ಕನ್ನಡ ಧ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada ddha aksharada halegannadada padagalu , ಕನ್ನಡ ಧ ಅಕ್ಷರದ ಹಳೆಗನ್ನಡ ಪದಗಳು (ddhA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಧ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( ddha halegannada Words in kannada ) ತಿಳಿದುಕೊಳ್ಳೋಣ
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ಧ ಅಕ್ಷರ ಎಂದರೇನು?
ಧ, ಕನ್ನಡ ವರ್ಣಮಾಲೆಯ ತ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಮಹಾಪ್ರಾಣ
ಅಶೋಕನ ಕಾಲದಲ್ಲಿ ಬಲಕ್ಕೆ ಹೊರಭಾಗವನ್ನುಳ್ಳ ಮುಚ್ಚಿರುವ ಅರ್ಧವೃತ್ತದಂತೆ ಇದ್ದ ಈ ಬ್ರಾಹ್ಮೀ ಅಕ್ಷರ ಸಾತವಾಹನರ ಕಾಲದಲ್ಲಿ ಮೊಟ್ಟೆಯಂತೆ ನಯವಾದ ಮೂಲೆಗಳುಳ್ಳದ್ದಾಗಿ ಕದಂಬರ ಕಾಲಕ್ಕೆ ತಲೆಕಟ್ಟೂ ಹೊಕ್ಕಳೂ ಕಾಣುವಂತಾಗುತ್ತದೆ. ಕಲ್ಯಾಣ ಚಾಲುಕ್ಯರ ಕಾಲಕ್ಕೆ ತಲೆಕಟ್ಟು ಖಚಿತವಾಗುತ್ತದೆ. ಅಲ್ಪಪ್ರಾಣಾಕ್ಷರ ದ ದಿಂದ ಪ್ರತ್ಯೇಕಿಸಲು ಇದರ ಹೊಕ್ಕಳನ್ನು ಸೀಳಿರುವುದು ವಿಜಯನಗರದ ಅರಸರ ಕಾಲದ ಬರಹದಲ್ಲಿ ಕಾಣಬರುವ ಒಂದು ಮುಖ್ಯ ಬದಲಾವಣೆ. ಅಲ್ಲಿಂದಲೇ ಈ ಅಕ್ಷರದ ಹೊಸಗನ್ನಡ ರೂಪ ಸಿದ್ದಿಸಿತೆಂದು ತೋರುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ಧ ಅಕ್ಷರದ ಹಳೆಗನ್ನಡ ಪದಗಳು – Kannada Words
- ಧಗಧಗ – ಉರಿಯುವ ಬೆಂಕಿಯ ಅನುಕರಣ ಶಬ್ದ
- ಧಗದ್ಧಗಿತ – ಧಗಧಗ ಎಂದು ಸದ್ದುಮಾಡುವ
- ಧಗಮನೆ – ಧಗ್ ಎಂದು ಉರಿ
- ಧನ – ಹಣ
- ಧನಂಜಯ – ಅಗ್ನಿ; ಅರ್ಜುನ
- ಧನಮುಳ್ಳನ್ – ಹಣವಂತ
- ಧನಂಜಯ – ಬೆಂಕಿ
- ಧನಂಜಯಾಂಬಕ – ಉರಿಗಣ್ಣ, ಶಿವ
- ಧನಂಬಡೆ – ಹಣವನ್ನು ಗಳಿಸು
- ಧನಕೋಶ – ಕೋಶಾಗಾರ
- ಧನದ – ಕುಬೇರ; ಹಣ ನೀಡುವವನು
- ಧನದನಿವಾಸ – ಕುಬೇರನ ಆವಾಸ
- ಧನದಭವನ – ಕುಬೇರನ ಅರಮನೆ
- ಧನದಮಿತ್ರ – ಕುಬೇರನ ಸ್ನೇಹಿತ, ಶಿವ
- ಧನದಾಚಲ – ಕುಬೇರನು ವಾಸಿಸುವ ಬೆಟ್ಟ,ಕೈಲಾಸಪರ್ವತ
- ಧನದಾದ್ರಿ – ಧನದಾಚಲ
- ಧನದಾನ – ಹಣರೂಪದ ದಾನ
- ಧನದಾಪ್ತ – ಧನದನಿಗೆ ಆಪ್ತನಾದವನು, ಶಿವ
- ಧನನಾಥ – ಕುಬೇರ
- ಧನಪತಿ – ಧನನಾಥ
- ಧನಪತಿಮಿತ್ರ – ಧನದಮಿತ್ರ
- ಧನರಕ್ಷಕ – ಹಣವನ್ನು ಕಾಪಾಡುವವನು, ಕುಬೇರ
- ಧನರಕ್ಷೆ – ಐಶ್ವರ್ಯದ ರಕ್ಷಣೆ
- ಧನಲಾಭ – ಹಣಸಂಪಾದನೆ
- ಧನಹೀನ – ಹಣವಿಲ್ಲದವನು
- ಧನಾಢ್ಯ – ಶ್ರೀಮಂತ
- ಧನಾಧಿಪ – ಶ್ರೀಮಂತ
- ಧನಾಧ್ಯಕ್ಷ – ಕುಬೇರ
- ಧನಾರ್ಥಿ – ಹಣವನ್ನು ಬೇಡುವವನು
- ಧನಿಕ – ಶ್ರೀಮಂತ
- ಧನು – ಬಿಲ್ಲು; ಉದ್ದದ ಒಂದು ಅಳತೆ
- ಧನುಗೊಳ್ – ಬಿಲ್ಲನ್ನು ಧರಿಸು
- ಧನುರಾಗಮ – ಬಿಲ್ವಿದ್ಯೆ; ಅಸ್ತ್ರಶಾಸ್ತ್ರ
- ಧನುರಿ – ಬಿಲ್ಲಿನಂತೆ ಬಾಗಿದ ರಚನೆ; ಒಂದು ಶಿಲ್ಪಪ್ರಬೇಧ
- ಧನುರ್ಗುಣ – ಬಿಲ್ಲಿನ ಹೆದೆ
- ಧನುರ್ಗುಣಕ್ವಣಿತ – ಬಿಲ್ಲಿನ ಹೆದೆಮಿಡಿತದ ಧ್ವನಿ
- ಧನುಜ್ರ್ಯಾರವ – ಧನುರ್ಗುಣಕ್ವಣಿತ
- ಧನುರ್ದಂಡ – ಬಿಲ್ಲು
- ಧನುರ್ಧರ – ಬಿಲ್ಲನ್ನು ಹಿಡಿದವನು
- ಧನುರ್ಧರಪ್ರಾಯ – ಅನೇಕ ಬಿಲ್ಗಾರರಿಂದ ಕೂಡಿದ
- ಧನುರ್ಬಲ – ಬಿಲ್ಗಾರಪಡೆ
- ಧನುರ್ಲತೆ – ಬಿಲ್ಲೆಂಬ ಬಳ್ಳಿ
- ಧನುರ್ವಂಶ – ಬಿಲ್ಲಂತೆ ಬಾಗಿದ
- ಬೆನ್ನುಮೂಳೆಯುಳ್ಳುದು
- ಧನುರ್ವಳ – ಧನುರ್ಬಲ
- ಧನುರ್ವಿದ್ಯೆ – ಬಿಲ್ವಿದ್ಯೆ
- ಧನುರ್ವೇದ – ಅಸ್ತ್ರಶಾಸ್ತ್ರ; ಒಂದು ಉಪವೇದ,
- ನೋಡಿ
ಉಪವೇದ
- ದನುರ್ವೇದಿ – ಧನುರ್ವೇದ ಪಾರಂಗತ
- ಧನುಶ್ಶಲಾಕೆ – ಬಿಲ್ಲು
- ಧನುಷ್ಟಂಕೃತ – ಬಿಲ್ಲಿನ ಹೆದೆಮಿಡಿತದ ಧ್ವನಿ
- ಧನೇಶ್ವರ – ಕುಬೇರ
- ಧನ್ಯ – ಧನವನ್ನು ಕೊಡುವ; ಅದೃಷ್ಟವಂತ
- ಧನ್ವಿ – ಬಿಲ್ಲುಗಾರ
- ಧಮ್ಮ – ಧರ್ಮ
- ಧಮ್ಮಿಲ್ಲ – ತುರುಬು
- ಧಮ್ಮಿಲ್ಲದ್ಯುತಿ – ತುರುಬಿನ ಹೊಳಪು
- ಧರಣಿ – ಭೂಮಿ
- ಧರಣಿಜೆ – ಭೂಮಿಯ ಮಗಳು, ಸೀತೆ
- ಧರಣಿಪ(ತಿ) – ಭೂಮಿಯ ಒಡೆಯ, ರಾಜ
- ಧರಣಿಭೃತ್ -ಬೆಟ್ಟ
- ಧರಣಿಸುರ – ಭೂಸುರ, ಬ್ರಾಹ್ಮಣ
- ಧರಣೀಂದ್ರ – (ಜೈನ) ಪಾಶ್ರ್ವನಾತ ತೀರ್ಥಂಕರನ ಯಕ್ಷ
- ಧರಣೀಚಕ್ರ – ಭೂಚಕ್ರ, ಭೂಮಂಡಲ
- ಧರಣೀಜ – ಭೂಮಿಯಲ್ಲಿ ಹುಟ್ಟಿದ್ದು, ಮರಗಿಡ
- ಧರಣೀಜಾತ – ಧರಣೀಜ
- ಧರಣೀತಲ – ಭೂತಳ
- ಧರಣೀಧರ – ಬೆಟ್ಟ
- ಧರಣೀಧವ – ಧರಣಿಪ(ತಿ)
- ಧರಣೀಧ್ರ – ಬೆಟ್ಟ
- ಧರಣೀನಾಥ – ಧರಣೀಧವ
- ಧರಣೀಪತಿ – ಧರಣೀಧವ
- ಧರಣೀಪಾಲ – ಧರಣೀಧವ
- ಧರಣೀಪಾಳಕ – ಧರಣೀಧವ
- ಧರಣೀಪೂಜ್ಯ – ಲೋಕಪೂಜ್ಯ
- ಧರಣೀಭ(ಭಾ)ರ – ಭೂಮಿಯ ಜವಾಬ್ದಾರಿ, ರಾಜ್ಯಭಾರ
- ಧರಣೀಭರ್ತೃ – ಧರಣೀಧವ
- ಧರಣೀಭೃತ್ಪತಿ – ರಾಜಶ್ರೇಷ್ಠ; ಪರ್ವತಶ್ರೇಷ್ಠ
- ಧರಣೀಮಂಡನ – ಭೂಮಿಗೆ ಅಲಂಕಾರಪ್ರಾಯ
- ಧರಣೀಮಾರ್ಗ – ಭೂತಳ
- ಧರಣೀರಕ್ಷಣ – ಭೂಮಿಯ ರಕ್ಷಣೆ
- ಧರಣೀವಲ್ಲಭ – ಧರಣೀಧವ
- ಧರಣೀವಲಯ – ಭೂವಲಯ
- ಧರಣೀಶ – ಧರಣೀಧವ
- ಧರಣೀಶಾವಾಸ – ಧರಣೀಶ+ಆವಾಸ, ಅರಮನೆ
- ಧರಣೀಸುತ – ಅಂಗಾರಕ; ಭಗದತ್ತ
- ಧರಣೀಸುರ – ಭೂಸುರ
- ಧರಣೀಹಾರ – ಭೂಮಿಗೆ ಹಾರದಂತೆ ಶೋಭೆ ತರುವಂಥದು
- ಧರಣೇಂದ್ರ – (ಜೈನ) ಧರಣೀಂದ್ರ
- ಧರಾಗ್ರ – ಧರಣೀತಳ
- ಧರಾಚಕ್ರ- ಭೂಮಂಡಲ
- ಧರಾತಳ – ಭೂತಳ
- ಧರಾಧರ – ಪರ್ವತ
- ಧರಾಧರಧನ್ವ – ಮೇರುವನ್ನು ಬಿಲ್ಲಾಗಿ ಪಡೆದವನು, ಶಿವ
- ಧರಾಧರಧರ – ಬೆಟ್ಟವನ್ನು ಎತ್ತಿದವನು, ಕೃಷ್ಣ
- ಧರಾಧರಧೈರ್ಯ – ಬೆಟ್ಟದಂತಹ ಧೈರ್ಯವುಳ್ಳವನು
- ಧರಾಧರಸುತ – ರಾಜಪುತ್ರ
- ಧರಾಧಾರ – ರಾಜ; ಬೆಟ್ಟ
- ಧರಾಧಾರಧರ್ಮ – ಧರಾಧರಧನ್ವ
- ಧರಾಧಿಪ(ತಿ) – ರಾಜ
- ಧರಾಧಿಪತ್ಯ – ಭೂಮಿಯ ಆಳ್ವಿಕೆ
- ಧರಾಧೀಶ – ರಾಜ
- ಧರಾಧೀಶ್ವರ – ಧರಾಧೀಶ
- ಧರಾಭಾಗ – ಭೂಭಾಗ
- ಧರಾಭಾರ – ರಾಜ್ಯಭಾರ
- ಧರಾಮರ – ಭೂಸುರ
- ಧರಾಮರತ್ವ – ಬ್ರಾಹ್ಮಣಿಕೆ
- ಧರಾಮರಪತಿ – ಭೂಮಿಗೆ ಇಂದ್ರನಂತಿರುವವನು, ಚಕ್ರವರ್ತಿ
- ಧರಾರುಹ – ಮರಗಿಡ
- ಧರಾವರ – ಧರಾಧೀಶ
- ಧರಾವಲ(ಳ)ಯ – ಭೂಮಂಡಲ
- ಧರಾವಿಭಾಗ – ಭೂಭಾಗ, ರಾಜ್ಯ
- ಧರಿತ್ರಿ – ಭೂಮಿ
- ಧರಿತ್ರೀತಳ – ಭೂತಳ
- ಧರಿತ್ರೀತಿಳಕ – ಭೂಮಿಗೆ ತಿಲಕಪ್ರಾಯನಾದವನು
- ಧರಿತ್ರೀನಾಥ – ಧರಾಧೀಶ
- ಧರಿತ್ರೀಪಾಳ – ಭೂಮಿಯನ್ನು ರಕ್ಷಿಸುವವನು, ರಾಜ
- ಧರಿತ್ರೀಮಿತ್ರ – ಇಡೀ ಭೂಮಿಯ ಸ್ನೇಹಿತ
- ಧರಿತ್ರೀವಲ್ಲಭ – ಧರಾಧೀಶ
- ಧರಿತ್ರೀಸ್ತುತ್ಯ – ಎಲ್ಲರ ಹೊಗಳಿಕೆಗೆ ಪಾತ್ರನಾದವನು
- ಧರಿಸು – ತೊಟ್ಟುಕೊ; ಹಿಡಿ
- ಧರೆ – ಭೂಮಿ
- ಧರ್ಮ – ನಂಬಿಕೆ-ಆಚರಣೆಗಳ ಕಟ್ಟಳೆ; ಪುಣ್ಯ; ಕರ್ತವ್ಯ; ಯಮ; ಯುಧಿಷ್ಠಿರ; (ಜೈನ) ದ್ವಾದಶಾನುಪ್ರೇಕ್ಷೆಗಳಲ್ಲಿ ಒಂದು, ಧರ್ಮಚಿಂತನೆ; ಧನುಸ್ಸು
- ಧರ್ಮಂಗೆಯ್ – ಪುಣ್ಯಕೆಲಸಮಾಡು
- ಧರ್ಮಕಥನ – ಧರ್ಮಬೋಧನೆ ಮಾಡುವುದು
- ಧರ್ಮಕಥೆ – ಧರ್ಮದ ಬಗ್ಗೆ ಹೇಳುವ ಕತೆ; (ಜೈನ) ಇದರಲ್ಲಿ ಆಕ್ಷೇಪಣಿ, ವಿಕ್ಷೇಪಣಿ, ಸಂವೇದನಿ, ನಿರ್ವೇದನಿ ಎಂದು ನಾಲ್ಕು ಬಗೆ
- ಧರ್ಮಕರ – ಧರ್ಮವನ್ನು ಮಾಡುವವನು; ಬಿಲ್ಲು ಹಿಡಿದವನು
- ಧರ್ಮಕಾರ್ಯ – ಪುಣ್ಯದ ಕೆಲಸ
- ಧರ್ಮಕ್ಷೇತ್ರ – ಪುಣ್ಯಕ್ಷೇತ್ರ
- ಧರ್ಮಗಳ್ – ಧರ್ಮ+ಕಳ್, ಪುಕ್ಕಟೆ ಕೊಡುವ ಕಳ್ಳು, ಹೆಂಡ
- ಧರ್ಮಗಳ್ಗುಡಿ – ಧರ್ಮಗಳ್ಳನ್ನು ಕುಡಿಯುವುದು
- ಧರ್ಮಗೇಹ – ಧರ್ಮಕ್ಕೆ ಮನೆಯಂತಿರುವುದು; ನಂದಿ
- ಧರ್ಮಚಕ್ರ – ಧರ್ಮದ ರಾಜ್ಯ; ಧರ್ಮರಕ್ಷಣೆಗೆ ಚಕ್ರ ಹಿಡಿದವನು, ವಿಷ್ಣು
- ಧರ್ಮಚಿಂತಾಯಕ – ಧರ್ಮಚಿಂತನೆ ನಡೆಸುವವನು
- ಧರ್ಮಚಿಂತೆ – ಧರ್ಮದ ಬಗೆಗಿನ ಆಲೋಚನೆ
- ಧರ್ಮಚ್ಯುತಿ – ಧರ್ಮವನ್ನು ಬಿಡುವುದು
- ಧರ್ಮಜ – ಯಮನ ಮಗ; ಯುಧಿಷ್ಠಿರ; ಪಾಂಡವ, ಬಿಳಿ ಹಕ್ಕಿ
- ಧರ್ಮಜ್ಞ – ಧರ್ಮವನ್ನು ತಿಳಿದವನು
- ಧರ್ಮತನಯ – ಧರ್ಮಜ
- ಧರ್ಮದ – ಧರ್ಮವಂತ
- ಧರ್ಮದ್ರವ್ಯ – (ಜೈನ) ಷಡ್ದ್ರವ್ಯಗಳಲ್ಲಿ ಒಂದು
- ಧರ್ಮದ್ರೋಹ – ಧರ್ಮದ ಉಲ್ಲಂಘನೆ
- ಧರ್ಮದ್ರೋಹಿ – ಧರ್ಮದ ಉಲ್ಲಂಘನೆ ಮಾಡುವವನು
- ಧರ್ಮಪಥ – ಧರ್ಮದ ಹಾದಿ
- ಧರ್ಮಪರ – ಧರ್ಮನಿಷ್ಠ
- ಧರ್ಮಪರಾಯಣ – ಧರ್ಮಪರ
- ಧರ್ಮಪಾನೀಯ – ಹಾದಿಹೋಕರಿಗೆ ಉಚಿತವಾಗಿ ನೀಡುವ ನೀರು ಅಥರ್ವ ಪಾನೀಯ
- ಧರ್ಮಪುತ್ರ – ಧರ್ಮನಂದನ
- ಧರ್ಮಪ್ರಭಾವನೆ – (ಜೈನ) ಸಮ್ಯಗ್ದರ್ಶನದ ಎಂಟು ಅಂಗಗಳಲ್ಲಿ ಕೊನೆಯದು; ಜೈನಧರ್ಮದ ಬಗ್ಗೆ ಇತರರಲ್ಲಿ ಪ್ರಚಾರ ಮಾಡುವುದು
- ಧರ್ಮಪ್ರವರ್ತನ – ಧರ್ಮಕ್ಕೆ ನೀಡುವ ಪ್ರೋತ್ಸಾಹ
- ಧರ್ಮಪ್ರಿಯ – ಧರ್ಮದ ಬಗ್ಗೆ ಪ್ರೀತಿಯಿಟ್ಟವನು
- ಧರ್ಮಬಹಿರ್ಮುಖ – ಧರ್ಮದಿಂದ ದೂರಾದವನು
- ಧರ್ಮಮಾರ್ಗ – ಧರ್ಮದ (ನ್ಯಾಯಸಮ್ಮತ)ಹಾದಿ
- ಧರ್ಮಯುದ್ಧ – ನಿಯಮಾನುಸಾರ ಮಾಡುವ ಯುದ್ಧ
- ಧರ್ಮರತ – ಧರ್ಮನಿಷ್ಠ
- ಧರ್ಮರತಿ – ಧರ್ಮನಿಷ್ಠೆ
- ಧರ್ಮರಾಜ – ಯಮ; ಯುಧಿಷ್ಠಿರ
- ಧರ್ಮರುಚಿ – ಧರ್ಮದಲ್ಲಿ ಆಸಕ್ತಿಯುಳ್ಳವನು
- ಧರ್ಮವಿಚಾರ – ಧರ್ಮಕ್ಕೆ ಸಂಬಂಧಿಸಿದ ವಿಷಯ
- ಧರ್ಮವಿಜಯ – ಧರ್ಮದಿಂದ ಗೆಲ್ಲುವವನು
- ಧರ್ಮವಿಜಯಿ – ಧರ್ಮದ ಮೂಲಕ ಗೆಲ್ಲಬಹುದಾದವನು
- ಧರ್ಮವಿರೋಧಿ – ಧರ್ಮದ್ವೇಷಿ
- ಧರ್ಮವೃದ್ಧಿ – ಧರ್ಮದ ಏಳಿಗೆ
- ಧರ್ಮವ್ಯಯ – ಧರ್ಮಕಾರ್ಯಕ್ಕಾಗಿ ಮಾಡುವ ವೆಚ್ಚ
- ಧರ್ಮಶಾಸ್ತ್ರ – ಸಾಮಾಜಿಕ ಕಟ್ಟುಪಾಡುಗಳ ಸಂಹಿತೆ
- ಧರ್ಮಶ್ರವಣ – ಧರ್ಮೋಪದೇಶವನ್ನು ಕೇಳುವುದು
- ಧರ್ಮಶ್ರವಣಂಗೆಯ್ – ಧರ್ಮಶ್ರವಣ ಮಾಡು
- ಧರ್ಮಶ್ರವಣಂಗೆಯ್ಸು – ಧರ್ಮಶ್ರವಣ ಮಾಡಿಸು
- ಧರ್ಮಸಂತತಿ – ಧರ್ಮಪತ್ನಿಯಲ್ಲಿ ಹುಟ್ಟಿದ ಮಕ್ಕಳು
- ಧರ್ಮಸಭೆ – (ಜೈನ) ಕೇವಲಜ್ಞಾನ ಪಡೆದ ಮೇಲೆ ತೀರ್ಥಂಕರನು ಧರ್ಮೋಪದೇಶ ಮಾಡುವ ಸಭೆ
- ಧರ್ಮಸಾಧನ – ಧರ್ಮವನ್ನು ಆರ್ಜಿಸುವುದು
- ಧರ್ಮಸುತ – ಧರ್ಮನಂದನ
- ಧರ್ಮಸ್ಥಿತಿ – ಧರ್ಮದ ಸ್ವರೂಪ
- ಧರ್ಮಹಾನಿ – ಧರ್ಮದ ನಾಶ
- ಧರ್ಮಾಧಿಕರಣ – ನ್ಯಾಯನಿರ್ಣಾಯಕ ಮಂಡಲಿ; ನ್ಯಾಯಾಧಿಕಾರಿ
- ಧರ್ಮಧ್ಯಕ್ಷ – ನ್ಯಾಯಾಧೀಶ
- ಧರ್ಮಾನುರಾಗ – ಧರ್ಮದಲ್ಲಿನ ಆಸಕ್ತಿ
- ಧರ್ಮಾಯತ್ತ – ಧರ್ಮದಿಂದ ಕೂಡಿದ್ದು
- ಧರ್ಮಾರ್ಥಿ – ಧರ್ಮಸಂಪಾದನೆಯಲ್ಲಿ ಆಸಕ್ತ
- ಧರ್ಮಾಸ್ತಿಕಾಯ – (ಜೈನ) ಪಂಚಾಸ್ತಿಕಾಯಗಳಲ್ಲಿ ಒಂದು; ಬಹುಪ್ರದೇಶದಲ್ಲಿ ವ್ಯಾಪಿಸಿರುವ ಧರ್ಮದ್ರವ್ಯ, ನೋಡಿ,
ಪಂಚಾಸ್ತಿಕಾಯ
- ಧರ್ಮಿ – ಧರ್ಮಪರಾಯಣ
- ಧರ್ಮೋಪದೇಶ – ಧರ್ಮತತ್ವಗಳ ಬೋಧನೆ; (ಜೈನ) ಸ್ವಾಧ್ಯಾಯದ ಐದು ಅಂಗಗಳಲ್ಲಿ ಒಂದು
- ಧರ್ಮೋಪದೇಶಂಗೆಯ್ – ಧರ್ಮೋಪದೇಶ ಮಾಡು
- ಧರ್ಮೋಪದೇಶಿ – ಧರ್ಮೋಪದೇಶ ಮಾಡುವವನು
- ಧವಲ(ಳ) – ಬಿಳಿಯ; ಒಂದು ಬಗೆಯ ಗಾನ
- ಧವಲ(ಳ)ಚಾಮರ – ಬಿಳಿಯ ಚಾಮರ
- ಧವಲ(ಳ)ಚ್ಛತ್ರ – ಬೆಳ್ಗೊಡೆ
- ಧವಲ(ಳ)ಪಕ್ಷ – ಹಂಸ
- ಧವಲಾ(ಳಾ)ಕ್ಷತ – ಬಿಳಿಯ ಅಕ್ಷತೆ
- ಧವಲಾ(ಳಾ)ಗಾರ – ಬಿಳಿಯ ಮನೆ, ದೊಡ್ಡ ಸೌಧ
- ಧವಲಾ(ಳಾ)ತಪತ್ರ – ಬೆಳ್ಗೊಡೆ
- ಧವಲಿ(ಳಿ)ತ – ಬಿಳಿದಾದ
- ಧವಲಿ(ಳಿ)ಮ – ಬಿಳಿಯ ಬಣ್ಣದ
- ಧವಲೋತ್ಪಲ – ಬಿಳಿಯ ನೈದಿಲೆ
- ಧವಳಗಜೇಂದ್ರ – ಶ್ರೇಷ್ಠ ಬಿಳಿಯ ಆನೆ
- ಧವಳಗ್ರೀವ – ಬಿಳಿಯ ಕತ್ತು
- ಧವಳಚಮರರುಹ – ಬಿಳಿಯ ಚಾಮರ
- ಧವಳತಲ್ಪ – ಬಿಳಿಯ ಹಾಸಿಗೆ
- ಧವಳದಂತ – ಬಿಳಿಯ ಹಲ್ಲು
- ಧವಳದ್ಯುತಿ – ಹೊಳೆಯುವ ಕಾಂತಿ
- ಧವಳಪ್ರಾಸಾದ – ಬಿಳಿಯ ಮನೆ, ಸೌಧ
- ಧವಳರಥ – ಬಿಳಿಯ ರಥ (ಹೊಂದಿರುವವನು)
- ಧವಳವಿಲೋಚನೆ – ಹೊಳಪಿನ ಕಣ್ಣುಳ್ಳವಳು
- ಧವಳಸಭೇರಮ – ಬಿಳಿಯ ಆನೆ
- ಧವಳಹಯ – ಬೆಳ್ಗುದುರೆ
- ಧವಳಾಂಗಪ್ರಭೆ – ಹೊಳೆಯುವ ದೇಹಕಾಂತಿ
- ಧವಳಾಂಬರ – ಬಿಳಿ ಬಟ್ಟೆ
- ಧವಳಾಂಶು – ಹೊಳೆಯುವ ಕಿರಣ
- ಧವಳಾಕ್ಷ – ಹೊಳಪಿನ ಕಣ್ಣು
- ಧವಳಾಕ್ಷಿ – ಧವಳವಿಲೋಚನೆ
- ಧವಳಾತಪವಾರಣ – ಬೆಳ್ಗೊಡೆ
- ಧವಳಾಪಾಂಗ – ಹೊಳೆಯುವ ಕುಡಿನೋಟ
- ಧವಳಾಬ್ದ – ಬಿಳಿಯ ಕಮಲ
- ಧವಳಾಭ್ರ – ಬೆಳ್ಮುಗಿಲು
- ಧವಳಾರ – ಧವಳಾಗಾರ, ಬಿಳಿಯ ಮನೆ
- ಧವಳಿಸು – ಬಿಳುಪಾಗು; ಪ್ರಕಾಶಿಸು
- ಧವಳೇಕ್ಷಣೆ – ಧವಳಾಕ್ಷಿ
- ಧವಳೇಕ್ಷು – ಧವಳ+ಇಕ್ಷು, ಬಿಳಿ ಕಬ್ಬು
- ಧಾತಕೀ – ಇಪ್ಪೆಯ ಹೂ
- ಧಾತಕೀಷಂಡ – (ಜೈನ) ಪುಷ್ಕರದ್ವೀಪದ ಒಂದು ಭಾಗ; ಧಾತಕೀವೃಕ್ಷ ಹೇರಳವಾಗಿರುವ ಜಾಗ
- ಧಾತೃಪುತ್ರ – ಬ್ರಹ್ಮಪುತ್ರ, ನಾರದ
- ಧಾತ್ರಿ – ಸಾಕುತಾಯಿ, ದಾದಿ; ಭೂಮಿ; ನೆಲ್ಲಿ
- ಧಾತ್ರಿಕೆ – ದಾದಿ
- ಧಾತ್ರಿಜೆ – ದಾದಿಯ ಮಗಳು; ಭೂಮಿಯ ಮಗಳು, ಸೀತೆ
- ಧಾತ್ರಿಪ – ಭೂಮಿಯ ಒಡೆಯ, ರಾಜ
- ಧಾತ್ರಿಪತಿ – ಧಾತ್ರಿಪ
- ಧಾತ್ರಿವಲ್ಲಭ – ಧಾತ್ರಿಪ
- ಧಾತ್ರೀಜನ – ದಾದಿಯರು; ಭೂಲೋಕದ ಜನರು
- ಧಾತ್ರೀತಲ – ಭೂಮಿ
- ಧಾತ್ರೀಧರ – ಪರ್ವತ
- ಧಾತ್ರೀಪತಿ – ಧಾತ್ರಿಪ
- ಧಾತ್ರೀಪುತ್ರಿ – ಧಾತ್ರಿಜೆ
- ಧಾತ್ರೀಫಳ – ನೆಲ್ಲಿಕಾಯಿ
- ಧಾತ್ರೀರಜ – ಮಣ್ಣು
- ಧಾತ್ರೀರುಹ – ಮರಗಿಡ
- ಧಾತ್ರೀಶ – ಧಾತ್ರಿಪ
- ಧಾತ್ರೀಶಾಜ್ಞೆ – ರಾಜಾಜ್ಞೆ
- ಧಾತ್ರೀಸುತೆ – ಧಾತ್ರಿಜೆ
- ಧಾನುಷ್ಕ – ಧನುಸ್ಸಿನಿಂದ ಯುದ್ಧಮಾಡುವವನು
- ಧಾನುಷ್ಕಬಲ(ಳ) – ಬಿಲ್ಗಾರರ ಪಡೆ
- ಧಾನುಷ್ಕಾನೀಕ – ಧಾನುಷ್ಕಬಲ(ಳ)
- ಧಾನ್ಯ – ದವಸ; ಒಂದು ತೂಕದ ಪ್ರಮಾಣ
- ಧಾನ್ಯಕ – ಕೊತ್ತಂಬರಿ
- ಧಾನ್ಯಮಂಜರಿ – ಕಾಳಿನ ತೆನೆ
- ಧಾನ್ಯಸಂಚಯ – ದವಸದ ಸಂಗ್ರಹ
- ಧಾನ್ಯಸಮಿತಿ – ಬಗೆಬಗೆಯ ದವಸ
- ಧಾನ್ವನದುರ್ಗ – ಮರುಭೂಮಿಯ ನಡುವಣ ದುರ್ಗ
- ಧಾಮ – ಮನೆ; ದೇಹ; ಕಾಂತಿ
- ಧಾರಣ – ಆಧಾರ
- ಧಾರಾಗೃಹ – ತಂಪಾಗಿರಲು ನೀರು ಎರಚುವ ಏರ್ಪಾಟಿರುವ ಮನೆ
- ಧಾರಾಧರ – ಮೋಡ
- ಧಾರಾನಿಳಯ – ಧಾರಾಗೃಹ
- ಧಾರಾಪಂಚಕ – ಕುದುರೆಯ ಐದು ಬಗೆಯ ನಡಿಗೆಗಳು: ಆಸ್ಕಂದಿತ, ಧೌರಿತಕ, ರೇಚಿತ, ವಲ್ಗಿತ, ಪ್ಲುತ
- ಧಾರಾಭಿಷೇಕ – ಧಾರೆ ಎರೆದು ಮಾಡುವ ಅಭಿಷೇಕ
- ಧಾರಾಲಯ – ಧಾರಾಗೃಹ
- ಧಾರಾವರ್ತ – ಸುರಿಮಳೆ
- ಧಾರಾಹತಿ – ಅಲುಗಿನ ಏಟು
- ಧಾರಿಣಿ – ದೇಶ
- ಧಾರಿಣಿಪತಿ – ರಾಜ
- ಧಾರಿಣೀಶಯನ – ನೆಲದ ಮೇಲೆ ಮಲಗುವುದು
- ಧಾಷ್ಟ್ರ್ಯ – ಉದ್ಧಟತೆ
- ಧಿಕ್ಕರಿಸು – ನಿಂದಿಸು
- ಧಿರು – ಭಲೆ
- ಧಿಷಣ – ಪ್ರತಿಭಾವಂತ
- ಧೀಂಕು – ತುಳಿತ
- ಧೀಮಂತ – ಮೇಧಾವಿ
- ಧೀರ – ಧೈರ್ಯವಂತ
- ಧೀರತೆ – ಧೈರ್ಯ
- ಧೀರತೆಗಿಡು – ಧೈರ್ಯ ಕಳೆದುಕೊ
- ಧೀರನಿಧಿ – ಮಹಾ ಧೈರ್ಯವಂತ
- ಧೀವರ – ಬೇಟೆಗಾರ; ಬೆಸ್ತ
- ಧೀವರೆ – ಬೇಟೆಗಾತಿ
- ಧೀಷಣ – ಬುದ್ಧಿವಂತ
- ಧುರ – ಯುದ್ಧ
- ಧುರಗಲಿ – ರಣಧೀರ
- ದುರಂಧರ – ಮುಂದಾಳು
- ಧುರಂಧರತೆ – ಮುಂದಾಳುತನ
- ಧುರಧರಣಿ – ರಣಭೂಮಿ
- ಧುರಧರೆ – ಧುರಧರಣಿ
- ಧುರಧಾರಿಣಿ – ಧುರಧರಣಿ
- ಧುರಭರ – ಯುದ್ಧತೀವ್ರತೆ
- ಧುರಾವನಿ – ಧುರಧರಣಿ
- ಧೂಪಗುಂಡಿಗೆ – ಧೂಪದ ಪಾತ್ರೆ
- ಧೂಪಘಟ – ಧೂಪಗುಂಡಿಗೆ
- ಧೂಪಧೂಮ – ಧೂಪದ ಹೊಗೆ
- ಧೂಪಧೂಮಘಟ – ಧೂಪಘಟ
- ಧೂಪಭಾಜನ – ಧೂಪಘಟ
- ಧೂಪವರ್ತಿ – ಧೂಪ ಸೇರಿಸಿ ಮಾಡಿದ ಬತ್ತಿ
- ಧೂಪಾಮೋದ – ಧೂಪದ ಆಹ್ಲಾದ
- ಧೂಪೋದ್ಧಾರ – ಧೂಪ ಸಮರ್ಪಣೆ
- ಧೂಮ – ಹೊಗೆ
- ಧೂಮಜ್ವಾಲೆ – ಹೊಗೆಸಹಿತವಾದ ಬೆಂಕಿ
- ಧೂಮಧ್ವಜ – ಹೊಗೆಯ ಬಾವುಟವುಳ್ಳವನು, ಅಗ್ನಿ
- ಧೂಮಪತಾಕ – ಧೂಮಧ್ವಜ
- ಧೂಮಪ್ರಭೆ – (ಜೈನ) ಒಂದು ನರಕ, ನೋಡಿ,
ಸಪ್ತನರಕ
- ಧೂಮಮಾಳೆ – ಹೊಗೆಯ ಪಂಕ್ತಿ
- ಧೂಮಲೇಖೆ – ಹೊಗೆಯ ಗೆರೆ
- ಧೂಮಸ್ತೋಮ – ಹೊಗೆಯ ರಾಶಿ
- ಧೂಮಾಂಕ – ಅಗ್ನಿ
- ಧೂಮಾಳಿ – ಧೂಮಸ್ತೋಮ
- ಧೂಮ್ರಾವರ್ತ(ನ) – ಚಿತ್ರಗಳಿಗೆ ಬಣ್ಣ ಹಾಕುವ ಒಂದು ಬಗೆ
- ಧೂರ್ಜಟಿ – ಶಿವ
- ಧೂರ್ತ – ದುಷ್ಟ
- ಧೂರ್ತಜನ – ದುಷ್ಟಜನ
- ಧೂರ್ತತನ – ದುಷ್ಟತನ
- ಧೂರ್ತಶಿಖಾಮಣಿ – ಮಹಾ ಧೂರ್ತ
- ಧೂರ್ತೆ – ದುಷ್ಟೆ
- ಧೂರ್ತೋಕ್ತಿ – ದುಷ್ಟತನದ ಮಾತು
- ಧೂಲೀ(ಳೀ)ಪಟಲ – ಧೂಳಿನ ತೆರೆ
- ಧೂಲೀ(ಳೀ)ಪ್ರತಾನ – ಧೂಳಿನ ಆವರಣ
- ಧೂಸರ – ಬೂದುಬಣ್ಣದ
- ಧೂಸರಿತ – ಧೂಳಿನ ಬಣ್ಣದಿಂದ ಕೂಡಿದ
- ಧೂಳಿಗಾಲ್ – ಧೂಳುಗೊಂಡ ಕಾಲು
- ಧೂಳಿಪಟ – ಧೂಳಾಗುವುದು, ಪುಡಿಗುಟ್ಟುವುದು
- ಧೂಳಿವಿಡು – ಧೂಳುಂಟುಮಾಡು
- ಧೂಳೀಕೇಳಿ – ಧೂಳಿನಲ್ಲಿ ಆಡುವ ಆಟ
- ಧೂಳೀಚಿತ್ರ – ಪುಡಿಯಿಂದ ರಚಿಸಿದ ಚಿತ್ರ
- ಧೂಳೀಧೂಸರ – ಧೂಳು ತುಂಬಿ ಬೂದುಬಣ್ಣವಾದ
- ಧೂಳೀಪ್ರಾಕಾರ – (ಜೈನ) ಸಮವಸರಣ ಮಂಟಪದ ಮೊದಲನೆಯ ಪ್ರಾಕಾರ
- ಧೃತ – ತಳೆದ; ಹಿಡಿದ
- ಧೃತಕಂಟಕ – ಮುಳ್ಳಿನಿಂದ ಕೂಡಿರುವುದು
- ಧೃತಕಂಬಲ – ಕಂಬಲಸರ್ಪವನ್ನು ಧರಿಸಿದವನು, ಶಿವ
- ಧೃತಕಳಾಕಳಾಪ – ಕಲೆಗಳ ಸಮೂಹವನ್ನು ಪಡೆದವನು
- ಧೃತಧೈರ್ಯ – ಧೈರ್ಯತಾಳಿದವನು
- ಧೃತಮನೋರಥ – ದೃಢವಾದ ಮನಸ್ಸುಳ್ಳವನು
- ಧೃತಮೋಹ – ಮೋಹವುಳ್ಳವನು
- ಧೃತರಜ – ಧೂಳಿನಿಂದ ಕೂಡಿದವನು
- ಧೃತರಾಷ್ಟ್ರ – ರಾಷ್ಟ್ರದ ಭಾರವನ್ನು ಹೊತ್ತವನು; ಕೌರವರ ತಂದೆ
- ಧೃತವೇತ್ರ – ಬೆತ್ತ ಹಿಡಿದವನು, ದಂಡಧಾರಿ
- ಧೃತಶಶಿಕಲ – ಚಂದ್ರಕಲೆಯನ್ನು ಧರಿಸಿದವನು, ಶಿವ
- ಧೃತಶೈತ್ಯ – ಶೈತ್ಯವನ್ನು ಹೊಂದಿರುವುದು
- ಧೃತಿ – ಧೈರ್ಯ
- ಧೃತಿಗುಂದು – ಧೈರ್ಯ ಕಳೆದುಕೊ
- ಧೃತಿಗೆಡು – ಧೃತಿಗುಂದು
- ಧೃತಿಯುಕ್ತ – ಧೈರ್ಯವಂತ
- ಧೃತಿವೆ¾ು – ಧೈರ್ಯ ಹೊಂದು
- ಧೃಷ್ಟ – ಧೈರ್ಯವುಳ್ಳವನು; ಉದ್ಧಟ
- ಧೇನುಕ – ಕತ್ತೆಯಾಕೃತಿಯ ಒಬ್ಬ ರಾಕ್ಷಸ
- ಧೇನುಕುಚ – ಹಸುವಿನ ಕೆಚ್ಚಲು
- ಧೈರ್ಯ – ಕೆಚ್ಚು
- ಧೈರ್ಯಂಗೆ(ಗಿ)ಡು – ಧೈರ್ಯ ಕಳೆದುಕೊ
- ಧೈರ್ಯಕ್ಷತಿ – ಧೈರ್ಯನಾಶ
- ಧೈರ್ಯಗುಣ – ನಿಶ್ಚಲತೆ
- ಧೈರ್ಯನಿಧಿ – ಮಹಾ ಧೈರ್ಯವಂತ
- ಧೈರ್ಯಪರ – ಧೈರ್ಯ ಹೊಂದಿದ
- ಧೈರ್ಯಯುತ – ಧೈರ್ಯಪರ
- ಧೈರ್ಯವಂತ – ಧೈರ್ಯಶಾಲಿ
- ಧೈವತ – ಸಪ್ತಸ್ವರಗಳಲ್ಲಿ ಆರನೆಯದು; ನೋಡಿ,
ಸಪ್ತಸ್ವರ
- ಧೋತ್ರ – ಉತ್ತರೀಯ
- ಧೌತ – ತೊಳೆದ
- ಧೌತಕೀರ್ತಿ – ಪರಿಶುಬ್ರ ಕೀರ್ತಿ
- ಧೌತವಲ್ಕಲ – ಶುಚಿಯಾದ ಬಟ್ಟೆ
- ಧೌತವಸ್ತ್ರ – ಧೌತವಲ್ಕಲ
- ಧೌತಾಂಬರ – ಧೌತವಲ್ಕಲ
- ಧೌರೇಯ – ಜವಾಬ್ದಾರಿ ಹೊತ್ತವನು
- ಧ್ಯಾತೃ – ಧ್ಯಾನಮಾಡುವವನು
- ಧ್ಯಾನ – ಚಿಂತನೆ
- ಧ್ಯಾನಚತುಷ್ಟಯ – (ಜೈನ) ಆರ್ತ, ರೌದ್ರ, ಧರ್ಮ, ಶುಕ್ಲ ಎಂಬ ನಾಲ್ಕು ಬಗೆಯ ಧ್ಯಾನಗಳು
- ಧ್ಯಾನಾಧೀನ – ಧ್ಯಾನದಲ್ಲಿ Pಮುಳುಗಿದ
- ಧ್ಯಾನಿಸು – ಧ್ಯಾನಮಾಡು
- ಧ್ರುವ – ಸ್ಥಿರ; ಒಂದು ನಕ್ಷತ್ರ; ಒಂದು ತಾಳದ ಹೆಸರು
- ಧ್ರುವಕ್ಷೇತ್ರ – ಕುದುರೆಯ ದೇಹದ ಮೇಲಿನ ರೋಮದ ಹತ್ತು ಸುಳಿಗಳಿರುವ ಜಾಗ
- ಧ್ವಂಸ(ನ) – ಬೀಳು, ನಾಶ (ಮಾಡುವುದು)
- ಧ್ವಜ – ಪತಾಕೆ; ಗುರುತು
- ಧ್ವಜಪಟ – ಧ್ವಜ
- ಧ್ವಜಮಯ – ಬಾವುಟಗಳಿಂದ ಕೂಡಿದ
- ಧ್ವಜಿನಿ – ಧ್ವಜವನ್ನು ಪಡೆದಿರುವಂಥದು, ಸೈನ್ಯ
- ಧ್ವಜಿನೀಪತಿ – ಸೇನಾಧಿಪತಿ
- ಧ್ವಜಿನೀಮುಖ್ಯ – ಧ್ವಜಿನೀಪತಿ
- ಧ್ವನಿಗೆಯ್ – ಶಬ್ದಮಾಡು
- ಧ್ವಸ್ತ – ಕೆಳಗೆ ಬಿದ್ದ; ನಾಶಗೊಂಡ
- ಧ್ವಸ್ತದಿತಿಜ – ರಾಕ್ಷಸನನ್ನು ನಾಶಗೈದವನು
- ಧ್ವಾಂಕ್ಷ – ಕಾಗೆ
- ಧ್ವಾಂಕ್ಷಧ್ವಜ – ಕಾಗೆಯ ಗುರುತುಳ್ಳವನು, ಕರ್ಣ
- ಧ್ವಾಂತ – ಕತ್ತಲೆ
- ಧ್ವಾಂತಬಂಧ – ಕತ್ತಲೆಯ ಕಟ್ಟು
- ಧ್ವಾಂತವಿಧ್ವಂಸನ – ಕತ್ತಲೆಯನ್ನು ನಾಶಗೈಯುವವನು, ಸೂರ್ಯ; ಚಂದ್ರ
- ಧ್ವಾನ – ಶಬ್ದ
- ಧ್ವಾನಿತ – ಶಬ್ದಗೈದ
CONCLUSION:
ಕನ್ನಡ ಧ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.