ಕನ್ನಡ ತ ಅಕ್ಷರದ ಹಳೆಗನ್ನಡ ಪದಗಳು – Kannada Words
Check out Kannada ta aksharada halegannadada padagalu , ಕನ್ನಡ ತ ಅಕ್ಷರದ ಹಳೆಗನ್ನಡ ಪದಗಳು (TA halegannada Words in kannada ).
ಪ್ರಿಯ ಓದುಗರೇ, ಇವತ್ತಿನ ಈ ಲೇಖನದಲ್ಲಿ ಕನ್ನಡ ತ ಅಕ್ಷರದಿಂದ ಪ್ರಾರಂಭವಾಗುವ ಹಲವು ಹಳೆಗನ್ನಡ ಪದಗಳನ್ನು ( ta halegannada Words in kannada ) ತಿಳಿದುಕೊಳ್ಳೋಣ
ಯಾವುದೇ ಒಂದು ವಾಕ್ಯವನ್ನು ಬರೆಯಬೇಕಾದರೆ ಪದಗಳ ಗುಂಪು ಬೇಕಾಗುತ್ತದೆ. ಆ ಪದಗಳ ಜೋಡಣೆ ಮಾಡಲು ಅಕ್ಷರಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದಗಳ ಸಮೂಹವಿದೆ.
ಯಾವುದೇ ಪದಗಳಿಲ್ಲದೆ ನಾವು ಬರೆಯಲು, ಮಾತನಾಡಲು ಮತ್ತು ನಮ್ಮ ಭಾವನೆಗಳನ್ನು ಇನ್ನೊಬ್ಬರೊಂದಿಗೆ ವ್ಯಕ್ತಪಡಿಸಲು ಸಾದ್ಯವಿಲ್ಲ.
ಕನ್ನಡ ತ ಅಕ್ಷರ ಎಂದರೇನು?
ತ, ಕನ್ನಡ ವರ್ಣಮಾಲೆಯ ವರ್ಗೀಯ ವ್ಯಂಜನ ಶ್ರೇಣಿಯಲ್ಲಿ ತ-ವರ್ಗದ ಮೊದಲನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಅಲ್ಪಪ್ರಾಣ.
ಅಶೋಕನ ಕಾಲದಲ್ಲಿ ಎರಡು ಸರಳರೇಖೆಗಳಿಂದ ಕೂಡಿದ ಈ ಅಕ್ಷರ ಕ್ರಿ. ಶ. ಎರಡನೆಯ ಶತಮಾನದಲ್ಲಿ ಅಗಲವಾಗಿಯೂ ದುಂಡಾಗಿಯೂ ಪರಿವರ್ತನೆ ಹೊಂದುತ್ತದೆ. ಕದಂಬ ಕಾಲದಲ್ಲಿ ಬಲಭಾಗದ ರೇಖೆ ಸ್ವಲ್ಪ ಎಡಗಡೆಗೆ ಬಾಗುತ್ತದೆ. ಒಂಭತ್ತನೆಯ ಶತಮಾನದಲ್ಲಿ, ಈ ಬಾಗಿದ ರೇಖೆ ಇನ್ನೂ ಉದ್ದವಾಗಿ ದುಂಡಾಗುತ್ತದೆ. ಹದಿಮೂರನೆಯ ಶತಮಾನದ ಶಾಸನಗಳಲ್ಲಿ ಇದೇ ಪ್ರವೃತ್ತಿ ಮುಂದುವರಿಯುತ್ತದೆ. ಈ ರೂಪ ವಿಶೇಷ ಬದಲಾವಣೆಯಿಲ್ಲದೆ ವಿಜಯನಗರ ಮತ್ತು ಅದರ ಮುಂದಿನ ಕಾಲಗಳಲ್ಲಿ ಉಳಿಯುತ್ತದೆ. ಈ ಅಕ್ಷರದಂತ್ಯ ಅಘೋಷ ಸ್ಪರ್ಶ ಧ್ವನಿಯನ್ನು ಸೂಚಿಸುತ್ತದೆ.
Check out Kannada Varnamale : ಕನ್ನಡ ವರ್ಣಮಾಲೆ
ಕನ್ನಡ ತ ಅಕ್ಷರದ ಹಳೆಗನ್ನಡ ಪದಗಳು – Kannada Words
- ತಂಗದಿರ್ಗಲ್ – ಚಂದ್ರಕಾಂತಶಿಲೆ
- ತಂಗೆ(ಗಿ) – ಕಿರಿಯ ಸೋದರಿ
- ತಂಡ – ಗುಂಪು
- ತಂಡಂಗೊಳ್ – ಗುಂಪುಗೂಡು
- ತಂಡಸು – ಕಂಟಿಕಿ, ಮುಳ್ಳುಮರ
- ತಂಡುಂಮುಂಡು – ಅಸ್ತವ್ಯಸ್ತತೆ
- ತಂಡುಲ – ಅಕ್ಕಿ
- ತಂತನ್ಯಮಾನ – ಪ್ರತಿಬಿಂಬಿಸುವ
- ತಂತ್ರ – ಸೈನ್ಯ; ಉಪಾಯ; ಆಗಮಶಾಸ್ತ್ರ
- ತಂತ್ರಾಧ್ಯಕ್ಷ – ಸೇನಾಪತಿ
- ತಂತ್ರಾವಾಪ – ರಾಷ್ಟ್ರಚಿಂತನೆ
- ತಂತ್ರಿ – ತಂತಿ, ದಾರ
- ತಂತ್ರೋದಿತ – ತಂತ್ರಶಾಸ್ತ್ರದಲ್ಲಿ ಉಕ್ತವಾದ
- ತಂದಲ್ – ತುಂತುರು, ಸೋನೆ
- ತಂದೆ – ಜನಕ
- ತಂದ್ರತೆ – ಆಲಸ್ಯ
- ತಂದ್ರಿ – ನಿದ್ದೆ
- ತಂದ್ರೀಭೂತ – ಜಡಗೊಂಡ
- ತಂಬಟ – ತಮ್ಮಟೆ
- ತಂಬುಲ – ತಾಂಬೂಲ
- ತಂಬುಲಂಗೊಡು – ತಾಂಬೂಲ ಕೊಡು
- ತಂಬುಲಂಗೊಳ್ – ತಾಂಬೂಲ ಸ್ವೀಕರಿಸು
- ತಂಬುಲಂದೀವು – ತಾಂಬೂಲವನ್ನು ತುಂಬು
- ತಂಬುಲಂಬಿಡಿ – ತಾಂಬೂಲ ಹಿಡಿ
- ತಂಬುಲಗುಟುಕು – ಗುಟುಕಿನಂತೆ ತಾಮಭುಲ ತಿನ್ನಿಸು
- ತಂಬುಲಿ(ಗ) – ವೀಳೆಯದೆಲೆಯ ಮಾರಾಟಗಾರ
- ತಂಬುಲಿಗವಸರ – ತಂಬಿಲಿಗ+ಪಸರ, ವೀಳೆಯದೆಲೆಯ ಅಂಗಡಿ
- ತಂಬೆಲರ್ – ತಂಗಾಳಿ
- ತಕ್ಕ – ಯೋಗ್ಯನಾದ
- ತಕ್ಕಂದ – ಯೋಗ್ಯವಾದ ರೀತಿ
- ತಕ್ಕ¿Â – ಯೋಗ್ಯತೆ ಕುಂದು
- ತಕ್ಕಿಸು – ಬಯಸು
- ತಕ್ಕು – ಯೋಗ್ಯತೆ; ಸಾಮಥ್ರ್ಯ
- ತಕ್ಕುಂಗೆಡು – ಯೋಗ್ಯತೆ ಕುಂದು
- ತಕ್ಕುಗುಡು – ಬೆಂಬಲ ಕೊಡು
- ತಕ್ಕುಗೆಡಿಸು – ಯೋಗ್ಯತೆ ಕೆಡಿಸು
- ತಕ್ಕುಗೊಡು – ಠಕ್ಕುಗೊಡು, ವಂಚಿಸು
- ತಕ್ಕುಮೆ – ಯೋಗ್ಯತೆ
- ತಕ್ಕೂರ್ಮೆ – ಯೋಗ್ಯತೆ; ತತ್+ಕೂರ್ಮೆ, ಅಂತಹ ಪ್ರೀತಿ; ಕೃತಜ್ಞತೆ
- ತಕ್ಕೆ – ತಕ್ಕವಳು
- ತಕ್ಕೆವರ್ – ಹತ್ತಿರ ಬರು
- ತಕ್ರ – ಮಜ್ಜಿಗೆ
- ತಕ್ಷ(ಕ) – ಬಡಗಿ; ರಥಕಾರ
- ತಕ್ಷಕಪತಿ – ಮಹಾ ಶಿಲ್ಪಿ
- ತಕ್ಷಕರತ್ನ – (ಜೈನ) ಜೀವರತ್ನಗಳಲ್ಲಿ ಒಂದಾದ
- ಸ್ಥಪತಿ, ವಾಸ್ತುಶಿಲ್ಪಿ
- ತಗಡು – ಲೋಹದ ಫಲಕ
- ತಗರ್ – ಟಗರು; ಅಡ್ಡಗಟ್ಟು
- ತಗರ್ತಲೆಯ – ಒಂದು ಬಾಣ
- ತಗವೆ – ಅಡೆತಡೆ
- ತಗು – ತಕ್ಕನಾಗು
- ತಗುಣಬಿಗುಣಂಬರಿ – ಅಲೆದಾಡು
- ತಗುಣೆಗಾಟಂಗುಡು – ತಿಗಣೆಯಂತೆ ಕಾಟಕೊಡು
- ತಗುಳ್ – ಸೇರು; ಅನುಸರಿಸು; ಅಟ್ಟು; ದುಡುಕು
- ತಗುಳ – ಗೊಂಚಲು
- ತಗುಳಿಸು – ಜೋಡಿಸು
- ತಗುಳ್ಚು – ತಗುಲಿಸು, ಜೋಡಿಸು
- ತಗುಳ್ಪು – ಜೋಡಣೆ
- ತಗೆ – ನಿಲ್ಲಿಸು; ಅಡ್ಡಿ
- ತಗೆಪು – ಸಾಲದ ನಿರ್ಬಂಧ
- ತಗೆಬಗೆ – ಕಳವಳ
- ತಗ್ಗುಗುಟ್ಟು – ಜೋರಾಗಿ ಕುಟ್ಟು
- ತಜಿನೆವ¿ಯಿಗೆ – ಒಂದು ಬಗೆಯ ಧ್ವಜ
- ತಜ್ಜ್ಞ(ಜ್ಞ) – ತತ್+ಜ್ಞ, ಅದನ್ನು ತಿಳಿದವನು ಒಂದು ವಿಷಯವನ್ನು ಚೆನ್ನಾಗಿ ಬಲ್ಲವನು
- ತಜ್ಞತೆ – ಪಾಂಡಿತ್ಯ
- ತಟ – ದಡ, ಬೆಟ್ಟದ ತಪ್ಪಲು
- ತಟಂ – ಕೂಡಲೆ
- ತಟಂಕಷ – ದಡವನವನು ಮುಟ್ಟುವ, ಸಮಗ್ರವಾದ
- ತಟಂಬಿಡಿ – ದಡದಗುಂಟ ಸಾಗು
- ತಟಜ – ದಡದಲ್ಲಿ ಹುಟ್ಟಿದ
- ತಟಾಂತರ – ದಡದ ಪ್ರದೇಶ
- ತಟಾಕ – ಕೆರೆ
- ತಟಿತ್ – ಮಿಂಚು
- ತಟಿಚ್ಚಂಚಳೆ – ಮಿಂಚಿನಂತೆ ಚಚಂಚಲಳಾದ
- ತಟಿಚ್ಛøಂಗಾಟ – ಮಿಂಚಿನ ಹೊಳಪು
- ತಟಿದಂಗನೆ – ಮಿಂಚೆಂಬ ಹೆಣ್ಣು
- ತಟಿದ್ವಲ್ಲರಿ – ಮಿಂಚಿನ ಬಳ್ಳಿ
- ತಟಿದ್ವಳಯ – ಮಿಂಚಿನ ವಲಯ
- ತಟಿದ್ವಿಲಾಸ – ಮಿಂಚಿನ ವಿಲಾಸ
- ತಟಿನಿ – ನದಿ
- ತಟಿನ್ನಾದ – ಗುಡುಗು
- ತಟಿನ್ಮಾಲಿ(ಳಿ)ಕೆ – ಮಿಂಚಿನ ಮಾಲೆ
- ತಟಿಲ್ಲತೆ – ಮಿಂಚಿನ ಬಳ್ಳಿ
- ತಟ್ಟಿ – ತಡಿಕೆ; ಒಂದು ಬಗೆಯ ಬಲೆ
- ತಟ್ಟಿಗಟ್ಟು – ತಡಿಕೆ ಕಟ್ಟು
- ತಟ್ಟಿವೆಣೆ – ತಡಿಕೆಯನ್ನು ಹೆಣೆ
- ತಟ್ಟು – ಅಪ್ಪಳಿಸು; ಸನ್ಯಾಸಿಯ ಹೊದಿಕೆ; ಥಟ್ಟು, ಗುಂಪು; ಸೈನ್ಯ
- ತಟ್ಟುಂಗೆಡೆ – ಶಕ್ತಿಗುಂದಿ ಬೀಳು
- ತಟ್ಟುಕ – ತಟ್ಟುವವನು
- ತಟ್ಟುಗುಟ್ಟು – ಅಪ್ಪಳಿಸು
- ತಟ್ಟುಗೆಯ್ – ಚಪ್ಪಟೆಗೊಳಿಸು
- ತಟ್ಟುಪೊಟ್ಟು – ಥಟ್ ಪಟ್ ಎಂದು
- ತಟ್ಟುರ್ಚು – ಸೀಳಿಕೊಂಡ ಹೊರಬರು
- ತಡ – ಅಡ್ಡಿ; ವಿಳಂಬ; ದಡ
- ತಡಂಗ – ತಟಾಕ
- ತಡಂಗಡಿ – ಕತ್ತರಿಸು
- ತಡಂಗಲಿಸು – ಕೂಡಿಕೊ, ಸೇರಿಕೊ
- ತಡಂಗಾ – ತಡೆದು ರಕ್ಷಿಸಿಕೊ
- ತಡಂಗಾಲ್ – ತೊಡರುಗಾಲು
- ತಡಂಗಾಲ್ಗೊಳ್ – ತೊಡರುಗಾಲಾಗು
- ತಡಂಗಾಲ್ವೊಯ್ – ತೊಡರುಗಾಲು ಹಾಕು
- ತಡಂಗಿಡಿಸು – ನೆಲೆಗೆಡಿಸು
- ತಡಂಗೂಡು – ಸೇರಿಕೊ
- ತಡಂಗೆಡೆ – ಕುಸಿದುಬೀಳು
- ತಡಂತೊಡರ್ – ಬೆರೆತುಕೊ
- ತಡಂನುಡಿ – ನಿಧಾನ ಮಾತು
- ತಡಂಬಡೆ – ಒಪ್ಪು
- ತಡಂಬರಿ – ಹಬ್ಬು
- ತಡಂಬಾಯ್ – ದಾಟು
- ತಡಂಬುಗಿಸು – ಬೆರೆಸು
- ತಡಂಬೊಯ್ – ಅಪ್ಪಳಿಸು; ಪ್ರತಿಭಟಿಸು
- ತಡಂಮಾಡು – ದಾರಿ ತಪ್ಪಿಸು
- ತಡಂಮೆಟ್ಟು – ಮೆಟ್ಟಿಂಗಾಲಿಡು, ಮೆಲ್ಲಗೆ ನಡೆ
- ತಡಕೆಯ್ – ಅಪ್ಪುಗೆ
- ತಡತಡವರ್ – ತೊದಲು
- ತಡತಡಂದೊಡರ್ – ತೂಕತಪ್ಪು
- ತಡತಡಿಸು – ದಡದಡಿಸು
- ತಡಬಡಿಸು – ತಬ್ಬಿಬ್ಬುಗೊಳ್ಳು
- ತಡ(ತಡ)ಮಾ(ವಾ)ಗು – ವಿಳಂಬವಾಗು; ತಬ್ಬಿಬ್ಬಾಗು
- ತಡಮಾಡು – ತಳ್ಳಂಕಗೊಳಿಸು
- ತಡಮಿಕ್ಕು – ತಡೆಯೊಡ್ಡು
- ತಡವರಿಸು – ತಡಕಾಡು; ತೊದಲು
- ತಡವಾಯ್ – ಸಮನಾಗು
- ತಡವಿಕ್ಕು – ತಡಮಾಡು
- ತಡವು – ತಡಕಾಡು; ತೊದಲು; ವಿಳಂಬ
- ತಡಸು – ಒಂದು ಮರ
- ತಡಹರ – ಬೊಕ್ಕೆ
- ತಡಾಗ – (ತಟಾಕ) ಸಣ್ಣ ಕೆರೆ
- ತಡಿ – ದಡ
- ತಡಿಗಾಣ್ – ದಡಕಾಣು
- ತಡಿಗೊಳ್ – ದಡದ ಗುಂಟ ಸಾಗು
- ತಡಿದೆರೆ – ದಡಕ್ಕಪ್ಪಳಿಸುವ ತೆರೆ
- ತಡಿಮೀರು – ದಡಮೀರು
- ತಡಿವಿಡಿ – ತಡಿಗೊಳ್
- ತಡಿಸಾರ್ – ದಡ ಸೇರು
- ತಡುಂಬು – ಹೋಗಲಾಡಿಸು
- ತಡೆ – ವಿಳಂಬ ಮಾಡು; ಅಡ್ಡಿಪಡಿಸು
- ತಡೆಗಾಲ್ಪೊಡೆ – ತೊಡರುಗಾಲು ಹಾಕು
- ತಡೆಗೆಡಹು – ಬೀಳಿಸು
- ತಡೆಗೆಡೆ – ಎಡವಿಬೀಳು
- ತಡೆಗೊಳ್ – ಅಡ್ಡ ಬರು
- ತಡೆಪಂಬೆ¾ು – ನಿಧಾನಗೊಳ್ಳು
- ತಡೆಯಿಸು – ಅಡ್ಡಿಪಡಿಸು
- ತಣಿ – ತೃಪ್ತಿ ಪಡೆ
- ತಣಿಪು – ತೃಪ್ತಿ; ತೃಪ್ತಿಪಡಿಸು
- ತಣಿಯಿಸು – ತೃಪ್ತಿಪಡಿಸು
- ತಣಿಯುಣ್ – ತೃಪ್ತಿಯಾಗುವಂತೆ ತಿನ್ನು
- ತಣಿಯೂಡು – ತೃಪ್ತಿಯಾಗುವಂತೆ ಊಟಮಾಡಿಸು
- ತಣಿವು – ತೃಪ್ತಿ
- ತಣ್ಗಂಪು – ಮದುರವಾದ ವಾಸನೆ
- ತಣ್ಗದಿರ್ – ತಂಪು ಕಿರಣ
- ತಣ್ಗದಿರ – ಚಂದ್ರ
- ತಣ್ಗರಗ – ತಂಪಾದ ಕೊಡ
- ತಣ್ಗಳಸ – ತಣ್ಗರಗ
- ತಣ್ಗಾಲ್ – ತಂಪಾದ ನೀರಿನ ಕಾಲುವೆ
- ತಣ್ಗಾಳಿ – ತಂಗಾಳಿ
- ತಣ್ಗೊಳ – ತಂಪಾದ ನಿರಿರುವ ಕೊಳ
- ತಣ್ಗೋಡು – ತಂಪು ಉಂಟುಮಾಡು
- ತಣ್ಜೊಡರ್ – ತಂಪಾದ ದೀಪ
- ತಣ್ಣಲೆ – ತಂಪಾದ ಅಲೆ
- ತಣ್ಣಸ – ತಂಪು
- ತಣ್ಣಸಗೆಯ್ಯವಟ್ಟ – ಚಂದ್ರ
- ತಣ್ಣಸಗೊಳ್ – ತಂಪಾಗು
- ತಣ್ಣಸುವುಟ್ಟು – ತಂಪು ಉಂಟಾಗು
- ತಣ್ಣಿತ್ತು – ತಂಪಾದ
- ತಣ್ಣೀರ್ – ತಣ್ಣನೆಯ ನೀರು
- ತಣ್ಣಿದ – ತಂಪಾದವನು
- ತಣ್ಣೆಲರ್ – ತಂಗಾಳಿ
- ತಣ್ಣೆಲೆ – ತಂಪು ಎಲೆ, ಹಸಿರೆಲೆ
- ತಣ್ಣೆ¿ಲ್ – ತಂಪಾದ ನೆರಳು
- ತಣ್ಣೇಳೆ – ತಣ್ಣನೆಯ ಎಳೆ
- ತಣ್ತೊಡವು – ತಂಪಾದ ಆಭರಣ
- ತಣ್ದಳಿರ್ – ತಂಪಾದ ಚಿಗುರು
- ತಣ್ಫ¿Â – ತಣ್ಪು+ಅ¿Â, ಶೀತಲತೆ ಹೋಗು
- ತಣ್ಪಿಡಿ – ತಂಪಿನಿಂದ ಕೂಡು
- ತಣ್ಪು – ತಂಪು
- ತಣ್ಪುಗಂಪು – ಶೀತಲ ಸುಗಂಧ
- ತಣ್ಪುಗೆಯ್ – ತಂಪನ್ನುಂಟುಮಾಡು
- ತಣುದರ್ – ತಂಪನ್ನು ತಾ
- ತಣ್ಪುವಡೆ – ತಂಪನ್ನು ಹೊಂದು
- ತಣ್ಬನಿ – ತಂಪು ಹನಿ
- ತಣ್ಬಸಲೆ – ತಮಪಾದ ಹುಲ್ಲುಹಾಸಲೆ
- ತಣ್ಬಿಸಿಲ್ – ತಂಪಾದ ಬಿಸಿಲು, ಎಲೆಬಿಸಿಲು
- ತಣ್ಬೆಳಗು – ತಂಪಾದ ಕಾಂತಿ
- ತಣ್ಮಲೆ – ತಂಪನ್ನು ಹರಡು
- ತತ್ – ಆ, ಅದು
- ತತ – ಹರಡಿದ; ತಂತಿ; ತಂತಿವಾದ್ಯ
- ತತಿ – ಸಮೂಹ
- ತತ್ಕಾಲ – ಆ ಕಾಲ
- ತತ್ಕಾಲಂ – ಆ ಕಾಲದಲ್ಲಿ
- ತತ್ತನಯ – ಆ ಮಗ; ಅವನ ಮಗ
- ತತ್ತರಿಸು – ನಡುಗು
- ತತ್ತಿ – ಮೊಟ್ಟೆ
- ತತ್ತಪಣ – ಜೊತೆಗೊಳಿಸುವಿಕೆ, ಹೊತ್ತಿಸುವಿಕೆ
- ತತ್ತುಪಣಂಗೆಯ್ – ಉಪಚಾರಮಾಡು
- ತತ್ತ್ವಗರ್ಭ – ತತ್ವ(ತನ್ನತನ)ದಿಂದ ತುಂಬಿದ
- ತತ್ತ್ವಚಯ – ತತ್ವಸಮೂಹ
- ತತ್ತ್ವಜ್ಞ – ತತ್ವಜ್ಞಾನಿ
- ತತ್ತ್ವಪರಿಣತ – ತತ್ತ್ವಜ್ಞ
- ತತ್ತ್ವವೇದಿ – ತತ್ತ್ವಜ್ಞ
- ತತ್ವಾಂಧ – ತತ್ವದ ಬಗ್ಗೆ ಕುರುಡಾಗಿರುವವನು
- ತತ್ವಾರ್ಥವಿನಿಶ್ಚಯ – ತತ್ವದ ಅರ್ಥದ ಬಗೆಗಿನ ನಿಶ್ಚಿತ ಜ್ಞಾನ
- ತತ್ವಾರ್ಥಶ್ರದ್ಧಾನ – ತತ್ವಾರ್ಥದಲ್ಲಿ ಶ್ರದ್ಧೆ
- ತತ್ವೋಕ್ತಿ – ತತ್ವದ ಬಗೆಗಿನ ಮಾತುಗಳು
- ತತ್ಸಮ – ಅದಕ್ಕೆ ಸಮನಾದ; ವ್ಯತ್ಯಾಸವಿಲ್ಲದೆ ಅಥವಾ ಸ್ವಲ್ಪ ವ್ಯತ್ಯಾಸದಿಂದ ಕನ್ನಡದಲ್ಲಿ ಬಳಸುವ ಸಂಸ್ಕøತ ಶಬ್ದ
- ತತ್ಸವಿತುರ್ವರೇಣ್ಯ – ಬ್ರಾಹ್ಮಣ, ಶ್ರೌತ
- ತತ್ಸ್ವರೂಪ – ಅದೇ ರೂಪ
- ತತ್ಸ್ವರೂಪಗುಣ – ಅದೇ ರೂಪ ಮತ್ತು ಗುಣಗಳು
- ತಥಾಗತಮತ – ಬೌದ್ಧಮತ
- ತಥ್ಯ – ನಿಶ್ಚಯ
- ತಥ್ಯಾಭಿಯೋಗ – ಸರಿಯಾದ ಪ್ರಯತ್ನ
- ತದನಂತರಂ – ಆನಂತರ
- ತದರ್ಧಪ್ರಮಿತ – ಅದರ ಅರ್ಧದಷ್ಟು ಅಳತೆಯ
- ತದವಸಾನ – ಅದರ ಕೊನೆ
- ತದಾತನ – ಆ ಕಾಲದ
- ತದಾತ್ವಸುಖ – ಆ ಕಾಲದ ಸುಖ
- ತದಿಗೆ – ಹುಣ್ಣಿಮೆ, ಅಮಾವಾಸ್ಯೆಗಳನಂತರದ ಮೂರನೆಯ ದಿನದ ತಿಥಿ
- ತದೀಯ – ಅದಕ್ಕೆ (ಆ ವ್ಯಕ್ತಿಗೆ) ಸಂಬಂಧಿಸಿದ
- ತದುಕು – ಸಲ್ಲಕಿ ಗಿಡ
- ತದೆ – ಹೊಡೆ; ಏಟು
- ತದೆವಡೆ – ಏಟು ತಿನ್ನು
- ತದ್ಭವ – ಅದರಿಂದ ಹುಟ್ಟಿದ;
- ತದ್ವಿರುದ್ಧ – ಅದಕ್ಕೆ ವಿರುದ್ಧವಾದ
- ತದ್ವ್ಯತಿರಿಕ್ತ – ಅದಕ್ಕೆ ವ್ಯತ್ಯಾಸವಾದ
- ತನತು(ತ್ತು) – ತನ್ನದು
- ತನಯ – ಮಗ
- ತನಯೆ – ಮಗಳು
- ತನಿತು – ತಾನಾಗಿ; ಸೇರಿ
- ತನಿಗಂಡ – ಬೇರೆಯಾದ ಮಾಂಸಖಂಡ
- ತನಿಗಂಪು – ಸುವಾಸನೆ
- ತನಿಗರ್ಪು – ಹೊಳೆಯುವ ಕಪ್ಪು ಬಣ್ಣ
- ತನಿಗರ್ವು – ಪಕ್ವವಾದ ಕಬ್ಬು
- ತನಿಗಳ್ – ಹದವಾದ ಕಳ್ಳೂ
- ತನಿಗಿಚ್ಚು – ಹಿತಕರವಾದ ಬೆಂಕಿ
- ತನಿಗೆಂಡ – ಉರಿಯುವ ಕೆಂಡ
- ತನಿಗೆತ್ತು – ಹೆಚ್ಚಾಗಿ ನಡುಗು; ಅತಿಶಯ ನಡುಕ
- ತನಿಗೊರ್ವಿಸು – ಹೆಚ್ಚಾಗಿ ಕೊಬ್ಬಿಸು
- ತನಿಗೊರ್ವು – ಚೆನ್ನಾಗಿ ಕೊಬ್ಬು; ಅಧಿಕ ಮದ
- ತನಿನಂಜು – ಕಟುವಿಷ
- ತನಿರಸ – ರುಚಿಯಾದ ರಸ
- ತನಿವಂಡು – ತನಿ+ಬಂಡು, ಸಿಹಿ ಮಕರಂದ
- ತನಿವಣ್ – ಸಿಹಿ ಹಣ್ಣು
- ತನಿವದನು – ಸರಿಯಾದ ಹದ, ರೀತಿ
- ತನಿವಾಲ್ – ಮಧುರವಾದ ಹಾಲು
- ತನಿವೆರ್ಚು – ಬಹಳವಾಗಿ ಜಾಸ್ತಿಯಾಗು
- ತನಿವೆಳಗು – ಶೀತಲ ಕಾಂತಿ
- ತನಿವೆಳ್ದಿಂಗಳ್ – ಶೀತಲ ಬೆಳುದಿಂಗಳು
- ತನಿಬೇಟ – ಮಧುರವಾದ ಪ್ರಣಯ
- ತನಿಸುಸಿಲ್ – ಮಧುರ ಸಂಭೋಗ
- ತನಿಸೊರ್ಕು – ಮಧುರವಾದ ಅಮಲು
- ತನು – ಕೃಶವಾದ; ದೇಹ
- ತನುಜ – ಮಗ
- ತನುಜಾತ – ತನುಜ
- ತನುಜೆ – ಮಗಳು
- ತನುತರ – ಹೆಚ್ಚು ಕೋಮಲ
- ತನುತ್ರ – ಕವಚ
- ತನುತ್ವ – ಕೃಶತೆ
- ತನುತ್ವಂಬಡೆ – ಕೃಶವಾಗು
- ತನುದಂಡ – ದೇಹದಂಡನೆ
- ತನುಧರ್ಮ – ದೇಹದ ಸ್ವಭಾವ
- ತನುಭವೆ – ಮಗಳು
- ತನುಭೃದ್ಗುಣ – ಜೀವಸಮೂಹ
- ತನುಮಧ್ಯೆ – ಸಣ್ಣ ಸೊಂಟವುಳ್ಳವಳು
- ತನುಮುನಿ – ಕೃಶನಾದ ಮುನಿ
- ತನುರಕ್ಷೆ – ದೇಹರಕ್ಷೆ
- ತನುರುಚಿ – ದೇಹಕಾಂತಿ
- ತನು(ನೂ)ರುಹ – ಮೈಯ ಕೂದಲು
- ತನುರೋಮಾವಳಿ – ತನುರುಹ
- ತನುವಾತ – (ಜೈನ) ವಿಶ್ವಾಕಾಶವನ್ನು
- ಆವರಿಸಿಕೊಂಡಿದ್ದು, ಎಂಟು ಲೋಕಗಳಿಗೆ ಆಧಾರವಾದ ಮೂರು ಅನಿಲಗಳಲ್ಲಿ ಕೊನೆಯದು
- ತನುವಿದಾಹ – ದೇಹದ ತಾಪ
- ತನುವಿಧು – ರೇಖಾಚಂದ್ರ
- ತನುವೆರಸು – ದೇಹಸಮೇತ
- ತನುಸೋಂಕು – ದೇಹಸ್ಪರ್ಶನ
- ತನುಸೌಂದರ್ಯ – ದೇಹದ ಚೆಲುವು
- ತನೂಜ – ಮಗ
- ತನೂಜಾತೆ – ಮಗಳು
- ತನೂದರ – ತೆಳುವಾದ ಹೊಟ್ಟೆ
- ತನೂದರಿ – ತೆಳುವಾದ ಹೊಟ್ಟೆಯುಳ್ಳವಳು
- ತನೂಭವ – ತನೂಜ
- ತನೆ – ಬಸಿರು
- ತನೆವಂದಿ – ಗಬ್ಬ ಧರಿಸಿದ ಹಂದಿ
- ತನ್ಮತ – ಅವನ ಮತ
- ತನ್ಮಧ್ಯ – ಅದರ ನಡುವೆ
- ತನ್ಮಯ – ಅದರಲ್ಲೇ ಲೀನವಾಗಿರುವ
- ತನ್ವಂಗಿ – ಕೋಮಲ ಶರೀರೆ
- ತನ್ವಿ – ತನು+ಅಂಗಿ, ತನ್ವಂಗಿ
- ತಪ – ಶಾಖ; ತಪಸ್ಸು; ಮಾಘಮಾಸ
- ತಪಂಗೆಯ್ – ತಪವನ್ನಾಚರಿಸು
- ತಪಂಗೊಳ್ – ತಪವನ್ನು ಕೈಗೊಳ್ಳು
- ತಪಂಬಡು – ತಪಂಗೆಯ್
- ತಪಃಪರೀಷಹ – (ಜೈನ) ತಪಸ್ಸನ್ನು ಮಾಡುವಾಗ ಸಹಿಸಿಕೊಳ್ಳಬೇಕಾದ ತೊಂದರೆಗಳು
- ತಪಃಪ್ರಭಾವ – ತಪಸ್ಸಿನ ಪರಿಣಾಮಕಾರಿಕತೆ
- ತಪಃಶೀಲ – ತಪಸ್ಸಿನಲ್ಲಿನ ಆಸಕ್ತಿ
- ತಪನ – ಸುಡುವ; ಸೂರ್ಯ
- ತಪನಕರ – ಬಿಸಿಲು
- ತಪನಕಾಂತಾಶ್ಮ – ಸೂರ್ಯಕಾಂತಶಿಲೆ
- ತಪನತಪ್ತ – ಬಿಸಿಲಿನಲ್ಲಿ ಸುಟ್ಟ
- ತಪನಾತಪ – ಸುಡುವ ಬಿಸಿಲು
- ತಪನಾಸ್ತ್ರ – ಸೂರ್ಯಸ್ತ್ರ
- ತಪನೀಯ – ಸುಡಬೇಕಾದುದು; ಬಂಗಾರ
- ತಪನೀಯಸಾನು – ಚಿನ್ನದ ಶಿಖರ
- ತಪನೀಯಸೂತ್ರ – ಚಿನ್ನದ ಎಳೆ
- ತಪನೋದಯ – ಸೂರ್ಯೋದಯ
- ತಪನೋಪಲಪುತ್ರಿಕೆ – ಸೂರ್ಯಕಾಂತಶಿಲೆಯ ಪ್ರತಿಮೆ
- ತಪಮಾನ್ – ತಪಂ+ಆನ್, ತಪಸ್ಸನ್ನು ಕೈಗೊಳ್ಳು
- ತಪಮಿರ್ – ತಪಮಾನ್
- ತಪಯೋಗ – ತಪಸ್ಸಿನ ಸಂಬಂಧ
- ತಪಶ್ಚರಣ – ತಪಸ್ಸಿನ ಆಚರಣೆ
- ತಪಸ್ತಪ್ತ – ತಪಸ್ಸಿನಲ್ಲಿ ಬೆಂದ
- ತಪಸ್ಥೆ – ತಪಸ್ಸಿನಲ್ಲಿ ತೊಡಗಿರುವವಳು
- ತಪಸ್ಸು – (ಜೈನ) ಅನಶನ, ಅವಮೋ(ಮೌ)ದರ್ಯ, ವೃತ್ತಿಪರಿಸಂಖ್ಯಾನ, ರಸಪರಿತ್ಯಾಗ, ವಿವಿಕ್ತಾವಾಸ(ವಿವಿಕ್ತಶಯನಾಶನ), ಕಾಯಕ್ಲೇಶ ಎಂಬ ಬಾಹ್ಯ ತಪಸ್ಸುಗಳೂ; ಪ್ರಾಯಶ್ಚಿತ್ತ, ವಿನಯ, ವೈಯಾವೃತ್ಯ, ಸ್ವಾಧ್ಯಾಯ, ಧ್ಯಾನ, ವ್ಯತ್ಸರ್ಗ ಎಂಬ ಅಭ್ಯಂತರ ತಪಸ್ಸುಗಳೆಂಬ ಒಟ್ಟು ಹನ್ನೆರಡು ಬಗೆ
- ತಪಿ – ತಪನ, ಸೂರ್ಯ
- ತಪೋಗ್ರಹಣ – ತಪಸ್ಸನ್ನು ಕೈಗೊಳ್ಳುವುದು
- ತಪೋಧನ – ತಪಸ್ಸನ್ನೇ ಧನವಾಗುಳ್ಳ ಋಷಿ
- ತಪೋಧನಾಖ್ಯಾನ – ತಪೋಧನರ ಬಗೆಗಿನ ಕತೆ;
- (ಜೈನ) ತ್ರಿಷಷ್ಟಿ ಶಲಾಕಾಪುರುಷರ ಕತೆ
- ತಪೋಧನೆ – ತಪಸ್ಸನ್ನೇ ಧನವಾಗುಳ್ಳವಳು
- ತಪೋಧರ – ತಪೋಧರ
- ತಪೋನಿಯಮ – ತಪಸ್ಸಿನ ನಿಯಮ
- ತಪೋನಿಯುಕ್ತ – ತಪಸ್ಸಿನಲ್ಲಿ ತೊಡಗಿದ
- ತಪೋನಿಯೋಗ – ತಪದ ಆಚರಣೆ
- ತಪೋಭರ – ತಪಸ್ಸಿನ ತೀವ್ರತೆ
- ತಪೋಭಾರ – ತಪಸ್ಸಿನ ಭಾರ
- ತಪೋರಾಜ್ಯ – ತಪಸ್ಸಿನ ಸಾಮ್ರಾಜ್ಯ
- ತಪೋರುಪಮಾರ್ಗ – ತಪಸ್ಸನ್ನು ಮಾಡಬೇಕಾದ ರೀತಿ
- ತಪೋಲಕ್ಷ್ಮಿ – ತಪಸ್ಸೆಂಬ ಲಕ್ಷ್ಮಿ
- ತಪೋವನ – ತಪಸ್ಸನ್ನು ಮಡುವ ಜಾಗ
- ತಪೋವೃತ್ತಿ – ತಪಸ್ಸಿನ ಆಚರಣೆ
- ತಪೋವೃದ್ಧಿ – ತಪಸ್ಸಿನ ಏಳಿಗೆ
- ತಪೋಹೀನತೆ – ತಪಸ್ಸು ಇಲ್ಲದಾಗುವುದು
- ತಪ್ತ – ಕಾಯ್ದ
- ತಪ್ತಾಯಸ – ಕಾದ ಕಬ್ಬಿಣ
- ತಪ್ತಾಯಸರಸ – ಕಾದ ಕಬ್ಬಿಣದ ದ್ರವ
- ತಪ್ತಾಶ್ಮ – ಸೂರ್ಯಕಾಂತಶಿಲೆ
- ತಪ್ಪು – ಸರಿಯಲ್ಲದ್ದು; ತಪ್ಪುಮಾಡು; ದೋಷ
- ತಪ್ಪುನೋಟ – ಕಳ್ಳನೋಟ
- ತದ್ದುನೋಡು – ಕದ್ದು ನೋಡು
- ತಪ್ಪುವಿಡಿ – ತಪ್ಪನ್ನು ಕಂಡುಹಿಡಿ
- ತಮ – ಕತ್ತಲೆ; ತಮೋಗುಣ; ಅಜ್ಞಾನ
- ತಮಂಗಮಂಟಪ – ಸಭಾಂಗಣ
- ತಮಃಪಟ(ಲ) – ಕತ್ತಲ ರಾಶಿ
- ತಮ(ಃ)ಪ್ರಭೆ – ಒಂದು ನರಕ
- ತಮಃಸಂಗತಿ – ಕತ್ತಲೊಡನೆ ಸಹವಾಸ
- ತಮರ್ – ತವರು
- ತಮರ್ಮನೆ – ತವರುಮನೆ
- ತಮಸ್ತಮ – ಗಾಢ ಕತ್ತಲೆ; ಅಜ್ಞಾನವೆಂಬ ಕತ್ತಲು
- ತಮಸ್ವಿನಿ – ರಾತ್ರಿ
- ತಮಸ್ಸಂಹೃತಿ – ಕತ್ತಲನ್ನು ಕೊನೆಗಾಣಿಸುವಿಕೆ
- ತಮಸ್ಸ್ವಭಾವ – ತಾಮಸ ಗುಣ
- ತಮಾಲ(ಳ) – ಹೊಂಗೆಯ ಮರ
- ತಮಾಲ(ಳ)ಪತ್ರ – ಹೊಂಗೆಯ ಎಲೆ
- ತಮಾಲಮಾಲೆ – ಹೊಂಗೆಯ ತೋಪು
- ತಮಾಲವನ – ಹೊಂಗೆಯ ತೋಪು
- ತಮಾಲವೀಧಿ – ಹೊಂಗೆಯ ಸಾಲುಮರಗಳ ದಾರಿ
- ತಮಾಲ ಪ್ರವಾಳ – ಹೊಂಗೆಯ ಚಿಗುರು
- ತಮಾಳಿಕಾಳಕೆ – ಹೊಂಗೆಯಂತೆ ಕಪ್ಪು ಕೂದಲುಳ್ಳವಳು
- ತಮಾಳೀವನ – ತಮಾಲವನ
- ತಮಿಸ್ರ – ಕತ್ತಲೆ
- ತಮೋಧಿ – ಕತ್ತಲ ಮೊತ್ತ
- ತಮೋಬಂಧ – ಕತ್ತಲ ಕಟ್ಟು; ಅಜ್ಞತೆಯ ಕಟ್ಟು
- ತಮೋರಿ – ತಮಃ+ಅರಿ, ಕತ್ತಲ ಶತ್ರು, ಸೂರ್ಯ
- ತಮೋವಿಕೃತಿ – ಕತ್ತಲೆ(ತಮೋಗುಣ)ಯ ವಿಕಾರ
- ತಮೋಹರ – ಕತ್ತಲ (ಅಜ್ಞಾನದ) ನಿವಾರಣೆ
- ತಮ್ಮ – ಕಿರಿಯ ಸಹೋದರ; ಸ್ವಂತದ
- ತಮ್ಮಡಿ – ಗುರು
- ತಮ್ಮುತಿರ್ವರುಂ – ತಾವಿಬ್ಬರು
- ತರ್ – ತೆಗೆದುಕೊಂಡು ಬಾ
- ತರ – ಕ್ರಮ; ಸಾಲು; ವೇಗ
- ತರಂಗ – ಅಲೆ; ಸೀರೆಯ ನೆರಿಗೆ
- ತರಂಗಭಂಗ – ಅಲೆಯು ಒಡೆಯುವುದು
- ತರಂಗಲೇಖೆ – ಅಲೆಯ ಅಂಚು
- ತರಂಗಿಣಿ – ಅಲೆಗಳಿಂದ ಕೂಡಿದುದು, ನದಿ
- ತರಂಗಿಸು – ಅಲೆಯಂತೆ ಮುಮದುವರಿ
- ತರಂಗೊಳಿಸು – ಕ್ರಮಪಡಿಸು
- ತರಂಬಿಡಿ – ಸಾಲುಗಟ್ಟು
- ತರಂಬೆ¾ು – ತರಂಬಿಡಿ
- ತರಕಸ – ಬಿಲ್ಲು; ಬತ್ತಳಿಕೆ
- ತರಕ್ಷು – ಕಿರುಬ; ಹುಲಿ
- ತರಜೆಗತ್ತರಿ – ಕುದುರೆಗೆ ತೊಡಸುವ ಒಂದು ಆಭರಣ
- ತರಣ – (ತ್ರಾಣ) ಶಕ್ತಿ
- ತರಣದ್ರೋಣಿ – ದಾಟಿಸುವ ದೋಣಿ
- ತರಣಿ – ದೋಣಿ; ಸೂರ್ಯ
- ತರಣಿಕಾಂತ – ಸ್ಫಟಿಕ
- ತರಣಿಕುಲ – ದೋಣಿಗಳ ಗುಂಪು; ಸೂರ್ಯವಂಶ
- ತರಣಿಪ್ರಭ – ಸೂರ್ಯನ ಪ್ರಭೆಯುಳ್ಳವನು
- ತರತ್ತರಂಗ – ಚಲಿಸುವ ಅಲೆ
- ತರತ್ತರಂಗ – ಚಲಿಸುವ ಅಲೆ
- ತರತ್ತರಳ – ಚಲಿಸುವ
- ತರತ್ತಾರನೇತ್ರ – ಚಂಚಲವಾದ ಗುಡ್ಡೆಯಿರುವ ಕಣ್ಣು
- ತರಲ – ಅಚ್ಚರಿ; ಚಂಚಲ
- ತರಲ(ಳ)ತೆ – ಚಾಂಚಲ್ಯ
- ತರಲಾ(ಳಾ)ಕ್ಷಿ – ಚಂಚಲವಾದ ಕಣ್ಣು(ಳ್ಳವಳು)
- ತರಲಾ(ಳಾ)ಪಾಂಗ – ಚಂಚಲ ಕುಡಿನೋಟ
- ತರಲಾ(ಳಾ)ಯತಾಕ್ಷಿ- ಚಂಚಲವಾದ ಹಾಗೂ ಅಗಲವಾದ ಕಣ್ಣುಳ್ಳವಳು
- ತರಲೇಕ್ಷಣ – ಚಂಚಲ ನೇತ್ರ
- ತರವಾರಿ – ಕತ್ತಿ
- ತರಸಾದಂ – ನೈರುತ್ಯ ದೇವತೆ
- ತರಸ್ವಿ – ಗರುಡ
- ತರಹರಿಸು – ಸಹಿಸಿಕೊ
- ತರಳತರ – ತುಂಬ ಚಂಚಲವಾದ
- ತರಳತಾರನೇತ್ರ – ಚಂಚಲ ಹಾಗೂ ಕಾಂತಿಯುಕ್ತ ಕಣ್ಣು
- ತರಳತೆ – ಚಾಂಚಲ್ಯ
- ತರಳನಯನೆ – ತರಲಾ(ಳಾ)ಕ್ಷಿ
- ತರಳಲೋಚನೆ – ತರಲಾ(ಳಾ)ಕ್ಷಿ
- ತರಳಾಂಬಿಕೆ – ತರಲಾ(ಳಾ)ಕ್ಷಿ
- ತರಳೀಕೃತ – ನಡುಗುವಂತೆ ಮಾಡಿದ
- ತರಿಸು – ತರುವಂತೆ ಮಾಡು
- ತರಿಯಿಸು – ದಾಟು
- ತರು – ಮರ
- ತರುಕೋಟರ – ಮರದ ಪೊಟರೆ
- ತರುಚರ – ಕೋತಿ
- ತರುಚರಕಾಂತೆ – ಹೆಣ್ಣು ಕೋತಿ
- ತರುಜಾತ – ತೋಪು
- ತರುಣ – ಎಳೆಯದಾದ; ಹರೆಯದವನು
- ತರುಣತ್ವ – ಎಳೆತನ
- ತರುಣದಿನಾಧೀಶ – ಬಾಲಸೂರ್ಯ
- ತರುಣಾರುಣ – ತಿಳಿ ಕೆಂಪು
- ತರುಣಾರ್ಕ – ಬಾಲಸೂರ್ಯ
- ತರುಣಿ – ಹರೆಯದವಳು
- ತರುಣಿಕೇಕರ – ತರುಣಿಯ ಕುಡಿನೋಟ
- ತರುಣೇಂದು – ಬಾಲಚಂದ್ರ
- ತರುನಿವಹ – ಮರಗಳ ಗುಂಪು
- ತರುವಲಿ – ಹುಡುಗ; ತಬ್ಬಲಿ
- ತರುವಲಿತನ – ಹುಡುಗುತನ; ತಬ್ಬಲಿತನ
- ತರುವ್ರಾತ – ಮರಗಳ ಸಮೂಹ
- ತರುಶಿಫೆ – ಬಿಳಲು
- ತರುಷಂಡ – ತರುವ್ರಾತ
- ತರುಸಾರ – ಚೇಗು
- ತರ್ಕ – ವಾದ; ತರ್ಕಶಾಸ್ತ್ರ
- ತರ್ಕಮಾಡು – ವಾದಮಾಡು
- ತರ್ಕೈಸು – ತಳ್ಕೈಸು, ಅಪ್ಪಿಕೊ
- ತರ್ಜನ – ನಿಂದನೆ; ಹೆದರಿಸುವುದು
- ತರ್ಜನನಿರತ – ನಿಂದನೆಯಲ್ಲಿ ತೊಡಗಿದವನು
- ತರ್ಜನಿ – ತೋರುಬೆರಳು
- ತರ್ಜನೋಕ್ತಿ – ನಿಂದೆಯ ಮಾತು
- ತರ್ಜಿತೆ – ಧಿಕ್ಕರಿಸಲ್ಪಟ್ಟವಳು
- ತರ್ಜಿಸು – ನಿಂದಿಸು; ಬೆದರಿಸು; ದೂರಮಾಡು
- ತರ್ಣಕ – ಹೊಸದಾಗಿ ಹುಟ್ಟಿದ ಕರು
- ತರ್ಪಣ – ತುಷ್ಟಿ
- ತರ್ಬು – ತಬ್ಬಿಕೊ, ಅಪ್ಪು
- ತರ್ಷ – ತರ್ಪಣ; ಬಯಕೆ, ಹಂಬಲ
- ತಲ(ಳ) – ಕೆಳಗಡೆ; ಅಂಗೈ; ಅಧೋಲೋಕಗಳಲ್ಲಿ ಒಂದು
- ತಲೆ – ಶಿರಸ್ಸು
- ತಲೆಗರೆ – ಅಡಗಿಕೊ
- ತಲೆಗವಿ – ತಲೆಯನ್ನು ಮರೆಮಾಡು
- ತಲೆಗಾ(ಯ್) – ತಲೆಯನ್ನು ಕಾಯಿ; ರಕ್ಷಿಸು
- ತಲೆಗಾಪಿನಾಳ್ – ಮೈಗಾವಲ ಭಟ
- ತಲೆಗುತ್ತು – ತಲೆಬಾಗು
- ತಲೆದರ್ಗು – ತಲೆ ತಗ್ಗಿಸು
- ತಲೆದುಡುಗೆ – ತಲೆಯ ಆಭರಣ
- ತಲೆದೂಗು – ಮೆಚ್ಚಿಕೊ; ಸಮ್ಮತಿಸು
- ತಲೆದೊಡವು – ತಲೆದುಡುಗೆ
- ತಲೆದೋ¾ು – ಕಾಣಿಸಿಕೊ
- ತಲೆನವಿರ್ – ತಲೆಗೂದಲು
- ತಲೆನೀರ್ – ಮುಟ್ಟಾದವಳು ನಾಲ್ಕನೆಯ ದಿನ ಮಾಡುವ ಸ್ನಾನ
- ತಲೆನಾಯಕ – ಮುಖ್ಯ ನಾಯಕ
- ತಲೆನೀರ್ಮೀ – ತಲೆಗೆ ಸ್ನಾನಮಾಡು
- ತಲೆನೇಣ್ – ಪ್ರಾಣಿಗಳ ಕೊರಳಿನ ಹಗ್ಗ
- ತಲೆಮಡು – ತಲೆಗೆ ತಾಗು
- ತಲೆಯಿಕ್ಕು – ತಲೆಯಿಡು; ಮಲಗು
- ತಲೆಯುರ್ಚು – ಅಡಗಿಕೊ
- ತಲೆಯೊತ್ತು – ತಲೆತೂರಿಸು
- ತಲೆವ(ಮ)ಡು – ಎದುರಾಗು
- ತಲೆವಣಿ – ತಲೆಯ ಮಣಿ; ಶ್ರೇಷ್ಠ
- ತಲೆವರಿ – ಮುಂದೆ ಹೋಗು
- ತಲೆವರಿಗೆ – ಗುರಾಣಿ
- ತಲೆವಾಗಿಲ್ – ಮುಂಬಾಗಿಲು
- ತಲೆವಿಕ್ಕು – ತಲೆ+ಪಿಕ್ಕು, ತಲೆ ಬಾಚು
- ತಲೆವಿಡಿಗಲಿ – ತಲೆಹಿಡುಕ
- ತಲೆವಿಲ್ – ಶ್ರೇಷ್ಠವಾದ ಬಿಲ್ಲು; ಬಿಲ್ಲಿನ ತುದಿ
- ತಲೆವೀಡು – ಶ್ರೇಷ್ಠವಾದ ಬೀಡು
- ತಲೆವೀಸು – ಒಪ್ಪದಿರು, ಬೇಡವೆಂದು ಹೇಳು
- ತಲೆವೂಸು – ತಲೆ+ಪೂಸು, ತಲೆಗೆ ಲೇಪಿಸು
- ತಲೆವೇನೆ – ತಲೆ ಬೇನೆ
- ತಲೆವೇಸ¾ು – ತಲೆ ಬೇಸರ
- ತಲೆವೊಲ – ಮುಖ್ಯ ಪ್ರದೇಶ
- ತಲೆಸುತ್ತು – ತಲೆಗೆ ಸುತ್ತುವ ಬಟ್ಟೆ, ಶೀರ್ಷಕ
- ತಲೆಸೂಡು – ತಲೆಯಲ್ಲಿ ಧರಿಸು; ಶಿರಸಾವಹಿಸು
- ತಲೋ(ಳೋ)ದರಿ – ತೆಳುವಾದ ಹೊಟ್ಟೆಯುಳ್ಳವಳು
- ತಲ್ಪ(ಳ್ಪ) – ಹಾಸಿಗೆ
- ತವಕ – ಆತುರ
- ತವಕಿಗ – ಉತ್ಸುಕನಾದವನು
- ತವಕಿಸು – ಉತ್ಸುಕಗೊಳ್ಳು
- ತವದೊಣೆ – ಅಕ್ಷಯವಾದ ಬತ್ತಳಿಕೆ
- ತವರಾಜ – ಒಂದು ಬಗೆಯ ಬಿಳಿ ಸಕ್ಕರೆ
- ತವ(ಪ)ಸಿ – ತಪಸ್ವಿ
- ತವಸು – ತಪಸ್ಸು
- ತವಿಗೋಲ್ – ತವಿಸುವ ಕೋಲು, ಬಾಣ
- ತವಿಲ್ – ಕುಂದು; ತೊಂದರೆ; ನಾಶ
- ತವಿಸು – ಕ್ಷಯಿಸು
- ತವುಂಕಲ್ – ಕ್ಷಯ
- ತವು – ಕ್ಷಯಿಸು
- ತವುಗೆ – ಕೊನೆ
- ತವುಡು – ಹೊಟ್ಟು
- ತವುತರ್ – ಕ್ಷೀಣಗೊಳ್ಳು; ಬರಿದಾಗು; ಮತ್ತೆ ಬಾ
- ತವುದಲೆ – ಮುಗಿತಾಯ
- ತವುದಲೆಗಾಣಿಸು – ಕೊನೆಗಾಣಿಸು
- ತವೆ – ಮುಗಿದುಹೋಗು
- ತಸ್ಕರ – ಕಳ್ಳ
- ತಳ್ – ಎದುರಿಸು; ತಳೆ
- ತಳ – ಕೈ, ಅಂಗೈ
- ತಳಕು – ಲೇಪನಮಾಡು
- ತಳಚ್ಚಂದ – ತಳದ ವಿನ್ಯಾಸ
- ತಳತಂತ್ರ- ಪದಾತಿ ಸೈನ್ಯ
- ತಳಪಟ್ಟು – ಕುಸ್ತಿಯ ಒಂದು ವರಸೆ
- ತಳಮಳಗು – ಬೆರಗು; ಗೊಂದಲ
- ತಳಮಳಗಾಗು – ಗೊಂದಲಗೊಳ್ಳು; ಬೆರಗಾಗು
- ತಳಮಳಗೊಳಿಸು – ಕಳವಳವುಂಟುಮಾಡು
- ತಳಮಳಿಸು – ಕಳವಳಗೊಳ್ಳು
- ತಳಮಿತಮಧ್ಯೆ – ಬಹು ತೆಳ್ಳನೆ ಸೊಂಟವುಳ್ಳವಳು
- ತಳರ್ – ಚಲಿಸು; ಹೊರಡು
- ತಳರಡಿ – ಅಸ್ಥಿರವಾದ ಹೆಜ್ಜೆ, ದಟ್ಟಡಿ
- ತಳರ್ಚು – ತಳರಿಸು, ಚಲಿಸುವಂತೆ ಮಾಡು; ಹೊರಡು
- ತಳರ್ನಡೆ – ಪುಟ್ಟ ಹೆಜ್ಜೆ, ಮಂದಗಮನ
- ತಳರ್ನುಡಿ – ತೊದಲು ನುಡಿ
- ತಳರ್ಪು – ಹರಹು
- ತಳರ್ವಕ್ಕಿ – ದಟ್ಟಡಿಯಿಡುವ ಹಕ್ಕಿ, ಹಂಸ
- ತಳಲ್ – ಚಿಗುರು
- ತಳಲುಂಬಳಲುಂಗುಟ್ಟು- ಸದೆಬಡಿ
- ತಳವರ್ಗ – ಸೈನ್ಯ
- ತಳವ¾ – ತಳವಾರ, ನಗರರಕ್ಷಕ
- ತಳವ¾Âಕೆ – ತಳವಾರನ ಕೆಲಸ
- ತಳವೆಳಗಾಗು – ಗಾಬರಿಗೊಳ್ಳು
- ತಳವೆಳಗು – ಬೆರಗು; ಗಾಬರಿ
- ತಳಸಾರ್ – ತಳ ಸೇರು
- ತಳಸು – ತಡಸಲ ಮರ
- ತಳಾಮಳಕ – ಅಂಗೈಯ ನೆಲ್ಲಿ; ಸುಸ್ಪಷ್ಟ
- ತಳಿ – ಎರಚು, ಸೇಚಿಸು; ಅನ್ನಸತ್ರ
- ತಳಿಗೆ – ತಟ್ಟೆ
- ತಳಿಗೋಂಟೆ – ಬೇಲಿ
- ತಳಿಪ(ಪು) – ಸಿಂಪಡಿಸುವಿಕೆ
- ತಳಿಯಿಸು – ಚಿಮುಕಿಸು
- ತಳಿರ್ – ಚಿಗುರು
- ತಳಿರುಯ್ಯಲ್ – ಚಿಗುರಿನ ಉಯ್ಯಾಲೆ
- ತಳಿರೆಲೆ – ಚಿಗುರೆಲೆ
- ತಳಿರೋಳಿ – ಚಿಗುರಿನ ಸಾಲು
- ತಳಿರ್ಗಳಸ – ಚಿಗುರುಗಳನ್ನಿಟ್ಟಿರುವ ಕಳಶ
- ತಳಿರ್ಗಾಸೆ – ಚಿಗುರು ಬಣ್ಣದ ಬಟ್ಟೆ; ಕಾವಿ ಬಟ್ಟೆ
- ತಳಿರ್ಗೊಂಚಲ್ – ಚಿಗುರಿನ ಗೊಂಚಲು
- ತಳಿರ್ಗೊಂಬು – ಚಿಗುರಿದ ಕೊಂಬೆ
- ತಳಿರ್ಚು – ಚಿಗುರು ಬಿಡು
- ತಳಿರ್ಜೊಂಪ – ಚಿಗುರಿನ ಗೊಂಚಲು
- ತಳಿರ್ದೊಂಗಲ್ – ತಳಿರ್ಗೊಂಬು
- ತಳಿರ್ದೋರಣ – ಚಿಗುರುಗಳ ತೋರಣ
- ತಳಿರ್ವಂದರ್ – ಚಿಗುರಿನ ಮಂಟಪ
- ತಳಿರ್ವಟ್ಟೆ – ಚಿಗುರಿನ (ಬಣ್ಣದ) ಬಟ್ಟೆ
- ತಳಿರ್ವನೆ – ಚಿಗುರಿನ ಮನೆ
- ತಳಿರ್ವಸೆ – ಚಿಗುರಿನ ಹಸೆ, ಹಾಸಿಗೆ
- ತಳಿರ್ವಾಸು – ಚಿಗುರಿನ ಹಾಸಿಗೆ
- ತಳಿರ್ವೋಗು – ಚಿಗುರಲು ತೊಡಗು
- ತಳಿಸು – ಕುಟ್ಟು
- ತಳುವು – ತಳ್ವು, ತಡಮಾಡು
- ತಳೆ – ಧರಿಸು; ಪ್ರಾಣಿಗಳನ್ನು ಕಟ್ಟುವ ಹಗ್ಗ
- ತಳೆಯಿಕ್ಕು – ಪ್ರಾಣಿಗಳ ಕಾಲಗಳಿಗೆ ಹಗ್ಗ ಕಟ್ಟು
- ತಳೋದಕ – ಕಾಲು ತೊಳೆದ ನೀರು
- ತಳೋದರಿ – ತೆಳುನಡುವಿನ ಹೆಂಗಸು
- ತಳೋಪಲಾತ – ತಳದಲ್ಲಿ ಕಲ್ಲುಗಳಿರುವ
- ತಳ್ಕಿ¾Â – ಲೇಪನಮಾಡು
- ತಳ್ಕು – ಅನುಲೇಪನ; ಲೇಪಿಸು
- ತಳ್ಪು – ಧರಿಸಿರುವಿಕೆ
- ತಳ್ಪೊಯ್ – ನೂಕು; ವ್ಯಾಪಿಸು; ಸುರಿ; ಒತ್ತಾಗಿ ಸೇರು
- ತಳ್ವು – ತಡಮಾಡು; ವಿಳಂಬ
- ತಳ್ವುಗೆಯ್ – ವಿಳಂಬ ಮಾಡು
- ತಳ್ಳಂಕ – ಆತಂಕ
- ತಳ್ಳಂಕಂಗೊಳ್ – ಆತಂಕಪಡು
- ತಳ್ಳಂಕಂಗುಟ್ಟಿಸು – ಆತಂಕಗೊಳಿಸು
- ತಳ್ಳಂಕಗೊಳಿಸು – ಆತಂಕಗೊಳಿಸು
- ತಳ್ಳಂಕುಗೆಡೆ – ಆತಂಕದಿಂದ ಕುಸಿದುಬೀಳು
- ತಾಂಕು(ಗು) – ಮೇಲೆ ಬೀಳು; ತಡೆ
- ತಾಂಗು – ತಡೆದುಕೋ
- ತಾಂಟಿಸು – ಅಪ್ಪಳಿಸು; ಸೋಕಿಸು
- ತಾಂಟು – ಅಪ್ಪಳಿಸು
- ತಾಂಡವಪ್ರೌಢಿ – ತಾಂಡವನೃತ್ಯದಲ್ಲಿ ಪ್ರೌಢಿಮೆ
- ತಾಂಬೂಲ – ಅಡಕೆ; ವೀಳೆಯ
- ತಾಂಬೂಲಕರಂಕ – ತಾಂಬೂಲದ ಭರಣಿ
- ತಾಂಬೂಲಕರಂಕವಾಹಕ – ತಾಂಬೂಲಕರಂಕವನ್ನು ಹಿಡಿದಿರುವವನು
- ತಾಂಬೂಲಕರಂಕವಾಹಿನಿ – ತಾಂಬೂಲಕರಂಕವನ್ನು ಹಿಡಿದಿರುವ ದಾಸಿ
- ತಾಂಬೂಲದಾನ – ತಾಂಬೂಲ ನೀಡು
- ತಾಂಬೂಲಿಕಾನಿಕೇತನ – ವೀಳೆಯವನ್ನು ಮಾರುವ ಸ್ಥಳ
- ತಾಟಂಕ – ಕಿವಿಯ ಓಲೆ
- ತಾಡನ – ಹೊಡೆಯುವುದು
- ತಾಡಿತ – ಹೊಡೆಯಲಾದ
- ತಾಣ – (ಸ್ಥಾನ) ಎಡೆ
- ತಾಣಬಟ್ಟ – ಸ್ಥಾನಭ್ರಷ್ಟ
- ತಾಣಾಂತರ – (ಸ್ಥಾನಾಂತರ) ಸ್ಥಳ, ಬೀಡು
- ತಾತ – ತಂದೆ
- ತಾತ್ಪರ್ಯ – ಅಭಿಪ್ರಾಯ
- ತಾತ್ಪರ್ಯಕಾರ್ಯ – ಉದ್ದಿಷ್ಟ ಕಲಸ
- ತಾತ್ಪರ್ಯಾರ್ಥ – ಆಶಯ
- ತಾದಾತ್ಮ್ಯ – ಅದರಲ್ಲಿ ಲೀನವಾಗಿರುವುದು
- ತಾನ – ದಾರ
- ತಾನಕ – ಶಸ್ತ್ರವಿದ್ಯೆಯ ಒಂದು ಪ್ರಭೇದ
- ತಾಪಣೆ – (ಸ್ಥಾಪನೆ) ನೆಲೆಗೊಳಿಸು
- ತಾಪಸ – ತಪಸ್ವಿ
- ತಾಪಸಕುಮಾರ – ಮುನಿಕುಮಾರ
- ತಾಪಸನಿಕಾಯ – ಮುನಿಗಳ ಗುಂಪು
- ತಾಪಸರೂಪ – ಮುನಿವೇಷ
- ತಾಪಸಾಚರಣ – ತಪಸ್ಸು
- ತಾಪಸಾಶ್ರಮ – ತಪೋವನ
- ತಾಪಿ – ತಪತೀನದಿ
- ತಾಪಿಂಛ(ಜ) – ಹೊಂಗೆಯ ಮರ
- ತಾಪಿಚ್ಛ – ತಾಪಿಂಛ(ಜ)
- ತಾಪು – ಭೇದಿಸು; ಸೀಳು
- ತಾಮರಸ – ತಾವರೆ
- ತಾಮರಸನೇತ್ರ – ಕಮಲನೇತ್ರ
- ತಾಮರಸಮುಖಿ – ತಾವರೆಯಂತೆ ಮುಖವುಳ್ಳವನು
- ತಾಮರೆ – ತಾವರೆ
- ತಾಮರೆಗೆ¾õÉ – ತಾವರೆಯ ಕೊಳ
- ತಾಮರೆಗೊಳ – ತಾಮರೆಗೆ¾õÉ
- ತಾಮ್ರ – ಒಂದು ಲಿಲೋಹ; ಕೆಂಬಣ್ಣ
- ತಾಮ್ರಚೂಡ(ಳ) – ಹುಂಜ
- ತಾಮ್ರತುಂಡ – ಕೆಂಪು ಕೊಕ್ಕು; ಗಿಣಿ
- ತಾಮ್ರಪರ್ಣಿ – ಒಂದು ನದಿ
- ತಾಮ್ರಮಯ – ತಾಮ್ರದಿಂದ ತುಂಬಿದ
- ತಾಮ್ರಲೋಚನ – ಕೆಂಗಣ್ಣು(ಳ್ಳವನು)
- ತಾಯ್ – ತಾಯಿ
- ತಾಯ್ಗರು – ಮೂಲಸ್ಥಾನ
- ತಾಯ್ಗಾಡು – ಮೂಲಸ್ಥಾನವಾದ ಕಾಡು
- ತಾಯ್ಗಿರಿ – ತಾಯಿ ಬೆಟ್ಟ; ಬೆಟ್ಟಗಳ ತಾಯಿ
- ತಾಯ್ದೊಟ್ಟಿಲ್ – ಆಶ್ರಯ
- ತಾಯ್ಮಣಲ್ – ತಳದ ಮರಳು
- ತಾಯ್ವಾಲ್ – ತಾಯ ಹಾಲು
- ತಾಯ್ವಿಡಿ – ಮರಿ ಹಾಕಿದ ಆನೆ
- ತಾಯ್ವೆದೆಗೂಡು – ನೆಲವು ಹದಗೊಳ್ಳು
- ತಾರ – ಬೆಳ್ಳಿ; ಜೋರು ಧ್ವನಿ
- ತಾರಕ – ದಾಟಿಸುವವನು; ಏರುದನಿ; ನಕ್ಷತ್ರ
- ತಾರಕಗಣ – ನಕ್ಷತ್ರಪುಂಜ
- ತಾರಕಾರಿ – ತಾರಕ+ಅರಿ, ತಾರಕನ ಶತ್ರು, ಷಣ್ಮುಖ;
- ನಕ್ಷತ್ರಗಳ ಶತ್ರು, ಸೂರ್ಯ
- ತಾರಕಿತ – ನಕ್ಷತ್ರಗಳಿಂದ ಕೂಡಿದ
- ತಾರಕೋತ್ಕರ – ನಕ್ಷತ್ರಪುಂಜ
- ತಾರಗಿರೀಂದ್ರ – ಬೆಳ್ಳಿಬೆಟ್ಟ
- ತಾರಗೆ – ನಕ್ಷತ್ರ
- ತಾರನಗೇಂದ್ರ – ತಾರಗಿರೀಂದ್ರ
- ತಾರಗೆವಟ್ಟೆ – ನಕ್ಷತ್ರಮಾರ್ಗ, ಆಕಾಶ
- ತಾರಯಿಸು – ಜೋರಾಗಿ ಧ್ವನಿಮಾಡು
- ತಾರಲ್ – ಪೊದರು
- ತಾರಶೈಲ – ಬೆಳ್ಳಿಬೆಟ್ಟ
- ತಾರಹಾರ – ಮುತ್ತಿನ ಹಾರ
- ತಾರಾಗ – ತಾರ+ಅಗ, ತಾರಶೈಲ
- ತಾರಾಗಣ – ನಕ್ಷತ್ರಸಮೂಹ
- ತಾರಾಗಣವಿಮಾನ – (ಜೈನ) ಒಂದು ಬಗೆಯ ಜ್ಯೋತಿರ್ವಿಮಾನ
- ತಾರಾಚಲ(ಳ) – ತಾರಾಗ
- ತಾರಾದ್ರಿ – ತಾರಾಗ
- ತಾರಾಧಿಪ(ತಿ) – ಚಂದ್ರ
- ತಾರಾಧೀಶ – ಚಂದ್ರ
- ತಾರಾಧೀಶ್ವರ – ತಾರಾಧೀಶ
- ತಾರಾಧ್ವ – ನಕ್ಷತ್ರಮಾರ್ಗ, ಆಕಾಶ
- ತಾರಾನಿಕರ – ನಕ್ಷತ್ರಪುಂಜ
- ತಾರಾಪತಿ – ತಾರಾಧೀಶ
- ತಾರಾಪಥ – ತಾರಾಧ್ವ
- ತಾರಾಪರಿಕರ – ತಾರಾನಿಕರ
- ತಾರಾಭ್ರಮಂಡಲ – ಮೋಡವಿಲ್ಲದ ಆಕಾಶ
- ತಾರಾಮಂಡಲ – ತಾರಾನಿಕರ
- ತಾರಾವಳಿ – ತಾರಾನಿಕರ
- ತಾರಾವೀಧಿ – ತಾರಾಧ್ವ
- ತಾರಾಹಾರ – ಮುತ್ತಿನ ಹಾರ
- ತಾರುಣ್ಯ – ಹರಯ
- ತಾರುಣ್ಯವತಿ – ಚಿಕ್ಕ ಹರಯದವಳು
- ತಾರೆ – ನಕ್ಷತ್ರ; ಕಣ್ಣು; ಮುತ್ತು
- ತಾರೆಲೆ – ಜನಸಾಮಾನ್ಯರ ಒಂದು ಹಾಡು
- ತಾರೇಶ – ಚಂದ್ರ
- ತಾರ್ಕಿಕ – ತರ್ಕಶಾಸ್ತ್ರಜ್ಞ
- ತಾಕ್ಷ್ರ್ಯ – ಹದ್ದು; ಗರುಡ
- ತಾಕ್ಷ್ರ್ಯಸ್ಥ – ಗರುಡನ ಮೇಲೆ ಕುಳಿತವನು, ವಿಷ್ಣು
- ತಾಕ್ಷ್ರ್ಯೇಷು – ಗರುಡಾಸ್ತ್ರ
- ತಾಣ್ – ತೃಣಕ್ಕೆ ಸಂಬಂಧಿಸಿದ
- ತಾರ್ಮುಟ್ಟು – ಸೋಂಕು; ಅಪ್ಪಳಿಸು
- ತಾಲನಂದನ – ತಾಳೆಮರಗಳ ಗುಂಪು
- ತಾಲವನ – ತಾಲನಂದನ
- ತಾಲ(ಳ)ವೃಂತ – ಬೀಸಣಿಗೆ
- ತಾಲು(ಳು)ಗೆ – ಗಂಟಲು
- ತಾವಡಿ – ಅಲೆತ; ಆಯಾಸ
- ತಾವಡಿಗೊಳ್ – ಆಯಾಸಗೊಳ್ಳು
- ತಾವರೆದಂಟು – ತಾವರೆಯ ಕಾಂಡ
- ತಾವರೆನೂಲ್ – ತಾವರೆಯ ನಾರು
- ತಾವರೆಯರಲ್ – ತಾವರೆಯ ಹೂ
- ತಾವರೆವಂಡು – ತಾವರೆ+ಬಂಡು, ತಾವರೆಯ ಮಕರಂದ
- ತಾವರೆವಗೆ(ಯ) – ತಾವರೆಯ ಶತ್ರು, ಚಂದ್ರ
- ತಾವರೆವಳ್ಳಿ – ತಾವರೆಯ ಬಳ್ಳಿ
- ತಾವರೆವೂ – ತಾವರೆಯ ಹೂ
- ತಾಳ್ – ಧರಿಸು; ಹೊಂದು; ಸಹಿಸು; ಗಂಟಲು
- ತಾಳಂಗುಟ್ಟು – ತಾಳಹಾಕು
- ತಾಳ – ತಾಳೆಯ ಗರಿ
- ತಾಳಧ್ವಜ – ಭೀಷ್ಮ
- ತಾಳನಿವರ್ತನ(ನೆ) – ತಾಳವನ್ನು ಹಿಡಿಯುವುದು
- ತಾಳಪತಾಕ – ಬಲದೇವ
- ತಾಳಲಕ್ಷ್ಮ – ತಾಳದ ಲಾಂಛನವುಳ್ಳವನು, ಬಲರಾಮ
- ತಾಳವಟ್ಟ – (ತಾಳವೃಂತ) ತಾಳೆ ಗರಿಯ ಬೀಸಣಿಗೆ
- ತಾಳವಟ್ಟದ ಬಿಲ್ಲು – ತಾಳವಟ್ಟ ಎಂಬ ಬಿಲ್ಲು
- ತಾಳಿಗಟ್ಟು – ಮಂಗಳಸೂತ್ರವನ್ನು ಕಟ್ಟು
- ತಾಳಿಸು – ಎಣ್ಣೆಯೊಡನೆ ಹುರಿ
- ತಾಳೀತರು – ತಾಳೆಮರ
- ತಾಳುಂತಟ್ಟುಂ – ಚೆಲ್ಲಾಪಿಲ್ಲಿಯಾಗು
- ತಾಳುಂತಟ್ಟುಂಬೊಯ್ – ಚೆಲ್ಲಾಪಿಲ್ಲಿಯಾಗುವಂತೆ ಹೊಡೆ
- ತಾಳುಗೆ – (ತಾಲುಕಾ) ದವಡೆ
- ತಾಳುತಳ – ಅಂಗುಳ ತಳಭಾಗ
- ತಾಳೆದನಿ – ತಾಳೆಗರಿಗಳ ಸರಸರ ಶಬ್ದ
- ತಾಳೋದ್ಘಾಟಿನಿ – ಬೀಗ ತೆಗೆಯುವುದು; ಒಂದು ಕಳ್ಳತನದ ವಿದ್ಯೆ
- ತಾಳೋಲೆ – ತಾಳೆಗರಿಯ ಓಲೆ
- ತಾಳ್ದು – ಧರಿಸು; ಹೊಂದು; ಸಹಿಸು
- ತಿಂಗಳ್ – ಚಂದ್ರ; ವರ್ಷದ ಹನ್ನೆರಡನೇ ಒಂದು
- ಭಾಗ; ಬೆಳುದಿಂಗಳು
- ತಿಂಗಳ್ಗಲ್ – ಚಂದ್ರಕಾಂತಶಿಲೆ
- ತಿಂತಿಣಿ – ಸಮೂಹ, ಗುಂಪು
- ತಿಂತಿಣಿವಡೆ – ಒತ್ತಾತ್ತಾಗಿ ಸೇರು
- ತಿಂತಿಣಿವಣ್ – ಗೊಂಚಲುಗೊಂಚಲಾಗಿ (ಒತ್ತಾಗಿ) ಬಿಟ್ಟ ಹಣ್ಣು
- ತಿಂತಿಣಿಸು – ತಿಂತಿಣಿವಡೆ
- ತಿಂತ್ರಿಣಿ – ಹುಣಸೆ ಮರ
- ತಿಂಬಡ – ತಿನ್ನುವ ಪದಾರ್ಥ
- ತಿಂಬು – ತುಂಬು
- ತಿಗಟ – ಉದ್ದ
- ತಿಗುಡು – ಮರದ ತೊಗಟೆ
- ತಿಗುಣ – ತ್ರಿಗುಣ, ಮೂರು ಪಟ್ಟು
- ತಿಗುಣಂಗೊಳ್ – ಮುರು ಪಟ್ಟಷ್ಟು ಆಗು
- ತಿಗುಣಿಸು – ಮೂರು ಪಟ್ಟಾಗು
- ತಿಗುರಿ – ಚಕ್ರ; ಸುಳಿ
- ತಿಗುರಿದಿರುಪು – ಜೋರಾಗಿ ತಿರುಗಿಸು
- ತಿಗುಳನಾಡು – ತಮಿಳುದೇಶ
- ತಿಗ್ಮಕರ – ಪ್ರಖರ ಕಿರಣಗಳುಳ್ಳವನು, ಸೂರ್ಯ
- ತಿಗ್ಮಪ್ರಭೆ – ಪ್ರಖರ ಕಾಂತಿ
- ತಿಗ್ಮಮರೀಚಿ – ತಿಗ್ಮಕರ
- ತಿಗ್ಮರೋಚಿ – ಸೂರ್ಯ
- ತಿಗ್ಮಾಂಶು – ಸೂರ್ಯ
- ತಿಟ್ಟಮಿಡು – ಚಿತ್ರ ಬರೆಯಲು ತೊಡಗು
- ತಿಟ್ಟು – ಬೈಗುಳ; ದಿನ್ನೆ
- ತಿಣಿ – ಒಟ್ಟಿಗೆ ಸೇರು
- ತಿಣುಕು – ಮುಲುಕು; ಹೆಣಗಾಟ; ಹೂಸುಬಿಡು
- ತಿಣ್ಣ – (ತೀಕ್ಷ್ಣ) ಭಾರ
- ತಿಣ್ಣಂ – ತೀಕ್ಷ್ಣವಾಗಿ; ನಿಬಿಡವಾಗಿ
- ತಿಣ್ಣನೆ – ಹೆಚ್ಚಾಗಿ
- ತಿಣ್ಣಮಿಡು – ಬಲವಾಗಿ ಹೊಡೆ
- ತಿಣ್ಣವೆಳಗು – ಪ್ರಖರವಾದ ಬೆಳಕು
- ತಿಣ್ಪು – ಅತಿಶಯತೆ; ದಾಢ್ರ್ಯ
- ತಿತಿಕ್ಷಾನ್ವಿತ – ಸಹನೆಯ ಗುಣದವನು
- ತಿತ್ತಿರಿಗಾಳೆ – ಒಂದು ಬಗೆಯ ಕಹಳೆ
- ತಿದಿ – ಚರ್ಮ; ಬೆಂಕಿಗೆ ಗಾಳಿಯೂದುವ ಸಾಧನ
- ತಿದಿಯುಗಿ – ಚ ರ್ಮವನ್ನು ಸುಲಿ
- ತಿದಿಯುಸಿರ್ – ತಿದಿಯಿಂದ ಹೊಮ್ಮುವ ಗಾಳಿ
- ತಿನ್ – ಸೇವಿಸು
- ತಿನಿಸು – ತಿನ್ನುವ ಪದಾರ್ಥ
- ತಿಪ್ಪೆ – ಕಸದ ರಾಶಿ
- ತಿಬ್ಬ – (ತೀವ್ರ) ಚುರುಕಾದ
- ತಿಬ್ಬಂ – ಶೀಘ್ರವಾಗಿ
- ತಿಬ್ಬಂಮಾಡು – ತೀವ್ರಗೊಳಿಸು
- ತಿಮಿರ್ – ತಿಕ್ಕು, ಲೇಪಿಸು; ಪರಿಮಳದ್ರವ್ಯ
- ತಿಮಿರ – ಕತ್ತಲೆ; ಕಣ್ಣಿನ ಒಂದು ರೋಗ, ಪೊರೆ
- ತಿಮಿರು – ಲೇಪನ
- ತಿರ – (ಸ್ಥಿರ) ಶಾಶ್ವತ
- ತಿರಸ್ಕರಣ – ತಾತ್ಸಾರ
- ತಿರಸ್ಕರಿಸು – ಕಡೆಗಣಿಸು
- ತಿರಿ – ಅಲೆದಾಡು, ಚಲಿಸು; ಭಿಕ್ಷೆ ಬೇಡು
- ತಿರಿದಾಡು – ಅಲೆದಾಡು
- ತಿರಿದುಣ್ – ಭಿಕ್ಷೆ ಎತ್ತಿ ತಿನ್ನು
- ತಿರಿಕ – ತಿರ್ಯಕ್ ಗತಿ (ಪಶುಜನ್ಮ)
- ತಿರಿ(ರು)ಕ – ಅಲೆದಾಡುವವನು; ಭಿಕ್ಷುಕ
- ತಿರಿಕವ್ರಾತ – ತಿರ್ಯಕ್ಜಾತಿಯ ಜೀವಿಗಳ ಗುಂಪು
- ತಿರಿಕೋಪಸರ್ಗ – (ಜೈನ) ತಿರ್ಯಕ್ಜೀವಿಗಳಿಂದ
- ತಪಸ್ವಿಗಳಿಗೆ ಆಗುವ ತೊಂದರೆ
- ತಿರಿಗುತ್ತ – ಭಿಕ್ಷೆ ಬೇಡುವ ಕಷ್ಟ
- ತಿರಿತರ್ – ಅಲೆದಡು
- ತಿರಿಪು – ತಿರುಗಿಸು; ಅಲೆದಾಡಿಸು
- ತಿರೀಟ – ಕಿರೀಟ
- ತಿರು – ಬಿಲ್ಲಿನ ಹಗ್ಗ; (ಶ್ರೀ) ಶ್ರೇಷ್ಠ
- ತಿರುಗೊಲೆ – ಬಿಲ್ಲಿನ ಕೊಪ್ಪು
- ತಿರುವಾಯ್ – ಹೆದೆಯ ಮಧ್ಯ
- ತಿರುವು – ಬಿಲ್ಲಿನ ಹೆದೆ
- ತಿರುವುವೊಯ್ – ಹೆದೆಯಿಮದ ಠೇಂಕಾರಮಾಡು
- ತಿರುವೊಯ್ಲು – ಬಾಣ ಬಿಡುವಾಗ ಬಿಲ್ಗಾರನ ಕೈಗೆ ಬೀಳುವ ಹೆದೆಯ ಪೆಟ್ಟು
- ತಿರುಳ್ – ಸಾರ
- ತಿರುಳೆಲೆ – ಎಲೆಯ ಸುಳಿ
- ತಿರೋಧಾನ – ಮರೆಯಾಗುವುದು, ಅಂತರ್ಧಾನ
- ತಿರೋಹಿತ – ಮರೆಯಾದ(ವನು)
- ತಿರೋಹಿತವೇಷ – ವೇಷ ಮರೆಸಿಕೊಂಡವನು
- ತಿರ್ದು – ಸರಿಪಡಿಸು; ತಿದ್ದುವಿಕೆ
- ತಿರ್ದುವರ್ – ಸಮಂಜಸವಾಗು
- ತಿರ್ದುಹ – ಸರಿಗೊಳಿಸುವಿಕೆ
- ತಿರ್ಯಗ್ಗತಿ – (ಜೈನ) ಚತುರ್ಗತಿಗಳಲ್ಲಿ ಒಂದು;
- ಪಶುಪ್ರಾಣಿಗಳ ಗುಂಪು
- ತಿರ್ಯಗ್ಜಾತಿ – ಪಶುಪ್ರಾಣಿಗಳ ಜಾತಿ
- ತಿರ್ಯಗ್ಜೀವ – ಪಶುಪ್ರಾಣಿಗಳು
- ತಿರ್ಯಗ್ಡೀನ – ಅಡ್ಡಡ್ಡಲಾಗಿ ನಡೆದಾಡುವುದು
- ತಿರ್ಯಗ್ಲೋಕ – ಪಶುಪ್ರಾಣಿಗಳಿರುವ ಭೂಲೋಕ
- ತಿರ್ಯಗ್ವರ್ತಿತ – ಅಡ್ಡಡ್ಡಲಾಗಿ ಓಡಾಡುವ
- ತಿರ್ಯಗ್ವಳಿತ – ಅಡ್ಡಲಾಗಿ ಬಾಗಿಸಿದ
- ತಿಲಕ – ಸುಂದರವಾದ ಹೂಬಿಡುವ ಒಂದು ಮರ;
- ಹಣೆಯ ಮೇಲಿನ ಬೊಟ್ಟು
- ತಿಲಕಿತ – ತಿಲಕವಿರುವ; ತಿಲಕಪ್ರಾಯನಾದ
- ತಿಲಕಿಸು – ತಿಲಕವನ್ನಿಡು
- ತಿಲಕೋಪಶೋಭಿ – ತಿಲಕದ ಮರಗಳಿಂದ (ಹಣೆಯ ತಿಲಕದಿಂದ) ಶೋಭಿಸುವ;
- ತಿಲಜ – ಎಳ್ಳಿನಿಂದ ಉಂಟಾದುದು, ಎಣ್ಣೆ
- ತಿಲ್ವಕ – ಬಿಳಿ ಸಾಂಬ್ರಾಣಿಯ ಮರ
- ತಿವಳಿ – ಸ್ತ್ರೀಯ ಹೊಕ್ಕುಳಿನ ಮೇಲಿರುವ ಮೂರು ಮಡಿಕೆಗಳು; ಒಂದು ಬಗೆಯ ವಾದ್ಯ
- ತಿವಿ – ಗುದ್ದು, ಮುಷ್ಟಿಪ್ರಹಾರ ಮಾಡು
- ತಿವುಡುಗಳೆ – ತವುಡು ತೆಗೆದ
- ತಿವುರಾಂತಕ – ತ್ರಿಪುರಾಂತಕ
- ತಿವುರಿ – ಡೇರೆ
- ತಿವುರು – ಲೇಪ
- ತಿಸರ – (ತ್ರಿಸರ) ಮೂರೆಳೆಯ ಸರ
- ತಿಸರಿ – ಒಂದು ತಂತಿವಾದ್ಯ
- ತಿಸುಳ – ತ್ರಿಶೂಲ
- ತಿಳಿ – ಬಗ್ಗಡ ಹೋಗಿ ಶುದ್ಧವಾಗು; ನೈರ್ಮಲ್ಯ
- ತಿಳಿಗೊಳ – ನಿರ್ಮಲವಾದ ಕೊಳ
- ತಿಳಿನೀರ್ – ಶುದ್ಧವಾದ ನೀರು
- ತಿಳಿಪು – ಶುದ್ಧವಾಗು; ಕೋಪವನ್ನು ಉಪಶಮನಗೊಳಿಸು
- ತಿಳಿವಳಿಕೆ – ಅರಿವು
- ತಿಳಿವು – ತಿಳಿವಳಿಕೆ
- ತೀಂಟು – ತೀಟು, ತಾಕು
- ತೀಂಟೆ – ತೀಟೆ, ನವೆ
- ತೀಂಟೆತ್ತು – ನವೆಯಾಗು
- ತೀಕ್ಷ್ಣ – ಹರಿತವಾದ; ಗಾಢವಾದ
- ತೀಕ್ಷ್ಣಾಪಾಂಗ – ಹರಿತವಾದ ಕುಡಿನೋಟ
- ತೀಟ – ತಿಡುವಿಕೆ; ಸ್ಪರ್ಶ
- ತೀಡು – ಉಜ್ಜು; ನವೆಯಾಗು
- ತೀನ್ – ನವೆ, ಕಡಿತ; ತಿನಿಸು, ತಿಂಡಿತೀನ್ಮಸೆ –
- ನವೆ ಜಾಸ್ತಿಯಾಗುತೀಯಕಾರ್ತಿ – ತೀಟೆಯಿರುವವಳು, ಬೆದೆ ಬಂದವಳು
- ತೀರ್ – ಮುಗಿತಾಯಗೊಳ್ಳು; ಕೈಗೂಡು
- ತೀರ – ದಡ
- ತೀರಂಬಿಡಿ – ದಡವನ್ನು ಅನುಸರಿಸು
- ತೀರಸ್ಥ – ದಡದಲ್ಲಿರುವ
- ತೀರಮೆ – ಸಾಕಾಗುವುದು
- ತೀರ್ಚು – ಮುಗಿಸು, ಕೊನೆಗೊಳಿಸು
- ತೀರ್ಥ(ಂ)ಕರ – (ಜೈನ) ಅರ್ಹಂತ
- ತೀರ್ಥಕರತ್ವ – (ಜೈನ) ತೀರ್ಥಂಕರನ ಪದವಿ
- ತೀರ್ಥಜಲ – ಪವಿತ್ರಕ್ಷೇತ್ರದ ನೀರು
- ತೀರ್ಥನಾಥ – ತೀರ್ಥ(ಂ)ಕರ
- ತೀರ್ಥಪ್ರವರ್ತಕ – ತೀರ್ಥ(ಂ)ಕರ
- ತೀರ್ಥಯಾನ – ತೀರ್ಥಯಾತ್ರೆ
- ತೀರ್ಥಾಂಬು – ತೀರ್ಥಜಲ
- ತೀರ್ಥಾಖ್ಯಾನ – ಧರ್ಮಜಿಜ್ಞಾಸೆ
- ತೀರ್ಥಾಧಿನಾಥ – ತೀರ್ಥ(ಂ)ಕರ
- ತೀರ್ಥೇಶ – ತೀರ್ಥ(ಂ)ಕರ
- ತೀರ್ಥೇಶ್ವರ – ತೀರ್ಥ(ಂ)ಕರ
- ತೀರ್ಥೋದಕ – ತೀರ್ಥಜಲ
- ತೀರ್ಥೋಪವಾಸ – ಪುಣ್ಯಕ್ಷೇತ್ರದಲ್ಲಿ ಮಾಡುವ
- ಉಪವಾಸತೀವಿಸು – ತುಂಬಿಸುತೀವು – ತುಂಬು
- ತೀವ್ರ – ಹರಿತವಾದ; ಗಾಢವಾದ
- ತೀವ್ರಕಿರಣ – ಸೂರ್ಯ
- ತೀವ್ರಾಂಶು – ಸೂರ್ಯ
- ತೀ¾õï – ಕಬಳಿಸು
- ತುಂಗ – ಎತ್ತರವಾದ, ದೊಡ್ಡದಾದ
- ತುಂಗಘೋಣ – ಉದ್ದ ಮೂಗು(ಳ್ಳವನು)
- ತುಂಗತೆ – ಹಿರಿಮೆ
- ತುಂಗತೆವೆ¾ು – ಹಿರಿಮೆಯನ್ನು ಹೊಂದು
- ತುಂಗವಂಶ – ಶ್ರೇಷ್ಠಕುಲ; ಎತ್ತರವಾದ ಬಿದಿರು
- ತುಂಗಾಕಾರ – ದೊಡ್ಡ ಆಕಾರ
- ತುಂಡ – ಮುಖ; ಕೊಕ್ಕು
- ತುಂತು – ತುರುಕು
- ತುಂತು¾õï – ತುಂತುರು ಹನಿ
- ತುಂದಿಲ – ತುಂಬಿದ
- ತುಂಬ – ಹೆಚ್ಚು, ಬಹಳ
- ತುಂಬಕಿ – ಕೆನ್ನೆಯೂದಿಸಿಕೊಂಡು ಹಾಡುವ ದೋಷ
- ತುಂಬಿ – ದುಂಬಿ, ಭ್ರಮರ; ತಂಬೂರಿಯ ಬುರುಡೆ
- ತುಂಬಿಗುರುಳ್ – ದುಂಬಿಯಂತೆ ಕಪ್ಪಾದ ಕೂದಲು
- ತುಂಬಿವಿಂಡು – ದುಂಬುಗಳ ಗುಂಪು
- ತುಂಬು – ಪೂರ್ತಿಮಾಡು; ಹಣ್ಣುಹೂಗಳ ನಾಳ; ಕೆರೆಯ ತೂಬು
- ತುಂಬುರಕೊ(ಗೊ)ಳ್ಳಿ – ತೂಬರೆ ಮರದ ಕೊಳ್ಳಿ
- ತುಟಿತ – (ಜೈನ) ಬಹು ದೊಡ್ಡ ಕಾಲಪ್ರಮಾಣ
- ತುಟ್ಟಿಸು – ಬಲಗುಂದು
- ತುಡು – ತೊಡು, ಹಿಡಿದು
- ತುಡು(ಂ)ಕು – ಹಿಡಿದುಕೋ; ತುಂಬು; ವಾದ್ಯ
- ಬಾಜನೆಯ ಒಂದು ಬಗೆ
- ತುಡುಗಣಿ – ತೊಂಡು
- ತುಡುಗು – ಕಳ್ಳತನ
- ತುಡುಗೆ – ಆಭರಣ
- ತುಡುಜೊಡರ್ – ಉರಿಯುವ ಸೊಡರು
- ತುಣವ – ಜಂಖಾ ಎಂಬ ವಾದ್ಯ
- ತುತಿ – (ಸ್ತುತಿ) ಹೊಗಳಿಕೆ
- ತುತ್ತು – ತಿನ್ನು; ಒಂದು ಸಲ ಬಾಯಲ್ಲಿ ತುಂಬುವಷ್ಟು
- ತುದಿ – ಮೇಲ್ಭಾಗ
- ತುದಿಗೊಂಬು – ಕೊಂಬೆಯ ತುದಿ
- ತುದಿಗೋಡು – ತುದಿಗೊಂಬು
- ತುದಿನಾಲಗೆ – ನಾಲಗೆ ತುದಿ
- ತುಪ್ಪ – ಘೃತ
- ತುಬ್ಬು – ಕಳ್ಳನನ್ನು ಪತ್ತೆಮಾಡು; ಸಿಕ್ಕಿಬಿಡು; ಸೂಚಿಸು
- ತುಮುಲ(ಳ)ಕೇಳಿ – ಗದ್ದಲದಿಂದ ಕೂಡಿದ ಆಟ
- ತುಯ್ಯಲ್ – ಪಾಯಸ
- ತುರಂಗ(ಮ) – ಕುದುರೆ
- ತುರಂಗತ್ವ – ಕುದುರೆಯ ರೂಪ
- ತುರಂಗದಳ – ಚತುರಂಗದಳದಲ್ಲಿ ಒಂದು; ಕುದುರೆ ಸೈನ್ಯ
- ತುರಂಗವದನ/ನೆ – ಕಿನ್ನರ ಗಂಡು/ಹೆಣ್ಣು
- ತುರಂಗವಾಹಳಿ – ಕುದುರೆಯ ಸಾಲು
- ತುರಂಗಸಂಗರ – ತುರಂಗದಳದ ಯುದ್ಧ
- ತುರಂಗಸಾಧನ – ತುರಂಗದಳ
- ತುರಂಗಿ – ಕುದುರೆ ಸವಾರ
- ತುರಗ – ಕುದುರೆ
- ತುರಗಚಯ – ಕುದುರೆಗಳ ಸಮೂಹ
- ತುರಗದ¿ – ತುರಂಗದಳ
- ತುರಗರತ್ನ – (ಜೈನ) ಜೀವರತ್ನಗಳಲ್ಲಿ ಒಂದು
- ತುರಗಾರೂಢ – ಕುದುರೆ ಸವಾರ
- ತುರಗಾರೋಹ(ಣ) – ಕುದುರೆ ಸವಾರಿ
- ತುರಗಾಶ್ವ – ವೇಗವಾಗಿ ಓಡುವ ಕುದುರೆ
- ತುರಗಾಸ್ಯ – ಕಿನ್ನರ; ಅಶ್ವಿನಿ ನಕ್ಷತ್ರ
- ತುರಾಷಾಟ್ಖಡ್ಗ – ವಜ್ರಾಯುಧ
- ತುರಿತ – (ತ್ವರಿತ) ಬೇಗ
- ತುರಿಪ – ತುರಿತ
- ತುರಿಪಂಗೆಯ್ – ಆತುರಗೊಳ್ಳು
- ತುರೀಯ – ನಾಲ್ಕನೆಯ; ಪರಬ್ರಹ್ಮಸ್ಥಿತಿಯ
- ತುರೀಯಾವಸ್ಥೆ – ನಾಲ್ಕನೆಯ ಅವಸ್ಥೆ
- ತುರುಪಟ್ಟಿ – ಗೊಲ್ಲರ ಹಟ್ಟಿ
- ತುರುಷ್ಕ – ಒಂದು ದೇಶ; ಸಾಂಬ್ರಾಣಿ ಮರ
- ತುಲನ – ತೂಕಮಾಡುವುದು
- ತುಲಾಕೋಟಿ – ತಕ್ಕಡಿಯ ತುದಿಗಡ್ಡಿ
- ತುಲಾದಂಡ – ತಕ್ಕಡಿಯ ದಂಡ
- ತುಷಾರ – ಮಂಜು
- ತುಷಾರಕರ -ಚಂದ್ರ
- ತುಷಾರಪುಂಜ – ಮಂಜಿನ ರಾಶಿ
- ತುಷಾರವರ್ಷ – ಮಂಜಿನ ಮಳೆ
- ತುಷಾರೋಪಳ – ಕರ್ಪೂರದ ಬಿಲ್ಲೆ
- ತುಷ್ಟ – ತೃಪ್ತಿಗೊಂಡ
- ತುಷ್ಟಿ – ತೃಪ್ತಿ
- ತುಷ್ಟಿದಾನ – ಪಸಾಯದಾನ
- ತುಹಿನ – ಹಿಮ
- ತುಹಿನಕಣ – ಹಿಮಬಿಂದು
- ತುಹಿನಕರ – ಚಂದ್ರ
- ತುಹಿನಕ್ಷೋಣೀಭ್ರ – ಹಿಮವತ್ಪರ್ವತ
- ತುಹಿನಕ್ಷ್ಮಾಧರ – ತುಹಿನಕ್ಷೋಣೀಭ್ರ
- ತುಹಿನಗಿರಿ – ತುಹಿನಕ್ಷೋಣೀಭ್ರ
- ತುಹಿನಗು – ತುಹಿನಕರ
- ತುಹಿನಪವನ – ತಂಪು ಗಾಳಿ
- ತುಹಿನಭೂಮೀಧ್ರ – ತುಹಿನಕ್ಷೋಣೀಭ್ರ
- ತುಹಿನಮಹೀಧರ – ತುಹಿನಕ್ಷೋಣೀಭ್ರ
- ತುಹಿನಾಂಶುಬಿಂಬ – ಚಂದ್ರಬಿಂಬ
- ತುಹಿನಾಂಶುಮಂಡಲ – ತುಹಿನಾಂಶುಬಿಂಬ
- ತುಹಿನಾಚಲ – ತುಹಿನಕ್ಷೋಣೀಭ್ರ
- ತುಹಿನಾದ್ರಿ – ತುಹಿನಕ್ಷೋಣೀಭ್ರ
- ತುಹಿನೋದ್ಗತಿ – ಶೈತ್ಯದ ಹೆಚ್ಚಳ
- ತುಳಾಡಿ – ಮಲ್ಲಯುದ್ಧದ ಒಂದು ವರಸೆ
- ತುಳುಂಕಾಡು – ಹೊರಹೊಮ್ಮು
- ತುಳುಂಕು – ಹೊರಚೆಲ್ಲು; ಚಿಮುಕಿಸು
- ತುಳುಂಕುಗುಟ್ಟು – ಹೆಚ್ಚಾಗಿ ತುಳುಕಾಡು
- ತುಳುಕುನೀರಾಡು – ನೀರು ಚಿಮುಕಿಸಿ ಆಟವಾಡು
- ತುಳುನಾಡು – ಒಂದು ದೇಶ
- ತು¾Â – ನವೆ
- ತು¾Âಪ – ವೇಗ
- ತೂಂಕಂಗೊಳ್ – ಮೂರ್ಛೆ ಹೋಗು
- ತೂಂಕಡಂಗಾಣ್ – ತೂಕಡಿಸು
- ತೂಂಕಡಿಕೆಗಣ್ – ನಿದ್ದೆಗಣ್ಣು
- ತೂಂಕಡಿಸು – ತೂಕಡಿಸು, ನಿದ್ದೆಯಿಂದ ಜೂಗರಿಸು
- ತೂಂಕಡು – ಜೋಂಪು, ನಿದ್ದೆ
- ತೂಂಕಡು – ನಿದ್ದೆ
- ತೂಂಕು – ತೂಗು; ಜೋಲುಬೀಳು
- ತೂಂತಿಡು – ತೂತು ಮಾಡು; ತುಂಬು
- ತೂಂತು – ತುರುಕು; ತೂತು
- ತೂಂತುವೋಗು – ತೂತುಬೀಳು
- ತೂಂಬು – ನೀರು ಹೋಗಲು ಇರುವ ತೂಬು
- ತೂಂಬುರ್ಚು – ತೂಬು ತೆಗೆ
- ತೂಕ – ಭಾರ
- ತೂಕರಿಸು – ದೃಷ್ಟಿ ತೆಗೆಯಲು ಊದುವುದು
- ತೂಕವಣೆ – ನೃತ್ಯದ ಒಂದು ಗತಿ
- ತೂಗಾಡು – ತೊನೆದಾಡು
- ತೂಗಿ ತೊನೆ – ತೂಗಾಡು
- ತೂಗಿಸು – ತೂಕ ಮಾಡಿಸು
- ತೂಗು – ತೂಕಮಾಡು
- ತುಗುಂಗೊಂಬು – ತೂಗಾಡುವ ಕೊಂಬೆ
- ತೂಗುಂಜೊಡರ್ -ತೂಗುಹಾಕಿರುವ ಸೊಡರು
- ತೂಗುಂದಲೆ – ತೊನೆದಾಡುವ ತಲೆತೂಗುಂದೆನೆ – ತೊನೆದಾಡುವ ತೆನೆ
- ತೂಗುಂದೊಟ್ಟಿಲು – ತೂಗಾಡುವ ತೊಟ್ಟಿಲು
- ತೂಗುಮಂಚ – ಉಯ್ಯಾಲೆ ಮಂಚ
- ತೂಣ – (ಸ್ಥೂಣ), ಕಂಬ; ಯಮ
- ತೂಣೀರ – ಬತ್ತಳಿಕೆ
- ತೂನ್ – ಜಗ್ಗು, ಹಿಡಿದು ಎಳೆ
- ತೂರ್ಪನಿ – ತುಂತುರು ಹನಿ
- ತೂರ್ಯ – ವಾದ್ಯ; ನಾಲ್ಕನೆಯ
- ತೂರ್ಯಕ್ಷ್ಮಾಜ – (ಜೈನ) ದಿವ್ಯವಾದ್ಯಗಳನ್ನು ನೀಡುವ ಕಲ್ಪವೃಕ್ಷ
- ತೂರ್ಯತ್ರಿಕ – ನೃತ್ಯ, ಗೀತ, ವಾದ್ಯ – ಇವುಗಳ ಮೇಳತೂರ್ಯತ್ರಿತಯ – ತೂರ್ಯತ್ರಿಕ
- ತೂರ್ಯನಾದ – ಕಹಳೆಯ ಧ್ವನಿ
- ತೂರ್ಯನಿನದ – ತೂರ್ಯನಾದ
- ತೂರ್ಯರವ – ತೂರ್ಯನಾದ
- ತೂರ್ಯಸ್ವನ(ರ) – ತೂರ್ಯನಾದ
- ತೂರ್ಯಾಂಗ – (ಜೈನ) ತೂರ್ಯಕ್ಷ್ಮಾಜ
- ತೂರ್ಯರಾವ – ತೂರ್ಯನಾದ
- ತೂಲ(ಳ) – ಹತ್ತಿ; ತುಪ್ಪಳ
- ತೂಲಿಕೆ – ಕುಂಚ; ತುಪ್ಪುಳ
- ತೂಳ್ – ಹಿಮ್ಮೆಟ್ಟು, ಚೆದುರಿ ಹೋಗು
- ತೂಳ – (ಸ್ಥೂಲ) ದಪ್ಪ
- ತೂಳಿಕೆ – ಬಣ್ಣ ಹಾಕುವ ಕುಂಚ
- ತೂಳೆ – ತೂಲ, ಹತ್ತಿ
- ತೃಣ – ಹುಲ್ಲು
- ತೃಣಕಲ್ಪ – ಹುಲ್ಲಿಗೆ ಸಮನಾದ
- ತೃಣಕುಟಿ – ಹುಲ್ಲಿನ ಗುಡಿಸಲು, ಪರ್ಣಶಾಲೆ
- ತೃಣಗ್ರಾಹಿ – ನೀಲ ರತ್ನ
- ತೃಣಪುರುಷ – ಬೆದರುಗೊಂಬೆ
- ತೃಣಶರಣ – ಹುಲ್ಲಿನ ಗುಡಿಸಲು
- ತೃಣಶಿಖರ – ಹುಲ್ಲಿನ ಮೊನೆ
- ತೃಣಾಗ್ರ – ತೃಣಶಿಖರ
- ತೃಣೀಕೃತ – ಹುಲ್ಲಿನಂತೆ ತುಚ್ಛವಾಗಿ ಪರಿಗಣಿತವಾದ
- ತೃತೀಯಕಲ್ಯಾಣ – (ಜೈನ) ಪಂಚಕಲ್ಯಾಣಗಳಲ್ಲಿ ಮೂರನೆಯದಾದ ಪರಿನಿಷ್ಕ್ರಮಣ ಕಲ್ಯಾಣ
- ತೃತೀಯದ್ವೀಪ – (ಜೈನ) ಎಂಟುದ್ವಫಿಗಳಲ್ಲಿ ಮೂರನೆಯದಾದ ಪುಷ್ಕರದ್ವೀಪ
- ತೃತೀಯಪೀಠ – (ಜೈನ) ಸಮವಸರಣದ ಮೂರು ಪೀಠಗಳಲ್ಲಿ ಎಲ್ಲಕ್ಕಿಂತ ಎತ್ತರದ್ದು
- ತೃತೀಯೆ – ಮೂರನೆಯವಳು; ತದಿಗೆ
- ತೃಪ್ತ – ತೃಪ್ತಿಹೊಂದಿದ
- ತೃಷಾಪರ – ಬಾಯಾರಿಕೆಗೊಂಡ
- ತೃಷಾರ್ತ – ಬಾಯಾರಿಕೆಯಿಂದ ಗಾಸಿಹೊಂಡ
- ತೃಷಾವಿಷಾದ(ನ) – ಬಾಯಾರಿಕೆಯಿಂದಾದ ಖಿನ್ನತೆ
- ತೃಷ್ಣಾಕರೆ – ಬಾಯಾರಿಕೆಯುಂಟುಮಾಡುವವಳು
- ತೃಷ್ಣಾತುರ – ಬಾಯಾರಿಕೆಯಿಂದ ಬಳಲುವ
- ತೃಷ್ಣಾಭಿಭೂತ – ಬಾಯಾರಿಕೆಯಿಂದ ಪೀಡಿತನಾದ(ವನು)
- ತೃಷ್ಣೆ – ತೃಷೆ
- ತೆಂಕಣ್(ಣ) – ದಕ್ಷಿಣ
- ತೆಂಕನಾಡು – ದಕ್ಷಿಣ ದೇಶ
- ತೆಂಕಮುಖ – ದಕ್ಷಿಣಾಭಿಮುಖ
- ತೆಂಕಮೊಗ – ತೆಂಕಮುಖ
- ತೆಂಗಾಳಿ – ತೆಂಕಣದ ಗಾಳಿ
- ತೆಂಗು – ನಾರಿಕೇಳ
- ತೆಂಟು – ಕೇರು
- ತೆಂಬೆರಲ್ – ತೆಂಕಣ ಗಾಳಿ
- ತೆಂಬೆಲರ್ – ತೆಂಗಾಳಿ
- ತೆಕ್ಕನೆವೋಗು – ಅಚ್ಚರಿಗೊಳ್ಳು
- ತೆಕ್ಕು – ನವೆಗೆ ನೆಕ್ಕು
- ತೆಗೆ – ಹೊರಗೆ ತಾ
- ತೆಗೆಯಾರ್ಳ – ದಾಳಿಮಾಡುವ ಶೂರ
- ತೆಗೆಯಿಸು – ಹೊರಬರುವಂತೆ ಮಾಡು;
- ತೆಗೆ+ಇಸು, ಬಾಣವನ್ನು ವೇಗವಾಗಿ ಬಿಡು
- ತೆನೆ – ಧಾನ್ಯದ ತೆಂಡೆ, ಕಣಿಶ
- ತೆನೆವೋಗು – ತೆನೆ ಬಿಡು
- ತೆಪ್ಪ(ಸ) – ಹರಿಗೋಲು
- ತೆಪ್ಪರ್ತ – ಮೂರ್ಛೆಯಿಂದ ಎದ್ದವನು
- ತೆರೆಗೊನೆ – ಅಲೆಯ ಮೇಲುತುದಿ
- ತೆರೆಗೊಳ್ – ಅಲೆಗಳಿಂದ ಕೂಡು
- ತೆರೆದೊಂಗಲ್ – ತೆರೆದು¾ುಗಲ್
- ತೆರೆಪೊಡೆ – ಮಡಿಲು, ಉಡಿ
- ತೆರೆಮಸಗು – ಅಲೆಗಳುಂಟಾಗು
- ತೆರೆಮುಗಿಲ್ – ಅಲೆಅಲೆಯಾದ ಮೋಡ
- ತೆರೆಯುಲಿಪು – ಅಲೆಗಳ ಧ್ವನಿ
- ತೆರೆವಳಿಗೆ – ಅವಕುಂಠನ
- ತೆರೆವಿಡಿ – ಅಲೆಗಳನ್ನು ಅನುಸರಿಸು
- ತೆರೆವೇಂಟೆ – ಬಲೆಯನ್ನು ಹಾಕಿ ಆಡುವ ಬೇಟೆ
- ತೆರೆವೊಯ್ಲು – ತೆರೆಗಳ ಅಪ್ಪಳಿಸುವಿಕೆ
- ತೆರೆಸುತ್ತು – ತೆರೆಯಲ್ಲಿ ಸುತ್ತು; ತೆರೆಯನ್ನು ಸುತ್ತು
- ತೆರ್ಕೆಗಡಲ್ – ಎರಡು ಸಮುದ್ರಗಳ ಸೇರುವಿಕೆ
- ತೆಲ್ಲಂಟ(ತೆಲ್ಲಟಿ) – ಕಾಣಿಕೆ, ಬಳುವಳಿ
- ತೆಲ್ಲಂಟಿ(ಗೆ)ಗೊಡು – ಉಡುಗೊರೆ ನೀಡು
- ತೆಲ್ಲಿಗ – ತೈಲಿಗ, ಗಾಣಿಗ
- ತೆಲ್ಲಿಗಿತಿ – ಗಾಣಿಗಿತ್ತಿ
- ತೆವಳೆ(ಗಾಣ್) – ಉದಾಸೀನ(ಮಾಡು)
- ತೆಳ್ಗದಂಪು – ಕೋಮಲ ಕೆನ್ನೆ
- ತೆಳ್ಗಲ್ಲ – ತೆಳ್ಗದಂಪು
- ತೆಳ್ದೆರೆ – ಸಣ್ಣ ಅಲೆ
- ತೆಳ್ನಡು – ಸಣ್ಣ ಸೊಂಟ
- ತೆಳ್ಪು(ಳುಂಪು) – ತಿಳಿಯಾಗಿರುವುದು; ಪರಿಶುದ್ಧತೆ
- ತೆಳ್ಪುಗೆಡು – ಶುದ್ಧತೆ ನಾಶವಾಗು
- ತೆಳ್ಪುವೆ¾ು – ಪರಿಶುದ್ಧವಾಗು
- ತೆಳ್ವಣ್ಣ – ತಿಳಿಯಾದ ಬಣ್ಣ
- ತೆಳ್ವದ – ಕಾಮದ್ರವ
- ತೆಳ್ಪರಿಜು – ತೆಳುವಾದ ಬಟ್ಟೆ; ಕೃಶವಾದ ಶರೀರ
- ತೆಳ್ವಸಿ¾õï – ತೆಳುವಾದ ಹೊಟ್ಟೆ
- ತೆಳ್ವಳಿಕು – ಶುಭ್ರವಾದ ಹರಳು
- ತೆಳ್ವೆಳಗು – ತಿಳಿಯಾದ ಬೆಳಕು
- ತೆಳ್ವೊಡೆ – ತೆಳ್ವಸಿ¾õï
- ತೆಳ್ವೊರೆ – ತೆಳುವಾದ ಪೊರೆ
- ತೆಳ್ಸರಿ – ಸಣ್ಣ ಸೋನೆ
- ತೆಳ್ಳಗೆ – ತೆಳುವಾಗಿ; ತಿಳಿಯಾಗಿ
- ತೆಳ್ಳಿತು – ತೆಳುವಾಗಿರುವಿಕೆ
- ತೆಳ್ಳೆಗಂಪು – ನರುಗಂಪು
- ತೇ – ತೇಯಿ, ತಿಕ್ಕು
- ತೇಂಕಾಡಿಸು – ತೇಲಿಸು
- ತೇಂಕಾಡು – ತೇಲಾಡು
- ತೇಂಕಿಸು – ತೇಲುವಂತೆ ಮಾಡು
- ತೇಂಕು – ತೇಲಾಡು
- ತೇಂಕುದಾಣ – ನಾಡಿಮಿಡಿತದ ಸ್ಥಾನ
- ತೇಂಗುಹ – ಹಕ್ಕಿ ಹಿಚಿಕೆಹಾಕುವುದು
- ತೇಜ – ಕಾಂತಿ; ಪರಾಕ್ರಮ
- ತೇಜಂಗಿಡಿಸು – ಕಾಂತಿಗುಂದಿಸು; ಸಾಮಥ್ರ್ಯ ಕುಗ್ಗಿಸು
- ತೇಜಂಗೆಡು – ಕಾಂತಿಗುಂದು; ಸಾಮಥ್ರ್ಯ ಕುಗ್ಗು
- ತೇಜಃಕ್ಷಯ – ಕಾಂತಿಹೀನತೆ
- ತೇಜಃಪಿಂಡ – ಬೆಂಕಿಯ ಉಂಡೆ
- ತೇಜಃಪ್ರಸರ – ಕಾಂತಿಯ ಹರಡುವಿಕೆ
- ತೇಜಶ್ಚಕ್ರ – ತೇಜಸ್ಸಿನ ಚಕ್ರ
- ತೇಜಸ್ವಿ – ಕಾಂತಿಯುಕ್ತನಾದವನು
- ತೇಜಸ್ಸು – ಕಾಂತಿ
- ತೇಜೋತಿಶಯ – ಅತಿಶಯ ತೇಜಸ್ಸು
- ತೇಜೋನಿಧಿ – ಕಾಂತಿಯ ನಿಧಿ
- ತೇಜೋನಿಳಯ – ಕಾಂತಿಯ ನೆಲೆ
- ತೇಜೋಭಿರಾಮ – ತೇಜಸ್ಸಿನಿಂದ ಶೋಭಿಸುವವನು
- ತೇಜೋವೃತ್ತಿ – ಕಾಂತಿಯುಂಟಾಗುವಿಕೆ
- ತೇನತೇನಂ – ಮೇಲಿಂದ ಮೇಲೆ
- ತೇಪೆ – ಸೂಳೆ
- ತೇರ್ – ಬಂಡಿ; ರಥ
- ತೇರಂಜಿಸು – ಸಾಣೆಯಿಂದ ಹೊಳಪು ಕೊಡು
- ತೇರಂಟೆ – ಸಹಸ್ರಪಾದಿ, ಝರಿಹುಳು
- ತೇರಜೆ – ಒಂದು ಬಗೆಯ ಪ್ರಾಣಿ
- ತೇರಣ – ಗೆದ್ದಲು
- ತೇರಯ್ – ದಾಳಿ ಮಾಡು
- ತೇರಯಿಸು – ದಾಳಿಮಾಡು
- ತೇರಯ್ಯೆ – ಆಸೆ
- ತೇರಸಿ – ತ್ರಯೋದಶಿ
- ತೇರೆಸಗು – ರಥವನ್ನು ಚೋದಿಸು
- ತೇರೊಡ್ಡು – ರಥಗಳ ಸಮೂಹ
- ತೇರೈಸು – ತವಕಪಡು
- ತೊಂಗಲ್ – ಕುಚ್ಚು, ಗೊಂಚಲು
- ತೊಂಗಲ್ಗಂಟೆ – ಗೊಂಚಲು ಗಂಟೆ
- ತೊಂಡಲ್ – (ಇರುವೆ) ಸಾಲು
- ತೊಂಡಲ – ತಲೆಯ ಆಭರಣ
- ತೊಂಡು – ಸ್ವೇಚ್ಛಾವೃತ್ತಿ, ತುಡುಗುತನ
- ತೊಂಡುಗೆಡೆ – ಗಿಳಿಯು ಗಳಹು; ರಾಶಿಯಾಗು
- ತೊಂಡುಮರುಳ್ – ಉದ್ಧಟ ಪಿಶಾಚಿ
- ತೊಂಡುವೆಣ್ಬುರುಳಿ – ಗಳಹುವ ಹೆಣ್ಣು ಗಿಳಿ
- ತೊಂತುಳಿ – ಸಿಕ್ಕುಸಿಕ್ಕು
- ತೊಂಬೆ – ಕುಚ್ಚು, ಗೊಂಚಲು
- ತೊಗರ್ – ಚೊಗರು, ಒಗರು
- ತೊಟ್ಟಗೆ – ತಕ್ಷಣವೇ
- ತೊಟ್ಟನೆ – ತಕ್ಷಣ
- ತೊಟ್ಟಿಲ್ – ಮಗು ಮಲಗಲು ಬಿದಿರಿನಿಂದ
- ಮಾಡಿದ ತೂಗುಹಾಸಿಗೆ
- ತೊಟ್ಟಿಲಿಗ – ತೊಟ್ಟಿಲಲ್ಲಿ ಮಲಗುವ ಹಸುಗೂಸು
- ತೊಟ್ಟು – ಆರಂಭಿಸಿ
- ತೊಡಕಿಕ್ಕು – ಕಷ್ಟಕ್ಕೆ ಈಡುಮಾಡು
- ತೊಡಂಕು – ಸಿಕ್ಕಿಸು; ಗೋಜಲು; ತೊಡಗು
- ತೊಡಂಕುವಲೆ – ಒಂದು ಬಗೆಯ ಬಲೆ
- ತೊಡಂದುಡಿಸು – ಆಭರಣವನ್ನು ತೊಡಿಸು
- ತೊಡಂಬೆ – ಹಣ್ಣುಹೂಗಳ ತೊಟ್ಟು; ಗೊಂಚಲು
- ತೊಡಂಬೆಪ¾Â – ತೊಟ್ಟು ಕಳಚು
- ತೊಡಂಬೆವಿಡು – ತೊಟ್ಟು ಕಳಚಿಕೊ
- ತೊಡಗಿಸು – ಶುರುಮಾಡು
- ತೊಡಗಿಸು – ಆರಂಭಿಸು
- ತೊಡರ್ – ಸಿಲುಕಿಕೊ; ತೊಡಕು;ಸುತ್ತಿಕೊ
- ತೊಡರಿಕ್ಕು – ತೊಡರುಗಳನ್ನು ಒಡ್ಡು
- ತೊಡರ್ಚು – ಸಿಲುಕಿಸು
- ತೊಡರ್ಪು – ಸಿಕ್ಕು; ಬಂಧನ
- ತೊಡವು – ಒಡವೆ, ಆಭರಣ
- ತೊಡವೆಳಗು – ಆಭರದ ಕಾಂತಿ
- ತೊಡಿಸು – ಧರಿಯಿಸು
- ತೊಡು – ಧರಿಸು; ಹೂಡು
- ತೊಡುಗೆ – ಆಭರಣ
- ತೊಡೆ – ಸೊಂಟದಿಂದ ಮಂಡಿಯವರೆಗಿನ ಭಾಗ;
- ಲೇಪಿಸು; ಒರಸಿಹಾಕು
- ತೊಡೆಯಿಸು – ಲೇಪನಮಾಡು
- ತೊಡೆಸಕ್ಕಿ(ಕ್ಕೆ) – ನೇರ ಸಾಕ್ಷಿ
- ತೊಣೆ – ಸಮನಾದುದು; ಬತ್ತಳಿಕೆ
- ತೊಣ್ಮೆ – ಪ್ರಾಚೀನ, ಮೂಲ(?)
- ತೊದಲ್(ಳ್) – ಮುದ್ದುಮಾತಾಡು; ತಡವರಿಸು; ಸುಳ್ಳು
- ತೊದಳಿಸು – ಮಾತಾಡುವಾಗ ತೊದಲು
- ತೊದಳ್ನುಡಿ – ತೊದಲು ಮಾತಾಡು
- ತೊದಳ್ವಾತು – ತೊದಲು ಮಾತು
- ತೊನಸೆ – ಚಿಗಟದಂತಹ ಕೀಟ
- ತೊನೆ – ಅಲ್ಲಾಡು, ತೂಗಾಡು
- ತೊನೆಪ – ತೂಗಾಡುವಿಕೆ
- ತೊನ್ನ – ತೊನ್ನುರೋಗಿ
- ತೊನ್ನುಗೊಳ್ – ತೊನ್ನು ಉಂಟಾಗು
- ತೊಯ್ – ಒದ್ದೆಯಾಗು
- ತೊರೆ – ಎದೆಹಾಲು ಸುರಿ
- ತೊರೆಯೆರೆಯ – ನದಿಗಳ ಒಡೆಯ, ಸಮುದ್ರ
- ತೊಲಗಿಸು – ದೂರ ಮಾಡು
- ತೊಲಗು – ದೂರವಾಗು; ಬಿಟ್ಟುಬಿಡು
- ತೊಲೆ – (ತುಲಾ) ತಕ್ಕಡಿ
- ತೊವರ್ – ಒಗರು ರುಚಿ
- ತೊವರೇ¾ು – ಒಗರು ರುಚಿಯುಂಟಾಗು
- ತೊವರ್ಗಂಪು – ಒಗರಿನಿಂದ ಕೂಡಿದ ವಾಸನೆ
- ತೊವಲ್ – ಚಿಗುರು; ಚಿಗುರೆಲೆ; ತೊಗಲು, ಚರ್ಮ
- ತೊವಲನಿಕ್ಕು – ಚಿಗುರನ್ನು ಹಾಕು
- ತೊವಲಿಕ್ಕು- ಚಿಗುರು ಬಿಡು; ಚಿಗುರಿನಿಂದ ಮುಚ್ಚು
- ತೊವಲ್ಗೊಳ್ – ಶರಣಾಗತಿಯ ಸಂಕೇತವಾಗಿ ಚಿಗುರನ್ನು ಹಿಡಿದುಕೊ
- ತೊವಲ್ವಿಡಿ – ತೊವಲ್ಗೊಳ್
- ತೊವಲ್ವೆರಸು – ಚಿಗುರಿನಿಂದ ಕೂಡಿದ
- ತೊಳಗು – ಪ್ರಕಾಶಿಸು; ಕಾಂತಿ
- ತೊಳೆ – ಪ್ರಕ್ಷಾಲನಗೈ, ಶುದ್ಧಮಾಡು; ಹಣ್ಣಿನ ಭಾಗ (ಫಲತೂಲ)
- ತೋ – ನೆನೆಯಿಸು
- ತೋಕ – ಮಗು
- ತೋಂಟ – ತೋಟ
- ತೋಂಟವಾಳ – ತೊಟಗಾರ
- ತೋಂಟ(ಟಿಗ)ವೆಸ – ತೋಟದ ಕೆಲಸ
- ತೋಟಿ – ಜಗಳ; ಮುಷ್ಟಿಯುದ್ಧ
- ತೋಡು – ಅಗೆ; ಅಗೆದ ಜಾಗ; ಹೊರಟುಹೋಗು; ಜೋಡಿ; ಬಾಣ ಹೂಡು
- ತೋಡುಂ ಬೀಡುಂ – ತೊಡುವುದೂ ಬಿಡುವುದೂ
- ತೋಪು – ಮರಗಳ ಗುಂಪು
- ತೋಮರ – ಒಂದು ಆಯುಧ, ಭರ್ಜಿ
- ತೋಯ – ನೀರು
- ತೋಯಜನಾಭ – ಕಮಲನಾಭ, ಬ್ರಹ್ಮ
- ತೋಯಧಿಷಂಡ – ಕೊಳ; ಕಮಲಗಳ ಸಮೂಹ
- ತೋಯಧಿ – ಸಮುದ್ರ
- ತೋಯನಿಧಾನ – ತೋಯಧಿ
- ತೋಯಭೃತ್ತು – ಮೋಡ
- ತೋಯರುಹನಾಭ – ತೋಯಜನಾಭ
- ತೋಯಾಕರ – ನೀರಿನ ಆವಾಸ, ಕೊಳ
- ತೋಯಾಧೀಶ – ವರುಣ
- ತೋಯಾಶಯ – ಜಲಾಶಯ
- ತೋಯೋದ್ದೇಶ – ತೋಯಾಶಯ
- ತೋರ – ದಪ್ಪನಾದ
- ತೋರಗಂಭ – ದಪ್ಪನಾದ ಕಂಬ; ಆಧಾರಸ್ತಂಭ
- ತೋರಗಾಯ್ – ದಪ್ಪ ಕಾಯಿ
- ತೋರಗಿಡಿ – ದಪ್ಪ ಕಿಡಿ
- ತೋರಗುರುಳ್ – ದಪ್ಪ ಮುಡಿ
- ತೋರಗೆಂಡ – ದಪ್ಪ ಕೆಂಡ
- ತೋರಗೊನೆ – ದಪ್ಪ ಗೊನೆ
- ತೋರಣಂಗಟ್ಟಿಸು – ತೋರಣಕಟ್ಟುವಂತೆ ಮಾಡು
- ತೋರಣಂಗಟ್ಟು – ತೋರಣವನ್ನು ಕಟ್ಟು
- ತೋರಣಗಂಬ – ತೋರಣ ಕಟ್ಟುವ ಕಂಬ
- ತೋರಣಗ್ರಥನ – ತೋರಣದ ರಚನೆ
- ತೋರಣದರ್ಪಣ – ತೋರಣದಲ್ಲಿನ ಕನ್ನಡಿ
- ತೋರಣದ್ವಾರ – ತೋರಣ ಕಟ್ಟುವ ಬಾಗಿಲು
- ತೋರತಕ್ಕು – ಅಧಿಕ ಪರಿಣತಿ
- ತೊರದು¾ುಂಬು – ದಪ್ಪ ಮುಡಿ
- ತೋರದೆರೆ – ದೊಡ್ಡ ಅಲೆ
- ತೋರಬಾಷ್ಪ – ಅಧಿಕ ಕಣ್ಣೀರು
- ತೋರಮಲ್ಲಿಗೆ – ದಪ್ಪ ಮಲ್ಲಿಗೆ
- ತೋರಮುಡಿ – ತೊರದು¾ುಂಬು
- ತೋರಮುತ್ತು – ದಪ್ಪ ಮುತ್ತು
- ತೋರಮುಯ್ಯು – ಅಗಲವಾದ ಭುಜ
- ತೋರಕುಚ – ದೊಡ್ಡ ಮೊಲೆ
- ತೋರವಜ್ಜೆ – ದೊಡ್ಡ ಹೆಜ್ಜೆ
- ತೋರವಣ್ – ದೊಡ್ಡ ಹಣ್ಣು
- ತೋರವಣ್ಗೊನೆ – ದಪ್ಪ ಹಣ್ಣುಗಳಿರುವ ಗೊನೆ
- ತೋರವೆಟ್ಟು – ದೊಡ್ಡ ಬೆಟ್ಟ
- ತೋರಹತ್ತ – ದೊಡ್ಡ ಸೊಂಡಿಲು
- ತೋರಹಾರ – ದೊಡ್ಡ ಹಾರ
- ತೋರ¾Âಕೆ – ಹೆಚ್ಚಿನ ಖ್ಯಾತಿ
- ತೋರಿತು – ದೊಡ್ಡದು
- ತೋರ್ಕೆ – ತೋರಿಕೆ; ಆಕಾರ
- ತೋರ್ಕೆಗಿಡು – ಕಾಣದಾಗು
- ತೋರ್ಕೆಗುಡು – ಒಪ್ಪಿಸಿಕೊಡು; ಕಾಣಿಕೆ ನೀಡು
- ತೋರ್ಕೆವಡೆ – ಕಾಣಿಸಿಕೊ
- ತೋರ್ಕೆವರ್ – ತೋರ್ಕೆವಡೆ
- ತೋರ್ಪು – ಕಾಣ್ಕೆ, ತೋರ್ಕೆ
- ತೋರ್ಪುಗೆಡು – ತೋರ್ಕೆಗಿಡು
- ತೋಲ್ – ತೊವಲು, ಚರ್ಮ
- ತೋಲ್ಗಟ್ಟು – ಮುಂಗೈಗೆ ಚರ್ಮ ಕಟ್ಟಿಕೊ
- ತೋಲ್ಪಂಜರ – ತೊಗಲಿನ ಹಂದರ
- ತೋಲ್ವಾವಲ್ – ತೊಗಲು ಬಾವಲಿ
- ತೋಲ್ವುಲ್ಲೆ – ತೊಗಲಿನಿಂದ ಮಾಡಿದ ಜಿಂಕೆ
- ತೋಳ್ – ಬಾಹು
- ತೋಳವಟ್ಟ – ಸೊಂಡಿಲ ಹೊಡೆತ
- ತೋಳೆ – ತೊಗಲ ಬಾವಲಿ
- ತೋಳೆವಿಂಡು – ಬಾವಲಿಗಳ ಸಮೂಹ
- ತೋಳಗಟ್ಟು – ತೋಳಬಂದಿ ಎಂಬ ಆಭರಣ
- ತೋಳ್ದು¾ುಗಲ್ – ತೋಳುಗಳ ಸಮೂಹ
- ತೋಳ್ಮೊದಲ್ – ತೋಲಿನ ಆರಂಭ, ಕಂಕುಳು
- ತೋಳ್ವಲ – ಬಾಹುಬಲ
- ತೋಳ್ವಲಯ – ತೋಳಿಗೆ ಹಾಕಿಕೊಳ್ಳುವ ಬಳೆ
- ತೋಳ್ವಲೆ – ತೋಳ ಸೆರೆ; ಹಿಡಿತ
- ತೋಳ್ವಲ್ಮೆ – ತೋಳ ಬಲ್ಮೆ
- ತೋಳ್ವಳಿ – ತೋಳ್ವಲಯ
- ತೋಳ್ವಾಸ – ಹಿಡಿತ; ಅಪ್ಪುಗೆ
- ತೋಳ್ವೆಸುಗೆ – ತೋಳ ಬೆಸುಗೆ; ಅಪ್ಪುಗ
- ತೌಗೆ – ಮುಕ್ತಾಯ, ಅಂತ್ಯ
- ತೌದಲೆ – ಕೊನೆಗಾಲ
- ತ್ಯಾಗ – ಬಿಡುವುದು
- ತ್ಯಾಜ್ಯ – ಬಿಡಲು ತಕ್ಕನಾದ
- ತ್ರಪು – ತವರ ಎಂಬ ಲೋಹ
- ತ್ರಯಸ್ತ್ರಿಂಶತ್ – ಮೂವತ್ತಮೂರು
- ತ್ರಯೀಮಯ – ಮೂರು ವೇದಗಳ
- ಸ್ವರೂಪನಾದವನು, ಸೂರ್ಯ
- ತ್ರಯೋದಶ – ಹದಿಮೂರನೆಯ
- ತ್ರಸ – ಚಲಿಸುವ; (ಜೈನ) ಈ ಹೆಸರಿನ ಕರ್ಮದ ಉದಯದಿಂದ ಎರಡರಿಂದ ಐದು ಇಂದ್ರಿಯಗಳನ್ನು ಪಡೆದ ಜೀವ
- ತ್ರಸಕಾಯ – (ಜೈನ) ಚಲಿಸುವ ದೇಹವುಳ್ಳ ಪ್ರಾಣಿ
- ತ್ರಸಜೀವ – ತ್ರಸಕಾಯ
- ತ್ರಸನಾಮ – ಹದಿಮೂರು ಪ್ರಕೃತಿಗಳಲ್ಲಿ ಒಂದು; ತ್ರಸಜೀವವನ್ನು ಪಡೆಯುವಂತೆ ಮಾಡುವ ಕರ್ಮ
- ತ್ರಸನಾಳ – (ಜೈನ) ತ್ರಸಜೀವಿಗಳ ವಾಸಸ್ಥಳ
- ತ್ರಸ್ತ – ಭಯಗೊಂಡ; (ಜೈನ) ಒಂದು ನರಕ
- ತ್ರಸ್ತರಿಯಾಡು – ಮೂದಲಿಸು
- ತ್ರಸ್ತಾಭಿಭೂತ – ಹೆದರಿದವನು
- ತ್ರಾಣ – ಶಕ್ತಿ; ರಕ್ಷಣೆ
- ತ್ರಿಕರಣಪರಿಣತ – ಕರಣತ್ರಯಗಳ ಬಗ್ಗೆ ಸಂಪೂರ್ಣ ತಿಳಿವಳಿಕೆಯಿರುವವನು
- ತ್ರಿಕರಣಶುದ್ಧಿ – ಕಾಯ, ವಾಕ್ಕು, ಮನಸ್ಸುಗಳ ಪರಿಶುದ್ಧತೆ
- ತ್ರಿಕಾಲ – ಭುತ, ವರ್ತಮಾನ, ಭವಿಷ್ಯತ್ ಎಂಬ ಕಾಲಗಳು
- ತ್ರಿಕಾಲಗೋಚರ – ಯೋಗಶಕ್ತಿಯಿಂದ ತ್ರಿಕಾಲಗಳ ಆಗುಹೋಗುಗಳನ್ನು ತಿಳಿಯುವ ಶಕ್ತಿ
- ತ್ರಿಕಾಲದರ್ಶಿ – ತ್ರಿಕಾಲಗೋಚರ ಶಕ್ತಿಯನ್ನು ಪಡೆದವನು
- ತ್ರಿಕಾಲಪ್ರಜ್ಞಪ್ತಿ – ಲೋಕಾಕಾರಾದಿಗಳನ್ನು ನಿರೂಪಿಸುವ ಶಾಸ್ತ್ರಗ್ರಂಥ
- ತ್ರಿಖಂಡ – (ಜೈನ) ಗಂಗಾ ಮತ್ತು ಸಿಂಧೂನದಿಗಳಿಂದ ಪ್ರತ್ಯೇಕಗೊಳಿಸಲ್ಪಟ್ಟ ಮೂರು ಭಾಗಗಳು
- ತ್ರಿಖಂಡಾಧಿಪ – (ಜೈನ) ತ್ರಿಖಂಡಗಳ ಒಡೆಯ
- ತ್ರಿಗಾರವ – (ಜೈನ) ಋದ್ಧಿ, ರಸ, ಸಾತ ಎಂಬ ಮೂರು ಬಗೆಯ ಗಾರವ(ಅಹಂಕಾರ)ಗಳು
- ತ್ರಿಗುಣ – ಸತ್ವ, ತಮಸ್ಸು, ರಜಸ್ಸುಗಳೆಂಬ ಮೂರು ಗುಣಗಳು; ಮೂರು ಪಟ್ಟು
- ತ್ರಿಗುಣಿಸು – ಮೂರು ಪಟ್ಟಷ್ಟು ಆಗು
- ತ್ರಿಗುಪ್ತಿ – (ಜೈನ) ಕಾಯ, ವಾಕ್ಕು, ಮನಸ್ಸುಗಳನ್ನು ನಿಯಂತ್ರಿಸಿಕೊಂಡು ಧರ್ಮಧ್ಯಾನದಲ್ಲಿ ನಿರತನಾಗುವುದು
- ತ್ರಿಗುಪ್ತಿಗುಪ್ತ – ತ್ರಿಗುಪ್ತಿಯನ್ನು ಸಾಧಿಸಿದವನು
- ತ್ರಿಜಗ – ಸ್ವರ್ಗ, ಮತ್ರ್ಯ, ಪಾತಾಳಗಳು
- ತ್ರಜಗಚ್ಚೂಡಾಮಣಿ – ತ್ರಿಜಗತ್+ಚೂಡಾಮಣಿ, ಮೂರು ಲೋಕಗಳಿಗೂ ತಲೆಯ ಆಭರಣದಂತಿರುವವನು
- ತ್ರಜಗತ್ಪೂಜ್ಯ – ಮೂರು ಲೋಕದ ಜನರಿಂದಲೂ ಗೌರವಾಸ್ಪದನಾದವನು
- ತ್ರಿಜಗಧೀಶ್ವರ – ಮೂರು ಲೋಕಗಳ ಒಡೆಯ
- ತ್ರಿಜಗದ್ಗುರು – ಮೂರು ಲೋಕದ ಜನರಿಗೂ ಗುರುವೆನಿಸಿದವನು
- ತ್ರಿಜಗದ್ವಂದಿತ – ತ್ರಿಜಗತ್+ವಂದಿತ, ಮೂರು ಲೋಕದ ಜನರಿಂದಲೂ ವಂದಿತನಾದವನು
- ತ್ರಿಜಗನ್ನಾಥ – ಮೂರು ಲೋಕಗಳ ಒಡೆಯ
- ತ್ರಿಜ್ಞಾನಧರ – (ಜೈನ) ಶ್ರುತಿ, ಮತಿ, ಅವಧಿ ಎಂಬ ಮೂರು ಬಗೆಯ ಜ್ಞಾನಗಳನ್ನು ಪಡೆದವನು
- ತ್ರಿಣಯನ – ಮೂರು ಕಣ್ಣುಗಳುಳ್ಳವನು, ಶಿವ
- ತ್ರಿತತ್ವಾತ್ಮಕ – ತ್ರಿಗುಣಗಳ ಸ್ವರೂಪನಾದವನು, ಶಿವ
- ತ್ರಿತಯ – ಮೂರರ ಗುಂಪು
- ತ್ರಿತಾಪ – ಅಧಿದೈವಿಕ, ಅಧ್ಯಾತ್ಮಿಕ, ಅಧಿಭೌತಿಕ ಎಂಬ ತಾಪತ್ರಯಗಳು
- ತ್ರಿದಂಡ – ಸನ್ಯಾಸಿಯ ಕೋಲು; (ಜೈನ) ಕಾಯ, ಮನೋ, ವಾಕ್ ಎಂಬ ಮೂರು ದಂಡಗಳು
- ತ್ರಿದಂಡಿ – ಕಾಯ, ಮನೋ, ವಾಕ್ಗಳ ಮೇಲೆ ನಿಯಂತ್ರಣ ಸಾಧಿಸಿದ ಯತಿ
- ತ್ರಿದಧ – ದೇವತೆ
- ತ್ರಿದಶ – ಮೂರು ಹತ್ತುಗಳು, ಮೂವತ್ತು; ಸದಾ ಬಾಲ್ಯ, ಕೌಮಾರ್ಯ, ಯೌವನಗಳೆಂಬ ಮೂರು ಅವಸ್ಥೆಗಳನ್ನು ಮಾತ್ರ ಉಳ್ಳವನು, ದೇವತೆ
- ತ್ರಿದಶಕುಜ – ಕಲ್ಪವೃಕ್ಷ
- ತ್ರಿದಶಕ್ಷ್ಮಾ – ದೇವಲೋಕ
- ತ್ರಿದಶಗಣ – ದೇವತೆಗಳ ಸಮೂಹ
- ತ್ರಿದಶಗಣಾಧಿನಾಯಕ – ದೇವತೆಗಳ ಅಧಿಪತಿ, ದೇವೇಂದ್ರ
- ತ್ರಿದಶಗಣಾಧಿಪ – ತ್ರಿದಶಗಣಾಧಿನಾಯಕ
- ತ್ರಿದಶತ್ವ – ದೇವತ್ವ
- ತ್ರಿದಶನಗೇಂದ್ರ – ದೇವತೆಗಳ ಬೆಟ್ಟ, ಮೇರು
- ತ್ರಿದಶನದೀಸಲಿಲ – ಗಂಗಾನದಿಯ ನೀರು
- ತ್ರಿದಶನದೀಸುತ – ಗಂಗೆಯ ಮಗ, ಭೀಷ್ಮ
- ತ್ರಿದಶನದೀಸುತ – ಭೀಷ್ಮ
- ತ್ರಿದಶನಿವಾಸ – ದೇವತೆಗಳ ಮನೆ, ದೇವಲೋಕ
- ತ್ರಿದಶಪತಿ – ತ್ರಿದಶಗಣಾಧಿನಾಯಕ
- ತ್ರಿದಶಪದ – ದೇವಪದವಿ
- ತ್ರಿದಶಲೋಕ – ದೇವಲೋಕ
- ತ್ರಿದಶಶರಾಸನ – ದೇವತೆಗಳ ಬಿಲ್ಲು
- ತ್ರಿದಶಸಂಕುಳ – ದೇವತೆಗಳ ಸಮೂಹ
- ತ್ರಿದಶಸ್ತುತ – ದೇವತೆಗಳಿಂದ ಸ್ತುತನಾದವನು
- ತ್ರಿದಶಸ್ತುತ್ಯ – ದೇವತೆಗಳಿಂದ ಸ್ತುತಿಗೊಂಡವನು
- ತ್ರಿದಶಾಂಗನೆ – ದೇವತಾಸ್ತ್ರೀ
- ತ್ರಿದಶಾಚಲ – ತ್ರಿದಶನಗೇಂದ್ರ
- ತ್ರಿದಶಾಧಿನಾಥ – ತ್ರಿದಶಗಣಾಧಿನಾಯಕ
- ತ್ರಿದಶಾಧೀಶ – ತ್ರಿದಶಗಣಾಧಿನಾಯಕ
- ತ್ರಿಜಗಧೀಶ್ವರ – ತ್ರಿದಶಗಣಾಧಿನಾಯಕ
- ತ್ರಿದಶಾನಕ – ದೇವತೆಗಳ ದುಂದುಭಿ
- ತ್ರಿದಶಾನೀಕ – ದೇವತೆಗಳ ಸಮೂಹ
- ತ್ರಿದಶಾರಿ – ದೇವತೆಗಳ ಶತ್ರು
- ತ್ರಿದಶಾವಾಸ – ತ್ರಿದಶನಿವಾಸ
- ತ್ರಿದಶಾಸನ – ದೇವತೆಗಳ ಪೀಠ
- ತ್ರಿದಶೇಂದ್ರ – ದೇವೇಂದ್ರ
- ತ್ರಿದಶೇಭ – ಐರಾವತ
- ತ್ರಿದಿವ – ದೇವಲೋಕ
- ತ್ರಿದಿವಾಂಗನೆ – ದೇವತಾಸ್ತ್ರೀ
- ತ್ರಿದೋಷ ಸಂಭವಾಮಯ – ವಾತ-ಪಿತ್ಥ-ಶ್ಲೇಷ್ಮಗಳ ದೋಷದಿಂದ ಉಂಟಾಗುವ ರೋಗಗಳು
- ತ್ರಿಪತಾಕೆ – ಮೂರು ಬಾವುಟಗಳು; ಹಣೆಯ ಮೇಲಿನ ಮೂರು ಮಡಿಕೆಗಳು
- ತ್ರಿಪಥಗೆ – ಸ್ವರ್ಗ, ಮತ್ರ್ಯ, ಪಾತಾಳಗಳಲ್ಲಿ ಹರಿಯುವವಳು, ಗಂಗೆ
- ತ್ರಿಪಲ್ಯೋಪಮ – (ಜೈನ) ವ್ಯವಹಾರ, ಉದ್ಧಾರ, ಅದ್ಧಾ ಎಂಬ ಮೂರು ಪಲ್ಯಗಳಷ್ಟು ಆವಧಿ
- ತ್ರಿಪುಂಡ್ರ(ಕ) – ಕಣೆಯ ಮೇಲಿನ ಮೂರು ವಿಭೂತಿ ಪಟ್ಟೆಗಳು
- ತ್ರಿಪುರ – ತಾರಕಾಸುರನ ಮಕ್ಕಳಾದ ತಾರಕಾಕ್ಷ, ಕಮಲಾಕ್ಷ, ವಿದ್ಯುನ್ಮಾಲಿ ಎಂಬ ಮಕ್ಕಳಿಗೆ ಕ್ರಮವಾಗಿ ಸೇರಿದ ಒಂದರ ಕೆಳಗೊಂದಿರುವ ಚಿನ್ನ, ಬೆಳ್ಳಿ, ಕಬ್ಬಿಣಗಳಿಂದಾದ ಪಟ್ಟಣಗಳು
- ತ್ರಿಪುರಭಂಜನ – ತ್ರಿಪುರಗಳನ್ನು ನಾಶಮಾಡಿದವನು, ಶಿವ
- ತ್ರಿಪುರಾರಿ – ತ್ರಿಪುರಭಂಜನ
- ತ್ರಿಪ್ರಾಭೃತ – ಭೂಮಿ, ಹಣ, ವಸ್ತ್ರಗಳೆಂಬ ಮೂರು ಉಡುಗೊರೆಗಳು; (ಜೈನ) ಪ್ರಶಸ್ತನೋ ಆಗಮಭಾವ, ಅಪ್ರಶಸ್ತನೋ ಆಗಮಭಾವ, ಗ್ರಾಂಥಿಕ ಎಂಬ ಮೂರು ಪ್ರಾಭೃತ(ಉಡುಗೊರೆ)ಗಳು
- ತ್ರಿಭಂಗಿ – ಶರೀರವನ್ನು ಮೂರು ಕಡೆಗಳಲ್ಲಿ ಬಾಗಿಸಿ ನಿಲ್ಲುವ ನಾಟ್ಯದ ಒಂದು ಭಂಗಿ
- ತ್ರಿಭಂಗಿಭಣಿತೆ – ತ್ರಿಭಂಗದ ರೀತಿ
- ತ್ರಿಭುವನ – ಸ್ವರ್ಗ, ಮತ್ರ್ಯ, ಪಾತಾಳಗಳು
- ತ್ರಿಭುವನಗುರು – ಮೂರೂ ಲೋಕಗಳಿಗೆ ಗುರು
- ತ್ರಿಭುವನಪತಿ – ಮೂರು ಲೋಕಗಳಿಗೂ ಒಡೆಯ
- ತ್ರಿಭುವನಮೋಹನ – ಮೂರೂ ಲೋಕಗಳನ್ನು ಆಕರ್ಷಿಸುವವನು
- ತ್ರಿಭುವನಾಧೀಶ – ತ್ರಿಭುವನಪತಿ
- ತ್ರಿಮಾರ್ಗಗೀತ – (ಜೈನ) ರೂಪಸ್ತವ, ಗುಣಸ್ತವ, ವಸ್ತುಸ್ತವ ಎಂಬ ಮೂರು ಬಗೆಯ ಗೀತಗಳು
- ತ್ರಿಮೂಢತಾನಿರಶನ – (ಜೈನ) ಲೋಕಮೂಢತೆ, ದೇವಮೂಢತೆ, ಪಾಖಂಡಿಮೂಢತೆ ಎಂಬ ಮೂರು ಬಗೆಯ ಮೌಢ್ಯಗಳನ್ನು ತೊರೆಯುವುದು; ಇದು ಸಮ್ಯಗ್ದರ್ಶನದ ಒಂದು ಅಂಗ
- ತ್ರಿಯಾಮಾಂತ್ಯ – ಬೆಳಗಿನ ಜಾವ
- ತ್ರಿಯಾಮೆ – ಮೂರು ಜಾಮಗಳನ್ನುಳ್ಳುದು, ರಾತ್ರಿ
- ತ್ರಿರಾತ್ರ – ಮೂರು ದಿನಗಳ ಅವಧಿ
- ತ್ರಿಲೋಕ – ತ್ರಿಭುವನ
- ತ್ರಿಲೋಕಗುರು – ತ್ರಿಭುವನಗುರು
- ತ್ರಿಲೋಕಚೂಡಾಮಣಿ – ಮೂರು ಲೋಕಗಳಿಗೂ
- ತಲೆಯ ಆಭರಣದಂತಿರುವವನು, ಅರ್ಹಂತ
- ತ್ರಿಲೋಕಜನನಿ – ಮೂರು ಲೋಕಗಳಿಗೂ ತಾಯಿಯಂತಿರುವವಳು, ಅರ್ಹಂತನ ತಾಯಿ
- ತ್ರಿಲೋಕಪ್ರಭು – ತ್ರಿಭುವನಾಧೀಶ
- ತ್ರಿಲೋಕಾಂಬಿಕೆ – ತ್ರಿಲೋಕಜನನಿ
- ತ್ರಿಲೋಕಾಧಿಪತಿ – ತ್ರಿಲೋಕಪ್ರಭು
- ತ್ರಿಲೋಕೇಶ್ವರ – ತ್ರಿಲೋಕಪ್ರಭು
- ತ್ರಿಲೋಕೈಕಚೂಡಾಮಣಿ – ತ್ರಿಲೋಕಚೂಡಾಮಣಿ
- ತ್ರಿವರ್ಗ – ಧರ್ಮ, ಅರ್ಥ, ಕಾಮ
- ತ್ರಿವಳಿ – ಹೊಟ್ಟೆಯ ಮೇಲಿನ ಮೂರು ಮಡಿಕೆ
- ತ್ರಿವಾತ – (ಜೈನ) ಲೋಕವನ್ನು ಸುತ್ತುವರಿದಿರುವ
- ವಾತ, ಘನವಾತ, ತನುವಾತಗಳೆಂಬ
- ಗಾಳಿಯ ಆವರಣಗಳು
- ತ್ರಿವಿಕ್ರಮ – ಮೂರು ಲೋಕಗಳನ್ನೂ ತನ್ನ ಮೂರು
- ಹೆಜ್ಜೆಗಳಿಂದ ಆವರಿಸಿದವನು, ವಿಷ್ಣು
- ತ್ರಿವಿಧಮಾರ್ಗ – ಸಂಗೀತದಲ್ಲಿನ ಶುದ್ಧ, ಸಾಳಗ, ಸಂಕೀರ್ಣವೆಂಬ ಮೂರು ಬಗೆಯಲ್ಲಿ ಹಾಡುವ ರೀತಿ
- ತ್ರಿವಿಧಶಕ್ತಿ – ಪ್ರಭು, ಮಂತ್ರ, ಉತ್ಸಾಹಗಳೆಂಬ ಮೂರು ಶಕ್ತಿಗಳು
- ತ್ರಿವಿಷ್ಟಪ – ದೇವಲೋಕ
- ತ್ರಿಶಂಕು – ಸೂರ್ಯವಂಶದ ದೊರೆ; ಹರಿಶ್ಚಂದ್ರನ ತಂದೆ; ಅನ್ಯಸ್ತ್ರೀ ಅಪಹರಣ, ಸುಳ್ಳು ಹೇಳಿದುದು, ಹಸಿ ಮಾಂಸ ತಿಮದುದು ಎಂಬ ಮೂರು ತಪ್ಪುಗಳನ್ನು ಮಾಡಿ ವಸಿಷ್ಠನ ಶಪಕ್ಕೆ ಗುರಿಯಾದ ಸತ್ಯವ್ರತನಿಗೆ ಆನಂತರ ಬಂದ ಹೆಸರು
- ತ್ರಿಶಕ್ತಿ – ರಾಜನಲ್ಲಿರಬೇಕಾದ ಪ್ರಭುಶಕ್ತಿ, ಉತ್ಸಾಹಶಕ್ತಿ, ಮಂತ್ರಶಕ್ತಿಗಳು
- ತ್ರಿಶಲ್ಯ – (ಜೈನ) ಮಿಥ್ಯಾ, ಮಾಯಾ, ನಿದಾನಗಳೆಂಬ ಮೂರು ಮೋಹಗಳು
- ತ್ರಿಶಾಲ – ಮೂರು ಸ್ತರಗಳಿಂದ ಕೂಡಿದ
- ತ್ರಿಶುದ್ಧಿ – ತ್ರಿಕರಣಶುದ್ಧಿ
- ತ್ರಿಷಷ್ಠಿ – ಅರವತ್ತಮೂರು
- ತ್ರಿಷಷ್ಠಿಶಲಾಕಾಪುರುಷರು – (ಜೈನ) ಇಪ್ಪತ್ತನಾಲ್ಕು ಮಂದಿ ತೀರ್ಥಂಕರರು: ವೃಷಭ, ಅಜಿತ, ಸಂಭವ, ಅಭಿನಂದನ, ಸುಮತಿ, ಪದ್ಮಪ್ರಭ, ಸುಪಾಶ್ರ್ವ, ಚಂದ್ರಪ್ರಭ, ಪುಷ್ಪದಂತ, ಶೀತಲ, ಶ್ರೇಯಾಂಸ, ವಾಸುಪೂಜ್ಯ, ವಿಮಲ, ಅನಂತ, ಧರ್ಮ, ಶಾಂತಿ, ಕುಂಥು, ಅರ, ಮಲ್ಲಿನಾಥ, ಮುನಿಸುವ್ರತ, ನಮಿ, ನೇಮಿ, ಪಾಶ್ರ್ವನಾಥ, ವರ್ಧಮಾನ; ಹನ್ನೆರಡು ಮಂದಿ ಚಕ್ರವರ್ತಿಗಳು: ಭರತ, ಸಗರ,
- ಮಘವಾ, ಸನತ್ಕುಮಾರ, ಶಾಂತಿ, ಕುಂಥು, ಅರ, ಸುಭೌಮ, ಪದ್ಮ, ಹರಿಷೇಣ, ಜಯಸೇನ, ಬ್ರಹ್ಮದತ್ತ; ಒಂಬತ್ತು ಮಂದಿ ಬಲದೇವರು: ವಿಜಯ, ಅಚಲ, ಸುಧರ್ಮ, ಸುಪ್ರಭ, ಸುದರ್ಶನ, ನಂದಿ, ನಂದಿಮಿತ್ರ, ರಾಮ, ಪದ್ಮ; ಒಂಬತ್ತು ಮಂದಿ ವಾಸುದೇವರು: ತ್ರಿಪೃಷ್ಠ, ದ್ವಿಪೃಷ್ಠ, ಸ್ವಯಂಭೂ, ಪುರುಷೋತ್ತಮ, ಪುರುಷಸಿಂಹ, ಪುಂಡರೀಕ, ದತ್ತ, ಲಕ್ಷ್ಮಣ, ಕೃಷ್ಣ; ಒಂಬತ್ತು ಮಂದಿ ಪ್ರತಿವಾಸುದೇವರು: ಅಶ್ವಗ್ರೀವ, ತಾರಕ, ಮೇರುಕ, ಮಧುಕೈಟಭ, ನಿಶುಂಬ, ಬಲಿ, ಪ್ರಹರಣ, ರಾವಣ, ಜರಾಸಂಧ
- ತ್ರಿಸಂಙ್ಞ – ಮಾತು, ಕಣ್ಣಾಡಿಸುವುದು, ಅಂಗಚಲನೆ ಎಂಬ ಮೂರು ಚಲನೆಗಳು
- ತ್ರಿಸಂಧ್ಯಾಸೇವೆ – ಬೆಳಿಗ್ಗೆ, ಮಧ್ಯಾಹ್ನ, ಸಂಜೆಗಳಲ್ಲಿ ಮಾಡುವ ಸೇವೆ
- ತ್ರಿಸಂಧ್ಯೆ – ಬೆಳಿಗ್ಗೆ, ಮಧ್ಯಾಹ್ನ, ಸಂಜೆಗಳು
- ತ್ರಿಸರವೇಣಿ – ಮೂರು ಸರಗಳ ಹೆಣಿಗೆ
- ತ್ರಿಸಾಕ್ಷಿ – ಕಾಯ, ವಾಕ್, ಮನಗಳೆಂಬ ಮೂರು ಸಾಕ್ಷಿಗಳು – (ಜೈನ) ಆತ್ಮ, ಇಂದ್ರ, ಸಿದ್ಧ ಎಂಬ ಸಾಕ್ಷಿಗಳು –
- ತ್ರಿಸಾಕ್ಷಿಕ – (ಜೈನ) ತ್ರಿಸಾಕ್ಷಿಗಳುಳ್ಳವನು
- ತ್ರಿಸೆ – (ತೃಷಾ) ಬಾಯಾರಿಕೆ
- ತ್ರಿಸ್ಥಾನ – ಮಂದ್ರ, ಮಧ್ಯಮ, ತಾರಗಳೆಂಬ ಸಂಗೀತದಲ್ಲಿನ ಮೂರು ಸ್ಥಾಯಿಗಳು
- ತ್ರಿಸ್ಥಾಯಿ – ತ್ರಿಸ್ಥಾನ
- ತ್ರೀಂದ್ರೀಯ – ಸ್ಪರ್ಶ, ರಸನ, ಘ್ರಾಣ ಎಂಬ ಮೂರು ಇಂದ್ರಿಯಗಳನ್ನುಳ್ಳ ಜೀವ, ಕ್ರಿಮಿಕೀಟಗಳುತ್ರೇತಾಗ್ನಿ – ಗಾರ್ಹಪತ್ಯ, ದಕ್ಷಿಣ, ಆಹವನೀಯ ಎಂಬ ಮೂರು ಅಗ್ನಿಗಳು
- ತ್ರೇತೆ – ಮೂರರ ಗುಂಪು, ತ್ರೇತಾಯುಗ
- ತ್ರೈಕಾಲ್ಯಯೋಗಿ – ತ್ರಿಕಾಲಜ್ಞಾನಿಯಾದ ಯೋಗಿ
- ತ್ರೈಗುಣ್ಯ- ಸತ್ವ, ರಜಸ್ಸು, ತಮಸ್ಸುಗಳೆಂಬ ಮೂರು ಗುಣಗಳು
- ತ್ರೈದಶ್ಯ – ತ್ರಿದಶ(ದೇವತೆ)ಸಂಬಂಧಿಯಾದ
- ತ್ರೈಮೂರ್ತಿ – ಬ್ರಹ್ಮ, ವಿಷ್ಣು, ಶಿವ ಎಂಬ ತ್ರಿಮೂರ್ತಿಗಳು
- ತ್ರೈಲೋಕ್ಯ – ತ್ರಿಭುವನ
- ತ್ರೈಲೋಕ್ಯಗುರು – ತ್ರಿಭುವನಗುರು
- ತ್ರೈಲೋ(ಳೋ)ಕ್ಯನಾಥ – ತ್ರಿಲೋಕಾಧಿಪತಿ
- ತ್ರೈಲೋಕ್ಯನೇತ್ರ – ಮೂರು ಲೋಕಗಳಿಗೂ ಕಣ್ಣಿನಂತಿರುವವನು
- ತ್ರೈಲೋಕ್ಯಲೋಚನ – ತ್ರೈಲೋಕ್ಯನೇತ್ರ
- ತ್ರೈಲೋಕ್ಯಸಾರ – ಮುರು ಲೋಕಗಳಲ್ಲಿಯೂ ಅತ್ಯಂತ ಶ್ರೇಷ್ಠವಾದ
- ತ್ರೈಲೋಕ್ಯೇಶ್ವರ – ತ್ರಿಲೋಕಾಧಿಪತಿ
- ತ್ರೈವಿದ್ಯ – ಋಕ್, ಯಜುಸ್, ಸಾಮ ವೇದಗಳು; (ಜೈನ) ಜೀವಸ್ಥಾನ, ಕ್ಷುದ್ರಕಬಂಧ, ಬಂಧಸ್ವಾಮಿತ್ವವಿಚಯಗಳೆಂಬ ಷಟ್ಖಂಡಾಗಮದ ಮೂರು ಖಂಡಗಳನ್ನು ತಿಳಿದವನು
- ತ್ರೈವಿದ್ಯದೇವ – (ಜೈನ) ತ್ರೈವಿದ್ಯಗಳಲ್ಲಿ ಪರಿಣತ
- ತ್ರೈವಿದ್ಯವ್ರತಿ – ತ್ರೈವಿದ್ಯದೇವ
- ತ್ರೈವಿದ್ಯಾಸ್ಪದ – ವ್ಯಾಕರಣ, ತರ್ಕ,
- ಜೈನಸಿದ್ಧಾಂತಗಳಲ್ಲಿ ಬಲ್ಲಿದನಾದವನು
- ತ್ರೈವಿದ್ಯೇಶ – ತ್ರೈವಿದ್ಯಗಳನ್ನು ತಿಳಿದವನು; (ಜೈನ) ತ್ರೈವಿದ್ಯ
- ತ್ರ್ಯಂಬಕ – ಮೂರು ಕಣ್ಣುಳ್ಳವನು, ಶಿವ
- ತ್ರ್ಯಶ್ರೀಕೃತ – ನಾಟ್ಯದ ಒಂದು ಭಂಗಿ
- ತ್ರೋಟಿ – ಕೊಕ್ಕು
- ತ್ವಕ್ – ಚರ್ಮ
- ತ್ವಗಸ್ಥಿಭೂತ – ದೇಹದಲ್ಲಿ ಚರ್ಮ-ಮೂಳೆಗಳು ಮಾತ್ರ ಉಳಿದಿರುವಷ್ಟು ಕೃಶವಾದತ್ವಗ್ಜ – ತೊಗಲಿನಿಂದ ಮಾಡಿದ
- ತ್ವದೀಯ – ನಿನ್ನ, ನಿನಗೆ ಸಂಬಂಧಿಸಿದ (ಸೇರಿದ)
- ತ್ವರಿತ – ಬೇಗನೆ; ಬೇಗ
- ತ್ವರಿತಂ – ಶೀಘ್ರವಾಗಿ
- ತ್ವಿಡ್ -ಪ್ರಕಾಶ
CONCLUSION:
ಕನ್ನಡ ತ ಅಕ್ಷರದ ಹಳೆಗನ್ನಡ ಪದಗಳು ( Kannada halegannada padagalu ) ಓದಿದ್ದಕ್ಕಾಗಿ ಧನ್ಯವಾದಗಳು. ಈ ಲೇಖನದಲ್ಲಿ ನಮೂದಿಸಲು ನಾವು ಮರೆತಿದ್ದರೆ. ದಯವಿಟ್ಟು ಕಾಮೆಂಟ್ ಬಾಕ್ಸ್ನಲ್ಲಿ ನಮೂದಿಸಿ. ನಾವು ಅವುಗಳನ್ನು ಶೀಘ್ರದಲ್ಲೇ ಲೇಖನದಲ್ಲಿ ಸೇರಿಸುತ್ತೇವೆ.