ಕನ್ನಡ ಖ ಅಕ್ಷರದ ಹಳೆಗನ್ನಡ  ಪದಗಳು – Kannada Words

Check out Kannada Kha aksharada halegannadada padagalu , ಕನ್ನಡ ಖ ಅಕ್ಷರದ ಹಳೆಗನ್ನಡ  ಪದಗಳು ( KhA halegannada Words in kannada ).

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಖ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( KhA halegannada Words in kannada ) ತಿಳಿದುಕೊಳ್ಳೋಣ.

ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.

ಕನ್ನಡ ಅಕ್ಷರ ಎಂದರೇನು?

ಖ, ಕನ್ನಡ ವರ್ಣಮಾಲೆಯ ಕ-ವರ್ಗದ ಎರಡನೇ ಅಕ್ಷರವಾಗಿದೆ.ಇದು ಒಂದು ವ್ಯಂಜನ. ಮಹಾಪ್ರಾಣಾಕ್ಷರ. ಈ ಅಕ್ಷರ ಕಂಠ್ಯ ಅಘೋಷ ಸ್ಪರ್ಶ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ.

ಇದರ ಅತ್ಯಂತ ಪ್ರಾಚೀನ ಸ್ವರೂಪವನ್ನು ಮೌರ್ಯರ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಅಶೋಕನ ಶಾಸನಗಳಲ್ಲಿ ಇದು ಪ್ರಶ್ನಾರ್ಥಕ ಚಿಹ್ನೆಯಂತಿತ್ತು. ಅನಂತರದ ಶಾತವಾಹನ ಕಾಲದಲ್ಲಿ ಕೆಳಗಿನ ಬಿಂದುವಿನ ಬದಲು ಒಂದು ಸಣ್ಣ ಅಡ್ಡರೇಖೆ ಬಂದು ಸೇರಿತು. ಕದಂಬರ ಕಾಲದಲ್ಲಿ ಮೇಲಿನ ಕೊಂಡಿ ಸಣ್ಣದಾದುದು ಮಾತ್ರವಲ್ಲದೆ ಪೇಟಿಕಾಶಿರದ ತಲೆಕಟ್ಟು ಪ್ರಮುಖವಾಯಿತು. ಬಾದಾಮಿಯ ಚಾಳುಕ್ಯರ ಕಾಲಕ್ಕೆ ಈ ರೂಪದಲ್ಲಿ ಸ್ವಲ್ಪ ಬದಲಾವಣೆಗಳಾದವು. ಅಕ್ಷರ ಅಗಲವಾಯಿತು. ರಾಷ್ಟ್ರಕೂಟರ ಕಾಲಕ್ಕಾಗಲೆ ಇದಕ್ಕೆ ಈಗಿನ ರೂಪ ಬರತೊಡಗಿತ್ತು. ಅಲ್ಲಿಂದ ಮುಂದೆ ಅದೇ ರೂಪ ಸ್ಥಿರವಾಗಿ, ಅಕ್ಷರ ಇನ್ನೂ ದುಂಡಗಾಗಿ ಕಲ್ಯಾಣದ ಚಾಳುಕ್ಯರ ಮತ್ತು ವಿಜಯನಗರ ಕಾಲಗಳಲ್ಲಿಯೂ ಅನಂತರದ ಕಾಲಗಳಲ್ಲಿಯೂ ನಡೆದು ಬರುತ್ತಿರುವುದನ್ನು ಗುರುತಿಸಬಹುದಾಗಿದೆ

Check out Kannada Varnamale : ಕನ್ನಡ ವರ್ಣಮಾಲೆ

ಕನ್ನಡ ಅಕ್ಷರದ ಹಳೆಗನ್ನಡ  ಪದಗಳು – Kannada Words

  1. ಖ – ಆಕಾಶ; ವಿಷ್ಣು; ದೇವಲೋಕ; ಅರಿವು
  2. ಖಂಜನ – ಗೀಜುಗ ಪಕ್ಷಿ
  3. ಖಂಜೀಕೃತ – ಕುಂಠಿಸಿದ, ಕುಂಟುಗೊಳಿಸಿದ
  4. ಖಂಡ – ತುಂಡು; ಗುಂಪು, ಸಮೂಹ; ಅರ್ಧಚಂದ್ರ
  5. ಖಂಡನೀಯ – ಕತ್ತರಿಸಲು ಶಕ್ಯವಾದ; ಒಡೆಯುವುದು
  6. ಖಂಡಪರಶು – ಅರ್ಧಚಂದ್ರಾಕಾರದ ಕೊಡಲಿ; ಪರಮೇಶ್ವರ; ವಿನಾಯಕ; ಪರಶುರಾಮ
  7. ಖಂಡಪ್ರಾಸ – ಆದಿಪ್ರಾಸ
  8. ಖಂಡಿಸು – ಕತ್ತರಿಸು; ನಿಂದಿಸು
  9. ಖಂಡುಗ – ಒಂದು ಅಳತೆ
  10. ಖಂಡೇಂದು – ಅರ್ಧಚಂದ್ರ
  11. ಖಗ – ಆಗಸದಲ್ಲಿ ಚರಿಸುವುದು, ಪಕ್ಷಿ; ಬಾಣ; ದೇವತೆ; ಸೂರ್ಯ
  12. ಖಗಕುಳ – ಪಕ್ಷಿಸಮೂಹ
  13. ಖಗಜ – ಸೂರ್ಯನ ಮಗ, ಶನಿ
  14. ಖಗನಗ – (ಜೈನ) ಖೇಚರರು ವಾಸಿಸುವ ಪರ್ವತ, ವಿಜಯಾರ್ಧಪರ್ವತ
  15. ಖಗಪ – ವಿದ್ಯಾಧರ ರಾಜ
  16. ಖಗಪತಿ – ಗರುಡ
  17. ಖಗಪತಿಖಗ – ಗರುಡಾಸ್ತ್ರ
  18. ಖಗಬಂಧ – ಹಕ್ಕಿಗಳನ್ನು ಹಿಡಿಯುವ ಬಲೆ
  19. ಖಗರಾಜಾಸ್ತ್ರ – ಗರುಡಾಸ್ತ್ರ
  20. ಖಗರಾಜೇಂದ್ರ – ಖೇಚರರ ಒಡೆಯ
  21. ಖಗವಂಶ – ಸೂರ್ಯವಂಶ; ಖೇಚರವಂಶ
  22. ಖಗಾದ್ರಿ – ಖಗನಗ
  23. ಖಗಾಧೀಶ್ವರ – ಖೇಚರರ ಒಡೆಯ
  24. ಖಗೇಂದ್ರ – ಖೇಚರ ರಾಜ; ಗರುಡ
  25. ಖಗೇಂದ್ರಕನ್ನಿಕೆ – ಖೇಚರ ಕನ್ನಿಕೆ
  26. ಖಗೇಂದ್ರವಾಹನ – ಗರುಡನನ್ನು ವಾಹನವನ್ನಾಗಿ ಉಳ್ಳವನು, ವಿಷ್ಣು
  27. ಖಗೇಶ – ಖಗೇಂದ್ರ
  28. ಖಗೇಶ್ವರ – ಖಗೇಂದ್ರ
  29. ಖಚರ – ಆಕಾಸದಲ್ಲಿ ಚರಿಸುವ, ಹಕ್ಕಿ; ಸೂರ್ಯ; ಖೇಚರ; ವಿದ್ಯಾಧರ
  30. ಖಚರಪತಿ – ಖೇಚರರಾಜ, ವಿದ್ಯಾಧರ ರಾಜ
  31. ಖಚರಾಂಗನೆ – ಖೇಚರ ಸ್ತ್ರೀ
  32. ಖಚರಿ – ದೇವಾಂಗನೆ
  33. ಖಚರೇಂದ್ರ – ಖಚರಪತಿ
  34. ಖಜಕ – ಕಡೆಗೋಲು
  35. ಖಜಾ(ಜಿ)ಕೆ – ಸೌಟು
  36. ಖಟ್ವಾಂಗ – ಶಿವನ ಆಯುಧ
  37. ಖಟ್ವಾಂಗಧರ – ಶಿವ
  38. ಖಡ್ಗ – ಕತ್ತಿ
  39. ಖಡ್ಗಧೇನುಕ – ಕಿರುಗತ್ತಿ, ಸುರಗಿ
  40. ಖಡ್ಗಪಿಧಾನ – ಕತ್ತಿಯ ಒರೆ
  41. ಖಡ್ಗರತ್ನ – (ಜೈನ) ಚಕ್ರವರ್ತಿಗಳಿಗೆ ಸಹಜವಾಗಿ ಒದಗುವ ಏಳು ಆಜೀವರತ್ನಗಳಲ್ಲಿ ಒಂದು
  42. ಖಡ್ಗಾಂಶು – ಕತ್ತಿಯ ಹೊಳಪು
  43. ಖಡ್ಗಾಖಡ್ಗಿ – ಕತ್ತಿ ಯುದ್ಧ
  44. ಖಡ್ಗಿ – ಖಡ್ಗಮೃಗ
  45. ಖಡ್ಗಿಧೇನುಕ – ಹೆಣ್ಣು ಖಡ್ಗಮೃಗ
  46. ಖಣತ್ಕಾರ -ಖಣಖಣ ಎಂದ ಅನುಕರಣ ಧ್ವನಿ
  47. ಖತಿ – ಕೋಪ
  48. ಖದಿರ – ಕಗ್ಗಲಿ ಮರ, ಕಾಚಿನ ಮರ
  49. ಖದಿರಗುಲಿ(ಳಿ)ಕೆ – ಕಾಚಿನ ಗುಳಿಗೆ
  50. ಖದ್ಯೋತ – ಸೂರ್ಯ; ಮಿಣುಕು ಹುಳು
  51. ಖನನ – ತೋಡುವಿಕೆ, ಅಗೆತ; ಕನ್ನ ಕೊರೆಯುವುದು
  52. ಖನಿ – ಗಣಿ; ಮಿಂಚು
  53. ಖಪುಷ್ಪ – ಆಕಾಶದ ಹೂವು; ಗಗನ ಕುಸುಮ; ಅಸಂಭವ
  54. ಖಮ್ಮರಿ – ಮಲ್ಲಯುದ್ಧದ ಒಂದು ಪಟ್ಟು
  55. ಖರ – ತೀಕ್ಷ್ಣವಾದ; ಹೇಸರಗತ್ತೆ
  56. ಖರಕರ- ತೀಕ್ಷ್ಣ ಕಿರಣ(ಗಳುಳ್ಳವನು), ಸೂರ್ಯ
  57. ಖರಕರಕಿರಣ – ಸೂರ್ಯ
  58. ಖರಕರನಂದನ – ಸೂರ್ಯನ ಮಗ, ಶನಿ;
  59. ಯಮಧರ್ಮ; ಸುಗ್ರೀವ; ಕರ್ಣ
  60. ಖರಕಿರಣ – ಸೂರ್ಯ
  61. ಖರಖುರ – ಗಟ್ಟಿಯಾದ ಗೊರಸು; ಹೇಸರಗತ್ತೆಯ ಗೊರಸು
  62. ಖರತನ – ತೀಕ್ಷ್ಣತೆ; ಉಗ್ರತೆ
  63. ಖರದಂಡ – ಒರಟಾದ ದಂಟಿರುವುದು, ತಾವರೆ
  64. ಖರದಂಡಪ್ರಿಯ – ಕಮಲಗಳಿಗೆ ಪ್ರಿಯನಾದವನು, ಸೂರ್ಯ; ಉಗ್ರ ಶಿಕ್ಷೆ ವಿಧಿಸುವವನು
  65. ಖರವಿಷಾಣ – ಕತ್ತೆಯ ಕೊಂಬು; ಕತ್ತೆಯ ಕೋಡಿನಂತೆ ಅಸಂಭವವಾದುದು
  66. ಖರಶಾಣ – ಮಸೆಗಲ್ಲು, ರತ್ನಗಳ ಸಾಣೆ ಕಲ್ಲು
  67. ಖರಾಂಶು – ಖರಕರ
  68. ಖರ್ಪರ – ಕಪಾಲ; ಕೊಪ್ಪರಿಗೆ; ಆಮೆಯ ಚಿಪ್ಪು
  69. ಖರ್ವಡ – ಖರ್ವಟ, ನಗರ-ಹಳ್ಳಿಗಳ ನಡುವಣ ಸ್ಥಿತಿಯ ಮತ್ತು ಬೆಟ್ಟಗಳ ನಡುವಿರುವ ಊರು
  70. ಖರ್ವತೆ – ಕುಂದುವಿಕೆ
  71. ಖರ್ವಮತಿ – ಕೀಳುಬುದ್ಧಿ(ಯವನು)
  72. ಖರ್ವಿತ – ನೆಗ್ಗಿದ, ಅಗೆದ
  73. ಖಲ – ನೀಚ
  74. ಖಲನ್ಯಾಯ – ಕೆಟ್ಟ ನಡತೆ; ಸಂಗ್ರಹ ನೀತಿ
  75. ಖಲೀನ – ಆಕಾಶದಲ್ಲಿ ಸೇರಿಹೋಗಿರುವ; ಕಡಿವಾಣ
  76. ಖಲ್ಯ – ಶೂರ
  77. ಖಳಕರ್ಮ – ಕೆಟ್ಟ ಕೆಲಸ; (ಜೈನ) ಆತ್ಮನಿಗೆ ಅಹಿತಕರವಾದ ಕರ್ಮ
  78. ಖಳಕರ್ಮಾಷ್ಟಕ – (ಜೈನ) ಎಂಟು ಬಗೆಯ ದುಷ್ಟಕರ್ಮಗಳಲ್ಲಿ ಒಂದು
  79. ಖಲಕಳಂಕ – ಕೆಟ್ಟ ನಿಂದೆ; ಹೀನವಾದ ಅಪವಾದ
  80. ಖಳಖಳ – ಕಳಕಲ, (ಜೈನ) ಒಂದು ನರಕದ ಬಿಲ
  81. ಖಳವಿನೀತ – ದುಷ್ಟಕೆಲಸದಲ್ಲಿ ಪರಿಣತನದವನು
  82. ಖಳಸಂಸರಣ – ಕಷ್ಟಕರ ಸಂಸಾರ
  83. ಖಳಸಂಸೃತಿ – ಕಷ್ಟಸಂಸರಣ
  84. ಖಳಾನ್ವಿತ – ದುಷ್ಟರಿಂದ ಕೂಡಿದವನು
  85. ಖಾಂಡವ – ಕುರುಕ್ಷೇತ್ರದ ಒಂದ ವನ
  86. ಖಾಣ – ಪ್ರಾಣಿಗಳ ಮೇವು
  87. ಖಾತ – ತೋಡಲ್ಪಟ್ಟ; ಕೊ; ಕಂದಕ
  88. ಖಾತಕ – ಅಗೆಯುವವನು; ಕಂದಕ
  89. ಖಾತಿಕೆ – ಕಂದಕ, ಅಗಳು
  90. ಖುರ – ಗೊರಸು
  91. ಖುರಮಣಿಕೆ – ಕುದುರೆ ಕಾಲಿಡಲು ಹಾಕಿರುವ ಮಣೆ
  92. ಖುರಳಿ – ಶಸ್ತ್ರಾಭ್ಯಾಸ
  93. ಖುರಾಹತಿ – ಗೊರಸಿನ ಏಟು
  94. ಖರ್ವಡ – ಕೋಟೆಯಿರುವ ಊರು
  95. ಖುರ – ಗೊರಸು
  96. ಖೇಚರ – ಗಂಧರ್ವ, ವಿದ್ಯಾಧರ ಮೊದಲಾದ ಆಕಾಶಸಂಚಾರಿಗಳು
  97. ಖೇಚರರಾಜ – ವಿದ್ಯಾಧರ ರಾಜ
  98. ಖೇಚರವಾರವಧು – ದೇವಲೋಕದ ವೇಶ್ಯೆ
  99. ಖೇಚರಿ – ದೇವತಾ ಸ್ತ್ರೀ
  100. ಖೇಚರೀಜ – ಖೇಚರಿಯ ಮಗ, ಭೀಷ್ಮ
  101. ಖೇಚರೇಂದ್ರ – ಖೇಚರರಾಜ
  102. ಖೇಟ – ಹಳ್ಳಿ
  103. ಖೇಟಕ – ಖೇಟ; ಗುರಾಣಿ
  104. ಖೇಡ – ಎತ್ತರವಾದ ಕೋಟೆಯಿರುವ ಊರು
  105. ಖೇಡನ – ಆಟ; ಲೀಲೆಖೇದ – ದುಃಖ; ಕುದುರೆಯ ಕೆನೆತ
  106. ಖೇದಾಂಧತೆ – ದುಃಖದಿಂದ ಕಂಗೆಡುವಿಕೆ
  107. ಖೇದಾಶ್ರುಜಲ – ದುಃಖದ ಕಣ್ಣೀರು
  108. ಖೇದಿಸು – ದುಃಖಿಸು
  109. ಖೇಯ – ಕಂದಕ
  110. ಖೇಲ(ಳ)ನ – ಆಟ. ಕ್ರೀಡೆ
  111. ಖೈರು – ಕ್ಷೇಮ
  112. ಖ್ಯಾತಕರ್ಣಾಟಕ – ಪ್ರಸಿದ್ಧವಾದ ಕರ್ನಾಟಕ ದೇಶ ಮತ್ತು ಕನ್ನಡ ಭಾಷೆ; ಆರು ವೃತ್ತಗಳು; ಉತ್ಪಲಮಾಲೆ, ಚಂಪಕಮಾಲೆ, ಶಾರ್ದೂಲವಿಕ್ರೀಡಿತ, ಮತ್ತೇಭವಿಕ್ರೀಡಿತ, ಸ್ರಗ್ಧರೆ ಮತ್ತು ಮಹಾಸ್ರಗ್ಧರೆ
  113. ಖ್ಯಾತಿವಡೆ – ಖ್ಯಾತಿ ಗಳಿಸು

Conclusion:

ಕನ್ನಡ  ಅಕ್ಷರದ ಹಳೆಗನ್ನಡ  ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.

Similar Posts

5 1 vote
Article Rating
Subscribe
Notify of
guest

0 Comments
Inline Feedbacks
View all comments