ಕನ್ನಡ ವ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada va aksharada halegannadada padagalu , ಕನ್ನಡ ವ ಅಕ್ಷರದ ಹಳೆಗನ್ನಡ ಪದಗಳು (vA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ವ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( va halegannada Words in kannada ) ತಿಳಿದುಕೊಳ್ಳೋಣ
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ.
ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ. ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ವ ಅಕ್ಷರ ಎಂದರೇನು?
ವ, ಕನ್ನಡ ವರ್ಣಮಾಲೆಯ ಐದನೇ ಅವರ್ಗೀಯ ವ್ಯಂಜನವಾಗಿದೆ. ದಂತೋಷ್ಠ್ಯ ಘೋಷ ಸಂಘರ್ಷ ವ್ಯಂಜನ ಧ್ವನಿ.
ಅಶೋಕನ ಕಾಲದ ಬ್ರಾಹ್ಮೀಲಿಪಿಯಲ್ಲಿ ಗುಂಡಾದ ಮತ್ತು ವೃತ್ತಾಕಾರದ ಅಕ್ಷರಗಳು ಬಹು ಕಡಮೆ. ಆದರೆ ವ ಎಂಬ ಅಕ್ಷರ ವೃತ್ತದ ಮೇಲೆ ಒಂದು ಸರಳರೇಖೆಯನ್ನುಳ್ಳದ್ದಾಗಿದೆ. ಸಾತವಾಹನ ಕಾಲದಲ್ಲಿ ಈ ವೃತ್ತ ತ್ರಿಕೋಣಾಕೃತಿಯಾಗಿ ಪರಿವರ್ತಿತವಾಗಿದೆ.
ಕದಂಬ ಕಾಲದಲ್ಲಿ ಈ ತ್ರಿಕೋಣ ಅಗಲವಾಗಿ ಸರಳ ರೇಖೆಯ ಒಂದು ಭಾಗದಲ್ಲಿ ಮಾತ್ರ ಬರೆಯಲ್ಪಡುತ್ತದೆ. ರಾಷ್ಟ್ರಕೂಟ ಕಾಲ ದಲ್ಲಿ ಕೆಳಭಾಗದ ಕೊಂಡಿ ಪಕ್ಕದ ರೇಖೆಗೆ ಇನ್ನೂ ಸೇರಿಕೊಂಡಿರುವು ದನ್ನು ಗಮನಿಸ ಬಹುದು. ಇದು ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಬದಲಾ ವಣೆಯನ್ನು ಹೊಂದುತ್ತದೆ.
ಆಗ ಪಕ್ಕದ ರೇಖೆ ಕೆಳಭಾಗದ ಕೊಂಡಿಯೊಂದಿಗೆ ಸೇರಿರದೆ ಇರುವುದು ಗಮನಾರ್ಹ. ಕಳಚುರಿ, ಹೊಯ್ಸಳ ಮತ್ತು ಸೇವುಣರ ಕಾಲದಲ್ಲಿ ಈ ಕೊಂಡಿ ಇನ್ನೂ ಸಣ್ಣದಾಗಿ ಪಕ್ಕದ ರೇಖೆಯಿಂದ ದೂರ ಸರಿಯುತ್ತದೆ. ಇದೇ ರೂಪವೇ ವಿಜಯನಗರ ಮತ್ತು ಮೈಸೂರು ಅರಸರ ಕಾಲದಲ್ಲಿಯೂ ಮುಂದುವರಿಯುತ್ತದೆ
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ವ ಹಳೆಗನ್ನಡ ಅಕ್ಷರದ ಪದಗಳು – Kannada Words
- ವಂಕದ(ದಾ)ರ – ಗುಪ್ತವಾದ ಬಾಗಿಲು
- ವಂಕಿ – ಚಂದ್ರಾಯುಧ
- ವಂಚ – ವಂಶ
- ವಂಚಿಸು – ಮೋಸಮಾಡು; ಮುಚ್ಚಿಡು
- ವಂದನಮಾಲೆ(ಳೆ)(ಲಿಕೆ) – ತೋರಣ
- ವಂದಾರು – ಸ್ತುತಿಕಾರ; ಹೊಗಳುವವನು
- ವಂದಿ – ಹೊಗಳು ಭಟ್ಟ
- ವಂದಿಜನ – ಹೊಗಳುಭಟ್ಟರ ಗುಂಪು
- ವಂದಿಸು – ನಮಸ್ಕರಿಸು; ಸ್ತುತಿಸು
- ವಂದ್ಯತೆ – (ಜೈನ) ಪರಿವ್ರಾಜಕರ ಲಕ್ಷಣಗಳನ್ನು ಹೇಳುವ ಸೂತ್ರಪದ
- ವಂಧ್ಯಾಸ್ತನಂಧಯ – ಬಂಜೆಯ ಮಗು; ಅಸಂಭವ
- ವಂಧ್ಯೆ – ಬಂಜೆ
- ವಂಶ – ಕುಲ; ಬಿದಿರು; ಕೊಳಲು
- ವಂಶಸ್ಥಲ – ಬಿದಿರು ಮೆಳೆ
- ವಂಶಚ್ಛೇದ – ವಂಶವನ್ನು ನಾಶಮಾಡುವುದು; ಬಿದಿರನ್ನು ಸೀಳುವುದು
- ವಂಶಾವತಾರ – ಕುಲದ ಆರಂಭ; ವಂಶದ ಆದಿಪುರುಷ
- ವಂಶಾವಳಿ – ಕುಲಾನುಕ್ರಮ
- ವಕುಲ(ಳ) – ನಾಗಕೇಸರ, ಪಗಡೆ ಗಿಡ
- ವಕ್ಖ(ಕ್ಖಾ)ಣಿಸು – (ವ್ಯಾಖ್ಯಾನಿಸು) ವಿವರಿಸು
- ವಕ್ತ್ರ – ಬಾಯಿ; ಮುಖ
- ವಕ್ತ್ರಶ್ವಾಸ – ಬಾಯಿಂದ ಬಿಡುವ ಉಸಿರು, ನಿಟ್ಟುಸಿರು
- ವಕ್ರಗತಿ – ಅಂಕುಡೊಂಕು ಚಲನೆ; ಕೆಟ್ಟ ನಡತೆ
- ವಕ್ರಗ್ರೀವ – ಒಂಟೆ
- ವಕ್ರಚಾರ – ವಕ್ರಗತಿ
- ವಕ್ರಭಣಿತಿ – ವ್ಯಂಗ್ಯವಾದ ಮಾತು
- ವಕ್ರವಚನ – ವಕ್ರೋಕ್ತಿ; ಇಂಪಾದ ಧ್ವನಿ
- ವಕ್ರವಾಕ್ಯ – ಕೊಂಕು ಮಾತು
- ವಕ್ರಿಮ – ಡೊಂಕಾದ; ಸುತ್ತುಬಳಸಿನ
- ವಕ್ರೋಕ್ತಿ – ಕೊಂಕು ಮಾತು; ಚಾತುರ್ಯದ ಮಾತು
- ವಕ್ಷ(ಸ್ಥಲ) – ಎದೆ
- ವಕ್ಷೋಜ – ಮೊಲೆ
- ವಚನಪ್ರೌಢಿ – ನುಡಿನಿಪುಣತೆ
- ವಚೋವಲ್ಲಭ – ಸರಸ್ವತಿಯ ಪತಿ, ಬ್ರಹ್ಮ
- ವಚೋವಿಸ್ತರ – ಮಾತಿನ ವಿವರಣೆ
- ವಜ್ರ – ಕಠಿಣವಾದ; ನವರತ್ನಗಳಲ್ಲಿ ಒಂದು; ಇಂದ್ರನ ಆಯುಧ; ಸಿಡಿಲು
- ವಜ್ರಕವಾಟ – ತೆಗೆಯಲಾಗದ ಬಾಗಿಲು
- ವಜ್ರಕಾಂಡ – (ಜೈನ) ಚಕ್ರವರ್ತಿಗೆ ಲಭಿಸುವ ಬಿಲ್ಲು
- ವಜ್ರಕೀಟ – ದುಂಬಿ
- ವಜ್ರಕುಂಡಲ – ವಜ್ರಖಚಿತವಾದ ಕಿವಿಯ ಆಭರಣ
- ವಜ್ರತುಂಡ – ಗಟ್ಟಿಯಾದ ಕೊಕ್ಕು; (ಜೈನ) ಚಕ್ರವರ್ತಿಯ ಶಕ್ತ್ಯಾಯುಧ
- ವಜ್ರದಾಳಿ – ವಜ್ರ+ತಾಳಿ, ವಜ್ರಖಚಿತ ಮಾಂಗಲ್ಯ
- ವಜ್ರಧರ – ಇಂದ್ರ
- ವಜ್ರಪಾತ – ಸಿಡಿಲ ಹೊಡೆತ
- ವಜ್ರವಹ್ನಿ – ಸಿಡಿಲಿನ ಬೆಂಕಿ
- ವಜ್ರಾಂಗ – ಗಟ್ಟಿಯಾದ ದೇಹ
- ವಜ್ರಾಗ್ನಿ – ವಜ್ರವಹ್ನಿ
- ವಜ್ರಿ – ಇಂದ್ರ; (ಜೈನ) ಹದಿನಾರನೆಯ ತೀರ್ಥಂಕರನಾದ ಶಾಂತಿನಾಥ
- ವಜ್ರಿಶರ – ಇಂದ್ರ
- ವಟ – ಆಲದ ಮರ
- ವಟು – ಬ್ರಹ್ಮಚಾರಿ
- ವಡ್ಡವಾರ – ಶನಿವಾರ
- ವಡ್ಡಾಗರ – ನೆಲೆವೀಡು
- ವಣಿಗ್ವರ – ಪ್ರಮುಖ ವ್ಯಾಪಾರಿ
- ವಣಿಗ್ವಾಟ – ಅಂಗಡಿಸಾಲು
- ವಣಿಗ್ವಿದ್ಯೆ – ವ್ಯಾಪಾರೀವಿದ್ಯೆ
- ವಣಿಜ – ವ್ಯಾಪಾರಿ
- ವಣ್ಣಂಚಳಿ – ಬಣ್ಣಗೆಡು
- ವತಂಸ – ಕಿವಿಯ ಆಭರಣ
- ವತ್ಸಕುಲ – ಕರುಗಳ ಗುಂಪು
- ವತ್ಸರ – ವರ್ಷ
- ವದನರಸ – ಜೊಲ್ಲು
- ವದಾನ್ಯ – ಉದಾರಿ; ವಾಕ್ಚತುರ; ನಯವಾಗಿ ಮಾತಾಡುವವನು
- ವದಾನ್ಯತಾ – ಔದಾರ್ಯ
- ವದಿಸು – ಹೇಳು
- ವಧೂಜನ – ಸ್ತ್ರೀಸಮೂಹ
- ವಧೂಟಿ – ಯುವತಿ
- ವಧೂವಿಲೋಕನ – ಸೊಸೆಯನ್ನು ನೋಡಿವುದು
- ವಧೆ – ಕೊಲೆ
- ವಧ್ಯಶಿಲೆ – ಮರಣದಂಡನೆಗಾಗಿ ಕತ್ತು ಕತ್ತರಿಸಲು ಇರುವ ಕಲ್ಲು
- ವನಕರಿ – ಕಾಡಾನೆ
- ವನಕುಸುಮ – ಕಾಡಿನಲ್ಲಿ ಬೆಳೆದ ಹೂ
- ವನಕೇಳಿ – ವನವಿಹಾರ
- ವನಕ್ರೀಡೆ – ವನಕೇಳಿ
- ವನಗಜ – ವನಕರಿ
- ವನಚರ(ರಿ) – ಕಾಡಿನ ಮನುಷ್ಯ(ಳು); ಬೇಡ(ಸ್ತ್ರೀ)
- ವನಜ – ತಾವರೆ
- ವನಜಜ – ಬ್ರಹ್ಮ
- ವನಜನಾಭ – ವಿಷ್ಣು
- ವನಜಭವಾಂಡ – ಬ್ರಹ್ಮಾಂಡ
- ವನಜಮಿತ್ರ – ಸೂರ್ಯ
- ವನಜವನ – ತಾವರೆಗಳ ಸಮೂಹ
- ವನಜಾರಾತಿ – ಕಮಲದ ಶತ್ರು, ಚಂದ್ರ
- ವನಜೋದರ – ವನಜನಾಭ
- ವನತರು – ಕಾಡಿನ ಮರ
- ವನದಂತಿ – ವನಕರಿ
- ವನದಹನ – ಕಾಡುಗಿಚ್ಚು
- ವನದುರ್ಗ – ಕಾಡಿನ ಮಧ್ಯದಲ್ಲಿರುವ ಕೋಟೆ
- ವನದೇವತೆ – ಕಾಡಿನ ಅಭಿಮಾನಿ ದೇವತೆ
- ವನದೇವಿ – ವನದೇವತೆ
- ವನಧಿ – ಸಮುದ್ರ
- ವನನಾಗಾರಿ – ವನನಾಗ+ಅರಿ, ಕಾಡಾನೆಯ ಶತ್ರು, ಸಿಂಹ
- ವನನಿಧಿ – ಸಮುದ್ರ
- ವನಪಥ – ಕಾಡುದಾರಿ
- ವನಪಾಲ(ಕ) – ಉದ್ಯಾನದ ಮೇಲ್ವಿಚಾರಕ
- ವನಭೂಮಿ – ಕಾಡುಪ್ರದೇಶ
- ವನಭೃತ್ – ಮೋಡ
- ವನಮಹತ್ತರ – ವನಪಾಲ(ಕ)
- ವನಮಹಿಷ(ಷಿ) – ಕಾಡುಕೋಣ(ಎಮ್ಮೆ)
- ವನಮಾಲಾಧರ – ವಿಷ್ಣು
- ವನಮಾಲಾಸ್ಪದ – ವನಮಾಲಾಧರ
- ವನಮಾಲಿ – ವನಮಾಲಾಧರ
- ವನಮಾಲೆ – ಕಾಡುಗಳ ಸಾಲು; ಕಾಡುಹೂಗಳ ಹಾರ
- ವನಮೃಗ – ಕಾಡುಪ್ರಾಣಿ
- ವನರಾಜಿಕ್ರೀಡೆ – ವನವಿಹಾರ
- ವನರುಗ್ಬಾಂಧವ – ಕಮಲದ ಮಿತ್ರ, ಸೂರ್ಯ
- ವನರುಹ – ತಾವರೆ
- ವನರುಹನಾಭ – ವನಜನಾಭ
- ವನರುಹಭವ – ವನಜಜ, ಬ್ರಹ್ಮ
- ವನರುಹವಿಷ್ಟರ – ಕಮಲಾಸನ, ಬ್ರಹ್ಮ
- ವನಲತೆ – ಕಾಡಿನ ಬಳ್ಳಿ; ಉದ್ಯಾನವನದ ಬಳ್ಳಿ
- ವನವಾರಣ – ಕಾಡಾನೆ
- ವನವಿಹರಣ – ವನವಿಹಾರ
- ವನಷಂಡ – ಮರಗಳ ಗುಂಪು, ತೋಪು
- ವನಸಿಂಹನ್ಯಾಯ – ಒಂದು ಲೌಕಿಕನ್ಯಾಯ; ವನ-
- ಸಿಂಹಗಳ ಪರಸ್ಪರ ರಕ್ಷಣೆವನಸ್ಪತಿ – ಮರಗಿಡ
- ವನಾಂತರ – ಕಾಡಿನ ಒಳಭಾಗ
- ವವನಾಂತರಾಳ – ವನಾಂತರ
- ವನಾವಸಥ – ಕಾಡಿನಲ್ಲಿನ ಮನೆ
- ವನಿತಾಸಕ್ತಿ – ವನಿತಾ+ಸಕ್ತಿ, ವನಿತಾ+ಅಸಕ್ತಿ, ಹೆಣ್ಣಿನ ಬಗೆಗಿನ ಆಸಕ್ತಿ ಅಥವಾ ಅನಾಸಕ್ತಿ
- ವನೀಪಕ – ಯಾಚಕ
- ವನೇಚರ(ರಿ) – ಬೇಡರವನು(ಳು)
- ವನೇಭ – ಕಾಡಾನೆ
- ವನೋದ್ದೇಶ – ಕಾಡುಪ್ರದೇಶ
- ವನ್ಯ – ಕಾಡಿನ
- ವನೀಪಕ – ಯಾಚಕ
- ವಪು – ದೇಹ
- ವಪುಷ್ಮ – ಚೆಲುವಾದುದು
- ವಪುಷ್ಮಂತ – ಸುಂದರವಾದ
- ವಪ್ರ – ಗೋಡೆ, ಪ್ರಾಕಾರ; ಬೆಟ್ಟದ ತಪ್ಪಲು
- ವಪ್ರಕ್ರೀಡೆ – ಪ್ರಾಣಿಗಳು ತಲೆ ಗುದ್ದುವ ಆಟ
- ವಯಃಪರಿಣತ – ಮುದುಕ
- ವಯಃಪರಿಣತಿ – ಮುಪ್ಪು; ಪ್ರೌಢತೆ
- ವಯಲ್ – ಬಯಲು
- ವಯಸ್ಯ – ಗೆಳೆಯ
- ವಯೋಧಿಕ – ಹೆಚ್ಚು ವಯಸ್ಸಾದವನು, ಹಿರಿಯ
- ವಯೋನುರೂಪ – ವಯಸ್ಸಿಗೆ ತಕ್ಕುನಾದ
- ವ(ಬ)ರಂ – ವರೆವಿಗೂ
- ವರಟಾ – ಹೆಣ್ಣು ಹಂಸ; ಕಣಜದ ಹುಳ
- ವರಣ – ಪೂಜ್ಯ
- ವರತ್ರೆ – ಚರ್ಮದ ಪಟ್ಟಿ
- ವರಯೋಗ್ಯೆ – ವಿವಾಹಯೋಗ್ಯೆ
- ವರಾಕ – ಅದೃಷ್ಟಹೀನ; ದೀನ
- ವರಾಹ – ಹಂದಿ
- ವರಾಳ(ಟ) – ಕವಡೆ
- ವರಿಯಿಸು – ಸ್ವೀಕರಿಸು, ವರಿಸು
- ವರಿಸು – ಬರಮಾಡು; ಆಯ್ಕೆಮಾಡು
- ವರುಡು – ಉಜ್ಜು
- ವರುಣಾನಿ – ವರುಣನ ಹೆಂಡತಿ, ಋದ್ಧಿ
- ವರುಣಾಶೆ – ಪಶ್ಚಿಮ ದಿಕ್ಕು
- ವರುಷವರ – ಅಂತಃಪುರ ಕಾಯುವ ನಪುಂಸಕ
- ವರೂಥ – ರಥ
- ವರೂಥಿನಿ – ಸೈನ್ಯ
- ವರೇಣ್ಯ – ಪ್ರಮುಖ; ಅತ್ಯುತ್ತಮ
- ವರ್ಜಿಸು – ಬಿಟ್ಟುಬಿಡು
- ವಜ್ರ್ಯ – ತೊರೆಯಬೇಕಾದ
- ವರ್ಣಕ – ವರ್ಣನೆ; ಬಣ್ಣ; ವರ್ಣನಾಪ್ರಧಾನ ಕಾವ್ಯ
- ದೇಸಿ ಛಂದಸ್ಸಿನ ಕಾವ್ಯವರ್ಣಚತುಷ್ಕ – ನಾಲ್ಕು ವರ್ಣಗಳು; ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ
- ವರ್ಣತ್ರಯ – ವರ್ಣಚತುಷ್ಕದಲ್ಲಿ ಮೊದಲ ಮೂರು ದ್ವಿವರ್ಣಗಳು
- ವರ್ಣಪೂರ – ಬಣ್ಣವುರ, ಬಣ್ಣದಿಂದ ತುಂಬಿದುದು
- ವರ್ಣಲಾಭ – ಗರ್ಭಾನ್ವಯಕ್ರಿಯೆಗಳಲ್ಲಿ ಒಂದು, ಬ್ರಾಹ್ಮಣತ್ವವನ್ನು ಪಡೆಯುವುದು; ಮದುವೆಯಾಗಿ ಬೇರೆ ಸಂಸಾರ ಹುಡುವುದು
- ವರ್ಣಸಂಕರ – ಮದುವೆಯ ಮೂಲಕ ಜಾತಿಗಳು ಬೆರಕೆಯಾಗುವುದು; ಬೇರೆ ಬೇರೆ ಬಣ್ಣಗಳನ್ನು ಬೆರೆಸುವುದು
- ವರ್ಣಿ – ಬ್ರಹ್ಮಚಾರಿ
- ವರ್ಣೋತ್ತಮತ್ವ – ಬ್ರಾಹ್ಮಣಿಕೆ
- ವರ್ತನ – ನಡತೆ; ವೃತ್ತಿ
- ವರ್ತಿ – ಇರುವ; ದೀಪದ ಬತ್ತಿ; ಬಟ್ಟೆಯ ಅಂಚು
- ವರ್ತಿಸು – ಚಲಿಸು; ಉಂಟಾಗು; ನಡೆದುಕೊ
- ವರ್ಧಕಿ – ಬಡಗಿ
- ವರ್ಧಮಾನ – ಹೆಚ್ಚುತ್ತಿರುವ; ಒಗಟು; (ಜೈನ) ಇಪ್ಪತ್ತನಾಲ್ಕನೆಯ ತೀರ್ಥಂಕರ
- ವರ್ಮ – ಅಂಗರಕ್ಷಣೆಯ ಕವಚ
- ವರ್ಯಜನ – ಉತ್ತಮ ಜನ
- ವರ್ಷ(ಣ) – ಮಳೆ
- ವರ್ಷಜಧನು – ಕಾಮನ ಬಿಲ್ಲು
- ವರ್ಷಧರ – ಮೋಡ
- ವರ್ಷನರಪ – ಮಳೆರಾಯ
- ವರ್ಷಲವ – ಮಳೆಯ ಹನಿ
- ವರ್ಷವರ – ವರ್ಷಧರ; ವರುಷವರ, ಅಂತಃಪುರ ಕಾಯುವ ನಪುಂಸಕ
- ವರ್ಷವರ್ಧನದಿನ – ಹುಟ್ಟಿದ ಹಬ್ಬ
- ವರ್ಷಾವಾಸ – ಮಳೆಗಾಲದಲ್ಲಿ ವಾಸಿಸುವ ಮನೆ
- ವಲಂ – ನಿಜವಾಗಿ; ಅಲ್ಲವೇ
- ವಲ(ಳ)ಕ್ಷ – ಬಿಳಿದಾದುದು; ಶುಭ್ರ
- ವಲ(ಳ)ಕ್ಷಕೇಶ – ನರೆತ ಕೂದಲು
- ವಲನ – ಅತ್ತಿತ್ತ ಸರಿದಾಡು
- ವಲಭಿ – ಚಂದ್ರಶಾಲೆ
- ವಲ(ಳ)ಭಿಚ್ಛಂದ – ಮುಂಜೂರು
- ವಲ(ಳ)ಯಾಕಾರ – ಗುಂಡಗಿನ ಆಕೃತಿ
- ವಲಿ(ಳಿ)ತ – ಸುತ್ತುವರಿಯಲ್ಪಟ್ಟ; ಚರ್ಮದ ಸುಕ್ಕು
- ವಲಿ(ೀ)ಮುಖ – ಕೋತಿ
- ವಲಿ(ೀ)ಮುಖಕೇತನ – ಕಪಿಧ್ವಜ
- ವಲ್ಕ(ಲ) – ಮರದ ತೊಗಟೆ; ನಾರು ಬಟ್ಟೆ
- ವಲ್ಕಲವಸನ – ನಾರುಮಡಿ
- ವಲ್ಕಾಂಚಲ – ವಲ್ಕಲವಸನ
- ವಲ್ಗನ – ಕುದುರೆಯ ಓಟ
- ವಲ್ಮೀಕ – ಹುತ್ತ
- ವಲ್ಲಕಿ – ವೀಣೆ
- ವಲ್ಲಣ – ಥಡಿ
- ವಲ್ಲಭ – ಪ್ರಿಯನಾದವನು
- ವಲ್ಲಭಜನ – ಇಷ್ಟರು
- ವಲ್ಲಭಾ – ಪ್ರೇಯಸಿ
- ವಲ್ಲಭಿಕೆ – ಹೆಂಡತಿ
- ವಲ್ಲರಿ – ಬಳ್ಳಿ; ಗೊಂಚಲು
- ವಲ್ಲವ – ಗೊಲ್ಲ
- ವಲ್ಲೂರ – ಉಪ್ಪುಹಾಕಿದ ಮಾಂಸ
- ವಶಂಮಾಡು – ಸ್ವಾಧೀನಪಡಿಸಿಕೊ
- ವಶೀಕರಣಸಾಯಕ – ವಶಮಾಡಿಕೊಳ್ಳುವ ಅಸ್ತ್ರ
- ವಶೀಕಾರಿಣಿ – ವಶೀಕರಣ ವಿದ್ಯೆ
- ವಶ್ಯಮೂಳಿಕೆ – ವಶೀಕರಣ ಶಕ್ತಿಯುಳ್ಳ ಬೇರು
- ವಶ್ಯಾಂಜನ – ವಶೀಕರಣಶಕ್ತಿಯಿರುವ ಮುಲಾಮು
- ವಶ್ಯಾಕ್ಷರ – ವಶೀಕರಿಸಿಕೊಳ್ಳುವ ನುಡಿ
- ವಷಟ್ಕಾರ – ಹವಿಸ್ಸಿನ ಅರ್ಪಣೆಯ ಕಾಲದಲ್ಲಿ ಹೇಳುವ ಮಂತ್ರ
- ವಸಂತ – ಷಡೃತುಗಳಲ್ಲಿ ಮೊದಲನೆಯದು;
- ಚೈತ್ರ-ವೈಶಾಖ ಮಾಸಗಳು; ಮನ್ಮಥನ
- ವಸಂತದೂತಿ(ಕೆ) – ಇರುವಂತಿಗೆ, ಅದಿರ್ಮುತ್ತೆ
- ವಸಂತಪ್ರಿಯ – ವಸಂತಕ
- ವಸಂತಮಾಸ – ವಸಂತಕಾಲ
- ವಸಂತಸಖ – ವಸಂತಕ
- ವಸನ – ಬಟ್ಟೆ
- ವಸನಾಂಗ(ಕುಜ) – (ಜೈನ) ಬೇಕಾದ ಬಟ್ಟೆ ನಿಡುವ ಕಲ್ಪಕುಜ
- ವಸಿ(ಯಿ)ಸು – ನೆಲಸು, ವಾಸಮಾಡು
- ವಸು – ಸಿರಿ; ರತ್ನ; ಕಾಂತಿ
- ವಸುಂಧರೆ – ಭೂಮಿ
- ವಸುಧಾಚಕ್ರ – ಭೂಮಂಡಲ
- ವಸುಧಾಧಿಪತಿ – ರಾಜ
- ವಸುಧಾಭೋಗ – ಭೂವಿಸ್ತಾರ
- ವಸುಧಾಮರ – ಬ್ರಾಹ್ಮಣ
- ವಸುಧಾರೆ – (ಜೈನ) ಪಂಚಾಶ್ಚರ್ಯಗಳಲ್ಲಿ ಒಂದು; ಚಿನ್ನದ ಮಳೆ
- ವಸುಧಾವಳಯ – ವಸುಧಾಚಕ್ರ
- ವಸುಧೈಕಕುಟುಂಬಕ – ಜಗತ್ತನ್ನೆಲ್ಲ ಒಮದೆ
- ಕುಟುಂಬವೆಂದು ಭಾವಿಸುವವನು
- ವಸುಧೇಶ – ವಸುಧಾಧಿಪತಿ
- ವಸುಮತಿ – ವಸುಂಧರೆ
- ವಸುಮದ – ಐಶ್ವರ್ಯದ ಸೊಕ್ಕು
- ವಸುವಿರಹಿತ – ಸಿರಿಯನ್ನು ತೊರೆದವನು
- ವಸುಹೀನ – ಹಣವಿಲ್ಲದವನು, ಬಡವ
- ವಸ್ತಿ – ಕಿಬ್ಬೊಟ್ಟೆ
- ವಸ್ತುಕೃತಿ – ವಸ್ತುಕಕಾವ್ಯ, ಮಾರ್ಗಕಾವ್ಯ, ಚಂಪೂ
- ವಸ್ತುತತ್ವ – ಸಹಜವಾದುದು
- ವಸ್ತುಪುರುಷ – ನಿಪುಣ
- ವಸ್ತುಬಂಧ – ವಸ್ತುಕೃತಿ, ಕಥಾಪ್ರಧಾನ ಕಾವ್ಯ
- ವಸ್ತುಮಾಡು – ಕಾವ್ಯದ ವಿಷಯವಾಗಿಸಿಕೊ
- ವಸ್ತುವಿದ – ತತ್ವವಿದ
- ವಸ್ತುಸ್ತವ – ಮಹಾಪುರುಷನ ಗುಣಸ್ತವ
- ವಸ್ತ್ರಮೃಗ – ಕೂರೆ
- ವಸ್ತ್ರಾಂಗ – (ಜೈನ) ಕಲ್ಪಕುಜಗಳಲ್ಲಿ ಒಂದು,
- ಬೇಕಾದ ಬಟ್ಟೆಯನ್ನು ನೀಡುವಂಥದು
- ವಹಣಿ – ಬೆಡಗು, ಒಯ್ಯಾರ
- ವಹಿತ್ರ – ಬಹಿತ್ರ, ಹಡಗು
- ವಹ್ನಿ – (ಜೈನ) ಒಬ್ಬ ಲೋಕಾಂತಿಕದೇವ
- ವಹ್ನಿಸಖ – ವಾಯು
- ವಳನ – ಚಲನ
- ವಳಭಿ – ಉಪ್ಪರಿಗೆ
- ವಳಯ – ಮಂಡಲ; ಕಡಗ, ಬಳೆ
- ವಳಿ – ತೆರೆ, ತರಂಗ
- ವಳಿಗೆ – ತುತ್ತು
- ವಳಿತ್ರಯ – ಹೊಟ್ಟೆಯ ಮೇಲಿನ ಚರ್ಮದ ಮಡಿಕೆ
- ವಳಿರೇಖೆ – ವಳಿತ್ರಯ
- ವಾಂಶ – ಕೊಳಲು
- ವಾಂಶಿಕ – ಮೇದರವನು; ಕೊಳಲು ವಾದಕ
- ವಾಃಕಣ – ನೀರಿನ ಹನಿ
- ವಾಃಕಣಿಕೆ – ವಾಃಕಣ
- ವಾಃಕೇಲಿ(ಳಿ) – ನೀರಾಟ, ಜಲಕ್ರೀಡೆ
- ವಾಕ್(ಕ್ಕು) – ಮಾತು; ಸರಸ್ವತಿ
- ವಾಕ್ಛ್ರೀ – ಸರಸ್ವತಿ
- ವಾಕ್ಛ್ರೀಯುತ – ಪಂಡಿತ
- ವಾಕ್ಪರಿಣತ – ಮಾತಿನ ಚತುರ
- ವಾಕ್ಪಾಟವ – ಮಾತಿನ ಚಾತುರ್ಯ
- ವಾಕ್ಪ್ರಣಿಧಿ – ಮಾತಿನ ಪ್ರಚೋದನೆ
- ವಾಕ್ಪ್ರೌಢ – ವಾಕ್ಪರಿಣತ
- ವಾಕ್ಪ್ರೌಢಿ – ವಾಕ್ಪಾಟವ
- ವಾಕ್ಯಾರ್ಥ – ತಾತ್ಪರ್ಯ; ಚರ್ಚೆ
- ವಾಕ್ಸಾರ – ಹರಟೆಗಾರ
- ವಾಗಂಗನೆ – ಸರಸ್ವತಿ
- ವಾಗಾಡಂಬರ – ಮಾತಿನ ಡೌಲು
- ವಾಗುರ(ರೆ) – ಬಲೆ
- ವಾಗುರಿಕ(ಕೆ) – ಬೇಟೆಗಾರ(ತಿ)
- ವಾಗ್ಗುಂಫ – ನುಡಿಜೋಡಣೆ
- ವಾಗ್ಗೇಯಕಾರ – ವಾಕ್+ಗೇಯಕಾರ, ಗಮಕಿ
- ವಾಗ್ದೇವಿ – ಸರಸ್ವತಿ
- ವಾಗ್ಮಿ – ಚಮತ್ಕಾರವಾಗಿ ಮಾತಾಡುವವನು
- ವಾಗ್ರಮಣ – ಸರಸ್ವತಿಪತಿ; ಬ್ರಹ್ಮ
- ವಾಗ್ವಧು – ನುಡಿದೇವಿ, ಸರಸ್ವತಿ
- ವಾಗ್ವನಿತೆ – ವಾಗ್ವಧು
- ವಾಗ್ವಿದ – ಪಂಡಿತ
- ವಾಗ್ವಿದಗ್ಧತೆ – ಮಾತಿನ ಪ್ರೌಢಿಮೆ
- ವಾಗ್ವಿಭವ – ನುಡಿಸಿರಿ
- ವಾಗ್ವøತ್ತಿ – ನುಡಿಯುವ ಬಗೆ
- ವಾಙ್ಮಯ – ಸಾಹಿತ್ಯ
- ವಾಙ್ಮಲ – ಮಾತಿನ ದೋಷ
- ವಾಚಸ್ಪತಿ – ಬೃಹಸ್ಪತಿ
- ವಾಚಾಲ(ಳ) – ಮಾತುಗಾರ; ಹರಟೆಕೋರ
- ವಾಚಿಕ – ನಾಲ್ಕು ಬಗೆಯ ಅಭಿನಯಗಳಲ್ಲಿ ಒಂದು, ಮಾತಿನ ಮೂಲಕ ಭಾವನೆಯ ಪ್ರಕಟಣೆ
- ವಾಜಿ – ಕುದುರೆ
- ವಾಣಿ – ನುಡಿ; ಸರಸ್ವತಿ
- ವಾತ – ಗಾಳಿ
- ವಾತತ್ರಿತಯ -(ಜೈನ) ಭೂಲೋಕವನ್ನು ಆವರಿಸಿರುವ ಘನೋದಧಿ,
- ಘನವಾತ, ತನುವಾತಗಳೆಂಬ ಮೂರು ವಾಯುಗಳು
- ವಾತಪೂರಣ – ಬಾವುಟ
- ವಾತಾಯನ – ಗವಾಕ್ಷಿ
- ವಾತಾಶನ – ಗಾಳಿಯನ್ನೇ ಆಹಾರವಾಗಿ ಉಳ್ಳದ್ದು, ಹಾವು
- ವಾತೂಲಿ(ಳಿ)ಕೆ – ಸುಂಟರಗಾಳಿ
- ವಾತ್ಯಾ(ತ್ಯೆ) – ಬಿರುಗಾಳಿ
- ವಾತ್ಸಲ್ಯ – (ಜೈನ) ಸಮ್ಯಕ್ದರ್ಶನದ ಒಂದು ಅಂಗ
- ವಾದಿತ್ರ – ವಾದ್ಯ; ವಾದ್ಯವಾದನ
- ವಾದುಗೆಯ್ – ವಾದ ಮಾಡು
- ವಾನರಚಿಹ್ನ – (ಜೈನ) ಸುಗ್ರೀವ
- ವಾನೇಯ – ಕಾಡಿನ; (ಜೈನ) ವ್ಯಂತರ ದೇವತೆಗಳು
- ವಾನೇಯನಾಗ – ಕಾಡಾನೆ
- ವಾಪಿ – ಬಾವಿ
- ವಾಮಕ್ರಮ – ಎಡ ಪಾದ
- ವಾಮಜಾನು – ಎಡ ಮೊಳಕಾಲು
- ವಾಮನ – ಕುಳ್ಳಾದ; ವಿಷ್ಣುವಿನ ವಟುವಿನ ಅವತಾರ
- ವಾಮನಕ್ರಮ – ವಾಮನನ ಪಾದ
- ವಾಮಪ(ಪಾ)ದ – ವಾಮಕ್ರಮ
- ವಾಮಲೋಚನೆ – ಸುಂದರವಾದ ಕಣ್ಣುಳ್ಳವಳು
- ವಾಮಸುಖ – ಕೀಳು ಅಭಿರುಚಿಯ ಸುಖ
- ವಾಮೆ – ಸುಂದರಿ; ಹೆಂಡತಿ
- ವಾಯುತ್ರಿತಯ – ವಾತತ್ರಿತಯ
- ವಾಯು ಪಥ – ಆಕಾಶ
- ವಾರ – ಸಮೂಹ, ಸಮುದಾಯ
- ವಾರಕ – ಭೂಷಣ, ಅಲಂಕಾರ(?)
- ವಾರಕಾಂತೆ – ವೇಶ್ಯೆ
- ವಾರಣ – ಆನೆ
- ವಾರಣಮುಖ – ಗಣಪತಿ
- ವಾರಣವಾಹನ – ಕುಬೇರ
- ವಾರಣಸೈನ್ಯ – ಆನೆಯ ದಂಡು
- ವಾರಣಾಸ್ಯ – ವಾರಣಮುಖ
- ವಾರವನಿತೆ – ವಾರಕಾಂತೆ
- ವಾರವಿಲ(ಳಾ)ಸಿನಿ – ವಾರಕಾಂತೆ
- ವಾರಸ್ತ್ರೀ – ವಾರಕಾಂತೆ
- ವಾರಾನ್ನಿಧಿ – ಸಮುದ್ರ
- ವಾರಾಶಿ(ಸಿ) – ಸಮುದ್ರ
- ವಾರಿ – ನೀರು; ನಿಷ್ಠೆ
- ವಾರಿಗಮಿತ್ರ – ಕಮಲದ ಗೆಳೆಯ, ಸೂರ್ಯ
- ವಾರಿಧರ – ಮೋಡ
- ವಾರಿಧಿ – ಸಮುದ್ರ
- ವಾರಿಯಂತ್ರ – ಪಿಚಕಾರಿ
- ವಾರಿವಾಹ – ವಾರಿಧರ
- ವಾರುಣಿ – ಪಶ್ಚಿಮ ದಿಕ್ಕು; ಮದ್ಯ
- ವಾರುವ – ಕುದುರೆ
- ವಾರ್ಧರ – ನೀರನ್ನು ಹೊಂದಿರುವುದು, ಮೋಡ
- ವಾರ್ಧಿಸುತ – ಚಂದ್ರ
- ವಾರ್ಬಿಂದು – ನೀರಿನ ಹನಿ
- ವಾರ್ಮಾನುಷಿ – ಜಲದೇವತೆ
- ವಾರ್ವಾಂಛೆ – ಬಾಯಾರಿಕೆ
- ವಾಲ(ಳ)ಧಿ – ಬಾಲ
- ವಾಲುಕಪ್ರಭೆ – (ಜೈನ) ಏಳು ನರಕಗಳಲ್ಲಿ ಒಂದು
- ವಾವದೂಕ – ವಾಚಾಳಿ
- ವಾಶ್ಚರ – ಮೀನು
- ವಾಷ್ಕಣ – ವಾಃ+ಕಣ, ನೀರ ಹನಿ
- ವಾಸರ – ಹಗಲು; ದಿನ
- ವಾಸವಗಜ – ಇಂದ್ರನ ಆನೆ, ಐರಾವತ
- ವಾಸವಚಾಪ – ಕಾಮನ ಬಿಲ್ಲು
- ವಾಸವಸ್ತ್ರೀ – ಶಚೀದೇವಿ
- ವಾಸವಾಶೆ – ಇಂದ್ರನ ದಿಕ್ಕು, ಪೂರ್ವ
- ವಾಸಿ – ಪಂತ, ಹುರುಡು
- ವಾಸಿತ – ತುಂಬಿದ
- ವಾಸುಕಿ(ಗಿ) – ಆದಿಶೇಷ
- ವಾಸುದೇವ – ವಿಷ್ಣು; (ಜೈನ) ಒಬ್ಬ
- ಅರ್ಧಚಕ್ರವರ್ತಿ
- ವಾಸ – ಸ್ಪರ್ಧೆ; (ಪಾಶ) ಹಗ್ಗ; ಕೊಳಲು
- ವಾಸರ – ಹಗಲು, ದಿನ
- ವಾಸರಕರ – ಸೂರ್ಯ
- ವಾಸವ – ಇಂದ್ರ
- ವಾಸಿಸು – ವಾಸನೆ ನೋಡು
- ವಾಸ್ತುವಿದ್ಯಾ – ಕಟ್ಟಡ ಕಟ್ಟುವ ಶಾಸ್ತ್ರ
- ವಾಹ – ಕುದುರೆ
- ವಾಹಳಿ – ಕುದುರೆ ಸವಾರಿಯ ಮೈದಾನ
- ವಾಹಿನಿ – ನದಿ; ಸೈನ್ಯದ ತುಕಡಿ
- ವಾಹಿನೀಪತಿ – ಸಮುದ್ರ
- ವಾಳುಕಪ್ರಕರ – ಮರಳ ರಾಶಿ
- ವಾಳವಾಯಜ – ನವರತ್ನಗಳಲ್ಲಿ ಒಂದು, ವೈಡೂರ್ಯ
- ವಿಂದೆ – (ಬೃಂದ) ಗುಂಪು
- ವಿಂಧ್ಯ – ಒಂದು ಕುಲಪರ್ವತ
- ವಿಂಶತಿ – ಇಪ್ಪತ್ತು
- ವಿಕಚ – ಅರಳಿದ; ಹರಡಿದ
- ವಿಕಟ – ದೊಡ್ಡದಾದ; ವಿಕಾರವಾದ; ಕ್ರೂರ
- ವಿಕಟಗಾತ್ರ – ಭಾರಿ ದೇಹ
- ವಿಕಚ – ಅರಳಿದ
- ವಿಕಥೆ – (ಜೈನ) ಪಾಪಕಾರ್ಯಕ್ಕೆ ಕಾರಣವಾಗುವ ಕತೆ
- ವಿಕರಣ – ವಿವಿಧ ರೂಪಗಳನ್ನು ತಾಳುವ ಶಕ್ತಿ
- ವಿಕರಾಳೋಕ – ಭಯಂಕರ ಕಣ್ಣು(ಗಳುಳ್ಳವನು)
- ವಿಕರಿ – ಚಂಚಲ
- ವಿಕಿರ – ಹಾರುವ; ಪಕ್ಷಿ
- ವಿಕರ್ಣ – ಬಾಣ; ಕರ್ಣನ ಮಗ
- ವಿಕರ್ತನ – ಸೂರ್ಯ
- ವಿಕಲ(ಳ) – ಖಿನ್ನತೆ
- ವಿಕಲ್ಪ – ಭೇದ; ಎರಡು ಯುಗಗಳ ನಡುವಣ ಕಾಲಾವಧಿ
- ವಿಕಸನ – ಅರಳುವಿಕೆ
- ವಿಕಸಿತ – ಅರಳಿದ; ಏಳಿಗೆವಡೆದ
- ವಿಕಸಿಸು – ಅರಳು, ಹಿಗ್ಗು
- ವಿಕಳೇಂದ್ರಿಯ – (ಜೈನ) ತ್ರಸಕಾಯಗಳಲ್ಲಿ ಒಂದು;
- ದ್ವೀಂದ್ರಿಯ, ತ್ರೀಂದ್ರಿಯ, ಚತುರಿಂದ್ರಿಯಗಳ ಜೀವ
- ವಿಕಳೇಂದ್ರಿಯಜಾತಿ – (ಜೈನ) ಹದಿನಾರು ಕರ್ಮಪ್ರಕೃತಿಗಳಲ್ಲಿ ಒಂದು
- ವಿಕಾರ್ಯ – ರೂಪಾಂತರ
- ವಿಕೀರ್ಣ – ಕೆದರಿದ
- ವಿಕುರ್ವಣೆ – ವಿಕಾರವೇಷ
- ವಿಕೃತ – ರೂಪಾಂತರ ಹೊಂದಿದ; ಕುರೂಪವಾದ; ಅಸಹ್ಯ; ವಿಚಿತ್ರವಾದ
- ವಿಕೃತನಿದ್ರೆ – ಮಾಯಾನಿದ್ರೆ
- ವಿಕ್ಕ – ಆನೆಯ ಮರಿ
- ವಿಕ್ಕಿರ – ಹಕ್ಕಿ
- ವಿಕ್ರಮ – ಪಾದ; ಹೆಜ್ಜೆಯಿಡುವುದು; ಪರಾಕ್ರಮ; ಕುದುರೆಯ ಗತಿಗಳಲ್ಲಿ ಒಂದು
- ವಿಕ್ರಮಹೀನ – ಶೌರ್ಯವಿಲ್ಲದವನು
- ವಿಕ್ರಿಯರ್ಧಿ – (ಜೈನ) ತಪಸ್ಸಿನ ಫಲವಾದ ಎಂಟು ಬಗೆಯ ಸಿದ್ಧಿಗಳಲ್ಲಿ ಒಂದು
- ವಿಕ್ರಿಯಾಬಲ – ಮಾಯಾಶಕ್ತಿ
- ವಿಕ್ಲವ(ಬ) – ವಿಷಾದ
- ವಿಕ್ಷೇಪ – ಬೀಸುವಿಕೆ, ಅಲ್ಲಾಡುವಿಕೆ; ಬೀರುವಿಕೆ; ಪ್ರೇರಣೆ
- ವಿಕ್ಷೇಪಣ – ಒಲೆದಾಡುವಿಕೆ
- ವಿಕ್ಷೇಪಣಿ – (ಜೈನ) ನಾಲ್ಕು ಬಗೆಯ ಧರ್ಮಕಥೆಗಳಲ್ಲಿ ಒಂದು;
- ವೀರ್ಯ – ಪರಾಕ್ರಮ; ಕೆಚ್ಚು; (ಜೈನ)ಅಷ್ಟಗುಣ’ಗಳಲ್ಲಿ ಒಂದು, ಸಿದ್ಧಿ
- ವೀರ್ಯಾಂತರಾಯ – (ಜೈನ) ಅಂತರಾಯಕರ್ಮಗಳಲ್ಲಿ ಒಂದು; ಒಂದು ವಿಘ್ನ-
- ವೀಸ – ನಾಲ್ಕು ಕಾಣಿಗಳ ಬೆಲೆಯ ಒಂದು ನಾಣ್ಯ
- ವೀಳಿಗೆ – ವೀಳೆಯದೆಲೆ; ತಾಂಬೂಲ
- ವೀಳೆಯಂಗೊಡು – ತಾಂಬೂಲ ನೀಡು; ಆಮಂತ್ರಿಸು
- ವೃಂತ – ಬೀಸಣಿಗೆ
- ವೃಂದಾರಕ – ಸಮೂಹ; ಮುಖ್ಯನಾದ; ಸುಂದರವಾದ; ದೇವತೆ
- ವೃಂದಾರಕದಾರಕ – ಸುಂದರ ಬಾಲಕ
- ವೃಕ – ತೋಳ
- ವೃಕೋದರ – ತೋಳದಂತೆ ಹೊಟ್ಟೆಯುಲ್ಳವನು; ಭೀಮಸೇನ
- ವೃಕ್ಷಭಂಜನ – ಮರಗಳನ್ನು ಮುರಿಯುವಿಕೆ
- ವೃಕ್ಷವೀರ್ಯ – ಮರಗಳ ರಸ
- ವೃಜಿನ – ಬಾಗಿದ; ಪಾತಕ
- ವೃಜಿನಬಂಧ – ಪಾಪದ ಬಿಗಿತ
- ವೃಜಿನಾರಿ – ಪಾಪದ ಶತ್ರು
- ವೃತ – ಆವರಿಸಲ್ಪಟ್ಟ; ಸುತ್ತುವರಿದ
- ವೃತಾಳವಡೆ – ಬೇತಾಳಗಳ ಸಮೂಹ
- ವೃತಿ – ಗುಂಡಗಿರುವುದು
- ವೃತ್ತ – ವರ್ತುಲ; ನಡವಳಿಕೆ
- ವೃತ್ತಕ – ಸುದ್ದಿ
- ವೃತ್ತಕುಚ – ದುಂಡಾದ ಮೊಲೆ
- ವೃತ್ತಪಾಠಕ – ಮಂಗಳಶ್ಲೋಕ ಪಾಠಕ
- ವೃತ್ತಿ – ಸಂಪಾದನೆ; ಕೈಶಿಕಾದಿ ವೃತ್ತಿ (ರಸಾದಿಗುಣವಾದ ಪದಜೋಡಣೆ); ನಡತೆ; ರೀತಿ; ವಿವರಣೆ
- ವೃತ್ತಿಪರಿಸಂಖ್ಯಾನ – (ಜೈನ) ಆರು ಬಗೆಯ ಬಾಹ್ಯತಪಸ್ಸುಗಳಲ್ಲಿ ಒಂದು; ಸಿಕ್ಕಿದರೆ ಮಾತ್ರ ಆಹಾರ ಸೇವಿಸುವುದು
- ವೃತ್ತಿಲಾಭ – (ಜೈನ) ಒಂದು ಬಗೆಯ ಕ್ರಿಯೆ; ಉಪವಾವಿದ್ದು ಜಿನದೀಕ್ಷೆ ಪಡೆದ ನಂತರದ ಪಾರಣೆ
- ವೃತ್ರಹ – ಇಂದ್ರ
- ವೃತ್ರಹಮಂತ್ರಿ – ಇಂದ್ರನ ಮಂತ್ರಿ, ಬೃಹಸ್ಪತಿ
- ವೃಥೆಯಾಗು – ವ್ಯರ್ಥವಾಗು
- ವೃಥೆಗಳೆ – ವ್ಯರ್ಥಗೊಳಿಸು
- ವೃಥೋಕ್ತಿ – ನಿರರ್ಥಕ ನುಡಿ
- ವೃದ್ಧಕದಬ – ಹಿರಿಯರ ಗುಂಪು
- ವೃದ್ಧರಾಜ್ಯ – ವೃದ್ಧಿಪಡೆದ ರಾಜ್ಯ
- ವೃದ್ಧಿ – ಏಳಿಗೆ; ಬಡ್ಡಿ
- ವೃದ್ಧೋಕ್ಷ – ಮುದಿ ಎತ್ತು
- ವೃಷ(ಭ) – ಎತ್ತು; ಇಂದ್ರ; ನೀತಿ; ಪುಣ್ಯ
- ವೃಷದ್ವಿಪ – ಇಂದ್ರನ ಆನೆ, ಐರಾವತ ವೃಷ(ಭ)ಧ್ವಜ
- ವೃಷಭನಾಥ – (ಜೈನ) ಆದಿ ತೀರ್ಥಂಕರ
- ವೃಷಭಾಚಲ(ಳ) – (ಜೈನ) ಚಕ್ರವರ್ತಿಗಳು ತಮ್ಮವಿಜಯಪ್ರಶಸ್ತಿಯನ್ನು ಕೆತ್ತಿಸುವ ಪರ್ವತ
- ವೃಷಭಾದ್ರಿ – ವೃಷಭಾಚಲ(ಳ)
- ವೃಷಮುಖ – ಎತ್ತಿನ ಮುಖ; (ಜೈನ) ಒಬ್ಬ ಯಕ್ಷ
- ವೃಷಸ್ಕಂಧ – ಎತ್ತಿದ ಹೆಗಲು; ವಿಶಾಲ ಭುಜ
- ವೃಷಾಂಕ – ಶಿವ
- ವೃಷ್ಟಿ – ಸುರಿಯುವಿಕೆ; ಮಳೆ
- ವೃಷ್ಯ – ಕಾಮೋದ್ದೀಪಕ
- ವೆಚ್ಚಿಸು – ವ್ಯಯಮಾಡು
- ವೆಜ್ಜ – ತೂತು, ರಂಧ್ರ
- ವೇಗಿ – ಸುದ್ದಿವಾಹಕ
- ವೇಢೆ(ಯ) – ಕುದುರೆಯ ಓಟ
- ವೇಣೀಬಂಧ – ಜಡೆ
- ವೇಣೀಸಂಹಾರ – ಬಿಚ್ಚಿದ ಕೂದಲನ್ನು ಜಡೆಯಾಗಿ ಹೆಣೆಯುವುದು
- ವೇಣೀಸ್ರಕ್ – ಮುಡಿದ ಹೂ
- ವೇಣು – ಬಿದಿರು; ಕೊಳಲು
- ವೇಣುಬೀಜ – ಬಿದಿರಕ್ಕಿ
- ವೇತಂ(ದಂ)ಡ – ಆನೆ
- ವೇತ್ರಾಸನ – ಬೆತ್ತದ ಪೀಠ
- ವೇತ್ರ – ಬೆತ್ತ; ಕೋಲು
- ವೇತ್ರಖೇಟಕ – ಬಿದಿರಿನ ಗುರಾಣಿ
- ವೇತ್ರದಂಡಧರ – ಕೋಲು ಹಿಡಿದ ದ್ವಾರಪಾಲಕ
- ವೇತ್ರವಿಷ್ಟರ – ಬೆತ್ತದ ಆಸನ
- ವೇತ್ರಾಸನ – ವೇತ್ರವಿಷ್ಟರ
- ವೇದ – ಜ್ಞಾನ; ನಾಲ್ಕು ವೇದಗಳು; (ಜೈನ) ದ್ವಾದಶಾಂಗಗಳುಳ್ಲ ಶಾಸ್ತ್ರ
- ವೇದಕ – (ಜೈನ) ಸಮ್ಯಕ್ತ್ವದ ಒಂದು ಪ್ರಭೇದ
- ವೇದನೀಯ – (ಜೈನ) ಸುಖದುಃಖಕಾರಕ ಕರ್ಮ
- ವೇದನೆ – ನೋವು
- ವೇದನೆಗೊಳ್ – ನೋವನ್ನು ಹೊಂದು
- ವೇದವಿದ – ವೇದಗಳನ್ನು ತಿಳಿದವನು
- ವೇದಾಂಗ – ವೇದದ ಆಭ್ಯಾಸಕ್ಕೆ ಬೇಕಾದ ಶಿಕ್ಷಾ, ಛಂದಸ್ಸು, ವ್ಯಾಕರಣ, ನಿರುಕ್ತ, ಜ್ಯೋತಿಷ, ಕಲ್ಪ ಎಂಬ ಆರು ಭಾಗಗಳು
- ವೇಧಸ್ಸಂಕಲ್ಪ – ವಿಧಿನಿಯಮ
- ವೇಪ(ನ)(ಥು)- ನಡುಕ
- ವೇಲಾ(ಳಾ) – ದಡ
- ವೇಲಾ(ಳಾ)ವನ – ಕರಾವಳಿಯ ಕಾಡು
- ವೇಲೆ(ಳೆ) – ಕಡಲ ತೀರ; ಅಲೆ, ಉಬ್ಬರ, ಪ್ರವಾಹ
- ವೇಲ್ಲಿತ – ಕಂಪಿಸುವ
- ವೇಶಂತ – ಚಿಕ್ಕ ಹೊಂಡ
- ವೇಶ – ಮನೆ
- ವೇಶ್ಮ – ಮನೆ; ನಿಲಯ
- ವೇಶ್ಯಾವಾಟ(ಟಿ) – ಸೂಳೆಗೇರಿ
- ವೇಷಭೂಷಣ – ಉಡುಗೆತೊಡುಗೆ
- ವೇಷ್ಟನ – ಬೇಲಿ; ಕಿರೀಟ
- ವೇಷ್ಟಿಸು – ಸುತ್ತುಗಟ್ಟು
- ವೇಸರ – ಹೇಸರಗತ್ತೆ
- ವೇಳೆಗಾಯ್ – ಸಮಯಕ್ಕಾಗಿ ಕಾಯಿ
- ವೇಳೆಗೊಳ್ – ಸಮಯಪ್ರತಿಜ್ಞೆ ಮಾಡು;
- ವೇಳೆವಾಳಿಯಾಗು; ಸಮಯ ಹೊಂದು; ಕಟ್ಟುಪಾಡು ಅನುಸರಿಸು
- ವೇಳೆತನ – ಸೇವಕವೃತ್ತಿ
- ಪ್ರತಿಜ್ಞೆಯುಳ್ಳ ಲೆಂಕ
- ವೇಹಾರ – ವ್ಯವಹಾರ
- ವೈಕಕ್ಷಮಾಲೆ – ಕಂಠದಿಂದ ಎದೆಯ ಮೇಲೆ ಎಡದಿಂದ ಬಲಕ್ಕೆ ಅಡ್ಡಲಾಗಿ ಹಾಕಿಕೊಂಡಿರುವ ಹಾರ
- ವೈಕರ್ತನ – ಸೂರ್ಯನ ಮಗ; ಕರ್ಣ
- ವೈಕುರ್ವಣ – ಬದಲಾಗುವ; (ಜೈನ) ರೂಪಾಂತರ ವಿದ್ಯೆ
- ವೈಕೃತ – ವಿಕಾರಗೊಂಡ
- ವೈಕ್ರಿಯಕ(ಶರೀರ) – (ಜೈನ) ಜೀವರುಗಳ ಒಂದು ಶರೀರಭೇದ, ಸ್ಥೂಲಶರೀರದಲ್ಲಿ ಬದಲಾವಣೆ ಮಾಡುವ ಸೂಕ್ಷ್ಮಶರೀರ
- ವೈಖಾನಸ – ವಾನಪ್ರಸ್ಥದಲ್ಲಿರುವವನು; ಒಬ್ಬ ಋಷಿ
- ವೈಜನನ – ಹೆರಿಗೆಯ ತಿಂಗಳು
- ವೈಜಯಂತ – (ಜೈನ) ದೇವತೆಗಳ ಒಂದು ವರ್ಗ
- ವೈಜಯಂತಿ – ಧ್ವಜ
- ವೈಜಯಂತೀದ್ವಾರ – (ಜೈನ) ವಿಜಯಾರ್ಧಪರ್ವತದ ದಕ್ಷಿಣ ದ್ವಾರ
- ವೈಜಯಂತೀ(ತ)ವಿಮಾನ – (ಜೈನ) ಲೋಕಾಕಾಶದ ತುದಿಯ ಪುಣ್ಯವಂತರ ವಾಸಸ್ಥಾನ
- ವೈಡೂರ್ಯ – ನವರತ್ನಗಳಲ್ಲಿ ಒಂದು; (ಜೈನ) ಒಂದು ಪರ್ವತದ ಹೆಸರು
- ವೈತಸವೃತ್ತಿ – ವಿನಮ್ರ ನಡವಳಿಕೆ
- ವೈತಾಲಿ(ಳಿ) – ಮಾಯಾವಿದ್ಯೆ, ಅದರ ಅಧಿದೇವತೆ
- ವೈತಾಲಿ(ಳಿ)ಕ – ಹಾಡುವವನು
- ವೈದ – ವಿದ್ವಾಂಸ
- ವೈದಗ್ಧ್ಯಜನ – ವಿದ್ವಾಂಸಸಮೂಹ
- ವೈನತೇಯ – ಗರುಡ(ಪಕ್ಷಿ)
- ವೈಪಥ – ಕೆಟ್ಟ ಹಾದಿ
- ವೈಭಾತಿಕ – ಬೆಳಗುಜಾವ
- ವೈಭಾತಿಕಸಮೀರ – ಬೇಲಗಿನ ತಂಗಾಳಿ
- ವೈಮಾನಿಕ – ವಿಮಾನದಲ್ಲಿ ಸಂಚರಿಸುವ; (ಜೈನ) ಒಂದು ದೇವತಾವರ್ಗ
- ವೈಯಾಕರಣ – ವ್ಯಾಕರಣಪಂಡಿತ
- ವೈಯಾಪೃತ್ಯ – (ಜೈನ) ಒಂದು ಬಗೆಯ ಅಂತರಂಗದ ತಪಸ್ಸು
- ವೈಯಾಪತ್ಯಂಗೆಯ್ – ಉಪಚಾರಮಾಡು, ಶುಶ್ರೂಷಿಸು
- ವೈರಸ್ಯ – ವಿರಸದಿಂದ ಕೂಡಿದುದು
- ವೈವಧಿಕ – ಸರಕನ್ನು ಹೊತ್ತು ಮಾರುವವನು
- ವೈವಸ್ವತ – ಸೂರ್ಯನ ಮಗ, ಯಮ; ಏಳನೆಯ ಮನು
- ವೈಶಂಪಾಯನ – ಒಂದು ಸರೋವರದ ಹೆಸರು
- ವೈಶಾಖಸ್ಥಾನ – ಯುದ್ಧದಲ್ಲಿ ನಿಲ್ಲುವ ಒಂದು ಭಂಗಿ; ನಾಟ್ಯದ ಒಂದು ಭಂಗಿ
- ವೈಶ್ರವಣ – ಕುಬೇರ
- ವೈಶ್ವಾನರ – ಬೆಂಕಿ, ಅಗ್ನಿ
- ವೈಷಮ್ಯ – ಏರುಪೇರು
- ವೈಷ್ಣವ – ವಿಷ್ಣುಶಕ್ತಿ
- ವೈಷ್ಣವಾಸ್ತ್ರ – ನಾರಾಯಣಾಸ್ತ್ರ
- ವೈಹಾಯಸ – ಆಕಾಶ
- ವ್ರಾತ – ಸಮೂಹ
- ವ್ರೀಡೆ – ಲಜ್ಜೆ
- ವ್ಯಂಜನ – ನಂಜಿಕೊಳ್ಳುವ ಪದಾರ್ಥ; (ಜೈನ) ಕೆಟ್ಟ ಲಕ್ಷಣ
- ವ್ಯಂತರ – (ಜೈನ) ದೇವತೆಗಳ ಒಂದು ಗುಂಪು
- ವ್ಯಗ್ರ – ತೊಡಗಿದ; ವಿಶೇಷಾಸಕ್ತಿ
- ವ್ಯಗ್ರಚಿತ್ತ – ದುಡುಕು ಸ್ವಭಾವದವನು
- ವ್ಯಜನ – ಬೀಸಣಿಗೆ
- ವ್ಯತಿಕರ – ಸಂಬಂಧ, ಸಂದರ್ಭ; ಕೇಡು
- ವ್ಯತಿಕ್ರಮ(ಣ) – ಉಲ್ಲಂಘನೆ
- ವ್ಯತಿರಿಕ್ತತೆ – ವಿಯೋಗ, ಅಗಲಿಕೆ
- ವ್ಯತಿರೇಕ – ವ್ಯತಿರಿಕ್ತತೆ
- ವ್ಯತಿಹಾರ – ವಿನಿಮಯ, ಅದಲುಬದಲು ಮಾಡಿಕೊಳ್ಳುವುದು
- ವ್ಯತೀತ – ಆಗಿಹೋದ
- ವ್ಯಪಗತ – ಬೇರೆಯಾದ
- ವ್ಯಪದೇಶ – ನಿಮಿತ್ತ
- ವ್ಯಪಾಕೃತ – ಬಿಡುಗಡೆಗೊಂಡ
- ವ್ಯಪಾಯ(ಯಿ) – ಇಲ್ಲದಾಗುವುದು; ಮರಣ
- ವ್ಯಪೇಕ್ಷೆಗೆಯ್ – ಆಸೆಪಡು
- ವ್ಯಪೇತ – ಅಗಲಿದ, ದೂರಾದ
- ವ್ಯಪೇತತೆ – ಇಲ್ಲದಿರುವಿಕೆ
- ವ್ಯಭಿಚರಿಸು – ಅಡ್ಡದಾರಿ ಹಿಡಿ
- ವ್ಯರ್ಥತೆ – ನಿಸ್ಸಾರ್ಥಕತೆ
- ವ್ಯಪಾಯ – ಅದೃಶ್ಯವಾಗುವಿಕೆ
- ವ್ಯವಧಾನ – ಅಡ್ಡಿ
- ವ್ಯವಸಾಯಿ – ಉದ್ಯೋಗಿ
- ವ್ಯವಹರಣ – ರೂಢಿ, ಬಳಕೆ
- ವ್ಯವಹಾರಕಾಲ – (ಜೈನ) ಕಾಲದ ಒಂದು ಬಗೆ
- ವ್ಯವಹಿತ – ಮರೆಮಾಡಿದ
- ವ್ಯವಹೃತಿ – ವ್ಯವಹರಣ
- ವ್ಯಸನ – ಕೆಲಸ; ಆಸಕ್ತಿ; ದುಃಖ
- ವ್ಯಸನಿ – ದುಶ್ಚಟಕ್ಕೊಳಗಾದವನು
- ವ್ಯಸ್ತ – ಪ್ರತ್ಯೇಕ; ಭಿನ್ನವಾದ
- ವ್ಯಳೀಕ – ಇಲ್ಲದ, ಸುಳ್ಳಾದ
- ವ್ಯಾಕೀರ್ಣ – ಚೆಲ್ಲಾಪಿಲ್ಲಿಯಾದ; ಹರಡಿಕೊಂಡ
- ವ್ಯಾಖ್ಯಾನಶಾಲೆ – ಉಪನ್ಯಾಸಮಂದಿರ
- ವ್ಯಾಘಾತ – ಪೆಟ್ಟು, ಹೊಡೆತ
- ವ್ಯಾಘ್ರಕೇತನ – ಹುಲಿಯ ಚಿಹ್ನೆಯ
- ಬಾವುಟವುಳ್ಳವನು, ಶಲ್ಯ
- ವ್ಯಾಜ – ನೆವ, ಕಾರಣ; ಕಪಟ
- ವ್ಯಾಜೋಕ್ತಿ – ಕಪಟದ ಮಾತು
- ವ್ಯಾತ್ಯುಕ್ಷಿ – ಜಲಕ್ರೀಡೆ
- ವ್ಯಾಧನಿವಾಸ – ಬೇಡರ ಹಟ್ಟಿ
- ವ್ಯಾಧಿನಿರ್ಹರಣ – ರೋಗನಿವಾರಣೆ
- ವ್ಯಾಪಾರ – ಚಟುವಟಿಕೆ; ಕಾರ್ಯ
- ವ್ಯಾಪೃತ(ತೆ) – ನಿರತನಾದವನು(ಳು)
- ವ್ಯಾಪೃತಿ – ನಿರತವಾಗಿರುವುದು; ವ್ಯಾಪಾರ
- ವ್ಯಾಬಾಧೆ – ಕಾಟ; ರೋಗ
- ವ್ಯಾಭಾಸಿ – ಹೊಳಪು
- ವ್ಯಾಮೋಹ – ಗಾಢ ಮೋಹ; ಒಂದು ಕಾಮಾವಸ್ಥೆ
- ವ್ಯಾಯಾಮ – ಸಾಧನೆ; ದೇಹ ದಣಿವು
- ವ್ಯಾಲಭಿವಾಲ – ಅಲ್ಲಾಡುವ ಬಾಲ
- ವ್ಯಾಲೋಲ(ಳೋಳ) – ಚಲಿಸುತ್ತಿರುವ
- ವ್ಯಾವರ್ಣನೆ – ವಿಶೇಷ ವರ್ಣನೆ
- ವ್ಯಾವೃತ – ಮರೆಮಾಡಿದ, ಮುಚ್ಚಿಹಾಕಿದ
- ವ್ಯಾವೃತ್ತಿ – ಪ್ರತ್ಯೇಕಗೊಳಿಸುವುದು
- ವ್ಯಾಸಕ್ತ – ವಿ+ಆಸಕ್ತ, ತೊಡಗಿದ; ನಿರತ
- ವ್ಯಾಹಾರ – ಶಬ್ದ; ಉಚ್ಚಾರಣೆ
- ವ್ಯಾಳ – ದುಷ್ಟ ಮೃಗ
- ವ್ಯಾಳಗಜ (ದಂತಿ) – ತುಂಟ ಆನೆ
- ವ್ಯಾಳೇಭ – ವ್ಯಾಳಗಜ
- ವ್ಯುಚ್ಛೇದ – ಕತ್ತರಿಸುವುದು
- ವ್ಯುತ್ಸರ್ಗ – (ಜೈನ) ಒಂದು ಬಗೆಯ ತಪ; ಶರೀರದ ಮೇಲೆ ಮಮತೆಯಿಲ್ಲದಿರುವುದು
- ವ್ಯುಷ್ಟಿ – (ಜೈನ) ಒಂದು ಗರ್ಭಾನ್ವಯಕ್ರಿಯೆ; ಮೊದಲ ವರ್ಷದ ಹುಟ್ಟುಹಬ್ಬ
- ವ್ಯೂಢ – ಹರಹಾದ
- ವ್ಯೂಹ – ಸೈನ್ಯ; ಸೇನಾ ರಚನೆ
- ವ್ಯೋಕಾರ – ಕಮ್ಮಾರ
- ವ್ಯೋಮ – ಆಕಾಶ
- ವ್ಯೋಮಗೇಹ – ಆಕಾಶವೆಂಬ ಮನೆ
- ವ್ಯೋಮಚರ – ಗಗನಗಾಮಿ; ದೇವತೆ
- ವ್ಯೋಮಾಪಗೆ – ಆಕಾಶಗಂಗೆ
- ವ್ರಜ – ಸಮೂಹ; ಕೊಟ್ಟಿಗೆ
- ವ್ರತ – ಆಚರಣೆ
- ವ್ರತಚರ್ಯೆ – (ಜೈನ) ಒಂದು ಗರ್ಭಾನ್ವಯಕ್ರಿಯೆ, ಹಿಂಸಾಚಾರ ವರ್ಜಿಸಿ ಅಧ್ಯಯನ ಕೈಗೊಳ್ಳುವುದು
- ವ್ರತತಿ – ಬಳ್ಳಿ
- ವ್ರತಹಾನಿ – ವ್ರತಭಂಗ
- ವ್ರತಾವರಣ – (ಜೈನ) ಒಂದು ಗರ್ಭಾನ್ವಯಕ್ರಿಯೆ, ಬ್ರಹ್ಮಚರ್ಯವ್ರತತ್ಯಾಗ
- ವ್ರತಿಕ – (ಜೈನ) ವ್ರತಾನುಷ್ಠಾನಗಳನ್ನು ಮಾಡುವವನು
- ವ್ರೈಹೇಯ – ಕೆಂಪು ಬತ್ತ; ಬತ್ತದ ಗದ್ದೆ
Conclusion:
ಕನ್ನಡ ವ ಅಕ್ಷರದ ಹಳೆಗನ್ನಡ ಪದಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ಯಾವುದೇ ಪದವನ್ನು ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.