ಕನ್ನಡ ಜ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada ja aksharada halegannadada padagalu , ಕನ್ನಡ ಜ ಅಕ್ಷರದ ಹಳೆಗನ್ನಡ ಪದಗಳು (jA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಜ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( ja halegannada Words in kannada ) ತಿಳಿದುಕೊಳ್ಳೋಣ
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಜ ಅಕ್ಷರ ಎಂದರೇನು?
ಜ, ಕನ್ನಡ ವರ್ಣಮಾಲೆಯ ಚ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಈ ಅಕ್ಷರ ತಾಲವ್ಯ ಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಇದರ ಉಚ್ಚಾರಣೆ ಸ್ಪರ್ಶಕ್ಕೆ ಬದಲಾಗಿ ಅನುಘರ್ಷವಾಗಿಯೂ ಇದೆ.
ಕ್ರಿ.ಪೂ. ಮೂರನೆಯ ಶತಮಾನದ ಬ್ರಾಹ್ಮೀಲಿಪಿಯ ಈ ಅಕ್ಷರರೂಪ ಸುಮಾರು ಆರನೆಯ ಶತಮಾನದವರೆಗೆ ಹಾಗೆಯೆ ಮುಂದುವರಿಯುತ್ತದೆ, ಸಾತವಾಹನರ ಕಾಲದಲ್ಲಿ ಮೂರು ಅಡ್ಡರೇಖೆಗಳನ್ನು ಒಂದು ಲಂಬರೇಖೆಯೊಂದಿಗೆ ಸೇರಿಸಿರುವಂತೆ ಕಾಣುತ್ತದೆ. ಸುಮಾರು ಒಂಬತ್ತನೆಯ ಶತಮಾನದ ಸಮಯಕ್ಕೆ ಮೇಲಿನ ಅಡ್ಡರೇಖೆ ಸಣ್ಣದಾಗಿ ಕೆಳಗಿನ ಎರಡು ರೇಖೆಗಳು ಉದ್ದವಾಗುತ್ತವೆ ಮತ್ತು ಅಕ್ಷರದ ಅಗಲ ಹೆಚ್ಚಾಗುತ್ತದೆ. ಕ್ರಿ.ಶ. ಹನ್ನೊಂದನೆಯ ಶತಮಾನದಲ್ಲಿ ಈ ಅಕ್ಷರಕ್ಕೆ ಈಗಿರುವ ರೂಪ ಬರುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಜ ಅಕ್ಷರದ ಹಳೆಗನ್ನಡ ಪದಗಳು – Kannada Words
- ಜಂಕಿಸು – ಗದರಿಸು; ಹೀಯಾಳಿಸು
- ಜಂಕೆ – ಗದರಿಕೆ
- ಜಂಗಮ – ಸಂಚರಿಸುವ
- ಜಂಗುಳಿ – ಗುಂಪು
- ಜಂಗುಳಿದೇವರು – ಜನಜಂಗುಳಿಯ ದೇವತೆಗಳು
- ಜಂಘಚಾರಣ – (ಜೈನ) ಎಂಟು ಬಗೆಯ ಚಾರಣಶಕ್ತಿಯಿರುವವರಲ್ಲಿ ಒಬ್ಬ; ನೆಲಕ್ಕೆ ಕಾಲೂರದೆ ನಡೆಯಬಲ್ಲವನು
- ಜಂಘಾಲ(ಳ) – ವೇಗವಾಗಿ ಓಡುವವನು
- ಜಂಜು – ಬೀಸುವ ಗಾಳಿ ಅಥವಾ ಬೀಳುವ ಮಳೆಯ ಸದ್ದು
- ಜಂಝಾಪ್ರಭಂಜನ – ಮಳೆಹನಿಯೊಡಗೂಡಿದ ಗಾಳಿ
- ಜಂಝಾಸಮೀರ – ಜಂಝಾಪ್ರಭಂಜನ
- ಜಂತ – ದಂತ
- ಜಂತಿಗ – ದಂತದ ವ್ಯಾಪಾರಿ
- ಜಂತು – ಕರುಳಿನಲ್ಲಿ ಹುಟ್ಟುವ ಹುಳು
- ಜಂತೆ – ಛಾವಣಿಯ ತೊಲೆಗಳ ನಡುವೆ ಹಾಕುವ ಸಣ್ಣ ಅಡ್ಡಪಟ್ಟಿ
- ಜಂತೆತ್ತು – ಜಂತುಗಳು ಹೆಚ್ಚಾಗು
- ಜಂತ್ರ – ಯಂತ್ರ
- ಜಂಪ – ನೆಗೆತ; ಕುಪ್ಪಳಿಕೆ
- ಜಂಪತಿ – ದಂಪತಿ
- ಜಂಪೆ – ಮನೆಯ ಒಂದು ಭಾಗ
- ಜಂಬಾಲ(ಳ) – ಕೆಸರು
- ಜಂಬೀರ – ನಿಂಬೆ
- ಜಂಬು – ನೇರಿಳೆ
- ಜಂಬುಕ – ನರಿ
- ಜಂಬೂದ್ರುಮ – ನೇರಿಳೆ ಮರ
- ಜಂಬೂದ್ವೀಪ – ಜಂಬೂ, ಪ್ಲಕ್ಷ್ಯ, ಶಾಲ್ಮಲೀ, ಕುಶ, ಕ್ರೌಂಚ, ಶಾಕ, ಪುಷ್ಕರ ಎಂಬ ಸಪ್ತದ್ವೀಪಗಳಲ್ಲಿ ಒಂದು; (ಜೈನ) ಜಂಬೂದ್ವೀಪದಲ್ಲಿ ಭರತವರ್ಷ, ಹೈಮವತವರ್ಷ, ಹರಿವರ್ಷ, ವಿದೇಹವರ್ಷ, ರಮ್ಯಕವರ್ಷ, ಹೈರಣ್ಯವತವರ್ಷ,ಐರಾವತವರ್ಷ ಎಂಬ ಏಳು ಭಾಗಗಳು
- ಜಂಬೂನದಗಿರಿ – ಮೇರುಪರ್ವತ
- ಜಂಬೂಫಲ(ಳ) – ನೇರಿಳೆ ಹಣ್ಣು
- ಜಂಭರಿಪು – ಜಂಭ ಎಂಬ ರಾಕ್ಷಸನ ಶತ್ರು, ಇಂದ್ರ
- ಜಂಭಾರಾತಿ – ಜಂಭರಿಪು
- ಜಂಭಾರಿ – ಜಂಭರಿಪು
- ಜಂಭೀರ – ನಿಂಬೆ
- ಜಕ್ಕ – ಯಕ್ಷ
- ಜಕ್ಕವಕ್ಕಿ – ಚಕ್ರವಾಕ ಪಕ್ಷಿ
- ಜಕ್ಕಿ – ಯಕ್ಷಿ
- ಜಕ್ಕುಗೊಳ್ – ಚಿವುಲು ಉಗುರಗುರುತು ಹೊಂದು
- ಜಕ್ಕುಲಿ(ಳಿ)ಸು – ಮೋಹಗೊಳಿಸು; ಆವರಿಸು; ವ್ಯಾಪಿಸು; ಕಚಗುಳಿಯಿಡು
- ಜಗ – ಜಗತ್ತು
- ಜಗಚ್ಚಕ್ರ – ಭೂಮಂಡಲ
- ಜಗಜ್ಜನ – ಜಗತ್ತಿನ ಜನ
- ಜಗಜ್ಜನಕ – ಲೋಕದ ತಂದೆ
- ಜಗಜ್ಜಯ – ಲೋಕವನ್ನು ಗೆಲ್ಲುವುದು
- ಜಗಜ್ಜೀವನ – ಜಗತ್ತನ್ನು ಬದುಕಿಸುವ
- ಜಗಜ್ಜೈತ್ರ – ಜಗತ್ತನ್ನು ಗೆಲ್ಲುವ
- ಜಗತಿ – ಜಗಲಿ
- ಜಗತೀತಲ – ಭೂಮಿತಳ
- ಜಗತೀಧರ – ಬೆಟ್ಟ
- ಜಗತೀನಾಥ – ರಾಜ
- ಜಗತೀಪಾಲ – ರಾಜ
- ಜಗತ್ತ್ರಯ – ಮೂರು ಲೋಕಗಳು: ಸ್ವರ್ಗ, ಮರ್ತೈ, ಪಾತಾಳ
- ಜಗತ್ತ್ರಿತಯ – ಜಗತ್ತ್ರಯ
- ಜಗತ್ಪತಿ – ಜಗತ್ತಿನ ಒಡೆಯ
- ಜಗತ್ಪರ್ಯಷ್ಟಿ – ಲೋಕಪೂಜೆ
- ಜಗತ್ಪ್ರಕಟ – ಜಗತ್ತಿನಲ್ಲಿ ಪ್ರಸಿದ್ಧವಾದ
- ಜಗತ್ಪ್ರತೀತ – ಜಗತ್ಪ್ರಸಿದ್ಧ
- ಜಗತ್ಪ್ರಥಿತ – ಜಗತ್ಪ್ರಕಟ
- ಜಗತ್ಪ್ರಭು – ಜಗತ್ತಿನ ಒಡೆಯ
- ಜಗತ್ಪ್ರಾಣ – ಜಗತ್ತಿಗೆ ಪಾಣಸ್ವರೂಪಿಯಾದವನು
- ಜಗತ್ಪ್ರಿಯ – ಜಗತ್ತಿಗೇ ಪ್ರಯನಾದವನು
- ಜಗತ್ಸ್ತುತ್ಯ – ಜಗತ್ತಿನ ಹೊಗಳಿಕೆಗೆ ಪಾತ್ರನಾದವನು
- ಜಗದಾಧಾರಕ – ಲೋಕಕ್ಕೆ ಆಧಾರದಂತಿರುವವನು
- ಜಗದೀಶ- ಜಗತ್ಪತಿ
- ಜಗದೇಕದೇವ – ಲೋಕದ ಒಬ್ಬನೇ ಆದ ಒಡೆಯ
- ಜಗದೇಕಬಂಧು – ಲೋಕದ ಒಬ್ಬನೇ ಆದ ಬಂಧು
- ಜಗದೇಕವೀರ – ಜಗತ್ತಿನ ಮಹಾ ಪರಾಕ್ರಮ
- ಜಗದ್ಗುರು – ಜಗತ್ತಿಗೇ ಗುರುವಾದವನು
- ಜಗದ್ಧರೆ – ಲೋಕವನ್ನು ಎತ್ತಿ ಹಿಡಿಯುವವಳು
- ಜಗದ್ಬಂಧು – ಜಗತ್ತಿನ ಬಂಧು
- ಜಗದ್ರಕ್ಷಕ – ಜಗತ್ತನ್ನೆಲ್ಲ ಕಾಪಾಡುವವನು
- ಜಗದ್ವಂದಿತ – ಜಗತ್ತನಿಂದ
- ನಮಸ್ಕರಿಸಿಕೊಳ್ಳುವವನು
- ಜಗದ್ವಳಯ – ಭೂಮಂಡಲ
- ಜಗದ್ವಿಖ್ಯಾತ – ಜಗತ್ತಿನಲ್ಲಿ ಪ್ರಸಿದ್ಧನಾದವನು
- ಜಗದ್ವಿದಿತ – ಜಗದ್ವಿಖ್ಯಾತ
- ಜಗದ್ವಿಶ್ರುತ – ಜಗದ್ವಿಖ್ಯಾತ
- ಜಗನ -ಜಘನ
- ಜಗನ್ನಾಥ – ಜಗತ್ತಿನ ಒಡೆಯ
- ಜಗನ್ನುತ – ಜಗತ್ತನ ಸ್ತುತಿಗೆ ಪಾತ್ರನಾದವನು
- ಜಗನ್ಮಂಡನ – ಜಗತ್ತಿಗೆ ಆಭರಣವಾಗಿರುವವನು
- ಜಗನ್ಮಾನ್ಯ – ಜಗತ್ತಿನಿಂದ ಮಾನ್ಯನಾದವನು
- ಜಗಲಿ – ಕಟ್ಟೆ
- ಜಗಲಿಗಟ್ಟು – ಜಗುಲಿಯನ್ನು ಕಟ್ಟು; ಜಗುಲಿಯ ಕಟ್ಟು
- ಜಗಳೆ – ಕಂಸಾಳೆ
- ಜಘನ – ನಿತಂಬ
- ಜಘಣಸ್ಥಲ – ನಿತಂಬಪ್ರದೇಶ
- ಜಘನ್ಯ – ಹಿಂಬದಿಯ; ಕೀಳಾದ
- ಜಘನ್ಯಪಾತ್ರ – (ಜೈನ)ಸ್ವೀಕಾರಕ್ಕೆ ಅರ್ಹರಾದವರಲ್ಲಿ ಕನಿಷ್ಠನಾದವನು
- ಜರ್ಝರ – ಕರ್ಕಶಧ್ವನಿ; ಮೆಲುಧ್ವನಿ
- ಜಝಾರೆ – ಕೊಂಡಾಟದ ಮಾತು
- ಜಟಧಿ – ಸಮುದ್ರ; ಮೂಢ ಬುದ್ಧಿ
- ಜಟಮಟಿಕ(ಗ) – ಮೋಸಗಾರ; ಸಡಗರಪಡು
- ಜಟಮಟಿಸು – ಮೋಸಗೊಳಿಸು; ಸಡಗರಿಸು
- ಜಟಾಜೂಟ – ಜಟೆಗಟ್ಟಿದ ಕೂದಲು
- ಜಟಿ – ಜಟೆಯನ್ನು ಹೊಂದಿರುವವನು, ಶಿವ
- ಜಟಿಕಾ – ಜಡೆ
- ಜಟಿಕಾವಳಯ – ಜಟೆಗಳ ಸಮೂಹ
- ಜಟಿಲ – ಗಂಟುಗಂಟು, ತೊಡಕು
- ಜಟಿಲಿತ – ಗಂಟುಗಂಟಾದ
- ಜಟ್ಟಿಗ – ಶೂರ
- ಜಠರ – ಗಟ್ಟಿಂಯಾದ; ಹೊಟ್ಟೆ
- ಜಠರಾಗ್ನಿ – ಜೀರ್ಣಮಾಡುವ ಅಗ್ನಿ
- ಜಠರಾನಳ – ಜಠರಾಗ್ನಿ
- ಜಡ – ಅಲಸಿ; ನೀರು
- ಜಡಗ್ರಾಹಿ – ನೀರನ್ನು ಹಿಡಿದಿಡುವವನು; ಅಲಸಿ
- ಜಡಜಂತು – ಬುದ್ಧಹೀನ ವ್ಯಕ್ತಿ
- ಜಡಜಜ – ಬ್ರಹ್ಮ; ದಡ್ಡನ ಮಗ
- ಜಡಜನ – ಅಲಸಿಗರಾದ ಜನ
- ಜಡಜಾತಜಾತ – ಬ್ರಹ್ಮ
- ಜಡತೆ – ನಿರುತ್ಸಾಹ
- ಜಡತ್ವ – ಜಡತೆ
- ಜಡಧರ – ನೀರನ್ನು ಧರಿಸಿರುವುದು, ಮೋಡ
- ಜಡಧಿ – ಸಮುದ್ರ
- ಜಡಪ್ರಕೃತಿ – ಚಟುವಟಿಕೆಯಿಲ್ಲದ ಸ್ವಭಾವ; ಆಲಸ್ಯ
- ಜಡಭಾವಿ – ನೀರಿನಿಂದ ತುಂಬಿದ; ಆಲಸ್ಯದಿಂದ ಕೂಡಿದ
- ಜಡಮತಿ – ಮಂದಬುದ್ಧಿ
- ಜಡಮೂರ್ತಿ – ಜಡಸ್ವಭಾವದ ವ್ಯಕ್ತಿ
- ಜಡರಾಶೀಂದ್ರ – ವರುಣ
- ಜಡವಾದ – ನಿರೀಶ್ವರವಾದ; ಜಗತ್ತು
- ಪಂಚಭೂತಗಳಿಂದ ಆಗಿದೆ ಎಂಬ ವಾದ
- ಜಡವಿಕೃತಿ – ನೀರಿನ ವಿಕಾರ; ಆಲಸ್ಯದ ವಿಕಾರ
- ಜಡವೃತ್ತಿ – ಜಡಸ್ವಭಾವ; ನೀರಿನಿಂದ ತುಂಬಿದ
- ಜಡಸಂಗ – ನೀರಿನ ಸಹವಾಸ; ಮೂರ್ಖರ ಸಹವಾಸ
- ಜಡಸಂಸಕ್ತಿ – ಮಂದಮತಿಗಳ ಸಹವಾಸ
- ಜಡಸ್ಥಿತಿ – ಜಡಸ್ವಭಾವ;
- ಜಡಹೃದಯ – ಮಂದಬುದ್ಧಿಯವನು
- ಜಡಾಕರ – ಸಮುದ್ರ
- ಜಡಾಕರತ್ವ – ನೀರಿಗೆ ಆಶ್ರಯವಾಗಿರುವುದು; ಮೂರ್ಖರಿಗೆ ಆಶ್ರಯ ನೀಡುವುದು
- ಜಡಾತ್ಮ – ಜಡಹೃದಯ
- ಜಡಾವಸಥ – ನೀರಿನ ಆಶ್ರಯವುಳ್ಳುದು; ಮೂರ್ಖರಿಗೆ ಆಶ್ರಯ ನೀಡಿರುವುದು
- ಜಡಾಶ(ಶ್ರ)ಯ – ಜಡಾವಸಥ
- ಜಡಿ – ಗದರಿಸು; ಹೊಡೆ; ಸೋನೆಮಳೆ
- ಜಡಿಪ – ಹಕ್ಕಿಗಳ ಕೂಜನ
- ಜಡಿಪು – ಜಡಿಪ; ಝಳಪಿಸು
- ಜಡಿವಳೆ – ಸೋನೆಮಳೆ
- ಜಡೀಕೃತ – ಮಂದಗತಿಯುಳ್ಳ
- ಜಡುಲ – ಮೈಯೆಲ್ಲ ಮಚ್ಚೆಗಳುಳ್ಳವನು
- ಜಡೆ – ಜಟೆ; ಹೆರಳು; ಬಿಳಲು
- ಜಡೆಗಟ್ಟು – ಕೂದಲು ಗಂಟುಗಂಟಾಗು
- ಜಡೆಗೊಳ್ – ಜಡೆಗಟ್ಟು
- ಜಡೆಮುಡಿ – ಜಡೆಗಟ್ಟಿದ ಕೂದಲಿನ ತಲೆ
- ಜಡೆವಾಳ – ಲಾಮಂಚ
- ಜತಿ – ಯತಿ; ಪದ್ಯರಚನೆಯಲ್ಲಿನ ಉಸಿರ್ದಾಣ
- ಜತಿಗೊಡು – ಶ್ರುತಿಗೂಡು
- ಜತಿಮೆಟ್ಟು – ಲಯಾನುಸಾರಿ ಗತಿ
- ಜತು – ಅರಗು
- ಜತುಕ – ಇಂಗು; ಬಾವಲಿ
- ಜತುಗೃಹ – ಅರಗಿನ ಮನೆ
- ಜತುಗೇಹ – ಜತುಗೃಹ
- ಜತುರಸ – ಕರಗಿದ ಅರಗು
- ಜತ್ತ(ತ್ತು)ಕ – ಮೋಸ, ವಂಚನೆ
- ಜತ್ತವಟ್ಟ – ವರ್ತುಲವಾದ ಬೊಂಬೆಗಳನ್ನು ಕುಣಿಸುವ ಹಲಗೆಯ ಯಂತ್ರ
- ಜತ್ತುಳ – ನೊರೆ
- ಜನ – ಜನಗಳ ಸಮುದಾಯ
- ಜನಕ – ಹುಟ್ಟಿಸುವವನು; ತಂದೆ; ವಿದೇಹ ರಾಜ
- ಜನಜನಿತ – ಜನರಲ್ಲಿ ಹರಡಿರುವ, ಪ್ರಸಿದ್ಧವಾದ
- ಜನಾಂತ – ನಾಡು, ದೇಶ
- ಜನಾತಿಶಯ – ಜನರ ಮನಸ್ಸು
- ಜನತೆ – ಜನಸಮುದಾಯ
- ಜನನ – ಹುಟ್ಟು; ಉತ್ಪತ್ತಿಜನನಾಥ – ರಾಜ
- ಜನನೀಚರ – (ಜೈನ) ಹಿಂದಿನ ಜನ್ಮದಲ್ಲಿ ತಾಯಿಯಾಗಿದ್ದ
- ಜನನುತ – ಜನರಿಂದ ಹೊಗಳಲ್ಪಟ್ಟ
- ಜನನೋತ್ಸವ – ಮಗು ಹುಟ್ಟಿದ ಸಂಭ್ರಮ
- ಜನಪ – ರಾಜ
- ಜನಪತಿ – ರಾಜ
- ಜನಪದ – ಜನಸಮುದಾಯ; ನಾಡು
- ಜನಪಾಲ – ಜನರಕ್ಷಕ; ರಾಜ
- ಜನಪಾಲಾಗ್ರಣಿ – ರಾಜಶ್ರೇಷ್ಠ
- ಜನಪ್ರವಾದ – ಸುದ್ದಿ, ಸಮಾಚಾರ
- ಜನವಡೆ – ಜನರ ಗುಂಪು
- ಜನವಶ್ಯಚೂರ್ಣ – ಜನರನ್ನು ವಶೀಕರಣಗೊಳಿಸುವ ಪುಡಿ
- ಜನವಾದ – ಕಿಂವದಂತಿ
- ಜನಸಂಕೀರ್ಣ – ಜನಗಳ ಗುಂಪು
- ಜನಸಂಮರ್ದ – ಜನಸಮೂಹ
- ಜನಸಂಮೋಹನ – ಜನರನ್ನು ಮರುಳುಗೊಳಿಸುವ
- ಜನಾಂತ – ನಿರ್ಜನಸ್ಥಳ; ಜನನಿಬಿಡಪ್ರಾಂತ
- ಜನಾಧಪ – ರಾಜ
- ಜನಾನಂದನ – ಜನರಿಗೆ ಸಂತೋಷ ತರುವವನು
- ಜನಾನುರಾಗ – ಜನಗಳ ಪ್ರೀತಿ
- ಜನಾಪವಾದ – ಜನರು ಹೊರೆಸುವ ಅಪವಾದ
- ಜನಾರ್ದನ – ಜನರನ್ನು ಕೊಲ್ಲುವವನು; (ಜೈನ) ವಾಸುದೇವ; ಲಕ್ಷ್ಮಣ
- ಜನಾವನ – ಜನರನ್ನು ಸಂತೋಷಪಡಿಸುವಂಥ(ದು)
- ಜನೇಶ – ರಾಜ
- ಜನೇಶ್ವರ – ರಾಜ
- ಜನೋಕ್ತಿ – ಜನರ ಮಾತುಗಳು
- ಜನ್ನ – ಯಜ್ಞ
- ಜನ್ನದಾರ – ಜನಿವಾರ
- ಜನ್ನವಿ(ವ)ರ – ಜನಿವಾರ
- ಜನ್ಮ – ಯುದ್ಧ
- ಜನ್ಮಕಲ್ಯಾಣ – (ಜೈನ) ಜಿನ ಪಂಚಕಲ್ಯಾಣಗಲಲ್ಲಿ ಒಂದು; ಜನಶಿಶು ಹುಟ್ಟಿದಾಗ ದೇವೇಂದ್ರನು ತನ್ನ ಪರಿಜನರೊಡನೆ ನಡೆಸುವ ಉತ್ಸವ
- ಜನ್ಮಕ್ಷೇತ್ರ – ಹುಟ್ಟುವ ಜಾಗ; ಯೋನಿ
- ಜನ್ಮನಾಮ – ಮಗು ಹುಟ್ಟಿದಾಗ ಇಡುವ ಹೆಸರು
- ಜನ್ಮನಿವಾಸ – ಹುಟ್ಟಿದ ಜಾಗ
- ಜನ್ಮಭವನ – ಹುಟ್ಟಿದ ಮನೆ
- ಜನ್ಮಭೀರು – ಹುಟ್ಟಿಗೆ ಹದರುವವನು
- ಜನ್ಮಭೂಮಿ – ಹುಟ್ಟಿದ ದೇಶ
- ಜನ್ಮಮಂದಿರ – ಹುಟ್ಟಿದ ಮನೆ
- ಜನ್ಮಸದನ – ಹುಟ್ಟಿದ ಮನೆ
- ಜನ್ಮಸವನ – (ಜೈನ) ಜಿನನ ಪಂಚಕಲ್ಯಾಣಗಳಲ್ಲಿ ಒಂದು; ಜಿನಶಿಶು ಹುಟ್ಟಿದ ಕೂಡಲೆ ದೇವೇಂದ್ರನು ತನ್ನ ಪರಿಜನರೊಂದಿಗೆ ಆ ಮಗುವಿಗೆ ಮಾಡುವ ಅಭಿಷೇಕ
- ಜನ್ಮಸಾಫಲ್ಯ – ಜೀವನದ ಸಾರ್ಥಕತೆ
- ಜನ್ಮಸಾರ್ಥಕ – ಜನ್ಮಸಾಫಲ್ಯ
- ಜನ್ಮಸ್ನಪನ – ಜನ್ಮಸವನ
- ಜನ್ಮಾಂತರ – ಮತ್ತೊಂದು ಹುಟ್ಟು
- ಜನ್ಮಾಂತರಜ್ಞಾನ – ಹಿಂದಿನ-ಮುಂದಿನ ಜನ್ಮಗಳ ಬಗೆಗಿನ ತಿಳಿವಳಿಕೆ
- ಜನ್ಮಾಂತರವೈರ – ಹಿಂದಿನ ಜನ್ಮದ ವೈರ
- ಜನ್ಮಾಂಧಕಿ – ಹುಟ್ಟು ಕುರುಡಿ
- ಜನ್ಮಾನುಬಂಧಿ – ಜನ್ಮಾಂತರದ ಸಂಬಂಧವುಳ್ಳವನು(ಳು)
- ಜನ್ಮಾಭಿಷವ – ಜನ್ಮಸವನ
- ಜನ್ಮಾಭಿಷವಣ – ಜನ್ಮಸವನ
- ಜನ್ಮಾಭಿಷೇಕ – ಜನ್ಮಸವನ
- ಜನ್ಮಾವನಿ – ಹುಟ್ಟಿದ ದೇಶ
- ಜನ್ಮಾವಳಿ – ಭವಾವಳಿ; ಹುಟ್ಟಿನ ಪರಂಪರೆ
- ಜನ್ಮಾವಾಸ – ಹುಟ್ಟಿದ ಮನೆ
- ಜನ್ಮಾಳಿ – ಭವಾವಳಿ
- ಜನ್ಮೋತ್ಸವ – ಮಗು ಹುಟ್ಟಿದ ಹಬ್ಬ; (ಜೈನ) ಜನ್ಮಕಲ್ಯಾಣ
- ಜನ್ಮಜನಕಮೋಹ – ತಂದೆಮಕ್ಕಳ ನಡುವಣ ಪ್ರೀತಿ
- ಜನ್ಯೆ – ಮದುವಣಗಿತ್ತಿಯ ಸೇವಕಿ
- ಜಪನ – ಜಪ
- ಜಪಾ – ದಾಸವಾಳ
- ಜಪಾಕ್ಷಿತಿಜ – ದಾಸವಾಳದ ಗಿಡ
- ಜಪಾಪ್ರಸವ – ದಾಸವಾಳದ ಹೂ
- ಜಪಾಪ್ರಸೂನ – ಜಪಾಪ್ರಸವ
- ಜಪಿಸು – ಜಪಮಾಡು
- ಜಪೋಪೇತ – ಜಪದಿಂದ ಕೂಡಿದುದು;
- ದಾಸವಾಳದ ಹೂವಿನಿಂದ ಕುಡಿದುದು
- ಜಬ್ಬುಲಿ – ದುರ್ಬಲ
- ಜಮದಾಡೆ – ಕಠಾರಿ
- ಜಮಳ – ಜೋಡಿ
- ಜಯ – ಗೆಲವು
- ಜಯಂತ – (ಜೈನ) ಹದಿನಾಲ್ಕು ವಿಮಾನಗಳಲ್ಲಿ ಒಂದು
- ಜಯಗಜ – ರಾಮನ ಯುದ್ಧದ ಆನೆ
- ಜಯದ – ಜಯಕಾರ ಮಾಡುವವನು
- ಜಯಧ್ವಜ – ಗೆಲವನ್ನು ಸೂಚಿಸುವ ಬಾವುಟ
- ಜಯಧ್ವನಿ – ಜಯಕಾರ
- ಜಯಧ್ವಾನ – ಜಯಕಾರ
- ಜಯನಶಾಲಿಕೆ – ಆಯುಧಾಗಾರ
- ಜಯನಶಾ(ಸಾ)ಲೆ – ಜಯನಶಾಲಿಕೆ
- ಜಯನಿನದ – ಜಯಧ್ವನಿ
- ಜಯಪತ್ರ – ಗೆದ್ದವನಿಗೆ ಕೊಡುವ ದಾಖಲೆಪತ್ರ
- ಜಯಪ್ರಮೋದ – ಗೆಲವಿನ ಸಂತೋಷ
- ಜಯಯಾತ್ರೆ – ಜೈತ್ರಯಾತ್ರೆ, ದಂಡಯಾತ್ರೆ
- ಜಯಲಕ್ಷ್ಮಿ – ಗೆಲವಿನ ಅಧಿದೇವತೆ
- ಜಯವಂತ – ಜಯಶಾಲಿ
- ಜಯವಾದ – ಜಯಕಾರ
- ಜಯಶಾಲಿ – ಗೆದ್ದವನು
- ಜಯಶೀಲ – ಗೆಲ್ಲುವ ಸ್ವಭಾವದವನು
- ಜಯಾವಸಥ – ವಿಜಯಕ್ಕೆ ನೆಲೆಯಾದವನು
- ಜಯಾಶೀರ್ಘೋಷ – ಜಯವಾಗಲೆಂದು ಮಾಡುವ ಆಶೀರ್ವಾದ
- ಜಯೋದ್ದಾಮ – ಗೆಲವಿನ ಘನತೆ ಪಡೆದವನು
- ಜರ – ಜ್ವರ; ಮುಪ್ಪು
- ಜರಗು – ಚಿನ್ನದ ಹುಡಿ ಬೆರೆತ ಮಣ್ಣು
- ಜರ(ಲ)ಗಂಕರ್ಚು – ಮಣ್ಣಿನಲ್ಲಿರುವ ಚಿನ್ನದ ಕಣಗಳನ್ನು ಬೇರ್ಪಡಿಸಲು ಅದನ್ನು ತೊಳೆಯುವುದು
- ಜರಚ್ಛದನ – ಜರತ್+ಛದನ, ಹಣ್ಣೆಲೆ
- ಜರಠ – ಜೀರ್ಣಗೊಂಡ
- ಜರಡು – ಕವಚ
- ಜರತ್ – ವಯಸ್ಸಾದ, ಮುದಿ
- ಜರತಿ – ಮುದುಕಿ
- ಜರತ್ಕಂಚುಕಿ – ವಯಸ್ಸಾದ ಕಂಚುಕಿ; ಮುದಿ ಹಾವು
- ಜರದ್ದ್ರುಮ – ಜರತ್+ದ್ರುಮ, ಜೀರ್ಣವಾದ ಮರ
- ಜರದ್ವಧು – ಮುದುಕಿ
- ಜರಾಯು – ಗರ್ಭಕೋಶ
- ಜರಾವಿಭೇದ – ಮುಪ್ಪಿನಿಂದ ಬದಲಾದವನು
- ಜರಾಶಿಥಿಲ – ಮುಪ್ಪಿನಿಂದ ದೇಹಸೌಷ್ಠವ ಸಡಿಲಾದ
- ಜರಿ – (ಝರೀ), ಗಿರಿನದಿ; ಕುಸಿ
- ಜರಿವೊನಲ್ – ಬೆಟ್ಟದಿಂದ ಇಳಿದು ಬರುವ ಜಲಧಾರೆ
- ಜರೆ – ಮುಪ್ಪು
- ಜರ್ಕು – ಉಗುರಿನಿಂದ ಗಾಯಮಾಡು
- ಜರ್ಜರ – ಛಿದ್ರವಾದ; ಶಿಥಿಲಗೊಂಡ
- ಜರ್ಜರಿತ – ಛಿದ್ರಗೊಂಡ, ಚುಚ್ಚಿ ಗಾಯಮಾಡುವ
- ಜರ್ಜರಿತಾಂಗ – ಛಿದ್ರಗೊಂಡ ದೇಹವುಳ್ಳವನು
- ಜರ್ಜರಿಸು – ಅಜ್ಜುಗುಜ್ಜಾಗಿಸು
- ಜರ್ವು – ಹುಬ್ಬು ಹಾರಿಸು; ಗದರಿಸು; ಹುಬ್ಬಿನ ಚಲನೆ; ಗದರಿಕೆ
- ಜಲ – ನೀರು; ಹಿಮ
- ಜಲಂಧರ – ನೀರನ್ನು ಹೊರುವವನು; ಒಬ್ಬ ರಾಕ್ಷಸ
- ಜಲಕಣಿಕೆ – ನೀರಿನ ಹನಿ
- ಜಲಕರಿ – ನೀರಾನೆ
- ಜಲಕೇಳಿ – ನೀರಾಟ
- ಜಲಕ್ಕನೆ – ಶುಚಿಯಾಗಿ; ಸ್ಪಷ್ಟವಾಗಿ; ತಟಕ್ಕನೆ
- ಜಲಕ್ರೀಡೆ – ಜಲಕೇಳಿ
- ಜಲಕ್ಲಿನ್ನ – ಒದ್ದೆಯಾದ
- ಜಲ(ಳ)ಖಾತಿಕೆ – ನೀರು ತುಂಬಿದ ಕಮದಕ
- ಜಲಗಜ – ಜಲಕರಿ
- ಜಲಚರ – ನೀರಿನಲ್ಲಿ ವಾಸಿಸುವ ಪ್ರಾಣಿ
- ಜಲಜ – ತಾವರೆ; ಶಂ; ಕಪ್ಪೆಚಿಪ್ಪು
- ಜಲಜಲಿಸು – ಜುಳುಜುಳು ಸದ್ದುಮಾಡು
- ಜಲಜಾತವಿರೋಧಿ – ಕಮಲದ ಶತ್ರು, ಚ<ದ್ರ
- ಜಲಜಾತಸಖ – ಕಮಲಮಿತ್ರ, ಸೂರ್ಯ
- ಜಲಜಿನಿ – ತಾವರೆಗಳುಳ್ಳದ್ದು, ಕೊಳ
- ಜಲ(ಳ)ದ – ಮೋಡ
- ಜಲದನಿಕಾಯ – ಸುಗಂಧದ ಹುಲ್ಲು, ಭದ್ರಮುಸ್ತೆ
- ಜಲದಮಾರ್ಗ – ಮೋಡಗಳ ದಾರಿ, ಆಕಾಶ
- ಜಲದವರ್ಣ – ಮೇಘವರ್ಣ
- ಜಲದಾಗಮ – ಮೋಡ ಬರುವ ಕಾಲ, ಮಳೆಗಾಲ
- ಜಲ(ಳ)ದಾಧ್ವ – ಜಲದಮಾರ್ಗ
- ಜಲ(ಳ)ದಾನ – ನೀರಿನ ತರ್ಪಣ
- ಜಲ(ಳ)ದಾನಕ್ರಿಯೆ – ಜಲ(ಳ)ದಾನ
- ಜಲದಾವಳಿ – ಮೋಡಗಳ ಸಮೂಹ
- ಜಲದುರ್ಗ – ನೀರಿನ ನಡುವೆ ರಚಿತವಾದ ಕೋಟೆ
- ಜಲ(ಳ)ದೇವತೆ – ನೀರಿನ ಅಭಿಮಾನಿ ದೇವತೆ
- ಜಲ(ಳ)ಧರ – ಮೋಡ
- ಜಲ(ಳ)ಧರಪಥ – ಜಲದಮಾರ್ಗ
- ಜಲ(ಳ)ಧರಮಾರ್ಗ – ಜಲ(ಳ)ಧರಪಥ
- ಜಲ(ಳಧಾರೆ – ನೀರಿನ ಧಾರೆ
- ಜಲ(ಳ)ಧಿ – ಸಮುದ್ರ
- ಜಲಧಿತಲ್ಪ – ವಿಷ್ಣು
- ಜಲಧಿಪ – ವರುಣ
- ಜಲನಿಧಿ – ಸಮುದ್ರ
- ಜಲನಿಧಿತಲ್ಪ – ಜಲಧಿತಲ್ಪ
- ಜಲನಿಲಯ – ನೀರೇ ಮನೆಯಾದವನು
- ಜಲ(ಳ)ನೀಳಿಕೆ – ಪಾಚಿ, ಹಾವಸೆ
- ಜಲಪಕ್ಷಿ – ನೀರ ಹಕ್ಕಿ
- ಜಲಪ್ರಸರ – ನೀರಿನ ವಿಸ್ತಾರ
- ಜಲಬಿಂದು – ನೀರಿನ ಹನಿ
- ಜಲಬುದ್ಬುದ – ನೀರಿನ ಗುಳ್ಳೆ
- ಜಲಭೃಚ್ಚಾಪ – ಕಾಮನಬಿಲ್ಲು
- ಜಲಭೃತ್ತು – ಮೋಡ
- ಜಲ(ಳ)ಮಂತ್ರ – ಜಲಸ್ತಂಭನ ಮಂತ್ರ
- ಜಲಮಾನುಷಿ – ಜಲಕನ್ನಿಕೆ
- ಜಲಯಂತ್ರ – ಪಿಚಕಾರಿ
- ಜಲಯಾತ್ರೆ – ಸಮುದ್ರಪ್ರಯಾಣ
- ಜಲಯುದ್ಧ – ನೀರನ್ನು ಚಿಮ್ಮುವ ಕಾಳಗ
- ಜಲರಾಶಿ – ಸಮುದ್ರ
- ಜಲರಾಶಿಪ್ರಭವೆ – ಸಮುದ್ರದಲ್ಲಿ ಹುಟ್ಟಿದವಳು, ಲಕ್ಷ್ಮಿ
- ಜಲರುಹ – ನೀರಲ್ಲಿ ಹುಟ್ಟಿದುದು, ತಾವರೆ
- ಜಲರುಹನಾಭ – ತಾವರೆಯನ್ನು ನಾಭಿಯಲ್ಲಿ ಪಡೆದವನು, ವಿಷ್ಣು
- ಜಲರುಹರಿಪು – ತಾವರೆಯ ಶತ್ರು, ಚಂದ್ರ
- ಜಲರುಹೋದರ – ಜಲರುಹನಾಭ ಜಲಲವ –
- ಜಲಲವ – ನೀರಿನ ಹನಿ
- ಜಲಲಿಪಿ – ನೀರ ಮೇಲೆ ಬರೆದದ್ದು, ನಶ್ವರ
- ಜಲವಾಹ – ಮೋಡ
- ಜಲವಿಕಳ – ನೀರು ಬತ್ತಿರುವುದು
- ಜಲವಿಹಂಗ – ನೀರು ಹಕ್ಕಿ
- ಜಲವ್ಯಾಲ(ಳ) – ನೀರುಹಾವು
- ಜಲಶಯನ – ವಿಷ್ಣು
- ಜಲಶೀಕರ – ತುಂತುರು ಹನಿ
- ಜಲ(ಳ)ಸೇಕ – ನೀರನ್ನು ಚಿಮುಕಿಸುವುದು
- ಜಲಾಂಜಲಿ(ಳಿ) – ಜಲತರ್ಪಣ
- ಜಲಾಕರ – ಕೊಳ
- ಜಲಾದ್ರ್ರ – ನೀರಲ್ಲಿ ತೊಯ್ದ
- ಜಲಾವರ್ತ – ನೀರಿನ ಸುಳಿ
- ಜಲಾಶಯ – ಕೊಳ
- ಜಲೂ(ಳೂ)ಕ – ಜಿಗಣೆ
- ಜಲೇ(ಳೇ)ಶ – ವರುಣ
- ಜಲೌಘ – ನೀರರಾಶಿ
- ಜಲ್ಪ – ಮಾತಾಡು; ಹರಟೆ
- ಜಲ್ಪಿತ – ಹೇಳಿದ; ಮಾತು
- ಜಲ್ಲನೆ – ತಟಕ್ಕನೆ
- ಜಲ್ಲಮಲ – ಮೈಕೊಳೆ
- ಜಲ್ಲಳಿ – ಜರಡಿ
- ಜಲ್ಲಿಮಿಗ – ಚಮರೀಮೃಗ
- ಜವ – ಯಮ; ವೇಗ; ಸಾಮಥ್ರ್ಯ
- ಜವಂಗಿಡಿಸು – ಶಕ್ತಿಗುಂದಿಸು
- ಜವಂಗುಂದಿಸು – ಜವಂಗಿಡಿಸು
- ಜವಂಗೆಡು – ಸಕ್ತಿಗುಂದು
- ಜವಂಜವ – ಹುಟ್ಟುಸಾವುಗಳ ಆವರ್ತನೆ, ಸಂಸಾರ
- ಜವಂಬೆ¾ು – ವೇಗಗೊಳ್ಳು
- ಜವಜವಾಗು – ದುರ್ಬಲಗೊಳ್ಳು
- ಜವನ – ವೇಗ
- ಜವನಿಕೆ – ತೆರೆ
- ಜವನಿಕೆಗಳೆ – ತೆರೆ ಸರಿಸು
- ಜವಪ್ರಸರ – ವೇಗ ಹೆಚ್ಚುವುದು
- ಜವಳಿ – ಬಟ್ಟೆ; ಜೋಡಿ
- ಜವಳಿಗಟ್ಟು – ಎರಡನ್ನು ಸೇರಿಸಿ ಕಟ್ಟು
- ಜವಳಿಗಹಳೆ- ಜೊಡಿ ಕಹಳೆ
- ಜವಳಿಗೊಡೆ – ಜೋಡಿ ಕೊಡೆ
- ಜವೆ – ಗೋಧಿ
- ಜವ್ವನ – ಜೌವನ, ಹರಯ
- ಜವ್ವನಂಬಡೆ – ಯೌವನವನ್ನು ಹೊಂದು
- ಜವ್ವನಿ – ಹರಯದವಳು
- ಜವ್ವನಿಗ – ಹರಯದವನು
- ಜವ್ವನಿಗೆ – ಜವ್ವನಿ
- ಜವ್ವನೆ – ಜವ್ವನಿ
- ಜಸ – ಯಶಸ್ಸು, ಕೀರ್ತಿ
- ಜಸಂಬಡೆ – ಕೀರ್ತೀಯನ್ನು ಪಡೆ
- ಜಹ್ನುಜಾಂಬು – ಗಂಗೆಯ ನೀರು
- ಜಹ್ನುಜೆ – ಗಂಗೆ
- ಜಳಕನಾಗು – ಪ್ರಸಿದ್ಧವಾಗು; ಪ್ರಕಟಗೊಳ್ಳು
- ಜಳಂಬ – ಝಳಂಬ, ಮೇಲ್ಮುಸುಕು
- ಜಳಕಂಬೊಗಿಸು – ಸ್ನಾನಮಾಡಿಸು
- ಜಳದಳಾಕ್ಷಿ – ಕಮಲದಳದಂತಹ ಕಣ್ಣುಳ್ಳವಳು
- ಜಳಜಭವಾಂಡ – ಬ್ರಹ್ಮಾಂಡ
- ಜಳದ – ಮೋಡ
- ಜಳದವೃಂದ – ಮೋಡಗಳ ಸಮೂಹ
- ಜಳದಾಧ್ವ – ಆಕಾಶ
- ಜಳದಾನ – ತರ್ಪಣ
- ಜಳದೆ – ನೀರಲ್ಲಿ ನೆನೆಸಿದ ಬಿಸಣಿಗೆ; ಬಾಳದ ಬೇರಿನ ಬೀಸಣಿಗೆ
- ಜಳಪಾನ – ನೀರು ಕುಡಿಯುವುದು
- ಜಳಪ್ಲವ – ಪ್ರವಾಹ
- ಜಳಮನುಷ್ಯ – ನೀರುಮನುಷ್ಯ
- ಜಳರುಹಕಾಂಡ – ತಾವರೆಯ ದಂಟು
- ಜಳರುಹಪತ್ರ – ಕಮಲದಳ
- ಜಳವಟ್ಟಿಗೆ – ಒಂದು ಆಭರಣ
- ಜಳವಾಸ – ನೀರಲ್ಲಿ ವಾಸಿಸುವುದು
- ಜಳವಾಯಸ – ನೀರ ಕಾಗೆ
- ಜಳವಿಹಗ – ನೀರುಹಕ್ಕಿ
- ಜಳವಿಹಗಿ – ಹೆಣ್ಣು ನೀರುಹಕ್ಕಿ
- ಜಳಸ್ತಂಭಮಂತ್ರ – ನೀರಲ್ಲಿದ್ದೂ ತೊಂದರೆಯಾಗದಂತೆ ತಡೆಯುವ ವಿದ್ಯೆ
- ಜಳಾವಗಾಹ – ನೀರಲ್ಲಿ ಮುಳುಗಿ ಮೀಯುವುದು
- ಜಳೂಕ – ಜಿಗಣೆ
- ಜಾಂಗಲ – ಬರಡುಭೂಮಿ; ಮಾಂಸ
- ಜಾಂಗಳಿವಿದ್ಯೆ – ವಿಷವೈದ್ಯ
- ಜಾಂಗುಲ(ಳ) – ಜಾಂಗಳಿವಿದ್ಯೆ
- ಜಾಂಡಲಕೆ – ಒಂದು ಸಸ್ಯ
- ಜಾಂಬವ – ಚಿನ್ನ; ಜಾಂಬವನಿಗೆ ಸಂಬಂಧಿಸಿದ; ಸಮುದ್ರ
- ಜಾಂಬೂನದ – ಚಿನ್ನ
- ಜಾಗ – ಮರಕತ; ಶುಭಕಾರ್ಯದಲ್ಲಿ ಅಂಕುರಾರ್ಪಣದ ಅಂಗವಾಗಿ ಪಾತ್ರೆಯಲ್ಲಿ ಬೆಳೆಯುವ ಪೈರು
- ಜಾಗರ – ಎಚ್ಚರ; ಜಾಗ; ಮೊಳೆತ ಪೈರು
- ಜಾಗರೂಕ – ಎಚ್ಚರಿಕೆಯ ಸ್ವಭಾವದ
- ಜಾಜು – (ಧಾತು) ಕೆಂಪಾದ ಕಲ್ಲು, ಕಾವಿ ಕಲ್ಲು
- ಜಾಜುವೆಟ್ಟ – ಕೆಂಪುಕಲ್ಲಿನ ಬೆಟ್ಟ
- ಜಾಜ್ವಲ್ಯಮಾನ – ಹೊಳೆಯುತ್ತಿರುವ
- ಜಾಣ್ – ಬುದ್ಧಿವಂತಿಕೆ
- ಜಾಣ – ಬುದ್ಧಿವಂತ
- ಜಾಣೆ – ಬುದ್ಧಿವಂತೆ
- ಜಾಣೊಡೆಯ – ಜಾಣ್ಗೆ ಒಡೆಯ, ಬುದ್ಧಿವಂತ
- ಜಾಣ್ಗೂಡು – ಬುದ್ದಿವಮತಿಕೆಯನ್ನು ಹೊಂದು
- ಜಾಣ್ಗೆಡು – ಬುದ್ಧಿಗೆಡು
- ಜಾಣ್ಗೊಳ್ – ಜಾಣ್ಗೂಡು
- ಜಾಣ್ಣುಡಿ – ಜಾಣತನದ ನುಡಿ
- ಜಾಣ್ಣುಡಿಕಾರ್ತಿ – ಜಾಣತನದ ಮಾತನ್ನಾಡುವವಳು
- ಜಾಣ್ತನ – ಜಾಣತನ
- ಜಾಣ್ಪಡೆ – ಜಾಣತನವನ್ನು ಹೊಂದು
- ಜಾಣ್ಬಿಡು – ದಡ್ಡತನದಿಂದ ಕೂಡು
- ಜಾಣ್ಮಾತು – ಜಾಣತನದ ಮಾತು
- ಜಾಣ್ಮೆ- ಜಾಣತನ
- ಜಾತಕರ್ಮ – ಮಗು ಹುಟ್ಟಿದಾಗ ಮಾಡುವ ಕರ್ಮ; ಷೋಡಶಸಂಸ್ಕಾರಗಳಲ್ಲಿ ಒಂದು
- ಜಾತನಿರ್ವೇದ – ವಿರಕ್ತಿ ಹೊಂದಿದವನು
- ಜಾತಪ್ರಿಯ – ದಯಾವಂತ
- ಜಾತರೂಪ – ಬೆತ್ತಲೆ; ದಿಗಂಬರ ಜೈನರ ಸನ್ಯಾಸ; ಚಿನ್ನ
- ಜಾತರೂಪಧರ – ದಿಗಂಬರ ಸನ್ಯಾಸಿ
- ಜಾತರೂಪವಿಧಿ – ದಿಗಂಬರದೀಕ್ಷೆ
- ಜಾತವೇದ – ಅಗ್ನಿ
- ಜಾತವೇದೋಜಾತೆ – ಅಗ್ನಿಯಲ್ಲಿ ಹುಟ್ಟಿದವಳು, ದ್ರೌಪದಿ
- ಜಾತಹರ್ಷ – ಸಂತೋಷ ಹೊಂದಿದವನು
- ಜಾತಿ – ಹುಟ್ಟು; ಕುಲ; ಜಾಜಿಯ ಗಿಡ
- ಜಾತಿಕ್ಷತ್ರಿಯ – ಹುಟ್ಟಿನಿಂದ ಕ್ಷತ್ರಿಯ
- ಜಾತಿಜಾಂಗಣ – ಸತ್ಕುಲಜರ ಮನೆಯ ಪರಿಸರ
- ಜಾತಿಬಧಿರ – ಹುಟ್ಟು ಕಿವುಡ
- ಜಾತಿಬೆಳ್ – ಹುಟ್ಟು ದಡ್ಡ
- ಜಾತಿಭಂಗ – ತನ್ನ ಜಾತಿಯ ನಾಶ
- ಜಾತಿಮದ – ಹುಟ್ಟಿನ ಗರ್ವ; ತನ್ನ ಜಾತಿಯ ಬಗೆಗಿನ ಗರ್ವ
- ಜಾತಿಸಂಕರ – ಜಾತಿಗಳ ಕಲಬೆರಕೆ
- ಜಾತಿಸಂಮೋಹನ – ಜಾತಿಯ ಮೇಲಿನ ಮಮತೆ
- ಜಾತಿಸ್ಮರ – ಹಿಂದಿನ ಜನ್ಮದ ನೆನಪುಳ್ಳವನು
- ಜಾತಿಸ್ಮರತೆ – ಹಿಂದಿನ ಜನ್ಮದ ನೆನಪು
- ಜಾತಿಸ್ಮರತ್ವ – ಜಾತಿಸ್ಮರತೆ
- ಜಾತಿಸ್ಮರೆ – ಹಿಂದಿನ ಜನ್ಮದ ನೆನಪುಳ್ಳವಳು
- ಜಾತೀಲತೆ – ಜಾಜಿಯ ಬಳ್ಳಿ
- ಜಾತೋತ್ಸವ – ಹುಟ್ಟುಹಬ್ಬ
- ಜಾತ್ಯಂತರ – ಬೇರೆ ಜಾತಿ
- ಜಾತ್ಯಂಧ(ಕ) – ಹುಟ್ಟುಕುರುಡ
- ಜಾತ್ಯಂಧಕಿ – ಹುಟ್ಟುಗುರುಡಿ
- ಜಾತ್ಯಂಧೆ – ಜಾತ್ಯಂಧಕಿ
- ಜಾತ್ಯಶ್ವ – ಒಳ್ಳೆ ತಳಿಯ ಕುದುರೆ
- ಜಾತ್ರೆಯೋಗು – ಪಯಣಮಾಡು
- ಜಾದಿ – (ಜಾತಿ) ಜಾಜಿ
- ಜಾದಿನ ಸೇಲೆ – ಕಾವಿಬಣ್ಣದ ಬಟ್ಟೆ
- ಜಾದು – ಕಾವಿಬಣ್ಣ; ಜಾಜು, ಗೈರಿಕ ಧಾತು
- ಜಾದುಗಲ್ – ಜಾಜು
- ಜಾನ – ಧ್ಯಾನ; ಚಿಂತನೆ
- ಜಾನಿಸು – ಧ್ಯಾನಮಾಡು
- ಜಾನು – ಮೊಣಕಾಲು
- ಜಾನುಚಂಕ್ರಮಣ – ಅಂಬೆಗಾಲಿಕ್ಕುವುದು
- ಜಾನುದಘ್ನ – ಮೊಳಕಾಲು ಮುಟ್ಟುವ
- ಜಾಮಾತೃ – ಮಗಳ ಗಂಡ
- ಜಾಮಿಸು – ಸುಡು; ಶವಸಂಸ್ಕಾರಮಾಡು
- ಜಾಯಾಜೀವ – ಹೆಂಡತಿಯ ಸಂಪಾದನೆಯನ್ನು
- ಆಧರಿಸಿರುವವನು; ನಟ
- ಜಾಯಾಜೀವಿ – ನಟ
- ಜಾಯಿಲ – ನಾಯಿ; (ಯಾಯಿನ್) ಜಾತಿ ಕುದುರೆ
- ಜಾಯೆ – ಹೆಂಡತಿ
- ಜಾರ – ಹಾದರಿಗ
- ಜಾರಜಾತ – ಜಾರನಿಂದ ಹುಟ್ಟಿದವನು
- ಜಾರನಾರಿ – ಹಾದರಗಿತ್ತಿ
- ಜಾರಸ್ತ್ರೀ – ಜಾರನಾರಿ
- ಜಾರೆ – ಜಾರನಾರಿ
- ಜಾಲ – ಬಲೆ
- ಜಾಲಕ – ಬಲೆ
- ಜಲಗಾರ್ತಿ – ಬೆಸ್ತ ಹೆಂಗಸು
- ಜಾವ – (ಯಾಮ) ಮೂರು ಗಂಟೆಯ ಅವಧಿ; ಪ್ರಹರ
- ಜಾವಜ್ಜೀವ – ಜೀವವಿರುವವರೆಗೆ
- ಜಾವಮಿ(ವಿ)ರ್ – ಕಾವಲಾಗಿರು
- ಜಾವಳ – ಸಾಮಾನ್ಯ
- ಜಾಹ್ನವಿ – ಜಹ್ನುಋಷಿಯ ಮಗಳು; ಗಂಗೆ
- ಜಾಹ್ನವೀಧರ – ಜಾಹ್ನವಿಯನ್ನು ಧರಿಸಿದವನು, ಶಿವ
- ಜಾಲತಿಯೋಗು – ಜರ್ಜರಿತಗೊಳ್ಳು
- ಜಾಳಮಾರ್ಗ – ಕಿಟಕಿ
- ಜಾಳರಂಬೋಗು – ಜರ್ಜರಿತಗೊಳ್ಳು
- ಜಾಳರಿಗೆ – ಜಾಲರಿಯಿರುವ ಕಿಟಕಿ
- ಜಾಳರಿಗೆಪೋಗು – ಜಾಳರಂಬೋಗು
- ಜಾಳಾಂಧರ – ಜಾಳಿಗೆ
- ಜಾಳಿಸು – ಹೋಗು
- ಜಿಂಕರ – ಒಂದು ಬಗೆಯ ವಾದ್ಯ
- ಜಿಂಕುವರಿ – (ನೊಣಗಳು) ಗುಂಯ್ಗುಟ್ಟು
- ಜಿಂಜಿ – ಒಂದು ಅನುಕರಣ ಶಬ್ದ
- ಜಿಗಿಲ್ – ಅಂಟಿಕೊಳ್ಳು
- ಜಿಗೀಷು – ಜಯದ ಅಪೇಕ್ಷೆಯುಳ್ಳವನು
- ಜಿಘಾಂಸು – ಕೊಲ್ಲುವ ಇಚ್ಛೆಯುಳ್ಳವನು, ವೈರಿ
- ಜಿತಕಾಮ – ಕಾಮವನ್ನು ಗೆದ್ದವನು, ಶಿವ; ಅರ್ಹಂತ
- ಜಿತತ್ರಿತಾಪ – ಅಧಿದೈವಿಕ, ಅಧಿಭೌತಿಕ, ಅಧ್ಯಾತ್ಮಿಕ ಎಂಬ ಮೂರು ತಾಪಗಳನ್ನು ಗೆದ್ದವನು
- ಜಿತಶತ್ರು – ಶತ್ರುಗಳನ್ನು ಗೆದ್ದವನು
- ಜಿತಸ್ಮಯ – ಅರಿಷಡ್ವರ್ಗವನ್ನು ಗೆದ್ದವನು
- ಜಿತಾಂತಕ – ಯಮನನ್ನು ಗೆದ್ದವನು, ಶಿವ
- ಜಿತಾಕ್ಷರ – ಮೋಕ್ಷವನ್ನು ಗೆದ್ದವನು
- ಜಿತಾತ್ಮ – ಮನಸ್ಸನ್ನು ಗೆದ್ದವನು
- ಜಿತೇಂದ್ರಿಯತ್ವ – ಇಂದ್ರಿಯ ನಿಗ್ರಹ
- ಜಿತ್ವರ – ಜಯಶಾಲಿ
- ಜಿನ – ಗೆದ್ದವನು; ಸ್ಥಿರವಾದ; ಅರ್ಹಂತ; ಬುದ್ಧ
- ಜಿನಗೃಹ – ಬಸದಿ
- ಜಿನಗೇಹ – ಜಿನಗೃಹ
- ಜಿನಚರಿತ – ತೀರ್ಥಂಕರನ ಕತೆ
- ಜಿನಚೈತ್ಯ – ಜಿನಗೃಹ
- ಜಿನದೀಕ್ಷಿತ – ಜಿನದೀಕ್ಷೆ ಪಡೆದವನು
- ಜಿನದೀಕ್ಷೆ – ಜೈನ ಸನ್ಯಾಸದೀಕ್ಷೆ
- ಜಿನಧರ್ಮ – ಜೈನಧರ್ಮ
- ಜಿನನಾಥ – ತೀರ್ಥಂಕರ
- ಜಿನನಿಕೇತ – ಜಿನಗೃಹ
- ಜಿನನುತಿ – ಜಿನನ ಸ್ತುತಿ
- ಜಿನಪ(ತಿ) – ಜಿನನಾಥ
- ಜಿನಪ್ರತಿಮೆ – ಜಿನವಿಗ್ರಹ
- ಜಿನಬಿಂಬ – ಜಿನಪ್ರತಿಮೆ
- ಜಿನಭವನ – ಜಿನಗೃಹ
- ಜಿನಮಂದಿರ – ಜಿನಗೃಹ
- ಜಿನಮತ – ಜೈನಮತ
- ಜಿನಮತಾರುಚಿ – ಜಿನಮತ+ಅರುಚಿ, ಜಿನಮತದ್ವೇಷ
- ಜಿನಮಹಾಕಲ್ಯಾಣ – ತೀರ್ಥಂಕರನಿಗೆ ಮಾಡುವ ಪಂಚಕಲ್ಯಾಣಗಳು
- ಜಿನಮಾರ್ಗ – ಜಿನಮತ
- ಜಿನಮುದ್ರೆ – ಜಿನನ ರೂಪ
- ಜಿನಮುನಿ – ಜೈನಸನ್ಯಾಸಿ
- ಜಿನಯತಿ – ಜಿನಮುನಿ
- ಜಿನರಾತ್ರಿ – ಆದಿ ತೀರ್ಥಂಕರನು ಮೋಕ್ಷ ಪಡೆದ ರಾತ್ರಿ
- ಜಿನರೂಪ – (ಜೈನ) ಐವತ್ತಮೂರು ಗರ್ಭಾನ್ವಯಕ್ರಿಯೆಗಳಲ್ಲಿ ಒಂದು
- ಜಿನವರ್ತನ – ಜೈನಮಾರ್ಗಾನುಸರಣೆ
- ಜಿನವೃಂದಾರಕ – ತೀರ್ಥಂಕರ
- ಜಿನಶಾಸನ – ಜೈನಸಿದ್ಧಾಂತ
- ಜಿನಸಪರ್ಯೆ – ಜಿನಪೂಜೆ
- ಜಿನಸಮಯ – ಜೈನಧರ್ಮ
- ಜಿನಸಮಯಿ – ಜೈನಮತದವನು
- ಜಿನಸವನ – ಜಿನನ ಅಭಿಷೇಕ
- ಜಿನಾಂಬಿಕೆ – ತೀರ್ಥಂಕರನ ತಾಯಿ
- ಜಿನಾಗಮ – ಜಿನಸಮಯ
- ಜಿನಾಗಾರ – ಜಿನಗೃಹ
- ಜಿನಾಭಿಷವಣ – ಜಿನಸವನ
- ಜಿನಾರ್ಭಕ – ಜಿನಶಿಶು
- ಜಿನಾಲಯ – ಜಿನಗೃಹ
- ಜಿನಾವಸಥ – ಜಿನಗೃಹ
- ಜಿನಾವಾಸ – ಜಿನಗೃಹ
- ಜಿನಿಗಿಸು – ನಿಶ್ಚೇಷ್ಟಗೊಳಿಸು
- ಜಿನುಂಗು – ತೊಟ್ಟಿಡು
- ಜಿನೇಂದ್ರ – ತೀರ್ಥಂಕರ
- ಜಿನ್ನ – ಜೀರ್ಣ
- ಜಿವುಳಿ – ಚಿಗುಳಿ
- ಜಿಷ್ಣು – ಗೆದ್ದವನು; ದೇವೇಂದ್ರ
- ಜಿಷ್ಣುಚಾಪ – ಇಂದ್ರಧನುಸ್ಸು; ಕಾಮನ ಬಿಲ್ಲು
- ಜಿಹಣತನ – ಗಾಯನ, ಹಾಡುಗಾರಿಕೆ
- ಜಿಹ್ಮ – ವಕ್ರ
- ಜಿಹ್ಮಗಪತಿ – ಹಾವು; ಆದಿಶೇಷ
- ಜೀಂಕರಿಸು – ಹೊಗಳು, ಕೊಂಡಾಡು
- ಜೀಮೂತ – ಮೋಡ
- ಜೀಮಾತಪಥ – ಆಕಾಶ
- ಜೀಯ – ಒಡೆಯ
- ಜೀರ(ರಿ)ಗೆಯೊಕ್ಕಲ್ – ಜೀರಿಗೆಕಾಳನ್ನು ಗಿಡದಿಂದ ಬೇರ್ಪಡಿಸುವುದು
- ಜೀರಗೆಯೊಕ್ಕಲ್ಮಾಡು – ಸದೆಬಡಿ
- ಜೀರ್ಗರೆ – ಜೀರ್ ಎಂದು ಸದ್ದುಮಾಡು
- ಜೀರಿಗೆಬೆಲ್ಲ – ಮದುವೆಯಲ್ಲಿ ಗಂಡುಹೆಣ್ಣುಗಳು ಪರಸ್ಪರರ ತಲೆಯ ಮೇಲೆ ಜೀರಿಗೆ ಮತ್ತು ಬೆಲ್ಲ ಹಾಕುವ ಶಾಸ್ತ್ರ
- ಜೀರ್ಣ – ಜರ್ಜರಿತಗೊಂಡ
- ಜೀರ್ಣಚ್ಛದ – ಹಣ್ಣೆಲೆ
- ಜೀರ್ಣೀಸು – ಕೊಲೆ; ಅರಗಿಸು
- ಜೀವ – ಜೀವವಿರುವುದು, ಜಂತು
- ಜೀವಂಗಿಡಿಸು – ಸಾಮಥ್ರ್ಯಗುಂದುವಂತೆ ಮಾಡು
- ಜೀವಂಜೀವ(ಕ) – ಪಾರಿವಾಳ
- ಜೀವಂಬಡೆ – ಚೇತರಿಕೆಯನ್ನು ಹೊಂದು
- ಜೀವಂಬೊಯ್ – ಚೇತರಿಕೆಯನ್ನು ತುಂಬು
- ಜೀವಹ – ಜೈನಸನ್ಯಾಸಿ
- ಜೀವಘಾತ – ಜೀವ ತೆಗೆಯುವುದು
- ಜೀವತತ್ತ್ವ- (ಜೈನ) ಏಳು ತತ್ವಗಳಲಿ ಮೊದಲನೆಯದು
- ಜೀವತ್ರಾಣ – ಜೀವಿಗಳನ್ನು ಕಾಪಾಡುವ(ವನು)
- ಜೀವದಯಾಷ್ಟಮಿ – (ಜೈನ) ಒಂದು ವ್ರತ; ಆಶ್ವಯುಜ ಶುಕ್ಲ ಅಷ್ಟಮಿಯ ದಿನ ಮಾಡುವ ವ್ರತ
- ಜೀವದಯೆ – ಎಲ್ಲ ಜೀವಿಗಳ ಬಗ್ಗೆ ತೋರುವ ಕರುಣೆ
- ಜೀವಧನ – ಪಶುಸಂಪತ್ತು
- ಜೀವನ – ಬದುಕು; ನೀರು
- ಜೀವನಧಿ – ಜೀವನ+ಧಿ, ಸಮುದ್ರ
- ಜೀವನಾರ್ಥ – ಬಾಳು
- ಜೀವನಿವಹ – ಜೀವಿಗಳ ಸಮೂಹ
- ಜೀವನೃತ(ಕ) – ಜೀವಿಸಿದ್ದರೂ ಸತ್ತಂತಿರುವವನು
- ಜೀವಪದಾರ್ಥ – (ಜೈನ) ಒಂಬತ್ತು
- ಪದಾರ್ಥಗಳಲ್ಲಿ ಮೊದಲನೆಯದು; ಜೀವ ಎಂಬ ತತ್ವ
- ಜೀವರಕ್ಕೆ – ಕವಚ
- ಜೀವರತ್ನ – (ಜೈನ) ಚಕ್ರವರ್ತಿಗೆ ದೊರೆಯುವ ಏಳು ರತ್ನಗಳು: ಚಕ್ರ, ರಥ, ಸ್ತ್ರೀ, ನಿಧಿ, ರತ್ನಗಳು, ಅಶ್ವ, ಗಜ; ಮತ್ತೊಂದು ಪಟ್ಟಿ: ಚಕ್ರ, ಹಸ್ತಿ, ಅಶ್ವ, ಮಣಿ, ಸ್ತ್ರೀ, ಗೃಹಪತಿ, ಪರಿನಾಯಕ; ಮತ್ತೂ ಒಂದು ಪಟ್ಟಿ: ಸೇನಾಪತಿ, ಸ್ಥಪತಿ,ಗೃಹಪತಿ, ಪುರೋಹಿತ, ಗಜ, ವಾಜಿ, ಸ್ತ್ರೀ
- ಜೀವವಧೆ – ಕೊಲ್ಲುವುದು
- ಜೀವಸಂಭಾವನೆ – ಜೀವದ ಪರಿಕಲ್ಪನೆ
- ಜೀವಸಿದ್ಧಿ – (ಜೈನ) ಜೀವನ ಅಸ್ತಿತ್ವವನ್ನು ಸಾಧಾರವಾಗಿ ಪ್ರತಿಪಾದಿಸುವುದು
- ಜೀವಹತಿ – ಜೀವವಧೆ
- ಜೀವಾಕರ್ಷಣ – ಜೀವವನ್ನು ಸೆಳೆಯುವುದು
- ಜೀವಾತು – ಪ್ರಾಣ ಉಳಿಸುವ ಔಷಧಿ, ಸಂಜೀವನಿ
- ಜೀವಾಸ್ತಿಕಾಯ – ಪಂಚಾಸ್ತಿಕಾಯಗಳಲ್ಲಿ ಒಂದು
- ಜೀವಿತ – ವೃತ್ತಿ, ಸಂಬಳ
- ಜೀವಿತಂಬಡೆ – ಸಂಬಳ ಪಡೆ
- ಜೀವಿತಾತ್ಯಯ – ಜೀವ ಬಿಡುವುದು
- ಜೀವಿತಾಶಯ – ಸಮುದ್ರ
- ಜೀವಿತೇಶ – ಜೀವನದ ಒಡೆಯ
- ಜೀವಿತೇಶ್ವರ – ಜೀವಿತೇಶ
- ಜೀವಿಸು – ಬದುಕು
- ಜೀವಿಸುಹ – ಬದುಕುವಿಕೆ
- ಜೀವೆ – ಬದುಕು
- ಜುಂಕ – ಒಂದು ಬಗೆಯ ವಾದ್ಯ
- ಜುಗುಮ – ಜೋಡಿ
- ಜುದ್ದ – ಯುದ್ಧ
- ಜೂಂಟ – ಮೋಸಗಾರ
- ಜೂಗ – ಒಂದು ಬಗೆಯ ನಾಯಿ
- ಜೂಗಾಯಿ – ಒಂದು ಬಗೆಯ ತಿಂಡಿ
- ಜೂಟ – ಜಡೆಗಟ್ಟಿದ ಕೂದಲು
- ಜೂಟಬಂಧ – ಜಡೆಗಳ ಕಟ್ಟು
- ಜೂದಾಡು – ಜೂಜಾಡು
- ಜೂದು – (ದ್ಯೂತ) ಜೂಜು
- ಜೂಬುಮಾಡು – ಹೆದರಿಸು
- ಜೂಳಿಗಿಂಡಿ – ಸೊಂಡಿಲಾಕಾರದ ನಳಿಗೆಯುಳ್ಳ ಗಿಂಡಿ
- ಜೂಳೆಯ – ಮುತ್ತಿನ ಬೈತಲೆ ಆಭರಣ
- ಜೃಂಭಣ – ಆಕಳಿಕೆ
- ಜೃಂಭಾಸ್ತ್ರ – ಒಂದು ದಿವ್ಯಾಸ್ತ್ರ
- ಜೃಂಭಿತ – ಜೃಂಭಣ
- ಜೃಂಭಿನಿ – ಬೇಕಾದಾಗ ಕಾಣಿಸಿಕೊಳ್ಳುವ, ಕಣ್ಮರೆಯಾಗುವ ಒಂದು ಚೋರ ವಿದ್ಯೆ
- ಜೆಟ್ಟೆ – ಜ್ಯೇಷ್ಟೆ
- ಜೆಟ್ಟಿಗ – ಬಲಶಾಲಿ
- ಜೇಂಕರಿಸು – ಪ್ರಶಂಸೆಮಾಡು
- ಜೇಡ – ನೇಕಾರ; ಜೇಡನ ಹುಳು
- ಜೇನ್ – ಜೇನುತುಪ್ಪ, ಹುಳು
- ಜೇನಿಡು – ಜೇನುಗಳು ಗೂಡು ಕಟ್ಟು
- ಜೇನುತುಪ್ಪ – ಜೇನುಗೂಡಲ್ಲಿ ಜೇನುಹುಳುಗಳು ಕೂಡಿಡುವ ಹೂವಿನ ಮಕರಂದ
- ಜೇನುಪು(ವು)ಟ್ಟಿ – ಜೇನುಗೂಡು
- ಜೇನೆಯ್ – ಜೇನುತುಪ್ಪ
- ಜೇನ್ವಳೆ – ಜೇನಿನ ಮಳೆ
- ಜೇವಣ – ಊಟ
- ಜೇವಣಶಾ(ಸಾ)ಲೆ – ಊಟದ ಮನೆ
- ಜೇವೆ – ತಂಬೂರಿಯ ಜೀವಾಳ
- ಜೇವೊ(ವ)ಡೆ – ಬಿಲ್ಲಿನ ಠೇಂಕಾರ ಮಾಡು
- ಜೇವೊಡೆಗೆಯ್ – ಜೇವೊಡೆ
- ಜೇವೊಡೆವೊಯ್ – ಜೇವೊಡೆ
- ಜೈತ್ರ – ಜಯವನ್ನು ಪಡೆದ
- ಜೈತ್ರಧ್ವಜ – ಗೆಲವಿನ ಸಂಕೇತವಾದ ಬಾವುಟ
- ಜೈತ್ರಯಾತ್ರೆ – ದಿಗ್ವಿಜಯಯಾತ್ರೆ
- ಜೈತ್ರಾಸ್ತ್ರ – ಗೆಲವನ್ನು ಸಾಧಿಸುವ ಅಸ್ತ್ರ
- ಜೈನ – ಜಿನನಿಗೆ ಸಂಬಂಧಿಸಿದ; ಜನಿಮತಾನುಯಾಯಿ
- ಜೈನಗೃಹ – ಬಸದಿ
- ಜೈನಗೇಹ – ಜೈನಗೃಹ
- ಜೈನಜನ – ಜೈನಮತಾವಲಂಬಿಗಳು
- ಜೈನತನ – ಜಿನಮತಾನುಸರಣೆ
- ಜೈನದೀಕ್ಷಿತ – ಜೈನದೀಕ್ಷೆ ಪಡೆದವನು
- ಜೈನಬಿಂಬ – ಜಿನನ ಮೂರ್ತಿ
- ಜೈನಶಾಸನ – ಜಿನಶಾಸನ
- ಜೈನಸಮಯ – ಜೈನಮತ
- ಜೈನಸ್ತವ – ಜಿನಸ್ತುತಿ
- ಜೈನಾಗಮ – ಜೈನ ಸಿದ್ಧಾಂತ
- ಜೈನಾಗಮವಿದ – ಜೈನಸಿದ್ಧಾಂತದಲ್ಲಿ ಪರಿಣತ
- ಜೈನಾಲಯ – ಬಸದಿ
- ಜೈನೋಕ್ತಿ – ಜಿನನ ನುಡಿ
- ಜೈವಾತೃಕ – ದೀರ್ಘಾಯುಷಿ; ಚಂದ್ರ
- ಜೊಂಗುಳಿ – ಮೂರ್ಛೆ
- ಜೊಂಡೆಗರ್ಬು – ರಸಭರಿತ ಕಬ್ಬು
- ಜೊಂಡೇಳ್ – ಮುದ್ದೆಯಾಗು
- ಜೊಂಪ – ಗೊಂಚಲು
- ಜೊಂಪಿಸು – ತೂಕಡಿಸು
- ಜೊತ್ತು – ರಾಶಿ
- ಜೊತ್ತಿಸು – ಮರುಳು ಮಾಡು
- ಜೊನ್ನ – (ಜ್ಯೋತ್ಸ್ನಾ) ಬೆಳುದಿಂಗಳು
- ಜೊನ್ನಪಾಡಿವ – ಶುಕ್ಲಪಕ್ಷದ ಪಾಡ್ಯಮಿ
- ಜೊನ್ನವಕ್ಕಿ – ಬೆಳುದಿಂಗಳನ್ನು ಕುಡಿಯುವ ಹಕ್ಕಿ, ಚಕೋರ
- ಜೊಮ್ಮನೆ – ಬಳಲಿಕೆಯಿಂದ
- ಜೊಮ್ಮನೆವೋಗು – ಆಯಾಸದಿಂದ ಮೈಮರೆ
- ಜೋಗ – (ಯೋಗ) ತಪಸ್ಸು; ದೋಣಿ; ಒಂದು ಬಗೆಯ ವಸ್ತ್ರ
- ಜೋಗ(ಗು) – (ಯೋಗ) ಧ್ಯಾನ; ಒಂದು ಬಗೆಯ ಬಟ್ಟೆ
- ಜೋಗಂಬೋಗು – ಮೈಮರೆ
- ಜೋಗವಟ್ಟಿಗೆ – (ಯೋಗಪಟ್ಟಿಕಾ) ಯೋಗಿಯು ಸುತ್ತಿಕೊಳ್ಳುವ ಬಟ್ಟೆ
- ಜೋಗವಾವುಗೆ – ಜೋಗಿಯ ಹಾವುಗೆ
- ಜೋಗಿ – (ಯೋಗಿ) ತಪಸ್ವಿ
- ಜೋಗಿಣಿ – (ಯೋಗಿನಿ) – ತಪಸ್ವಿನಿ-
- ಜೋಗಂಗೊಳ್ – ತಪಸ್ಸು ಮಾಡು
- ಜೋಗುಳ – ಲಾಲಿ ಹಾಡು
- ಜೋಗುಳಂಬಡು – ಜೋಗುಳ ಹಾಡು
- ಜೋಗೆತ್ತು – ಜವುಗಾಗು, ನೀರಿನಿಂದ ತುಂಬು
- ಜೋಡ – ಹಾದರಿಗ
- ಜೋಡಾಗು – ಜೊತೆಯಾಗು
- ಜೋಡಾಡು – ಹಾದರಮಾಡು
- ಜೋಡು – ಜೊತೆ; ಸಮಾನ; ಅಂಗರಕ್ಷೆ
- ಜೋಡುವಕ್ಕಿ – ಚಕ್ರವಾಕ
- ಜೋಡೆ – ಹಾದರಗಿತ್ತಿ
- ಜೋಡೆಗೆಯ್ತ – ಹಾದರ
- ಜೋತಿಷ್ಕ – (ಜೈನ) ಭವನವಾಸಿ, ವ್ಯಂತರ, ಜೋತಿಷ್ಕ, ಕಲ್ಪವಾಸಿಗಳೆಂಬ ನಾಲ್ಕು ಬಗೆಯ ದೇವತೆಗಳಲ್ಲಿ ಒಂದು ಗುಂಪು; ಜ್ಯೋತಿಷ್ಯಲೋಕದಲ್ಲಿನ ಸೂರ್ಯಚಂದ್ರ ಮೊದಲಾದ ದೇವತೆಗಳು
- ಜೋದ – (ಯೋಧ) ಸೈನಿಕ; ಮಾವತಿಗ
- ಜೋನೆಗವಳಿ – ಯವನರಿಂದ ತಯಾರಾದ ಬಟ್ಟೆ
- ಜೋಯಿಸ – ಜ್ಯೋತಿಷ್ಯ, ಜ್ಯೋತಿಷಿ
- ಜೋಯಿಸಿಗ – ಜ್ಯೋತಿಷಿ
- ಜೋಲ್ – ಜೋತುಬೀಳು
- ಜೋಹ – ಚೋಹ, ವೇಷ; ನಟ
- ಜೋಳ – ಒಂದು ಬಗೆಯ ಧಾನ್ಯ, ಅನ್ನದ ಋಣ
- ಜೋಳಕ್ಕೆ ತಪ್ಪು – ಅನ್ನದ ಋಣ ತೀರಿಸದಿರು
- ಜೋಳಿಗಟ್ಟ – ಜೊತೆಗಟ್ಟು
- ಜೋಳಿದೆಗೆ – ಜೋಡಿಮಾಡು
- ಜೋಳಿಸು – ಕೂಡಿಸು
- ಜೌ(ಜೋ)ಗು – ಸದಾ ತೇವವಾಗಿರುವ ಪ್ರದೇಶ
- ಜ್ಞಾತವ್ಯ – ತಿಳಿಯಬೇಕಾದ
- ಜ್ಞಾನ – ಅರಿವು; ಆತ್ಮಜ್ಞಾನ; (ಜೈನ) ಕುಮತಿ, ಕುಶ್ರುತ, ವಿಭಂಗ, ಮತಿ, ಶ್ರುತ, ಅವಧಿ, ಮನಃಪರ್ಯಯ ಎಂದು ಎಂಟು ಬಗೆ; ಮತಿ, ಶ್ರುತ, ಅವಧಿ, ಮನಃಪರ್ಯಯ, ಕೇವಲ ಎಂಬ ಜ್ಞಾನಗಳು
- ಜ್ಞಾನಧನ – ತಿಳಿವನ್ನೇ ಸಂಪತ್ತಾಗಿ ಉಳ್ಳವನು
- ಜ್ಞಾನಮಯ – ಜ್ಞಾನದಿಂದ ಕುಡಿರುವುದು; ಪಂಚಕೋಶಗಳಲ್ಲಿ ಒಂದು
- ಜ್ಞಾನರ್ಧಿಸಂಪನ್ನ – ಬಹುಶ್ರುತ
- ಜ್ಞಾನವೃದ್ಧ – ಜ್ಞಾನದಲ್ಲಿ ಹಿರಿಯ
- ಜ್ಞಾನಾವರಣ – (ಜೈನ) ಜ್ಞಾನಕ್ಕೆ ಪ್ರತಿಬಂಧಕವಾದ ಕರ್ಮ
- ಜ್ಞಾನಾವರಣಪಂಚಕ – (ಜೈನ) ಮತಿಞಆನ, ಶ್ರುತಿಜ್ಞಾನ, ಅವಧಿಜ್ಞಾನ, ಮನಃಪರ್ಯಾಯಜ್ಞಾನ ಮತ್ತು ಕೇವಲಜ್ಞಾನ ಎಂಬ ಐದು ಜ್ಞಾನಾವರಣಗಳು
- ಜ್ಞಾನಾವರಣೀಯ – (ಜೈನ) ಎಂಟು ಬಗೆಯ ಘಾತಿಕರ್ಮಗಳಲ್ಲಿ ಒಂದು; ಜ್ಞಾನವ್ನು ಮರೆಮಾಡುವ ಕರ್ಮ
- ಜ್ಞಾನಿ – ತಿಳಿದವನು
- ಜ್ಞಾನೋಪಯೋಗ – (ಜೈನ) ಷೋಡಶ ಭಾವನೆಗಳಲ್ಲಿ ಒಂದು
- ಜ್ಞಾಯಕ – ತಿಳಿದುಕೊಳ್ಳತಕ್ಕವನು
- ಜ್ಞೇಯ – ತಿಳಿದುಕೊಳ್ಳಬೇಕಾದ
- ಜ್ಯಾ – ಬಿಲ್ಲಿನ ಹೆದೆ; ಭೂಮಿ
- ಜ್ಯಾಕಿಣ – ಬಿಲ್ಲಿನ ಹೆದೆ ತಗುಲಿ ಆಗುವ ದಡ್ಡು
- ಜ್ಯಾಘಾತ – ಬಿಲ್ಲಿನ ಹೆದೆಯ ಪೆಟ್ಟು
- ಜ್ಯಾಪ್ರತಿಪಾಳನ – ಭೂಮಿಯ ರಕ್ಷಣೆ
- ಜ್ಯಾಮಂಡಲ – ಭೂಮಂಡಲ
- ಜ್ಯಾಯ – ಜ್ಯೇಷ್ಠ, ಅಗ್ರಜ
- ಜ್ಯಾಯಾಂಸ – ಹಿರಿಯ
- ಜ್ಯಾರವ – ಬಿಲ್ಲಿನ ಹೆದೆಯ ಠೇಂಕಾರ
- ಜ್ಯಾರವಂಗೆಯ್ – ಬಿಲಿನಿಂದ ಠೇಂಕಾರಮಡು
- ಜ್ಯಾರಾವ – ಠೇಂಕಾರ
- ಜ್ಯಾಲೇಖೆ – ಬಿಲ್ಲಿನ ಹೆದೆಯ ದಾರ
- ಜ್ಯೋತಿಃಪ್ರಭೆ – ನಕ್ಷತ್ರಗಳ ಬೆಳಕು
- ಜ್ಯೋತಿರಂಗ – (ಜೈನ) ದಶವಿಧ ಕಲ್ಪವೃಕ್ಷಗಳಲ್ಲಿ ಒಂದು; ಬೆಳಕನ್ನು ನೀಡುವ ಕಲ್ಪವೃಕ್ಷ
- ಜ್ಯೋತಿರಿಂಗಣ – ಮಿಣುಕುಹುಳು
- ಜ್ಯೋತಿರ್ಜಾನ – ಜ್ಯೋತಿಷ್ಯದ ತಿಳಿವಳಿಕೆ
- ಜ್ಯೋತಿರ್ಮಂಡಲ – ಆಕಾಶಕಾಯಗಳ ಸಮೂಹ
- ಜ್ಯೋತಿರ್ಲತೆ – ಬೆಳಕಿನ ಬಳ್ಳಿ
- ಜ್ಯೋತಿರ್ವಿಮಾನ – (ಜೈನ) ಜ್ಯೋತಿಷ್ಕದೇವತೆಗಳ ವಿಮಾನ
- ಜ್ಯೋತಿಷಿ – ಜೋಯಿಸ; (ಜೈನ) ಒಂದು ದೇವತಾವರ್ಗ
- ಜ್ಯೋತಿಷ್ಕ – (ಜೈನ) ಸೂರ್ಯ, ಚಂದ್ರ, ಗ್ರಹ, ನಕ್ಷತ್ರಗಳಲ್ಲಿರುವ ಒಂದು ದೇವತಾವರ್ಗ
- ಜ್ಯೋತಿಷ್ಕಾಮರ – ಜ್ಯೋತಿಷ್ಕ –
- ಜ್ಯೋತಿಷ್ಪ್ರಭ – ನಕ್ಷತ್ರಗಳ ಬೆಳಕನ್ನುಳ್ಳ
- ಜ್ಯೋತಿಸು – ಬೆಳಗಿಸು
- ಜ್ಯೋತ್ಸ್ನ(ತ್ಸ್ನೆ) _ ಬೆಳುದಿಂಗಳು
- ಜ್ಯೋತ್ಸ್ನಾವಿಲಾಸ – ಬೆಳುದಿಂಗಳ ವೈಭವ
- ಜ್ವರಿತ – ಜ್ವರಪೀಡಿತ
- ಜ್ವಳನಸಖ – ಬೆಂಕಿಯ ಗೆಳೆಯ, ಗಾಳಿ
- ಜ್ವಾಳಿ – ಬೆಂಕಿ
Conclusion:
ಕನ್ನಡ ಜ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.