ಕನ್ನಡ ಫ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada Pha aksharada halegannadada padagalu , ಕನ್ನಡ ಫ ಅಕ್ಷರದ ಹಳೆಗನ್ನಡ ಪದಗಳು (PhA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಫ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( Pha halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಫ ಅಕ್ಷರ ಎಂದರೇನು?
ಫ, ಕನ್ನಡ ವರ್ಣಮಾಲೆಯ ಪ-ವರ್ಗದ ಎರಡನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.
ಕ್ರಿ. ಪೂ. ಮೂರನೆಯ ಶತಮಾನದ ಅಶೋಕನ ಶಾಸನಗಳಲ್ಲಿ ಈ ಅಕ್ಷರ ಅಲ್ಪಪ್ರಾಣ ಪಕಾರದಂತೆಯೆ ಇರುವುದು ಗಮನಾರ್ಹ. ಮಹಾಪ್ರಾಣವನ್ನು ಸೂಚಿಸಲು ಇದರ ಬಲಭಾಗದಲ್ಲಿ ಸುರಳಿಯಂತಿರುವ ಕೊಂಡಿಯಿದೆ. ಇದೇ ಪ್ರವೃತ್ತಿ ಐದಾರು ಶತಮಾನಗಳ ಕಾಲ ಮುಂದುವರಿಯುತ್ತದೆ.
ಕ್ರಿ.ಶ. ಸುಮಾರು ಒಂಬತ್ತನೆಯ ಶತಮಾನದಲ್ಲಿ ಈ ಕೊಂಡಿಯ ಬದಲು ಒಂದು ರೇಖೆ ಹುಟ್ಟುತ್ತದೆ. ಮುಂದೆ ಈ ರೇಖೆ ಅಕ್ಷರದ ಕೆಳಭಾಗದಲ್ಲಿ ಬರೆಯಲ್ಪಡುತ್ತದೆ. ವಿಜಯನಗರದ ಕಾಲದಲ್ಲಿ ಹೊಕ್ಕಳು ಸೀಳುವ ಪ್ರವೃತ್ತಿ ಪ್ರಾರಂಭವಾಗುತ್ತದೆ. ಇದೇ ಮುಂದುವರಿಯುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಫ ಅಕ್ಷರದ ಹಳೆಗನ್ನಡ ಪದಗಳು – Kannada Words
- ಫಣ – ಹಾವಿನ ಹೆಡೆ
- ಫಣಮಣಿ – ಹಾವಿನ ಹೆಡೆಯ ಮಣಿ
- ಫಣಾಪತಿ – ಆದಿಶೇಷ
- ಫಣಾಮಣಿ – ಫಣಮಣಿ
- ಫಣಾರತ್ನ – ಫಣಮಣಿ
- ಫಣಿ – ಹೆಡಯುಳ್ಳುದು, ಹಾವು
- ಫಣಿಗೃಹ – ಹುತ್ತ
- ಫಣಿಗೇಹ – ಫಣಿಗೃಹ
- ಫಣಿಧರ – ಹಾವನ್ನು ಧರಿಸಿದವನು, ಶಿವ
- ಫಣಿನಾಯಕ – ಸರ್ಪರಾಜ
- ಫಣಿನಿಲಯ – ಫಣಿಗೃಹ
- ಫಣಿಪ(ತಿ) – ಆದಿಶೇಷ
- ಫಣಿಪತಿಕೇತನ – ಧ್ವಜದಲ್ಲಿ ಹಾವಿನ
- ಚಿಹ್ನೆಯುಳ್ಳವನು, ದುರ್ಯೋಧನ
- ಫಣಿರಾಜಕೇತನ – ಫಣಿಪತಿಕೇತನ
- ಫಣಿಲೋಕ – ನಾಗಲೋಕ
- ಫಣಿವೇಣಿ – ಹಾವಿನಂತೆ ಜಡೆಯುಳ್ಳವಳು
- ಫಣಿಶಯನ – ಹಾವನ್ನೇ ಹಾಸಿಗೆಯಾಗುಳ್ಳವನು, ವಿಷ್ಣು
- ಫಣೀಂದ್ರ – ಆದಿಶೇಷ
- ಫಣೀಶ – ಫಣೀಂದ್ರ
- ಫಣ್ಯಾಕಲ್ಪ – ಹಾವಿನ ಆಭರಣವುಳ್ಳವನು, ಶಿವ
- ಫಣೀಂದ್ರಾಲಯ – ಪಾತಾಳಲೋಕ
- ಫಲ(ಳ) – ಹಣ್ಣು; ಪ್ರಯೋಜನ; ಫಲಿತಾಂಶ
- ಫಲ(ಳ)ಕ – ಹಲಗೆ; ಗುರಾಣಿ
- ಫಲ(ಳ)ದಾನ – ಹಣ್ಣುಗಳನ್ನು ದಾನ ಕೊಡುವುದು
- ಫಲಪೂರ – ಮಾದಳ
- ಫಲಪ್ರಾಪ್ತಿ – ಫಲ ದೊರೆಯುವುದು
- ಫಲ(ಳ)ಭರ – ಹಣ್ಣುಗಳ ಭಾರ; ಹಣ್ಣುಗಳಿಂದ ತುಂಬಿರುವುದು
- ಫಲಭರಿತ – ಹಣ್ಣುಗಳಿಂದ ತುಂಬಿರುವ
- ಫಲ(ಳ)ಭಾರ – ಫಲ(ಳ)ಭರ
- ಫಲ(ಳ)ಮಂಜರಿ – ಹಣ್ಣುಗಳ ಗೊಂಚಲು
- ಫಲವಂತ – ಹಣ್ಣುಗಳಿಂದ ಕೂಡಿದ; ಫಲವತ್ತಾದ; (ಜೈನ) ಕರ್ಮನಾಶಕವಾದ ಒಂದು ಧರ್ಮ
- ಫಲ(ಳ)ವತಿ – ಗರ್ಭಿಣಿ; ಹಣ್ಣು ಬಿಡುವ ಮರಗಿಡ
- ಫಲಾಖ್ಯಾನ – ಶಲಾಕಾಪುರುಷನಿಗೆ ಮುಮದೆ
- ಬರಲಿರುವ ಸುಖವನ್ನು ತಿಳಿಸುವುದು
- ಫಲಿ(ಳಿ)ತ – ಹಣ್ಣುಗಳನ್ನು ಬಿಟ್ಟಿರುವ
- ಫಲಿನೀಫಲ – ಪ್ರಿಯಂಗು ಬಳ್ಳಿಯ ಹಣ್ಣು
- ಫಲಿಯಿಸು – ದೊರಕಿಸಿಕೊಡು
- ಫಲೋತ್ಸುಕ – ಫಲವನ್ನು ಪಡೆಯಲು ಉತ್ಸುಕನಾದವನು
- ಫಲ್ಗು – ಚಿಕ್ಕದು
- ಫಳಕಾರ – ಉಪಕಾರ ಮಾಡುವವನು
- ಫಳಪಕಾಂತತೆ – ಫಲ ಬಿಟ್ಟ ತಕ್ಷಣ ನಾಶವಾಗುವುದು
- ಫಳರಸ – ಹಣ್ಣಿನ ರಸ
- ಫಳಹೀನತೆ – ನಿಷ್ಫಲತೆ
- ಫಳೆಯಕಾ – ಗುರಾಣಿ ಹಿಡಿದ ಸೈನಿಕ
- ಫಾಲ – ಹಣೆ
- ಫಾಲ್ಗುನ – ಚಾಂದ್ರಮಾನದ ಹನ್ನೆರಡನೆಯ ತಿಂಗಳು
- ಫಾಳ್ಗುನನಂದೀಶ್ವರ – (ಜೈನ) ಫಾಲ್ಗುಣದಲ್ಲಿ ಆಚರಿಸುವ ಒಂದು ವ್ರತ
- ಫುಲ್ಲ – ಅರಳಿದ
- ಫುಲ್ಲವಟುಕ – ಹೂವಾಡಿಗರ ಹುಡುಗ
- ಫುಲ್ಲಶರ – ಹೂಬಾಣ; ಮನ್ಮಥ
- ಫುಲ್ಲೋತ್ಪಲ – ಅರಳಿದ ತಾವರೆ
- ಫೂತ್ಕರಿಸು – ಶಬ್ದಸಹಿತ ಉಸಿರು ಬಿಡುವುದು
- ಫೂತ್ಕಾರ – ಶಬ್ದಸಹಿತ ಉಸಿರು ಬಿಡುವಿಕೆ
- ಫೂತ್ಕøತಿ – ಫೂತ್ಕಾರ
- ಫೇನ – ನೊರೆ
- ಫೇರವ – ನರಿ
Conclusion:
ಕನ್ನಡ ಫ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.