ಕನ್ನಡ ಛ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada chha aksharada halegannadada padagalu , ಕನ್ನಡ ಛ ಅಕ್ಷರದ ಹಳೆಗನ್ನಡ ಪದಗಳು (chhA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಛ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( chhA halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಛ ಅಕ್ಷರ ಎಂದರೇನು?
ಛ, ಕನ್ನಡ ವರ್ಣಮಾಲೆಯ ಚ-ವರ್ಗದ ಎರಡನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಅಘೋಷ ತಾಲವ್ಯ ಸ್ಪರ್ಶ ಮಹಾಪ್ರಾಣ ಧ್ವನಿಯನ್ನುಳ್ಳುದ್ದು.
ಒಂದು ವೃತ್ತವನ್ನು ಒಂದು ಲಂಬರೇಖೆಯಿಂದ ಅರ್ಧ ಮಾಡಿದಂತೆ ಕಾಣುವ ರೂಪವೇ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಸಿಗುತ್ತದೆ. ಶಾತವಾಹನರ ಕಾಲದಲ್ಲಿ ಈ ಎರಡು ಅರ್ಧವೃತ್ತಗಳು ಸಣ್ಣ ಎರಡು ವೃತ್ತಗಳಾಗಿ ಪರಿವರ್ತನೆ ಹೊಂದುತ್ತವೆ. ವಿಶೇಷ ಬದಲಾವಣೆಗಳಿಲ್ಲದೆ ಇದೇ ರೂಪವೇ ಸುಮಾರು ಕ್ರಿ.ಶ. ಎಂಟನೆಯ ಶತಮಾನದವರೆಗೆ ಮುಂದುವರಿಯುತ್ತದೆ. ಆದರೆ ಒಂಬತ್ತನೆಯ ಶತಮಾನದ ಸಮಯಕ್ಕೆ ಅಕ್ಷರದ ಉದ್ದ ಕಡಿಮೆಯಾಗಿ, ಅಗಲ ಹೆಚ್ಚಾಗುತ್ತದೆ. ಹನ್ನೊಂದನೆಯ ಶತಮಾನದ ಕಲ್ಯಾಣದ ಚಾಳುಕ್ಯರ ಶಾಸನಗಳಲ್ಲಿ ವಿಶೇಷ ಬದಲಾವಣೆಗಳನ್ನು ಕಾಣಬಹುದು. ವೃತ್ತಗಳು ಮಾಯವಾಗಿ ಅಕ್ಷರ ಸ್ಫುಟಗೊಂಡು ಈಗಿರುವ ರೂಪಕ್ಕೆ ಅತಿ ಸಮೀಪವಾಗಿ ತೋರುತ್ತದೆ. ಇದೇ ರೂಪವೇ ಹದಿನೆಂಟನೆಯ ಶತಮಾನದವರೆಗೆ ಮುಂದುವರಿಯುತ್ತದೆ. ವಕಾರಕ್ಕೂ ಈ ಅಕ್ಷರಕ್ಕೂ ವ್ಯತ್ಯಾಸ ಕಾಣಿಸಲು ಇದರ ಹೊಕ್ಕಳು ಸೀಳಿರಬೇಕು. ಅಂತೂ ಇದು ಇತ್ತೀಚಿನ ಬದಲಾವಣೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಛ ಅಕ್ಷರದ ಹಳೆಗನ್ನಡ ಪದಗಳು – Kannada Words
- ಛಂದ – ಸುಂದರವಾದುದು
- ಛಂದೋವಿದ್ಯೆ – ಛಂದಶ್ಶಾಸ್ತ್ರ
- ಛಟಾ – ಸಮೂಹ
- ಛಟೆ – ಕಾಂತಿ
- ಛಟ್ಟ – ಚಾಂದ್ರಮಾನದ ಪ್ರಕಾರ ಷಷ್ಠಿ ತಿಥಿ
- ಛತ್ರಪ್ರಸರ – ರಾಜಛತ್ರಿಗಳ ಸಮೂಹ
- ಛತ್ರರತ್ನ – (ಜೈನ) ಚಕ್ರವರ್ತಿಗೆ ತಾನಾಗಿ
- ದೊರಕುವ ಏಳು ರತ್ನಗಳಲ್ಲಿ ಒಂದು
- ಛತ್ರಾಕಾರ – ಗುಂಡನೆಯ ಅಕಾರ
- ಛದ(ನ) – ಮುಸುಕು; ಹೊದಿಕೆ
- ಛದ್ಮಬಾಲಿಶ – ಮಾರುವೇಷ ಹಾಕಿಕೊಂಡು ಆಟ ಆಡುವವನು
- ಛದ್ಮಸ್ಥ – ಮರೆಮಾಚಿಕೊಂಡಿರುವವನು; (ಜೈನ) ಕೇವಲಜ್ಞಾನಕ್ಕೆ ಹಿಂದಿನ ಅವಸ್ಥೆಯಲ್ಲಿರುವವನು
- ಛದ್ಮಸ್ಥಕಾಲ – (ಜೈನ) ಛದ್ಮಸ್ಥ ಅವಸ್ಥೆಯಲ್ಲಿರುವವನು
- ಛನ್ನ – ಆವರಿಸಿದ
- ಛಪ್ಪಿಸು – ಆಕ್ರಮಣ ಮಾಡು
- ಛಮ್ – ಒಂದು ಅನುಕರಣ ಶಬ್ದ
- ಛರ್ದಿ – ವಾಂತಿಮಾಡಿಕೊಳ್ಳುವುದು
- ಛರ್ದಿಗೆಯ್ – ವಾಂತಿಮಾಡಿಕೊ
- ಛರ್ದಿಸು – ಛರ್ದಿಗೆಯ್
- ಛಲ(ಳ) – ನೆಪ
- ಛವಿ – ಕಾಂತಿ
- ಛಾಂದಸ – ವೇದಾಧ್ಯಯನ ಪ್ರವೀಣ
- ಛಾಂದಸಿಕ್ಕೆ – ದಡ್ಡತನ
- ಛಾಂದಸಿಗ – ಛಾಂದಸ
- ಛಾಗಲ – ಹೋತ
- ಛಾತ್ರ – ವಿದ್ಯಾರ್ಥಿ
- ಛಾದ್ಯ – ಮರೆಮಾಡುವ; ಮೇಲ್ಕಟ್ಟು, ವಿತಾನ
- ಛಾಯಾಗ್ರಹಣಂಗೆಯ್ – ವ್ಯಕ್ತಿಯ ಚಲನವಲನವನ್ನು ನಿರೋಧಿಸಲು ಅವನ ನೆರಳನ್ನು ತಡೆಹಿಡಿ
- ಛಾಯಾಲಕ್ಷ್ಯ – ಪ್ರತಿಬಿಂಬವನ್ನು ನೋಡಿ ಹೊಡೆಯಬಾಕಾದ ಗುರಿ
- ಛಿಂದಕ – ಅಮರದವಳ್ಳಿ
- ಛಿಮರ – ಛಿದ್ರಗೊಳ್ಳುವ
- ಛಿದ್ರಕದ್ವಾರ – ನೀರು ಹೋಗಲು ಮಾಡಿರುವ ತೂತು
- ಛಿದ್ರನಿವಾಸ – ಬಿಲದಲ್ಲಿ ವಾಸಿಸುವ, ಹಾವು
- ಛಿದ್ರಾನ್ವೇಷಿ – ರಂಧ್ರವನ್ನು ಹುಡುಕುವವನು;
- ಇತರರಲ್ಲಿ ತಪ್ಪನ್ನೇ ಹುಡುಕುವವನು
- ಛಿದ್ರಿಸು – ಭೇದಿಸು, ನಾಶಮಡು
- ಛುರಣ – ಹರಡುವಿಕೆ
- ಛುರಿಕೆ – ಸುರಿಗೆ
- ಛುರಿದ – ಬೆರೆತುಕೊಂಡಿರುವ
- ಛೇದ – ಕತ್ತರಿಸುವುದು; ತುಂಡು
- ಛೇದಿಸು – ಕತ್ತರಿಸು
Conclusion:
ಕನ್ನಡ ಛ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.