ಕನ್ನಡ ಟ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada ta aksharada halegannadada padagalu , ಕನ್ನಡ ಟ ಅಕ್ಷರದ ಹಳೆಗನ್ನಡ ಪದಗಳು (tA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಟ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( ta halegannada Words in kannada ) ತಿಳಿದುಕೊಳ್ಳೋಣ
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಟ ಅಕ್ಷರ ಎಂದರೇನು?
ಟ, ಕನ್ನಡ ವರ್ಣಮಾಲೆಯ ಟ-ವರ್ಗದ ಮೊದಲನೇ ಅಕ್ಷರ, ಅಲ್ಪಪ್ರಾಣವಾಗಿದೆ. ಇದು ಒಂದು ವ್ಯಂಜನ.ಈ ಅಕ್ಷರ ಅಘೋಷ ಸ್ಪರ್ಶಮೂರ್ಧನ್ಯ ಧ್ವನಿಯನ್ನು ಸೂಚಿಸುತ್ತದೆ.
ಅಶೋಕನ ಕಾಲದಲ್ಲಿ ಅರ್ಧವೃತ್ತಾಕಾರವಾಗಿದ್ದ ಈ ಅಕ್ಷರಕ್ಕೆ ಹೊಕ್ಕಳು ಮೂಡಿದ್ದು ಗಂಗರ ಕಾಲದಲ್ಲಾದರೂ ಅದು ಖಚಿತವಾದದ್ದು ರಾಷ್ಟ್ರಕೂಟ ಹಾಗೂ ಕಲ್ಯಾಣ ಚಾಳುಕ್ಯರ ಕಾಲಗಳಲ್ಲಿ. ಈ ಅಕ್ಷರಕ್ಕೆ ಈಗಿನ ರೂಪ ಸಿದ್ದಿಸತೊಡಗಿದ್ದನ್ನು ಚಿತ್ರದಲ್ಲಿ ಕಾಣಿಸಿದೆ. ಮೈಸೂರರಸರ ಕಾಲದಲ್ಲಿ ಇದಕ್ಕೆ ಈಗಿನ ರೂಪ ಖಚಿತವಾಯಿತು.
ಕನ್ನಡ ಟ ಅಕ್ಷರದ ಹಳೆಗನ್ನಡ ಪದಗಳು – Kannada Words
- ಟ
- ಟಂಕ – ಬೆಟ್ಟದ ಇಳಿಜಾರು; ಕುದುರೆ ಲಾಳ; ಕಲ್ಲು ಕೆತ್ತುವ ಚಾಣ
- ಟಂಕಾರ – ಬಿಲ್ಲಿನ ಠೇಂಕಾರ
- ಟಂಕಾರಿಸು – ಟಂಕದಿಂದ ಕೆತ್ತು
- ಟಂಕಾಹತಿ – ಚಾಣದ ಪೆಟ್ಟು
- ಟಂಕೃತಿ – ಟಂಕಾರ
- ಟಂಕೋತ್ಕೀರ್ಣ – ಚಾಣದಿಂದ ಕೆತ್ತಿದುದು
- ಟಕಾರಿ – ತೋರಣ
- ಟಕ್ಕ – ಠಕ್ಕ, ಮೋಸಗಾರ
- ಟಕ್ಕು – ಠಕ್ಕು, ಮೋಸ
- ಟಕ್ಕನಿಕ್ಕು – ಎಚ್ಚರ ತಪ್ಪಿಸುವ ಮದ್ದನ್ನಿಡು
- ಟಕ್ಕುದೋ¾ು – ವಂಚನೆ ಮಡು
- ಟಕ್ಕುವಗೆ – ಮೋಸದ ಬುದ್ಧಿ
- ಟಮಾಳ – ಮೋಸ
- ಟ¾ಟ¾ – ಒಂದು ಅನುಕರಣ ಶಬ್ದ
- ಟಾಠಡಾಢಣ – ಟವರ್ಗದ ಅಕ್ಷರಗಳು; ಅವುಗಳಂತೆ ನಿಶ್ಚಿತ
- ಟೆಂಟಣಿಸು – ದ್ವೇಷಿಸು
- ಟೆಪ್ಪರ – ಕುದುರೆಯದರಂತಹ ಪುಟನೆಗೆತ
- ಟೆಬ್ಬರಿಸು – ಚಲನೆಯಿಲ್ಲದಂತೆ ಮಾಡು
- ಟೊಣೆ – ಭೇದಿಸು; ಕಣ್ತಪ್ಪಿಸು; ವಂಚಿಸು
- ಟೊಪ್ಪರ – ಟೋಪಿ, ಶಿರಸ್ತ್ರಾಣ
CONCLUSION:
ಕನ್ನಡ ಟ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.