ಕನ್ನಡ ಊ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada uu aksharada halegannadada padagalu , ಕನ್ನಡ ಊ ಅಕ್ಷರದ ಹಳೆಗನ್ನಡ ಪದಗಳು ( uu halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಊ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( uu halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಊ ಅಕ್ಷರ ಎಂದರೇನು?
ಕನ್ನಡ ವರ್ಣಮಾಲೆಯಲ್ಲಿ ಆರನೆಯ ಅಕ್ಷರ. ಸ್ವರ. ಸ್ವತಂತ್ರವಾಗಿ ಪ್ರಾಚೀನ ಶಾಸನಗಳಲ್ಲಿ ದೊರಕುವುದು ಬಹು ವಿರಳ. ಆದುದರಿಂದ ವಿಕಾಸವನ್ನು ಗಮನಿಸುವುದು ಕಷ್ಟ. ವ್ಯಂಜನಗಳ ಜೊತೆಗೆ ಸೇರಿಕೊಂಡಾಗ ಎರಡು ಸಣ್ಣರೇಖೆಗಳನ್ನು ವ್ಯಂಜನದ ಕೆಳಗೆ ಇಲ್ಲವೇ ಪಕ್ಕದಲ್ಲಿ ಬರೆಯುವುದರಿಂದ ಇದು ಸೂಚಿತವಾಗುತ್ತಿತ್ತು. ಅಶೋಕನ ಕಾಲದ ಬ್ರಾಹ್ಮೀಲಿಪಿಯಲ್ಲಿ ಇದನ್ನು ಕಾಣಬಹುದು. ಕಾಲಕ್ರಮದಲ್ಲಿ ಎರಡು ಕೊಂಡಿಗಳನ್ನು ಅಕ್ಷರದ ಪಕ್ಕದಲ್ಲಿ ಬರೆಯುವ ಪ್ರವೃತ್ತಿ ರೂಢಿಸಿತು.
Check out Kannada Varnamale : ಕನ್ನಡ ವರ್ಣಮಾಲೆ
ಊ ಅಕ್ಷರದ ಹಳೆಗನ್ನಡ ಪದಗಳು – Kannada Words
- ಊಟ – ಆಹಾರ ತಿನ್ನುವುದು
- ಊಡು – ಊಟ ಮಾಡು; ತಿನ್ನಿಸು; ಲೇಪಿಸು; ಆಹಾರ; ಆಧಾರ; ಅವಲಂಬನೆ
- ಊಡುಗೊಳ್ – ದಾಟಿ ಹೊರಹೋಗು
- ಊಣ – ಊನ, ಕೊರತೆ
- ಊದು – ಬಾಯಿಂದ ಗಾಳಿ ಹೊರಬೀಳಿಸು
- ಊನ – ಕೊರತೆ
- ಊನತ್ವ – ನ್ಯೂನತೆ, ಕೊರತೆ
- ಊರ್ – ವಾಸಿಸುವ ಸ್ಥಳ
- ಊರಾವು – ಊರಿನ ಹಸು
- ಊರಿಚ – ದಡ್ಡ; ಅಸಂಸ್ಕøತ
- ಊರು – ತೊಡೆ
- ಊರುದಘ್ನ – ತೊಡೆ ಮುಳುಗುವಷ್ಟು ಮಟ್ಟ
- ಊರುದ್ವಯನ – ಊರುದಘ್ನ
- ಊರುಬ್ಬೆ – ಊರಿಗೆ ಬಂದ ತೊಂದರೆ
- ಊರುಭಂಗ – ತೊಡೆ ಮುರಿಯುವಿಕೆ
- ಊರುಯುಗ್ಮ – ಊರುದ್ವಯ, ಎರಡು ತೊಡೆಗಳು
- ಊರುವಿಶ್ಲೇಷ – ತೊಡೆಗಳನ್ನು ಬೇರ್ಪಡಿಸುವಿಕೆ
- ಊರೆಳ್ಳು – ಬೇಸಾಯದಿಂದ ಬೆಳೆದ ಎಳ್ಳು
- ಊರ್ಜ -ಸಾಮಥ್ರ್ಯ; ಕಾರ್ತಿಕ ಮಾಸ
- ಊರ್ಜಸ್ವಿ – ಶಕ್ತಿವಂತ
- ಊರ್ಜಿತ – ಹೆಚ್ಚಿದ; ಶಕ್ತಿಯಿಂದ ಕೂಡಿದ
- ಊರ್ಜಿತತೇಜ – ಹೆಚ್ಚಿ ತೇಜಸ್ಸುಳ್ಳವನು
- ಊರ್ಜಿತಪುಣ್ಯ – ಹೆಚ್ಚಿನ ಪುಣ್ಯವುಳ್ಳವನು
- ಊರ್ಜಿತಮತಿ – ಹೆಚ್ಚು ಬುದ್ಧಿವಂತ
- ಊರ್ಜಿತೋಕ್ತಿ – ಪ್ರಸಿದ್ಧ ನುಡಿ
- ಊರ್ಡಂಗುರ – ಊರಿಗೆ ಹಾಕುವ ಡಂಗುರ
- ಊರ್ಣೆ – ಹುಬ್ಬಿನ ಕೂದಲು
- ಊಧ್ರ್ವಗ – ಮೇಲೆ ವ್ಯಾಪಿಸಿದ
- ಊಧ್ರ್ವಗತಿ – ಮೇಲಾದ ಗತಿ; ಏರುವಿಕೆ
- ಊಧ್ರ್ವದಾಂಶು – ಮೇಲೆ ಹರಡುವ ಕಿರಣ
- ಊಧ್ರ್ವಜ್ವಲನ – ಮೇಲ್ಮುಖವಾಗಿ ಉರಿಯುವುದು
- ಊಧ್ರ್ವಬಾಹುವ್ರತಿ – ಕೈಗಳನ್ನು ಮೇಲೆ ಎತ್ತಿ ಹಿಡಿದುಕೊಂಡು ತಪಸ್ಸು ಮಾಡುವವನು
- ಊಧ್ರ್ವಯಾನ – ಗಗನಯಾನ
- ಊಧ್ರ್ವರೇತ – ವೀರ್ಯವನ್ನು ತಡೆಗಟ್ಟಿರುವವನು
- ಊಧ್ರ್ವಲೋಕ – ಮೇಲಿನ ಲೋಕ; (ಜೈನ) ಮೇಲುಗಡೆಯ ಸ್ವರ್ಗಗಳಲ್ಲಿ ಕೊನೆಯದು
- ಊರ್ಮಿ – ದೊಡ್ಡ ತೆರೆ, ಅಲೆ; ಉತ್ಸಾಹ
- ಊರ್ಮಿ(ಕ)ಕೆ – ಉಂಗುರು; ವಿಷಾದ
- ಊರ್ಮಿಮಾಳಿನಿ – ಅಲೆಗಳ ಮಾಲೆಯುಳ್ಳದ್ದು
- ಊರ್ಮಿಶ್ರೇಣಿ – ತೆರೆಗಳ ಪಂಕ್ತಿ
- ಊರ್ಮೆ – ಆಧಿಕ್ಯ, ಶ್ರೇಷ್ಠತೆ
- ಊರ್ವೇಲಿ – ಊರ ಸುತ್ತಣ ಬೇಲಿ
- ಊಷರ – ಬಂಜರುಭೂಮಿ
- ಊಷ್ಮೆ – ತಾಪ
- ಊಳ್ – ಗಟ್ಟಿಯಾಗಿ ಶಬ್ದಮಾಡು; ನಾಯಿನರಿಗಳ ಧ್ವನಿ; ನಿಂದಿಸು; ಅರ್ಥವಿಲ್ಲದೆ ಮಾತಾಡು
- ಊಳಿಕ್ಕು – ಕೂಗಿಕೊ
- ಊಳಿಡು – ಊಳಿಕ್ಕು
Conclusion:
ಕನ್ನಡ ಈ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.