ಕನ್ನಡ ಬ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada ba aksharada halegannadada padagalu , ಕನ್ನಡ ಬ ಅಕ್ಷರದ ಹಳೆಗನ್ನಡ ಪದಗಳು ( ba halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಬ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( ba halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ. ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಬ ಅಕ್ಷರ ಎಂದರೇನು?
ಬ, ಕನ್ನಡ ವರ್ಣಮಾಲೆಯ ಪ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ , ಅಲ್ಪಪ್ರಾಣ .
ಮೌರ್ಯರ ಕಾಲದ ಬ್ರಾಹ್ಮೀಯಲ್ಲಿ ಇದರ ಆಕಾರ ಚೌಕನಾದ್ದು. ಇದೇ ರೂಪವೆ ಮುಂದುವರಿದರೂ ಮೂಲೆಗಳು ಸ್ವಲ್ಪ ಗುಂಡಗಾಗುತ್ತ ಹೋಗುತ್ತವೆ. ಸುಮಾರು ಐದನೆಯ ಶತಮಾನದಲ್ಲಿ ಎಡಭಾಗದಲ್ಲಿ ರೇಖೆ ಕೊಂಡಿಯಂತಾಗುತ್ತದೆ. ಒಂಬತ್ತನೆಯ ಶತಮಾನದಲ್ಲಿ ಎಡಭಾಗದ ಈ ಕೊಂಡಿ ಬೇರೆಯಾಗಲು ಹವಣಿಸುತ್ತದೆ.
ಹನ್ನೊಂದನೆಯ ಶತಮಾನದಲ್ಲಿ ಪೂರ್ಣ ವಿಕಾಸಹೊಂದಿ ಅಕ್ಷರದ ಮೇಲ್ಭಾಗದ ರೇಖೆ ಇಲ್ಲವಾಗಿ ತಳದಲ್ಲಿ ಹೊಕ್ಕಳು ಕಾಣಿಸಿಕೊಳ್ಳುತ್ತದೆ. ಇದೇ ರೂಪವೇ ಮುಂದುವರಿಯುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಬ ಅಕ್ಷರದ ಹಳೆಗನ್ನಡ ಪದಗಳು – Kannada Words
- ಬಂಕ – ಮೂಲೆ
- ಬಂಕು – ಬಾಗು, ವಕ್ರವಾಗು
- ಬಂಗು – ಬೂಜು
- ಬಂಚ – (ವಂಶ) ಕೊಳಲು; ಪೀಳಿಗೆ
- ಬಂಚನೆ – ವಂಚನೆ, ಮೋಸ
- ಬಂಚರ – ವೀಣೆ, ತಂಬೂರಿ
- ಬಂಚಿಸು – ವಂಚಿಸು; ತಪ್ಪಿಸು
- ಬಂಜ – (ವಂಧ್ಯ) ನಿರ್ವೀರ್ಯ
- ಬಂಜಿಸು – ದಾಟು
- ಬಂಜೆ – (ವಂಧ್ಯಾ); ಗೊಡ್ಡು; ನಿಷ್ಫಲ
- ಬಂಜೆತನ – ಗೊಡ್ಡುತನ
- ಬಂಜೆ ಮಾಡು – ಹಾಳುಮಾಡು
- ಬಂಜೆಯಾಗು – ಗೊಡ್ಡಾಗು; ನಿಷ್ಫಲವಾಗು
- ಬಂಟುಗೆಡು – ಪರಾಕ್ರಮ ಕುಂದು
- ಬಂಟುತನ – ಶೌರ್ಯ
- ಬಂಡ – ಸರಕು; ನಿರ್ಲಜ್ಜ; ಹಾಸ್ಯಗಾರ
- ಬಂ(ಭಂ)ಡಣ – ಯುದ್ಧ
- ಬಂಡಳಿಸು – ಮಾತಾಡು
- ಬಂ(ಭಂ)ಡಿ – ಗಾಡಿ
- ಬಂಡಾಡು – ಬಂಡು+ಆಡು, ಮಕರಂದ ಹೊಮ್ಮು
- ಬಂಡು – ಹೂವಿನ ಮಕರಂದ
- ಬಂಡುಣ್ – ಮಕರಂದ ಹೀರು
- ಬಂಡುವೋಗು – ಲಜ್ಜೆಗೊಳ್ಳು
- ಬಂದಂಬಿಡು – ಆಸೆಯನ್ನು ಬಿಡು
- ಬಂದ ಮಾವು – ಫಲ ಬಿಟ್ಟ ಮಾವು
- ಬಂದಿ – ಸೆರೆ; ಸೆರೆಯಾಳು
- ಬಂದಿಗೆ – ಕತ್ತಿಯ ಹಿಡಿಕೆ
- ಬಂದಿಗ್ರಹಣ – ಸೆರೆಹಿಡಿಯುವುದು
- ಬಂದಿಸು – ವಂದಿಸು, ನಮಸ್ಕರಿಸು
- ಬಂದುಗೆಯಲರ್ – ಬಂಧೂಕ ಮರದ ಕೆಂಪು ಹೂ
- ಬಂದುಗೆಯರಲ್ – ಬಂದುಗೆಯಲರ್
- ಬಂಧ(ನ) – ಕಟ್ಟು
- ಬಂಧಕಿ – ಜಾರೆ
- ಬಂಧಗೌರವ – ಕಾವ್ಯದ ರಚನಾಕೌಶಲ
- ಬಂಧಮೋಚನ(ನಿ) – (ಜೈನ) ಸೆರೆಯಿಂದ ತಪ್ಪಿಸಿಕೊಳ್ಳುವ ವಿದ್ಯೆ
- ಬಂಧವಿದ – ಕುಶಲ ಕೆಲಸಗಾರ
- ಬಂಧಿಸು – ಕಟ್ಟಿಹಾಕು
- ಬಂಧು – ಆತ್ಮೀಯ; ನಂಟ
- ಬಂಧುಜನ – ನಂಟರು
- ಬಂಧುರ – ಸುಂದರ, ಮನೋಹರ
- ಬಂಧುರತೆ – ಚೆಲುವು
- ಬಂಧುವಿಯೋಗ – ನಂಟರ ಅಗಲಿಕೆ
- ಬಂಧೂಕ – ಬಂದುಗೆ, ಕೆಂಪು ಹೂ ಬಿಡುವ ಒಂದು ಮರ
- ಬಂಬಣಂಬಾಡು – ಅಧಿಕವಾಗಿ ಸೊರಗು
- ಬಂಬಲ್ – ಗುಂಪು; ಗೊಂಚಲು
- ಬಂಬಲ್ಮಾಡು – ಬಂಬಣಂಬಾಡು
- ಬಂಬಲಂಬಾಡು – ಬಂಬಣಂಬಾಡು
- ಬಂಬಲ್ಗರುಳ್ – ಜೊಂಪೆಯಾದ ಕರುಳು
- ಬಂಬಲ್ಗುರುಳ್ – ಒತ್ತಾದ ಕೂದಲು
- ಬಂಬಲ್ಗೊಂಬು – ದಟ್ಟವಾಗಿ ಎಲೆಗಳಿರುವ ಕೊಂಬೆ
- ಬಂಬಲ್ದಂಬುಲ – ತಾಂಬೂಲದ ಕಟ್ಟು
- ಬಂಬಲ್ದಗುಳ್ – ದಟ್ಟವಾಗು
- ಬಂಬಲ್ದೆರೆ – ನಿರಂತರವಾದ ಅಲೆಗಳು
- ಬಂಬಲ್ನಿ¾Â – ಒತ್ತಾದ ನಿರಿಗೆ
- ಬಂಬಲ್ಮುಡಿ – ಬಂಬಲ್ಗುರುಳ್
- ಬಂಬಲ್ವನಿ – ಸೋನೆ, ಒಂದೇ ಸಮನೆ ಸುರಿಯುವ ಹನಿ
- ಬಂಬಲ್ವರಿ – ಬಂಬಲ್+ಪರಿ, ಧಾವಿಸು
- ಬಂಬಲ್ವರಿಗೊಳ್ – ದಟ್ಟವಾಗಿ ಹರಡಿಕೊ
- ಬಂಬಲ್ವರಿಯಿಸು – ಧಾವಿಸುವಂತೆ ಮಾಡು
- ಬೆಂಬಲ್ಸರಿ – ಜಡಿಮಳೆ
- ಬಂಬಳ – ತುಂಬ
- ಬಂಭರ – ದುಂಬಿ
- ಬಂಹಿಮ – ಅತಿಶಯ
- ಬಕ – ಬಕಪಕ್ಷಿ; ಕಪಟ; ಒಬ್ಬ ರಾಕ್ಷಸ
- ಬಕವೇಸಿತನ – ಮೋಸದ ಹಾದರ
- ಬಕಾರಿ – ಬಕನನ್ನು ಕೊಂದವನು, ಭೀಮ
- ಬಕುಳ – ನಾಗಕೇಸರ ಎಂಬ ಮರ
- ಬಕೋಟ – ಬಕಪಕ್ಷಿ
- ಬಕ್ಕಣ – (ಭಕ್ಷಣ) ತಿನಿಸು
- ಬಕ್ಕಳೆ – ಮರದ ತೊಗಟೆ
- ಬಕ್ಕು – ಒಂದು ನೀರ ಹಕ್ಕಿ
- ಬಕ್ಕು(ರ್ಕು)(ಳ್ಕು)ಡಿ – ತಲ್ಲಣ
- ಬಕ್ಕು(ರ್ಕು)(ಳ್ಕು)ಡಿಗೆಯ್ – ವಾದಿಸು; ಆಶ್ಚರ್ಯಪಡು
- ಬಕ್ಕೆ(ರ್ಕೆ) – ಒಂದು ವಿಧದ ಹಲಸಿನ ಹಣ್ಣು
- ಬಕ್ಕೆ(ರ್ಕೆ)ವಲಸು – ಬಕ್ಕೆ(ರ್ಕೆ)
- ಬಗಟು – ಅಗಲಿಸು; ಭಾಗ ಮಾಡು
- ಬಗರಗೆ – ತೋಡಿದ ಗುಂಡಿ; ಚಿಲುಮೆ; ಬೋಕಿ ಬಿಂಚು
- ಬಗಸಿಗೆ – ಬೊಗಸೆ
- ಬಗಸು – ಬಯಸು, ಆಸೆಪಡು
- ಬಗಿ – ತೋಡು; ಸೀಳು
- ಬಗುಳ್ – ಬೊಗಳು
- ಬಗೆ – ಯೋಚನೆ ಮಾಡು; ಪರಿಗಣಿಸು; ರೀತಿ
- ಬಗೆಗಲ್ – ಬಗೆ+ಕಲ್, ಮನಸ್ಸನ್ನು ತಿಳಿದುಕೊ
- ಬಗೆಗಾಣ್ – ಬಗೆ+ಕಾಣ್ – ಮನಸ್ಸನ್ನು
- ಬಗೆಗುಂದು – ನಿರಾಶೆಗೊಳ್ಳು
- ಬಗೆಗುಡು – ಮನಸ್ಸನ್ನು ಕೊಡು, ಗಮನ ಹರಿಸು
- ಬಗೆಗಿಡಿಸು – ದಾರಿ ತಪ್ಪಿಸು, ಮನಸ್ಸನ್ನು ಕೆಡಿಸು
- ಬಗೆಗೆಡು – ವಿವೇಕ ಕಳೆದುಕೊ
- ಬಗೆಗೆಲ್ – ಮನಸ್ಸನ್ನು ಗೆಲ್ಲು
- ಬಗೆಗೊಳ್ – ಲಕ್ಷ್ಯಕ್ಕೆ ತಂದುಕೊ
- ಬಗೆಗೊಳಿಸು – ಮನಸ್ಸನ್ನು ಗೆಲ್ಲು, ಆಕರ್ಷಿಸು
- ಬಗೆದರ್ – ಬಗೆ+ತರ್, ನಿಶ್ಚಯ ಮಾಡು
- ಬಗೆದೀರ್ – ಬಗೆ+ತೀರ್, ತೃಪ್ತಿಹೊಂದು
- ಬಗೆದೋ¾ು – ಇಂಗಿತವನ್ನು ತೋರಿಸಿಕೊ
- ಬಗೆಪೋಗು – ಮನದಟ್ಟಾಗು
- ಬಗೆಮುಟ್ಟು – ಮನಸ್ಸನ್ನು ತಾಕು, ಮನಂಬುಗು
- ಬಗೆಯ¾Â – ಇಂಗಿತವನ್ನು ತಿಳಿದುಕೊ
- ಬಗೆಯ¿ಲ್ – ಮನೋವ್ಯಥೆ
- ಬಗೆಯೊಡೆಯ – ಮನದಾಣ್ಮ, ಮನಸ್ಸಿನ ಒಡೆಯ
- ಬಗೆವ(ಬ)ರ್ – ಮನಸ್ಸಿಗೆ ಬರು, ತೋಚು
- ಬಗ್ಗ(ಂ)ದೊವಲ್ – ಹುಲಿಯ ಧರ್ಮ
- ಬಗ್ಗಣೆ – ಗದರಿಕೆ; ಹಕ್ಕಿಗಳ ಕೂಜನ
- ಬಗ್ಗಿಸು – (ಕೋಗಿಲೆಯಂತಹ ಹಕ್ಕಿ) ಧ್ವನಿಮಾಡು;
- ಗದರಿಸು, ಗರ್ಜಿಸು; ಮೂದಲಿಸು
- ಬಗೆ – ರೀತಿ; ಮನಸ್ಸು; ಚಿಂತಿಸು
- ಬಚ್ಚ – (ವೈಶ್ಯ) ವ್ಯಾಪಾರಿ
- ಬಚ್ಚಣೆ – ವೇಷ; ಸೋಗು
- ಬಚ್ಚಲ್ – ನಾಲೆ; ಮೋರಿ
- ಬಚ್ಚವಸರ – ಬಚ್ಚ+ಪಸರ, ವ್ಯಾಪಾರಿಗಳ ಅಂಗಡಿಗಳ ಸಾಲು
- ಬಚ್ಚಿ(ರ್ಚಿ)ಸು – ಬಣ್ಣ ಹಾಕು; ಲೇಪಿಸು
- ಬಜಾವಣ್ – ಬಾಜನೆ, ವಾದ್ಯ ಬಾರಿಸುವಿಕೆ
- ಬಜ್ಜರ – (ವಜ್ರ) ನವರತ್ನಗಳಲ್ಲಿ ಒಂದು
- ಬಜ್ಜರವಸರ – ವಜ್ರದ ಅಂಗಡಿ
- ಬಜ್ಜೆ – ಧೂರ್ತೆ
- ಬಜ್ಜೆಗುಂಟಣಿ – ಧೂರ್ತೆಯಾದ ಕುಂಟಲಗಿತ್ತಿ
- ಬಟ್ಟಗೊಡೆ – ದುಂಡನೆಯ ಛತ್ರಿ
- ಬಟ್ಟನೆ – ದುಂಡಗೆ
- ಬಟ್ಟನೆ ಬ(ವ)ರ್ – ಸುತ್ತುತ್ತ ಬರು
- ಬಟ್ಟಮೊಲೆ – ದುಂಡಾದ ಮೊಲೆ
- ಬಟ್ಟಲ್(ಲು) – ದುಂಡಾದ ಪಾತ್ರೆ
- ಬಟ್ಟವಂಜರ – ದುಮಡನೆಯ ಪಂಜರ
- ಬಟ್ಟಸರಿ – ಸುತ್ತಾಡು
- ಬಟ್ಟಾಡು – (ಗೋಲಿ, ಚೆಂಡು ಮೊದಲಾದ) ದುಂಡಾದವಸ್ತುಗಳೊಡನೆ ಆಟವಾಡು
- ಬಟ್ಟಿಗೆ – ಬಣ್ಣ ಬಳಿಯುವ ಕುಂಚ
- ಬಟ್ಟಿಗೆವಲಗೆ – (ಮೃತ್ತಿಕಾಫಲಕ) ಬರೆಯುವ (ಮಣ್ಣಿನ) ಹಲಗೆ
- ಬಟ್ಟಿತು(ತ್ತು) – ದುಂಡಾದ
- ಬಟ್ಟು – (ವೃತ್ತ) ದುಂಡು; ದುಂಡಾದ ಬಿಲ್ಲೆ; ಬಿಲ್ಲೆಯಾಟ
- ಬಟ್ಟುಗೆಯ್ – ಉಂಡೆಮಾಡು
- ಬಟ್ಟೆ – (ವತ್ರ್ಯ) ದಾರಿ; ವಸ್ತ್ರ
- ಬಟ್ಟೆಯ ಕಣ್ – ದಾರಿಯ ಮುಂಭಾಗ
- ಬಟ್ಟೆಯರ್ – ದಾರಿಹೋಕರು
- ಬಟ್ಟೆಗ – ದಾರಿಹೋಕ
- ಬಟ್ಟಗಟ್ಟು – ದಾರಿಗೆ ಅಡ್ಡಕಟ್ಟು; ದರೋಡೆಮಾಡು
- ಬಟ್ಟೆಗಾಣ್ – ದಾರ ಕಾಣ್; ಉಪಾಯ ಹೊಳೆ
- ಬಟ್ಟೆದಪ್ಪು – ದಾರಿ ತಪ್ಪು
- ಬಟ್ಟೆದೋ¾ು – ದಾರಿ ತೋರಿಸು
- ಬಟ್ಟೆ ನಡೆ – ದಾರಿಯಲ್ಲಿ ಹೋಗು; ಪ್ರಯಾಣಿಸು
- ಬಟ್ಟೆವರ್ – ದಾರಿಯಲ್ಲಿ ನಡೆ; ಪ್ರಯಾಣಿಸು
- ಬಟ್ಟೆವಿಡಿ – ದಾರಿಯನ್ನು ಅನುಸರಿಸು
- ಬಟ್ಟೆವೋಗು – ಬಟ್ಟೆವಿಡಿ
- ಬಡಬಡಾಗು – ತುಂಬ ಸೊರಗಿಹೋಗು
- ಬಡಮಾಡು – ಸೊರಗಿಸು
- ಬಡಕ – ಬಡಕಲು ವ್ಯಕ್ತಿ
- ಬಡಗಣ್(ಣ) – ಉತ್ತರದಿಕ್ಕು
- ಬಡಗಣಂ – ಉತ್ತರದಿಕ್ಕಿನಿಂದ ಬಂದವನು
- ಬಡಗದೆಸೆ – ಉತ್ತರದಿಕ್ಕು
- ಬಡಗನಾಡು – ಉತ್ತರದೇಶ
- ಬಡಗಮುಖ – ಬಡಗದೆಸೆ
- ಬಡಗಮೊಗ – ಬಡಗದೆಸೆ
- ಬಡಗಲ್(ಲು) – ಉತ್ತರದಿಕ್ಕು
- ಬಡಗಿ – ಮರಗೆಲಸದವನು
- ಬಡಗು – ಉತ್ತರದಿಕ್ಕು
- ಬಡಗೊಂಡಿ – ಸವೆದುಹೋದ ಕೊಂಡಿ
- ಬಡತನ – ಕೃಶತೆ; ದಾರಿದ್ರ್ಯ
- ಬಡನಡು – ತೆಳುವಾದ ಸೊಂಟ
- ಬಡಪ – ಜಡಿಮಳೆ
- ಬಡಪಾರ್ವ – ಬಡ ಬ್ರಾಹ್ಮಣ
- ಬಡಬ(ಜ್ವಾಲೆ) – ಸಮುದ್ರದೊಳಗಣ ಬೆಂಕಿ
- ಬಡಬಶಿಖಿ – ಬಡಬ(ಜ್ವಾಲೆ)
- ಬಡಬಾಗ್ನಿ – ಬಡಬಶಿಖಿ
- ಬಡಬಾನಲ(ಳ) – ಬಡಬಶಿಖಿ
- ಬಡಮನ – ಸಣ್ಣ ಬುದ್ಧಿ
- ಬಡಮಲ್ಲ – ಅಸಮರ್ಥನಾದ ಜಟ್ಟಿ
- ಬಡವ – ದರಿದ್ರ; ಕೃಶವಾದವನು
- ಬಡವ(ಪ)ಡು – ಬಡವಾಗು, ಕೃಶವಾಗು
- ಬಡವಾ – ಬಡಬಾಗ್ನಿ
- ಬಡವು – ಬಡವಾಗಿರುವುದು; ಕೃಶವಾಗಿರುವುದು
- ಬಡಿ – ದೊಣ್ಣೆ; ಏಟು ಕೊಡು
- ಬಡಿಗೆ – ಕೋಲು, ದೊಣ್ಣೆ
- ಬಡಿಗೆಕೊ(ಗೊ)ಳ್ – ದೊಣ್ಣೆಯನ್ನು ಹಿಡಿ; ಕೋಲಿನಿಂದ ಹೊಡೆ
- ಬಡಿಗೊಳ್ – ಬಡಿಗೆಕೊ(ಗೊ)ಳ್
- ಬಡಿಗೋಲ್ – ಹೊಡೆಯಲು ಬಳಸುವ ಕೋಲು
- ಬಡಿತಂಗಾಸು – ಬಡಿಯಲು ಬೇಕಾದಂತೆ ಹದವಾಗಿ ಕಾಯಿಸು
- ಬಡಿತಂಗೊಳ್ – ಏಟು ಕೊಡು
- ಬಡಿಸು – ಊಟಕ್ಕಿಡು
- ಬಡಿಹ – ಪೆಟ್ಟು
- ಬಡ್ಡಿ – (ವೃದ್ಧಿ) ಏಳಿಗೆ; ಸಾಲದ ಹಣದ ಮೇಲಿನ ಹೊರೆ
- ಬಡ್ಡಿಗೊಳ್ – ಬಡ್ಡಿಯನ್ನು ಪಡೆ
- ಬಡ್ಡಿಯಿಕ್ಕು – ಬಡ್ಡಿ ಕೊಡು
- ಬಡ್ಡಿವೇಡು – ಬಡ್ಡಿಯನ್ನು ಬೇಡು
- ಬಡ್ಡಿಸು – ಬಡಿಸು, ಊಟಕ್ಕೆ ನೀಡು
- ಬಣಂ(ಳಂ)ಬೆ – ಬಣಬೆ, ಮೆದೆ
- ಬಣಗು – ಕ್ಷುದ್ರ; ಪಿಶಾಚಿ
- ಬಣ್ಣ – ರಂಗು; ಚಿತ್ರ ರಚನೆಗೆ ಬೇಕಾದ ವರ್ಣ
- ಬಣ್ಣಂಬಡೆ – ಆಕರ್ಷಕತೆಯನ್ನು ಹೊಂದು
- ಬಣ್ಣವಣ್ಣಿಗೆ – ನಾನಾ ಬಣ್ಣಗಳಿಂದ ಕೂಡಿದುದು; ಬಣ್ಣ ಹಚ್ಚುವುದು
- ಬಣ್ಣವಳಿ – ಬಣ್ಣ+ಅಳಿ, ಕಳೆಗುಂದು
- ಬಣ್ಣವಾಸಿಗ – ಬಣ್ಣದ ಹೂಗಳ ಬಾಸಿಗ, ಮಾಲೆ
- ಬಣ್ಣವಿಡು – ಬಣ್ಣ ಹಚ್ಚು
- ಬಣ್ಣವುರ – (ವರ್ಣಪೂರ) ಬಣ್ಣದ ರಂಗೋಲಿ,
- ಬಣ್ಣಬಣ್ಣದ ಬಟ್ಟೆ
- ಬಣ್ಣಸರ – ಬಣ್ಣಬಣ್ಣದ ಹೂಮಾಲೆ
- ಬಣ್ಣಸರಂಗೊಳ್ – ಬಣ್ಣಬಣ್ಣದ ಸರವನ್ನು ತೆಗೆದುಕೊ
- ಬಣ್ಣಿಕೆ(ಗೆ) – (ವರ್ಣಿಕಾ) ಬಣ್ಣ; ಅಂದವಾದ
- ಬಣ್ಣಿಸು – ವರ್ಣನೆ ಮಾಡು; ಮೆರುಗನ್ನು ನೀಡು
- ಬತ್ತ – ನೆಲ್ಲು
- ಬತ್ತಂಗುಟ್ಟು – ಹೊಟ್ಟು ತೆಗೆಯಲು ಬತ್ತ ಕಟ್ಟು
- ಬತ್ತಲಿ(ಲೆ)ಗ – ಬಟ್ಟೆಯಿಲ್ಲದವನು; ದಿಗಂಬರ ಸನ್ಯಾಸಿ
- ಬತ್ತಲೆಯಿರ್ – ನಗ್ನವಾಗಿರು
- ಬತ್ತಲೆ – ನಗ್ನತೆ; ನಗ್ನವಾಗಿ; ನಗ್ನವಾದ
- ಬತ್ತಿ _ (ವರ್ತಿ) ದೀಪದ ಉರಿಯುವ ಹತ್ತಿಯ ಎಳೆ-
- ಬತ್ತು – ಒಣಗು, ಇಂಗಿ ಹೋಗು
- ಬತ್ತುಬಯ(ನ್) – ಹಾಲು ಬತ್ತಿಹೋದ ಹಸು
- ಬತ್ತುಗೆ – ಬತ್ತುವಿಕೆ; ಒಣಗುವಿಕೆ
- ಬದಗು – ಹಾದರ; ಕುಟಿಲತೆ; ಮೂರ್ಖತನ
- ಬದಗುಗೆಯ್ – ಊಳಿಗತನವನ್ನು ಮಾಡು
- ಬದಗುಳಿಗ – ಸೇವಕ; ಗುಲಾಮ
- ಬದರ(ರಿ) – ಬೋರೆ ಅಥವಾ ಎಲಚಿ ಮರ, ಹಣ್ಣು
- ಬದಸು – ಕುಟಿಲತೆ
- ಬದ್ದ – ಗಾಢ
- ಬದ್ದರ – ಬಾಣಗಳ ಏಟಿನಿಂದ ರಕ್ಷಿಸಿಕೊಳ್ಳುವ ಸಾಧನ
- ಬದ್ದವಣ – (ವರ್ಧಮಾನ) ಬೆಳೆಯುವಿಕೆ; ಮಂಗಳ ವಾದ್ಯ
- ಬದ್ದವಣಂಬೊಯ್ – ಮಂಗಳವಾದ್ಯವನ್ನು ಬಾರಿಸು
- ಬದ್ದವಣಂಬೊಯಿಸು – ಮಂಗಳವಾದ್ಯವನ್ನು ಬಾರಿಸುವಂತೆ ಮಾಡು
- ಬದ್ದಿ(ಡ್ಡಿ)ಸ- ಅವುಕುವುದು
- ಬದ್ದೆ – ಪ್ರೌಢೆ; ಪತಿವ್ರತೆ
- ಬದ್ದೆ(ರ್ದೆ) – ಪ್ರೌಢೆ, ಜಾಣೆ
- ಬದ್ದೆವಜ್ಜೆ – ಬದ್ದೆ+ಪಜ್ಜೆ, ಪ್ರೌಡಿಮೆಯ ಹೆಜ್ಜೆಗುರುತು
- ಬದ್ಧ – ಸುತ್ತುವರಿದ; ಧರಿಸಿದ
- ಬದ್ಧಭೂಮಿ – ನೆಲಗಟ್ಟು
- ಬದ್ಧಭ್ರುಕುಟಿ – ಕೋಪದಿಂದ ಗಂಟಿಕ್ಕಿದ ಹುಬ್ಬುಗಳುಳ್ಳವನು
- ಬದ್ಧರಸ – ಸ್ನೇಹದಿಂದ ಕೂಡಿದವನು
- ಬದ್ಧವಿರೋಧ – ಆಳವಾದ ಶತ್ರುತ್ವ
- ಬದ್ಧವೈರ – ಬದ್ಧವಿರೋಧ
- ಬದ್ಧಾಂಜಲಿ – ನಮಸ್ಕಾರಪೂರ್ವಕವಾಗಿ ಮುಗಿದ ಕೈಗಳು
- ಬದ್ಧೋರ್ವಿ – ಬದ್ಧಭೂಮಿ
- ಬಧಿರ – ಕಿವುಡ
- ಬಧಿರತೆ – ಕಿವುಡು
- ಬಧಿರಿತ – ಕಿವುಡುಂಟುಮಾಡಿದ
- ಬನ – ಕಾಡು; ತೋಪು; ಉದ್ಯಾನ; ಒಳ್ಳೆಯ ಬಟ್ಟೆ
- ಬನವಂದಿ – ಕಾಡುಹಂದಿ
- ಬನವಟ್ಟೆ – ಕಾಡುದಾರಿ
- ಬನಸಿರಿ – ವನದೇವತೆ
- ಬನ್ನ – (ಭಗ್ನ) ಅವಮಾನ; ಸೋಲು; ಕಷ್ಟ
- ಬನ್ನಂಬಡಿಸು – ಅವಮಾನಿಸು; ಸೋಲಿಸು; ಹಿಂಸಿಸು
- ಬನ್ನಂಬಡು – ಅವಮಾನಗೊಳ್ಳು; ಸೋಲು; ಕಷ್ಟಕ್ಕೊಳಗಾಗು
- ದುಬಪ್ಪ – ಬೊಪ್ಪ, ತಂದೆ
- ಬಬ್ಬುಲಿ – ಮುಳ್ಳುಗಿಡ, ಬೊಬ್ಬುಳಿ ಮುಳ್ಳು
- ಬಭ್ರು – ಕಂದು ಬಣ್ಣ
- ಬಮ್ಮೇತಿ – (ಬ್ರಹ್ಮೇತಿ) ಬ್ರಾಹ್ಮಣ ಹತ್ಯೆ
- ಬಯ್ – ಮುಚ್ಚಿಡು; ತೆಗಳು
- ಬಯಕೆ – ಆಸೆ
- ಬಯಕೆಗವಿ – ಬಯಕೆ ಹೊಂದಿದ ಕವಿ; ಬಯಕೆ ಆವರಿಸು
- ಬಯಕೆವೆಣ್ – ಬಯಕೆಯುಂಟಾದ ಹೆಣ್ಣು, ಬಸಿರಿ
- ಬಯಲ್ದಾವರೆ – ನೆಲದಾವರೆ
- ಬಯಲ್ವೊನಲ್ – ಬಯಲ್ದೊ¾õÉ
- ಬಯಸು – ಇಚ್ಛೆಪಡು
- ಬಯ್ಕೆ – ನಿಧಿ; ಗುಟ್ಟು
- ಬಯ್ಗಿರುಳ್ – ಬಯ್ಗು+ಇರುಳ್, ರಾತ್ರಿಯ ಸಂಜೆ, ಬೆಳಗಿನ ಜಾವ
- ಬಯ್ಗು – ಸಾಯಂಕಾಲ
- ಬಯ್ಗುಳ್ – ತೆಗಳಿಕೆ
- ಬಯ್ತ ಬಯ್ಕೆ – ಬಯಸಿದ ಮನೋರಥ
- ಬಯ್ತಲೆ – ಸೀಮಂತ; ಬಾಚಿದ ತಲೆಗೂದಲ ಮಧ್ಯದ ಸೀಳುಗೆರೆ
- ಬಯ್ಸು – ಬಯ್ಯುವಂತೆ ಮಾಡು
- ಬರ – (ವರ) ಅನುಗ್ರಹ
- ಬರಂಬಡೆ – ವರವನ್ನು ಪಡೆ
- ಬರಗಲೆ – ಆಭರಣವಿಶೇಷ
- ಬರವಿಗ – ಬರುವವನು; ಅತಿಥಿ
- ಬರಿ – ಮಗ್ಗುಲು; ಪಕ್ಕೆ
- ಬರಿಗಂಡ – ಪಕ್ಕೆಯ ಮಾಂಸಖಂಡ
- ಬರಿಯೆಲ್ವು – ಪಕ್ಕೆಲುಬು
- ಬರಿವೊನಲ್ – ದಡ ಮೀರಿ ಹರಿಯುವ ನದಿ
- ಬ(ವ)ರಿಸ – ವರ್ಷ
- ಬರುಂಟು – ಬೆರಳಿನಿಂದ ಚುಚ್ಚು
- ಬರುಹ – ಬರುವಿಕೆ; ನವಿಲುಗರಿ
- ಬರೆ – ತಿದ್ದು; ರೇಖಿಸು; ಗೆರೆ ಎಳೆ; ಗೆರೆ
- ಬರೆಗೊಳ್ – ಬರೆ ಹಾಕಿಸಿಕೊ
- ಬರೆಪಂಬೊಗು – ಬರಹಕ್ಕೆ ಸಿಕ್ಕು
- ಬರೆಯಿಸು – ಬರೆಯುವಂತೆ ಮಾಡು
- ಬರ್ಕಟಬಯಲ್ – ಬಟಾ ಬಯಲು, ಏನೂ ಇಲ್ಲದ ಬಯಲು
- ಬರ್ಕುಡಿ – ಜಗಳ, ವಿವಾದ; ದೈನ್ಯ
- ಬರ್ಕೆವಲಸು – ನೆಲಹಲಸು
- ಬರ್ಚು – ಬತ್ತಿಹೋಗು
- ಬರ್ದಿಲ – ಸ್ವರ್ಗ
- ಬರ್ದಿಸು – ಎಣ್ಣೆಯಲ್ಲಿ ಕರಿ
- ಬರ್ದು – ಮರಣ ಹೊಂದು; ಸಾವು; ಕೃಶವಾಗು; ಜಾಣ್ಮೆ; ಪ್ರೌಢಿಮೆ
- ಬರ್ದುಂಕಿಸು – ಪ್ರಾಣ ಉಳಿಸು; ಕಾಪಾಡು
- ಬರ್ದುಕಾಡು – ಪಾರಾಗು
- ಬರ್ದುಗಾರ್ತಿ – ಪ್ರೌಢೆ; ಜಾಣೆ
- ಬರ್ದುಗೆ – ಮರಣ
- ಬರ್ದುಗೆಡು – ನೈಪುಣ್ಯವನ್ನು ಕಳೆದುಕೊ
- ಬರ್ದುನುಡಿ – ಜಾಣ್ಮೆಯ ನುಡಿ
- ಬರ್ದುವೆಣ್ – ಪ್ರೌಢೆ
- ಬರ್ದೆ(ದ್ದೆ) – ಬರ್ದುವೆಣ್; ವೇಶ್ಯೆ
- ಬರ್ದೆಗೆಯ್ತ – ಪ್ರೌಢಕಾರ್ಯ
- ಬರ್ಬೂರ – ಬೊಬ್ಬುಳಿ, ಜಾಲಿಮರ
- ಬರ್ಮನ್ – ಬ್ರಹ್ಮ
- ಬರ್ಹ – ಎಲೆ; ಸೋಗೆ; ಗರಿ
- ಬರ್ಹಿ – ನವಿಲು; ಕುಶ
- ಬರ್ಹಿಣ – ನವಿಲು
- ಬಲ್ – ತಿಳಿ; ದೃಢವಾಗು; ಗಟ್ಟಿಗೊಳ್ಳು
- ಬಲ – ಬಲಭಾಗ; ಶಕ್ತಿ; (ಬಳ) ಸೈನ್ಯ
- ಬಲದಂ – ಬಲಬದಿಯಲ್ಲಿರುವ ವ್ಯಕ್ತಿ
- ಬಲಂಗೆಡು – ಶಕ್ತಿಗುಂದು
- ಬಲಂಗೊಳ್ – ಪ್ರದಕ್ಷಿಣೆ ಹಾಕು
- ಬಲಂಬೆರಸು – ಸೈನ್ಯಸಮೇತ
- ಬಲಂಬೊಯ್ – ಬಲಂ+ಪೊಯ್, ಶಕ್ತಿ ನೀಡು
- ಬಲಕರ್ವೀಕೃತ – ಶಕ್ತಿಗುಂದಿದವನು
- ಬಲಗಡೆ – ಬಲದ ಕಡೆ, ಬಲಭಾಗ
- ಬಲಗೆಲ – ಬಲ+ಕೆಲ, ಬಲಬದಿ
- ಬಲ(ಳ)ಜ – ಬಾಗಿಲು
- ಬಲದಲನ – ಬಲವನ್ನು ಕುಂದಿಸುವವನು,
- ಬಲನೆಂಬ ರಕ್ಕಸನನ್ನು ಕೊಂದವನು, ಇಂದ್ರ
- ಬಲ(ಳ)ದೇವ – ಬಲರಾಮ; (ಜೈನ) ಅರವತ್ತು ಮೂವರು ಶಲಾಕಾಪುರುಷರಲ್ಲಿನ ಒಂಬತ್ತು ಮಂದಿಯ ಒಂದು ಗುಂಪು; ವಿಜಯ, ಅಚಲ, ಸುಧರ್ಮ, ಸುಪ್ರಭ, ಸುದರ್ಶನ, ನಂದಿ, ನಂದಿಮಿತ್ರ, ರಾಮ, ಪದ್ಮ ಎಂಬುವವರು
- ಬಲದೋಳ್ದಲೆ – ಬಲದ ಭುಜ
- ಬಲಭರ – ಸೈನ್ಯದ ಆಧಿಕ್ಯ
- ಬಲಭಿತ್ – ಇಂದ್ರ
- ಬಲಭಿಚ್ಚಾಪ – ಬಲಭಿತ್+ಚಾಪ, ಕಾಮನ ಬಿಲ್ಲು
- ಬಲ(ಳ)ಮರ್ದು(ದ್ದು) – ಪರಿಣಾಮಕಾರಿ ಔಷಧ
- ಬಲಯ – ತಲೆವಾಗಿಲು
- ಬಲಯುತ – ಶಕ್ತಿಯಿಂದ ಕೂಡಿದ(ವನು)
- ಬಲವಂಕ – ಬಲಬದಿ
- ಬಲ(ಳ)ವಂತ – ಶಕ್ತಿಶಾಲಿ
- ಬಲವಕ್ಕ – ಬಲವಂಕ
- ಬಲವತ್ಸೈನ್ಯ – ಶಕ್ತಿಶಾಲಿ ಸೈನ್ಯ
- ಬಲವದ್ವೈರಿ – ಬಲಿಷ್ಠ ಹಗೆ
- ಬಲವರ್ – ಪ್ರದಕ್ಷಿಣೆ ಹಾಕು
- ಬಲವಿರೋಧಿ – ಬಲನೆಂಬ ರಕ್ಕಸನನ್ನು ಕೊಂದವನು, ಇಂದ್ರ
- ಬಲವು – ಶಕ್ತಿ
- ಬಲವೈರಿ – ಬಲವಿರೋಧಿ
- ಬಲಸಂಘಟ್ಟನ – ಸೈನ್ಯದ ತುಳಿತ
- ಬಲಸ್ಥ – ಶಕ್ತಿಶಾಲಿ
- ಬಲಾಂತಕ – ಬಲವಿರೋಧಿ
- ಬಲಾ(ಳಾ)ಕ(ಕೆ) – ಬೆಳ್ಳಕ್ಕಿ
- ಬಲಾಢ್ಯ – ಬಲಿಷ್ಠ(ನಾದವನು)
- ಬಲಾಧಿಕ – ಅಧಿಕ ಬಲಶಾಲಿ
- ಬಲಾಧಿಕೃತ – ಸೇನಾಧಿಪತಿ
- ಬಲಾ(ಳಾ)ಧ್ಯಕ್ಷ – ಬಲಾಧಿಕೃತ
- ಬಲಾವಲೇಪ – ಬಲದ ಕಾರಣದಿಂದಾದ ದರ್ಪ
- ಬಲಾ(ಳಾ)ಹಕ – (ಪ್ರಳಯಕಾಲದ) ಮೋಡ
- ಬಲಿ – ಬಲಿಷ್ಠ (ವ್ಯಕ್ತಿ); ಬಲಿ ಚಕ್ರವರ್ತಿ; ದೇವತೆಗೆ ನೀಡುವ ಆಹುತಿ; (ಜೈನ) ಪ್ರತಿವಾಸುದೇವರಲ್ಲಿ ಒಬ್ಬ
- ಬಲಿಂದಮ – ಬಲಿಯನ್ನು ದಮನಮಾಡಿದವನು, ವಾಮನ, ವಿಷ್ಣು
- ಬಲಿಕೆಯ್ – ಬಲಿಷ್ಠವಾಗಿ ಮಾಡು
- ಬಲಿಗೆಯ್ – ಆಹುತಿ ಅರ್ಪಿಸು
- ಬಲಿಪುಷ್ಟ – ಕಾಗೆ
- ಬಲಿಭುಕ್ – ಬಲಿಪುಷ್ಟ
- ಬಲಿಬಂಧನ – ಬಲಿಂದಮ
- ಬಲಿ(ಳಿ)ಭುಕ್ಕು – ಆಹುತಿಯಿತ್ತುದನ್ನು ತಿನ್ನುವುದು, ಕಾಗೆ
- ಬಲಿಭೋಜನ – ಬಲಿ(ಳಿ)ಭುಕ್ಕು
- ಬಲಿಭೋಜಿ – ಬಲಿ(ಳಿ)ಭುಕ್ಕು
- ಬಲಿ(ಳಿ)(ೀ)ಮುಖ – ಕೋತಿ
- ಬಲಿಮುಖಕೇತನ – ಶ್ರೇಷ್ಠ ಕಪಿ, ಸುಗ್ರೀವ
- ಬಲಿರಿಪು – ಬಲಿಂದಮ
- ಬಲಿಸುತ – ಬಲಿಯ ಮಗ, ಬಾಣಾಸುರ
- ಬಲಿಸ್ನಪನ – (ಜೈನ) ಜಿನನಿಗೆ ಮೂರೂ
- ಸಂಜೆಗಳಲ್ಲಿ ಮಾಡುವ ಅಭಿಷೇಕ
- ಬಲಿಹರ – ಬಲಿಂದಮ
- ಬಲಿಹರಣಂಗೆಯ್ – ಬಲಿಯನ್ನು ಅರ್ಪಿಸು
- ಬಲೀಮುಖ(ಖಿ) – ಕೋತಿ, (ಹೆಣ್ಣು)
- ಬಲೀವರ್ದ – ಎತ್ತು
- ಬಲೆ – ದಾರದಿಂದ ಹೆಣೆದ ಬೇಟೆಯಾಡುವ ಸಾಧನ, ಜಾಲ
- ಬಲೆಗಣ್ – ಬಲೆಯ ತೂತು
- ಬಲೋ(ಳೋ)ನ್ಮತ್ತ – ತನ್ನ ಶಕ್ತಿಯ ಬಗ್ಗೆ ಗರ್ವ ಪಡುವವನು
- ಬಲ್ಕಣಿ – ಮಹಾ ಶೂರ; ಪರಿಣತ
- ಬಲ್ಕಣಿತನ – ಶೌರ್ಯ
- ಬಲ್ಗಂಡು – ಮಹಾ ಶೌರ್ಯ
- ಬಲ್ಗಣೆ – ಶಕ್ತಿಶಾಲಿ ಅಸ್ತ್ರ
- ಬಲ್ಗಣ್ಣಿ – ಬಲವಾದ ಹಗ್ಗ
- ಬಲ್ಗರ – ಬಲಿಷ್ಠ ಗ್ರಹ
- ಬಲ್ಗರುಳ್ – ದೀರ್ಘವಾದ ಕರುಳು
- ಬಲ್ಗಲಿ – ಮಹಾ ಶೂರ
- ಬಲ್ಗ¾Â – ದೊಡ್ಡ ರೆಕ್ಕೆ
- ಬಲ್ಗಾಪು – ಬಲವಾದ ಕಾವಲು
- ಬಲ್ಗಾಳೆಗ – ಘೋರ ಯುದ್ಧ
- ಬಲ್ಗುದುರೆ – ಬಲಿಷ್ಠ ಕುದುರೆ
- ಬಲ್ಗೂಳಿ – ಬಲಿಷ್ಠ ಗೂಳಿ
- ಬಲ್ಗೆಯ್ತ – ದೊಡ್ಡ ಕೆಲಸ
- ಬಲ್ಗೋಂಟೆ – ಬಲಿಷ್ಠ ಕೋಟೆ
- ಬಲ್ದಗರ – ಬಲ್+ತಗರ್, ಬಲಿಷ್ಠ ಟಗರು
- ಬಲ್ದಡಿ(ಗ) – ಮಹಾ ಬಲಶಾಲಿ
- ಬಲ್ದೆರೆ – ದೊಡ್ಡ ಅಲೆ
- ಬಲ್ನನೆ – ದೊಡ್ಡ ಮೊಗ್ಗು
- ಬಲ್ನಿಡಿದು – ತುಂಬ ನೀಳವಾದ(ದ್ದು)
- ಬಲ್ನೆಣ – ಅಧಿಕ ಕೊಬ್ಬು
- ಬಲ್ನೆಲೆ – ಬಲವಾಸ ಆಸರೆ
- ಬಲ್ಪಳಿ – ಬಲ್ಪು+ಅಳಿ, ಶಕ್ತಿಗುಂದು
- ಬಲ್ಪು – ಬಲಾತ್ಕಾರ; ದೃಢತೆ
- ಬಲ್ಪುಗಿ(ಗೆ)ಡು – ಶಕ್ತಿಗುಂದು
- ಬಲ್ಪೊಂಬಳೆ – ದೊಡ್ಡ ಹೊಂಬಾಳೆ
- ಬಲ್ಬಂಟ – ದೊಡ್ಡ ಶೂರ
- ಬಲ್ಬ¾ – ಭೀಕರ ಕ್ಷಾಮ
- ಬಲ್ಮಂತ್ರಿ – ಸಮರ್ಥ ಸಚಿವ
- ಬಲ್ಮಿಡಿ – ದೊಡ್ಡ, ಬಲಿತ ಕಾಯಿ
- ಬಲ್ಮಿಳಿ – ದೊಡ್ಡ, ಬಲವಾದ ಹಗ್ಗ
- ಬಲ್ಮುಗುಳ್ – ದೊಡ್ಡ ಮೊಗ್ಗು
- ಬಲ್ಮುಡಿ – ಹೇರಳ ಕೂದಲ ಗಂಟು
- ಬಲ್ಮುತ್ತು – ದಪ್ಪನಾದ ಮುತ್ತು
- ಬಲ್ಮುನಿ(ಳಿ)ಸು – ಭರಿ ಕೋಪ
- ಬಲ್ಮೆ – ಶಕ್ತಿ; ಶ್ರೇಷ್ಠತೆ; ಬಲಾತ್ಕಾರ
- ಬಲ್ಮೊಗ – ಗಂಭೀರ ಮುಖಮುದ್ರೆ
- ಬಲ್ಮೊರೆ – ಹೆಚ್ಚಿನ ಮೊರೆತ
- ಬಲ್ಮೊಸರ್ – ಧೈಂಡಿ ಮೊಸರು
- ಬಲ್ಲಡಗು – ಒಳ್ಳೆಯ ಮಾಂಸ
- ಬಲ್ಲಡವಿ – ದಟ್ಟ ಕಾಡು
- ಬಲ್ಲಣಿ – ದೊಡ್ಡ ದಂಡು
- ಬಲ್ಲಹ – ಯಜಮಾನ; ಶೂರ
- ಬಲ್ಲಾಯ – ಹೆಚ್ಚಿನ ಶೌರ್ಯ
- ಬಲ್ಲಾಳ್ – ಬಲವಾದ ಆಳು, ಶೂರ
- ಬಲ್ಲಾಳ್ತನ – ಶೌರ್ಯ; ಬಲಾತ್ಕಾರ
- ಬಲ್ಲಾಳ್ತನಂಗೆಯ್ – ಒತ್ತಾಯಪಡಿಸು
- ಬಲ್ಲಿತ್ತು – ಬಿಗಿಯಾಗಿ, ಬಲವಾಗಿ
- ಬಲ್ಲಿತ್ತು ಮಾಡು – ಬಲಪಡಿಸು; ದೃಢಗೊಳಿಸು
- ಬಲ್ಲಿದ – ಶೂರ
- ಬಲ್ಲುಲಿ – ಜೋರಾದ ಧ್ವನಿ; ಹೊಗಳಿಕೆಯ ನುಡಿ
- ಬಲ್ಲೆ – ಪೊದೆ; ಬಳಿಕ
- ಬ(ಭ)ಲ್ಲೆಯ – ಈಟಿ
- ಬಲ್ವಗೆ – ಬಲಿಷ್ಠ ಶತ್ರು
- ಬಲ್ವಡಿ – ಬಲ್+ಪಡಿ, ಬಲಿಷ್ಠ ಬಾಗಿಲು
- ಬಲ್ವರವಿ – ದೊಡ್ಡ ಹರವಿ, ಮಡಕೆ
- ಬಲ್ವರಿಕೆ – ಬಲ್+ಪರಿಕೆ, ದೊಡ್ಡ ದಾಳಿ
- ಬಲ್ವಲ – ದೊಟ್ಟ ಸೈನ್ಯ; ಶ್ರೇಷ್ಠವಾದ(ದ್ದು)
- ಬಲ್ವಲಾಗು – ಹೆಚ್ಚಾಗು
- ಬಲ್ವಲಿಕೆ – ಬಲ್+ಬಲಿಕೆ, ಹೆಚ್ಚಿನ ಶಕ್ತಿ
- ಬಲ್ವಿ(ಲ್ಪಿ)ಡಿ – ಗಟ್ಟಿಯಾಗಿ ಹಿಡಿ; ಬಲವಾದ ಹಿಡಿತ
- ಬಲ್ವಿಣಿಲ್ – ಬಲ್+ಪಿಣಿಲ್, ಹೇರಳ ಕೇಶರಾಶಿ
- ಬಲ್ವೆಣ – ದೊಡ್ಡ ಹೆಣ
- ಬಲ್ವೆಣಸು – ಬಲ್+ಪೆಣಸು, ಹೆಚ್ಚಿನ ರಭಸ
- ಬಲ್ವೊಯಿಲ್ – ಬಲ್+ಪೊಯಿಲ್, ರಭಸದ ಏಟು
- ಬಲ್ಸರಿ – ಜೋರಾದ ಮಳೆ
- ಬಲ್ಸಿಡಿಲ್ – ಬಲವಾದ ಸಿಡಿಲು
- ಬವಣಿಗೆ – ಪ್ರದಕ್ಷಿಣೆ; ಸುತ್ತಾಟ
- ಬವನ – (ವಮನ) ವಾಂತಿ
- ಬವರ – ಕಾಳಗ; ಪೈಪೋಟಿ; ಜಗಳ; (ಭ್ರಮರ) ದುಂಬಿ
- ಬವರಂಗೆಯ್ – ಹೋರಾಡು
- ಬವರಿ – (ಭ್ರಮರಕ) ಬುಗುರಿ
- ಬವರಿಗೊಡು – ವೇಗವಾಗಿ ತಿರುಗು
- ಬವರಿಗೊಳು – ತಿರುಗಿಸು
- ಬವರಿವರಿ – ಸುತ್ತುವರಿ
- ಬವರಿಸು – ಅಲೆದಾಡು; ಆವರಿಸು; ಉಂಟಾಗು
- ಬವಸು(ಸೆ) – ಆಸೆ; (ವ್ಯವಸಾಯ) ಪ್ರಯತ್ನ
- ಬವಸೆಗಾಣ್ – ಆಸೆಪಡು
- ಬವಳಿವರಿ – ತಿರುಗು, ಸುತ್ತುಹಾಕು
- ಬಸ(ದು) – (ವಶ) ಅಂಕೆ; ಬಲ
- ಬಸಂ ಮಾಡು – ಅಧೀನಪಡಿಸಿಕೊ
- ಬಸಂತ – (ವಸಂತ) ಚೈತ್ರ-ವೈಶಾಖ ತಿಂಗಳುಗಳು;
- ಸಂತೋಷದಾಯಕ(ವಾದ)-
- ಬಸಂತಮಾಸ – ವಸಂತಋತು
- ಬಸಂತಸಮಯ – ಬಸಂತಮಾಸ
- ಬಸದನ – ಸಿಂಗಾರ
- ಬಸದಿ – (ವಸತಿ) (ಜೈನ) ಜಿನಗೃಹ
- ಬಸದು – ಶುದ್ಧ
- ಬಸನ – (ವ್ಯಸನ) ಅತ್ಯಾಸಕ್ತಿ
- ಬಸನಿ(ಗ) – (ವ್ಯಸನಿ) ಬಸನವುಳ್ಳವನು
- ಬಸನಿಗತನ – ಕೆಟ್ಟ ಸ್ವಭಾವ
- ಬಸನಿಗೆ – ಪ್ರಣಯಕಾತರೆ
- ಬಸಯಿಸು – ಸ್ವಾಧೀನಪಡಿಸಿಕೊ
- ಬಸಿ – ಒಸರು; ಸುರಿ; ಹರಿತ(ಚೂಪು)ಗೊಳಿಸು; ಮೊಳೆ
- ಬಸಿರ್ಪೂಸು – ಬಸಿರಿನಲ್ಲೇ ಓಲೈಸು
- ಬಸಿರ್ಪೆಂಡತಿ – ಬಸಿರಿ ಹೆಂಗಸು
- ಬಸೆ – ಹೆಣ್ಣು ಆನೆ; ಗೊಡ್ಡು ಹಸು; ಕೊಬ್ಬು
- ಬಸ್ತ(ಕ) – ಹೋತ
- ಬಸ್ತಪಾಲ – ಆಡು ಮೇಯಿಸುವವನು
- ಬಹಲ(ಳ) – ಅಧಿಕ
- ಬಹಿಃಕರಿಸು – ಹೊರಹಾಕು
- ಬಹಿಃಪುರ – ಊರ ಹೊರವಲಯ
- ಬಹಿಃಪುಷ್ಕರ – ಚಾಚಿರುವ ಸೊಮಡಿಲು
- ಬಹಿತ್ರ – (ಭೈೈತ್ರ) ಹಡಗು
- ಬಹಿರಂಗ – ಹೊರಗಿನದು; ಹೊರಭಾಗ
- ಬಹಿರುದ್ಯಾನ – ಊರ ಹೊರಗಿನ ಉದ್ಯಾನವನ
- ಬಹಿರ್ದೇಶ – ಹೊರ ಪ್ರದೇಶ
- ಬಹಿದ್ರ್ವಾರ – ಹೊರಗಿನ ಬಾಗಿಲು
- ಬಹಿರ್ಭಾಗ – ಹೊರಗಿನ ಭಾಗ
- ಬಹಿರ್ಮಂಡಲ – ಶತ್ರುರಾಜ್ಯ
- ಬಿಟ್ಟಿಬೆಸಕೆಯ್ – ಬಿಟ್ಟಿ ಕೆಲಸ ಮಾಡು
- ಬಿಡಾಲ – ಬೆಕ್ಕು
- ಬಿಡಿಸು – ಬೇರೆ ಮಾಡು; ಬಿಡುಗಡೆಗೊಳಿಸು
- ಬಿಡು – ಬಿಚ್ಚು; ತ್ಯಜಿಸು; ಹೂಹಣ್ಣು ಮುಂತಾದವು ಹುಟ್ಟಿಕೊ
- ಬಿಡುನುಡಿ – ಬಿಚ್ಚುಮಾತು
- ಬಿಡುಮುಡಿ – ಬಿಚ್ಚಿದ ತುರುಬು
- ಬಿಡುಮುತ್ತು – ಒಂಟಯಾದ ಮುತ್ತು
- ಬಿಡುವಾಯ್ – ತೆರೆದ ಬಾಯಿ
- ಬಿಡುವು – ಅಂತರ
- ಬಿಡುವೆಣ್ – ಸಖಿ
- ಬಿಡುವೊನ್ – ಬಿಡಿಯಾದ ಚಿನ್ನ(ದ) ನಾಣ್ಯ
- ಬಿಡೆ – ಅತಿಶಯವಾಗಿ
- ಬಿಡೌಜ – ಇಂದ್ರ
- ಬಿಣ್ಗುಂಡು – ಲಂಗರು ಗುಂಡು
- ಬಿಣ್ಗೊಂಚಲ್ – ದೊಡ್ಡ ಗೊಂಚಲು
- ಬಿಣ್ಗೊಲೆ – ದೊಡ್ಡ ಗೊನೆ
- ಬಿಣ್ಣಿತು(ತ್ತು) – ಭಾರ(ವಾದುದು)
- ಬಿಣ್ಪರಿ – ಬೇಟೆಯ ಜಾಗ
- ಬಿಣ್ಪು – ಭಾರ; ಅತಿಶಯತೆ; ಹಿರಿಮೆ
- ಬಿಣ್ಪುಗೊಳ್ – ಅಧಿಕವಾಗು
- ಬಿಣ್ಮಾಣಿಕ – ದೊಡ್ಡ ಮಾಣಿಕ್ಯ
- ಬಿತ್ತರ – (ವಿಸ್ತಾರ) ಹರಹು
- ಬಿತ್ತರಂಗೆಯ್ – ನಿರೂಪಿಸು; ಪೀಠವಾಗು
- ಬಿತ್ತರಂಬಡೆ – ವಿಸ್ತಾರಗೊಳ್ಳು
- ಬಿತ್ತರಿ(ಗೆ) – ಸಿಂಹಾಸನ
- ಬಿತ್ತರಿಕೆ – ವಿಸ್ತಾರಿಕೆ
- ಬಿತ್ತರಿಸು – ವಿಸ್ತರಿಸು
- ಬಿತ್ತು – ಬೀಜ; ಬೀಜ ನೆಡು
- ಬಿತ್ತೆ(ತ್ತಿ)ಗ – ಪ್ರೌಢ, ಪಂಡಿತ
- ಬಿದಿ – (ವಿಧಿ) ದೈವ; ಸೃಷ್ಟಿಕರ್ತ; ಅದೃಷ್ಟ; ಆಹಾರ
- ಬಿದಿಗೆ – (ದ್ವಿತೀಯೆ) ಚಾಂದ್ರಮಾನ ಪಕ್ಷದ ಎರಡನೆಯ ದಿನ
- ಬಿದಿಗೆಯ ಚಂದ್ರ – ಬೆಳೆಯುವ ಚಂದ್ರ
- ಬಿದಿರ್ – ಕೊಡವು; ಚದುರಿಸು; ಬಿದಿರ ಗಳೆ
- ಬಿದಿರ್ಚು – ಹರಡು; ಕಳಚು
- ಬಿದಿರ್ಮುತ್ತು – ಬಿದಿರಿನಲ್ಲಿ ಸಿಕ್ಕುತ್ತದೆ ಎಂದು ನಂಬಲಾದ ಮುತ್ತು
- ಬಿದಿವಸ – ವಿಧಿವಶ
- ಬಿದು – (ವಿಧು) ಚಂದ್ರ; ಆನೆಯ ಕುಂಭಸ್ಥಳ
- ಬಿದುಗದಿರ್ – ಬೆಳುದಿಂಗಳು
- ಬಿದುಗಲ್ – ಚಂದ್ರಕಾಂತಶಿಲೆ
- ಬಿದುತಟ – ಗಂಡಸ್ಥಳ
- ಬಿದ್ದಂಬರಿ – ಬೀಳುವಂತೆ ಓಡು
- ಬಿನದ – ವಿನೋದ
- ಬಿನುಗು – ಬಡವ; ಕ್ಷುದ್ರ
- ಬಿನ್ನ – ಬಿನ್ನಹ
- ಬಿನ್ನಗೆ(ನೆ) – ಸುಮ್ಮನೆ
- ಬಿನ್ನಣ – (ವಿಜ್ಞಾನ) ಚಾತುರ್ಯ
- ಬಿನ್ನನೆ – ವ್ಯಥೆಯಿಂದ, ಮೌನವಾಗಿ
- ಬಿನ್ನವಿರ್ – ಸುಮ್ಮನಿರು; ಖಿನ್ನವಾಗಿರು
- ಬಿನ್ನಪ – (ವಿಜ್ಞಾಪನ) ಅರಿಕೆ
- ಬಿನ್ನಪಂಗೆಯ್ – ಅರಿಕೆ ಮಾಡು
- ಬಿನ್ನವಿಸು – ಬಿನ್ನಪಂಗೆಯ್
- ಬಿನ್ನಾಣ – ಬಿನ್ನಣ
- ಬಿಪ್ಪಂಡ – ವ್ಯರ್ಥ
- ಬಿಪ್ಪಂಡಿಸು – ದ್ವೇಷಿಸು
- ಬಿಬ್ಬೋಕ – ಹುಸಿಮುನಿಸು
- ಬಿಭೀಷಿಕೆ – ಅಂಜಿಕೆ
- ಬಿಮ್ಮುಗರೆ – ಬಿಕೋ ಎನ್ನು
- ಬಿಯ – (ವ್ಯಯ) ವೆಚ್ಚ; ದಾನ
- ಬಿಯಂಗೆಯ್ – ವ್ಯಯಮಾಡು; ದಾನಮಾಡು
- ಬಿಯಕಾರ್ತಿ – ಬೆಲೆವೆಣ್ಣು
- ಬಿಯಕಾ¾ – ದುಂದುಗಾರ
- ಬಿಯಗ – ಮದುವೆಯಿಂದಾದ ಸಂಬಂಧಿ; ಬೀಗ
- ಬಿಯದ – (ವ್ಯಾಧ) ಬೇಟೆಗಾರ
- ಬಿಯಳ – (ವ್ಯಾಳ) ಕಾಡಾನೆ
- ಬಿರಯಿ – (ವಿರಹಿ) ಅಗಲಿದವ
- ಬಿರಯಿ – ವಿರಹಿ
- ಬಿರಿ – ಸೀಳು; ಅರಳು
- ಬಿರಿಕು – ಬಿರುಕು, ಒಡಕು
- ಬಿರಿಗಳಿಕೆ – ಬಿರಿ+ಕಳಿಕೆ, ಅರಳುವ ಮೊಗ್ಗು
- ಬಿರಿಮುಗುಳ್ – ಬಿರಿಗಳಿಕೆ
- ಬಿರಿಯಿಸು – ಸೀಳುವಂತೆ ಮಾಡು; ಅರಳಿಸು
- ಬಿರಿವೂ – ಅರಳಿದ ಹೂ
- ಬಿರುದ – ಬಿರುದನ್ನು ಪಡೆದವನು; ಗೌರವಾನ್ವಿತ
- ಬಿರುದನಿಗಡ – ಬಿರುದಿನ ಬಳೆ; ಪೆಂಡೆಯ
- ಬಿರುದಂಕ – ಬಿರುದ
- ಬಿರುದು – ಪ್ರಶಸ್ತಿ
- ಬಿರ್ಚು – ಬಿಚ್ಚು, ಬೇರ್ಪಡಿಸು; ಬಿಡಿಸು; ಹರಡು
- ಬಿರ್ದಿ – (ವೃದ್ಧಾ) ಮುದುಕಿ
- ಬಿರ್ದಿಕ್ಕು – ಔತಣವಿಡು
- ಬಿರ್ದಿನ – ಅತಿಥಿ
- ಬಿರ್ದು – ಔತಣ
- ಬಿರ್ದುವರ್ – ಔತಣಕ್ಕೆ ಆಗಮಿಸು
- ಬಿರ್ದೂಟ – ಔತಣದೂಟ
- ಬಿಲ್ – ವಿಕ್ರಯಮಾಡು; ಧನುಸ್ಸು; ಬಿಲ್ಗಾರರ ಸೈನ್ಯ
- ಬಿಲ – ಡೊಗರು; ಗವಿ
- ಬಿಲಂಬುಗು – ಡೊಗರನ್ನು ಪ್ರವೇಶಿಸು
- ಬಿಲ್ಗಾಳೆಗ – ಬಿಲ್ಲುಗಳಿಂದ ಮಾಡುವ ಯುದ್ಧ
- ಬಿಲ್ಗೊಳ್ – ಬಿಲ್ಲನ್ನು ಹಿಡಿ; ಯುದ್ಧಸನ್ನದ್ಧನಾಗು
- ಬಿಲ್ಜಾಣಿಕೆ – ಬಿಲ್ವಿದ್ಯಾ ನೈಪುಣ್ಯ
- ಬಿಲ್ಬ(ಲ್ವ)ಲ್ಮೆ – ಬಿಲ್ಜಾಣಿಕೆ
- ಬಿಲ್ಬಿನ್ನಣ – ಬಿಲ್ಜಾಣಿಕೆ
- ಬಿಲ್ಲ – (ಭಿಲ್ಲ) ಬೇಡ
- ಬಿಲ್ಲಜಾಣ – ಬಿಲ್ವಿದ್ಯಾ ನಿಪುಣ
- ಬಿಲ್ಲಣಿ – ಬಿಲ್ಗಾರ (ಸೈನ್ಯ)
- ಬಿಲ್ಲನಾರಿ – ಬಿಲ್ಲಿನ ಹೆದೆ
- ಬಿಲ್ಲ ಬಲ್ಮೆ – ಬಿಲ್ಜಾಣಿಕೆ
- ಬಿಲ್ಲ ಬಲ್ಲಹ – ಬಿಲ್ಲಜಾಣ
- ಬಿಲ್ಲ ಬಿತ್ತೆಗ – ಬಿಲ್ಲಜಾಣ
- ಬಿಲ್ಲ ಬಿನ್ನಣಿ – ಬಿಲ್ಲಜಾಣ
- ಬಿಲ್ಲವ – ಬಿಲ್ಲಜಾಣ
- ಬಿಲ್ಲಾಳ್ – ಬಿಲ್ಗಾರ
- ಬಿಲ್ಲೊವಜ – ಬಿಲ್ಲೆ¾õÉಯ
- ಬಿಲ್ವಡೆ – ಬಿಲ್ಲಣಿ
- ಬಿಲ್ವಿಡಿ – ಬಿಲ್ಗೊಳ್
- ಬಿಲ್ವಿಡಿಯಿಸು – ಬಿಲ್ಲು ಹಿಡಿಯುವಂತೆ ಮಾಡು
- ಬಿಲ್ವಿದ್ದೆ – ಧನುರ್ವಿದ್ಯೆ
- ಬಿಲ್ವೀಸು – ಬಿಲ್ಲನ್ನು ಬೀಸು
- ಬಿಲ್ವೊಯ್ – ಬಿಲ್ಲ ಹೆದೆ ಮಿಡಿದು ಠೇಂಕಾರಗೈ
- ಬಿಸ – ವಿಷ
- ಬಿಸ(ಕಾಂಡ) – ಕಮಲದ ದಂಟು, ನಾಳ
- ಬಿಸಜ – ತಾವರೆ
- ಬಿಸಜಭವ – ಕಮಲಸಂಭವ, ಬ್ರಹ್ಮ
- ಬಿಸನಾಳ – ಬಿಸ(ಕಾಂಡ)
- ಬಿಸಪ್ರಸೂನ – ತಾವರೆ
- ಬಿಸರುಹ – ತಾವರೆ
- ಬಿಸಲತೆ – ತಾವರೆಯ ಬಳ್ಳಿ
- ಬಿಸವಂದ – ಆಶ್ಚರ್ಯ
- ಬಿಸವಲ್ಲರಿ – ಬಿಸಲತೆ
- ಬಿಸಸನ (ವಿಶಸನ) – ಕತ್ತಿ; ಕೊಲ್ಲುವುದು
- ಬಿಸಸಿತ – ಕಮಲದ ದಂಟಿನಂತೆ ಬೆಳ್ಳಗಿರುವುದು
- ಬಿಸಸೂತ್ರ – ತಾವರೆಯ ದಂಟಿನ ನಾರು
- ಬಿಸಿ – ಶಾಖವುಳ್ಳದ್ದು
- ಬಿಸಿದು – ಬಿಸಿಯಾದ(ದ್ದು)
- ಬಿಸಿಲ್ – ಸೂರ್ಯಕಿರಣ
- ಬಿಸಿಲುಗೊಳ್ – ಬಿಸಿಲಿನಂತೆ ಹೊಳೆ
- ಬಿಸಿಲ್ಗುದುರೆ – ಮರೀಚಿಕೆ
- ಬಿಸು – ಬೆಸುಗೆ ಹಾಕು
- ಬಿಸುಗಣ್ಗೊರವ – ಉರಿಯುವ ಕಣ್ಣಿನ ಯತಿ, ಶಿವ
- ಬಿಸುಗಣ್ಣ – ಹಣೆಗಣ್ಣ, ಶಿನ
- ಬಿಸುಗದಿರ – ಬಿಸಿಯಾದ ಕಿರಣಗಳವನು, ಸೂರ್ಯ
- ಬಿಸುಗೆ – ಬೆಸುಗೆ, ಸೇರಿಕೆ; ಅಂಬಾರಿ
- ಬಿಸುಡು – ಬಿಸಾಕು, ಎಸೆ
- ಬಿಸುನೀರ್ – ಬಿಸಿನೀರು, ಬೆನ್ನೀರ್
- ಬಿಸುನೆತ್ತರ್ – ಬಿಸಿ ರಕ್ತ
- ಬಿಸುಪುರ್() -ತಾಪ
- ಬಿಸುಪುಗಿಡಿಸು – ಪ್ರಖರತೆಯನ್ನು ಕುಗ್ಗಿಸು
- ಬಿಸುವಳಿ – ಒಟ್ಟಾಗುವಿಕೆ
- ಬಿಸುವಿಸಿಲ್ – ಪ್ರಖರ ಬಿಸಿಲು
- ಬಿಸುವುಡಿ – ಬಿಸು(ಪು)+ಪುಡಿ, ಕಾದ ಮಣ್ಣು
- ಬಿಸುಉಸುಯ್ – ಬಿಸಿಯುಸಿರು (ನಿಟ್ಟುಸಿರು) ಬಿಡು
- ಬಿಳಿ(ದು) – ಬಿಳುಪು (ಬಣ್ಣದ)
- ಬಿಳಿಯರಳೆ – ಬೆಳ್ಳನೆಯ ಹತ್ತಿ
- ಬಿಳಿಯಾಲಿ – ಕಣ್ಣಗುಡ್ಡೆಯ ಬಿಳಿಪು ಭಾಗ
- ಬೀ(ಗು)(ಯು) – ಮರಣಿಸು; ಕೊನೆಗೊಳ್ಳು; ಒಣಗಿಹೋಗು
- ಬೀ(ಯ)ಗಿತ್ತಿ – ಬೀಗಿತಿ
- ಬೀಗು – ಉಬ್ಬು; ಗರ್ವಿಸು
- ಬೀಗಿಬೆಳೆ – ಸೊಂಪಾಗಿ ಬೆಲೆ
- ಬೀಜ – ದಾಳಿಂಬೆ ಹಣ್ಣಿನ ಕಾಳು
- ಬೀಜನ – ವೀಜನ, ಬಿಸಣಿಗೆ
- ಬೀಜಪೂರ – ಈಳೆ ಜಾತಿಯ ಮರ, ಹಣ್ಣು
- ಬೀಜಭೋಜಿ – ಬಿತ್ತನೆ ಕಾಳು ತಿನ್ನುವವನು
- ಬೀಜಾವಾಪ – ಬಿತ್ತನೆ
- ಬೀಟೆ(ಡೆ)ಗಾಲ್ – ಬಿರಿದ ಕಾಲು
- ಬೀಟೆ(ಡೆ)ವರಿ – ಬಿರುಕು ಬಿಡು
- ಬೀಡಂಬಿಡಿಸು – ಬಿಡಾರ ಹೂಡುವಂತೆ ಮಾಡು
- ಬೀಡು – ಬಿಡಾರ, ವಾಸಸ್ಥಾನ; ಬಿಡುವಿಕೆ
- ಬೀಡುವಿಡು – ಬಿಡಾರ ಮಾಡು; ಶಿಬಿರ ಹಾಕು
- ಬೀಡೆತ್ತು – ಶಿಬಿರವನ್ನು ತೆಗೆ
- ಬೀಡೆಯೊಡೆ – ಬಿರುಕು ಬಿಡು
- ಬೀಡೆವಡು – ಬಿರುಕುಂಟಾಗು
- ಬೀಡೆವಣ್ – ಬಿರಿದ ಹಣ್ಣು
- ಬೀಡೆವರಿ – ಬಿರುಕುಂಟಾಗು
- ಬೀಡೆವೋಗು – ಬೀಡೆಯೊಡೆ
- ಬೀಣೆ – ವೀಣೆ
- ಬೀಣೆವಾಜಿಸು – ವೀಣೆಯನ್ನು ನುಡಿಸು
- ಬೀತುದು – ಮುಗಿದುಹೋದುದು
- ಬೀದಿ – (ವೀಥೀ) ದಾರಿ
- ಬೀದಿಗೊಳ್ – ದಾರಿ ಹಿಡಿದು ಹೋಗು
- ಬೀದಿವರಿಯಿಸು – ಹಬ್ಬುವಂತೆ ಮಾಡು
- ಬೀದಿವಾಡ – ಬೀದಿಬದಿಯ ಹಮ್ರ್ಯ
- ಬೀದಿವಡು – ಬೀದಿಯ ಹಾಡು
- ಬೀಭತ್ಸ – ಜಿಗುಪ್ಸೆ ತರುವ
- ಬೀಭತ್ಸು – ಭಯಂಕರವಾದ; ಅಸಹ್ಯಕರವಾದ(ದ್ದು)
- ಬೀಯ – (ವ್ಯಯ) ವೆಚ್ಚ
- ಬೀರ – ಶೂರ; ಶೌರ್ಯ; ವೀರಭದ್ರ
- ಬೀರಗಚ್ಚೆ – ಯುದ್ಧಕಾಲದ ವೀರರ ಕಚ್ಚೆ; ವೀರಗಚ್ಚೆ
- ಬೀರರವ – ವೀರಘೋಷ; ವೀರನ ಕೂಗು
- ಬೀರವಟ್ಟ – ಸೇನಾಪತಿಯ ಪಟ್ಟ
- ಬೀರವ(ಮ)ದ್ದಳೆ – ರಣವಾದ್ಯ
- ಬೀರವರ್ತಿ – ಸೈನಿಕ
- ಬೀರವಸದನಂಗೆಯ್ – ವೀರನ ಅಲಂಕಾರ ಮಾಡಿಕೊ
- ಬೀವು – ಬೆನ್ನ ಹುರಿ; ಹಗ್ಗ
- ಬೀಸರ – ವ್ಯರ್ಥ; ನಿಂದನೆ
- ಬೀಸಾಡು – ಬಿಸಾಕು, ಎಸೆ
- ಬೀಸು – ಬಿಸುಡು; ಬಲೆಯಂತಹುದನ್ನು ಹರಡು; ಗಾಳಿ ಹಾಕು; ದೊಣ್ನೆಯಂತಹುದನ್ನು ಝಳಪಿಸು; ಬೀಸುವಿಕೆ
- ಬೀಸುಂಬಲೆ – ಹರಡುವ ಬಲೆ
- ಬೀಸುಗಲ್ – ಕವಣೆ ಕಲ್ಲು
- ಬೀಳ್ಗೆಡಹು – ಬೀಳುವಂತೆ ಹೊಡೆ
- ಬುಂಭುಕ – ಕುಚ್ಚು, ಗೊಂಚಲು
- ಬುಗುಂಟು – ಬೋರೆ, ಬುಗುಟು
- ಬುಕ್ಕ – ಹೃದಯ
- ಬುತ್ತಿ – (ಭುಕ್ತಿ) ಪ್ರಯಾಣ ಕಾಲದಲ್ಲಿ ಕಟ್ಟಿಕೊಂಡ ಊಟ
- ಬುತ್ತಿಯಿಡು – ಊಟ ಅರ್ಪಿಸು; ನೈವೇದ್ಯ ಮಾಡು
- ಬುದ್ಧಿ – ಅರಿವು; (ಜೈನ) ಏಳು ಬಗೆಯ
- ಋದ್ಧಿಗಳಲ್ಲಿ ಒಂದು, ನೋಡಿ `ಋದ್ಧಿ’
- ಬುದ್ಧಿಗಲಿಸು – ಅರಿವುಂಟುಮಾಡು
- ಬುದ್ಧಿಗೆಡು – ವಿವೇಚನೆಯನ್ನು ಕಳೆದುಕೊ
- ಬುದ್ಧಿಶಕ್ತಿ – ಅರಿವಿನ ಬಲ
- ಬುದ್ಧಿಶಾಲಿ – ಬುದ್ಧಿಯಿರುವವನು
- ಬುದ್ಬುದ – ನೀರ ಗುಳ್ಳೆ
- ಬುಧ – ಪಂಡಿತ; ದೇವತೆ; ನವಗ್ರಹಗಳಲ್ಲಿ ಒಂದು
- ಬುಭುಕ್ಷಿತ – ಹಸಿದ
- ಬುರುಂಡೆ – ಗುಂಡಗಿನ ಒಂದು ಸಿಹಿತಿಂಡಿ
- ಬೂತಟ್ಟು – ಕುಚೋದ್ಯಕ್ಕೆ ದೂತನನ್ನು ಕಳಿಸು; ಸ್ಪರ್ಧೆಗೆ ಆಹ್ವಾನಿಸು
- ಬೂತಾಟ – ಪಿಶಾಚಿಯ ಆಟ; ಕಪಟ, ತೋರಿಕೆ
- ಬೂತು – (ಭೂತ) ಪಿಶಾಚಿ; ಕುಚೋದ್ಯ; ದರಿದ್ರ; ವಂಚಕ
- ಬೂತುಗೊಳ್ – ಪಿಶಾಚಿ ಮೆಟ್ಟು; ಆವೇಶಗೊಳ್ಳು
- ಬೂತುತನ – ಸೋಗು
- ಬೂತುತಪ – ಸೋಗಿನ ತಪಸ್ಸು
- ಬೂದಿವೂಸು – ವಿಭೂತಿ ಧರಿಸು; ಬೂದಿ ಬಳಿದುಕೊ
- ಬೂವ – (ಭೂಮ) ಮದುವೆಯಯಲ್ಲಿ ನವದಂಪತಿಗಳು ಜೊತೆಗೆ ಮಾಡುವ ಊಟ
- ಬೃಂದ – ಗುಂಪು
- ಬೃಂಹಿತ – ಆನೆಯ ಘೀಳಿಡುವಿಕೆ
- ಬೃಂಹಿತಧ್ವನಿ – ಆನೆಯ ಘೀಳಿನ ಶಬ್ದ
- ಬೃಹಂದಳೆ – ಬೃಹನ್ನಳೆ; ಅಜ್ಞಾತವಾಸ ಕಾಲದಲ್ಲಿ ಅರ್ಜುನ ತಳೆದಿದ್ದ ನಪುಂಸಕನ ವೇಷ
- ಬೃಹಸ್ಪತಿಮತ – ಚಾರ್ವಾಕಮತ; ನಿರೀಶ್ವರವಾದ
- ಬೆಂಕೆ – ಉರಿ, ಬೆಂಕಿ
- ಬೆಂಕೆಗಣ್ – ಉರಿಯುವ ಕಣ್ಣು
- ಬೆಂಕೊ(ಗೊ)ಳ್ – ಹಿಂಬಾಲಿಸು, ಬೆನ್ನಟ್ಟು
- ಬೆಂಗೆವರ್ – ಬೆನ್ನ ಮೇಲೆ ಹತ್ತು
- ಬೆಂಗೆವಾಯ್ – ಹಾರಿ ಬೆನ್ನ ಮೇಲೆ ಕುಳಿತುಕೊ
- ಬೆಂಚೆ – ಕುಂಟೆ; ನೀರು ನಿಂತ ಜಾಗ
- ಬೆಂಟೆ – ಹಗ್ಗ
- ಬೆಂಡುನೆಗೆ – ಬೆಂಡಾಗು; ಸತ್ವಗುಂದು
- ಬೆಂಡುಮರಲ್ – ಬೆಂಡಾಗು; ಜಡವಾಗು
- ಬೆಂದಗುಳ್ – ಬೆನ್+ತಗುಳ್, ಅಟ್ಟಿಸಿಕೊಂಡು ಹೋಗು
- ಬೆಂದೊವಲ್ – ಬೆನ್ನ ಧರ್ಮ
- ಬೆಂಬತ್ತು – ಹಿಂಬಾಲಿಸು
- ಬೆಂಬರಂ – ಬೆನ್ನಿನವರೆಗೆ
- ಬೆಂಬರಿ – ಬೆನ್+ಪರಿ, ಬೆಂಬತ್ತು
- ಬೆಂಬಲ – ಹಿಂದಿರುವ ಸೈನ್ಯ; ನೆರವು
- ಬೆಂಬಲಂಬಾಯ್ – ನೆರವಿಗೆ ಹೋಗುಹೊಂಚುಹಾಕು
- ಬೆಂಬೊಗು – ಬೆನ್+ಪೊಗು, ಹಿಂಬಾಲಿಸು
- ಬೆಕ್ಕರಿಸು – ಮೇಕೆಯ ಧ್ವನಿಮಾಡು; ಗರ್ವಪಡು
- ಬೆಕ್ಕಸ – ಆಶ್ಚರ್ಯ
- ಬೆಕ್ಕಸಂಬಡು – ಬೆರಗಾಗು
- ಬೆಗಡು – ಹೆದರು; ಆಶ್ಚರ್ಯ; ಭ್ರಾಂತಿ
- ಬೆಗಡುಗೊಳ್ – ಆಶ್ಚರ್ಯಪಡು
- ಬೆಚ್ಚನೆ – ಬಿಸಿಯಾಗಿ
- ಬೆಚ್ಚರಂ – ಶೀಘ್ರವಾಗಿ
- ಬೆಚ್ಚಳಿಸು – ದಿಗ್ಭ್ರಮೆಗೊಳ್ಳು
- ಬೆಚ್ಚುನೀರ್ – ಹುಟ್ಟಿದಾಗ ಮಗು ಅಳಲೆಂದು ಚಿಮುಕಿಸುವ ತಣ್ಣೀರು
- ಬೆಜ್ಜ – ವೈದ್ಯ
- ಬೆಜ್ಜು – ಚಿಕಿತ್ಸೆ ಮಾಡು
- ಬೆಜ್ಜೆಗೆಯ್ – ಬಡಾಯಿ ಕೊಚ್ಚು
- ಬೆಟ್ಟ – ಗಿರಿ
- ಬೆಟ್ಟನೆ – ಬಿರುಸಾಗಿ, ಒರಟಾಗಿ
- ಬೆಟ್ಟವೆಟ್ಟನೆ – ಒರಟಾಗಿ
- ಬೆಟ್ಟ(ಬೇ)ವೇಸಗೆ – ಬಿರು ಬೇಸಿಗೆ
- ಬೆಟ್ಟಿತಾ(ತ್ತಾ)ಗು – ಕಠಿಣಗೊಳ್ಳು
- ಬೆಟ್ಟಿತು – ಒರಟಾದುದು; ಕಷ್ಟಕರವಾದುದು
- ಬೆಟ್ಟಿದ – ಕಠಿಣ, ಕ್ರೂರ
- ಬೆಟ್ಟಿಸು – ಚುಚ್ಚು
- ಬೆಟ್ಟು – ಇರಿ; ಬೆಟ್ಟ
- ಬೆಟ್ಟುಂಬೊ¿õÉ – ಬೆಟ್ಟದ ಮೇಲಿಂದ ಹರಿದು
- ಬರುವ ನದಿ, ಪ್ರವಾಹ
- ಬೆಟ್ಟುಗೂಂಟ – ನೆಡುವ ಗೂಟ
- ಬೆಡಂಗ – ಚೆಲುವ
- ಬೆಡಂಗಡ್ – ಸೌಂದರ್ಯ ಪಡೆ
- ಬೆಡಂಗಿ – ಸುಂದರಿ
- ಬೆಡಂಗು – ಸೊಗಸು; ರಮ್ಯತೆ
- ಬೆಡಂಗುಗಿಡು – ಚೆಲುವನ್ನು ಕಳೆದುಕೊ
- ಬೆಡಂಗುವಡೆ – ಚೆಲುವನ್ನು ಹೊಂದು
- ಬೆಡಂಗೊಂದು – ಬೆಡಂಗುವಡೆ
- ಬೆಣ್ಣೆ – ದಧಿಸಾರ, ನವನೀತ
- ಬೆತೆ – (ವ್ಯಥೆ) ಅಳಲು
- ಬೆದಂಡೆ(ಗಬ್ಬ) – ಒಂದು ಕಾವ್ಯಪ್ರಕಾರ
- ಬೆದಕು – ಹುಡುಕು; ಗೀರು
- ಬೆದೆ – ಬಿತ್ತನೆಗೆ ಯೋಗ್ಯವಾದ ಭೂಮಿ; ಕಾಮೋದ್ರೇಕ
- ಬೆದೆಗೂಡು – ಭೂಮಿ ಬಿತ್ತೆಗೆ ಹದಗೊಳ್ಳು
- ಬೆದೆವಾವು – ತಳುಕುಹಾಕಿಕೊಂಡ ಹಾವು
- ಬೆದೆವೆರಸು – ಕಾಮೋದ್ರೇಕಗೊಳ್ಳು
- ಬೆನ್ – ಬೆನ್ನು; ಹಿಂಭಾಗ
- ಬೆನ್ನಟ್ಟು – ಹಿಂಬಾಲಿಸು
- ಬೆನ್ನನೆ – ಹಿಂಭಾಗದಲ್ಲಿ
- ಬೆನ್ನನೆ ಬರ್ – ಹಿಂಬಾಲಿಸು
- ಬೆನ್ನಿಕ್ಕು – ಹಿಂದುಗಡೆ ಇರಿಸು
- ಬೆನ್ನೀ – ಬೆನ್+ಈ, ಬೆನ್ನು ಕೊಡು, ಪಲಾಯನಮಾಡು
- ಬೆನ್ನೀರ್ – ಬಿಸಿ ನೀರು
- ಬೆಬ್ಬಳ(ಳಿ)ವೋಗು – ಗಾಬರಿಗೊಳ್ಳು
- ಬೆಬ್ಬಳಿಸು – ಬೆಬ್ಬಳ(ಳಿ)ವೋಗು
- ಬೆರಕೆ – ಮಿಶ್ರಣ; ಕೂಟ
- ಬೆರಕೆವಣ್ಣ – ಮಿಶ್ರವರ್ಣ
- ಬೆರಕೆವಾಸಿಗ – ವಿಧವಿಧವಾದ ಹೂಗಳ ಮಾಲೆ
- ಬೆರಗು – ಉಪಾಯ
- ಬೆರಲ್(ಳ್) – ಬೆರಳು
- ಬೆರಲಂ ಮಿಡಿಯಿಸು – ಸೋಜಿಗಗೊಳಿಸು
- ಬೆರಲಚ್ಚು – ಬೆರಳಿನ ಗುರುತು
- ಬೆರಲುಂಗುರ – ಬೆರಳಲ್ಲಿ ಧರಿಸುವ ಉಂಗುರ
- ಬೆರಲೆತ್ತು – ಮೇಲ್ಮೆ ತೋರಿಸು
- ಬೆರಲ್ಮಿಡಿ – ಬೆರಳಿನಿಂದ ಸಂಜ್ಞೆ ಮಾಡು;
- ಅಚ್ಚರಿಗೊಳ್ಳು
- ಬೆರಸು – ಕೂಡಿ, ಜೊತೆಯಲ್ಲಿ
- ಬೆರೆ – ಕುಡು, ಸೇರು
- ಬೆರೆ(ಯಿ)ಸು – ಕೂಡಿಸು; ಸಂಭೋಗಿಸು
- ಬೆರ್ಕು(ಕ್ಕು) – ಬೆಕ್ಕು, ಮಾರ್ಜಾಲ
- ಬೆರ್ಚಿಸು – ಭಯಪಡಿಸು
- ಬೆರ್ಚು – ಹೆದರು; ಹೆದರಿಸಲು ಕಟ್ಟುವ ಬೊಂಬೆ
- ಬೆರ್ಚುಗಟ್ಟು – ಹೆದರಿಸಿ ಓಡಿಸಲು ಬೊಂಬೆ ಕಟ್ಟು
- ಬೆಲಂಕು – ಈಡಾಡು, ಬಿಸುಡು
- ಬೆಲೆ – ಧಾರಣೆ; ವಸ್ತುವಿನ ವಿನಿಮಯ ಮೌಲ್ಯ
- ಬೆಲೆಗು(ಗೊ)ಡು – ವಿನಿಮಯದ ಹಣ ಕೊಡು
- ಬೆಲೆಯಿಡಿಸು – ಮೌಲ್ಯಮಾಪನ ಮಾಡಿಸು
- ಬೆಲೆವೆಣ್ – ಹಣಕ್ಕೆ ಸಿಗುವ ಹೆಣ್ಣು, ಸೂಳೆ
- ಬೆಲ್ಲ – ಕಬ್ಬಿನ ರಸದಿಂದ ಮಾಡಿದ ಸಿಹಿ ಘನಪದಾರ್ಥ
- ಬೆಲ್ಲವತ್ತ – (ಬಿಲ್ವಪತ್ರ) ಶಿವನಿಗೆ ಪ್ರಿಯವಾದ ಪತ್ರೆ
- ಬೆಲ್ಲವಾತು – ಸಿಹಿಯಾದ ಮಾತು; ನಟನೆಯ ನುಡಿ
- ಬೆಲ್ಲವೊತ್ತ – ಹೊಗಳಿ ಕಾರ್ಯಸಾಧಿಸಿಕೊಳ್ಳುವವನು
- ಬೆವಸಾಯ – (ವ್ಯವಸಾಯ) ಬೇಸಾಯ, ಕೃಷಿ; ಪ್ರಯತ್ನ
- ಬೆವಸಾಯಂಗೆಯ್ – ಪ್ರಯತ್ನ ಮಾಡು
- ಬೆಸ – ಕೆಲಸ, ಕರ್ತವ್ಯ; ಎರಡರಿಂದ ಭಾಗವಾಗದ ಸಂಖ್ಯೆ
- ಬೆಸಂಬಡೆ – ಅನುಜ್ಞೆ ಹೊಂದು
- ಬೆಸಕೆಯ್ – ಸೇವೆಗೈ; ಹೇಳಿದ ಕೆಲಸ ಮಾಡು
- ಬೆಸಕೆಯ್ಸಿಕೊಳ್ – ಆಜ್ಞೆ ಪಾಲಿಸುವಂತೆ ಮಾಡು
- ಬೆಸಕೆಯ್ಸು – ಅಧೀನಕ್ಕೆ ಬರುವಂತೆ ಮಾಡು
- ಬೆಸಕೇಳ್ – ಅನುಜ್ಞೆ ಬೇಡು; ಆಜ್ಞೆ ಪಾಲಿಸು
- ಬೆಸಗಲಿ – ಆಜ್ಞೆ ಪಾಲಿಸುವವನು
- ಬೆಸಗೊಳ್ – ವಿಚಾರಿಸು
- ಬೆಸದಪ್ಪು – ಆಜ್ಞೆ ಮೀರು
- ಬೆಸನ – ಆಜ್ಞೆ
- ಬೆ(ಬ)ಸನ – (ವ್ಯಸನ) ದುಃಖ; ಚಟ
- ಬೆ(ಬ)ಸನಿ(ಗ) – ವ್ಯಸನ(ಚಟ)ಗಳಿಗೆ ಒಳಗಾದವನು
- ಬೆಸಮುಟ್ಟು – ಕೆಲಸದ ಸಾಧನ
- ಬೆಸಲೆ – ಬಾಣಂತಿ
- ಬೆಸಸು – ಆಜ್ಞೆಮಾಡು; ಹೇಳು; ನಿರೂಪಿಸು
- ಬೆಸಳಿಗೆ – ಬಾಣಲೆ
- ಬೆಸುಗೆಗಿಡು – ಸಂಬಂಧ ಹಾಳಾಗು
- ಬೆಸೆ – ಗರ್ವಿಸು; ಗರ್ವ; ಕೋಪಿಸಿಕೊ; ಹತ್ತಿ ಹಿಂಜುವ ಬಿಲ್ಲು
- ಬೆಸೆಕೋಲ್ – ಹತ್ತಿ ಹಿಂಜುವ ಬಿಲ್ಲು
- ಬೆಳ್ – ದಡ್ಡ; ದಡ್ಡತನ
- ಬೆಳಗು – ಪ್ರಕಾಶಿಸು; ದೀಪ ಹೊತ್ತಿಸು;
- ಮೆರುಗುಗೊಳಿಸು; ಪ್ರಕಾಶ; ಹಗಲು
- ಬೆಳತಿಗೆ – ಬಿಳಿಪು; ಪ್ರಕಾಶ; ಬಿಳಿಯ ಅಕ್ಕಿ
- ಬೆಳತುಗೆ ವಸದನ – ಶುಭ್ರವಸನ, ಬಿಳಿಯ ಬಟ್ಟೆ
- ಬೆಳರ್ – ಬಿಳಿಚಿಕೊ; ಪ್ರಕಾಶ ಬೀರು; ಬಿಳುಪು
- ಬೆಳರ್ಗೆಂಪು – ಹೊಳೆಯುವ ಕೆಂಪು(ಬಣ್ಣ)
- ಬೆಳರ್ಪು – ಬಿಳಿಪು
- ಬೆಳರ್ಮಾಡ – ಧವಳಾಗಾರ, ಬಿಳಿಯ ಬಣ್ಣದ ಮನೆ
- ಬೆಳರ್ವಡು – ಬೆಳ್ಳಗಾಗು
- ಬೆಳರ್ವಣ್ಣ – ಬಿಳಿ ಬಣ್ಣ
- ಬೆಳರ್ವಾಯ್ – ಬಿಳಿಚಿಕೊಂಡ ತುಟಿ
- ಬೆಳಸು – ಫಸಲು, ಬೆಳೆ
- ಬೆಳೆ – ಮನುಷ್ಯ-ಪ್ರಾಣಿ-ಸಸ್ಯಗಳ ವೃದ್ಧಿ; ಫಸಲು ನೀಡು
- ಬೆಳೆಗೆಯ್ – ಪೈರು ತುಂಬಿದ ಹೊಲ
- ಬೆಳೆನೆಲ – ಸಾಗುವಳಿಯ ಭೂಮಿ
- ಬೆಳೆ(ಯಿ)ಸು – ಗಿಡಮರಪ್ರಾಣಿಗಳನ್ನು ವೃದ್ಧಿಗೊಳಿಸು
- ಬೆಳೆವತ್ತರ್ – ಬೆಲೆ_ಮತ್ತರ್, ಸಾಗುವಳಿಯ ಭೂಮಿ
- ಬೆಳ್ಕನೆವೋಗು – ದಿಗ್ಭ್ರಾಂತನಾಗು
- ಬೆಳ್ಕರಿಸು – ಬಿಳಿಪಾಗು
- ಬೆಳ್ಕಾಡು – ಬೆಂಗಾಡು, ಏನೂ ಇಲ್ಲದ ಪ್ರದೇಶ
- ಬೆಳ್ಗಂಡ – ಅಂಜುಕುಳಿ
- ಬೆಳ್ಗಡಲ್ – ಬಿಳಿಯ ಸಮುದ್ರ0
- ಬೆಳ್ಗದಿರ್ – ಬಿಳಿಯ ಕಿರಣ, ಕಾಂತಿ; ಬೆಳುದಿಂಗಳು
- ಬೆಳ್ಗದಿರ – ಬಿಳಿ ಕಿರಣಗಳನ್ನುಳ್ಳವನು, ಚಂದ್ರ
- ಬೆಳ್ಗರ್ಬು – ಬಿಳಿಯ ಬಣ್ಣವುಳ್ಳ ಒಂದು ಬಗೆಯ ಕಬ್ಬು
- ಬೆಳ್ಗಾಡು – ಬಿಳಿಯ (ಹೂಗಳಿಂದ ಕೂಡಿದ) ಕಾಡು
- ಬೆಳ್ಗುಂಬಳ – ಬಿಳಿಯ (ಬೂದ) ಕುಂಬಳ
- ಬೆಳ್ಗೊಡೆ – ಅಧಿಕಾರ ಸಂಕೇತವಾದ ಬಿಳಿಯ ಕೊಡೆ
- ಬೆಳ್ತನ – ದಡ್ಡತನ
- ಬೆಳ್ದಾವರೆ – ಬಿಳಿಯ ತಾವರೆ, ಪುಂಡರೀಕ
- ಬೆಳ್ದಿಂಗಳ್ – ಚಂದ್ರನ ಬೆಳಕು
- ಬೆಳ್ನವಿರ್ – ಬಿಳಿಯ (ನರೆತ) ಕೂದಲು
- ಬೆಳ್ನಿರೆ – ಬಿಳಿಪು ನೊರೆ
- ಬೆಳ್ಪ – ಬೆಪ್ಪ, ಮೂಢ
- ಬೆಳ್ಪಡರ್ – ಬೆಳ್ಳಗಾಗು
- ಬೆಳ್ಪಳ – ಭಯ; ಅಲುಗಾಟ
- ಬೆಳ್ಪಳಂಬೋಗು – ಭಯಗೊಳ್ಳು
- ಬೆಳ್ಪಳಿಸು – ಬೆಳ್ಪಳಂಬೋಗು
- ಬೆಳ್ಪು – ಬಿಳಿಪು; ಕಾಂತಿ; ಸ್ವಚ್ಛತೆ; ದಡ್ಡತನ
- ಬೆಳ್ಪೆಸೆ – ಬೆಳ್ಳಗೆ ಹೊಳೆ
- ಬೆಳ್ಮಡಿ – ಬಿಳಿದಾದ ಬಟ್ಟೆ
- ಬೆಳ್ಮಾಡು – ಬೆಪ್ಪನಾಗಿ ಮಾಡು; ಮರುಳುಗೊಳಿಸು
- ಬೆಳ್ಮಸೆ – ಹೊಳೆಯುವಂತೆ ಮಸೆ, ಉಜ್ಜು
- ಬೆಳ್ಮಳಲ್ – ಬಿಳಿಯ ಮರಳು
- ಬೆಳ್ಮಿಗ – ಸಾಧು ಪ್ರಾಣಿ; ಒಂದು ಬಗೆಯ ಜಿಂಕೆ
- ಬೆಳ್ಮುಗಿಲ್ – ಬಿಳಿ ಮೋಡ
- ಬೆಳ್ಮøಗ – ಬೆಳ್ಮಿಗ
- ಬೆಳ್ಮೊಗ – ಬಿಳಿಚಿಕೊಂಡ ಮುಖ
- ಬೆಳ್ವ(ಳ್ಳ)ಕ್ಕಿ – ಬಿಳಿಯ ಹಕ್ಕಿ, ಬಲಾಕ
- ಬೆಳ್ವಟ್ಟೆ – ಬಿಳಿಯ ಬಟ್ಟೆ
- ಬೆಳ್ವಸದನ – ಬೆಳ್+ಪಸದನ, ಬಿಳಿಯ ಉಡುಗೆ
- ಬೆಳ್ವಸದನಂಗೆಯ್ – ಬಿಳಿಯ ಉಡುಗೆ ಧರಿಸು
- ಬೆಳ್ವಸದನಂಗೊಳ್ – ಬೆಳ್ವಸದನಂಗೆಯ್
- ಬೆಳ್ವಳಿಸು – ಬೆಳ್ಳಗೆ ಹೊಳೆ
- ಬೆಳ್ವಾಯ್ – ಬಿಳಿಚಿಕೊಂಡ ಬಾಯಿ
- ಬೆಳ್ವಿಟ್ಟು – ಬೆಳ್+ಪಿಟ್ಟು, ಬಿಳಿಯ ಪುಡಿ
- ಬೆಳ್ವೆಳಗು – ಹೊಳೆಯುವ ಬೆಳಕು
- ಬೆಳ್ವೊನಲ್ – ಬೆಳ್ಳಗೆ ಹರಿಯುವ ಪ್ರವಾಹ
- ಬೆಳ್ಸರಿ – ಬೆಳ್ಳಗಿನ ಧಾರೆ, ಮಳೆ
- ಬೆಳ್ಳ – ದಡ್ಡ
- ಬೆಳ್ಳಂಗೆಡೆ – ಪ್ರವಾಹದಂತೆ ಬೀಳು; ಬೆಳ್ಳಗೆ ಹರಡು
- ಬೆಳ್ಳಕ್ಕರಿಗ – ಬೆಪ್ಪನಾದ ಪಂಡಿತ, ಕೂಚುಭಟ್ಟ
- ಬೆಳ್ಳಡಿ – ಗೊರವ
- ಬೆಳ್ಳವಾಸ – (ಜೈನ) ಚಳಿಗಾಲದಲ್ಲಿ ಪ್ರವಾಹದಲ್ಲಿ
- ನಿಂತು ಮಾಡುವ ತಪಸ್ಸು
- ಬೆಳ್ಳಾನೆ – ಬಿಳಿಯ ಆನೆ; ಐರಾವತ
- ಬೆಳ್ಳಾರ – ಬಿಳಿಯ ಮುತ್ತಿನ ಹಾರ
- ಬೆಳ್ಳಾಳ್ – ಅವಿವೇಕಿ, ಮೂರ್ಖ
- ಬೆಳ್ಳಿ – ಶುಕ್ರಗ್ರಹ
- ಬೆಳ್ಳಿಯ ಬೆಟ್ಟ – ಕೈಲಾಸಪರ್ವತ
- ಬೆಳ್ಳಿಯುತ್ತರಿಗೆ – ಬೆಳ್ಳಿ ಜರಿಯ ಉತ್ತರೀಯ
- ಬೆಳ್ಳಿಗೊಡೆ – ಬೆಳ್ಳಿ ಕೊಡೆ; ಬೆಳ್ಗೊಡೆ
- ಬೆಳ್ಳಿಲಿ – ಬಿಳಿಯ ಇಲಿ
- ಬೆಳ್ಳಿವೆಟ್ಟ – ಬೆಳ್ಳಿಯ ಬೆಟ್ಟ
- ಬೆಳ್ಳುಂಬಟ್ಟೆ – ಬಿಳಿಯ ಬಟ್ಟೆ
- ಬೆಳ್ಳುರ್ಚೆ – ಬುದ್ಧಿಯಿಲ್ಲದವನು
- ಬೆಳ್ಳುಳ್ಳಿ – ಬಿಳಿಯ ಉಳ್ಳಿ, ಲಶುನ
- ಬೆಳ್ಳೆರಲೆ(ಳೆ) – ಹೆದರಿದ ಜಿಂಕೆ; ಪುಕ್ಕಲ
- ಬೇಗ – ಹೊತ್ತು; ತ್ವರೆ
- ಬೇಗಡವೆಸ – ವೆಜ್ಜದ ಕೆಲಸ, ರತ್ನಕ್ಕೆ ರಂದ್ರ ಕೊರೆಯುವ ಕೆಲಸ
- ಬೇಗುದಿ – ತಿವ್ರ ಉಷ್ಣತೆ; ಸಂತಾಪ
- ಬೇಗುದಿಗೊಳ್ – ಬಿಸಿಲಿನಿಂದ ಬಳಲು; ಸಂತಾಪಗೊಳ್ಳು
- ಬೇಗೆ – ಉರಿ, ಜ್ವಾಲೆ
- ಬೇಗೆಗಿರ್ಚು – ಬೆಂಕಿಯ ಜ್ವಾಲೆ
- ಬೇಗೆಗೊಳ್ – ಬೆಂದುಹೋಗು
- ಬೇಗೆಪೊತ್ತು – ಬೆಂಕಿ ಹೊತ್ತಿಕೊ
- ಬೇಟಕಾರ್ತಿ – ಪ್ರಣಯಿನಿ; ವೇಶ್ಯೆ
- ಬೇಟದಚ್ಚಿಗ – ಪ್ರಣಯ ಕಾತರತೆ
- ಬೇಟವಾತು – ಪ್ರಣಯದ ನುಡಿ
- ಬೇಡ – ಬೇಟೆಯ ವೃತ್ತಿಯವನು; ನಿರಾಕರಣೆಯನ್ನು ಸೂಚಿಸುವ ಅವ್ಯಯ
- ಬೇಡಗೊಟ್ಟ – ಬೇಡ+ಕೊಟ್ಟ, ಬೇಡರ ವಾಸಸ್ಥಳ
- ಬೇಡರಸ – ಬೇಡರ ಮುಖ್ಯಸ್ಥ
- ಬೇಡವಟ್ಟ(ಟ್ಟು) – ಬೇಡರ ಹಟ್ಟಿ
- ಬೇಡವಡೆ – ಬೇಡರ ಗುಂಪು, ಸೈನ್ಯ
- ಬೇಡವಳ್ಳಿ – ಬೇಡರು ವಾಸಿಸುವ ಹಳ್ಳಿ
- ಬೇಡವೆಂಡಿರ್ – ಬೇಡ ಹೆಣ್ಣುಗಳು
- ಬೇಡಿಕೊಳ್ – ಕೇಳಿಕೊ
- ಬೇಡಿತಿ – ಬೇಡ ಹೆಂಗಸು
- ಬೇಡಿದಂ – ಬೇಡಿದವನು, ಯಾಚಕ
- ಬೇಡು – ಬಯಸು; ಯಾಚಿಸು; ಬೇಡಸಮೂಹ
- ಬೇತಾಳ – ಪಿಶಾಚಿ
- ಬೇದನೆ – (ವೇದನಾ) ಸಂಕಟ
- ಬೇನೆ – ಸಂಕಟ; ನೋವು
- ಬೇರ್(ರು) – ಮೂಲ; ಬುಡ
- ಬೇರುಗ – ಮೂಲಿಕೆಗಳ ವ್ಯಾಪಾರಿ
- ಬೇರೂ¾ು – ನೆಲೆನಿಲ್ಲು
- ಬೇರ್ಕೆಯ್ – ಬೇರ್ಪಡಿಸು
- ಬೇರ್ಗೊಳ್ – ಬೇರುಬಿಡು
- ಬೇರ್ನೆಲೆವೋಗು – ಬೇರೆ ನೆಲೆಗೆ ಹೋಗು
- ಬೇರ್ಪಡು – ಬೇರೆಯಾಗು; ಹರಡಿಕೊ
- ಬೇರ್ಮೆಯ್ವೊಗು – ಬೇರೆಯ ಮೈಯನ್ನು ಪ್ರವೇಶಿಸು; ಪರಕಾಯಪ್ರವೇಶಮಾಡು
- ಬೇರ್ವೆರಸು – ಬೇರಿನೊಡನೆ, ಬುಎಸಹಿತ
- ಬೇಲಿಯಿಕ್ಕು – ಬೇಲಿಯನ್ನು ಹಾಕು
- ಬೇವಸ – ಆಯಾಸ; ವ್ಯಥೆ
- ಬೇವಸಂಗೊಳ್ – ಆಯಾಸಗೊಳ್ಳು; ಚಿಂತೆ ಹೊಂದು
- ಬೇವಸಂಬಡು – ತಳಮಳಿಸು
- ಬೇವಸಂಬಡೆ – ಬೇವಸಂಬಡು
- ಬೇವು – ಪಿಚುಮಂದ, ಅರಿಷ್ಟ
- ಬೇಸ(ಸಿ)ಗೆ(ಕಾಲ) – (ವೈಶಾಖ) ಸೆಕೆಗಾಲ
- ಬೇಸರ್ನುರಿ – ಬೇಜಾರಿನಿಂದ ಕೂಡಿದ ಮಾತು
- ಬೇಳ್ – ಬೇಯಿಸು; ಹೋಮ ಮಾಡು; ದಿಗ್ಭ್ರಾಂತಿ
- ಬೇಳಂಬ – ಮೋಸ; ಗಲಿಬಿಲಿ
- ಬೇಳಂಬಿಗ – ನಕಲಿ, ಹಾಸ್ಯಗಾರ
- ಬೇಳಾಗು – ಬೆಪ್ಪಾಗು
- ಬೇಳುನುಡಿ – ಮರುಳುಗೊಳಿಸುವ ನುಡಿ
- ಬೇಳೆಗೆಯ್ – ಒಡೆ, ಬೇರ್ಪಡಿಸು
- ಬೇಳ್ಮಾಡು – ಬೆಪ್ಪುಮಾಡು; ಮರುಳುಗೊಳಿಸು
- ಬೇಳ್ವೆ – ಹೋಮ; ಮಾಟ
- ಬೇಳ್ವೇನೆ – ಬೇಳ್+ಬೇನೆ, ಸಂತಾಪ
- ಬೈಕ – (ಭೈಕ್ಷ) ಭಿಕ್ಷೆ
- ಬೈಕಂಗುಳಿ – ಭಿಕ್ಷುಕ
- ಬೈಕಂಗೊಳ್ – ಭಿಕ್ಷೆ ಬೇಡು
- ಬೈಕಂದಿರಿ – ಭಿಕ್ಷೆಗಾಗು ಸುತ್ತು
- ಬೈಕೆಗೊಡು – ಮರೆಯಾಗಿರಿಸು; ಒತ್ತೆ ಇಡು
- ಬೈಗು – ಸಂಜೆ
- ಬೈಸಿಕೆ – ಕುದುರೆ ಸವಾರಿ; ಹಾಡುವ ಒಂದು ಬಗೆ
- ಬೈತ್ರ – (ವಹಿತ್ರ) ಹಡಗು
- ಬೊಂದರಿಗೆ – ಮೇಲು ಹೊದಿಕೆ
- ಬೊಂದಿ – ಶರೀರ
- ಬೊಂದುಕ – ಚಿಂದಿ ತೊಡುವವನು
- ಬೊಕ್ಕಣ – ಚೀಲ
- ಬೊಕ್ಕರಿಸು – ಬೋರಲು ಬೀಳಿಸು
- ಬೊಟ್ಟುವೋರಿಸು – ಒಂದು ಆಟ
- ಬೊಡ್ಡಣಬಾವಿ – (ವರ್ಧನವಾಪಿ) ತುಂಬಿದ ಬಾವಿ
- ಬೊಬ್ಬಿಡು – ಹರ್ಷೋದ್ಗಾರ ಮಾಡು, ಕೂಗು
- ಬೊಬ್ಬುಳಿಕೆ – ನೀರ ಗುಳ್ಳೆ
- ಬೊಬ್ಬುಳಿಸು – ಗುಳ್ಳೆ ಉಂಟಾಗು
- ಬೊಮ್ಮಪಾಸ – (ಬ್ರಹ್ಮಪಾಶ) ಬಿಡಿಸಲಾಗದ ಬಂಧ
- ಬೊಮ್ಮರಕ್ಕಸ – (ಬ್ರಹ್ಮರಾಕ್ಷಸ) ಪಿಶಾಚಿಯಾದ ಬ್ರಾಹ್ಮಣ
- ಬೊಮ್ಮಹತಿ – (ಬ್ರಹ್ಮಹತ್ಯಾ) ಪಂಚಮಹಾಪಾತಕಗಳಲ್ಲಿ ಒಂದಾದ ಬ್ರಾಹ್ಮಣನ ಕೊಲೆ
- ಬೊಲ್ಲವಣೆ – ಚರ್ಮವಾದ್ಯವನ್ನು ನುಡಿಸುವ ವಿನ್ಯಾಸ
- ಬೋದನ – ನೀರು ತುಂಬುವ ತೊಟ್ಟಿ
- ಬೋದಿಗೆ – ಕಂಬದ ಮೇಲೆ ತೊಲೆಯಿಡಲು ಬಳಸುವ ಸಾಧನ
- ಬೋಧದೃಷ್ಟಿ – ಜ್ಞಾನದೃಷ್ಟಿ
- ಬೋಧಾಲೋಕ – ಜ್ಞಾನಿ
- ಬೋಧಾಳು – ಜ್ಞಾನಿ, ಬುದ್ಧಿವಂತ
- ಬೋಧಿ – ಅರಿವು, ಜ್ಞಾನ
- ಬೋಧಿಸು – ಕಲಿಸು
- ಬೋನ – (ಭೋಜನ) ಆಹಾರ; ಊಟ
- ಬೋನಪೇಳಿಗೆ – ಬೋನ+ಪೇಳಿಗೆ, ಅಡುಗೆಯಿರುವ ಪಾತ್ರೆ
- ಬೋನಮಿಡು – ಊಟವಿಕ್ಕು
- ಬೋನಮೆತ್ತು – ಊಟ ಸಿದ್ಧಪಡಿಸು
- ಬೋರಗುದುರೆ – ಕಂದುಬಣ್ಣದ ಕುದುರೆ
- ಬೋರಿಯ – ನೆಲ ಹಾಸು
- ಬೋಸರಿಸು – ಕಪಟ ಮರ್ಯಾದೆಮಾಡು
- ಬೋಳಯಿ(ವಿ)ಸು – ಸಮಾಧಾನಪಡಿಸು
- ಬೌವಳಿಸು – ಕಲಕಲರವವುಂಟುಮಾಡು
- ಬ್ಯಾದಿ – (ವ್ಯಾಧಿ) ರೋಗ
- ಬ್ರತ – (ವ್ರತ) ನೋಂಪಿ
- ಬ್ರಹ್ಮಚರ್ಯ(ರ್ಯೆ) – ಇಂದ್ರಿಯನಿಗ್ರಹ; (ಜೈನ)
- ಒಂದು ಗರ್ಭಾನ್ವಯಕ್ರಿಯೆ; ವ್ರತಗಳಲ್ಲಿ ಒಂದು
- ಬ್ರಹ್ಮತ್ತಿ – ಅತ್ತಿಮರ
- ಬ್ರಹ್ಮಪುತ್ರ – ಬ್ರಹ್ಮನ ಮಗ, ನಾರದ
- ಬ್ರಹ್ಮವೃಕ್ಷ – ಅತ್ತಿಮರ; ಮುತ್ತುಗ
- ಬ್ರಹ್ಮಸೂತ್ರ – ಹಾರ; ಜನಿವಾರ
- ಬ್ರಹ್ಮಸ್ವ – ಬ್ರಾಹ್ಮಣನ ಸ್ವತ್ತು
- ಬ್ರಹ್ಮಹರಣ – ಬ್ರಾಹ್ಮಣನ ಆಸ್ತಿಯನ್ನುಲಪಟಾಯಿಸುವುದು
- ಬ್ರಹ್ಮಾಂಡ – ವಿಶ್ವ
- ಬ್ರಹ್ಮೋತ್ತರ – (ಜೈನ) ಹದಿನಾರು ಕಲ್ಪಗಳಲ್ಲಿ ಒಂದು
- ಬ್ರಾಹ್ಮ – ಒಂದು ಮುಹೂರ್ತ
- ಬ್ರಾಹ್ಮಿ – ಸರಸ್ವತಿ
Conclusion:
ಕನ್ನಡ ಬ ಅಕ್ಷರದ ಹಳೆಗನ್ನಡ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.