ಕನ್ನಡ ಘ ಅಕ್ಷರದ ಹಳೆಗನ್ನಡ  ಪದಗಳು – Kannada Words

Check out Kannada gha aksharada halegannadada padagalu , ಕನ್ನಡ ಘ ಅಕ್ಷರದ ಹಳೆಗನ್ನಡ  ಪದಗಳು (ghA halegannada Words in kannada ).

ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ಘ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( ghA halegannada Words in kannada ) ತಿಳಿದುಕೊಳ್ಳೋಣ.

ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.

ಕನ್ನಡ ಅಕ್ಷರ ಎಂದರೇನು?

ಘ, ಕನ್ನಡ ವರ್ಣಮಾಲೆಯ ಕ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ, ಮಹಾಪ್ರಾಣಾಕ್ಷರ. ಇದು ಕಂಠ್ಯ ಘೋಷಸ್ಪರ್ಶ.

ಅಶೋಕನ ಕಾಲದಿಂದ ಮೈಸೂರು ಅರಸರ ಕಾಲದವರೆಗಿನ ಬರೆಹಗಳನ್ನು ಪರಿಶೀಲಿಸಿದರೆ ಈ ಅಕ್ಷರದ ರೂಪ ಅದೆಷ್ಟು ಬದಲಾಗಿದೆಯೆಂಬುದು ಸ್ಪಷ್ಟವಾಗುತ್ತದೆ. ರಾಷ್ಟ್ರಕೂಟರ ಕಾಲಕ್ಕೆ ಈ ಅಕ್ಷರದ ಮುಖ್ಯ ಭಾಗವಾದ ಕೊಂಡಿಯೊಂದು ಬಲಭಾಗದಲ್ಲಿ ಮೂಡಿರುವುದನ್ನು ಕಾಣಬಹುದು. ಇದೇ ರೂಪ ನಾಲ್ಕು ಶತಮಾನಗಳ ಕಾಲ ನಡೆದುಬಂತು. ಆನಂತರ, ಇದೇ ರೂಪದ ಷ ಮತ್ತು ಹ ಕಾರಗಳಿಂದ ಇದನ್ನು ಪ್ರತ್ಯೇಕಿಸಲು ಇದರ ಹೊಕ್ಕಳನ್ನು ಸೀಳಿದಂತೆ ತೋರುತ್ತದೆ. ಹದಿನೆಂಟನೆಯ ಶತಮಾನದ ಹೊತ್ತಿಗೆ ಖಚಿತಗೊಂಡ ಈ ರೂಪವೇ ಇಂದಿಗೂ ಬಳಕೆಯಲ್ಲಿದೆ.

Check out Kannada Varnamale : ಕನ್ನಡ ವರ್ಣಮಾಲೆ

ಕನ್ನಡ ಅಕ್ಷರದ ಹಳೆಗನ್ನಡ  ಪದಗಳು – Kannada Words

 1. ಘಂಟಾಜಾಲ – ಗಂಟಗಳ ಸಮೂಹ
 2. ಘಂಟಾಪಥ – (ಗಂಟೆ ಕಟ್ಟಿದ ಆನೆ ಮುಂತಾದವು
 3. ಸಾಗುವ) ಹೆದ್ದಾರಿ
 4. ಘಂಟಾರವ – ಗಂಟೆಯ ಸದ್ದು
 5. ಘಂಟಾರುತಿ – ಘಂಟಾರವ
 6. ಘಂಟಿಕಾಜಾಲ – ಕಿರುಗಂಟೆಗಳ ಸಮೂಹ
 7. ಘಟ – ಗಡಿಗೆ
 8. ಘಟಚೇಟಿ(ಕೆ) – ನೀರು ತರುವ ದಾಸಿ
 9. ಘಟಜಾತ – ಬಿಂದಿಗೆಗಳ ಸಮೂಹ
 10. ಘಟಪಾಕವಿಲೇಪನ – ಮಡಕೆಯ್ನು ಸುಡುವ ಮೊದಲು ಅದಕ್ಕೆ ಬಳಿಯುವ ಲೇಪನದ್ರವ್ಯ
 11. ಘಟಸರ್ಪ – ಮಡಕೆಯಲ್ಲಿರುವ ನಾಗರಹಾವು
 12. ಘಟಾ – ಗುಂಪು
 13. ಘಟಾಘಟಿತ – ಆನೆಯ ಸಮೂಹದಿಂದ ಕೂಡಿದ
 14. ಘಟಾವಣೆ – ಹೊಂದಿಕೆ
 15. ಘಟಾಳಿ – ಆನೆಗಳ ಸಾಲು
 16. ಘಟಿಕಾತ್ಮ – ಸಣ್ಣ ಗಡಿಗೆ; ಗಳಿಗೆಗಳ ಎಣಿಕೆಯಿಂದ ಕೂಡಿದುದು
 17. ಘಟಿಕಾಸ್ಥಾನ – ಧಾರ್ಮಿಕ ವಿಷಯಗಳ್ರುಚ್ಚ ಶಿಕ್ಷಣ ಕೇಂದ್ರ; ಸಿದ್ಧಿಕ್ಷೇತ್ರ
 18. ಘಟಿತ – ಕೂಡಿದ
 19. ಘಟಿಸು – ಸಂಭವಿಸು
 20. ಘಟೀಯಂತ್ರ – ಬಾವಿಯಿಂದ ನೀರೆತ್ತುವ ರಾಟಣ
 21. ಘಟೆ – ಆನೆಗಳ ಗುಂಪು
 22. ಘಟೋಧ್ನಿ – ದೊಡ್ಡ ಕೆಚ್ಚಲುಳ್ಳ ಹಸು
 23. ಘಟ್ಟಾಘಟ್ಟಿ – ಪರಸ್ಪರ ಹೊಡೆದಾಟ
 24. ಘಟ್ಟಿಕೆ – ಉಂಟಾಗುವಿಕೆ
 25. ಘಟ್ಟಿತ – ಹೊಡೆಯಲ್ಪಟ್ಟ
 26. ಘಟ್ಟಿಸು – ಅಪ್ಪಳಿಸು
 27. ಘಟ್ಟಿವಳ್ತಿ – ಗಂಧ ತೇಯುವವಳು
 28. ಘನ – ಮೋಡ
 29. ಘನಕದಂಬಮುಕ್ತಕ – ಒತ್ತಾಗಿ ಅರಳಿರುವ
 30. ಕದಂಬಪುಷ್ಪಗಳ ಸಮೂಹ
 31. ಘನಕಾಲ – ಮಳೆಗಾಲ
 32. ಘನಗ್ರಾವ – ಆಲಿಕಲ್ಲು
 33. ಘನಘಟಾ(ಟೆ) – ಮೋಡದ ರಾಶಿ
 34. ಘನತರ – ಬಹಳ ದೊಡ್ಡ
 35. ಘನತರಂಗಿಣಿ – ದೊಡ್ಡ ನದಿ
 36. ಘನಧ್ವನಿ – ಗುಡುಗು
 37. ಘನನಿನದ – ಘನಧ್ವನಿ
 38. ಘನಪಟಳ – ಘನಘಟೆ
 39. ಘನಪಥ – ಆಕಾಶ
 40. ಘನಪದವಿ – ಉತ್ತಮಸ್ಥಾನ; ಮೋಡದ ಪದವಿ
 41. ಘನಬಾಹಾಬಲ – ಅಪಾರ ಬಾಹುಬಲ
 42. ಘನಮಹಿಮ – ಅಪಾರ ಮಹಿಮೆಯನ್ನು ಹೊಂದಿದವನು
 43. ಘನಮಾರ್ಗ – ಘನಪಥ
 44. ಘನಮಾಲಿಕೆ – ಮೋಡಗಳ ಸಾಲು
 45. ಘನಮೂಲ – ಭದ್ರವಾದ ಬೇರು
 46. ಘನರವ – ಗುಡುಗು
 47. ಘನರಸ – ಕರ್ಪೂರ
 48. ಘನವರ್ಷ – ಭಾರಿ ಮಳೆ
 49. ಘನವಾತ – (ಜೈನ) ಭೂಲೋಕವನ್ನು ಆವರಿಸಿರುವ ಘನೋದದೀ, ಘನವಾತ, ತನುವಾತಗಳೆಂಬ ಮೂರು ವಾಯುಗಳಲ್ಲಿ ಒಂದು
 50. ಘನವಿವರ – ಮೋಡಗಳ ನಡುವಣ ಬಿರುಕು
 51. ಘನಶ್ರೀ – ಮೋಡಗಳ ಕಾಂತಿ
 52. ಘನಸಮಯ – ಮೋಡಗಳ ಕಾಲ, ಮಳೆಗಾಲ
 53. ಘನಸಾರ – ತುಂಬ ಶ್ರೇಷ್ಠ; ಪಚ್ಚಕರ್ಪೂರ
 54. ಘನಸುಚ್ಛಾಯ – ದಟ್ಟವಾದ ನೆರಳಿರುವ
 55. ಘನಸ್ತನ – ದೊಡ್ಡ ಮೊಲೆ
 56. ಘನಸ್ತನಿತ – ಗುಡುಗು
 57. ಘನಸ್ವನ – ಗುಡುಗು
 58. ಘನಾಗಮ – ಮಳೆಗಾಲ
 59. ಘನಾಘನ – ಮಳೆಯ ಮೋಡ
 60. ಘನಾನಕ – ನಗಾರಿ
 61. ಘನಾನಿಲ – ಘನವಾತ
 62. ಘನೀಭಾವ – ಗಟ್ಟಿಯಾಗಿರುವಿಕೆ
 63. ಘನೋದದೀ – (ಜೈನ) ಅನಂತಲೋಕವನ್ನು ಸುತ್ತಿರುವ ವಾತತ್ರಿತಯಗಳಲ್ಲಿ ಒಂದು
 64. ಘನೋದಯೋಪಳ – ಆಲಿಕಲ್ಲು
 65. ಘನೋಪಲ(ಳ) – ಆಲಿಕಲ್ಲು
 66. ಘಮ್ಮನೆ – ಬೇಗನೆ
 67. ಘರವಟ್ಟಿಗೆ ಆಳ್ – ಗರವಟಿಗೆ (ಗಸ್ತು) ತಿರುಗುವ ಆಳು
 68. ಘರವಟ್ಟಿಸು – ಬೀಸು, ತಿರುಗಿಸು
 69. ಘರ್ಘರಧ್ವನಿ – ಗರಗರ ಶಬ್ದ, ಕರ್ಕಶಶಬ್ದ
 70. ಘರ್ಘರಿ(ಕೆ) – ಗೆಜ್ಜೆಯ ಆಭರಣ
 71. ಘರ್ಮ – ಬೆವರು; ಬೇಸಗೆ
 72. ಘರ್ಮಜಲ – ಬೆವರು; ಬಿಸಿನೀರು
 73. ಘರ್ಮೋದಕ – ಘರ್ಮಜಲ
 74. ಘರ್ಮೋರ್ಮಿ – ಬಿಸಿಲಿನ ದಗೆಯ ಅಲೆ
 75. ಘಲ್ಘಲ್ – ಒಂದು ಅನುಕರಣ ಶಬ್ದ
 76. ಘಸಣಿ – ಆತಂಕ
 77. ಘಸ್ಮರ – ತಿನ್ನಾಳಿ; ನಾಶಮಾಡುವವನು
 78. ಘಸ್ರ – ಹಗಲು
 79. ಘಳಿಯ – ನಿಯಮ
 80. ಘಳಿಯಿಸು – ಸಂಭವಿಸು
 81. ಘಳಿಲನೆ – ಬೇಗನೆ
 82. ಘಾತಿ – ಹೊಡೆತ; ಕೊಲೆಪಾತಕಿ
 83. ಘಾತಿಕರ್ಮ(ಚತುಷ್ಟಯ) – (ಜೈನ) ಆತ್ಮನ ಗುಣಕ್ಕೆ ಘಾತಕವಾದ ಜ್ಞಾನಾವರಣೀಯ, ದರ್ಶನಾವರಣಿಯ, ಅಂತರಾಯ, ಮೋಹನೀಯ ಎಂಬ ನಾಲ್ಕು ಕರ್ಮಗಳು
 84. ಘಾತಿಕ್ಷಯ – (ಜೈನ) ಘಾತಿಕರ್ಮಗಳ ನಾಶ
 85. ಘಾತಿಚತುಷ್ಕ – ಘಾತಿಕರ್ಮ(ಚತುಷ್ಟಯ)
 86. ಘಾತಿಚತುಷ್ಟಯ – ಘಾತಿಕರ್ಮ(ಚತುಷ್ಟಯ)
 87. ಘಾತಿತ್ರಿಕ – (ಜೈನ) ಘಾತಿಕರ್ಮಗಳಲ್ಲಿ
 88. ಜ್ಞಾನಾವರಣೀಯ, ದರ್ಶನಾವರಣಿಯ, ಮೋಹನೀಯ ಎಂಬ ಮೂರು
 89. ಘಾತಿದ್ವಿಷದ್ – ಘಾತಿ ಕರ್ಮಗಳೆಂಬ ಶತ್ರು
 90. ಘಾತಿನಿ – ವಿನಾಶಕಾರಕಿ
 91. ಘಾತಿಪ್ರಚುರೆ – (ಜೈನ) ಘತಿಕರ್ಮಗಳಿಂದ ಕೂಡಿದವಳು
 92. ಘಾತಿಸು – ಹೊಡೆ
 93. ಘಾರಾಘಾರಿ – ರಭಸ
 94. ಘಾಸ – ಮೇವು
 95. ಘಾಸರ – ಹಗಲು
 96. ಘುಂಟ – ಪಾದದ ಗೆಣ್ಣು
 97. ಘುಂಟಿಕೆ – ಘುಂಟ
 98. ಘುಡಿಘುಡಿಸು – ಘುಡುಘುಡು ಸದ್ದುಮಾಡು
 99. ಘುಣಾಕ್ಷರಪ್ರಾಯ – ಹುಳುಗಳಿಂದ ಓಲೆಗರಿಯಲ್ಲಿ ಗೆರೆ ಬಿದ್ದು ಅಕ್ಷರಗಳಂತೆ ಕಾಣಿಸುವುದು
 100. ಘುರುಘುರಿಸು – ಘುರುಘುರು ಸದ್ದುಮಾಡು
 101. ಘುಸೃಣ – ಕುಂಕುಮ
 102. ಘೂಕ – ಗೂಬೆ
 103. ಘೂತ್ಕರಿಸು – ಘೂ ಎಂದು ಶಬ್ದಮಾಡು
 104. ಘೂರ್ಜರ – ಗುರ್ಜರ ದೇಶ
 105. ಘೂರ್ಣ – ನಡುಗುವ
 106. ಘೂರ್ಣಿತ – ಅಲುಗುತ್ತಿರುವ
 107. ಘೂರ್ಣಿಸು – ಪ್ರಕ್ಷುಬ್ಧವಾಗು
 108. ಘೃಣಿ – ಜುಗುಪ್ಸೆ; ಕಾಂತಿ; ಕಿರಣ
 109. ಘೃಣಿಪಟಲ – ಕಿರಣಸಮೂಹ
 110. ಘೃತ – ತುಪ್ಪ
 111. ಘೃತಾಹುತಿ – ತುಪ್ಪದ ಆಹುತಿ
 112. ಘೋಟಾರೂಢ – ಕುದುರೆ ಸವಾರ
 113. ಘೋಣ – ಮೂಗು
 114. ಘೋರಂಬಡಿಸು – ಪೀಡೆಯುಂಟುಮಾಡು
 115. ಘೋರತಪ – ಕಠಿಣವಾದ ತಪಸ್ಸು
 116. ಘೋರತಮ – ಹೆದರಿಕೆ ತರುವ ಕಗ್ಗತ್ತಲು
 117. ಘೋಷಣೆವಡೆ – ಕೀರ್ತಿ ಹೊಂದು
 118. ಘೋಷಾಕರ – ಕಣಜ
 119. ಘೋಷಿಸು – ಗಟ್ಟಿಯಾಗಿ ಹೇಳು
 120. ಘ್ರಾಣ – ಮೂಗು
 121. ಘ್ರಾಣಗಹ್ವರ – ಮೂಗಿನ ಹೊಳ್ಳೆ
 122. ಘ್ರಾಣೀಯ – ಮೂಸಿನೋಡಬಹುದಾದ; ಒಳ್ಳೆಯ ವಸನೆಯುಳ್ಳ
 123. ಘೂರ್ಣಿಸು – ಕ್ಷೋಭೆಗೊಂಡು ಶಬ್ದಮಾಡು
 124. ಘೋಷ – ಗೊಲ್ಲರ ಹಟ್ಟಿ
 125. ಘೋಳಾಯ್ಲ – ಕುದುರೆ ಸವಾg

Conclusion:

ಕನ್ನಡ ಘ ಅಕ್ಷರದ ಹಳೆಗನ್ನಡ  ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.

Similar Posts

0 0 votes
Article Rating
Subscribe
Notify of
guest

0 Comments
Inline Feedbacks
View all comments