ಕನ್ನಡ ರ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada Ra aksharada halegannadada padagalu , ಕನ್ನಡ ರ ಅಕ್ಷರದ ಹಳೆಗನ್ನಡ ಪದಗಳು (RA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ರ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( RA halegannada Words in kannada ) ತಿಳಿದುಕೊಳ್ಳೋಣ.
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ
ಕನ್ನಡ ರ ಅಕ್ಷರ ಎಂದರೇನು?
ಕನ್ನಡ ವರ್ಣಮಾಲೆಯಲ್ಲಿ ರ, ಕನ್ನಡ ವರ್ಣಮಾಲೆಯ ಎರಡನೇ ಅವರ್ಗೀಯ ವ್ಯಂಜನವಾಗಿದೆ. ರೇಫ. ವರ್ತ್ಸ್ಯ (ದಂತ್ಯ) ಕಂಪಿನ ಘೋಷ ಧ್ವನಿ.
ಈ ಅಕ್ಷರ ಅಶೋಕನ ಬ್ರಾಹ್ಮೀಲಿಪಿಯಲ್ಲಿ ಒಂದು ಡೊಂಕಾದ ಗೆರೆಯನ್ನುಳ್ಳದ್ದಾಗಿದೆ. ಸಾತವಾಹನ ಕಾಲದಲ್ಲಿ ಸ್ವಲ್ಪ ದಪ್ಪವಾಗಿಯೂ ಕೆಳಭಾಗದಲ್ಲಿ ಎಡಭಾಗಕ್ಕೆ ಬಗ್ಗಿಕೊಂಡು ಪರಿವರ್ತಿತವಾಗಿದೆ. ಕದಂಬರ ಕಾಲದಲ್ಲಿ ಚೌಕತಲೆಯ ಜೊತೆಗೆ ಕೆಳಗಿನ ಬಗ್ಗಿದ ರೇಖೆಯು ಮೇಲೆ ಬರುವ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತದೆ.
ಬಾದಾಮಿಯ ಚಾಳುಕ್ಯರ ಕಾಲದಲ್ಲಿ ಸ್ಪಷ್ಟವಾಗಿ ತಲೆಕಟ್ಟು ಕಂಡುಬಂದು ಕೆಳಗಿನ ರೇಖೆಯ ತಲೆಕಟ್ಟಿನ ಸಮೀಪವಾಗಿ ಬರುವುದನ್ನು ಗಮನಿಸುತ್ತೇವೆ. ರಾಷ್ಟ್ರಕೂಟರ ಕಾಲದಲ್ಲಿ ಈ ರೇಖೆಯು ತಲೆಕಟ್ಟನ್ನು ಸೇರಿ ಈಗಿನ ‘ಈ’ ಅಕ್ಷರದ ಸ್ವರೂಪಕ್ಕೆ ಅತಿ ಸಮೀಪವಾಗಿ ಕಾಣಬರುತ್ತದೆ.
ಹೊಯ್ಸಳ ಮತ್ತು ಅವರ ಸಮಕಾಲೀನರ ಕಾಲಗಳಲ್ಲಿ ವೃತ್ತ ಸ್ವಲ್ಪ ಉದ್ದವಾಗಿ ಬದಲಾವಣೆ ಹೊಂದೆ ತಲೆ ಕಟ್ಟು ಅಕ್ಷರಕ್ಕೆ ಸೇರಿದಂತೆ ಸ್ಥಿರವಾಗಿ ಉಳಿಯುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ರ ಅಕ್ಷರದ ಹಳೆಗನ್ನಡ ಪದಗಳು – Kannada Words
- ರಂಕು – ಮಚ್ಚೆಗಳಿರುವ ಜಿಂಕೆ
- ರಂಗ – ಬಣ್ಣದ ಚಿತ್ರ; ವೇದಿಕೆ
- ರಂಗಂಬೊಗು – ಪ್ರದರ್ಶನ ನೀಡಲು ವೇದಿಕೆಯನ್ನು ಪ್ರವೇಶಿಸು
- ರಂಗತ್ – ಚಲಿಸುತ್ತಿರುವ
- ರಂಗಭೂಮಿ(ಕೆ) – ರಂಗಸ್ಥಳ; ಸಭಾಮಂಟಪ;ವೇದಿಕೆ
- ರಂಗವಲಿ(ಲ್ಲಿ) – ರಂಗೋಲಿ
- ರಂಜಿಸು – ಪ್ರಕಾಶಿಸು; ಶೋಭಿಸು; ಉದ್ರೇಕಗೊಳಿಸು; ಸಂತಸಪಡಿಸು
- ರಂಡೆ – ವಿಧವೆ
- ರಂಡೆತನ – ವೈಧವ್ಯ
- ರಂಭಾಸ್ತಂಭ – ಬಾಳೆಗಿಡದ ಕಾಂಡ
- ರಂಭೆ – ಬಾಳೆ ಗಿಡ; ಒಬ್ಬ ಅಪ್ಸರೆ
- ರಂಭೋರು – ಬಾಳೆಯ ದಿಂಡಿನಂತಹ ತೊಡೆ
- ರಕ್ಕಸಪಾರ್ವ – ಬ್ರಹ್ಮರಾಕ್ಷಸ
- ರಕ್ಕಸವಡೆ – ರಕ್ಕಸ+ಪಡೆ, ರಾಕ್ಷಸ ಸೈನ್ಯ
- ರಕ್ಕಸಿ – ರಾಕ್ಸಿ; ಕ್ರೂರ ಹೆಂಗಸು
- ರಕ್ಕೆ (ರಕ್ಷೆ) ಭಯನಿವಾರಣೆಯ ಯಂತ್ರರಕ್ಕೆವಣಿ – ಕ್ಷೇಮಕ್ಕಾಗಿ ಕಟ್ಟುವ ಮಣಿ
- ರಕ್ಕೆವೊಟ್ಟು – ದೃಷ್ಟಿಬೊಟ್ಟು
- ರಕ್ತ – ಕೆಂಪಾದ; ನೆತ್ತರು; ಅನುರಾಗವುಳ್ಳವನು
- ರಕ್ತಕಂಬಲ(ಳ) – ಕೆಂಪು ಕಂಬಳಿ
- ರಕ್ತಚಂಚು – ಕೆಂಬಣ್ಣದ ಕೊಕ್ಕು
- ರಕ್ತತುಡ – ರಕ್ತಚಂಚು
- ರಕ್ತಪ್ರಸೂನ – ಕೆಂಪು ಹೂ
- ರಕ್ತಸೇಕ – ರಕ್ತ ಸುರಿಯುವುದು
- ರಕ್ತಾಂಬು – ಕೆಂಪು ನೀರು; ನೆತ್ತರು
- ರಕ್ತಾಶೋಕ – ಕೆಂಪು ಅಶೋಕವೃಕ್ಷ
- ರಕ್ಷಾಮಣಿ – ಕಾಪಾಡುವ ವ್ಯಕ್ತಿ
- ರಕ್ಷಾಮರಿ – ರಕ್ಷಾ+ಅಮರಿ, ರಕ್ಷಿಸುವ ದೇವತೆ
- ರಜ – ಧೂಳು; ಹೂವಿನ ಪರಾಗ; ಕತ್ತಲೆ; ರಜೋ ಗುಣ
- ರಜಂಬೊರೆ – ಧೂಲಿನಿಂದ ಕೂಡಿರು; ಪರಾಗವನ್ನು ಹೊಂದಿರು; ರಜೋಗುಣವನ್ನು ಉ<ಟುಮಾಡು
- ರಜಕ – ಅಗಸ
- ರಜತ – ಬೆಳ್ಳಿ; ಬೆಳ್ಳಗಿರುವ
- ರಜತಗಿರಿ – ಬೆಳ್ಳಿಯ ಬೆಟ್ಟ
- ರಜನಿ – ರಾತ್ರಿ; ಅರಿಸಿನ
- ರಜನೀಕರ – ಚಂದ್ರ
- ರಜನೀರಜ – ಅರಿಸಿನ ಪುಡಿ
- ರಜನೀವಲ್ಲಭ – ಚಂದ್ರ
- ರಜಸ್ವರ – ಪರಾಗ
- ರಜಸ್ವಲೆ – ಮುಟ್ಟಾದ ಹೆಂಗಸು
- ರಜೋವಿಕೃತಿ – ಧೂಳು ಏಳುವುದು; ರಜೋಗುಣ ಹೆಚ್ಚುವುದು; ಮುಟ್ಟಾಗುವುದು
- ರಜ್ಜು – ಹಗ್ಗ; (ಜೈನ) ಒಂದು ಉದ್ದಳತೆ; ಎಂಟು ಹಸ್ತಗಳು
- ರಟತ್ – ಧ್ವನಿ ಮಾಡುವ
- ರಟನ – ಧ್ವನಿ; ಅಬ್ಬರ
- ರಣ – ಯುದ್ಧ
- ರಣಕರ್ಕಶ – ಯುದ್ಧದಲ್ಲಿ ಗೆಲ್ಲಲು ಕಷ್ಟಕರನಾದವನು
- ಯುದ್ಧದಲ್ಲಿ ಆಗುವ ಕತ್ತಲೆ
- ರಣದೀಕ್ಷಿತ – ಯುದ್ಧಮಾಡಲು ನಿರ್ಧರಿಸಿದವನು
- ರಣದೋಹಳ – ಯುದ್ಧಾಕಾಂಕ್ಷೆ
- ರಣಪಟಹ – ಯುದ್ಧಭೇರಿ
- ರಣಬಾಲಕ – ಅನನುಭವಿ ಯೋಧ
- ರಣಮಂಡಲ – ಯುದ್ಧರಂಗ; ಯುದ್ಧ ತರಬೇತಿ ಮೈದಾನ
- ರಣಮರಣ – ಯುದ್ಧದಲ್ಲಿ ಪಡೆಯುವ ಸಾವು
- ರಣರಣಕ – ಉದ್ವೇಗ
- ರಣರಭಸ – ಯುದ್ಧಾವೇಶ
- ರಣರಸಿಕ – ಯುದ್ಧದಲ್ಲಿ ಆಸಕ್ತನಾದವನು
- ರಣರಾಗ – ಯುದ್ಧ ಮಾಡುವ ಆಸೆ
- ರಣರಾಮ – ಯುದ್ಧಮಾಡುವುದರಲ್ಲಿ ಸಂತಸ ಪಡೆಯುವವನು
- ರಣಲಂಪಟ – ಅತಿ ಯುದ್ಧಾಸಕ್ತ
- ರಣವಸುಧೆ – ಯುದ್ಧಭೂಮಿ
- ರಣವ್ಯಸನಿ – ರಣಲಂಪಟ
- ರಣವ್ರಣಿತ – ಯುದ್ಧದ ಗಾಯಗಳು ತುಂಬಿದ
- ರಣಸ್ಥಾನ – ಯುದ್ಧರಂಗ
- ರಣಾಂಗಣ – ರಣಸ್ಥಾನ
- ರಣಾಗ್ರ – ಮುಂಚೂಣಿ
- ರಣಾಜಿರ – ರಣಸ್ಥಾನ
- ರಣಾನಕ – ಯುದ್ಧಭೇರಿ
- ರಣಾನುರಾಗ – ಯುದ್ಧದಲ್ಲಿ ಆಸಕ್ತಿ
- ರಣಾವನಿ – ಯದ್ಧಭೂಮಿ
- ರಣಿತ – ಸದ್ದು; ಸದ್ದುಮಾಡುವ
- ರಣೋರ್ವಿ – ಯುದ್ಧಭೂಮಿ
- ರತ – ಮಗ್ನ; ತತ್ಪರ
- ರತ(ತಿ)ಕೇಳಿ – ಸಂಭೋಗ
- ರತ(ತಿ)ಕ್ರೀಡೆ – ರತಕೇಳಿ
- ರತಖಿನ್ನ – ಸಂಭೋಗದಿಂದಾಗಿ ಆಯಾಸಗೊಂಡ
- ರತದೀಪಿಕೆ – ಸಂಭೋಗಾಲದಲ್ಲಿ ಹತ್ತಿಸಿಟ್ಟ ದೀಪ
- ರತಾಂತ – ಸಂಭೋಗದ ಮುಗಿವು
- ರತಾರ್ತ – ರತಿಕ್ರೀಡೆಗಾಗಿ ಹಂಬಲಿಸುವವನು
- ರತಿಕಾಂತ – ರತಿಯ ಗಂಡ, ಮನ್ಮಥ
- ರತಿಗೇಹ – ಸೂಳೆಯ ಮನೆ
- ರತಿರಮ – ರತಿಕಾಂತ
- ರತಿರಾಗ – ಕಾಮಾಸಕ್ತಿ
- ರತಿಶ್ರಾಂತಿ – ಸಂಭೋಗದಿಂದಾಗುವ ಆಯಾಸ
- ರತುನ – (ರತ್ನ) ಬೆಲೆಬಾಳುವ ಹರಳು
- ರತೋತ್ಕಂಠೆ – ಸಂಭೋಗಾತುರೆ
- ರತೋತ್ಸವ – ರತ+ಉತ್ಸವ, ಸಂಭೋಗದ ಸಂಭ್ರಮ
- ರತ್ನಕಂ(ಗಂ)ಬಲ(ಳ)(ಳಿ) – ಅಮೂಲ್ಯವಾದ ಕಂಬಳಿ
- ರತ್ನಕುಂಡಲ – ರತ್ಗಳಿಂದ ಮಾಡಿದ ಕಿವಿಯ ಆಭರಣ
- ರತ್ನತ್ರಯ – (ಜೈನ) ಮೋಕ್ಷಸಾಧನಗಳಾದ ಸಮ್ಯಕ್ದರ್ಶನ, ಸಮ್ಯಕ್ಜ್ಞಾನ, ಸಮ್ಯಕ್ಚಾರಿತ್ರಗಳು; ಪಂಪ ಪೊನ್ನ ರನ್ನ ಎಂಬ ಮೂವರು ಕವಿಗಳು
- ರತ್ನಪರೀಕ್ಷಕ – ರತ್ನಗಳ ಮೌಲ್ಯನಿರ್ಧಾರಕ
- ರತ್ನಪರೀಕ್ಷೆ – ರತ್ನಗಳ ಮೌಲ್ಯಮಾಪನ, ಚೌಷಷ್ಠಿಕಲೆಗಳಲ್ಲಿ ಒಂದು
- ರತ್ನಪ್ರಭೆ – (ಜೈನ) ಒಂದು ನರಕ
- ರತ್ನಮುದ್ರಿಕೆ – ರತ್ನಖಚಿತವಾದ ಉಂಗುರ
- ರತ್ನಂಗುಳೀಯ – ರತ್ನಮುದ್ರಿಕೆ
- ರತ್ನಾಕರ – ಸಮುದ್ರ
- ರತ್ನಾತಪ – ರತ್ನ+ಆತಪ, ರತ್ನದ ಕಾಂತಿ
- ರತ್ನಾಭೋಗ – ರತ್ನದ ಆಭರಣ
- ರತ್ನಾವಳಿ(ತಪ) – (ಜೈನ) ಒಂದು ವ್ರತ
- ರತ್ನಿ – ಒಂದು ಅಳತೆ
- ರಥ – ತೇರು; ಚತುರಂಗಸೈನ್ಯದಲ್ಲಿ ಒಂದು
- ರಥಂತರ – ವೇದದಲ್ಲಿನ ಶಿವಸ್ತವನ ಮಂತ್ರ
- ರಥಕಲ್ಪ – ರಥಚಾಲನಾ ಕೌಶಲ; ರಥದ ಬಗೆಗಿನ ಶಾಸ್ತ್ರ;
- ರಥಚರಣ – ತೇರಿನ ಚಕ್ರ; ಚಕ್ರಾಯುಧ
- ರಥಚರಣಪಾಣಿ – ಚಕ್ರ ಹಿಡಿದವನು, ಕೃಷ್ಣ
- ರಥಚೋದಕ – ಸಾರಥಿ
- ರಥದಂ – ರಥದವನು
- ರಥವಾಜಿ – ರಥಕ್ಕೆ ಕಟ್ಟುವ ಕುದುರೆ
- ರಥಹಯ – ರಥವಾಜಿ
- ರಥಾಂಗ – ಚಕ್ರವಾಕ; ಚಕ್ರಾಯುಧ; ಬಂಡಿಯ ಗಾಲಿ; ಕುಂಬಾರನ ತಿಗುರಿ
- ರಥಾಂಗಧರ – ಚಕ್ರವನ್ನು ಧರಿಸಿದವನು, ವಿಷ್ಣು, ಕೃಷ್ಣ; (ಜೈನ) ವಾಸುದೇವ
- ರಥಾಂಗಪಾಣಿ – ರಥಾಂಗಧರ
- ರಥಾಂಗಯುಗ – ಚಕ್ರವಾಕ ದಂಪತಿ
- ರಥಾರೋಹಣ – ರಥಕಲ್ಪ
- ರಥಾವರ್ತ – (ಜೈನ) ವಿದ್ಯಾಧರರ ಜಿನಪೂಜೆ
- ರಥಿ(ಕ) – ರಥವನ್ನೇರಿದವನು; ರಥದಲ್ಲಿದ್ದು ಯುದ್ಧಮಾಡುವವನು
- ರಥಿಕಾಧಿಪತಿ – ರಥಸೈನ್ಯದ ನಾಯಕ
- ರಥಿನೀ – ರಥಸಮೂಹ; ಸೈನ್ಯ
- ರಥ್ಯೆ – ರಾಜಬೀದಿ
- ರದ(ನ) – ಸೀಳುವಿಕೆ; ಹಲ್ಲು; ಆನೆಯ ದಂತ
- ರದನಿ – ದಂತಗಳುಳ್ಳುದು, ಆನೆ
- ರನ್ನವಚ್ಚ – ರತ್ನಾಭರಣ
- ರನ್ನವಟ್ಟಿಗೆ – (ರತ್ನಪಟ್ಟಿಕಾ) ರತ್ನದ ಡಾಬು
- ರನ್ನವಟ್ಟೆ – ರನ್ನವಟ್ಟಿಗೆ
- ರನ್ನವಸರ – ರತ್ನಗಳ ಅಂಗಡಿ
- ರಪ(ವ)ಣ – ಐಶ್ವರ್ಯ; ಜೂಜಿನ ಒತ್ತೆಯ ಹಣ
- ರಮ(ಣ) – ಪ್ರಿಯಕರ
- ರಮಣೀಯ – ಸಂತಸವುಂಟುಮಾಡುವ
- ರಮಿ(ಯಿ)ಸು – ಕ್ರೀಡಿಸು
- ರಯ – ವೇಗ
- ರಯಪತಿ – ಗಾಳಿಯ ಅಧಿದೇವತೆ, ವಾಯು
- ರಯ್ಯ – (ರಮ್ಯ) ಮನೋಹರ
- ರಯ್ಯನೆ – ರಭಸದಿಂದ
- ರಲ್ಲಕ – ಕಂಬಳಿ
- ರವ – ಶಬ್ದ
- ರವನ – ಘೋಷಣೆ
- ರವಳಿ – ವಾದ್ಯಘೋಷ; ವಾದ್ಯವಿಶೇಷ
- ರವಳಿಘೋಷಿಸು – ವಾದ್ಯದ ಧ್ವನಿ ಮಡಿ ಯುದ್ಧಾರಂಭಕ್ಕೆ ಸೂಚಿಸು
- ರವಿಕಾಂತೊಪಲ – ಸೂರ್ಯಕಾಂತಶಿಲೆ, ಬಿಸಿಲಿಗೆ ಕಿಡಿಸೂಸುವ ಶಿಲೆ
- ರವಿಮಂಡಲ – ಸೂರ್ಯಬಿಂಬ
- ರವಿಸುತ – ಕರ್ಣ
- ರವಿಸುತೆ – ಯಮುನೆ
- ರಶನ – ಡಾಬು
- ರಶ್ಮಿ – ಕಾಂತಿ
- ರಶ್ಮಿಕಲಾಪ – ಐವತ್ತನಾಲ್ಕು ಎಳೆಗಳ ಮುತ್ತಿನ ಹಾರ
- ರಸ – ವಿಷ; ಪಾದರಸ; ರುಚಿ
- ರಸಋದ್ಧಿ – (ಜೈನ) ತಪಸ್ಸಿನಿಮದ ಪಡೆಯುವ ಒಂದು ಬಗೆಯ ಸಿದ್ಧಿ
- ರಸಂಬೋಗು – ಒಣಗಿಹೋಗು
- ರಸಗೀತ – ಸಂತಸದಾಯಕವಾದ ಹಾಡು
- ರಸಗೇಯ – ರಸಗೀತ
- ರಸಚಿತ್ರ – ಸಸ್ಯಗಳ ರಸದಿಂದ ಬಣ್ಣ ಹಾಕಿದ ಚಿತ್ರ
- ರಸಜ್ಞ – ರಸಿಕ
- ರಸಜ್ಞಾನಿ – ಕೀಳುಲೋಹಗಳನ್ನು ಚಿನ್ನ ಮಾಡಬಲ್ಲವನು
- ರಸತ್ತಾರುಗ – ಆನೆಯ ಮೇಲೆ ಕುಳಿತು ಯುದ್ಧಮಾಡುವವನು
- ರಸದಾಡಿಮ – ರಸಭರಿತ ದಾಳಿಂಬೆಹಣ್ಣು
- ರಸದಾನ – ವಿಷ ಪ್ರಯೋಗ
- ರಸನ(ನೆ) – ಆಸ್ವಾದ; ನಾಲಗೆ
- ರಸನಾಂಚಲ – ನಾಲಗೆಯ ತುದಿ
- ರಸನಾಗ್ರ – ರಸನಾಂಚಲ
- ರಸನಾಲಂಪಟ – ನಾಲಗೆಯ ಚಾಪಲ್ಯವಿರುವವನು
- ರಸನೇಂದ್ರ – ಸರ್ಪರಾಜ
- ರಸನೇಂದ್ರಿಯ – ರಸನ(ನೆ)
- ರಸಪಂಚಕ – (ಜೈನ) ಸಿಹಿ, ಹುಳಿ, ಕಟು, ಕಷಾಯ, ತಿಕ್ತ ಎಂಬ ಐದು ರುಚಿಗಳು
- ರಸಪರಿತ್ಯಾಗ – (ಜೈನ) ಬಾಹ್ಯತಪಗಳಲ್ಲಿ ಒಂದು;
- ರುಚಿಕರವಾದುದನ್ನು ಸೇವಿಸದಿರುವುದು
- ರಸಭಾವ – ತೇವವಾಗಿರುವುದು; ಸಂತಸದಾಯಕ ಚಿತ್ತವೃತ್ತಿ
- ರಸಮಗ್ನ – ಆನಂದದಲ್ಲಿ ತಲ್ಲೀನನಾದವನು
- ರಸಮಾರ್ಗ – ನವರಸಗಳನ್ನು ನಿರೂಪಿಸುವ ಕ್ರಮ
- ರಸ ರಸಾಯನ – ರುಚಿಕರವಾದ ಆಹಾರ
- ರಸವದ್ಗೇಯ – ಸಂತಸದಾಯಕವಾದ ಸಂಗೀತ
- ರಸವಾದಕ – ರಸಜ್ಞಾನಿ
- ರಸವಾದಿ – ರಸಜ್ಞಾನಿ
- ರಸವೃತ್ತಿ – ನವರಸಗಳಿಂದ ಕೂಡಿದುದು
- ರಸಹೀನ – ಒಣಗಿದುದು
- ರಸಾ – ಪಾತಾಳ
- ರಸಾತಲ(ಳ) – ರಸಾ
- ರಸಾಯ – ಸಿಹಿನೀರನ್ನುಳ್ಳ
- ರಸಾಯನ – ರುಚಿಕರವಾದ, ಇಂಪಾದುದು
- ರಸಾರುಹ – ಮರ
- ರಸಾಲ(ಳ) – ರುಚಿಕರವಾದ; ಮಾವಿನ ಮರ
- ರಸಾಶ್ರಯ – ನೀರನ ಆಶ್ರಯತಾಣ; ರಸಜ್ಞ
- ರಸಿಕತೆ – ರಸಾನುಭವ ಹೊಂದಬಲ್ಲ ಸ್ವಭಾವ
- ರಸಿತ – ಧ್ವನಿ
- ರಸೆ – ಭೂಮಿ, ಪಾತಾಳ
- ರಹಘಟಿಕಾನ್ಯಾಯ -ಒಂದು ಲೌಕಿಕನ್ಯಾಯ, ರಾಟೆಗಡಿಗೆಗಳು ಒಂದನ್ನೊಂದು ಹಿಂಬಾಲಿಸುವ ಕ್ರಮ
- ರಹಟ – ನೀರೆತ್ತುವ ರಾಟೆ
- ರಹಘಟೀಯಂತ್ರ – ರಹಟ
- ರಹೋಭ್ಯಾಖ್ಯಾನ – (ಜೈನ) ಸತ್ಯಾಣುವ್ರತದ ಒಂದು ಅತಿಚಾರ, ಗಂಡಗೆಂಡಿರ ಗುಟ್ಟು ಬಯಲುಮಾಡುವುದು
- ರಾಕಾ – ಪೂರ್ಣ
- ರಾಕೇಂದು – ಪೂರ್ಣಚಂದ್ರ, ಹುಣ್ಣಿಮೆಯ ಚಂದ್ರ
- ರಾಗ – ಕೆಂಪುಬಣ್ಣ; ಪ್ರೀತಿ
- ರಾಗಂಗೆಡು – ಪ್ರೀತಿಯನ್ನು ಕಳೆದುಕೊ
- ರಾಗಂಬೊರೆ – ಬಣ್ಣದಿಂದ ಕೂಡು
- ರಾಗರಸ – ಪ್ರಣಯ
- ರಾಗಾಂಧತೆ – ಮೋಹದಿಂದ ಕುರುಡಾಗುವುದು
- ರಾಗಾಧರೆ – ಕೆಂಪಾದ ತುಟಿಯುಳ್ಳವಳು
- ರಾಗಾವಿಲ(ಳ) – ಮೋಹಕ್ಕೊಳಗಾದವನು
- ರಾಗಿ – ಅನುರಾಗವುಳ್ಳ ವ್ಯಕ್ತಿ
- ರಾಗಿಸು – ಪ್ರೀತಿಸು
- ರಾಜಕ – ರಾಜರ ಗುಂಪು
- ರಾಜಕಪೋತ – ಶ್ರೇಷ್ಠ ಜಾತಿಯ ಪಾರಿವಾಳ
- ರಾಜಕರ – ರಾಜನಿಗೆ ಕೊಡಬೇಕಾದ ತೆರಿಗೆ; ಚಂದ್ರಕಿರಣ
- ರಾಜಕೀರ(ಕ) – ಅರಗಿಳಿ
- ರಾಜಕುಂಜರ – ಉತ್ತಮವಾದ ಆನೆ
- ರಾಜಕುಮಾರ(ಕ) – ರಾಜನ ಮಗ
- ರಾಜಕೇತನ – ಅರಮನೆ
- ರಾಜಗೃ(ಗೇ)ಹ – ರಾಜಕೇತನ
- ರಾಜಚಿಹ್ನ(ಹ್ನೆ) – ಅರಸನ ಅಧಿಕಾರಲಾಂಛನ
- ರಾಜಜಂಬೂ – ಶ್ರೇಷ್ಠವಾದ ನೇರಿಳೆ
- ರಾಜತ್ – ಪ್ರಕಾಶಿಸುವ
- ರಾಜತ – ಬೆಳ್ಳಿಯಿಂದ ಮಾಡಿದ
- ರಾಜಧರ್ಮ – ಅರಸನ ಕರ್ತವ್ಯ
- ರಾಜನ್ಯ(ಕ) – ಕ್ಷತ್ರಿಯ; ರಾಜ; ರಾಜಸಮೂಹ
- ರಾಜನ್ವತಿ – ಒಳ್ಳೆಯ ರಾಜನಿರುವ ನಾಡು
- ರಾಜಪೂಜ್ಯ – ಚಂದ್ರನಿಂದ ಪೂಜೆಗೊಂಡವನು, ಗುರು
- ರಾಜಮಂಡಲ(ಳ) – ಚಂದ್ರಮಂಡಲ; ರಾಜರ ಸಮೂಹ
- ರಾಜಮಹಿಷಿ – ಪಟ್ಟದ ರಾಣಿ
- ರಾಜಮಾಷ – ಅಲಸಂದೆ
- ರಾಜಯಕ್ಷ್ಮಾ – ಕ್ಷಯರೋಗ
- ರಾಜರಾಜ – ಸಮ್ರಾಟ; ಚಂದ್ರ
- ರಾಜಲೀಲೆ – ಅರಸನ ವಿಲಾಸ
- ರಾಜವಂಶ – ಅರಸು ಮನೆತನ; ಶ್ರೇಷ್ಠ ಬಿದಿರು
- ರಾಜವತಿ – ನಾಮಮಾತ್ರ ರಾಜನಿರುವ ನಾಡು
- ರಾಜವೃತ್ತ – ರಾಜನ ನಡವಳಿಕೆ
- ರಾಜವೃಷಭ – ಶ್ರೇಷ್ಠ ರಾಜ
- ರಾಜಶುಕ – ಅರಗಿಳಿ
- ರಾಜಶೂನ್ಯ – ರಾಜನಿಲ್ಲದ ಸ್ಥಿತಿ; ಚಂದ್ರನಿಲ್ಲದ್ದು
- ರಾಜಸೂಯ – ಚಕ್ರಚರ್ತಿ ಮಾಡುವ ಒಂದು ಯಾಗ
- ರಾಜಹಂಸ – ಶ್ರೇಷ್ಠ ಹಂಸ; ರಾಜಶ್ರೇಷ್ಠ
- ರಾಜಹಂಸೆ(ಸಿ) – ಶ್ರೇಷ್ಠವಾದ ಹೆಣ್ಣು ಹಂಸ
- ರಾಜಾಂಗಣ – ಅರಮೆನಯ ಅಂಗಳ
- ರಾಜಾಂತರ – ಒಬ್ಬ ರಾಜನಿಂದ ಇನ್ನೊಬ್ಬ ರಾಜನ ಬಳಿಗೆ ಹೋಗುವುದು
- ರಾಜಾಧಿರಾಜ – ಚಕ್ರವರ್ತಿ
- ರಾಜಾಲಯ – ಅರಮನೆ
- ರಾಜಾವರ್ತ – ನೀಲ ರತ್ನ
- ರಾಜಿ – ಗುಂಪು; ಸಾಲು
- ರಾಜಿಸು – ಶೋಭಿಸು
- ರಾಜೀವ – ತಾವರೆ
- ರಾಜ್ಞಿ – ರಾಣಿ
- ರಾಜ್ಯ – ಒಂದು ಆಡಳಿತಕ್ಕೆ ಒಳಪಟ್ಟ ಭೂಪ್ರದೇಶ;
- ರಾಜನ ಸಪ್ತಾಂಗಗಳಲ್ಲಿ ಒಂದು
- ರಾಜ್ಯಂಗೆಯ್ – ಆಳ್ವಿಕೆ ಮಾಡು
- ರಾಜ್ಯಕಾಲ – ಆಳ್ವಿಕೆಯ ಅವಧಿ
- ರಾಜ್ಯಪಟ್ಟ – ಅಧಿಕಾರಸೂಚಕ ಹಣೆಪಟ್ಟಿ
- ರಾಜ್ಯಭ(ಭಾ)ರ – ಆಳ್ವಿಕೆ
- ರಾಜ್ಯಶ್ರೀಕ – ರಾಜ್ಯವೆಂಬ ಸಂಪತ್ತು ಇರುವವನು
- ರಾಜ್ಯಾಂಗ – ಆಳ್ವಿಕೆಯ ಏಳು ವಿಭಾಗಗಳು, ನೋಡಿ `ಸಪ್ತಾಂಗ’
- ರಾಜ್ಯಾನುಷ್ಠಾನ – ಆಳ್ವಿಕೆ
- ರಾಜ್ಯಾಭಿಷವಣ – ರಾಜ್ಯಾಭಿಷೇಕ
- ರಾಣಿ(ಯ) ವಾಸ – ಪೆಂಡವಾಸ, ಅಂತಃಪುರ
- ರಾತ್ರಿಂಚರ – ರಾಕ್ಷಸ; ಪಿಶಾಚಿ
- ರಾತ್ರಿಂಚರಪತಿ – ರಾಕ್ಷಸ ಮುಖಂಡ,ನೈಋತಿ
- ರಾತ್ರಿಭುಕ್ತಿವ್ರತಿಕ – (ಜೈನ) ರಾತ್ರಿ ಊಟ ಮಾಡದ ವ್ರತ ತೊಟ್ಟವನು
- ರಾತ್ರ್ಯಂಧ – ರಾತ್ರಿ ಕುರುಡ
- ರಾದ್ಧಾಂತ – ಸಿದ್ಧಾಂತ
- ರಾಧೇಯ – ಕರ್ಣ
- ರಾಭಸಿಕ – ರಭಸದ ಸ್ವಭಾವದವನು
- ರಾಭಸಿಕವೃತ್ತಿ – ಆತುರಪ್ರವೃತ್ತಿ
- ರಾಮಬಾಣ – ರಾಮ ಬಿಡುವ ಬಾಣ; ಪ್ರಯೋಗಿಸಿದಾಗ ಕೆಲಸ ಮುಗಿಸಿ ಬತ್ತಳಿಕೆಗೆ ವಾಪಸಾಗುವ ಬಾಣ
- ರಾಮಾಂಗೆ – ಆಕರ್ಷಕ ದೇಹದವಳು
- ರಾಮೆ – ಹೆಂಗಸು; ಸುಂದರಿ
- ರಾಮೋತ್ಕಂಠೆ – ರಾಮನ ಬಗ್ಗೆ ಉತ್ಕಂಠಿತಳಾದವಳು; ವರುಣನಲ್ಲಿ ಉತ್ಕಂಠಿತಳಾದವಳು
- ರಾಯ – ರಾಜ
- ರಾಯಂಚೆ – ರಾಜಹಂಸ
- ರಾಯಭಾರಿ – ರಾಜನ ಪ್ರತಿನಿಧಿ
- ರಾಯಸ – ರಾಜಾಜ್ಞೆ; ನಿರೂಪ
- ರಾವ -ಶಬ್ದ
- ರಾವಣ – ಗರ್ಜನೆ; ಗರ್ಜಿಸುವವನು; ಲಂಕೆಯ ಒಡೆಯ
- ರಾವಣಹಸ್ತ – ಒಂದು ವಾದ್ಯವಿಶೇಷ; ತೆಂಗಿನ ಚಿಪ್ಪನ್ನುಳ್ಳ ಚಿಕ್ಕ ವೀಣೆ
- ರಾಸಭ – ಕತ್ತೆ
- ರಾಸಭಿ – ಹೆಣ್ಣು ಕತ್ತೆ
- ರಾಸಿಗೆಯ್ – ಗುಡ್ಡೆ ಮಾಡು
- ರಾಸಿಗೊಳ್ – ಗುಡ್ಡೆಯಾಗು
- ರಿಂಗಣ – ನೃತ್ಯ
- ರಿಕ್ಕಟ -ಮೌನ
- ರಿಗ್ಗವಣೆ – ಮೃದಂಗ(ವಾದನ)
- ರಿಚಿ – ಋಕ್ಕು; ಮಂತ್ರ
- ರಿಪುಬಲ(ಳ) – ಶತ್ರು ಸೈನ್ಯ
- ರುಂಜೆ – ಒಂದು ರಣವಾದ್ಯ
- ರುಂದ್ರ – ವಿಸ್ತಾರವಾದ
- ರುಕ್ – (ರುಚ್) ಕಾಂತಿ
- ರುಕ್ಚಕ್ರ – ಕಿರಣಸಮೂಹ
- ರುಕ್ಮ – ಚಿನ್ನ
- ರುಕ್ಷ – ಕರಡಿ; ನಕ್ಷತ್ರ
- ರುಚಿ – ಕಾಂತಿ; ಸ್ವಾದ
- ರುಚಿಗೆಡು – ಕಾಂತಿಗುಂದು
- ರುಚಿರ – ಹೊಳೆಯುವ; ಸವಿಯಾದ
- ರುಚಿವಡೆ – ಸವಿಯಾಗು
- ರುಟ್ – ರೋಗ
- ರುತ(ತಿ) – ಶಬ್ದ
- ರುದಿತ – ರೋದನ
- ರುದ್ರಾಟ್ಟಹಾಸ – ರುದ್ರನ ನಗು
- ರುದ್ರಾಣಿ – ಪಾರ್ವತಿ
- ರುದ್ರಾವತಾರ – ರುದ್ರನ ಅಂಶಸಂಭೂತ
- ರುಧಿರ – ಕೆಂಪು ಬಣ್ಣ; ರಕ್ತ
- ರುರು – ಮಚ್ಚೆಗಳಿರುವ ಜಿಂಕೆ; ಒಬ್ಬ ಋಷಿಯ ಹೆಸರು
- ರುಸಿವಳ್ಳಿ – ಋಷಿಗಳು ವಾಸಿಸುವ ಹಳ್ಳಿ
- ರೂಕ್ಷ – ಕ್ರೂರ
- ರೂಕ್ಷಾನಿಲ – ಬಿರುಗಾಳಿ
- ರೂಢಿವಡೆ – ಪ್ರಸಿದ್ಧನಾಗು
- ರೂಪಕ – ಆಕಾರ; ಹೋಲಿಕೆ; ಒಂದು ಅಲಂಕಾರ
- ರೂಪಧಾರಿ – ರೂಪವನ್ನು ಧರಿಸಿದವನು
- ರೂಪನಿದಾನ – ಚೆಲುವಿನ ನಿಧಿ
- ರೂಪಪರಾವರ್ತನ(ವಿದ್ಯೆ) – ರೂಪ ಬದಲಾಯಿಸುವಿಕೆ, ಹಾಗೆ ಮಾಡುವ ವಿದ್ಯೆ
- ರೂಪಪ್ರವೀಚಾರ – (ಜೈನ) ದೇವತಾಸ್ತ್ರೀಯರನ್ನು ನೋಡಿದ ಮಾತ್ರಕ್ಕೆ ಇಂದ್ರಿಯಸುಖವನ್ನು ಪಡೆಯುವ ದೇವತಾವರ್ಗ
- ರೂಪಮದ – ತನ್ನ ಚೆಲುವಿನ ಬಗ್ಗೆ ಅಹಂಕಾರ; ಅಷ್ಟಮದಗಳಲ್ಲಿ ಒಂದು
- ರೂಪವಿದ್ಯಾಧರ – ಚೆಲುವಿನಲ್ಲಿ ವಿದ್ಯಾಧರನಂತಿರುವವನು
- ರೂಪಸ್ತವ – ಚೆಲುವಿನ ಹೊಗಳಿಕೆ
- ರೂಪಾಂತರ – ಆಕಾರ ಬದಲಾವಣೆ
- ರೂಪಾನುಪಾತ – (ಜೈನ) ದೇಶವ್ರತಾತಿಚಾರಗಳಲ್ಲಿ ಒಂದು, ತನ್ನ ರೂಪವನ್ನು ಬೇರೆಯವರಿಗೆ ತೊರಿಸುವುದು
- ರೂಪಾ(ವಾ)ರ – (ರೂಪಾಕಾರ) ಶಿಲ್ಪಿ
- ರೂಪಿಡು – ಕೋಪವನ್ನು ತೋರಿಸು
- ರೂಪುಗರೆ – ರೂಪನ್ನು ಮರೆಮಾಚು; ಬೇರೆ ವೇಷ ಹಾಕಿಕೊ
- ರೂಪುಗೆಡು – ಮರೆಯಾಗು
- ರೂಪುಗೊಳ್ – ಆಕಾರವನ್ನು ತಾಳು
- ರೂಪುದಳೆ – ರೂಪುಗೊಳ್
- ರೂಪ್ಯ – ಬೆಳ್ಳಿ
- ರೂವು(ಪು) – ಆಕಾರ
- ರೇಖಿಕೆ – ಗೆರೆ
- ರೇಚಕ – ಉಸಿರು ಬಿಡುವ ಒಂದು ವಿಧಾನ;
- ನೃತ್ಯದಲ್ಲಿ ಕೈಚಾಚುವುದು
- ರೇಣು – ಧೂಳು
- ರೇಣುಕಾನಂದನ – ಪರಶುರಾಮ
- ರೇವತಿ – ಬಲರಾಮನ ಹೆಂಡತಿ; ಒಂದು ನಕ್ಷತ್ರ
- ರೇಶ – ಕುಬೇರ
- ರೈ – ಸಿರಿ; ಚಿನ್ನ
- ರೈವೃಷ್ಟಿ – ಕನಕವೃಷ್ಟಿ, ಚಿನ್ನದ ಮಳೆ
- ರೈಸ್ತಂಭ – ಚಿನ್ನದ ಕಂಬ
- ರೋಚನ – ಗೋರೋಚನ
- ರೋಚಿ – ಕಾಂತಿ; ಕಿರಣ
- ರೋಚಿಷ್ಣು – ಕಾಂತಿ
- ರೋದನ – ಗೋಳಾಟ
- ರೋದಸ್ – ಭೂಮಿ-ಆಕಾಶಗಳುರೋದೋಂಗಣ – ಆಕಾಶಪ್ರದೇಶ
- ರೋದೋಂತ – ಭೂಮ್ಯಾಕಾಶಗಳ ನಡುವೆ
- ರೋದೋವಾತ – ಆಕಾಶದಲ್ಲಿ ಬೀಸುವ ಗಾಳಿ
- ರೋದೋ ವಿವರ – ಆಕಾಶದ ಬಿಲ; ಭೂಮಿ
- ಆಕಾಶಗಳ ನಡುವಣ ಪ್ರದೇಶ
- ರೋಧ – ದಂಡೆ, ತೀರ
- ರೋಧಸ್ವಿನಿ – ನದಿ, ಹೊಳೆ
- ರೋಪ – ಬಾಣ; ರಂಧ್ರ
- ರೋಪಿತ – ಲೇಪಿಸಿಕೊಂಡ
- ರೋಮಂಥ – ಮೆಲುಕು ಹಾಕುವುದು
- ರೋಮಹರ್ಷ – ಸಂತಸದಿಂದ ಮೈಕೂದಲು ನಿಮಿರುವುದು
- ರೋಮಾಂಚ(ತೆ) – ಪುಳಕ
- ರೋಮೋದ್ಗಮ – ರೋಮಾಂಚ(ತೆ)
- ರೋಲಂಬ(ಬಿ) – ತುಂಬಿ
- ರೋಷಿ – ಕೋಪಗೊಂಡ(ವನು)
- ರೋಹಿಣಿ – ಕೆಂಪು ಬಣ್ಣದ ಹಸು; ಒಂದು ನಕ್ಷತ್ರ
- ರೋಹಿತ – ರಕ್ತ; ಕೆಂಪಾದ
- ರೌದ್ರ(ಧ್ಯಾನ) – (ಜೈನ) ಕೆಟ್ಟುದರಲ್ಲಿ ಕಾಣುವ ಸಂತೋಷ; ಹಿಂಸಾನಂದ, ಮೃಷಾನಂದ, ಸ್ತೇಯಾನಂದ, ಪರಿಗ್ರಹಾನಂದ ಎಂಬ ನಾಲ್ಕು ಬಗೆ
- ರೌದ್ರಾವಹ – ಭಯವನ್ನುಂಟುಮಾಡುವ
- ರೌದ್ರಾಹವ – ಭಯಂಕರ ಯುದ್ಧ
- ರೌಪ್ಯ – ಬೆಳ್ಳಿ
- ರೌಪ್ಯಾದ್ರಿ – ಬೆಳ್ಳಿಯ ಬೆಟ್ಟ
- ರೌಹಿಣೀಯ – ಬಲರಾಮ
Conclusion:
ಕನ್ನಡ ರ ಅಕ್ಷರದ ಹಳೆಗನ್ನಡ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.