ಕನ್ನಡ ಗ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada ga aksharada halegannadada padagalu , ಕನ್ನಡ ಗ ಅಕ್ಷರದ ಹಳೆಗನ್ನಡ ಪದಗಳು (ga halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಗ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( ga halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಗ ಅಕ್ಷರ ಎಂದರೇನು?
ಗ, ಕನ್ನಡ ವರ್ಣಮಾಲೆಯ ಕ-ವರ್ಗದ ಮೂರನೇ ಅಕ್ಷರವಾಗಿದೆ. ಈ ಅಕ್ಷರ ಕಂಠ ಘೋಷ ಸ್ಪರ್ಶ ಧ್ವನಿ. ಅಲ್ಪಪ್ರಾಣಾಕ್ಷರ.
ಇದರ ಅತ್ಯಂತ ಪ್ರಾಚೀನ ಸ್ವರೂಪವನ್ನು ಅಶೋಕನ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಕೆಳಭಾಗದ ರೇಖೆಯಿಲ್ಲದಿರುವ ಸಮಭುಜ ತ್ರಿಕೋನದಂತೆ ಕಾಣುವ ಮೌರ್ಯರ ಕಾಲದ ಈ ಅಕ್ಷರದ ಸ್ವರೂಪ ಶಾತವಾಹನ ಕಾಲದಲ್ಲಿ ದುಂಡಗಾಗಿ ಹಿಡಿ ಮತ್ತು ನಾಲೆ ಇಲ್ಲದ ಘಂಟಾಕೃತಿಯನ್ನು ತಾಳುತ್ತದೆ. ಕದಂಬರ ಶಾಸನಗಳಲ್ಲಿ ಪೇಟಿಕಾಶಿರದ ತಲೆಕಟ್ಟು ಬಂದು ಸೇರುತ್ತದೆ. ಅಲ್ಲಿಂದ ಮುಂದೆ ಈ ಅಕ್ಷರ ಹೆಚ್ಚು ಬದಲಾವಣೆಗಳಿಲ್ಲದೆ ಮುಂದುವರಿದು ಈಗಿರುವ ರೂಪವನ್ನು ತಾಳುತ್ತದೆ. ಪ್ರಾಚೀನ ಬ್ರಾಹ್ಮೀ ಲಿಪಿಯಿಂದ ಹೆಚ್ಚು ಬದಲಾವಣೆ ಹೊಂದದ ಅಕ್ಷರಗಳಲ್ಲಿ ಇದು ಮುಖ್ಯವಾದುದು. ಈ ಅಕ್ಷರ ಕಂಠ್ಯ ಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಗ ಅಕ್ಷರದ ಹಳೆಗನ್ನಡ ಪದಗಳು – Kannada Words
- ಗ – ಚಲಿಸುವ
- ಗಂಗಾತೀರ – ಗಂಗಾನದಿಯ ದಡ
- ಗಂಗಾಧೀಶ – ಗಂಗೆಯ ಒಡೆಯ, ಶಿವ
- ಗಂಗಾವಾರ್ಧಿ – ಗಂಗಾನದಿ
- ಗಂಗಾಸುತ – ಗಂಗೆಯ ಮಗ, ಭೀಷ್ಮ
- ಗಂಗಾಳ – ತಟ್ಟೆ
- ಗಂಗೆ – ಗಂಗಾ ನದಿ
- ಗಂಗೆದೊವಲ್ – ಪಶುಗಳ ಕತ್ತಿ ಪ್ರದೇಶದಲ್ಲಿ ಇಳಿ ಬಿದ್ದ ತೊಗಲು
- ಗಂಜಳ – ಗೋಮೂತ್ರ; ಒಂದು ಬಗೆಯ ಹುಲ್ಲು
- ಗಂಜಿಗುಡಿ – ಗಂಜಿಯನ್ನು ಕುಡಿ
- ಗಂಜಿಮಡಿ ಗಂಜಿ ಬಟ್ಟೆ
- ಗಂಟಲ್ – ಕಂಠ, ಕೊರಳು
- ಗಂಟಿ – ತೊಂಡುದನ
- ಗಂಟಿಕ್ಕು – ಕಟ್ಟು, ಗಂಟು ಹಾಕು; ಜೋಡಿಸು; ಗಾಢವಾಗಿ ಬಂಧಿಸು
- ಗಂಟಿಡಿ – ಗಂಟಾಗು
- ಗಂಟು – (ಗ್ರಂಥಿ) ಕಬ್ಬು, ಬಿದಿರು ಮುಂತಾದವುಗಳ ಗೆಣ್ಣು; ಕಟ್ಟಿದುದು
- ಗಂಟುಗಡಿ – ಗಂಟುಗಂಟಿಗೆ ಕತ್ತರಿಸು
- ಗಂಟುಪುರ್ಬು – ಗಂಟು ಹುಬ್ಬು
- ಗಂಟೆ – (ಘಂಟಾ) ಶಬ್ದ ಉಂಟುಮಾಡುವ ಸಾಧನ
- ಗಂಟೊಡೆ – ಗೆಣ್ಣು ಒಡೆ, ಗಂಟಿನಲ್ಲಿ ಮೊಳಕೆ ತೋರು
- ಗಂಡ – ಶೂರ; ಕಾಂತ, ಪತಿ; ಕೆನ್ನೆ; ದವಡೆ;
- ಆನೆಯ ಕುಂಭಸ್ಥಳ
- ಗಂಡಕ – ಖಡ್ಗಮೃಗ
- ಗಂಡಕಾಭರಣ – ಗಂಡಕ
- ಗಂಡಗತ್ತಿ – ಗಂಡುಗೊಡಲಿ
- ಗಂಡಗರ್ವ – ಶೂರನೆಂಬ ಹೆಮ್ಮೆ
- ಗಂಡಗಲಿ – ಮಹಾ ಶೂರ
- ಗಂಡಗಾಡಿ – ಪೌರುಷದ ಸೊಬಗು
- ಗಂಡಗಾಹಿ – ಭಯಂಕರ ಸರ್ಪ
- ಗಂಡಗಾಳಿಕೆ – ಬಲಿಷ್ಠ ಒಡೆತನ
- ಗಂಡಗುಣ – ಪರಾಕ್ರಮ
- ಗಂಡಭಿತ್ತಿ – ಕೆನ್ನೆ
- ಗಂಡಮಂಡಲ(ಳ) – ಕಪೋಲ
- ಗಂಡಮಚ್ಚರ – ಪರಾಕ್ರಮಿಯ ಅಸೂಯೆ
- ಗಂಡ(ಡು)ವರಿಜು – ಗಂಡು ರೂಪು
- ಗಂಡವಸದನ – ಪುರುಷನ ಅಲಂಕಾರ
- ಗಂಡವಳ್ತಿ – ಗಂಡನನ್ನುಳ್ಳವಳು
- ಗಂಡವಾ(ಮಾ)ತು – ಶೌರ್ಯದ ಮಾತು
- ಗಂಡಶಿಳಶತಳ – ದೊಡ್ಡ ಬಂಡೆಗಲ್ಲು
- ಗಂಡಶೈಲ – ಹೆಬ್ಬಂಡೆ, ಉರುಳಿಬಿದ್ದ ಕಲ್ಲು
- ಗಂಡಸ್ಥ – ದವಡೆ; ಕಪೋಲ ಪ್ರದೇಶ
- ಗಂಡಸ್ಥಲ(ಳ) – ಕಪೋಲ ಪ್ರದೇಶ
- ಗಂಡಸ್ಥಳಿ – ಗಂಡಸ್ಥಲ
- ಗಂಡಸ್ಯೋಪರಿ ಸ್ಫೋಟಕಂ – ಕುರುವಿನ ಮೇಲೆ ಬೊಕ್ಕೆ
- ಗಂಡಾಳ್ತನ – ಪೌರುಷ
- ಗಂಡಿಕೆ – ಗಂಡತನ; ಊಬು
- ಗಂಡಿಕೆಗಾಣ್ – ಪೌರುಷ ಕಾಣು
- ಗಂಡಿಗ – ಶೂರ
- ಗಂಡು – ಪೌರುಷ
- ಗಂಡುಗಾಡಿ – ಗಂಡಗಾಡಿ
- ಗಂಡುಗೂಸು – ಗಂಡು ಮಗು; ಗಂಡಸು
- ಗಂಡುಗೂಸುತನ – ಪೌರುಷ
- ಗಂಡುಗೆಡೆ – ಪೌರುಷವನ್ನು ಕೊಚ್ಚಿಕೊಳ್ಳು
- ಗಂಡುಗೆಯ್ – ಪರಾಕ್ರಮ ತೋರು
- ಗಂಡುಗೆಲೆ – ಗಂಡುಗೆಯ್
- ಗಂಡುಗೊಳ್ – ಪರಾಕ್ರಮ ಹೊಂದು
- ಗಂಡುಗೋಗಿಲೆ – ಗಂಡು+ಕೋಗಿಲೆ
- ಗಂಡುಡುಗು – ಪೌರುಷ ಕುಂದು
- ಗಂಡುಡುಗೆ – ಗಂಡಸಿನ ವೇಷ
- ಗಂಡುಡೆ – ಗಂಡುಡುಗೆ
- ಗಂಡುಡೆಯುಡು – ಗಂಡುಡುಗೆ ಹಾಕಿಕೊ
- ಗಂಡುತನ – ಪೌರುಷ
- ಗಂಡುನೆರೆ – ಶಕ್ತಿಯನ್ನು ಹೊಂದು
- ಗಂಡುಪಂಡಿತವಕ್ಕಿ – ಗಂಡುಗಿಳಿ
- ಗಂಡುಮಗ – ಮಗ
- ಗಂಡುವರಿಜು – ಪುರುಷ ರೂಪ
- ಗಂಡುವೆಸ – ಪೌರುಷ ಕಾರ್ಯ
- ಗಂಡೂಪದ – ಎರೆ ಹುಳು
- ಗಂಡೂಷ – ಬಾಯಿ ಮುಕ್ಕುಳಿಸುವಿಕೆ
- ಗಂಡೂಷೀಕೃತ – ಮುಕ್ಕುಳಿಸಲ್ಪಟ್ಟ
- ಗಂಡೋದ್ಗಾರಿ – ಕೆನ್ನೆಯಲ್ಲಿ ಮೂಡಿರುವ
- ಗಂತಿ – (ಗ್ರಂಥಿ) ಗಂಟು, ಗೆಡ್ಡೆ; ಜೈನ ಸನ್ಯಾಸಿನಿ
- ಗಂದರ – ಗಂಧರ್ವ
- ಗಂದರಗಿವಿಯಂ – ಶಿವ
- ಗಂದಿಗಿತಿ – ಗಟ್ಟಿವಳ್ತಿ
- ಗಂಧಕುಟಿ – ಶ್ರೀಗಂಧದ ಕುಟೀರ; (ಜೈನ) ಸಮವಸರಣದಲ್ಲಿನ ಒಂದು ಭಾಗ
- ಗಂಧಗಜ – ಮದೋದಕವನ್ನು ಸುರಿಸುವ ಆನೆ
- ಗಂಧಗರ್ಭ – ಗಂಧವನ್ನು ಹೊಂದಿರುವುದು
- ಗಂಧಚಾರಿಣಿ – ಆನೆಯ ಏಳು ಮದಾವಸ್ಥೆಗಳಲ್ಲಿ ಒಂದು
- ಗಂಧತೋಯ – ಸುಗಂಧದ ನೀರು
- ಗಂಧದಾಯಕಿ – ಗಟ್ಟಿವಳ್ತಿ
- ಗಂಧದ್ವಿಪ – ಗಂಧಗಜ
- ಗಂಧಮಾದನ – ಕುಲಪರ್ವತಗಳಲ್ಲಿ ಒಂದು
- ಗಂಧರ್ವ – ಒಂದು ದೇವಜಾತಿ; ದೇವಲೋಕದ ಸಂಗೀತಗಾರ; ಕುದುರೆ
- ಗಂಧರ್ವರಾಜ – ಗಂಧರ್ವರ ಒಡೆಯ
- ಗಂಧರ್ವವಿದಗಯೆ – ಗಾಯನ ವಿದ್ಯೆ
- ಗಂಧರ್ವವಿವಾಹ – ಒಂದು ಬಗೆಯ ವಿವಾಹ ದ್ಧತಿ; ಪರಸ್ಪರರು ಮೆಚ್ಚಿಕೊಂಡು ಮಾಡಿಕೊಳ್ಳುವ ಮದುವೆ
- ಗಂಧರ್ವವಿದ್ಯೆ – ಸಂಗೀತ ವಿದ್ಯೆ
- ಗಂಧಲಂಪಟತೆ – ಸುಗಂಧದಲ್ಲಿ ಅತಿ ಆಸಕ್ತಿ
- ಗಂಧವಟ್ಟಿಗೆ – ಕದ, ಮಣೆಗಳಿಗೆ ಹಾಕುವ ಅಡ್ಡಪಟ್ಟಿ
- ಗಂಧವತಿ – ಗಂಧವನ್ನುಳ್ಳುದು, ಭೂಮಿ; ಒಂದು ಬಗೆಯ ಮಲ್ಲಿಗೆ
- ಗಂಧವಹ(ನ) – ಗಂಧವನ್ನು ಹೊತ್ತೊಯ್ಯುವುದು, ಗಾಳಿ
- ಗಂಧವಾರಣ – ಗಂಧಗಜ
- ಗಂಧವಾಹ – ಗಂಧವಹ
- ಗಂಧಶಾಲಿ(ಳಿ) – ಒಂದು ಬಗೆಯ ಸುವಾಸನೆಯ ಬತ್ತ
- ಗಂಧಶಾಲಿ(ಳಿ)ವನ – ಗಂಧಶಾಲಿಯ ಗದ್ದೆ
- ಗಂಧಸಿಂಧುರ – ಗಂಧಗಜ
- ಗಂಧಸಿಂಧುರೇಂದ್ರ – ಗಂಧಸಿಂಧುರ
- ಗಂಧಹಸ್ತಿ – ಗಂಧಸಿಂಧುರ
- ಗಂಧಾಂಧಸಿಂಧುರ – ಮದದಿಂದ ಕುರುಡಾದ ಆನೆ
- ಗಂಧಾಕುಳ – ಗಂಧದಿಂದ ಆವೃತವಾದ
- ಗಂಧಾಪಣ – ಗಂಧದ ಅಂಗಡಿ
- ಗಂಧೇಭ – ಗಂಧಸಿಂಧುರ
- ಗಂಧೋದಕ – ಸುಗಂಧದ ನೀರು, ಪನ್ನೀರು
- ಗಂಧೋದಕಸವನ – ಗಂಧೋದಕದ ಸ್ನಾನ
- ಗಂಧೋದಕಸ್ನಾನ – ಗಂಧೋದಕಸವನ
- ಗಂಧೋದ್ಗಾರಿ – ಗಂಧವನ್ನು ಸೂಸುವ
- ಗಂಭೀರಗುಣ – ಗಾಢವಾದುದು; ಆಳವಾದುದು
- ಗಂಭೀರಭಾವ – ಗಾಂಭೀರ್ಯ
- ಗಂಭೀರಭಾಷಿತ – ಗಾಂಭೀರ್ಯದ ಮಾತು
- ಗಂಭೀರವೇದಿ – ತೊಂಡು ಆನೆ
- ಗಗನ – ಆಕಾಶ
- ಗಗನಕುಸುಮ – ಆಕಾಶದ ಹೂ; ನೆರವೇರದ ಆಸೆ
- ಗಗನಗಂಗೆ – ಆಕಾಶಗಂಗೆ
- ಗಗನಗಜ – ಆಕಾಶದ ಆನೆ; ಐರಾವತ
- ಗಗನಗತಿ – ಆಕಾಶಗಮನ
- ಗಗನಗಮನ – ಗಗನಗತಿ
- ಗಗನಗಾಮಿ – ಗಗನಗತಿಯವನು
- ಗಗನಗಾಮಿನೀವಿದ್ಯೆ – ಆಕಾಶಗತಿಯ ವಿದ್ಯೆ; ಖೇಚರವಿದ್ಯೆ
- ಗಗನಚರ – ಆಕಾಶದಲ್ಲಿ ಚರಿಸುವುದು; ಹಕ್ಕಿ; ಖೇಚರ; ಸೂರ್ಯ ಮುಂತಾದ ಆಕಾಶಕಾಯಗಳು
- ಗಗನಚರಭುಜಗ – ಗ್ರಹಗಳನ್ನು ಹಿಡಿಯುವ ಹಾವು, ರಾಹು
- ಗಗನಚರಾಧೀಶ – ಖೇಚರರರಾಜ
- ಗಗನಚರಿ – ಆಕಾಸದಲ್ಲಿ ಸಂಚರಿಸುವವಳು; ಖೇಚರಿ
- ಗಗನಚರೇಂದ್ರ – ಗಗನಚರಾಧೀಶ
- ಗಗನತಲ(ಳ) – ಬಾಂದಳ, ಅಂತರಿಕ್ಷ
- ಗಗನವಿವರ – ಆಕಾಶದ ವಿಸ್ತಾರ
- ಗಗನವಿಹಾರ – ಆಕಾಶಯಾನ
- ಗಗನಸ್ಥಳಿ – ಗಗನಮಂಡಲ
- ಗಗನಸ್ಥಾನ – ಗಗನಮಂಡಲ
- ಗಗನಾಂಗಣ – ಗಗನಮಂಡಲ
- ಗಗನಾಧ್ವ – ಆಕಾಶಮಾರ್ಗ; ದೇವತೆ
- ಗಗನಾಭೋಗ – ಆಕಾಶದ ವಿಸ್ತಾರ
- ಗಗನೇಚರ – ಗಗನಗಾಮಿ
- ಗಗನೇಚರಿ – ಗಗನಚರಿ
- ಗಗ್ಗರ – ಕಾಲುಬಳೆ
- ಗಗ್ಗರಿಕೆ – ಗದ್ಗದ ಸ್ವರ
- ಗಗ್ಗರಿಕೆಗೊಳ್ – ಗದ್ಗದಗೊಳ್ಳು
- ಗಗ್ಗರಿಸು – ಗಗ್ಗರಿಕೆಗೊಳ್
- ಗಜ – ಆನೆ; ಒಬ್ಬ ರಾಕ್ಷಸನ ಹೆಸರು
- ಗಜಗಮನ – ಆನೆಯಂತೆ ನಿಧಾನ ನಡಿಗೆ; ಆನೆಯ ಮೇಲೆ ಕುಳಿತು ಹೋಗುವವನು, ಇಂದ್ರ
- ಗಜಗಮನೆ – ಮಂದಗಾಮಿನಿ
- ಗಜಗಲಿಸು – ಪ್ರಕಾಶಿಸು
- ಗಜಘಂಟಾರವ – ಆನೆಗೆ ಕಟ್ಟಿದ ಗಂಟೆಯ ಶಬ್ದ
- ಗಜಘಟೆ – ಆನೆಗಳ ಸಮೂಹ; ಆನೆಯ ಪಡೆ
- ಗಜಢಕ್ಕೆಯ – ಆನೆಯ ಮೇಲಿಟ್ಟು ಹೊಡೆಯುವ ನಗಾರಿ; ಒಂದು ರಾಜಚಿಹ್ನೆ
- ಗಜದಂತ – ಆನೆಯ ಹಲ್ಲು
- ಗಜದುಳಿ – ಆನೆಯಂತೆ ತುಳಿಯುವವನು ; ಒಂದು ಬಿರುದು
- ಗಜನಿಮೀಲನ – ಆನೆಯಂತೆ ಮದದಿಂದ ಕಣ್ಣುಮುಚ್ಚಿಕೊಳ್ಳುವುದು
- ಗಜಬಜಿಸು – ಗದ್ದಲಮಾಡು
- ಗಜಮದ – ಆನೆಯ ಮದ
- ಗಜವೆಡಂಗ – ಆನೆಯನ್ನು ಪಾಲಿಸುವುದರಲ್ಲಿ ಜಾಣನಾದ ಮಾವುತ
- ಗಜಹಸ್ತ – ಆನೆಯ ಸೊಂಡಿಲು
- ಗಜಾಂಕುಶ – ಆನೆಯನ್ನು ನಿಯಂತ್ರಿಸುವ ಸಾಧನ; ಅಂಕುಶ
- ಗಜಾಗರ – ಎಂಟರ ಗರ
- ಗಜಾನನ – ಗಜಮುಖ ; (ಜೈನ) ಒಂದು ನರಕದ ಹೆಸರು
- ಗಜಾರಾತಿ – ಗಜವೈರಿ, ಸಿಂಹ
- ಗಜಾರಿ – ಗಜಾರಾತಿ
- ಗಜಾರೂಢ – ಆನೆಯನ್ನು ಏರಿದವನು
- ಗಜಾಸ್ಯ – ಆನೆಯ ಮುಖದವನು, ವಿನಾಯಕ
- ಗಜೆ – ಗದೆ
- ಗಜೆಗೊಳ್ – ಗದೆ ಹಿಡಿ
- ಗಜೋನ್ಮೀಲನ – ಆನೆ ಕಣ್ಣು ತೆರೆಯುವುದು;
- ಸರಿಯಾಗಿ ನೋಡಿವುದು
- ಗಜೋಪಜೀವಿ – ಮಾವತಿಗ
- ಗಜವೃಷ್ಟಿ – ಗುಡುಗುಸಹಿತ ಮಳೆ
- ಗಟ್ಟ – ಬೆಟ್ಟ ಸಾಲು
- ಗಟ್ಟಿಗೆ – ಒಂದು ನದಿಯ ಹೆಸರು; ಘಟಪ್ರಭೆ
- ಗಟ್ಟಿಗೊಳ್ – ಗಟ್ಟಿಯಾಗು
- ಗಟ್ಟಿಪಾಲ್ – ಗಟ್ಟಿಯಾದ ಹಾಲು
- ಗಟ್ಟಿಮಗು¿್ಚು(ಳ್ಚು) – ಗಂಧವನ್ನು ತೇಯಿ
- ಗಟ್ಟಿವಳ – ಗಂಧ ತಯಾರಿಸುವವನು
- ಗಡ(ಟ) – ಮಣ್ಣಿನ ಕೊಡ, ಬಿಂದಿಗೆ
- ಗಡಣ – ಸಮೂಹ
- ಗಡಣಂಗೊಳ್ – ಸೇರು, ಗುಂಪಾಗು
- ಗಡಣಂಬಡೆ – ಒಟ್ಟಾಗಿರು, ಗುಂಪಾಗು
- ಗಡಣಿಸು – ಸೇರು, ಗುಂಪಾಗು
- ಗಡಪ – ವೇಗ, ತ್ವರಿತ
- ಗಡಾ – ಗಡ(ಂ)
- ಗಡಿ – ಎಲ್ಲೆ; ವೇಗಶಾಲಿ
- ಗಡಿಗೆಡು – ಎಲ್ಲೆಮೀರು, ಮಿತಿಮೀರು
- ಗಡಿಯಿಡು – ಎಲ್ಲೆ ಕಲ್ಪಿಸು; ಅವಧಿ ಹೇಳು(?)
- ಗಡ್ಡೆಯಂಬೋಗು – ಮರಗಟ್ಟಿ ಹೋಗು
- ಗಣ – ಗುಂಪು, ಸಮೂಹ;
- ಗಣಕ – ಜೋಯಿಸ, ಮುಹೂರ್ತ ನಿಶ್ಚೈಸುವವನು
- ಗಣಗ್ರಹಣ – (ಜೈನ) ದೀಕ್ಷಾನ್ವಯಕ್ರಿಯೆಗಳಲ್ಲಿ ಒಂದು
- ಗಣಧರ – (ಜೈನ) ತೀರ್ಥಂಕರನ ಶಿಷ್ಯರ ಗುಂಪಿನ ಮುಂದಾಳು
- ಗಣನಾತೀತ – ಎಣಿಕೆಗೆ ಮೀರಿದ
- ಗಣನಾಥ – ಗುಂಪಿ ಯಜಮಾನ
- ಗಣನಾಯಕ – ಗಣನಾಥ
- ಗಣನೆ – ಎಣಿಕೆ, ಲೆಕ್ಕ
- ಗಣನೆವಡೆ – ಗಣ್ಯನಾಗು
- ಗಣಪ್ರವರ – (ಜೈನ) ಸಂಘದಲ್ಲಿ ಶ್ರೇಷ್ಠ
- ಗಣಭೃತ್ – ಗಣಧರ
- ಗಣಾಗ್ರಣಿ – ಗಣದ ಮುಂದಾಳು
- ಗಣಾಧೀನಾಥ – ಗಣಧರ
- ಗಣಿಕಾಜನ – ವೇಶ್ಯೆ
- ಗಣಿಕಾವಾಟ(ಟಿ) – ಸೂಳೆಗೇರಿ
- ಗಣಿಕೆ – ಸೂಳೆ
- ಗಣಿದ – (ಗಣಿತ) ಎಣಿಕೆ
- ಗಣಿದಂಗೆಯ್ – ಎಣಿಸು, ಲೆಕ್ಕಹಾಕು
- ಗಣಿದಂಗೊಳ್ – ಗಣಿದಂಗೆಯ್
- ಗಣಿದಿ(ತಿ)ಗ – ಗಣಿತಜ್ಞ
- ಗಣಿನೀ – (ಜೈನ) ಶ್ರಾವಕಿಗಣದ ಮುಖ್ಯೆ
- ಗಣಿ(ಯಿ)ಸು – ಲೆಕ್ಕಹಾಕು, ಲೆಕ್ಕಿಸು
- ಗಣಿಯಾನೆ – ಹಿಂಡಿನ ಆನೆಗಳು
- ಗಣೇಶ – ಗಣನಾಥ
- ಗತ – ಕಳೆದುಹೋದ
- ಗತಕವೆಟ್ಟು – ಆಟಕ್ಕೆ ಮಾಡಿದ ಕೃತಕವಾದ ಬೆಟ್ಟ
- ಗದಕಿ – ಕೃತಕಿ, ಕಪಟಿ
- ಗತಜೀವಿತ – ಸತ್ತವನು
- ಗತಪ್ರಜ್ಞ – ಪ್ರಜ್ಞಾಹೀನ
- ಗತಪ್ರತ್ಯಾಗತ – ಮೊದಲಿನಿಂದ ಕಡೆಯವರೆಗೆ
- ಹಾಗೂ ಕೊನೆಯಿಂದ ಆರಂಭದವರೆಗೆ
- ಗತಬಲ – ಬಲಗುಂದಿದವನು; ಬಲನೆಂಬ ರಾಕ್ಷನನ್ನು ಕೊಂದವನು, ಇಂದ್ರ
- ಗತಭ್ರಾಂತಿ – ಭ್ರಾಂತಿಯಿಲ್ಲದಿರುವಿಕೆ, ಎಚ್ಚರ
- ಗತರಾಗ – ವಿರಾಗಿ
- ಗತಲೇಪ – ಅಂಟಿಕೊಳ್ಳದವನು, ನಿರ್ಲಿಪ್ತ
- ಗತವೇದ – (ಜೈನ) ಇಂದ್ರಿಯಾಭಿಲಾಷೆಯನ್ನು ಕಳೆದುಕೊಂಡವನು
- ಗತಶ್ರೀಕ – ಸಂಪತ್ತು ಕಳೆದುಕೊಂಡವನು; ದುರದೃಷ್ಟವಂತ
- ಗತಿ – ಗಮನ; ಆಧಾರ; ಯೋಚನೆ
- ಗತಿಗೆಡಿಸು – ನಡೆಗೆಡುವಂತೆ ಮಾಡು; ದಾರಿ ತಪ್ಪಿಸು
- ಗತಿಗೆಡು – ನಡೆಗೆಡು; ಹಾಳಾಗು
- ಗತಿಚತುಷ್ಟಯ – (ಜೈನ) ಕರ್ಮಾನುಗುಣವಾಗಿ
- ಜೀವನಿಗೆ ಒದಗುವ ನಾಲ್ಕು ವಿಧದ ಜನ್ಮಗಳು
- ಗತಿವಡೆ – ಉತ್ತಮಸ್ಥಿತಿಯನ್ನು ಪಡೆ
- ಗತಿಸಂರೋಧನ – ಮುಗ್ಗರಿಸುವಿಕೆ; ಅಡ್ಡಿ
- ಗತಿಸ್ತಂಭ – ಗತಿಸಂರೋಧನ
- ಗದಗಂಪಂಗೊಳ್ – ಗಡಗಡ ನಡುಗು
- ಗದಾಘಾತ – ಗದೆಯ ಹೊಡೆತ
- ಗದಾನ್ವೇಷಣ – ಗದೆಯನ್ನು ಹುಡುಕುವುದು
- ಗದಾಯುದ್ಧ – ಗದೆ ಹಿಡಿದು ಮಾಡುವ ಯುದ್ಧ
- ಗದಿತ – ಹೇಳಿದ, ನುಡಿದ
- ಗದಿಸು – ಹೇಳು, ನುಡಿ
- ಗದೆ – ಒಂದು ಬಗೆಯ ಆಯುಧ
- ಗದೆಗೊಳ್ – ಗದೆ ಹಿಡಿ
- ಗದ್ಗದ – ಧ್ವನಿ ನಡುಕ
- ಗದ್ಗದಸ್ವನ – ಗದ್ಗದಧ್ವನಿ
- ಗದ್ಗದಿಕೆ – ಗದ್ಗದಸ್ವನ
- ಗದ್ಗದಿಕೆಗೊಳ್ – ಗದ್ಗದಗೊಳ್ಳು
- ಗದ್ಗದಿಸು – ಗದ್ಗದಿಕೆಗೊಳ್
- ಗದ್ದು(ದ್ದಿ)ಗೆಯಿಕ್ಕು – ಮಣೆ ಹಾಕು
- ಗದ್ದುಗೆವೊಯ್ – (ಕೋಪದಿಂದ) ಕುಳಿತ ಪೀಠವನ್ನು ಹೊಡೆ
- ಗದ್ಯಾಣ – ಒಂದು ಚಿನ್ನದ ನಾಣ್ಯ
- ಗನಹ – ಶಿವ
- ಗಬ್ಬ – (ಗರ್ವ) ಅಹಂಕಾರ
- ಗಬ್ಬರಿಸು -ನೆಲವನ್ನು ಅಗೆ, ಖನನ
- ಗಭಸ್ತಿ – ಕಿರಣ, ಕಾಂತಿ
- ಗಭಸ್ತಿಕರ – ಸೂರ್ಯ
- ಗಭಸ್ತಿಮಾಲಿ – ಸೂರ್ಯ
- ಗಭಸ್ತಿಹಸ್ತ – ಗಭಸ್ತಿಕರ
- ಗಭೀರ – ಗಂಭಿರವಾದ; ಆಳವಾದ
- ಗಭೀರಧ್ವಾನ – ಗಂಭೀರ ಧ್ವನಿ
- ಗಭೀರನಿನದ – ಗಭೀರಧ್ವಾನ
- ಗಭೀರವೃತ್ತಿ – ಗಂಭಿರವಾದ ನಡವಳಿಕೆ
- ಗಭೀರೋಕ್ತಿ – ಗಂಭೀರ ನುಡಿ
- ಗಮಕ – ಸಂಗೀತ ಸ್ವರ ವಿಶೇಷ
- ಗಮಕಿ – ಓದುಗಾರ
- ಗರ – (ಗ್ರಹ)
- ಗರುತ್ಮ – ಗರುಡ
- ಗರ್ಭೇಶ್ವರ – ಆಗರ್ಭ ಶ್ರೀಮಂತ
- ಗಮನ ಪ್ರಾಯಶ್ಚಿತ್ತ – (ಜೈನ) ಪ್ರಯಾಣದಲ್ಲಿ ಕ್ರಿಮಿಕೀಟಗಳಿಗಾಗುವ ಹಿಂಸೆಗಾಗಿ ಆಚರಿಸುವ ಪ್ರಾಯಶ್ಚಿತ್ತ
- ಗಮನಾಲಸ- ನಡಗೆಯಲ್ಲಿ ನಿಧಾನ
- ಗಮಮನಿಕೆ – (ಜೈನ) ಅನ್ವಯವಾಗುವಿಕೆ, ಹೊಂದಾಣಿಕೆಗೊಳ್ಳುವುದು
- ಗಮಿಸು – ಹೋಗು, ಸಾಗು
- ಗಮ್ಮನೆ – ಬೇಗನೆ, ತಕ್ಷಣ
- ಗಮ್ಮನೆ – ಸುವಾಸಿತವಾದ
- ಗಮ್ಯ – ಹೋಗತಕ್ಕ; ತಿಳಿವಳಿಕೆಗೆ ಸಿಕ್ಕುವ
- ಗರ – ಗ್ರಹ; ದುಷ್ಟ ಶಕ್ತಿ; ವಿಷ
- ಗರಕಾಲಕಂಧರ – ವಿಷದಿಂದ ಕಪ್ಪಾದ ಕೊರಳುಳ್ಳವನು, ಶಿವ
- ಗರಗರನೆ – ಚೆಲುವಾಗಿ, ಹಸನಾಗಿ
- ಗರಗರಿಕೆ – ಚೆಲುವು; ಗರಗರ ಶಬ್ದ, ಗದ್ಗದ
- ಗರಗರಿಕೆವಡೆ – ಚೆಲುವನ್ನು ಪಡೆ
- ಗರಟಿಗೆ – ಕಾವಲು; ಚಿತ್ತಕ್ಷೋಭೆ
- ಗರಣ – (ಗ್ರಹಣ) ಹಿಡಿಯುವುದು
- ಗರದ – ವಿಷ ಕೊಟ್ಟು ಕೊಲ್ಲಬಯಸುವವನು, ವಿಷ್ಣು
- ಗರಧರಗ್ರೀವ – (ಕೊರಳಲ್ಲಿ) ವಿಷ ಧರಿಸಿದವನು, ಶಿವ
- ಗರಲ(ಳ) – ವಿಷ, ನಂಜು
- ಗರಲಕಂಧರ – ವಿಷಕಂಠ
- ಗರಲಗ್ರೀವ – ವಿಷಕಂಠ
- ಗರಲಧರ – (ಕೊರಳಲ್ಲಿ) ವಿಷ ಧರಿಸಿದವನು, ಶಿವ
- ಗರಲ(ಳ)ಪೂರ – ವಿಷಯುಕ್ತವಾದುದು, ಹಾವು
- ಗರವಟಿಗ – ಕಾವಲುಗಾರ
- ಗರ(ವ)ಟಿಗೆ – ಗಸ್ತು ತಿರುಗುವುದು
- ಗರವಟಿಗೆವರ್ – ಕಾವಲು ಸುತ್ತು; ಮನೋವಿಕಲನಾಗು
- ಗರವಟಿಸು – ತೂತುಮಾಡು, ಕೊರೆ; ತಿರುಗಿಸು
- ಗರವಸಂಗೊಳ್ – ಪಹರೆ ಮಾಡು, ಕಾವಲಿರು
- ಗರವು – ಅಪಹರಿಸು; ಸುಲಿಗೆ ಮಾಡು
- ಗರವೊಡೆ – ಗರಬಡಿ
- ಗರಿಮ – ಭಾರವಾಗಿರುವಿಕೆ; ಶ್ರೇಷ್ಠತೆ; ಬೇಕಾದಾಗ ದೇಹದ ಭಾರ ಹೆಚ್ಚಿಸಿಕೊಳ್ಳಬಹುದಾದ ಯೋಗದ ಅಷ್ಟಸಿದ್ಧಿಗಳಲ್ಲಿ ಒಂದು
- ಗರಿಮೆ – ಗರಿಮ
- ಗರಿಲನೆ – ಗರಿಲ್ ಎಂಬ ಅನುಕರಣಶಬ್ದ
- ಗರಿಷ್ಠ – ಶ್ರೇಷ್ಠ; ಅತಿ ಹೆಚ್ಚಿನ
- ಗರುಡ – ಒಂದು ಪಕ್ಷಿ; ವಿಷ್ಣವಿನ ವಾಹನ;
- ಕಶ್ಯಪ-ವಿನತೆಯರ ಮಗಗರುಡಧ್ವಜ – ಧ್ವಜದಲ್ಲಿ ಗರುಡನ ಚಿಹ್ನೆಯಿರುವವನು, ವಿಷ್ಣು, ಕೃಷ್ಣ; (ಜೈನ) ತ್ರಿಷಷ್ಠಿಶಲಾಕಾಪುರುಷರಲ್ಲಿನ ವಾಸುದೇವ
- ಗರುಡಪತತ್ರಿ – ಗರುಡಪಕ್ಷಿ; ಗರುಡಾಸ್ತ್ರ
- ಗರುಡವಾಹಿನಿ – ಒಂದು ಬಗೆಯ ಸೇನಾವ್ಯೂಹ; ಗರುಡಪಕ್ಷಿಗಳ ಸೈನ್ಯ; (ಜೈನ) ದೇವತೆUಳನ್ನು ಆರಾಧಿಸಿ ಪಡೆಯುವ ಒಂದು ವಿದ್ಯೆ; ಸರ್ಪಸ್ತ್ರವನ್ನು ಪರಿಹರಿಸುವ ಒಂದು ವಿದ್ಯೆ
- ಗರುಡಾಂಕ – ಗರುಡಧ್ವಜ
- ಗರುಡಿ – ಶಸ್ತ್ರವಿದ್ಯೆ; ವ್ಯಾಯಾಮಶಾಲೆ
- ಗರುಡೋದ್ಗಾರ(ಮಣಿ) – ಗರುಡನಂತೆ ವಿಷಪರಿಹಾರಕ ಮಣಿ; ಗರುಡ ಪಚ್ಚೆ
- ಗರುತ್ – ರೆಕ್ಕೆ
- ಗರುತ್ಮ – ಗರುಡ
- ಗರುತ್ಮಶರ – ಗರುಡಪತತ್ರಿ
- ಗರುವ – ಶ್ರೇಷ್ಠ; ಹಿರಿಯ
- ಗರುವಿಕೆ – ದೊಡ್ಡಸ್ತಿಕೆ; ಹಿರಿಮೆ; ಅಹಂಕಾರ
- ಗರುವೆ – ಹಿರಿಯಳು; ಸೊಗಸುಗಾತಿ
- ಗರುಹಣ(ಣೆ) – ಗರ್ಹಣ, ತೆಗಳಿಕೆ
- ಗರೋದಯಸಮಯ – (ಗರ+ಉದಯಸಮಯ) ಹುಟ್ಟಿದ ಕಾಲ, ಸಮುದ್ರ ಮಥನದ ಸಮಯ
- ಗರ್ಗರ – ಒಂದು ಅನುಕರಣ ಶಬ್ದ
- ಗರ್ಘರಿ – ಪಾತ್ರೆ, ಕೊಡ; ಕಿರುಗೆಜ್ಜೆ
- ಗರ್ಜನೆಗುಡು – ಗಟ್ಟಿಯಾಗಿ ಕೂಗು; ಆರ್ಭಟಿಸು
- ಗರ್ಜಿತ – ಕೂಗಿದ ; ಆರ್ಭಟಿಸಿದ
- ಗರ್ಜಿಸು – ಗರ್ಜನೆ ಮಾಡು; ಗಟ್ಟಿಯಾಗಿ ಕೂಗು
- ಗರ್ತ – ಸಿಂಹಾಸನ; ರಥ; ಪಗಡೆಯ ಹಾಸು; ತಗ್ಗು; ನೀರಿನ ಸುಳಿ
- ಗರ್ದತೋಯ – (ಜೈನ) ಲೋಕಾಂತಿಕ ದೇವತೆಗಳಲ್ಲಿ ಒಂದು ಭೇದ
- ಗರ್ದಭ – ಕತ್ತೆ
- ಗದ್ಭೆ – ಹೆಣ್ಣು ಕತ್ತೆ
- ಗರ್ದುಗು – ಗಜ್ಜುಗದ ಗಿಡ ಮತ್ತು ಕಾಯಿ
- ಗರ್ಬಿ – ಗರ್ವಿ, ಅಹಂಕಾರಿ
- ಗರ್ಬಿಸು – ಗರ್ವಿಸು
- ಗರ್ಭ – ಬಸಿರು; ಹೊಟ್ಟೆ; ತಿರುಳು
- ಗರ್ಭಗೃಹ – ಒಳಕೋಣೆ
- ಗರ್ಭದೋಹಳ – ಬಸಿರಿಯ ಬಯಕೆ
- ಗರ್ಭಭರ – ಗರ್ಭದ ಭಾರ
- ಗರ್ಭಭಾರ – ಗರ್ಭಭರ
- ಗರ್ಭವಿಭ್ರಮ – ಗರ್ಭೀಣಿಯ ಸೌಂದರ್ಯ
- ಗರ್ಭಶಯನ – ಭ್ರೂಣ ಮಲಗುವ ಜಾಗ, ಗರ್ಭಾಶಯ
- ಗರ್ಭಶೋಧನೆ – (ಜೈನ) ಇಂದ್ರನು ಕಳುಹಿಸುವ ದೇವವನಿತೆಯರು ಹುಟ್ಟಲಿರುವ ತೀರ್ಥಂಕರನಿಗೆ ಕರ್ಮಮಲಗಳ ಲೇಪವಾಗದಂತೆ ಮಾಡುವ ಜಿನಮಾತೆಯ ಗರ್ಭಶುದ್ಧೀಕರಣ
- ಗರ್ಭಷಷ್ಠಿ – ಅರವತ್ತು ದಿನಗಳಲ್ಲಿ ತೆನೆ ಬರುವ
- ಗರ್ಭಸಂಧಿ – (ಜೈನ) ಉತ್ತಮ ಜೀವನು ಒಂದು ಭವ ಕಳೆದು ಮತ್ತೊಂದನ್ನು ಕೈಗೊಳ್ಳಲು ಮಾತೆಯ ಗರ್ಭದಲ್ಲಿ ಕಳೆಯುವ ಕಾಲ
- ಗರ್ಭಸುಖಿ – ಹುಟ್ಟಿನಿಂದಲೇ ಸುಖವಾಗಿರುವವನು
- ಗರ್ಭಸ್ಖಲನ – ಗರ್ಭಪತನ
- ಗರ್ಭಸ್ಥ – ಬಸಿರಿನಲ್ಲಿರುವ
- ಗರ್ಭಸ್ಥಿತ – ಬಸಿರಿನಿಂದ ಬಂದವನು; ಸಾಮಾನ್ಯ
- ಗರ್ಭಾನ್ವಯಕ್ರಿಯೆ – (ಜೈನ) ತೀರ್ಥಂಕರನು ಭೂಮಿಯಲ್ಲಿ ಅವತರಿಸುವುದರಿಂದ ಹಿಡಿದು ನಿರ್ವಾಣಪರ್ಯಂತ ಮಾಡುವ ಐವತ್ಮೂರು ಕ್ರಿಯೆಗಳು
- ಗರ್ಭಾವತರಣ – ಜೀವ ತಾಯಿತ ಗರ್ಭದಲ್ಲಿ ಇಳಿಯುವುದು; (ಜೈನ) ಜಿನಮಾತೆಯ ಗರ್ಭದಲ್ಲಿ ತೀರ್ಥಂಕರನ ಆಗಮನ; ಪಂಚಕಲ್ಯಾಣಗಳಲ್ಲಿ ಒಂದು
- ಗರ್ಭೀಕರಿಸು – ಒಳಗೊಳ್ಳು
- ಗರ್ಭೀಕೃತ – ಹುದುಗಿಸಲ್ಪಟ್ಟ
- ಗರ್ಭೇಶ್ವರ – ಆಗರ್ಭ ಶ್ರೀಮಂತ
- ಗರ್ಭೇಶ್ವರಿ – ಆಗರ್ಭ ಶ್ರೀಮಂತೆ
- ಗರ್ವ – ಜಂಬ, ಅಹಂಕಾರ
- ಗರ್ವವ್ಯಾಲೆ – ಗರ್ವದಿಂದ ಸೊಕ್ಕಿದವಳು
- ಗರ್ವವ್ಯಾಳಿ – ದುಷ್ಟ; ಮದಿಸಿದ ಆನೆ
- ಗರ್ವವಿಹೀನ – ಗರ್ವವನ್ನು ಬಿಟ್ಟವನು
- ಗರ್ವಾಂಧ – ಅಹಂಕಾರದಿಂದ ಕುರುಡಾದವನು
- ಗರ್ವಿತ – ಅಹಂಕಾರದಿಂದ ಕೂಡಿರುವ
- ಗರ್ವೋದ್ಧತ – ಅಹಂಕಾರದಿಂದ ಸೊಕ್ಕಿರುವ
- ಗರ್ಹಣ – ತೆಗಳಿಕೆ
- ಗರ್ಹಿತ – ದೂಷಣೆಗೊಂಡ
- ಗರ್ಹಿಸು – ದೂಷಿಸು
- ಗಲ – ಕೊರಳು, ಗ್ರೀವ
- ಗಲ(ಳ)ಗ್ರಾಹಿತ್ವ – ಕುತ್ತಿಗೆ ಹಿಡಿಯುವಿಕೆ; ಇಕ್ಕಟ್ಟಿಗೆ ಸಿಲುಕಿಸುವುದು
- ಗಲ(ಳ)ರವ – ಕೊರಳಿನಿಂದ ಹೊಮ್ಮುವ ಧ್ವನಿ
- ಗಲಿತ – ಜಾರಿದ
- ಗಲಿ(ಳಿ)ಯಿಸು – ಸೋರಿಹೋಗು
- ಗಲ್ಲ – ಕೆನ್ನೆ, ಕಪೋಲ
- ಗಲ್ಲಗಿವಿ – ಕೆನ್ನೆಯವರೆಗೂ ಜೋಲಾಡುವ ಕಿವಿ
- ಗಲ್ಲವುಣ್ – ಕೆನ್ನೆಯ ಮೇಲಿನ ಹುಣ್ಣು
- ಗವನಿ(ಣಿ) – ಆವರಣ, ಪ್ರಾಕಾರ
- ಗವಸಣಿಕೆ(ಗೆ) – ಹೊದಿಕೆ; ಮುಸುಕು
- ಗವಸಣಿಗೆಗಳೆ – ಮುಸುಕು ತೆಗೆ
- ಗವಸಣಿಗೆದೊಡಿಸು – ಮುಸುಕು ಹಾಕು
- ಗವಸಣಿಸು – ಮುಸುಕು ಹಾಕು
- ಗವಾಕ್ಷ – ಗೋವಿನ ಕಣ್ಣು; ಬೆಳಕಿಂಡಿ
- ಗವಾಕ್ಷವಿವರ – ಗವಾಕ್ಷಿಯ ತೂತು
- ಗವಾಧಿಪ – ಹಸುಗಳ ಒಡೆಯ
- ಗವಾಶನ – ಗವ+ಅಶನ, ದನಕ್ಕೆ ಹಾಕುವ ಮೇವು
- ಗವೇಂದ್ರ – ಶ್ರೇಷ್ಠವಾದ ಎತ್ತು
- ಗವ್ಯ – ಗೋವಿನಿಂದ ದೊರಕುವ
- ಗವ್ಯೂತಿ – ಎರಡು ಕ್ರೋಶ ದೂರ
- ಗಸಟು – ದ್ರವಪದಾರ್ಥದಲ್ಲಿನ ತಳದ ಕೊಳೆ
- ಗಸಣಿ -ಆತಂಕ; ತೊಂದರೆ
- ಗಸಿ – ಗಸಟು, ಗಸ್ಟು
- ಗಹಗಹ – ನಗುವಿನ ಅನುಕರಣ ಧ್ವನಿ
- ಗಹಗಹನೆ – ಗಹಗಹ ಧ್ವನಿಯಿಂದ ಕೂಡಿ
- ಗಹನ – ನುಗ್ಗುವುದಕ್ಕಾಗದ; ಅಸಾಧ್ಯ; ತಿಳಿಯಲು ಕಷ್ಟಕರವಾದ; ದಟ್ಟವಾದ ಕಾಡು
- ಗಹನಪ್ರಚಾರ – ಕಾಡಿನ ಸಂಚಾರ
- ಗಹ್ವರ – ಪ್ರವೇಶಿಸಲು ಅಸಾಧ್ಯವಾದ; ದೊಗರು; ಬಿಲ; ಗವಿ
- ಗಳ – ಕೊರಳು
- ಗಳಂತಿಕೆ – ನೀರು ತುಂಬುವ ಕಳಶ
- ಗಳಂತಿಗೆ – ಕೋಣೆ, ಓವರಿ
- ಗಳಕಂಬಳ – ಗಲಕಂಬಲ
- ಗಳಗರ್ತರಿ – ಒಂದು ಆಯುಧ
- ಗಳಗಳಿಕೆ – ಕೋಮಲತೆ
- ಗಳಗಾಳ – ಕೊರಳಿಗೆ ಹಾಕುವ ಕೊಕ್ಕೆ
- ಗಳಬಳ – ಗಲಾಟೆ, ಗದ್ದಲ
- ಗಳರುತಿ – ಗಳಗಳ ಧ್ವನಿ
- ಗಳಹಿಸು – ಹರಟುವಂತೆ ಮಾಡು
- ಗಳಪು – ಹರಟು
- ಗಳಿತಕೋಪ – ಇಳಿದ ಕೋಪ; ಶಾಂತನಾದವನು
- ಗಳಿತದಾನತೆ – ಆನೆಗಳ ಮದ ಸೋರಿಹೋಗುವುದು; ಜಿಪುಣತನ
- ಗಳಿತಮದ – ಇಳಿದ ಮದದವನು
- ಗಳಿತಶರ – ಜಾರಿ ಬಿದ್ದ ಬಾಣ; ಜಾರಿಬಿದ್ದ ಬಾಣದ
- ಗಳಿತಾಶ್ರು – ಸುರಿಯುವ ಕಣ್ಣೀರು
- ಗಳಿಲನೆ – ಬೇಗ
- ಗಾಂಗ – ಗಂಗೆಗೆ ಸಂಬಂಧಿಸಿದ; ಭಿಷ್ಮ
- ಗಾಂಗತೋಯ – ಗಂಗೆಯ ನೀರು
- ಗಾಂಗೇಯ – ಗಂಗೆಯ ಮಗ; ಭೀಷ್ಮ
- ಗಾಂಗೇಯಕ – ಭೀಷ್ಮ; ಷಣ್ಮುಖ; ಚಿನ್ನ
- ಗಾಂದರ – ಗಾಂಧಾರ
- ಗಾಂಧರ್ವ – ಗಂಧರ್ವರಿಗೆ ಸಂಬಂಧಿಸಿದ; ಸಂಗೀತ
- ಗಾಂಧರ್ವವಿದ್ಯೆ – ಸಂಗೀತವಿದ್ಯೆ
- ಗಾಂಧರ್ವಶಾಸ್ತ್ರ – ಗಾಂಧರ್ವವಿದ್ಯೆ
- ಗಾಂಧಾರ – ಒಂದು ದೇಶದ ಹೆಸರು
- ಗಾಂಧಾರಿ – ಒಂದು ಗಿಡದ ಹೆಸರು; ಗಾಂಧಾರ ರಾಜಪುತ್ರಿ; ಧೃತರಾಷ್ಟ್ರನ ಮಡದಿ
- ಗಾಂಪ – ದಡ್ಡ, ಗಾವಿಲ
- ಗಾಂಪು – ಗಾಂಪತನ
- ಗಾಜುಗೋಜು – ಒಂದರೊಳಗೊಂದು ಸೇರಿಕೊಂಡಿರುವುದು; ಜಟಿಲತೆ
- ಗಾಜುದೊಡಿಗೆ – ಗಾಜಿನಿಂದ ಮಾಡಿದ ಒಡವೆ
- ಗಾಡಿ – ಚೆಲುವು; ಬೆಡಗು; ಇಂದ್ರಜಾಲ; ಗಾರುಡಿ
- ಗಾಡಿಕಾರ್ತಿ – ಸೊಗಸುಗಾತಿ
- ಗಾಡಿಕೆ – ಸೊಬಗು
- ಗಾಣರು – ಗಾಯಕರು
- ಗಾಣತಿಗೆಯ್ – ಗಾಯನಮಾಡು
- ಗಾಣವಿಕ್ಕು – ಗಾಳಹಾಕು
- ಗಾಣಿಕ್ಯ – ಸೂಳೆಯರ ಗುಂಪು
- ಗಾಣಿಕ್ಯಸದನ – ಸೂಳೆಯ ಮನೆ
- ಗಾತ್ರ – ದೇಹ
- ಗಾತ್ರತ್ರ – ದೇಹವನ್ನು ರಕ್ಷಿಸುವುದು, ಕವಚ
- ಗಾತ್ರಿಸು – ದೇಹದಲ್ಲಿ ಸುರಿ
- ಗಾನ – ಗಹನ
- ಗಾನದೇವತೆ – ಸಂಗೀತದ ಅಭಿಮಾನಿ ದೇವತೆ
- ಗಾನಪಾಠ್ಯ – ಹಾಡಲು ಬಳಸುವ ಪಠ್ಯ, ಸಾಹಿತ್ಯ
- ಗಾನೋದ್ಯೋಗ – ಹಾಡುವ ಪ್ರಯತ್ನ
- ಗಾಮ – ಗಾವ, ಹಳ್ಳಿ
- ಗಾಮಿಲ – ಹಳ್ಳಿಯವನು
- ಗಾಯಕ – ಹಾಡುಗಾರ
- ಗಾಯಕತೆ – ಹಾಡುಗಾರಿಕೆ
- ಗಾಯಕಿ – ಹಾಡುಗಾರ್ತಿ
- ಗಾಯ(ಯಿ)ನಿ – ಗಾಯಕಿ
- ಗಾಯಿಕೆ – ಗಾಯಕಿ
- ಗಾಯಿಲೆ – ಕಾಯಿಲೆಗೊಳಗಾದ ವ್ಯಕ್ತಿಗಾರಿಗೆ -ಒಂದು ಭಕ್ಷ್ಯ
- ಗಾರಣ – ದೂರುವುದು; ಅಪವಾದ ಹೊರಿಸುವುದು
- ಗಾರುಡ – ಗರುಡಮಂತ್ರ
- ಗಾರುಡಮಣಿ – ವಿಷವನ್ನು ಹೋಗಲಾಡಿಸುವ ಮಣಿ; ಹಸಿರು ರತ್ನ, ಪಚ್ಚೆ
- ಗಾರುಡಿಗ – ವಿಷ ಹೋಗಲಾಡಿಸುವ ವಿದ್ಯೆ
- ಗಾರುತ್ಮತ – ಪಚ್ಚೆಯ ಮಣಿ; ಗರುಡಮಣಿ
- ಗಾರ್ಹಪತ್ಯ – ತ್ರೇತಾಗ್ನಿಗಳಲ್ಲಿ ಒಂದು
- ಗಾಲಿ – ಚಕ್ರ
- ಗಾವಣ – ನೆಲೆ
- ಗಾವರ – ಝೇಂಕಾರ; ಧ್ವನಿ
- ಗಾವರಂಬೊರೆ – ಝೇಂಕರಿಸು
- ಗಾವರದುಂಬಿ – ಝೇಂಕರಿಸುವ ದುಂಬಿ
- ಗಾವಸಿಂಗ – (ಗ್ರಾಮಸಿಂಹ) ನಾಯಿ
- ಗಾವಳಿ – ಗುಂಪು
- ಗಾವಳಿಸು – ಗುಂಪುಗೂಡು
- ಗಾವಿಲ – (ಗ್ರಾಮೀಣ) ಹಳ್ಳಿಗ; ಹೆಡ್ಡ
- ಗಾವಿಲತನ – ಹೆಡ್ಡತನ
- ಗಾವಿಲಿ(ಲೆ) -ಹೆಡ್ಡೆ
- ಗಾವಿಲಿಕೆ – ಗಾವಿಲತನ
- ಗಾವುಂಡಿತಿ – ಗೌಡಿತಿ
- ಗಾವುದು – ಗಾವುದ
- ಗಾವುಳಿ – ಸಮೂಹ
- ಗಾಹು – ಕಪಟ; ಗುರಿ
- ಗಾಹೆ – (ಗಾಥಾ) ಪದ್ಯ, ಹಾಡು
- ಗಾಳ – ಮೀನು ಹಿಡಿಯುವ ಕೊಕ್ಕೆ
- ಗಾಳಿಗೊಳ್ – ಗಾಳಿ ಮೂಲಕ ವಾಸನೆ ತಿಳಿ
- ಗಾಳಿವಾತು – ಬೈಗುಳ
- ಗಾಳಿಸು – ನಿವಾರಿಸು
- ಗಾಳು – ಕ್ಷುದ್ರ ವ್ಯಕ್ತಿ; ಮೋಸ
- ಗಾಳುಗಣ್ – ಹೊಳೆವ ಕಣ್ಣು
- ಗಾಳುಗೊರವ – ಕ್ಷುದ್ರ ಜೋಗಿ
- ಗಾಳುತನ – ಕ್ಷುದ್ರತನ
- ಗಾಳುವೆಣ್ – ಕ್ಷುದ್ರ ಹೆಣ್ಣು
- ಗಿಂಡಿ – ಸಣ್ಣ ಪಾತ್ರೆ
- ಗಿಡಿ – ತುರುಕು
- ಗಿಡಿ(ಡು)ಗ – ಡೇಗೆ ಹಕ್ಕಿ
- ಗಿಡಿಗಿಡಿಜಂತ್ರ – ಎಲುಬುಗೂಡಾದ ದೇಹ
- ಗಿಡಿಗಿರಿ – ಹಲ್ಲು ಕಚ್ಚಿಕೊಂಡು ಕಿಸಿ
- ಗಿಡು – ಗಿಡ
- ಗಿಡುವುಗಿಸು – ಕಾಡನ್ನು ಸೇರಿಸು
- ಗಿಣ್ಣಲ್ – ಸಣ್ಣ ಪಾತ್ರೆ
- ಗಿಣ್ಣು – ದನ ಈದ ಹೊಸತಿನ ಹಾಲು
- ಗಿರಿ – ಬೆಟ್ಟ; ನುಂಗುವುದು
- ಗಿರಿಕಾರೂಢ – ಇಲಿಯನ್ನು ಏರಿದವನು, ಗಣೇಶ
- ಗಿರಿಕುಲ – ಬೆಟ್ಟಸಾಲು
- ಗಿರಿಕೂಟ – ಗಿರಿಶಿಖರ
- ಗಿರಿಚಕ್ರವರ್ತಿ – ಹಿಮಾಲಯ; (ಜೈನ) ಪೂರ್ವಪಶ್ಚಿಮಾದ್ಯಂತ ಹಬ್ಬಿರುವ ಬೆಟ್ಟ;
- ವಿಜಯಾರ್ಧಪರ್ವತ
- ಗಿರಿಜಾತೆ – ಪಾರ್ವತಿ
- ಗಿರಿಜೆ – ಗಿರಿಜಾತೆ
- ಗಿರಿದುರ್ಗ – ಬೆಟ್ಟದ ಮೇಲಿನ ಕೋಟೆ
- ಗಿರಿಧನ್ವ – ಬೆಟ್ಟ(ಮೇರು)ವನ್ನು ಧನುಸ್ಸಾಗುಳ್ಳವನು, ಶಿವ
- ಗಿರಿಮಲ್ಲಿಗೆ – ಬೆಟ್ಟದ ಮಲ್ಲಿಗೆ
- ಗಿರಿರಾಜ – ಹಿಮವಂತ
- ಗಿರಿವ್ರಾತನಾಥ – ಪರ್ವತರಾಜ
- ಗಿರಿಶ – ಪರ್ವತನಿವಾಸಿ, ಶಿವ
- ಗಿರಿಸ – ಗಿರಿಶ
- ಗಿರಿಸಾನು – ಬೆಟ್ಟದ ತಪ್ಪಲು
- ಗಿರಿಸುತೆ – ಗಿರಿಜೆ
- ಗಿರೀಂದ್ರ – ಹಿಮವಂತ
- ಗಿರೀಂದ್ರಮಹ – ಪರ್ವತಪೂಜೆ
- ಗಿರೆ – ಸರಸ್ವತಿ
- ಗಿಲನ – ನುಂಗುವುದು
- ಗಿಳಿಗೆಡಪ – ಗಿಳಿಯ ಮಾತು
- ಗೀಜಗ(ವಕ್ಕಿ) – ಒಂದು ಜಾತಿಯ ಹಕ್ಕಿ
- ಗೀತ – ಹಾಡು; ಗಾಯನ
- ಗೀತಾಭೋಗ – ಸಂಗೀತದ ಆಸ್ವಾದನೆ
- ಗೀತಾರಾವ – ಗಾಯನಧ್ವನಿ
- ಗೀತಿ – ಹಾಡು; ಗಾಯನ
- ಗೀರ್ವಾಣ – ದೇವತೆ
- ಗೀರ್ವಾಣನಾಥ – ಇಂದ್ರ; (ಜೈನ) ಅರ್ಹಂತ
- ಗೀರ್ವಾಣಬಾಣಾಸನ – ಕಾಮನ ಬಿಲ್ಲು
- ಗೀರ್ವಾಣಮಾರ್ಗ – ಆಕಾಶ
- ಗೀರ್ವಾಣಾಧಿಪ – ಗೀರ್ವಾಣನಾಥ
- ಗುಂಕ – ಸೇವಕ
- ಗುಂಜತ್ – ಗುಂಂಯ್ಗುಡುತ್ತಿರುವ
- ಗುಂಜಾಗೃಹ – ಹೆಂಡದಂಗಡಿ
- ಗುಂಜಾಫಳ – ಗುಲಗಂಂಜಿ
- ಗುಂಜಾಭರಣ – ಗುಲಗಂಜಿಯ ಆಭರಣ
- ಗುಂಜಿ(ಜೆ) – ಗುಲಗಂಜಿ
- ಗುಂಜಿದೊಡವು – ಗುಂಜಾಭರಣ
- ಗುಂಡಿ – ಗುಂಡಾದ ಪಾತ್ರೆ
- ಗುಂಡಿಗೆ – ಎದೆ; ಕಮಂಡಲು
- ಗುಂಡಿಗೆವೊಗು – ಎದೆ ಸೇರು
- ಗುಂಡಿತ್ತು – ಆಳವಾಗಿರುವ
- ಗುಂಡು – ಗುಂಡಗಿನ ಕಲ್ಲು; ಸಮೂಹ
- ಗುಂಡುಗೆಡೆ – ಗುಂಪಾಗಿ ಬೀಳು
- ಗುಂಡುಗೊಳ್ – ಹೊಡೆಯಲು ಗುಂಡುಕಲ್ಲು ತೆಗೆದುಕೊ
- ಗುಂಡುವೆ – ಒಂದು ಬಗೆಯ ಬಲೆ
- ಗುಂಡೋತ್ತರ – ತಳಪಾಯ
- ಗುಕ್ಕರಿಸು – ತುತ್ತುಮಾಡಿ ತಿನ್ನುಗುಗ್ಗುಳ ಲೋಬಾನ
- ಗುಗ್ಗುಳಂಬೊತ್ತಿಸು – ಗುಗ್ಗುಳದ ಧೂಪ ಹಾಕು
- ಗುಚ್ಛ – ಮೂವತ್ತೆರಡು ಎಳೆಗಳುಳ್ಳ ಹಾರ
- ಗುಜಿಗುಜಿಗೊಳ್ – ಗುಜುಗುಜು ಶಬ್ದವಾಗು
- ಗುಜುಗುಜುಗೊಳ್ – ಗುಜಿಗುಜಿಗೊಳ್
- ಗುಜ್ಜರ – ಗೂರ್ಜರ ದೇಶ
- ಗುಜ್ಜರವಟ್ಟೆ – ಗೂರ್ಜರ ದೇಶದ ರೇಷ್ಮೆ ಬಟ್ಟೆ
- ಗುಜ್ಜಿ – (ಕುಬ್ಜಾ) ಕುಳ್ಳಿ
- ಗುಜ್ಜು – ಕುಳ್ಳು; ಕುಳ್ಳ
- ಗುಜ್ಜುಗರೆ – ನಿಧಾನವಾಗು
- ಗುಜ್ಜುಗೊರವ – ಕುಳ್ಳ ಗೊರವ
- ಗುಜ್ಜುಗೊಳ್ – ಚಿಕ್ಕದಾಗು; ಬಾಗು; ನಿಧನವಾಗು
- ಗುಜ್ಜುಮಾವು – ಗಿಡ್ಡ ಮಾವಿನ ಮರ
- ಗುಜ್ಜುಮೆಟ್ಟು – ನಿಧಾನ ನಡಿಗೆ
- ಗುಜ್ಜುವಜ್ಜೆ- ಗುಜ್ಜುಮೆಟ್ಟು
- ಗುಜ್ಜೆ – ಕುಳ್ಳಿ
- ಗುಡಿ – (ಕುಟೀ) ಧ್ವಜ, ಬಾವುಟ; ಗುಡಾರ, ಡೇರೆ
- ಗುಡಿಗಟ್ಟು – ಬಾವುಟ ಕಟ್ಟು; ರೋಮಾಂಚಗೊಳ್ಳು
- ಗುಡ – ಬೆಲ್ಲ
- ಗುಡಿ – ಬಾವುಟ; ಕುಟಿ
- ಗುಡಿಗಟ್ಟು – ಸುತ್ತುವರಿ; ಉತ್ಸಾಹ ಹೊಂದು;
- ಧ್ವಜಗಳನ್ನು ಕಟ್ಟು; ಬಣ್ಣ ಬಳಿ
- ಗುಡಿಯಿಸು – ರಾಶಿ ಹಾಕು
- ಗುಡಿಲ್ – ಗುಡಿಸಿಲು
- ಗುಡಿವಿಡಿಸು – ಧ್ವಜವನ್ನು ಹಿಡಿಸು
- ಗುಡಿಸಿಲ್ – ಜೋಪಡಿ
- ಗುಡುಗುಡು – ಒಂದು ಅನುಕರಣ ಶಬ್ದ
- ಗುಡುವನ – ಗುಡಾಣ
- ಗುಡ್ಡ – ಕುಳ್ಳ; ಶಿಷ್ಯ
- ಗುಣ – ಸ್ವಭಾವ; ನಡವಳಿಕೆ; ಸಿದ್ಧಿಗಳು; ಕಾವ್ಯಗುಣ; ಸದ್ಗುಣ; ಬಿಲ್ಲಿನ ಹಗ್ಗ
- ಗುಣದಂಕಕಾರ್ತಿ – ಸದ್ಗುಣಗಳಿಂದ ತುಂಬಿದವಳು
- ಗುಣಂಗೆಡು – ಗುಣ ಹಾಳಾಗು
- ಗುಣಂಗೊಳ್ – ಹೊಗಳು
- ಗುಣಂಗೊಳಿಸು – ಮೆಚ್ಚಿಸು
- ಗುಣಗ್ರಹಣ – (ಜೈನ) ಎಂಟು ಬಗೆಯ ಗರ್ಭಾನ್ವಿತ ಕ್ರಿಯೆಗಳಲ್ಲಿ ಒಂದು
- ಗುಣಗ್ರಾಮಣಿ – ಗುಣವಂತನಾದ ಗ್ರಾಮಮುಖಂಡ
- ಗುಣಚ್ಛೇದಕ – ಗುಣಗಳನ್ನು ನಾಶಗೊಳಿಸುವವನು
- ಗುಣಜ್ಞ – ಗುಣಗಳನ್ನು ತಿಳಿದವನು
- ಗುಣನೆ(ಣೆ) – ನೃತ್ಯಶಾಲೆ; ಸಂಗೀತಶಾಲೆ; ಏಕಾಂತಸ್ಥಳ
- ಗುಣಧಾಮೆ – ಸದ್ಗುಣಗಳಿಗೆ ನೆಲೆಯಾದವಳು
- ಗುಣನಾಮ – ಗುಣಕ್ಕೆ ತಕ್ಕನಾದ ಹೆಸರು
- ಗುಣನಿಧಾನ – ಒಳ್ಳೆಯ ಗುಣಗಳ ನಿಧಿ
- ಗುಣನಿಧಿ – ಗುಣನಿಧಾನ
- ಗುಣನಿಲಯ – ಸದ್ಗುಣಗಳಿಗೆ ನೆಲೆಯಾದವನು
- ಗುಣಪಣ – ಸದ್ಗುಣವೆಂಬ ಹಣ
- ಗುಣಪೃಷ್ಠ – ಗುಣಗರ್ಭ, ಜೇಡ
- ಗುಣಪ್ರಭ – ಸದ್ಗುಣಗಳಿಂದ ಕಾಂತಿಯುಕ್ತನಾದವನು
- ಗುಣಭಾಜ – ಗುಣಗಳಿಗೆ ಪಾತ್ರನಾದವನು
- ಗುಣಮಣಿ – ಅಮೂಲ್ಯ ರತ್ನ
- ಗುಣಯುತ – ಸದ್ಗುಣಗಳಿಂದ ಕೂಡಿರುವವನು
- ಗುಣರಹಿತೆ – ಸದ್ಗುಣಗಳಿಲ್ಲದವಳು
- ಗುಣವತಿ – ಸದ್ಗುಣಗಳಿಂದ ಕೂಡಿರುವವಳು
- ಗುಣವರ್ಮ – ಸದ್ಗುಣಗಳ ಕವಚ ತೊಟ್ಟವನು
- ಗುಣವ್ಯಸನ – ಸದ್ಗುಣಗಳಲ್ಲಿ ಆಸಕ್ತಿ
- ಗುಣವ್ರತ – (ಜೈನ) ಸದ್ಗುಣಗಳೇ ವ್ರತವಾಗಿರುವವನು; ಶ್ರಾವಕರು ಹೊಂದಿರುವ ದಿಗ್ವಿರತಿ, ದೇಶವಿರತಿ, ಅನರ್ಥದಂಡವಿರತಿ ಎಂಬ ಮೂರು ವ್ರತಗಳು
- ಗುಣಶ್ರೇಣಿನಿರ್ಜರೆ – (ಜೈನ) ಕರ್ಮಗಳನ್ನು ನಾಶಗೊಳಿಸುವ ಒಂದು ವಿಧಿ
- ಗುಣಸಮವಾಯ – ಸದ್ಗುಣಗಳ ಸಮೂಹ
- ಗುಣಸ್ತವ – ಗುಣಗಳ ಹೊಗಳಿಕೆ
- ಗುಣಸ್ಥಾನ – (ಜೈನ) ಆತ್ಮನ ದರ್ಶನ ಜ್ಞಾನ ಚಾರಿತ್ರಗಳ ವಿಕಾಸಗೊಳ್ಳುವ ಅವಸ್ಥೆಗಳು
- ಗುಣಹೀನ – ಸದ್ಗುಣಗಳಿಲ್ಲದವನು
- ಗುಣಹೀನೆ – ಸದ್ಗುಣಗಳಿಲ್ಲದವಳು
- ಗುಣಾಂತರ – ಬೇರೊಂದು ಗುಣ
- ಗುಣಾಕೃತಿ – ನೂಲಿನ ಆಕಾರ
- ಗುಣಾಢ್ಯ – ಸದ್ಗುಣಗಳುಳ್ಳವನು
- ಗುಣಾಣೆ – ಹೆಂಗಸರ ಶೃಂಗಾರ ಕೋಣೆ
- ಗುಣಾಧಿಕ – ಸದ್ಗುಣಗಳಿಂದ ದೊಡ್ಡವನಾದವನು
- ಗುಣಾಧೇಯ – ಸದ್ಗುಣಗಳಿಗೆ ಆಶ್ರಯದಂತಿರುವವನು
- ಗುಣಾಷ್ಟಕ – (ಜೈನ) ನೋಡಿ, ಅಷ್ಟಗುಣ
- ಗುಣಿಯಿಸು – ಲೆಕ್ಕಹಾಕು
- ಗುಣೋತ್ಕರ – ಗುಣಸಮೂಹ
- ಗುಣೋದೀರ್ಣತೆ – ಸದ್ಗುಣಗಳ ಬೆಳವಣಿಗೆ
- ಗುಣ್ಪು – ಗಾಂಭೀರ್ಯ; ಆಳ
- ಗುಣ್ಪುವಡೆ – ಆಳವಾದ
- ಗುದಿ – ಕಾಲುಗಳನ್ನು ಕಟ್ಟು
- ಗುದ್ದಲಿಗೊಳ್ – ಗುದ್ದಲಿಯಿಂದ ಅಗೆಯಲು ತೊಡಗು
- ಗುಪಿತ – (ಗುಪ್ತ) ಮುಚ್ಚಿದ
- ಗುಪ್ತಿ – ಪ್ರಾಕಾರ; (ಜೈನ) ತ್ರಿವಿಧಗುಪ್ತಿ,ಮನೋವಾಕ್ಕಾಯಗಳನ್ನು ನಿಗ್ರಹಿಸುವುದು
- ಗುಪ್ತಿಗುಪ್ತ – (ಜೈನ)) ತ್ರಿವಿಧಗುಪ್ತಿಗಳಿಂದ ರಕ್ಷಿತನಾದವನು
- ಗುಪ್ತಿತ್ರಯ – (ಜೈನ) ಮನೋಗುಪ್ತಿ, ವಾಗ್ಗುಪ್ತಿ, ಕಾಯಗುಪ್ತಿಗಳು
- ಗುಬ್ಬಿ – ಗುಬ್ಬಚ್ಚಿ
- ಗುಬ್ಬಿಗಂಕಣ – ಚಿಕ್ಕ ಬಳೆ
- ಗುಮ್ಮ – ಗೋಡೆ ಉರುಳಿಸುವ ಒಂದು ಯಂತ್ರ
- ಗುರುಕುಚ – ದೊಡ್ಡ ಮೊಲೆ
- ಗುರುಕುಚೆ – ದೊಡ್ಡ ಮೊಲೆಯುಳ್ಳವಳು
- ಗುರುಕುಲ – ಗುರುವಿನ ಮನೆ; ವಿದ್ಯಾಕೇಂದ್ರ
- ಗುರುಗಂಜಿ – ಗುಲಗಂಜಿ
- ಗುರುಜನ – ಹಿರಿಯರು
- ಗುರುಪಂಚಕ – (ಜೈನ) ಪಂಚಪರಮೇಷ್ಠಿಗಳು; ಅರ್ಹಂತ, ಸಿದ್ಧ, ಆಚಾರ್ಯ, ಉಪಾಧ್ಯಾಯ, ಸರ್ವಸಾಧುಗಳು
- ಗುರುಪೂಜೋಪಲಂಭನ – (ಜೈನ) ಐವತ್ತಮೂರು ಗರ್ಭಾನ್ವಯಕ್ರಿಯೆಗಳಲ್ಲಿ ಒಂದು; ದೇವತೆಗಳಿಂದ ಪೂಜೆಗೊಳ್ಳುವಿಕೆ
- ಗುರುಭಾರ – ಹೆಚ್ಚು ಹೊರೆ
- ಗುರುಮಂತ್ರ – ಗುರುವಿನ ಉಪದೇಶ
- ಗುರುವಚನ – ಗುರುಮಂತ್ರ; ಹಿರಿಯರ ಮಾತು
- ಗುರುವಿಯೋಗ – ಗುರುಗಳ ಅಗಲಿಕೆ
- ಗುರುಸತಿ – ಗುರುವಿನ ಹೆಂಡತಿ; ಬೃಹಸ್ಪತಿಯ ಹೆಂಡತಿ
- ಗುರೂಪರೋಧ – ಗುರು+ಉಪರೋಧ, ಗುರುಗಳ ಒತ್ತಾಯ
- ಗುರೂಪಾಂತ – ಗುರು+ಉಪಾಂತ, ಗುರುಗಳ ಬಳಿ
- ಗುರ್ದು – ಗುದ್ದು, ಮುಷ್ಟಿಯಿಂದ ಹೊಡೆ
- ಗುಲುಚ್ಛ – ಗೊಂಚಲು
- ಗುಲ್ಫ – ಪಾದದ ಗಂಟು
- ಗುಲ್ಮ – ಪೊದೆ
- ಗುಹ – ಷಣ್ಮುಖ
- ಗುಹಾಂಗಣ – ಗುಹೆಯ ಮುಂದಿನ ಅಂಗಳ
- ಗುಹ್ಯಕ – ಕುಬೇರ; (ಜೈನ) ದೇವತೆಗಳಲ್ಲಿ ಒಂದು ಭೇದ
- ಗುಳಿಗೆ – ಉಂಡೆ, ಮಾತ್ರೆ
- ಗುಳಿಗೆಯಿಕ್ಕು – ಉಂಡೆಯಾಗಿ ಮಾಡು
- ಗುಳಿಗೆಯಿಡು – ಗುಳಿಗೆಯಿಕ್ಕು
- ಗುಳ್ಳೆಗೊಟ್ಟಿ – ಗುಳ್ಳೆಗೋಷ್ಠಿ; ಒಂದು ಆಟ
- ಗುಳ್ಳೆಯ – ಗುಂಡಾಗಿರುವ
- ಗೂಂಟ – ಗೂಟ, ಬೆಣೆ
- ಗೂಂಟು – ಕಾಡುಕುದುರೆ
- ಗೂಡು – ಹಕ್ಕಿಗಳ ವಾಸಸ್ಥಳ
- ಗೂಡುಗೊಳ್ – ಗೂಡನ್ನು ಹೊಂದು
- ಗೂಡುವಾಯ್ – ಎದೆ ಬಡಿದುಕೊ
- ಗೂಢ – ಕಾಣದಿರುವ, ಅಡಗಿರುವ
- ಗೂಢಪದ – ಸರಿಯಾಗಿ ಅರ್ಥೈಸಲಾಗದ ಶಬ್ದ
- ಗೂಢಪುಷ್ಕರ – ಸೊಂಡಲ ತುದಿಯನ್ನು ಮುಚ್ಚಿಕೊಂಡ ಆನೆ
- ಗೂಢಪ್ರಣಿಧಿ – ಗುಪ್ತಚಾರ
- ಗೂಥ – ಅಮೇಧ್ಯ
- ಗೂಹನ – ಅಡಗಿಸುವಿಕೆ
- ಗೂಳಿ – ಎತ್ತು, ಹೋರಿ
- ಗೂಳಿಸೊರ್ಕು – ಗೂಳಿಯಂತೆ ಸೊಕ್ಕಿರು
- ಗೃಹಕೋಕಿಳ – ಮನೆಯ ಕೋಗಿಲೆ, ಹಲ್ಲಿ
- ಗೃಹಗ್ರಾಮಣಿ – ಮನೆವಾರ್ತೆಗಾರ
- ಗೃಹತ್ಯಾಗ – ಮನೆ ತೊರೆಯುವುದು
- ಗೃಹತ್ಯಾಗಕ್ರಿಯೆ – (ಜೈನ) ವಿರಕ್ತನಾಗಿ ಮನೆಯಿಂದ ಹೊರಬೀಳುವುದು
- ಗೃಹದೀರ್ಘಿಕೆ – ಅರಮನೆಯ ದೀರ್ಘವಾದ ಕೊಳ
- ಗೃಹದೇವತೆ – ಮನೆದೇವರು
- ಗೃಹಪತಿ – ಮನೆಯೊಡೆಯಮನೆವೆಗ್ಗಡೆ; (ಜೈನ) ಚಕ್ರವರ್ತಿಗೆ ತಾವಾಗಿ ದೊರೆಯುವ ಜೀವರತ್ನಗಳಲ್ಲಿ ಒಂದು
- ಗೃಹಪಿಕ – ಗೃಹಕೋಕಿಳ
- ಗೃಹಮಹತ್ತರ – ಮನೆವೆಗ್ಗಡೆ, ಅರಮನೆಯ ಮೇಲ್ವಿಚಾರಕ ಅಧಿಕಾರಿ
- ಗೃಹಮೇಧಿಕ – ಗೃಹಸ್ಥ
- ಗೃಹರಕ್ಷೆ- ಮನೆಯ ಕಾವಲು
- ಗೃಹವನಮಹತ್ತರ – ಅರಮೆನಯ ಉದ್ಯಾನಗಳ ಉಸ್ತುವಾರಿ ಹೊತ್ತ ಅಧಿಕಾರಿ
- ಗೃಹಶೋಭೆ – ಮನೆಯ ಅಂದ; (ಜೈನ) ಜಿನೇಂದ್ರನ ಉಪದೇಶದಿಂದ ತನ್ನ ಶೋಭೆಯನ್ನು ತ್ಯಾಗ ಮಾಡಿ ತಪಸ್ಸಿನಲ್ಲಿ ತೊಡಗುವುದು
- ಗೃಹಸ್ಥ- ಸಂಸಾರಸ್ಥ
- ಗೃಹಾಂಗ – (ಜೈನ) ಹತ್ತು ಬಗೆಯ ಕ್ಲಪವೃಕ್ಷಗಳಲ್ಲಿ ಒಂದು; ಮನೆಗಳನ್ನು ಕೊಡುವಂಥ ಕಲ್ಪವೃಕ್ಷ
- ಗೃಹಾಂಗಣ – ಮನೆಯ ಅಂಗಳ
- ಗೃಹಾಂತರಾಳ – ಮನೆಯ ಒಳಭಾಗ
- ಗೃಹಾಧಿದೇವತೆ – ಮನೆದೇವರು
- ಗೃಹಾಧಿವಾಸ – ಮನೆಯಲ್ಲಿ ವಾಸಿಸುವುದು
- ಗೃಹಾಧ್ಯಕ್ಷ- ಗೃಹಮಹತ್ತರ
- ಗೃಹಾಭ್ಯಂತರ – ಗೃಹಾಂತರಾಳ
- ಗೃಹೀತ – ಹಿಡಿದ; ಹೊಂದಿದ
- ಗೃಹೀತೇಶಿತ್ವ(ಕ್ರಿಯೆ) – (ಜೈನ) ಐವತ್ತಮೂರು
- ಗರ್ಭಾನ್ವಯ ಕ್ರಿಯೆಗಳಲ್ಲಿ ಒಂದು
- ಗೃಹೋಪಕಂಠ – ಮನೆಯ ಬಳಿ
- ಗೆಂಟಾಗಿಸು – ದೂರಗೊಳಿಸು
- ಗೆಂಟಾಗು – ದೂರವಾಗು
- ಗೆಂಟು – ದೂರ
- ಗೆಗ್ಗೆ – ಯುದ್ಧದಲ್ಲಿ ಬಳಸುತ್ತಿದ್ದ ಒಂದು ಯಂತ್ರ
- ಗೆಡೆ – ಸ್ನೇಹ
- ಗೆಡೆಗೊಳ್ – ಸ್ನೇಹ ಹೊಂದು
- ಗೆಡೆವಕ್ಕಿ – ಜೋಡಿಹಕ್ಕಿ, ಚಕ್ರವಾಕ
- ಗೆಡೆವಚ್ಚು – ಜೊತೆಯನ್ನು ಬಿಡು
- ಗೆತ್ತು – ಭಾವಿಸಿ
- ಗೆಯ್ವೊಗ – ಕಾರ್ಯವೈಖರಿ
- ಗೆರ್ಬು – ಸಂಭೋಗಿಸು
- ಗೆಲ್ – ಜಯಿಸು
- ಗೆಲಿಸು – ಗೆಲ್ಲುವಂತೆ ಮಾಢೂ
- ಗೆಲ್ಲ – ಗೆಲವು
- ಗೆಲ್ಲಂಕ – ಗೆಲ್ಲುವ ಅಂಕ
- ಗೆಲ್ಲಂಗುಡು – ಸೋಲೊಪ್ಪಿಕೊ
- ಗೆಲ್ಲಂಗೊಳ್ – ಗೆಲವನ್ನು ಪಡೆ
- ಗೆಲ್ಲಂಬಡೆ – ಗೆಲ್ಲಂಗೊಳ್
- ಗೆಲ್ಲವೀ – ಗೆಲ್ಲಂಗುಡು, ಗೆಲವನ್ನು ಎದುರಾಳಿಗೆ ಕೊಡು
- ಗೆಲ್ಲಸೇಸೆ – ವಿಜಯ ಹಾರೈಸಿ ಹಾಕುವ ಅಕ್ಷತೆ
- ಗೆಲ್ವು – ಗೆಲವು
- ಗೆಳೆವಕ್ಕಿ – ಜೋಡಿಹಕ್ಕಿ, ಚಕ್ರವಾಕ
- ಗೇಣ್ – ಅಂಗೈ ಅಗಲಿಸಿದಾಗ ಹೆಬ್ಬೆರಳ ತುದಿಯಿಂದ ಕಿರುಬೆರಳ ತುದಿಯವರೆಗಿನ ಉದ್ದ; ಚೂರಿ
- ಗೇಯ – ಸಂಗೀತ, ಹಾಡಿಕೆ, ಹಾಡಬಹುದಾದ
- ಗೇಯರಸ – ಸಂಗೀತದ ಆನಂದ
- ಗೇಹ – ಮನೆ
- ಗೇಹಾಂಗಣ – ಮನೆಯ ಅಂಗಳ
- ಗೇಹಾಜಿರ – ಗೇಹಾಂಗಣ
- ಗೇಹಿನಿ – ಗೃಹಿಣಿ
- ಗೈರಿಕಪರಾಗ – ಕೆಂಪು ದೂಳು
- ಗೊಂಕೆ – ಗೋಣು
- ಗೊಂಚಲು – ಸಮೂಹ
- ಗೊಂಚಲಿಸು – ಒಟ್ಟಾಗಿ ಸೇರು
- ಗೊಂಚಲ್ಮಿಂಚು – ಮಿಂಚಿನ ಗೊಂಚಲು
- ಗೊಂಟು – ದಿಕ್ಕು
- ಗೊಂಟುಗೊಳ್ – ಮೇಲೆ ಸೇರು
- ಗೊಂಟುಗೊಳಿಸು – ಮೂಲೆ ಸೇರಿಸು
- ಗೊಂಟುವೊಗು – ಗೊಂಟುಗೊಳ್
- ಗೊಂದಣ – ಗುಂಪು
- ಗೊಂದಣಂಗುಣಿ – ಗುಂಪಾಗಿ ಕುಣಿ
- ಗೊಂದಣಂಗೂಡು – ಗುಂಪು ಸೇರು
- ಗೊಂದಣಂಮಾಡು – ಗೊಂದಣಂಗುಣಿ
- ಗೊಂದಣಂಬೆಳಗು – ಕಿರಣಪುಂಜ
- ಗೊಂದಳ – ಸಮೂಹ
- ಗೊಂದಳವೆಕ್ಕಣ – ಸಮೂಹ ಕಲಾ ಪ್ರದರ್ಶನ
- ಗೊಂದಳಿಸು – ಒಟ್ಟುಗೂಡು
- ಗೊಂದೆ – ಬಸವ, ಎತ್ತು
- ಗೊಜ್ಜಗೆ – ಇರುವಂತಿಗೆ; ಸೇವಂತಿಗೆ
- ಗುಜ್ಜುವಜ್ಜೆ – ಪುಟ್ಟ ಹೆಜ್ಜೆ
- ಗೊಜ್ಜೆ – ಗೊಜ್ಜಗೆ
- ಗೊಟ್ಟಂಗುಡಿಯಿಸು – ಗೊಟ್ಟದಲ್ಲಿ ಸುರಿದು ಕುಡಿಸು
- ಗೊಟ್ಟಚ್ಚಿ – ನೆಲಬೇವು ಗಿಡ
- ಗೊಟ್ಟಾಟ – ಕುತಂತ್ರ
- ಗೊಟ್ಟಿ – (ಗೋಷ್ಠಿ) ಗುಂಪು
- ಗೊಟ್ಟಿಗೆವರ್ – ಗೋಷ್ಠಿಗೆ ಬರು
- ಗೊಟ್ಟಿಗಾಣ – ಗೋಷ್ಠಿಗಾಯನ
- ಗೊಟ್ಟಿಗಾಣರ್ – ಗುಂಪಾಗಿ ಹಾಡುವವರು
- ಗೊಟ್ಟಿಗೆ – ಗೋಷ್ಠಿ
- ಗೊಟ್ಟಿಗೆಯ್ – ಗೋಷ್ಠಿ ಸೇರು
- ಗೊಟ್ಟಿಗೇಯ – ಗೊಟ್ಟಿಗಾಣ
- ಗೊಟ್ಟಿರ್ – ಗೋಷ್ಠಿಯಲ್ಲಿ ಭಾಗಿಯಾಗು
- ಗೊಟ್ಟುಗಟ್ಟು – ಒಣಗಿ ಕೊರಡಾಗು
- ಗೊಟ್ಟುವಳ್ಳ – ಬತ್ತಿಹೋದ ಹಳ್ಳ
- ಗೊಡ್ಡ – ತೊಂದರೆ, ಬಾಧೆ; ಚೇಷ್ಟೆ; ನಿರರ್ಥಕ
- ಗೊಡ್ಡಾಟ – ಉಪಟಳ, ತುಂಟಾಟ
- ಗೊಡ್ಡು – ಬಂಜೆ
- ಗೊಡ್ಡುಗೊಳ್ – ನಿರರ್ಥಕವಾಗು
- ಗೊಡ್ಡೆ – ಅರಸಿಕಳು
- ಗೊಣೆ(ಯ) – ಬಿಲ್ಲಿನ ಹೆದೆ
- ಗೊತ್ತು – ಗುರಿ, ನೆಲೆವೀಡು
- ಗೊಬ್ಬರ – ಸಸಿ ಹುಲುಸಾಗಲು ನೆರವಾಗುವ ಕೊಳೆತ ವಸ್ತುಗಳು
- ಗೊಮ್ಮಟ – (ಜೈನ) ಕಾಮದೇವರಲ್ಲಿ ಮೊದಲನೆಯವನು, ಬಾಹುಬಲಿ
- ಗೊರವ – (ಗುರವಃ) ತಪಸ್ವಿ; ತಿರುಕ
- ಗೊರವಿ – ತಿರುಕಿ, ವಿರಕ್ತೆ
- ಗೊಲೆ – ಗೊನೆ, ತೆನೆ, ಗೊಂಚಲು; ಬಿಲ್ಲಿನ ತುದಿ
- ಗೊಲೆಗೆತ್ತು – ಬಿಲ್ಲಿಗೆ ಹೆದೆಯೇರಿಸು
- ಗೊಲೆಗೊಳ್ – (ಹಣ್ಣು) ಗೊನೆ ಬಿಡು
- ಗೊಲೆಗೊಳಿಸು – ತುದಿ ಮುಟ್ಟಿಸು
- ಗೊಲ್ಲ – ಒಂದು ದೇಶ, ಅಲ್ಲಿನ ವ್ಯಕ್ತಿ; ದನಗಾಹಿ
- ಗೊಲ್ಲಣಿಗೆ – ಗೂಡಾರ
- ಗೋಕರ್ಣ – ಹಾವು
- ಗೋಕುಲ – ದನದ ಮಂದೆ; ಕೃಷ್ಣ ಇದ್ದ ಹಳ್ಳಿ
- ಗೋಕ್ಷೀರಕ್ಷತಜತ್ವ – (ಜೈನ) ತೀರ್ಥಂಕರತ್ವ ಬರುವ ಜೀವನ ರಕ್ತವು ಹಸುವಿನ ಹಾಲಿನಂತೆ ಬೆಳ್ಳಗಾಗುವ ಸ್ಥಿತಿ
- ಗೋಘ್ನ – ಹಸುವನ್ನು ಕೊಲ್ಲುವವನು
- ಗೋಚಾರನಿಯಮ – (ಜೈನ) ಸಾಧುವಿನ ಭಿಕ್ಷಾಕ್ರಮ; ಹಸುವಿನಂತೆ ಆಹಾರಕ್ಕಾಗಿ ಚರಿಸುವುದು
- ಗೋಣ್ – ಕೊರಳು
- ಗೋಣಡಿಗೊಳ್ – ತಲೆಕೆಳಕಾಗು
- ಗೋಣ್ಮುರಿ – ಕತ್ತನ್ನು ಮುರಿ
- ಗೋಣ್ಮುರಿಗೊಳ್ – ಕತ್ತನ್ನು ತಿರಿಚು
- ಗೋತ್ರ – ವಂಶ; ಬೆಟ್ಟ; ದನಗಳ ಮಂದೆ
- ಗೋತ್ರಕರ್ಮ – (ಜೈನ) ಜೀವನಿಗೆ ಅಂಟಿಕೊಳ್ಳು ಎಂಟು ಬಗೆಯ ಕರ್ಮಗಳಲ್ಲಿ ಒಂದು
- ಗೋತ್ರಕಲಹ – ಮನೆತನದ ಜಗಳ
- ಗೋತ್ರಜ – ಒಂದೇ ಗೋತ್ರದವರು; ದಾಯಾದಿಗಳು
- ಗೋತ್ರಧರ – ಬೆಟ್ಟ ಹೊತ್ತವನು, ಶ್ರೀಕೃಷ್ಣ
- ಗೋತ್ರಧಾತ್ರೀಧರ – ಕುಲಪರ್ವತ
- ಗೋತ್ರನಗ – ಕುಲಪರ್ವತ
- ಗೋತ್ರಪ್ರಿಯ – ಪರ್ವತದ ಬಗ್ಗೆ ಪ್ರೀತಿಯಿರುವವನು; ತನ್ನ ಕುಲದ ಬಗ್ಗೆ ಅಭಿಮಾನವುಳ್ಳವನು
- ಗೋತ್ರಭಿತ್ – ಬೆಟ್ಟವನ್ನು ಕತ್ತರಿಸಿದವನು, ಇಂದ್ರ
- ಗೋತ್ರವೈರಿ – ಪರ್ವತವೈರಿ, ಇಂದ್ರ
- ಗೋತ್ರಸ್ಖಲನೆ – ಬಾಯಿತಪ್ಪಿ ಬೇರೊಬ್ಬರ ಹೆಸರಿನಿಂದ ಕರೆಯುವುದು
- ಗೋತ್ರಾಚಲ – ಗೋತ್ರನಗ
- ಗೋತ್ರಾದ್ರಿ – ಗೋತ್ರನಗ
- ಗೋತ್ರಾರಿ – ಗೋತ್ರವೈರಿ
- ಗೋದಾನ – ಗೋವನ್ನು ದಾನವಾಗಿ ಕೊಡುವುದು
- ಗೋದಾಮೆ – ಗೋದಿ ನಾಗರ ಹಾವು
- ಗೋದೋಹನ – ಹಸುವಿನ ಹಾಲು ಹಿಂಡುವುದು
- ಗೋಧ – ಉಡು; ಬಿಲ್ಗಾರರು ಕೈಗೆ ಕಟ್ಟಿಕೊಳ್ಳುವ ಚರ್ಮದ ಪಟ್ಟಿ
- ಗೋಧೂಮ – ಗೋದಿ
- ಗೋನ(ನಾ)ಸ – ಹೆಬ್ಬಾವು
- ಗೋನಿಯೋಗ – ದನಗಾಹಿತನ
- ಗೋಪ – ದನಗಾಹಿ
- ಗೋಪಕುಮಾರಕ – ದನಕಾಯುವ ಹುಡುಗ
- ಗೋಪತಿ – ಸೂರ್ಯ
- ಗೋಪಧ್ವಜ – ವೃಷಭಧ್ವಜ, ಶಿವ
- ಗೋಪನಂದನ – ಗೊಲ್ಲರವನ ಮಗ, ಶ್ರಿಕೃಷ್ಣ;
- ಸೂರ್ಯನ ಮಗ, ಯಮ
- ಗೋಪಾನಸೀಕ – ಲೋವೆ, ತೊಲೆ
- ಗೋಪಾಮುಖ – ಬುರುಜು
- ಗೋಪಾಲಕ – ದನಗಾಹಿ
- ಗೋಪಿ – ಗೊಲ್ಲಿತಿ
- ಗೋಪುರ – ಗೋವುಗಳ ನಗರ; ಪುರದ್ವಾರ
- ಗೋಭೂಮಿ – ಗೋಮಾಳ; ಮೈದಾನ
- ಗೋಮಂಡಲ(ಳ) – ಹಸುಗಳ ಮಂದೆ
- ಗೋಮಂಡಳಿಗ – ದನಗಳ ಮಂದೆಯ ಒಡೆಯ
- ಗೋಮಾಯು – ನರಿ
- ಗೋಮಿನೀ – ಲಕ್ಷ್ಮಿ
- ಗೋಮಿನೀಧವ – ಲಕ್ಷ್ಮೀಪತಿ, ವಿಷ್ಣು
- ಗೋಮಿನೀಪತಿ – ಗೋಮಿನೀಧವ
- ಗೋಮಿನೀವಲ್ಲಭ – ಗೋಮಿನೀಧವ
- ಗೋಮೇಧಿಕ – ನವರತ್ನಗಳಲ್ಲಿ ಒಂದು
- ಗೋರ್ – ಬಲೆಯಿಂದ ಮೀನುಹಿಡಿ
- ಗೋರಥ – ಎತ್ತುಗಳನ್ನು ಹೂಡಿದ ರಥ
- ಗೋರಿ – ಆಮಿಷ; ಬೇಟೆಯಾಡಬೇಕಾದ ಪ್ರಾಣಿಯನ್ನು ಆಕರ್ಷಿಸಲು ಕಟ್ಟುವ ದೀಹ
- ಗೋರಿಗೊಳ್ – ಬೇಟೆಯ ಮೃಗಗಳು ಆಕರ್ಷಣೆಗೊಳ್ಳು
- ಗೋರಿಗೊಳಿಸು – ಆಮಿಷವೊಟ್ಟು
- ಗೋರಿವಲೆ – ಮೀನು ಹಿಡಿಯುವ ಬಲೆ
- ಗೋಲಾಂಗೂಲ – ಹಸುವಿನ ಬಾಲ; ಕೋತಿ
- ಗೋವ – ಗೋಪ, ದನ ಕಾಯುವವನು
- ಗೋವರ್ಧನ – ದನಗಾಹಿ; ಶ್ರೀಕೃಷ್ಣ
- ಗೋವಳ – ಗೋಪಾಲಕ
- ಗೋವಳಗಟ್ಟಿಗೆ – ದನ ಕಾಯುವವನ ಕೋಲು
- ಗೋವಳಗ¿್ತಲೆ – ಕಗ್ಗತ್ತಲೆ
- ಗೋವಳಗೋಲ್ – ಗೋವಳಗಟ್ಟಿಗೆ
- ಗೋವಳರಾಯ – ಗೋಪಾಲಕರ ಒಡೆಯ, ಶ್ರೀಕೃಷ್ಣ
- ಗೋವಳಿಗ – ಗೋಪಾಳಕ
- ಗೋವಿ – (ಗೋಪಿ) ಗೊಲ್ಲಿತಿ; ಕೊಳಲು
- ಗೋವಿಂಡು – ಗೋವುಗಳ ಹಿಂಡು
- ಗೋವಿಕೆ – ದನ ಕಾಯುವವನ ಸ್ವಭಾವ
- ಗೋವು – ಹಸು
- ಗೂವುವಿಂಡು – ದಮಗಳ ಹಿಂಡು
- ಗೋವುಳಿಗ – ಗೋಪಾಲಕ
- ಗೋಶೀರ್ಷ – ಗೋವಿನ ತಲೆ; ಗೋರೋಚನ
- ಗೋಷ್ಠ – ಕೊಟ್ಟಿಗೆ
- ಗೋಷ್ಠಾಗಾರ – ಗೋಷ್ಠ
- ಗೋಷ್ಠಿ – ಗುಂಪು
- ಗೋಷ್ಠಿಗೆಯ್ – ಸರಸದಿಂದ ಮತಾಡು
- ಗೋಷ್ಪದ – ಹಸುವಿನ ಹೆಜ್ಜೆ
- ಗೋಸ – ಶಬ್ದ
- ಗೋಸಗೆ – ಬೆಳಗಿನ ಹೊತ್ತು
- ಗೋಸಣೆ(ನೆ) – (ಘೋಷಣಾ) ಸಾರಿ ಹೇಳುವುದು
- ಗೋಸಣೆ(ನೆ)ಗಳೆ – ಘೋಷಣೆ ಮಾಡು; ಸಾರು
- ಗೋಸಣೆಗೊಳ್ – ಗೋಸಣೆಗಳೆ
- ಗೋಸಣಂಗೊಳಿಸು – ಸಾರಿಸು, ಡಂಗುರ ಹೊಡೆಸು
- ಗೋಸಣೆಮಾಡು – ಗೋಸಣೆಗಳೆ
- ಗೋಸಣೆಯಿಡಿಸು – ಗೋಸಣೆಗಳೆ
- ಗೋಸಣೆಯಿಡು – ಗೋಸಣೆಗಳೆ
- ಗೋಸನೆಗುಡುಕು – ಕರೆದು ಕೊಡುವ ಆಹಾರ
- ಗೋಸನವೋಗು – ಕೀರ್ತಿಪಡೆ
- ಗೋಸಮಿತಿ – ಹಸುಗಳ ಮಂದೆ
- ಗೋಸಮೃದ್ಧಿ – ದನಗಳ ಸಂಪತ್ತು
- ಗೋಸಹಸ್ರ – ಸಾವಿರ ಗೋವುಗಳು
- ಗೋಸಾಸ – ಗೋಗ್ರಹಣದಲ್ಲಿ ತೋರುವ ಸಾಹಸ
- ಗೋಸ್ತ – ದನಗಳ ಕೊಟ್ಟಿಗೆ
- ಗೋಹಳೆ – ಗಣಿ
- ಗೋಹಳೆಯೆಡೆ – ತಿಪ್ಪೆ
- ಗೋಳಾಂಗೂಳ – ಕೋತಿ
- ಗೋಳಿ – ಗೋಣಿ, ಆಲದ ಜಾತಿಗೆ ಸೇರಿದ ಒಂದು ಮರ
- ಗೌಜು – ಗೌಜಲವಕ್ಕಿ, ಒಂದು ಬಗೆಯ ಹಕ್ಕಿ
- ಗೌತ – ಭಾರಿ ಶ್ರೀಮಂತ ವರ್ತಕ
- ಗೌರ – ಬಿಳಿಯ ಬಣ್ಣ
- ಗೌರವತ್ರಯ – (ಜೈನ) ಶಬ್ದ, ಋದ್ಧಿ, ಸಾತ ಎಂಬ ಮೂರು ಬಗೆಯ ಗೌರವ(ಅಹಂಕಾರ)ಗಳು
- ಗೌರವರ್ಣಿನಿ – ಗೌರವರ್ಣದವಳು
- ಗೌರಹಂಸ – ಬಿಳಿಯ ಹಂಸ
- ಗೌರಿಮ – ಗೌರವರ್ಣ
- ಗ್ರಂಥಿಪರ್ಣ – ಮಾಚಿ ಪತ್ರೆ
- ಗ್ರಥಿತ – ಕ್ರಮವಾಗಿ ಜೋಡಿಸಿದ
- ಗ್ರಸನ – ತಿನ್ನುವುದು
- ಗ್ರಸ್ತ – ನುಂಗಿದ; ದೆವ್ವದ ಹಿಡಿತಕ್ಕೊಳಗಾದವನು
- ಗ್ರಹಗ್ರಸ್ತ – ದೆವ್ವದಿಂದ ಹಿಡಿಯಲ್ಪಟ್ಟವನು
- ಗ್ರಹಗ್ರಾಮ – ಗ್ರಹಗಳ ಸಮೂಹ
- ಗ್ರಹಣ – ಹಿಡಿಯುವಿಕೆ; ಸೂರ್ಯಚಂದ್ರರನ್ನು
- ಗ್ರಹಗಳು ಹಿಡಿಯುವುದು
- ಗ್ರಹಣಸಲ್ಲೇಖನಾಬುದ್ಧಿ – ಹಿಡಿಯುವ ಮತ್ತು ಬಿಡುವ ಗುಣ
- ಗ್ರಹಬಲ – ನವಗ್ರಹಗಳ ಶಕ್ತಿ
- ಗ್ರಾಮ – ಹಳ್ಳಿ
- ಗ್ರಾಮಕೂಟ – ಹಳ್ಳಿಯ ಮುಖ್ಯಸ್ಥ
- ಗ್ರಾಮಣಿ – ಗ್ರಾಮಕೂಟ
- ಗ್ರಾಮಮೃಗ – ನಾಯಿ
- ಗ್ರಾಮಯಾನ – ಧರ್ಮಬೋಧೆಗಾಗಿ ಹಳ್ಳಿಗಳಗೆ ಹೋಗುವುದು
- ಗ್ರಾಮಾಧಿಪ – ಗ್ರಾಮಣಿ
- ಗ್ರಾಮ್ಯ – ಹಳ್ಳಿಗೆ ಸಂಬಂಧಿಸಿದ; ಗಾವಿಲ
- ಗ್ರಾಮ್ಯಾಳಾಪ – ಹಳ್ಳಿಗರ ಮಾತು
- ಗ್ರಾಮ್ಯೋಕ್ತಿ – ನಯವಲ್ಲದ ನುಡಿ
- ಗ್ರಾವ – ಬಂಡೆಗಲ್ಲು; ಬೆಟ್ಟ
- ಗ್ರಾಸ – ತುತ್ತು; ಆಹಾರ
- ಗ್ರಾಹ – ಹಿಡಿಯುವುದು; ಮೊಸಳೆ
- ಗ್ರೀವ(ವೆ) – ಕೊರಳು
- ಗ್ರೈವೇಯಕ – ಕಂಠಾಭರಣ; ಆನೆಗೆ ಹಾಕುವ ಸರಪಳಿ; (ಜೈನ) ಸುದರ್ಶನ, ಅಮೋಘ, ಸುಪ್ರಬುದ್ಧ, ಯಶೋಧರ, ಸುಭದ್ರ, ಸುವಿಶಾಳ, ಸುಮನಸ, ಸೌಮನಸ, ಪ್ರೀತಿಂಕರ ಎಂಬ ಒಂಬತ್ತು ಗ್ರೈವೇಯಕಗಳು
- ಗ್ಲಪನ – ಬಾಡುವಿಕೆ
- ಗ್ಲಪಿತ – ಬಾಡಿದ
- ಗ್ಲಾನಿ – ಮನಸ್ಸಿನ ಜಡತೆ
- ಗ್ಲೌ – ಚಂದ್ರ
Conclusion:
ಕನ್ನಡ ಗ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.