ಕನ್ನಡ ಡ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada da aksharada halegannadada padagalu , ಕನ್ನಡ ಡ ಅಕ್ಷರದ ಹಳೆಗನ್ನಡ ಪದಗಳು (dA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಡ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( da halegannada Words in kannada ) ತಿಳಿದುಕೊಳ್ಳೋಣ
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಡ ಅಕ್ಷರ ಎಂದರೇನು?
ಡ, ಕನ್ನಡ ವರ್ಣಮಾಲೆಯ ಟ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಈ ಅಕ್ಷರ ಘೋಷ ಸ್ಪರ್ಶಮೂರ್ಧನ್ಯ ಧ್ವನಿಯನ್ನು ಸೂಚಿಸುತ್ತದೆ.
ಅಶೋಕನ ಕಾಲದಲ್ಲಿ ಅಟ್ಟದ ಮೆಟ್ಟಲಿನಂತಿದ್ದ ಈ ಅಕ್ಷರಕ್ಕೆ ಬಾಗು ಬಂದದ್ದು ಶಾತವಾಹನರ ಕಾಲದಲ್ಲಿ. ಆ ಬಾಗಿಗೆ ಹೊಕ್ಕಳು ಕಾಣಿಸಿಕೊಂಡುದು ಬಾದಾಮಿಯ ಚಾಳುಕ್ಯರ ಕಾಲದಲ್ಲಿ. ಕದಂಬರ ಕಾಲಕ್ಕಾಗಲೆ ಮೂಡಿದ ತಲೆಕಟ್ಟು ಖಚಿತವಾಗುತ್ತ ಹೋಗಿ ಕಲ್ಯಾಣದ ಚಾಳುಕ್ಯರ ಕಾಲಕ್ಕೆ ಸ್ಪಷ್ಟವಾಯಿತು. ಅಕ್ಷರಕ್ಕೆ ಈಗಿನ ಸ್ವರೂಪ ಬರಹತ್ತಿದ್ದು ವಿಜಯನಗರದವರ ಕಾಲದಲ್ಲಿ. ಮೈಸೂರು ಅರಸರ ಕಾಲದ ಸ್ವರೂಪವೇ ಈಗ ಮುಂದುವರಿಯುತ್ತಿದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಡ ಅಕ್ಷರದ ಹಳೆಗನ್ನಡ ಪದಗಳು- Kannada Words
- ಡಂಗ – ಸುಂಕವಸೂಲಿಗಾಗಿರುವ ಕಾವಲು ಕಟ್ಟೆ
- ಡಂಗುರಂಬೊಯ್(ಹೊಯ್) – ತಮಟೆಯ ಶಬ್ದದೊಂದಿಗೆ ಪ್ರಕಟಪಡಿಸು
- ಡಂಗುರಂಬೊಯ್ಲು – ಡಂಗುರ ಸಾರಿಸು
- ಡಂಗುರಿಸು – ಡಂಗುರಂಬೊಯ್
- ಡಂಗೆ – ದೊಣ್ಣೆ
- ಡಂಗೆಗೂಳ್ – ಹಟಹಿಡಿ
- ಡಂಗೆಯಂಗೊಳ್ – ಡಂಗೆಗೂಳ್
- ಡಂಬ – ತೋರಿಕೆ; ಮೋಸ
- ಡಂಬಿಸು – ಮೋಸಮಾಡು
- ಡಂಬರ – ಚೆಲುವು
- ಡಂಭತನ – ಸೋಗು
- ಡಕ್ಕೆ – ಒಂದು ವಾದ್ಯ
- ಡಕ್ಕೆವಾಜಿಸು – ಡಕ್ಕೆಯನ್ನು ಹೊಡೆ
- ಡಕ್ಕೆವಾಯ್ – ಡಕ್ಕೆಯಂತೆ ಶಬ್ದಮಾಡು
- ಡಗೆ – ಮೋಸ
- ಡಮ(ವ)ರುಕ(ಗ) – ಒಂದು ಚರ್ಮವಾದ್ಯ
- ಡಮರುಧ್ವಾನ – ಡಮರುಗದ ಸದ್ದು
- ಡವಕೆ – ಪೀಕದಾನಿ, ಕಾಳಾಂಜಿ; ಡಮರುಗ ಎಂಬ ಒಂದು ವಾದ್ಯ
- ಡವಕೆವಾಜಿಸು – ಡವಕೆಯನ್ನು ಹೊಡೆ
- ಡವಕೆವಿಡಿ – ಪೀಕದಾನಿಯನ್ನು ಒಡ್ಡು
- ಡಾಕಿಣಿ(ನಿ) – ರಕ್ಕಸಿ; ರಕ್ಕಸಿಯ ಕತ್ತಿ
- ಡಾಣೆ – ದೊಣ್ಣೆ; ಒಂದು ಆಯುಧ, ಗದೆ
- ಡಾವರ – ಪೀಡೆ, ಗಲಭೆ
- ಡಾಮರ – ಕ್ಷಾಮ; ಪೀಡೆ
- ಡಾವರಿಗ – ಸೂರೆಗಾರ
- ಡಾಹ – (ದಾಹ) ಸುಡುವಿಕೆ
- ಡಾಳ – ಕಾಂತಿ
- ಡಾಳಿಸು – ಚಾಮರ ಬೀಸು; ಪಗಡೆಯ ದಾಳ ಹಾಕು
- ಡಾಳೆ – ಗಯ್ಯಾಳಿ
- ಡಾಳೆವೆಂಡತಿ – ಗಯ್ಯಾಳಿ ಹೆಣ್ಣು
- ಡಿಂಗರ – ಸೇವಕ
- ಡಿಂಡಿಮ – ಢಕ್ಕೆ ಎಂಬ ಒಂದು ಚರ್ಮವಾದ್ಯ
- ಡಿಂಡೀರ – ನೊರೆ
- ಡಿಂಡೀರಪಾಂಡುರ – ನೊರೆಯಂತೆ ಬೆಳ್ಳಗಿನ
- ಡಿಂಡೀರಪಿಂಡ – ನೊರೆಯ ಮುದ್ದೆ, ರಾಶಿ
- ಡಿಳ್ಳ – ಭೀತಿ
- ಡುಂಡುಕ – ತಿಗಣೆ
- ಡುಂಡುಚಿ – ಒಂದು ಚರ್ಮವಾದ್ಯ
- ಡುಂಡುಭ – ಇರ್ತಲೆಯ ಹಾವು
- ಡೆಂಕಣಿ – ಯುದ್ಧದಲ್ಲಿ ಕಲ್ಲು ಎಸೆಯುವ ಒಂದು ಯಂತ್ರ
- ಡೆಂಕೆ – ಜಂತೆ
- ಡೆಂಚೆಯ – ಪಗಡೆ ದಾಳ
- ಡೆಳ್ಳೆ – ಬಿದಿರಿನ ಬುಟ್ಟಿ
- ಡೊಂಕಣಿ – ಸಬಳ; ಕೋಟೆಯ ಬತೇರಿ
- ಡೊಂಕಣಿಕಾ – ಸಬಳ ಹಿಡಿದು ಹೋರಾಡುವವನು
- ಡೊಂಬ – ದೊಂಬ
- ಡೊಂಬರಕೊಡಗ – ಕೊಲ್ಲಟಿಗರು ಆಟಕ್ಕಾಗಿ ಬಳಸುವ ಕೋತಿ; ಇತರರು ಹೇಳಿದಂತೆ ಕೇಳುವವನು
- ಡೊಂಬವಿದ್ದೆ – ದೊಂಬರ ವಿದ್ಯೆ; ಯಕ್ಷಿಣಿ; ವಂಚನೆ
- ಡೊಂಬಿತಿ – ಡೊಂಬರ ಹೆಣ್ಣು; ವಂಚಕಿ
- ಡೊಂಬಿಸು – ವಂಚಿಸು
- ಡೊಕ್ಕನೆ – `ಡೊಕ್’; ಒಂದು ಅನುಕರಣ ಶಬ್ದ; ಗುದ್ದು
- ಡೊಕ್ಕರ – ಹೊಡೆತ; ಮಲ್ಲಯುದ್ಧದ ಒಂದು ವರಸೆ
- ಡೊಕ್ಕರಂಗೊಳ್ – ಹೊಡೆತದಿಂದ ಜರ್ಜರಿತನಾಗು
- ಡೊಕ್ಕರಿ – ಜೀರ್ಕೊಳವೆ
- ಡೊಕ್ಕರಿಸು – ಪೆಟ್ಟು ಕೊಡು, ಅಪ್ಪಳಿಸು
- ಡೊಳ್ಳಿಗ – ಡೊಳ್ಳು ಬಾರಿಸುವವನು; ಡೊಳ್ಳು ಹೊಟ್ಟೆಯವನು
- ಡೊಳ್ಳು – ದೊಡ್ಡ ಹೊಟ್ಟೆ
- ಡೋಹರ – ಚಂಡಾಲಜಾತಿಯವನು
- ಡೋಳಾಕೇಳಿ – ಉಯ್ಯಾಲೆಯಾಡುವುದು
- ಡೌಡೆ – ಡಿಂಡಿಮ ಎಂಬ ಚರ್ಮವಾದ್ಯ
CONCLUSION:
ಕನ್ನಡ ಡ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.