, ಜಲ ಮತ್ತು ವಿಷ
- ದಿಬ್ಯಂಬಿಡಿ – ದಿವ್ಯದ ವಸ್ತು ಹಿಡಿದು ಪ್ರಮಾಣಮಾಡು
- ದಿಬ್ಯದೇಹ – ದಿವ್ಯದೇಹ
- ದಿಬ್ಯಸಭೆ – ದಿವ್ಯಸಭೆ
- ದಿಬ್ಯಾಹಾರ – ದಿವ್ಯಾಹಾರ, ಶ್ರೇಷ್ಠವಾದ ಆಹಾರ
- ದಿಮ್ಮಿದ – ಹಿರಿಯ
- ದಿವ – ಆಕಾಶ; ಸ್ವರ್ಗ
- ದಿವಸ – ಒಂದು ಹಗಲು ಮತ್ತು ರಾತ್ರಿ
- ದಿವಸಕರ(ಕೃತ್) – ಸೂರ್ಯ
- ದಿವಸಕರೋದಯ – ಸುರ್ಯೋದಯ
- ದಿವಸವಿರಾಮ – ಹಗಲಿನ ಕೊನೆ, ಸಂಜೆ
- ದಿವಸವ್ಯಾಪಾರ – ದಿನದ ವ್ಯವಹಾರ
- ದಿವಸಾಂಧ – ಹಗಲು ಕುರುಡ
- ದಿವಸಾವಸಾನ – ದಿವಸವಿರಾಮ
- ದಿವಸಾಷ್ಟಕ – ಎಂಟು ದಿವಸಗಳು
- ದಿವಸೇಂದ್ರ – ಸೂರ್ಯ
- ದಿವಸೇಂದ್ರಾನ್ವಾ(ನ್ವ)ಯ – ಸೂರ್ಯವಂಶ
- ದಿವಾಂಧ – ದಿವಸಾಂಧ
- ದಿವಾಕರ – ದಿವಸಕರ
- ದಿವಾಸ್ವಾಪ – ಹಗಲು ನಿದ್ದೆ
- ದಿವಿಜ – ಸ್ವರ್ಗದಲ್ಲಿ ಜನಿಸಿದವನು, ದೇವತೆ
- ದಿವಿಜಕಾಂತೆ – ದೇವತಾಸ್ತ್ರೀ
- ದಿವಿಜಕುಜ – ಕಲ್ಪವೃಕ್ಷ
- ದಿವಿಜಾಕ್ಷ್ಮಾಜ – ದಿವಿಜಕುಜ
- ದಿವಿಜಖೇಟಕ – ದೇವತೆಗಳ ಊರು, ಅಮರಾವತಿ
- ದಿವಿಜಗಜ – ದೇವಲೋಕದ ಆನೆ, ಐರಾವತ
- ದಿವಿಜಚಾಪ – ದೇವಲೋಕದ ಬಿಲ್ಲು,
- ಇಂದ್ರನ ಬಿಲ್ಲು, ಕಾಮನಬಿಲ್ಲು
- ದಿವಿಜಾಜನ – ದೇವಲೋಕದ ಜನ
- ದಿವಿಜತನಯ – ದೇವತೆಯ ಮಗ, ಇಂದ್ರನ ಮಗ, ಅರ್ಜುನ
- ದಿವಿಜತೆ – ದೇವತ್ವ
- ದಿವಿಜದೀರ್ಘಿಕೆ – ದೇವಲೋಕದ ನದಿ, ಗಂಗೆ
- ದಿವಿಜಧುನಿ – ದಿವಿಜದೀರ್ಘಿಕೆ
- ದಿವಿಜನದಿ – ದಿವಿಜದೀರ್ಘಿಕೆ
- ದಿವಿಜನದೀಸೂನು – ಗಂಗಾಪುತ್ರ, ಭಿಷ್ಮ
- ದಿವಿಜನಾಯಕ – ದೇವೇಂದ್ರದಿವಿಜನಿಕಾಯ ದೇವತೆಗಳ ಸಮೂಹ
- ದಿವಿಜನಿವಾಸ – ದೇವತೆಗಳ ವಾಸಸ್ಥಳ, ಸ್ವರ್ಗ
- ದಿವಿಜಪತಿ – ದೇವೇಂದ್ರ
- ದಿವಿಜಪೇಟಕ – ದೇವತೆಗಳ ಸಮೂಹ
- ದಿವಿಜಭವನ – ದೇವತೆಗಳ ಮನೆ, ಸ್ವರ್ಗ
- ದಿವಿಜಮಹೀಜ – ಕಲ್ಪವೃಕ್ಷ
- ದಿವಿಜರಾಜ – ದೇವೇಂದ್ರ
- ದಿವಿಜವಧೂಟಿ – ದೇವತಾಸ್ತ್ರೀ
- ದಿವಿಜವನಿತೆ – ದೇವತಾಸ್ತ್ರೀ
- ದಿವಿಜವಲ್ಲಭ – ದಿವಿಜಪತಿ
- ದಿವಿಜವಿಮಾನ – ಪುಷ್ಪಕವಿಮಾನ; (ಜೈನ) ದೇವತೆಗಳು ವಾಸಿಸುವ ಸ್ವರ್ಗದ ಒಂದು ವಿಭಾಗ
- ದಿವಿಜಾರಾಸನ – ಇಂದ್ರಚಾಪ, ಕಾಮನ ಬಿಲ್ಲು
- ದಿವಿಜಸ್ತ್ರೀ – ದಿವಿಜವನಿತೆ
- ದಿವಿಜಾಂಗನೆ – ದಿವಿಜವನಿತೆ
- ದಿವಿಜಾಂಗರಕ್ಷ(ಕ) – ದೇವತೆಗಳ ಅಂಗರಕ್ಷಕ
- ದಿವಿಜಾಚಳ – ದೇವತೆಗಳ (ಚಿನ್ನದ) ಬೆಟ್ಟ, ಮೇರು
- ದಿವಿಜಾದ್ರಿ – ದಿವಿಜಾಚಳ
- ದಿವಿಜಾಧಿನಾಥ – ದೇವೇಂದ್ರ
- ದಿವಿಜಾಧೀಶ – ದೇವೇಂದ್ರ
- ದಿವಿಜಾಧೀಶ್ವರ – ದೇವೇಂದ್ರ
- ದಿವಿಜಾನೋಕಹ – ಕಲ್ಪವೃಕ್ಷ
- ದಿವಿಜಾಪಗೆ – ದೇವಗಂಗೆ
- ದಿವಿಜಾರಾಧ್ಯ – ದೇವತೆಗಳಿಗೆ ಪೂಜ್ಯನಾದವನು, ಅರ್ಹಂತ
- ದಿವಿಜಾವಾಸ – ದೇವಲೋಕ
- ದಿವಿಜಾಶಾಗಿರಿ – ದೇವಲೋಕದ ದಿಕ್ಕೆನಿಸಿದ
- ಪೂರ್ವದ ಬೆಟ್ಟ, ಉದಯಗಿರಿ
- ದಿವಿಜಾಶ್ವತ್ಥಾಮ – ದೇವಲೋಕದ ಕುದುರೆಯಾದ ಉಚ್ಚೈಶ್ರವಸ್ಸಿನ ಕೆನೆತ
- ದಿವಿಜಾಸನ – ದಿವ್ಯ ಪೀಠ
- ದಿವಿಜೇಂದ್ರ – ದೇವೇಂದ್ರ
- ದಿವಿಜೇಂದ್ರಾವಾಸ – ಇಂದ್ರನ ಮನೆ
- ದಿವಿಜೇಂದ್ರೇಭ – ಇಂದ್ರನ ಆನೆ, ಐರಾವತ
- ದಿವಿಜೇಶ್ವರ – ಇಂದ್ರ
- ದಿವಿಜೋರ್ವೀಜ – ಕಲ್ಪವೃಕ್ಷ
- ದಿವಿಜೋರ್ವೀಧರ – ದಿವಿಜಾಚಳ
- ದಿವಿಜೋರ್ವೀರುಹ – ದಿವಿಜೋರ್ವೀಜ
- ದಿವಿಷನ್ಮಣಿ – (ದಿವಿಷತ್+ಮಣಿ) ದೇವಲೋಕದ ಮಣಿ, ಚಿಂತಾಮಣಿ
- ದಿವೈಶ್ವರ್ಯ – ದೇವಲೋಕದ ಸಂಪತ್ತು
- ದಿವೋದ್ಭೂತ – ಸ್ವರ್ಗದಲ್ಲಿ ಹುಟ್ಟಿದ
- ದಿವೌಕ – ದೇವತೆಗಳ ಮನೆ, ಸ್ವರ್ಗ
- ದಿವೌಕಸ – ಸ್ವರ್ಗವನ್ನು ಮನೆಯಾಗುಳ್ಳವನು, ದೇವತೆ
- ದಿವ್ಯ – ಸ್ವರ್ಗದ; ದಿಬ್ಯ; ದೈವ; ಆರೋಪವನ್ನು ಸಾಬೀತುಮಾಡಲು ಆಚರಿಸುವ ವಿವಿಧ ಬಗೆಯ ಪರೀಕ್ಷೆಗಳು
- ದಿವ್ಯಂಬಿಡಿ – ದಿಬ್ಯಂಬಿಡಿ
- ದಿವ್ಯಕರಿ – ಐರಾವತ
- ದಿವ್ಯಕಾಂತೆ – ದೇವತಾಸ್ತ್ರೀ
- ದಿವ್ಯಚಕ್ಷು – ದೈವಿಕ ದೃಷ್ಟಿ
- ದಿವ್ಯಚಿತ್ತ – ಶುದ್ಧ ಮನಸ್ಸು(ಳ್ಳವನು)
- ದಿವ್ಯಚ್ಛಾಯೆ – ಸುಂದರವಾದ ನೆರಳು
- ದಿವ್ಯಜಾತಿ – (ಜೈನ) ಪಾರಿವ್ರಾಜ್ಯಲಕ್ಷಣಗಳಲ್ಲಿ ಒಂದು; ಅದರಲ್ಲಿ ನಾಲ್ಕು ವಿಭಾಗ; ದಿವ್ಯ, ವಿಜಯ, ಪರಮ, ಅನುಪಮ; ಇವುಗಳಿಂದ ಕ್ರಮವಾಗಿ ಅಹಮಿಂದ್ರತ್ವ, ಚಕ್ರವರ್ತಿತ್ವ, ಅರ್ಹಂತ್ಯ, ಸಿದ್ಧತ್ವಗಳುಉಂಟಾಗುತ್ತವೆ-
- ದಿವ್ಯಜ್ಞಾನಿ – ಅಲೌಕಿಕ ಜ್ಞಾನವುಳ್ಳವನು
- ದಿವ್ಯಜ್ಯೋತಿ – ಲೋೀಕೋತ್ತರ ಕಾಂತಿ
- ದಿವ್ಯತನು – ದಿವ್ಯಶರೀರ
- ದಿವ್ಯತಪೋಧನ – ಶ್ರೇಷ್ಠ ತಾಪಸಿ
- ದಿವ್ಯತೆ – ದೇವತ್ವ
- ದಿವ್ಯದೃಷ್ಟಿ – ಅತಿಮಾನುಷ ದೃಷ್ಟಿ
- ದಿವ್ಯದೇಹ – ದಿವ್ಯತನು
- ದಿವ್ಯದ್ಯೋತಿ – ದಿವ್ಯಜ್ಯೋತಿ
- ದಿವ್ಯದ್ವಿಪ – ಶ್ರೇಷ್ಠವಾದ ಆನೆ; ಐರಾವತ
- ದಿವ್ಯಧ್ವನಿ – ಪವಿತ್ರ ನುಡಿ
- ದಿವ್ಯನಗ – ಮೇರುಪರ್ವತ; ಕಲ್ಪವೃಕ್ಷ
- ದಿವ್ಯನಿಧಾನ – ಪಾವಿತ್ರ್ಯದ ನಿಧಿ(ಯಾದವನು)
- ದಿವ್ಯನಿನಾದ – ದಿವ್ಯಧ್ವನಿ
- ದಿವ್ಯಪ್ರಭಾವ – ಅಲೌಕಿಕಪ್ರಭಾವ
- ದಿವ್ಯಪ್ರಾಸಾದ – ದಿವ್ಯ ಮಂದಿರ
- ದಿವ್ಯಭಾಷೆ – ದೇವನುಡಿ
- ದಿವ್ಯಭೋಗ – ಅಲೌಕಿಕ ಸುಖ
- ದಿವ್ಯಮುನಿ – ಶ್ರೇಷ್ಠ ತಾಪಸಿ
- ದಿವ್ಯಮೂರ್ತಿ – ಆನಂದನೀಡುವ ರೂಪ
- ದಿವ್ಯರೂಪ – ದಿವ್ಯಮೂರ್ತಿ
- ದಿವ್ಯವಚನ – ಪವಿತ್ರ ನುಡಿ
- ದಿವ್ಯವಧು – ದೇವತಾಸ್ತ್ರೀ
- ದಿವ್ಯವಪು – ಅನುಪಮ ಶರೀರ
- ದಿವ್ಯವಸನ- ಉತ್ಕøಷ್ಟ ಉಡುಗೆ
- ದಿವ್ಯವಿಷ್ಟರ – ಉತ್ಕøಷ್ಠವಾದ ಪೀಠ
- ದಿವ್ಯಶಯ್ಯೆ – ಉತ್ಕøಷ್ಟವಾದ ಹಾಸಿಗೆ
- ದಿವ್ಯಶರೀರ – ದಿವ್ಯತನು
- ದಿವ್ಯಸಂಭವ – ದೈವಾಂಶಸಂಭೂತ
- ದಿವ್ಯಸಂಯೋಗ – ದೇವತೆಗಳ ಸಹವಾಸ
- ದಿವ್ಯಸುಖ – ಸ್ವರ್ಗಭೋಗ
- ದಿವ್ಯಸೌಂದರಿ – ದೇವಲೋಕದ ಸುಮದರಿ
- ದಿವ್ಯಹಂಸ – ಶ್ರೇಷ್ಠ ಹಂಸ; ಸನ್ಯಾಸಿ
- ದಿವ್ಯಾಂಗ – ದಿವ್ಯತನು
- ದಿವ್ಯಾಂಗನೆ – ದೇವತಾಸ್ತ್ರೀ
- ದಿವ್ಯಾಂಬು – ಪವಿತ್ರಜಲ
- ದಿವ್ಯಾಕಾರ – ದಿವ್ಯಮೂರ್ತಿ
- ದಿವ್ಯಾಕಾರೆ – ದಿವ್ಯಾಕಾರ ಉಳ್ಳ ಸ್ತ್ರೀ
- ದಿವ್ಯಾಕೃತಿ – ದಿವ್ಯಮೂರ್ತಿ
- ದಿವ್ಯಾಜ್ಞೆ – (ಜೈನ) ಪಾರಿವ್ರಾಜ್ಯಲಕ್ಷಣಗಳಲ್ಲಿ ಆಜ್ಞೆ ಎಂಬುದು ಒಂದು; ಅದರಲ್ಲಿ ಮೂರು ಬಗೆ; ದಿವ್ಯ, ವಿಜಯ, ಪರಮ; ದಿವ್ಯಾಜ್ಞೆಯಿಂದ ದೇವತೆಗಳನ್ನು ವಶೀಕರಿಸಿಕೊಳ್ಳಬಹುದು
- ದಿವ್ಯಾನುಭವ – ಅಲೌಕಿಕ ಅನುಭವ
- ದಿವ್ಯಾನುಭುತಿ – ದಿವ್ಯಾನುಭವ
- ದಿವ್ಯಾಭರಣ – ಉತ್ಕøಷ್ಟವಾದ ಒಡವೆ
- ದಿವ್ಯಾಯುಧ – ಉತ್ಕøಷ್ಟ ಆಯುಧ
- ದಿವ್ಯಾರ್ಚನೆ – ಉತ್ಕøಷ್ಟ ಪೂಜೆ
- ದಿವ್ಯಾವಧಿ – (ಜೈನ) ಅವಧಿಜ್ಞಾನ; ಮೂರೂ ಕಾಲಗಳ ಘಟನೆಗಳನ್ನು ತಿಳಿಯಬಹುದಾದ ಶಕ್ತಿ
- ದಿವ್ಯಾವಧಿಬೋಧ – (ಜೈನ) ಅವಧಿಜ್ಞಾನಿ
- ದಿವ್ಯಾಶ್ವ – ಉತ್ಕøಷ್ಟವಾದ ಕುದುರೆ
- ದಿವ್ಯಾಸ್ತ್ರ – ದೇವತೆ ದಯಪಾಲಿಸಿರುವ ಅಸ್ತ್ರ
- ದಿವ್ಯಾಹಾರ – ಉತ್ಕøಷ್ಠ ಆಹಾರ
- ದಿವ್ಯೋಪದೇಶ – ಉತ್ಕøಷ್ಟ ಉಪದೇಶ
- ದಿವ್ಯೌಷಧ(ಧಿ) – ಉತ್ಕøಷ್ಟ ಔಷಧಿ
- ದಿಶಾಂತರ – ದಿಕ್ಕುಗಳ ನಡುವಣ ಪ್ರದೇಶ
- ದಿಶಾಕರಟಿ – ದಿಕ್ಕರಿ
- ದಿಶಗಜ – ದಿಕ್ಕರಿ
- ದಿಶಾಘಾಟ – ದಿಕ್ಕಿನ ನೆಲೆಲ
- ದಿಶಾಚಕ್ರ – ದಿಕ್ಚಕ್ರ; ದಿಕ್ಕುಗಳ ವಲಯ
- ದಿಶಾದಂತಿ – ದಿಕ್ಕರಿ
- ದಿಶಾಧೂಮ – ದಿಕ್ಕುಗಳಲ್ಲಿನ ಹೊಗೆ
- ದಿಶಾಪಟ್ಟ – (ಶತ್ರುಗಳನ್ನು_ ದಿಕ್ಕುದಿಕ್ಕಿಗೆ ಓಡಿಸುವವನು
- ದಿಶಾಪರಿಧಿ – ದಿಶಾಚಕ್ರ
- ದಿಶಾಭಿತ್ತಿ – ದಿಕ್ಕಿನ ಕೊನೆ
- ದಿಶಾಮಂಡಲ – ದಿಶಾಚಕ್ರ
- ದಿಶಾಮೂಢ – ದಿಗ್ಭ್ರಮೆಗೊಂಡವನು
- ದಿಶಾವಲೋಕನ – ದಿಕ್ಕುಗಳೆಡೆ ನೋಡಿವುದು
- ದಿಶಾವಳಯ – ದಿಶಾಚಕ್ರ
- ದಿಶಾವಳಿ – ದಿಕ್ಕುಗಳ ಸಮೂಹ
- ದಿಶಾಸ್ಥಗಿತ – ದಿಕ್ಕುಗಳನ್ನು ಆವರಿಸಿರುವ
- ದಿಶಾಳಿ – ದಿಶಾವಳಿ
- ದಿಶೆ – ದಿಕ್ಕು
- ದಿಶೇಂದ್ರ – ದಿಕ್ಪಾಲಕ
- ದೀಕ್ಷೆ – (ಜೈನ) ಸನ್ಯಾಸದೀಕ್ಷೆ
- ದೀಕ್ಷೆಗುಡು – (ಜೈನ) ಸನ್ಯಾಸದೀಕ್ಷೆ ಕೊಡು
- ದೀಕ್ಷೆಗೆಯ್ – (ಜೈನ) ಸನ್ಯಾಸದೀಕ್ಷೆ ಸ್ವೀಕರಿಸು
- ದೀಕ್ಷೆಗೊಳ್ – (ಜೈನ) ಸನ್ಯಾಸದೀಕ್ಷೆ ಹೊಂದು
- ದೀಕ್ಷೆಯಿಕ್ಕು – ಉಪದೇಶಮಾಡು
- ದೀಕ್ಷೋಪವಾಸ – (ಜೈನ) ವ್ರತದ ಕಾರಣ ಮಾಡುವ ಉಪವಾಸ
- ದೀಧಿತಿ – ಕಾಂತಿ
- ದೀನತೆ – ದೈನ್ಯ; ದುರ್ಬಲತೆ
- ದೀನತ್ವ- ಕುಂದುವಿಕೆ
- ದೀನಭಾವ – ದೈನ್ಯ
- ದೀನಾನನ – ಬಾಡಿದ ಮುಖ
- ದೀನಾರ – ಒಂದು ಚಿನ್ನದ ನಾಣ್ಯ
- ದೀನಾಸ್ಯೆ – ಬಾಡಿದ ಮುಖ ಉಳ್ಳವಳು
- ದೀಪ – (ದ್ವೀಪ) ನಡುಗಡ್ಡೆ; ಸೊಡರು
- ದೀಪಕಲಿ(ಳಿ)ಕೆ – ದೀಪದ ಕುಡಿ
- ದೀಪಕಳಾಪ – ದೀಪಗಳ ಸಮೂಹ
- ದೀಪದ್ಯುತಿ – ದೀಪದ ಕಾಂತಿ
- ದೀಪನೀಯ – ಸುಡುವ
- ದೀಪವರ್ತಿ – ದೀಪದ ಬತ್ತಿ
- ದೀಪವಿಕಲ್ಪ – ದೀಪದಂತೆ ಕಾಣುವುದು
- ದೀಪಶಿಖೆ – ದೀಪದ ಕುಡಿ
- ದೀಪಸ್ಪರ್ಶನ – ದೀಪ ಹೊತ್ತಿಸುವುದು
- ದೀಪಾಂಕುರ – ದೀಪದ ಕುಡಿ
- ದೀಪಾಂಗ – (ಜೈನ) ದೀಪಗಳನ್ನು ನೀಡುವ ಒಂದು ಕಲ್ಪವೃಕ್ಷ, ನೋಡಿ, ಕಲ್ಪವೃಕ್ಷ
- ದೀಪಾಂಗಕುಜ – ದೀಪಾಂಗ
- ದೀಪಾಂಗವೃಕ್ಷ – ದೀಪಾಂಗ
- ದೀಪಾರ್ಚಿ ಸೊಡರಿನ ಜ್ವಾಲೆ-
- ದೀಪಾವಳಿ – ದೀಪಗಳ ಸಾಲು
- ದೀಪಿಕಾಂಕುರ – ದೀಪದ ಕುಡಿ
- ದೀಪಿಕೆ – ಸೊಡರು
- ದೀಪ್ತತಪ – (ಜೈನ) ತಪಸ್ಸಿನಿಂದ ಯೋಗಿಗೆಉಂಟಾಗುವ ದೇಹಕಾಂತಿ
- ದೀಪ್ತಿ – ಬೆಳಕು
- ದೀಪ್ತಿಕೆ – ಸೊಡರು
- ದೀಪ್ತೌಷಧಿ – ಪರಿಣಾಮಕಾರಿ ಓಷಧಿ
- ದೀಪ್ರ – ಕಾಂತಿಯುಕ್ತವಾದ
- ದೀರ್ಘ – ನೀಳ, ಉದ್ದವಾದ
- ದೀರ್ಘಕರ – ಉದ್ದವಾದ ತೋಳು; ಉದ್ದ ಸೊಂಡಿಲು
- ದೀರ್ಘಕೇಶ – ಉದ್ದ ಕೂದಲು
- ದೀರ್ಘನಿದ್ರಿತ – ಸಾವಿಗೊಳಗಾದವನು
- ದೀರ್ಘನಿದ್ರೆ – ಸಾವು
- ದೀರ್ಘರೋಷಿ – ತುಂಬ ಕಾಲ ಕೋಪಗೊಂಡಿರುವವನು
- ದೀರ್ಘಿಕಾ(ಕೆ) – ಸರೋವರ; ನದಿ
- ದೀರ್ಣಾನನ – ದೀರ್ಣ+ಆನನ, ತೆರೆದ ಬಾತಿ
- ದೀವ(ಹ) – ಬೇಟೆಯ ಪ್ರಾಣಿಯನ್ನು ಆಕರ್ಷಿಸಲು ಒಡ್ಡುವ ಸಾಕಿದ ಪ್ರಾಣಿ
- ದೀವಟಿಗ – ಪಂಜು ಹಿಡಿಯುವವನು
- ದೀವದ ಬೇಂಟೆ – ದೀವ ಒಡ್ಡಿ ಆಡುವ ಬೇಟೆ
- ದೀವದ ಹುಲಿ – ಬೇಟೆಯಲ್ಲಿ ಬಳಸುವ ಮೋಸದ ಹುಲಿ
- ದೀವಿಗೆ – ಸೊಡರು
- ದೀಹದ ಪುಲಿ – ಬೇಟೆಯ ಪ್ರಾಣಿಯನ್ನು ಆಕರ್ಷಿಸಲು ಒಡ್ಡುವ ಸಾಕಿದ ಹುಲಿ
- ದೀಹಾರ – ದೀವದ ಪ್ರಾಣಿಗಳನ್ನಿರಿಸುವ ಜಾಗ
- ದುಂಡಿ – ಸುಂದರ ಹೆಂಗಸು
- ದುಂದುಭಿ – ಒಂದು ಚರ್ಮವಾದ್ಯ; ಅರವತ್ತು ಸಂವತ್ಸರಗಳಲ್ಲಿ ಒಂದು
- ದುಂದುಭಿ(ನಿ)ನಾದ – ದುಂದುಭಿಯ ಧ್ವನಿ
- ದುಂದುಮೆ – ಹರೆಯ; ಹರೆಯ ಜೊತೆ ಹೇಳುವ ಹಾಡು
- ದುಃಖ – ವ್ಯಥೆ
- ದುಃಖಂಗೆಯ್ – ದುಃಖಪಡು
- ದುಃಖಪಡು – ದುಃಖಂಗೆಯ್
- ದುಃಖಜೀವಿ – ವ್ಯಥೆಯಿಂದ ಬದುಕುವವನು
- ದುಃಖವಿಹ್ವಳ – ವ್ಯಥೆಯಿಂದ ಪರಿತಪಿಸುವವನು
- ದುಃಖಶತ – ಅನೇಕ ಬಗೆಯ ಕಷ್ಟಗಳು
- ದುಃಖಾಧಿಕೆ – ಹೆಚ್ಚಿನ ವ್ಯಥೆ
- ದುಃಖೋಪಶಮನ – ವ್ಯಥೆಯ ನಿವಾರಣೆ
- ದುಃಖೋಪಾತ್ತ – ದುಃಖವನ್ನುಂಟುಮಾಡುವುದು
- ದುಃಪಕ್ವಾನ್ನ – ಸರಿಯಾಗಿ ಬೇಯದಿರುವ ಅನ್ನ; (ಜೈನ) ಐದು ಭೋಗೋಪಭೋಗ ಅತಿಚಾರಗಳಲ್ಲಿ ಬೇಯದ ಆಹಾರ ತಿನ್ನಬೇಕೆಂಬ ಒಂದು ನಿಯಮ
- ದುಃಸ್ವಪ್ನದರ್ಶನ – ಕೆಟ್ಟ ಕನಸು ಕಾಣುವುದು
- ದುಕೂಲ – ರೇಷ್ಮೆ ಬಟ್ಟೆ
- ದುಕೂಲಚೇಲ – ದುಕೂಲ
- ದುಕೂಲವಸನ – ದುಕೂಲ
- ದುಕುಳವಿತಾನ – ರೇಷ್ಮೆಯ ಮೇಲ್ಕಟ್ಟು
- ದುಕೂಲಾಂಬರೆ – ದುಕೂಲವಸ್ತ್ರವನ್ನು ಧರಿಸಿದವಳು
- ದುಗ – (ದ್ವಿಕ) ಜೋಡಿ, ಎರಡು
- ದುಗುಣ – (ದ್ವಿಗುಣ) ಎರಡು ಪಟ್ಟು, ಎರಡು ಸಲ
- ದುಗು(ಗೂ)ಲ – ದುಕೂಲ, ರೇಷ್ಮೆ ಬಟ್ಟೆ
- ದುಗ್ಧ – ಕರೆಯದುದು, ಹಾಲು
- ದುಗ್ಧಕಂಠ – ಹಾಲು ಕುಡಿಯುವ ಮಗು
- ದುಗ್ಧಜಳಭೇದನ – ಹಾಲುನೀರುಗಳನ್ನು ಬೇರ್ಪಡಿಸುವುದು
- ದುಗ್ಧಧಾರೆ – ಹಾಲಿನ ಪ್ರವಾಹ
- ದುಗ್ಧಲವ – ಹಾಲಿನ ಹನಿ
- ದುಗ್ಧವಾರಿಧಿ – ಹಾಲಿನ ಸಮುದ್ರ
- ದುಗ್ಧವಾರ್ಧಿ – ದುಗ್ಧವಾರಿಧಿ
- ದುಗ್ಧಸಾಗರ – ದುಗ್ಧವಾರಿಧಿ
- ದುಗ್ಧಸಿಂಧು – ದುಗ್ಧವಾರಿಧಿ
- ದುಗ್ದಾಂಬುಧಿ – ದುಗ್ಧವಾರಿಧಿ
- ದುಗ್ದಾಂಬುರಾಈ – ದುಗ್ಧವಾರಿಧಿ
- ದುಗ್ದಾಂಭೋರಾಶಿ – ದುಗ್ಧವಾರಿಧಿ
- ದುಗ್ದಾಬ್ಧಿ – ದುಗ್ಧವಾರಿಧಿ
- ದುಗ್ದಾಭಿಷೇಕ – ಹಾಲಿನ ಮಜ್ಜನ
- ದುಗ್ಧಾರ್ಣವ – ದುಗ್ಧವಾರಿಧಿ
- ದಿಗ್ಧೋದಧಿ – ದುಗ್ಧವಾರಿಧಿ
- ದುಗ್ಧೋದಧಿತಲ್ಪ – ಹಾಲಿನ ಸಮುದ್ರವನ್ನೇ
- ಹಾಸಿಗೆಯಾಗುಳ್ಳವನು, ವಿಷ್ಣು
- ದುಟ್ಟಗೊರವ – ದುಷ್ಟ ಸನ್ಯಾಸಿ
- ದುಡು(ಢು)ಮ್ಮಿ¾Â – ದುಡುಂ ಎಂದು ಶಬ್ದಮಾಡು
- ದುಪ್ಪೋಡಿ – ಎರಡು ಹೋಳು
- ದುರಂತ – ಕೊನೆಯಿಲ್ಲದ
- ದುರಂತರ – ಕಡಿಮೆ ಅಂತರವಿರುವುದು; ದುಃಖಕರ
- ದುರಂತೋದ್ವೇಗ – ಕೊನೆಯಿಲ್ಲದ ತಳಮಳ
- ದುರಘ – ಮಹಾಪಾತಕ
- ದುರತ್ಯಯ – ಗೆಲ್ಲಲು ಕಷ್ಟಕರವಾದ
- ದುರಭಿಹಿತ – ಇಷ್ಟವಾಗದ ಮಾತು
- ದುರವಾಪ – ಪಡೆಯಲು ಅಸಾಧ್ಯವಾದುದು
- ದುರಾಗ್ರಹ – ಕೆಟ್ಟ ಹಟ
- ದುರಾಚರಣ – ಹೀನ ನಡವಳಿಕೆ
- ದುರಾಚಾರೆ – ಕೆಟ್ಟ ನಡತೆಯವಳು
- ದುರಾತ್ಮ – ಕೆಟ್ಟ ವ್ಯಕ್ತಿ
- ದುರಾಪ – ಗೆಲ್ಲಲಸಾಧ್ಯವಾದ
- ದುರಾರೋಹ – ಏರಲು ಕಷ್ಟಕರವಾದುದು
- ದುರಾಲೋಕನ – ನೋಡಲಾಗದ, ಕೋರೈಸುವ
- ದುರಾಹವರಂಗ – ದುರ್+ಆಹವರಂಗ, ಕಷ್ಟಕರ ಯುದ್ಧರಂಗ
- ದುರಿತ – ಪಾಪ
- ದುರಿತದೂರ – ಪಾಪವನ್ನು ದೂರಮಾಡಿದವನು
- ದುರಿತಯುತ – ಪಾಪದಿಂದ ಕೂಡಿದವನು
- ದುರಿತವರ್ತಿ – ಪಾಪದಲ್ಲಿಯೇ ಸುತ್ತುವವನು
- ದುರಿತವಶ – ದುರಿತಕ್ಕೆ ವಶವಾದ
- ದುರಿತವಿಜಯ – ಪಾಪವನ್ನು ಗೆಲ್ಲುವುದು
- ದುರಿತವಿನಾಶ – ಪಾಪನಿವಾರಣೆ
- ದುರಿತವ್ರಾತ – ಪಾಪರಾಶಿ
- ದುರಿತಹರ – ಪಾಪನಿವಾರಕ
- ದುರಿತಹರಣ – ದುರಿತವಿನಾಶ
- ದುರಿತಾಸಹಿಷ್ಣು – ದುರಿತ+ಅಸಹಿಷ್ಣು, ಪಾಪವನ್ನು ಸಹಿಸದವನು
- ದುರುಕ್ತ(ಕ್ತಿ) – ಕೆಟ್ಟ ಮಾತು; ತಿರಸ್ಕಾರದ ನುಡಿ
- ದುರುಳ – ಧೂರ್ತ
- ದುರೂಪೆ – ಕುರೂಪಿಯಾದವಳು
- ದುರೋದರ – ಜೂಜು; ಜೂಜಿನ ಪಣದ್ರವ್ಯ
- ದುರೋದರಕ್ರೀಡೆ – ಜೂಜಾಟ
- ದುರ್ಗ – ಸೇರಲು ಅಸಾಧ್ಯವಾದ; ಕೋಟೆ; ಏಳು ರಾಜ್ಯಾಂಗಗಳಲ್ಲಿ ಒಂದು; ಜಲದುರ್ಗ, ಗಿರಿದುರ್ಗ, ಸ್ಥಲದುರ್ಗ, ವನದುರ್ಗಗಳಲ್ಲಿ ಕ್ರಮವಾಗಿ ಎರಡೆರಡು ಬಗೆ: ಅಂತರ್ದೀಪ, ಮಹಾಸ್ಥಳ; ಗುಹ್ಯಾಖ್ಯ, ಪ್ರಸ್ತರ; ಉದಕಸ್ತಂಭ, ವೈರಿಣಿ; ಕರ್ದಮೋದಕ, ಸ್ತಂಭನಗಹನ
- ದುರ್ಗಂಧ – ಕೆಟ್ಟ ವಾಸನೆ
- ದುರ್ಗಂಧೆ – ಕೆಟ್ಟ ವಾಸನೆಯ ದೇಹವುಳ್ಳವಳು
- ದುರ್ಗಗುಣ – ಕೋಟೆಯ ಲಕ್ಷಣಗಳು: ಅಂತದ್ರ್ವೀಪ, ಮಹಾಸ್ಥಳ, ಗುಹ್ಯ, ಪ್ರಸ್ತರ, ಉದಕಸ್ತಂಭ, ವೈರಿಣಿ, ಕರ್ದಮೋದಕ, ಸ್ತಂಭನಗಹನ ಎಂಬ ಎಂಟು
- ದುರ್ಗತಿ – ಕೆಟ್ಟ ಸ್ಥಿತಿ
- ದುರ್ಗತಿವೋಗು – ದುರ್ಗತಿಗೆ ಒಳಗಾಗು
- ದುರ್ಗಪಂಚಕ – ಐದು ಬಗೆಯ ದುರ್ಗಗಳು: ಜಲದುರ್ಗ, ಗಿರಿದುರ್ಗ, ವನದುರ್ಗ, ಸ್ಥಳದುರ್ಗ, ಈರಿಣದುರ್ಗ
- ದುರ್ಗಭೂಮಿ – ದುರ್ಗವಿರುವ ಜಾಗ
- ದುರ್ಗಮ – ಹೋಗಲು ಅಸಾಧ್ಯವಾದ
- ದುರ್ಗಾಶ್ರಯವಿಗ್ರಹ – ಕೋಟೆಯನ್ನು ಆಶ್ರಯಿಸಿ ಯುದ್ಧಮಾಡುವವನು; ಪಾರ್ವತಿಯನ್ನು ಆಶ್ರಯಿಸಿದ ದೇಹವುಳ್ಳವನು
- ದುರ್ಗಿ – ದುರ್ಗಾದೇವಿ
- ದುರ್ಜನ – ನೀಚ ವ್ಯಕ್ತಿ(ಗಳು)
- ದುರ್ಜಯ – ಗೆಲ್ಲಲು ಅಸಾಧ್ಯನಾದ(ವನು)
- ದುರ್ಣಯ – ಕೆಟ್ಟ ನಡತೆ
- ದುರ್ದಮ – ದಮನಮಾಡಲು ಕಷ್ಟಕರವಾದ
- ದುರ್ದಮತೆ – ದಮನಿಸಲು ಅಸಾಧ್ಯವಾಗಿರುವುದು
- ದುರ್ದರ್ಶ – ನೋಡಲು ಕಷ್ಟಕರವಾದ
- ದುರ್ದಿನ – ಮೋಡ ಕವಿದು ಸೂರ್ಯ ಕಾಣಿಸದ ದಿನ
- ದುರ್ಧರ – ಸಹಿಸಲು ಕಷ್ಟಕರವಾದ
- ದುರ್ನಯ – ದುರ್ಣಯ
- ದುರ್ನಯವರ್ತಿ – ಕೆಟ್ಟ ನಡತೆಯವನು
- ದುರ್ನಯೋಕ್ತಿ – ಕೆಟ್ಟ ಮಾತು
- ದುರ್ನಿಮಿತ್ತ – ಅಪಶಕುನ
- ದುರ್ನಿರೀಕ್ಷ್ಯ – ನೋಡಲಸಾಧ್ಯವಾದ(ದುದು)
- ದುರ್ಬುದ್ಧಿ – ನೀಚ ಬುದ್ಧಿ
- ದುರ್ಬುಧ – ಕೆಟ್ಟ ಬುದ್ಧಿಯುಳ್ಳವನು, ದುಷ್ಟ
- ದುರ್ಬೆಸನಿ – (ದುವ್ರ್ಯಸನಿ) ಕೆಟ್ಟ ಚಟದವನು
- ದುರ್ಭಗ – ದುರದೃಷ್ಟ; (ಜೈನ) ಇತರರ ಮನಸ್ಸಿನಲ್ಲಿ ಅಸಹ್ಯವುಂಟುಮಾಡುವ ಸ್ಥಿತಿ, ಒಂದು ಬಗೆಯ ನಾಮಪ್ರಕೃತಿ
- ದುರ್ಭಗತ್ವ – ದುರದೃಷ್ಟ
- ದುರ್ಭಗವನಿತೆ – ಗಂಡನಿಗೆ ಬೇಕಿಲ್ಲದವಳು
- ದುರ್ಭಗೆ – ದುರ್ಭಗವನಿತೆ
- ದುರ್ಭಾವನೆ – ದುರಾಲೋಚನೆ
- ದುರ್ಭೇದ್ಯ – ಭೇದಿಸಲು ಅಸಾಧ್ಯವಾದ
- ದುರ್ಮಂತ್ರಿ – ದುಷ್ಟ ಸಚಿವ
- ದುರ್ಮತಿ – ಕೆಟ್ಟ ಬುದ್ಧಿ
- ದುರ್ಮದ – ಸೊಕ್ಕಿದ
- ದುರ್ಮರಣ – ಅಸಹಜ ಸಾವು
- ದುರ್ಮರ್ಷಣ – ಸಹಿಸಲಸಾಧ್ಯವಾದ
- ದುರ್ಮುಖ – ಕೆಟ್ಟ ಮುಖವುಳ್ಳವನು; ನಿಂದಕ
- ದುರ್ಮೋಹ – ಕೆಟ್ಟ ಮೋಹ
- ದುರ್ಯಶ – ಅಪಯಶಸ್ಸು
- ದುರ್ಯಶಸ್ಸು – ದುರ್ಯಶ
- ದುರ್ಯೋಧನ – ಗೆಲ್ಲಲು ಅಸಾಧ್ಯನಾದ ಶೂರ
- ದುರ್ಲಂಘ್ಯ – ದಾಟಲಾಗದ
- ದುರ್ಲಭ – ಸುಲಭವಾಗಿ ಸಿಗದ
- ದುರ್ಲಲಿತಚರಿತ – ನಿಷ್ಠುರ ನಡವಳಿಕೆ
- ದುರ್ವರ್ಣೆ – ಕೆಟ್ಟ ಬಣ್ಣದವಳು
- ದುರ್ವಹ – ಹೊರಲಾಗದ(ದುದು)
- ದುರ್ವಾದ – ಕೆಟ್ಟ ವಾದ
- ದುರ್ವಾಪಣ – ಬಿಡಿಸಲಾಗದ
- ದುರ್ವಾರ – ನಿವಾರಿಸಲಾಗದ
- ದುರ್ವಿದ – ಮೂರ್ಖ
- ದುರ್ವಿದಗ್ಧ – ಪಾಂಡಿತ್ಯರಹಿತ; ತಿಳಿವಳಿಕೆಯಿಲ್ಲದ
- ದುರ್ವಿನೀತೆ – ವಿನಯರಹಿತೆ
- ದುರ್ವಿಪಾಕ – ಕೆಟ್ಟ ಪರಿಣಾಮ
- ದುರ್ವಿಲಸಿತ – ಕೆಟ್ಟ ಕೆಲಸ; ದುರಹಂಕಾರ
- ದುರ್ವಿಷಯ – ಕೆಟ್ಟ ವಿಷಯ
- ದುರ್ವಿಳಸನ – ದುರ್ವಿಲಸಿತ
- ದುರ್ವೃತ್ತ – ಕೆಟ್ಟ ನಡತೆ(ಯವನು)
- ದುರ್ವೇಶ – ಒಳಹೊಗಲು ಅಸಾಧ್ಯವಾದ
- ದುವ್ರ್ಯಸನ – ಕೆಟ್ಟ ಚಟ
- ದುವ್ರ್ಯಸನಿ – ಕೆಟ್ಟ ಚಟವಿರುವವನು
- ದುಲ್ಲಟೆ – ಭಿಕ್ಷಾಪಾತ್ರೆ
- ದುಲ್ಲಹ – (ದುರ್ಲಭ) ಪಡೆಯಲಸಾಧ್ಯವಾದ
- ದುವ್ವೆ – ದೂವೆ, ಹೊಗೆ
- ದುಶ್ಚರ – ನಡೆಯಲು (ಆಚರಿಸಲು) ಕಷ್ಟಕರವಾದ
- ದುಶ್ಚರಿತ – ಕೆಟ್ಟ ನಡವಳಿಕೆಯುಳ್ಳ(ವನು)
- ದುಶ್ಚರಿತ್ರ – ದುಶ್ಚರಿತ
- ದುಶ್ಚಾರಿತ್ರ – ದುಶ್ಚರಿತ
- ದುಶ್ಚ್ಯವನ – ಕದಲಿಸಲಾಗದ; ಇಂದ್ರ
- ದುಶ್ಶಾಸನ – ಹದ್ದುಬಸ್ತಿನಲ್ಲಿಡಲಾಗದ
- ದುಶ್ಶ್ರವ – ಕೇಳಲು ಕಷ್ಟಕರವಾದ
- ದುಶ್ಶ್ರಾವ – ದುಶ್ಶ್ರವ
- ದುಶ್ಶ್ರುತಿ – ಕೆಟ್ಟ ಮಾತು; ಅಪಕೀರ್ತಿ
- ದುಶ್ಶ್ವಾಪದ – ಕೆಟ್ಟ ಮೃಗ
- ದುಷ್ಕರ – ಕಷ್ಟ
- ದುಷ್ಕರ್ಮ – ಕೆಟ್ಟ ಕೆಲಸ
- ದುಷ್ಕವಿತೆ – ಕೆಟ್ಟ ಕವಿತೆ
- ದುಷ್ಟಚತುಷ್ಟಯ – ಮಹಾಭಾರತದಲ್ಲಿನ ನಾಲ್ವರು ಕೆಡುಕರು; ದುರ್ಯೋಧನ, ದುಶ್ಶಾಸನ, ಕರ್ಣ, ಶಕುನಿ
- ದುಷ್ಟತೆ – ಕೆಟ್ಟತನ
- ದುಷ್ಟನಿಗ್ರ – ಕೆಟ್ಟವರ ನಿಯಂತ್ರಣ
- ದುಷ್ಟಪರಿವಾರ – ಕೆಟ್ಟವರ ಗುಂಪು
- ದುಷ್ಟಮನ – ಕೆಟ್ಟ ಮನಸ್ಸು
- ದುಷ್ಟಮೃಗ – ಕಾಡುಪ್ರಾಣಿ
- ದುಷ್ಟು – ದುಷ್ಟತನ
- ದುಷ್ಪರಿಣಿತಿ – ಕೆಟ್ಟ ಪರಿಣಾಮ
- ದುಷ್ಪರಿಣಾಮ – ದುಷ್ಪರಿಣಿತಿ
- ದುಷ್ಪುತ್ರ – ಕೆಟ್ಟ ಮಗ
- ದುಷ್ಪ್ರತೀತಿ – ಕೆಟ್ಟ ಹೆಸರು
- ದುಷ್ಪ್ರವೇಶ್ಯ – ಒಳಹೊಗಲು ಕಷ್ಟಕರವಾದ
- ದುಷ್ಪ್ರೇಕ್ಷ – ನೋಡಲು ಕಷ್ಟಕರವಾದ
- ದುಷ್ಪ್ರೇರಣೆ – ಕೆಟ್ಟ ರೀತಿಯ ಪ್ರಚೊದನೆ
- ದುಷ್ಷಮಕಾಲ – ಕೆಟ್ಟ ಕಾಲ
- ದುಷ್ಷಮಸುಷಮ – (ಜೈನ) ಅವಸರ್ಪಿಣಿಕಾಲದ ಒಂದು ಭಾಗ
- ದುಷ್ಷಮೆ – ದುಷ್ಷಮಕಾಲ
- ದುಸ್ತಮ – ಕಗ್ಗತ್ತಲೆ
- ದುಸ್ತರ – ದಾಟಲಾಗದ
- ದುಸ್ತರಾವಸ್ಥೆ – ಕಷ್ಟ ಸ್ಥಿತಿ
- ದುಸ್ತಾಮಸ – ಗಾಢವಾದ ಕತ್ತಲೆ, ಅಜ್ಞಾನ
- ದುಸ್ವಪ್ನ – ಕೆಟ್ಟ ಕನಸು
- ದುಸ್ವರ – ಕೆಟ್ಟಸ್ವರ; (ಜೈನ) ದುಷ್ಟಸ್ವರಕ್ಕೆ ಕಾರಣವಾದ (ಎಪ್ಪತ್ತೆರಡು ಬಗೆಯ) ನಾಮಕರ್ಮಪ್ರಕೃತಿಗಳಲ್ಲಿ ಒಂದು
- ದುಸ್ಸಂಗ – ಕೆಟ್ಟ ಸಹವಾಸ
- ದುಸ್ಸಹ – ಸಹಿಸಲಸಾಧ್ಯವಾದ
- ದುಸ್ಸ್ಥಲ – ಕೆಟ್ಟ ಪ್ರದೇಶ
- ದುಸ್ಸ್ವರ – ದುಸ್ವರ
- ದುಸ್ಸ್ವರೆ – ಕೆಟ್ಟ ದನುಯುಳ್ಲವಳು
- ದುಹತ್ತ – (ದ್ವಿಹಸ್ತ) ಎರಡು ಕೈ
- ದುಹಿತೃ – ಮಗಳು
- ದೂಂಟಿಂದೆ ದೂಂಟಿಂಗೆ – ಹೆಜ್ಜೆ ಹೆಜ್ಜೆಗೂ
- ದೂಂಟು – ಹಾರು; ಹೆಜ್ಜೆ; ಒಂದು ಕಾಲಿನಿಂದ ನಡೆ
- ದೂಟು – ಹೆಜ್ಜೆ
- ದೂತ – ನಿಯೋಗಿ, ರಾಜಪ್ರತಿನಿಧಿ
- ದೂತಕಾರ್ಯ – ನಿಯೋಗಿಯ ಕೆಲಸ
- ದೂತಟ್ಟು – ದೂತನನ್ನು ಕಳಿಸು
- ದೂತಮುಖ್ಯ – ದೂತರಲ್ಲಿ ಪ್ರಮುಖ
- ದೂತವಚನ – ದೂತನ ಮಾತು
- ದೂದ – (ದೂತ) ಸಂದೇಶವಾಹಕ
- ದೂದಟ್ಟು – ದೂದು+ಅಟ್ಟು, ಸಂದೇಶ ಕಳಿಸು
- ದೂದವಿ – ದೂತಿಕೆ, ಕುಂಟಣಿ
- ದೂದು – ದೌತ್ಯ; ಸಂದೇಶ
- ದುದುವೋಗು – ಸಂದೇಶ ಕೊಂಡೊಯ್
- ದೂನ – ದುಃಖ
- ದೂನಿಸು – ದುಃಖಪಡು
- ದೂರದರ್ಶಿತ್ವ – ಮುಂದಾಲೋಚನೆ
- ದೂರಪ್ರಿಯ – ದೂರನಾದ ನಲ್ಲ
- ದೂರಫಲ – ಬಹಳ ಕಾಲದ ಮೇಲೆ ಸಿಕ್ಕುವ ಫಲ
- ದೂರಭವ್ಯ – (ಜೈನ) ಸಮ್ಯಕ್ತ್ವಕ್ಕೆ ಇನ್ನೂ ದೂರವಿರುವವನು
- ದೂರಸ್ಥ – ದೂರದಲ್ಲಿರುವ(ವನು)
- ದೂರೀಕೃತ – ದೂರ ಮಾಡಿದ
- ದುರೋತ್ಸಾರಿತ – ದೂರದಲ್ಲಿ ನಿಲ್ಲಿಸಿದ
- ದೂರ್ತವಡೆ – ವಂಚಕರ ಸಮೂಹ
- ದೂರ್ತು – ವಂಚಕತನ
- ದೂರ್ವಾ – ಗರಿಕೆ
- ದೂರ್ವಾಂಕುರ – ಗರಿಕೆಯ ಚಿಗುರು
- ದೂರ್ವಾಂಚಿತ – ಗರಿಕೆಯ ಅಲಂಕಾರವುಳ್ಳ
- ದೂವಾಪ್ರವಾಲ – ದೂರ್ವಾಂಕುರ
- ದೂರ್ವೆ – ಗರಿಕೆ
- ದೂವಟ – ರೇಷ್ಮೆ ಬಟ್ಟೆ
- ದೂವಟ್ಟಿಗೆ – (ದ್ವಿಪಟ್ಟಿಕಾ) ಎರಡು ಪದರದ ಬಟ್ಟೆ
- ದೂವೆ – ಹೊಗೆ; ಚಿತೆ; ಗರಿಕೆ; ಆವಗೆ
- ದೂವೆಗಿ(ಕಿ)ಚ್ಚು – ಆವಗೆಯ ಬೆಂಕಿ
- ದೂಷಣ – ನಿಂದನೆ
- ದೂಷಣಿಕ – ನಿಂದಕ
- ದೂಷಿಸು – ನಿಂದಿಸು
- ದೂಷ್ಯ – ನಿಂದನಾರ್ಹ; ಬಟ್ಟೆ
- ದೂಷ್ಯಕುಟಿ – ಡೇರೆ
- ದೂಸ(ಸು) – (ದೂಷ್ಯ) ಬಟ್ಟೆ
- ದೂಸಕ – (ದೂಷಕ) ನಿಂದಕ
- ದೂಸರ – ಬೂದುಬಣ್ಣ
- ದೂಸರಮಂಗೆಯ್ – ಮಲಿನಮಾಡು
- ದೂಸ¾õï – ಕಾರಣ, ನಿಮಿತ್ತ
- ದೂಸಿಗ – ಬಟ್ಟೆಯ ವ್ಯಾಪಾರಿ
- ದೂಸಿಗವಸರ – ದೂಸಿಗ+ಪಸರ, ಬಟ್ಟೆಯಂಗಡಿ
- ದೂಳಿ – ಧೂಳು; ಪುಡಿ
- ದೂಳಿಸೆಜ್ಜರ – ದೂಳಾಟ
- ದೂಳ್ವಡಿಸು – ಪುಡಿಗುಟ್ಟು
- ದೂ¾Âಸು – ಚಿಂತಿಸುವುದು
- ದೂ¾ು – ತೆಗಳು; ತೆಗಳಿಕೆ; ಚಾಡಿ ಹೇಳು
- ದೃಕ್ಪ್ರಭೆ – ಕಣ್ಣ ಕಾಂತಿ
- ದೃಕ್ಸಹಸ್ರ – ಸಹಸ್ರ ಕಣ್ಣುಗಳು
- ದೃಕ್ಸೌಮ್ಯ – ಕಣ್ಣಿಗೆ ಹಿತಕರವಾದ
- ದೃಗಂಬು – ಕಂಬನಿ
- ದೃಗ್ದಾಮ – ದೃಷ್ಟಿಯೆಂಬ ಹಗ್ಗ
- ದೃಗ್ದೀಪ್ತಿ – ದೃಕ್ಪ್ರಭೆ
- ದೃಢಗುಣ – ಸ್ಥಿರ ಸ್ವಭಾವ
- ದೃಢಚರ್ಯ – (ಜೈನ) ಧಾರ್ಮಿಕಗ್ರಂಥಗಳ ಅಧ್ಯಯನ
- ದೃಢಬ್ರತೆ – ಕಟ್ಟುನಿಟ್ಟಾಗಿ ವ್ರತ ಪಾಲಿಸುವವಳು
- ದೃಢವ್ರತ – ಕಟ್ಟುನಿಟ್ಟಾದ ವ್ರತ (ಪಾಲಿಸುವವನು)
- ದೃಢೀಕೃತ – ಭದ್ರಪಡಿಸಿದ
- ದೃಪ್ತ – ದರ್ಪದಿಂದ ಕೂಡಿದ; ಹೆಮ್ಮೆಯ
- ದೃಪ್ಯದ್ಬಳ – ದೃಪ್ಯತ್+ಬಳ, ಬಲಿಷ್ಠ ಸೈನ್ಯ
- ದೃಶ್ಯಂ – ನೋಡಬಹುದಾದುದು
- ದೃಷ್ಟಾಂತ – ನಿದರ್ಶನ; ಕುರುಹು
- ದೃಷ್ಟಿಪಾತ – ನೋಟ
- ದೃಷ್ಟಿಮೋಹ – (ಜೈನ) ಸಮ್ಯಗ್ದರ್ಶನವನ್ನು
- ಹಾಳುಮಾಡುವ ಕರ್ಮ
- ದೃಷ್ಟಿಯುದ್ಧ – ರೆಪ್ಪೆಯಿಕ್ಕದೆ ಪರಸ್ಪರರನ್ನು ನೋಡಿವ ಯುದ್ಧ
- ದೃಷ್ಟಿಯುದ್ಧಂಗೆಯ್ – ದೃಷ್ಟಿಯುದ್ಧಮಾಡು
- ದೃಷ್ಟಿವಿಭವ – (ಜೈನ) ಸಮ್ಯಗ್ದರ್ಶನದ ಪ್ರಭಾವ
- ದೃಷ್ಟಿವಿಷ – ಶಂಖಪಾಲ ಎಂಬ ಹಾವು
- ದೃಷ್ಟಿವಿಷಭುಜಂಗ(ಮ) – ನೋಟದಿಂದಲೇ ಕೊಲ್ಲುವ ಹಾವು
- ದೃಷ್ಟಿವಿಷಾಹಿ – ದೃಷ್ಟಿವಿಷಭುಜಂಗ(ಮ)
- ದೆಖ್ಖಾದೆಖ್ಖಿ – ದ್ವಂದ್ವಕಾಳಗ
- ದೆಪ್ಪಳಿಸು – ಬೆರಗಾಗು
- ದೆಯ್ವ – ದೈವ, ದೇವತೆ; ಅದೃಷ್ಟ
- ದೆಯ್ವಬಲ – ದೇವರ ಕೃಪೆ
- ದೆವಸ – ದಿವಸ
- ದೆಸೆ – (ದಿಶಾ) ದಿಕ್ಕು; ಜಾಗ
- ದೆಸೆಗಾಣ್ – ದಿಕ್ಕು ಕಾಣು; ಚೆನ್ನಾಗಿ ನೋಡಿ
- ದೆಸೆಗೆಡಿಸು – ದಿಕ್ಕು ತೊಚದಂತೆ ಮಾಡು
- ದೆಸೆಗೆಡು – ದಿಕ್ಕು ತೊಚದಂತಾಗು
- ದೆಸೆದಪ್ಪು – ದಿಕ್ಕುತಪ್ಪು
- ದೆಸೆದೇವತೆ – ದಿಗ್ದೇವತೆ
- ದೆಸೆಬಿ(ವಿ)ದ್ದಂ – (ದಿಶಾವಿದ್ಧ) ಅಧಿಕವಾಗಿ
- ದೆಸೆವಲಿ – ದಿಗ್ಬಲಿ
- ದೆಸೆವೆಟ್ಟು – ದಿಕ್ಕು ಎಂಬ ಬೆಟ್ಟ
- ದೇಗುಲ – (ದೇವಕುಲ) ದೇವಾಲಯ
- ದೇಗುಲಿಗ – ದೇವಸ್ಥಾನದ ಕೆಲಸಗಾರ
- ದೇಯ್ಯ – ದಾನದ ವಸ್ತು
- ದೇವ – ದೇವತೆ; (ಜೈನ) ಲೋಕಾತೀತ ದೇವತೆ
- ದೇವಕಾಂತೆ – ದೇವತಾಸ್ತ್ರೀ
- ದೇವಕುಜ – ಕಲ್ಪವೃಕ್ಷ
- ದೇವಕುರು – (ಜೈನ) ಮೇರುಪರ್ವತದ
- ದಕ್ಷಿಣದಲ್ಲಿರುವ ಭೋಗಭೂಮಿ
- ದೇವಕುಲ – ದೇಗುಲ, ದೇವಸ್ಥಾನ
- ದೇವಕೃತ – ದೇವರಿಂದಾದ; (ಜೈನ) ಮೂವತ್ತನಾಲ್ಕು ಅತಿಶಯಗಳಲ್ಲಿ ಒಂದು
- ದೇವಗಣ – ದೇವತೆಗಳ ಸಮೂಹ
- ದೇವಗಣಿಕೆ – ಅಪ್ಸರಸ್ತ್ರೀ: ರಂಭೆ, ಊರ್ವಶಿ, ತಿಲೋತ್ತಮೆ, ಮಂಜುಘೋಷೆ, ಮೇನಕೆ, ಸುಕೇಶಿ, ಘೃತಾಚಿ
- ದೇವಗತಿ – ದೇವತ್ವವನ್ನು ಹೊಂದುವುದು
- ದೇವಗತಿವಡೆ – ದೇವತ್ವವನ್ನು ಹೊಂದು
- ದೇವಗುರು – ಬೃಹಸ್ಪತಿ
- ದೇವಗೃಹ – ದೇವಸ್ಥಾನ
- ದೇವಚಾಪ – ಕಾಮನಬಿಲ್ಲು
- ದೇವಚ್ಛಂದ – ನೂರು (ಎಂಬತ್ತೊಂದು) ಎಳೆಗಳ ಮುತ್ತಿನ ಹಾರ
- ದೇವಜ್ಯೇಷ್ಠ – ದೇವತೆಗಳ ಹಿರಿಯ, ಬ್ರಹ್ಮ
- ದೇವಡಿಗ – ಪೂಜಾರಿ
- ದೇವಡಿತಿ – ದೇವತಾಸ್ತ್ರೀ; ಅಪ್ಸರೆ
- ದೇವತನು – ದೇವತೆಯ(ದರಂತಹ) ಶರೀರ
- ದೇವತಾನಿಷ್ಠ – ಭಕ್ತ
- ದೇವತಾಮೂಢ – (ಜೈನ) ಮೂಢತ್ರಯಗಳಲ್ಲಿ ಒಂದು; ಸಲ್ಲದವನನ್ನು ಪೂಜಿಸುವುದು
- ದೇವತಾರೂಪ – ದೇವತೆಯ ಆಕೃತಿ
- ದೇವತೂರ್ಯ – ದೇವದುಂದುಭಿ
- ದೇವತೆ – ಅತಿಮಾನುಷ ಜೀವಿ
- ದೇವತೋಪದ್ರವ – ದೇವತೆಗಳಿಂದಾಗುವ ತೊಂದರೆ
- ದೇವತ್ರಯ – ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರ
- ದೇವತ್ವ – ದೇವತನ
- ದೇವದತ್ತ – ಅರ್ಜುನನ ಶಂಖದ ಹೆಸರು
- ದೇವದಾರು – ಒಂದು ಮರ
- ದೇವದುಂದುಭಿ – ಸ್ವರ್ಗದ ನಗಾರಿ
- ದೇವದೇವ – ದೇವತೆಗಳ ದೇವ
- ದೇವದೌವಾರಿಕ – ದೇವಲೋಕದ ಪಡಿಯರ
- ದೇವನಗ – ಮೇರುಪರ್ವತ
- ದೇವನಿಕಾಯ – ದೇವತೆಗಳ ಗುಂಪು
- ದೇವಪತಿ – ದೇವೇಂದ್ರ
- ದೇವಪಥ – ಆಕಾಶ
- ದೇವಮಣಿ – ಕೌಸ್ತುಭರತ್ನ
- ದೇವಮಾತೃಕ – ಮಳೆಯ ನೀರಿನಿಂದ
- ಕೃಷಿಗೊಳ್ಳುವ ಪ್ರದೇಶ
- ದೇವಮನಿ – ನಾರದ
- ದೇವರ್ – ಭಗವಂತ; ಹಿರಿಯರನ್ನು ಸಂಬೋಧಿಸುವ ಒಂದು ಬಗೆ
- ದೇವರ – ಮೈದುನ
- ದೇವರಾಜ – ದೇವೇಂದ್ರ
- ದೇವವಂದ್ಯ – ದೇವತೆಗಳ ಗೌರವಕ್ಕೆ ಪಾತ್ರನಾದವನು
- ದೇವವಾನಸ – ದೇವರಂತಹ ಮನುಷ್ಯ
- ದೇವವಾರಣ – ಐರಾವತ
- ದೇವವೀಧಿ – ದೇವತೆಗಳ ಗುಂಪು
- ದೇವವ್ರತ – ಬ್ರಹ್ಮಚರ್ಯೆ; ಭೀಷ್ಮ
- ದೇವಸಂಘಾತ – ದೇವತೆಗಳ ಗುಂಪು
- ದೇವಸಬ(ವ)ಳ – ದೇವಮಾನ (ಒಂದು ಅಳತೆ)
- ದೇವಸಿದ್ಧಿ – ದೇವಕೃಪೆಯಿಂದಾಗುವ ಕಾರ್ಯಸಿದ್ಧಿ
- ದೇವಸೇನೆ – ದೇವತೆಗಳ ಸೈನ್ಯ
- ದೇವಸೌಖ್ಯ – ದೇವತೆಗಳು ಅನುಭವಿಸುವ ಸುಖ
- ದೇವಸ್ತಿತಿ – ದೇವ ಪ್ರಾರ್ಥನೆ
- ದೇವಸ್ತ್ರೀ – ದೇವಕನ್ಯೆ
- ದೇವಸ್ವ – ದೇವರ ಸ್ವತ್ತು; ದೇವಸ್ಥಾನದ ಆಸ್ತಿ
- ದೇವಾಂಗ(ವಸ್ತ್ರ) – ರೇಷ್ಮೆಯ ಬಟ್ಟೆ
- ದೇವಾಂಗನೆ – ದೇವತಾಸ್ತ್ರೀ
- ದೇವಾಂಗವಸನ – ರೇಷ್ಮೆ ಬಟ್ಟೆ
- ದೇವಾಗಮ(ನ – ದೇವತೆಗಳ ಆಗಮನ, ಬರುವಿಕೆ
- ದೇವಾಗಾರ – ಸ್ವರ್ಗ, ದೇವಸ್ಥಾನ
- ದೇವಾಧಿದೇವ – ದೇವರುಗಳಿಗೂ ದೇವನಾದವನು
- ದೇವಾಧೀಶ – ದೇವೇಂದ್ರ
- ದೇವಾನಕ – ದೇವದುಂದುಭಿ
- ದೇವಾನಾಂಪ್ರಿಯ – ದೇವತೆಗಳಿಗೆ ಪ್ರಿಯನಾದವನು; ದಡ್ಡ
- ದೇವಾಪಗೆ – ದೇವತೆಗಳ ನದಿ
- ದೇವಾಯತನ – ದೇವಾಲಯ
- ದೇವಾರ – (ದೇವಾಗಾರ) ದೇವಾಲಯ
- ದೇವಾರಣ್ಯ – (ಜೈನ) ಮೇರುಗಿರಿಯ ತಪ್ಪಲಿನ ಭದ್ರಸಾಲವನ
- ದೇವಾರಿ – ದೇವತೆಗಳ ಶತ್ರು, ರಾಕ್ಷಸ
- ದೇವಾರ್ಚನೆ – ದೇವರ ಪೂಜೆ
- ದೇವಾರ್ಚನೆಗೆಯ್ – ದೇವರಪೂಜೆ ಮಾಡು
- ದೇವಾರ್ಭಕ – (ಜೈನ) ಅರ್ಹಂತಶಿಶು
- ದೇವಾವನಿಜಾತ – ದೇವಲೋಕದ ಮರ, ಕಲ್ಪವೃಕ್ಷ
- ದೇವಾಸುರ – ದೇವತೆ ಮತ್ತಿ ರಾಕ್ಷಸ
- ದೇವಾಸುರಯುದ್ಧ – ದೇವತೆಗಳು ಹಾಗೂ ರಾಕ್ಷಸರ ನಡುವಣ ಯುದ್ದ
- ದೇವಿ – ಪಟ್ಟದ ರಾಣಿ
- ದೇವಿತನ – ಪಟ್ಟದ ರಾಣಿಯ ಪದವಿ
- ದೇವೇಂದ್ರ – ದೇವತೆಗಳ ಒಡೆಯ
- ದೇವೇಂದ್ರಚಾಪ – ಕಾಮನ ಬಿಲ್ಲು
- ದೇವೇಂದ್ರತ್ವ – ದೇವೇಂದ್ರಪದವಿ
- ದೇವೇಶ – ದೇವೇಂಧ್ರ; ಈಶ್ವರ
- ದೇವೋತ್ತರಕುರು – (ಜೈನ) ಮೇರುಪರ್ವತದ ದಕ್ಷಿಣಕ್ಕೆ ಹಾಗೂ ನಿಷಧಕ್ಕೆ ಉತ್ರದಲ್ಲಿರುವ ಒಂದು ಭೋಗಭೂಮಿ
- ದೇವೋಪಘಾತ – ದೇವತೆಗಳಿಂದಾಗುವ ತೊಂದರೆ
- ದೇಶ – ಪ್ರದೇಶ, ಸ್ಥಳ; ನಾಡು
- ದೇಶನಿವೇಶೋಪದೇಶ – (ಜೈನ) ಜೈನಪುರಾಣಗಳ ಎಂಟು ಅಂಗಗಳಲ್ಲಿ ಒಂದು; ದೇಶದ ವಿನ್ಯಾಸ, ವಿಸ್ತೀರ್ಣ, ರೀತಿ ಮುಂತಾದವನ್ನು ತಿಳಿಸುವುದು
- ದೇಶವಿರತ – (ಜೈನ) ದೇಶವಿರತಿ ವ್ರತ ತೊಟ್ಟವನು
- ದೇಶವಿರತಿ – (ಜೈನ) ಮೂರು ಬಗೆಯ ಗುಣವ್ರತಗಳಲ್ಲಿ ಒಂದು; ಜೀವನಪರ್ಯಂತ ನಿಗದಿತ ಅವಧಿಯಲ್ಲಿ ನಿರ್ದಿಷ್ಟ ಪ್ರದೇಶಗಳ ಹೊರಗೆ ಸಂಚರಿಸದಿರುವ ವ್ರತ
- ದೇಶಾಂತರಿ(ಗ) – ಪರದೇಶಿಗ
- ದೇಶಾಖ್ಯಾನ – (ಜೈನ) ದೇಶನಿವೇಶೋಪದೇಶ
- ದೇಶವ್ರತಾತಿಚಾರ – (ಜೈನ) ಪ್ರೇಕ್ಷಣ, ಶಬ್ದ, ಅನಯನ, ರೂಪಾಭಿವ್ಯಕ್ತಿ, ಪುದ್ಗಲಕ್ಷೇಪ ಎಂಬ ಐದು ಬಗೆಯ ವ್ರತಗಳು
- ದೇಶಾವಧಿ – (ಜೈನ) ಮೂರು ಬಗೆಯ ಅವಧಿಜ್ಞಾನಗಳಲ್ಲಿ ಒಂದು; ದೇಶಕಾಲಭಾವಗಳಿಗೆ ಸಂಬಂಧಿಸಿದಂತೆ ಸೀಮಿತ ಪದಾರ್ಥಗಳ ಜ್ಞಾನ
- ದೇಶಿ – ಒಂದು ಪ್ರದೇಶದ ವಿಶಿಷ್ಟ ರೀತಿ; ಉಪಭಾಷೆ
- ದೇಶಿಕ – ಉಪಾಧ್ಯಾಯ
- ದೇಶೀಯಪದ – ದೇರ್ಶಯಪದ, ಕನ್ನಡದ ಸ್ವಂತಪದ
- ದೇಶೀಯಾಕ್ಷರ – ಅಚ್ಚಗನ್ನಡ ಅಕ್ಷರ
- ದೇಸಿ(ಸೆ) – ದೇಶಿ; ಅಚ್ಚಗನ್ನಡ; ಸೊಗಸು
- ದೇಸಿಗ – ಪರದೇಶಿ; ನಿರ್ಗತಿಕ
- ದೇಸಿಗತನ – ದಿಕ್ಕಿಲ್ಲದಿರುವಿಕೆ; ಭಿಕ್ಷಾವೃತ್ತಿ
- ದೇಸಿಗಾರ್ತಿ – ಚೆಲುವೆ
- ದೇಸಿಗಿತಿ – ದಿಕ್ಕಿಲ್ಲದವಳು
- ದೇಸಿಗೆ – ದೇಸಿಗಿತಿ
- ದೇಸಿವಡೆ – ಚೆಲುವು ಪಡೆ
- ದೇಹದೀಪ್ತಿ – ದೇಹಕಾಂತಿ
- ದೇಹಸುಖ – ಶರೀರ ಸುಖ
- ದೇಹಾರ – ದೇವಾರ, ಗುಡಿ
- ದೇಹಿ – ದೇಹವುಳ್ಳುದು;
ಕೊಡು'ದೇಹೋಚ್ಛ್ರಿತಿ - ದೇಹದ ಎತ್ತರ ದೈತ - ನಲ್ಲ; ಗಂಡ ದೈತೇಂದ್ರ - ಒಡೆಯರ ಒಡೆಯ ದೈತೇಯ - ದಿಕ್ಪಾಲಕರಲ್ಲಿ ಒಬ್ಬನಾದ ನಿರ್ಋತಿ ದೈತ್ಯ - ರಾಕ್ಷಸ ದೈತ್ಯಮರ್ದನ - ರಾಕ್ಷಸರನ್ನು ಮರ್ದಿಸುವವನು ದೈತ್ಯಾರಿ - ದೈತ್ಯಮರ್ದನ ದೈತ್ಯೇಂದ್ರ - ರಾಕ್ಷಸರಾಜ ದೈನ್ಯದೃಷ್ಟಿ - ದೀನತೆಯಿಂದ ಕೂಡಿದ ನೋಟ ದೈನ್ಯಭಾವ - ದೀನತೆ ದೈನ್ಯವಚನ - ದೀನತೆಯಿಂದ ಕೂಡಿದ ನುಡಿ ದೈಘ್ರ್ಯ - ಉದ್ದ, ದೀರ್ಘತೆ ದೈವಜ್ಞ - ಜ್ಯೋತಿಷಿ ದೈವಪರ - ಅದೃಷ್ಟದಲ್ಲಿ ಮಾತ್ರವೇ ನಂಬಿಕೆಯಿಟ್ಟವನು ದೈವಬಲ - ಅದೃಷ್ಟಬಲ ದೈವವಿಸೂತ್ರ - ವಿಧಿನಿಯಮ ದೈವಹೀನ - ಅದೃಷ್ಟಹೀನ ದೈವಾಯತ್ತ - ದೇವರ(ಅದೃಷ್ಠದ) ವಶದಲ್ಲಿರುವ ದೊಂಡೆ - ಗೆಡ್ಡೆಗಟ್ಟಿದ; ತೊಡಕಾದ ದೊಂಡೆಗರುಳ್ - ಹೆಣೆದುಕೊಮಡ ಕರುಳು ದೊಂದೆ - ಪಂಜು ದೊಂಬ - ಡೊಂಬ, ಕೊಲ್ಲಟಿಗ ದೊಡ್ಡಮಾರ್ಗ - ಆನೆಕುದುರೆಗಳ ಕಿರುದೊಡೆಯ ದದ್ದು ದೊಡ್ಡಿತು(ತ್ತು) - ದಪ್ಪನಾದ ದೊಣೆ - ಬೆಟ್ಟದ ಮೇಲಣ ಸ್ವಾಭಾವಿಕ ಹೊಂಡ; ಬತ್ತಳಿಕೆ ದೊಣೆವೋಗು - ಗುಳಿಬೀಳು ದೊಮ್ಮಳಿಸು - ಗುಂಪಾಗು; ಸಂಭ್ರಮಿಸು; ಸುತ್ತಾಡು; ರಭಸಗೊಳ್ಳು ದೊರಕು - ಸಿಗು ದೊರೆ - ರಾಜ; ಸಿಗು; ಸಮ; ಯೋಗ್ಯ; ಸಮೀಪಿಸು ದೊರೆಕೊಳ್ - ಸಿಗು; ಸಮಾನವಾಗು ದೊರೆಕೊಳಿಸು - ಸಿಗುವಂತೆ ಮಾಡು; ಉಂಟುಮಾಡು; ಹೋಲಿಕೆಯಾಗು ದೊರೆಗಾಣ್ - ಸಮನಾಗಿ ಕಾಣು ದೊರೆಗಿ(ಗೆ)ಡಿಸು - ಅಯೋಗ್ಯವಾಗಿಸು ದೊರೆಗೆಡು - ಕ್ರಮ ತಪ್ಪು ದೊರೆತು - ಲಕ್ಷ್ಣವುಳ್ಳದ್ದು, ಸಮ ದೊರೆತೆ (ದೊರೆತು+ಎ) ಅಂತಹುದೇ, ಸದೃಶದೊರೆಯೇ - ಯೋಗ್ಯವೇ ದೊರೆವಡೆ - ಪ್ರಸಿದ್ಧಿಗೊಳ್ಳು ದೊರೆವರ್ - ಸಮಾನವಾಗು ಶೋಭಿತವಾಗು ದೋಂಟಿ - ದೋಟಿ, ತುದಿಯಲ್ಲಿ ಕೊಕ್ಕೆಯಿರುವಉದ್ದನೆಯ ಕೋಲುದೋಃಕಂಡೂಯನ - ತೋಳಿನ ತೀಟೆ ದೋಣಿ - ನೀರಿನ ತೊಟ್ಟಿ; ತೇಲುವ ಸಾಧನ ದೋಣಿಕೊಂ(ಗೊಂ)ಡ - (ದ್ರೋಣಿಕುಂಡ) ದೋಣಿಯಾಕಾರದ ಹರವಿ ದೋಣಿಯೋ(ವೋ)ಗು - ತಗ್ಗುಬೀಳು ದೋಧೂಯಮಾನ - ಚಾಮರದಂತೆ ತೂಗಾಡುವ ದೋರ್ - ತೋಳು ದೋರಾಂದೋಳನ - ತೋಳು ಬೀಸುವುದು ದೋರೆ(ಗಾಯ್) - ಅರ್ಧ ಮಾಗಿದ ಕಾಯಿ ದೋರೆಗೆಂಬಿಸಿಲ್ - ದೋರೆಗಾಯಿಗಿರುವಂತಹ ಕೆಂಬಿಸಿಲು ದೋರೆವಣ್ - ಅರ್ಧ ಮಾಗಿದ ಹಣ್ಣು ದೋರೆವಲ್ - ದೋರೆಹಣ್ಣಿನಂತೆ ನಸುಗೆಂಪಾದ ಹಲ್ಲು ದೋರ್ಗರ್ವ - ಬಾಹುಬಲದ ಬಗೆಗಿನ ಹೆಮ್ಮೆ ದೋರ್ದಂಡ - ಭುಜದಂಡ; ಪರಾಕ್ರಮ ದೋರ್ದರ್ಪ - ದೋರ್ಗರ್ವ ದೋರ್ಬಲ - ಬಾಹುಬಲ ದೋರ್ಭಂಗ - ತೋಳು ಮುರಿ; ಸೋಲು ದೋರ್ಮಂಡಲ - ಬಾಹುಪ್ರದೇಶ ದೋರ್ಮೂಲ - ಬಾಹುವಿನ ಮೂಲ, ಕಂಕುಳು ದೋರ್ಯುಗ - ಎರಡು ತೋಳುಗಳು ದೋರ್ಲತೆ - ಬಾಹುಲತೆ ದೋರ್ವಲ - ಬಾಹುಬಲ ದೋರ್ವಲನ - ಬಾಹುಚಲನೆ ದೋರ್ವಳಯ - ತೋಳಬಂದಿ ದೋರ್ವಳಯುತ - ಬಾಹುಬಲವುಳ್ಳವನು ದೋಲಿಗ - ಸೇವಕ ದೋವತಿ - ಧೋತ್ರ, ಪಂಚೆ ದೀಶ್ಚಕ್ರ - ಕೈವಶವಾದ ಚಕ್ರ, ಚಕ್ರಾಯುಧ ದೋಶ್ಶಾಲಿ - ಪರಾಕ್ರಮಿ ದೋಷ - ಕುಂದು, ನ್ಯೂನತೆ; ಕತ್ತಲು ದೋಷಕರ - ದೋಷವುಳ್ಳುದು; ದೋಷ ಉಂಟುಮಾಡುವಂತಹುದು ದೋಷಗವೇಷಣ - ತಪ್ಪು ಹುಡುಕುವವನು ದೋಷಗ್ರಾಹಿ - ದೋಷವನ್ನು ಕಾಣುವವನು; ಕೆಟ್ಟ ರಕ್ತ ಹೀರುವುದು ದೋಷದೂಷಿತೆ - ಪಾಮಾಡಿದವಳು ದೋಷದೃಷ್ಟಿ - ದೃಷ್ಟಿದೋಷವಿರುವವನು; ನ್ಯೂನದೃಷ್ಟಿ ದೋಷಪ್ರತಿಕಾರ - ಪಾಪವಿನಾಶ ದೊಷವರ್ಜಿತ - ಪಾಪದೂರನಾದವನು ದೋಷಹರ - ದೋಷವನ್ನು ಹೋಗಲಾಡಿಸುವ ದೋಷಾಂಧ - ದೋಷದಿಂದ ಕುರುಡಾದವನು ದೋಷಾಕರ - ದೋಷಗಳ ಆಗರ; ಹದಿನಾರು ಕಲೆಗಳಿಂದ ಕೂಡಿದ ಚಂದ್ರ ದೊಷಾಕರರಹಿತ - ದೋಷಗಳಿಗೆ ನೆಲೆನೀಡದುದು; ಚಂದ್ರನಿಲ್ಲದುದು ದೋಷಾಗಮನ - ದೋಷದ ಬರುವಿಕೆ, ಕತ್ತಲುಂಟಾಗುವಿಕೆ ದೋಷಾತಿರೇಕ - ಅತಿಯದ ದೋಷ ದೋಷಾನುವರ್ತನೆ - ದೋಷವನ್ನು ಅನುಸರಿಸುವುದು; ಕತ್ತಲಿಗೆ ಹೊಂದಿಕೊಳ್ಳುವುದು ದೋಷಾನುಸಂಗ - ದೋಷದ ಸಹವಾಸ; ಕತ್ತಲ ಸಹವಾಸ ದೋಷಾನುಸಂಗೆ - ಕಳಂಕಿತೆ; ಕತ್ತಲ ಸಹವಾಸ ಮಾಡುವವಳು ದೋಷಾನ್ವೇಷಣ - ದೋಷ ಹುಡುಕುವುದು ದೋಷಾಪಚಯ - ದೋಷದಿಂದಾಗುವ ಹಾನಿ ದೋಷಾಬಂಧು - ಕತ್ತಲೆಯ ಬಂಧು, ಚಂದ್ರ ದೋಷಾಭಾಸ - ಇಲ್ಲದಿರುವ ತಪ್ಪುಇರುವಂತೆ ಕಾಣುವುದು ದೋಷಾಭಿಸಂಧಿ - ಕತ್ತಲ ಜೊತೆ ಸೇರುವುದು ದೋಷಾವಕಾಶ - ದೋಷಮಾಡಲು ಇರುವ ಅವಕಾಶ ದೋಷಾವಸಥ - ದೋಷದ ನೆಲೆ ದೋಷಾವಹ - ಕೆಟ್ಟುದನ್ನುಂಟುಮಾಡುವುದು ದೋಷಾವಿಲ - ಕೆಟ್ಟುದರಿಂದ ಕೂಡಿದ ದೋಷಿ(ಗ) - ತಪ್ಪುಮಾಡಿದವನು ದೋಷೇತರ - ದೋಷವಲ್ಲದ್ದು ದೋಷೋದ್ಗಮ - ದೋಷದ ಹುಟ್ಟು ದೋಸ - ದೋಷ ದೋಸ್ಸಾರ - ಬಾಹುಬಲ ದೋಸ್ಸಾಹಸ - ದೋಸ್ಸಾರ ದೋಹ - ದ್ರೋಹ ದೋಹದ - ಬಸಿರಿನ ಬಯಕೆ ದೋಹನ - ಹಾಲು ಕರೆಯುವುದು ದೋಹಳ - ಬಯಕೆ ದೌವಾರಿಕ - ಪಡಿಹಾರಿ, ಬಾಗಿಲು ಕಾಯುವವನು ದೌವಾರಿಕೆ - ಬಾಗಿಲು ಕಾಯುವವಳು ದೌಸ್ಯಂತಿ - ದುಷ್ಯಂತನ ಮಗ ದೌಹಿತ್ರ - ಮಗಳ ಮಗ ದೌಹೃದ - ದೋಹದ ದ್ಗ್ರಾಹ - ನೀರಾನೆ ದ್ಯುಚರ - ಆಕಾಶಗಾಮಿಯಾದವನು, ಗಂಧರ್ವ ದ್ಯುತಿ - ಕಾಂತಿ ದ್ಯುತಿಮಾಲಿ - ಕಿರಣಮಾಲೆಯುಳ್ಳವನು, ಸೂರ್ಯ ದ್ಯುನದಿ - ದೇವನದಿ, ಗಂಗೆ ದ್ಯುನದೀಜ - ಗಂಗಾಪುತ್ರ, ಭೀಷ್ಮ ದ್ಯುಮಣಿ - ಸೂರ್ಯ ದ್ಯುಮಣಿದ್ಯುತಿ - ಸೂರ್ಯನ ಕಾಂತಿ, ಬಿಸಿಲು ದ್ಯುಮಣಿಪ್ರದ್ಯೋತ - ಸೂರ್ಯನ ಕಾಂತಿ, ಬಿಸಿಲು ದ್ಯುಮಣಿಮಯೂಖ - ಸೂರ್ಯನ ಕಾಂತಿ, ಬಿಸಿಲು ದ್ಯೂತ - ಜೂಜು; ಜೂಜಿನ ಪಣ ದ್ಯೋತ - ಪ್ರಕಾಶ ದ್ಯೋತಿ - ಕಾಂತಿ; ಕಾಂತಿಯುಕ್ತವಾದ ದ್ಯೋತಿತ - ಪ್ರಕಾಶಗೊಳಿಸಿದ ದ್ರಮ್ಮ - ಒಂದು ನಾಣ್ಯ ದ್ರವಿ¿ - ದ್ರಾವಿಡ ದ್ರವ್ಯ - ವಸ್ತು; (ಜೈನ) ಐದು ಬಗೆಯ ಸಂಸಾರಗಳಲ್ಲಿ ಒಂದು; (ಜೈನ) ಷಡ್ದ್ರವ್ಯಗಳಲ್ಲಿ ಒಂದು; ನೋಡಿ,
ಸಂಸಾರಮತ್ತು
ಷಡ್ದ್ರವ್ಯದ್ರವ್ಯತಪ - ವಸ್ತುಗಳಿಗಾಗಿ ಮಾಡುವ ತಪಸ್ಸು ದ್ರವ್ಯತ್ವ - (ಜೈನ) ವಸ್ತುವಿನ ಭಾವ ದ್ರವ್ಯಪರಾವರ್ತನ - ಸಂಸಾರದಲ್ಲಿ ಪರಿಭ್ರಮಿಸುವ ಜೀವಕ್ಕಾಗುವ ಐದು ಬಗೆಯ ಪರಿವರ್ತನೆಗಳು, ನೋಡಿ,
ಸಂಸಾರದ್ರವ್ಯಪರಿವರ್ತನ - ದ್ರವ್ಯಪರಾವರ್ತನ ದ್ರವ್ಯರ್ಷಿ - (ಜೈನ) ಮಿಥ್ಯಾದೃಷ್ಟಿಯುಳ್ಳ ಮುನಿ, ವೇಷಧಾರಿ ದ್ರವ್ಯಲಿಂಗಿ - ದ್ರವ್ಯರ್ಷಿ ದ್ರವ್ಯಶಕ್ತಿ - ವಸ್ತುವಿನ ಮೂಲಸಾಮಥ್ರ್ಯ ದ್ರವ್ಯಸಂಸಾರ - ಶರೀರವನ್ನು ಪಡೆದು ನಂತರ ತ್ಯಜಿಸುವುದು ದ್ರವ್ಯಾನುಯೋಗ - (ಜೈನ) ಜೀವಾದಿ ಷಡ್ದ್ರವ್ಯಗಳನ್ನೂ ಏಳು ತತ್ವಗಳನ್ನೂ ನಿರೂಪಿಸುವ ಶಾಸ್ತ್ರಭಾಗ, ನಾಲ್ಕು ಅನುಯೋಗಗಳಲ್ಲಿ ಒಂದು, ನೋಡಿ
ಅನುಯೋಗ’ - ದ್ರವ್ಯಾರ್ಥಕನಯ – (ಜೈನ) ವಸ್ತುಗಳ ಒಟ್ಟು ಉದ್ದೇಶಗ್ರಹಣಕ್ಕೆ ಬೇಕಾದ ತಿಳಿವಳಿಕೆ; ಇದರಲ್ಲಿ ಮೂು ಬಗೆ: ನೈಗಮ, ಸಂಗ್ರಹ, ವ್ಯವಹಾರ
- ದ್ರಾಘಿಮ – ದೀರ್ಘತೆ
- ದ್ರಾವಣಿ – ಕರಗುವ ಸ್ವಭಾವವುಳ್ಳುದು
- ದ್ರಾವಣೀಯ – ಕರಗುವದ್ರಾವಿತ – ಕರಗಿದದ್ರು – ಮರ
- ದ್ರುತ – ತ್ವರಿತವಾಗಿ
- ದ್ರುತಗತಿ – ವೇಗಗಮನ
- ದ್ರುತಯಾನ – ವೇಗಗತಿ
- ದ್ರುತವಿಡು – ದುಃಖಪಡು
- ದ್ರುಪದ – ಮರದ ಕಂಬ; ಪಾಂಚಾಲ ದೇಶದ ರಾಜ
- ದ್ರುಪದಜೆ – ದ್ರುಪದನ ಮಗಳು, ದ್ರೌಪದಿ
- ದ್ರುಪತನೂಭವ – ದ್ರುಪದನ ಮಗ, ಧೃಷ್ಟದ್ಯುಮ್ನ
- ದ್ರುಪದನಂದನ – ದ್ರುಪತನೂಭವ
- ದ್ರುಪದನಂದನೆ – ದ್ರುಪದಜೆ
- ದ್ರುಮ – ಮರ, ವೃಕ್ಷ
- ದ್ರುಮಪತ್ರಪಾತ್ರೆ – ಎಲೆಯಿಂದ ಮಾಡಿದ ಪಾತ್ರೆ, ದೊನ್ನೆ
- ದ್ರುಮರಾಜಿ – ಮರಗಳ ಸಾಲು
- ದ್ರುಮವಿತತಿ – ಮರಗಳ ತೋಪು
- ದ್ರುಮಷಂಡ – ದ್ರುಮವಿತತಿ
- ದ್ರೋಣ – ದೊನ್ನೆ; ಗಡಿಗೆ; ದೋಣಿಯಾಕಾರದ ಪಾತ್ರೆ; ಬಿಲ್ಲು; ಪಾಂಡವಕೌರವರ ಧನುರ್ವಿದ್ಯಾಗುರು
- ದ್ರೋಣಜ – ದ್ರೋಣನ ಮಗ, ಅಶ್ವತ್ಥಾಮ
- ದ್ರೋಣದುಘೆ – ಗಡಿಗೆ ತುಂಬ ಅಂದರೆ ಹೆಚ್ಚು ಹಾಲು ಕರೆಯುವ ಹಸು
- ದ್ರೋಣಪುತ್ರ – ದ್ರೋಣಜ
- ದ್ರೋಣಾಮುಖ – ಜಲಸ್ಥಲಮಾರ್ಗಗಳುಳ್ಳ ಪಟ್ಟಣ
- ದ್ರೋಣಾಸ್ಯ – ದ್ರೋಣಾಮುಖ
- ದ್ರೋಣಿ – ದೋಣಿ; ದೊನ್ನೆ
- ದ್ರೋಣಿಕೆ – ಸಣ್ಣ ದೋಣಿ
- ದ್ರೋಹ – ವಮಚನೆ
- ದ್ರೋಹಿ – ವಂಚಕ
- ದ್ರೌಣಿ – (ದ್ರೋಣನ ಮಗ) ಅಶ್ವತ್ಥಾಮ್ನ
- ದ್ರೌಪದಿ – ದ್ರುಪದನ ಮಗಳು
- ದ್ರುಮ – ಗಿಡ
- ದ್ಯುನದೀಜ – ದೇವನದಿಯ ಪುತ್ರ, ಭೀಷ್ಮ
- ದ್ಯೋತಿತ – ಪ್ರಕಾಶಿಸಲ್ಪಟ್ಟ
- ದ್ವಂದ್ವಯುದ್ಧ- ಇಬ್ಬರ ನಡುವಣ ಯುದ್ಧ; ಮಲ್ಲಯುದ್ಧ
- ದ್ವಯ – ಜೊತೆ, ಯುಗಳ
- ದ್ವಯಭಾವ – ದ್ವೈತ, ಎರಡು ಎಂಬ ಭಾವ
- ದ್ವಾತ್ರಿಂಶತ್ – ಮೂವತ್ತೆರಡು
- ದ್ವಾತ್ತ್ರಿಂಶತ್ರಿದಶಪತಿ – (ಜೈನ) ಮೂವತ್ತೆರಡು ಮಂದಿ ವ್ಯಂತರರು
- ದ್ವಾತ್ರಿಂಶದಿಂದ್ರ – ದ್ವಾತ್ತ್ರಿಂಶತ್ರಿದಶಪತಿ
- ದ್ವಾತ್ರಿಂಶದೇಶಕಲ್ಯಾಣ – (ಜೈನ) ಒಂದು ವ್ರತ
CONCLUSION:
ಕನ್ನಡ ದ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.