ಕನ್ನಡ ಔ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada aw aksharada halegannadada padagalu , ಕನ್ನಡ ಔ ಅಕ್ಷರದ ಹಳೆಗನ್ನಡ ಪದಗಳು ( Aw halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಔ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( Aw halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಔ ಅಕ್ಷರ ಎಂದರೇನು?
ಔ ಕನ್ನಡ ವರ್ಣಮಾಲೆಯ ಹದಿನಾಲ್ಕನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.
ಕನ್ನಡ ವರ್ಣಮಾಲೆಯಲ್ಲಿ 14ಯದು. ದೀರ್ಘ ಸ್ವರಾಕ್ಷರ. ವ್ಯಂಜನಗಳ ಜೊತೆ ಸೇರದೆ, ಸ್ವತಂತ್ರವಾಗಿ ದೊರಕುವುದು ಅಪುರ್ವ. ಆದುದರಿಂದ ಈ ಅಕ್ಷರದ ಬ್ರಾಹ್ಮೀಲಿಪಿಯ ಸ್ವರೂಪವನ್ನು ತಿಳಿಯುವುದು ಕಷ್ಟ. ಪ್ರ.ಶ. 12ನೆಯ ಶತಮಾನದ ಕಲ್ಯಾಣಿ ಚಾಲುಕ್ಯರ ಶಾಸನಗಳಲ್ಲಿ ಈ ಅಕ್ಷರ ಈಗಿರುವಂತೆ ಇರುವುದನ್ನು ಗಮನಿಸಬಹುದು. ಆದುದರಿಂದ ಪ್ರ.ಶ. 12ನೆಯ ಶತಮಾನಕ್ಕಿಂತ ಮುಂಚೆಯೇ ಇದು ಬ್ರಾಹ್ಮೀಲಿಪಿ ಯಿಂದ ವಿಕಾಸವಾಗಿರಬೇಕು. ಪ್ರ.ಶ. 12ನೆಯ ಶತಮಾನದಿಂದ ಈ ಅಕ್ಷರದ ರೂಪ ಸ್ಥಿರವಾಗಿದ್ದು ಬದಲಾವಣಿಯಿಲ್ಲದೆ ಮುಂದುವರಿಯುತ್ತಿದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಔ ಅಕ್ಷರದ ಹಳೆಗನ್ನಡ ಪದಗಳು – Kannada Words
- ಔಂಕು – ಅಮುಕು
- ಔಘ – ಸಮೂಹ; ಪ್ರವಾಹ
- ಔಡು – ತುಟಿ
- ಔಡೊತ್ತು – ತುಟಿ ಕಚ್ಚು; ಹಲ್ಲುಮಡಿ ಕಚ್ಚು
- ಔತಳ – ಔತಣ
- ಔತ್ಸುಕ್ಯ – ಕುತೂಹಲ; ಉತ್ಸಾಹ
- ಔದನಿಕ – ಬಾಣಸಿಗ, ಅಡಿಗೆಯವನು
- ಔದರಿಕ – ಹೊಟ್ಟೆಬಾಕ
- ಔದಲೆಗಾಣ್ – ಅಡಗು, ಗುಪ್ತವಾಗು
- ಔದಾರಿಕ – ಸ್ಥೂಲದೇಹ
- ಔದುಂಬರ – ಉದುಂಬರ ಮರದಿಂದ ಹುಟ್ಟಿದ್ದು; ಅತ್ತಿಯ ಮರ
- ಔದುಂಬರಕುಷ್ಠ – ಮೈ ಹುಳಬೀಳುವ ಕುಷ್ಠರೋಗದ ಬಗೆ
- ಔದ್ಧತ್ಯ – ಉದ್ಧಟತನ
- ಔಪರಿಷ್ಟಕ – ಮೇಲ್ಭಾಗ; ಒಂದು ಬಗೆಯ ರತಿಕ್ರೀಡೆ
- ಔಮೀನ – ಅಗಸೆ ಹೊಲ
- ಔಮ್ಯ – ಅಗಸೆ ಹೊಲ
- ಔರ್ವ(ರ್ವು) – ಊರ್ವನಿಗೆ ಸಂಬಂಧಿಸಿದ; ತೊಡೆಯಿಂದ ಹುಟ್ಟಿದ; ಭೃಗು ಸಂತತಿಯವನು; ಬಡಬಾಗ್ನಿ
- ಔರ್ವಜ್ವಲ(ಳ)ನ – ಸಮುದ್ರದ ಬೆಂಕಿ, ಬಡಬಾಗ್ನಿ
- ಔರ್ವಾಗ್ನಿ – ಬಡಬಾಗ್ನಿ
- ಔರ್ವಾನಳ – ಬಡಬಾಗ್ನಿ
Conclusion:
ಕನ್ನಡ ಔ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.