ಕನ್ನಡ ಓ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada oo aksharada halegannadada padagalu , ಕನ್ನಡ ಓ ಅಕ್ಷರದ ಹಳೆಗನ್ನಡ ಪದಗಳು ( oo halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಓ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( oo halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಓ ಅಕ್ಷರ ಎಂದರೇನು?
ಓ ಇದು ಕನ್ನಡ ವರ್ಣಮಾಲೆಯಲ್ಲಿ ಹದಿಮೂರನೆಯದು, ದೀರ್ಘಸ್ವರಾಕ್ಷರ, ಲಿಪಿಯ ದೃಷ್ಟಿಯಿಂದ ಒ ಮತ್ತು ಓಕಾರಗಳಲ್ಲಿ ಪ್ರಾಚೀನಕಾಲದ ಶಾಸನಗಳಲ್ಲಿ ಅಷ್ಟಾಗಿ ವ್ಯತ್ಯಾಸಗಳು ಕಾಣಬರುವುದಿಲ್ಲ. ಬಹುಶಃ ಇವೆರಡಕ್ಕೂ ವ್ಯತ್ಯಾಸ ತೋರಿಸುವ ಪ್ರವೃತ್ತಿ ವಿಜಯನಗರ ಕಾಲಾಂತರ ಬೆಳೆದುಬಂದಿರಬೇಕು. ಆದರೆ ಬರೆವಣಿಗೆಯಲ್ಲಿನ ಈ ವ್ಯತ್ಯಾಸ ಖಚಿತವಾಗಿ ಯಾವಾಗ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟ. ಪ್ರ.ಶ. 18ನೆಯ ಶತಮಾನದ ಶಾಸನಗಳಲ್ಲಿ ಈ ಅಕ್ಷರದ ಹ್ರಸ್ವ ಮತ್ತು ದೀರ್ಘಗಳಿಗೆ ಪ್ರತ್ಯೇಕ ರೂಪಗಳಿರುವುದು ಕಂಡುಬರುತ್ತದೆ.
ಅಶೋಕನ ಕಾಲದಲ್ಲಿ ಅಕ್ಷರದ ಮೇಲ್ಭಾಗದಲ್ಲಿ ಎಡಬಲ ಗಳಲ್ಲಿ ಅಡ್ಡ ಗೀಟುಗಳಿದ್ದುವು. ಕದಂಬರ ಕಾಲದಲ್ಲಿ ಮೇಲಿನ ಅಡ್ಡಗೀಟುಗಳು ಡೊಂಕಾದುವು. ಗಂಗರ ಕಾಲಕ್ಕೆ ಬಲಭಾಗದ ರೇಖೆ ಇನ್ನೂ ಕೆಳಕ್ಕೆ ಬಾಗಿತು. ಇದು ರಾಷ್ಟ್ರಕೂಟ ಕಾಲದಲ್ಲಿ ಇನ್ನೂ ಸ್ಪಷ್ಟ. ಚಾಲುಕ್ಯರ ಕಾಲಕ್ಕೆ ಎಡದ ರೇಖೆಯ ಪ್ರಾಮುಖ್ಯ ಹೋಗಿ ಬಲಗಡೆಯ ರೇಖೆ ಇನ್ನೂ ಖಚಿತವಾಯಿತು. ಮದಕರಿನಾಯಕನ ಕಾಲಕ್ಕಾಗಲೆ ಅಕ್ಷರದಲ್ಲಿ ಓತ್ವ ಮತ್ತು ದೀರ್ಘಗಳು ಈಗಿನಂತೆ ಸ್ಪಷ್ಟವಾಗಿ ಗೋಚರಿಸಿದುವು
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಓ ಅಕ್ಷರದ ಹಳೆಗನ್ನಡ ಪದಗಳು – Kannada Words
- ಓ – ಪ್ರೀತಿಸು; ಓ ಎಂದು ಉತ್ತರಿಸು; ಸಲಹು
- ಓಂಕಾರ – ಪ್ರಣವಾಕ್ಷರ
- ಓಂತಿ – ಓತಿಕೇತ
- ಓಕರಿಸು – ಕಾರು, ವಾಂತಿಮಾಡು
- ಓಕಃಪ್ರಾಂಗಣ – ಮನೆಯ ಅಂಗಳ
- ಓಕುಳಿ – ಬಣ್ಣದ ನೀರು
- ಓಕುಳಿಯಾಡು – ಬಣ್ಣದ ನೀರನ್ನು ಪರಸ್ಪರ ಎರಚು
- ಓಕರಿಸು – ವಾಂತಿ ಮಾಡು; ಅಸಹ್ಯಪಡು
- ಓಗಂಬಾ(ಪಾ)ಡು – ಸುಪ್ರಭಾತ ಹಾಡು; ದ್ರುತಗತಿಯಿಂದ ಹಾಡು
- ಓಗಟೆ – ಒಗಟು, ಒಡಪು
- ಓಗಡಿಸು – ಓಕರಿಸು; ಆಲಸ್ಯ ತೋರು; ಹಿಂಜರಿ
- ಓಗರ – ಪಕ್ವವಾದ; ಅನ್ನ
- ಓಗರಗಂಪು – ಬೆರಕೆ ಗಂಧ ; ಸಮ್ಮಿಶ್ರಗಂಧ
- ಓಗರವೂ – ಬೆರಕೆ ಹೂ
- ಓಘ – ಧಾರೆ; ಗುಂಪು; ಪ್ರವಾಹ
- ಓಘಮೇಘ – ಧಾರಾಕಾರ ಮಳೆ
- ಓಜ – ಒವಜ (ಉಪಾಧ್ಯಾಯ) ಗುರು
- ಓಜಾಯಿತ – ಶ್ರೇಷ್ಠ ಶಿಲ್ಪಿ
- ಓಜಾಯಿಲ – ಮೋಸಗಾರ
- ಓಜೆ – ಕ್ರಮ; ಶ್ರೇಣಿ; ತಾಳ
- ಓಜೆಗೆಯ್ಸು – ಕ್ರಮಗೊಳಿಸು
- ಓಜೆಗೊಳ್ – ಕ್ರಮ ಅನುಸರಿಸು
- ಓಜೆದಪ್ಪು – ಕ್ರಮ ತಪ್ಪು
- ಓಜೆವಿಡಿ – ಓಜೆ+ಪಿಡಿ, ಪಳಗಿಸಿದ ಹೆಣ್ಣಾನೆ
- ಓಜೆವೆರಸು – ಕ್ರಮದ ಅನುಸರಣೆ ಮಾಡು
- ಓಟ – ಓಡುವಿಕೆ
- ಓಡ – ತೆಪ್ಪ, ದೋಣಿ
- ಓಡಾಡು – ತಿರುಗಾಡು
- ಓಡಿಸು – ಓಡುವಂತೆ ಮಾಡು
- ಓಡು – ವೇಗವಾಗಿ ಹೋಗು; ಬೋಕಿಬಿಂಚು;
- ಮಡಕೆ; ತಲೆಯ ಚಿಪ್ಪು
- ಓಣಿಯೋಗು – ಕೊರಕಲಾಗು
- ಓತ – ಓದು; ಒಲಿದ
- ಓದನ – ಓಗರ, ಅನ್ನ
- ಓದಾಳಿ – ಓದುಗಾರ
- ಓದಿಸು – ಕಲಿಸು, ಶಿಕ್ಷಣ ನೀಡು
- ಓದು – ಪಠಿಸು; ವಿದ್ಯೆ ಕಲಿ; ಜ್ಞಾನ
- ಓದುಕುಳಿ – ಓದಿನಲ್ಲಿ ಆಸಕ್ತನಾದವನು
- ಓದುಗಲಿ – ವಿದ್ಯೆ ಕಲಿ
- ಓದುಳ್ಳ – ಓದಿದವನು; ವಿದ್ವಾಂಸ
- ಓದೊಡೆಯ – ಓದುಳ್ಳ
- ಓಪ – ಪ್ರಿಯಕರ
- ಓಪರ್ – ಪ್ರಿಯ-ಪ್ರೇಯಸಿಯರುಓಪಳ್ – ನಲ್ಲೆ
- ಓಪಾದಿ – ಹಾಗೆ
- ಓಪು – ಪ್ರೀತಿ
- ಓರಂಡಲ – ಬೆಂಬಲ
- ಓರಂ(ತು)ತೆ – ಒಂದೇ ಸಮನಾಗಿ
- ಓರಂದ – ಒಂದೇ ಕ್ರಮ, ಏಕಪ್ರಕಾರ
- ಓರಗೆ – ಸಮವಯಸ್ಕ
- ಓರಗೆಗೊಳ್ – ಜೊತೆಯಾಗು
- ಓರಗೆಯೆನಿಸು – ಸಮನಾಗು
- ಓರಗೆವೂ – ಬಗೆಬಗೆಯಾದ ಹೂ
- ಓರಡಿ – ಒಂದು ಅಡಿ, ಒಂದು ಹೆಜ್ಜೆ
- ಓರನ್ನ – ಒಂದೇ ತೆರ; ಸರಿ ಸಾಟಿ
- ಓರಣ – ಸಾಲು, ಪಂಕ್ತಿ; ಅಚ್ಚುಕಟ್ಟು
- ಓರಣಂಗೊಳ್ – ಒಪ್ಪವಾಗು
- ಓರಣಂಗೊಳಿಸು – ಚೆನ್ನಾಗಿ ಜೋಡಿಸು
- ಓರಣಂಬಿಡಿ – ಓರಣಂಗೊಳ್
- ಓರಣಿಕೆ – ಓರಣವಾಗಿರುವಿಕೆ
- ಓರಣಿಸು – ಓರಣವಾಗಿರು
- ಓರನ್ನ – ಒಂದೇ ರೀತಿ; ಸಮಾನ
- ಓರನ್ನೆ – ಸಮಾನೆ
- ಓರನ್ನರ್ – ಒಂದೇ ಬಗೆಯವರು
- ಓರಾಯ – ಪಂಕ್ತಿ; ಒಂದೇ ಅಳತೆ
- ಓರೆ – ಓರಗೆ
- ಓರೆಂಜಲ್ – ಜೊತೆಗೆ ಊಟಮಾಡುವವರು
- ಓರೆಡೆ – ಒಂದು ಎಡೆ
- ಓರೆವೋಗು – ಒಂದು ಕಡೆಗೆ ಓಲು
- ಓರೊಂದು – ಒಂದೊಂದು; ಪರಸ್ಪರ
- ಓರೊರ್ಮೆ – ಒಂದೊಂದು ಬಾರಿ
- ಓರೊರ್ವ – ಒಬ್ಬೊಬ್ಬ
- ಓರ್ಗುಡಿಸು – ಕುಪ್ಪೆಹಾಕು
- ಓಲಗ – ರಾಜಸಭೆ; ರಾಜಸೇವೆ
- ಓಲಗಂಗುಡು – ರಾಜಸಭೆ ನಡೆಸು
- ಓಲಗವುರುಡು – ರಾಜಸಭೆಯಲ್ಲಿ ನಡೆಯುವ ಸ್ಪರ್ಧೆ
- ಓಲಗಶಾಲೆ – ರಾಜನ ಸಭಾಮಂಟಪ
- ಓಲಗಿಗ – ಸೇವಕ
- ಓಲಗಿಸು – ಸೇವೆಮಾಡು; ಅರ್ಪಣೆಮಾಡು
- ಓಲಾಡಿಸು – ತೊನೆದಾಡಿಸು; ಸ್ನಾನಮಾಡಿಸು
- ಓಲಾಡು – ತೊನೆದಾಡು; ಹಿಗ್ಗು; ಜಲಕೇಳಿಯಾಡು
- ಓಲೆ – ತಾಳೆಗರಿ; ಪತ್ರ; ಕಿವಿಯ ಆಭರಣ; ರಥದ ಮೇಲ್ಕಟ್ಟು
- ಓಲೆಗುಡು – ಪತ್ರ ಕಳಿಸು
- ಓಲೆಯಡಕು – ಪತ್ರ ತಲುಪಿಸು
- ಓಲೆಯೊಯ್ – ಓಲೆಯಡಕು
- ಓಲೆವಾಗ್ಯ – ಓಲೆಯ ಭಾಗ್ಯ; ಮುತ್ತೈದೆತನ
- ಓಲೈಸು – ಸೇವೆಮಾಡು; ಅನುಸರಿಸು
- ಓವನಿಗೆ – ಒಂದು ಬಗೆಯ ಹಾಡುಗಬ್ಬ
- ಓವದೆ – ಓ+ಅದೆ, ಲಕ್ಷೈಮಾಡದೆ
- ಓವರಿ – ಕೋಣೆ; ಒಳ ಮನೆ; ಗುರಿ, ಈಡು
- ಓವು -ಓ, ಕಾಪಾಡು
- ಓವೋ – ಆಶ್ಚರ್ಯ-ದುಃಖಸೂಚಕ ನಿಪಾತಾವ್ಯಯಓಷಧೀಶ್ವರ – ಸಸ್ಯಾಧಿಪತಿ, ಚಂದ್ರ
- ಓಷ್ಠಪುಟಸಂದಂಶ – ಹಲ್ಲುಮುಡಿ ಕಚ್ಚುವುದು
- ಓಸರಿಗೆ – ಮನೆಯ ಮುಂದಣ ಅಥವಾ ಹಿಂದಣ ಅಂಗಳ
- ಓಸರಿಗೊಳ್ – ಪಕ್ಕಕ್ಕೆ ಸರಿದು ಹೋಗು
- ಓಸರಿಸು – ಓರೆ ಮಾಡು, ಓರೆಯಾಗು; ಹಿಂಜರಿ; ನೇವರಿಸು; ಬಿಟ್ಟುಬಿಡು
- ಓಹಣ – ವಾಹನ
- ಓಳ್ – ಸಂಭೋಗಿಸು
- ಓಳಿ – ಸಾಲು, ಸಮೂಹ; ಓರಣ, ಕ್ರಮ
- ಓಳಿಗೊಳ್; ಸಾಲುಗೊಳ್ಳು
- ಓಳಿದೋರಣ – ಸಾಲು ತೋರಣ
- ಓಳಿಯಿಸು – ಸಾಲಾಗಿಸು
- ಓಳಿವಡು(ಡೆ) – ಸಾಲುಗಟ್ಟು
- ಓಳಿವೀಡು – ಸಾಲು ಮನೆ
- ಓಳೀವೆಳ್ಪು – ಬಿಳಿಬಣ್ಣದ ಸಾಲು
- ಓಳ್ಕೆ – ರತಿಕ್ರೀಡೆ
Conclusion:
ಕನ್ನಡ ಓ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.