ಕನ್ನಡ ಮ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada ma aksharada halegannadada padagalu , ಕನ್ನಡ ಮ ಅಕ್ಷರದ ಹಳೆಗನ್ನಡ ಪದಗಳು (mA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಮ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( mA halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಮ ಅಕ್ಷರ ಎಂದರೇನು?
ಮ, ಕನ್ನಡ ವರ್ಣಮಾಲೆಯ ಪ-ವರ್ಗದ ಐದನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಓಷ್ಠ್ಯ ಅನುಸಾನಿಕ ಧ್ವನಿ
ಅಶೋಕನ ಕಾಲದಲ್ಲಿ ಈ ಅಕ್ಷರ ಕನ್ನಡದ ನಾಲ್ಕು ಎಂಬ ಸಂಖ್ಯೆಯನ್ನು ಹೋಲುತ್ತಿತ್ತು. ಸಾತವಾಹನ ಕಾಲದಲ್ಲಿ ವೃತ್ತಾಕಾರ ತ್ರಿಕೋನಾಕಾರವಾಗಿ ಬದಲಾವಣೆ ಹೊಂದಿತು. ಕದಂಬರ ಕಾಲದಲ್ಲಿ ಆಯಾಕಾರವಾಗಿ ಪರಿವರ್ತಿತವಾಯಿತು.
ಗಂಗರ ಕಾಲದಲ್ಲಿ ಆಯಾಕಾರ ಹೆಚ್ಚು ಅಗಲವಾಯಿತು. ರಾಷ್ಟ್ರಕೂಟರ ಕಾಲದಲ್ಲಿ ಈ ಆಕಾರ ಕೆಳಗೆ ವಿಭಾಗವಾಗಿ ಒಂದು ಡೊಂಕಾದ ರೇಖೆ ಬಳಕೆಗೆ ಬಂತು. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಹೆಚ್ಚು ಅಭಿವೃದ್ಧಿಗೊಂಡು ಕೆಳಗಿನ ಆಯಾಕಾರ ಸ್ವಲ್ಪ ದುಂಡಾಗಿ ಪಾರ್ಶ್ವದ ರೇಖೆಯಿಂದ ಬೇರೆಯಾಯಿತು.
ಇದು ಈಗಿನ ಬರವಣಿಗೆಯ ಸ್ವರೂಪವನ್ನು ಹೆಚ್ಚು ಹೋಲುತ್ತದೆ. ಇದೇ ರೂಪ ಹೊಯ್ಸಳ, ಸೇವುಣ ಮತ್ತು ಕಳಚೂರಿ ಕಾಲಗಳಲ್ಲಿ ಮುಂದುವರಿಯಿತು. ವಿಜಯನಗರ ಕಾಲದಲ್ಲಿ ಆಯಾಕಾರದ ಒಂದು ಭಾಗ ಮೊಟಕಾಯಿತು. ಇದಕ್ಕೆ ಮೈಸೂರು ಅರಸರ ಕಾಲದಲ್ಲಿ (18ನೆಯ ಶತಮಾನದಲ್ಲಿ) ಒಂದು ಸಣ್ಣಕೊಂಡಿ ಸೇರಿ ಇದೇ ರೂಪ ಮುಂದುವರಿಯಿತು.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಮ ಅಕ್ಷರದ ಹಳೆಗನ್ನಡ ಪದಗಳು – Kannada Words
- ಮಂಗಲ(ಳ)ಂಬಾಡು – ಶುಭಕರವಾದ ಗೀತೆಯನ್ನು ಹಾಡು
- ಮಂಗಲತೊರಣ – ಶುಭಸಮಾರಂಭದಲ್ಲಿ ಕಟ್ಟುವ ತೋರಣ
- ಮಂಗಲ(ಳ)ಪಾಠಕ – ಹೊಗಳುಭಟ್ಟ
- ಮಂಗಲ(ಳ)ಪ್ರಸಾಧನ – ಶುಭಕರವಾದ ಅಲಂಕರಣ
- ಮಂಗಲಾ(ಳಾ)ನಕ – ಮಂಗಳವಾದ್ಯ
- ಮಂಗಳ – ಶುಭಕರವಾದ; ಅಂಗಾರಕ
- ಮಂಗಳಕರ – ಶುಭಕರ
- ಮಂಗಳಕಾರಣ – ಶುಭಕ್ಕೆ ಕಾರಣವಾದ(ದ್ದು)
- ಮಂಗಳಕೇತು – ಶುಭಸೂಚಕವಾದ ಧ್ವಜ
- ಮಂಗಳಕ್ರಿಯೆ – ಶುಭಕಾರ್ಯ
- ಮಂಗಳಗಾಯಕ(ಯಿಕೆ) – ಶುಭಪ್ರದ ಹಾಡುಗಳನ್ನು ಹೇಳುವವನು(ಳು)
- ಮಂಗಳಗಾಯಿನಿ – ಮಂಗಳಗಾಯಿಕೆ
- ಮಂಗಳಗೀತ(ತಿ) – ಶುಭಪ್ರದವಾದ ಗೀತೆ
- ಮಂಗಳಗುಣ – ಸದ್ಗುಣ(ವಂತ)
- ಮಂಗಳತೂರ್ಯ – ಮಂಗಳವಾದ್ಯ
- ಮಂಗಳದ್ರವ್ಯ – ಶುಭಸಮಾರಂಭದಲ್ಲಿ ಬಳಸುವ ವಸ್ತುಗಳು
- ಮಂಗಳಧಾರಿಣಿ – ಮಂಗಳದ್ರವ್ಯಗಳನ್ನು ಹಿಡಿದವಳು
- ಮಂಗಳನಿಲಯ – ಶುಭಕ್ಕೆ ನೆಲೆಯಾದವನು
- ಮಂಗಳಮಂಡನ – ಮಂಗಲ(ಳ)ಪ್ರಸಾಧನ
- ಮಂಗಳಮಜ್ಜನ – ಶುಭಸ್ನಾನ
- ಮಂಗಳವಸದನ – ಮಂಗಲ(ಳ)ಪ್ರಸಾಧನ
- ಮಂಗಳವಸದನಂಗೊಳ್ – ಶುಭಕಾರ್ಯಕ್ಕೆ ತಕ್ಕುದಾಗಿ ಅಲಂಕರಿಸಿಕೊ
- ಮಂಗಳವಿಧಿ – ಶುಭಕಾರ್ಯ
- ಮಂಗಳವೇದಿ – ಶುಬಕಾರ್ಯಕ್ಕಾಗಿ ಮಾಡಿದ ವೇದಿಕೆ
- ಮಂಗಳಶಿಖಿ – ಹೋಮದ ಬೆಂಕಿ
- ಮಂಗಳಸವನ – ಮಂಗಳಮಜ್ಜನ
- ಮಂಗಳಸಾದನ – ಮಂಗಳದ್ರವ್ಯ
- ಮಂಗಳಾಚರಣ – ಶುಭಕಾರ್ಯ
- ಮಂಗಳಾಚಾರ – ಮಂಗಳಾಚರಣ
- ಮಂಗಳಾಲಂಕಾರ – ಶುಭ ಸನ್ನಿವೇಶದ ಅಲಂಕಾರ
- ಮಂಗಳೆ – ದುರ್ಗೆ
- ಮಂಚ – ಪರ್ಯಂಕ, ಮಲಗಲು ಬಳಸುವ ಸಾಧನ
- ಮಂಚಲ್ – ಮೋಸ; ಸೆರೆ
- ಮಂಚಲಂಬಿಡಿ – ಮೋಹಗೊಳಿಸು
- ಮಂಜರಿ – ಗೊಂಚಲು
- ಮಂಜರಿಸು – ಗೊಂಚಲಾಗು
- ಮಂಜಿ – ನಾರು
- ಮಂಜಿಟಿಗೆ – ಒಂದು ಸಸ್ಯ
- ಮಂಜಿಮ – ಸೊಗಸು
- ಮಂಜೀರ(ಕ) – ಕಾಲಿನ ಒಂದು ಆಭರಣ, ಕಾಲ್ಗೆಜ್ಜೆ
- ಮಂಜೀರಿಕೆ – ಮಂಜೀರ(ಕ)
- ಮಂಜು – ಹಿಮ, ಕಾವಳ; ಇಂಪಾದ
- ಮಂಜುಘೋಷ – ಇಂಪಾದ ಧ್ವನಿ
- ಮಂಜುಘೋಷೆ – ಇಂಪಾದ ಧ್ವನಿಯುಳ್ಳವಳು, ಒಬ್ಬ ಅಪ್ಸರೆಯ ಹೆಸರು
- ಮಂಜುಲ(ಳ) – ಮೋಹಕವಾದ
- ಮಂಜುಲಾಸ್ಯ – ಮಂಜುಲ+ಆಸ್ಯ, ಚೆಲುವಾದ ಮುಖ
- ಮಂಜುವೆಟ್ಟ(ಟ್ಟು) – ಹಿಮದ ಬೆಟ್ಟ, ಕೈಲಾಸ
- ಮಂಜುಸಿಂಜಿತ – ಇಂಪಾದ ಧ್ವನಿ
- ಮಂಜೂಷ – ಪೆಟ್ಟಿಗೆ
- ಮಂಜೂಷಿಕೆ – ಮಂಜೂಷ
- ಮಂಟಪ – ದೇವತಾಮೂರ್ತಿಯಿರುವ ಕಟ್ಟಡ
- ಮಂಟ(ಟೆ)(ಠೆ)ಯ – ಮಂಟಪ
- ಮಂಡಕ(ಗೆ) – ಒಂದು ಭಕ್ಷ್ಯ
- ಮಂಡನ – ಅಲಂಕರಿಸುವುದು; ಆಭರಣ
- ಮಂಡನಾಯೋಗ – ಆನೆಯ ಮೇಲೆ
- ಅಲಂಕಾರಕ್ಕಾಗಿ ಹಾಕುವ ಜೂಲು
- ಮಂಡಪ – ಮಂಟಪ; ಓಲಗಶಾಲೆ; ಚಪ್ಪರ
- ಮಂಡಲ – ರಾಜ್ಯದ ಭಾಗ; ವೃತ್ತ; ಗುಂಪು;
- ಮಾಂತ್ರಿಕ ಗೆರೆಗಳ ವಿನ್ಯಾಸ; (ಜೈನ)
- ಪಾರಿವ್ರಾಜ್ಯದ ಇಪ್ಪತ್ತೇಳು ದ್ಯೋತಕಗಳಲ್ಲಿ ಒಂದು
- ಮಂಡಲಂಗೊಳ್ಳು – ಸುರುಳಿಯಾಗಿ ಸುತ್ತಿಕೊ; ಸುತ್ತುಹಾಕು
- ಮಂಡಲಾಗ್ರ – ತುದಿಯಲ್ಲಿ ಬಾಗಿದ ಕತ್ತಿ; ಗದಾಯುದ್ಧದಲ್ಲಿನ ಒಂದು ವರಸೆ
- ಮಂಡಲಾಧೀಶ – ಮಂಡಲದ ಒಡೆಯ, ರಾಜ
- ಮಂಡಲಿ(ಳಿ) – ಗುಂಪು
- ಮಂಡಲಿ(ಳಿ)ಕ – ಸಾಮಂತ
- ಮಂಡಲಿ(ಳಿ)ಸು – ವೃತ್ತಾಕಾರವಾಗಿ ತಿರುಗು
- ಮಂಡವ – ಬಳ್ಳಿ ಹಬ್ಬಿಸಲು ಮಾಡಿದ ಚಪ್ಪರ
- ಮಂಡವಿಗೆ -(ಮಂಟಪಿಕಾ) – ಸಣ್ಣ ಮಂಟಪ; ವಿತಾನ –
- ಮಂಡಳಿಗೊಳ್ – ಗುಂಪುಗೂಡು
- ಮಂಡೂಕ – ಕಪ್ಪೆ
- ಮಂಡೆ – ತಲೆ; ತಲೆಬುರುಡೆ
- ಮಂತ – (ಮಂಥ) ಕಡೆಗೋಲು
- ಮಂತಣ – (ಮಂತ್ರಣ) ಆಲೋಚನೆ; ಕಡೆಗೋಲು
- ಮಂತಣಮಿರ್ – ಸಮಾಲೋಚನೆ ಮಾಡು
- ಮಂತಣಸೂಲ – ಈಟಿ
- ಮಂತಣಿ – (ಮಂಥಣಿ) ಮೊಸರಿನ ಪಾತ್ರೆ
- ಮಂತು – ಮಂತ್ರಿ; ತಪ್ಪು; ಕಡೆಗೋಲು
- ಮಂತ್ರಗುಪ್ತಿ – ಸಮಾಲೋಚನೆ
- ಮಂತ್ರಜಾಪ್ಯ – ಮಂತ್ರ ಹೇಳುವುದು
- ಮಂತ್ರದೇವತೆ – ಮಂತ್ರದ ಅಭಿಮಾನಿ ದೇವತೆ
- ಮಂತ್ರವಾದ – ಇಂದ್ರಜಾಲ
- ಮಂತ್ರವಾದಿ – ಐಂದ್ರಜಾಲಿಕ
- ಮಂತ್ರವಿದ – ಮಂತ್ರವಾದಿ
- ಮಂತ್ರಶಾಲೆ – ಸಮಾಲೋಚನೆಯ ಭವನ
- ಮಂತ್ರಸಿದ್ಧ – ಮಂತ್ರಶಕ್ತಿಯನ್ನು ಕೈವಶಮಾಡಿಕೊಂಡವನು
- ಮಂತ್ರಾಕ್ಷರ – ಮಂತ್ರದಲ್ಲಿನ ಅಕ್ಷರ ಅಥವಾ ವರ್ಣ
- ಮಂತ್ರಾಗಾರ – ಮಂತ್ರಶಾಲೆ
- ಮಂತ್ರಾನುಷ್ಠಾನ – ಮಂತ್ರಪೂರ್ವಕ ಆಚರಣೆ
- ಮಂತ್ರಾಲಯ – ಮಂತ್ರಶಾಲೆ
- ಮಂತ್ರಾಳೋ(ಳೋ)ಚನೆ – ಸಮಾಲೋಚನೆ
- ಮಂತ್ರಾವಾಸ – ಮಂತ್ರಶಾಲೆ
- ಮಂತ್ರಿಮಂಡಲ – ಸಚಿವ ಸಮಿತಿ
- ಮಂತ್ರಿಸು – ರೋಗನಿವಾರಣೆಗೆ ಮಂತ್ರ ಹಾಕು
- ಮಂಥನ – ಕಡೆಯುವುದು
- ಮಂಥಾಚಲ – ಹಾಲುಗಡಲನ್ನು ಕಡೆಯಲು ಕಡೆಗೋಲಾಗಿ ಬಳಿಸಿದ ಬೆಟ್ಟ, ಮಂದರ ಪರ್ವತ
- ಮಂದಗತಿ – ನಿಧಾನವಾದ ನಡಿಗೆ
- ಮಂದಪವನ – ಮೆಲುಗಾಳಿ
- ಮಂದಭಾಗ್ಯತೆ – ದುರದೃಷ್ಟ
- ಮಂದಮ(ಮಾ)ರುತ – ಮಂದಪವನ
- ಮಂದಯಿ(ವಿ)ಸು – ಸಾಂದ್ರಗೊಳ್ಳು
- ಮಂದರ – ಮಂಥಾಚಲ; ಸ್ವರ್ಗ; ಪೂಜಾಮಂಟಪ; (ಜೈನ) ತೀರ್ಥಂಕರರ ಪಂಚಕಲ್ಯಾಣಗಳು ನಡೆಯುವ ಸ್ಥಳ, ಮೇರುಪರ್ವತಮಂದರಧರ – ವಿಷ್ಣು
- ಮಂದರಯಾನ – ಮಂದಗತಿ
- ಮಂದಸ(ಸು) – (ಮಂಜೂಷ) ಪೆಟ್ಟಿಗೆ, ಭರಣಿ
- ಮಂದಸಿಕೆ – ಮಂದಸ(ಸು)
- ಮಂದಹಾಸ – ಮಂದಸ್ಮಿತ, ಮುಗುಳುನಗೆ
- ಮಂದಾಕಿನಿ – ಗಂಗಾನದಿ
- ಮಂದಾಕಿನೀನಂದನ – ಭೀಷ್ಮ
- ಮಂದಾನಿಲ(ಳ) – ಮಂದಪವನ
- ಮಂದಾರ – ಕ್ಷೀರಸಮುದ್ರಮಥನ ಕಾಲದಲ್ಲಿ ಹುಟ್ಟಿದ ಐದು ಕಲ್ಪವೃಕ್ಷಗಳಲ್ಲಿ ಒಂದು; ಪಾರಿಜಾತ
- ಮಂದಿರ – ಮನೆ, ಆವಾಸಸ್ಥಾನ
- ಮಂದಿವಾಳತನ – ಸಾಮಾನ್ಯ ಪ್ರವೃತ್ತಿ
- ಮಂದೀಭೂತ – ಕ್ಷೀಣವಾದ
- ಮಂದುರ(ರೆ) – ಕುದುರೆ ಲಾಯ
- ಮಂದುರಿಗ – ಲಾಯದ ಅಧಿಕಾರಿ
- ಮಂದೇಹ – ರಾಕ್ಷಸ
- ಮಂದೇಹರ – ಕತ್ತಲೆ
- ಮಂದೈಸು – ದಟ್ಟವಾಗು
- ಮಂದ್ರ – ಗಂಭೀರವಾದ ಧ್ವನಿ
- ಮಕರ – ಮೊಸಳೆ; ಮೀನು
- ಮಕರಂದ – ಹೂವಿನ ಬಂಡು
- ಮಕರಕುಂಡಲ – ಕಿವಿಯ ಕಡಕು
- ಮಕರಕೇತು – ಮೀನಧ್ವಜ, ಮನ್ಮಥ
- ಮಕರತೋರಣ – ಮೀನಿನ ಆಕಾರದ ತೊರಣ
- ಮಕರಧ್ವಜ – ಮಕರಕೇತು
- ಮಕರಪತಾಕ – ಮಕರಕೇತು
- ಮಕರವ್ಯೂಹ – ಮೊಸಳೆಯಾಕಾರದ ಸೈನ್ಯವ್ಯೂಹ
- ಮಕರಾಂಕ – ಮಕರಕೇತು
- ಮಕರಿಕಾಪತ್ರ – ಅಲಂಕಾರಕ್ಕಾಗಿ ದೇಹದ ಮೇಲೆ ಬರೆದುಕೊಳ್ಳುವ ಚಿತ್ರ
- ಮಕರಿಕೆ – ಮಕರಿಕಾಪತ್ರ
- ಮಕರೇಶ – ಮೊಸಳಯನ್ನು ವಾಹನವಾಗಿ ಪಡೆದವನು, ವರುಣ
- ಮಕುಟ – ಕಿರೀಟ
- ಮಕುಟಬದ್ಧ – ಕಿರೀಟ ಧರಿಸಿದವನು, ರಾಜ
- ಮಕುಟಭಂಗ – ಕಿರೀಟವನ್ನು ಒಡೆಯುವುದು
- ಮಕುಟಮಣಿ – ಕಿರೀಟದಲ್ಲಿ ಸೇರಿಸಿದ ರತ್ನ
- ಮಕುಟಮಸಕ – ಕಿರೀಟ ಧರಿಸಿದ ತಲೆ
- ಮಕ್ಷಿ(ಕಾ) – ನೊಣ
- ಮಖ – ಯಜ್ಞ
- ಮಖಪುರುಷ – ಯಜ್ಞಪುರುಷ, ವಿಷ್ನು
- ಮಖಶೀಖಿ – ಯಜ್ಞದ ಬೆಂಕಿ
- ಮಗಂಬಡೆ – ಪುತ್ರನನ್ನು ಪಡೆ
- ಮಗಮಗಿಸು – ಪರಿಮಳ ಬೀರು
- ಮಗರಿ – ಒಂದು ವಿಧವಾದ ಬಟ್ಟೆ
- ಮಗಿಲ್ – ಪ್ರಾಕಾರ
- ಮಗ್ನ – ಮುಳುಗಿದ
- ಮಗ್ಗು – ಮ¿್ಗು, ಆರು; ಕುಗ್ಗಿಹೋಗು
- ಮಗ್ಗುಲ್ – ಬದಿ, ಪಕ್ಕ
- ಮಗ್ನತೆ – ತನ್ಮಯತೆ, ಏಕಾಗ್ರತೆ
- ಮಘವ – ಇಂದ್ರ
- ಮಚ್ಚ – ಚಿನ್ನದ ಶುದ್ಧತೆ
- ಮಚ್ಚರ – ಅಧಿಕ ಅಪೇಕ್ಷೆ; ಅಸೂಯೆ
- ಮಚ್ಚಿ – ನೊಣ
- ಮಚ್ಚು – ಅತಿ ಪರಿಚಯವಾಗು
- ಮಚ್ಛನೇತ್ರ – (ಮತ್ಸ್ಯನೇತ್ರ) ಮೀನುಗಣ್ಣು
- ಮಚ್ಚುಗೆ – ಮೆಚ್ಚಿಗೆ
- ಮಜ್ಜನ – (ಮಾರ್ಜನ) ಸ್ನಾನ
- ಮಜ್ಜನಂಬೊಗು – ಸ್ನಾನಮಾಡು
- ಮಜ್ಜನಗೃಹ – ನೀರು ಮನೆ
- ಮಜ್ಜನಜಲ – ಸ್ನಾನದ ನೀರು
- ಮಜ್ಜನಪೀಠ – ಸ್ನಾನಮಾಡುವಾಗ ಕುಳಿತುಕೊಳ್ಳುವ ಮಣೆ
- ಮಜ್ಜನವ((ಳ್ತಿ) – ಸ್ನಾನಮಾಡಿಸುವವನು(ಳು)
- ಮಜ್ಜ(ಜ್ಜೆ) – ಮೂಳೆಯ ಸಾರ
- ಮಟ್ಟ – ಸಮಪ್ರದೇಶ
- ಮಟ್ಟಂ – ಸುಮ್ಮನೆ
- ಮಟ್ಟಮಿ(ವಿ)ರ್ – ಸುಮ್ಮನಿರು
- ಮಟ್ಟಯಿಸು – ಸಮಗೊಳಿಸು
- ಮಡ – ಕಾಲಿನ ಹರಡು; ರಥದ ಚೌಕಟ್ಟು; ಮಠ
- ಮಡಂ(ದಂ)ಬ – ಗಡಿನಾಡು; ನಾಲ್ಕೂ ಕಡೆಗಳಲ್ಲಿ ಒಂದು ಯೋಜನ ದೂರ ಯಾವ ಹಳ್ಳಿಯೂ ಇರದ ಊರು; ಯನೂರು ಹಲ್ಳಿಗಳ ನಗರ
- ಮಡಕಾ(ಗಾ)ಲ್ – ಮಂಡಿಯಿಂದ ಕಣಕಾಲಿನವರೆಗಿನ ಭಾಗ
- ಮಡಗು – ಇರಿಸು; ಗೋಪ್ಯವಾಗಿಡು
- ಮಡಗಿಡು – ಜೋಪಾನವಾಗಿಡು
- ಮಡಲ್ – ಕೊಂಬೆ; ಹಬ್ಬುವುದು; ವಿಸ್ತಾರ; ಸೋಗೆ
- ಮಡಲ್ಗೊಳ್ – ವ್ಯಾಪಿಸು
- ಮಡಸನ್ನೆ – ಸವಾರಿ ಕಾಲದಲ್ಲಿ ಕುದುರೆಯನ್ನು ಹಿಮ್ಮಡಿಯಿಂದ ತಿವಿದು ಚೋದಿಸುವುದು
- ಮಡಿ – ತಿರಿ, ಕೀಳು; ಸಾಯು; ಒಗೆದ ಬಟ್ಟೆ; ರೇಷ್ಮೆ ವಸ್ತ್ರ; ಜಮೀನಿನ ಭಾಗ
- ಮಡಿಪು – ಕೊಲ್ಲು
- ಮಡಿಯಿಸು – ಮಡಿಪು
- ಮಡಿವರ್ಗ – ಒಗೆದ ಬಟ್ಟೆಗಳ ರಾಶಿ
- ಮಡಿವಳ(ಳ್ಳ) – ಅಗಸ
- ಮಡಿವಳ್ತಿ(ಳೀತಿ) – ಅಗಸಗಿತ್ತಿ
- ಮಡು – ಬಿಗಿಯಾಗಿಡು; ನದಿಯ ಆಳವಾದ ಜಾಗ; ಕೊಳ
- ಮಡುಗೊರ್ವು – ತುಂಬಿಕೊಂಡಿರುವುದು
- ಮಡುಗೊಳ್ – ತುಂಬಿಕೊಳ್ಳು
- ಮಣ್ – ಮೃತ್ತಿಕೆ; ಭೂಮಿ
- ಮಣಕು – ಕಮಟುವಾಸನೆ
- ಮಣಲ್ – ಮರಳು
- ಮಣಲ್ದಿಂಟೆ – ಮರಳ ದಿಬ್ಬ
- ಮಣಿ – ಹೆದರು; ನಮಿಸು; ರತ್ನ
- ಮಣಿ(ಣ)ಕ – ಪಡ್ಡೆ ಹಸು; ಮೊದಲ ಕರು ಹಾಕಿದ ಹಸು
- ಮಣಿಕಂಕಣ – ರತ್ನಖಚಿತ ಬಳೆ
- ಮಣಿಕುಂಡಲ – ಕಿವಿಯ ರತ್ನಖಚಿತ ಆಭರಣ
- ಮಣಕುಟ್ಟಿಮ – ರತ್ನಖಚಿತ ನೆಲಗಟ್ಟು
- ಮಣಿಕೂಟ – (ಜೈನ) ಮಾನುಷೋತ್ತರದ್ವೀಪದ ಒಂದು ಪರ್ವತ
- ಮಣಿಗಡಗ – ಮಣಿಕಂಕಣ
- ಮಣಿಗಣ – ರತ್ನಸಮೂಹ
- ಮಣಿಚೂಳಿಕೆ – ಮಣಿಗಳಿಂದ ಕೂಡಿದ ಶಿಖರ
- ಮಣಿತ – ಸುರತಧ್ವನಿ
- ಮಣಿತೋರಣ – ರತ್ನಖಚಿತ ತೋರಣ
- ಮಣಿದರ್ಪಣ – ರತ್ನಖಚಿತ ಕನ್ನಡಿ
- ಮಣಿದೀಪ – ರತ್ನಖಚಿತ ದೀಪ
- ಮಣಿನೂಪುರ – ರತ್ನಖಚಿತ ಕಾಲಂದುಗೆ
- ಮಣಿಪೀಠ – ರತ್ನಖಚಿತ ಪೀಠ
- ಮಣಿಪುತ್ರಿಕೆ – ಮಣಿಗಳಿಂದ ಅಲಂಕೃತಗೊಂಡ ಬೊಂಬೆ
- ಮಣಿಭವನ – ರತ್ನಖಚಿತವಾದ ಹಮ್ರ್ಯ
- ಮಣಿಮಕುಟ – ರತ್ನಖಚಿತ ಕಿರೀಟ
- ಮಣಿಮೇಖಲೆ(ಳೆ) – ರತ್ನಖಚಿತ ಡಾಬು
- ಮಣಿವೆಸ – ರತ್ನಗಳನ್ನು ಜೋಡಿಸುವ ಕೆಲಸ
- ಮಣಿಸರವಳಿಗೆ – ಬಟವಿ, ದುಂಡುಗವಲಿ
- ಮಣಿಶುಕ್ತಿ – ಸುಗಂಧದ್ರವ್ಯ
- ಮಣಿಹಮ್ರ್ಯ – ಮಣಿಭವನ
- ಮಣೆ – ಆಸನ, ಪೀಠ
- ಮತಂಗಜ – ಆನೆ
- ಮತಂಗಜರಿಪು – ಸಿಂಹ
- ಮತಿ – ಬುದ್ಧಿ. ಅರಿವು
- ಮತಿಗಿಡಿಸು – ತಿಳಿವು ಕೆಡಿಸು
- ಮತಿಗೆಡು – ಅರಿವಿಲ್ಲದಾಗು
- ಮತಿಜ್ಞಾನ – (ಜೈನ) ಎಂಟು ವಿಧವಾದ
- ಜ್ಞಾನಗಳಲ್ಲಿ ಒಂದು, ಮನನ
- ಮತಿವಂತ – ಬುದ್ಧಿವಂತ
- ಮತಿವಿಕಳತೆ – ಬುದ್ಧಿಹೀನತೆ
- ಮತ್ಕುಣ – ತಿಗಣೆ
- ಮತ್ತ – ಅಮಲೇರಿದ; ಕೊಬ್ಬಿದ
- ಮತ್ತಂ – ಪುನಃ; ಅಲ್ಲದೆ
- ಮತ್ತಕಾಶಿನಿ – ಮೋಹವನ್ನುಂಟುಮಾಡುವವಳು
- ಮತ್ತಕೋಕಿಲ – ಮದಿಸಿದ ಕೋಗಿಲೆ
- ಮತ್ತಮದ – ತುಂಬ ಸೊಕ್ಕಿದವನು
- ಮತ್ತವಟ್ಟಿಗೆ – (ಮಸ್ತಕಪಟ್ಟಿಕಾ), ತಲೆಗೆ ಸುತ್ತುವ ವಸ್ತ್ರ
- ಮತ್ತವಾರಣ – ಮದಿಸಿದ ಆನೆ; ಜಗಲಿ; ರಥದಲ್ಲಿ ಯೋಧನು ನಿಲ್ಲುವ ಜಾಗ; ಒರಗುದಿಂಬು
- ಮತ್ತಾಲಂಬ – ಆವರಣ
- ಮತ್ತಾಳಿ – ಮದಿಸಿದ ದುಂಬಿ
- ಮತ್ತಿಕಾ(ಗಾ)ಯ್ – ಒಂದು ಆಭರಣ
- ಮತ್ತಿನ – ಉಳಿದ; ಆನಂತರದ
- ಮತ್ತೆ – ಆನಂತರ; ಪುನಃ
- ಮತ್ತೇಭ – ಮತ್ತ+ಇಭ, ಮದ್ದಾನೆ
- ಮತ್ತೇಭವಿಕ್ರೀಡಿತ – ಮದ್ದಾನೆಯ ಆಟ; ಒಂದು ಅಕ್ಷರ ವೃತ್ತ
- ಮತ್ತೋಪಚಾರ – ಕಾಮಾತುರವನ್ನು ಇಳಿಸುವ ಕ್ರಮ
- ಮತ್ಸರ – ಹೊಟ್ಟೆ ಉರಿ, ಅಸೂಯೆ
- ಮತ್ಸರಿಸು – ಅಸೂಯೆ ಪಡು
- ಮತ್ಸ್ಯ – ಮೀನು; ಒಂದು ದೇಶ
- ಮತ್ಸ್ಯನ್ಯಾಯ – ದೊಡ್ಡ ಮೀನು ಸಣ್ಣ ಮೀನನ್ನು ನುಂಗುವ ಕ್ರಮ, ದುರ್ಬಲನನ್ನು ಪ್ರಮಲನು ಪೀಡಿಸುವುದು
- ಮತ್ಸ್ಯಾವತಾರ – ವಿಷ್ಣುವಿನ ಹತ್ತು ಅವತಾರಗಳಲ್ಲಿ ಮೊದಲನೆಯದಾದ ಮೀನಿನ ಅವತಾರ
- ಮತ್ಸ್ಯಾವಾಸ – ಮತ್ಸ್ಯದೇಶದ ರಾಜನಾದ ವಿರಾಟನ ಮನೆ
- ಮಥಿಯಿಸು – ಘಾತಿಸು; ಪೀಡಿಸು
- ಮದ – ಮದೋದಕ; ಸೊಕ್ಕು
- ಮದಕರಿ – ಮದವೇರಿದ ಆನೆ
- ಮದಗಂಧ – ಆನೆಯ ಮದೋದಕದ ವಾಸನೆ
- ಮದಗಂಧಿ – ಒಂದು ಗಿಡ
- ಮದಗಜ – ಮದಕರಿ
- ಮದಗಜಗಮನೆ – ಮದಿಸಿದ ಆನೆಯಂತೆ ನಿಧಾನವಾಗಿ ನಡೆಯುವವಳು
- ಮದಗಜಗಾಮಿನಿ – ಮದಗಜಗಮನೆ
- ಮದಜಲ(ಳ) – ಸೊಕ್ಕಿದ ಆನೆಯ ಗಂಡಸ್ಥಳದಿಂದ ಸುರಿಯುವ ನೀರು
- ಮದದೂಷಿತ – ಮದದಿಂದ ಕೆಟ್ಟವನು
- ಮದದ್ವಿಪ – ಮದಕರಿ
- ಮದನ – ಮನ್ಮಥ
- ಮದನಕೇಳಿ – ರತಿಕ್ರೀಡೆ
- ಮದನಜನಕತ್ವ-ಮನ್ಮಥನ ತಂದೆಯಾಗಿರುವಿಕೆ;ಕಾಮಾಭಿಲಾಷೆಯುಂಟುಮಾಡುವಿಕೆಮದನಜಲ – ವೀರ್ಯ; ಮನ್ಮಥದ್ರವ
- ಮದನಡಿಂಡಿಮ – ಮನ್ಮಥನ ನಗಾರಿ
- ಮದನದ್ರವ – ಮದನಜಲ
- ಮದನಪತತ್ರಿ – ಮನಥನ ಬಾಣ
- ಮದನಪತಾಕೆ – ಮನ್ಮಥನ ಬಾವುಟ
- ಮದನರಸ – ಮದನಜಲ
- ಮದನವಿಕಾರ – ಕಾಮದಿಂದಾಗಿ ಮನಸ್ಸಿನಲ್ಲಾಗುವ ವ್ಯತ್ಯಾಸ
- ಮದನಶರ – ಮದನಪತತ್ರಿ
- ಮದನಸದನ – ಮಲಗುವ ಮನೆ
- ಮದನಾಂಬು – ಮದನಜಲ
- ಮದನಾಕ್ರಾಂತ – ಮದನಬಾಧೆಗೊಳಗಾದವನು; ಬಕುಳವೃಕ್ಷ್ಗಳಿಂದ ಆವೃತವಾದುದು
- ಮದನಾತುರ(ರೆ) – ಕಾಮಾತುರ(ರೆ)
- ಮದನಾನಲ(ಳ) – ಕಾಮತಾಪ
- ಮದನಾರಾತಿ – ಕಾಮನ ಶತ್ರು, ಶಿವ; ಜಿನ
- ಮದನಾವತಾರ – ಕಾಮನ ರೂಪ
- ಮದನಾವಸ್ಥೆ – ಕಾಮತೀವ್ರತೆಯ ಸ್ಥಿತಿ
- ಮದನಾವೇಶ – ತೀವ್ರ ಕಾಮೋದ್ರೇಕ
- ಮದನಾಸ್ತ್ರ – ಕಾಮಬಾಣ
- ಮದಪಟ್ಟಿಕೆ – ಆನೆಯ ಕಪೋಲದ ಮೇಲೆ
- ಮದರಸ ಇಳಿಯುವುದರಿಂದಾದ ಗೆರೆ
- ಮದರದನಿ – ಮದಿಸಿದ ಆನೆ
- ಮದಲೇಖೆ – ಮದಪಟ್ಟಿಕೆ
- ಮದಲೋಲ -ಮತ್ತು ಬರಿಸುವಷ್ಟು ಚಂಚಲವಾದ
- ಮದವಕ್ಕಳ್ – ಮದುಮಕ್ಕಳು, ವಧೂವರರು
- ಮದವಟ್ಟೆ – ಮದಪಟ್ಟಿಕೆ
- ಮದವಟ್ಟೆದೆಗೆ – ಮಕರಿಕಾಪತ್ರ ರಚಿಸು
- ಮದ(ದು)ವಳಿ(ಣಿ)ಗ – ಮದುಮಗ, ಮದುವೆಯ ಗಂಡು
- ಮದ(ದು)ವಳಿಗೆ – ಮದುವಣಗಿತ್ತಿ
- ಮದವಾರಣ – ಮದಿಸಿದ ಆನೆ
- ಮದವಾರಿ – ಮದಜಲ
- ಮದವಿಕಾರ – ಹೆಂಡ ಕುಡಿದ ಅಮಲು
- ಮದವಿರಹಿತ – ಮದಜಲರಹಿತ ಆನೆ; ಅಹಂಕಾರವಿಲ್ಲದವನು
- ಮದವಿಹ್ವಳಿತ – ಮದದಿಂದ ಉಗ್ರವಾದ; ಅಮಲಿನಿಂದ ಕೂಡಿದ
- ಮದವೇತಂಡ – ಮದರದನಿ
- ಮದಾಂದ9ಕ) – ಅಮಲಿನಿಂದ (ಗರ್ವದಿಂದ) ಕುರುಡಾದ
- ಮದಾನೇಪಕ – ಮದರದನಿ
- ಮದಾಲಸ – ಮತ್ತಿನಿಂದ (ಗರ್ವದಿಂದ) ಜಡಗೊಂಡ
- ಮದಾವಸ್ಥೆ – ಅಮಲೇರಿದ ಸ್ಥಿತಿ
- ಮದಾಳಿ – ಸೊಕ್ಕಿದ ದುಂಬಿ
- ಮದಿರ – ಅಮಲೆರಿಸುವ
- ಮದಿರಾ – ಮದ್ಯ
- ಮದಿರಾಕ್ಷಿ – ಮಾದಕವಾದ ಕಣ್ಣುಳ್ಳವಳು
- ಮದಿರಾಪಾಂಗ – ಮಾದಕವಾದ ಕಡೆಗಣ್ಣ ನೋಟ
- ಮದಿರಾಮದ – ಮದ್ಯದ ಅಮಲು
- ಮದಿರೇಕ್ಷಣೆ – ಮಾದಕ ನೋಟವುಳ್ಳವಳು
- ಮದಿರೋನ್ಮತ್ತ – ಮದ್ಯದಿಂದ ಅಮಲೇರಿದ
- ಮದಿಲ್ – ಗೋಡೆ
- ಮದೀಯ – ನನ್ನ; ನನಗೆ ಸಂಬಂಧಪಟ್ಟ
- ಮದುವೆಗುಡು – ಮದುವೆ ಮಾಡಿಕೊಡು
- ಮದುವೆನಿಲ್ – ಮದುವೆಯಾಗು
- ಮದೆ(ದ)(ದು)ವಳ್ – ಮದುವೆಯ ಹೆಣ್ಣು
- ಮದೇಭ – ಮದಕರಿ
- ಮದೇಭಗಾಮಿನಿ – ಮದ್ದಾನೆಯಂತೆ ನಿಧಾನವಾಗಿ ನಡೆಯುವವಳು
- ಮದೋತ್ಕ – ಅಮಲೇರಿದ; ಸೊಕ್ಕಿದ
- ಮದೋದಕ – ಮದಜಲ
- ಮದೋದಯ – ಆನೆಗೆ ಮದ ಉದಿಸುವುದು; ಗರ್ವ ತಲೆರೋರುವುದು
- ಮದೋದ್ಗಂಧ – ಮದಜಲದ ಕಟು ವಾಸನೆ
- ಮದೋದ್ಧತ – ಮದ(ಗರ್ವ)ದಿಂದ ಸೊಕ್ಕಿದ
- ಮದೋನ್ಮತ್ತ – ಮದ್ಯ(ಗರ್ವ)ದಿಂದ ಅಮಲೇರಿದ
- ಮದ್ದಳೆ(ಳಿ) – ಮೃದಂಗ
- ಮದ್ದುಗುಣಿಕೆ – ದತ್ತೂರದ ಗಿಡ
- ಮದ್ಯ – ಅಮಲೇರಿಸುವ, ಹೆಂಡ
- ಮದ್ಯಾಂಗ – (ಜೈನ) ಹತ್ತು ಕಲ್ಪಕುಜಗಳಲ್ಲಿ ಒಂದು, ಮದ್ಯ ನೀಡುವಂಥದು
- ಮಧು – ವಸಂತ; ಮದ್ಯ
- ಮಧುಕ – ಹಿಪ್ಪೆ ಮರ
- ಮಧುಕರ – ದುಂಬಿ
- ಮಧುಕರಿ – ಹೆಣ್ಣು ದುಂಬಿ
- ಮಧುಕೋಶ – ಜೇನುಗೂಡು; ಮದ್ಯಪಾನ ಪಾತ್ರೆ
- ಮಧುದ್ರವ – ಮದ್ಯ
- ಮಧುಪ – ದುಂಬಿ; ಹೆಂಡಕುಡುಕ
- ಮಧುಪರ್ಕ – ಮೊಸರು, ತುಪ್ಪ ನೀರು, ಜೇನುತುಪ್ಪ ಮತ್ತು ಸಕ್ಕರೆಗಳ ಮಿಶ್ರಣ
- ಮಧುಪಿಂಗಳ – ಜೇನಿನಂತಹ ಹೊಂಗೆಂಪು ಬಣ್ಣ
- ಮಧುಪ್ರಸಂಗ – ವಸಂತ ಸಮಯ
- ಮಧುಮಥನ – ಮಧು ಎಂಬ ರಾಕ್ಷಸನನ್ನು ಕೊಂದವನು, ಕೃಷ್ಣ
- ಮಧುಮರ್ದನ – ಮಧುಮಥನ; (ಜೈನ) ವಾಸುದೇವ
- ಮಧುಮಹೋತ್ಸವ – ವಸಂತಕಾಲದ ಸಂಭ್ರಮ
- ಮಧುಮಿತ್ರ – ವಸಂತನ ಗೆಳೆಯ, ಮನ್ಮಥ
- ಮಧುರರವ – ಇಂಪಾದ ಧ್ವನಿ
- ಮಧುರರಸ – ಕಬ್ಬಿನ ರಸ
- ಮಧುರಸ – ಮದ್ಯ
- ಮಧುರಾಲಾ(ಳಾ)ಪ – ಸವಿ ಮಾತು
- ಮಧುರಿಪುಜ – ವಿಷ್ಣುವಿನ ಮಗ, ಮನ್ಮಥ
- ಮಧುರೋಕ್ತಿ – ಮಧುರಾಲಾ(ಳಾ)ಪ
- ಮಧುಲಿಟ್ – ದುಂಬಿ
- ಮಧುವಿಕಾರಿ – ಮಧುವನ್ನು ಹೀರಿ ಸೊಕ್ಕೇರಿದ
- ಮಧುವಿಹಂಗ – ದುಂಬಿ
- ಮಧುವ್ರತ – ಮಧುವಿಹಂಗ
- ಮಧುಸಂಗಮ – ವಸಂತ ಸಮಾಗಮ; ಮದ್ಯದ ಸಂಪರ್ಕ
- ಮಧುಸಖ – ಮಧುಮಿತ್ರ
- ಮಧುಸೇಕ – ಮದ್ಯಸಿಂಚನ; ದೋಹದಕ್ರಿಯೆ
- ಮಧೂದ್ಗಮ – ವಸಂತದ ಆರಂಭ
- ಮಧೂಳಿ – ಇರುವಂತಿಗೆ
- ಮಧ್ಯ – ನಡುವಣ; ಸೊಂಟ; ಮೂರು ಬಗೆಯ ಸಂಗೀತದಲ್ಲಿನ ಲಯಗಳಲ್ಲಿ ಒಂದು
- ಮಧ್ಯಂದಿನ – ನಡುಹಗಲು
- ಮಧ್ಯಮತನು – ಅತಿರೇಕಗಳಿಲ್ಲದ ಹದವಾದ ದೇಹಗಾತ್ರ
- ಮಧ್ಯಮವರ್ತಿ – ನಡುವೆ ಇರುವ
- ಮಧ್ಯಲೋಕ – ಊಧ್ರ್ವಲೋಕ ಮತ್ತು
- ಅಧೋಲೋಕಗಳ ನಡುವಣ ಭೂಲೋಕ
- ಮಧ್ಯಾಜಿರ – ನಡುವಣ ಅಂಗಳ
- ಮನಂಗಲ್ – ಮತ್ತೊಬ್ಬರ ಮನಸ್ಸನ್ನು ಅರಿತುಕೊ
- ಮನಂಲಿ – ಮಾನಸಿಕವಾಗಿ ಪರಾಕ್ರಮಿಯಾದವನು
- ಮನಂಕಿ(ಗೆ)ಡು – ಎದೆಗುಂದು
- ಮನಂಗಾಣ್ – ಸ್ಪಷ್ಟವಾಗಿ ಅರಿತುಕೊ
- ಮನಂಗಾಪು – ಮನೋನಿಗ್ರಹ
- ಮನಂಗುಂದು – ಎದೆಗುಂದು
- ಮನಂಗು(ಗೊ)ಡು – ಗಮನವಿರಿಸು
- ಮನಂಗೆಡಿಸು – ಎದೆಗುಂದಿಸು
- ಮನಂಗೆಯ್ – ನಿರ್ಧಾರಮಾಡು
- ಮನಂಗೊಳ್ – ಆಕರ್ಷಿಸು; ಮನಸ್ಸಿಗೆ ಹಿಡಿ
- ಮನಂಗೊಳಿಸು – ಆಹ್ಲಾದವುಂಟುಮಾಡು; ಒಪ್ಪಿಸು
- ಮನಂದರ್ – ಇಚ್ಛಿಸು
- ಮನಂದೆಗೆ – ಹಿಂಜರಿ
- ಮನಂಬಸು – ಇಮ್ಮನವಾಗು, ಒಡೆದ ಮನಸ್ಸು
- ಮನಂಬುಗು – ಮನಸ್ಸಿಗೆ ನಾಟು
- ಮನಂಬೊಯ್ – ಮನದಟ್ಟುಮಾಡು
- ಮನಂಮಿಗು – ಧೈರ್ಯಗುಂದು
- ಮನಃಕಂಪ – ಎದೆನಡುಕ, ಭಯ
- ಮನಃಕ್ಷತ – ಮನಸ್ಸಿನ ಮೇಲಾದ ಪೆಟ್ಟು
- ಮನಃಖೇದ – ಮನಸ್ಸಿನೊಳಗಣ ದುಃಖ
- ಮನಃಪರ್ಯಯ – (ಜೈನ) ಐದು ವಿಧವಾದ ಜ್ಞಾನಗಳಲ್ಲಿ ಒಂದು; ಇತರರ ಅಂತರಂಗವನ್ನು ತಿಳಿಯುವುದು;
- ಮನುಜತೆ – ಮನುಷ್ಯತ್ವ
- ಮನುಜಾಧೀಶ – ರಾಜ
- ಮನುಜೇಂದ್ರ – ಮನುಜಾಧೀಶ
- ಮನುವಂಶಧ್ವಜ – ಮಾನವಶ್ರೇಷ್ಠ
- ಮನುಷ್ಯಗತಿ – (ಜೈನ) ಮನುಜಗತಿ
- ಮನುಷ್ಯಜಾತಿ – ಮನುಕುಲ
- ಮನುಷ್ಯಧರ್ಮ – ಮಾನವ ನಡವಳಿಕೆ; ಕುಬೇರ
- ಮನುಷ್ಯಲೋಕ – ಭೂಲೋಕ
- ಮನೆಯಾಣ್ಮ – ಮನೆಯ ಯಜಮಾನ; ಗಂಡ
- ಮನೆದೈವ – ಕುಲದೇವರು
- ಮನೆವೆರ್ಗಡೆ – ಅರಮನೆಯ ವ್ಯವಹಾರಗಳನ್ನು
- ನೋಡಿಕೊಳ್ಳುವ ಅಧಿಕಾರಿ
- ಮನೋಗತ – ಅಭಿಪ್ರಾಯ; ಆಶಯ
- ಮರುತ್ಪತಿ – ದೇವೇಂದ್ರ
- ಮರುತ್ಪಥ – ವಾಯುಮಾರ್ಗ, ಆಕಾಶ
- ಮರುತ್ಪಾಲಕ – ಮರುತ್ಪತಿ
- ಮರುದಧ್ವಾಪಗೆ – ದೇವಗಂಗೆ
- ಮರುದಭಿಹತಿ – ಗಾಳಿಯ ಹೊಡೆತ
- ಮರುದ್ಗಿರಿ – ದೇವತೆಗಳ ಬೆಟ್ಟ, ಮೇರು
- ಮರುದ್ದಿಶೆ – ವಾಯುವಿನ ದಿಕ್ಕು, ವಾಯವ್ಯ
- ಮರುದ್ರುಮ – ಕಲ್ಪವೃಕ್ಷ
- ಮರುದ್ವರ – ದೇವೇಂದ್ರ
- ಮರುದ್ವೇಗ – ವಾಯುವೇಗ
- ಮರುನ್ನದಿ – ಮರುತ್+ನದಿ, ದೇವನದಿ
- ಮರುನ್ಮನ – ಉಸಿರಾಟದ ಗಾಳಿ
- ಮರುನ್ಮಾರ್ಗ – ಮರುತ್ಪಥ
- ಮರುಳ್ – ಮೂಢ; ಹುಚ್ಚ; ದೆವ್ವ; ಭ್ರಮೆ
- ಮರುಳ(ಳಿ) – ದಡ್ಡ(ಡ್ಡಿ); ಹುಚ್ಚ(ಚ್ಚಿ)
- ಮರುಳಾಗು – ಮೋಹಗೊಳ್ಳು; ಬುದ್ಧಿಗೇಡಿಯಾಗು
- ಮರುಳ್ಚು – ಮೋಹಗೊಳಿಸು, ಮರುಳುಗೊಳಿಸು
- ಮರುಳ್ಮಾಡು – ಮೋಹಗೊಳಿಸು
- ಮರುಳಾಟ – ತಿಳಿಗೇಡಿತನ; ಪಿಶಾಚಿಗಳ ಕಾಟ
- ಮರುಳಿಕ್ಕು – ಮಂಕುಬಡಿಸುವ ಮದ್ದನ್ನು ಉಣಿಸು
- ಮರುಳಿಸು – ಮೋಹಗೊಳಿಸು
- ಮರುಳ್ಗವಿ – ತಿಳಿಗೇಡಿಯಾದ ಕವಿ
- ಮರುಳ್ಗೊಳ್ – ಭ್ರಾಂತಿಗೊಳ್ಳು; ಸಡಗರಿಸು; ಮೈದುಂಬು
- ಮರುಳ್ತನ – ಭ್ರಮೆ; ದಡ್ಡತನ
- ಮರುಳ್ವಡೆ – ಮರುಳ್+ಪಡೆ, ದೆವ್ವಗಳ ಸಮೂಹ
- ಮರೆ – ಜಿಂಕೆ
- ಮರ್ಕಟ – ಕೋತಿ
- ಮರ್ಕಟಧ್ವಜ – ಅರ್ಜುನ
- ಮರ್ಕಟಬಂಧ – ಬಿಗಿಯಾದ ಹಿಡಿತ; ಬಿಗಿ ಕಟ್ಟು
- ಮಚ್ರ್ಚಿ – ಮಚ್ಚು, ಚಿನ್ನದ ಚೂರು
- ಮರ್ಚು – ಮಚ್ಚಿ, ನೊಣ
- ಮರ್ಣಾಳ – ತಾವರೆಯ ದೇಟು
- ಮತ್ರ್ಯಜನ್ಮ – ಮನುಷ್ಯ ಜನ್ಮ
- ಮರ್ದಳೆ – ಮದ್ದಳೆ
- ಮರ್ದಿಸು – ಕೊಲ್ಲು
- ಮರ್ದು – ಔಷಧ
- ಮರ್ಮ – ದೇಹದ ಸೂಕ್ಷ್ಮ ಭಾಗ; ರಹಸ್ಯ
- ಮರ್ಮಜ್ಞ – ಬದುಕಿನ ಸೂಕ್ಷ್ಮವನ್ನು ಬಲ್ಲವನು
- ಮರ್ಮರಪತ್ರ – ಮರಮರ ಸದ್ದುಮಾಡುವ ಎಲೆ
- ಮರ್ಮೋದ್ಘಾಟನ – ಮನಸ್ಸನ್ನು ನೋಯಿಸುವುದು
- ಮರ್ಯಾದೆ – ಎಲ್ಲೆ
- ಮರ್ವು(ರ್ಬು) – ಕತ್ತಲೆ
- ಮಲ(ಂ)ಗು – ಒರಗು; ನಿದ್ರಿಸು; ದಿಂಬು
- ಮಲಧಾರ(ರಿ) – (ಜೈನ) ಸನ್ಯಾಸಿ
- ಮಲ(ಳ)ಯ – ಕುಲಪರ್ವತಗಳಲ್ಲಿ ಒಂದು
- ಮಲ(ಳ)ಯಜ – ಶ್ರೀಗಂಧ
- ಮಲ(ಳ)ಯರುಹ – ಶ್ರೀಗಂಧದ ಮರ
- ಮಲ(ಳ)ಯಾನಿಲ(ಳ) – ಸುಗಂಧಪೂರಿತ ತಂಗಾಳಿ
- ಮಲ(ಳ)ಯೋದ್ಭವ – ಮಲ(ಳ)ಯರುಹ
- ಮಲರ್ – ಅರಳು, ವಿಕಸಿಸು; ಹೂ; ಮುಖ ತಿರುಗಿಸು
- ಮಲ(ಳ)ರಹಿತ – ಕಳಂಕವಿಲ್ಲದ
- ಮಲಿನಾಕಾರ – ಅಂದಗೇಡಿ, ಕುರೂಪಿ
- ಮಲೀ(ಳೀ)ಮಸ – ಕ್ಷುದ್ರ(ವಾದ); ಮಾಸಿದ
- ಮಲೆ – ಗರ್ವಿಸು; ಬೆಟ್ಟ; ಬೆಟ್ಟಸೀಮೆ
- ಮಲೆತರ್ – ಸೊಕ್ಕು
- ಮಲೆಪ – ಬೆಟ್ಟಸೀಮೆಯ ಅರಸು
- ಮಲೆಪು – ಗರ್ವ
- ಮಲೆಯೆಲರ್ – ಬೆಟ್ಟದ ಕಡೆಯಿಂದ ಬೀಸುವ ಗಾಳಿ
- ಮಲ್ಲ – ಜಟ್ಟಿ
- ಮಲ್ಲಂತಿಗೆ – (ಮಲ್ಲವಸ್ತ್ರಿಕಾ) ಮಲ್ಲರು ಧರಿಸುವ ಬಟ್ಟೆ
- ಮಲ್ಲಗಳ – ಮಲ್ಲ+ಕಳ, ಕುಸ್ತಿಯ ಕಣ
- ಮಲ್ಲದಾಳ – ತೋಳು ತೊಡೆ ತಟ್ಟಿಕೊಳ್ಳುವುದು
- ಮಲ್ಲಯುದ್ಧ – ದ್ವಂದ್ವ ಕಾಳಗ
- ಮಲ್ಲರಂಗ – ಮಲ್ಲಗಳ
- ಮಲ್ಲಲ್ – ಪಾತ್ರೆ
- ಮಲ್ಲವೋರ್ – ಕುಸ್ತಿಮಾಡು
- ಮಲ್ಲಿಕಾವೃತಿ – ಮಲ್ಲಿಗೆ ಪೊದೆ
- ಮಲ್ಲಿಗೆ – ಮಲ್ಲಿಕಾ
- ಮಲ್ಲಿನಾಥ – (ಜೈನ) ಒಬ್ಬ ತೀರ್ಥಂಕರ
- ಮಶಕ – ಸೊಳ್ಳೆ
- ಮಸ – ಕಾಮತೃಷೆ
- ಮಸಕ – ವಿಜೃಂಭಣೆ; ತೀಕ್ಷ್ಣತೆ; ಕೆಲಸ; ಉತ್ಸಾಹ
- ಮಸಕಂಗುಂದು – ಉತ್ಸಾಹಗುಂದು
- ಮಸಗು – ರೇಗು, ಕೋಪಗೊಳ್ಳು; ವಿಜೃಂಭಿಸು
- ಮಸಣ – (ಶ್ಮಶಾನ) ಸುಡುಗಾಡು
- ಮಸಣವಟ್ಟಿಗೆ – ಮಸಣ
- ಮಸಣಿಗೆ – ಒಂದು ಕ್ಷುದ್ರ ದೇವತೆ
- ಮಸಿ – ಕಪ್ಪು ಬಣ್ಣ; ಕಾಡಿಗೆ; ಕಲೆ
- ಮಸುರಿಗೆ – ದಿಂಬು
- ಮಸುಳ್ – ಮಾಸು; ಮಂಕಾಗು
- ಮಸುಳ – ಕಪ್ಪಗಿರುವವನು
- ಮಸುಳಿಸು – ಮಂಕುಗೊಳಿಸು; ಕುಗ್ಗು
- ಮಸೃಣ – ಮೆತ್ತನೆಯ; ನಯವಾದ
- ಮಸೃಣಿತ – ನಯವಾಗಿರುವ
- ಮಸೆ – ತಿಕ್ಕು; ಹರಿತಗೊಳಿಸು; ಹೊಳಪು
- ಮಸೆಯಂಬು – ಹರಿತವಾದ ಬಾಣ
- ಮಸೆವಡು – ಹರಿತಗೊಳ್ಳು
- ಮಸ್ಕರಿ – ಸನ್ಯಾಸಿ
- ಮಸ್ಕರಿಮಾರ್ಗ – ಸನ್ಯಾಸಿಮಾರ್ಗ
- ಮಸ್ಕರಿಸಮಯ – ಮಸ್ಕರಿಮಾರ್ಗ
- ಮಸ್ತ(ಕ) – ತಲೆ
- ಮಸ್ತಿಷ್ಕ – ಮೆದುಳು
- ಮಹ – ಉತ್ಸವ; ಹಬ್ಬ
- ಮಹತ್ತರ – ಅಧಿಕಾರಿ
- ಮಹತ್ತರದೇವಿ – (ಜೈನ) ಜನಸಾಮಾನಿಕ ದೇವತೆ
- ಮಹತ್ತರಿಕೆ – ಮಹತ್ತರದೇವಿ
- ಮಹದ್ಬ್ರಹ್ಮಚರ್ಯ – (ಜೈನ) ಒಂದು ಸಾಧನೆ; ಉಪಾಸಕಗುಣ
- ಮಹರ್ಧಿಕ – ತುಂಬ ಪ್ರಭಾವಶಾಲಿಯಾದವನು
- ಮಹಳ – (ಮಹಾಲಯ) ಶ್ರಾದ್ಧ
- ಮಹಾಕಲ್ಯಾಣ – (ಜೈನ) ಪಂಚಕಲ್ಯಾಣಗಳಲ್ಲಿ ಪ್ರತಿಯೊಂದು
- ಮಹಾಕಾಯ – ಭಾರಿ ದೇಹವುಳ್ಳವನು
- ಮಹಾಕಾಲ(ಳ) – ಶಿವನ ಲಯಕಾರಕರೂಪ; (ಜೈನ) ಚಕ್ರವರ್ತಿಯ ಬಳಿಯ ನವನಿಧಿಗಳಲ್ಲಿ ಒಂದು
- ಮಹಾಜನ – ಜನಸಮೂಹ
- ಮಹಾಜ್ವಾಲ – (ಜೈನ) ಒಂದು ಮಂತ್ರವಿದ್ಯೆ
- ಮಹಾದ್ವಾರ – ಹೆಬ್ಬಾಗಿಲು
- ಮಹಾಧ್ವಕೃತಿ – ಶ್ರೇಷ್ಠ ಕಾವ್ಯ
- ಮಹಾನಿಧಾನ – ಮಹಾ ಸಂಪತ್ತು
- ಮಹಾನಿಲ – (ಜೈನ) ಭೂಲೋಕವನ್ನು ಆವರಿಸಿರುವ ವಾಯು
- ಮಹಾನೈಷ್ಠಿಕ – ನಿಷ್ಠಾವಂತ ತಪಸ್ವಿ
- ಮಹಾಪಥಂಬೊಗು – ಮರಣಿಸು
- ಮಹಾಪುರಾಣ – (ಜೈನ) ತ್ರಿಷಷ್ಠಿಶಲಾಕಾ
- ಪುರುಷರನ್ನು ಕುರಿತ, ಜಿನಸೇನರು ಮತ್ತು ಗುಣಭದ್ರರಿಂದ ಸಂಸ್ಕøತದಲ್ಲಿ ರಚಿತವಾದ ಪುರಾಣ
- ಮಹಾಪುರುಷ – ಮೂವತ್ತೆರಡು ಲಕ್ಷಣಗಳಿಂದ ಕೂಡಿದ ಶ್ರೇಷ್ಠ ವ್ಯಕ್ತಿ
- ಮಹಾಪೂಜೆ – ಮುಖ್ಯ ಪೂಜೆ
- ಮಹಾಪ್ರಬಂಧ – ದೊಡ್ಡ ಕಾವ್ಯ
- ಮಹಾಪ್ರಸಾದ – ಹಿರಿಯರು ಅನುಗ್ರಹಿಸುವ ವಸ್ತು
- ಮಹಾಪ್ರಾಣತೆ – ಅಪ್ರತಿಮ ಶಕ್ತಿ
- ಮಹಾಭಾಗ(ಗೆ) – ಅತ್ಯಂತ ಶ್ರೇಷ್ಠನಾದವನು(ಳು); ಪುಣ್ಯಶಾಲಿ
- ಮಹಾಭೋಗ – ತುಂಬ ಸಂತೋಷದಿಂದ ಕೂಡಿರುವುದು; ವಿಶಾಲವಾದ ಅಂಗಳವನ್ನು ಹೊಂದಿರುವುದು
- ಮಹಾಭೋಗಿ – ಪರಮ ಸುಖಿ
- ಮಹಾಮಂಡಳಪತಿ – ರಾಜನಿಗೆ ಮಾತ್ರ ಅಧೀನನಾದ ರಾಜ್ಯದ ಪ್ರಮುಖ ಅಧಿಕಾರಿ
- ಮಹಾಮಹ – (ಜೈನ) ಮಹಾರಾಜನು ಚತುರ್ಮುಖಮಂಟಪದಲ್ಲಿ ಮಾಡುವ ಜಿನಪೂಜೆ
- ಮಹಾಮಹತ್ತರೆ – ಅಂತಃಪುರದ ಮುಖ್ಯ ಸೇವಕಿ
- ಮಹಾಮಹಿಮೆ – ತುಂಬ ಶ್ರೇಷ್ಠನಾದವನು; (ಜೈನ) ಮಹಾಮಹ
- ಮಹಾಮಾತ್ರ – ಗಜಶಾಲೆಯ ಮುಖ್ಯಸ್ಥ
- ಮಹಾಮಾತ್ಯ – ಹಿರಿಯ ಮಂತ್ರಿ
- ಮಹಾರಥ – ಹತ್ತು ಸಾವಿರ ಯೋಧರ ವಿರುದ್ಧ ಯುದ್ಧಮಾಡಬಲ್ಲ ರಥಿಕ
- ಮಹಾಲಯ – ಮಹಾ+ಆಲಯ, ದೊಡ್ಡ ಭವನ; ಮಹಾ+ಲಯ, ಮಹಾ ವಿನಾಶ
- ಮಹಾವಾತ(ತ್ಯೆ) – ಬಿರುಗಾಳಿ
- ಮಹಾವಾಹಿನಿ – ದೊಡ್ಡ ನದಿ
- ಮಹಾವಿದ್ಯೆ – ಅಸಾಧಾರಣ ಜ್ಞಾನ
- ಮಹಾವಿಭೂತಿ – ಅತಿಶಯ ವೈಭವ
- ಮಹಾವೀರ – ದೊಡ್ಡ ಪರಾಕ್ರಮಿ; (ಜೈನ) ಇಪ್ಪತ್ತನಾಲ್ಕನೆಯ ತೀರ್ಥಂಕರನಾದ ವರ್ಧಮಾನ
- ಮಹಾವ್ರತ – ಮುನಿಗಳು ಪಾಲಿಸಬೇಕಾದ ಪಂಚವ್ರತಗಳ ಗರಿಷ್ಠ ಆಚರಣೆ; (ಜೈನ) ಪಂಚಪಾಪಗಳನ್ನು ಮನಸ್ಸಿನಲ್ಲಿ ಮತ್ತು ಕೃತಿಯಲ್ಲಿ ಮಾಡದ, ಮಾಡಿಸದ ಹಾಗೂ ಅವುಗಳಿಗೆ ಒಪ್ಪಿಗೆ ನೀಡದ -ಹೀಗೆ ಒಂಬತ್ತು ಪ್ರಕಾರದ ಮುನಿಗಳ
- ಮಹಾಶುಕ್ರ – (ಜೈನ) ದ್ವಾದಶಕಲ್ಪಗಳಲ್ಲಿ ಏಳನೆಯದು; ನೋಡಿ,
ದ್ವಾದಶಕಲ್ಪ' ಮಹಾಶ್ವೇತೆ - ಬಿಳಿಯ ಹೂಬಿಡುವ ಕರೀ ನೆಲಗುಂಬಳ ಎಂಬ ಒಂದು ಸಸ್ಯ;
ಕಾದಂಬರಿ’ ಕಾವ್ಯದ ನಾಯಕಿ - ಮಹಾಸಂಧಿವಿಗ್ರಹಿ – ಯುದ್ಧ-ಶಾಂತಿಗಳ ಬಗ್ಗೆ ವ್ಯವಹರಿಸುವ ಸಚಿವರಲ್ಲಿ ಹಿರಿಯಮಹಾಸತಿ – ಪತಿವ್ರತೆ; ಪತಿಯೊಡನೆ ಸಹಗಮನ ಮಾಡಿದವಳು
- ಮಹಾಹವ(ಧ್ವನಿ) – ಭಾರಿ ಕದನ (ಸದ್ದು)
- ಮಹಿಧರ – ಪರ್ವತ; ಕೂರ್ಮಾವತಾರದಲ್ಲಿ ಭೂಮಿಯನ್ನು ಹೊತ್ತ ವಿಷ್ಣು
- ಮಹೀಧರೋಪಕಂಠ – ಬೆಟ್ಟದ ತಪ್ಪಲು
- ಮಹಿಮೆ – (ಜೈನ) ಪೂಜೆ
- ಮಹಿಮೆವಡೆ – ಘನತೆಯನ್ನು ಪಡೆ
- ಮಹಿಷ – ಕೋಣ
- ಮಹಿಷನಾಥ – ದಿಕ್ಪಾಲಕರಲ್ಲಿ ಒಬ್ಬನಾದ ಯಮ
- ಮಹಿಷಿ – ಎಮ್ಮೆ; ಮಹಾರಾಣಿ
- ಮಹೀಗೃಹ – ನೆಲಮನೆ
- ಮಹೀಚರ – ಮಾನವ
- ಮಹೀಜ – ಮರ
- ಮಹೀಧರ – ಪರ್ವತ
- ಮಹೀಧ್ರ – ಮಹೀಧರ
- ಮಹೀಧಾಸ್ತ್ರ – ಬೆಟ್ಟಗಳನ್ನು ಸುರಿಸುವ ಅಸ್ತ್ರ
- ಮಹೀನಾಥ – ಭೂಮಿಯ ಒಡೆಯ, ರಾಜ
- ಮಹೀಪತಿ- ಮಹೀನಾಥ
- ಮಹೀರುಹ – ಮಹೀಜ
- ಮಹೀವಲ್ಲಭ – ಮಹೀನಾಥ
- ಮಹೀಶ್ವರ – ಮಹೀನಾಥ
- ಮಹೇಂದ್ರಕಲ್ಪ – (ಜೈನ) ಹದಿನಾರು ಸ್ವರ್ಗಗಳಲ್ಲಿ ನಾಲ್ಕನೆಯದು
- ಮಹೇಂದ್ರಜಾಲ(ಳ) – ಅರವತ್ತನಾಲ್ಕು ಕಲೆಗಳಲ್ಲಿ ಒಂದು, ಇಂದ್ರಜಾಲ
- ಮಹೇಂದ್ರಜಾಲಿಗ – ಯಕ್ಷಿಣಿಗಾರ
- ಮಹೋಕ್ಷ – ದೊಡ್ಡ ಎತ್ತು
- ಮಹೋತ್ಸವ – ಸಂಭ್ರಮ; ದೊಡ್ಡ ಉತ್ಸವ
- ಮಹೋದಧಿ – ಮಹಾ ಸಮುದ್ರ
- ಮಹೋದಯ – ಹೆಚ್ಚಿನ ಏಳಿಗೆ; ಭಾಗ್ಯವಂತ
- ಮಹೋದ್ಯ – ಮಹೋದಯ, ಪ್ರಯತ್ನಶಾಲಿ
- ಮಹೋನ್ನತಿ(ಕ್ಕೆ) – ಹೆಚ್ಚಿನ ಹಿರಿಮೆ
- ಮಹೋರಗ – ದೊಡ್ಡ ಹಾವು
- ಮಹೌಷಧಿ – ದೊಡ್ಡ ಸಸ್ಯ; ಒಳ್ಳೆಯ ಔಷಧಿ
- ಮಳ(ಲ)ಯ ಮಹೀಜ – ಶ್ರೀಗಂಧದ ಮರ
- ಮಳ(ಲ)ಯ ಸಮೀರಣ – ಮಲಯಪರ್ವತದಿಂದ ಬೀಸುವ ಗಾಳಿ; ತಂಗಾಳಿ
- ಮಳವೆ – ರಾಶಿ
- ಮಳಿಮ್ಲುಚ – ಕಪ್ಪಾದುದು
- ಮಾಂಕರಿಸು – ಹೀಯಾಳಿಸು
- ಮಾಂಗಲಿ(ಳಿ)ಕ – ಮಂಗಳಕರವಾದ; ಮಂಗಳಗೀತೆ
- ಮಾಂಗಲ್ಯಗೇಯ – ಮಂಗಳಗೀತೆ
- ಮಾಂಗಾಯ್ – ಮಾವಿನ ಕಾಯಿ; ಒಂದು ಆಭರಣ
- ಮಾಂಗೊನರ್ – ಮಾವಿನ ಚಿಗುರು
- ಮಾಂಜು – ಮರೆಮಾಚು
- ಮಾಂತನ – ಹಿರಿತನ
- ಮಾಂದಳಿರ್ – ಮಾಂಗೊನರ್
- ಮಾಂದಿಸು – ಅಡ್ಡಗಟ್ಟು
- ಮಾಂದು – ಪ್ರತಿಭಟನೆ ಮಾಡು; ಹಿಮ್ಮೆಟ್ಟು
- ಮಾಂದ್ಯ – ಮೆಲ್ಲನೆ; ಜಾಡ್ಯ
- ಮಾಂಸಕವಳ – ಬಾಡಿನ ಊಟ
- ಮಾಂಸಳ – ಪುಷ್ಟವಾದ
- ಮಾಂಸಳಿತ – ಮಾಂಸಳ
- ಮಾಕಂದ – ಮಾವಿನ ಮರ
- ಮಾಕಾಳ – (ಮಹಾಕಾಲ) ಒಂದು ಪ್ರಮಥಗಣ
- ಮಾಕಾಳಿ – (ಮಹಾಕಾಲಿ) ಪಾರ್ವತಿ
- ಮಾಗ – ಮಾಘಮಾಸ
- ಮಾಗಧ – ರಾಜರ ಕೀರ್ತಿಯನ್ನು ಹೊಗಳುವವನು;
- ಮಗಧ ದೇಶಕ್ಕೆ ಸಂಬಂಧಿಸಿದ
- ಮಾಗಿ(ಗೆ) – ಚಳಿಗಾಲ
- ಮಾಗುಳಿವೇರ್ – ಮಾಕಳಿ ಬೇರು
- ಮಾಟ – ಕೆಲಸ; ನಿರ್ಮಿತಿ; ಕಣ್ಕಟ್ಟು; ಕೃತ್ರಿಮವಾದುದು; ಅಭಿಚಾರ
- ಮಾಟಕೂಟ – ಸುಂದರವಾದ ಗೋಪುರ
- ಮಾಡ – ಉಪ್ಪರಿಗೆ; ಹಮ್ರ್ಯ; ಗೋಡೆಯ ಗೂಡು
- ಮಾಡಶಾಲೆ – ಮೊಗಸಾಲೆ
- ಮಾಡು – ಕೆಲಸಗೈ; ಸೃಷ್ಟಿಸು; ಉಂಟಾಗಿಸು
- ಮಾಡುವೆಟ್ಟು – ಕೃತಕಶೈಲ
- ಮಾಡುಹ – ಮಾಡುವಿಕೆ
- ಮಾಣ್ – ಬಿಟ್ಟುಬಿಡು; ನಿಂತುಹೋಗು; ಸುಮ್ಮನಿರು; ಈಡೇರಿಸದಿರು; ತಪ್ಪಿಸಿಕೊ
- ಮಾಣವಕ – ಇಪ್ಪತ್ತು ಎಳೆಗಳ ಮುತ್ತಿನ ಹಾರ; (ಜೈನ) ನವನಿಧಿಗಳಲ್ಲಿ ಒಂದು
- ಮಾಣಿ – ಹುಡುಗ
- ಮಾಣಿಕ – ಪದ್ಮರಾಗ, ನವರತ್ನಗಳಲ್ಲಿ ಒಂದು; ರಜಸ್ಸು
- ಮಾಣಿಕಂಗಾಣ್ – ಮುಟ್ಟಾಗು, ರಜಸ್ವಲೆಯಾಗು
- ಮಾಣಿಕೆಗೆಂಟು – ರಜಸ್ವಲೆಯಾದ್ದರಿಂದ ದೂರವಿರಬೇಕಾದುದು
- ಮಾಣಿಕಚಟ್ಟ – ರತ್ನಪರೀಕ್ಷಕ
- ಮಾಣಿಕವರಿಗೆ – ಕೆಂಪು ಹರಳು ಜೋಡಿಸಿರುವ ಗುರಾಣಿ
- ಮಾಣಿಕ್ಯ – ಪದ್ಮರಾಗ
- ಮಾಣಿಸು – ನಿಲ್ಲಿಸು; ಅಡಗಿಸು; ಸುಮ್ಮನಿರಿಸು
- ಮಾತಂಗ – ಆನೆ; ಬೇಡರವನು; ಶ್ವಪಚ
- ಮಾತಂಗಕುಲ – ಆನೆಗಳ ಗುಂಪು
- ಮಾತಂಗಚರಿತ – ಆನೆಯ ಗಾಂಭೀರ್ಯದವನು; ಚಂಡಾಲನ ಗುಣದವನು
- ಮಾತಂಗಿ – ಚಂಡಾಲರವಳು; ಬೇಡಿತಿ; (ಜೈನ) ಹತ್ತು ಮಹಾವಿದ್ಯೆಗಳಲ್ಲಿ ಒಂದು
- ಮಾತಟ್ಟು – ಸುದ್ದಿಯನ್ನು ಹೇಳಿ ಕಳಿಸು
- ಮಾತಡಕು – ಸಂದೇಶ ತಲುಪಿಸು
- ಮಾತರಿಶ್ವ – ಗಾಳಿ
- ಮಾತಾಮಹ – ತಾಯಿಯ ತಂದೆ
- ಮಾತಾಳಿ – (ಮಾತಲಿ) ಇಂದ್ರನ ಸಾರಥಿ
- ಮಾತುಂಗುಟ್ಟು – ಮಾತಾಡು, ಸಂಭಾಷಿಸು
- ಮಾತುಗೆಡು – ನುಡಿಯಿಲ್ಲದಾಗು
- ಮಾತುಗೇಳ್ – ಒಡಂಬಡು, ಒಪ್ಪು
- ಮಾತುದೆಗೆ – ಸಂಭಾಷಣೆಗೆ ತೊಡಗು
- ಮಾತುಲ(ಳ) – ಸೋದರ ಮಾವ
- ಮಾತ್ಸ್ಯನ್ಯಾಯ – ಮತ್ಸ್ಯನ್ಯಾಯ, ಬಲಿಷ್ಠ ದುರ್ಬಲನ್ನು ಪೀಡಿಸುವುದು
- ಮಾದರ – ಮಾದಿಗ
- ಮಾದುಪಳ – ಮಾದಲ ಹಣ್ಣು
- ಮಾದುಫಲ(ಳ) – ಮಾದುಪಳ
- ಮಾದುರ – (ಮಹಾಧುರ) ದೊಡ್ಡ ಯುದ್ಧ
- ಮಾದಿಂಗಿತ್ತಿ – ಮಾದಿಗ ಹೆಂಗಸು
- ಮಾದೇವಿ – (ಮಹಾದೇವಿ) ಪಾರ್ವತಿ; ಪಟ್ಟಮಹಿಷಿ
- ಮಾದ್ಯತ್ – ಮದಿಸಿದ
- ಮಾದ್ಯದ್ಗಜ – ಮದ್ದಾನೆ
- ಮಾಧವ – ಮಧುಮಾಸ, ವಸಂತ
- ಮಾಧವೀ – ವಾಸಂತಿ, ಮೊಲ್ಲೆ, ಇರುವಂತಿಗೆ
- ಮಾಧ್ಯಮಿಕ – ಶೂನ್ಯವಾದ; ಬೌದ್ಧಮತದ ಒಂದು ಪಂಗಡ
- ಮಾಧ್ಯಸ್ಥವೃತ್ತಿ – (ಜೈನ) ದುಷ್ಟರ ಬಗ್ಗೆ ವ್ರತಸ್ಥರು ಇರಿಸಿಕೊಳ್ಳಬೇಕಾದ ತಟಸ್ಥ ಭಾವನೆ
- ಮಾನ – ಆತ್ಮಗೌರವ; ಅಳತೆಯ ಪ್ರಮಾಣ; ಸ್ತ್ರೀಯ ಪ್ರಣಯಕೋಪ
- ಮಾನಂದನ – ಲಕ್ಷ್ಮಿಯ ಮಗ, ಮನ್ಮಥ
- ಮಾರ್ನುಡಿ – ಉತ್ತರ ನೀಡು; ಪ್ರತ್ಯುತ್ತರ
- ಮಾರ್ಪಡಿ – ಸರಿಸಮಾನ
- ಮಾರ್ಪಡೆ – ಶತ್ರುಸೈನ್ಯ
- ಮಾರ್ಪೊಡೆ – ಪ್ರತಿಯಾಗಿ ಹೊಡೆ
- ಮಾರ್ಪೊಣರ್ – ಎದುರಾಗಿ ಕಾದು
- ಮಾರ್ಪೊಯ್ – ಮಾರ್ಪೊಡೆ
- ಮಾರ್ಪೊಳಪು – ಪ್ರತಿಬಿಂಬ
- ಮಾರ್ಪೊಳೆ – ಪ್ರತಿಬಿಂಬಿಸು
- ಮಾರ್ಬಟ್ಟೆ – ಬೇರೆ ದಾರಿ
- ಮಾರ್ಮ – ಪ್ರತಿಭಟಿಸುವವನು, ಮಲೆವವನು
- ಮಾರ್ಮನುಷ್ಯ – ಬೇರೆಯೇ ವ್ಯಕ್ತಿ
- ಮಾರ್ಮಲೆ – ಉದ್ಧಟತನಾಗಿ ವರ್ತಿಸು; ವಿರೋಧಿಸು
- ಮಾರ್ಮುಗಿಲ್ – ಪ್ರತಿ ಮೋಡ
- ಮಾರ್ವ(ರ್ಬ)ಟ್ಟೆ – ದಾರಿಗೆ ಎದುರು
- ಮಾರ್ವಲ – ಶತ್ರು ಸೈನ್ಯ; ಮಹಾ ಸೈನ್ಯ
- ಮಾಲಾಕಾರ – ಮಾಲೆಗಾರ
- ಮಾಲಾಮಂತ್ರ – ದುರ್ಮಂತ್ರ
- ಮಾಲಿನ್ಯ – ಕೊಳೆ
- ಮಾಲಿಸು – ಕಡೆಗಣ್ಣಿನಿಂದ ನೋಡು
- ಮಾಲೂರ – ಬಿಲ್ವಪತ್ರೆ; ಬೇಲ
- ಮಾಲೆ – ಹೂವಿನ ಹಾರ; ಸರ
- ಮಾಲೆಗಟ್ಟು – ಸಾಲಾಗಿ ನಿಲ್ಲು
- ಮಾಲೆಗಾರ್ತಿ – ಹೂವಾಡಗಿತ್ತಿ
- ಮಾಲೆಗುಂಡಿಗೆ – ಜೋಡಿಸಿದ ಗಡಿಗೆಗಳು
- ಮಾಲೆಗೊಳ್ – ಒಂದರ ಹಿಂದೊಂದು ಬಾ
- ಮಾಲೆಜೊಡರ್ – ಸಾಲುದೀಪ
- ಮಾಲೆದುಂಬಿ – ದುಂಬಿಯ ಸಾಲು
- ಮಾಲೆದೊಡರ್ – ಹೂವಿನ ಒಡವೆ
- ಮಾಲೆವೂ – ಹೂವಿನ ಹಾರ
- ಮಾಲೆಸೂ(ವೂ)ಡು – ಹಾರವನ್ನು ಹಾಕು
- ಮಿತ್ರಕಾರ್ಯ – ರಾಜನು ಮಿಕ್ಕ ರಾಜರನ್ನು ಗೆಳೆಯರನ್ನಾಗಿಸಿಕೊಳ್ಳುವ ತಂತ್ರ
- ಮಿತ್ರಗುಣ – ಗೆಳೆಯನಲ್ಲಿರಬೇಕಾದ ಗುಣ
- ಮಿತ್ರದ್ರೋಹ – ಗೆಳೆಯನಿಗೆ ಮಾಡುವ ಮೋಸ
- ಮಿತ್ರದ್ವಿಷ – ಸೂರ್ಯನ ಶತ್ರು, ರಾಹು
- ಮಿತ್ರಬಲ – ಸ್ನೇಹಿತರಾದ ರಾಜರ ಬಲ
- ಮಿತ್ರಭಾವ – ಗೆಳೆತನ
- ಮಿತ್ರಮಂಡಲ(ಳ) – ಸೂರ್ಯಮಂಡಲ; ಸ್ನೇಹಿತರ ಗುಂಪು
- ಮಿತ್ರಲಕ್ಷಣ – ಸ್ನೇಹಿತನಲ್ಲಿರಬೇಕಾದ ಗುಣ
- ಮಿತ್ರವಿಯೋಗ – ಸೂರ್ಯನ ಅಗಲಿಕೆ; ಗೆಳೆಯನ ವಿಯೋಗ
- ಮಿಥಸ್ಸ್ಪರ್ಧೆ – ಪರಸ್ಪರ ಪೈಪೋಟಿ
- ಮಿಥುನ – ಗಂಡು ಹೆಣ್ಣು ಜೋಡಿ
- ಮಿಥ್ಯಾಕಂದರ – ಸುಳ್ಳು ಎಂಬ ಗುಹೆ
- ಮಿಥ್ಯಾಚತುಷ್ಟಯ – ಇದು ಸುಳ್ಳು, ಇದರ ಪರಿಚಯ ಇಲ್ಲ, ಆಗ ಅಲ್ಲಿ ನಾನಿರಲಿಲ್ಲ, ಆ ಕಾಲಕ್ಕೆ ನನು ಹುಟ್ಟಿರಲಿಲ್ಲ ಎಂಬ ನಾಲ್ಕು ಬಗೆಯ ಸುಳ್ಳುಗಳು
- ಮಿಥ್ಯಾಚರಣ – ಕಪಟಾಚರಣೆ
- ಮಿಥ್ಯಾಜ್ಞಾನ – ತಪ್ಪು ತಳಿವಳಿಕೆ
- ಮಿಥ್ಯಾಜ್ಞಾನಿ – ಅಜ್ಞಾನಿ
- ಮಿಥ್ಯಾತ್ವ – ಹುಸಿ; (ಜೈನ) ನಿಜವಾದ ತತ್ವಜ್ಞಾನವನ್ನು ನಂಬದಿರುವುದು; ಇದರಲ್ಲಿ ವಿಪರೀತ, ಏಕಾಂತ, ವಿನಯ, ಸಂಶಯ, ಅಜ್ಞಾನ ಎಂಬ ಐದು ಬಗೆ
- ಮಿಥ್ಯಾದರ್ಶನ – ಮಿಥ್ಯಾತ್ವ
- ಮಿಥ್ಯಾದೃಷ್ಟಿ – (ಜೈನ) ಅಭವ್ಯನ ದೃಷ್ಟಿ
- ಮಿಥ್ಯಾಭಾವನೆ – ಮಿಥ್ಯಾದೃಷ್ಟಿ
- ಮಿಥ್ಯಾಭಿಯೋಗ – ಸುಳ್ಳು ಅಪವಾದ
- ಮಿಥ್ಯಾವಾದಿ – ಒಂದು ಬೌದ್ಧ ಪಂಗಡ;
- ವಿಜ್ಞಾನವನ್ನು ಆಶ್ರಯಿಸಿದವನು
- ಮಿಥ್ಯಾವಿನಯ – ಕಪಟ ವಿನಯ
- ಮೂವೆಡ್ಡಂ – ತುಂಬ ಸುಂದರ
- ಮೂಷಿಕ – ಇಲಿ
- ಮೂಷಿಕೆ – ಹೆಣ್ಣು ಇಲಿ
- ಮೂಷೆ – ಮೂಷಿಕೆ; ಮೂಸೆ, ಲೋಹ ಕರಗಿಸುವ ಬಟ್ಟಲು
- ಮೃಗ – ಕಾಡುಪ್ರಾಣಿ; ಜಿಂಕೆ; ಕಸ್ತೂರಿ
- ಮೃಗಚಾರಿ – ಜಿಂಕೆಯಾಕಾರ ತಾಳು
- ಮೃಗತತಿ – ಪ್ರಾಣಿಸಂಕುಲ
- ಮೃಗತೃಷ್ಣಿಕೆ – ಬಿಸಿಲುಗುದುರೆ
- ಮೃಗತೃಷ್ಣೆ – ಮೃಗತೃಷ್ಣಿಕೆ
- ಮೃಗಧರ – ಜಿಂಕೆಯ ಗುರುತುಳ್ಳ, ಚಂದ್ರ
- ಮೃಗಧೂರ್ತ – ನರಿ
- ಮೃಗನಯನೆ – ಜಿಂಕೆಯಂತೆ ಚಂಚಲ ಕಣ್ಣುಗಳುಳ್ಳವಳು
- ಮೃಗನಾಭಿ – ಕಸ್ತೂರಿ
- ಮೃಗನೇತ್ರೆ – ಮೃಗನಯನೆ
- ಮೃಗಪತಿ – ಸಿಂಹ
- ಮೃಗಭೂ – ಚೌರಿ
- ಮೃಗಮದ – ಕಸ್ತೂರಿ
- ಮೃUಮದಾಮೋದ – ಕಸ್ತೂರಿಯ ಪರಿಮಳ
- ಮೃಗಯಾ(ಯೆ) – ಬೇಟೆ
- ಮೃಗಯಾವ್ಯಸನ – ಬೇಟೆಯ ಗೀಳು
- ಮೃಗಯು – ಬೇಟೆಗಾರ
- ಮೃಗರಾಜ – ಸಿಂಹ
- ಮೃಗರಾಜವಿಷ್ಟರ – ಸಿಂಹಾಸನ
- ಮೃಗರಿಪು – ಜಿಂಕೆಯ ಶತ್ರು, ಸಿಂಹ
- ಮೃಗಲಕ್ಷ್ಮ – ಚಂದ್ರ
- ಮೃಗಲಾಂಛನ – ಮೃಗಲಕ್ಷ್ಮ
- ಮೃಗಲೋಚನ – ಜಿಂಕೆಯಂತೆ ಚಂಚಲವಾದ ಕಣ್ಣು
- ಮೃಗಲೋಚನೆ – ಮೃಗನಯನೆ
- ಮೃಗವ್ಯ – ಬೇಟೆ
- ಮೃಗಶಾಬ – ಜಿಂಕೆಯ ಮರಿ
- ಮೃಗಶಾಬಾಕ್ಷಿ – ಜಿಂಕೆಯ ಮರಿಯಂತೆ
- ಚಂಚಲವಾದ ಕಣ್ಣಳ್ಳವಳು
- ಮೃಗಾಂಕ – ಜಿಂಕೆಯ ಗುರುತುಳ್ಳುದು, ಚಂದ್ರ
- ಮೃಗಾಕ್ಷಿ – ಮೃಗನಯನೆ
- ಮೃಗಾಜಿನ – ಜಿಂಕೆಯ ಚರ್ಮ
- ಮೃಗಾಧಿಪ – ಸಿಂಹ
- ಮೃಗಾರಿಪೀಠ – ಸಿಂಹಾಸನ
- ಮೃಗಿ – ಹೆಣ್ಣು ಜಿಂಕೆ
- ಮೃಗೇಂದ್ರ – ಸಿಂಹ
- ಮೃಗೇಂದ್ರವಿಷ್ಟರ – ಸಿಂಹಾಸನ
- ಮೃಗೇಕ್ಷಣ – ಚಂಚಲ ದೃಷ್ಟಿ
- ಮೃಗೋತ್ಥ – ಮೃಗಮದ
- ಮೃಗೋದ್ಭವ – ಮೃಗಮದ
- ಮೃಡ – ಈಶ್ವರ
- ಮೃಡಾದ್ರಿ – ಕೈಲಾಸಪರ್ವತ
- ಮೃಣಾಲ(ಳ) – ತಾವರೆಯ ದಂಟು
- ಮೃಣಾಲ(ಳ)(ನಾಳ) – ಮೃಣಾಲ(ಳ)
- ಮೃಣಾಳನಾಳಿಕೆ – ಮೃಣಾಲ(ಳ)
- ಮೃಣಾಳಿಕೆ – ತಾವರೆ ದಂಟಿನ ನಾರು
- ಮೃತಕ – ಹೆಣ
- ಮೃತಕಸೆಜ್ಜೆ – (ಜೈನ) ಒಂದು ಬಗೆಯ ತಪಸ್ಸು
- ಮೃತಪಟಹ – ವ್ಯಕ್ತಿ ಸತ್ತಾಗ ಬಾರಿಸುವ ತಮಟೆ
- ಮೃತಿ – ಸಾವು
- ಮೃತ್ತಿಕಾ(ಕೆ) – ಮಣ್ಣು
- ಮೃತ್ಪಾತ್ರ – ಮಣ್ಣಿನ ಗಡಿಗೆ
- ಮೃತ್ಸ್ನಾಘಟ – ಮಣ್ಣಿನ ಮಡಕೆ
- ಮೃದುತಲ್ಪ – ನಯವಾದ ಹಾಸಿಗೆ
- ಮೃದುಪದ – ಕೋಮಲ ಅಡಿ; ಮೃದುವಾದ ಶಬ್ದ
- ಮೃದುಬಂಧ(ನ) – ಪದಗಳ ಸರಳ ಜೋಡಣೆ
- ಮೃದುಯಾನ – ಮೆಲುವಾದ ನಡಿಗೆ
- ಮೃದುವಚನ – ಮೇಲುಮಾತು
- ಮೃದುಸಿಂಜ – ಇಂಪಾದ ಮೆಲುದನಿ
- ಮೃದುಹೃದಯ – ಕೋಮಲ ಮನಸ್ಸು
- ಮೃದ್ಭಾಜನ – ಮಣ್ಣಿನ ಮಡಕೆ
- ಮೃದ್ವೀಕೆ – ದ್ರಾಕ್ಷಿ
- ಮೃಷಂ- ಸುಳ್ಳುಗಾರ
- ಮೃಷಾನಂದ – (ಜೈನ) ಒಂದು ಬಗೆಯ ರೌದ್ರಧ್ಯಾನ; ಸುಳ್ಳಾಡುವ ಆನಂದ
- ಮೃಷಾಪಾತಕ – ಅಸತ್ಯದ ದೋಷ
- ಮೆಚ್ಚಿಸು – ಒಪ್ಪಿಸು; ಇಷ್ಟಪಡಿಸು
- ಮೆಚ್ಚು – ಇಚ್ಛೆ; ಬಹುಮಾನ; ಇಷ್ಟಪಡು
- ಮೆಚ್ಚುಕೆಯ್ – ಇಷ್ಟಬಂದಂತೆ ಮಾಡು
- ಮೆಚ್ಚುಗೊ(ಗು)ಡು – ಬಹುಮಾನ ನೀಡು
- ಮೆಚ್ಚುಗೊಳ್ – ಬಹುಮಾನ ಸ್ವೀಕರಿಸು
- ಮೆಚ್ಚುವಡೆ – ಮೆಚ್ಚುಗೊಳ್
- ಮೆಚ್ಚು(ಚ್ಚ)ವಣಿಗೆ – ಮೆಚ್ಚಿಕೆಯನ್ನು ಹೊಂದಿರುವುದು
- ಮೆಟ್ಟು – ತುಳಿ; ಹೆಜ್ಜೆಯಿಡು; ಪಾದರಕ್ಷೆ ಧರಿಸು; ಪಾದರಕ್ಷೆ
- ಮೆಯ್ – ಶರೀರ
- ಮೆಯ್ಲೊಳಿಸು – ಧರಿಸು
- ಮೆಯ್ಗಂಡ – ದೇಹದ ಮಾಂಸ
- ಮೆಯ್ಗಣ್ಣ – ಇಂದ್ರ
- ಮೆಯ್ಗರೆ – ಕಣ್ಣಿಗೆ ಕಾಣದಾಗು, ಅಂತರ್ಧಾನವಾಗು
- ಮೆಯ್ಗರ್ಚು – ಮೈತೊಳೆ, ಸ್ನಾನಮಾಡು
- ಮೆಯ್ಗಲಿ – ಪರಾಕ್ರಮಿ
- ಮೆಯ್ಗಲಿತನ – ಪರಾಕ್ರಮ
- ಮೆಯ್ಗಾಪು – ಮೈಗಾವಲು
- ಮೆಯ್ಗುಂದು – ಹೆದರಿಕೊ
- ಮೆಯ್ಗೆಡು – ವಿಕಾರಗೊಳ್ಳು
- ಮೆಯ್ಗೊಳ್ – ಕಾಣಿಸಿಕೊ
- ಮೆಯ್ಗೆಯ್ಮೆ – ಪ್ರತ್ಯೇಕವಾಗಿ
- ಮೆಯ್ದೆಗೆ – ಹೆದರಿಕೊ; ಹಿಂಜರಿ
- ಮೆಯ್ದೆರೆ – ಸುಕ್ಕು
- ಮೆಯ್ದೊಡವು – ಒಡವೆ
- ಮೆಯ್ಪಿಂಗಿಸು – ಹಿಮ್ಮೆಟ್ಟಿಸು
- ಮೆಯ್ಪೊರ್ದು – ತಾಕು, ಮುಟ್ಟು
- ಮೆಯ್ಬಿಸುಪು – ಮೈಯ ಕಾವು
- ಮೆಯ್ಮೆಯ್ಗೆ – ಪ್ರತಿಯೊಬ್ಬರಿಗೆ
- ಮೆಯ್ಯನಿಕ್ಕು – ನಮಸ್ಕರಿಸು
- ಮೆಯ್ಯಲಸು – ದೇಹದ ದಣಿವು; ದೈಹಿಕವಾಗಿ ದಣಿ
- ಮೆಯ್ಯಿಕ್ಕು – ನಮಸ್ಕರಿಸು
- ಮೆಯ್ಯೊಡ್ಡು – ದೇಹವನ್ನು ಒಪ್ಪಿಸು
- ಮೆಯ್ಯೋಗ – ದೇಹಾಲಂಕರಣ
- ಮೆಯ್ವಚ್ಚ – ಮೈಯ ಅಲಂಕರಣ, ಒಡವೆ
- ಮೆಯ್ವಣ್ಣ – ದೇಹದ ಬಣ್ಣ, ಕಾಂತಿ
- ಮೆಯ್ವಸ – ಆಸೆ, ಇಷ್ಟ
- ಮೆಯ್ವ¿Â – ಮೈಯ ಬಳಿ
- ಮೆಯ್ವಿಡಿ – ಸಾಕಾರಗೊಳ್ಳು, ರೂಪ ಪಡೆ
- ಮೆಯ್ವಿಡು – ಟಿಸಿಲೊಡೆ; ನಿರ್ಭಯದಿಂದಿರು
- ಮೆಯ್ವೆಂಕೆ – ಮೆಯ್+ಬೆಂಕೆ, ದೇಹದ ತಾಪ
- ಮೆಯ್ವೆರಸು – ಜೊತೆಗೂಡು
- ಮೆಯ್ವೆರ್ಚು – ಉಬ್ಬು; ಅಧಿಕವಾಗು; ಹಿಗ್ಗು
- ಮೆಯ್ವೆಸ – ದೇಹದ ಚಟುವಟಿಕೆ
- ಮೆಯ್ವೊಣರ್ – ಆವೇಶದಿಂದ ಕಾದು
- ಮೆಯ್ವೊರೆ – ಸೇರಿಕೊ
- ಮೆಯ್ವೊಳೆಪು – ದೇಹಕಾಂತಿ
- ಮೆಯ್ವೋಗ – ಶರೀರಸುಖ
- ಮೆಯ್ಸವಿ – ದೇಹದ ಚೆಲುವು
- ಮೆಯ್ಸಾರ್ಚು – ಮೈಯನ್ನು ಒಪ್ಪಿಸು
- ಮೆಯ್ಸಿರಿ – ದೇಹದ ಚೆಲುವು
- ಮೆಯ್ಸಿರಿಗೆಡು – ಸತ್ವ ಕಳೆದುಕೊ; ಸೊಬಗು ಹಾಳಾಗು
- ಮೆಯ್ಸುಖ – ದೇಹಸುಖ; ಕಾಮತೃಪ್ತಿ
- ಮೆಯ್ಸೊಗ – ಮೆಯ್ಸುಖ
- ಮೆಯ್ಸೊಬಗು – ಮೆಯ್ಸಿರಿ
- ಮೆಯ್ಸೋಂಕು – ಮೈ ಮುಟ್ಟು, ಸ್ಪರ್ಶಿಸು; ಸಾಮೀಪ್ಯ
- ಮೆಲ್ – ತಿನ್ನು; ಮೃದುವಾದ
- ಮೆಲ್ಕಾಡು – ಮೆಲುಕು ಹಾಕು
- ಮೆಲ್ಕೊತ್ತು – ಮೆಲ್ಕಾಡು
- ಮೆಲ್ಗುಟುಕು – ಮೃದುವಾದ ಗುಟುಕು
- ಮೆಲ್ನಗೆ – ಮುಗುಳುನಗೆ
- ಮೆಲ್ನುಡಿ – ಮೃದುವಾದ ಮಾತು
- ಮೆಲ್ಪು – ಮೃದುತೆ; ಇಂಪು; ನಿಧಾನಗತಿ
- ಮೆಲ್ಪುಗುಂದು – ಮೃದುತ್ವವನ್ನು ಕಳೆದುಕೊ
- ಮೆಲ್ಪೊದೆ – ನಯವಾದ ಹೊದಿಕೆ
- ಮೆಲ್ಲಗೆ(ನೆ) – ಮೃದುವಾಗಿ; ನಿಧಾನವಾಗಿ; ನಯವಾಗಿ
- ಮೆಲ್ಲಡಿ – ಕೋಮಲ ಪಾದ
- ಮೆಲ್ಲಿದ – ಕೋಮಲ ವ್ಯಕ್ತಿ
- ಮೆಲ್ಲುಲಿ – ಮೃದು ಮಾತು; ಇನಿದನಿ
- ಮೆಲ್ಲೆರ್ದೆ – ಮಿದುವೆದೆ, ಮೃದುವಾದ ವಕ್ಷ; ಕೋಮಲ ಸ್ವಭಾವ
- ಮೆಲ್ಲೆಲರ್ – ಮಂದಮಾರುತ
- ಮೆಲ್ವಚನ – ಮೆಲ್ಲುಲಿ
- ಮೆಲ್ಸರ – ಮೆಲ್ಲುಲಿ
- ಮೆಲ್ಸರಿ – ತುಂತುರು ಮಳೆ
- ಮೆಲ್ಸುಯ್ – ನಿಧಾನವಾದ ಉಸಿರು
- ಮೆಲ್ಸೋಂಕು – ನಯವಾದ ಸ್ಪರ್ಶ
- ಮೆಳೆ – ಪೊದರು
- ಮೆಳ್ಪಡು – ಮೋಸಹೋಗು; ಭ್ರಾಂತಿಗೊಳ್ಳು
- ಮೈಮರೆವು; ಭ್ರಮೆ
- ಮೇಂಟಿ – ಕಂಬ; ಬೇಸಾಯ
- ಮೇಕು- ಗೂಟ
- ಮೇಖಲೆ(ಳೆ) – ಡಾಬು; ಬೆಟ್ಟದ ತಪ್ಪಲು
- ಮೇಗಣ್ – ಮೇಲ್ಭಾಗ
- ಮೇಗಣ – ಮೇಲಿರುವ
- ಮೇಗು – ಮೇಲ್ಭಾಗ; ಉತ್ತಮ
- ಮೇಗುಗಾಣ್ – ದಿಕ್ಕುತೋಚು
- ಮೇಗೆ – ಮೇಲುಭಾಗದಲ್ಲಿ; ಆನಂತರ
- ಮೇಗೆಯ್ – ಮೇಲೆ ಚಾಚಿದ ಕೈ
- ಮೇಘಕಾಲ – ಮಳೆಗಾಲ
- ಮೇಘಘಟೆ – ಮೊಡದ ರಾಶಿ
- ಮೇಘಡಂಬರ – ಗುಡುಗು; ಛತ್ರಿ
- ಮೇಘನಾದ – ಗುಡುಗು; ರಾವಣನ ಮಗ;
- ಮುತ್ತುಗದ ಮರ; ಮೊಳಗೀ ವೃಕ್ಷ
- ಮೇಘನಿಸ್ವನ – ಮೇಘನಾದ
- ಮೇಘಮಾರ್ಗ – ಆಕಾಶ
- ಮೇಘಶಿಖಾವಹ – ಸಿಡಿಲು
- ಮೇಘಾಗಮ – ಮಳೆಗಾಲ
- ಮೇಘಾಧ್ವ – ಆಕಾಶ
- ಮೇಚಕ – ಕಪ್ಪು, ಶ್ಯಾಮಲ ; ನವಿಲುಗರಿಯ ಕಣ್ಣು
- ಮೇಚಕತೆ – ಕಪ್ಪು ಬಣ್ಣ
- ಮೇಚಕಿತ – ಕಪ್ಪು ಬಣ್ಣದ; ಕಡುನೀಲಿಯಾದ
- ಮೇಡು – ದಿಣ್ಣೆ
- ಮೇಣ್ – ಮತ್ತು; ಅಥವಾ;
- ಮೇತ – ಮೇವು; ಮೇಯುವಿಕೆ
- ಮೇದ – ಬಿದಿರ ಕೆಲಸದವನು
- ಮೇದುರ – ನಯವಾದ; ಅತಿಶಯವಾದ
- ಮೇಪು – ಮೇವು
- ಮೇಪುಗಾಡು – ಮೇಯುವ ಸ್ಥಳ
- ಮೇಪುಗೊಳ್ – ಮೇಯು
- ಮೇರುನಗ – ಮೇರುಪರ್ವತ
- ಮೇರೆ – ಎಲ್ಲೆ
- ಮೇರೆಗೆಡು – ಮಿತಿಮೀರು
- ಮೇರೆದಪ್ಪು – ಮಿತಿಮೀರು; ಆಕ್ರಮಣ ಮಾಡು
- ಮೇರೆವರಿ – ದಡದವರೆಗೂ ಹರಿ
- ಮೇಲ್ – ಮೇಲ್ಭಾಗ; ಶ್ರೇಷ್ಠ; ಹೆಚ್ಚಿನ
- ಮೇಲಾ(ಳಾ)ಪ(ಕ) – ಜೊತೆ; ವಾದ್ಯವೃಂದ
- ಮೇಲುದು – ಮೇಲುಹೊದಿಕೆ; ಸೆರಗು
- ಮೇಲುಸಿರಿಡು – ಏದುಸಿರು ಬಿಡು
- ಮೇಲೆತ್ತಿ ಬರ್ – ದಾಳಿಯಿಡು
- ಮೇಲೆತ್ತು – ಮೇಲೆತ್ತಿ ಬರ್
- ಮೇಲೆ ಮೇಲೆ – ಮತ್ತೆ ಮತ್ತೆ
- ಮೇಲೆವರ್ – ಮೇಲೆತ್ತಿ ಬರ್
- ಮೇಲೆವಾಯ್ – ಮೇಲೆತ್ತಿ ಬರ್
- ಮೇಲ್ಕೊಳ್ – ಹೊದೆದುಕೊ
- ಮೇಲ್ನೆಲೆ – ಮಹಡಿ
- ಮೇಲ್ಮಲೆಗೆಯ್ – ತೋರಿಕೆ ಮಾಡು
- ಮೇಲ್ವಾಯ್ – ಮುನ್ನುಗ್ಗು; ಮೇಲೆ ಬೀಳು
- ಮೇವಳಿ – ಮೇಯುವಿಕೆ; ಮೇಯುವ ಸ್ಥಳ
- ಮೇಷವಾಹನ – ಕುರಿಯ ವಾಹನದವನು, ಅಗ್ನಿ
- ಮೇಹು – ಮೇವು
- ಮೇಳ – ಜೊತೆ
- ಮೇಳಂಬ – ದುಂಬಿ
- ಮೇಳೆಗಾಳೆಗ – ಆಟಕ್ಕಾಗಿ ಆಡುವ ಯುದ್ಧ
- ಮೇಳಿಸು – ಸೇರು; ಗುಂಪಾಗು; ಉಂಟಾಗು; ದೊರಕಿಸು
- ಮೈ(ಮಯಿ)ಂದವಾ¿õÉ – ಒಂದು ಬಗೆಯ ಬಾಳೆ, ಮಹೇಂದ್ರ ಬಾಳೆ
- ಮೈತ್ರ – ಮಿತ್ರಸಂಬಂಧವಾದ
- ಮೈತ್ರಿ – ಗೆಳೆತನ
- ಮೈಥುನ – ಸಂಭೋಗ
- ಮೈಮೆ – (ಮಹಿಮೆ) ಮಯ್ಮೆ
- ಮೈಮೆವಡೆ – ಘನತೆಯನ್ನು ಪಡೆ
- ಮೈಲಾರ – ಒಬ್ಬ ದೇವತೆ
- ಮೈಲ(ಲಿ)ಗೆ – ಮಲಿನತೆ, ಕೊಳೆ
- ಮೈಲೆ – ನವಿಲು
- ಮೈಹಿರ – ಸೂರ್ಯ; ಬಿಸಿಲು
- ಮೊಂಟು – ಮೋಟು, ಗಿಡ್ಡ
- ಮೊಕ್ಕಳಂ – ವಿಶೇಷವಾಗಿ
- ಮೊಗ – (ಮುಖ) ಬಾಯಿ; ಎದುರು; ಆರಂಭ
- ಮೊಗಂಗುಡು – ಎದುರಾಗು
- ಮೊಗಂದಿರಿ(ರು)(ಪು) – ಮುಖ ತಿರುಗಿಸು; ವಿಮುಖವಾಗು
- ಮೊಗಂಬಡೆ – ಅನುನಯ ಮಾಡು; ಒಲಿಸು
- ಮೊಗಂಬುಗಿಸು – ಎದುರಾಗಿಸು
- ಮೊಗಂಬು(ಬೊ)ಗು – ಎದುರಾಗು
- ಮೊಗಂಮುರಿ – ಮುಖ ಕಿವಿಚು; ಮುಖ ತಿರುಗಿಸು
- ಮೊಗಪೆ – ನೀರು ತುಂಬುವ ಪಾತ್ರೆ
- ಮೊಗಮಜ್ಜನ – (ಮುಖಮಾರ್ಜನ) ಮುಖ ತೊಳೆಯುವುದು
- ಮೊಗಮಿಕ್ಕು – ಪ್ರತಿಭಟಿಸು
- ಮೊಗರಂಬ – ಆನೆಕುದುರೆಗಳ ಮುಖಾಲಂಕಾರ ಸಾಧನ
- ಮೊಗರಾಗ – ಮುಖಕಾಂತಿ
- ಮೊಗವಡ – ಮುಖವಾಡ
- ಮೊಗಸಾಲೆ – (ಮುಖಶಾಲಾ) ಮುಖಮಂಟಪ
- ಮೊಗಸು – ಮೇಲೆ ಬೀಳು; ಕೆಲಸಕ್ಕೆ ತೊಡಗು
- ಮೊಗೆ – ನೀರು ತುಂಬು
- ಮೊಗ್ಗರ – ಸಮೂಹ; ಸೈನ್ಯ
- ಮೊಗ್ಗರಿಸು – ಗುಂಪುಗೂಡು
- ಮೊಗ್ಗು – ಸಾಧ್ಯ; ಅರಳದ ಹೂ
- ಮೊಗ್ಗೆ – ಅರಳದ ಹೂ; ಸಾಧ್ಯವೇ?
- ಮೊಚ್ಚೆ(ಯ) – ಪಾದರಕ್ಷೆ
- ಮೊಟ್ಟನೆ – ಹಾಳು
- ಮೊಟ್ಟಯಿಸು – ಪ್ರತಿಭಟಿಸು
- ಮೊಟ್ಟು – ಮಟ್ಟಸ
- ಮೊಟ್ಟೆ – ಮೂಟೆ, ಗಂಟು
- ಮೊಡವಿ – ಮೊಡವೆ, ಮುಖದ ಗುಳ್ಳೆ
- ಮೊಡೆನಾರು – ಕೆಟ್ಟ ವಾಸನೆ ಸೂಸು
- ಮೊತ್ತ – ಸಮೂಹ
- ಮೊತ್ತಮೊದಲ್ – ಎಲ್ಲಕ್ಕಿಂತ ಮೊದಲು
- ಮೊದಲ್ – ಆರಂಭ; ಬೇರು; ತುದಿ; ಮುಂಚೆ; ಬಂಡವಾಳ
- ಮೊದಲಾಗಿ – ಇತ್ಯಾದಿಯಾಗಿ
- ಮೊದಲಿಕ್ಕು – ಆರಂಭಿಸು
- ಮೊದಲಿಗ – ಆರಂಭಿಸಿದವನು; ಪ್ರಮುಖ
- ಮೊದಲಿಡು – ಮೊದಲಿಕ್ಕು
- ಮೊದಲ್ಗೆಡಿಸು – ಹಾಳುಮಾಡು; ಬೇರು ಕೀಳು
- ಮೊದಲ್ಗೆಡು – ಬೇರು ಹಾಳಾಗು; ಬಂಡವಾಳ ಕಳೆದುಕೊ
- ಮೊದಲ್ಗೊಳ್ – ಆರಂಭಗೊಳ್ಳು
- ಮೊನಸು – ಮೊಳಕೆಯೊಡೆ; ಮೂಡು
- ಮೊನೆ – ಮುಂಭಾಗ; ತುದಿ; ಹರಿತವಾದ ಭಾಗ; ಕಾಳಗ; ಸೈನ್ಯ; ಮೊಳಕೆ
- ಮೊನೆಗಣೆ – ಚೂಪಾದ ಬಾಣ
- ಮೊನೆಯಂಬು – ಮೊನೆಗಣೆ
- ಮೊನೆಯಿಡು – ತಿವಿ, ಚುಚ್ಚು
- ಮೊಮ್ಮ – ಮರ್ಮ, ಮೊಮ್ಮಗ
- ಮೊರಡು(ಡಿ) – ದಿಣ್ಣೆ
- ಮೊರೆ – ಝೇಂಕರಿಸು; ಸದ್ದುಮಾಡು
- ಮೊರಕು(ರ್ಕು) – ಗರ್ವದಿಂದ ತಲೆಗೂಗು
- ಮೊರ್ಮರ – ಚಟಪಟ; ಗರಿಗರಿ
- ಮೊಸರಣ್ಕೆ – ಕಳಶಕ್ಕೆ ಮಾಡುವ ಮೊಸರ ಲೇಪನ
- ಮೊಳೆ – ಮೊಳಕೆ; ಮೊಳಕೆಯೊಡೆ
- ಮೊಳೆನುಡಿ – ಸಲಿಗೆ ಮಾತು
- ಮೊಳೆವುಲ್ – ಎಳೆ ಹುಲ್ಲು
- ಮೊಳೆವೋಗು – ಮೊಳಕೆಯೊಡೆ
- ಮೊಳ್ಗು – ಮೊಕ್ಕು, ನಮಸ್ಕರಿಸು
- ಮೋಕ್ಷಗತಿ – ಮುಕ್ತಿ
- ಮೋಕ್ಷಗಾಮಿ – ಮುಕ್ತಿಯೆಡೆ ಸಾಗುವವನು
- ಮೋಕ್ಷಪದ – ಮುಕ್ತಿಪದವಿ
- ಮೋಘ – ವ್ಯರ್ಥ
- ಮೋಚ – ಬಾಳೆ
- ಮೋಚು – ಕೂದಲು ಬೋಳಿಸು
- ಮೋದ – (ಜೈನ) ಐವತ್ತಮೂರು ಗರ್ಭಾನ್ವಯಕ್ರಿಯೆಗಳಲ್ಲಿ ಒಂದು
- ಮೋದಕ – ಸಂತೋಷವುಂಟುಮಾಡುವ
- ಮೋದಗೆ – ಕಡುಬು
- ಮೋದು – ಅಪ್ಪಳಿಸು; ತುಳಿ: ಹೊಡೆತ
- ಮೋನಂಗೊಳ್ – ಸುಮ್ಮಗಿರು; ಮೌನವ್ರತ ತಾಳು
- ಮೋನಿ – ಮೌನಿ; ತಪಸ್ವಿ
- ಮೋಪು – ಈಷ್ರ್ಯೆ; ಪ್ರೀತಿ
- ಮೋರುಂಡೆ – ಒಂದು ಸಿಹಿತಿಂಡಿ
- ಮೋಹ – ಕೂರ್ಮೆ; ಆಕರ್ಷಣೆ; ಭ್ರಮೆ;ಅರಿಷಡ್ವರ್ಗದಲ್ಲಿ ಒಂದು
- ಮೋಹನ – ಆಕರ್ಷಿಸುವ; ಮೂರ್ಛೆ
- ಮೌನಾಧ್ಯಯನವೃತ್ತಿ – (ಜೈನ) ಗರ್ಭಾನ್ವಯಕ್ರಿಯೆಗಳಲ್ಲಿ ಒಂದು; ಮೌನ ಶಾಸ್ತ್ರಾಭ್ಯಾಸ
- ಮೌರವಪಾಶ – ಕಬ್ಬಿಣದ ಸರಪಳಿ
- ಮೌರ್ವೀ – ಬಿಲ್ಲಿನ ಹೆದೆ
- ಮೌಲ – ರಾಜನ ಸೇವೆಯಲ್ಲಿರುವವನು
- ಮೌಲಿ(ಳಿ) – ತುದಿ; ತಲೆ
- ಮೌಲಬಲ – ಮುಖ್ಯ ಸೈನ್ಯ; `ಷಡ್ಬಲ’ದಲ್ಲಿ ಒಂದು
- ಮೌಹೂರ್ತಿಕ – ಜೋಯಿಸ
- ಮೌಳಿಮಣಿ – ಕಿರೀಟದ ರತ್ನ
- ಮ್ಲಾನ – ಬಾಡಿದುದು
- ಮ್ಲಾನತೆ – ಕಳಾಹೀನತೆ; ದುಃಖ
- ಮ್ಲೇಂಛ(ಚ್ಛ)ಖಂಡ – ಅನಾರ್ಯರ ನಾಡು;
Conclusion:
ಕನ್ನಡ ಮ ಅಕ್ಷರದ ಹಳೆಗನ್ನಡ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.