ಕನ್ನಡ ಚ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada cha aksharada halegannadada padagalu , ಕನ್ನಡ ಚ ಅಕ್ಷರದ ಹಳೆಗನ್ನಡ ಪದಗಳು ( cha halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಚ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( cha halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಚ ಅಕ್ಷರ ಎಂದರೇನು?
ಕನ್ನಡ ವರ್ಣಮಾಲೆಯ ಚ-ವರ್ಗದ ಮೊದಲನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.
ಇದಕ್ಕೆ ಈಗಿನ ರೂಪದ ಅಲ್ಪಸ್ವಲ್ಪ ಹೋಲಿಕೆ ಕಂಡುಬರುವುದು ಗಂಗರ ಕಾಲದಲ್ಲಿ. ರೂಪ ಇನ್ನೂ ಸ್ಫುಟವಾಗುವುದು ಕಲ್ಯಾಣಿ ಚಾಳುಕ್ಯರ ಕಾಲಕ್ಕೆ. ಮುಂದಿನ ಶತಮಾನಗಳಲ್ಲಿ ಅಕ್ಷರದ ಪ್ರಾರಂಭದ ಎಡತುದಿಯಲ್ಲಿ ಸಣ್ಣ ಕೊಂಡಿ ಸೇರಿಕೊಳ್ಳುತ್ತದೆ. ಅಲ್ಲದೆ ಬ ಮತ್ತು ಭ ಕಾರಗಳಿಂದ ಇದನ್ನು ಪ್ರತ್ಯೇಕಿಸಲು ಇದರ ಬಲಭಾಗದಲ್ಲಿ ಹೆಚ್ಚಿನ ಒಂದು ಕೊಂಡಿ ಸೇರಿರುವುದು ಗಮನಾರ್ಹವಾದುದು. ಇದೇ ರೂಪವೇ ವಿಶೇಷ ಬದಲಾವಣೆಯಿಲ್ಲದೆ ಮುಂದುವರಿದು ಈಗಿನ ರೂಪವನ್ನು ತಾಳುತ್ತದೆ ಈ ಅಕ್ಷರ ತಾಲವ್ಯ ಅಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಸ್ಪರ್ಶಕ್ಕೆ ಬದಲಾಗಿ ಅನುಘರ್ಷವೂ ಆಗಿರುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಚ ಅಕ್ಷರದ ಹಳೆಗನ್ನಡ ಪದಗಳು – Kannada Words
- ಚಂಕನತ್ – ಹೊಳೆಯುವ
- ಚಂಕ್ರಮಣ – ತಿರುಗಾಟ
- ಚಂಗಲವೆ – ಕೆಂದಾವರೆ
- ಚಂಚರೀಕ – ದುಂಬಿ
- ಚಂಚಲ – ಅಲುಗುವ
- ಚಂಚು – ಹಕ್ಕಿಯ ಕೊಕ್ಕು
- ಚಂಚುಗೂಡು – ಕೊಕ್ಕುಗಳನ್ನು ಸೇರಿಸು
- ಚಂಚುಪುಟ – ಮುಚ್ಚಿದ ಕೊಕ್ಕು
- ಚಂಚುರ – ಚತುರ; ಸುಂದರವಾದ
- ಚಂಚುರತೆ – ಜಾಣತನ; ಸೌಂದರ್ಯ
- ಚಂಡ – ಪ್ರಖರವಾದ; ಬಲಿಷ್ಠವಾದ
- ಚಂಡಕರ – ಉರಿವ ಕಿರಣ; ಸೂರ್ಯ
- ಚಂಡಣೆಗುಡು – ನಿರ್ದಿಷ್ಟ ಭಂಗಿಯಲ್ಲಿ ನಿಲ್ಲು
- ಚಂಡಭೈರವ – ಭಯಂಕರನಾದ ಭೈರವ
- ಚಂಡಮರೀಚಿ – ಸೂರ್ಯ
- ಚಂಡಮಾರಿ – ಭಯಂಕರ ಮಾರಿ; ಒಬ್ಬಳು ಕ್ಷುದ್ರ ದೇವತೆ
- ಚಂಡರುಚಿ – ಸೂರ್ಯ
- ಚಂಡವಿಕ್ರಮ – ಭಯ ಹುಟ್ಟಿಸುವ ಪರಾಕ್ರಮವುಳ್ಳವನು
- ಚಂಡವೇಗ – ಬಹಳ ವೇಗ
- ಚಂಡಾಂಶು – ಚಂಡರುಚಿ
- ಚಂಡಾಮಯ – ತೀವ್ರವಾದ ಕಾಯಿಲೆ
- ಚಂಡಾಲ – ಬ್ರಾಹ್ಮಣ ಸ್ತ್ರೀಯಲ್ಲಿ ಶೂದ್ರನಿಂದ ಹುಟ್ಟಿದವನು
- ಚಂಡಾಳಿ – ಹೊಲತಿ
- ಚಂಡಿ – ದುರ್ಗೆ
- ಚಂಡಿಕೆವಿಡಿ – ಜುಟ್ಟು ಹಿಡಿ
- ಚಂಡಿಕೆವೆರಸು – ಜುಟ್ಟನ್ನು ಹೊಂದಿರು
- ಚಂಡಿಸು – ಹಟಮಾಡು
- ಚಂದ – ಲಾವಣ್ಯ
- ಚಂದಂಬೆ¾ು – ಚೆಲುವಾಗಿರು
- ಚಂದನ – ಶ್ರೀಗಂಧದ ಮರದ ಸುಗಂಧ
- ಚಂದನಕರ್ದಮ – ಶ್ರೀಗಂಧದ ಲೇಪನದ್ರವ್ಯ
- ಚಂದನಕುಜ – ಶ್ರೀಗಂಧದ ಮರ
- ಚಂದನಕ್ಷೋದ – ಗಂಧದ ಪುಡಿ
- ಚಂದನಚರ್ಚೆ – ಗಂಧಲೇಪನ
- ಚಂದನವಕ್ಕಿ – ಒಂದು ಜಾತಿಯ ಹಕ್ಕಿ
- ಚಂದನಸಾರ – ಚಂದನಕರ್ದಮ
- ಚಂದ(ದು)ವ – ಚಂದ್ರ
- ಚಂದವಾವುಗೆ – ಒಳ್ಳೆಯ ಪಾದುಕೆ
- ಚಂದಿರ – ಚಂದ್ರ
- ಚಂದ್ರಕ – ನವಿಲುಗರಿಯ ಕಣ್ಣು
- ಚಂದ್ರಕಬಲ(ಳ) – ಕೆಂಪು ಬಣ್ಣದ ಒಂದು ಬಗೆಯ ಪರಿಮಳದ್ರವ್ಯ; ಸರ್ಪಗಂಧ ಎಂಬ ಹೂ
- ಚಂದ್ರಕಲಾಪ – ಚಂದ್ರನನ್ನು ಆಭರಣವಾಗುಳ್ಳವನು, ಶಿವ
- ಚಂದ್ರಕಲೆ – ಚಂದ್ರನ ಹದಿನಾರು ಕಲೆಗಳು
- ಚಂದ್ರಕಾಂತ – ಬೆಳುದಿಂಗಳಿನಿಂದ ಆದ್ರ್ರಗೊಳ್ಳುವ ಬಿಳಿಯ ಕಲ್ಲು
- ಚಂದ್ರಕಾಂತಪುತ್ರಿಕೆ – ಚಂದ್ರಕಾಂತಶಿಲೆಯ ಪ್ರತಿಮೆ
- ಚಂದ್ರಕಾಂತಶಿಲೆ – ಚಂದ್ರಕಾಂತ
- ಚಂದ್ರಕಿ – ನವಿಲು
- ಚಂದ್ರಕಿತ – ಕೆಂಪುಬಣ್ಣದ; ಹೊಳೆಯವ
- ಚಂದ್ರಕಿವಾಹ – ನವಿಲನ್ನು ವಾಹನವಾಗುಳ್ಳವನು, ಷಣ್ಮುಖ
- ಚಂದ್ರಖಂಡ – ಚಂದ್ರನ ತುಂಡು
- ಚಂದ್ರಗತಿ – ಚಂದ್ರನ ಚಲನೆ; (ಜೈನ) ಬೆಳುದಿಂಗಳಿನಂತೆ ಬಡವಬಲ್ಲಿದರ ನಡುವೆ ವ್ಯತ್ಯಾಸವಿಲ್ಲದೆ ಮಾಡುವ ಚರಿಗೆ
- ಚಂದ್ರದ್ರವ – ಕರ್ಪೂರದ ರಸ
- ಚಂದ್ರಪ್ರಭ – ಚಂದ್ರನಂತೆ ಕಾಂತಿಯುಕ್ತ; (ಜೈನ) ಎಂಟನೆಯ ತೀರ್ಥಂಕರ
- ಚಂದ್ರಬಲ – ಚಂದ್ರನು ಒಳ್ಳೆಯ ಸ್ಥಾನದಲ್ಲಿರುವ ಕಾರಣ ಉಂಟಾಗುವ ಶುಭಫಲ
- ಚಂದ್ರಭುವನ – ಚಂದ್ರಲೋಕ
- ಚಂದ್ರಮ – ಚಂದ್ರ
- ಚಂದ್ರಮಂಡಲ – ಚಂದ್ರಬಿಂಬ
- ಚಂದ್ರಮಯೂಖ – ಬೆಳುದಿಂಗಳು
- ಚಂದ್ರರೋಚಿ – ಬೆಳುದಿಂಗಳು
- ಚಂದ್ರವಿಮಾನ – (ಜೈನ) ಸ್ವರ್ಗಗಳಲ್ಲಿ ಒಂದು
- ಚಂದ್ರಶಾಲ – ಮಹಡಿಯಲ್ಲಿನ ಅಂಗಳ
- ಚಂದ್ರಾತಪ – ಬೆಳುದಿಂಗಳು
- ಚಂದ್ರಾಭರಣ – ಶಿವ
- ಚಂದ್ರಾಲೋಕ – ಬೆಳುದಿಂಗಳು
- ಚಂದ್ರಾಶ್ಮ – ಚಂದ್ರಕಾಂತಶಿಲೆ
- ಚಂದ್ರಿಕಾವಿಹರಣ – ಬೆಳುದಿಂಗಳಿನಲ್ಲಿನ ವಿಹಾರ
- ಚಂದ್ರಿಕೆ – ಬೆಳೆದಿಂಗಳು
- ಚಂದ್ರೋದಯ – ಚಂದ್ರ ಮೂಡುವುದು
- ಚಂದ್ರೋಪಲ – ಚಂದ್ರಕಾಂತ
- ಚಂಪಕ – ಸಂಪಿಗೆ; ಕೆಂಬಣ್ಣ
- ಚಂಪಕಸ್ರಜ – ಸಂಪಿಗೆಯ ಮಾಲೆ
- ಚಂಪೆಯ – ಡೇರೆ
- ಚಕಚಕಿತ – ಹೊಳೆಯುವ
- ಚಕಚಕಿಸು – ಹೊಳಪಿನಿಂದ ಕೂಡಿರು
- ಚಕಿತ – ಸ್ಥಿರವಲ್ಲದ; ಆಶ್ಚರ್ಯಗೊಂಡ
- ಚಕಿತಲೋಚನೆ – ಚಂಚಲವಾದ ಕಣ್ಣುಳ್ಳವಳು
- ಚಕಿತಾಕ್ಷಿ – ಚಕಿತಲೋಚನೆ
- ಚಕೋರ – ಬೇಳುದಿಂಗಳನ್ನೇ ಕುಡಿಯುವುದೆಂದು ಹೇಳಲಾಗುವ ಒಂದು ಕಲ್ಪಿ ಪಕ್ಷಿ
- ಚಕೋರಾಕ್ಷಿ – ಹೊಳಪುಗಣ್ಣುಳ್ಳವಳು
- ಚಕೋರಿ(ಕೆ) – ಹೆಣ್ಣು ಚಕೋರ
- ಚಕೋರೇಕ್ಷಣ – ಚಕೋರದ ಕಣ್ಣು; ಹೊಳಪುಗಣ್ಣು
- ಚಕ್ಕಣ – ಚಾಕಣ, ಮದ್ಯಪಾನದಲ್ಲಿ ನಂಜಿಕೊಳ್ಳುವ (ಖಾರವಾದ) ತಿಂಡಿ
- ಚಕ್ಕವಕ್ಕಿ – ಚಕ್ರವಾಕ
- ಚಕ್ಕಳ – ಚಾಪೆ
- ಚಕ್ಕುಮೊಕ್ಕು – ಒಂದು ಅನುರಣ ಶಬ್ದ
- ಚಕ್ರ – ಗಾಲಿ; ಸುದರ್ಶನಚಕ್ರ; ಭೂಮಿ; ಒಂದು ವ್ಯೂಹ; ಚಕ್ರವಾಕ
- ಚಕ್ರಂಗೊಳ್ – ಚಕ್ರಾಯುಧವನ್ನು ಕೈಗೆತ್ತಿಕೊ
- ಚಕ್ರಧರ – ಚಕ್ರವನ್ನು ಧರಿಸಿದವನು; ಚಕ್ರವರ್ತಿ
- ಚಕ್ರಧರತ್ವ – ಚಕ್ರವನ್ನು ಧರಿಸಿರುವುದು
- ಚಕ್ರನಾಥ – ಚಕ್ರವರ್ತಿ
- ಚಕ್ರನೇಮಿ – ಚಕ್ರದ ಅಂಚು
- ಚಕ್ರಪಕ್ಷಿ – ಚಕ್ರವಾಕ
- ಚಕ್ರಪರಿವರ್ತನ – (ಜೈನ) ಮತ್ತೆ ಮತ್ತೆ ಹುಟ್ಟುವಿಕೆ
- ಚಕ್ರಪೂಜೆ – (ಜೈನ) ಚಕ್ರರತ್ನದ ಪೂಜೆ
- ಚಕ್ರಭೃತ್ಕುಲ – ಚಕ್ರವರ್ತಿಕುಲ
- ಚಕ್ರಭೃತ್ತ್ವ – ಚಕ್ರವನ್ನು ಧರಿಸಿರುವುದು
- ಚಕ್ರಮಿಥುನ – ಚಕ್ರವಾಕಜೋಡಿ
- ಚಕ್ರರತ್ನ – (ಜೈನ) ಚಕ್ರವರ್ತಿಯಾಗುವವನ
- ಆಯುಧಾಗಾರದಲ್ಲಿ ಹುಟ್ಟುವ ಚಕ್ರಾಯುಧ
- ಚಕ್ರವಾಳ – ಮಂಡಲ, ಸುತ್ತುವಲಯ
- ಚಕ್ರಾರಾವ – ಗಾಲಿಯ ಸದ್ದು
- ಚಕ್ರಲಾಭ – (ಜೈನ) ಐವತ್ತಮೂರು ಗರ್ಭಾನ್ವಯಕ್ರಿಯೆಗಳಲ್ಲಿ ಒಂದು; ಚಕ್ರರತ್ನವು ದೊರೆಯುವುದು
- ಚಕ್ರವರ್ತಿ – ಸಾರ್ವಭೌಮ; ವಿಷ್ಣು
- ಚಕ್ರವರ್ತಿತ್ವ – ಚಕ್ರವರ್ತಿಯಾಗಿರುವಿಕೆ
- ಚಕ್ರವಲ್ಲಭ – ಚಕ್ರವರ್ತಿ
- ಚಕ್ರವಾಕ – ಸದಾ ಜೊತೆಯಾಗಿರುವ (ರಾತ್ರಿಯಲ್ಲಿ ಬೇರೆಯಾಗಿ ವಿರಹ ಅನುಭವಿಸುವ) ಕಲ್ಪನೆಯ ಜೋಡಿಹಕ್ಕಿ
- ಚಕ್ರವಾಲ(ಳ) – ಮಂಡಲಾಕೃತಿ; ಪರ್ವತಪಂಕ್ತಿ
- ಚಕ್ರವಾಳಗದ್ಯ – ಒಂದು ವಿಶಿಷ್ಟ ಬಗೆಯ ಗದ್ಯರಚನೆ
- ಚಕ್ರವ್ಯೂಹ – ಒಂದು ಬಗೆಯ ಸೇನಾವ್ಯೂಹ
- ಚಕ್ರಸಹಾಯ – ಚಕ್ರದ ಸಹಾಯ ಪಡೆದಿರುವವನು, ವಿಷ್ಣು
- ಚಕ್ರಾಂಕ – ಗಾಲಿಗಳ ಗುರುತು
- ಚಕ್ರಾಂಕವ್ಯಂಜಿತ – ಗಾಲಿಗಳ ಗುರುತಿನಿಂದ (ಚಕ್ರವಾಕಗಳಿಂದ) ಶೋಭಿಸುವ
- ಚಕ್ರಾಂಗ – ಹಂಸಪಕ್ಷಿ
- ಚಕ್ರಾಂಗಿ – ಹೆಣ್ಣು ಹಂಸ
- ಚಕ್ರಾಂಶು – ಸುದರ್ಶನಚಕ್ರದ ಕಾಂತಿ
- ಚಕ್ರಾಚಕ್ರಿ – ಚಕ್ರಗಳನ್ನು ಹಿಡಿದು ಮಾಡುವ ಯುದ್ಧ
- ಚಕ್ರಾಧಿನಾಥ – ಚಕ್ರನಾಥ
- ಚಕ್ರಾಧಿಪ – ಚಕ್ರನಾಥ
- ಚಕ್ರಾಧೀಶ – ಚಕ್ರನಾಥ
- ಚಕ್ರಾನಿಲ – ಸುಂಟರಗಾಳಿ
- ಚಕ್ರಾಭಿಷೇಕ – (ಜೈನ) ಐವತ್ತಮೂರು
- ಗರ್ಭಾನ್ವಯಕ್ರಿಯೆಗಳಲ್ಲಿ ಒಂದು
- ಚಕ್ರಾಹ್ವ – ಚಕ್ರವಾಕಗಳ ಜೋಡಿ
- ಚಕ್ರಿ – ಗಾಲಿಯನ್ನುಳ್ಳದ್ದು, ರಥ; ಚಕ್ರಾಯುಧ; ಚಕ್ರವನ್ನು ಹೊಂದಿದವನು, ವಿಷ್ಣು; ಚಕ್ರವರ್ತಿ
- ಚಕ್ರಿಕಾವರ್ತಿ – ಚಕ್ರದಂತೆ ಸುತ್ತುವ ಶೀಲವುಳ್ಳವನು, ಕೃತ್ರಿಮೋಪಾಯವುಳ್ಳವನು
- ಚಕ್ರಿಪದ – ಚಕ್ರವರ್ತಿ ಪದವಿ
- ಚಕ್ರಿಯೋಧ – ಚಕ್ರವರ್ತಿಯ ಸೈನಿಕ
- ಚಕ್ರಿಸೈನಿಕ – ಚಕ್ರಿಯೋಧ
- ಚಕ್ರೀವ – ಕತ್ತೆ
- ಚಕ್ರೇಶ – ವಿಷ್ಣು; ಚಕ್ರವರ್ತಿ; ಜೈನ) ಚಕ್ರರತ್ನದ ಒಡೆಯ
- ಚಕ್ರೇಶ್ವರ – ಚಕ್ರವರ್ತಿ
- ಚಕ್ಷಣ – ಚಕ್ಕಣ
- ಚಕ್ಷುಶ್ಶ್ರುತಿ – ಕಣ್ಣೆ ಕಿವಿಯಾಗಿರುವ ಪ್ರಾಣಿ, ಹಾವು
- ಚಕ್ಷುಷ್ಮಂತ – ಮುಂದಾಲೋಚನೆಯವನು
- ಚಕ್ಷೂರಾಗ – ನೋಟದಲ್ಲಿ ತೋರಿಸುವ ಪ್ರೀತಿ
- ಚಚ್ಚರಂ – ಬೇಗ; ವಾಸ್ತವವಾಗಿ
- ಚಚ್ಚರಿಗ – ಆತುರಗಾರ
- ಚಚ್ಚಾ – ಪುಂಗಿ
- ಚಚ್ಚಾರವ – ಪುಂಗಿಯ ನಾದ
- ಚಟುಲ – ಚಂಚಲ; ಚುರುಕುತ
- ಚಟುಲತೆ – ಚುರುಕುತನ
- ಚಟುಳಿತ – ಚಲಿಸುವ
- ಚಟೂಕ್ತಿ – ಪ್ರಿಯವಾದ ಮಾತು
- ಚಟೂರಿಸು – ಎದುರಿಗೇ ಹೊಗಳು
- ಚಟ್ಟ – (ಛಾತ್ರ) ಶಿಷ್ಯ
- ಚಟ್ಟು – ಮಲ್ಲಯುದ್ಧದಲ್ಲಿ ಒಂದು ವರಸೆ
- ಚಡ – ಶೀಘ್ರವಾಗಿ
- ಚಣಕ – ತುಂಡು ಚಲ್ಲಣ; ಕಡಲೆ
- ಚತುರ – ನಾಲ್ಕು
- ಚತುರಂಗ – ನಾಲ್ಕು ಅಂಗಗಳನ್ನುಳ್ಲದ್ದು; ಆನೆ, ಕುದುರೆ, ರಥ, ಪದಾತಿಗಳಿಂದ ಕೂಡಿದ ಸೈನ್ಯ;; ಚದುರಂಗದ ಆಟ
- ಚತುರಂಗಬಲ – ಆನೆ, ಕುದುರೆ, ರಥ, ಪದಾತಿಗಳಿಂದ ಕೂಡಿದ ಸೈನ್ಯ
- ಚತುರಂಗುಲ – ನಾಲ್ಕು ಅಂಗುಲ
- ಚತುರಂತಕ್ಷಿತಿ – ನಾಲ್ಕು ಸಮುದ್ರದವರೆಗಿನ ಭೂಮಿ
- ಚತುರಂತಯಾನ – ಪಲ್ಲಕ್ಕಿ
- ಚತುರಚೂಡಾಮಣಿ – ಚತುರರಲ್ಲಿ ಮಿಗಿಲಾದವನು
- ಚತುರತರ – ಹೆಚ್ಚು ಚಾತುರ್ಯದ
- ಚತುರತೆ – ಚಾತುರ್ಯ
- ಚತುರಭಾವ – ಚತುರತೆ
- ಚತುರವೃತ್ತಿ – ಚತುರತೆ
- ಚತುರಶೀತಿ – ಎಂಬತ್ತನಾಲ್ಕು
- ಚತುರಶ್ರ(ಸ್ರ) -ನಾಲ್ಕು ಮೂಲೆಗಳುಳ್ಳದ್ದು; ಚಚ್ಚೌಕ
- ಚತುರಾಂತರ – ಚಚ್ಚೌಕದ ನಡುವೆ; ಹಸೆಯ ಜಗುಲಿ
- ಚತುರಾಸ್ಯ – ಚತುರ ನುಡಿಗಳನ್ನಾಡುವವನು
- ಚತುರಾಸ್ಯತ್ವ – (ಜೈನ) ಕೇವಲಜ್ಞಾನಿಗೆ ಉಂಟಾಗುವ ಹತ್ತು ವಿಶೇಷಗಳಲ್ಲಿ ಒಂದು: ನಾಲ್ಕು ಕಡೆಯೂ ಒಮ್ಮೆಗೇ ನೋಡಿವ ಶಕ್ತಿ
- ಚತುರಾಸ್ಯಪ್ರಿಯೆ – ಸರಸ್ವತಿ
- ಚತುರಿಂದ್ರಿಯ – ಪಂಚೇಂದ್ರಿಯಗಳಲ್ಲಿ ಕಿವಿಯ ಹೊರತು ಉಳಿದ ನಾಲ್ಕು ಇಂದ್ರಿಯಗಳಿರುವ ಜೀವಿ, ಕೀಟ
- ಚತುರಿಕೆ – ಚತುರೆ
- ಚತುರುಪಧಾ – ಧರ್ಮ ಅರ್ಥ ಕಾಮ ಭಯ; ದೇಶ ಜನ್ಮ ಆಚಾರ ಕುಲ
- ಚತುರುಪಧಾವಿಶುದ್ಧಿ – ಧರ್ಮ ಅರ್ಥ ಕಾಮ ಮೋಕ್ಷಗಳ ದೃಷ್ಟಿಯಿಂದ ಶುದ್ಧನಾದವನು
- ಚತುರುಪಾಯ – ಸಾಮ ದಾನ ಭೇದ ದಂಡಗಳು
- ಚತುರೋಕ್ತಿ – ಚತುರ ನುಡಿ
- ಚತುರೋಪಾಯ – ಚತುರುಪಾಯ
- ಚತುರ್ಗತಿ – (ಜೈನ) ದೇವ, ಮಾನವ, ತಿರ್ಯಕ್,
- ನಾರಕ ಎಂಬ ನಾಲ್ಕು ವಿಧವಾದ ಜನ್ಮಗಳು
- ಚತುಜ್ರ್ಞಾನ – (ಜೈನ) ಮತಿ, ಶ್ರುತಿ, ಅವಧಿ, ಮನಃಪರ್ಯಯಗಳೆಂಬ ನಾಲ್ಕು ಬಗೆಯ ಜ್ಞಾನಗಳು
- ಚತುಣಿ(ನಿರ್)ಕಾಯ – (ಜೈನ) ಭವನವಾಸಿ, ವ್ಯಂತರ, ಜ್ಯೋತಿಷ್ಯ, ಕಲ್ಪವಾಸಿಗಳೆಂಬ ನಾಲ್ಕು ಪ್ರಕಾರದ ದೇವತಾಸಮೂಹ
- ಚತುರ್ಥಧ್ಯಾನ – (ಜೈನ) ಆರ್ತ, ರೌದ್ರ, ಧರ್ಮ, ಶುಕ್ಲ ಎಂಬ ನಾಲ್ಕು ಬಗೆಯ ಧ್ಯಾನಗಳಲ್ಲಿ ಕೊನೆಯದು
- ಚತುರ್ಥಸ್ನಾನ – ಮುಟ್ಟಾದವಳು ನಾಲ್ಕನೆಯ ದಿನ ಮಾಡುವ ಸ್ನಾನ
- ಚತುರ್ಥಾಂಶ – ನಾಲಕ್ನೆಯ ಒಂದು ಭಾಗ
- ಚತುರ್ದಂತ – ನಾಲ್ಕು ಹಲ್ಲು(ಗಳುಳ್ಳದ್ದು), ಐರಾವತ
- ಚತುರ್ದಶ – ಹದಿನಾಲ್ಕು
- ಚತುರ್ದಶಪೂರ್ವ – (ಜೈನ) ಶ್ರುತಾಂಗಗಳ ವಿವರಣೆ ನೀಡುವ ಹದಿನಾಲ್ಕು ಪೂರ್ವಗ್ರಂಥಗಳು:
- ಚತುರ್ದಶಭುವನ – ಹದಿನಾಲ್ಕು ಲೋಕಗಳು
- ಚತುರ್ದಶಮನು – ಹದಿನಾಲ್ಕು ಮಂದಿ ಮನುಗಳು
- ಚತುರ್ದಶಲೋಕ – ಹದಿನಾಲ್ಕು ಲೋಕಗಳು
- ಚತುರ್ನಿ(ರ್ಣಿ)ಕಾಯಾಮರ – ಭುವನ, ವನ,
- ಜ್ಯೋತಿ, ಕಲ್ಪ – ಇವುಗಳ ದೇವತೆಗಳುಚತುರ್ನೃಪವಿದ್ಯೆ
- ಚತುರ್ಬಲ – ಚತುರಂಗಬಲ
- ಚತುರ್ಭಕ್ತಿ – (ಜೈನ) ಅರ್ಹತ್, ಆಚಾರ್ಯ, ಬಹುಶ್ರುತ, ಶ್ರುತ ಎಂಬ ನಾಲ್ಕು ಭಕ್ತಿಗಳು
- ಚತುರ್ಭುಜ – ನಾಲ್ಕು ತೋಳು(ಗಳುಳ್ಳವನು), ಕೃಷ್ಣ, ವಾಸುದೇವ
- ಚತುರ್ಮುಖ – ನಾಲ್ಕುಮುಖಗಳವನು, ಬ್ರಹ್ಮ; (ಜೈನ) ಮಹಾಸಾಮಂತರು ಮಾಡುವ ಜಿನಪೂಜೆ
- ಚತುರ್ವರ್ಗ – ನಾಲ್ಕು ಪುರುಷಾರ್ಥಗಳು
- ಚತುರ್ವಲ – ಚತುರಂಗಬಲ
- ಚತುರ್ವಿಂಶತಿ – ಇಪ್ಪತ್ತನಾಲ್ಕು
- ಚತುರ್ವಿಧದತ್ತಿ -(ಜೈನ) ದಯಾ, ಪಾತ್ರ, ಸಮ,
- ಅನ್ವಯ ಎಂಬ ನಾಲ್ಕು ಬಗೆಯ ದತ್ತಿಗಳು
- ಚತುರ್ವಿಧಾಮರ – ಚತುಣಿ(ನಿರ್)ಕಾಯ
- ಚತುರ್ವಿಧಾರಾಧನೆ – (ಜೈನ) ಸಮ್ಯಕ್‍ದರ್ಶನ, ಸಮ್ಯಕ್‍ಜ್ಞಾನ, ಸಮ್ಯಕ್‍ಚಾರಿತ್ರ, ಸಮ್ಯಕ್‍ತಪಸ್ಸು ಎಂಬ ನಾಲ್ಕು ಆರಾಧನಾ ಬಗೆಗಳು
- ಚತುರ್ವಿಧಾಹಾರ – ಅನ್ನ, ಪಾನ, ಖಾದ್ಯ, ಲೇಹ್ಯ ಎಂಬ ನಾಲ್ಕು ಬಗೆಯ ಆಹಾರಗಳು: (ಜೈನ) ಲೇಪ್ಯ, ಓಜ, ಕಬಳ, ಮಾನಸ ಎಂಬ ಆಹಾರಗಳು
- ಚತುರ್ವೇದ – ಋಕ್, ಯಜುರ್, ಸಾಮ, ಅಥರ್ವಣ ಎಂಬ ನಾಲ್ಕು ವೇದಗಳು
- ಚತುರ್ವೇದಪಾರಗ – ಚತುರ್ವೇದಗಳಲ್ಲಿ ಪರಿಣತ
- ಚತುಶ್ಶಾಲೆ – ನಾಲ್ಕು ಕಡೆ ಕೈಸಾಲೆಯಿರುವ ಅಂಗಳ
- ಚತುಷ್ಕ – ನಾಲ್ಕರ ಗುಂಪು
- ಚತುಷ್ಕಗೋಪುರ – ನಾಲ್ಕು ಗೋಪುರಗಳಿರುವ
- ಚತುಷ್ಕಷಾಯ – (ಜೈನ) ಕ್ರೋಧ, ಮಾನ, ಮಾಯಾ, ಲೋಭಗಳೆಂಬ ನಾಲ್ಕು ಕಷಾಯಗಳು
- ಚತುಷ್ಕೋಣ – ನಾಲ್ಕು ಮೂಲೆ; ಚೌಕಾಕೃತಿ
- ಚತುಷ್ಟಯ – ನಾಲ್ಕರ ಗುಂಪು
- ಚತುಷ್ಪ(ಷ್ಪಾ)ದ(ದಿ)- ನಾಲ್ಕು ಕಾಲುಗಳು (ಇರುವಂಥದು)
- ಚತುಷ್ಷಷ್ಟಿ – ಅರವತ್ತನಾಲ್ಕು
- ಚತುಸ್ಸಂಜ್ವಲನ – (ಜೈನ) ಚತುಷ್ಕಷಾಯ
- ಚತ್ತಾಣ – ಒಂದು ಬಗೆಯ ಕಾವ್ಯ
- ಚತ್ರ – ಧರ್ಮಸತ್ರ
- ಚದುಕ – ನಾಲ್ಕು ಕಂಬಗಳ ಆಧರವುಳ್ಳ ಮಂಟಪ
- ಚದುರ್ – ಚಾತುರ್ಯ
- ಚದುರ – ಬುದ್ಧಿವಂತ
- ಚದುರಂಗ – ಚತುರಂಗ
- ಚದುರಗೊಟ್ಟಿಗ – ಗೋಷ್ಠಿಯಲ್ಲಿ ಚೆನ್ನಗಿ ಮಾತಾಡುವವನು
- ಚದುರತನ – ಚಾತುರ್ಯ
- ಚದುರಸಿಗೆ – (ಚತುರಶ್ರಕ) ಚೌಕಾಕಾರದ ವಸ್ತ್ರ
- ಚದುರಿಕೆ – ಚದುರತನ
- ಚದುರಿಗ – ಚದುರ
- ಚದುರೆ – ಜಾಣೆ
- ಚದುರೆವೆಣ್ – ಚದುರೆಯಾದ ಹೆಣ್ಣು
- ಚದುರ್ಗಿಡು – ಚದುರು ಮಂಕುಗೊಳ್ಳು
- ಚಪಲ(ಳ) – ಚಂಚಲ; ಚಟುಲ
- ಚಪಲತನ – ಚಾಂಚಲ್ಯ
- ಚಪಲತಾಸಂಗ – ಎಳೆಯ ಬಿದಿರಿನ ಸಂಬಂಧ
- ಚಪಲತೆ – ಚಪಲತನ
- ಚಪಲಾ – ಮಿಂಚು
- ಚಪಲಾಕ್ಷಿ – ಚಂಚಲವಾದ ಅಥವಾ ಮಿಂಚಿನ ಕಣ್ಣುಗಳುಳ್ಳವಳು
- ಚಪಲಾವೇಗ – ಮಿಂಚಿನ ವೇಗ
- ಚಪಲೆ – ಚಂಚಲೆ; ಮಿಂಚು
- ಚಪೇಟ – ಅಂಗೈ
- ಚಪೇಟಚರಣಾಘಾತ – ಕೈಯ ಹೊಡೆತ ಮತ್ತು ಕಾಲ ಒದೆತ
- ಚಪ್ಪಟೆ – ಸಮತಲವಾಗಿರುವುದು
- ಚಪ್ಪರಣೆ – ತಿನ್ನುವಾಗ ಲೊಟ್ಟೆ ಹೊಡೆಯುÀವುದು
- ಚಪ್ಪರಿಕೆ – ಹೊಗಳಿಕೆ
- ಚಪ್ಪರಿಸು – ಸವಿ; ಧ್ವನಿಮಾಡು; ಗದ್ದರಿಸು
- ಚಪ್ಪಲರ್ – ಚಪ್ಪಟೆಗೊಳ್ಳು
- ಚಪ್ಪ¿Â – ಚಪ್ಪಟೆಯಾದುದು
- ಚಮತ್ಕರಿಸು – ಅಚ್ಚರಿಗೊಳಿಸು
- ಚಮತ್ಕಾರಿತ – ಅಚ್ಚರಿಗೊಳಿಸಿದ
- ಚಮತ್ಕøತಿ – ಅಚ್ಚರಿ
- ಚಮರಜ – ಚಾಮರ
- ಚಮರರುಹ – ಚಮರಜ
- ಚಮರಿ – ಚಮರೀ ಮೃಗ; ಚಾಮರಗಿತ್ತಿ
- ಚಮರೀಜ – ಚಮರಜ
- ಚಮರೀಮೃಗ – ಚಮರಿ
- ಚಮರಿರುಹ -ಚಮರಜ
- ಚಮೂ – ಸೇನೆ
- ಚಮೂಪತಿ – ದಂಡಾಧಿಪತಿ
- ಚಮೂರ – ಹುಲಿ
- ಚಮೂರು – ಜಿಂಕೆ
- ಚಮ್ಮಟಿಕೆ – ಚಾವಟಿ
- ಚಮ್ಮಟಿಗೆ – (ಚರ್ಮ¥ಟ್ಟಿಕಾ) ಬಾರುಗೋಲು
- ಚಮ್ಮವಾವುಗೆ – ಚರ್ಮದ ಪಾದುಕೆ
- ಚಯ – ಸಮೂಹ
- ಚರ – ಚಲಿಸುವ; ನಡೆಯುವವನು; ಸೇವಕ
- ಚರಣ -ಮಾಡುವಿಕೆ; ನಡವಳಿಕೆ
- ಚರಣಗ್ರಂಥ – (ಜೈನ) ಚರಣಾನುಯೋಗವನ್ನು ವಿವರಿಸುವ ಗ್ರಂಥ
- ಚರಣತಲ(ಳ) – ಅಂಗಾಲು
- ಚರಣನ್ಯಾಸ – ಹೆಜ್ಜೆಯಿಡುವಿಕೆ
- ಚರಣಮುದ್ರಿಕೆ – ಕಾಲುಂಗುರ
- ಚರಣಸಂಘಟ್ಟ – ಪಾದಗಳ ತುಳಿತ
- ಚರಣಾನುಯೋಗ – (ಜೈನ) ಸದಾಚಾರವನ್ನು
- ನಿರೂಪಿಸುವ ಶಾಸ್ತ್ರಭಾಗ
- ಚರಣಾಯುಧ – ಚರಣವನ್ನೇ ಆಯುಧವಾಗುಳ್ಳುದು, ಹುಂಜ
- ಚರಣಿ – ಮೇವು ಹಾಕುವ ಗೋದಲೆ
- ಚರಣೋಪಾಂತ – ಚರಣದ ಹತ್ತಿರ
- ಚರಪುರುಷ – ದೂತ
- ಚರಮ – ಕೊನೆಯ
- ಚರಮಕಲ್ಯಾಣ – (ಜೈನ) ಪಂಚಕಲ್ಯಾಣಗಳಲ್ಲಿ ಕೊನೆಯದು, ಪರಿನಿರ್ವಾಣ
- ಚರಮತನು – ಕೊನೆಯ ಜನ್ಮ; (ಜೈನ) ಮೋಕ್ಕ್ಕೆ ಹೋಗುವವನು
- ಚರಮದೇಹ – ಚರಮತನು
- ಚರಮದೇಹಧರ – ಕೊನೆಯ ಸಲ ದೇಹಧರಿಸಿದವನು, ಮೋಕ್ಷಗಾಮಿ
- ಚರಮದೇಹಧಾರಿ – ಚರಮದೇಹಧರ
- ಚರಮಧ್ಯಾನ – (ಜೈನ) ನಾಲ್ಕು ಬಗೆಯ ಧ್ಯಾನಗಳಲ್ಲಿ ಕೊನೆಯದು; ಮೊದಲ ಮೂರು: ಆರ್ತ, ರೌದ್ರ, ಧರ್ಮ
- ಚರಮಪಾಳಿ – ಕೊನೆಯ ಕರ್ಮಬಂಧ
- ಚರಮಶರೀರ – ಚರಮತನು
- ಚರಮಸಮಯ – ಕಡೆಗಾಲ
- ಚರಮಾಂಗ – ಚರಮತನು
- ಚರಿಗೆ – (ಜೈನ) ಮುನಿಗಳ ಭಿಕ್ಷೆ
- ಚರಿಗೆಗೊಡು – (ಜೈನ) ಮುನಿಗಳು ಭಿಕ್ಷೆಗೆ ಹೊರಡು
- ಚರಿಗೆಚರ್ – (ಜೈನ) ಮುನಿಗಳು ಭಿಕ್ಷೆಗೆ ಬರುವುದು
- ಚರಿಗೆವೊಗಿಸು – (ಜೈನ) ಮುನಿಗಳು ಭಿಕ್ಷೆಗೆಂದು ಮನೆಮನೆಗೆ ಕಳುಹಿಸು
- ಚರಿಗೆವೊಗು – (ಜೈನ) ಮುನಿಗಳು ಭಿಕ್ಷೆಗಾಗಿ ಮನೆಯನ್ನು ಹೊಗು
- ಚರಿಗೆವೋಗು – (ಜೈನ) ಮುನಿಗಳು ಭಿಕ್ಷೆಗಾಗಿ ಹೋಗು
- ಚರಿತ – ನಡದುಹೋದ; ನಡಿಗೆ
- ಚರಿತಂ – ತ್ವರಿತವಾಗಿ
- ಚರಿತಪುರಾಣ – ಮಹಾಪುರುಷರ ಕತೆ
- ಚರಿತಾರ್ಥ – ಕೃತಾರ್ಥ
- ಚರಿಯಿಸು – ಸುತ್ತಾಡು, ಓಡಾಡು
- ಚರಿಯೆ – (ಜೈನ) ಚರಿಗೆ, ಮುನಿಗಳು ಆಹಾರಕ್ಕೆ ಮಾಡುವ ಸಂಚಾರ
- ಚರಿಸು – ಚಲಿಸು
- ಚರು – ಹವಿಸ್ಸು; ಹೋಮಕ್ಕಾಗಿ ಸಿದ್ಧಪಡಿಸಿದ ಅನ್ನ
- ಚರ್ಚಿಕೆ – ಗಂಧ ಬಳಿಯುವುದು
- ಚರ್ಚಿತ – ಲೇಪಿಸಿದ
- ಚರ್ಚಿಸು – ವಾದಿಸು; ಆಲೋಚನೆಮಾಡು
- ಚರ್ಚು – ಮಗುವನ್ನು ಸಲಹು; ಉರಿ
- ಚರ್ಚೆ – ಅನುಲೇಪನ
- ಚರ್ದಿಸು – ವಾಂತಿಮಾಡಿಕೊ
- ಚರ್ಮರತ್ನ – (ಜೈನ) ಚಕ್ರವರ್ತಿಗೆ ತಾನಾಗಿ ದೊರೆಯುವ ಜೀವರತ್ನಗಳಲ್ಲಿ ಒಂದು: ನೀರಿನ ಮೇಲೆ ತೇಲಲು ಬಳಸುವ ಚರ್ಮದ ಸಾಧನ
- ಚರ್ಮದಾವುಗೆ – ಚರ್ಮದ ಹಾವುಗೆ
- ಚರ್ಯಾಮಾರ್ಗ – (ಜೈನ) ಚರಿಗೆಗಾಗಿ ಹೋಗುವ ಉದ್ದೇಶ
- ಚರ್ಯೆ – ನಡತೆ; (ಜೈನ) ಅಹಿಂಸೆಯ ಪ್ರತಿಜ್ಞೆ ಮತ್ತು ಆವರಣೆ
- ಚರ್ವಣ – ಅಗಿದು ತಿನ್ನುವುದು
- ಚರ್ವಿತಚರ್ವಣ – ಅಗಿದದ್ದನ್ನೇ ಅಗಿಯುವುದು; ಪುನರುಕ್ತಿ
- ಚಲ(ಳ) – ಹಟ, ಛಲ; ಅಲುಗುವ
- ಚಲಂ(ಲುಂ)ಕು – ಚಿಮುಕಿಸು
- ಚಲಂಬಿಡಿ – ಹಟದಿಂದಿರು
- ಚಲ(ಳ)ನ – ಅಲುಗುವಿಕೆ; ನಡೆಯುವಿಕೆ
- ಚಲಿತ – ನಡೆದುಹೋದ; ಅಲುಗಾಡಿದ; ಚಂಚಲಗೊಂಡ
- ಚಲಿಸು – ಅಲುಗಾಡು; ಕದಡು
- ಚಲ್ಲ – ಸರಸ; ಸೊಗಸು
- ಚಲ್ಲಂಬೆರಸು – ಚೆಲ್ಲಾಟದೊಡಗೂಡಿ; ಸರಸವಾದ
- ಚಲ್ಲಕಾರ್ತಿ – ಸೊಗಸುಗಾತಿ
- ಚಲ್ಲವತಿ – ಸರಸಗಾತಿ
- ಚಲ್ಲಣ – ಚೆಡ್ಡಿ, ಅರ್ಧೋರುಕ
- ಚಲ್ಲವ(ವೊತ್ತ) – ನಂಬಿಸಿ ಹೊಟ್ಟೆ ಹೊರೆಯುವವನುಚಲ್ಲವಾಡು -ಸರಸವಾಡು
- ಚಲ್ಲಿ – ಚಲನೆ; ನೃತ್ಯದ ಒಂದು ಗತಿ; ಕನ್ನಡಿ
- ಚಲ್ಲಿಸು – ಎರಚಿಸು
- ಚವರಿ – ಚಮರೀಮೃಗದ ಕೂದಲು
- ಚವಿ – (ಛವಿ) ಕಾಂತಿ
- ಚಷಕ – ಬಟ್ಟಲು, ತಟ್ಟೆ
- ಚಳಕಿಗೆ – ತೋಳಬಂದಿ
- ಚಳಣ – ಕಾಲು, ಪಾದ
- ಚಳಮತಿ – ಚಂಚಲಬುದ್ಧಿಯವನು(ಳು)
- ಚಳತ್ – ಚಲಿಸುತ್ತಿರುವ
- ಚಳಿ – ಶೀತದಿಂದ ಬಳಲು; ಶೈತ್ಯ; (ಬಣ್ಣ) ಮಸುಕಾಗು
- ಚಳಿತು – ದಣಿದು, ವಿಗತ ಪ್ರಭಾವನಾಗಿ
- ಚಳಿಲ್ – ಒಂದು ಅನುಕರಣ ಶಬ್ದ
- ಚಳಿವಿನಂ – ದಣಿಯುವವರೆಗೂ
- ಚಳಿವೆಟ್ಟಾಣ್ಮ – ಚಳಿವೆಟ್ಟು+ಆಣ್ಮ, ಹಿಮಗಿರಿಯ ಒಡೆಯ, ಹಿಮವಂತ
- ಚಾಂದಸ – ಸಂಪ್ರದಾಯನಿಷ್ಠ; ಮಂದಮತಿ
- ಚಾಂದ್ರಪ್ರಭ – (ಜೈನ) ಚಂದ್ರಪ್ರಭನೆಂಬ ತೀರ್ಥಂಕರನಿಗೆ ಸಂಬಂಧಪಟ್ಟ
- ಚಾಂದ್ರಾಯಣ – ಚಂದ್ರನ ಚಲನೆ, ವೃದ್ಧಿಕ್ಷಯಗಳುಚಾಂಪೇಯ – ಸಂಪಿಗೆ ಜಾತಿಯ ಮರ
- ಚಾಗ – (ತ್ಯಾಗ) ದಾನ; ಹಸಿರುಬಣ್ಣ
- ಚಾಗಂಗೆಯ್ – ದಾನಗೈ
- ಚಾಗಗುಣ – ದಾನಮಾಡುವ ಗುಣ
- ಚಾಗವಿಕ್ಕು – ದಾನಕೊಡು
- ಚಾಗಿ – ತ್ಯಾಗಿ
- ಚಾಗಿಗುಣ – ತ್ಯಾಗಶೀಲ ಗುಣ
- ಚಾಟು – ಸಂತಸಕರವಾದ ನುಡಿ
- ಚಾಟುಕಾರಂಗೆಯ್ – ಸಂತಸಗೊಳಿಸು
- ಚಾಟುಕಾರಿಸು – ಹೊಗಳು
- ಚಾಟುತನ – ಮಾತಿನ ಚಾತುರ್ಯ
- ಚಾಟುಭಣಿತಿ – ಚತುರತೆಯಿಂದ ಕೂಡಿದ ಮಾತು
- ಚಾತುರಂಗ – ಚತುರಂಗ ಸೈನ್ಯ
- ಚಾತುರಿಯ – ಚಾತುರ್ಯ
- ಚಾತುರ್ದಂತ – ನಾಲ್ಕು ದಂತಗಳುಳ್ಳದ್ದು, ಐರಾವತ
- ಚಾತುರ್ದಂತಬಲ – ಗಜಸೈನ್ಯ
- ಚಾತುರ್ಬಲ – ಚಾತುರಂಗ
- ಚಾತುರ್ಮಾಸ(ಸ್ಯ) – ಮಳೆಗಾಲದ ನಾಲ್ಕು ತಿಂಗಳು (ಆಷಾಢ ಶುಕ್ಲ ಪೌರ್ಣಮಿಯಿಂದ ಕಾರ್ತಿಕ ಶುಕ್ಲ ಪೌರ್ಣಮಿಯವರೆಗೆ) ಮುನಿಗಳು ಒಂದೆಡೆ ನೆಲಸಿ ನಡೆಸುವ ವ್ರತ
- ಚಾತುರ್ಯ – ಜಾಣ್ಮೆ
- ಚಾತುರ್ಯವಚನ – ಜಾಣ್ಮೆಯ ಮಾತು
- ಚಾತುರ್ಯಾಮ – ನಾಲ್ಕು ಜಾವಗಳು
- ಚಾತುರ್ವರ್ಣ – ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು
- ಚಾತುರ್ವಣ್ರ್ಯ – ಚಾತುರ್ವರ್ಣ
- ಚಾದಗೆ – ಚಾತಕ ಪಕ್ಷಿ
- ಚಾದಗೆವಕ್ಕಿ – ಚಾದಗೆ
- ಚಾಪಚಾಪಳ – ಬಿಲ್ವಿದ್ಯೆಯಲ್ಲಿ ನಿಪುಣ
- ಚಾಪಟಂಕೃತಿ – ಬಿಲ್ಲಿನ ಠೇಂಕಾರ
- ಚಾಪಧರ – ಧನುರ್ಧಾರಿ
- ಚಾಪಪ್ರಮುಕ್ತ – ಬಿಲ್ಲಿನಿಂದ ಬಿಡಲಾದ
- ಚಾಪಲತಾಯೋಗ – ಚಂಚಲತೆ; ಬಿಲ್ಲಿನ ಸಂಬಂಧ
- ಚಾಪಲತಾರೋಹಣ – ಚಾಂಚಲ್ಯವುಂಟಾಗುವುದು; ಬಿಲ್ಲಿನ ಹೆದೆಯೇರಿಸುವುದು
- ಚಾಪಲತೆ – ಬಳ್ಳಿಯಂತಿತುವ ಬಿಲ್ಲು
- ಚಾಪವಲ್ಲರಿ – ಚಾಪಲತೆ
- ಚಾಪಳಮತಿ – ಚಂಚಲಮತಿ
- ಚಾಪಾಗಮ – ಬಿಲ್ವಿದ್ಯೆಚಾಪಾಚಾರ್ಯ ಬಿಲ್ವಿದ್ಯೆಯನ್ನು ಹೇಳಿಕೊಡುವ ಗುರುಚಾಮರ – ಚಮರ
- ಚಾಮರಗ್ರಾಹಿಣಿ – ಚಾಮರ ಹಿಡಿದು ಬೀಸುವವಳು
- ಚಾಮರಿ – ಚಾಮರ ಹಿಡಿದು ಬೀಸುವವನು
- ಚಾಮರಗಿತಿ – ಚಾಮರಗ್ರಾಹಿಣಿ
- ಚಾಮೀಕರ – ಚಿನ್ನ
- ಚಾಮೀಕರಪೀಠ – ಚಿನ್ನದ ಪೀಠ
- ಚಾರಚಕ್ಷು – ಚಾರರೆಂಬ ಕಣ್ಣುಗಳುಳ್ಳವನು
- ಚಾರಣ – ತಿರುಗಾಟ; ದ್ವಂದ್ವಯುದ್ಧದ ಒಂದು ವರಸೆ; ಹೊಗಳುಭಟ; (ಜೈನ) ಸಂಚಾರ ಮಾಡುವ, ಅವಧಿಜ್ಞಾನವಿರುವ ಗಗನಗಾಮಿ ಋಷಿಗಳು
- ಚಾರಣಋದ್ಧಿ – (ಜೈನ) ಚಾರಣಋಷಿಗಳ ಗಗನಸಂಚಾರಶಕ್ತಿ
- ಚಾರಣಋದ್ಧಿವಡೆ – ಚಾರಣಋದ್ಧಿಯನ್ನು ಸಿದ್ಧಿಸಿಕೊಳ್ಳುವುದು
- ಚಾರಣಋಷಿ – ಚಾರಣಋದ್ಧಿಯನ್ನು ಪಡೆದ ಋಷಿ
- ಚಾರಣಕ್ರಮ – ಅಂಕುಶದಿಂದ ಆನೆಯನ್ನು ಮುನ್ನಡೆಸುವ ಕ್ರಮ
- ಚಾರಣಗುಣ – ಚಾರಣಋದ್ಧಿ
- ಚಾರಣಯೋಗಿ – ಚಾರಣಋಷಿ
- ಚಾರಿ – ಪಗಡೆಕಾಯಿ; ನಾಟ್ಯದಲ್ಲಿನ ಹೆಜ್ಜೆಯ ಒಂದು ಗತಿ; ತಂತ್ರ, ಕೃತ್ರಿಮ ಸಾಧನ
- ಚಾರಿತ್ರಂಗೆಡು – ನಡತೆಗೆಡು
- ಚಾರಿತ್ರಮೋಹ(ನೀಯ) – (ಜೈನ) ಮೋಹನೀಯ ಕರ್ಮಗಳಲ್ಲಿ ಒಂದು; ಆಚಾರವನ್ನು ದೂಷಿಸುವ ಕರ್ಮದ ಒಂದು ವಿಧ
- ಚಾರಿಸು – ಕತ್ತಿ ಝಳಪಿಸು; ಚತುರತೆಯಿಂದ ನಡೆಸು
- ಚಾರು – ಸುಂದರವಾದ
- ಚಾರುಚರಿತ್ರ – ಒಳ್ಳೆಯ ನಡತೆ(ಯುಳ್ಳವನು)
- ಚಾರುತರ – ಹೆಚ್ಚು ಸುಂದರವಾದ
- ಚಾರುತ್ವ – ಚೆಲುವು
- ಚಾರುರೂಪ – ಸುಂದರ ರೂಪ
- ಚಾರುಹಾಸ – ಮೋಹಕವಾದ ನಗೆಯುಳ್ಳವನು
- ಚಾರುಹಾಸಿನಿ – ಮೋಹಕವಾದ ನಗೆಯುಳ್ಳವಳು
- ಚಾರ್ವಾಕಮತ – ನಿರೀಶ್ವರತೆಯನ್ನು ಪ್ರತಿಪಾದಿಸುವ ಮತ
- ಚಾವಲಿ(ಳಿ)ಸು – ಚಾಪಲ್ಯವುಂಟುಮಾಡು; ಆಕ್ಷೇಪಿಸು
- ಚಾಳಯ – ಗತಿಲಂಘನ
- ಚಾಳಿಸು – ಚಪಲಗೊಳಿಸು; ಸೋಲಿಸು
- ಚಾ¿õï – ರಾಹು
- ಚಿಂತನ – ಧ್ಯಾನ
- ಚಿಂತಾಕುಲತೆ – ಚಿಂತೆಯಿಂದ ಪೀಡಿತವಾದ
- ಚಿಂತಾಕುಲಿತ – ಚಿಂತೆಯಿಂದ ಪೀಡಿತನಾದವನು
- ಚಿಂತಾಕ್ರಾಂತೆ – ಚಿಂತೆಯಿಂದ ಕೂಡಿದವಳು
- ಚಿಂತಾಪರವಶತೆ – ಚಿಂತೆಯಲ್ಲಿ ಮೈಮರೆಯುವುದು
- ಚಿಂತಾಭರ – ಚಿಂತೆಯ ಹೊರೆ
- ಚಿಂತಾಮಣಿ – ಕೇಳಿದ್ದನ್ನು ಕೊಡುವ ದೇವಲೋಕದ ಒಂದು ಮಣಿ
- ಚಿಂತಾರತ – ಮನಸ್ಸಿನಲ್ಲಿಯೇ ಒಂದುಗೂಡುವುದು
- ಚಿಂತಾರತಿ – ಚಿಂತೆಯಲ್ಲಿನ ಆಸಕ್ತಿ
- ಚಿಂತಿಸು – ಆಲೋಚಿಸು
- ಚಿಂತೆ – ಉಬ್ಬೆಗ; ಯೋಚನೆ
- ಚಿಂತೆಗೆಯ್ – ಉಮ್ಮಳಪಡು
- ಚಂದ – ನಪುಂಸಕ
- ಚಿಕಿಚ್ಚೆ – ಚಿಕಿತ್ಸೆ
- ಚಿಕಿತ್ಸಿತ – ಚಿಕಿತ್ಸೆಗೊಳಗಾದ
- ಚಿಕುರ – ಮುಂಗುರುಳು
- ಚಿಕ್ಕಣ – ಮೆತ್ತಗಿರುವುದು
- ಚಿಕ್ಕುಟ – ಚಿಕ್ಕಾಡು, ಸಣ್ಣ ಸೊಳ್ಳೆಯಂಥ ಕೀಟ
- ಚಿಕ್ಕೊತ್ತೆ – ಸೂಳೆಯರಿಗೆ ಕೊಡುವ ಹಗಲೊತ್ತೆ
- ಚಿಗಿ – ಬೆರಳಿಂದ ಚಿಮ್ಮು
- ಚಿಗುರ್ – ತಳಿರು; ಪಲ್ಲವಿಸು
- ಚಿಗುಳಿ – ಎಳ್ಳುಬೆಲ್ಲಗಳ ಉಂಡೆ
- ಚಿಗುಳಿದುಳಿ – ತುಳಿದು ಜಜ್ಜಿಹಾಕು
- ಚಿಟುಕಂಕಳೆ – ನೆಟಿಕೆ ಮುರಿ
- ಚಿಟುಂಕಿಸು – ಚಿಟಿಕೆ ಹೊಡೆ; ನೆಟಿಕೆ ಮುರಿ
- ಚಿಟ್ಟೆ – ಮಿಡಿತೆ
- ಚಿತಾನಳ – ಚಿತೆಯ ಬೆಂಕಿ
- ಚಿತ್ತಂಗೊಳ್ – ಮನಸ್ಸಿಡು
- ಚಿತ್ತಂಗೊಳಿಸು – ಒಲಿಸಿಕೊ
- ಚಿತ್ತಂಬಡೆ – ಮನಸ್ಸಿಗೆ ತಂದುಕೊ
- ಚಿತ್ತಂಬುಗು – ಮನಸ್ಸನ್ನು ಹೊಗು
- ಚಿತ್ತಕ್ಷೋಭ – ಮನಸ್ಸಿನ ಅಶಾಂತಿ
- ಚಿತ್ತಜ – ಮನ್ಮಥ; (ಜೈನ) ಬಾಹುಬಲಿಯ ಅನೇಕ ಹೆಸರುಗಳಲ್ಲಿ ಒಂದು
- ಚಿತ್ತಜಕೇಳಿ – ಕಾಮಕ್ರೀಡೆ
- ಚಿತ್ತಜನ್ಮ – ಮನ್ಮಥ
- ಚಿತ್ತನಾಥ – ಮನಸ್ಸಿನ ಒಡೆಯ, ನಲ್ಲ
- ಚಿತ್ತನಿರೋಧ – ಮನೋನಿಗ್ರಹ
- ಚಿತ್ತಪಲ್ಲಟ – ಮನಸ್ಸು ಬದಲಾಯಿಸುವುದು
- ಚಿತ್ತಭವ – ಮನ್ಮಥ; ಬಾಹುಬಲಿ
- ಚಿತ್ತಭ್ರಾಂತಿ – ಮನಸ್ಸು ಭ್ರಮೆಗೊಳ್ಳುವುದು; ಹುಚ್ಚು
- ಚಿತ್ತೈಸು – ಗಮನಕೊಡು
- ಚಿತ್ತವಿಮೋಹನ – ಮನಸ್ಸನ್ನು ಸೆಳೆಯುವುದು,
- ಮರುಳುಗೊಳಿಸುವುದು
- ಚಿತ್ತವಿಶುದ್ಧಿ – ಮನಸ್ಸಿನ ಪರಿಶುದ್ಧತೆ
- ಚಿತ್ತವೃತ್ತಿ – ಸ್ವಭಾವ, ಮನೋಧರ್ಮ
- ಚಿತ್ತಶಯ – ಮನ್ಮಥ
- ಚಿತ್ತಸಂಭವ – ಮನ್ಮಥ
- ಚಿತ್ತಾಗಾರ – ಚಿತ್ರಿಸಿದ ಆಕಾರ
- ಚಿತ್ತಾರಿ – ಚಿತ್ರಕಾರಿ; ಚಿತ್ರಕಾರ
- ಚಿತ್ತಾರಿಗ – ಚಿತ್ತಾರಿ
- ಚಿತ್ತು – ಜ್ಞಾನಸ್ವರೂಪವಾದ ಆತ್ಮ
- ಚಿತ್ತೋದ್ಭವ – ಮನ್ಮಥ
- ಚಿತ್ರ – ಸ್ಪಷ್ಟವಾದ; ಬರೆದ ಆಕೃತಿ; ವಿಚಿತ್ರ
- ಚಿತ್ರಂಬರೆ – ಚಿತ್ರವನ್ನು ರಚಿಸು
- ಚಿತ್ರಕ – ಚಿತ್ರ ಬರೆಯುವವನು
- ಚಿತ್ರಕರ್ಮ – ಚಿತ್ರರಚನೆ
- ಚಿತ್ರಕಾಯ -ಸುಂದರ ದೇಹ; ಹುಲಿ; ಚಿರತೆ
- ಚಿತ್ರಕೃತಿ – ಚಿತ್ರರಚನೆ
- ಚಿತ್ರಪಟ – ಚಿತ್ರವನ್ನು ಬರೆದಿರುವ ಬಟ್ಟೆ
- ಚಿತ್ರಪತ್ರ – ವಿಚಿತ್ರಾಕಾರ ಅಥವಾ ಬಣ್ಣಗಳುಳ್ಳ ಎಲೆ
- ಚಿತ್ರಪುತ್ರಿಕೆ – ಆಕರ್ಷಕವಾದ ಬೊಂಬೆ
- ಚಿತ್ರಪ್ರಪಂಚ – ಅದ್ಭುತಗಳ ಸಮೂಹ
- ಚಿತ್ರಪ್ರವರ್ತನ – ಬಣ್ಣ ಹಾಕುವ ಒಂದು ಪ್ರಕಾರ
- ಚಿತ್ರಭಿತ್ತಿ – ಚಿತ್ರಗಳಿರುವ ಗೋಡೆ
- ಚಿತ್ರವರ್ತ – ಚಿತ್ರಪ್ರವರ್ತನ
- ಚಿತ್ರವಿಧ – ಅದ್ಭುತ ರೀತಿ
- ಚಿತ್ರವಿವಕ್ಷೆ – ಚಿತ್ರರಚನಾಸಕ್ತಿ
- ಚತ್ರವೃತ್ತಿ – ಅಚ್ಚರಿಯ ಚಿತ್ರರಚನಾ ಕ್ರಮ
- ಚಿತ್ರಸೂತ್ರ – ಚಿತ್ರಗಳಿರುವ ಬಟ್ಟೆ
- ಚಿತ್ರಹಾರ – ಬಣ್ಣಬಣ್ಣಗಳ ಹಾರ
- ಚಿತ್ರಾಂಬರ – ಬಣ್ಣಬಣ್ಣದ ಬಟ್ಟೆ
- ಚಿತ್ರಾಭಾಸ – ಚಿತ್ರದ ಒಂದು ಬಗೆ
- ಚಿತ್ರಾಯತನ – ಚತ್ತಾಣ; ಒಂದು ಕಾವ್ಯಪ್ರಕಾರ
- ಚಿತ್ರಾರ್ಧ – ಚಿತ್ರದ ಒಂದು ಬಗೆ
- ಚಿತ್ರಾರ್ಪಿತ – ಚಿತ್ರಣಗೊಂಡ
- ಚಿತ್ರಾವಹ – ಆಶ್ಚರ್ಯಕರವಾದ
- ಚಿತ್ರಿಕ – ಚಿತ್ರಕಾರ
- ಚಿತ್ರಿಕೆ – ಬೊಂಬೆ
- ಚಿತ್ರಿಸು – ಚಿತ್ರವನ್ನು ರಚಿಸು
- ಚಿತ್ರೆ – (ಜೈನ) ಒಬ್ಬ ದೇವತಾಸ್ತ್ರೀ
- ಚಿನ್ನ – ಹೊನ್ನು; (ಛಿನ್ನ) ಕತ್ತರಿಸಿದುದು
- ಚಿನ್ನಪೂ – ಹೂವಿನಾಕಾರದ ಚಿನ್ನದ ಆಭರಣ
- ಚಿನ್ನವರದ – ಚಿನ್ನ+ಪರದ, ಚಿನ್ನದ ವ್ಯಾಪಾರಿ
- ಚಿಬ್ಬಂಬೊಯ್ – ಮೈಮೇಲೆ ಚುಕ್ಕೆಗಳನ್ನಿಡು
- ಚಿಬ್ಬು – ಮೈಮೇಲಿನ ಸಣ್ಣ ಚುಕ್ಕೆಗಳು
- ಚಿಮಿಚಿಮಿಸು – ಒಂದು ಅನುಕರಣ ಶಬ್ದ; ಹೊರಳಾಡು
- ಚಿಮ್ಮು – ಬೆರಳಿಂದ ಚಿಮ್ಮು; ಆಯುಧ ಝಳಪಿಸು
- ಚಿರ – ಸ್ಥಿರ, ಬಹುಕಾಲ ಬಾಳುವ
- ಚಿರಂಟಿ – ಯುವತಿ
- ಚಿರಂತನಾಚಾರ್ಯ – ಹಿಂದಿನ ಆಚಾರ್ಯರುಗಳು
- ಚಿರಂಜೀವಿ – ಹೆಚ್ಚು ಕಾಲ ಬದುಕುವವನು; ಕಾಗೆ
- ಚಿರಕಾಲ – ಬಹುಕಾ;ಲ
- ಚಿರಜೀವಿತೆ – ಬಹುಕಾಲ ಬದುಕುವುದು
- ಚಿರನಿಮಿಷ – ಬಹುಕಾಲ ಕಣ್ಣು ಮುಚ್ಚಿರುವುದು
- ಚಿರಬಿಲ್ವ – ಹೊಂಗೆಮರ
- ಚಿರಾಯುಷ್ಯ – ದೀರ್ಘಕಾಲ ಬದುಕುವುದು
- ಚಿಳಿಚಿಮ – ಒಂದು ಜಾತಿಯ ಸಣ್ಣ ಮೀನು
- ಚಿಲಿಮಿಲಿ – ಹಕ್ಕಿಗಳ ಗುಂಪಿನ ಧ್ವನಿ
- ಚಿಲಿಮಿಲಿಸು – ಚಿಲಿಮಿಲಿ ಶಬ್ದಮಾಡು
- ಚಿಲುಕೂಲಿ – ಒಂದು ಬಗೆಯ ಹಕ್ಕಿ
- ಚಿಲ್ಲ – ವಂಡು ನೀರನ್ನು ತಿಳಿಗೊಳಿಸುವ ಬೀಜ; ಕತಕ
- ಚಿವುಡು – ಉಗುರಿನಿಂದ ಚಿವುಟಿಹಾಕು
- ಚಿಹ್ನ – ಗುರುತು
- ಚೀತ್ಕರತಿ – ಆರ್ತಧ್ವನಿ
- ಚೀನಚೇಳ – ಚೀನಾಂಬರ
- ಚೀನವಸನ – ಚೀನಾಂಬರ
- ಚೀನಾಂಶುಕ – ಚೀನಾಂಬರ
- ಚೀನೋತ್ತರೀಯ – ರೇಷ್ಮೆಯ ಮೇಲುವಸ್ತ್ರ
- ಚೇರಿ(ಕಾ) – ಝೇಂಕರಿಸುವ ಒಂದು ಹುಳು
- ಚೀರ್ಗರೆ – ಚೀರು, ಕಿರಿಚು
- ಚೀಲ – (ಚೀರ) ಬಟ್ಟೆ; ಬಟ್ಟೆಯ ಕೋಶ
- ಚೀಲಣಸು – ಕೆತ್ತನೆ ಕೆಲಸ ಮಾಡು
- ಚುಂಚು – ಜುಟ್ಟು; ಮುಂಗುರುಳು
- ಚುಂಚುಮೀಸೆ – ಹುರಿಗೊಂಡ ಮೀಸೆ
- ಚುಂಚುಲೋವೆ – ಗೋಡೆಯ ಚಾಚು ಭಾಗ
- ಚುಂಬನ – ಮುತ್ತು
- ಚುಂಬಿ – ತಾಗುವ
- ಚುಂಬಿಸು – ಮುತ್ತಿಡು
- ಚುಚ್ಚು – ಇರಿ; ಇರಿತ
- ಚುನ್ನ – ನಿಂದೆ; ಕೊಂಕುಮಾತು
- ಚುನ್ನಮಾ(ವಾ)ಡು – ಕೊಂಕುಮಾತಾಡು
- ಚುನ್ನಂಗೆಯ್ – ಅಪಹಸ್ಯಮಾಡು
- ಚುನ್ನಕ – ನಿಂದಕ
- ಚುಬುಕ – ಗಲ್ಲ
- ಚುಬುಕಾಗ್ರ – ಗದ್ದದ ತುದಿ
- ಚುಮ್ಮೆನ್ – ಜೋರಾಗಿ ಸುಯ್‍ಗುಟ್ಟು
- ಚುಯ್ – ಸುಯ್‍ಗುಟ್ಟುವುದರ ಅನುಕರಣ ಶಬ್ದ
- ಚುರ್ಚು – ಚುಚ್ಚು; ಉರಿ
- ಚುರ್ಚುಂಗೊಳ್ಳಿ – ಉರಿಯುವ ಕೊಳ್ಳಿ
- ಚುಲುಕ – ಅಂಗೈ, ಹಿಡಿ
- ಚುಳಕಪಾನ – ಅಂಗಯ ತುಂಬ ನೀರು
- ಚುಳುಕಾಡು – ತುಳುಕಾಡು
- ಚೂಚಕ – ಗೊಂಚಲು
- ಚೂಚುಕ – ಮೊಲೆತೊಟ್ಟು
- ಚೂಡಾಪೀಡ – ಶಿರೋಭೂಷಣ, ತಲೆಯ ಆಭರಣ
- ಚೂಡಾಮಣಿ – ತಲೆವಣಿ, ಶಿರೋರತ್ನ
- ಚೂಡಾರತ್ನ – ಚೂಡಾಮಣಿ
- ಚೂಡೋದಯ – ಚೂಡಾಕರಣ
- ಚೂತ – ಮಾವಿನ ಮರ
- ಚೂತತತಿ – ಮಾವಿನ ತೋಪು
- ಚೂತದ್ರುಮ – ಮಾವಿನ ಮರ
- ಚೂತನಂದನ – ಮಾವಿನ ತೋಪು
- ಚೂತವನ – ಮಾವಿನ ತೋಪು
- ಚೂತಾಂಕುರ – ಮಾವಿನ ಚಿಗುರು
- ಚೂತೋತ್ಕರ – ಚೂತನಂದನ
- ಚೂರ್ಣನೀಯ – ಪುಡಿಮಾಡಬಹುದಾದ
- ಚೂರ್ಣಯೋಗ – ಪುಡಿ ಎರಚಿ ಮಂಕುಗೊಳಿಸುವುದು
- ಚೂರ್ಣವಾಸ – ಸುವಾಸಿತ ಚೂರ್ಣ
- ಚೂರ್ಣಾಳಕ – ಮುಂಗುರುಳು
- ಚೂರ್ಮೊನೆ – ಹರಿತವಾದ ಅಲಗು
- ಚೂರ್ಮೊನೆಗೊಳ್ – ಹರಿತವಾದ ಅಲಗನ್ನು ಹೊಂದು
- ಚೂಲ – ಜುಟ್ಟು
- ಚೂಲಿ(ಳಿ)ಕೆ – ಆನೆಯ ಕಿವಿಯ ತಳ; ಪರ್ವತಶಿಖರ
- ಚೂಳಾಕರಣ – ಚೂಡಾಕರಣ
- ಚೂಳಾಕರ್ಮ – ಚೂಡಾಕರ್ಮ
- ಚೂಳಿಕಾವರ್ಧನ – ಸೀಮಂತ
- ಚೂಳಿಕೆ – ತುದಿ
- ಚೆಂಗದಿರ್ – ಕೆಂಪು ಬೆಳಕು
- ಚೆಂಗಯ್ – ಕೆಂಪಾದ ಅಂಗೈ
- ಚೆಂಗಲವೆ – ಕೆಂದಾವರೆ
- ಚೆಂಗಾರೆ – ಕೆಂಪು ಕಾರೆ ಹಣ್ಣು
- ಚೆಂಗೊರಲ್ – ಕೆಂಪು ಕೊರಳು
- ಚೆಂಗೋಲ್ – ಕೆಂಪು ಬಾಣ
- ಚೆಂಚಿತಿ – ಬೇಡಿತಿ
- ಚೆಂಡಿಕೆ – ಜುಟ್ಟು
- ಚೆಂದಲ್ – ಕೆಂಪು ಅಕ್ಕಿಯ ಬತ್ತ
- ಚೆಂದಳಿರ್ – ಕೆಂಪಾದ ಚಿಗುರು
- ಚೆಂದಳಿರ್ದೊಂಗಲ್ – ಕೆಂಪು ಚಿಗುರಿನ ಗೊಂಚಲು
- ಚಿಂದಳಿರ್ವಾಸು – ಕೆಂಪು ಚಿಗುರಿನ ಹಾಸಿಗೆ
- ಚೆಂದೆಂಗು – ಕೆಂಪು ತೆಂಗು
- ಚೆಂಬರಿಗೆ – ಚೆನ್ನಾಗಿರುವ ಗುರಾಣಿ
- ಚೆಂಬಿಸಿಲ್ – ಕೆಂಪು ಬಣ್ಣದ ಬಿಸಿಲು
- ಚೆಂಬುಗೆಂಪು – ತಾಮ್ರದ ಬಣ್ಣ, ಕೆಂಪು
- ಚೆಂಬುಡಿ – ಕೆಂಪು ಪುಡಿ
- ಚೆಂಬೂ – ಕೆಂಪಾದ ಹೂ
- ಚೆಂಬೊಂಗಟ್ಟು – ತಾಮ್ರದ ಚೌಕಟ್ಟು
- ಚೆಂಬೊಂಗಳಸ – ತಾಮ್ರದ ಕಳಶ
- ಚೆಂಬೊಗರ್ – ಕೆಂಪು ಕಾಂತಿ
- ಚೆಂಬೊನ್ – ಚಿನ್ನ; ತಾಮ್ರ; ಚಿನ್ನದ ನಾಣ್ಯ
- ಚೆಕ್ಕನೆ – ಇದ್ದಕ್ಕಿದ್ದಂತೆ
- ಚೆಕ್ಕರಿಸು – ಕುರಿಯಂತೆ ಅರಚು
- ಚೆಚ್ಚರ – ಎಚ್ಚರಿಕೆ, ಜಾಗರೂಕತೆ
- ಚೆಚ್ಚರಂ – ಥಟ್ಟನೆ
- ಚೆಚ್ಚರಿಕೆ – ಚಳಕ
- ಚೆಚ್ಚರಿಸು – ಚಾಕಚಕ್ಯತೆಯಿಂದ ಕೂಡು
- ಚೆನ್ನ – ಶೂರ
- ಚೆನ್ನಗಂಡ – ಚೆಲುವನಾದ ವೀರ
- ಚೆನ್ನನೆ – ಚೆನ್ನಾಗಿ
- ಚೆನ್ನಪೂ – ಸುಂದರವಾದ ಹೂ
- ಚೆನ್ನಪೊಂಗ – ಚೆನ್ನಗಂಡ
- ಚೆನ್ನಭಾಷಿತ – ಒಳ್ಳೆಯ ಮಾತು
- ಚೆನ್ನಿಗ – ಚೆಲುವ
- ಚೆನ್ನಿಗತನ – ಚೆಲುವು
- ಚೆನ್ನೀರ್ – ಕೆಂಪು ನೀರು, ರಕ್ತ
- ಚೆನ್ನುವಡೆ – ಚೆಲುವಾಗು
- ಚೆನ್ನೆ – ಸುಂದರಿ
- ಚೆನ್ನೈದಿಲ್ – ಕೆಂಪು ನೈದಿಲೆ
- ಚೆನ್ನೈದಿಲ್ಗೊಳ – ಕೆಂಪು ನೈದಿಲೆಯ ಕೊಳ
- ಚೆಮ್ಮೂಗು – (ಗಿಣಿಯ) ಕೆಂಪು ಮೂಗು
- ಚೆಯ್ಗುಡು – ಮುದ್ದಾಡು
- ಚೆಲಂಕು – ಈಡಾಡು, ಚೆಲ್ಲು
- ಚೆಲ್ಲ – ಸರಸ
- ಚೆಲ್ಲಂಬೀ¾ು – ವಿಲಾಸ ತೋರು
- ಚೆಲ್ಲಂಬೆರಸು – ಚೆಲ್ಲಾಟದಿಂದ ಕೂಡು
- ಚೆಲ್ಲ – ಸರಸ, ವಿನೋದ
- ಚೆಲ್ಲಗಣ್ಬೊಣರ್ – ಚೆಲ್ಲಗಣ್+ಪೊಡರ್,
- ವಿಲಾಸಯುಕ್ತ ಕಣ್ಣುಗಳ ಜೋಡಿ
- ಚೆಲ್ಲೆಗಣ್ – ಅಗಲವಾದ ಕಣ್ಣು
- ಚೆಲ್ವ – ಚೆಲುವ
- ಚೆಲ್ವಿಕೆ – ಚೆಲುವು
- ಚೆಲ್ವಿಡಿ – ಚೆಲುವಿನಂದ ಕೂಡಿರು
- ಚೆಲ್ವು – ಚೆಲುವು
- ಚೆಲ್ವುವರಿ – ಚೆಲುವನ್ನು ಪಸರಿಸು; ಚೆನ್ನಾಗಿ ಸಾಗು
- ಚೆಲ್ವೆ – ಚೆಲುವೆ
- ಚೆಲ್ವೆಸೆ – ಚೆಲುವಾಗಿ ಶೋಭಿಸು
- ಚೆಲ್ವೊಡರಿಸು – ಚೆಲುವುಂಟುಮಾಡು
- ಚೆಲ್ವೊರೆ – ಚೆಲುವಿನಿಂದ ತುಂಬು
- ಚೆಲ್ವೋಡು – ಅಂದಗೆಡು
- ಚೇಟಿ(ಕೆ) – ದಾಸಿ
- ಚೇಣ – ಕಲ್ಲು ಒಡೆಯುವ ಉಳಿ
- ಚೇತ – ಚೇತನ, ಮನಸ್ಸು
- ಚೇತಃಪದ್ಮ – ಹೃದಯಕಮಲ
- ಚೇತನಭಾವ – ಚೈತನ್ಯವಿರುವ ಅನುಭವ
- ಚೇತನಾಚೇತನ – ಚೇತನವಿರುವ ಮತ್ತು ಇಲ್ಲದಿರುವ
- ಚೇತನವಡೆ – ಚೇತರಿಸಿಕೊ
- ಚೇತರಣೆ – ಚೈತನ್ಯ
- ಚೇತರಿಸು – ಚತನ್ಯವನ್ನು ಹೊಂದು
- ಚೇತೋಜಾತ – ಮನ್ಮಥ; ಪ್ರದ್ಯುಮ್ನ
- ಚೇತೋನಂದನ – ಚೇತನಕ್ಕೆ ಆನಂದದಾಯಕವಾದ
- ಚೇತೋವೃತ್ತಿ – ಮನೋವ್ಯಾಪಾರ
- ಚೇತೋಹಾರಿ – ಮನಸ್ಸನ್ನು ಆಕರ್ಷಿಸುವ
- ಚೇರ – ಒಂದು ದೇಶ, ಕೇರಳ
- ಚೇಲ – ಬಟ್ಟೆ
- ಚೇಲಾಂಚಲ – ಬಟ್ಟೆಯ ಅಂಚು
- ಚೇಷ್ಟಿತ – ಮಾಡಲ್ಪಟ್ಟ
- ಚೇಷ್ಟೆ – ಚಲನೆ
- ಚೇಷ್ಟೆಗೆಡು – ಚಲನೆ ಇಲ್ಲವಾಗು
- ಚೈತನ್ಯ – ಜೀವ, ಚೇತರಿಕೆ
- ಚೈತಾಗ್ನಿ – ಚಿತೆಯ ಬೆಂಕಿ
- ಚೈತ್ರ – ಚಾಂದ್ರಮಾನ ವರ್ಷದ ಮೊದಲ ತಿಂಗಳು
- ಚೈತ್ರದೂತಿ – ಮಾವು
- ಚೈತ್ರಮಿತ್ರ – ವಸಂತನ ಗೆಳೆಯ, ಮನ್ಮಥ
- ಚೈತ್ರರಥ – ಕುಬೇರನ ಉದ್ಯಾನ
- ಚೈತ್ರಾನಿಲ – ಚೈತ್ರಮಾಸದ ಗಾಳಿ
- ಚೈತ್ಯ – ಜೈನ ಅಥವಾ ಬೌದ್ಧ ದೇವಾಲಯ
- ಚೈತ್ಯಕ್ಷಿತಿಜಾತ – ಅರಳಿಮರ
- ಚೈತ್ಯಗೃಹ – ಬಸದಿ
- ಚೈತ್ಯಗೇಹ – ಚೈತ್ಯಾಗೃಹ
- ಚೈತ್ಯಭವ – ಬಸದಿಯಲ್ಲಿ ಉಂಟಾದ
- ಚೈತ್ಯರಾಜಿ – ಬಸದಿಗಳ ಗುಂಪು
- ಚೈತ್ಯವೃಕ್ಷ – ಅರಳಿಮರ
- ಚೈತ್ಯಾಲ(ಳ)ಯ – ಚೈತ್ಯಗೃಹ
- ಚೈತ್ಯಾವಸಥ – ಬಸದಿ
- ಚೈತ್ಯಾವಾಸ – ಬಸದಿ
- ಚೈತ್ಯಾಳಿ – ಬಸದಿಗಳ ಗುಂಪು
- ಚೈರಂತನ – ಚಿರಂತನವಾದ, ಸನಾತನ
- ಚೈರಂತನಕ್ರಮ – ಸನಾತನಕ್ರಮ
- ಚೊಕ್ಕ – ಅಂದವಾದ; ಅಪ್ಪಟವಾದ
- ಚೊಕ್ಕದಂಬುಲ – ಒಳ್ಳೆಯ ತಾಂಬೂಲ
- ಚೊಕ್ಕಳತನ – ಅಚ್ಚುಕಟ್ಟುತನ
- ಚೊಕ್ಕಳಿಕೆ – ಅಚ್ಚುಕಟ್ಟು
- ಚೊಕ್ಕೆಯ – ಮಲ್ಲಯುದ್ಧದ ಒಂದು ವರಸೆ; ಉಪಾಯ
- ಚೊಚ್ಚಲ್ – ಮೊದಲನೆಯ
- ಚೊಲ್ಲೆಯ – ತುರುಬಿನ ಕೊನೆ; ಹೂವಿನ ದಂಡೆ; ಕುಪ್ಪಸ
- ಚೋಚ – ತೆಂಗು
- ಚೋಜಿಗ – ಸೋಜಿಗ
- ಚೋದಿಸು – ರಥ ಮುಂತಾದವನ್ನು ನಡೆಸು
- ಚೋದ್ಯ – ಆಶ್ಚರ್ಯ
- ಚೋದ್ಯಂಬಡು – ಸೋಜಿಗಗೊಳ್ಳು
- ಚೋದ್ಯಾವಹ – ಆಶ್ಚರ್ಯಕರವಾದ
- ಚೌಕ – ಚತುಷ್ಕೋನಾಕಾರ
- ಚೌಕಿ(ಗೆ) – ಮನೆಯ ಅಂಗಳ, ತೊಟ್ಟಿ
- ಚೌಜಂತ – ನಾಲ್ಕು ದಂತಗಳುಳ್ಳುದು, ಐರಾವತ
- ಚೌತ – (ಚತುರಸ್ರ) ನಿಶ್ಚಿತ
- ಚೌಪಳಿಗೆ – ಮಂಟಪ; ಹಜಾರ
- ಚೌಲ – ಚೂಡಾಕರ್ಮ
- ಚೌವಟಮಲ್ಲ – ಮಹಾ ಪರಾಕ್ರಮಿ
- ಚೌವಟ್ಟ – ಬೀದಿಯ ಚೌಕ
- ಚೌವೇದಿ – ಚತುರ್ವೇದಿ
- ಚ್ಯುತ – ಕೆಳಗೆ ಬಿದ್ದ
- ಚ್ಯುತಿ – ಬೀಳುವುದು; ನಾ±
Conclusion:
ಕನ್ನಡ ಚ ಅಕ್ಷರದ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.