ಕನ್ನಡ ಒ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada o aksharada halegannadada padagalu , ಕನ್ನಡ ಒ ಅಕ್ಷರದ ಹಳೆಗನ್ನಡ ಪದಗಳು ( o halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಒ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( o halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಒ ಅಕ್ಷರ ಎಂದರೇನು?
ಒ ಇದು ಒಂದು ಸ್ವರಾಕ್ಷರ. ಕನ್ನಡ ವರ್ಣಮಾಲೆಯ ಹನ್ನೊಂದನೇ ಅಕ್ಷರವಾಗಿದೆ. ಇದು ಒಂದು ಸ್ವರಾಕ್ಷರ. ಇ ಕನ್ನಡದ ಹೃಸ್ವ ಸ್ವರ ಅಕ್ಷರ. ನಾಮಿಸ್ವರಗಳಲ್ಲಿ ಇ ಮತ್ತು ಈ ಜೊತೆ ಸೇರುತ್ತವೆ. ಹಾಗಾಗಿ ಸವರ್ಣಗಳಲ್ಲಿ ಒ ಅಕ್ಷರದ ಪಾತ್ರವೂ ಇದೆ.
ಕನ್ನಡ ವರ್ಣಮಾಲೆಯಲ್ಲಿ ಹನ್ನೆರಡನೆಯದು. ಹ್ರಸ್ವಸ್ವರಾಕ್ಷರ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿ ಈ ಅಕ್ಷರ ಒಂದು ಲಂಬರೇಖೆಯ ಮೇಲ್ತುದಿಯ ಎಡಭಾಗದಲ್ಲಿ ಮತ್ತು ಕೆಳತುದಿಯ ಬಲಭಾಗದಲ್ಲಿ ಅಡ್ಡರೇಖೆಗಳಿಂದ ಕೂಡಿದೆ. ಸಾತವಾಹನರ ಕಾಲದಲ್ಲಿ ವಿಶೇಷ ಬದಲಾವಣೆಯಿಲ್ಲದೆ ಅದರ ಮೂಲೆಗಳು ಗುಂಡಗಾಗುತ್ತವೆ. ಸ್ವತಂತ್ರವಾಗಿ ಈ ಅಕ್ಷರ ದೊರಕುವುದು ಕಷ್ಟವಾದುದರಿಂದ 12ನೆಯ ಶತಮಾನದವರೆಗಿನ ಇದರ ರೂಪ ಹೇಗಿದ್ದಿತೆಂದು ಹೇಳುವುದು ಕಷ್ಟ.. ಕಲ್ಯಾಣಿ ಚಾಳುಕ್ಯರ ಶಾಸನಗಳಲ್ಲಿ ಇದು ಈಗಿರುವ ರೂಪಕ್ಕೆ ಬಹುಸಮೀಪವಾಗಿಯೇ ಇರುವುದು ಕಂಡುಬರುತ್ತದೆ. ಇದೇ ರೂಪ ಹೊಯ್ಸಳ, ವಿಜಯನಗರ ಕಾಲಗಳಲ್ಲಿಯೂ ಮುಂದುವರಿದು ಅಕ್ಷರದ ಪ್ರಸ್ತುತ ರೂಪ ಸ್ಥಿರವಾಗುತ್ತದೆ.
ಈ ಅಕ್ಷರದ ಹ್ರಸ್ವ ಮತ್ತು ದೀರ್ಘ ರೂಪಗಳಿಗೆ ಅಷ್ಟಾಗಿ ವ್ಯತ್ಯಾಸಗಳು ಕಾಣಬರುವುದಿಲ್ಲ. ಮೊದಲ ರೂಪಗಳು ಸಂಸ್ಕೃತದಲ್ಲಿರುವಂತೆ ದೀರ್ಘವನ್ನೇ ಸೂಚಿಸುತ್ತವೆ. ಅನಂತರ ಕನ್ನಡ ಪದಪ್ರಯೋಗ ಹೆಚ್ಚಿದಂತೆಲ್ಲ ಹ್ರಸ್ವ ದೀರ್ಘಗಳ ರೂಪ ವ್ಯತ್ಯಾಸ ಖಚಿತವಾಗುತ್ತ ಬರುತ್ತದೆ. ಲಿಪಿಯ ದೃಷ್ಟಿಯಿಂದ ಈ ವ್ಯತ್ಯಾಸ ಯಾವಾಗ ಪ್ರಾರಂಭವಾಯಿತು ಎಂದು ಹೇಳಲು ಸಾಧ್ಯವಿಲ್ಲ. ಈ ಅಕ್ಷರ ಪಶ್ಚ ಅರ್ಧಸಂವೃತ ಗೋಲ ಸ್ವರವನ್ನು ಸೂಚಿಸುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಒ ಅಕ್ಷರದ ಹಳೆಗನ್ನಡ ಪದಗಳು – Kannada Words
- ಒಂತಿ – ಓತಿಕೇತ
- ಒಂದವಿಂದ – (ಒಂದು) ಸೋಜಿಗ
- ಒಂದವಿಂದಿ – ಒಂದು ಗುಂಪಿಗೆ ಸೇರಿದ
- ಒಂದವಿಂದಿಗ – ಒಂದು ಗುಂಪಿಗೆ ಸೇರಿದವನು
- ಒಂದಿಗ – ಜೊತೆಯವನು
- ಒಂದಸು – ಕೂಡಿಸು; ಜೋಡಿಸು
- ಒಂದು – ಕೂಡು, ಸೇರು; ಪಡೆ, ಹೊಂದು; ಹೊಂದಿಕೊ; ಒಂದು ಸಂಖ್ಯೆ
- ಒಂದುಗುಂದು – ಒಂದೂ (ಸ್ವಲ್ಪವೂ) ಕಡಿಮೆಯಾಗದೆ
- ಒಂದುಗೊಳ್ – ಒಂದ(ನೆಯದ)ನ್ನು ತೆಗೆದುಕೊ
- ಒಂದುಮಾಡು – ಒಂದಾಗಿಸು, ಕೂಡಿಸು
- ಒಂದೆ ಮೆಯ್ಯೊಳ್ – ಏಕಾಂಗಿಯಾಗಿ
- ಒಂದೆವಸ – ಒಂದು ದಿವಸ
- ಒಂದೆಸಕ – ಇಡಿಯಾದ ಒಂದು ಆಚರಣೆ
- ಒಂದೆಸೆ – ಒಂದು ದೆಸೆ, ದಿಕ್ಕು, ಕಡೆ
- ಒಂದೊರ್ವರ್ – ಒಬ್ಬೊಬ್ಬರು
- ಒಕ್ಕಣ – ಒಕ್ಕುವ ಕೆಲಸ
- ಒಕ್ಕಲ್ – ಗುಂಪು; ಮನೆತನ; ಬೇಸಾಯಗಾರ
- ಒಕ್ಕಲಾಗು – ಬಾಳು, ಜೀವಿಸು
- ಒಕ್ಕಲಿಕ್ಕು – ಒಕ್ಕಣ ಮಾಡು, ಬಡಿ, ಕೆದರು
- ಒಕ್ಕಲಿಗ – ಬೇಸಾಯ ಮಾಡುವವನು
- ಒಕ್ಕಲಗಿತ್ತಿ – ಬೇಸಾಯಗಿತ್ತಿ
- ಒಕ್ಕಲಿಸು – ವ್ಯಾಪಿಸು
- ಒಕ್ಕಲುವೋಗಿಸು – ಗುಳೇ ಹೋಗುವ ಹಾಗೆ ಮಾಡು; ಸಂಸಾರಸಹಿತವಾಗಿ ಕೊಲ್ಲು
- ಒಕ್ಕಳ – ಒರ್+ಕಳ, ಒಂದು ಕೊಳಗ
- ಒಕ್ಕು – ಹೊರಕ್ಕೆ ಸುರಿ; ಕಾಳು ಬೇರ್ಪಡಿಸು,
- ಒಕ್ಕಣ ಮಾಡು; ಶಕುನ ತಿಳಿಯದಂತೆ ಹೇಳು
- ಒಗರಡಕೆ – ಒಗರಾದ ಅಡಕೆ; ಹಸಿ (ಸಂಸ್ಕರಿಸದ)ಅಡಕೆ
- ಒಗಸು – ಇಷ್ಟವಾಗು
- ಒಗಸುಗಂ – ಅತಿಶಯವಾಗು
- ಒಗು – ಹೊರಸೂಸು; ಹೊಮ್ಮುವಿಕೆ
- ಒಗುಮಿಗು – ಆಧಿಕ್ಯ
- ಒಗೆ – ಹುಟ್ಟು, ಕಾಣಿಸಿಕೊ; ವಸ್ತ್ರಪ್ರಕ್ಷಾಲನ, ಬಟ್ಟೆಯನ್ನು ಶುದ್ಧಗೊಳಿಸು
- ಒಗೆತರ್ – ಕಾಣಿಸಿಕೊ; ಉಂಟಾಗು
- ಒಗೆಯಿಸು – ಉಂಟುಮಾಡು
- ಒಗ್ಗಡಿಸು – ಒಂದಾಗು
- ಒಗ್ಗುಗೆಡು – ಬೇರೆಯಾಗು
- ಒಚ್ಚತ – ಸೇರಿದ; ಸೀಮಿತವಾದುದು
- ಒಚ್ಚತಂ – ಒಂದೇ ಸಮನೆ; ಹೆಚ್ಚಾಗಿ; ಗಾಢವಾಗಿ
- ಒಚ್ಚತಂಗೊಳ್ – ಪಡೆದುಕೊ
- ಒಜ್ಜರ – ಝರಿ, ಬೆಟ್ಟದಿಂದ ಹರಿಯುವ ನದಿ; ರಾಜಲಾಂಛನ
- ಒಜ್ಜರಂರಿ – ಝರಿಯಂತೆ ರಭಸದಿಂದ ಹರಿ
- ಒಜ್ಜರಿಸು – ಸುರಿಸು
- ಒಟ್ಟ – (ಓಷ್ಠ) ತುಟಿ
- ಒಟ್ಟಜ – ಕಪ್ಪ, ಕಾಣಿಕೆ
- ಒಟ್ಟಜೆ – ಅತಿಶಯ; ಸಮೂಹ; ಪರಾಕ್ರಮ
- ಒಟ್ಟಜೆಕಾ¾ – ಪರಾಕ್ರಮಿ
- ಒಟ್ಟಜೆಗೆ(ಗಿ)ಡು – ಗುಂಪು ಚೆದುರು
- ಒಟ್ಟಳ – ಗಲಿಬಿಲಿ; ಕೋಲಾಹಲ
- ಒಟ್ಟಿಲ್ – ರಾಶಿ
- ಒಟ್ಟಿಸು – ಒಟ್ಟಯಿಸು, ರಾಶಿಮಾಡು, ಪುಂಜೀಕರಣ
- ಒಟ್ಟು – ರಾಶಿಮಾಡು; ರಾಶಿ; ಶಪಥ; ಆಣೆಮಾಡು
- ಒಟ್ಟೆ – (ಉಷ್ಟ್ರ) ಒಂಟೆ
- ಒಟ್ಟೈಸು – ಜಾರು; ಆಕ್ರಮಿಸು
- ಒಟ್ಟೆಗುತ್ತ – ಅಡವಿಟ್ಟ ವಸ್ತು
- ಒಟ್ಟೊಟ್ಟಿಗ – (ಕೆಟ್ಟ) ಸಹವಾಸದಲ್ಲಿರುವವನು
- ಒಡಂ – ಸಹಿತವಾಗಿ; ಜೊತೆಯಾಗಿ
- ಒಡಂಗೊಳ್ – ಜೊತೆಯಲ್ಲಿ ಸೇರಿಸಿಕೊ
- ಒಡಂಬಡು – ಒಪ್ಪಿಗೆ ಕೊಡು; ಅನುಮತಿ ನೀಡು;
- ಒಡಂಬಡಿಕೆ
- ಒಡಂಬಿ – ಶರೀರ
- ಒಡಗಚ್ಚು – ಪ್ರತಿಯಾಗಿ ಕಚ್ಚು
- ಒಡಗಲಸು – ಸೇರು; ಸೇರಿಸು
- ಒಡಗಳೆ – ಜೊತೆಯಲ್ಲಿ ಬಿಡು
- ಒಡಗಾಣ್ – ಜೊತೆಜೊತೆಗೆ ಕಾಣು
- ಒಡಗೂಡು – ಜೊತೆಯಲ್ಲಿ ಸೇರು
- ಒಡನಡಪು – ಜೊತೆಯಾಗಿ ನಡೆಸು
- ಒಡನಲಿ – ಜೊತೆಯಲ್ಲಿ ಸಂತೋಷಿಸು
- ಒಡನಾಟ – ಸಹವಾಸ, ಸ್ನೇಹ
- ಒಡನಾಡಿ – ಜೊತೆಗಾರ
- ಒಡನಾಡಿಗ – ಒಡನಾಡಿ
- ಒಡನಾಡು – ಜೊತೆಯಲ್ಲಿ ಆಡು; ಸ್ನೇಹಮಾಡು
- ಒಡನಿರ್ – ಜೊತೆಯಲ್ಲಿರು
- ಒಡನುಡಿ – ಜೊತೆಗೆ ಮಾತಾಡು
- ಒಡನೆ – ಜೊತೆಗೆ; ತಕ್ಷಣ
- ಒಡನೋಡಿ – ಜೊತೆಯಲ್ಲಿ ನೋಡಿ
- ಒಡನೋದು – ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುವವನು
- ಒಡಮೆ – ಧನ; ಒಡವೆ
- ಒಡಮೆವಡೆ – ಆಸ್ತಿಯನ್ನು ಪಡೆ
- ಒಡರಿಸು – ಮಾಡು; ನೆರವೇರಿಸು; ಒಟ್ಟುಗೂಡಿಸು
- ಒಡರ್ಚು – ತೊಡಗು; ಆರಂಭಿಸು; ನೆರವೇರಿಸು
- ಒಡಲ್ – ಶರೀರ; ಹೊಟ್ಟೆ
- ಒಡವರಿ – ಜೊತೆಯಾಗಿ ಹರಿ
- ಒಡವರೆಯ – ಒಂದೇ ಪ್ರಾಯ, ಸಮ ವಯಸ್ಸು
- ಒಡವಳೆ – ಜೊತೆಯಾಗಿ ಬೆಳೆ
- ಒಡವಾರ – ಒಂದು ಮರ
- ಒಡವುಗು – ಕೂಡಿ ಹೊಗು
- ಒಡವುಟ್ಟು – ಒಂದೇ ತಾಯ ಹೊಟ್ಟೆಯಲ್ಲಿ ಹುಟ್ಟು
- ಒಡವುಟ್ಟಿದರ್ – ಸೋದರರು
- ಒಡವೆರ್ಚು – ಜೊತೆಯಲ್ಲಿ ಹೆಚ್ಚಾಗು
- ಒಡವೆಳಸು – ಜೊತೆಯಲ್ಲಿ ಬೆಳೆಸು
- ಒಡವೆಳೆ – ಜೊತೆಯಲ್ಲಿ ಬೆಳೆ
- ಒಡವೇ¾ು – ಜೊತೆಯಲ್ಲಿ ಹೇರಿಕೊ
- ಒಡವೋಗು – ಜೊತೆಗೇ ಹೋಗು
- ಒಡಸಲ್ – ಜೊತೆಯಲ್ಲಿ ಸಲ್ಲು; ಸೇರು
- ಒಡಸಾಯ್ – ಜೊತೆಯಲ್ಲಿ ಮರಣಹೊಂದು
- ಒಡೆ – ಭಾಗವಾಗು, ಚೂರಾಗು; ಚೂರುಮಾಡು
- ಒಡೆಗಳೆ – ಒಡೆ+ಕಳೆ, ಜೊತೆಯಲ್ಲಿ ಕಳೆದುಕೊ
- ಒಡೆತು – ಉಳ್ಳುದು
- ಒಡೆಯ – ಪ್ರಭು; ಯಜಮಾನ
- ಒಡೆಯದು – ಒಡೆತು
- ಒಡೆಯಿಕ್ಕು – ಚೂರುಮಾಡು
- ಒಡೆಯಿಡು – ಒಡೆಯಿಕ್ಕು
- ಒಡ್ಡ – ರಾಶಿ; ಸಮೂಹ; ಜೂಜಿನ ಪಣದ್ರವ್ಯ
- ಒಡ್ಡಣ – ಗುಂಪು; ವ್ಯೂಹ; ಸೈನ್ಯ; ಯುದ್ಧರಂಗ
- ಒಡ್ಡವಣೆ – ಒಡ್ಡಣ
- ಒಡ್ಡಯಿ(ವಿ)ಸು – ಒಡ್ಡುವಂತೆ ಮಾಡು; ಪ್ರೇರಿಸು; ಎದುರಾಗು
- ಒಡ್ಡಿಸು – ಒಡ್ಡಯಿಸು, ಒಡ್ಡವಿಸು; ಆವರಿಸು
- ಒಡ್ಡು – ಸೈನ್ಯ; ಸೈನ್ಯವನ್ನು ಯುದ್ಧಕ್ಕೆ ನಿಲ್ಲಿಸು; ಪಣವಾಗಿ ಮುಂದಿಡು
- ಒಡ್ಡುಂಗಲ್ – ಚಾಚುಗಲ್ಲು; ಬಂಡೆ
- ಒಡ್ಡುಂಗಾಡಿ – ಒಟ್ಟು ಅಂದ; ಒಟ್ಟಾರೆ ಸೌಂದರ್ಯ
- ಒಡ್ಡುಗಟ್ಟು – ಗುಂಪಾಗಿ ಸೇರು
- ಒಡ್ಡುಗೆಡು – ಗುಂಪು ಚೆದುರು
- ಒಡ್ಡುಗೊಳ್ – ಒಡ್ಡುಗಟ್ಟು
- ಒಡ್ಡುವಲಗೆ – ಗುರಾಣಿ
- ಒಡ್ಡೊಡೆ – ಗುಂಪು ಚೆದುರು
- ಒಡ್ಡೋಲಗ – ರಾಜನ ಆಸ್ಥಾನ, ಸಭೆ
- ಒಡ್ಡೋಲಗ(ಂ)ಗೊಡು – (ರಾಜ) ಸಭೆ ನಡೆಸು
- ಒಣಕ – ಒಣಕಲಾದವನು
- ಒಣಕುತ್ತ – ಕೃಶಗೊಳಿಸುವ ಕಾಯಿಲೆ
- ಒಣಗಿಕ್ಕು – ಒಣಗುಹಾಕು
- ಒಣಗಿಲು- ಒಣಗಿರುವಿಕೆ
- ಒಣಗು – ಆರಿಹೋಗು
- ಒಣಬಟ್ಟೆ – ಒಣಗಿದ ದಾರಿ
- ಒಣರ್ – ಭಾವಿಸು, ತಿಳಿ; ಕೂಡು; ಹೇಳು
- ಒಣರ್ಚು – ಸೇರಿಸು, ಒಂದುಗೂಡಿಸು
- ಒತ್ತ – ಸಂಗೀತದ ಲಯನಿರ್ಣಾಯಕ ಕಾಲ
- ಒತ್ತಂಬ – ಬಲಾತ್ಕಾರ; ಒತ್ತಾಯ; ಸಮೂಹ; ಭಾರ
- ಒತ್ತಂಬರಿಸು – ಗಾಢಗೊಳಿಸು
- ಒತ್ತರ – ಒಂದೇ ಬಗೆ, ರೀತಿ; ಒಂದಾಗಿ ಸೇರಿದುದು
- ಒತ್ತರಿಸು – ಒಂದೆಡೆಗೆ ತಳ್ಳು; ಮೀರು; ಅವಜ್ಞೆ ಮಾಡು; ನಿವಾರಿಸು; ಹಬ್ಬು, ಆಕ್ರಮಿಸು
- ಒತ್ತಿಡು – ಒತ್ತೆ ಇಡುಒತ್ತು – ಆಕ್ರಮಿಸು; ಚುಚ್ಚು, ತಿವಿ, ನಾಟು; ವ್ಯಂಗ್ಯವಾಗಿ ಮಾತಾಡು; ಮೈ ಹಿಸುಕು, ತಿಕ್ಕು; ಪೀಡಿಸು; ಲಟ್ಟಿಸು; ಅದುಮುವಿಕೆ; ನೆರೆ; ಆಶ್ರಯ
- ಒತ್ತುಂಗರಡೆ – ಒಂದು ಬಗೆಯ ಕರಡೆ, ಚರ್ಮವಾದ್ಯ
- ಒತ್ತುಂಬಲ – ಒತ್ತಾಯ
- ಒತ್ತುಂಗೊಳ್ – ಆಶ್ರಯಿಸು
- ಒತ್ತುಬರ್ – ನೆರವಿಗೆ ಬರು
- ಒತ್ತೆ – ಅಡವು; ಜೂಜಿನ ಪಣದ್ರವ್ಯ; (ಸೂಳೆಯರಿಗೆ) ಭೋಗಕ್ಕಾಗಿ ಕೊಡುವ ಹಣ
- ಒತ್ತೆಗೊಡು – (ಸೂಳೆಯರಿಗೆ) ಒತ್ತೆ ನೀಡು
- ಒತ್ತೆಗೊಳ್ – ವಿಟರಿಂದ ಮುಂಗಣ ಹಣ ಪಡೆ; ವಶವಾಗು
- ಒತ್ತೆಯಿಡು – ಅಡವಿಡು
- ಒತ್ತೆವಿಡಿ – ಒತ್ತೆಯಾಗಿ ಸ್ವೀಕರಿಸು
- ಒತ್ತೆವಿಡಿಸು – ಒತ್ತೆಯಿಂದ ಬಿಡಿಸು
- ಒತ್ತೆವೋಗು – ಒತ್ತೆಯಾಗಿ ಹೋಗು
- ಒದಗು – ದೊರಕು
- ಒದವಿಸು – ದೊರಕಿಸು; ಉಂಟುಮಾಡು
- ಒದವು – ಉಂಟಾಗು; ವಯಸ್ಸಿಗೆ ಬರು; ಸಿದ್ಧವಾಗು; ಏಳಿಗೆ ಹೊಂದು; ಸಫಲವಾಗು; ಅಭಿವೃದ್ಧಿ; ನೆರವು; ಕೂಡುವಿಕೆ; ಉಂಟಾಗುವಿಕೆ
- ಒದೆ – ಪಾದಪ್ರಹರಣ; ಕಾಲಿನಿಂದ ತುಳಿ
- ಒದೆವಡೆ – ಒದೆತವನ್ನು ಪಡೆ; ಏಟು ತಿನ್ನು
- ಒದ್ದೆ – ನೆನೆದಿರುವುದು
- ಒನಕೆ -ಕುಟ್ಟುವ ಸಾಧನ; ಮುಸಲ
- ಒನಕೆವಾಡು – ಕುಟ್ಟುವಾಗ ಹೇಳುವ ಹಾಡು
- ಒನಲ್ – ಮರುಗು; ಕ್ರೋಧಗೊಳ್ಳು
- ಒನಲಿ – ಜರಡಿ
- ಒನಲಿಸು – ಕೆರಳಿಸು
- ಒನೆ – ಧಾನ್ಯವನ್ನು ಮೊರದಲ್ಲಿ ಶುದ್ಧಗೊಳಿಸು; ಶೂರ್ಪಕರಣ ಮಾಡು; ತೊನೆದಾಡು
- ಒಪ್ಪ – ಒಪ್ಪಿಗೆ; ಅಲಂಕೃತವಾಗಿ
- ಒಪ್ಪಂಗುಂದು – ಅಂದ ಕೆಡು
- ಒಪ್ಪಂಬಡೆ – ಅಂದಗೊಳ್ಳು
- ಒಪ್ಪಂಬೂಸು – ಒಪ್ಪವನ್ನು ಲೇಪಿಸು, ಮೆರುಗು ನೀಡು
- ಒಪ್ಪವಿಡಿ – ಒಪ್ಪ ಹಾಕು
- ಒಪ್ಪಸಲಗೆಯಿಡು – ಒಪ್ಪವಿಡುವ ಸಲಾಕಿಯಿಂದತೀಡು
- ಒಪ್ಪಿರ್ – ಒಪ್ಪವಾಗಿರು
- ಒಪ್ಪಿಸು – ನೀಡು; ಅಂಗೀಕಾರ ನೀಡುವಂತೆ ಮಾಡು
- ಒಪ್ಪು – ಅಂಗೀಕರಿಸು; ಶೋಭಿಸು
- ಒಪ್ಪುಗೊಡು – ಒಪ್ಪಿಸಿ ಕೊಡು
- ಒಪ್ಪುಗೊಳ್ – ತೆಗೆದುಕೊ
- ಒಪ್ಪುದಾಳ್ – ಶೋಭೆಯನ್ನು ಹೊಂದು
- ಒಬ್ಬಳ – ಒರ್+ಬಳ, ಒಂದು ಬಳ್ಳ
- ಒಬ್ಬುಳಿ – ರಾಶಿ
- ಒಬ್ಬುಳಿಕ್ಕು – ಕೂಡಿಡು
- ಒಮ್ಮು – ಅನುವರ್ತಿಸು
- ಒಮ್ಮುಕ್ಕುಳ್ – ಒಂದು ಮುಕ್ಕು, ಬಾಯಿ ಹಿಡಿಯುವಷ್ಟು
- ಒಯ್ – ತೆಗೆದುಕೊಡು ಹೋಗು
- ಒಯ್ಕನೆ – ಸ್ಫುಟವಾಗಿ, ನೇರಾಗಿ
- ಒಯ್ಯಗೆ(ನೆ) – ಮೆಲ್ಲನೆ, ಮೃದುವಾಗಿ; ಸಾವಕಾಶವಾಗಿ; ಕಡಿಮೆ ಕಾಂತಿಯಿಂದ
- ಒಯ್ಯಾರ – ಒನಪು; ಬೆಡಗು
- ಒಯ್ಯಾರಂಬಡೆ – ಒನಪು ಪಡೆ, ಒನಪುಗೊಳ್ಳು
- ಒರಂಟ – ಒರಟ
- ಒರಂಟು – ಒರಟುತನ
- ಒರಲ್ – ಒರಳು, ಕುಟ್ಟಲು ರುಬ್ಬಲು ಬಳಸುವ ಸಾಧನ
- ಒರಸು – ಉಜ್ಜು, ಘರ್ಷಿಸು; ಕಾಟ, ಹಿಂಸೆ
- ಒರೆ – ತಿಳಿಸು; (ಚಿನ್ನ) ಉಜ್ಜುವ ಕಲ್ಲು; ಸಮಾನತೆ
- ಒರೆಗಲ್ – ಚಿನ್ನವನ್ನು ಪರೀಕ್ಷಿಸುವ ಉಜ್ಜುಗಲ್ಲು
- ಒರೆಪ – ಉಜ್ಜುವಿಕೆ
- ಒರೆಯಿಡು – ಹೋಲಿಸು
- ಒರ್ಕಣ್ಗುರುಡಿ – ಒಂದು ಕಣ್ನು ಕುರುಡಾಗಿರುವವಳು
- ಒರ್ಕುಡಿತೆ – ಒಂದು ಬೊಗಸೆ
- ಒಕ್ಕೈಸು – ಸೇರು, ಒಂದುಗೂಡು
- ಒರ್ಕೋಲ್ – ಒಂದು ಕೋಲು; ದೂರ ಅಳೆಯುವ ಪ್ರಮಾಣ
- ಒರ್ಗುಡಿಸು – ಓಲು, ಓರೆಯಾಗು; ಕುಸಿ
- ಒರ್ಗೇಣ್ – ಒಂದು ಗೇಣು ಉದ್ದ
- ಒರ್ಗೊಡೆ – ಗುಂಪು ಒಡೆಯುವುದು
- ಒರ್ಚರ – (ಒರ್+ಸರ) ಒಂದೆಳೆಯ ಸರ
- ಒರ್ಚವಡಿ – ಒಂದು ಪದರ; ಒಳಗೊಂದು ಹೊರಗೊಂದು ಪದರವುಳ್ಳ
- ಒರ್ದೆಸೆ – ಒಂದು ದಿಕ್ಕು; ಒಂದು ಪಕ್ಕ
- ಒರ್ನುಡಿ – ಒಂದು ಮಾತು
- ಒರ್ಪದ – ಒಂದು ಹೆಜ್ಜೆ
- ಒರ್ಪಿಡಿ – ಒಂದು ಹಿಡಿ
- ಒರ್ಪಿಡಿಗೂಳ್ – ಒಂದು ತುತ್ತು ಅನ್ನ
- ಒರ್ಪೆಸರ್ – ಒಂದೇ ಒಂದು ಹೆಸರು
- ಒರ್ಬಸ – ಒಂದೇ ಗುಂಗು
- ಒರ್ಬಳಸು – ಒಂದು ಸುತ್ತು
- ಒರ್ಬುಳಿಗೂಡು – ಒಂದಾಗು
- ಒರ್ಬುಳಿಸು – ಒಟ್ಟುಗೂಡು
- ಒರ್ಮಡಿ – ಒಂದು ಸಲ
- ಒರ್ಮನ – ಒಂದೇ ಮನಸ್ಸು
- ಒರ್ಮಾರ್ – ಒಂದು ಮಾರು (ದೂರ)
- ಒರ್ಮೆ – ಒಂದು ಬಾರಿ
- ಒರ್ಮೆಯುಂ – ಒಂದೇ ಸಮನೆ
- ಒರ್ಮೊದಲ್ – ಒಂದೇ ಬಾರಿಗೆ; ಮೊದಲಿಗೇ
- ಒರ್ಮೊ¿ – ಒಂದು ಮೊಳ (ಉದ್ದ)
- ಒರ್ವ – ಒಬ್ಬ
- ಒರ್ವಗಲ್ – ಒಂದು ಹಗಲು
- ಒರ್ವಾಗ – ಒಂದು ಭಾಗ, ಪಾಲು
- ಒರ್ವುಳಿ – ಒಬ್ಬುಳಿ, ಸಮೂಹ
- ಒರ್ವುಳಿಗೊಳ್ – ಒಟ್ಟಾಗು
- ಒಲ್ -ಪ್ರೀತಿಸು; ಸಮ್ಮತಿಸು;; ಬಯಸು; ಶಕ್ತನಾಗು; ಮೋಹಗೊಳ್ಳು
- ಒಲವರ – ಪ್ರೀತಿ, ಮೋಹ; ಪ್ರವೃತ್ತಿ, ಒಲವು; ಪಕ್ಷಪಾತ
- ಒಲವರಂಗೊಳ್ – ಒಂದು ಪಕ್ಷ ವಹಿಸು
- ಒಲವು – ಪ್ರೀತಿ, ಮೋಹ
- ಒಲಿ – ಒಲ್, ಆಸೆಪಡು
- ಒಲಿಸು – ಒಪ್ಪಿಸು
- ಒಲೆ – ತೊನೆದಾಡು
- ಒಲೆದಾಟ – ತೂಗಾಟ
- ಒಲೆ – ಮಾತಾಡು; ಅಡುಗೆ ಮಾಡುವ ಉರಿಯ ಸಾಧನ
- ಒಲೆಗಲ್ – ಒಲೆಗೆ ಇಟ್ಟ ಕಲ್ಲು
- ಒಲೆಯಡುಕು – ಒಲೆ ಹೂಡು
- ಒಲ್ಮೆ – ಒಲುಮೆ, ಪ್ರೀತಿ
- ಒಲ್ಮೆಗ – ಒಲಿದವನು
- ಒಲ್ಲಣಿಗೆ – ಒದ್ದೆಯಾದ ಬಟ್ಟೆ; ಸ್ನಾನವಸ್ತ್ರ
- ಒಲ್ಲನೆ – ಮೆಲ್ಲನೆ, ನಿಧಾನವಾಗಿ
- ಒಲ್ಲನುಲಿ – ಮೆಲ್ಲನೆ ಸದ್ದುಮಾಡು; ಒಕ್ಕೊರಲಿನಿಂದ
- ಒಲ್ಲಮೆ – ಒಲುಮೆಯಿಲ್ಲದಿರುವಿಕೆ
- ಒವಜ – (ಉಪಾಧ್ಯಾಯ); ಗುರು
- ಒವಜುಗೆಯ್ – ಪಾಠ ಹೇಳಿಕೊಡು
- ಒಸಗೆ – ಶುಭ, ಮಂಗಳಕಾರ್ಯ; ಸಂತೋಷ;
- ಶುಭ ಸಂದೇಶ; ಯಶಸ್ಸು, ಕೀರ್ತಿ
- ಒಸಗೆನೀರ್ – ಮಂಗಳಸ್ನಾನ
- ಒಸಗೆವರ್ – ಮಂಗಳವುಂಟಾಗು
- ಒಸಗೆವಾಡು – ಮಂಗಳ ಸನ್ನಿವೇಶಗಳ ಹಾಡು
- ಒಸಗೆವಾತು – ಸಂತೋಷ ಸಮಾಚಾರ
- ಒಸಗೆವರಸು – ಸಂಭ್ರಮದಿಂದ
- ಒಸಡು – ಹಲ್ಲುಗಳ ಆಧಾರ ಮಾಂಸಖಂಡ
- ಒಸರ್ – ಜಿನುಗು, ಸ್ರವಿಸು; ಜಿನುಗುವುದು
- ಒಸರ್ಚು – ಜಿನುಗು
- ಒಸರ್ತರ್ – ಒಸರ್ಚು
- ಒಸರ್ದಾಣ – ನೀರುಕ್ಕುವ ಜಾಗ, ಒರತೆ
- ಒಸೆ – ಪ್ರೀತಿಸು; ಅನುಗ್ರಹಿಸು; ಹಿಗ್ಗು; ಶೋಭಿಸು
- ಒಸೆಯಿಸು – ಒಲಿಸಿಕೊ; ಸಂತಸಗೊಳಿಸು
- ಒಳಅಟ್ಟ – ಅಟ್ಟದ ಒಳಭಾಗ
- ಒಳಕಣ್ – ಗುಳಿಬಿದ್ದ ಕಣ್ಣು
- ಒಳಕೆಯ್ – ಒಳಗೊಳ್ಳು
- ಒಳಕೊ(ಗೊ)ಳ್ – ಸೇರಿಸಿಕೊ; ಹೊಂದು; ಉಂಟಾಗು, ಅಡಕವಾಗು, ಸಹಿಸು
- ಒಳಗಂಬರ್ – ಒಳಗೆ ಬರು; ಮರ್ಮ ತಿಳಿ
- ಒಳಗಾಗು – ಒಳಪಡು
- ಒಳಗು – ಒಳಗಡೆ; ಮರ್ಮ
- ಒಳಗುಗಾಣ್ – ಒಳಗಿನ ವಿಷಯವನ್ನು ತಿಳಿ
- ಒಳಗುಗೊಳಿಸು – ಪಡೆಯುವಂತೆ ಮಾಡು
- ಒಳಗುಮಾಡು – ವಶಪಡಿಸಿಕೊ; ಆವರಿಸು
- ಒಳಗೆ – ಒಳಗಡೆ; ಅಷ್ಟರಲ್ಲಿ
- ಒಳಪೊಗು – ಒಳಗೆ ಹೊಗು
- ಒಳಪೊಯ್ – ಒಳಗೊಳ್ಳು, ಒಳಗೆ ಹಾಕಿಕೊ
- ಒಳಪೊಯ್ಸು – ಒಳಗೊಳಿಸು
- ಒಳವಗೆ – ಒಳಗಿನ ಶತ್ರು; ಅರಿಷಡ್ವರ್ಗ
- ಒಳವಾಯ್ – ಬಾಯ ಒಳಗು
- ಒಳವುಗಿಸು – ಒಳಗೆ ಹೊಗಿಸು
- ಒಳವೊಗು – ಒಳಪೊಗು
- ಒಳಸಾರ್ – ಒಳಪೊಗು
- ಒಳಸುರ್ಕು – ಒಳಗೇ ಮುದುಡು
- ಒಳಸೇದು – ತಡೆದುಕೊ
- ಒಳಸೋರ್ – ಕೈವಶವಾಗು; ಹಿಂಜರಿ; ಜಾರು
- ಒಳ್ಗಂಡ – ದೊಡ್ಡ ಶೂರ
- ಒಳ್ಗಂಪು – ಒಳ್ಳೆಯ ಪರಿಮಳ
- ಒಳ್ಗತಿ – ಸದ್ಗತಿ
- ಒಳ್ಗದಿರ್ – ಹೊಳೆಯುವ ಕಿರಣ
- ಒಳ್ಗನಸು – ಒಳ್ಳೆಯ ಕನಸು
- ಒಳ್ಗರುಳ್ – ಒಳಕರುಳು
- ಒಳ್ಗಲಿ – ದೊಡ್ಡ ಪರಾಕ್ರಮಿ
- ಒಳ್ಗ¿ವೆ – ಒಳ್ಳೆಯ ಬತ್ತ
- ಒಳ್ಗಿಡಿ – ಪ್ರಖರವಾದ ಕಿಡಿ
- ಒಳ್ಗುಂಡಿಗೆ – ಒಳ್ಳೆಯ ಕಮಂಡಲು
- ಒಳ್ಗುಣ – ಒಳ್ಳೆಯ ಗುಣ
- ಒಳ್ಗುರುಳ್ – ಸುಂದರ ಕೇಶರಾಶಿ
- ಒಳ್ಗುಲ – ಸತ್ಕುಲ
- ಒಳ್ಗೊಂಚಲ್ – ಸೊಂಪಾದ ಗೊಂಚಲು
- ಒಳ್ಗೊಂಬು – ದೊಡ್ಡ ಕೊಂಬೆ
- ಒಳ್ಗೊಳ – ಒಳ್ಳೆಯ ಕೊಳ
- ಒಳ್ಗೋಡು – ಒಳ್ಳೆಯ ಕೋಡು
- ಒಳ್ತನ – ಒಳ್ಳೆಯತನ
- ಒಳ್ತಪ – ಒಳ್ಳೆಯ ತಪಸ್ಸು
- ಒಳ್ದಳಿರ್ – ಮಿರುಗುವ ಚಿಗುರು
- ಒಳ್ದಾವರೆ – ಸುಂದರವಾದ ತಾವರೆ
- ಒಳ್ದುಡುಗೆ – ಒಳ್ಳೆಯ ತೊಡುಗೆ, ಒಡವೆ
- ಒಳ್ದೆನೆ – ಸೊಂಪಾಧ ತೆನೆ
- ಒಳ್ದೆರೆ – ಸುಂದರವಾದ ಅಲೆ
- ಒಳ್ದೊಡವು – ಒಳ್ದುಡುಗೆ
- ಒಳ್ದೊಡೆ – ಒಳ್ಳೆಯ ತೊಡೆ
- ಒಳ್ನಗೆ – ಮೋಹಕ ನಗೆ
- ಒಳ್ನಡಕ – ಒಳ್ಳೆಯ ನಡತೆ
- ಒಳ್ನಡು – ಬಡನಡು
- ಒಳ್ನಾಡು – ಸುಂದರವಾದ ದೇಶ
- ಒಳ್ಗುಡಿ – ಸೊಗಸಾದ ಧ್ವಜ
- ಒಳ್ಗುದಿ – ಮೂಕಸಂಕಟ, ಒಳಗುದಿ
- ಒಳ್ನುಡಿ – ಒಳ್ಳೆಯ ನುಡಿ
- ಒಳ್ನುಡಿಗೇಳ್ – ಒಳ್ಳೆಯ ಮಾತನ್ನು ಕೇಳು
- ಒಳ್ನೆಯ್ – ಒಳ್ಳೆಯ ತುಪ್ಪ
- ಒಳ್ನೋಂಪಿ – ಶ್ರೇಷ್ಠವಾದ ವ್ರತ
- ಒಳ್ಪು – ಒಳ್ಳೆಯತನ; ಚೆಲುವು; ಒಳಿತು
- ಒಳ್ಪುಗಾಣ್ – ಒಳ್ಳೆದನ್ನು ಕಾಣು
- ಒಳ್ಪುಗಿಡು – ಸೊಗಸು ಕೆಡು
- ಒಳ್ಪುಗೊಳ್ – ಒಳ್ಳೆಯದನ್ನು ಪಡೆ; ಒಪ್ಪಿಕೊ
- ಒಳ್ಪುವಡೆ – ಸುಂದರವಾಗು
- ಒಳ್ಪುವೆರಸು – ದೃಢವಾಗಿ
- ಒಳ್ಪೂಜೆ – ಶ್ರೇಷ್ಠ ಪೂಜೆ
- ಒಳ್ಮರಲ್ – ಒಳ್ಳೆಯ ಅರಳು
- ಒಳ್ಮಾಡ – ಮನೆಯ ಒಳಭಾಗ
- ಒಳ್ಮಾವು – ಒಳ್ಳೆಯ ಮವು
- ಒಳ್ಮಿಡಿ – ಒಳ್ಳೆಯ ಮಿಡಿ
- ಒಳ್ಮಿದುಳ್ – ಮೆದುಳಿನ ಒಳಭಾಗ
- ಒಳ್ಮುಗುಳ್ – ಒಳ್ಳೆಯ ಮೊಗ್ಗು
- ಒಳ್ಮುಡಿ – ಸುಂದರ ಮುಡಿ
- ಒಳ್ಮೊಗ – ಚೆಲುವಾದ ಮುಖ
- ಒಳರ್ವಣಿ – ಉತ್ತಮ ಮಣಿ
- ಒಳ್ವರಕೆ – ಒಳ್ಳೆಯ ಹರಕೆ
- ಒಳ್ವರಲ್ – ಒಳ್ಳೆಯ ಹರಳು (ಮಣಿ)
- ಒಳ್ವಾತು – ಒಳ್ಳೆಯ ನುಡಿ
- ಒಳ್ವೆಣ್ – ಸುಂದರಿಯಾದ ಹೆಣ್ಣು
- ಒಳ್ವೆಸನ – ಒಳ್ಳೆಯ ಹವ್ಯಾಸ
- ಒಳ್ವೆಸರ್ – ಒಳ್ಳೆಯ ಹೆಸರು
- ಒಳ್ವೆಳಗು – ಉಜ್ವಲ ಕಾಂತಿ
- ಒಳ್ವೇಟ – ಹಿತಕರ ಪ್ರಣಯ
- ಒಳ್ವೊನಲ್ – ಸುಂದರ ನದಿ
- ಒಳ್ಳಕ್ಕರಿಗ – ಶ್ರೇಷ್ಠ ವಿದ್ವಾಂಸ
- ಒಳ್ಳಡಗು – ಒಳ್ಳೆಯ ಮಾಂಸ
- ಒಳ್ಳನುರಿ – (ಗಾಯ) ಭಗಭಗ ಉರಿ
- ಒಳ್ಳನೆ – ಸುಮ್ಮನೆ
- ಒಳ್ಳಲಗು – ಶ್ರೇಷ್ಠವಾದ ಕತ್ತಿ
- ಒಳ್ಳಾನೆ – ಒಳ್ಳೆಯ ಆನೆ
- ಒಳ್ಳಾಳ್ – ಒಳ್ಳೆಯ ಶೂರ
- ಒಳ್ಳಿಕೆಯ್ – ಒಳಿತನ್ನು ಮಾಡು
- ಒಳ್ಳಿತವಸರ – ಒಳ್ಳೆ ಅವಕಾಶ
- ಒಳ್ಳಿತುಗೆಯ್ – ಒಳ್ಳಿಕೆಯ್
- ಒಳ್ಳಿತ್ತು – ಒಳಿತು, ಒಳ್ಳೆಯದು
- ಒಳ್ಳಿದ – ಒಳ್ಳೆಯವನು
- ಒಳ್ಳುಡೆ – ಸುಂದರವಾದ ಉಡುಗೆ
- ಒಳ್ಳುಣಿಸು – ರುಚಿಯಾದ ಆಹಾರ
- ಒಳ್ಳುಲಿಪು – ಇಂಪಾದ ಧ್ವನಿ
- ಒಳ್ಳೆ – ವಿಷವಿಲ್ಲದ ಹಾವು; ಪಡುವಲಕಾಯಿ
Conclusion:
ಕನ್ನಡ ಒ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.